She came unwillingly... - 2 in Kannada Drama by Kavya Pattar books and stories PDF | ಬಯಸದೆ ಬಂದವಳು... - 2

Featured Books
Categories
Share

ಬಯಸದೆ ಬಂದವಳು... - 2





ಈ ಕಡೆ ಕಾಲೇಜಿನಿಂದ ಸೂರ್ಯ ಪ್ರವೀಣ್ ನ ಮನೆಗೆ ಬಿಟ್ಟು ತಾನು ಮನೆ ಕಡೆ ಹೊರಡ್ತಾನೆ ಮನೆ ಒಳಗೆ ಎಂಟ್ರಿ ಆಗುತಿದ್ದಹಾಗೆ ಅಡುಗೆ ಮನೆಯಲ್ಲಿ ಗುಸು ಗುಸು ಮಾತನಾಡುವ ಶಬ್ದ ಕೇಳಿ ಅಮ್ಮ.. ಅಮ್ಮ.. ಅಂತ ಸೂರ್ಯ ಅಡುಗೆ ಮನೆ ಕಡೆಗೆ ಹೋಗುತ್ತಾನೆ ಅಲ್ಲಿ ಜೆಕೆ ಮತ್ತು ಮಹತಿ ಮಾತಾಡ್ತಾಇರುತ್ತಾರೆ 

ಸೂರ್ಯ: ಜೆಕೆ ನೀನು ಇಲ್ಲೇ ಇದಿಯಾ ?

( ಸುಮತಿ ಸೂರ್ಯನ ತಾಯಿ ಅಂದರೆ ಜೆಕೆಗೆ ಸಂಬಂಧದಲ್ಲಿ ಅತ್ತೆ ಆಗಬೇಕು ಸುಮತಿಗೆ ಜೆಕೆ ಎಂದರೆ ಪ್ರಾಣ ಚಿಕ್ಕ ವಯಸ್ಸಿನಿಂದಲೂ ಅವನನ್ನು ತನ್ನ ಮಗನಿಗಿಂತ ಹೆಚ್ಚು ಪ್ರೀತಿಯನ್ನು ಇವನ ಮೇಲೆ ತೋರಿಸುತ್ತಿದ್ದರು ಅಷ್ಟು ಪ್ರೀತಿಯನ್ನು ಮಾಡುವ ಸುಮತಿ ಜೆಕೆಗು ಅಷ್ಟೆ ,ಸುಮತಿ ಅತ್ತೆ ಅಂದರೆ ತುಂಬಾ ಇಷ್ಟ ಇಬ್ಬರೂ ಯಾವಾಗ್ಲೂ ಫ್ರೆಂಡ್ಸ್ ತರ ಇರುತ್ತಾರೆ ಜೆಕೆ ಸುಮತಿ ಅತ್ತೆ ಇಂದ ಯಾವುದೇ ವಿಷಯವನ್ನು ಕೂಡ ಮುಚ್ಚಿಡುವನಲ್ಲ ಎಲ್ಲವನ್ನೂ ಹೇಳಿಬಿಡುತ್ತಾನೆ ಆಗಲೇ ಅವನಿಗೆ ಸಮಾಧಾನ)

ಸೂರ್ಯ : ಅಮ್ಮ..ಜೆಕೆ ಇವತ್ತು ಎನ್ ಮಾಡ್ದ ಗೊತ್ತಾ 😒

ಸುಮತಿ : ಗೊತ್ತು ಕಣೋ ಅಲ್ಲ ನಿನಗೆ ಸ್ವಲ್ಪ ಬುದ್ಧಿ ಬೇಡ್ವೆನ್ನೋ ಪಾಪ ಜೆಕೆ ಕಂದ ಅವನಿಗೆ ಕೋಪ ಜಾಸ್ತಿ ಅಂತ ಗೊತ್ತಿದ್ರೂ ನಿಂಗೆ ಅವನನ್ನ ಕಂಟ್ರೋಲ್ ಮಾಡೋಕೆ ಆಗಲಿಲ್ಲವಲ್ಲ  

ಜೆಕೆ : ಹೌದು ಅತ್ತೆ ಇವನು ನನ್ನ ಸ್ವಲ್ಪ ತಡದಿದ್ದರೆ ನಾನು ಸ್ವಾತಿ ಮೇಲೆ ಅಷ್ಟು ಕೋಪ ಮಾಡಿಕೊಳ್ತಾ ಇರಲಿಲ್ಲ ಅಂತ ಸುಮತಿ ಅತ್ತೆ ಹೆಗಲ ಮೇಲೆ ತನ್ನ ತಲೆ ಇಟ್ಟು ಹೇಳುತ್ತಾನೆ ಆಗ ಸುಮತಿ ಅತ್ತೆ ಅವನ ತಲೆ ಸವರುತ್ತಾ ನೀನು ಏನು ಬೇಜಾರ್ ಮಾಡಕೋಬೇಡ ಕಂದ ಅವನು ಹಾಗೆ ... 

ಸೂರ್ಯ : 😒 ಸರಿಯಾಗಿದೆ ಅಲ್ಲಿ ನಾನೇ ಅವನ ತಡಿದೆ ಹೋಗಿದ್ರೆ ಇನ್ನು ಎನ್ ಮಾಡ್ತಿದ್ನೋ ಅಮ್ಮ ನಿನ್ ಇವನ ಮಾತನ್ನ ಯಾಕ್ ಯಾವಾಗ್ಲೂ ನಂಬುತ್ತಿಯ ಅಲ್ಲಿ ನಾನೇ ಇವನ್... ಅನ್ನುವಷ್ಟರಲ್ಲಿ ಸುಮತಿ ಸಾಕು ಸುಮ್ನಿರು ಪಾಪ ನನ್ನ ಕಂದ ಎಷ್ಟು ಬೇಜಾರ್ ಮಾಡ್ಕೊಂಡಿದೆ ನೋಡು

ಜೆಕೆ : ಹೌದು ಅತ್ತೆ ಅಂತ ಸೂರ್ಯನ ನೋಡತಾ ಕಿರುನಗೆ ಬೀರುತ್ತಾನೆ 😉 

ಸೂರ್ಯ : 😲 ಅಮ್ಮ ನೋಡು ನಿನ್ ಕಂದ ನನ್ನ ರೆಗಸ್ತಿದ್ದಾನೆ ಅಲ್ಲಿ ಅಷ್ಟೊಂದು ಕೋಪ ಮಾಡ್ಕೊಂಡು ಬಂದು ಇಲ್ಲಿ ನೋಡು ಏನು ಆಗೆಇಲ್ಲ ಎಲ್ಲಾ ನಾನೇ ಮಾಡಿದ್ದು ಅನ್ನೋಹಾಗಿದೆ ಅಲ್ಲಿ ಸ್ವಾತಿ ನಾ ಹಾಗೆ ಬಿಟ್ಟು ಬಂದ ಗೊತ್ತಾ

ಸುಮತಿ : "ಹೌದೇನೋ? ಕಂದ"

ಜೆಕೆ : ಅತ್ತೆ ಅದು... "ಸುಮತಿ ಇರಲಿ ಬಿಡು ಏನೋ ಕೋಪದಲ್ಲಿ ಮಾಡಿರ್ತಿಯ ಒಂದು ನಿಮಿಷ ಇರು ನಿಂಗೆ ಬಿಸಿ ಬಿಸಿ ಬದಾಮಿ ಹಾಲನ್ನು ಮಾಡಿ ಕೊಡ್ತೀನಿ "

ಜೆಕೆ( ಕಿರುನಗೆ ಬೀರುತ್ತಾ) : ok ಅತ್ತೆ 😃
ಸೂರ್ಯ: ಸರಿ ಹೋಯ್ತು ಅಮ್ಮ ಯಾವತ್ತೂ ಇವನನ್ನ ಬಿಟ್ಟುಕೊಡಲ್ಲ ಅಂತ ಗೊತ್ತಿದ್ದೂ ನಾ ಹೇಳೋಕೆ ಬರ್ತಿನಲ್ಲ ನಂಗೆ ಬುದ್ಧಿ ಇಲ್ಲ 

(ಸುಮತಿ ಮತ್ತು ಜೆಕೆ ಇಬ್ಬರೂ ನಗುತ್ತಾ conversation continue  ಮಾಡುತ್ತಾರೆ 😂 )

ಸೂರ್ಯ : ಅಮ್ಮ ನಂಗೂ ಬದಾಮಿ ಹಾಲನ್ನು ಮಾಡಮ್ಮ ಅಂತ ಅಮ್ಮನ ಹಿಂದೆ ಇಂದ ತಬ್ಬಿಕೊಂಡು ಹೇಳುತ್ತಾನೆ ಆಗ ಸುಮತಿ ತಲೆ ಸವರುತ್ತಾ ನಿನಗೂ ಮಾಡತೀನಿ ಕಂದ ಅಂತ ಮೂರು ಜನ ಹರಟೆ ಹೊಡೀತಿರುತ್ತಾರೆ ಅಷ್ಟರಲ್ಲಿ ನಂಗೂ ಒಂದು ಗ್ಲಾಸ್ ಬಾದಾಮಿ ಹಾಲು ಬರಲಿ.. ಸುಮತಿ ಹಿಂದೆ ತಿರುಗಿ ನೋಡುತ್ತಾಳೆ ಏನ್ರೀ ನೀವು ಚಿಕ್ಕ ಮಗುನ ಹಾಲು ಕುಡಿಯೋಕೆ 

(ಶೇಖರ್ ಸೂರ್ಯನ ಅಪ್ಪ ಶೇಖರ್ ಮತ್ತು ಸುಮತಿಗೆ ಇಬ್ಬರು ಗಂಡು ಮಕ್ಕಳು ಸೂರ್ಯ ಮತ್ತೆ ಶಿವಾನಂದ್ ಈ ಶಿವು ಗೆ ಮದುವೆ ಆಗಿ ಒಂದು ಹೆಣ್ಣು ಮಗು ಇರುತ್ತೆ ಅದರ ಹೆಸರು ಕುಷಿ ಮತ್ತು ಶಿವಾನಂದ್ ಹೆಂಡತಿ ಹೆಸರು ಕೀರ್ತಿ ಇವರಿಬ್ಬರೂ ಕೆಲಸದ ಮೇರೆಗೆ ಬೇರೆ ಊರಿಗೆ ಹೋಗಿರುತ್ತಾರೆ ಹಾಗೆ ಶೇಖರ್ ಮತ್ತು ಸುಮತಿಗೆ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ ಅವಳೇ ಜಾಹ್ನವಿ ಈ ಕ್ಯಾರೆಕ್ಟರ್ ತುಂಬಾ ಮುಖ್ಯವಾದದ್ದು ಮುಂದೆ ಗೊತ್ತಾಗುತ್ತಾ ಹೋಗುತ್ತದೆ ಇದು ಸೂರ್ಯನ ಕುಟುಂಬ ಜೆಕೆ ಮನೆಗೂ ಸೂರ್ಯನ ಮನೆಗೂ ತುಂಬಾ ದೂರವೇನು ಇರೋಲ್ಲ )

ಶೇಖರ್ :"ಹಾ.. ಯಾಕೆ ನಾನು ಕೂಡದ್ರೆ ಏನಾಗುತ್ತೆ" 'now also I am very young and energetic person you know' ಸೂರ್ಯ ಮತ್ತು ಜೆಕೆ ಇಬ್ಬರೂ ಒಳಗೊಳಗೇ ನಗುತ್ತಿರುತ್ತಾರೆ 

ಜೆಕೆ : "ಏನು ಕರೆಕ್ಟ್ ಆಗಿ ಹೇಳಿದ್ರಿ ಮಾವ ವಾ!.. ವಾ!..ಅಲ್ವೇನೋ ಸೂರ್ಯ ಆ.. ಆ.. ಹೌದು ಕಣೋ ನಮ್ಮ ಅಪ್ಪ ಈಗಲೂ ಯಂಗ್ ಹುಡುಗಾನೆ" 🤭 

ಜೆಕೆ : "ಅಲ್ಲಾ ಮಾವ ನೀವು ಯಾಕೆ ಇನ್ನೊಂದ್ ಮದುವೆಗೆ ಟ್ರೈ ಮಾಡಬಾರದು" 😜 

ಶೇಖರ್ :🤔 "ಹೌದಲ್ವಾ ಇದು ಒಳ್ಳೆ ಐಡಿಯಾ ನಾನ್ ಯಾಕ್ ಇಷ್ಟು ದಿನಾ ಯೋಚನೆ ಮಾಡಿರಲಿಲ್ಲ ??"

ಜೆಕೆ : "ಅತ್ತೆ ನೋಡಿ ಮಾವ ಇನ್ನೊಂದ್ ಮದುವೆಗೆ ಸ್ಕೆಚ್ ಹಾಕಿದ್ದಾರೆ "

ಸೂರ್ಯ : ಅಲ್ಲ ನಿಮ್ಮಂತ ಸುಂದರವಾದ ಹುಡಗಿ ಅಪ್ಪನಿಗೆ ಎಲ್ಲಿ ಹುಡುಕಿದರೂ ಸಿಗೋಲ್ಲ ಆದರೆ ಅಪ್ಪ.. 

ಸುಮತಿ (ಕೋಪದಲ್ಲಿ): ಏನ್ರಿ ಇನ್ನೊಂದು ಮದುವೆ ಬೇಕಾ ನಿಮ್ಗೆ ಇರಿ ಮಾಡ್ತೀನಿ 

ಜೆಕೆ(ಕಿರುನಗೆ ಬೀರುತ್ತಾ) : ಅತ್ತೆ ಇಲ್ಲಿ ತಗೋಳಿ ಅಂತಾ ಹೇಳಿ ಚಾಕು 🔪ನಾ ಅತ್ತೆಗೆ ಕೊಡುತ್ತಾನೆ 😁

ಶೇಖರ್ :ಹೇ.. ಹೇ.. ನಿನ್ ನನ್ನ ಅಳಿಯಾನೇನೋ ಛೇ..

ಸುಮತಿ : ಅವನಿಗೆ ಯಾಕ್ರೀ ಅಂತಿರಾ ನಿಮ್ಗೆ .... ಹೇ! ನಿಲ್ಸೆ ಇನ್ನೊಮ್ಮೆ ಕನಸಲ್ಲಿ ಅಂತ ಯೋಚನೆ ಮಾಡೋಲ್ಲ ಬಿಡು 

ಸುಮತಿ :"ಹಾಗ್ ಬನ್ನಿ ದಾರಿಗೆ"😏 

ಶೇಖರ್ :  "ಹೇ.. ಜೆಕೆ, ಸೂರ್ಯ ನೀವು ಇಬ್ಬರು ಎಲ್ಲಿ ಹೋಗತೀರಿ ನನ್ ಕೈಯಿಂದ ನೋಡ್ಕೋತೀನಿ ಅಂತ ಹೇಳಿ ಅಲ್ಲಿಂದ ಹೋಗುತ್ತಾನೆ"..

ಜೆಕೆ : "ಅತ್ತೆ ನೀವು ಇತರ ಸಪ್ಪೆ ಮುಖಾ ಮಾಡಿಕೊಂಡರೆ ನೋಡೋಕೆ ಚೆನ್ನಾಗಿಲ್ಲ ಸ್ವಲ್ಪ smile ಮಾಡಿ"

ಸೂರ್ಯ : "ಹೌದು ಸ್ವಲ್ಪ smile ಮಾಡಮ್ಮ..  ಸುಮತಿ : ನಾನು ಏನು ಬೇಜಾರ್ ಮಾಡಕೊಂಡಿಲ್ಲ ಕಣ್ರೋ ನೋಡದ್ರ ನನ್ ಗಂಡನ ಹೇಗೆ ಹದ್ದುಬಸ್ತಿನಲ್ಲಿ ಇಟ್ಟಿದೀನಿ ಅಂತಾ ಇದು ಜಸ್ಟ್ ಸ್ಯಾಂಪಲ್ 😌ಆಗ ಸೂರ್ಯ ಮತ್ತೆ ಜೆಕೆ ಇಬ್ಬರೂ ಒಬ್ಬರಿಗೊಬ್ಬರು ಮುಖವನ್ನು ನೋಡಿಕೊಳ್ಳುತ್ತಾ  ನಗೋಕೇ ಸ್ಟಾರ್ಟ್ ಮಾಡ್ತಾರೆ
ಸುಮತಿ ಇಬ್ಬರಿಗೂ ಬಾದಾಮಿ ಹಾಲನ್ನು ಕೊಟ್ಟು ಸರಿ ನೀವಿಬ್ಬರೂ ಕುಡಿತೀರಿ ನಾನು ನಿಮ್ ಮಾವಂಗೆ ಹಾಲು ಕೊಟ್ಟು ಬರ್ತೀನಿ 
ಜೆಕೆ : "ಓಕೆ ಅತ್ತೆ ನಾನು ಹೊರಡ್ತಿನಿ"

ಸೂರ್ಯ :"ಇನ್ನೊಂದು ಸ್ವಲ್ಪ ಹೊತ್ತು ಇರೋ
ಸುಮತಿ : ಹೌದು ಕಂದ ಇನ್ನೊಂದು ಸ್ವಲ್ಪ ಹೊತ್ತು ಇರು"..
ಜೆಕೆ :"ಈಗಾಗಲೇ 8 ಗಂಟೆ ನಮ್ಮ ಲಕ್ಕಿ ಗೆ Tablates ತಗೊಂಡು ಹೋಗಬೇಕು ಪಾಪ ಅವಳು.." ನನಗೋಸ್ಕರ ವೇಟ್ ಮಾಡ್ತೀರ್ತಾಳೆ (ಲಕ್ಕಿ ಅಂದರೆ ಜೆಕೆ ಯ ಪ್ರೀತಿಯ ಅಜ್ಜಿ ಸುಮತಿಯ ಅಮ್ಮ) ಸರಿ ಕಂದ ಹುಷಾರಾಗಿ ಹೊರಡು ಜೆಕೆಅಲ್ಲಿಂದ ಹೊರಗೆ ಬರ್ತಾನೆ  
ಸೂರ್ಯ : "ಜೆಕೆ ಒಂದು ನಿಮಿಷ ನಿಂತ್ಕೋ ಜೆಕೆ : ಯಾಕೋ ಏನಾಯ್ತು ??"

ಸೂರ್ಯ : "ಅಲ್ವೋ ನೀನು ಸ್ವಾತಿ ಮೇಲೆ ಯಾಕೋ ಅಷ್ಟು ಕೋಪ ಮಾಡಕೊಂಡೆ ಅವಳಿಗೆ ಆ ವಿಷಯದ ಬಗ್ಗೆನೇ ಗೊತ್ತಿಲ್ಲ ಏನೋ ಪಾಪ ಕ್ಯಾಶುಯಲ್ ಆಗಿ ಅಂದ್ಲು"

ಜೆಕೆ : "ನಿಜಾ ಕಣೋ ನಾನೇ ಸುಮ್ನೆ ಅವಲ್ಮೇಲೆ ಕೋಪ ಮಾಡಕೊಂಡ್ಬಿಟ್ಟೆ" 

ಸೂರ್ಯ : "ನಾನು ಎಲ್ಲಿ ನೀನು ಇನ್ನೂ ಕೋಪದಲ್ಲಿಯೇ ಇರತಿಯ ಅನ್ಕೊಂಡಿದ್ದೆ ಸದ್ಯ.. ಬೇಗ ಕೋಪ ಇಳಿತಲ್ಲ ಅಷ್ಟೆ ನಂಗೆ ಸಮಾಧಾನ"

ಜೆಕೆ : "ಹಾ! ನನ್ ಕೋಪನ ಇಳಿಸಿದ್ದು ಅತ್ತೇನೆ ಕಣೋ ಏನೋ ಗೊತ್ತಿಲ್ಲಾ ಅತ್ತೆ ಹತ್ರ ಏನೇ ವಿಷಯ ಹಂಚಿಕೊಂಡರು ಸಮಾಧಾನ ಸಿಗುತ್ತೆ ನಾನೀಗ ಕೂಲ್ ಆಗಿ ಇರೋಕೆ ಅತ್ತೆನೆ ಕಾರಣ"

ಸೂರ್ಯ :"ನಿಜ ಹೇಳಲಾ ನಿಮ್ಮಂತ ಅತ್ತೆ ಅಳಿಯನ್ನ ನಾ ಇದು ವರೆಗೂ ನೋಡೇ ಇಲ್ಲ 😊
ಜೆಕೆ : ಜಾಸ್ತಿ ದೃಷ್ಟಿ ಹಾಕಬೇಡ ಕಣೋ "  

ಸೂರ್ಯ : "ಸರಿಕಣಪ್ಪ ಹಾಕಲ್ಲ ತಗೋ 
ಸರಿ bye.. ಕಣೋ ಅಂತ ಜೆಕೆ ತನ್ನ ಬೈಕ್ ನಲ್ಲಿ ಕುಳಿತು ಅಲ್ಲಿಂದ ಹೊರಡ್ತಾನೇ

____
         
                 ಮುಂದುವರೆಯುವುದು.....

ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನೂ ಹಂಚಿಕೊಳ್ಳಿ,ಧನ್ಯವಾದಗಳು..