The essence (the essence of the soul is the essence of the body) in Kannada Mythological Stories by Shrathi books and stories PDF | ಸಾರಿಕೆ ( ಸಾರಿಕೆಯ ಆತ್ಮ ಸುರಭಿ ದೇಹಕ್ಕೆ )

The Author
Featured Books
Categories
Share

ಸಾರಿಕೆ ( ಸಾರಿಕೆಯ ಆತ್ಮ ಸುರಭಿ ದೇಹಕ್ಕೆ )

ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ . ಅವಳು ಸಣ್ಣ

ಪ್ರಾಯದಲ್ಲಿ ಔಷಧಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದವಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು.


ಅಷ್ಟೇ ಅಲ್ಲದೇ ಅವಳಿಗೆ ,ನೃತ್ಯ ಎಂದರೆ ತುಂಬಾ ಪಂಚಪ್ರಾಣ .ಅವಳು ಈಗಾಗಲೇ ನೃತ್ಯ ಕಲೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದಳು. ಅವಳ ತಾಯಿಯಂತೆ ತನ್ನನ್ನು ತಾನು ಗುರುತಿಸಿಕೊಂಡಿದ್ದಳು.  


ನೃತ್ಯವು ಅವಳಿಗೆ ತಾಯಿಯ ಬಳುವಳಿ ಎಂದರೆ ತಪ್ಪಾಗಲಾರದು. ಮಾತಿನಲ್ಲಿ ಗಡಸುತನ, ಏನೇ ಬಂದರೂ ಅದನ್ನು ನಿಭಾಯಿಸುತ್ತೇನೆ ,ಎಂಬ ದೈರ್ಯ. ಇದೆಲ್ಲ ಅವಳಿಗೆ ಅವಳ ತಂದೆ ಕೊಟ್ಟ ಉಡುಗೊರೆಯಾಗಿತ್ತು.


ಆದರೆ ಅವಳ ದುರದೃಷ್ಟ ಏನು ಅಂದರೆ , ಅವಳು ಇಲ್ಲಿ ತನಕ ತಂದೆ ತಾಯಿಯನ್ನು ನೋಡಿರಲಿಲ್ಲ. ಮಾತು ಕೂಡ ಆಡಿರಲಿಲ್ಲ. ಅವರ ಬಗ್ಗೆ ತಿಳಿಯುವ ನೂರು ಪ್ರಯತ್ನ ಮಾಡಿದರು ಅದು ವಿಫಲವಾಗಿತ್ತು. 


ತಂದೆಯ ಸ್ಥಾನದಲ್ಲಿ ಅವಳ ಮಾವ , ಅಂದರೆ ಸಾರಿಕೆಯ ಅಮ್ಮನ, ಅಣ್ಣ ಅವಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾ ಇದ್ದರು. ಹೀಗೆ ಒಂದು ದಿನ, ತಮ್ಮ ಊರಿನಲ್ಲಿ ಇರುವ ಸಾಹುಕಾರಣಿಗೆ ಬಂದ ರೋಗಕ್ಕೆ ಔಷಧಿಯ ಮಾಡಲು , ಕೆಲವು ಮೂಲಿಕೆ ವಸ್ತುಗಳನ್ನು ಹುಡುಕುತ್ತಾ ಸೌರಾಷ್ಟ್ರ ದೇಶಕ್ಕೆ ಪಯಣಿಸಿದಳು. 


ಆ ಕಾಲದಲ್ಲಿ ಸೌರಾಷ್ಟ್ರ ದೇಶ, ಒಂದು ಕೇಂದ್ರ ಬಿಂದುವಾಗಿತ್ತು. ಎಲ್ಲಿಯೂ ಸಿಗದ ವಸ್ತು, ಅಲ್ಲಿ ಸಿಗುತ್ತಾ ಇತ್ತು.ಅದೇ ಕಾರಣಕ್ಕೆ ಸಾರಿಕೆ ಅಲ್ಲಿಗೆ ಹೋಗಿದ್ದಳು.ಅದಲ್ಲದೆ, ಸಾರಿಕೆ ಪ್ರೀತಿ ಮಾಡುತ್ತಾ ಇದ್ದ ಹುಡುಗ ಕೂಡ ,ಅಲ್ಲೇ ಕೆಲಸ ಮಾಡುತ್ತಾ ಇದ್ದ.


ಔಷಧಿ ಗಿಡಮೂಲಿಕೆಗಳ ತೆಗೆದುಕೊಂಡು ಬರುವ ಕಾರಣ ಕೊಟ್ಟು, ಅರ್ಜುನನೊಂದಿಗೆ ಸಮಯ ಕಳೆಯುವ ಉಪಾಯವಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಸೌರಾಷ್ಟ್ರ ದೇಶದ  ಪುರಂದರಗಡಕ್ಕೆ ವೀರ ಕೇಸರಿ ದಾಳಿ ಇಟ್ಟಿದ್ದರು. ಅವರ ದಾಳಿಯ ವೈಭವಿಕರನಕ್ಕೆ ಇಡೀ ಊರನ್ನೇ ಅಗ್ನಿಗೆ ಆಹುತಿಯಾ ಮಾಡಿದರು.


ಸುತ್ತ ನೀರವ ಮೌನ , ಅಲ್ಲಲ್ಲಿ ಹೆಪ್ಪುಗಟ್ಟಿದ ರಕ್ತಗಳು , ರುಂಡ ಮುಂಡ ಕಳೆದುಕೊಂಡ ಸೈನಿಕರ ಕಳೇಬರಗಳ ಸಾಲುಗಳು. ಹಾಗೇ ನೋಡುತ್ತ ಮುಂದೆ ಹೋಗುತ್ತಿದ್ದ ಸಾರಿಕೆಯ ಕಣ್ಣುಗಳಿಗೆ ವಿಜಯ ಸ್ತಂಭ ಕಂಡಿತು.


ಅದನ್ನು ನೋಡಿ ಸಾರಿಕೆಗೆ ಭಯದಿಂದ, ಮುಂದೆ ಹೆಜ್ಜೆ ಇಡಲು ಸೋಲುತ್ತಿದ್ದವು ಕಾಲುಗಳು . ಇಷ್ಟು ಸಮಯ ಭಾವನರಹಿತವಾಗಿ , ಎಲ್ಲಾ ನೋಡುತ್ತಿದ್ದವಳ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು .   


ಬೆಂಕಿಯಲ್ಲಿ ಉರಿದು ಬೀಳುತ್ತಿರ್ವ ಅವಳ ಸಂಗಾತಿಯ ದೇಹ ಕಂಡು ನಳುಗಿದಳು. ಅಸ್ತಿಪಂಜರಗಳು ಉರಿದು ಬೂದಿಯಾಗುವಂತೆ ಅವಳ ಇರುವಿಕೆಯು ಆಗ್ನಿಯಲ್ಲಿ ಉರಿದು ಬೂದಿಯಾಗುವಂತೆ  ಭಾಸವಾಗುತ್ತಿತ್ತು . 

ಅವಳ ಕಣ್ಣುಗಳಲ್ಲಿ ಪ್ರಿಯಕರನ ಸಾವು ಕಂಡು ಜೀವಂತ ಶವವಾಗಿ ಹೋದಳು. 


ಮೋಡಕ್ಕೆ ಮೋಡ ಘರ್ಷಿಸಿ ಗರ್ಜನೆಯಂತಹ ಸಿಡಿಲು ಸ್ಟೋಟಗೊಂಡು; ಕಣ್ಣುಗಳಿಗೆ ತಿವಿಯುವ ಹಾಗೆ ಬ್ರಮೆಯನ್ನುಂಟು ಮಾಡುತ್ತಿತ್ತು  . ಜತೆಗೆ ಗುಡುಗಿನ ಸದ್ದು ಎದೆಯನ್ನು ಚುಚ್ಚಿ ರಂಧ್ರ ಕೊರೆಯುವಂತಿತ್ತು.

ಸಾರಿಕೆ ತನ್ನ ಆತ್ಮ ಸಂಗಾತಿ ಇರದ ಲೋಕದಲ್ಲಿ ತಾನೂ ಇರುವುದಿಲ್ಲವೆಂದು ಕೊನೆಯ ಉಸಿರು  ಬಿಗಿ ಮಾಡಿಕೊಂಡು . ಸುಡುತ್ತಿದ್ದ ಸಂಗಾತಿಯ ಜೊತೆಗೆ  ತಾನು ಸುಟ್ಟುಹೋಗುತ್ತೇನೆಂದು , ಸುಡುತ್ತಿದ್ದ ಅವನನ್ನು ಗಟ್ಟಿಯಾಗಿ

ತಬ್ಬಿಕೊಂಡು ಬಿಡುತ್ತಾಳೆ.

"ತಾನೊಂದು ನೆನೆದರೆ ದೈವವೊಂದು ಬಗೆಯುವುದು "

ಎಂಬ ಮಾತು  ಸಾರಿಕೆಯ  ಜೀವನದಲ್ಲಿ ನಿಜವಾಗುವುದು , ಏಕೆಂದರೆ  ಸಾರಿಕೆ ಜನಿಸಿದ  ಸಮಯ ಮತ್ತು ಗಳಿಗೆಯು ತುಂಬಾ ವಿಶೇಷವಾಗಿತ್ತು .


ಅ ಗಳಿಗೆಯಲ್ಲಿ  ಸಾವಿರಾರು ವರ್ಷಗಳಿಗೆ ಒಮ್ಮೆ ಒಬ್ಬರು ಜನಿಸುತ್ತಾರೆ .  ಈ ಗಳಿಗೆಯಲ್ಲಿ ಜನಿಸಿದವರು ತುಂಬಾ ಶಕ್ತಿಶಾಲಿಯಾಗಿರುತ್ತಾರೆ , ಅಷ್ಟೇ ಅಲ್ಲದೆ ಸತ್ತ ಜನರನ್ನು ಜೀವಂತ ಮಾಡುವ ದೈವೀ ಶಕ್ತಿ ಇವರಲ್ಲಿತ್ತು. 


ಆದರೆ ಸಾರಿಕೆಗೆ  ಅವಳ ಶಕ್ತಿಯ ಬಗ್ಗೆ  ಪರಿವಿಲ್ಲದೆ , ಸಾಮನ್ಯರಂತೆ  ಬದುಕುತ್ತಿದ್ದಳು.   ಬುದ್ದಿ ಬಂದಾಗಿನಿಂದ  ಅವಳು ತಂದೆ ತಾಯಿಯನ್ನು ನೋಡಿರಲಿಲ್ಲ  . ಒಂಟಿಯಾಗಿ ಬೆಳೆದ ಸಾರಿಕೆಗೆ  ಅರ್ಜುನನ ಪ್ರೀತಿಯಿಂದ  ಹೊಸ  ಬೆಳಕು ತಂದಂತಿತ್ತು .


ಅವನ ಪ್ರೀತಿಯ  ಅಮಳಿನಿಂದ  ತೇಳುತ್ತಿದ  ಸಾರಿಕೆಗೆ ಅರ್ಜುನನ ಸಾವು  ನೋವು ತಂದಿತ್ತು . ನೋವಿನಲ್ಲಿ ಬದುಕುವುದಕ್ಕಿಂತ ಸಾವಿನಲ್ಲಿ ಜೊತೆಯಾಗುವ ಎಂದು ಆಲೋಚಿಸಿ, ಸಾವಿಗೆ ಶರಣಾದಳು .


ಅವಳು ಸಾಯಲು  ಇಚ್ಛಿಸಿದರು ,  ಅವಳ ಪೂರ್ತಿ ದೇಹ ಸುಟ್ಟು ಹೋದರು , ಅವಳ  ಮೂಳೆಗಳು ಬೂದಿಯಾಗಿ ಗಾಳಿಯಲಿ ಲೀನವಾದರು . ಅವಳ ಆತ್ಮಕ್ಕೆ ಮುಕ್ತಿ ಸಿಗದೆ ,ಅವಳು ಬೇರೆ  ಹೆಣ್ಣಿನ ದೇಹ  ಸೇರುವಂತೆ ಮಾಡುತ್ತದೆ .

          ***********************


ಇನ್ನೊಂದು ಕಡೆ ಯುವರಾಣಿ ಸುರಭಿ,


ತನ್ನ ದಾಸಿಯ, ತಕ್ಷಣ ಕರೆದು ಮಜ್ಜನಕ್ಕೆ ಸಿದ್ಧ ಮಾಡು ಎಂದಳು ಕೆಂಪು ಕೆನ್ನೆಯ ಒಡತಿ ಯುವರಾಣಿ ಸುರಭಿ . ತನ್ನ ಪ್ರಿಯಕರ ದಕ್ಷನ ,ಸಂದೇಶ ಕಂಡು ಅವನನ್ನು ಭೇಟಿ ಮಾಡಳು ಅವಸರವಾಗಿ ಮಜ್ಜನ ಮುಗಿಸಿದಳು ವಸುದೇವ ಅತಿ ಲಾವಣ್ಯವತಿ ಪುತ್ರಿ ಸುರಭಿ . 


ಅವಳ ದೇಹದ ಕಾಂತಿಯನ್ನು ಇನ್ನು ಹೆಚ್ಚಿಸುತ್ತಿತ್ತು ನೀರಿನ ಉಳಿದ ಹನಿಗಳು. ಅವಳ ಸೌಂದರ್ಯ ರಾಶಿಯ ಬಿಸಿಗೆ, ನೀರ ಹನಿಗಳು ಆವಿಯಾಗಿ ಹೋಗುತ್ತಿದ್ದವು . ತಲೆಯಿಂದ ಬಿದ್ದ ನೀರಿನ ಹನಿಗಳು ಮುಖ ಕಮಲವ ಸೇರಿ , ಗಲ್ಲವನ್ನು ಮುತ್ತಿಕ್ಕಿ ಬಿದ್ದ  ಹನಿಗಳು ಹರಿದು ನದಿಗೆ ಸೇರಿದಂತೆ ಮೊಲೆಗಳ ಕಣಿವೆಗಳ ನಡುವೆ ಸಾಗಿದೆ. 


ಗುಲಾಬಿ ತುಟಿಯಲ್ಲಿ ಜೇನು ತುಂಬಿದ ಮಂದಹಾಸ ,

ಮನೆಯವರಿಗೆ ಕಾಣದಂತೆ ನೀಲಾ ವರ್ಣದ ವಸ್ತುವೊಂದರಲ್ಲಿ ವಿಜೃಂಭಿಸುತ್ತ  ಕೇಸರಿ ಬಣ್ಣದ ಶಾಲೊಂದು ಹೊದೆದು . ಯಾರಿಗೂ ಗುರುತುಸಿಗದಂತೆ  

ರುಮಾಲು ಒಪ್ಪುವ ಆವರಣಗಳನ್ನು ಕೊಟ್ಟು ಮಂದಹಾಸದ ಮುಖಕ್ಕೆ ಬಟ್ಟೆಯೊಂದನ್ನು ಕಟ್ಟಿಕೊಂಡು, ಕಳ್ಳರಂತೆ ಅರಮನೆಯ ತ್ಯಜಿಸಿ ,  ಪ್ರೀಯಕರ ದಕ್ಷನನ್ನು ಭೇಟಿ ಮಾಡಳು ಹೋಗುತ್ತಾಳೆ.


ಖುಷಿಯಿಂದ ಬೆಟ್ಟದ ಕಡೆಗೆ ಕುದುರೆಯ ಸಹಾಯದಿಂದ ಮುಟ್ಟಿದಳು . ಅವನಿಗಿಂತ ಮುಂಚೆ ಬಂದು ಅವನ ಬಗ್ಗೆ ಯೋಚನೆ ಮಾಡುತ್ತಾ ಮುಂದೆ  ಪ್ರಪಾತ ಇರುವುದನ್ನು ಗಮನಿಸದೆ ನಿಂತು ಬಿಟ್ಟಿದಳು.


ಪಾಪ ಸುರಭಿಗೆ ಪ್ರೀಯಕರನ ಮೋಸದ ಅರಿವಿಲ್ಲದೆ ಅವನ ಬರುವಿಕೆಗೆ ಕಾಯುತ್ತಿದ್ದಳು . ಯಾರೋ ಮರದ ತುಂಡಿನಿಂದ ಜೋರಾಗಿ ಹೊಡೆದು ಬೆನ್ನಿಗೆ ಚಾಕುವಿನಿಂದ ತಿವಿದು . ಅವಳನ್ನು ಬೆಟ್ಟದ ಮೇಲಿನಿಂದ ಕೆಳಗೆ ನುಕಿದರು . 


ಅವಳಿಗೆ ಅಲ್ಲಿ ಏನಾಗುವುದೆಂದೂ  ತಿಳಿಯುವ ಮೊದಲು ಅವಳ ಪ್ರಾಣ ಪಕ್ಷಿ ಹಾರಿಹೋಗಿತ್ತು . ಪ್ರೀಯಕರನ ಮೋಸದಿಂದ ಕೆಂಪು ಕೆನ್ನೆಯ ಸುಂದರಿಯು ಭೂಮಿಯನ್ನು  ಬಿಟ್ಟು ಆತ್ಮಗಳ ಲೋಕಕ್ಕೆ ಹೋದಳು .


                ****************


[ ಅದೇ ಸತ್ತು ಬಿದ್ದ ಸುರಭಿಯ ದೇಹಕ್ಕೆ ಸಾರಿಕೆಯ ಆತ್ಮವು ಸೇರಿಸುತ್ತದೆ  .  ಮರುದಿವಸ ಸುರಭಿಗೆ ಎಚ್ಚರವಾಗುತ್ತದೆ  , ಅವಳು  ಒಂದು ವಿಶಾಲವಾದ ಕೋಣೆಯೊಂದರಲ್ಲಿ ಮಲಗಿದ್ದಳು....

ಮುಂದಿನ ಸಂಚಿಕೆಯಲ್ಲಿ  ]