Abhinayanaa - 22 in Kannada Love Stories by S Pr books and stories PDF | ಅಭಿನಯನಾ - 22

The Author
Featured Books
  • ಮೌನ ಸಂಘರ್ಷ

    ರಾಜಶೇಖರ್ ಇವತ್ತು ಭಾನುವಾರ ಬೆಳಿಗ್ಗೆ ಬೆಳಿಗ್ಗೆನೇ ನೆಮ್ಮದಿ ಹಾಳಾಯಿತು...

  • ನಂದನೂರಿನ ಮೂರು ಹೃದಯಗಳು

    ನಂದನೂರಿನ ಮೂರು ಹೃದಯಗಳು (ಕೂಲಿ ಕಾರ್ಮಿಕರ ಬದುಕು-ಪ್ರೇಮ ಕಥೆ)ಲೇಖಕ–ವಾ...

  • ಅಭಿನಯನಾ - 22

       ಅಭಿ ಮನಸಲ್ಲಿ ಇದ್ದಾ ಗೊಂದಲ ಎಲ್ಲಾ ದೂರ ಅದ ಮೇಲೆ, ಅವನ ಮನಸ್ಸಿಗೆ ಒ...

  • ಅಧ್ಯಾಯ 15: ಕೃಷ್ಣ vs ಕಾಳಿಂಗ

    ಕೇಂದ್ರ ಪುರಾತತ್ವ ದಾಖಲೆ ಮಂದಿರ, ರಾತ್ರಿ 9:45 PMಕೃಷ್ಣನ ಸಂಕೇತದಂತೆ,...

  • ಮಹಿ - 46

        ಸೀತಾ ಮನೆಗೆ ಹೋಗಿ ಬರೋಣ ಅಂತ ಹೇಳಿದ ಮೇಲೆ ಬೈಕ್ ಅಲ್ಲಿ ಇಬ್ಬರು ಮನ...

Categories
Share

ಅಭಿನಯನಾ - 22

   ಅಭಿ ಮನಸಲ್ಲಿ ಇದ್ದಾ ಗೊಂದಲ ಎಲ್ಲಾ ದೂರ ಅದ ಮೇಲೆ, ಅವನ ಮನಸ್ಸಿಗೆ ಒಂದು ರೀತಿ ಸಮಾಧಾನ ನೆಮ್ಮದಿ ಸಿಕ್ಕ ಹಾಗೇ ಆಯಿತು. ನಯನಾ ಅವನ ಮನಸನ್ನ ಇಷ್ಟು ಅರ್ಥ ಮಾಡಿಕೊಂಡು ಇರೋದನ್ನ ನೋಡಿ ಅವಳ ಮೇಲೆ ಮತ್ತಷ್ಟು ಗೌರವ, ಪ್ರೀತಿ ಜಾಸ್ತಿ ಆಯಿತು. ನಯನಾ ಗೆ ಅಭಿ ಮನಸಲ್ಲಿ ಅವಳ ಮೇಲೆ ಎಷ್ಟು ಪ್ರೀತಿ ಇತ್ತು ಅದನ್ನ ಯಾಕೆ ಹೇಳಿಕೊಳ್ಳೋಕೆ ಆಗಲಿಲ್ಲ ಅಂತ ಗೊತ್ತಾದಾಗ, ಅವನ ಮನಸಲ್ಲಿ ಇದ್ದಾ ನೋವು, ಅದಕ್ಕೆ ಕಾರಣ ಆಗಿದ್ದ ವಿಷಯ ಕೇಳಿ ಅವಳ ಮನಸ್ಸಿಗೂ ತುಂಬಾ ನೋವಾಯಿತು. ಅದೇ ಸಮಯಕ್ಕೆ ಅವಳ ಮೇಲೆ ಅವನಿಗೆ ಇದ್ದಾ ಪ್ರೀತಿ ನ ನೋಡಿ ಮನಸ್ಸಿಗೆ ತುಂಬಾ ಸಂತೋಷ ಖುಷಿ ಆಯಿತು. 

  ಅಭಿ ನೆಮ್ಮದಿಯಾಗಿ ಬೆಡ್ ಮೇಲೆ ಕಣ್ ಮುಚ್ಚಿಕೊಂಡು ಮಲಗಿರ್ತಾನೆ. ನಯನಾ ಕುಡಿಯುವ ನೀರಿನ ಬಾಟಲ್ ನ ತೆಗೆದುಕೊಂಡು ರೂಮ್ ಡೋರ್ ಲಾಕ್ ಮಾಡಿ  ವಾಟರ್ ಬಾಟೆಲ್ ನ ಟೇಬಲ್ ಮೇಲೆ ಇಟ್ಟು, ಅಭಿ ಪಕ್ಕ ಬಂದು ಅವನನ್ನ ಖುಷಿಯಿಂದ ಅಪ್ಪಿಕೋಳ್ತಾಳೆ. ಅಭಿ ಒಂದು ಕೈ ಯಿಂದ ನಯನಾ ನ ತಬ್ಬಿಕೋಳ್ತಾನೆ. ನಯನಾ ಖುಷಿಯಿಂದ ಅಭಿ ಕೆನ್ನೆಗೆ ಮುತ್ತಿಟ್ಟು, ಅವನ್ನನೇ ನೋಡ್ತಾ ಇರ್ತಾಳೆ.

ಅಭಿ,, ಕಣ್ ಮುಚ್ಚಿಕೊಂಡೆ, ಲೇ ಹಾಗೇ ನೋಡಬೇಡವೇ? 

ನಯನಾ,,, ಒಂದು ಕ್ಷಣ ಶಾಕ್ ಆಗ್ತಾಳೆ, ಹೋಗಿ ಬನ್ನಿ ಅಂತ ಇದ್ದವನು ಲೇ ಅನ್ನೋದನ್ನ ಕೇಳಿ ಒಂತರಾ ಖುಷಿ ಆಗುತ್ತೆ. ಬಟ್ ಅವನನ್ನ ಸ್ವಲ್ಪ ಆಟ ಆಡಿಸೋಣ ಅಂತ. ಹಲೋ ಯಾರಿಗೆ ನೀನು ಲೇ ಅಂತ ಇರೋದು. ಇಷ್ಟು ದಿನ ಹೋಗಿ ಬನ್ನಿ ಅಂತ ಮಾತಾಡ್ತಾ ಇದ್ದೆ ಇವಾಗ ಲೇ ಅಂತ ಇದ್ದಿಯಾ?

ಅಭಿ,,, ಹೌದು ನನ್ನ ಹೆಂಡತಿ ನನ್ನ ಇಷ್ಟ, ಅಂತ ಅವಳ ಸೊಂಟಕ್ಕೆ ಕೈ ಹಾಕಿ ಅವಳನ್ನ ಗಟ್ಟಿಯಾಗಿ ತಬ್ಬಿಕೊಂಡು. ಕಣ್ ಬಿಟ್ಟು ಅವಳನ್ನೇ ನೋಡ್ತಾ ಏನ್ ಮಾಡ್ತಿಯಾ?

ನಯನಾ ಗೆ ಅವನು ಹಾಗೇ ಸೊಂಟನ ಇಡಿದುಕೊಂಡು ಅಷ್ಟು ಗಟ್ಟಿಯಾಗಿ ಅಪ್ಪಿಕೊಂಡ ಕ್ಷಣ ಅವನ ಮೈ ಎಲ್ಲಾ ಒಂದು ರೀತಿ ಕರೆಂಟ್ ಹೊಡೆದ ಹಾಗೇ ಆಗುತ್ತೆ. ಆಟ ಆಡಿಸೋಣ ಅಂತ ಅಂದುಕೊಂಡವಳು ಅವನ ಈ ಚರ್ಯೆ ಗೆ ಸೋತು ಹೋಗ್ತಾಳೆ. ಫೀಲಿಂಗ್ಸ್ ಜಾಸ್ತಿ ಆಗೋಕೆ ಶುರುವಾಗುತ್ತೆ, ಬಟ್ ಕಂಟ್ರೋಲ್ ಮಾಡಿಕೊಳ್ತಾ, ಅಭಿ ಪ್ಲೀಸ್ ಹಾಗೇ ಇಡ್ಕೊಬೇಡವೋ ನನಗೆ ಒಂತರಾ ಆಗ್ತಾ ಇದೆ. ಪ್ಲೀಸ್ ಬಿಡೋ. ಅಂತ ಮುದ್ದಾಗಿ ತುಂಬಾ ಸಾಫ್ಟ್ ಆಗಿ ಕೇಳ್ತಾಳೆ.

ಅಭಿ,,, ಅಷ್ಟೇ ಮುದ್ದಾಗಿ, ಹೌದ ಬಟ್ ನನಗೆ ಅ ರೀತಿ ಏನು ಅನ್ನಿಸ್ತಾ ಇಲ್ವೆ, ನಾನು ನಾರ್ಮಲ್ ಹಾಗೇ ಇಡ್ಕೊಂಡು ಇದ್ದೀನಿ. ಅಂತ ಹೇಳಿ ಇನ್ನು ಸ್ವಲ್ಪ ಗಟ್ಟಿಯಾಗಿ ಅಪ್ಪಿಕೋಳ್ತಾನೆ. 

ಇಬ್ಬರ ಮಧ್ಯದಲ್ಲಿ ಗಾಳಿ ಕೂಡ ಸೇರದಷ್ಟು ಅವರು ಒಬ್ಬರಿಗೊಬ್ಬರು ಹತ್ತಿರ ಇದ್ದಾರೆ. ನಯನಾ ಈಗ ಪೂರ್ತಿ ಅವನ ವಶ ಹಾಗಿ ಹೋದಳು. ಬಟ್ ಅಭಿ ಅವನನ್ನ ಅವನು ಕಂಟ್ರೋಲ್ ಮಾಡ್ಕೋತಾನೆ. ಕಾರಣ ಡ್ರಿಂಕ್ಸ್ ಮಾಡಿದ್ದಾನೆ, ಕಾಮ ಮತ್ತೆ ನಶೆ ಎರಡು ಜಾಸ್ತಿ ಅದ್ರೆ ನಯನಾ ಗೆ ತೊಂದ್ರೆ ಆಗುತ್ತೆ, ಗೊತ್ತಿಲ್ಲದೇ ಅವಳಿಗೆ ಏನಾದ್ರೂ ಹರ್ಟ್ ಅದ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ, ಮೊದಲ ಸಾರಿ ಇಬ್ಬರು ಸಂತೋಷ ದಿಂದ ಇಬ್ಬರು ಇಷ್ಟು ಹತ್ತಿರ ಇದ್ದಿವಿ. ಇದನ್ನ ಬೇರೆ ರೀತಿ ನೆನಪು ಇಟ್ಕೊಳ್ಳೋದು ಬೇಡ ಅಂತ ಅನ್ಕೊಂಡು. ಅವಳನ್ನ ಎದೆಮೇಲೆ ಮಲಗಿಸಿಕೊಂಡು, ಅವಳ ಹಣೆಗೆ ಮುತ್ತಿಟ್ಟು. ಅಪ್ಪಿಕೋಳ್ತಾನೆ. ನಯನಾ ಅಭಿ ಎದೆಮೇಲೆ ಮುತ್ತಿಟ್ಟು ಹಾಗೇ ಅವನನ್ನ ಅಪ್ಪಿಕೊಂಡು ಹಾಗೇ ಕಣ್ಣು ಮುಚ್ಚುತಾಳೆ. ಇಬ್ಬರು ನೆಮ್ಮದಿಯಾಗಿ ನಿದ್ದೆಗೆ ಜಾರ್ತಾರೆ..

####

ಬೆಳಿಗ್ಗೆ ಎದ್ದು ಸಂತೋಷ ದಿಂದ ಅಡುಗೆ ಮನೆಗೆ ಬರ್ತಾ ಇದ್ದಾ ಮಗಳನ್ನ ನೋಡಿ 

ಸುಭದ್ರ,,, ಏನೇ ತುಂಬಾ ಖುಷಿಯಾಗಿ ಇದ್ದಿಯಾ ಏನ್ ಸಮಾಚಾರ. 

ನಯನಾ,,, ಸಮಾಚಾರ ಏನಿದೆ ಅಮ್ಮ, ಅಭಿ ನ ಅರ್ಥ ಮಾಡಿಕೊಂಡಾಗಿನಿಂದ ಖುಷಿಯಾಗಿ ಇದ್ದೀನಿ ಅಷ್ಟೇ. 

ಸುಭದ್ರ,,, ಹ್ಮ್ ಸರಿ, ತಗೊ ಕಾಫಿ ಕುಡಿ ಅಂತ ಕಾಫಿ ಮಿಕ್ಸ್ ಮಾಡಿ ಕೊಡ್ತಾರೆ. 

ನಯನಾ,,, ಕಾಫಿ ಕುಡಿತಾ, ಅಮ್ಮ ಅನಾ ಏನ್ ಮಾಡ್ತಾ ಇದ್ದಾಳೆ.

ಸುಭದ್ರ,,, ಅವಳ ಅವರ ತಾತನ ಜೊತೆಗೆ ಆರಾಮಾಗಿ ಮಲಗಿದ್ದಾಳೆ. ಹೌದು ರಾತ್ರಿ ಅಭಿ ಎಷ್ಟೋತ್ತಿಗೆ ಬಂದ, ಇಬ್ರು ಊಟ ಮಾಡಿದ್ರ?

ನಯನಾ,,, ಸ್ವಲ್ಪ ಲೇಟ್ ಆಗಿ ಬಂದ, ಆಮೇಲೆ ಇಬ್ರು ಊಟ ಮಾಡಿ ಮಲಗಿದ್ವಿ  ಅಂತ ಹೇಳಿ, ನಡೆದ ವಿಷಯ ನ ಮುಚ್ಚಿಟ್ಟು ಬಿಡ್ತಾಳೆ. 

ಸುಭದ್ರ,,, ರಾತ್ರಿ ನಿಮ್ ಅಪ್ಪ ಹೇಳ್ತಾ ಇದ್ದಾ, ಇನ್ನುಮುಂದೆ ಸೂಪರ್ ಮಾರ್ಕೆಟ್ ನ ಅಭಿ ಗೆ ಒಪ್ಪಿಸಿ ಬಿಟ್ಟಿದ್ದಾರೆ ಅಂತೇ. ಇನ್ಮೇಲೆ ಮನೇಲಿ ಆರಾಮಾಗಿ ಮೊಮ್ಮಗಳ ಜೊತೆಗೆ ಆಟ ಆಡ್ಕೊಂಡು ಇರ್ತಾರೆ ಅಂತೇ. ಅಂತು ಅಭಿ ನಮ್ ಮನೆಗೆ ಬಂದು ಮನೆ ವಾತಾವರಣ ನೇ ಬದಲಾಯಿಸಿ ಬಿಟ್ಟ. ಅವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ. 

ನಯನಾ,,, ಖುಷಿಯಾಗಿ ಹೌದಮ್ಮ, ನನಗೂ ಅಪ್ಪ ನ ಮನೇಲಿ ಇರೋಕೆ ಹೇಳಿ ಸೂಪರ್ ಮಾರ್ಕೆಟ್ ನ ನೋಡ್ಕೋಬೇಕು ಅಂತ ಯಾವಾಗೂ ಅನ್ನಿಸ್ತಾ ಇತ್ತು, ಅದ್ರೆ ದಿನ ಅನಾ ನ ಬಿಟ್ಟು ಇರೋಕೆ ಆಗ್ತಾ ಇರಲಿಲ್ಲ. ಇವಾಗ ಅಭಿ ಬಂದಮೇಲೆ ತುಂಬಾ ಖುಷಿ ಆಗ್ತಾ ಇದೆ. ಅಪ್ಪ ಕೂಡ ಆರಾಮಾಗಿ ಇದ್ದಾರೆ. 

ಸುಭದ್ರ,,, ಸರಿ ನೀನು ಕಾಫಿ ಕುಡಿದು, ನಿನ್ನ ಗಂಡನಿಗೆ ಕಾಫಿ ತಗೊಂಡು ಹೋಗಿ ಕೊಡು.

ನಯನಾ,,, ಕಾಫಿ ಬೇಡ ಮಜ್ಜಿಗೆ ಕೊಡು.

ಸುಭದ್ರ,,, ಏನು ರಾತ್ರಿ ಫುಲ್ ಪಾರ್ಟಿ ನ?

ನಯನಾ,,, ಸ್ವಲ್ಪ ಜಾಸ್ತಿ ನೇ ಬಟ್ ಓಕೆ, ನಿಜ ಹೇಳಬೇಕು ಅಂದ್ರೆ ಅಭಿ ರಾತ್ರಿ ಕುಡಿದು ಬಂದಿದ್ದು ತುಂಬಾ ದೊಡ್ಡ ಹೆಲ್ಪ್ ಆಯಿತು ಅಷ್ಟೇ ಅಲ್ಲ ನನ್ನ ಮನಸಲ್ಲಿ ಇದ್ದಾ ಸಂದೇಹ, ಗೊಂದಲ ಕೂಡ ದೂರ ಆಯಿತು. 

ಸುಭದ್ರ,,, ಏನೇ ಹಾಗೇ ಹೇಳ್ತಾ ಇದ್ದಿಯಾ, ಇಬ್ಬರು ಸಂತೋಷ ವಾಗಿ ಇದ್ದೀರಾ ಅಲ್ವಾ ಅಂತ ಸ್ವಲ್ಪ ಆತಂಕ ದಿಂದ ಕೇಳ್ತಾರೆ.

ನಯನಾ,,, ಕೂಲ್ ಆಗಿ, ಅಮ್ಮನ ಭುಜದ ಮೇಲೆ ಕೈ ಹಾಕಿ. ಅಮ್ಮ ನೀನು ಟೆನ್ಶನ್ ಆಗೋಕೆ ಹೋಗಬೇಡ, ಇಬ್ರು ತುಂಬಾ ಸಂತೋಷ ವಾಗಿ ಇದ್ದಿವಿ.  ನನ್ನ ಮನಸಲ್ಲಿ ಇದ್ದಾ ಫೀಲಿಂಗ್ಸ್ ನ ಅಭಿ ಹತ್ತಿರ ಯಾವಾಗಲೋ ಹೇಳ್ಕೊಂಡು ಬಿಟ್ಟೆ. ಬಟ್ ಅಭಿ ಯಾವತ್ತೂ ನನ್ನ ಹತ್ತಿರ ಮನಸು ಬಿಚ್ಚಿ ಮಾತಾಡಿರಲಿಲ್ಲ. ಬಟ್ ಅವನು ಮನಸಲ್ಲೇ ನನ್ನ ಮೇಲೆ ಬೆಟ್ಟದಷ್ಟು ಪ್ರೀತಿ ನ ಇಟ್ಟು ಕೊಂಡಿದ್ದ. ರಾತ್ರಿ ಧೈರ್ಯ ಮಾಡಿ ಹೇಳಿ ಬಿಟ್ಟ. ಅದಕ್ಕೆ ಹಾಗೇ ಅಂದೇ.

ಸುಭದ್ರ,,, ಒಂದು ಕ್ಷಣ ಭಯ ಬಿದ್ದೆ ನಿನ್ ಹೇಳಿದ್ದನ್ನ ಕೇಳಿ. ಗಂಡಸರು ಹಾಗೇನೇ, ನಮ್ ತರ ಪ್ರತಿಯೊಂದು ವಿಷಯ ನ ಓಪನ್ ಆಗಿ ಹೇಳಿಕೊಳ್ಳೋದಿಲ್ಲ. ನಾವಾಗೇ ಅದನ್ನ ಅರ್ಥ ಮಾಡ್ಕೋಬೇಕು. ಹೋಗಿ ನಿನ್ನ ಗಂಡನಿಗೆ ಮಜ್ಜಿಗೆ ಕೊಡೊಗು ಅಂತ ಹೇಳಿ, ತಿಂಡಿ ಮಾಡೋಕೆ ಹೋಗ್ತಾರೆ.

ಅಲಾರಾಂ ಸೌಂಡ್ ಗೆ ಅಭಿ ಎದ್ದು, ಫ್ರೆಷ್ ಅಪ್ ಆಗೋಕೆ ಹೋಗ್ತಾನೆ. ಮಜ್ಜಿಗೆ ಲೋಟ ಇಡ್ಕೊಂಡು ಬಂದ ನಯನಾ, ಮಂಚದ ಮೇಲೆ ಅಭಿ ಇಲ್ದೆ ಇರೋದನ್ನ ನೋಡಿ, ರೀ ಸ್ನಾನ ಮಾಡ್ತಾ ಇದ್ದೀರಾ ಅಂತ ಕೇಳ್ತಾಳೆ.

ಅಭಿ,, ಹೌದು 5 ನಿಮಿಷ ಬಂದೆ.

ನಯನಾ,,, ಪರ್ವಾಗಿಲ್ಲ ನಿಧಾನಕ್ಕೆ ಮಾಡಿ, ಅಂತ ಹೇಳಿ ಅಭಿ ಬಟ್ಟೆಗಳನ್ನ ಬೆಡ್ ಮೇಲೆ ಇಟ್ಟು. ರೀ ಬಟ್ಟೆ ಇಟ್ಟಿದ್ದೀನಿ, ನೀವು ಸ್ನಾನ ಮಾಡಿ ರೆಡಿ ಆಗಿ ಬನ್ನಿ, ನಿಮಗೆ ತಿಂಡಿ ರೆಡಿ ಮಾಡ್ತೀನಿ ಅಂತ ಹೇಳಿ, ಮಜ್ಜಿಗೆ ಲೋಟದ ಜೊತೆಗೆ ವಾಪಸ್ಸು ಅಡುಗೆ ಮನೆ ಕಡೆಗೆ ಹೋಗ್ತಾಳೆ.

ಅಭಿ ಸ್ನಾನ ಮಾಡಿ ರೆಡಿ ಆಗಿ, ಹಾಲ್ ಗೆ ಹೋಗ್ತಾನೆ. ಅಭಿ ಬರೋದನ್ನ ನೋಡಿ ನಯನಾ ತಿಂಡಿ ನ ಡೈನಿಂಗ್ ಟೇಬಲ್ ಹತ್ತಿರ ತಗೋ ಬರ್ತಾಳೆ. 

ಅಭಿ,,,ನಯನಾ ಮಧ್ಯಾಹ್ನ, ಊಟಕ್ಕೆ ಏನು ಮಾಡಬೇಡಿ, ಸೂಪರ್ ಮಾರ್ಕೆಟ್ ಅಲ್ಲಿ ಮಟನ್ ಬಿರಿಯಾನಿ ಮಾಡೀವಿ, ನಾನೆ ತಗೊಂಡು ಬರ್ತೀನಿ. 

ನಯನಾ,,, ಖುಷಿಯಾಗಿ ಹೌದ, ಆಗಿದ್ರೆ ಮಧ್ಯಾಹ್ನಕ್ಕೆ ನಾವೇ ಸೂಪರ್ ಮಾರ್ಕೆಟ್ ಗೆ ಬರ್ತೀವಿ ಬಿಡಿ, ಅನಾ ಕೂಡ ಸೂಪರ್ ಮಾರ್ಕೆಟ್ ನ ನೋಡಬೇಕು ಅಂತ ಇದ್ಲು, ಅದು ಅಲ್ಲದೆ ರೇಷನ್ ಸ್ವಲ್ಪ ಬೇಕಾಗಿತ್ತು ಹಾಗೇ ಬರ್ತಾ ತಗೊಂಡು ಬರ್ತೀವಿ, ಅಂತ ಹೇಳ್ತಾ ತಿಂಡಿ ಕೊಡ್ತಾಳೆ.

ಅಭಿ,, ತಿಂಡಿ ತಿಂತ ಸರಿ ಹಾಗೇ ಮಾಡಿ, ಹೌದು ಅನಾ ಇನ್ನು ಎದ್ದಿಲ್ವಾ?

ನಯನಾ,,, ಇನ್ನು ಇಲ್ಲಾ ರೀ ಅವಳ ತಾತನ ಜೊತೆಗೆ ಮಲಗಿದ್ದಾಳೆ ಇನ್ನು. ಇತ್ತೀಚಿಗೆ ಅವಳು ಬೆಳಿಗ್ಗೆ ಟೈಮ್ ತುಂಬಾ ಹೊತ್ತು ನಿದ್ದೆ ಮಾಡ್ತಾ ಇದ್ದಾಳೆ. ತಗೊಂಡು ಹೋಗಿ ಸ್ಕೂಲ್ ಗೆ ಸೇರಿಸಬೇಕು. ಇಲ್ಲಾ ಅಂದ್ರೆ ಅದೇ ಅಭ್ಯಾಸ ಮಾಡ್ಕೊತಾಳೆ.

ಅಭಿ,,, ಹೌದೌದು, ನಿಮ್ ಅಪ್ಪ ನಿನ್ನು 3 4 ವರ್ಷಕ್ಕೆ ತಗೊಂಡು ಹೋಗಿ ಸ್ಕೂಲ್ ಅಲ್ಲಿ ಹಾಕಿದ್ರೆ ನಿನಗೆ ಗೊತ್ತಾಗಿರೋದು, ಏನ್ ಮಿಸ್ ಮಾಡ್ಕೋತ ಇದ್ದೆ ಅಂತ. ನಿದ್ದೆ ಮಾಡೋ ವಯಸ್ಸು, ಆಟ ಆಡೋ ವಯಸ್ಸು, ಅವಳ ಲೈಫ್ ನ ಎಂಜಾಯ್ ಮಾಡೋಕೆ ಬಿಡು. ಇವಾಗ ನೀನು ತಗೊಂಡು ಹೋಗಿ ಸ್ಕೂಲ್ ಗೆ ಹಾಕಿದ್ರೆ, ಅವರು ಅ ಆ ಇ ಈ, abcd ನೇ ಅಲ್ವಾ ಹೇಳ್ಕೊಡೋದು. ಅದನ್ನ ನೀನೇ ಹೇಳ್ಕೊಡು, ಕಲಿತಾಳೆ. ಅವಳಿಗೂ ಹೇಗೂ ಕಲಿತ ಹಾಗೇ ಆಗುತ್ತೆ, ನಿನ್ನ ಜೊತೆಗೆ ಆಟ ಆಡಿದ ಹಾಗೇ ಆಗುತ್ತೆ. ನಿನಗೂ ಅವಳು ಹೇಗೆ ಕಲಿತಾಳೆ ಅನ್ನೋದು ಗೊತ್ತಾಗುತ್ತೆ. ಅವಳಾಗೆ ಸ್ಕೂಲ್ ಗೆ ಹೋಗ್ತೀನಿ ಅನ್ನೊವರೆಗೂ, ಸ್ಕೂಲ್ ಗೆ ಸೇರಿಸ್ತೀನಿ ಅಂದೋ, ಮೊದಲು ನಿನ್ನ ಕರ್ಕೊಂಡು ಹೋಗಿ ಸ್ಕೂಲ್ ಗೆ ಸೇರಿಸ್ತೀನಿ.  

ನಯನಾ,,, ತುಸು ಕೋಪದಿಂದ, ಆಯ್ತು ಬಿಡ್ರಿ ನಿಮ್ ಮಗಳು ನಿಮ್ ಇಷ್ಟ. ಏನೋ ತುಂಬಾ ನಿದ್ದೆ ಮಾಡ್ತಾಳೆ ಅಂತ ಹೇಳ್ದೆ, ಅದಕ್ಕೆ ನನ್ನೇ ಸ್ಕೂಲ್ ಗೆ ಸೇರಿಸ್ತೀನಿ ಅಂತೀರಾ. ನಾನ್ ಸ್ಕೂಲ್ ಗೆ ಹೋದ್ರೆ, ನಿಮ್ಮನ್ನ ಯಾರ್ ನೋಡ್ಕೋತಾರೆ ಅಡುಗೆ ಯಾರ್ ಮಾಡಿ ಇಡ್ತಾರೆ.

ಅಭಿ,,,, ನಗ್ತಾ ನೀನೇನು ಅಷ್ಟು ಕಷ್ಟ ತಗೋಬೇಡ ಆ ಚಿಂತೆಕೂಡ ನಿನಗೆ ಬೇಡ . ನನ್ನ ಮಗಳು ನನ್ನ ನಿನಗಿಂತ ಚೆನ್ನಾಗಿ ನೋಡ್ಕೋತಾಳೆ . ಇನ್ನು ಅಡುಗೆ ವಿಷಯ ಅಂತೀಯಾ ಎರಡು ದಿನ ಹೇಳಿಕೊಟ್ರೆ ನಿನಗಿಂತ ಚೆನ್ನಾಗಿ ಅಡುಗೆ ಮಾಡ್ತಾಳೆ ನನ್ನ ಮಗಳು. 

ಅನಾ,,, ಓಡಿ ಬಂದು ಅಭಿ ನ ತಬ್ಬಿಕೊಂಡು, ಹೌದು ಪಪ್ಪಾ, ನಾನು ನಿನ್ನ ಅಮ್ಮನಿಗಿಂತ ಚೆನ್ನಾಗಿ ನೋಡ್ಕೋತೀನಿ. ನಿನಗೆ ಬರೋ ಅಡುಗೆ ನ ಎಲ್ಲಾ ಹೇಳಿಕೊಂಡು ಬೇಗ ಬೇಗ ಕಲಿತು ಕೊಳ್ತೀನಿ. ಅಂತ ಹೇಳ್ತಾ ನಯನಾ ಮುಖ ನೋಡ್ತಾ  ನನ್ನೇ ಸ್ಕೂಲ್ ಗೆ ಸೇರಿಸ್ತೀನಿ ಅಂತೀಯಾ, ಇವಾಗ ನೀನೇ ಬೆಳಿಗ್ಗೆ ಎದ್ದು ಸ್ಕೂಲ್ ಡ್ರೆಸ್ ಹಾಕೊಂಡು ಸ್ಕೂಲ್ ಗೆ ಹೋಗು ಅಂತ ಹೇಳ್ತಾ ಎಕ್ಕರಿಸ್ತಾಳೆ.

ನಯನಾ,,, ನನ್ನೇ ಎಕ್ಕರಿಸ್ತೀಯ, ಪಪ್ಪಾ ಕೆಲಸಕ್ಕೆ ಹೋದಮೇಲೆ ಅಮ್ಮ ಅನ್ಕೊಂಡು ಬಾರೆ ನನ್ನ ಹತ್ತಿರ ಅವಾಗ ಹೇಳ್ತಿನಿ. 

ಅನಾ ,,, ಆವಾಗಿನ ಕಥೆ ಬಿಡು, ಈ ವಯಸ್ಸಲ್ಲಿ ನೀನು ಸ್ಕೂಲ್ ಡ್ರೆಸ್ ಹಾಕೊಂಡು, ಬ್ಯಾಗ್ ತಗಲಾಕೊಂಡು ಹೋಗ್ತಾ ಇದ್ರೆ ಹೇಗೆ ಕಾಣ್ತಿಯ ಅಂತ ಸ್ವಲ್ಪ ಯೋಚ್ನೆ ಮಾಡು. ಅದು lkg ukg ಗೆ. ಅಂತ ಹೇಳಿ ಜೋರಾಗಿ ನಗ್ತಾಳೇ. 

ನಯನಾ ಗೆ ಅವಳನ್ನ ಅವಳು ಸ್ಕೂಲ್ ಡ್ರೆಸ್ ಅಲ್ಲಿ ಹೇಗೆ ಇರ್ತೀನಿ ಅಂತ ನೆನೆಸ್ಕೊಂಡು ನಗು ಬರುತ್ತೆ. ನಗ್ತಾ ಕತ್ತೆ ನಿನ್ನ ಅಂತ ಹೊಡಿಯೋಕೆ ಹೋಗ್ತಾಳೆ.  ಅನಾ ತಪ್ಪಿಸಿಕೊಂಡು ಓಡಿ ಹೋಗಿ ಅವರ ತಾತನ ಪಕ್ಕ ಅವಿತು ಕೊಳ್ತಾಳೆ.

ಸುಭದ್ರ, ವಿಶ್ವ, ಮುವ್ವರ ಈ ಸಂಭಾಷಣೆ ಕೇಳ್ತಾ ನೋಡ್ತಾ ನಗ್ತಾರೇ.

ಅಭಿ ತಿಂಡಿ ಮುಗಿಸಿ ಅನಾ ಕಡೆಗೆ ನೋಡ್ತಾ,, ಬಂಗಾರಿ ಅಮ್ಮನಿಗೆ ಜಾಸ್ತಿ ಕಾಟ ಕೊಡಬೇಡ, ಅಮ್ಮ ಹೇಳ್ಕೊಡೋದನ್ನ ಸ್ವಲ್ಪ ಸ್ವಲ್ಪ ಕಲಿ, ಆಮೇಲೆ ನಿನಗೆ ಯಾವಾಗ ಸ್ಕೂಲ್ ಗೆ ಹೋಗಬೇಕು ಅನ್ನಿಸುತ್ತೋ ಅವಾಗ ಸ್ಕೂಲ್ ಗೆ ಹೋಗು ಸರಿನಾ.

ಅನಾ,, ಸರಿ ಪಪ್ಪಾ ನಿನ್ ಹೇಳಿದ ಹಾಗೇ ಮಾಡ್ತೀನಿ, ಅಂತ ಹೇಳಿ ಅಭಿ ಹತ್ತಿರ ಬಂದು, ಕೆನ್ನೆಗೆ ಪಪ್ಪಿ ಕೊಟ್ಟು, ಮೈ ಸ್ವೀಟ್ ಪಪ್ಪಾ.

ಅಭಿ ಅವಳ ಕೆನ್ನೆಗೆ ಮುತ್ತಿಟ್ಟು, ನನ್ನ ಮುದ್ದು ಬಂಗಾರ ಅಂತ ಹೇಳಿ ಬೈ ಹೇಳಿ ಬೈಕ್ ಮತ್ತೆ ಸೂಪರ್ ಮಾರ್ಕೆಟ್ ಕೀ ತಗೊಂಡು ಹೊರಗೆ ಬರ್ತಾನೇ..ನಯನಾ ಕೂಡ ಅಭಿ ಜೊತೆಗೆ ಹೊರಗೆ ಬರ್ತಾಳೆ. ಅಭಿ ಬೈಕ್ ಮೇಲೆ ಕೂತು ನಯನಾ ನ ನೋಡ್ತಾ, ಯಾಕೆ ಹಾಗೇ ಮಾತಾಡಿದಕ್ಕೆ ಬೇಜಾರ್ ಆಯ್ತಾ ಅಂತ ಕೇಳ್ತಾನೆ.

ನಯನಾ ನಗ್ತಾ ಇಲ್ಲಾ ರೀ, ನೀವು ಹೇಳಿದ್ರಲ್ಲಿ ಅರ್ಥ ಇದೆ.

ಅಭಿ,, ಹೌದ ಅಂತ ಹೇಳಿ ಬೈಕ್ ಸ್ಟಾರ್ಟ್ ಮಾಡಿ, ಹೇಳೋದೇ ಮರೆತೇ ಬಾ ಇಲ್ಲಿ ಹತ್ತಿರ ಅಂತ ಕರೀತಾನೆ.

ನಯನಾ, ಏನ್ ರೀ ಅಂತ ಹತ್ತಿರ ಹೋಗ್ತಾಳೆ.

ಅಭಿ,,, ತಕ್ಷಣ ಅವಳ ಕೆನ್ನೆಗೆ ಮುತ್ತಿಟ್ಟು, ಹುಷಾರು ಅಂತ ಹೇಳ್ತಾನೆ.

ನಯನಾ ಗೆ ಆ ಮೂಮೆಂಟ್ ಆ ಕ್ಷಣ ಆ ಫೀಲ್ ತುಂಬಾ ಖುಷಿ ಕೊಡುತ್ತೆ. ಅವನ ಚರ್ಯೆ ಗೆ ನಾಚಿಕೊಳ್ತಾ ಈಡಿಯಟ್, ಅಂತ ಕ್ಯೂಟ್ ಆಗಿ ಬೈದು. ನೀವು ಹುಷಾರು ಅಂತ ಹೇಳ್ತಾಳೆ.

ಅಭಿ,,, ಓಕೆ ಬೈ ಅಂತ ಹೇಳಿ ಅಲ್ಲಿಂದ ಸೂಪರ್ ಮಾರ್ಕೆಟ್ ಕಡೆಗೆ ಹೋಗ್ತಾನೆ. 

ನಯನಾ ಖುಷಿಯಾಗಿ ಯಿಂದ ಮನೆ ಒಳಗೆ ಹೋಗ್ತಾಳೆ.

#######

ಪ್ರಿಯಾ,,, ಮನೆಯಿಂದ ಸೂಪರ್ ಮಾರ್ಕೆಟ್ ಗೆ ಹೋಗೋಕೆ ಬೈಕ್ ಅಲ್ಲಿ ತೇಜು ಮನೆ ಹತ್ತಿರ ಬರ್ತಾಳೆ. 

ತೇಜು ಅವರ ತಂದೆ ಮನೆ ಹೊರಗಡೆ ನಿಂತು ಕೆಲಸಗಾರರ ಕೈಲಿ ಕೆಲಸ ಮಾಡಿಸ್ತಾ ಇರೋದನ್ನ ನೋಡಿ. ಏನ್ ಅಂಕಲ್ ಏನಾದ್ರೂ ಫಂಕ್ಷನ್ ಆ, ಏನೋ ಕೆಲಸ ಮಾಡಿಸ್ತಾ ಇದ್ದೀರಾ.

ತೇಜು ತಂದೆ. ಏನಿಲ್ಲಾ ಮಗಳೇ, ಬಾಡಿಗೆ ಮನೆ ಒಂದು ಖಾಲಿ ಆಗಿತ್ತು, ಅದನ್ನ ರೆಡಿ ಮಾಡಿಸ್ತಾ ಇದ್ದೀನಿ ಅಷ್ಟೇ. ಕಾಫಿ ತಿಂಡಿ ಆಯ್ತಾ ಮಗಳೇ.

ಪ್ರಿಯಾ,,, ಎಲ್ಲಾ ಆಯಿತು ಅಂಕಲ್, ನಿಮ್ದು.

ತೇಜು ತಂದೆ,,, ಈಗಷ್ಟೇ ಕಾಫಿ ಆಯಿತು. ತಿಂಡಿ ಮಾಡಬೇಕು.

ತೇಜು ಮನೆ ಹೊರಗೆ ಬರ್ತಾ ಅಪ್ಪ ಬೈ ನಾನ್ ಕೆಲಸಕ್ಕೆ ಹೋಗಿ ಬರ್ತೀನಿ.

ತೇಜು ತಂದೆ ಸರಿ ಹುಷಾರು ಅಂತ ಹೇಳ್ತಾರೆ.

ತೇಜು ಪ್ರಿಯಾ ಬೈಕ್ ಹತ್ತಿ ನಡಿ ಅಂತ ಹೇಳ್ತಾಳೆ.

ಇಬ್ಬರು ಸೂಪರ್ ಮಾರ್ಕೆಟ್ ಕಡೆಗೆ ಹೊರಡ್ತಾರೆ.

@@@@@@@@@@@@@@@@@@@@@@@@@