ಈ ಕಥೆ ಶುರುವಾಗುವುದು ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ. ಅದು ಒಂದು ನಾಲ್ಕು ಕೋಣೆಯ ಸಣ್ಣ ಹಂಚಿನ ಮನೆಯಾಗಿತ್ತು. ಸುತ್ತಲೂ ಪ್ರಕೃತಿ ಮಡಿಲಿನ ನಡುವೆ ಆ ಮನೆ ಇತ್ತು ಅಥವಾ ಇಲ್ಲವೋ ಎಂದು ಕಾಣುತ್ತಿತ್ತು.
ಅವರ ಮನೆಯ ಸುತ್ತಲು ಮರ ಗಿಡಗಳು ಇದ್ದುದರಿಂದ ಅವರಿಗೆ ಬೇಸಿಗೆ ಕಾಲದ ಬಿಸಿಲು ಅಷ್ಟೊಂದು ಪರಿಣಾಮ ಬೀರುತ್ತಿರಲಿಲ್ಲ. ಆ ಮನೆ ನೋಡಲು ಸಾಧಾರಣವಾಗಿ ಚಿಕ್ಕಮನೆಯಾಗಿತ್ತು. ಆ ಮನೆ ಹೇಳುವುದಕ್ಕೆ ಚಿಕ್ಕದಾಗಿದ್ದರೂ, ಅದರಲ್ಲಿ ಬರೋಬ್ಬರಿ ಹತ್ತು ಜನ ಇರುತ್ತಿದ್ದರು.
ಸಾಧಾರಣವಾಗಿ ಅಂತಹ ಮನೆಯಲ್ಲಿ ಕೇವಲ ನಾಲ್ಕೈದು ಜನ ಇರುವುದು ಸೂಕ್ತ. ಆದರೆ, ಈ ನಾಲ್ಕು ಕೋಣೆಯ ಮನೆಯಲ್ಲಿ ಹತ್ತು ಜನ ಇರುತ್ತಿದ್ದರು. ಅವರು ಎಷ್ಟು ಬಡತನದಲ್ಲಿ ಇದ್ದರೆ ಅಂದರೆ, ಅವರ ಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಒಂದು ಸೋಫಾ ಬಿಡಿ, ಚೇರ್ ಕೂಡ ಇರಲಿಲ್ಲ.
ಆ ಮನೆಯಲ್ಲಿ ಇರುವ ಎಲ್ಲರೂ ಮನೆಯ ಹೊರಗೆ ಇರುವ ಜಗಲಿಯನ್ನೇ ಸೋಫಾ ಎಂದುಕೊಳ್ಳುವಷ್ಟು ತೃಪ್ತಿಯಿಂದ ಕುಳಿತುಕೊಳ್ಳುತ್ತಿದ್ದರು. ಜಗಲಿಯ ಒಂದು ಮೂಲೆಯಲ್ಲಿ ಅತ್ತೆ ಬಿಡಿ ಕಟ್ಟುತ್ತಾ ಕುಳಿತಿದ್ದರೆ, ಇನ್ನೊಂದು ಕಡೆ ಮಾವ ಜಗಲಿಗೆ ಬೈರಸು ಹಾಕಿ ಮಲಗಿಕೊಂಡಿದ್ದರು. ಅವರಿಗೆ ಅದೇ ಜಗಲಿ ಸೋಫಾ, ಬೆಡ್, ಎಲ್ಲವೂ ಆಗಿತ್ತು.
ಇನ್ನು ಅತ್ತೆಯ ಮಗಳು ನಿಸರ್ಗ ತನ್ನ ಮೊಬೈಲ್ ಇಡಿದುಕೊಂಡು ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿಬಿಟ್ಟಿದ್ದಳು. ಪಕ್ಕದಲ್ಲೇ ಜಗಲಿ ಮೇಲೆ ಕುಳಿತುಕೊಂಡು, ಸಾಹಿತ್ಯ ನೋಟ್ಸ್ ಬರೆಯುತ್ತಾ ಇದ್ದಳು.
ಸಾಹಿತ್ಯ, ಹೆಚ್ಚುಕಮ್ಮಿ 8 ವರ್ಷದ ಪುಟ್ಟ ಹುಡುಗಿಯಾಗಿದ್ದಳು. ನೋಡುವುದಕ್ಕೆ ಕೂಡ ಅವಳು ತುಂಬಾ ಲಕ್ಷಣವಾಗಿದ್ದಳು. ಮುದ್ದು ಮುದ್ದಾದ ಆ ಹುಡುಗಿ ಮುದ್ದಾಗಿ ಬರೆಯುತ್ತಾ ಇದ್ದಳು.
ಅದೇ ಕ್ಷಣ ಮನೆಯೊಳಗಿನಿಂದ ಏನೋ ಜೋರು ಜೋರಾಗಿ ಸದ್ದು ಗದ್ದಲಗಳು ಕೇಳುವುದಕ್ಕೆ ಶುರುವಾಗುತ್ತದೆ. ಆ ಸದ್ದು ಗದ್ದಲ ಕೇಳಿ ಅಲ್ಲಿ ಹೊರಗೆ ಕುಳಿತುಕೊಂಡ ಅತ್ತೆ, ಮಾವ ಯಾರೂ ಪ್ರತಿಕ್ರಿಯೆ ನೀಡುವುದಿಲ್ಲ. ನಿಸರ್ಗ ಮಾತ್ರ ಕೋಪದಲ್ಲಿ ತನ್ನ ಮೊಬೈಲ್ ಹಿಡಿದುಕೊಂಡು ಮನೆಯಿಂದ ದೂರ ಹೋಗುತ್ತಾಳೆ .
ಆ ಸದ್ದು ಗದ್ದಲ ಕೇಳಿ ಯಾರಿಗೂ ಅಷ್ಟೊಂದು ವಿಚಿತ್ರ ಎಂದು ಅನಿಸುವುದಿಲ್ಲ . ದಿನಾಲು ಇವರದ್ದು ಇದ್ದದ್ದೇ ಗೋಳು ಎನ್ನುವ ಹಾಗೆ ಮುಖ ಮಾಡಿಕೊಂಡು, ಅವರು ಕೆಲಸ ಮಾಡುತ್ತಿದ್ದರು.. ಆದರೆ ಈ ಸದ್ದು ಕೇಳಿದಾಗ ಸಾಹಿತ್ಯಳಿಗೆ ಮಾತ್ರ ತುಂಬಾ ಭಯವಾಗುತ್ತದೆ.
ಅವಳ ಕಣ್ಣುಗಳಲ್ಲಿ ಭಯ ಎದ್ದು ಕಾಣುತ್ತದೆ. ಸಾಹಿತ್ಯ ತನ್ನ ಅಮ್ಮನನ್ನು ಹುಡುಕುತ್ತಾ ಅಡುಗೆ ರೂಮ್ ಕಡೆ ಹೋಗುತ್ತಾಳೆ. ಅಮ್ಮನನ್ನು ನೋಡಿದ ತಕ್ಷಣ ಸಾಹಿತ್ಯ ಓಡಿಕೊಂಡು ಹೋಗಿ, ಅವಳ ಕಾಲುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ಕಣ್ಣುಗಳನ್ನು ಪಿಲಿಪಿಲಿ ಮಾಡುತ್ತಾ ಅಜ್ಜಿಯ ಕಡೆ ಭಯದಿಂದ ನೋಡುತ್ತಾಳೆ.
ಇಲ್ಲಿ ತನಕ ಪಾತ್ರೆಗಳು ಬಿಸಾಡುತ್ತಾ ಬೈಯುತ್ತಾ ಇದ್ದ ಅಜ್ಜಿ ಈಗ ಸಾಯಿತ್ಯಳನ್ನು ನೋಡಿ ಕೋಪದಲ್ಲಿ ಮುಖ ಒಂಥರ ಮಾಡಿಕೊಳ್ಳುತ್ತಾ, ಅವಳನ್ನು ದುರುಗುಟ್ಟಿ ನೋಡುತ್ತಾಳೆ.
ಸಾಹಿತ್ಯಳಿಗೆ ಅವಳ ಅಜ್ಜಿಯ ಕಣ್ಣುಗಳನ್ನು ನೋಡಿ ತುಂಬಾ ಭಯ ಆಗುತ್ತದೆ. ಆ ಭಯದಲ್ಲಿ ಮೆಲ್ಲ ಧ್ವನಿಯಲ್ಲಿ ಹೇಳುತ್ತಾಳೆ.
" ಅಮ್ಮ ತುಂಬಾ ಭಯ ಆಗ್ತಾ ಇದೆ . ಅಜ್ಜಿಗೆ ಆ ರೀತಿ ನೋಡುವುದು ಬೇಡ ಎಂದು ಹೇಳಮ್ಮ . ಅವರು ಯಾಕೆ ಆ ರೀತಿ ಕೋಪದಲ್ಲಿ ನಮ್ಮನ್ನು ನೋಡುತ್ತಿದ್ದಾರೆಯಾಮ್ಮ ."
ಸಾಹಿತ್ಯಳ ಮಾತು ಕೇಳಿಸಿಕೊಂಡ ಅಜ್ಜಿ ಕೋಪದಲ್ಲಿ ಅವಳ ಹತ್ತಿರ ಬಂದು ಅವಳ ಕಿವಿಯನ್ನು ಜೋರಾಗಿ ಹಿಂಡಿ, ಹೇಳುತ್ತಾಳೆ. .
"ಎಲ್ಲಿಂದ ಗಂಟು ಬಿತ್ತು ಈ ಪಾಪಿಗಳು. ಈ ಹೆಣ್ಣು ಪಿಶಾಚಿ ಹುಟ್ಟಿದ್ದು ಹುಟ್ಟಿದ್ದೇ ನನ್ನ ಮಗನನ್ನು ತಿನ್ಕೋಬಿಟ್ಲು. ಈಗ ನನ್ನನ್ನು ತಿನ್ನುವುದಕ್ಕೆ ನನ್ನ ಮುಂದೆ ಬಂದು ನಿಂತಿದ್ದಾಳೆ. ಏ ಸರಸ್ವತಿ, ಮೊದಲೇ ಹೇಳಿದ್ದೇನೆ: ಇವಳನ್ನು ಗಂಟು ಮೂಟೆ ಕಟ್ಟಿ ಹೊರಗೆ ಕಳಿಸು ಎಂದು. ಆದರೆ ನೀನು ನನ್ನ ಮುಂದೆ ಅತ್ತು ಕರೆದು ಅವಳನ್ನು ಇಲ್ಲಿ ಇರುವಂತೆ ಮಾಡಿದೆ. ಈ ಅನಿಷ್ಟವನ್ನು ನಾನು ಸಾಯುವವರೆಗೆ ನನ್ನ ಮುಂದೆ ಆ ಕಡೆ ಈ ಕಡೆ ಹೋಗುವುದನ್ನು ನಾನು ನೋಡಬೇಕು. ಎಂತಹ ದರಿದ್ರ ಜನ್ಮ ನನ್ನದು."
ಅಜ್ಜಿಯ ಮಾತನ್ನು ಕೇಳಿ ಸಾಹಿತ್ಯಳಿಗೆ ಅಳುವೆ ಬಂತು. ಅದಕ್ಕಿಂತ ಹೆಚ್ಚಾಗಿ, ಅಜ್ಜಿ ಅವಳ ಕಿವಿಯನ್ನು ಜೋರಾಗಿ ಹಿಂಡಿದ್ದು ತುಂಬಾ ನೋವಾಗುತ್ತಿತ್ತು.
" ಅಯ್ಯೋ, ಬಿಡಿ... ಅಜ್ಜಿ ಕಿವಿ ನೋವಾಗುತ್ತಿದೆ... ನನಗೆ ಕಿವಿ ತುಂಬಾ ನೋವಾಗುತ್ತಿದೆ. ಅಜ್ಜಿ, ಬಿಡಿ... ನೀವು ಯಾವಾಗಲೂ ಅಣ್ಣನಿಗೆ ಬೈಯುವುದಿಲ್ಲ, ಆದರೆ ನಾನು ಏನು ಮಾಡಿದರೂ ನೀವು ಬೈಯುತ್ತೀರಾ. ನಿಮ್ಮ ಮುಂದೆ ನಿಂತುಕೊಂಡರೆ ಸಾಕು ಬೈಯುವುದಕ್ಕೆ ಶುರು ಮಾಡುತ್ತೀರಾ... ಅಜ್ಜಿ, ಏಕೆ ಈ ರೀತಿ ತಾರತಮ್ಯ ಮಾಡುತ್ತಿದ್ದೀರಿ? ನಾನೂ ನಿಮ್ಮ ಮೊಮ್ಮಗಳು
ಅಲ್ವಾ. "
ಮೊದಲೇ ಅವಳನ್ನು ಕಂಡು ಬುಸುಗುಟ್ಟುತ್ತಾ ಇದ್ದ ಅಜ್ಜಿ . ಈಗ ಅವಳ ಮಾತು ಕೇಳಿ ಪೂರ್ತಿ ಕೆಂಡಮಂಡಲವಾಗುತ್ತಾರೆ . ಸರಸ್ವತಿ ಗೆ ಮಗಳು ಆ ರೀತಿ ಹೇಳುತ್ತ ಇರುವುದು ನೋಡಿ ತುಂಬಾ ಭಯವಾಗುತ್ತದೆ . ಅದಕ್ಕೆ ಸರಸ್ವತಿ ಮಗಳ ಬಾಯಿಯನ್ನು ಹಿಡಿದು ಕೊಳ್ಳುತ್ತಾಳೆ . ಸರಸ್ವತಿ ಮುಖದಲ್ಲಿ ತನ್ನ ಮಗಳಿಗೆ ಇನ್ನೇನು ಮಾಡುತ್ತಾರೆ ಎಂಬ ಭಯ ಎದ್ದು ಕಾಣುತ್ತ ಇತ್ತು .
" ಏನೇ ಅಂದೆ ... ನಾ ನಿನ್ನ ಅಜ್ಜಿಯ ನಾನು ನಿನ್ನ ಅಜ್ಜಿ ಅಲ್ವೇ ಅಲ್ಲ... ನಾನು ಕೇವಲ ಅಭಿಲಾಷ್ ಮತ್ತು ಕೀರ್ತಿ ಹಾಗೂ ನಿಸರ್ಗಳ ಅಜ್ಜಿ ಅಷ್ಟೇ ... ನಾನು ಯಾವತ್ತೂ ನಿನ್ನ ಅಜ್ಜಿ ಆಗುವುದಕ್ಕೆ ಸಾಧ್ಯವೇ ಇಲ್ಲ... ನೀನು ಈ ಭೂಮಿಗೆ ಬರುವುದೇ ನನಗೆ ಇಷ್ಟ ಇರಲಿಲ್ಲ ... ಇನ್ನೂ ನಿನ್ನನ್ನು ನನ್ನ ಮೊಮ್ಮಗಳು ಎಂದು ಒಪ್ಪಿಕೊಳ್ಳುತ್ತೇ ನಾ ... ಕೊಟ್ಟ ಅನ್ನವನ್ನು ತಿನ್ಕೊಂಡು ಬಿದ್ಕೊಂಡಿದ್ರೆ ಸರಿ.. ಅದು ಬಿಟ್ಟು ಅಜ್ಜಿ ಗಿಜ್ಜಿ ಅಂತ ಬಂದ್ರೆ ಹುಷಾರ್, ನೀನು ಯಾವತ್ತೂ ನನ್ನ ಮೊಮ್ಮಗಳು ಆಗುವುದಕ್ಕೆ ಸಾಧ್ಯವೇ ಇಲ್ಲ... ಹುಟ್ಟುವಾಗಲೇ ನನ್ನ ಮಗನನ್ನು ತಿಂದವಳು ನನ್ನ ಮೊಮ್ಮಗಳು ಆಗುವುದಕ್ಕೆ ಹೇಗೆ ಸಾಧ್ಯ .."
ಎಂದು ಹೇಳುತ್ತಾ ಆ ಪುಟ್ಟ ಹುಡುಗಿಯ ಕೈಯನ್ನು ಹಿಡಿದುಕೊಂಡು ದೂರದೂಡುತ್ತಾಳೆ . ಆ ಅಜ್ಜಿ ಸಾಹಿತ್ಯಳನ್ನು ದೂಡಿದ ಪೆಟ್ಟಿಗೆ ಸಾಹಿತ್ಯ ದೂರ ಹೋಗಿ ಬಿದ್ದು ಬಿಡುತ್ತಾಳೆ.
" ಅಮ್ಮ" .
ಎಂದು ಬಿದ್ದ ತಕ್ಷಣ ಸಾಹಿತ್ಯ ಜೋರಾಗಿ ಕಿರುಚುತ್ತಾಳೆ. ಆದರೆ ಅತ್ತೆಯ ಮುಂದೆ ಅಸಹಾಯಕಳಾಗಿ ನಿಂತ ಸರಸ್ವತಿ ಅವಳ ಮಗಳ ಸ್ಥಿತಿಯನ್ನು ನೋಡಿ ಅಳುತ್ತಾ ಅಲ್ಲೇ ಕಲ್ಲಾಗಿ ನಿಂತು ಬಿಟ್ಟಿದ್ದಳು .
ಇಷ್ಟಕ್ಕೆ ಸಮಾಧಾನ ಆಗದ ಅಜ್ಜಿ ಅಲ್ಲೇ ಬಿಸಿಯಾಗಿದ್ದ ದೋಸೆ ಕಾವಲಿಯನ್ನು ಸರಸ್ವತಿಯ ಬೆನ್ನಿಗೆ ಇಟ್ಟು ಬಿಡುತ್ತಾಳೆ . ಮೊದಲೇ ನೋವಿನಲ್ಲಿ ಕಣ್ಣೀರು ಹಾಕುತ್ತಾ ಇದ್ದ ಸರಸ್ವತಿ ಈಗ ನೋವಿನಿಂದ ಜೋರಾಗಿ ಕಿರುಚಿ ಕೊಳ್ಳುತ್ತಾಳೆ .
ಅವಳ ಕೂಗು ಕೇಳಿದಾಗ ಅವಳಿಗೆ ಸಹಾಯ ಮಾಡಲು ಬರುವವರು ಯಾರೂ ಆ ಮನೆಯಲ್ಲಿ ಇರಲಿಲ್ಲ.
ಸರಸ್ವತಿಯ ನೋವು ನೋಡಿ ಅಜ್ಜಿಗೆ ಅಂತೂ ತುಂಬಾ ಖುಷಿ ಆಗಿ ಬಿಟ್ಟಿತು. ಆ ಖುಷಿಯಲ್ಲಿ ಅವಳು ಅಲ್ಲಿಂದ ಹೊರಗೆ ಹೋಗಿ ಜಗಲಿಯ ಮೇಲೆ ಕುಳಿತು ಬಿಡುತ್ತಾಳೆ.
"ಏ ಕೀರ್ತಿ ಪಕ್ಕದ ಮನೆಯ ಗಿರಿಜಾ ಬಸಳೆ ಪುಂಡಿ ಮಾಡಿದ್ದಾಳೆ ಅಂತೆ ಹೋಗಿ ನನಗೆ ಎಂದು ತೆಗೆದು ಕೊಂಡು ಬಾ .ಅವಳು ಹೇಗೆ ಕೊಟ್ಟಳು ಹಾಗೆ ತೆಗೆದು ಕೊಂಡು ಬಾ .ಅದಕ್ಕೆ ಕೈ ಏನಾದರೂ ಹಾಕಿದರೆ ಜೋಕೆ ."
ಎಂದು ಹೇಳುತ್ತ ಕೀರ್ತಿಯನ್ನು ಪಕ್ಕದ ಮನೆಗೆ ಕಳುಹಿಸುತ್ತಾಳೆ .. ಕೀರ್ತಿಗೆ ಗೆ ಅಜ್ಜಿ ಯನ್ನು ನೋಡಿದರೆ ಸ್ವಲ್ಪ ಕೂಡ ಇಷ್ಟ ಆಗುತ್ತಾ ಇರಲಿಲ್ಲ ..
"ಅಯ್ಯೋ ಈ ಅಜ್ಜಿಗೆ ಮಾತಿಗೆ ಅಷ್ಟೇ ನಾನು ಅವರ ಮೊಮ್ಮಗಳು . ಯಾವತ್ತೂ ನನ್ನನ್ನು ಮೊಮ್ಮಗಳ ಹಾಗೆ ನೋಡಿ ಕೊಂಡಿಲ್ಲ . ಯಾವಾಗಲೂ ಬೈಯುತ್ತಾ ಇರುತ್ತೆ . ಈ ಅಮ್ಮನಿಗೆ ನಾವು ಇಲ್ಲಿ ಇರುವುದು ಬೇಡ ಅಂತ ಹೇಳಿದರೆ ಅರ್ಥವೇ ಆಗುವುದಿಲ್ಲ . "
ಎಂದು ಕೀರ್ತಿ ಬೈದು ಕೊಳ್ಳುತ್ತಾ ಪಕ್ಕದ ಮನೆಗೆ ಹೋಗಿ
ಬಸಳೆ ಪುಂಡಿ ತಂದು ಅವಳ ಮುಂದೆ ಇಡುತ್ತಾಳೆ ... ಆ ಮುದುಕಿ ತಂದ ಬಸಳೆ ಪುಂಡಿಯನ್ನು ಎಲ್ಲ ತಿಂದು ಮುಗಿಸಿ ಬಿಡುತ್ತಾಳೆ .. ಅಲ್ಲೇ ನಿಂತಿದ್ದ ಕೀರ್ತಿಗೆ ಒಂದು ತುಂಡು ಸಹ ಕೊಡದೆ ಚಪ್ಪರಿಸಿ ಒಬ್ಬಳೇ ತಿಂದು ಬಿಡುತ್ತಾಳೆ ..
ಆದರೆ ಇನ್ನೊಂದು ಕಡೆ ಪಾಪ ಸಾಹಿತ್ಯ ಪುಟ್ಟ ಕಣ್ಣೀರು ಸುರಿಸುತ್ತ ತನ್ನ ತಾಯಿಯ ಹತ್ತಿರ ಓಡಿ ಕೊಂಡು ಬಂದು .
" ಅಮ್ಮ ಅಮ್ಮ .ಹುಷಾರಾಗಿ ಇದ್ದಿಯಾ ಅಲ್ವಾ . ಬಾ ಅಮ್ಮ ನಾನು ಇಲ್ಲಿಂದ ಹೋಗುವ ನಾವು ಇಲ್ಲೇ ಇದ್ದರೆ ಆ ಅಜ್ಜಿ ನಮ್ಮನ್ನು ಕೊಂದೆ ಬಿಡುತ್ತಾರೆ .ಬಾ ಅಮ್ಮ ಇಲ್ಲಿಂದ ಹೋಗುವ . ಈ ಅಜ್ಜಿಯ ಕಣ್ಣಿಗೆ ಕಾಣದಷ್ಟು ದೂರ ಹೋಗಿ ನಾವು ಬದುಕುವ ."
ಎಂದು ಆ ಪುಟ್ಟ ಹುಡುಗಿ ಅಳುತ್ತಾ ಕೇಳುತ್ತಾಳೆ . ಆ ಪುಟ್ಟ ಹುಡುಗಿಯ ಮಾತು ಕೇಳಿದರೆ ಎಂತಹ ಕಲ್ಲು ಮನಸ್ಸು ಕೂಡ ಕರಗುವ ರೀತಿ ಇತ್ತು . ಆದರೆ ಅವಳ ಮಾತಿಗೆ ಅಳುವುದು ಬಿಟ್ಟು ಬೇರೆ ಯಾವುದೇ ಉತ್ತರ ಕೊಡುವುದಕ್ಕೆ ಸರಸ್ವತಿಗೆ ಆಗುತ್ತಾ ಇರಲಿಲ್ಲ .
ಸರಸ್ವತಿ ಅಜ್ಜಿಯ ಕಾಟದಿಂದ ಮೊದಲೇ ಅರ್ಧ ಜೀವ ಆಗಿ ಬಿಟ್ಟಿದ್ದಳು . ಹೇಗೋ ಕಷ್ಟ ಪಟ್ಟು ಅಲ್ಲಿಂದ ಮನೆಯ ಹಿಂದಿನ ಬಾಗಿಲಿಂದ ಹೊರಗೆ ಬಂದು ಜಗಲಿಯಲ್ಲಿ ಕುಳಿತುಕೊಂಡಳು. ಸರಸ್ವತಿಗೆ ಆ ಮನೆಯಲ್ಲಿ ಇರುವ ಯಾರನ್ನು ಕರೆಯುವ ಮನಸ್ಸು ಇರಲಿಲ್ಲ. .
ಇನ್ನೊಂದು ಕಡೆ ಉರಿ ಕೂಡ ತಡೆಯುವುದಕ್ಕೆ ಅವಳ ಕೈ ಯಿಂದ ಆಗುತ್ತಾ ಇರಲ್ಲಿಲ್ಲ . ಸಾಹಿತ್ಯ ಪುಟ್ಟ ತನಗೆ ಗೊತ್ತಿರು ಮನೆ ಮದ್ದು ತಂದು ಅಮ್ಮನ ಬೆನ್ನಿಗೆ ಸವರುತ್ತಾ ಇದ್ದಳು .. ಆ ರೀತಿ ಸವರುವಾಗ ಅವಳಿಗೆ ರಂಜಿನಿ ಆಂಟಿ ಹೇಳಿದ ಮಾತು ನೆನಪಿಗೆ ಬರುತ್ತೆ ..
" ಅವತ್ತು ನಾನು ಕೂಡ ಕೈ ಸುಟ್ಟು ಕೊಂಡಾಗ ರಂಜಿನಿ ಆಂಟಿ ನನಗೆ ಮನೋಲಿ ಗಿಡದ ಎಲೆ ತಂದು ಅದರ ರಸ ತೆಗೆದು ಕೈಗೆ ಹಚ್ಚಿದ್ದರು .ಈಗ ಅಮ್ಮನಿಗೆ ಕೂಡ ಮನೋಲಿ ಗಿಡದ ಎಲೆ ತೆಗೆದು ಅದರ ರಸ ಹಚ್ಚಿದರೆ ಉರಿ ಕಡಿಮೆ ಆಗ ಬಹುದು ."
ಸಾಹಿತ್ಯಳಿಗೆ ಆ ಮಾತು ನೆನಪಾಗಿದ್ದೆ. ತಡ ಓಡಿ ಹೋಗಿ ಮನೋಲಿ ಗಿಡದ ಎಲೆಗಳನ್ನು ಕಿತ್ತು ಅದನ್ನು ಹಿಂಡುವುದಕ್ಕೆ ಪ್ರಯತ್ನ ಮಾಡುತ್ತಾಳೆ .ಆದರೆ ಆ ಪುಟ್ಟ ಕೈಯಿಂದ ರಸ ತೆಗೆಯುವುದಕ್ಕೆ ಸಾಧ್ಯ ಆಗುವುದಿಲ್ಲ .
ಆದರೂ ಸಾಹಿತ್ಯ ಪುಟ್ಟ ತನ್ನ ಛಲ ಬಿಡದೆ . ಅದೇ ಮನೋಲಿ ಎಲೆಯನ್ನು ಕಲ್ಲಿಗೆ ಹಾಕಿ ರುಬ್ಬಿ . ಪೇಸ್ಟ್ ಮಾಡಿ ಅಮ್ಮ ನ ಬೆನ್ನಿಗೆ ಹಚ್ಚಿ ಬಿಡುತ್ತಾಳೆ . ಅದು ಹಚ್ಚಿದ ತಕ್ಷಣ ಉರಿ ಸ್ವಲ್ಪ ಕಡಿಮೆ ಆಗುತ್ತದೆ ...
ಇನ್ನೊಂದು ಕಡೆ ಬಸಳೆ ಪುಂಡಿ ತಿಂದು ಸಮಾಧಾನ ದಿಂದ ಗೋಡೆಗೆ ಹೊರಗಿ . ಯೋಚನೆ ಮಾಡುತ್ತಾ ಕುಳಿತು ಕೊಳ್ಳುತ್ತಾಳೆ .
ಇನ್ನೂ ಯಾವ ರೀತಿ ಕಷ್ಟ ಕೊಡಿಸಿದರೆ ಈ ಸರಸ್ವತಿ ಮತ್ತು ಸಾಹಿತ್ಯ ಮನೆ ಬಿಟ್ಟು ಹೋಗುತ್ತಾರೆ ಎಂದು ಯೋಚನೆ ಮಾಡುತ್ತಾಳೆ .