vyoma - 3 in Kannada Spiritual Stories by S Pr books and stories PDF | ವ್ಯೋಮ - 3

The Author
Featured Books
  • ಸಮಯದ ಸುಳಿ

    ಮಂಗಳೂರಿನ ಹೊರವಲಯದ ಆ ಕರಾವಳಿ ತೀರದಲ್ಲಿ ನಿಂತಿದ್ದ ಆ ಬಂಗಲೆ, ಕೇವಲ ಒಂ...

  • ವ್ಯೋಮ - 3

    ಸಿಯಾ ಋಷಿತ್ ಜೊತೆಗೆ ಸ್ಟಾಫ್ ಆಫೀಸ್ ಗೆ ಬರ್ತಾಳೆ. ಅಲ್ಲಿ ಇದ್ದವರೆಲ್ಲ...

  • ರಕ್ತ ಲಿಪಿಯ ಚಿರಂಜೀವಿ - 42

    ನೇಪಾಳದ ಕಡಿದಾದ ಬೆಟ್ಟಗಳು, ಉಸಿರು ಗಟ್ಟಿಸುವ ಪ್ರಪಾತಗಳು ಮತ್ತು ಮೈ ನಡ...

  • ಎನ್ಕೌಂಟರ್

    ಮಂಗಳೂರಿನ ಹೊರವಲಯದ ಆ ಹಳೆಯ ಮೀನು ಸಂಸ್ಕರಣಾ ಘಟಕ ಈಗ ಕೇವಲ ಪಾಳುಬಿದ್ದ...

  • ರಕ್ತ ಲಿಪಿಯ ಚಿರಂಜೀವಿ - 41

    ವಾರಣಾಸಿಯ ಆ ಮಣಿಕರ್ಣಿಕಾ ಘಾಟ್‌ನಲ್ಲಿ ಮೃತ್ಯುಂಜಯ ಶಕ್ತಿಯನ್ನು ಪಡೆದು,...

Categories
Share

ವ್ಯೋಮ - 3

ಸಿಯಾ ಋಷಿತ್ ಜೊತೆಗೆ ಸ್ಟಾಫ್ ಆಫೀಸ್ ಗೆ ಬರ್ತಾಳೆ. 

ಅಲ್ಲಿ ಇದ್ದವರೆಲ್ಲ ಋಷಿತ್ ನಾ ನೋಡಿ ಯಾರು ಅನ್ನೋ ಹಾಗೇ ನೋಡ್ತಾರೆ.
ಸಿಯಾ,,, ಋಷಿತ್ ಇದೆ ಸ್ಟಾಫ್ ಆಫೀಸ್, ಅದು ನಿನ್ನ ಡೆಸ್ಕ್.  ಅವರು ನಿನ್ನ ಅಸಿಸ್ಟೆಂಟ್, ವರ್ಣಿಕಾ, ಸುಹಾನಿ. ಅಂತ ಹೇಳಿ  ಇಬ್ಬರನ್ನು ನೋಡಿ ಇವರು ಋಷಿತ್ ಅಂತ ಫೈನಾನ್ಸ್ ಹೆಡ್.  
ಇಬ್ಬರು ಶಾಕ್ ಆಗಿ ಫೈನಾನ್ಸ್ ಹೆಡ್ ಹಾ? 
ಸುಹಾನಿ,,, ವರ್ಣಿಕಾ ನಾ ನೋಡಿ, ಮೆಲ್ಲಗೆ ಏನೇ  ಮೊದಲು ಇದ್ದವನು ಮುದುಕ ಆಗಿದ್ರು  ನಮಗೆ ಕಾಟ ಕೊಡ್ತಾ ಇದ್ದಾ. ಈಗ  ಹೊಸಬ ಬಂದಿದ್ದಾನೆ.
ವರ್ಣಿಕಾ,, ಲೇ ಎಲ್ಲರೂ ಹಾಗೇ ಇರೋದಿಲ್ಲ ನೀನು ಸ್ವಲ್ಪ ಸುಮ್ನೆ ಇರ್ತೀಯಾ ಅಂತ ಹೇಳಿ ಎದ್ದು. ಹಾಯ್ ಋಷಿತ್, ಐಮ್ ವರ್ಣಿಕಾ, ಇವಳು ಸುಹಾನಿ. 
ಋಷಿತ್ ಇಬ್ಬರಿಗೂ ಹಾಯ್ ಮಾಡ್ತಾನೆ.

ಸಿಯಾ,,, ಅವರು ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್, ಅವರು ಸೇಲ್ಸ್ ಡಿಪಾರ್ಟ್ಮೆಂಟ್,  ಅವರು ಬಿಲ್ಲಿಂಗ್ ಡಿಪಾರ್ಟ್ಮೆಂಟ್ ಹೆಡ್ ಅಮೀರಾ , ಅವರು, ಅಡ್ಮಿನ್ ಡಿಪಾರ್ಟ್ಮೆಂಟ್,  ಅವರು ಫ್ಲೋರ್ ಮ್ಯಾನೇಜರ್ ಟೀಂ ಹೆಡ್,  ಅರವ್.    ಟೀಂ ಲೀಡರ್ ಡಿಪಾರ್ಟ್ಮೆಂಟ್ ಹೆಡ್, ದೀಶ್.  ಸೆಕ್ಯೂರಿಟಿ ಡಿಪಾರ್ಟ್ಮೆಂಟ್ ಹೆಡ್, ಮನ್ವರ್,   ಫುಡ್ ಡಿಪಾರ್ಟ್ಮೆಂಟ್  ಹೆಡ್ ದನಿಕ. ಅಂತ ಹೇಳಿ ಮತ್ತೆ ಮಿಕ್ಕಿದವರಾನೆಲ್ಲ ಪರಿಚಯ ಮಾಡಿಸಿ.  ಫೈನಲ್  ಆಗಿ ಒಂದು ಆಫೀಸ್ ರೂಂ ಹತ್ತಿರ ಕರ್ಕೊಂಡು ಬಂದು, ಇದು  ಮಾಲ್ ಮ್ಯಾನೇಜರ್ ವನ್ಯಾ.  ಚಾಮುಂಡೇಶ್ವರಿ ಮಗಳು,  ಅಂತ  ಹೇಳಿ ಸ್ಟಾಫ್ ಆಫೀಸ್ ನಿಂದ ಹೊರಗಡೆ ಬರೋವಾಗ ಇಬ್ಬರು ವ್ಯಕ್ತಿ ಗಳು ಅವರಿಗೆ ಎದುರುಗಡೆ ಬರ್ತಾ, ಸಿಯಾ ನಾ ನೋಡಿ ಯಾರ್ ಇವನು ಅಂತ ಕೇಳ್ತಾರೆ.
ಸಿಯಾ,,, ಋಷಿತ್ ಅಂತ ಸರ್, ಫೈನಾನ್ಸ್ ಹೆಡ್, ಮೇಡಂ ಇವತ್ತು ಇವರನ್ನ ಅಪ್ಪೋಯಿಂಟ್ಮೆಂಟ್ ಮಾಡಿಕೊಂಡರು ಅಂತ ಹೇಳ್ತಾಳೆ. 
ವಿಷಯ ಕೇಳಿ ಇಬ್ಬರು. ಒಬ್ಬರ ಮುಖ ಒಬ್ಬರು ನೋಡಿಕೊಂಡು, ಮತ್ತೆ ಸಿಯಾ, ಋಷಿತ್ ಕಡೆ ನೋಡಿ,  ಮೈ ಮೇಲೆ ಪ್ರಜ್ಞೆ ಇಟ್ಕೊಂಡು ಕೆಲಸ ಮಾಡಬೇಕು ಅಂತ ಹೇಳಿ ಒಳಗೆ ಹೋಗ್ತಾರೆ. 

ಸಿಯಾ ಅವರಿಬ್ಬರೂ ಹೋದಮೇಲೆ ಒಂದು ನಿಟ್ಟುಸಿರನ್ನ ಬಿಟ್ಟು ಋಷಿತ್ ಹೋಗೋಣ್ವಾ ಅಂತ ಹೇಳಿ  ಅಲ್ಲಿಂದ ಹೊರಗಡೆ ಬರ್ತಾರೆ.  
ಋಷಿತ್,,, ಸಿಯಾ ಯಾರ್ ಅವರು? 
ಸಿಯಾ,,, ಒಬ್ಬರು  ಸೂರಜ್ ಅಂತ  ಚಾಮುಂಡೇಶ್ವರಿ ಅಣ್ಣ ನಾ ಮಗ, ಇನ್ನೊಬ್ಬರು  ವಿರಾಜ್ ಅಂತ  ಚಾಮುಂಡೇಶ್ವರಿ ತಂಗಿ ಮಗ,  ವನ್ಯಾ ಗೆ ಸಪೋರ್ಟ್ ಆಗಿ ಕೆಲಸ ಮಾಡ್ತಾ ಇದ್ದಾರೆ, ವನ್ಯಾ ಇಲ್ಲದಾಗ ಅವರೇ ಈ ಶಾಪಿಂಗ್ ಮಾಲ್ ನಾ ನೋಡ್ಕೊಳ್ಳೋದು.  ಅವರ ಹತ್ತಿರ ಸ್ವಲ್ಪ ಹುಷಾರು,  ಅಂತ ಹೇಳಿ ಸರಿ ಬಾ ಮೇಡಂ ನಿನಗೆ ಅಡ್ವಾನ್ಸ್ ಕೊಡೋಕೆ ಹೇಳಿದ್ರು ಅಲ್ವಾ ಕೊಡ್ತೀನಿ ಅಂತ ಹೇಳಿ ಕರ್ಕೊಂಡು ಹೋಗ್ತಾಳೆ. 
ಋಷಿತ್,,, ಇವಾಗ ಅಷ್ಟೊಂದು ದುಡ್ಡು ಬೇಡ ಸಿಯಾ, ಹೇಗಿದ್ರು ಸಂಬಳ ಬಂದಾಗ ಕಟ್ ಮಾಡ್ತಾರೆ ಅಲ್ವಾ. 
ಸಿಯಾ,,, ಒಂದೇ ಸಲ ಕಟ್ ಮಾಡೋದಿಲ್ಲ, ತಿಂಗಳ ತಿಂಗಳ 5k ಅಷ್ಟೇ ಕಟ್ ಮಾಡೋದು. ಅಂತ ಹೇಳಿ ಕರ್ಕೊಂಡು ಹೋಗಿ, ಅಡ್ವಾನ್ಸ್ ಕೊಡ್ತಾಳೆ.

ಋಷಿತ್,,, ಹೀಗೆ ಕೇಳ್ತೀನಿ ಅಂತ ತಪ್ಪಾಗಿ ತಿಳ್ಕೋಬೇಡ ಸಿಯಾ.
ಸಿಯಾ... ಏನು ಪಾರ್ಟಿ ಕೊಡಿಸ್ತೀಯಾ? ಈಗ ಏನು ಬೇಡ,  ಸಂಬಳ ಬಂದಾಗ ಕೊಡಿಸುವಂತೆ ಈಗ ಮನೆಗೆ ಹೋಗಿ ಮನೆಯವರಿಗೆ ಕೆಲಸ ಸಿಕ್ಕಿದ ವಿಷಯ ಹೇಳು ತುಂಬಾ ಖುಷಿ ಪಡ್ತಾರೆ.  
ಋಷಿತ್... ಓಕೆ ಥ್ಯಾಂಕ್ಸ್ ಸಿಯಾ, ಅಂತ ಹೇಳಿ ಅಲ್ಲಿಂದ ಹೊರಟು ಮೂರ್ತಿ ಅವರಿಗೆ ಕಾಲ್ ಮಾಡ್ತಾನೆ.  ಮೂರ್ತಿ ಅವರು ಕಾಲ್ ಪಿಕ್. ಮಾಡಿ ಇದ್ದಾ ಲೊಕೇಶನ್ ಹೇಳ್ತಾರೆ.
ಋಷಿತ್ ಅಲ್ಲಿಗೆ ಹೋಗ್ತಾನೆ.

ಮೂರ್ತಿ,,, ಏನ್ ಋಷಿತ್.
ಋಷಿತ್,,, ಸರ್ ನೀವೇನು ಅಂದುಕೊಳ್ಳೋಲ್ಲ ಅಂದ್ರೆ ಇವತ್ತು ಒಂದು ದಿನ ನನಗೆ ನಿಮ್ಮ ಬೈಕ್ ಕೊಡ್ತೀರಾ? ಪ್ಲೀಸ್.
ಮೂರ್ತಿ,,, ನಕ್ಕು ಅರ್ಥ ಆಯಿತು, ಅಂತ ಹೇಳಿ ಬೈಕ್ ಕೀ ಕೊಟ್ಟು ಹುಷಾರಾಗಿ ಹೋಗಿ ಬಾ. ಅಂತ ಹೇಳಿ ಕಳಿಸ್ತಾರೆ.

ಋಷಿತ್ ಬೈಕ್ ಅಲ್ಲಿ ಮೂರ್ತಿ ಅವರ ಮನೆಗೆ ಬರ್ತಾ ನೇ.

ಕಲ್ಪನಾ ಅವರು ಋಷಿತ್ ನಾ ನೋಡಿ, ಮಗ ಹೋದ ಕೆಲಸ ಏನಾಯ್ತು ಅಂತ ಕೇಳ್ತಾರೆ.
ಋಷಿತ್,,, ಕೈಲಿ ಇದ್ದಾ ಕವರ್ ನಾ ತೆಗೆದು ಅದರಲ್ಲಿ ಇದ್ದಾ ಸೀರೆ ನಾ ಕಲ್ಪನಾ ಅವರ ಮುಂದೆ ಇಟ್ಟು ಅಮ್ಮ ನನಗೆ ಕೆಲಸ ಸಿಕ್ತು ಅಂತ ಹೇಳ್ತಾನೆ.
ಕಲ್ಪನಾ ಅವರು ಖುಷಿಯಾಗಿ ಸಂತೋಷ ಮಗ,  ಅ ದೇವ್ರು ನಿನಗೆ ಒಳ್ಳೇದನ್ನೇ ಮಾಡ್ತಾನೆ. ಅದ್ರೆ ಇದನ್ನೆಲ್ಲಾ ಏನಕ್ಕೆ ತರೋಕೆ ಹೋದೆ. ಸಂಬಳ ಬರೋವರೆಗೂ ನಿನ್ನ ಖರ್ಚಿಗೆ ಏನ್ ಮಾಡ್ತಿಯಾ?
ಋಷಿತ್,,, ಅಮ್ಮ ಅಡ್ವಾನ್ಸ್ ಕೊಟ್ರು ಅದಕ್ಕೆ ತಗೊಂಡು ಬಂದೆ.   ದಯವಿಟ್ಟು ತಗೊಳ್ಳಿ ಬೇಡ ಅಂತ ಹೇಳಬೇಡಿ ಪ್ಲೀಸ್. 
ಕಲ್ಪನಾ,,, ಸೀರೆ ನಾ ಕೈಗೆ ತೆಗೆದುಕೊಂಡು, ನಿನ್ನ ಸಂತೋಷ ನಾ ನಾನ್ ಯಾಕ್ ಬೇಡ ಅನ್ಲಿ, ಹೌದು ಏನ್ ಕೆಲಸ ಅಂತ ಕೇಳ್ತಾರೆ.
ಋಷಿತ್,,, ಫೈನಾನ್ಸ್ ಹೆಡ್ ಕೆಲಸ ಅಮ್ಮ, ತಿಂಗಳಿಗೆ 50,000 ಸಂಬಳ.  
ಕಲ್ಪನಾ ಅವರು ಇನ್ನು ಖುಷಿಯಾಗಿ, ಸಂತೋಷ ಮಗ,  ನಿನ್ನ ಮೇಲೆ ನಂಬಿಕೆ ಇಟ್ಟು ಈ ಕೆಲಸಾನ ಕೊಟ್ಟಿದ್ದಾರೆ ಯಾವುದೇ ಕಾರಣಕ್ಕೂ, ಅವರ ನಂಬಿಕೆಗೆ ದ್ರೋಹ ಮಾಡಬೇಡ ಸರಿನಾ?
ಋಷಿತ್,,, ಇಲ್ಲಾ ಅಮ್ಮ ಯಾವುದೇ ಕಾರಣಕ್ಕೂ ಅವರ ನಂಬಿಕೆಗೆ ದ್ರೋಹ ಮಾಡೋದಿಲ್ಲ. 
ಕಲ್ಪನಾ,,, ಸರಿ ಹೋಗಿ ಕೈ ಕಾಲು ತೊಳ್ಕೊಂಡು ಬಾ ಊಟಕ್ಕೆ ಇಡ್ತೀನಿ..
ಋಷಿತ್,,, ಅಮ್ಮ ಈಗ ಬೇಡ ನಾನ್ ಊರಿಗೆ ಹೋಗಿ ಅಪ್ಪ ಅಮ್ಮನಿಗೆ ವಿಷಯ ಹೇಳಿ ಬರ್ತೀನಿ, ನಾಳೆ ಕೆಲಸಕ್ಕೆ ಜಾಯಿನ್ ಆಗಬೇಕು.
ಕಲ್ಪನಾ,,, ಸರಿ ಮಗ ಹುಷಾರಾಗಿ ಹೋಗಿ ಬಾ, ಲೇಟ್ ಅದ್ರೆ ಕಾಲ್ ಮಾಡು ಅಂಕಲ್ ನಾ ಕಳಿಸ್ತೀನಿ.
ಋಷಿತ್ ಬೇಡ ಅಮ್ಮ ಅಂಕಲ್ ಬೈಕ್ ಅಲ್ಲೇ ಹೋಗಿ ಬರ್ತೀನಿ. 
ಕಲ್ಪನಾ,,, ಸರಿ ಮಗ ಹುಷಾರು ಅಂತ ಹೇಳಿ ಕಳಿಸಿ ಕೊಡ್ತಾರೆ.

                        ****

ಸ್ಕೂಲ್ ನಿಂದ ಬಂದ ಶ್ರಾವ್ಯ, ಬ್ಯಾಗ್ ನಾ ಒಂದು ಮೂಲೆಗೆ ಬಿಸಾಕಿ, ಅಮ್ಮ ಅಣ್ಣ ಕಾಲ್ ಮಾಡಿದ್ನ ಅಂತ ಕೇಳ್ತಾಳೆ.
ನಿಂಗಮ್ಮ,,,, ಇಲ್ವೆ ಇನ್ನು ಮಾಡಿಲ್ಲ, ಏನೋ ಬ್ಯುಸಿ ಇರ್ತಾನೆ ಮಾಡ್ತಾನೆ ಬಿಡು ಅಂತ ಹೇಳಿ ಅವರ ಕೆಲಸದಲ್ಲಿ ಬ್ಯುಸಿ ಆಗ್ತಾರೆ.
ಬಸಣ್ಣ ಸಂಜೆ ಕೆಲಸ ಮುಗಿಸ್ಕೊಂಡು ಮನೆಗೆ ಬರ್ತಾರೆ. ಮಗಳು ಸಪ್ಪಗೆ ಕೂತಿರೋದನ್ನ ನೋಡಿ,   ಯಾಕ್ ಮಗಳೇ ಏನಾಯ್ತು ಯಾಕ್ ಹೀಗೆ ಸಪ್ಪಗೆ ಕೂತಿದ್ದೀಯ ಅಂತ ಕೇಳ್ತಾರೆ.
ನಿಂಗಮ್ಮ,,, ಸ್ಕೂಲ್ ನಿಂದ ಬಂದಾಗಿಂದ ಮೊಬೈಲ್ ಇಡ್ಕೊಂಡು ಕೂತಿದ್ದಾಳೆ ಅಣ್ಣ ಕಾಲ್ ಮಾಡ್ತಾನೆ ಮಾತಾಡಬೇಕು ಅಂತ.  ರೀ ನಾನ್ ಹೀಗೆ ಹೇಳ್ತಿನಿ ಅಂತ ಬೇಜಾರ್ ಮಾಡ್ಕೋಬೇಡಿ,   ಅವನು ಮನೇಲಿ ಇದ್ರೆ ನಮಗೂ ಒಂದು ಧೈರ್ಯ ಇರುತ್ತೆ,  ಅವನಿಗೆ ಕೆಲಸ ಇಲ್ಲಾ ಅಂದ್ರು ಪರ್ವಾಗಿಲ್ಲ, ಇಲ್ಲೇ ಏನೋ ಒಂದು ಕೆಲಸ ಮಾಡ್ಕೊಂಡು ಇರ್ತಾನೆ ಬರೋಕೆ ಹೇಳ್ರಿ ಅಂತ ಹೇಳ್ತಾಳೆ. 
ಬಸಣ್ಣ,,, ಮಗಳ ಪಕ್ಕ ಕೂತು ಬೇಡ್ವೇ ನಿಂಗಿ, ಅವನನ್ನ ದೂರ ಕಳಿಸೋಕೆ ನನಗೆ ಏನು ಇಷ್ಟನಾ ಹೇಳು ಅವನು ನಮ್ಮನ್ನ ಸಾಕದೆ ಇದ್ರು ಪರ್ವಾಗಿಲ್ಲ, ಅದ್ರೆ ಅವನ ಕಾಲ್ ಮೇಲೆ ಅವನು ನಿಂತುಕೊಂಡ್ರೆ ಅಷ್ಟೇ ಸಾಕು.  ಅದೇ ನನಗೆ ಸಂತೋಷ. 
ಶ್ರಾವ್ಯ,,, ಅಪ್ಪ ನಾ ತಬ್ಬಿಕೊಂಡು,  ಏನು ಮಾತನಾಡದೆ ಸೈಲೆಂಟಾಗಿ ಇದ್ದು ಬಿಡ್ತಾಳೆ.

ಮುವ್ವರು ಹಾಗೇ ಸೈಲೆಂಟಾಗಿ ಕೂತಿರೋವಾಗ ಬೈಕ್ ಸೌಂಡ್ ಕೇಳಿಸುತ್ತೆ. ಮುವ್ವರು ಅ ಕಡೆ ತಿರುಗಿ ನೋಡ್ತಾರೆ. ಶ್ರಾವ್ಯ ಖುಷಿಯಾಗಿ ಜೋರಾಗಿ ಅಣ್ಣ ಅಂತ ಕೂಗ್ತಾ ಎದ್ದು ಓಡ್ತಾಳೆ. ಬಸಣ್ಣ ನಿಂಗಮ್ಮ ಎದ್ದು ಋಷಿತ್ ಕಡೆಗೆ ಹೋಗ್ತಾ  ಬಸಣ್ಣ ಏನ್ ಮಗ ಹೇಳ್ದೆ ಕೇಳ್ದೆ ಬಂದು ಬಿಟ್ಟಿದ್ದೀಯ? ಈ ಬೈಕ್ ಯಾರ್ದು? ಅಂತ ಕೇಳ್ತಾರೆ. 
ಋಷಿತ್,... ಹೇಳ್ತಿನಿ ಅಪ್ಪಯ್ಯ ಮೊದಲು ಒಳಗಡೆ ನಡೀರಿ, ಅಂತ ಹೇಳಿ , ಕೈಲಿ ಇದ್ದಾ ಒಂದು ಕವರ್ ನಾ ಶ್ರಾವ್ಯ ಕೈಗೆ ಕೊಟ್ಟು ತಗೋ ಇದು ನಿನಗೆ ಅಂತ ಹೇಳ್ತಾನೆ. 
ಶ್ರಾವ್ಯ,,, ಕವರ್ ನಾ ತೆಗೆದುಕೊಂಡು,  ಓಪನ್ ಮಾಡಿ ಖುಷಿಯಾಗಿ ಎ ಹೊಸ ಬಟ್ಟೆ, ಥ್ಯಾಂಕ್ಸ್ ಅಣ್ಣ  ಅಂತ ಹೇಳಿ ಅಪ್ಪಿಕೊಂಡು  ಋಷಿತ್ ಜೊತೆಗೆ ಮನೆ ಒಳಗೆ ಬರ್ತಾಳೆ. 

ಬಸಣ್ಣ,,, ಕುತ್ಕೋ ಮಗ ಅಂತ ಹೇಳಿ  ಎಲ್ಲರೂ ಕುತ್ಕೊಂಡ ಮೇಲೆ ಹೇಳು ಮಗ ಏನಕ್ಕೆ ಹೇಳ್ದೆ ಕೇಳ್ದೆ ಬಂದು ಬಿಟ್ಟೆ. ಪ್ಯಾಟೆ ಲಿ ಇರೋಕೆ ನಿನಗೆ ಇಷ್ಟ ಇಲ್ವಾ.? 
ಋಷಿತ್,,, ಅಪ್ಪಯ್ಯ ನನಗೆ ಕೆಲಸ ಸಿಕ್ತು. 
ಮೂರು ಜನ ವಿಷಯ ಕೇಳಿ ತುಂಬಾ ಖುಷಿ ಆಗ್ತಾರೆ. 
ಋಷಿತ್... ಹೌದು ಅಪ್ಪಯ್ಯ, ಮೂರ್ತಿ ಅಂಕಲ್ ಕೆಲಸ ಮಾಡೋ ಜಾಗದಲ್ಲೇ ನನಗೂ ಕೆಲಸ ಸಿಕ್ತು.  ತಿಂಗಳಿಗೆ 50,000 ಸಾವಿರ ಸಂಬಳ. 
ಶ್ರಾವ್ಯ,,, ಏನು 50, ಸಾವಿರ ನಾ? 
ಋಷಿತ್,, ಹೌದು ಅಂತ ಹೇಳಿ ಬಸಣ್ಣ ಕಡೆ ನೋಡಿ, ಅಡ್ವಾನ್ಸ್ ಆಗಿ ಮೂವತ್ತು ಸಾವಿರ ಕೊಟ್ರು ಅಪ್ಪಯ್ಯ,  ಅಂತ ಹೇಳಿ  ಕೈಲಿ ಇದ್ದಾ ಕವರ್ ನಾ ತೆಗೆದು  ಅಮ್ಮ ಇದರಲ್ಲಿ ನಿನಗೆ ರೇಷ್ಮೆ ಸೀರೆ, ಅಪ್ಪಯ್ಯ ನಿಗೆ  ರೇಷ್ಮೆ ಶರ್ಟ್, ರೇಷ್ಮೆ ಪಂಚೆ ಎಲ್ಲಾ ಇದೆ ತಗೋಳಿ ಅಂತ ಕೈಗೆ ಕೊಡ್ತಾನೆ. 
ಬಸಣ್ಣ,,, ಇದನ್ನೆಲ್ಲಾ ಏನಕ್ಕೆ ತರೋಕೆ ಹೋದೆ ಮಗ. 
ನಿಂಗಮ್ಮ,,, ಬೇಡ ಮಗ, ನಾನ್ ಯಾವತ್ತು ನಿನ್ನ ಮಗ ಅಂತ ಪ್ರೀತಿ ಯಿಂದ ನೋಡಿದವಳು ಅಲ್ಲ. ಅಂತದ್ರಲ್ಲಿ ನಾನ್ ಇದನ್ನ ಯಾವ ಮುಖ ಇಟ್ಕೊಂಡು ತಗೊಳ್ಳಿ ಬೇಡ ಮಗ. 

ಋಷಿತ್,,, ರೇಷ್ಮೆ ಸೀರೆ ನಾ ನಿಂಗಮ್ಮ ನಾ ಕೈಲಿ ಇಟ್ಟು, ಯಾಕಮ್ಮ ಹಾಗೇ ಹೇಳ್ತಿಯ?  ದಿನ ನೀನು ನನ್ನ ಬೈತಾನೆ ಇದ್ರು ಯಾವತ್ತು ಊಟದ ಮುಂದೆ, ನನ್ನ ಬೇರೆ ಮಾಡಿಲ್ಲ, ಒಂದು ಮಾತು ಕೂಡ ಆಡಿಲ್ಲ,  ಅದೊಂದು ಸಾಕು ಅಲ್ವಾ ನೀನು ನನ್ನಮೇಲೆ ಎಷ್ಟು ಪ್ರೀತಿ ನಾ ಇಟ್ಕೊಂಡು ಇದ್ದಿಯಾ ಅಂತ,  ನೀನು ನನ್ನ ಬೈದ್ರು ಯಾವತ್ತು ಹೊರಗಿನವರ ಹತ್ತಿರ ನನ್ನ ಬಿಟ್ಟು ಕೊಟ್ಟಿಲ್ಲ.  ಇದೆಲ್ಲಾ ಪ್ರೀತಿ ಅಲ್ಲದೆ ಇನ್ನೇನು ಅಮ್ಮ.   ಮುಂದೆ ಬೈದು ಹಿಂದೆ ಪ್ರೀತಿ ಮಾಡ್ತಾ ಇದ್ದೆ. ನಿನ್ ಮನಸ್ಸು ನನಗೆ ಗೊತ್ತಿಲ್ವಾ. ಮಗ ಅನ್ನೋ ಮಮಕಾರ ಇದ್ರೆ  ಬೇಡ ಅಂದೇ ತಗೋಳ್ತೀಯಾ. 
ನಿಂಗಮ್ಮ,,, ಋಷಿತ್ ನಾ ಅಪ್ಪಿಕೊಂಡು ಅಳೋಕೆ ಶುರು ಮಾಡ್ತಾರೆ. 
ನಂತರ ಋಷಿತ್ ಅಮ್ಮ ನಾ ಸಮಾಧಾನ ಮಾಡಿ ಜೇಬಲ್ಲಿ ಇದ್ದಾ 20 ಸಾವಿರ ನಾ ತೆಗೆದು ನಿಂಗಮ್ಮನ ಕೈಲಿ ಇಡ್ತಾ, ಇದರಲ್ಲಿ ಇಪ್ಪತ್ತು ಸಾವಿರ ಇದೆ,  ವಡವೆ ಮಾಡಿಸಬೇಕು ಅಂತ ಅಪ್ಪಯ್ಯ ನಾ ಕೇಳ್ತಾ ಇದ್ದೆ ಅಲ್ವಾ ಇದರಲ್ಲಿ ಮಾಡಿಸ್ಕೊ. 
ನಿಂಗಮ್ಮ,,, ಬೇಡ ಮಗ ಪ್ಯಾಟೆ ಲಿ ನಿನಗೆ ತುಂಬಾ ಖರ್ಚು ಇರುತ್ತೆ ನಿನ್ ಇಟ್ಕೋ. 
ಋಷಿತ್,,, ನನ್ನ ಖರ್ಚಿಗೆ ನನ್ನ ಹತ್ತಿರ ದುಡ್ಡು ಇದೆ.  ಏನು ಮಾತಾಡದೆ ತಗೋ ಅಂತ ಹೇಳಿ, ಹಸಿವಾಗ್ತಿದೆ ಊಟ ಕೊಡ್ತೀಯಾ ಅಂತ ಕೇಳ್ತಾನೆ.

ನಿಂಗಮ್ಮ,,, 5 ನಿಮಿಷ ಮಗ ನಿನ್ ಹೋಗಿ ಕೈ ಕಾಲು ತೊಳ್ಕೊಂಡು ಬಾ ರೆಡಿ ಮಾಡ್ತೀನಿ ಅಂತ ಹೇಳಿ ಗಂಡನಿಗೂ ಹೇಳಿ ರೂಂ ಒಳಗೆ ಹೋಗಿ ಅವನ್ನೆಲ್ಲ ಇಟ್ಟು, ಅಡುಗೆ ಮನೆ ಕಡೆ ಹೋಗ್ತಾ,  ಶ್ರಾವ್ಯ ಗೆ  ಅಪ್ಪ ಅಣ್ಣ ಊಟಕ್ಕೆ ಕೂತ್ಕೋತಾರೆ ತಟ್ಟೆ ಇಡು ಅಂತ ಹೇಳ್ತಾರೆ. ಶ್ರಾವ್ಯ ಸರಿ ಅಮ್ಮ ಅಂತ ಹೇಳಿ ಎದ್ದು ಊಟಕ್ಕೆ ರೆಡಿ ಮಾಡ್ತಾಳೆ.

ನಾಲಕ್ಕು ಜನರ ಊಟ ಆದಮೇಲೆ,  ಋಷಿತ್ ಅಪ್ಪಯ್ಯ ನಾನ್ ಹೊರಡ್ತೀನಿ ಬೆಳಿಗ್ಗೆ ಕೆಲಸಕ್ಕೆ ಜಾಯಿನ್ ಆಗಬೇಕು. 
ನಿಂಗಮ್ಮ,,, ಏನ್ ಮಗ ಇಷ್ಟೋತ್ತಲ್ಲಿ ಒಬ್ನೇ ಬೆಳಿಗ್ಗೆ ಹೋದ್ರೆ ಆಗೋದಿಲ್ವಾ.
ಋಷಿತ್,,, ಇಲ್ಲಾ ಅಮ್ಮ, ಕೆಲಸ ಕೊಟ್ಟಿರೋವ್ರು ಅವರು ಹೇಳಿದ ಟೈಮ್ ಗೆ ನಾವು ಹೋಗದೆ ಇದ್ರೆ  ಹೇಗೆ ಹೇಳು. 
ನಿಂಗಮ್ಮ,,, ಸರಿ ಮಗ ಹುಷಾರು ಅಂತ ಹೇಳಿ  ಋಷಿತ್ ನಾ ಕಳಿಸಿ ಕೊಡ್ತಾರೆ. 

ಋಷಿತ್ ಬೈಕ್ ತಂಗೊಂಡು ಸಿಟಿ ಕಡೆ ಪ್ರಯಾಣ ಮಾಡ್ತಾನೆ.

@@@@@@@@@@@@@@@@@@@@@@@@@@@@@@@