vyoma - 2 in Kannada Spiritual Stories by S Pr books and stories PDF | ವ್ಯೋಮ - 2

The Author
Featured Books
  • ಗ್ರಹಣ

    ಮಲೆನಾಡಿನ ಪಶ್ಚಿಮ ಘಟ್ಟಗಳ ಮಡಿಲಲ್ಲಿ ಹೇಮಕೂಟ ಎಂಬ ಪುರಾತನ ಬಂಗಲೆ ಇತ್ತ...

  • ರಕ್ತ ಲಿಪಿಯ ಚಿರಂಜೀವಿ - 16

    ಕಲ್ಪಳ್ಳಿ ಸ್ಮಶಾನದ ಆ ಭೀಕರ ರಾತ್ರಿಯ ಘಟನೆಗಳ ನಂತರ ಆದರ್ಶ್ ಎಚ್ಚರಗೊಂಡ...

  • ಕಾಲದ ನೆರಳು

    ಬೆಂಗಳೂರಿನ ಹಳೆ ಬನಶಂಕರಿಯ ಒಂದು ಕಿರಿದಾದ ಗಲ್ಲಿಯಲ್ಲಿ ಕಾಲಚಕ್ರ ಎಂಬ ಹ...

  • ವ್ಯೋಮ - 2

    ಜನಗಳು ಓಡಾಡೋ ಹೆಜ್ಜೆಗಳ ಸದ್ದು, ಜೊತೆಗೆ ಮಾತಿನ ಸದ್ದು, ಇದು ಸಾಲದು ಅಂ...

  • ರಕ್ತ ಲಿಪಿಯ ಚಿರಂಜೀವಿ - 15

    ಫ್ರೀಡಂ ಪಾರ್ಕ್‌ನ ಆ ಕರಾಳ ಸುರಂಗದಿಂದ ಹೊರಬಂದಾಗ ಆದರ್ಶ್‌ಗೆ ಬೆಂಗಳೂರು...

Categories
Share

ವ್ಯೋಮ - 2

ಜನಗಳು ಓಡಾಡೋ ಹೆಜ್ಜೆಗಳ ಸದ್ದು, ಜೊತೆಗೆ ಮಾತಿನ ಸದ್ದು, ಇದು ಸಾಲದು ಅಂತ ವಾಹನಗಳ ಶಬ್ದ,  ಇಂತ ಶಬ್ದ ದಲ್ಲೂ ಒಬ್ಬ ವ್ಯಕ್ತಿ ಆರಾಮಾಗಿ ಬಸ್ ಅಲ್ಲಿ ನಿದ್ದೆ ಮಾಡ್ತಾ ಇರ್ತಾನೆ...
ಬಸ್ ಕಂಡಕ್ಟರ್ ಮಲಗಿರೋ ವ್ಯಕ್ತಿ ನಾ ನೋಡಿ,, ಹಲೋ ಮಿಸ್ಟರ್ ಎದ್ದೇಳಿ ಇದೆ ಕೊನೆ ಸ್ಟಾಪ್ ಅಂತ ಅವನನ್ನ ತಟ್ಟಿಸಿ ಎಬ್ಬಿಸ್ತಾರೆ. ಅ ವ್ಯಕ್ತಿ  ಎದ್ದು ಅವನ ಬ್ಯಾಗ್ ತಗೊಂಡು,  ಒಂದು ಚೀಟಿ ನಾ ಕಂಡಕ್ಟರ್ ಗೆ ತೋರಿಸಿ, ಸರ್ ಈ ಅಡ್ರೆಸ್ ಗೆ ಹೇಗೆ ಹೋಗಬೇಕು ಅಂತ ಕೇಳ್ತಾನೆ..
ಕಂಡಕ್ಟರ್ ಸಿಟಿಗೆ ಹೊಸಬ ನಾ?
ಹೌದು ಸರ್..
ಕಂಡಕ್ಟರ್ ಮೇಲಿಂದ ಕೆಳಕ್ಕೆ ಒಂದು ಸಲ ನೋಡಿ.  ಹುಷಾರು ಸಿಟಿ  ಉದ್ದಾರ ನು ಮಾಡುತ್ತೆ ಜೊತೆಗೆ ಹಾಳು ಕೂಡ ಮಾಡುತ್ತೆ.  ಎರಡು ನಿನ್ನ ಕೈಲೇ ಇರೋದು ಅಂತಹೇಳಿ, ಹೇಗೆ ಹೋಗಬೇಕು ಅಂತ ಹೇಳಿ ಕಳಿಸ್ತಾನೆ.
ಥ್ಯಾಂಕ್ಸ್ ಸರ್ ಅಂತ ಹೇಳಿ  ಬಸ್ ಇಳಿದು ಹೊರಗಡೆ ಹೋಗ್ತಾನೆ.

ನಂತರ ಇನ್ನೊಂದು ಬಸ್ ನಾ ಹತ್ತಿ ಅಲ್ಲಿಂದ ಹೊರಟು ಅಡ್ರೆಸ್   ಅಲ್ಲಿ ಬರೆದಿದ್ದ ಲ್ಯಾಂಡ್ ಮಾರ್ಕ್ ಹತ್ತಿರ ಬಂದು ಇಳಿತಾನೆ.
ನಂತರ ಮೊಬೈಲ್ ತೆಗೆದುಕೊಂಡು ಚೀಟಿ ಅಲ್ಲಿ ಇದ್ದಾ ನಂಬರ್ ಗೆ ಕಾಲ್ ಮಾಡ್ತಾನೆ.
ಅ ಕಡೆ ವ್ಯಕ್ತಿ ಕಾಲ್ ಪಿಕ್ ಮಾಡಿ ಯಾರು ಅಂತ ಕೇಳ್ತಾರೆ.
ಸರ್ ನಾನು,, ಅದೇ ಬಸಣ್ಣ ಹೇಳಿದ್ರು ಅಲ್ವಾ.
ನೀನಾ, ಇವಾಗ ಎಲ್ಲಿ ಇದ್ದಿಯಾ?
ನೀವ್ ಹೇಳಿದ ಅಡ್ರೆಸ್ ಅಲ್ಲೇ ಇದ್ದೀನಿ ಸರ್, ಇಲ್ಲೊಂದು  ಟಿವಿ ಷೋ ರೂಂ ಇದೆ ಅದರ ಹತ್ತಿರ ಇದ್ದೀನಿ 
ಸರಿ ಅಲ್ಲೇ ಇರು 10 ನಿಮಿಷದಲ್ಲಿ ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡ್ತಾರೆ.

20 ನಿಮಿಷದ ನಂತರ  ಮೊಬೈಲ್ ರಿಂಗ್ ಆಗುತ್ತೆ.. ಪಿಕ್ ಮಾಡಿ ಸರ್ ಹೇಳಿ ಅಂತಾನೆ.
ಅ ಕಡೆ ವ್ಯಕ್ತಿ ಎಲ್ಲಿದ್ದೀಯ ನಾನು ಷೋ ರೂಂ ಹತ್ತಿರ ಇದ್ದೀನಿ.
ಸರ್ ಇಲ್ಲೇ ಇದ್ದೀನಿ,  ಬ್ಲೂ ಜೀನ್ಸ್, ಬ್ಲಾಕ್ ಶರ್ಟ್, ಕೈಲಿ  ರೆಡಿ ಕಲರ್ ಬ್ಯಾಗ್.
ಅ ಕಡೆ ವ್ಯಕ್ತಿ ಅ ಕಾಣಿಸಿದೆ ಅಂತ ಹೇಳಿ ಕಾಲ್ ಕಟ್ ಮಾಡಿ ಬರ್ತಾರೆ.  
ಬೈಕ್ ನಿಲ್ಲಿಸಿ ನೀನೇನಾ ಬಸಣ್ಣ ಹೇಳಿದ ವ್ಯಕ್ತಿ.
ಹೌದು ಸರ್..
ಏನ್ ಹೆಸರು.
ಸರ್ ಋಷಿತ್ ಅಂತ 
ನನ್ನ ಹೆಸರು,  ಮೂರ್ತಿ ಅಂತ ಸರಿ ಕುತ್ಕೋ ಅಂತ ಹೇಳಿ ಬೈಕ್ ಸ್ಟಾರ್ಟ್ ಮಾಡ್ತಾರೆ.
ಮೂರ್ತಿ... ಬೈಕ್ ಡ್ರೈವ್ ಮಾಡ್ತಾ, ಎಷ್ಟು ಓದಿದ್ದೀಯ?
ಋಷಿತ್...  ಸರ್ ಡಿಪ್ಲೊಮೊ.
ಮೂರ್ತಿ... ಗುಡ್,  ಬಟ್ ಅದ್ರೆ ನಿನಗೆ ನೋಡಿರೋ ಕೆಲಸ ಮಾತ್ರ ನಿನ್ನ ಓದಿಗೆ ತಕ್ಕ ಹಾಗೇ ಇರೋದಿಲ್ಲ. 
ಋಷಿತ್... ಪರ್ವಾಗಿಲ್ಲ ಸರ್ ಯಾವ್ ಕೆಲಸ ಬೇಕಾದ್ರು ಮಾಡ್ತೀನಿ.
ಮೂರ್ತಿ... ಹೀಗೆ ಹೇಳಿ ಕೆಲಸ ನೋಡಿ ಬೇಡ ಅಂದ್ರೆ? 
ಋಷಿತ್... ಇಲ್ಲಾ ಸರ್, ಹಾಗೇ ಹೇಳೋವನೇ ಹಾಗಿದ್ರೆ ಅಪ್ಪ ಅಮ್ಮ ತಂಗಿ ನಾ ಊರನ್ನ ಬಿಟ್ಟು ಇಲ್ಲಿಗೆ ಇಷ್ಟು ದೂರ ಏನಕ್ಕೆ ಬರ್ತಾ ಇದ್ದೆ. 
ಮೂರ್ತಿ... ಅದು ನಿಜಾನೇ, ಅಂತ ಹೇಳಿ ಬೈಕ್ ನಾ ಡ್ರೈವ್ ಮಾಡೋಕೆ ಶುರು ಮಾಡ್ತಾರೆ.

ಸ್ವಲ್ಪ ಸಮಯದ ನಂತರ ಒಂದು ಮನೆ ಮುಂದೆ ನಿಲ್ಲಿಸ್ತಾರೆ ಬೈಕ್ ನಾ.
ಮೂರ್ತಿ,,, ಇದೆ ನಮ್ಮನೆ.  ಮೇಲೆಗಡೆ  ಸಿಂಗಲ್ ರೂಂ ಮನೆ ಇದೆ ನೀನು ಅಲ್ಲೇ ಇರ್ತೀಯಾ.  ಬೆಡ್, ಮತ್ತೆ ಅಡುಗೆ ಸಾಮಾನು ಸ್ವಲ್ಪ ಇದೆ. ನಿನಗೆ ಅಡುಗೆ ಬರುತ್ತೆ ಅಲ್ವಾ?
ಋಷಿತ್,,, ಅ ಬರುತ್ತೆ ಸರ್. 
ಮೂರ್ತಿ,,, ಸುಮ್ನೆ ಕೇಳ್ದೆ ಕಣಯ್ಯಾ,  ನಿನಗೆ ಡೈಲಿ ನಮ್ ಮನೇಲೆ ಊಟ,  ಬೆಳ್ಳಿಗೆ ರಾತ್ರಿ ಗೆ. ಮಧ್ಯಾಹ್ನ ಕ್ಕೆ ಹೇಗಿದ್ರು  ಕೆಲಸ ಮಾಡೋ ಜಾಗದಲ್ಲಿ ಊಟ ಕೊಡ್ತಾರೆ. 
ಋಷಿತ್,,, ನನ್ನಿಂದ ನಿಮಗೆ ಯಾಕ್ ತೊಂದ್ರೆ ಸರ್, ನಾನ್ ಅಡುಗೆ ಮಾಡ್ಕೋತೀನಿ.
ಮೂರ್ತಿ,,, ಮಾಡ್ಕೋ ಬೇಡ ಅನ್ನಲ್ಲ, ಅದ್ರೆ ನಮ್ ಮನೇಲಿ ಊಟ ಮಾಡ್ಕೊಂಡು ಹೋಗಿ ಆಮೇಲೆ ನಿನ್ ಮಾಡಿರೋ ಅಡುಗೆ ನಾ ತಿನ್ನು ಸರಿನಾ ಬಾ ಅಂತ ಹೇಳಿ ಮನೆ ಒಳಗೆ ಕರ್ಕೊಂಡು ಹೋಗ್ತಾ,   ಕಲ್ಪನಾ ಅಂತ ಕರೀತಾ ಸೋಫಾ ಮೇಲೆ ಕುತ್ಕೊಂಡು, ಋಷಿತ್ ನಾ ನೋಡಿ ಕುತ್ಕೋ ಅಂತಾರೆ.
ಋಷಿತ್ ಬ್ಯಾಗ್ ನಾ ಸೈಡ್ ಗೆ ಇಟ್ಟು ಸೋಫಾ ಮೇಲೆ ಕೂತ್ಕೋತಾನೆ. 

ಕಲ್ಪನಾ,, ಏನ್ರಿ ನೀವು  ನೆಮ್ಮದಿಯಾಗಿ ತಿಂಡಿ ಮಾಡೋಕು ಬಿಡೋದಿಲ್ಲ ಅಂತ ಹೇಳ್ತಾ ಹಾಲ್ ಗೆ ಬರ್ತಾ ಋಷಿತ್ ನಾ ನೋಡಿ ಯಾರ್ ಇವರು ಅಂತ ಕೇಳ್ತಾರೆ.
ಮೂರ್ತಿ... ರಾತ್ರಿ ನಿನಗೆ ಹೇಳ್ದೆ ಅಲ್ವಾ, ನನ್ನ ಫ್ರೆಂಡ್ ಒಬ್ಬ ಹುಡುಗನನ್ನ ಕೆಲಸಕ್ಕೆ ಅಂತ ಕಳಿಸ್ತಾ ಇದ್ದಾನೆ ಅಂತ, ಅ ಹುಡುಗನೇ ಇವನು ಹೆಸರು ಋಷಿತ್ ಅಂತ.
ಋಷಿತ್.. ಎದ್ದು ಅಮ್ಮ ನಮಸ್ತೆ ಅಂತ ಕೈ ನಮಸ್ಕಾರ ಮಾಡ್ತಾನೆ.
ಕಲ್ಪನಾ,,, ನಮಸ್ತೆ ಮಗ, ಕುತ್ಕೋ ಹೋಗಿ ಕಾಫಿ. ಮಾಡ್ಕೊಂಡು ಬರ್ತೀನಿ.
ಮೂರ್ತಿ... ಜೊತೆಗೆ ತಿಂಡಿ ಕೂಡ ಮಾಡು,  ಇವತ್ತೇ ಕೆಲಸಕ್ಕೆ ಕರ್ಕೊಂಡು ಹೋಗಿ ಸೇರಿಸಬೇಕು.
ಕಲ್ಪನಾ,,, ಏನ್ರಿ ನೀವು ಈಗಷ್ಟೇ ಅ ಮಗ ಬಂದಿದ್ದಾನೆ ಆಗ್ಲೇ ಕೆಲಸ ಅಂತ ಇದ್ದೀರಾ?
ಮೂರ್ತಿ... ಅದು ಆಗಲ್ವೆ,  ಕೆಲಸಕ್ಕೆ ಜಾಯಿನ್ ಮಾಡಿಸಿದರೆ ಒಂದು ಕೆಲಸ ಮುಗಿಯುತ್ತೆ ಅಲ್ವಾ. ನಿನ್ ಹೋಗಿ ತಿಂಡಿ ರೆಡಿ ಮಾಡು ಅಂತ ಹೇಳಿ, ಋಷಿ ಬಾ ರೂಂ ತೋರಿಸ್ತೀನಿ ಅಂತ ಹೇಳಿ ಕರ್ಕೊಂಡು ಹೋಗ್ತಾರೆ..
ಋಷಿತ್ ಬ್ಯಾಗ್ ತೆಗೆದುಕೊಂಡು ಅವರ ಹಿಂದೆ ಹೋಗ್ತಾರೆ.

ಮೂರ್ತಿ ರೂಂ ಡೋರ್ ಓಪನ್ ಮಾಡಿ ಇದೆ ಕಣಯ್ಯಾ ನಿನ್ನ ರೂಂ. ಹೇಗಿದೆ,?
ಋಷಿತ್,,, ಚೆನ್ನಾಗಿದೆ ಸರ್, ಬಾಡಿಗೆ, ಅಡ್ವಾನ್ಸ್ ಹೇಳಿದ್ರೆ?
ಮೂರ್ತಿ,,,. ಮೊದಲು ಕೆಲಸಕ್ಕೆ ಸೇರು ಆಮೇಲೆ ಮಾತಾಡೋಣ. ಅಂತ ಹೇಳಿ ನೀನು ರೆಡಿ ಆಗಿ ಕೆಳಗೆ ಬಾ ತಿಂಡಿ ತಿಂದು ಕೆಲಸದ ಹತ್ತಿರ ಹೋಗೋಣ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾರೆ. 
ಋಷಿತ್,, ಬ್ಯಾಗ್ ಅಲ್ಲಿ ಇರೋ ಬಟ್ಟೆಗಳನ್ನ ತೆಗೆದು ಕಬೋರ್ಡ್ ಅಲ್ಲಿ ಜೋಡಿಸಿ, ಜೊತೆಗೆ ತಂದಿದ್ದ ಫ್ಯಾಮಿಲಿ ಫೋಟೋ ನಾ ಗೋಡೆಗೆ ನೇತಾಕಿ,  ಸ್ನಾನ ಮಾಡೋಕೆ ಹೋಗ್ತಾನೆ... 
ಸ್ವಲ್ಪ ಸಮಯದ ನಂತರ ಋಷಿತ್ ರೆಡಿ ಆಗಿ ಮೂರ್ತಿ ಮನೆಗೆ ಬರ್ತಾನೇ.
ಕಲ್ಪನಾ,,, ಬಾ ಮಗ ಬಂದು ತಿಂಡಿ ತಿನ್ನು. ಅಂತ ಹೇಳಿ ಅವನಿಗೆ ತಿಂಡಿ ಕೊಡ್ತಾರೆ.
ಇಬ್ಬರು ತಿಂಡಿ ತಿಂದ ಮೇಲೆ.  ಮೂರ್ತಿ ಹೊರಡೋಣ್ವಾ ಅಂತ ಕೇಳ್ತಾರೆ.
ಋಷಿತ್,, ಸರ್ ಒಂದು ನಿಮಿಷ ಅಂತ ಹೇಳಿ. ಕಲ್ಪನಾ ಅವರ ಕಡೆ ನೋಡಿ,  ಅಮ್ಮ ಇವತ್ತಿಗೆ ನಾನು ಕೆಲಸ ಕೊಡಿ ಅಂತ ಯಾರ ಹತ್ತಿರಾನೂ ಕೇಳೋಕೆ ಹೋಗಿಲ್ಲ,  ಮೊದಲ ಸಲ ಹೋಗ್ತಾ ಇದ್ದೀನಿ ನನಗೆ ಆಶೀರ್ವಾದ ಮಾಡಿ ಅಂತ ಕೇಳ್ತಾ ಕಾಲಿಗೆ ಮುಗಿತಾನೆ.
ಕಲ್ಪನಾ,,, ಸಂತೋಷ ದಿಂದ ಒಳ್ಳೆದಾಗಲಿ ಮಗ ಹೋಗಿ ಬಾ ಅಂತ ಆಶೀರ್ವಾದ ಮಾಡಿ ಕಳಿಸ್ತಾರೆ ..

ಮೂರ್ತಿ ಅವರು ಬೈಕ್ ನಾ ಸ್ಟಾರ್ ಮಾಡಿ, ಋಷಿತ್ ನಾ ಕೂರಿಸಿಕೊಂಡು, ಡ್ರೈವ್ ಮಾಡ್ತಾ,  ನೋಡು ಋಷಿತ್  ಕೆಲಸ ಸಿಕ್ಕಿದ ಮೇಲೆ  ಸಂಪಾದನೆ ಮಾಡಿ ಬದುಕಿನ ಬಗ್ಗೆ ಯೋಚ್ನೆ ಮಾಡು,  ಈ ದುಡ್ಡು ಇರೋವ್ರು ಮಾಡೊತರ ಶೋಕಿ ನಾ ಮಾಡೋಕೆ ಹೋಗಿ ಲೈಫ್ ನಾ ಹಾಳು ಮಾಡ್ಕೋಬೇಡ, ಈ ಸಿಟಿ ನಿನಗೆ ಎಲ್ಲಾನು ಕಲಿಸುತ್ತೆ, ಎಲ್ಲಾನು ಕೊಡುತ್ತೆ, ಯಾವುದು ಬೇಕೋ ಯಾವುದು ಬೇಡ್ವೊ ಅಂತ ನೀನೇ ನಿರ್ಧಾರ ಮಾಡಿ ತಗೋಬೇಕು.  ನಿಮ್ಮಪ್ಪ ನನಗೆ  ಚಿಕ್ಕವಯಸ್ಸಿನಿಂದ ಫ್ರೆಂಡ್,  ಅವನಿಗೆ ಏನ್ ಕಷ್ಟ ಆಯಿತೋ ವಿದ್ಯೆ ನಾ ಅರ್ಧಕ್ಕೆ ನಿಲ್ಲಿಸಿ ಬಿಟ್ಟ. ನನ್ನ ಹತ್ತಿರ ಯಾವತ್ತು ಏನು ಕೇಳಿದವನೇ ಅಲ್ಲ,  ನಿನ್ನ ವಿಷಯ ಹೇಳಿ ಸಹಾಯ ಕೇಳಿದ, ಅದಕ್ಕೆ ನಿನಗೆ ಸಹಾಯ ಮಾಡ್ತಾ ಇದ್ದೀನಿ. ಅವನ ಮನಸ್ಸಿಗೆ ನೋವಾಗೋ ರೀತಿ ನಡ್ಕೋ ಬೇಡ ಸರಿನಾ? 
ಋಷಿತ್,,, ಸರಿ ಸರ್. 

ನಂತರ ಇಬ್ಬರು ಒಂದು ಶಾಪಿಂಗ್ ಮಾಲ್ ಹತ್ತಿರ ಬರ್ತಾರೆ.  ಮೂರ್ತಿ ಬೈಕ್ ನಿಲ್ಲಿಸಿ. ಇದು ಈ ಸಿಟಿಲಿ ಇರೋ ದೊಡ್ಡ ಶಾಪಿಂಗ್ ಮಾಲ್,  ಇಲ್ಲಿ ಸಿಗದೇ ಇರೋ ವಸ್ತು ಅಂತ ಏನು ಇಲ್ಲಾ,  ಈ ಶಾಪಿಂಗ್ ಮಾಲ್ ಓನರ್ ಹೆಸರು ಚಾಮುಂಡೇಶ್ವರಿ ಅಂತ  ಇಂತ ಶಾಪಿಂಗ್ ಮಾಲ್ ಅವರಿಗೆ 30  ಇದ್ದಾವೆ ದೇಶದ ತುಂಬಾ. ತುಂಬಾ ಕೋಪಿಷ್ಟಿ,  ಹಾಗಂತ ಕೆಟ್ಟವರು ಅಲ್ಲ ಒಳ್ಳೆಯವರಿಗೆ ಒಳ್ಳೆಯವರು.  ನಿನ್ ಹೇಗೆ ನಡ್ಕೋತಿಯೋ ಅದರ ಮೇಲೆ  ಅವರ ನಡೆ ಇರುತ್ತೆ. ಅರ್ಥ ಆಯ್ತಾ. 
ಋಷಿತ್,,, ಅರ್ಥ ಆಯ್ತು ಸರ್.
ಮೂರ್ತಿ ಅರ್ಥ ಅದ್ರೆ ಸಾಕು, ಬಾ ಅಂತ ಹೇಳಿ ಕರ್ಕೊಂಡು ಸೀದಾ ಚಾಮುಂಡೇಶ್ವರಿ ಆಫೀಸ್ ಹತ್ತಿರ ಹೋಗ್ತಾರೆ.
ಚಾಮುಂಡೇಶ್ವರಿ pa  ಸಿಯಾ ಇಬ್ಬರನ್ನು ನೋಡಿ ಸರ್ ಒಂದು ನಿಮಿಷ ನಿಂತುಕೊಳ್ಳಿ, ಎಲ್ಲಿಗೆ ಹೋಗ್ತಾ ಇದ್ದೀರಾ? 

ಮೂರ್ತಿ,,, ಮೇಡಂ ಅದು ಮೇಡಂ ನಾ ನೋಡೋಕೆ ಹೋಗ್ತಾ ಇದ್ದೀನಿ.
ಸಿಯಾ,,, ಒಂದು ನಿಮಿಷ ಇಲ್ಲೇ ಇರಿ, ನಾನ್ ಹೋಗಿ ಕೇಳ್ಕೊಂಡು ಬರ್ತೀನಿ ಅಂತ ಹೇಳಿ. ಅವರನ್ನ ಕೂರಿಸಿ ಒಳಗೆ ಹೋಗ್ತಾಳೆ..

ಆಫೀಸ್ ಒಳಗಡೆ.. 
ಚಾಮುಂಡೇಶ್ವರಿ ಕಾಲ್ ಅಲ್ಲಿ ಮಾತಾಡ್ತಾ,  ಕೋಪದಿಂದ ಮೊದಲು ಅವನ ಮೇಲೆ ಕೇಸ್ ಫೈಲ್ ಮಾಡಿ, ಜೀವನ ಪೂರ್ತಿ ಜೈಲಲ್ಲಿ ಕೊಳಿಯೋ ಹಾಗೇ ಮಾಡಬೇಕು ಅಂತ ಹೇಳಿ ಕಾಲ್ ಕಟ್ ಮಾಡಿ, ಸಿಯಾ ಕಡೆ ನೋಡಿ ಹೇಳು ಸಿಯಾ ಅಂತಾರೆ.
ಸಿಯಾ,,, ಮೇಡಂ ನಮ್ ಫ್ಲೋರ್ ಮ್ಯಾನೇಜರ್ ಮೂರ್ತಿ ಅವರು ನಿಮ್ಮನ್ನ ನೋಡೋಕೆ ಅಂತ ಒಬ್ಬ ಹುಡುಗನ ಜೊತೆಗೆ ಬಂದಿದ್ದಾರೆ.
ಚಾಮುಂಡೇಶ್ವರಿ,,, ಹೌದ ಅವರನ್ನ ಒಳಗೆ ಬರೋಕೆ ಹೇಳು.
ಸಿಯಾ,,, ಓಕೆ ಮೇಡಂ ಅಂತ ಹೇಳಿ, ಹೊರಗಡೆ ಬಂದು ಮೂರ್ತಿ ನಾ ನೋಡಿ ಸರ್ ನೀವು ಹೋಗಿ ಅಂತ ಹೇಳಿ ಒಳಗೆ ಕಳಿಸ್ತಾಳೆ.

ಮೂರ್ತಿ ಥ್ಯಾಂಕ್ಸ್ ಮೇಡಂ ಅಂತ ಹೇಳಿ ಋಷಿತ್ ಜೊತೆಗೆ  ಆಫೀಸ್ ಒಳಗೆ ಹೋಗ್ತಾರೆ.

ಮೂರ್ತಿ.. ಚಾಮುಂಡೇಶ್ವರಿ ಅವರನ್ನ ನೋಡಿ. ನಮಸ್ತೆ ಮೇಡಂ ಅಂತ ಕೈ ಮುಗಿತಾರೆ.
ಚಾಮುಂಡೇಶ್ವರಿ,,, ನಮಸ್ತೆ ಕೂತ್ಕೊಳ್ಳಿ, ಅಂತ ಹೇಳಿ  ಋಷಿತ್ ಕಡೆ ನೋಡಿ, ಇವರು?
ಮೂರ್ತಿ,,, ಮೇಡಂ ನನ್ನ ಫ್ರೆಂಡ್ ಮಗ,  ಕೆಲಸಕ್ಕೆ ಅಂತ ಬಂದಿದ್ದಾನೆ ಸಿಟಿಗೆ, ಅದಕ್ಕೆ ನಿಮ್ಮತ್ರ ಹೇಳಿ ಏನಾದ್ರೂ ಕೆಲಸ ಇದ್ರೆ?
ಚಾಮುಂಡೇಶ್ವರಿ,,, ಮೂರ್ತಿ ಅವರೇ ನಿಮಗೆ ಗೊತ್ತಿಲ್ದೆ ಇರೋದು ಏನಿದೆ ಹೇಳಿ, ಈಗ ನಿಂತಲ್ಲೇ ಕೆಲಸ ಅಂದ್ರೆ?
ಮೂರ್ತಿ,,, ಮೇಡಂ ತುಂಬಾ ಒಳ್ಳೆ ಹುಡುಗ,  ಯಾವುದಾದ್ರೂ ಕೆಲಸ ಆದ್ರು ಪರ್ವಾಗಿಲ್ಲ ಮಾಡ್ತಾನೆ ನೀವೇ ಸ್ವಲ್ಪ ದೊಡ್ಡ ಮನಸ್ಸು ಮಾಡಬೇಕು ಅಂತಾರೆ. 
ಋಷಿತ್,,, ಮೂರ್ತಿ ಅವರ ಕಡೆ ನೋಡಿ, ಸರ್ ಕೆಲಸ ಇದ್ದಿದ್ರೆ ನಾನ್ ಅದಕ್ಕೆ ಯೋಗ್ಯನೋ ಅಲ್ವೋ ಅಂತ ನೋಡಿ ಅವರೇ ಕೆಲಸಾನ ಕೊಡ್ತಾ ಇದ್ರು ಅಲ್ವಾ, ಕೆಲಸಾನೇ ಇಲ್ಲಾ ಅಂದಾಗ ನಾವು ಅವರನ್ನ ಕೇಳೋದು ತಪ್ಪಾಗುತ್ತೆ, ಅವರಿಗೆ ತೊಂದ್ರೆ ಕೊಡೋದು ಬೇಡ ಬನ್ನಿ, ಅಂತ ಹೇಳಿ ಚಾಮುಂಡೇಶ್ವರಿ ಅವರ ಕಡೆ ನೋಡಿ, ಕೈ ಮುಗಿದು ಥ್ಯಾಂಕ್ ಯು ಮೇಡಂ,  ಅಂತ ಹೇಳ್ತಾ ಮೂರ್ತಿ ಕಡೆ ನೋಡಿ ಬನ್ನಿ ಸರ್ ಅಂತ ಹೇಳ್ತಾನೆ. 
ಮೂರ್ತಿ ಅವರು ಎದ್ದು ನಿಂತು ಋಷಿತ್ ಜೊತೆಗೆ ಹೋಗೋವಾಗ  ಚಾಮುಂಡೇಶ್ವರಿ ಅವರು ಒಂದು ನಿಮಿಷ ನಿಂತು ಕೊಳ್ಳಿ ಅಂತ ಹೇಳಿ ಎದ್ದು ನಿಲ್ತಾರೆ.

ಇಬ್ಬರು ಅವರ ಕಡೆ ತಿರುಗಿ ನೋಡ್ತಾರೆ. 
ಚಾಮುಂಡೇಶ್ವರಿ ಅವರು ಋಷಿತ್ ಕಡೆ ನೋಡಿ, ಏನು ಸ್ವಾಭಿಮಾನ ನಾ? ಇಲ್ಲಾ ಇದಿಲ್ಲ ಅಂದ್ರೆ ಇನ್ನೊಂದು ಕೆಲಸ ಅನ್ನೋ ಅಹಂಕಾರ ನಾ? ಅಂತ ಕೇಳ್ತಾರೆ.
ಋಷಿತ್,,, ಎರಡು ಅಲ್ಲ ಮೇಡಂ, ನಿಮ್ಮ ಸಮಯನ ಹಾಳು ಮಾಡೋಕೆ ಇಷ್ಟ ಇಲ್ಲಾ.  ಯಾಕಂದ್ರೆ ನಿಮ್ಮಂಥವರಿಗೆ ಮಾತು ಸಮಯ ಎರಡು ತುಂಬಾ ಮುಖ್ಯ.  ಇಷ್ಟು ದೊಡ್ಡ ಶಾಪಿಂಗ್ ಮಾಲ್ ಗೆ ಓನರ್ ಆಗಿ ತುಂಬಾ ಮರ್ಯಾದೆ ಯಿಂದ ನಡೆದುಕೊಂಡ್ರಿ.  ಕೆಲಸ ಬಗ್ಗೆ ಕೇಳಿದಾಗ ನಿಮಗೆ ಗೊತ್ತಿಲ್ದೆ ಇರೋದು ಏನಿದೆ ಅಂತ ಹೇಳಿದ್ರಿ, ಅದರಲ್ಲೇ ಗೊತ್ತಾಗುತ್ತೆ ನಿಮ್ಮ ಹತ್ತಿರ ಕೆಲಸ ಮಾಡೋವ್ರಿಗೆ ನೀವು ಎಷ್ಟು ಗೌರವ ಕೊಡ್ತೀರಾ ಅಂತ.  ಹಾಗಿರೋವಾಗ  ನಿಮ್ಮ ಹತ್ತಿರ ಸ್ವಾಭಿಮಾನ, ಅಹಂಕಾರ ನಾ ಏನಕ್ಕೆ ತೋರಿಸೋಕೆ ಹೋಗಲಿ.     
ಚಾಮುಂಡೇಶ್ವರಿ,,,, ಏನ್ ನಿನ್ನ ಹೆಸರು ಅಂತ ಕೇಳ್ತಾರೆ.
ಋಷಿತ್... ಋಷಿತ್ ಮೇಡಂ..
ಚಾಮುಂಡೇಶ್ವರಿ ಅವರು ಬೆಲ್ ಮಾಡಿ, ಸಿಯಾ ನಾ ಕರೀತಾರೆ.

ಸಿಯಾ ಆಫೀಸ್ ಒಳಗೆ ಬಂದು,,, ಮೇಡಂ ಹೇಳಿ ಅಂತಾಳೆ.
ಚಾಮುಂಡೇಶ್ವರಿ,,,, ಸಿಯಾ ಋಷಿತ್ ಹೆಸರಲ್ಲಿ ಒಂದು ಅಪ್ಪೋಯಿಂಟ್ಮೆಂಟ್ ಲೆಟರ್ ನಾ ಟೈಪ್ ಮಾಡಿ ತಗೊಂಡು ಬಾ. 
ಸಿಯಾ,,, ಓಕೆ ಮೇಡಂ ಅಂತ ಹೇಳಿ ಮೇಡಂ ಯಾವ ಡಿಪಾರ್ಟ್ಮೆಂಟ್ ಅಂತ ಕೇಳ್ತಾಳೆ.
ಚಾಮುಂಡೇಶ್ವರಿ,,, ಫೈನಾನ್ಸ್ ಡಿಪಾರ್ಟ್ಮೆಂಟ್,  ಇನ್ನುಮುಂದೆ  ನಮ್ಮ ಕಂಪನಿ ಫೈನಾನ್ಸ್ ಡಿಪಾರ್ಟ್ಮೆಂಟ್ ಗೆ  ಋಷಿತ್ ಹೆಡ್. 
ಸಿಯಾ,,, ಓಕೆ ಮೇಡಂ ಅಂತ ಹೇಳಿ ಹೊರಗಡೆ ಹೋಗ್ತಾಳೆ.
ಮೂರ್ತಿ ಅವರು ಖುಷಿಯಾಗಿ ತುಂಬಾ ಥ್ಯಾಂಕ್ಸ್ ಮೇಡಂ, ಅಂತ ಹೇಳಿ ಋಷಿತ್ ಕೈಲಿ ಇದ್ದಾ ಫೈಲ್ ನಾ ತೆಗೆದುಕೊಂಡು ಮೇಡಂ ಇದು ಇವನ ಸರ್ಟಿಫಿಕೇಟ್ಸ್ ಅಂತ ಕೊಡೋಕೆ  ಹೋಗ್ತಾರೆ.
ಚಾಮುಂಡೇಶ್ವರಿ... ಏನು ಬೇಡ ಮೂರ್ತಿ ಅವರೇ, ಈ ಕೆಲಸಕ್ಕೆ ಸರ್ಟಿಫಿಕೇಟ್ ಮುಖ್ಯ ಅಲ್ಲ ಕ್ಯಾರೆಕ್ಟರ್ ತುಂಬಾ ಮುಖ್ಯ, ಅದು ಇವನಲ್ಲಿ ನನಗೆ ಕಾಣ್ತಾ ಇದೆ ಅಷ್ಟು ಸಾಕು ನನಗೆ. ಅಂತ ಹೇಳಿ ಋಷಿತ್ ಕಡೆ ನೋಡಿ, ನೋಡು ಋಷಿತ್   ಕೆಲಸ ಮಾಡೋ ಜಾಗದಲ್ಲಿ ಎಲ್ಲರೂ ಒಳ್ಳೆಯವರೇ ಇರೋದಿಲ್ಲ. ಕೆಲವರು ಒಂದು ರೂಪಾಯಿ ತಿಂದ್ರೆ ಕೆಲವರು ನೂರು ರೂಪಾಯಿ ತಿಂತಾರೆ.  ನೀನು ತಗೊ ತಿನ್ನು , ನನಗೆ ಬೇಜಾರಿಲ್ಲ ಅದ್ರೆ  ಕಷ್ಟ ಪಟ್ಟು ಕೆಲಸ ಮಾಡೋಕೆ ಅಂತ ಬಂದಿರೋ ಹೆಣ್ಣು ಮಕ್ಕಳ ಹತ್ತಿರ ತಪ್ಪಾಗಿ ನಡ್ಕೊಂಡ್ರೆ. ಜೀವನ ಪೂರ್ತಿ ಜೈಲಲ್ಲಿ ಕೊಳಿಯೋ ಹಾಗೇ ಮಾಡ್ತೀನಿ ನೆನಪಿಟ್ಕೋ.
ಋಷಿತ್,,, ಚಾಮುಂಡೇಶ್ವರಿ ಮಾತಿಗೆ ನಕ್ಕು, ಮೇಡಂ ನನಗೆ ತಂದೆ ತಾಯಿ ಇಲ್ಲಾ ಮೇಡಂ, ಬೆಳಿದ್ದಿದ್ದೆಲ್ಲಾ ಚಿಕ್ಕಪ್ಪ ಚಿಕ್ಕಮ್ಮ ನಾ ಹತ್ತಿರ,  ಇಲ್ಲಿಗೆ ನನ್ನ ಕಳಿಸಿದ್ದೆ ಅವರು,  ಊರು ಬಿಡೋಕೂ ಹಿಂದಿನ ದಿನ ಅಂದ್ರೆ ನೆನ್ನೆ ನನ್ನ ಚಿಕ್ಕಮ್ಮ ನನ್ನ ನಾಯಿಗೆ ಹೊಡೆದ ಹಾಗೇ ಹೊಡೆದ್ರು.  ಯಾವತ್ತೂ ನನ್ನ ಮಾತಲ್ಲಿ ಬೈತಾ ಇದ್ರು ಅದ್ರೆ ನೆನ್ನೆ  ಮೈ ಪೂರ್ತಿ ಗಾಯ ಹಾಗೇ ಹೊಡೆದ್ರು ಯಾಕ್ ಗೊತ್ತಾ ಮೇಡಂ  ಊರಲ್ಲಿ ಹುಡುಗೀರ ಹತ್ತಿರ ತಪ್ಪಾಗಿ ನಡ್ಕೊಂಡೆ ಅಂತ ಯಾರೋ ಹೇಳಿದ್ರು ಅಂತ ಅದು ನಿಜಾನಾ ಸುಳ್ಳಾ ಅಂತ ನನ್ನ ಒಂದು ಮಾತು ಕೇಳಿಲ್ಲ. 

ಅದು ಸುಳ್ಳು ಅಂತ ಗೊತ್ತಾದ ಮೇಲೆ ನನ್ನ ನಾಯಿಗೆ ಹೊಡೆದ ಹಾಗೇ ಹೊಡೆದ ನನ್ನ ಚಿಕ್ಕಮ್ಮ,  ಊರಿಂದ ಬರೋವಾಗ ಕಣ್ಣಲ್ಲಿ ಕಣ್ಣೀರನ್ನ ತುಂಬಿಕೊಂಡು,  ಹುಷಾರಾಗಿ ಹೋಗಿ ಬಾ  ನೀನು ಕೆಲಸ ಮಾಡಿ ನಮ್ಮನ್ನ ಸಾಕದೆ ಇದ್ರು ಪರವಾಗಿಲ್ಲ. ನಿನ್ ಚೆನ್ನಾಗಿ ಇದ್ರೆ ಅಷ್ಟು ಸಾಕು ನನಗೆ ಅಂತ ಹೇಳಿ ಕಳಿಸಿದ್ರು.  ನನಗೆ ಈ ಸಿಟಿಲಿ ಕೆಲಸ ಸಿಕ್ಕದೆ ಇದ್ರು ಪರವಾಗಿಲ್ಲ ಮೇಡಂ, ಊರಿಗೆ ಹೋಗಿ ಇರೋ ಜಮೀನಲ್ಲಿ  ಕೆಲಸ ಮಾಡ್ಕೊಂಡು ಜೀವನ ಮಾಡ್ತೀನಿ ಅದ್ರೆ ಇನ್ನೊಬ್ಬರ ಕಷ್ಟ ನಾ ಆಸರೆಯಾಗಿ ತಗೊಂಡು ಬದುಕೋಕೆ ಹೋಗೋದಿಲ್ಲ ಮೇಡಂ.  ಅಂತ ಹೇಳ್ತಾನೆ.  

ಸಿಯಾ ಡೋರ್ ಓಪನ್ ಮಾಡಿಕೊಂಡು ಸಾರೀ ಮೇಡಂ, ಪ್ಯಾಕೆಜ್ ಎಷ್ಟು ಅಂತ ಹೇಳಿಲ್ಲ. ಅಂತ ಕೇಳ್ತಾಳೆ. 
ಚಾಮುಂಡೇಶ್ವರಿ ಅವರು ಸಿಯಾ ಕಡೆ ನೋಡಿ ನಕ್ಕು ಬಾ ನಾನೇ ರೆಡಿ ಮಾಡ್ತೀನಿ ಅಪ್ಪೋಯಿಂಟ್ಮೆಂಟ್ ಲೆಟರ್ ಅಂತ ಹೇಳಿ ಹೋಗಿ ಅವರ ಚೇರ್ ಅಲ್ಲಿ ಕುಳಿತುಕೊಂಡು  ಅಪ್ಪೋಯಿಂಟ್ಮೆಂಟ್ ಲೆಟರ್ ನಾ ಟೈಪ್ ಮಾಡ್ತಾ ಇಬ್ಬರನ್ನು ಕೂತ್ಕೊಳ್ಳಿ ಅಂತ ಹೇಳ್ತಾರೆ.
ಮೂರ್ತಿ, ಋಷಿತ್ ಇಬ್ಬರು ಚೇರ್ ಅಲ್ಲಿ ಕುಳಿತು ಕೊಳ್ತಾರೆ.

ಕೆಲವು ನಿಮಿಷ ಗಳ ನಂತರ, ಅಪ್ಪೋಯಿಂಟ್ಮೆಂಟ್ ಲೆಟರ್ ಮೇಲೆ ಸೈನ್ ಮಾಡಿ ಮೂರ್ತಿ ಅವರ ಕೈಗೆ ಕೊಡ್ತಾರೇ. ಮೂರ್ತಿ ಅಪ್ಪೋಯಿಂಟ್ಮೆಂಟ್ ಲೆಟರ್ ನಾ ನೋಡಿ ಶಾಕ್ ಆಗ್ತಾರೆ.
ಚಾಮುಂಡೇಶ್ವರಿ,,, ಮೂರ್ತಿ ಅವರ ಕಡೆ ನೋಡಿ, 6 ಲಕ್ಷ ಪ್ಯಾಕೇಜ್, ಅಂದ್ರೆ ತಿಂಗಳಿಗೆ 50,000 ಸಂಬಳ. ಓಕೆ ಅಲ್ವಾ ಮೂರ್ತಿ ಅವರೇ.
ಮೂರ್ತಿ ಅವರು ಖುಷಿಯಲ್ಲಿ  ಏನ್ ಹೇಳಬೇಕು ಅನ್ನೋದೇ ಅವರಿಗೆ ಅರ್ಥ ಆಗಲ್ಲಾ. 
ಚಾಮುಂಡೇಶ್ವರಿ,,, ಸಿಯಾ ಕಡೆ ನೋಡಿ, ಸಿಯಾ ಅಡ್ವಾನ್ಸ್ ಆಗಿ 30,000 ಕೊಡು, ಹಾಗೇ ಒಂದು ಸ್ಮಾರ್ಟ್ ಫೋನ್,  ಒಂದು  ಲೇಟೆಸ್ಟ್  ಮಾಡೆಲ್ ಬೈಕ್,   ನಾ ಬುಕ್ ಮಾಡು ನಾಳೆ ಅಷ್ಟ್ರಲ್ಲಿ ಬರಬೇಕು. 
ಮೂರ್ತಿ ಅವರು ಮತ್ತೆ ಶಾಕ್ ಆಗಿ, ಮೇಡಂ ಇದೆಲ್ಲಾ ಏನಕ್ಕೆ? 

ಚಾಮುಂಡೇಶ್ವರಿ,,, ಋಷಿತ್ ಕಡೆ ನೋಡಿ, ಮನಸಲ್ಲಿ ಏನು ಇಟ್ಟುಕೊಳ್ಳದೆ ನೇರವಾಗಿ ಮಾತಾಡೋ ನಿನ್ನ ಗುಣ ಇಷ್ಟ ಆಯಿತು.  ಇವತ್ತಿಂದ, ಬೇಡ ನಾಳೆಯಿಂದ  ಈ ಕಂಪನಿ ಯ ಪ್ರತಿಯೊಂದು ರೂಪಾಯಿ ನಿನ್ನ ಕೈಲಿ ಇರುತ್ತೆ,   ಕಷ್ಟ ಪಟ್ಟು ದುಡಿದು ತಿನ್ನೋ ನಿನಗೆ ಇನ್ನೊಬ್ಬರ ದುಡ್ಡು  ಯಾವ ಲೆಕ್ಕ ಅಂತ ನನಗೆ ಅರ್ಥ ಆಯ್ತು,  ನನ್ನ ಪರ್ಮಿಷನ್ ಇಲ್ಲದೆ ಯಾರೇ ಬಂದು ಒಂದು ರೂಪಾಯಿ ಕೇಳಿದ್ರು ಕೊಡಬೇಡ.  ಅಂತ ಹೇಳಿ ಎದ್ದು ನಿಂತು ಕೈ ಮುಂದೆ ಮಾಡಿ ವೆಲ್ಕಮ್ ಟು  ಚಾಮುಂಡೇಶ್ವರಿ ಗ್ರೂಪ್ ಅಂತ ಹೇಳ್ತಾರೆ.
ಋಷಿತ್ ಎದ್ದು ಥ್ಯಾಂಕ್ ಯು ಮೇಡಂ ಅಂತ ಕೈ ಕೊಡ್ತಾನೆ.
ನಂತರ ಚಾಮುಂಡೇಶ್ವರಿ ಅವರು ಇವತ್ತು ಶಾಪಿಂಗ್ ಮಾಲ್ ನಾ ನೋಡ್ಕೊಂಡು ನಾಳೆಯಿಂದ ಕೆಲಸಕ್ಕೆ ಬನ್ನಿ, ಇಫ್ ಯು ಡೋಂಟ್ ಮೈಂಡ್ ನಿಮ್ಮನ್ನ ಋಷಿ ಅಂತ ಕರಿಲಾ 
ಋಷಿತ್,,, ಓಕೆ ಮೇಡಂ ನೀವು ನನ್ನ ಹೇಗೆ ಕರೆದ್ರು ನನಗೆ ಸಂತೋಷ. ಅಂತ ಹೇಳ್ತಾನೆ.

ಚಾಮುಂಡೇಶ್ವರಿ ಅವರು ಸಿಯಾ ಕಡೆ ನೋಡಿ, ಸಿಯಾ ಸ್ಟಾಫ್ ಗೆಲ್ಲ ಋಷಿ ನಾ ಪರಿಚಯ ಮಾಡಿಸು, ಅಂತ ಹೇಳಿ ಕಳಿಸ್ತಾರೆ..

ಮೂರ್ತಿ,, ಋಷಿತ್, ಸಿಯಾ, ಮೂರು ಜನ ಹೊರಗಡೆ ಬರ್ತಾರೆ.
ಮೂರ್ತಿ ಅವರು ಖುಷಿಯಾಗಿ ಋಷಿತ್ ನಾ ತಬ್ಬಿಕೊಂಡು ನನಗೆ ತುಂಬಾ ಸಂತೋಷ ಆಗ್ತಾ ಇದೆ ಕಣೋ.  ಅಂತ ಹೇಳಿ  ನೀನು ಮನೆಗೆ ಹೋಗು ಸಂಜೆ ಬಂದು ನಿನ್ನ ಜೊತೆಗೆ ಮಾತಾಡ್ತೀನಿ ನನಗೆ ಕೆಲಸ ಇದೆ ಅಂತ ಹೇಳಿ ಸಿಯಾ ಕಡೆ ನೋಡಿ  ಬಾಯ್ ಮೇಡಂ ಅಂತ ಹೇಳಿ ಅವರು ಅಲ್ಲಿಂದ ಹೊರಟು ಹೋಗ್ತಾರೆ..

ಸಿಯಾ,,, ಹಾಯ್ ಋಷಿತ್ ಐಮ್ ಸಿಯಾ ಅಂತ ಕೈ ಕೊಡ್ತಾಳೆ.
ಋಷಿತ್,, ಐಮ್ ಋಷಿತ್. 
ಸಿಯಾ ಬನ್ನಿ ಸ್ಟಾಫ್ ನಾ ಪರಿಚಯ ಮಾಡಿಸ್ತೀನಿ ಅಂತ ಹೇಳಿ ಕರ್ಕೊಂಡು ಹೋಗ್ತಾಳೆ.

@@@@@@@@@@@@@@@@@@@@@@@@@@@@@@@@@