vyoma - 4 in Kannada Spiritual Stories by S Pr books and stories PDF | ವ್ಯೋಮ - 4

The Author
Featured Books
  • ವ್ಯೋಮ - 4

              ನಿಂಗಮ್ಮ ಬೆಳ್ಳಿಗೆ ಮಗಳನ್ನ ಸ್ಕೂಲ್ ಹತ್ತಿರ ಬಿಟ್ಟು,  ಅಂಗ...

  • ರಕ್ತ ಲಿಪಿಯ ಚಿರಂಜೀವಿ - 43

    ನೇಪಾಳದ ಹಿಮದ ಹಾದಿಗಳನ್ನು ಸೀಳಿಕೊಂಡು ಆದರ್ಶ್ ತನ್ನ ಹಳೆಯ ಹೆಚ್.ಎಫ್ ಡ...

  • ಸಮಯದ ಸುಳಿ

    ಮಂಗಳೂರಿನ ಹೊರವಲಯದ ಆ ಕರಾವಳಿ ತೀರದಲ್ಲಿ ನಿಂತಿದ್ದ ಆ ಬಂಗಲೆ, ಕೇವಲ ಒಂ...

  • ವ್ಯೋಮ - 3

    ಸಿಯಾ ಋಷಿತ್ ಜೊತೆಗೆ ಸ್ಟಾಫ್ ಆಫೀಸ್ ಗೆ ಬರ್ತಾಳೆ. ಅಲ್ಲಿ ಇದ್ದವರೆಲ್ಲ...

  • ರಕ್ತ ಲಿಪಿಯ ಚಿರಂಜೀವಿ - 42

    ನೇಪಾಳದ ಕಡಿದಾದ ಬೆಟ್ಟಗಳು, ಉಸಿರು ಗಟ್ಟಿಸುವ ಪ್ರಪಾತಗಳು ಮತ್ತು ಮೈ ನಡ...

Categories
Share

ವ್ಯೋಮ - 4

          ನಿಂಗಮ್ಮ ಬೆಳ್ಳಿಗೆ ಮಗಳನ್ನ ಸ್ಕೂಲ್ ಹತ್ತಿರ ಬಿಟ್ಟು,  ಅಂಗಡಿಲಿ ಮನೆಗೆ ಬೇಕಾದ ರೇಷನ್ ನಾ ತಗೊಂಡು  ಹೋಗಬೇಕಾದ್ರೆ, ಋಷಿತ್ ಫ್ರೆಂಡ್ ಕೆಂಪ ನಡ್ಕೊಂಡು ಹೋಗೋದು ಅವರ ಕಣ್ಣಿಗೆ ಕಾಣಿಸುತ್ತೆ.

ನಿಂಗಮ್ಮ,,, ಲೋ ಕೆಂಪ ಬೆಳ್ಳಿಗ್ಗೆನೇ ಎಲ್ಲಿಗ್ಲಾ ಹೋಗ್ತಾ ಇದ್ದಿಯಾ. 
ಕೆಂಪ,,, ತೋಟದ ಕಡೆ ಹೋಗ್ತಾ ಇದ್ದೀನಿ ಚಿಕ್ಕಿ , ಬಾಳೆ ಗಿಡಕ್ಕೆ ನೀರನ್ನ ಕಟ್ಟಬೇಕು ಅಪ್ಪಯ್ಯ ಹೇಳಿದ. 
ನಿಂಗಮ್ಮ,,, ಹೌದ ಸರಿ ಬಾ ಮನೆತನಕ ಬಂದು ಕಾಫಿ ಕುಡ್ಕೊಂಡು ಹೋಗಿವಂತೆ..
ಕೆಂಪ,,, ಬೇಡ ಚಿಕ್ಕಿ ಈಗಷ್ಟೇ ತಿಂಡಿ ತಿನ್ಕೊಂಡು ಬಂದೆ. ನಾನ್ ಹೊರಡ್ತೀನಿ.

ನಿಂಗಮ್ಮ,,, ನಿಂತ್ಕೋಳ್ಳ ಏನ್ ಅಷ್ಟು ಅವಸ್ರ, ಬಾಳೆಗಿಡ ಎಲ್ಲಾದ್ರೂ ಓಡಿ ಹೋಗ್ತದ,  ರಾತ್ರಿ ನಿನ್ನ ಫ್ರೆಂಡ್ ಬಂದಿದ್ದ ಪ್ಯಾಟೆ ಲಿ ಅವನಿಗೆ ಕೆಲಸ ಸಿಕ್ತು ಅಂತೇ, ತಿಂಗಳಿಗೆ 50,ಸಾವ್ರ ಸಂಬಳ ಅಂತೇ. 
ಕೆಂಪ ಶಾಕ್ ಆಗಿ ಮತ್ತೆ ಖುಷಿ ಪಡ್ತಾ ನಿಜಾನಾ ಚಿಕ್ಕಿ, ರಾತ್ರಿ ಬಂದವನು ನನ್ನ ನೋಡದೆ ಹೋದ್ನ 
ನಿಂಗಮ್ಮ,,, ನಾನು ಇರು ಅಂತ ಹೇಳ್ದೆ, ಇಲ್ಲಾ ಬೆಳಿಗ್ಗೆನೇ ಕೆಲಸಕ್ಕೆ ಹೋಗಬೇಕು ಅಂತ ಹೇಳಿ ರಾತ್ರಿ ಊಟ ಮಾಡ್ಕೊಂಡು ಹೊರಟು ಹೋದ.  ಹೌದು ಈ ಮುದುಕಪ್ಪ ಈಗ ಎಲ್ಲಿ ಸಿಗ್ತಾನೆ. 
ಕೆಂಪ ಮನಸಲ್ಲೇ ಮುದುಕನಿಗೆ ಇವತ್ತು ಹಬ್ಬ ನೇ ಅನ್ಕೊಂಡು ಬಾ ಚಿಕ್ಕಿ ತೋರಿಸ್ತೀನಿ ಅಂತ ಹೇಳಿ ಅರಳಿ ಕಟ್ಟೇ ಹತ್ತಿರ ಕರ್ಕೊಂಡು ಹೋಗ್ತಾನೆ.

ಮುದುಕಪ್ಪ ಬಿಡಿ ಸೇದ್ತಾ ಹೋಗೆ ಬಿಡ್ತಾ ಇರ್ತಾನೆ. ನಿಂಗಮ್ಮ ಬರೋದನ್ನ ನೋಡಿ,  ಏನ್ ನಿಂಗಕ್ಕ ಈ ಕಡೆ ಬಂದೆ,  ನಿನ್ ಮಗನನ್ನ ಪ್ಯಾಟೆಗೆ ಕಳಿಸಿಬಿಟ್ಟೆ ಅಂತೇ ದಿಟನಾ,,, ಒಳ್ಳೆ ಕೆಲಸ ಮಾಡಿದೆ ಬಿಡು, ಇಲ್ಲಾ ಅಂದಿದ್ರೆ ಅವನಿಂದ ನಿನ್ನ ಮನೆ ಮರ್ಯಾದೆ ಹೋಗೋದು..
ನಿಂಗಮ್ಮ,,, ಕೋಪದಿಂದ ಅಯ್ಯೋ ನಿನ್ನ ಬಾಯಿ ಸೇದೋಗ,  ಅ ಮಗಿ ಮೇಲೆ ಇಲ್ದೆ ಇರೋ ಆಪಾದನೆ ಹಾಕಿ ನನ್ನ ಕೈಲೇ ಹೊಡಿಯೋ ಹಾಗೇ ಮಾಡಿ ಬಿಟ್ಟೆ ಅಲ್ಲೋ,  ನಿನ್ನ ಕೈ ಇಂಗೊಂಗ,  ನಿನಗೆ ಆಪತ್ ಬಂದು ಚಾಪೆ ಸುತ್ಕೊಂಡು ಹೋಗ,   ಭಂಗಿ ಸೆದ್ತಿ ಏನಲಾ,  ಸೇದೋವ್ನು ಹಾಗೇ ನಿಗರ್ಕೊಂಡು ಹೋಗ್ಬಾರ್ದ, ದರಿದ್ರದೋವ್ನೆ ಎಂಗಲಾ ಮನಸು ಬಂತು ಅ ಮಗಿ ಮೇಲೆ ಅ ರೀತಿ ಆಪಾದನೆ ಅಕೋಕೆ ನಿನಗೆ,   ನಿನಗೆ ಕರಿ ನಾಗ ಕಡಿಯ,  ನಿನಗೆ ಲಕ್ವ ಹೊಡಿಯ,   ಇನ್ನೊಂದು ಸಲ ಏನಾರ ನನ್ನ ಮಗಿ ಸುದ್ದಿಗೆ ಬರೋದು, ಅವ್ನ ಬಗ್ಗೆ ಇಲ್ದೆ ಇರೋದನ್ನ ಉರೋವರ ಹತ್ತಿರ ಏನಾರ ಹೇಳೋದು,  ನನ್ನ ಕಿವಿಗೆ ಏನಾದ್ರೂ ಬಿತ್ತೋ,  ನಿನ್ನೆದೆ ಮೇಲೆ ನಾನೇ ಚಪ್ಪಡಿನ ಎಳೆದು ಬಿಡ್ತೀನಿ,  ಅಂತ ಹೇಳಿ, ಕೆಂಪನ ಕಡೆ ನೋಡಿ ಲೇ ಕೆಂಪ ಈ ಮುದುಕ ಏನಾದ್ರೂ ನನ್ನ ಮಗಿ ಬಗ್ಗೆ ಎಲ್ಲಾದ್ರೂ ಮಾತಾಡವ್ನೆ ಅಂದ್ರೆ,  ಅಲ್ಲೇ ತುಳಿದು ಸಾಯಿಸಿ ಬಿಡ್ಲಾ ಆಮೇಲೆ ಯಾವನ್ ಬರ್ತಾನೋ ಏನಾಗುತ್ತೋ ನಾನ್ ನೋಡ್ಕೋತೀನಿ. 
ಕೆಂಪ ಖುಷಿಯಾಗಿ ಆಯ್ತು ಚಿಕ್ಕಿ ನಿನ್ ಈ ಮಾತ್ ಹೇಳ್ದೆ ಅಲ್ವಾ ಅಷ್ಟು ಸಾಕು.
ನಿಂಗವ್ವ,, ಮುದುಕ ನಾ ಕಡೆ ನೋಡಿ ವಯಸ್ಸಲ್ಲಿ ದೊಡ್ಡವನು ಅಂತ ಬರಿ ಮಾತಲ್ಲಿ ಹೇಳಿ ಹೋಗ್ತಾ ಇದ್ದೀನಿ, ಇಲ್ಲಾ ಅಂದಿದ್ರೆ  ಕೆರ ಕಿತ್ತೊಗೋವರೆಗೂ ಹೊಡೆದು ಆಮೇಲೆ ಹೇಳ್ತಾ ಇದ್ದೆ   ತು ನಿನ್ನ ಜನ್ಮಕ್ಕೆ,  ಯಾವಾಗ್ಲಾ ನಿನಗೆ ಚಟ್ಟ ಕಟ್ಟೋದು ಅಂತ ಹೇಳಿ, ನಡೀಲಾ ಕೆಂಪ ಹೋಗೋಣ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾರೆ...

ಮುದುಕಪ್ಪ  ಬಾಲ ಸುಟ್ಟ ಬೆಕ್ಕಿನ ಹಾಗೇ ನಿಂಗವ್ವ ಬೈಯೋದನ್ನ ಕೇಳಿಸ್ಕೊಂಡು ಇದ್ದು ಬಿಡ್ತಾನೆ.
ಅರಳಿ ಕಟ್ಟೇ ಹತ್ತಿರ ಇದ್ದಾ ಟೀ ಅಂಗಡಿ ಹತ್ತಿರ ಇದ್ದಾ ಊರಿನ ಕೆಲವು ಜನ, ನೋಡುರ್ಲ  ಇದು ತಾಯಿ ಪ್ರೀತಿ ಅಂದ್ರೆ,  ಹೆಣ್ಣಿನ ವಿಷಯ ಅಂತ ಮಗ ಅಂತ ನೋಡ್ದೆ ಮನೆಗೆ ಕರ್ಕೊಂಡು ಹೋಗಿ ಹೊಡೆದ್ಲು, ಈಗ ಸತ್ಯ ಗೊತ್ತಾಗಿದ್ದೆ,  ನೋಡು ಹೇಗ್ ಮಗನ ಪರ ಮಾತಾಡಿದ್ಲು ನಿಂಗಮ್ಮ,  ಇನ್ ಈ ಜನ್ಮದಲ್ಲಿ ಇನ್ನೊಬ್ಬರ ಮನೆ ವಿಷಯಕ್ಕೆ ಈ ಮುದುಕ ತಲೆ ಹಾಕಿ ಕೂಡ ಮಲಗಲ್ಲ.
ಪಾಳೇಗಾರ,,, ನಾನ್ ಅವತ್ತೇ ಹೇಳ್ದೆ ಅವನಿಗೆ ತಪ್ಪು ಮಾಡಿದೆ ನೀನು ಅಂತ,  ಬಡ್ಡಿ ಮಗ ನನ್ನೇ ಗತಿಗೆ ಇಲ್ದೆ ಇರೋವನ ಹಾಗೇ ನೋಡಿದ.  ಈಗ ನೋಡು  ಊರಿನ ಮಧ್ಯ ಹೇಗ್ ಮರ್ಯಾದೆ ಕಳ್ಕೊಂಡು ಕೂತವ್ನೆ.
ಬಿಡ್ಲಾ ಪಾಳೇಗಾರ  ಅಂತವನಿಗೆ ಹಿಂಗೇ ಆಗಬೇಕು. ನಿನ್ ಟೀ ಕುಡಿ ಅಂತಾನೆ ಇನ್ನೊಬ್ಬ ವ್ಯಕ್ತಿ.

                  **********

ಋಷಿತ್ ರೆಡಿ ಆಗಿ ಮಾಲ್ ಗೆ ಬರ್ತಾನೇ.  ಸಿಯಾ ಅವನಿಗೆ ಐಡಿ ಕಾರ್ಡ್ ಕೊಟ್ಟು. ಕೆಲಸದ ಬಗ್ಗೆ ಹೇಳೋಕೆ ಶುರು ಮಾಡ್ತಾಳೆ.  ಋಷಿತ್, ಸಿಯಾ ಹೇಳಿದನ್ನೆಲ್ಲ ಸ್ಪೀಡ್ ಆಗಿ ಅರ್ಥ ಮಾಡ್ಕೊಳ್ಳೋಕೆ ಶುರು ಮಾಡ್ತಾನೆ..
ಸಿಯಾ... ಶಾಕ್ ಆಗಿ, ಋಷಿ, ಸಾರೀ ಋಷಿತ್ ಇಫ್ ಡೋಂಟ್ ಮೈಂಡ್ ನೀವು ಏನ್ ಓದಿರೋದು.
ಋಷಿತ್,,,, ಬಿಸ್ನೆಸ್ ಮ್ಯಾನೇಜ್ಮೆಂಟ್  ಮುಗಿದಿದೆ. ಯಾಕೆ?
ಸಿಯಾ,,,, ಹೇಳಿದನ್ನೆಲ್ಲ ಇಷ್ಟು ಫಾಸ್ಟ್ ಆಗಿ ಅರ್ಥ ಮಾಡ್ಕೋತ ಇದ್ದೀರಾ ಅಲ್ವಾ ಅದಕ್ಕೆ ಕೇಳ್ದೆ.  ಅಂತ ಹೇಳಿ,  ನಿನಗೆ ಕೆಲವೊಂದು ಪರ್ಮಿಷನ್ ಇದೆ ಏನಪ್ಪಾ ಅಂದ್ರೆ, ಬಿಲೋ 50 ಒಳಗೆ, ನೀನು ಇಲ್ಲಿ ವರ್ಕ್ ಮಾಡೋ ಎಂಪ್ಲೋಯ್ಸ್ ಗೆ ಅವರಿಗೆ ಎಮರ್ಜೆನ್ಸಿ ಇದ್ದಾಗ ದುಡ್ಡನ್ನ ಕೊಡಬಹುದು.  ಮೇಡಂ ತನಕ ಹೋಗೋದು ಬೇಕಾಗಿಲ್ಲ, ಬಟ್ ಕೊಡೊ ಒಂದೊಂದು ರೂಪಾಯಿ ನಾ ಕೂಡ ಲೆಕ್ಕ ಮಾಡು.   ಆಫ್ಟರ್ ಲಂಚ್ ಬ್ರೇಕ್ ನೀನು ಮನೆಗೆ ಹೋಗಬಹುದು, ಅಸಿಸ್ಟೆಂಟ್ ನೋಡ್ಕೋತಾರೆ.  ಮತ್ತೆ 7 ಗೆ ಬಂದು  ನೈಟ್ 12 ವರೆಗೂ ಇರಬೇಕಾಗುತ್ತೆ,  ಆಮೇಲೆ ಅಕೌಂಟ್ ನಾ ಕ್ಲೋಸ್ ಮಾಡಿ ನೀನು ಮನೆಗೆ ಹೋಗಬಹುದು,  ನೆಕ್ಸ್ಟ್ ಡೇ ಅಕೌಂಟ್ಸ್ ಫೈಲ್ಸ್ ಮೇಡಂ  ಟೇಬಲ್ ಮೇಲೆ ಇರಬೇಕು. ಅರ್ಥ ಆಯ್ತಾ. 
ಋಷಿತ್.. ಹ್ಮ್ ಅರ್ಥ ಆಯಿತು.  
ಸಿಯಾ,,, ಓಕೆ  ಮಧ್ಯಾಹ್ನ ಅಷ್ಟೋತ್ತಿಗೆ, ಮೊಬೈಲ್ ಮತ್ತೆ ಬೈಕ್ ನಿನ್ನ ಕೈ ಸೇರುತ್ತೆ.   ಬಟ್ ಋಷಿತ್ ,  ನಿನಗೆ ಇನ್ನೊಂದು ಸಲ ಎಚ್ಚರಿಕೆ ಕೊಡ್ತಾ ಇದ್ದೀನಿ.  ಸೂರಜ್, ವಿರಾಜ್ ಹತ್ತಿರ ಸ್ವಲ್ಪ ಹುಷಾರಾಗಿ ಇರು.   ನಿನಗಿಂತ ಮೊದಲು ಇದ್ದಾ ಅಕೌಂಟ್ ಹೆಡ್ ಅವರ ಜೊತೆಗೆ ಸೇರಿಕೊಂಡು  ಅವರಿಗೆ ದುಡ್ಡು ಕೊಡ್ತಾ ಅವನು ದುಡ್ಡು ತಿಂತಾ ಇದ್ದಾ, ಅದೇನೋ ಹೇಳ್ತಾರೆ ಅಲ್ವಾ ಕೋತಿ ಬಾಳೆ ಹಣ್ಣನ್ನ ತಿಂದು ಸಿಪ್ಪೆ ನಾ ಮೇಕೆ ಬಾಯಿಗೆ ಒರೆಸ್ತು ಅಂತ  ಹಾಗೇ  ಅವನು ಸಿಕ್ಕಿ ಹಾಕಿಕೊಂಡ, ಇವರು ತಪ್ಪಿಸಿಕೊಂಡ್ರು.  ಇವರಿಗೆ ಸಪೋರ್ಟ್ ಆಗಿ ಇವರ ಅಪ್ಪಂದಿರು ಇದ್ದಾರೆ.  ಅದಕ್ಕೆ ಅವರಿಗೆ ಅಷ್ಟೊಂದು ಅಹಂಕಾರ.  ಬಂದು ದುಡ್ಡು ಕೊಡು ಅಂತ ಕೇಳಿ, ಇಲ್ದೆ ಇರೋ ಲೆಕ್ಕನ ತೋರಿಸು ಅಂತ ಹೇಳಿ ಹೊರಟು ಹೋಗ್ತಾರೆ. ಕೇಳಿಲ್ಲ ಅಂದ್ರೆ  ಭಯ ಬಿಳಿಸ್ತಾರೆ. ಸ್ವಲ್ಪ ಹುಷಾರು. 
ಋಷಿತ್... ಸರಿ ಸಿಯಾ ನಾನ್ ನೋಡ್ಕೋತೀನಿ. 
ಸಿಯಾ,,, ಲಾಸ್ಟ್ ಇಯರ್ ಅಕೌಂಟ್ ಡೀಟೇಲ್ಸ್ ನಾ ನಿನಗೆ ಕಳಿಸ್ತೀನಿ ಒಂದು ಸರಿ ಫೈಲ್ ನಾ ಸರಿಯಾಗಿ ಚೆಕ್ ಮಾಡಿ ನೋಡು ಏನಾದ್ರೂ ಡೌಟ್ ಇದ್ರೆ ನನ್ನ ಕೇಳು ಅಂತ ಹೇಳಿ ,  ಋಷಿತ್ ನಾ ಅವನ ಡೆಸ್ಕ್ ಅಲ್ಲಿ ಬಿಟ್ಟು ಅಲ್ ದಿ ಬೆಸ್ಟ್ ಹೇಳಿ ಹೊರಟು ಹೋಗ್ತಾಳೆ. 

ಋಷಿತ್ ಮಧ್ಯಾಹ್ನದವರೆಗೂ  ವರ್ಕ್ ಬಗ್ಗೆ ಕಲಿತು,  ಲಂಚ್ ನಾ ಮುಗಿಸಿಕೊಂಡು  ಚಾಮುಂಡೇಶ್ವರಿ ಅವರನ್ನ ನೋಡೋಕೆ ಹೋಗ್ತಾನೆ..
ಸಿಯಾ,,, ಋಷಿತ್ ನಾ ನೋಡಿ, ಋಷಿತ್ ನಾನೇ ನಿನಗೆ ಕಾಲ್ ಮಾಡೋಣ ಅಂತ ಇದ್ದೆ., ತಗೋ ಇದು ನಿನ್ನ ಹೊಸ ಸ್ಮಾರ್ಟ್ ಮೊಬೈಲ್, ಇದು ನಿನ್ನ ಹೊಸ ಬೈಕ್ ಕೀ,  ಬೈಕ್ ಸ್ಟಾಫ್ ಪಾರ್ಕಿಂಗ್ ಅಲ್ಲಿ ಇದೆ.  
ಋಷಿತ್,,, ತುಂಬಾ ಥ್ಯಾಂಕ್ಸ್ ಸಿಯಾ. ಮೇಡಂ ಇದ್ದಾರಾ? 
ಸಿಯಾ,,, ಅ ಇದ್ದಾರೆ ಇರು ಹೋಗಿ ಕೇಳ್ಕೊಂಡು ಬರ್ತೀನಿ ಅಂತ ಹೇಳಿ ಒಳಗೆ ಹೋಗಿ 2 ನಿಮಿಷದ ನಂತರ ಹೊರಗಡೆ ಬಂದು, ಋಷಿ ಸಾರೀ ಋಷಿತ್  ಬನ್ನಿ ಮೇಡಂ ಕರೀತಾ ಇದ್ದಾರೆ .
ಋಷಿತ್,,, ಸಿಯಾ ಮಾತಿಗೆ ನಕ್ಕು, ಸಿಯಾ ನಿಮಗೆ ಹೇಗೆ ನನ್ನ ಹೆಸರನ್ನ ಕರಿಬೇಕು ಅನ್ನಿಸುತ್ತೋ ಹಾಗೇ ಕರೀರಿ, ಅದ್ರೆ ಈ ರೀತಿ ಸಾರೀ ನಾ ಕೇಳೋಕೆ ಹೋಗಬೇಡಿ ಪ್ಲೀಸ್ ಅಂತಾನೆ.
ಸಿಯಾ,, ನಕ್ಕು, ಬಾ ಋಷಿ ಅಂತ ಹೇಳಿ ಆಫೀಸ್ ಒಳಗೆ ಕರ್ಕೊಂಡು ಹೋಗ್ತಾರೆ. 

ಚಾಮುಂಡೇಶ್ವರಿ ಋಷಿತ್ ನಾ ನೋಡಿ, ಹಾಯ್ ಋಷಿ, ಕೆಲಸ ಹೇಗ್ ಅನ್ನಿಸ್ತು.
ಋಷಿತ್... ಗುಡ್ ಮೇಡಂ, ಬೆಳ್ಳಿಗೆ ನಿಮ್ಮನ್ನ ನೋಡೋಣ ಅಂತ ಬಂದೆ, ಬಟ್ ನೀವಿನ್ನು ಬಂದಿರಲಿಲ್ಲ, ಸೋ ಅದಕ್ಕೆ ಮನೆಗೆ ಹೋಗೋ ಮೊದಲು ನಿಮ್ಮನ್ನ ಭೇಟಿ ಮಾಡಿ ಹೋಗೋಣ ಅಂತ ಬಂದೆ ಮೇಡಂ.
ಚಾಮುಂಡೇಶ್ವರಿ.. ಇಟ್ಸ್ ಓಕೆ, ಹೇಳು ಏನ್ ವಿಷಯ. ಕೆಲಸದಲ್ಲಿ ಏನಾದ್ರೂ ಡೌಟ್ಸ್ ಇದೆಯಾ? 
ಋಷಿತ್... ಮೇಡಂ ಮತ್ತೆ ಹೀಗೆ ಕೇಳ್ತಾ ಇದ್ದೀನಿ ಅಂತ ತಪ್ಪಾಗಿ ತಿಳ್ಕೊಬೇಡಿ,   ಲಾಸ್ಟ್ ಇಯರ್ ಅಕೌಂಟ್ಸ್ ನಾ ನೋಡಿದೆ.  ತುಂಬಾ ತಪ್ಪು ನಡೆದಿದೆ,  ಸಿಯಾ ಅವರು  ವಿಷಯ ಹೇಳಿದ್ರು  ನನಗಿಂತ ಮೊದಲು ವರ್ಕ್ ಮಾಡ್ತಾ ಇದ್ದವರು,  ಸುಳ್ಳು ಲೆಕ್ಕನ ತೋರಿಸಿ ದುಡ್ಡನ್ನ ತಿಂತಾ ಇದ್ರು ಅಂತ.   ಬಟ್ ಅವರು ಮಾಡ್ತಾ ಇದ್ದಾ ಕೆಲಸಕ್ಕೆ ತಿಂದ ದುಡ್ಡಿಗೆ ತುಂಬಾ ಅಜಾಗಜಾಂತರ ವ್ಯತ್ಯಾಸ ಇದೆ.    ಅಷ್ಟು ದುಡ್ಡನ್ನ ನಿಮಗೆ  ನಿಮ್ಮವರಿಗೆ ಗೊತ್ತಾಗದ ಹಾಗೇ ತಿನೋಕ್ಕೆ ತುಂಬಾ ಕಷ್ಟ. ಯಾಕಂದ್ರೆ  ಮಾಲ್ ಮ್ಯಾನೇಜರ್ ನಿಮ್ಮ ಮಗಳೇ ಅಂತ ಗೊತ್ತಾಯಿತು, ಅವರು ಇಲ್ಲದಾಗ ನಿಮ್ಮ ಫ್ಯಾಮಿಲಿ ಅವರೇ  ನೋಡ್ಕೋತಾರೆ ಅಂತ ಗೊತ್ತಾಯಿತು. ಅದು ಅಲ್ಲದೆ  ತುಂಬಾ ವರ್ಷಗಳಿಂದ ನಿಮ್ಮ ಹತ್ತಿರ ನಂಬಿಕೆ ಯಿಂದ ಕೆಲಸ ಮಾಡ್ತಾ ಇರೋವ್ರು ಇದ್ದಾರೆ ಅಂತಾನೂ ಗೊತ್ತಾಯಿತು.

ಚಾಮುಂಡೇಶ್ವರಿ ಅವರು ಋಷಿತ್ ಹೇಳೋದನ್ನ ಸೀರಿಯಸ್ ಆಗಿ ಕೇಳ್ತಾ ಇರ್ತಾರೆ.

ಋಷಿತ್,,, ಮೇಡಂ  ನನ್ನ ಪ್ಲೇಸ್ ಅಲ್ಲಿ ಮೊದಲು ಇದ್ದವರಿಗೆ ಇನ್ನೊಬ್ಬರ ಸಹಾಯ ಇಲ್ದೆ  ಅಷ್ಟೊಂದು ದುಡ್ಡನ್ನ ತಿನ್ನೋಕೆ ಸಾಧ್ಯ ಇಲ್ಲಾ.

ಚಾಮುಂಡೇಶ್ವರಿ,,,, ಏನ್ ಹೇಳ್ತಾ ಇದ್ದಿಯಾ ಋಷಿ..
ಋಷಿತ್... ಹೌದು ಮೇಡಂ,  ಹಣ್ಣು ತಿಂದವರು ತಪ್ಪಿಸಿಕೊಂಡು ಸಿಪ್ಪೆ ತಿಂದವರು ಸಿಕ್ಕಿ ಹಾಕಿ ಕೊಂಡಿದ್ದಾರೆ.  ಅದಕ್ಕೆ ನಾನು ನಿಮ್ಮನ್ನ ಮತ್ತೆ ಕೇಳ್ತಾ ಇದ್ದೀನಿ,  ನನಗೆ ಇರೋ ಅಧಿಕಾರದಲ್ಲಿ ಎಮರ್ಜೆನ್ಸಿ ಗೆ ವರ್ಕ್ ಮಾಡೋ ಎಂಪ್ಲೋಯ್ಸ್ ಗೆ 50 ಸಾವಿರ ತನಕ ಕೊಡಬಹುದು,  ಇದಕ್ಕೂ ಮೀರಿ  ಯಾರಾದ್ರೂ, ಉದಾಹರಣೆ ಗೆ ನಿಮ್ಮ ಮಗಳೇ ಆಗಿರಲಿ, ನಿಮ್ಮ ಅಣ್ಣ, ತಂಗಿ ಮಕ್ಕಳೇ ಆಗಿರಲಿ ಅವರು ಬಂದು  ಹಣ ಕೊಡು ಅಂತ ಕೇಳಿದ್ರೆ   ನಾನು ಕೊಡಬೇಕಾ? ಬೇಡ್ವಾ?   ಯಾಕಂದ್ರೆ ನಾಳೆ ನೀವೇ ಆಗಲಿ ನಿಮ್ಮ ಫ್ಯಾಮಿಲಿ ಅವರೇ ಆಗಿರಲಿ, ದುಡ್ಡು ಯಾಕೆ ಕೊಟ್ಟಿಲ್ಲ ಅಂತ ನನ್ನ ಪ್ರಶ್ನೆ ಮಾಡಬಾರದು ಅಲ್ವಾ ಅದಕ್ಕೆ.   ಯಾರ್ ಯಾರಿಗೆ ನಿಮ್ಮ ಪರ್ಮಿಷನ್ ಇಲ್ದೆ ದುಡ್ಡನ್ನ ಕೊಡಬಹುದು ಅಂತ ಹೇಳಿದ್ರೆ ಅವರು ಬಂದು ಕೇಳಿದಾಗ ದುಡ್ಡನ್ನ ಕೊಟ್ಟು ಅಕೌಂಟ್ ಅಲ್ಲಿ ಮೆಂಷನ್ ಮಾಡ್ತೀನಿ.   ಇಲ್ಲಾ ನಿಮ್ಮ ಪರ್ಮಿಷನ್ ಇಲ್ದೆ ಯಾರಿಗೂ ಒಂದು ರೂಪಾಯಿ ಕೊಡಬಾರ್ದು ಅಂತ ಹೇಳಿದ್ರೆ, ಯಾವುದೇ ಕಾರಣಕ್ಕೂ ಕೊಡೋದಿಲ್ಲ. 

ಚಾಮುಂಡೇಶ್ವರಿ,,, ಋಷಿತ್ ಹೇಳಿದ್ದನ್ನ ಕೇಳಿ, ಋಷಿತ್ ಇದು ಬಿಸ್ನೆಸ್,  ಮನೆ ಅಲ್ಲ,   ಇಲ್ಲಿ ಎಲ್ಲರೂ ನನಗೆ ಒಂದೇ.  ಸೋ  ನಿನಗೆ ಫುಲ್ ಪರ್ಮಿಷನ್ ಕೊಡ್ತಾ ಇದ್ದೀನಿ,  ಕಂಪನಿ ಎಂಪ್ಲೋಯ್ಸ್ ಪ್ರಾಬ್ಲಮ್ ಅಂತ ನಿನ್ನ ಹತ್ತಿರ ಬಂದು ಕೇಳಿದ್ರೆ , ದುಡ್ಡನ್ನ ಕೊಟ್ಟು ಅಕೌಂಟ್ ಅಲ್ಲಿ ಮೆಂಷನ್ ಮಾಡು,  50 ಸಾವಿರದವರೆಗೂ ಅಲ್ಲ ಒಂದು ಲಕ್ಷ ದವರೆಗೂ.  ಒಂದುವೇಳೆ ನನ್ನ ಫ್ಯಾಮಿಲಿ ಅವರು ಏನಾದ್ರೂ ಬಂದು ಕೇಳಿದ್ರೆ, ನಾನ್ ಕೊಡೊ ಚೆಕ್ ನಾ ನೋಡಿ ಅದರಲ್ಲಿ ಎಷ್ಟು ಅಮೌಂಟ್ ಇರುತ್ತೋ ಅಷ್ಟು ದುಡ್ಡನ್ನ ಮಾತ್ರ ಕೊಡು.  ಅದಕ್ಕೂ ಮೇಲೆ ಒಂದು ರೂಪಾಯಿ ಕೊಡಬೇಡ.
ಋಷಿತ್... ಓಕೆ ಥ್ಯಾಂಕ್ಸ್ ಮೇಡಂ, ಇಫ್ ಯು ಡೋಂಟ್ ಮೈಂಡ್  ನಿಮ್ಮ ಸೈನ್ ತೋರಿಸ್ತೀರಾ.
ಚಾಮುಂಡೇಶ್ವರಿ ನಕ್ಕು ಪೇಪರ್ ಮೇಲೆ ಸೈನ್ ಮಾಡಿ  ನೋಡು ಇದೆ  ನನ್ನ ಸಿಗ್ನೇಚರ್ ಅಂತ ಹೇಳ್ತಾರೆ.

ಋಷಿತ್,,, ಚಾಮುಂಡೇಶ್ವರಿ ಅವರ ಸೈನ್ ನೋಡಿ, ಪಕ್ಕ ಇದೆ ಅಲ್ವಾ ಮೇಡಂ.
ಚಾಮುಂಡೇಶ್ವರಿ... ಹ್ಮ್ 100 % ಇದೆ ನನ್ನ ಸಿಗ್ನೇಚರ್.
ಋಷಿತ್... ಓಕೆ ಥ್ಯಾಂಕ್ಸ್ ಮೇಡಂ. ನಿಮಗೆ ತೊಂದ್ರೆ ಕೊಟ್ಟಿದ್ದಕ್ಕೆ ಐಮ್ ಸಾರೀ ಮೇಡಂ ನಾನ್ ಇನ್ನು ಹೊರಡ್ತೀನಿ. ಅಂತ ಹೇಳಿ ಹೋಗೋವಾಗ. 
ಚಾಮುಂಡೇಶ್ವರಿ... ಋಷಿ, ಕೊಟ್ಟ ಅಡ್ವಾನ್ಸ್ ದುಡ್ಡನ್ನ ಏನ್ ಮಾಡಿದೆ.  ಸಿಟಿ ಲೈಫ್ ಗೆ ಏನಾದ್ರೂ? 
ಋಷಿತ್,,, ಚಾಮುಂಡೇಶ್ವರಿ ಕಡೆ ನೋಡಿ ನಕ್ಕು, ಇನ್ನು ಅಷ್ಟು ಹಾಳಾಗಿಲ್ಲ ಮೇಡಂ,  ಬದುಕೋಕೆ ಬಂದಿದ್ದೀನಿ ಹಾಳಾಗೋದಕ್ಕೆ ಅಲ್ಲ. ನಾನಿನ್ನ ಬರ್ತೀನಿ ಮೇಡಂ ಅಂತ ಹೇಳಿ  ಅಲ್ಲಿಂದ ಹೊರಗಡೆ ಹೋಗ್ತಾನೆ.

ಸಿಯಾ,,, ಮೇಡಂ ಹೀಗೆ ಹೇಳ್ತಿನಿ ಅಂತ ಕೋಪ ಮಾಡ್ಕೋಬೇಡಿ. ಋಷಿತ್ ನಾ  ತುಂಬಾ ನಂಬುತ್ತಾ ಇದ್ದೀರಾ.
ಚಾಮುಂಡೇಶ್ವರಿ.. ನಕ್ಕು,,, ಅಲ್ವೇ ಸಿಯಾ,  ಹುಡುಗ ನೋಡೋಕೆ ಹ್ಯಾಂಡ್ ಸಂ ಆಗಿ, ಒಳ್ಳೆ ಹೈಟ್  ಪರ್ಸನಲಿಟಿ, ಒಳ್ಳೆ ಕಲರ್ ಇದ್ದಾನೆ,  ನೀನೆಲ್ಲಿ ನನ್ನ ಕೆಲಸಾನ ಮರೆತು ಅವನನ್ನ ಇಂಪ್ರೆಸ್ ಮಾಡೋದ್ರಲ್ಲಿ ಇದ್ದೋಗ್ತಿಯ ಅಂತ ನಾನ್ ಅನ್ಕೊಂಡು ಇದ್ರೆ,  ನಿನ್ ನೋಡಿದ್ರೆ ನಂಬೇಡ ಅಂತ ಇದ್ದಿಯಾ? 
ಸಿಯಾ,,, ಚಾಮುಂಡೇಶ್ವರಿ ಮಾತಿಗೆ ತುಸು ಕೋಪ ಮಾಡಿಕೊಂಡು,,,, ಮೇಡಂ ಅಂತಾಳೆ.
ಚಾಮುಂಡೇಶ್ವರಿ,,, ನಕ್ಕು ಸುಮ್ನೆ ತಮಾಷೆ ಮಾಡಿದೆ ನಡಿ ಹೋಗಿ ಲಂಚ್ ಮಾಡ್ಕೊಂಡು ಬರೋಣ ಅಂತ ಹೇಳಿ, ಅಲ್ಲಿಂದ ಹೊರಡ್ತಾರೆ...


@@@@@@@@@@@@@@@@@@@@@@@@@@@@@@@@