Abhinayanaa - 13 in Kannada Love Stories by S Pr books and stories PDF | ಅಭಿನಯನಾ - 13

The Author
Featured Books
Categories
Share

ಅಭಿನಯನಾ - 13

    ಸೂಪರ್ ಮಾರ್ಕೆಟ್ ಮುಂದೆ ಜನ ಗುಂಪು ಕಟ್ಟಿಕೊಂಡು ಆಗ್ತಾ ಇರೋ ಗಲಾಟೆ ನಾ ನೋಡ್ತಾ ನಿಂತಿದ್ದಾರೆ. 

ರುದ್ರೇಶ್,,,, ಕೋಪದಿಂದ ಲೋ ವಿಶ್ವ,, ಮೊದಲು ಒಂದು ಮಾತಡಿ ಇವಾಗ ಪ್ಲೇಟ್ ಬದಲಾಯಿಸ್ತಾ ಇದ್ದಿಯಾ. ನನ್ನ ಮಗನಿಗೆ ಈ ಅಸ್ತಿ ನಾ ಕೊಡ್ತೀನಿ ಅಂತ ಹೇಳಿದ್ದೆ ಅಲ್ವಾ, ಇವಾಗ ನೋಡಿದ್ರೆ, ಕೊಡಲ್ಲ ಅಂತ ಇದ್ದಿಯಾ, ನಾನು ಇಷ್ಟು ದಿನ ಹೋಗ್ಲಿ ಪಾಪ, ಗಲಾಟೆ ಮಾಡೋದು ಬೇಡ, ಕೊಡ್ತಾನೆ ಬಿಡು ಅಂತ ಸುಮ್ನೆ ಇದ್ರೆ. ನೀನು ಇವಾಗ ಪ್ಲೇಟ್ ನೇ ಚೇಂಜ್ ಮಾಡಿಬಿಟ್ಟ ಇದರ ಪರಿಣಾಮ ಬೇರೆ ತರ ಇರುತ್ತೆ ನೋಡ್ಕೋ.

ವಿಶ್ವ,,, ಹೌದೋ ಕೊಡ್ತೀನಿ ಅಂತ ಹೇಳಿದ್ದು ನಿನ್ನ ಮಗನಿಗೆ, ನಿನಗಲ್ಲ, ಹೋಗಿ ನಿನ್ನ ಮಗನನ್ನ ಕರ್ಕೊಂಡು ಬಾ, ಅವನು ಕೇಳ್ಲಿ ನಾನ್ ಕೊಡ್ತೀನಿ, ಅದು ಬಿಟ್ಟು ನಿನ್ ಬಂದು ಈ ಅಸ್ತಿ ನಾ ಕೊಡು ಅಂತ ಕೇಳಿದ ತಕ್ಷಣ ಕೊಡೋಕೆ ಇದೇನು ನೀನು ಸಂಪಾದನೆ ಮಾಡಿದ ಅಸ್ತಿ ನಾ. ನಾನು ಕಷ್ಟ ಪಟ್ಟು ಬೆವರು ಸುರಿಸಿ ಸಂಪಾದನೆ ಮಾಡಿದ ಅಸ್ತಿ. ಇದರಲ್ಲಿ ನಿನಗೆ ಒಂದು ಬಿಡುಗಾಸು ಕೂಡ ಕೊಡೋದಿಲ್ಲ ನೆನಪಿಟ್ಕೋ.

ರುದ್ರೇಶ್,,, ಕೊಡೋದಿಲ್ವಾ ಅದೇಗೆ ಕೊಡೋದಿಲ್ಲ ಅಂತ ನಾನು ನೋಡ್ತೀನಿ. ಯಾರನ್ನ ಹೇಗೆ  ವಿಚಾರಿಸಿ ಕೊಳ್ಳಬೇಕು ಅನ್ನೋದು ಈ ರುದ್ರೇಶನಿಗೆ ಚೆನ್ನಾಗಿ ಗೊತ್ತು. ಅಂತ ಹೇಳ್ತಾ ಲೋ ರೂಪೇಶ ಹೋಗಿ ಅ ಮಗುನ ಕರ್ಕೊಂಡು ಬಾರೋ,  ಅವಾಗ ಇವನಾಗೆ ಬಂದು ಈ ಅಸ್ತಿ ನಾ ನಮ್ಮ ಕೈಗೆ ಕೊಡ್ತಾನೆ.

ವಿಶ್ವ,,,, ಲೇ ರುದ್ರ ನನ್ನ ಮೊಮ್ಮಗಳ ತಂಟೆಗೆ ಏನಾದ್ರು ಬಂದ್ರೆ ಪರಿಣಾಮ ನೆಟ್ಟಗೆ ಇರೋದಿಲ್ಲ, ನೋಡ್ಕೋ.

ರುದ್ರೇಶ್,,, ಲೋ ನಿನಗೆ ಅವಳು ಹೇಗೆ ಮೊಮ್ಮಗಳೋ ಹಾಗೇ ನನಗೂ ಕೂಡ ಮೊಮ್ಮಗಳೇ.

ವಿಶ್ವ,,, ತು ನಿನ್ನ ಜನ್ಮಕ್ಕೆ ಈ ಮಾತನ್ನ ಹೇಳೋದಕ್ಕೆ ನಿನಗೆ ನಾಚಿಕೆ ಆಗೋದಿಲ್ವಾ. ಮಗಳು ಅಳಿಯ ಆಕ್ಸಿಡೆಂಟ್ ಆಗಿ ಸತ್ತಾಗ, ನನಗೂ ಅವರಿಗೂ ಸಂಬಂಧ ನೇ ಇಲ್ಲಾ ಅನ್ನೋ ಹಾಗೇ ಫಾರಿನ್ ಟ್ರಿಪ್ ಹೋಗೋಕೆ ರೆಡಿ ಆಗ್ತಾ ಇದ್ದೆ, ಸತ್ತವನು ನಿನ್ನ ಮಗ ಅನ್ನೋದನ್ನೇ ಮರೆತು ಕೊನೆ ಸಾರಿ ಅವನ ಮುಖ ನೋಡೋಕು ಬರಲಿಲ್ಲ. ಮೊಮ್ಮಗಳು ಅನ್ನೋ ಕನಿಕರ ಇಲ್ದೆ ಅ ಮಗು ನಾ ಸತ್ರೆ ಸಾಯಲಿ ಅಂತ ಇದ್ದೆ. ಈಗ ಮೊಮ್ಮಗಳು ಅಂತ ಯಾವ ಬಾಯಿ ಯಿಂದ ಹೇಳ್ತಾ ಇದ್ದಿಯೊ. 

ರೂಪೇಶ್,,, ಕೋಪದಿಂದ ಏನೋ ನಮ್ಮಪ್ಪನಿಗೆ ಮರ್ಯಾದೆ ಇಲ್ದೆ ಮಾತಡ್ತ ಇದ್ದಿಯಾ, ಅಂತ ವಿಶ್ವ ನಾ ಮೇಲೆ ಹೊಡಿಯೋಕೆ ಹೋಗ್ತಾನೆ.

ನಿರಂಜನ್  ರೂಪೇಶ್ ಬರೋದನ್ನ ನೋಡಿ. ಅವರ ಮಧ್ಯ ಹೋಗಿ ನೋಡು ರೂಪೇಶ ಒಳ್ಳೆ ಮಾತಲ್ಲಿ ಹೇಳ್ತಾ ಇದ್ದೀನಿ ಇಲ್ಲಿಂದ ಅಪ್ಪ ಮಗ ಸುಮ್ನೆ ಹೋದ್ರೆ ಸರಿ, ಇಷ್ಟೋತ್ತು ಚೆನ್ನಾಗಿ ಇತ್ತು. ಇದರ ಮೇಲೆ ಅಪ್ಪ ಮಗ ಏನಾದ್ರು ಮಾತಾಡಿದ್ರೆ ಮುಂದೆ ಏನಾಗುತ್ತೋ ನಿಮಗೆ ಗೊತ್ತಿಲ್ಲ, ನಿಮಗೆ ಅಸ್ತಿ ಬೇಕು ತಾನೇ ಕೋರ್ಟ್ ಇದೆ ಅಲ್ಲಿ ಹೋಗಿ ನಿಮಗೆ ಏನಾದ್ರು ಬರಬೇಕು ಅನ್ನೋದು ಇದ್ರೆ ಅಲ್ಲಿಂದಾನೆ ತಗೋಳಿ, ಇಲ್ಲಿ ಬಂದು ಹೀಗೆ ಗಲಾಟೆ ಮಾಡೋದು ಸರಿ ಅಲ್ಲ. ಅಂತ ಹೇಳ್ತಾನೆ.

ರೂಪೇಶ್,,, ಕೋಪದಿಂದ ಏನೋ ನೀನೇನು ಅವನಿಗೆ ಬಾಲ ನಾ, ಮಗನೆ ನನ್ನ ಬಗ್ಗೆ ಗೊತ್ತು ತಾನೇ, ಮಗನೆ ಮನೆ ಸೇರ್ಕೋಳ್ಳೋದಿಲ್ಲ. 

ರಾಜ್,,, ರೂಪೇಶ್ ನಾ ನೋಡ್ತಾ ಅಯ್ಯೋ ಅಯ್ಯೋ ಲೋ ಮಚ್ಚಾ ನನಗೆ ಯಾಕೋ ಭಯ ಆಗ್ತಾ ಇದೆ ಮಚ್ಚಾ,, ಬಾರೋ ಹೋಗಿ ಇವನ ಹೆಸರಲ್ಲಿ ಫುಲ್ ಡ್ರಿಂಕ್ಸ್ ಮಾಡಿ ನಮ್ ಆಸೆ. ಏನಿದೆಯೋ ಅದನ್ನೆಲ್ಲಾ ನೆರವೇರಿಸಿ ಕೊಳ್ಳೋಣ ಅಂತ ವ್ಯಂಗ್ಯ ವಾಗಿ ನಗ್ತಾ ಲೋ ರೂಪೇಶ, ನೀನು ಭಯ ಬೀಳಿಸಿದ ತಕ್ಷಣ ಭಯ ಬಿಳೋಕೆ ನಾವೇನು ನೀನು ಕೊಡಿಸೋ ಬಿಟ್ಟಿ ಎಣ್ಣೆಗೆ ನಿನ್ನ ಜೊತೆ ಇರೋವ್ರು ಅನ್ಕೊಂಡ, ಮಗನೆ ಮನೆ ಫ್ಯಾಮಿಲಿ ಅನ್ನೋದನ್ನ ಮರೆತರೆ. ನಿನ್ ತರ ಮಾತಲ್ಲಿ ಅಲ್ಲ. ಮೊದಲು ಏಟು ಆಮೇಲೆ ಮಾತು. ಆದ್ರು ನಿನ್ನ ಒಳ್ಳೇದಕ್ಕೆ ಹೇಳ್ತಾ ಇದ್ದೀನಿ. ಅಪ್ಪ ಮಗ ಇಲ್ಲಿಂದ ಹೋದ್ರೆ ನಿಮಗೆ ಒಳ್ಳೇದು, ಇಲ್ಲಾ ಅನ್ಕೋ ನಿನಗೂ ನಿಮ್ ಅಪ್ಪನಿಗೂ ನಿಮ್ಮ ಸ್ಟೈಲ್ ಅಲ್ಲೇ ಬುದ್ದಿ ಕಲಿಸೋವ್ನು ಬರ್ತಾನೇ ಆಮೇಲೆ ನಮಗೆ ಯಾಕೆ ನೀನು ಮೊದಲೇ ಹೇಳಿಲ್ಲ ಅಂತ ಕೆಳಬಾರ್ದು.

ರೂಪೇಶ್,,, ಏನೋ ನಾನು ಯಾರು ಏನು ಅಂತ ಗೊತ್ತಿದ್ರು ನನಗೆ, ಅಂತ ಹೊಡಿಯೋಕೆ ಕೈ ಮುಂದೆ ಮಾಡ್ತಾನೆ.

ನೆಕ್ಸ್ಟ್ ಸೆಕೆಂಡ್ ಅಲ್ಲಿ ರೂಪೇಶ್ ದಪ್ ಅಂತ ಕೆಳಗೆ ಬೀಳ್ತಾನೆ. 

####

ಸುಭದ್ರ,,,, ನಯನಾ ಏನಕ್ಕೆ ಇಷ್ಟು ಟೆನ್ಶನ್ ಆಗ್ತಾ ಇದ್ದಿಯಾ, ಅಲ್ಲಿ ನಿಮ್ ಅಪ್ಪ ಇದ್ದಾರೆ ನೋಡ್ಕೋತಾರೆ, ಇದೇನು ಅವರಿಗೆ ಹೊಸದ ಹೇಳು. ಅಭಿ ಗೆ ಏನು ತೊಂದ್ರೆ ಆಗೋದಿಲ್ಲ.

ನಯನಾ,,, ಡ್ರೈವ್  ಮಾಡ್ತಾ ಅಮ್ಮ ನನಗೆ ಟೆನ್ಶನ್ ಆಗ್ತಾ ಇರೋದು, ಅಭಿ ಬಗ್ಗೆ ಅಪ್ಪನ ಬಗ್ಗೆ ಅಲ್ಲ ಅಮ್ಮ ರೂಪೇಶ್ ರುದ್ರೇಶ್ ಬಗ್ಗೆ. 

ಸುಭದ್ರ,,, ನಯನಾ ನೀನಾಗೆ ಅವರ ಬಗ್ಗೆ ಟೆನ್ಶನ್ ಏನಕ್ಕೆ?

ನಯನಾ,,, ರೂಪೇಶ ಮತ್ತೆ ಅವರ ಅಪ್ಪ ಬಂದಿರೋದು, ಆಸ್ತಿ ನಾ ಕೇಳೋಕೆ ಆಗಿದ್ರೆ ಪರ್ವಾಗಿಲ್ಲ, ಅದ್ರೆ ಅವರು ಅನಾ ನಾ ಮುಂದೆ ಇಟ್ಟು ಈ ರೀತಿ ಪ್ಲಾನ್ ಮಾಡಿರೋದು. ಅಪ್ಪಿ ತಪ್ಪಿ ಅಪ್ಪ ಮಗ ಏನಾದ್ರು ಅಭಿ ಮುಂದೆ ಅನಾ ಹೆಸರು ಹೇಳಿದ್ರೆ ಮುಗಿತು ಅವರ ಕಥೆ.

ಸುಭದ್ರ,,,, ಏನೇ ಹೇಳ್ತ ಇದ್ದಿಯಾ?

ನಯನಾ,,, ಅಮ್ಮ ನೀನು ರೂಪೇಶ್ ಗೆ ಯಾರೋ ಕೈ ಕಾಲು ಮುರಿದು ಒಳ್ಳೆ ಬುದ್ದಿ ಕಲಿಸಿದ್ರು ಅಂತ ದೇವರಿಗೆ ಕೈ ಮುಗಿದೇ ಅಲ್ವಾ.

ಸುಭದ್ರ,,, ಹೌದು.

ನಯನಾ,,, ಅವನಿಗೆ ಕೈ ಕಾಲು ಮುರಿದಿದ್ದು ಬೇರೆ ಯಾರು ಅಲ್ಲ ಅಭಿ. ನಿಜ ಹೇಳಬೇಕು ಅಂದ್ರೆ ಅವತ್ತು ನಿರಂಜನ್ ರಾಜ್ ಇಲ್ಲಾ ಅಂದಿದ್ರೆ ಅಭಿ ರೂಪೇಶ್ ನಾ ಏನಾದ್ರು ಒಂದು ಮಾಡ್ತಾ ಇದ್ದಾ. 

ಸುಭದ್ರ,,, ಏನು ಅಭಿ ನಾ ಅವನಿಗೆ ಹಾಗೇ ಮಾಡಿದ್ದು. ಅಭಿ ಗೆ ಅವನಿಗೆ ಏನಾದ್ರು ಜಗಳಾ ನಾ.

ನಯನಾ,,, ಜಗಳ ಅಲ್ಲ ಅಮ್ಮ, ರೂಪೇಶ್ ಕುಡಿದು ಸೂಪರ್ ಮಾರ್ಕೆಟ್ ಹತ್ತಿರ ಅವನ ಗ್ಯಾಂಗ್ ಜೊತೆಗೆ ಬಂದು ಅಪ್ಪ ನಾ ಮತ್ತೆ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತಾಡಿದ. ಅಪ್ಪ ನಿಗೆ ಅವರ ಬಗ್ಗೆ ಚೆನ್ನಾಗಿ ಗೊತ್ತು. ಗಲಾಟೆ ಅಂತ ಹೋದ್ರೆ ಮತ್ತೆ ಇಲ್ದೆ ಇರೋ ಪ್ರಾಬ್ಲಮ್ ಬರುತ್ತೆ ಅಂತ ಏನು ಮಾತಾಡೋಕೆ ಹೋಗಲಿಲ್ಲ. ಅವತ್ತು ಅವನ ಬ್ಯಾಡ್ ಲಕ್. ಅಭಿ ಅಲ್ಲೇ ಇದ್ದಾ. ಪ್ರತಿಯೊಂದು ವಿಷಯ ನಾ ಕೇಳಿಸಿಕೊಂಡು, ಹುಡುಕೊಂಡು ಹೋಗಿ ಅವನನ್ನ ಅ ಸ್ಥಿತಿ ಗೆ ತಂದ. ಇದುವರೆಗೂ ಅವನನ್ನ ಹಾಗೇ ಹೊಡೆದಿದ್ದು ಅಭಿ ಅಂತ ಗೊತ್ತಿಲ್ಲ. ಈಗ ಅವನು ಅಸ್ತಿ ಮತ್ತೆ ಅನಾ ವಿಷಯ ಕ್ಕೆ ಬಂದಿದ್ದಾನೆ. ಅಭಿ ನೋಡೋ ಅಷ್ಟು ಸೈಲೆಂಟ್ ಅಲ್ಲ ಅಮ್ಮ. ನನ್ನವರು ಅಂತ ಅವನು ಯಾರನ್ನ ಅನ್ಕೋತಾನೋ ಅವರ ಬಗ್ಗೆ ಅವರ ಸುದ್ದಿಗೆ ಹೋದ್ರೆ, ರಾಕ್ಷಸ ಆಗಿ ಬಿಡ್ತಾನೆ. ಈಗ ಅಪ್ಪ ಮಗನಿಗೆ ಏನ್ ಮಾಡ್ತಾನೋ ಅಂತ ಭಯ ಆಗ್ತಾ ಇದೆ.


ಸುಭದ್ರ,,, ರೂಪೇಶ್ ಗೆ ಅ ರೀತಿ ಹೊಡೆದಿದ್ದು ಅಭಿ ನಾ. ಅಬ್ಬಾ ನನ್ನ ಅಳಿಯ ನಾ ಬಗ್ಗೆ ಒಂದೊಂದೇ ವಿಚಾರ ಗೊತ್ತಾಗ್ತಾ ಇದ್ರೆ ನನಗೆ ಎಷ್ಟು ಖುಷಿ ಆಗ್ತಾ ಇದೆ. ನಿಮ್ಮಪ್ಪ ಅಳಿಯ ನಾ ಕರ್ಕೊಂಡು ಬಂದಿಲ್ಲ. ಮಗನನ್ನೇ ಕರ್ಕೊಂಡು ಬಂದಿದ್ದಾನೆ. ಅಂತ ಹೇಳ್ತಾ ಖುಷಿ ಪಡ್ತಾರೆ.

ನಯನಾ,,, ಕೋಪದಿಂದ ಅಮ್ಮ ನಿನ್ನ?

####

ಕೆಳಗೆ ಬಿದ್ದ ರೂಪೇಶ್ ಗೆ ಒಂದು ಕ್ಷಣ ಏನಾಯ್ತು ಅನ್ನೋದೇ ಗೊತ್ತಾಗಲ್ಲ. ಕಣ್ ಬಿಟ್ಟು ಎದ್ದು ನಿಂತು ನೋಡ್ತಾನೆ. ಅಷ್ಟೇ ಶಾಕ್ ಆಗಿ ನಿಂತು ಬಿಡ್ತಾನೆ. ರುದ್ರೇಶ್ ನೆಲದ ಮೇಲೆ ಬಿದ್ದಿದ್ರೆ. ಅವನ ಮೇಲೆ ಅಭಿ ಕಾಲಿಟ್ಟು ನಿಂತು ರುದ್ರೇಶ್ ನಾ ಒಂದು ಕೈ ನಾ ಅವನ ಕೈಲಿ ಇಡ್ಕೊಂಡು, ಕೈ ನಾ ಮುರಿಯೋ ತರ ಮಾಡ್ತಾ ಇದ್ದಾನೆ.

ರೂಪೇಶ್,,,, ಕೋಪದಿಂದ ಅಭಿ ನಾ ನೋಡ್ತಾ. ಲೋ ಯಾವನೋ ನೀನು. ನೀನು ತುಂಬಾ ದೊಡ್ಡ ತಪ್ಪು ಮಾಡ್ತಾ ಇದ್ದಿಯಾ. ನಮ್ಮಪ್ಪನಿಗೆ ಏನಾದ್ರು ಅದ್ರೆ ನಿನ್ನ ಮಾತ್ರ ಸುಮ್ನೆ ಬಿಡೋದಿಲ್ಲ.

ರೂಪೇಶ್ ಯಾವಾಗ ಸುಮ್ನೆ ಬಿಡೋದಿಲ್ಲ ಅಂತ ಹೇಳಿದ್ನೋ.

ಅಭಿ ಕೋಪದಿಂದ ರುದ್ರೇಶ್ ನಾ ಕೈ ಮುರಿದು ಹಾಕಿ ಬಿಡ್ತಾನೆ. ರುದ್ರೇಶ್ ನೋವಿನಿಂದ ಜೋರಾಗಿ ಅಮ್ಮ ಅಂತ ಕಿರುಚಡ್ತಾನೆ. ರೂಪೇಶ್ ಅಪ್ಪ ಅಪ್ಪ ಅನ್ಕೊಂಡು ಹತ್ತಿರ ಹೋಗ್ತಾ ಅಭಿ ಮುಖ ನೋಡ್ತಾ ಯಾವನೋ ನೀನು. ಇದಕ್ಕೂ ನಿನಗೂ ಏನ್ ಸಂಬಂಧ ಅಂತ ಕೋಪದಿಂದ ಕೇಳ್ತಾನೆ..

ಅಭಿ,,, ಏನ್ ಸಂಬಂಧ ನಾ,, ಸಂಬಂಧ ಇರೋದಕ್ಕೇನೆ ಬಂದಿರೋದು. ಹೇಳೋವ್ನು ಕೇಳೋವ್ನು ಯಾವನು ಇಲ್ಲಾ. ನಾಲಕ್ಕು ಜನ ನಾ ಕರ್ಕೊಂಡು ಹೋಗಿ ಭಯ ಬೀಳಿಸಿದ್ರೆ, ಭಯ ಬೀಳ್ತಾರೆ ಅನ್ಕೊಂಡು, ಅಪ್ಪ ಮಗ ಇಷ್ಟ ಬಂದ ಹಾಗೇ ಮಾತಾಡ್ತಿರ. ಇವತ್ತು ಅಪ್ಪ ಮಗನಿಗೆ ಇಲ್ಲೇ ಚಟ್ಟ ಕಟ್ಟುತ್ತೀನಿ, ನೋಡ್ತಾ ಇರಿ ಅಂತ ಹೇಳಿ. ರುದ್ರೇಶ್ ನಾ ಇನ್ನೊಂದು ಕೈ ನಾ ಇಡ್ಕೊಂಡು. ಏನ್ ಹೇಳಿದ ನಿಮ್ ಅಪ್ಪ. ಅ ಮಗು ನಾ ಎತ್ತಕೊಂಡು ಬಾ ಇವರೆ ದಾರಿ ಗೆ ಬರ್ತಾರೆ ಅಂತ ಅಲ್ವಾ.. ಮಕ್ಕಳ ನಿಮಗೆ ಅ ಮಗು ನಾ ಮುಟ್ಟೋಕು ಇನ್ನೊಂದು ಜನ್ಮ ಎತ್ತಿ ಬರಬೇಕು ಅಂತ ಹೇಳ್ತಾನೆ ಇಡ್ಕೊಂಡು ಇರೋ ಕೈ ನಾ ಮುರಿದು ಬಿಡ್ತಾನೆ. ರುದ್ರೇಶ ನೋವಿಗೆ ಇನ್ನು ಜೋರಾಗಿ ಕಿರುಚಾಡ್ತಾ ನೆಲದಲ್ಲೆ ಒದ್ದಾಡ್ತಾನೆ. ರೂಪೇಶ್ ತಂದೆ ನೋವನ್ನ ನೋಡಿ. ನಿನ್ನ ಸುಮ್ನೆ ಬಿಡೋದಿಲ್ವೋ ಅಂತ ಹೊಡಿಯೋಕೆ ಮುಂದೆ ಬಂದಾಗ. ಅಭಿ ಕಾಲನ್ನ ಮುಂದೆ ಮಾಡಿ ಜೋರಾಗಿ ಅವನ ಎದೆಗೆ ಒದೀತಾನೆ. ರೂಪೇಶ್ ಬಂದಷ್ಟೇ ವೇಗವಾಗಿ ಹಿಂದೆ ಹೋಗಿ ಬೀಳತಾನೆ. ನೆಲದ ಮೇಲೆ ಬಿದ್ದ ರೂಪೇಶ್ ನಾ ಅಭಿ ಮತ್ತೆ ಹೊಡಿಯೋಕೆ ಹೋಗ್ತಾನೆ. ನಯನಾ ಓಡಿ ಬಂದು. ಅಭಿ ನಾ ಗಟ್ಟಿಯಾಗಿ ಇಡ್ಕೊಂಡು ಅಭಿ ಪ್ಲೀಸ್ ಅವನನ್ನ ಬಿಟ್ಟು ಬಿಡು. ಅವರಿಗೆ ನೀನು ಏನಾದ್ರು ಮಾಡಿ ಜೈಲಿಗೆ ಹೋದ್ರೆ. ನಮ್ ಗತಿ ಏನು ಪ್ಲೀಸ್ ಅಭಿ,, ನಮಗೆ ಈ ಅಸ್ತಿಗಿಂತ. ನೀನು ನಮಗೆ ಬೇಕು. ನಿನ್ನ ದೂರ ಮಾಡ್ಕೊಂಡು ಮತ್ತೆ ನಾವು ಕಣ್ಣೀರಲ್ಲೇ ಕೈ ತೊಳಿಯೋ ಹಾಗೇ ಮಾಡಬೇಡ ಪ್ಲೀಸ್ ಅಭಿ. ಪ್ಲೀಸ್ ಅಂತ ಹೇಳ್ತಾ ಅಭಿ ನಾ ತಬ್ಬಿಕೊಂಡು ಅಳ್ತಾ ಕೇಳ್ಕೋತಾಳೆ. 

ನಿರಂಜನ್ ರಾಜ್, ಮೇಘ, ತೇಜು ಗೆ. ನಯನಾ ಅಭಿ ಹಾಗೇ ಇರೋದನ್ನ ನೋಡಿ ಶಾಕ್ ಆಗುತ್ತೆ. ಪ್ರಿಯಾ ಮಾತ್ರ ಕೂಲ್ ಹಾಗೇ ಇರ್ತಾಳೆ.

ಮೇಘ,,, ಪ್ರಿಯಾ ಹತ್ತಿರ ಲೇ ಏನೇ ಇದು ಅಭಿ ಗೆ ನಯನಾ ಗೆ 

ಪ್ರಿಯಾ,,, ಲೇ ಅವರಿಬ್ಬರೂ ಗಂಡ ಹೆಂಡತಿ ಅಂತ ಒಂದು ಬಾಂಬ್ ಹಾಕ್ತಾಳೆ. 

ಮೇಘ ಅದನ್ನ ಕೇಳಿ ಇನ್ನು ಶಾಕ್ ಆಗ್ತಾಳೆ.

ಅಭಿ ನಾ ನಯನಾ ಇಡ್ಕೊಂಡು ಅಳ್ತಾ ಅವನನ್ನ ತಡಿತಾ ಇದ್ರೆ. ಅನಾ ಬಂದು ಪಪ್ಪಾ ಪ್ಲೀಸ್ ಪಪ್ಪಾ ಅಮ್ಮ ಹೇಳೋದನ್ನ ಕೇಳು ಪಪ್ಪಾ ಅಂತ ಅಳ್ತಾ ಹೇಳ್ತಾಳೆ.

ಅಭಿ ಅನಾ ಮಾತಿಗೆ ಕೂಲ್ ಆಗಿ. ಕೋಪ ನಾ ಕಂಟ್ರೋಲ್ ಮಾಡ್ಕೊಂಡು ಅನಾ ನಾ ಎತ್ತಿಕೊಂಡು. ರುದ್ರೇಶ್ ರೂಪೇಶ್ ಕಡೆಗೆ ಕೋಪದಿಂದ ನೋಡ್ತಾ. ನನ್ನ ಮಗಳು ಹೇಳ್ತಾ ಇದ್ದಾಳೆ ಅಂತ ನಿಮ್ಮನ್ನ ಸುಮ್ನೆ ಬಿಡ್ತಾ ಇದ್ದೀನಿ. ಇದೆ ಕೊನೆ ಇನ್ನೊಂದು ಸಾರಿ  ಏನಾದ್ರು. ನನ್ನ ಮಾವನ ಅತ್ತೆ, ನನ್ನ ಹೆಂಡತಿ ಮುಖ್ಯವಾಗಿ ನನ್ನ ಮಗಳ ವಿಷಯ ಕ್ಕೆ ಏನಾದ್ರು ಬಂದ್ರೋ ನೀವು ಎಲ್ಲೇ ಹೇಗೆ ಇದ್ರು ಬಂದು ನಿಮ್ಮ ಹೆಣ ಕ್ಕೆ ನಾನೆ ಬೆಂಕಿ ಇಡ್ತೀನಿ. ಅವತ್ತು ನನ್ನ ಮಾವ ನಾ ಬಗ್ಗೆ ನನ್ನ ಹೆಂಡತಿ ಬಗ್ಗೆ ತಪ್ಪಾಗಿ ಮಾತಾಡಿದಕ್ಕೇನೆ ನಿನ್ನ ಕೈ ಕಾಲು ಮುರಿದು ಹಾಸ್ಪಿಟಲ್ ಗೆ ಬೆಡ್ ಮೇಲೆ ಮಲಗೋ ಹಾಗೇ ಮಾಡಿದ್ದೀನಿ. ಇವತ್ತು ನಿಮ್ಮಪ್ಪ ನನ್ನ ಮಗಳ ಹೆಸರು ಹೇಳಿದ್ದಕ್ಕೆನೆ ಎರಡು ಕೈ ನಾ ಮುರಿದು ಹಾಕಿದ್ದೀನಿ.  ಮಿಕ್ಕಿರೋದು ನಿಮ್ ಪ್ರಾಣ ಅಷ್ಟೇ. ಹುಷಾರು ಅಂತ ಹೇಳ್ತಾನೆ. 

ವಿಶ್ವನಾಥ್ ಅಭಿ ನಾ ಮಗಳನ್ನ ಮೊಮ್ಮಗಳನ್ನ ಅಭಿ ಹೇಳಿದ ಪ್ರತಿಯೊಂದು ಮಾತನ್ನ ಕೇಳ್ತಾ ಸಂತೋಷ ದಿಂದ ನೋಡ್ತಾ ಇರ್ತಾರೆ. ಸುಭದ್ರ ಗಂಡ ನಾ ಹತ್ತಿರ ಬಂದು ರೀ ನಿಮಗೆ ಏನು ಆಗಿಲ್ಲ ಅಲ್ವಾ ಅಂತ ಕೇಳ್ತಾ ಗಂಡನ ಮುಖ ನೋಡ್ತಾಳೆ. ಗಂಡ ಸಂತೋಷ ವಾಗಿ ಇರೋದನ್ನ ನೋಡಿ. ಅವರು ಖುಷಿ ಪಡ್ತಾರೆ.  ವಿಶ್ವನಾಥ್ ಅಭಿ ಹತ್ತಿರ ಬಂದು, ನಯನಾ ಅಭಿ ನಾ ಅನಾ ನಾ ಕರ್ಕೊಂಡು ಮನೆಗೆ ಹೋಗು ನಾನ್ ಆಮೇಲೆ ಬರ್ತೀನಿ ಅಂತ ಹೇಳ್ತಾರೆ. ನಯನಾ ಗೆ ಅಪ್ಪ ಮಾತು ಏನು ಕೇಳೋ ಸ್ಥಿತಿ ಅಲ್ಲಿ ಇಲ್ಲಾ, ಕೇವಲ ಅಭಿ ಹೇಳಿದ ಮಾತು. ನನ್ನ ಹೆಂಡತಿ ನನ್ನ ಮಗಳು, ನನ್ನ ಅತ್ತೆ ಮಾವ, ಇದೆ ಅವಳಿಗೆ ಪದೇ ಪದೇ ಕೇಳ್ತಾ ಇದೆ. ವಿಶ್ವನಾಥ್ ಮತ್ತೆ ಒಂದು ಸಾರಿ ಕರೀತಾರೆ. ಆಗ ನಯನಾ ವಾಸ್ತವಕ್ಕೆ ಬರ್ತಾಳೆ. ಅಪ್ಪ ಹೇಳಿದ ಹಾಗೇ ಅಭಿ ನಾ ಕಾರ್ ಹತ್ತಿರ ಕರ್ಕೊಂಡು ಹೋಗ್ತಾಳೆ. 

ವಿಶ್ವನಾಥ್,,, ಲೋ ರೂಪೇಶ, ಅಪ್ಪ ಮಗನಿಗೆ ಈ ಸ್ಥಿತಿ ಬರಬಾರದು ಅಂತ ಸುಮ್ನೆ ಇದ್ದೆ, ಅದ್ರೆ ನೀವೇ ಕೇಳಿಲ್ಲ.  ಇಷ್ಟೆಲ್ಲಾ ಆಯ್ತು ಅಂತ ನನ್ನ ಅಳಿಯ ನಾ ಮೇಲೆ ದ್ವೇಷ ಇಟ್ಕೊಳ್ಳೋಕೆ ಹೋಗಬೇಡ, ನೀವೇ ಕೆಟ್ಟವರು ಅಂತ ಅಂದ್ರೆ ಅವನು ನಿಮಗಿಂತ ಕೆಟ್ಟವನು, ಏನಕ್ಕೆ ಸುಮ್ನೆ ಇದ್ದಾನೆ ಗೊತ್ತಾ, ಅವನಿಗೆ ಫ್ಯಾಮಿಲಿ ಅಂದ್ರೆ ಅಷ್ಟು ಇಷ್ಟ ಅದಕ್ಕೆ, ಎದ್ದು ಹೋಗಿ ನಿಮ್ಮಪ್ಪನ ಹಾಸ್ಪಿಟಲ್ ಗೆ ಕರ್ಕೊಂಡು ಹೋಗು. ಇಲ್ಲಾ ಅಂದ್ರೆ ನೋವಲ್ಲೇ ಪ್ರಾಣ ಬಿಟ್ರು ಬಿಡ್ತಾನೆ. 

ರೂಪೇಶ್ ಕೋಪದಿಂದ ಎದ್ದು ಅವರ ಅಪ್ಪ ನಾ ಕಾರ್ ಅಲ್ಲಿ ಕೂರಿಸಿಕೊಂಡು ಅಲ್ಲಿಂದ ಹೊರಟು ಹೋಗ್ತಾನೆ. 

ವಿಶ್ವ,,, ಪ್ರಿಯಾ ನಿರಂಜನ್ ಗೆ ನೋಡ್ಕೊಳಿ ಅಂತ ಹೇಳಿ. ಅಭಿ, ನಯನಾ, ಹೆಂಡತಿ ಮೊಮ್ಮಗಳನ್ನ ಕಾರ್ ಅಲ್ಲಿ ಕರ್ಕೊಂಡು ಮನೆ ಕಡೆಗೆ ಹೋಗ್ತಾರೆ. 

ನಯನಾ ಮನಸಲ್ಲಿ ಹೇಳೋಕೆ ಆಗದಷ್ಟು ಸಂತೋಷ ಆಗ್ತಾ ಇರುತ್ತೆ,,, ಅಭಿ ನನ್ನ ಹೆಂಡತಿ ಆಗಿ ಯಾವಾಗೋ ಒಪ್ಪಿಕೊಂಡ, ನಾನೆ ಸ್ವಲ್ಪ ಲೇಟ್ ಮಾಡಿದೆ, ಛೇ ನನಗೆ ಸ್ವಲ್ಪ ನು ಬುದ್ದಿ ಇಲ್ಲಾ ಅಂತ ಅವಳನ್ನೇ ಅವಳು ಬೈಕೋಳ್ತಾ ನಗ್ತಾ ಇರ್ತಾಳೆ. 

@@@@@@@@@@@@@@@@@@@@@@@@@