ಒಂದಲ್ಲ ಎರಡಲ್ಲ ಪೂರ್ತಿ 30 ಲಕ್ಷ ಕೊಡುತ್ತೇನೆ ...
30 ಲಕ್ಷ ಕಡಿಮೆ ಆದರೆ ಇನ್ನೂ ಹತ್ತು ಲಕ್ಷ ಹೆಚ್ಚು ಕೊಡುತ್ತೇನೆ ...
ಅದು ಕೂಡ ಕಡಿಮೆ ಆದರೆ ನಿನಗೆ ಏಷ್ಟು ಬೇಕು ಅಂತ ಕೇಳು ನಾನೇ ನಿನಗೆ ಕೊಟ್ಟು ಬಿಡುತ್ತೆ ..
ಆದರೆ ಈ ಹಣ ಯಾವಾಗ ಕೊಡುವುದು ಅಂದರೆ ನೀನು ಬಿಂದುಳನ್ನು ಬಿಟ್ಟು ಹೋಗ ಬೇಕು ...
ಬಿಟ್ಟು ಹೋಗುವುದು ಮಾತ್ರ ಅಲ್ಲ ಅವಳಿಗೆ ನೀನು ನಂಬಿಕೆ ತರಿಸ ಬೇಕು ನೀನು ಕೇವಲ ಅವಳನ್ನು ಪ್ರೀತಿಸುವಂತೆ ನಾಟಕ ಮಾಡುತ್ತಾ ಇದ್ದೆ ಎಂದು ...
ನಿನಗೆ ಅವಳ ಮೇಲೆ ಯಾವುದೇ ರೀತಿ ಪ್ರೀತಿ ಗೀತಿ ಏನು ಇಲ್ಲ ಎಂದು ನೀನು ಹೇಳ ಬೇಕು ...
ಹೇಳುವುದು ಮಾತ್ರ ಅಲ್ಲ ಅವಳನ್ನು ನಂಬಿಸ ಬೇಕು ...
ಎಂದು ಒಂದು ದೊಡ್ಡ ಹಾಲ್ ಅಲ್ಲಿ ಒಂದು ಸುಂದರವಾದ ಸೋಫಾ ಆ ಸೋಫಾದ ಮೇಲೆ ಕುಳಿತಿದ್ದ ಒಬ್ಬ ವಯಸ್ಸಾದ ವ್ಯಕ್ತಿಯ ಮುಂದೆ ನಿಂತಿದ್ದ ಹುಡುಗನಿಗೆ ಹೇಳುತ್ತಾನೆ ... ಆ ಮುದುಕ ಸಾಮಾನ್ಯವಾದ ವ್ಯಕ್ತಿ ಅಲ್ಲ ಅವನು ಒಬ್ಬ ಬಿಸ್ನೆಸ್ ಮ್ಯಾನ್ ... ಅವನ ಆಫೀಸ್ ನಲ್ಲಿ 15 ಸಾವಿರ ಜನರು ವರ್ಕ್ ಮಾಡ್ತಾ ಇದ್ದಾರೆ .. ಅದರಲ್ಲಿ ಯು ಇವರ ಟರ್ನ್ ಓವರ್ ಅಂತೂ ವರ್ಷಕ್ಕೆ 3 ಕೋಟಿ .. ಅಷ್ಟು ರೀಚ್ ಆಗಿರುವ ಆ ಮುದುಕ ಅವನ ಮುಂದೆ ನಿಂತಿದ್ದ ಹುಡುಗನನ್ನು ಕೋಪದಿಂದ ನೋಡುತ್ತಾ ಇರುತ್ತಾನೆ ...
ಆ ಹುಡುಗ ನೋಡುವುದಕ್ಕೆ ಒಂದು 25 ವರ್ಷ ಅದ ಹಾಗೆ ಕಾಣುತ್ತಾ ಇದ್ದ .. ಅವನ ಪರ್ಸನಾಲಿಟಿ ಕೂಡ ಚೆನ್ನಾಗಿ ಇತ್ತು ... ಬಟ್ಟೆಯನ್ನು ನೋಡಿದರೆ ಆ ಯುವಕ ಬಡವನ ಹಾಗೆ ಕಂಡರು ಅವನ ಹೈಟ್ ವೈಟ್ ಮತ್ತು ಕಲರ್ ಎಲ್ಲ ನೋಡಿದರೆ ಒಂದು ರೀತಿ ಮಾಡಲ್ ಹಾಗೆ ಕಾಣುತ್ತಾ ಇದ್ದ ..
ಆ ಮುದುಕ ಸೋಫಾದಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕೊಂಡು ಸ್ವಲ್ಪ ಗತ್ತು ತೋರಿಸಿ ಕೊಂಡು ಆ ಯುವಕ ನ ಉತ್ತರಕ್ಕೆ ಕಾಯುತ್ತಾ ಇದ್ದರು .. ಆದರೆ ಆ ಯುವಕ ಮಾತ್ರ ಆ ಮುದುಕನ ಮಾತಿಗೆ ಏನು ಉತ್ತರ ನೀಡದೆ ತಲೆಯನ್ನು ತಗ್ಗಿಸಿ ಅಲ್ಲಿಯೇ ನಿಂತು ಬಿಟ್ಟ .. ಅವನಿಗೆ ಆ ಮುದುಕ ಹೇಳಿದ ಮಾತಿಗೆ ಏನು ಉತ್ತರ ನೀಡ ಬೇಕು ಎಂದು ತಿಳಿಯುತ್ತಾ ಇರಲಿಲ್ಲ ..
ಆ ಮುದುಕನನ್ನು ಎದುರು ಹಾಕಿ ಕೊಂಡು ಬದುಕುವ ಸಾಮರ್ಥ್ಯ ಕೂಡ ಇರಲಿಲ್ಲ ಅದಕ್ಕೆ ಆ ಯುವಕ ಸುಮ್ಮನೆ ಇರುವುದು ಒಳ್ಳೆಯದು ಎಂದು ಭಾವಿಸಿ ಸುಮ್ಮನೆ ಇರುತ್ತಾನೆ ..
ಆ ಯುವಕನ ಮೌನ ನೋಡಿ ಮುದುಕನಿಗೆ ಕೋಪ ನೆತ್ತಿ ಗೆರಿತ್ತದೆ.. ಇಲ್ಲಿ ತನಕ ದುಡ್ಡು ಇದೆ ಎಂಬ ಅಹಂಕಾರದಲ್ಲಿ ಮಾತಾಡುತ್ತ ಇದ್ದ ಮುದುಕ ತನ್ನ ಕರ್ಕಶ ಸ್ವರವನ್ನು ಇನ್ನೂ ಹೇರಿಸಿ ಕೊಂಡು ...
ಒ ಯುವಕ ನೀನು ಏನಾದರೂ ನನ್ನ ಮಾತು ಕೇಳದಿದ್ದರೆ ನನ್ನ ಬಳಿ ನಿನ್ನನ್ನು ದಾರಿಗೆ ತರಿಸಲು ಬೇರೆ ಉಪಾಯ ಕೂಡ ಇದೆ ...
ನಿನ್ನ ಮೂರು ಕಾಸಿನ ಲೆಕ್ಕಕ್ಕೆ ಬಾರದ ಪ್ರೀತಿಯನ್ನು ಗಂಟು ಮೂಟೆ ಕಟ್ಟಿ ನೀರಿಗೆ ಎಸೆದು ಈ ಹಣವನ್ನು ತೆಗೆದು ಕೊಂಡು ಹೋಗು ...
ನಿನ್ನ ಜೀವನ ಪೂರ್ತಿ ಕಷ್ಟ ಪಟ್ಟು ದುಡಿದರು ಇಷ್ಟು ಹಣ ಮಾಡುವುದಕ್ಕೆ ಮತ್ತು ಒಟ್ಟಿಗೆ ನೋಡುವುದಕ್ಕೆ ಸಾಧ್ಯ ಇಲ್ಲ ...
ಮರ್ಯಾದೆ ಯಿಂದ ಈ ದುಡ್ಡು ಇಡಿದು ಕೊಂಡು ಹೋಗು ...
ನಾನು ಸ್ವಲ್ಪ ಒಳ್ಳೆಯನು ನಿನಗೆ ದುಡ್ಡು ಕೊಟ್ಟು ಪ್ರೀತಿ ಮರೆಯುವುದಕ್ಕೆ ಹೇಳುತ್ತಾ ಇದ್ದೇನೆ ..
ನನ್ನ ಸ್ಥಳ ದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ನಿನ್ನನ್ನು ಸಾಯಿಸಿ ಬಿಟ್ಟು ತನ್ನ ಮಗಳ ಮದುವೆ ಮಾಡಿ ಬಿಡುತ್ತ ಇದ್ದರು ...
ಎಂದು ಮುದುಕ ಕೋಪದಲ್ಲಿ ಅಲ್ಲು ಕಡಿಯುತ್ತಾ ಹೇಳುತ್ತಾನೆ ...
ಆ ಮುದುಕ ಅಷ್ಟು ಕೋಪದಲ್ಲಿ ಹೇಳಿದರು ಆ ಯುವಕ ಏನು ಹೇಳದೆ ಸುಮ್ಮನೆ ಇರುತ್ತಾನೆ ... ಆ ಯುವಕ ಈಗ ಕೂಡ ಪ್ರತಿ ಉತ್ತರ ನೀಡದೆ ಸುಮ್ಮನೆ ಇರುವುದು ನೋಡಿ ಆ ಮುದುಕನ ಮೈ ಉರಿಯುವುದಕ್ಕೆ ಶುರುವಾಗುತ್ತದೆ ..
ನೋಡು ಯುವಕ ನನಗೆ ಗೊತ್ತು ...
ನಿನ್ನ ಬಿಸಿ ರಕ್ತ ಹಾಗಾಗಿ ನಿನಗೆ ಈಗ ಅನಿಸ ಬಹುದು ದುಡ್ಡು ಬೇಡ ನನ್ನ ಮೊಮ್ಮಗಳೆ
ಬೇಕು ಎಂದು....
ಆದರೆ ನಿನ್ನಂತ ಮಿಡಲ್ ಕ್ಲಾಸ್ ಹುಡುಗರು ದೊಡ್ಡ ಮನೆಯ ಹುಡುಗಿಯನ್ನು ಮದುವೆಯಾಗಲು ಪ್ರೀತಿ ಎಂಬ ನಾಟಕ ಅಡುತ್ತಿರ ಎಂದು ನನಗೆ ಗೊತ್ತು ...
ಈಗ ಈ ಹಣ ತೆಗೆದು ಕೊಂಡರೆ ನಿನಗೆ ಒಳ್ಳೆಯದು ..
ನಿನಗೆ ನನ್ನ ಮೊಮ್ಮಗಳೆ ಬೇಕು ಎಂದು ಏನಾದರೂ ಯೋಚನೆ ಮಾಡಿದರೆ ನನಗಿಂತ ಕೆಟ್ಟ ವ್ಯಕ್ತಿ ಬೇರೆ ಯಾರು ಇರುವುದಿಲ್ಲ ..
ನಿನ್ನನ್ನು ಯಾರಿಗೂ ಹುಡುಕುವುದಕ್ಕೆ ಸಾಧ್ಯ ಆಗದಷ್ಟು ದೂರ ಕಳಿಸುತ್ತೇನೆ ನೆನಪು ಇರಲಿ ..
ನನ್ನ ವಿರೋದ ಕಟ್ಟಿ ಕೊಳ್ಳ ಬೇಡ ..
ಕಟ್ಟಿ ಕೊಂಡರೆ ಜೀವಂತವಾಗಿ ಇರುವುದಿಲ್ಲ ನೀನು ...
ಎಂದು ಆ ಮುದುಕ ಈಗ ಜೀವ ಬೆದರಿಕೆ ಕೊಡುತ್ತಾನೆ .. ಈಗ ಮುದುಕನ ಮಾತು ಕೇಳಿ ಆ ಯುವಕ ಸ್ವಲ್ಪ ಸಮಯ ಶಾಕ್ ನಲ್ಲಿ ನಿಂತು ಬಿಡುತ್ತಾನೆ ... ಆ ಮುದುಕ ಸಾಮಾನ್ಯವಾಗಿರಲಿಲ್ಲ ಅವನ ಕನೆಕ್ಷನ್ ದೊಡ್ಡ ದೊಡ್ಡ ವಿಐಪಿ ವ್ಯಕ್ತಿಗಳೊಂದಿಗೆ ಇತ್ತು .. ಅಂತ ವ್ಯಕ್ತಿಯು ಈ ರೀತಿ ತನಗೆ ಜೀವ ಬೆದರಿಕೆ ಮಾಡುತ್ತಾ ಇದ್ದಾನೆ ಎಂದರೆ ಶಾಕ್ ಆಗುವುದಿಲ್ಲ ವ ...
ಆ ಮುದುಕನಿಗೆ ಆ ಯುವಕನನ್ನು ಸಾಯಿಸುವುದಕ್ಕೆ ಕೇವಲ ಎರಡು ನಿಮಿಷ ಸಾಕು .. ಇಲ್ಲಿ ತನಕ ಕೋಪದಲ್ಲಿ ಇರುವ ಅವರೊಂದಿಗೆ ಏನು ಮಾತಾಡಿದರು ತಪ್ಪು ಆಗುತ್ತೆ ಎಂದು ತಿಳಿದು ತಲೆ ತಗ್ಗಿಸಿ ನಿಂತಿದ್ದ .. ಇನ್ನೂ ಸುಮ್ಮನೆ ಇದ್ದಾರೆ ವಿಷಯ ಉಲ್ಟಾ ಹೊಡೆಯುತ್ತದೆ ಎಂದು ಯೋಚನೆ ಮಾಡಿ ..
ವಿನಯತೆ ಯಿಂದ ಮಾತು ಶುರು ಮಾಡುತ್ತಾನೆ ...
ಸರ್ ನೀವು ನಂಗೆ ಒಂದೇ ಒಂದು ಅವಕಾಶ ಕೊಟ್ಟು ಬಿಡಿ ..
ನಾನು ನನ್ನನ್ನು ಪ್ರೂವ್ ಮಾಡಿಸಿ ಕೊಳ್ಳುತ್ತೇನೆ ...
ಪ್ಲೀಸ್ ಒಂದು ಅವಕಾಶ ಕೊಡಿ ...
ಎಂದು ಹೇಳಿ ಸ್ವಲ್ಪ ಕೂಡ ಸಮಯ ತೆಗೆದು ಕೊಳ್ಳದೆ
ಆ ಮುದುಕನ ಕಾಲಿಗೆ ಬಿದ್ದು ಬಿಡುತ್ತಾನೆ ಆ ಯುವಕ ...