Abhinayanaa - 24 in Kannada Love Stories by S Pr books and stories PDF | ಅಭಿನಯನಾ - 24

The Author
Featured Books
Categories
Share

ಅಭಿನಯನಾ - 24

   ಸುಭದ್ರ ವಿಶ್ವ ಹತ್ತಿರ, ರೀ ಪುರೋಹಿತರನ್ನ ಬರೋದಕ್ಕೆ ಹೇಳಿ.

ವಿಶ್ವ,,,ಸುಭದ್ರ ನಿನ್ ಏನಕ್ಕೆ ಇದರ ಬಗ್ಗೆ ಇಷ್ಟು ಯೋಚ್ನೆ ಮಾಡ್ತಾ ಇದ್ದಿಯಾ. ಅವರೇನು ಏನು ತಿಳಿಯದೆ ಇರೋವ್ರು ಅಲ್ಲ ಅಲ್ವಾ. ಅವರ ಪಾಡಿಗೆ ಅವರನ್ನ ಬಿಟ್ಟು ಬಿಡು. 

ಸುಭದ್ರ,,,  ಅದು ಆಗಲ್ಲಾ ರೀ, ಮದುವೆ ಏನೋ ಶಾಸ್ತ್ರ ಸಂಪ್ರದಾಯ ನೋಡದೆ ಮದುವೆ ಮಾಡಿದ್ವಿ. ಅದ್ರೆ ಈ ಕಾರ್ಯ ಆದ್ರು ಶಾಸ್ತ್ರ ಸಂಪ್ರದಾಯ ನೋಡಿ ಮಾಡೋಣ ಅಂತ. ಇಬ್ಬರು ಒಬ್ಬರನೊಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಂಡು ಸಂತೋಷ ವಾಗಿ ಇದ್ದಾರೆ. ಈಗ ನಾವು ಕೂಡ ಸುಮ್ನೆ ಇದ್ರೆ ತಪ್ಪಾಗುತ್ತೆ. ನೀವು ನನ್ನ ಮಾತು ಕೇಳಿ, ಪುರೋಹಿತರಿಗೆ ಬರೋಕೆ ಹೇಳಿ ಅಷ್ಟೇ. 

ವಿಶ್ವ,,, ಹ್ಮ್ ಸರಿ ನಿನ್ನಿಷ್ಟ, ನಿನ್ನ ಮಗಳು ಏನಾದ್ರೂ ಗಲಾಟೆ ಮಾಡಿದ್ರೆ ನನಗೆ ಗೊತ್ತಿಲ್ಲ, ಮೊದಲೇ ಹೇಳ್ತಾ ಇದ್ದೀನಿ.

ಸುಭದ್ರ ಅದೆಲ್ಲಾ ನಾನ್ ನೋಡ್ಕೋತೀನಿ ನೀವು ಬರೋಕೆ ಹೇಳಿ. 

****

ಮಧ್ಯಾಹ್ನ ದ ಅಡುಗೆ ಮಾಡ್ತಾ ಇರೋವಾಗ 

ಸುಭದ್ರ,,, ನಯನಾ ನಿನಗೆ ಒಂದು ವಿಷಯ ಹೇಳಬೇಕು.

ನಯನಾ,,, ಹೇಳಮ್ಮ ಅದಕ್ಕೆ ಯಾಕೆ ಕೇಳಬೇಕು ಅಂತ ಇದ್ದಿಯಾ.

ಸುಭದ್ರ,,, ಅದು ನಿನ್ನ ಅಭಿ ಮದುವೆ ಶಾಸ್ತ್ರ ಸಂಪ್ರದಾಯ ನೋಡದೆ ಏನೋ ಅವಸರದಲ್ಲಿ ನಡೆದು ಹೋಯ್ತು. ಈಗ ಇಬ್ಬರು ಸಂತೋಷ ದಿಂದ ಇದ್ದೀರಾ. ಈಗ ಶಾಸ್ತ್ರ ಸಂಪ್ರದಾಯ ದ ಪ್ರಕಾರ ಹಾಗಬೇಕಾಗಿರೋ ಕಾರ್ಯ ನ ಕೂಡ ಮಾಡೋಣ ಅಂತ ಪುರೋಹಿತರನ್ನ ಬರೋಕೆ ಹೇಳಿದೆ. ಅವರು ನಾಳೆಗೆ ಒಂದು ಒಳ್ಳೆ ಮುಹೂರ್ತ ಕೊಟ್ಟಿದ್ದಾರೆ, ಅದೇ ವಿಷಯ ನಿನಗೆ ಹೇಳಿ, ಅಭಿ ಹತ್ತಿರ ಮಾತಾಡು.

ನಯನಾ,, ಸ್ವಲ್ಪ ನಾಚಿ ಕೊಳ್ತಾ, ಅಮ್ಮ ಇವಾಗ ಅದಕ್ಕೆ ಏನು ಅವಸರ, ಅದು ಅಲ್ಲದೆ ಈ ವಿಷಯ ಅಭಿ ಹತ್ತಿರ ನಾನ್ ಹೇಗೆ ಮಾತಾಡಲಿ. 

ಸುಭದ್ರ,,, ಹೇಗೆ ಮಾತಾಡ್ತೀಯಾ ಅಂದ್ರೆ, ನಾನ್ ಏನ್ ಹೇಳೋದು, ಈ ವಿಷಯ ನಿನ್ನ ಗಂಡನ ಹತ್ತಿರ ನೀನೇ ಮಾತಾಡು, ಅವರನ್ನ ಒಪ್ಪಿಸು, ನಾಳೆ ಕಾರ್ಯ ಆಗಿ ಬಿಡಬೇಕು ಅಷ್ಟೇ. 

ನಯನಾ,, ಅಮ್ಮ ಅದು ಹಾಗಲ್ಲ ಅಮ್ಮ, ನಾನ್ ಹೇಳೋದನ್ನ ಸ್ವಲ್ಪ ಕೇಳು. 

ಸುಭದ್ರ,,, ನೋಡು ಹೇಳೋದು ಕೇಳೋದು ಏನು ಇಲ್ಲಾ, ಹೋಗಿ ನಿನ್ನ ಗಂಡ ಹತ್ತಿರ ಮಾತಾಡು ಹೋಗು. 

ನಯನಾ ಬೇರೆ ದಾರಿ ಇಲ್ಲದೆ ಸರಿ ಅಂತ ಹೇಳಿ ರೂಮ್ ಕಡೆಗೆ ಹೋಗ್ತಾಳೆ. 

******

ಬಿಲ್ಲಿಂಗ್ ಕೌಂಟರ್ ಅಲ್ಲಿ ಇದ್ದಾ ಅಭಿ, ನಯನಾ ಕಾಲ್ ಮಾಡೋದನ್ನ ನೋಡಿ ಕಾಲ್ ಪಿಕ್ ಮಾಡಿ, ಆ ಹೇಳೇ.

ನಯನಾ,,, ರೀ ಫ್ರೀ ಇದ್ದೀರಾ ಬ್ಯುಸಿ ಇದ್ದೀರಾ.

ಅಭಿ,,, ಸ್ವಲ್ಪ ಫ್ರೀ ಇದ್ದೀನಿ ಹೇಳು.

ನಯನಾ,,, ಹೌದ ನಿಮ್ ಹತ್ತಿರ ಒಂದು ವಿಷಯ ಮಾತಾಡಬೇಕು, ಆಫೀಸ್ ರೂಮ್ ಗೆ ಬನ್ನಿ.

ಅಭಿ,,, ಸರಿ ಅಂತ ಕೆಲವು ನಿಮಿಷಗಳ ನಂತರ, ಆಫೀಸ್ ರೂಮ್ ಗೆ ಬಂದು, ಆ ಹೇಳು ಏನ್ ವಿಷಯ.

ನಯನಾ,,, ಸ್ವಲ್ಪ ನಾಚಿಕೊಳ್ತಾ, ಅದು ಏನು ಇಲ್ಲಾ, ನಿಮ್ ಅತ್ತೆ ಹೇಳಿದ್ರು, ಮದುವೆ ಏನೋ ಅವಸರದಲ್ಲಿ ನಡೆದು ಹೋಯ್ತು. ಕಾರ್ಯ ಆದ್ರು ಶಾಸ್ತ್ರ ಸಂಪ್ರದಾಯ ದ ಪ್ರಕಾರ ಆದ್ರು ಮಾಡೋಣ, ನಾಳೆ ಒಳ್ಳೆ ಮುಹೂರ್ತ ಇದೆ, ನಿನ್ನ ಗಂಡನ ಹತ್ತಿರ ಮಾತಾಡು ಅಂತ ಹೇಳಿದ್ರು ಅದಕ್ಕೆ ನಿಮ್ಮನ್ನ ಕೇಳೋಣ ಅಂತ ಕಾಲ್ ಮಾಡಿದೆ. 

ಅಭಿ,,, ಏನು ಕಾರ್ಯ ನ ಅಂದ್ರೆ ಅರ್ಥ ಆಗಿಲ್ಲ, ಅದು ಏನಾದ್ರೂ ಪೂಜೆ ನ?

ನಯನಾ,,, ಲೋ ನನ್ನ ದಡ್ಡ ಪತಿ ರಾಯನೇ, ಕಾರ್ಯ ಅಂದ್ರೆ ಪೂಜೆ ಅಲ್ಲ, ಮೊದಲ ರಾತ್ರಿ,  ಫಸ್ಟ್ ನೈಟ್, ಅರ್ಥ ಆಯ್ತಾ.

ಅಭಿ,,, ಓ  ಹೊ ಅದ, ನೋಡು ಅಮ್ಮ ಹೇಳಿದ್ರು ಅಜ್ಜಿ ಹೇಳಿದ್ರು ಅಂತ ಅಲ್ಲ, ನಿನ್ನ ಮನಸ್ಸಿಗೆ ಏನ್ ಅನ್ನಿಸುತ್ತೋ ಅದನ್ನ ಯೋಚ್ನೆ ಮಾಡಿ ಹೇಳು. ನಿನಗೆ ಇಷ್ಟ ಇದ್ರೆ ಮಾತ್ರ ನಾಳೆ ಬಗ್ಗೆ ಮಾತಾಡು, ಇಲ್ಲಾ ಅಂದ್ರೆ ನಿಮ್ ಅಮ್ಮ ಗೆ ಹೇಳು, ಅಮ್ಮ ಸದ್ಯಕ್ಕೆ ಅಭಿ ಗೆ ಇದರ ಬಗ್ಗೆ ಏನು ಆಲೋಚನೆ ಇಲ್ಲಾ, ಇನ್ನು ಸ್ವಲ್ಪ ದಿನ ಹೋಗಲಿ ಆಮೇಲೆ ನೋಡೋಣ ಅಂತ ಹೇಳಿದ ಅಂತ ಹೇಳು ಸರಿನಾ. 

ನಯನಾ,,,ಖುಷಿಯಾಗಿ ಅಭಿ ಗೆ ಒಂದು ಕಿಸ್ ಕೊಟ್ಟು, ಥ್ಯಾಂಕ್ಸ್ ಕಣೋ ನನಗೆ ಗೊತ್ತಿತ್ತು ಈ ವಿಷಯ ದಲ್ಲಿ ನನ್ನಿಷ್ಟನೇ ನಿನಗೆ ಮುಖ್ಯ ಅಂತ ನೀನು ಹೇಳ್ತಿಯ ಅಂತ ಹಾಗೇ ಹೇಳಿದೆ. ನಾಳೆ ನೀನು ಸೂಪರ್ ಮಾರ್ಕೆಟ್ ಗೆ ಏನು ಹೋಗಬೇಡ, ಅಪ್ಪ ಹೋಗ್ತಾರೆ, ಇಲ್ಲಾ ನಿನ್ನ ಫ್ರೆಂಡ್ಸ್ ನೋಡ್ಕೋತಾರೆ ಸರಿನಾ. 

ಅಭಿ,,, ಅಂದ್ರೆ?

ನಯನಾ,,, ನಾಚಿ ನೀರಾಗಿ, ಲೋ ದಡ್ಡ ನನಗೂ ಇಷ್ಟ ಅಂತ ಇನ್ನ ಹೇಗೋ ಹೇಳ್ಲಿ. ನೀನು ಯಾವಾಗ ನಿನ್ನ ಮನಸಲ್ಲಿ ನನ್ನ ಮೇಲೆ ಇರೋ ಪ್ರೀತಿ ನ ಹೇಳಿದೊ ಅವತ್ತೇ ಆ ಕ್ಷಣ ನೇ ನಾನು ನಿನ್ನ ಸ್ವಂತ ಆಗಿ ಬಿಡಬೇಕು ಅಂತ ನಿರ್ಧಾರ ಮಾಡಿ ಬಿಟ್ಟೆ. 

ಅಭಿ,,, ಮುದ್ದಾಗಿ ಹೌದ ಮತ್ತೆ ಯಾವತ್ತೂ ಹೇಳೇ ಇಲ್ಲಾ ನನಗೆ. 

ನಯನಾ,,, ಕತ್ತೆ ಈ ವಿಷಯ ನ ಹೇಗೋ ಬಾಯಿ ಬಿಟ್ಟು ಕೇಳೋಕೆ ಆಗುತ್ತೆ, ಆದ್ರು ಇಂಡೈರೆಕ್ಟ್ ಆಗಿ ನಿನಗೆ ನಾನು ಎಷ್ಟು ಹಿಂಟ್ ಕೊಟ್ರು ನಿನಗೆ ಅರ್ಥನೇ ಆಗಲಿಲ್ಲ. ಆಗಿದ್ದಿದ್ರೆ  ಹೀಗೆ ನಾಚಿಕೆ ಬಿಟ್ಟು ಕೇಳ್ತಾ ಇರಲಿಲ್ಲ.

ಅಭಿ,,, ಅಬ್ಬಾ ಏನು ನಾಚಿಕೆ ನ, ತುಂಬಾ ನಾಚ್ಕೋ ಬೇಡ, ನಾಳೆ ವರೆಗೂ ಸ್ವಲ್ಪ ಇಟ್ಕೋ. 

ನಯನಾ,,, ಇನ್ನು ನಾಚಿಕೊಳ್ತಾ, ಲೋ ಸುಮ್ನೆ ಇರೋ, ಈಗ್ಲೇ ಈ ವಿಷಯ ದ ಬಗ್ಗೆ ಹೇಳ್ತಾ ಇದ್ರೆ ಒಂತರಾ ಆಗ್ತಾ ಇದೆ. 

ಅಭಿ,,, ಹೌದ ಹಾಗಾದ್ರೆ ನಾಳೆ ಕಾರ್ಯ ನ ಇವತ್ತೇ ಇಟ್ಟುಕೊಳ್ಳೋಣ?

ನಯನಾ,,, ಅಬ್ಬಾ ಆಸೆ ನೋಡು, ಯಜಮಾನರಿಗೆ.  ನಾಳೆ ಅಂದ್ರೆ ನಾಳೇನೇ ಅಷ್ಟೇ. ಈ ಮಧ್ಯ ಕೋತಿ ಕೆಲಸ ಏನಾದ್ರೂ ಮಾಡಿದೆ ಅನ್ಕೋ ಅಷ್ಟೇ ಈಗ್ಲೇ ಹೇಳ್ತಾ ಇದ್ದೀನಿ. 

ಅಭಿ,,, ನಗ್ತಾ,, ಹೌದ ಅದು ನೋಡೋಣ.  ಊಟ  ಮಾಡಿದ.

ನಯನಾ,,, ಇನ್ನು ಇಲ್ವೋ ಅಡುಗೆ ಮಾಡ್ತಾ ಇದ್ವಿ, ಅಮ್ಮ ಈ ವಿಷಯ ನಿನ್ನ ಹತ್ತಿರ ಮಾತಾಡು ಅಂತ ಹೇಳಿದ್ರು. ಇನ್ನೇನು ಅಡುಗೆ ಆಗಿರುತ್ತೆ. ಊಟ ತಗೊಂಡು ಬರ್ಲಾ ಇಲ್ಲಾ ನೀವೇ ಮನೆಗೆ ಬರ್ತೀರಾ. 

ಅಭಿ,,, ನಗ್ತಾ ಈ ಟೈಮ್ ಅಲ್ಲಿ ಹೀಗೆ ಮಾತಾಡಿ ಕಣ್ಣೆದುರು ನಿನ್ನ ನೋಡಿದೆ ಅಂದ್ರೆ, ನನಗೆ ತುಂಬಾ ಕಷ್ಟ ಆಗುತ್ತೆ. ಇಲ್ಲೇ ಊಟ ಮಾಡ್ತೀನಿ. ನೀನು ಊಟ ಮಾಡಿ ಆರಾಮಾಗಿ ರೆಸ್ಟ್ ತಗೋ. 

ನಯನಾ,,, ಅಭಿ ಗೆ ಕಿಸ್ ಒಂದನ್ನ ಕೊಟ್ಟು, ಸರಿ ರೀ ಟೈಮ್ ಸರಿಯಾಗಿ ಊಟ ಮಾಡಿ, ಹುಷಾರು.

ಅಭಿ,,,, ನಯನಾ ಗೆ ಕಿಸ್ ಕೊಟ್ಟು ಸರಿ ಕಣೆ ಬೈ ಟೇಕ್ ಕೇರ್ ಅಂತ ಹೇಳಿ ಕಾಲ್ ಕಟ್ ಮಾಡಿ ಅವನ ಕೆಲಸದ ಕಡೆ ಗಮನ ಕೊಡ್ತಾನೆ. 

*********

ಸಾರಿಕ ಆಟೋದಲ್ಲಿ ಲಾಯರ್ ಕೊಟ್ಟ ಅಡ್ರೆಸ್ ಗೆ ಬಂದು ಇಳಿದು ಅವಳ ಲಗೇಜ್ ನ ಎಲ್ಲಾ ತೆಗೆದುಕೊಂಡು, ಲಾಯರ್ ಕೊಟ್ಟ ವ್ಯಕ್ತಿ ಯ  ನಂಬರ್ ಗೆ ಕಾಲ್ ಮಾಡ್ತಾಳೆ. 

ಸಾರಿಕಾ,,, ಹಲೋ.

****,,, ಹಲೋ ಹೇಳಮ್ಮ.

ಸಾರಿಕಾ,,,, ಸರ್ ನೀವು ಹೇಳಿದ ಅಡ್ರೆಸ್ ಅಲ್ಲೇ ಇದ್ದೀನಿ.

****,,, ಹೌದಮ್ಮ ಸರಿ ಬಂದೆ ಅಂತ ಹೇಳಿ ಕಾಲ್ ಕಟ್ ಮಾಡಿ. ಸಾರಿಕಾ ಇರೋ ಕಡೆಗೆ ಹೋಗ್ತಾರೆ.

ಕೆಲವು ನಿಮಿಷಗಳ ನಂತರ. ಒಬ್ಬ ವ್ಯಕ್ತಿ ಸಾರಿಕಾ ಹತ್ತಿರ ಬಂದು. ನಿನ್ನೆನಮ್ಮ ಸಾರಿಕಾ ಅಂದ್ರೆ 

ಸಾರಿಕಾ,,, ಹೌದು ಸರ್ ನಾನೆ.

****,,, ಸರ್ ಏನು ಬೇಡ ಅಮ್ಮ ದಾಮೋದರ್ ಅಂತ ನನ್ನ ಹೆಸರು, ಎಲ್ಲರೂ ಅಂಕಲ್ ಅಂಕಲ್ ಅಂತ ಕರೀತಾರೆ. ನೀನು ಕೂಡ ಹಾಗೇ ಕರಿ ಅಮ್ಮ.

ಸಾರಿಕಾ,,, ಸರಿ ಅಂಕಲ್.

ಅಂಕಲ್,,, ಬಾಮ್ಮ ಮನೆ ತೋರಿಸ್ತಿನಿ ಅಂತ ಹೇಳಿ ಸಾರಿಕಾ ಲಗೇಜ್ ಅಲ್ಲಿ ಒಂದನ್ನ ಕೈಲಿ ಇಟ್ಕೊಂಡು. ಬಾಡಿಗೆ ಮನೆ ಕಡೆಗೆ ಹೋಗ್ತಾರೆ.

ಸ್ಟೆಪ್ಸ್ ಹತುತ್ತ ನೋಡಮ್ಮ ನಿನ್ ಇರೋದು 2nd ಫ್ಲೋರ್ ಅಲ್ಲಿ, ಒಂದೇ ಮನೆ ಇರೋದು, ನಮ್ ಲಾಯರ್ ಹೇಳಿದ್ರು ನಿನ್ನ ಬಗ್ಗೆ, ನೀನು ಇಲ್ಲಿ ಯಾರಿಗೂ ಭಯ ಬಿಳೋಕೆ ಹೋಗಬೇಡ.  ಈ ಬೀದಿಲಿ ಈ ಊರಲ್ಲಿ ಎಲ್ಲಾ ನನಗೆ ಪರಿಚಯ ಇರೋವ್ರೆ. ನಿನ್ ಇರೋದು ಟೆರೇಸ್ ಮನೆ ಆಗಿರೋದ್ರಿಂದ  ಸ್ಟೆಪ್ಸ್ ಹತ್ತಿರ ಡೋರ್ ಇದೆ ರಾತ್ರಿ ಹೊತ್ತು ಬೇಕಾದ್ರೆ ನೀನು ಲಾಕ್ ಮಾಡ್ಕೊಬೋದು. ಈ ಬಿಲ್ಡಿಂಗ್ ಅಲ್ಲಿ ಎಲ್ಲಾ ಫ್ಯಾಮಿಲಿ ನೇ ಇರೋದು. ನಾವು 1st ಫ್ಲೋರ್ ಅಲ್ಲಿ ಇದ್ದಿವಿ.  ಮನೆ ಒಳಗೆ ನೇ ನೀರು ಬರುತ್ತೆ. ನೀರಿಗೆ ಏನು ಚಿಂತೆ ಮಾಡೋ ಹಾಗೇ ಇಲ್ಲಾ. ನಿನ್ನ ಹತ್ತಿರ ಬೈಕ್ ಏನಾದ್ರೂ ಇದ್ರೆ ಕೆಳಗೆ ಕಾಂಪೌಂಡ್ ಒಳಗೆ ಪಾರ್ಕಿಂಗ್ ಇದೆ ಅಲ್ಲಿ ನಿಲ್ಲಿಸಿ ಕೊಳ್ಳ ಬಹುದು. ಅಂತ ಹೇಳ್ತಾ ಮನೆ ಡೋರ್ ಲಾಕ್ ಓಪನ್ ಮಾಡಿ ಮನೆ ಒಳಗೆ ಬರ್ತಾರೇ.

ಅಂಕಲ್,,, ನೋಡಮ್ಮ ಇದೆ ಮನೆ ಒಂದು ಹಾಲ್ ಕಿಚನ್ ಬೆಡ್ರೂಮ್ ಅಟ್ಯಾಚ್ ಬಾತ್ರೂಮ್. 

ಸಾರಿಕಾ ಮನೆ ಪೂರ್ತಿ ನೋಡಿ  ತುಂಬಾ ಚೆನ್ನಾಗಿ ಇದೆ ಅಂಕಲ್ ಮನೆ ಅಂತ ಹೇಳ್ತಾಳೆ.

ಅಂಕಲ್,, ಈಗ ವಿಷಯ ಕ್ಕೆ ಬರ್ತೀನಿ. ಅಡ್ವಾನ್ಸ್ 40 ಸಾವಿರ ಬಾಡಿಗೆ 5 ಸಾವಿರ.

ಸಾರಿಕಾ,,, ಸ್ವಲ್ಪ ಬೇಜಾರಿನಿಂದ ಅಡ್ವಾನ್ಸ್ 40 ಸಾವಿರ ನ?

ಅಂಕಲ್,,, ನಗ್ತಾ ತಮಾಷೆ ಮಾಡಿದೆ. ನೀನೇನು ಅಡ್ವಾನ್ಸ್ ಕೊಡಬೇಡ, ನಿನ್ನ ಬಗ್ಗೆ ನಮ್ ಲಾಯರ್ ಹುಡುಗಿ ಎಲ್ಲಾ ಹೇಳಿದ್ದಾಳೆ. ನನಗೆ ತಿಂಗಳು ತಿಂಗಳು ಬಾಡಿಗೆ ಕೊಟ್ರೆ ಸಾಕು. ಅದು ನೀನು ಕೆಲಸಕ್ಕೆ ಹೋಗಿ ಸೇರಿಕೊಂಡು ಸಂಬಳ ಬಂದಮೇಲೆ. ಅಂದಹಾಗೆ ನಿನಗೆ ಒಂದು ಕೆಲಸ ನೋಡೋಕೆ ಹೇಳಿದ್ರು. ಅದೇ ಕೆಲಸದಲ್ಲಿ ಕೆಲವರಿಗೆ ಹೇಳಿದ್ದೀನಿ.  ನನ್ನ ಮಗಳು ಕೂಡ ಇಲ್ಲೇ ಒಂದು ಸೂಪರ್ ಮಾರ್ಕೆಟ್ ಅಲ್ಲಿ ಕೆಲಸಕ್ಕೆ ಹೋಗ್ತಾಳೆ. ಅಲ್ಲಿ ಏನಾದ್ರೂ ಕೆಲಸ ಇದೆಯಾ ಅಂತ ಕೇಳ್ತೀನಿ. ಇದ್ರೆ ಅಲ್ಲೇ ಹೋಗು. ಓನರ್ ತುಂಬಾ ಒಳ್ಳೆಯವರು ನನಗೆ ಪರಿಚಯ ಇರೋವ್ರು. ಅಲ್ಲಿ ಎಲ್ಲರೂ ನಮ್ಮವರು ಅಂತ ಅನ್ಕೊಂಡು ಕೆಲಸಕ್ಕೆ ಮಾಡ್ತಾ ಇದ್ದಾರೆ. 

ಸಾರಿಕಾ,,, ಕಣ್ಣೀರು ಹಾಕ್ತಾ ತುಂಬಾ ಥ್ಯಾಂಕ್ಸ್ ಅಂಕಲ್ ನಿಮ್ ಈ ಉಪಕಾರ ನ ಯಾವತ್ತೂ ಮರಿಯೋದಿಲ್ಲ.

ಅಂಕಲ್,,, ಏನಮ್ಮ ನೀನು, ನಾನು ಒಂದು ಹೆಣ್ ಮಗುವಿನ ತಂದೆ, ನಿನ್ನ ಬಗ್ಗೆ ಹೇಳಿದಾಗ ನನ್ನ ಮನಸ್ಸಿಗೆ ತುಂಬಾ ನೋವಾಯ್ತು, ದೇವ್ರು ತುಂಬಾ ಒಳ್ಳೆಯವರಿಗೇನೇ ಈ ರೀತಿ ಕಷ್ಟ ಕೊಡೋದು. ಅದನ್ನೆಲ್ಲಾ ಎದುರಿಸಿ ಬದುಕೋದನ್ನ ಕಲಿಬೇಕು. ಅಳೋದನ್ನ ನಿಲ್ಲಿಸಿ, ತುಂಬಾ ದೂರ ಪ್ರಯಾಣ ಮಾಡಿ ಬಂದಿದ್ದೀಯಾ. ರೆಸ್ಟ್ ತಗೊ ನಾನು ನಿಮ್ ಆಂಟಿ ಗೆ ಹೇಳಿ ನಿನಗೆ ಊಟ ಕಳಿಸಿ ಕೊಡ್ತೀನಿ.  

ಸಾರಿಕಾ,,, ಅಂಕಲ್ ಏನು ಬೇಡ ನಾನ್ ನೋಡ್ಕೋತೀನಿ ಅದೆಲ್ಲಾ.

ಅಂಕಲ್,,, ಏನಮ್ಮ ನೀನು ನನ್ನ ಮಗಳ ಇದ್ದಾ ಹಾಗೇ, ನಾವು ಮಾಡೋದ್ರಲ್ಲಿ ಸ್ವಲ್ಪ ಅಕ್ಕಿ ಹಾಕಿದ್ರೆ ಸರಿ ಹೋಗುತ್ತೆ, ಅದು ಅಲ್ಲದೆ ನೀನು ಬರಿ ಲಗೇಜ್ ಜೊತೆಗೆ ಬಂದಿದ್ದೀಯಾ. ನೀನು ರೇಷನ್ ಅಂಗಡಿ ಗೆ ಹೋಗಿ ರೇಷನ್ ತಗೋಬರೋದು ಯಾವಾಗ. ಅಡುಗೆ ಪಾತ್ರೆ ಗ್ಯಾಸ್  ಇವೆಲ್ಲಾ ತಗೊಂಡು ಬರೋದು ಯಾವಾಗ, ಅದನ್ನೆಲ್ಲಾ ತಂದು ನೀನು ಅಡುಗೆ ಮಾಡಿ ತಿನ್ನೋದು ಯಾವಾಗ. ನೀನೇನು ಸಂಕೋಚ ಬೀಳಬೇಡ. ನಿಮ್ ಆಂಟಿ ನಿನಗೆ ಊಟ ತಗೊಂಡು ಬರ್ತಾರೆ. ಆಮೇಲೆ ನನಗೆ ಗೊತ್ತಿರೋವ್ರಿಗೆ ಹೇಳಿದ್ರೆ ಮನೆಗೆ ಏನೇನ್ ಬೇಕೋ ಎಲ್ಲವನ್ನೂ ತಂದು ಕೊಡ್ತಾರೆ. ರೂಮ್ ಅಲ್ಲೇ ಒಂದು ಹೊಸ ಬೆಡ್ ಇದೆ ಆರಾಮಾಗಿ ರೆಸ್ಟ್ ಮಾಡು ಅಂತ ಹೇಳಿ ಅಲ್ಲಿಂದ  ಹೊರಟು ಹೋಗ್ತಾರೆ.

ಸಾರಿಕಾ ಕಣ್ಣೀರು ತುಂಬಿದ ಕಣ್ಣಲ್ಲೇ ಡೋರ್ ಲಾಕ್ ಮಾಡಿಕೊಂಡು ಬೆಡ್ರೂಮ್ ಒಳಗೆ ಹೋಗ್ತಾಳೆ.

########

ನಯನಾ ಸೀರೆ ಉಟ್ಕೊಂಡು ಸಿಂಗಾರ ಮಾಡಿಕೊಂಡು ಹಾಲಿನ ಗ್ಲಾಸ್ ತೆಗೆದುಕೊಂಡು ರೂಮ್ ಡೋರ್ ಓಪನ್ ಮಾಡ್ತಾ ರೂಮ್ ಒಳಗೆ ಬರ್ತಾಳೆ. ರೂಮ್ ಡೋರ್ ಲಾಕ್ ಮಾಡಿ ನಿಧಾನಕ್ಕೆ ನಾಚಿಕೆ ತುಂಬಿದ ಹೆಜ್ಜೆ ಇಟ್ಕೊಂಡು ಬೆಡ್ ಹತ್ತಿರ ಬಂದು, ನಿಧಾನಕ್ಕೆ ತಲೆ ಎತ್ತಿ ಅಭಿ ನ ನೋಡ್ತಾಳೆ.

ಅಭಿ ಅವಳನ್ನೇ ನೋಡ್ತಾ ನಗ್ತಾ ಇರೋದನ್ನ ನೋಡಿ. ಹಾಲಿನ ಗ್ಲಾಸ್ ನ ಟೇಬಲ್ ಮೇಲೆ ಇಟ್ಟು. ಈಡಿಯಟ್ ನಗ್ತೀಯಾ ಅಂತ ಅವನನ್ನ ಹೊಡಿತಾ ಅವನ ಮೈ ಮೇಲೆ ಬೀಳ್ತಾಳೆ. 

ಅಭಿ,, ನಗದೇ ಮತ್ತೆ ಇನ್ನೇನೆ ಮಾಡ್ಲಿ. ದಿನ ರಾತ್ರಿ ರೂಮ್ ಡೋರ್ ಲಾಕ್ ಮಾಡಿ ಡೈರೆಕ್ಟ್ ಆಗಿ ಬಂದು ನನ್ನ ತಬ್ಬಿಕೊಂಡು ಮಲಗ್ತಾ ಇದ್ದೆ. ಸಡನ್ ಹಾಗಿ ಈ ರೀತಿ ನಾಚಿಕೊಂಡು ಹೆಜ್ಜೆ ಇಟ್ಕೊಂಡು ಬರ್ತಾ ಇದ್ರೆ ನಗದೇ ಇನ್ನೇನ್ ಮಾಡ್ಲಿ.

ನಯನಾ,,,ನಾಚಿಕೊಳ್ತಾ ಹೋಗೋ ನೀನು, ಅವಾಗೇನೋ ಇದರ ಬಗ್ಗೆ ಅಷ್ಟೊಂದು ಆಲೋಚನೆ ಇರಲಿಲ್ಲ. ನಿನ್ನ ಪ್ರೀತಿ ಸಿಕ್ರೆ ಸಾಕು ಇನ್ನೇನು ಬೇಡ ಅನ್ನಿಸ್ತಾ ಇತ್ತು. ಇವಾಗ ಅಂತ ಹೇಳಿ ಸೈಲೆಂಟ್ ಆಗಿ ಬಿಡ್ತಾಳೆ.

ಅಭಿ,,, ಇವಾಗ? ಮುಂದೆ ಹೇಳು ಯಾಕ್ ನಿಲ್ಲಿಸಿ ಬಿಟ್ಟೆ.

ನಯನಾ,,, ನಾಚಿ ನೀರಾಗಿ, ಅವನ ಎದೇಲಿ ಮುಖ ಮುಚ್ಚಿ ಕೊಂಡು,, ತು ಹೋಗೋ ನನಗೆ ನಾಚಿಕೆ ಆಗುತ್ತೆ. 

ಅಭಿ,,, ಅವಳನ್ನ ಸೊಂಟದ ಮೇಲೆ ಎರಡು ಕೈಗಳನ್ನ ಹಾಕಿ, ಗಟ್ಟಿಯಾಗಿ ತಬ್ಬಿಕೊಂಡು,, ಏನು ನಾಚಿಕೆ ಆಗ್ತಾ ಇದೆಯಾ, ಹಾಗಾದ್ರೆ ಆ ನಾಚಿಕೆ ನ ದೂರ ಮಾಡ್ಲಾ.

ನಯನಾ,,, ನಾಚಿಕೊಳ್ತಾ ,,, ಹ್ಮ್.

ಅಭಿ,,, ನಯನಾ ತಲೆಮೇಲೆ ಮುತ್ತು ಒಂದನ್ನ ಕೊಟ್ಟು. ನಿಮ್ಮಮ್ಮ ಏನೋ ನಾವು ಒಂದಾಗಬೇಕು ಅಂತ ಈ ರೀತಿ ಮಾಡಿದ್ದಾರೆ. ಅದ್ರೆ ನನ್ನದೊಂದು ಪ್ರಶ್ನೆ?

ನಯನಾ,, ತಲೆ ಎತ್ತಿ ಅಭಿ ಮುಖ ನೋಡ್ತಾ ಕಣ್ಣಲ್ಲೇ ಏನು ಅಂತ ಕೇಳ್ತಾಳೆ.

ಅಭಿ,,, ಏನಿಲ್ಲಾ, ನೀನು ನಿಮ್ ಅಮ್ಮ ಏನೋ ಮಾತಾಡ್ತಾ ಇದ್ರಿ ಅದು ಓಕೆ, ಬಟ್ ನೀನು ನಿನ್ನ ಮಗಳು ಏನ್ ಮಾಡ್ತಾ ಇದ್ರಿ ಅಷ್ಟೋತ್ತು.

ನಯನಾ,,, ಓ ಅದ,, ಎಲ್ಲಾ ನಿಮ್ ಗುಣಾನೇ ಬಂದಿದೆ ಅವಳಿಗೆ, ಏನೇ ಇದ್ರು ಬೇಗ ತಿಳ್ಕೊಬಿಡ್ತಾಳೆ. ಅವಳಿಗೆ ಅವಳ ತಮ್ಮ ಇಲ್ಲಾ ತಂಗಿ ಆಗಿ ಬರೋವ್ರು ಹೇಗೆ ಇರಬೇಕು ಅಂತ ನನ್ನ ಹತ್ತಿರ ಡಿಮ್ಯಾಂಡ್ ಇಟ್ಟಳು. 

ಅಭಿ,,, ಹೌದ, ಆಗಿದ್ರೆ ಹೀಗೆ ಸುಮ್ನೆ ಮಾತಾಡ್ತಾ ಇರ್ತೀಯ.

ನಯನಾ,,,ಕತ್ತೆ ನೀನೇ ತಾನೇ ಕೇಳಿದ್ದು. ಈಗ ನನ್ನೇ ಸುಮ್ನೆ ಮಾತಾಡ್ತಾ ಇದ್ದಿಯಾ ಅಂತ ಕೇಳ್ತಿಯಾ. ಹೋಗೋ ನಾನ್ ಹೋಗ್ತೀನಿ. ಅಂತ ಹೇಳಿ ಎದ್ದೇಳೋಕೆ ಹೋಗ್ತಾಳೆ.

ಅಭಿ ಅವಳನ್ನ ಗಟ್ಟಿಯಾಗಿ ತಬ್ಬಿಕೊಂಡು ಎಲ್ಲಿಗೆ ಹೋಗ್ತಿಯ. ನನ್ನ ಮಗಳು ಅಷ್ಟು ಡಿಮ್ಯಾಂಡ್ ಇಟ್ಟಿರೋವಾಗ ಸುಮ್ನೆ ಇರೋಕೆ ಆಗುತ್ತಾ, ಅಂತ ಹೇಳಿ ಅವಳನ್ನ ಮುದ್ದು ಮಾಡೋಕೆ ಶುರು ಮಾಡ್ತಾನೆ. ನಯನಾ ಕೂಡ ಅವನಿಗೆ ಸೋತು ಹೋಗ್ತಾಳೆ. ಇಬ್ಬರು ಒಬ್ಬರನೊಬ್ಬರು ಸೋತು ಗೆಲ್ತಾರೆ. 

****

ಬೆಳಿಗ್ಗೆ 8 ಗಂಟೆಗೆ ನಯನಾ ಗೆ ಎಚ್ಚರ ಆಗುತ್ತೆ. ಕಣ್ ಬಿಟ್ಟು ನೋಡ್ತಾಳೆ. ಅಭಿ ಕಣ್ಮುಚ್ಚಿ ಕೊಂಡು ಮಲಗಿರ್ತಾನೆ. ನಯನಾ ಅವಳ ಸ್ಥಿತಿ ನ ನೋಡಿ ನಾಚಿಕೊಂಡು, ಅಭಿ ಕೆನ್ನೆಗೆ ಮುತ್ತಿಟ್ಟು, ಎದ್ದು ಸ್ನಾನ ಮಾಡೋಕೆ ಹೋಗ್ತಾಳೆ. ಸ್ವಲ್ಪ ಸಮಯದ ನಂತರ ನಯನಾ ಸ್ನಾನ ಮಾಡಿಕೊಂಡು ಬಾತ್ರೂಮ್ ಡೋರ್ ನ ಓಪನ್ ಮಾಡ್ತಾಳೆ. ಅಭಿ ಸಡನ್ ಆಗಿ ಬಾತ್ರೂಮ್ ಒಳಗೆ ಸೇರಿ ಡೋರ್ ನ ಲಾಕ್ ಮಾಡಿ ಬಿಡ್ತಾನೆ. 

***

ಸುಭದ್ರ ಗಂಡ ನ ಜೊತೆಗೆ ತಿಂಡಿ ಮಾಡ್ತಾ ಗಡಿಯಾರ ದ ಕಡೆಗೆ ನೋಡ್ತಾ ರೇ  10 ಗಂಟೆ ಆಗಿರುತ್ತೆ.  ವಿಶ್ವ ತಿಂಡಿ ತಿಂದು ಸೂಪರ್ ಮಾರ್ಕೆಟ್ ಗೆ ಹೋಗ್ತಾರೆ. 10 30 ಕ್ಕೆ ನಯನಾ ರೂಮ್ ಡೋರ್ ಓಪನ್ ಮಾಡಿಕೊಂಡು, ಬರ್ತಾ ಅಡುಗೆ ಮನೆ ಕಡೆಗೆ ಹೋಗ್ತಾಳೆ. ಅಮ್ಮನ ನೋಡಿ ಸಾರೀ ಅಮ್ಮ ಅದು. ಸುಭದ್ರ ನಗ್ತಾ  ತಿಂಡಿ ಮಾಡು ಹೋಗು, ಅಭಿ ಎದ್ನ ಅಂತ ಕೇಳ್ತಾರೆ. ನಯನಾ,, ಹ್ಮ್ ರೆಡಿ ಆಗ್ತಾ ಇದ್ದಾರೆ ಸೂಪರ್ ಮಾರ್ಕೆಟ್ ಗೆ ಹೋಗೋಕೆ ಅಂತ ಹೇಳ್ತಾ ಡೈನಿಂಗ್ ಟೇಬಲ್ ಮೇಲೆ ತಿಂಡಿ ಅರೇಂಜ್ ಮಾಡೋಕೆ ಹೋಗ್ತಾಳೆ. ಸ್ವಲ್ಪ ಸಮಯದ ನಂತರ ಅಭಿ ಬಂದು ತಿಂಡಿ ತಿಂದು ಸೂಪರ್ ಮಾರ್ಕೆಟ್ ಗೆ ಹೋಗ್ತಾನೆ.

@@@@@@@@@@@@@@@@@@@@@@@@@