Abhinayanaa - 20 in Kannada Love Stories by S Pr books and stories PDF | ಅಭಿನಯನಾ - 20

The Author
Featured Books
Categories
Share

ಅಭಿನಯನಾ - 20

   ಸಾರಿಕಾ ಲಗೇಜ್ ನ ಪ್ಯಾಕ್ ಮಾಡಿಕೊಂಡು, ಅಪ್ಪ ಅಮ್ಮನಿಗೆ ಹೇಳಿ, ಲಾಯರ್ ಕೊಟ್ಟ ಅಡ್ರೆಸ್ ಗೆ ಪ್ರಯಾಣ ಶುರು ಮಾಡ್ತಾಳೆ. 

#####

 ಸೂಪರ್ ಮಾರ್ಕೆಟ್ ಅಲ್ಲಿ ಕೆಲಸ ಮಾಡೋವರಾನೆಲ್ಲ ಮಾತಾಡಬೇಕು ಅಂತ ಮೀಟಿಂಗ್ ಗೆ ಕರೀತಾರೆ. ಎಲ್ಲರೂ ಅವರವರ ಕೆಲಸ ನ ಬಿಟ್ಟು ಬರ್ತಾರೆ.

ವಿಶ್ವ,,, ಎಲ್ಲರನ್ನು ನೋಡ್ತಾ,, ನಿಮಗೆ ಎಲ್ಲರಿಗೂ ಗೊತ್ತು, ಅಭಿ ನನ್ನ ಅಳಿಯ ಅಂತ, ಅಭಿ ಬಂದಮೇಲೆ ನನಗೆ ಹೆಚ್ಚಾಗಿ ಏನು ಕೆಲಸ ಇಲ್ಲಾ.  ನೀವೆಲ್ಲಾ ನಿಮ್ಮ ಸ್ವಂತ ಸೂಪರ್ ಮಾರ್ಕೆಟ್ ಅನ್ನೋ ತರ ನೀವು ನೋಡ್ಕೋತ ಇದ್ದೀರಾ. ನನ್ನ ತನಕ ಯಾವುದೇ ಪ್ರಾಬ್ಲಮ್ ನ ಕೂಡ ತರ್ತಾ ಇಲ್ಲಾ. ಅದಕ್ಕೆ ನಿಮಗೆ ನಾನು ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿ ನೇ. ಅದಕ್ಕೆ ನಿಮಗೆಲ್ಲ ಈ ತಿಂಗಳಿನಿಂದ 1500 ನ ಜಾಸ್ತಿ ಮಾಡ್ತಾ ಇದ್ದೀನಿ. 

ಸಂಬಳ ಜಾಸ್ತಿ ಮಾಡಿದ್ರು ಅನ್ನೋ ಖುಷಿಗೆ ಎಲ್ಲರೂ ಚಪ್ಪಾಳೆ ಹೊಡೀತಾರೆ. 

ವಿಶ್ವ,,, ಇನ್ನೊಂದು ವಿಷಯ, ನಾನು ಈ ಸೂಪರ್ ಮಾರ್ಕೆಟ್ ನ ಅಭಿ ಕೈಗೆ ಒಪ್ಪಿಸ್ತಾ ಇದ್ದೀನಿ, ನನಗೆ ಒಬ್ಬ ಮಗ ಇದ್ದಿದ್ರೆ ಕೂಡ ಅಭಿ ತರ ನೋಡ್ಕೋತ ಇದ್ನೋ ಇಲ್ವೋ ಗೊತ್ತಿಲ್ಲ, ನನಗೆ ಅಳಿಯ ಮಗ ಈಗ ಅಭಿ ನೇ ಆಗಿದ್ದಾನೆ. ಇನ್ಮೇಲೆ ಈ ಸೂಪರ್ ಮಾರ್ಕೆಟ್ ಅಭಿ ಹೇಳಿದ ಹಾಗೇ ನಡೆಯುತ್ತೆ,  ಅಂತ ಹೇಳಿ ಪ್ರಿಯಾ ಕಡೆಗೆ ನೋಡಿ ಪ್ರಿಯಾ ಇನ್ಮೇಲೆ ಸರ್ ಸರ್ ಅಂತ ನನಗೆ ಕಾಲ್ ಮಾಡಿ ತೊಂದ್ರೆ ಕೊಡೊ ಕೆಲಸ ಮಾಡೋಕೆ ಹೋಗಬೇಡ. ಏನೇ ಇದ್ರು ನಿನ್ನ ಫ್ರೆಂಡ್ ಅಭಿ ನ ಕೇಳು. ಅಭಿ ಏನ್ ಹೇಳ್ತಾನೋ ಹಾಗೇ ಮಾಡು. 

ಪ್ರಿಯಾ,, ಖುಷಿಯಾಗಿ ಹ್ಮ್ ಸರಿ ಸರ್.

ವಿಶ್ವ,,, ಅಭಿ ನ ನೋಡ್ತಾ, ನನಗೆ ಗೊತ್ತು ಅಭಿ, ನಿನಗೆ ಇಷ್ಟ ಇಲ್ಲಾ ಅಂತ, ಬಟ್ ನಿನ್ನಿಂದ ನನಗೆ ಎಷ್ಟು ಸಂತೋಷ ನೆಮ್ಮದಿ ಸಿಕ್ಕಿದೆ ಅನ್ನೋದು ನನಗೆ ಮತ್ತೆ ಅ ದೇವರಿಗೆ ಮಾತ್ರ ಗೊತ್ತು. ಇನ್ಮೇಲಿಂದ ಈ ಸೂಪರ್ ಮಾರ್ಕೆಟ್ ನಿನ್ನದು. ಹಾಗೇ ಕೆಲಸಕ್ಕೆ ಇನ್ನು ಇಬ್ಬರು ಬೇಕಾಗುತ್ತೆ, ಪ್ರಿಯಾ ಗೆ ಹೇಳಿದ್ದೀನಿ, ನಿನ್ನ ಹತ್ತಿರ ಮಾತಾಡಿ ಹೇಳ್ತಿನಿ ಅಂದ್ಲು. ನಿಮಗೆ ಯಾರು ಸರಿ ಅನ್ನಿಸ್ತಾರೋ ಅವರನ್ನ ಕೆಲಸಕ್ಕೆ ಸೇರಿಸಿ ಕೊಳ್ಳಿ. 

ವಿಶ್ವ,,,, ನಿರಂಜನ್, ರಾಜ್ ಕಡೆಗೆ ನೋಡಿ,  ಇನ್ಮೇಲೆ ಈ ಸ್ಟೋರ್ ನಿಮ್ದೇ, ಜಾಸ್ತಿ ತರ್ಲೆ ಮಾಡೋಕೆ ಹೋಗಬೇಡಿ, ಅಭಿ ಗೆ ಮೊದಲು ಯಾವ ರೀತಿ ಸಪೋರ್ಟ್ ಮಾಡ್ತಾ ಇದ್ರೋ ಹಾಗೇ ಇನ್ಮೇಲೆ ಕೂಡ ಸಪೋರ್ಟ್ ಕೊಡಬೇಕು.

ತೇಜು,,, ಸರ್ ನೀವು ಇದ್ರೇನೆ ಅವರು ತರ್ಲೆ ಮಾಡೋದು, ಅಭಿ ಇದ್ರೆ ಸೈಲೆಂಟ್ ಆಗಿ ಇರ್ತಾರೆ. ಇನ್ನು ಸಪೋರ್ಟ್ ಅಂತೀರಾ, ಅದನ್ನ ರಾತ್ರಿ ಸೂಪರ್ ಮಾರ್ಕೆಟ್ ಕ್ಲೋಸ್ ಆದಮೇಲೆ ಕೂಡ ಮಾಡ್ತಾನೆ ಇರ್ತಾರೆ. 

ನಿರಂಜನ್,, ರಾಜ್,, ತೇಜು ಕಡೆಗೆ ಒಂದು ಲುಕ್ ಕೊಡ್ತಾರೆ.

ವಿಶ್ವ,,, ನಗ್ತಾ ಹೇಗೋ ಒಟ್ನಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡಿ, ಒಬ್ಬರಿಗೊಬ್ಬರು ಸಪೋರ್ಟ್ ಆಗಿ ಇರಿ. ಬರೋ ತಿಂಗಳಿಗೆ ಪಕ್ಕದಲ್ಲಿ ಇರೋ ಬಿಲ್ಡಿಂಗ್ ಕೆಲಸ ಮುಗಿಯುತ್ತೆ. ಆಮೇಲೆ ನೀವು ಆಸೆ ಪಟ್ಟಂತೆ, ಈ ಸೂಪರ್ ಮಾರ್ಕೆಟ್ ನ ಇನ್ನು ದೊಡ್ಡದಾಗಿ ಮಾಡೋಣ. 

ಎಲ್ಲರು ಖುಷಿಯಾಗಿ ಸರಿ ಸರ್ ಅಂತ ಹೇಳ್ತಾರೆ  

ವಿಶ್ವ,,, ಸರಿ ನೀವು ಹೋಗಿ ಇನ್ನು ನಿಮ್ಮ ಕೆಲಸಾನ ಮಾಡಿಕೊಳ್ಳಿ, ಅಂತ ಹೇಳಿ ಆಫೀಸ್ ರೂಮ್ ಕಡೆಗೆ ಹೋಗ್ತಾರೆ. 

ಅಭಿ ಬಿಲ್ಲಿಂಗ್ ಕೌಂಟರ್ ಅಲ್ಲಿ ಕೂತು ಏನೋ ಯೋಚ್ನೆ ಮಾಡ್ತಾ ಇರ್ತಾನೆ. ಪ್ರಿಯಾ ತೇಜು ಮೇಘ, ನಿರಂಜನ್ ರಾಜ್,, ಅಭಿ ಪಾರ್ಟಿ ಇಲ್ವಾ ಅಂತ ಕೇಳ್ತಾರೆ. ಅಭಿ ಅವರಿಗೆ ಬೇಜಾರ್ ಮಾಡಬಾರದು ಅಂತ, ನಾಳೆ ಆಫೀಸ್ ಟೆರೇಸ್ ಮೇಲೆ ಮಟನ್ ಬಿರಿಯಾನಿ ಮಾಡೋಣ, ಅಂತ ಹೇಳ್ತಾನೆ. ಪ್ರಿಯಾ ತೇಜು ಮೇಘ ಖುಷಿಯಾಗಿ ಓಕೆ ಕಣೋ ಎಲ್ಲರಿಗೂ ನಾಳೆ ಲಂಚ್ ತರಬೇಡಿ ಅಂತ ಹೇಳಿ ಬಿಡ್ತಿವಿ. ಅಂತ ಹೇಳ್ತಾರೆ.

ನಿರಂಜನ್, ರಾಜ್, ಮಚ್ಚಾ ಮತ್ತೆ ನಮಗೆ?

ಅಭಿ,,, ಅವರ ಕಡೆಗೆ ನೋಡ್ತಾ ಕಣ್ ಹೊಡೀತಾನೆ..

ನಿರಂಜನ್, ರಾಜ್ ಇಬ್ಬರು ಖುಷಿಯಾಗಿ ಓಕೆ ಮಚ್ಚಾ.

ಮೇಘ,,, ನಿರಂಜನ್ ಕಡೆಗೆ ನೋಡ್ತಾ, ತು ನಿನ್ನ ಸ್ವಲ್ಪ ನು ನಾಚಿಕೆ ಅನ್ನೋದೇ ಇಲ್ವಾ, ಎಣ್ಣೆ ಅಂದ್ರೆ ಸಾಕು ಬಾಯಿ ಬಾಯಿ ಬಿಟ್ಕೊಂಡು ಕಾಯ್ತಾ ಇರ್ತೀರ. ಕುಡಿದು ಕುಡಿದು ಹಾಳಾದ್ರೆ ನಾಳೆ ನಿನ್ನ ಮದುವೆ ಆಗಿ ಬರೋವಳ ಕಥೆ ಏನೋ.

ನಿರಂಜನ್,,, ಅದನ್ನ ನನ್ನ ಕಟ್ಕೊಂಡವಳು ಯೋಚ್ನೆ ಮಾಡ್ತಾಳೆ, ನಿನಗೆ ಯಾಕೆ ಆಗೋ ಕೆಲಸ ನೋಡು ಹೋಗೆ. ಏನೋ ಇವಳೇ ನನ್ನ ಕಟ್ಕೊಳ್ಳೋವಳ ಹಾಗೇ ಆಡ್ತಾ ಇದ್ದಾಳೆ. 

ಮೇಘ,,, ಏನೋ ಅಂದೇ ನಿನ್ನ ಕಟ್ಕೊಳ್ಳೋವಳ ಹಾಗೇ ಆಡ್ತಾ ಇದ್ದೀನ, ಆಯ್ತೋ ನಾನೆ ನಿನ್ನ ಕಟ್ಕೋತೀನಿ, ನಿನ್ನ ಕೈಗೆ ಎರಡು ಮಕ್ಕಳನ್ನ ಹೆತ್ತಿ ಕೊಡ್ತೀನಿ, ನಿಮ್ ಮನೇಲಿ ಒಪ್ಪಿಸಿ ನನ್ನ ಮದುವೆ ಆಗ್ತೀಯಾ ಅಂತ ಡೈರೆಕ್ಟ್ ಹಾಗೇ ಕೇಳ್ತಾಳೆ. 

ಮೇಘ ಮಾತಿಗೆ ಎಲ್ಲರೂ ಶಾಕ್ ಅದ್ರೆ.  

ನಿರಂಜನ್ ಗೆ ಕರೆಂಟ್ ಹೊಡೆದ ಹಾಗೇ ಆಗಿಬಿಡುತ್ತೆ. ಹಾಗೇ ನಿಂತು ಬಿಡ್ತಾನೆ..

ಅಭಿ,,, ಲೋ ಯಾಕೋ ಹಾಗೇ ಕರೆಂಟ್ ಹೊಡೆದ ಕಾಗೆ ತರ ನಿಂತು ಬಿಟ್ಟೆ, ಕೇಳಿದೆ ಅಲ್ವಾ ಕಟ್ಕೊಳ್ಳೋವಳ ತರ ಅಂತ ಈಗ ಡೈರೆಕ್ಟ್ ಹಾಗೇ ಕೇಳ್ತಾ ಇದ್ದಾಳೆ ಅಲ್ವಾ ಕಟ್ಕೋತಿಯ ಅಂತ, ಹೇಳು ಕಟ್ಕೋತಿಯ. 

ನಿರಂಜನ್ ಕುಡಿಯೋದು ಬಿಟ್ಟೆ ಬಿಡಬೇಕು ಅಂತ ಕೇಳೋ ಹಾಗೇ ಇದ್ರೆ ನನಗಂತೂ ಮದುವೆ ನೇ ಬೇಡ. 

ಮೇಘ,,, ಅದನ್ನ ನಿನ್ನ ಮುಖ ನೋಡಿದ್ರೇನೇ ಗೊತ್ತಾಗುತ್ತೆ. ಲಿಮಿಟ್ ಅಂಡ್ ಕಂಟ್ರೋಲ್ ಅಲ್ಲಿ ಇದ್ರೆ ನನಗೇನು ಪ್ರಾಬ್ಲಮ್ ಇಲ್ಲಾ. 

ನಿರಂಜನ್,,, ಇತರ ಹೇಳಿದ್ರೆ ನಿನ್ನೆ ಏನು, ಕುರುಡಿ ಕುಂಟಿ ಮೂಗಿನ ಬೇಕಾದ್ರು ಕಟ್ಕೋತೀನಿ. 

ಮೇಘ,,, ಈಗ್ಲೇ ಹೇಳಿದ್ದೀನಿ ನಿಮ್. ಮನೇಲಿ ನಿಮ್ ಅಪ್ಪ ಅಮ್ಮ ಒಪಿಕೊಂಡ್ರೆ ಮಾತ್ರ, ಅದನ್ನ ಇವತ್ತೇ ಕೇಳ್ತೀಯೋ ನಾಳೆ ಕೇಳ್ತೀಯೋ. ಅದು ನಿನ್ನಿಷ್ಟ. ಅವರಿಗೆ ಇಷ್ಟ ಇಲ್ಲಾ ಅಂದ್ರೆ  ಈ ವಿಷಯ ನ ಮರೆತು ಬಿಡೋಣ. 

ನಿರಂಜನ್,,, ಇದನ್ನ ಕೇಳೋಕೆ ನಾಳೆ ತನಕ ಏನಕ್ಕೆ ಈಗ್ಲೇ ಕೇಳ್ತೀನಿ ಅಂತ, ಮೊಬೈಲ್ ತೆಗೆದುಕೊಂಡು ಅವರ ಅಪ್ಪನಿಗೆ ಕಾಲ್ ಮಾಡ್ತಾನೆ.

ನಿರಂಜನ್ ತಂದೆ,,, ಹೇಳೋ 

ನಿರಂಜನ್,,, ಅಪ್ಪ ಫ್ರೀ ಇದ್ದಿಯಾ.

ನಿರಂಜನ್ ತಂದೆ,,, ಫ್ರೀ ನೇ ಹೇಳೋ ಏನ್ ವಿಷಯ?

ನಿರಂಜನ್,,, ಏನಿಲ್ಲಾ ಅಪ್ಪ ನನ್ನ ಜೊತೆಗೆ ಕೆಲಸ ಮಾಡ್ತಾಳೆ ಅಲ್ವಾ ಮೇಘ, ನಿನಗೂ ಗೊತ್ತು ಅಲ್ವಾ.

ನಿರಂಜನ್ ತಂದೆ,,, ಅ ಅವಳು ಗೊತ್ತು, ಅವರ ಅಪ್ಪ ಅಮ್ಮ ನು ಗೊತ್ತು ಏನ್ ವಿಷಯ ಹೇಳು. ಅ ಹುಡುಗಿಗೆ ಏನಾದ್ರೂ ಪ್ರಾಬ್ಲಮ್ ಆಯ್ತಾ, ವಿಶ್ವ ಸೂಪರ್ ಮಾರ್ಕೆಟ್ ಅಲ್ಲಿ ಇಲ್ವಾ, ಸೂಪರ್ ಮಾರ್ಕೆಟ್ ಹತ್ತಿರ ಬರಬೇಕ ಹೇಳು, ನಮ್ ಮನೆ ಹುಡುಗಿ ಗೆ ತೊಂದ್ರೆ ಕೊಡೋವನು ಯಾವನೇ ಆಗಿರಲಿ ಸುಮ್ನೆ ಬಿಡಲ್ಲ. 

ಈ ಮಾತನ್ನ ಕೇಳಿ ಮೇಘ, ಪ್ರಿಯಾ, ತೇಜು ಗೆ ತುಂಬಾ ಖುಷಿ ಆಗುತ್ತೆ. ನಮ್ ಮನೆ ಹುಡುಗಿ ಅಂತ ಅವರು ಹೇಳಿದ ಮಾತು. 

ನಿರಂಜನ್,,, ಅಪ್ಪ ಅದೆಲ್ಲಾ ಏನು ಇಲ್ಲಾ, ಅಲ್ಲಿ ತನಕ ನಾವು ಬಿಡಲ್ಲ. ಏನಿಲ್ಲಾ ಅ ಹುಡುಗಿ ನನ್ನ ಮದುವೆ ಮಾಡ್ಕೊತೀಯ, ಮಾಡ್ಕೊಳ್ಳೋ ಹಾಗೇ ಇದ್ರೆ ನಿಮ್ ಅಪ್ಪ ಅಮ್ಮನಿಗೆ ಕೇಳು ಅವರು ಒಪಿಕೊಂಡ್ರೆ ನಾವು ಮದುವೆ ಮಾಡ್ಕೊಳ್ಳೋಣ ಅಂತ ಕೇಳಿದ್ಲು ಅದಕ್ಕೆ ನಿಮ್ಮನ್ನ ಕೇಳೋಣ ಅಂತ ಕಾಲ್ ಮಾಡಿದೆ. ಅಮ್ಮ ಗೆ ಕೇಳು ಏನ್ ಹೇಳ್ತಾಳೆ.

ನಿರಂಜನ್ ತಾಯಿ ಮೊಬೈಲ್ ತಗೊಂಡು. ಲೋ ಮೂದೇವಿ  ನಿಮ್ ಅಪ್ಪ  ಮೇಘ ಅವರ ಅಪ್ಪ ನಿಮಗಿಂತ ಮೊದಲೇ ಈ ವಿಷಯ ದ ಬಗ್ಗೆ ಮಾತಾಡಿ ಕೊಂಡ್ರು. ಅದ್ರೆ ನಿಮ್ ಮನಸಲ್ಲಿ ಏನಿದೆ ಅಂತ ತಿಳಿದು ಕೊಳ್ಳದೆ ನಾವು ನಿರ್ಧಾರ ತಗೋಳೋದು ಬೇಡ,  ನಮ್ ಬಲವಂತಕ್ಕೆ ಮದುವೆ ಅದ್ರೆ ಅವರ ಜೀವನ ಚೆನ್ನಾಗಿ ಇರುತ್ತ, ಇಲ್ಲಾ ಒಬ್ಬರಿಗೆ ಇಷ್ಟ ಇದ್ದು ಇನ್ನೊಬ್ಬರಿಗೆ ಇಷ್ಟ ಇಲ್ಲಾ ಅಂದ್ರೆ, ಅವರ ಮಧ್ಯ ಇರೋ ಸ್ನೇಹ ಕೂಡ ಹಾಳಾಗುತ್ತೆ,  ಅವರಾಗಿ ಬಂದು ಈ ವಿಷಯ ದ ಬಗ್ಗೆ ಕೇಳಿದಾಗ ಮಾತಾಡೋಣ ಅಂತ ಸುಮ್ನೆ ಆಗಿ ಬಿಟ್ರು. ಕೊನೆಗೆ ನೀವೇ ಮದುವೆ ಮಾಡ್ಕೊಳ್ಳೋಕೆ ನಿರ್ಧಾರ ಮಾಡಿದ್ರಿ ನಮಗೆ ತುಂಬಾ ಸಂತೋಷ. ನಮಗೆ ಅ ಹುಡುಗಿ ಯಾವಾಗ್ಲೋ ಒಪ್ಪಿಗೆ ಅಂತ ಖುಷಿಯಾಗಿ ಹೇಳ್ತಾರೇ.

ನಿರಂಜನ್,, ಖುಷಿಯಾಗಿ ಸರಿ ಅಮ್ಮ ಅಂತ ಹೇಳಿ ಕಾಲ್ ಕಟ್ ಮಾಡಿ, ಮೇಘ ಕಡೆಗೆ ನೋಡ್ತಾ ನಮ್ ಮನೇಲಿ ಓಕೆ. ನಿಮ್ ಮನೇಲಿ ಕೇಳು?

ಪ್ರಿಯಾ,,, ಲೋ ನಿಮ್ಮಮ್ಮ ನಿನ್ನ ಸರಿಯಾಗಿ ಕರೆದ್ಲು ಮೂದೇವಿ ಅಂತ, ನಿಮ್ಮಮ್ಮ ಹೇಳಿದ್ದು ಕೇಳ್ದೆ ತಾನೇ, ದೊಡ್ಡವರು ಮೊದಲೇ ಮಾತಾಡಿಕೊಂಡು ಇದ್ರು ಅಂತ.

ನಿರಂಜನ್,,, ಅಂದ್ರೆ?

ತೇಜು,,, ಲೋ ದಡ್ಡ, ಮೇಘ ನ ಅವರ ಅಪ್ಪ ಯಾವಾಗ್ಲೋ ಕೇಳಿದ್ರು. ಅವಳು ಅವನು ಒಳ್ಳೆ ಫ್ರೆಂಡ್ ಅಪ್ಪ, ಅ ರೀತಿ ಏನು ಯೋಚ್ನೆ ಮಾಡಿಲ್ಲ, ಒಂದು ವೇಳೆ ಅ ರೀತಿ ಏನಾದ್ರೂ ಇದ್ರೆ ಹೇಳ್ತಿನಿ ಅಂತ ಹೇಳಿದ್ಲು. ಅದಕ್ಕೆ ಇವಾಗ ನಿನ್ನ ಕೇಳಿದ್ದು. 

ರಾಜ್,,, ಅದಕ್ಕೆ ದೊಡ್ಡವರು ಹೇಳೋದು, ಜ್ಞಾನಿ ಸಾವಾಸ ಮಾಡಿ ಅಂತ. ಇಷ್ಟು ದಿನ ನಿನ್ನ ಬುದ್ದಿವಂತ ಅನ್ಕೊಂಡು ಇದ್ದೆ ನೋಡು ನನ್ನ ಹಳೆ ಎಕ್ಕಡ ದಲ್ಲಿ ಹೊಡ್ಕೋ ಬೇಕು. 

ಅಭಿ,,, ಒಟ್ನಲ್ಲಿ ಇಬ್ರು ಮದುವೆ ಮಾಡ್ಕೊಳ್ಳೋಕೆ ನಿರ್ಧಾರ ಮಾಡಿದ್ರಿ ಅಲ್ವಾ,,, ನನ್ನ ಕಡೆಯಿಂದ ಈ ಗಿಫ್ಟ್ ಮಚ್ಚಾ ಅಂತ ಅಲ್ಲೇ ಇದ್ದಾ ಪೊರಕೆ ನ ಕೈಗೆ ಕೊಡ್ತಾನೆ.

ರಾಜ್,, ಮಚ್ಚಾ ನನ್ನ ಕಡೆಯಿಂದ ಈ ಗಿಫ್ಟ್ ಅಂತ ಅಲ್ಲೇ ಇದ್ದಾ ಬಕೆಟ್ ನ ಕೈಗೆ ಕೊಡ್ತಾನೆ.

ನಿರಂಜನ್,,, ಲೋ ಏನೋ ಇದು.

ಪ್ರಿಯಾ ತೇಜು ನಗ್ತಾ, ನಿನ್ನ ಫ್ಯೂಚರ್ ಕಣೋ ಅಂತ ಹೇಳಿ ಜೋರಾಗಿ ನಗ್ತಾರೆ. 

ಸೂಪರ್ ಮಾರ್ಕೆಟ್ ಗೆ ಸಾಮಗ್ರಿ ನ ತಗೋಳ್ಳೋಕೆ ರೆಗ್ಯುಲರ್ ಆಗಿ ಬರ್ತಾ ಇದ್ದಾ ಮಹಿಳೆ, ಬಿಲ್ಲಿಂಗ್ ಕೌಂಟರ್ ಹತ್ತಿರ ಬಂದು ಐಟಂಸ್  ನ ಇಡ್ತಾ, ಏನು ಎಲ್ಲರೂ ಇಷ್ಟು ಖುಷಿಯಾಗಿ ನಗ್ತಾ ಇದ್ದೀರಾ ಏನ್ ವಿಷಯ.

ರಾಜ್,,, ಆಂಟಿ ನಿರಂಜನ್ ಮದುವೆ ಆದಮೇಲೆ ಹೇಗೆ ಇರ್ತಾನೆ ಅಂತ ಈಗ್ಲೇ ನೋಡ್ತಾ ಇದ್ದೀವಿ ಅಂತ ಅವನ ಕಡೆಗೆ ತೋರಿಸ್ತಾ ನಗ್ತಾನೇ.

ಆಂಟಿ ನಿರಂಜನ್ ನ ನೋಡಿ, ನಗ್ತಾ ಮದುವೆ ಆದಮೇಲೆ ಎಲ್ಲಾ ಗಂಡಸರ ಬಾಳು ಇದೇನೇ ಅಂತ ಹೇಳ್ತಾ. ಯಾವಾಗ ಮದುವೆ ಯಾರು ಹುಡುಗಿ ಅಂತ ಕೇಳ್ತಾರೇ.

ತೇಜು,,, ಇನ್ನ್ಯಾರು ಆಂಟಿ, ಮೇಘ ನೇ.

ಆಂಟಿ,,, ಇಬ್ಬರನ್ನು ನೋಡಿ ಒಳ್ಳೆ ಜೋಡಿ, ದೇವ್ರು ಒಳ್ಳೇದು ಮಾಡಲಿ. ಮದುವೆ ಗೆ ಕರೀರಿ. 

ಮೇಘ,,, ಥ್ಯಾಂಕ್ಸ್ ಆಂಟಿ, ಖಂಡಿತ ಕರೀತೀವಿ. 

ಅಭಿ ಬಿಲ್ ಮಾಡಿದ ಮೇಲೆ ಆಂಟಿ ಬ್ಯಾಗ್ ಅಲ್ಲಿ ಹಾಕಿಕೊಂಡು ಎಲ್ಲರೂ ಹೀಗೆ ಖುಷಿಯಾಗಿ ಇರಿ ಅಂತ ಹೇಳಿ ಬೈ ಹೇಳಿ ಅಲ್ಲಿಂದ ಹೊರಟು ಹೋಗ್ತಾರೆ.

ನೈಟ್ ಸೂಪರ್ ಮಾರ್ಕೆಟ್ ನ ಕ್ಲೋಸ್ ಮಾಡಿಕೊಂಡು. ಅಭಿ ನಿರಂಜನ್ ರಾಜ್ ಮೂರು ಜನ ಸಿಟ್ಟಿಂಗ್ ಹಾಕ್ತಾರೆ.

ರಾತ್ರಿ 11 ಗಂಟೆ ಆಗುತ್ತೆ. ನಿರಂಜನ್ ರಾಜ್ ಅಭಿ ಗೆ ಬಾಯ್ ಹೇಳಿ ಮನೆ ಕಡೆಗೆ ಹೋಗ್ತಾರೆ. 

ಅಭಿ ಗೆ, ನಿರಂಜನ್ ಮತ್ತೆ ಮೇಘ ಅವರ ತಂದೆ ತಾಯಿ ಅವರ ಮಕ್ಕಳಿಗೆ ಅಷ್ಟು ಸ್ವತಂತ್ರ ಕೊಟ್ಟು ಅವರ ಗೌರವ ಕ್ಕೆ ಬೆಲೆ ಕೊಡೋದನ್ನ ನೋಡಿ ಅಭಿ ಕಣ್ಣಲ್ಲಿ ಕಣ್ಣೀರು ಬರೋಕೆ ಶುರುವಾಯಿತು. ಅಪ್ಪ ಅಮ್ಮ ಇಬ್ಬರನ್ನು ಸ್ನೇಹ ನಮ್ಮಿಂದ ದೂರ ಆಗ್ಬಾರ್ದು ಅಂತ ಯೋಚ್ನೆ ಮಾಡಿದ್ರು. ನಿರಂಜನ್ ಮೇಘ. ಅಪ್ಪ ಅಮ್ಮನಿಗೆ ಇಷ್ಟ ಅದ್ರೆ ಮಾತ್ರ ಅಂತ ಕ್ಲಿಯರ್ ಆಗಿ ಹೇಳಿದ್ರು. ಅವರಿಗೆ ಮೊದಲ ಗೌರವ ಕೊಟ್ರು. ಪ್ರೀತಿ ಕೆಲವರನ್ನ ದೂರ ಮಾಡುತ್ತೆ ಕೆಲವರನ್ನ ಹತ್ತಿರ ಮಾಡುತ್ತೆ. ಹತ್ತಿರ ಆದವರಿಗೆ ಸಂತೋಷ, ದೂರ ಆದವರಿಗೆ ನೋವು. ಅಭಿ ಇದೆಲ್ಲಾ ಯೋಚ್ನೆ ಮಾಡ್ತಾನೆ ಮತ್ತೆ ಬಾರ್ ಗೆ ಹೋಗಿ ಸಾಕು ಅನ್ನೋ ಅಷ್ಟು ಕುಡಿದು, ಬೈಕ್ ಸ್ಟಾರ್ ಮಾಡಿಕೊಂಡು ಮನೆ ಕಡೆಗೆ ಹೋಗ್ತಾನೆ.

****

ಮನೇಲಿ ಅಭಿ ಗೋಸ್ಕರ ಕಾಯ್ತಾ ಇದ್ದಾ ನಯನಾ ಸೋಫಾ ಮೇಲೆ ಹಾಗೇ ನಿದ್ದೆ ಮಾಡಿ ಬಿಡ್ತಾಳೆ. 

ನೀರಿಗೆ ಅಂತ ಹೊರಗಡೆ ಬಂದ ಸುಭದ್ರ, ಸೋಫಾ ಮೇಲೆ ನಯನಾ ಹಾಗೇ ಮಲಗಿರೋದನ್ನ ನೋಡಿ. ನಯನಾ ತೊಡೆಮೇಲೆ ಅನಾ ಕೂಡ ಮಲಗೋರೋದನ್ನ ನೋಡಿ, ಹತ್ತಿರ ಹೋಗಿ. 

ಸುಭದ್ರ,,, ನಯನಾ ನಯನಾ ಅಂತ ಕರೀತಾರೆ.

ನಯನಾ,,, ಕಣ್ ತೆರೆದು ಅಮ್ಮ ಹೇಳು.

ಸುಭದ್ರ,, ಇಲ್ಲೇ ಮಲಗಿದ್ದೀಯ ರೂಮ್ ಗೆ ಹೋಗಿ ಮಲಗಬಾರ್ದ. ನೋಡು ಮಗು ಕೂಡ ಇಲ್ಲೇ ಮಲಗಿದ್ದಾಳೆ.

ನಯನಾ,,, ಇಲ್ಲಾ ಅಮ್ಮ ಅದು ಅಭಿ ಬರ್ತಾನೆ ಅಂತ ಇಲ್ಲೇ ಇದ್ದೆ, ಅವಳು ಮಾತಾಡ್ತಾ ಇಲ್ಲೇ ಮಲಗಿ ಬಿಟ್ಟಳು.

ಸುಭದ್ರ,, ಅಭಿ ಇನ್ನು ಬಂದಿಲ್ವ, ಸರಿ ಮಗು ನ ನಾನು ರೂಮ್ ಗೆ ಕರ್ಕೊಂಡು ಹೋಗಿ ಮಲಗಿಸಿ ಕೊಳ್ತೀನಿ, ಅಭಿ ಬಂದ್ರೆ ಇಬ್ರು ಊಟ ಮಾಡಿ ಮಲಗಿ ಅಂತ ಹೇಳಿ ಮಗು ನ ಎತ್ಕೊಂಡು ಅವರ ರೂಮ್ ಗೆ ಹೋದ್ರು. 

ನಯನಾ ಅಲ್ಲೇ ಸೋಫಾ ಮೇಲೆ ಕುತ್ಕೊಂಡು ಅಭಿ ಗೋಸ್ಕರ ಕಾಯ್ತಾ ಇದ್ದಳು. 

@@@@@@@@@@@@@@@@@@@@@@@@@@