ಅಧ್ಯಾಯ 25 : "ಜಾನುವಿನ ಫೋಟೋಗೆ ಫಿದಾ ಆದ ರೋಹನ್"
ರೋಹನ್ ನಾ ಆ ಮಾತುಗಳು.. ಮೋಹನ್ ಮತ್ತು ಪೂರ್ವಿಯ ಮನದಲ್ಲಿ ಆತಂಕ..
ಆಗ ಮೋಹನ್ "ರೋಹನ್ ಇದೇನಿದು ನಮ್ಮ ಎಲ್ಲಾ ಪ್ಲಾನ್ ಸಕ್ಸಸ್ ಆಗುತ್ತೆ ಅನ್ನೋವಾಗ..
ನೋಡು ಮಗನೆ ನನ್ನ ಮಾತು ಕೇಳು"
"ರೋಹನ್ ಅವರ ಅಪ್ಪನಾಡುವ ಮಾತುಗಳನ್ನು ಪೂರ್ತಿ ಕೇಳದೆ ಸಾಕು ಅಪ್ಪ.. ಇನ್ನೂ ನಿಮ್ಮ ಪ್ಲಾನ್ಗು ನನಗೂ ಯಾವುದೇ ಸಂಬಂಧ ಇಲ್ಲ ದಯವಿಟ್ಟು ಇಬ್ಬರೂ ನನ್ನ ಬಿಟ್ಟು ಬಿಡಿ"...
"ಆಗ ಪೂರ್ವಿ ರೋಹನ್ ಪ್ಲೀಸ್ ನನ್ನ ಪ್ಲಾನ್ ಎಲ್ಲ ಹಾಳು ಮಾಡ್ಬೇಡ...ಆದರೆ ರೋಹನ್ ಇವರ ಮಾತುಗಳನ್ನು ಕೇಳುವಷ್ಟು ಅವನ ಬಳಿ ತಾಳ್ಮೆ ಅನ್ನೋದೇ ಇರೋದಿಲ್ಲ ಸಿದ ಅಲ್ಲಿಂದ ಹೊರಟು ಕೆಳಗಡೆ ಹಾಲ್ ಗೆ ಬರ್ತಾನೆ.. ಇವರು ಸಹ ಅವನ ಹಿಂದೇನೆ ಬರ್ತಾರೆ"
"ರೋಹನ್ ಸೀದಾ ಬಂದು ಸೋಫಾದ ಮೇಲೆ ಕುರ್ತಾನೆ ಅವನ ಮುಖದಲ್ಲಿ ಕೋಪ ಮತ್ತು ಚಿಂತೆ ಎರಡು ಎದ್ದು ಕಾಣಿಸುತ್ತಿರುತ್ತದೆ ಅವಾಗ ಅವರ ಅಮ್ಮ ಪವಿತ್ರಾ ಕಿಚನ್ ಇಂದ ಬಂದು.. ರೋಹನ್ ಯಾಕೋ ಮಗನೆ ಮುಖಾನ ಹೀಗೆ ಮಾಡ್ಕೊಂಡಿದೀಯಾ? ನಿಮ್ಮ ಅಪ್ಪ ಏನಾದ್ರೂ ಬೈದ್ರಾ"?...
ರೋಹನ್ ಉತ್ತರ ಕೊಡೋಕು ಮುಂಚೆ ಮೋಹನ್ ಮಾತಿಗೆ ಮುಂದಾಗುತ್ತಾನೆ, ಹಾಗೇನೂ ಇಲ್ಲಾ ಕಣೆ ಇವನಿಗೆ ಈಗ ಈ ಮದುವೆ ಇಷ್ಟ ಇಲ್ಲಾ ಅಂತೆ.. ನಾವು ಅಲ್ಲಿ ಎಲ್ಲಾ ಮಾತಾಡ್ಕೊಂಡು ಬಂದು ಇವನು ಈಗ ಹೀಗೆ ಹೇಳಿದ್ರೆ ನಾವು ಶಶಿಧರ್ ಫ್ಯಾಮಿಲಿ ಗೆ ಏನು ಅಂತ ಉತ್ತರ ಕೊಡೋದು ನೀನೇ ಹೇಳು"?
ಈ ಪೂರ್ವಿ ಮನದಲ್ಲಿನ ದುಗುಡ ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ ಅದೇ ಸಮಯಕ್ಕೆ ಸರಳಾ ಸಹ ಬರುತ್ತಾರೆ...
ಮೋಹನ್ : "ನೋಡು ರೋಹನ್ ನಮಗೆ ಶಶಿಧರ್ ಫ್ಯಾಮಿಲಿ ಅಂತ ಮನೆತನ ಎಲ್ಲೀ ಹುಡುಕಿದರೂ ಮತ್ತೆ ಸಿಗೋಲ್ಲ.. ಅವರ ಮನೆ ಮಕ್ಕಳೆಲ್ಲಾ ಒಳ್ಳೆ ಸಂಸ್ಕಾರದಿಂದ ಬೆಳೆದು ಬಂದವರು ನಾವೆಲ್ಲ ಅಲ್ಲಿ ನಿನ್ನ ಮದುವೆ ಬಗ್ಗೆ ಸಹ ಮಾತಾಡ್ಕೊಂಡು ಬಂದ್ರೆ ನೀನು ಇಲ್ಲಿ ಈ ಮದುವೆನೇ ಬೇಡ ಅಂತೀದೀಯಾ"..
"ರೋಹನ್ ಅವರ ಅಪ್ಪನ ಕಡೆ ಒಂದು ನೋಟವನ್ನು ಹಾಯಿಸ್ತಾನೆ.. ಯಾಕೆಂದ್ರೆ ಅವರ ಉದ್ದೇಶನೆ ಬೇರೆ ಇರುತ್ತೆ.. ಈಗ ಅವರ ಅಮ್ಮ ಪವಿತ್ರಾ ಮತ್ತು ಸರಳಾ ಇಬ್ಬರು ಇರೋದ್ರಿಂದ ಮೋಹನ್ ನಾ ನಾಟಕದ ಮಾತುಗಳು ರೋಹನ್ಗೆ ಸಹಜವಾಗಿ ಗೊತ್ತಾಗುತ್ತದೆ"...
ಆಗ ಸರಳಾ ಸಹ ಹೌದು ರೋಹನ್ ಅಪ್ಪ ಹೇಳಿದ್ದು ಸರಿಯಾಗೇ ಇದೆ.. ಹುಡುಗಿ ಸಹ ತುಂಬಾ ಲಕ್ಷಣವಾಗಿ ಇದ್ದಾಳೆ ನಿನಗಂತೂ ಹೇಳಿ ಮಾಡಿಸಿದ ಜೋಡಿ... ಅಂತ ಹೇಳಿದ್ರು ಅಲ್ವಾ.. ಕಳಸಿದ್ರೆ ಅದನ್ನ ನಮ್ಮ ರೋಹನ್ ಗು ತೋರಿಸು..
ಮೋಹನ್ : "ಹಾ!!.. ಅಮ್ಮ ಕಳ್ಸಿದಾರೆ ಇಲ್ಲಿ ನೋಡೋ ರೋಹನ್ ಅಂತಾ ಅವನ ಹತ್ರ ಇರೋ ಟೇಬಲ್ ಮೇಲೆ ಮೊಬೈಲ್ ನಾ ಇಡ್ತಾನೆ"...
ಆದರೆ ರೋಹನ್ ಯಾರ ಮಾತನ್ನೂ ಕೇಳೋ ಸ್ಥಿತಿಯಲ್ಲಿ ಇರೋದಿಲ್ಲ... ಸಾಕು!.. ಯಾಕೆ ಎಲ್ಲರೂ ನಂಗೆ ಹೀಗೆ ಟಾರ್ಚರ್ ಮಾಡ್ತಿದಿರಾ ಒಂದ್ಸಲ ಹೇಳಿದ್ರೆ ನಿಮಗೆಲ್ಲ ಅರ್ಥ ಆಗ್ತಿಲ್ವಾ
ನಂಗೆ ಈ ಮದುವೆ ಲೀ ಯಾವುದೇ ಇಂಟ್ರೆಸ್ಟ್ ಇಲ್ಲ ನಾನು ನನ್ನ ಲೈಫ್ ನಾ ಆರಾಮಾಗಿ ಎಂಜಾಯ್ ಮಾಡೋಕೆ ಬಿಡಿ ನಿಮ್ಮ ಕೈ ಮುಗಿತೀನಿ...
"ಪೂರ್ವಿಗಂತೂ ಅವನ ಮಾತುಗಳನ್ನು ಕೇಳಿದಾಗ ಮನಸಲ್ಲಿ ಅಯ್ಯೋ.. ಮುಗೀತು ನನ್ನ ಪ್ಲಾನ್ ಎಲ್ಲಾ ಈ ರೋಹನ್ ಹಾಳುಮಾಡ್ತಿದಾನೆ.. ರೋಹನ್ ಪ್ಲೀಸ್ ಕಣೋ ಒಂದು ಸಲ ಆ ಹುಡುಗಿ ಫೋಟೋ ನೋಡೋ .. ಅದಾದಮೇಲು ನಿಂಗೆ ಇಷ್ಟ ಆಗದೆ ಇದ್ರೆ.. ಈ ಮದುವೆ ಬಗ್ಗೆ ಯಾರು ಮಾತಾಡೋದೆ ಇಲ್ಲ ಓಕೆ ನಾ"...
ಮೋಹನ್ :" ಪೂರ್ವಿ ಏನಮ್ಮಾ ಹೇಳ್ತಿದೀಯಾ?.. ಆಗ ಪೂರ್ವಿ ಅಂಕಲ್ ಸ್ವಲ್ಪ ಸುಮ್ನೆ ಇರಿ.. ಅಂತ ಅವರಿಗೆ ಕಣ್ಣಲ್ಲೇ ಸನ್ನೆ ಮಾಡ್ತಾಳೆ.. ಆಗ ಮೋಹನ್ ಸಹ ಮೌನ ಆಗ್ತಾರೆ"..
ಪವಿತ್ರಾ : "ನೋಡೋ ಮಗನೆ.. ನಿಜವಾಗ್ಲೂ ಅವಳು ಅಪ್ಸರೆ ತರ ಇದಾಳೆ ಕಣೋ ಒಂದ್ಸಲ ನೋಡು"...
"ಸರಿ!.. ಸರಿ!.. ಫೋಟೋ ನೋಡಿದ್ಮೇಲು ಇಷ್ಟ ಆಗ್ದೆ ಇದ್ರೆ ನಂಗೆ ಫೋರ್ಸ್ ಮಾಡಲ್ಲಾ ತಾನೆ..
ಆಗ ಪೂರ್ವಿ ಹೌದು ಅಂತಾ ಹೇಳ್ತಾಳೆ"..
ರೋಹನ್ : "ಸರಿ ಹಾಗಿದ್ರೆ ಇದು ಒಂದು ಆಗಿ ಬಿಡ್ಲಿ... ಇಷ್ಟವಿಲ್ಲದೇ ಬೇಸರದಿಂದ ತನ್ನ ಕೈಗಳನ್ನು ಫೋನಿನತ್ತಾ ಚಾಚಿ ಫೋನನ್ನು ಕೈ ಗೆ ತಗೋತಾನೆ... ಅವಳ ಫೋಟೋ ನೋಡುತ್ತಿದ್ದ ಹಾಗೆ ಸ್ಟಂಟ್ ಆಗಿ ಬಿಡ್ತಾನೆ ತನ್ನ ನೋಟಗಳನ್ನು ಆ ಫೋಟೋನತ್ತಾ ಬಿಟ್ಟು ಮತ್ತೆಲ್ಲಿ ಹಾಯಿಸುತ್ತಲೆ ಇಲ್ಲಾ".....
"ಈ ಕಡೆ ಇವರೆಲ್ಲರಿಗೂ ಅವನ ಉತ್ತರ ಏನಾಗಿರುವುದೋ ಎಂಬ ಕಳವಳ ಆತಂಕ.. ಪೂರ್ವಿ ಗಂತೂ ಹೃದಯ ಕೈಗೆ ಬಂದಂತಾಗಿರುತ್ತದೆ... ಪೂರ್ವಿ ಭಯದಲ್ಲೇ ರೋಹನ್.. ರೋಹನ್ ಅಂತ ಅವನನ್ನು ಕರೀತಾಳೆ ಆದರೆ ಇವಳ ದ್ವನಿ ಅವನ ಕಿವಿ ಹತ್ತಿರವು ಸುಳಿದಿರುವುದಿಲ್ಲ ಕಾರಣ ಅವನ ಮನಸ್ಸೆಲ್ಲಾ ಆ ಪೋಟೋನತ್ತಾ ಮಾತ್ರ ಇರುತ್ತದೆ"..
ಪವಿತ್ರಾ : "ಮಗನೆ... ಅಂತ ಅವನ ಭುಜವನ್ನು ತಟ್ಟಿ.. ಸ್ವಲ್ಪ ಅಲುಗಾಡಿಸುತ್ತಾಳೆ.. ಆಗಲೇ ರೋಹನ್ ವಾಸ್ತವಕ್ಕೆ ಬರುತ್ತಾನೆ".. ಆ! ಅಮ್ಮ..
ಮೋಹನ್ : "ಲೋ ನಿನ್ನ ಎಸ್ಟೊತಿಂದಾ ಕರಿತಾನೆ ಇದ್ದಾರೆ ಯಾವ ಲೋಕದಲ್ಲಿ ಮುಳುಗಿದೀಯೋ... ಹುಡಗಿ ಇಷ್ಟಾ ಆದಳ"?
ಆಗ ಕುಳಿತಿದ್ದ ರೋಹನ್ ದಿಢೀರನೆ ಎದ್ದು ನಿಲ್ತಾನೆ... ಪೂರ್ವಿಯ ಮುಖದಲ್ಲಿ ಮತ್ತೆ ಆತಂಕ ಹೆಚ್ಚಾಗಿ.. ಯಾಕೋ ಇಷ್ಟಾ ಆಗ್ಲಿಲ್ವಾ?
ಇಷ್ಟಾನಾ?... ಹ್! ಬರಿ ಇಷ್ಟಾ ಅಲ್ಲಾ.. ತುಂಬಾ.. ತುಂಬಾ.. ತುಂಬಾ ಇಷ್ಟಾ ಆದ್ಲು.. ಅವರ ಅಪ್ಪ ನತ್ತ ಹೆಜ್ಜೆ ಹಾಕುತ್ತಾ ಅಪ್ಪಾ.. ಇವಳ ಹೆಸರೇನು? ಆಗ ಮೋಹನ್ ಜಾಹ್ನವಿ ಎಂದು ಉತ್ತರಿಸುತ್ತಾರೆ..
"ಜಾಹ್ನವಿ!... ಜಾಹ್ನವಿ!.. ನನ್ನ ಜಾನು ಅಂತ ಇಡೀ ಮನೆಗೆ ಕೇಳೋ ಹಾಗೆ ಕಿರುಚುತ್ತಾನೆ... ಆಗ ಅಲ್ಲಿರುವ ಎಲ್ಲರಿಗೂ ಹೀಗೆ ಹೇಳ್ತಾನೆ.. ಅಮ್ಮ ನಿಂಗೊತ್ತಾ ಇದು ವರೆಗೂ ಎಷ್ಟೋ ಹುಡುಗೀರ ಜೊತೆ ಫ್ರೆಂಡ್ಶಿಪ್ ಮಾಡಿದೀನಿ ಅಷ್ಟೇ ಅಲ್ಲ ಅವರ ಜೊತೆ ಡೇಟ್ ಸಹ ಮಾಡಿದೀನಿ ಆದ್ರೆ ನಾನು ಜೆಸ್ಟ್ ಎಂಜಾಯ್ ಮೆಂಟ್ ಗೆ ಅವರೊಟ್ಟಿಗೆ ಇರ್ತಿದ್ದೆ..ನನ್ನ ಪ್ರಕಾರ ಎಲ್ಲರೊಟ್ಟಿಗೆ ಎಂಜಾಯ್ ಮಾಡೋದು ,ಲೈಫ್ ನಾ ಚಿಲ್ ಮಾಡೋದು, ಇದಷ್ಟೇ ಲೈಫ್ ಅನ್ಕೊಂಡಿದ್ದೆ... ಬಟ್ ಯಾವಾಗ ಇವಳ ಈ ಫೋಟೋ ನೋಡಿದ್ನೋ ಇವಳು ನನ್ನ ಅಭಿಪ್ರಾಯನೆಲ್ಲಾ ಬದಲಾಯಿಸಿ ಬಿಟ್ಟಳು.. ನಿಜ ಹೇಳ್ಲಾ ಅಜ್ಜಿ ಫುಲ್ ಫಿದಾ ಆಗೋದೇ ಹುಡುಗಿ ಅಂದ್ರೆ ಹೀಗೆ! ಹೀಗೆ! ಇರ್ಬೇಕು... ನಂಗೆ ಇದುವರೆಗೂ ಯಾವ ಡ್ರೀಮ್ ಗರ್ಲ್ ಸಹ ಇಲ್ಲಾ ಬಟ್ ಈಗ ಇವಳೇ ನನ್ನ ಡ್ರೀಮ್ ಗರ್ಲ್ ಇವಳೇ ನನ್ನ ಸರ್ವಸ್ವ ಅದೆಂತಾ ರೂಪ..ಅವಳ ಆ ನಗು.. ಓ ಮೈ ಗಾಡ್ ಹುಚ್ಚು ಹಿಡಿಸ್ತಿದಾಳೆ.. ಅಲ್ಲಾ ಅವಳು ಪೋಟೋದಲ್ಲೇ ಇಷ್ಟು ಸುಂದರವಾಗಿದಾಳೆ ಅಂದ್ರೆ ಇನ್ನೂ ರಿಯಲ್ ಆಗಿ ಅದೆಷ್ಟು ಸುಂದರವಾಗಿರಬೇಕು... ಅಪ್ಪ.. ಪ್ಲೀಸ್ ಇನ್ನೂ ಲೈಫ್ ನಲ್ಲಿ ನಿಮಗೇನು ಕೇಳೋಲ್ಲಾ ಬಟ್ ನನ್ನ ಜಾನು ನಾ ನಂಗೆ ಬೇಕು ಅಷ್ಟೇ ಅದೇನು ಮಾಡ್ತಿರೋ ನಂಗೊತ್ತಿಲ್ಲ ಅದಷ್ಟು ಬೇಗ ಇವಳೊಂದಿಗೆ ನಂಗೆ ಮದುವೆ ಆಗ್ಬೇಕು ಅಷ್ಟೇ"..
"ಪೂರ್ವಿಗಂತೂ ಹೇಳಲಾಗದಷ್ಟು ಆನಂದ.. ನೋಡಿದ್ರಾ ಅಂಕಲ್ ಹುಡುಗ ಫೋಟೋ ನೋಡ್ತಾನೆ ಫಿದಾ ಆಗೋದಾ... ಮೋಹನ್ ಸಹ ಮುಗುಳ್ನಗೆ ನಗುತ್ತಾ.. ಅಬ್ಬಾ ಅಂತೂ ಒಪ್ಗೊಂಡ್ನಲ್ಲಾ... ಸದ್ಯ ಎಲ್ಲಾ ಒಳ್ಳೇದೆ ಆಯ್ತು"...
ರೋಹನ್ :" ಅಪ್ಪಾ.. ಅಪ್ಪಾ.. ಪ್ಲೀಸ್ ನಾನು ಇವಳನ್ನು ಈಗಲೇ ನೋಡ್ಬೇಕು ಅನಿಸ್ತಿದೆ ಬನ್ನಿ ಹೋಗೋಣ ಅಂತ ಅವರ ಕೈಯನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ"..
"ಆಗ ಪವಿತ್ರಾ ಮದ್ಯವಹಿಸಿ ಮಗನೆ.. ಸಮಾಧಾನ,ಅವಳು ಇಲ್ಲಿ ಇಲ್ಲಾ ಮಗನೆ"..
"ರೋಹನ್ ಆತಂಕದಿಂದ ಇಲ್ಲಿ ಇಲ್ಲಾ ಅಂದ್ರೆ.. ಏನಮ್ಮ"..
ಮೋಹನ್ : "ಕೂಲ್ ಮಗನೆ ಅವಳು ಈಗ ಜರ್ಮನಿಲಿ ಇದಾಳೆ ಇನ್ನೂ ಅವಳ ಎಜುಕೇಶನ್ ಕಂಪ್ಲೀಟ್ ಆಗಿಲ್ವಂತೆ.. ಅವಳು ಇಂಡಿಯಾ ಗೆ ಬಂದ ತಕ್ಷಣವೇ ನಿಮ್ಮಿಬ್ಬರ ಮದುವೆ ಓಕೆ ನಾ"..
"ರೋಹನ್ ಮುಖದಲ್ಲಿ ನಿರಾಸೆ ಏನು ಈ ಸುಂದರಿನಾ ಮೀಟ್ ಆಗೋಕೆ ಇನ್ನೂ ಕಾಯ್ಬೇಕ..ನಂಗೆ ತುಂಬಾ ಕಷ್ಟಾ ಆಗುತ್ತೆ ಅಪ್ಪಾ"..
ಆಗ ಪೂರ್ವಿ ಏನೋ ಇಷ್ಟೊತನಕ ಈ ಮದುವೆನೇ ಬೇಡ ಅಂತಿದ್ದವನು.. ಈಗ ಯಾವಾಗ ಆಗುತ್ತೋ ಅಂತ ಪರಿತಪಿಸ್ತಿದೀ ಅಲ್ವೋ... ಅಷ್ಟು ಇಷ್ಟಾ ಆದಳಾ ನಿಂಗೆ ?
ಎಲ್ಲಿ ನಂಗೂ ತೋರಿಸು ಅಂತ ಅವನ ಕೈ ಯಲ್ಲಿರುವ ಮೊಬೈಲ್ ನಾ ತೆಗೆದುಕೊಂಡು ನೋಡ್ತಾಳೆ...
ನೋಡುತ್ತಲೆ ಅವಳ ಮುಖಭಾವನೆಗಳು ಗೊತ್ತಿಲ್ಲದಂತೆ ಬದಲಾಗುತ್ತವೆ.. ಓ ಮೈ ಗಾಡ್..
ಇಷ್ಟು ಬ್ಯೂಟಿಫುಲ್ ಆಗಿರೋ ಹುಡುಗಿನ ಇದುವರೆಗೂ.. ನಾ ನೋಡೇ ಇಲ್ಲ ರೋಹನ್ ನಿಜವಾಗ್ಲೂ ಇವಳು ಅಪ್ಸರೆನೆ.. ನಿಜ ಹೇಳ್ಬೇಕು ಅಂದ್ರೆ ನಂಗೆ ಜೆಲಸ್ ಫೀಲ್ ಆಗ್ತಿದೆ ಇವಳನ್ನ ನೋಡಿ..ಆಗ ಅವಳ ಕೈಲಿರುವ ಮೊಬೈಲ್ ನಾ ಮತ್ತೆ ರೋಹನ್ ಕಸಿದುಕೊಳ್ತಾನೆ..
ನನ್ನ ಹುಡುಗಿ ಮೇಲೆ ಯಾರ ದೃಷ್ಟಿ ಬೀಳೋಕು ನಾನು ಬಿಡೋದಿಲ್ಲ...ಅಂತ ಹೇಳಿ ಆ ಮೊಬೈಲ್ ನಲ್ಲಿರುವ ಜಾನು ಗೆ ಮುತ್ತನಿಡುತ್ತಾನೆ... ಅಮ್ಮ.. ನಾನು ಮೊದಲು ಒಪ್ಗೊಂಡಿದ್ದು ಅಪ್ಪನ ಬಲವಂತಕೋಸ್ಕರ... ಬಟ್ ಈಗ ನೀವೇ ಇವಳನ್ನ ಬಿಡು ಅಂದ್ರು ನಾನ್ ಮಾತ್ರ ಖಂಡಿತಾ ಇವಳನ್ನ ಬಿಡೋದಿಲ್ಲ..
ಮೋಹನ್ ಕಿರುನಗೆ ಬೀರುತ್ತಾ ನಾವು ಹಾಗೆ ಹೇಳೋದೇ ಇಲ್ಲಾ ಕಣೋ.. ಅಮ್ಮ ಈಗಲೇ ನಾನು ಶಶಿಧರ್ ಗೆ ಕಾಲ್ ಮಾಡಿ ನಮ್ಮ ಮಗ ಒಪ್ಗೊಂಡುದ್ದಾನೆ ಅಂತ ವಿಷಯ ತಿಳಿಸ್ತೀನಿ.. ರೋಹನ್ ನನ್ನ ಫೋನ್ ಕೊಡೋ... ರೋಹನ್ ಅವನ ಅಪ್ಪನ ಕಡೆ ನೋಟ ಹಾಯಿಸಿ ಇಲ್ಲ ಅಪ್ಪ ನಾನು ಕೊಡೋಲ್ಲಾ..
ಮೋಹನ್ :" ಅಯ್ಯೋ.. ನಿನ್ನ ಮೊಬೈಲ್ ಗೆ ಫೋಟೋ ನಾ ಶೇರ್ ಮಾಡ್ತೀನಿ ಈಗ ಕೊಡೋ ಕಾಲ್ ಮಾಡ್ಬೇಕು.. ಆಗ ಸರಿ ಅಂತ ರೋಹನ್ ಅವರ ಮೊಬೈಲ್ ನಾ ಕೊಟ್ಟು ತನ್ನ ರೂಮ್ ಗೆ ಹೋರಡ್ತಾನೆ"
ಮೋಹನ್ : ಪೂರ್ವಿ ನೀನು ಬಾ ನನ್ನ ಜೊತೆ ನಿನ್ನ ಹತ್ರ ಮಾತಾಡ್ಬೇಕು ಅಂತ ಹೇಳಿ ಮೋಹನ್ ಮತ್ತು ಪೂರ್ವಿ ರೂಮ್ ಗೆ ಹೋಗ್ತಾರೆ...
ಇನ್ನು ಮೋಹನ್ ಶಶಿಧರ್ ಫ್ಯಾಮಿಲಿ ಗೆ ಫೋನ್ ಮಾಡಿ ವಿಷಯ ತಿಳಿಸ್ತಾನೆ...
ನಂತರ ಪೂರ್ವಿ ಕಡೆ ನೋಟ ಹಾಯಿಸಿದಾಗ ಪೂರ್ವಿ ಘಾಡ ಯೋಚನೆಯಲ್ಲಿ ಮುಳುಗಿರುವುದನ್ನು ಗಮನಿಸುತ್ತಾನೆ...
"ಪೂರ್ವಿಯು ಮನಸಲ್ಲಿ ಜಾನುವಿನ ಆ ರೂಪ ಇನ್ನೂ ಕಣ್ಣಿಗೆ ಕಟ್ಟಿದಾಗೆ ಇರುತ್ತೆ...ಅಲ್ಲಾ ಆ ನಿಜವಾಗ್ಲೂ ರೋಹನ್ ಹುಚ್ಚನ ತರ ಆಡ್ತಿರೋದ್ರಲ್ಲಿ ಯಾವುದೇ ತಪ್ಪಿಲ್ಲ ಬಿಡು.. ಯಾಕಂದ್ರೆ ಅವಳು ಅಷ್ಟು ಬ್ಯೂಟಿಫುಲ್ ಆಗಿದ್ದಾಳೆ.. ಹ್! ನಾನೇ ಹುಡುಗಿ ಆಗಿ ಅವಳ ಆ ಬ್ಯೂಟಿ ಗೆ ಫುಲ್ ಫಿದಾ ಆಗಿದೀನಿ ಇನ್ನೂ.. ಹುಡುಗರು ಯಾವ ಲೆಕ್ಕಾ ನಿಜವಾಗ್ಲೂ ಇಷ್ಟು ಸುಂದರವಾಗಿರೋಕೆ ಹೇಗೆ ಸಾಧ್ಯ... ಸದ್ಯ ನಾನ್ ಬಚಾವ್ ಅದೆ.. ನನ್ನ ಜೆಕೆ ಏನಾದ್ರೂ ಅವಳನ್ನ ನೋಡಿದ್ರೆ.. ನನ್ನ ಪುಣ್ಯ ಅವಳನ್ನ ಈ ರೋಹನ್ ಗೆ ಗಂಟುಹಾಕಿಸಿ ಒಳ್ಳೆ ಕೆಲಸನೆ ಆಯ್ತು ಇಲ್ಲಾ ಅಂದ್ರೆ.. ಅವಳು ಖಂಡಿತಾ ನನ್ನ ಜೆಕೆ ನಾ ಬುಟ್ಟಿಗೆ ಹಾಕಿಕೊಳ್ತಿದ್ಲೂ"..
ಮೋಹನ್ : "ಪೂರ್ವಿ ಏನಮ್ಮಾ ಯೋಚನೆ ಮಾಡ್ತೀಯಾ"?
"ಆ! ಅಂಕಲ್ ಏನು ಇಲ್ಲಾ ಅದು ಬಿಡಿ.. ನಮ್ಮ ಲೈನ್ ಎಲ್ಲಾ ಈಗ ಕ್ಲಿಯರ್ ಆಯ್ತು.. ಇನ್ನೂ ನನ್ನ ಜೆಕೆ ನಾ ಪಡಿಯೋ ಪ್ಲಾನ್ ಒಂದು ಸಕ್ಸಸ್ ಆದ್ರೆ ಸಾಕು"..
ಮೋಹನ್ : "ಅದು ಕೂಡ ಅದಷ್ಟು ಬೇಗ ಆಗುತ್ತೆ ಬಿಡು..ಇಬ್ಬರು ಒಬ್ಬರಿಗೊಬ್ಬರು ನೋಡಿಕೊಳ್ಳುತ್ತಾ ಜೋರಾದ ನಗೆಯೊಂದಿಗೆ ತಮ್ಮ ಖುಷಿಯನ್ನು ವ್ಯಕ್ತಪಡಿಸಿಕೊಳ್ಳುತ್ತಾರೆ"..
ಪೂರ್ವಿ : "ಸರಿ ಅಂಕಲ್ ಈಗ ಲೇಟ್ ಆಯ್ತು ನಾನಿನ್ನು ಹೊರಡ್ತೀನಿ.. ಅಂತ ಪೂರ್ವಿ ಅಲ್ಲಿಂದ ಹೋರಡ್ತಾಳೆ"....
ಪೂರ್ವಿಯ ಮುಂದಿನ ನಡೆ ಏನಾಗಿರಬಹುದು?.. ಈ ಜಾನುವಿನ ಬದುಕಲ್ಲಿ ಇನ್ನೂ ಯಾವರೀತಿ ಬದಲಾವಣೆಗಳು ಬರಲಿವೆ ಮುಂದಿನ ಸಂಚಿಕೆಗಳಲ್ಲಿ ನೋಡೋಣ...
ಮುಂದುವರೆಯುವುದು....