ಅಧ್ಯಾಯ 11 : "ಸುಳ್ಳಿನ ನಟನೆ ಬಯಲಾದಾಗ"
ಪೂರ್ವಿ ಬಯದಲ್ಲಿ ರಾಜೇಶ್ ಮುಖವನ್ನೇ ನೋಡಿದಾಗ ರಾಜೇಶ್ ಮುಗುಳ್ನಗೆ ಬೀರುತ್ತಾನೆ
ಪೂರ್ವಿ : "ಇವನಿಗೇನಾದ್ರು ತಲೆ ಕೆಟ್ಟಿದಿಯ ಸಿಕ್ಕಿ ಹಾಕೊಳ್ತೀವಿ ಅನ್ನೋ ಭಯಾನೇ ಇಲ್ಲ , ಅದರಲ್ಲಿ ಈ ಹರ್ಷಾ ಬೇರೆ ನನ್ನ ಬೆಸ್ಟ್ ಫ್ರೆಂಡ್ ಅನ್ಕೊಂಡು ಓಡಾಡ್ತಾಳೆ ಆದರೆ ನಂಗೆ ಹೆಲ್ಪ್ ಮಾಡು ಅಂದ್ರೆ ಆಗಲ್ಲ ಅಂತಾ ನನ್ನ ಒಬ್ಬಂಟಿ ಮಾಡಿ ಹೋಗಿದ್ದಾಳೆ ಛೇ!.. ನಾನು ಎನ್ ಮಾಡ್ಲಿ ಈಗ ಎಲ್ಲ ಪ್ಲಾನ್ ಉಲ್ಟಾ ಹೊಡಿಯೋತರ ಇದೆಯಲ್ಲ ಅಂತ ಮನಸಲ್ಲಿ ಅಂದುಕೊಳ್ತೀರ್ತಾಳೆ"
ಪ್ರಿನ್ಸಿಪಾಲ್ : "ಸರಿ ಬನ್ನಿ ಹೋಗೋಣ ಆದರೆ ಎಲ್ಲರೂ ಬರೋ ಅವಶ್ಯಕತೆ ಇಲ್ಲ ನಾವು ಹೋಗಿ ನೋಡ್ತೀವಿ"
ಅಂದಾಗ ರಾಜೇಶ್ ಟೀಮ್ ಕಡೆ ಇರುವ ಒಬ್ಬ ಹುಡುಗ ಅದೆಂಗೆ ಆಗತ್ತೆ ಸರ್ ನಾವು ಎನ್ ಆಗಿದೆ ಅಂತಾ ತಿಳಿದುಕೊಳ್ಳಲೇ ಬೇಕು ಯಾರಿಗೆ ಗೊತ್ತು ನಾವು ಇಲ್ಲದೆ ಇರಬೇಕಾದರೆ ಅಲ್ಲಿ ಏನು ನಡಿಯುತ್ತೋ ಅಂತ ಅಂತಾ ಅಂದಾಗ ಎಲ್ಲಾ ಹುಡುಗರು ನಾವು ಬರ್ತೀವಿ ಅಂತಾ ಹೇಳ್ತಾರೆ,
ಸೂರ್ಯ : "ಸರ್ ಸತ್ಯ ಯಾವತ್ತೂ ಬದಲಾಗಲ್ಲ ಅಲ್ಲಿ ಏನು ನಡೀತು ಅಂತ ಎಲ್ಲರೂ ತಿಳಿದುಕೊಳ್ಳಲಿ ಬಿಡಿ ಅವಗಲಾದರು ನಮ್ಮ ಜೆಕೆ ಯಾವ ತಪ್ಪು ಮಾಡಿಲ್ಲ ಅಂತಾ ಗೊತ್ತಾಗುತ್ತೆ ,ನಾವು ನಿಮ್ಮ ಜೊತೆ ಬರ್ತೀವಿ ಅಂತಾ ಹೇಳ್ತಾನೆ"
ಪ್ರಿನ್ಸಿಪಾಲ್ : "ಸರಿ ಬನ್ನಿ ಅಂತಾ ಎಲ್ಲರೂ ಪ್ರಿನ್ಸಿಪಾಲ್ ಆಫೀಸ್ ಗೆ ಹೊರಾಡ್ತಾರೆ" ...
"ಆಫೀಸ್ ಒಳಗೆ ಬರ್ತಿದಂಗೆ ಪೂರ್ವಿ ರಾಜೇಶ್ ಮುಖವನ್ನು ಗಮನಿಸ್ತೀರ್ತಾಳೆ ಅವನ ಮುಖದಲ್ಲಿ ಯಾವ ಭಯಕೂಡ ಇರುವುದಿಲ್ಲ
ಇದೇನಿದು ಇವನು ನಂಗೂ ಇದಕ್ಕೂ ಸಂಬಂಧ ಇಲ್ಲ ಅನ್ನೋತರ ಇದಾನಲ್ಲ ನನ್ನ ಪ್ಲಾನ್ ನಾ ನಂಗೆ ತಿರುಗಿಸ್ತಿದ್ದಾನಾ ಹೆಂಗೆ ಗಾಡ್ ಪ್ಲೀಜ್ ಸೇವ್ ಮಿ ಅಂತಾ ಮನಸಲ್ಲಿ ಬೇಡಿಕೊಳ್ತೀರ್ತಾಳೆ "
"ಪ್ರಿನ್ಸಿಪಾಲ್ ಸಿಸಿ ಟಿವಿ ಫುಟೇಜ್ ನಾ ಓಪನ್ ಮಾಡಿಸ್ತೀರ್ತಾರೆ ಜೆಕೆ ಇಲ್ಲಿ ಪೂರ್ವಿ ಎದೆ ಬಡಿತ ಜೋರಾಗಿ ಹೊಡೆದುಕೊಳ್ಳುತ್ತಿರುತ್ತದೆ ಪ್ರೊಫೆಸರ್ ಗುರು ಅವರು ಎಲ್ಲಾ ಫುಟೇಜ್ ಚೆಕ್ ಮಾಡ್ತಾರೆ ಆದರೆ ಕಂಪ್ಯೂಟರ್ ಲ್ಯಾಬ್ ನಾ ಸಿಸಿ ಟಿವಿ ಮಾತ್ರ ವರ್ಕ್ ಆಗ್ತಿರುವುದಿಲ್ಲ, ಆಗ ಪ್ರೊಫೆಸರ್ ಗುರು ಸರ್ ಬೆಳಿಗ್ಗೆ 11 ಗಂಟೆ ವರೆಗೂ ಮಾತ್ರ ಸಿಸಿಟಿವಿ ವರ್ಕ್ ಆಗ್ತಿದೆ ಅದಾದ ಮೇಲೆ ಅಲ್ಲಿ ಹಾಕಿರೋ ನಾಲ್ಕು ಕ್ಯಾಮೆರಾ ಫೋಟೆಜ್ ಅಲ್ಲಿ ಒಂದು ಕೂಡಾ ವರ್ಕ್ ಆಗ್ತಿಲ್ಲ ಅಂತ ಹೇಳ್ತಾರೆ"
" ಆಗ ಜೆಕೆ ಬಂದು ಅವನು ಸಹ ಚೆಕ್ ಮಾಡ್ತಾನೆ ಲ್ಯಾಬ್ ನಲ್ಲಿರುವ ಸಿಸಿಟಿವಿ ವರ್ಕ್ ಆಗ್ತಿರುವುದಿಲ್ಲಾ ಇದೇನಿದು ವಿಚಿತ್ರವಾಗಿದೆಯಲ್ಲ 11 ಗಂಟೆ ಮುಂಚೆ ಎಲ್ಲಾ ಸರಿ ಇದ್ದ ಸಿಸಿಟಿವಿ ಇದ್ದಕಿದ್ದಹಾಗೆ ವರ್ಕ್ ಅಗತಿಲ್ಲ ಅಂದ್ರೆ ಏನೋ ಮಿಸ್ ಹೊಡೀತಾ ಇದೆ ಅಲ್ವಾ.. ಆಗ ಅಲ್ಲಿರುವ" "ಕಾರ್ತಿಕ್,ಪ್ರವೀಣ್ ,ಸೂರ್ಯ,ಸ್ವಾತಿ ಎಲ್ಲರೂ ಸ್ಪಲ್ಪ ಗಾಬರಿಯಾಗ್ತಾರೆ "
"ಆದರೆ ಈ ಪೂರ್ವಿ ಮಾತ್ರ ಶಾಕ್ ನಲ್ಲಿ ರಾಜೇಶ್ ಕಡೆ ನೋಟವನ್ನು ಬೀರಿದಾಗ ಅರ್ಥವಾಗುತ್ತೆ ಅದು ರಾಜೇಶ್ ಕೆಲಸ ಅಂತಾ ಓ.. ಅದಿಕ್ಕೆ ಇವನು ಸಿಸಿ ಟಿವಿ ಬಗ್ಗೆ ಹೇಳಿದಾಗ ಕೂಲ್ ಆಗಿ ಇದ್ದಿದ್ದು .. ಇವನ್ನನ್ನಾ ತುಂಬಾ easy ಆಗಿ ತಗೊಂಡ್ಬಿಟ್ಟೆ , ಬಿಟ್ಟರೆ ನನ್ನೇ ಸೀಗಿಸೋದ್ರಲ್ಲಿ ಎರಡು ಮಾತಿಲ್ಲ ಅಂತ ಮನಸಲ್ಲಿ ಅಂದುಕೊಳ್ತಾಳೆ"
ಪ್ರಿನ್ಸಿಪಾಲ್ :" ಅಲ್ಲಿರುವ ವರ್ಕರ್ಸ್ ನಾ ಕರಿದು ಬೈಯೋಕೆ ಸ್ಟಾರ್ಟ್ ಮಾಡ್ತಾರೆ ನೀವೆಲ್ಲ ಏನು ಮಾಡ್ತೀರ್ತಿರ ಸಿಸಿ ಟಿವಿ ವರ್ಕ್ ಆಗುತ್ತಿಲ್ಲ ಅಂದ್ರೆ ಏನರ್ಥ ಬೇಗ ಹೋಗಿ ಏನು ಆಗಿದೆ ನೋಡ್ಕೊಂಡು ಬನ್ನಿ ಅಂತಾ ಕೋಪದಲ್ಲಿ ಹೇಳ್ತಾರೆ ಇಲ್ಲಿ ಎಲ್ಲಾ ಏನು ನಡಿತಿದೆ ಪೂರ್ವಿ ನೋಡಿದ್ರೆ ಏನೂ ಮಾತಾಡ್ತಾನೆ ಇಲ್ಲಾ "
ಜೆಕೆ : "ಸರ್ ತಲೆ ಕೇಡಸ್ಗೋಬೇಡಿ ಪೊಲೀಸರಿಗೆ ಕಾಲ್ ಮಾಡಿ ಕರೆಸಿ ಅವರೇ ಎಲ್ಲಾ ನೋಡ್ಕೋತಾರೆ ಅಂತಾ ಪೂರ್ವಿ ಕಡೆ ಒಂದು ಚೂಪಾದ ನೋಟವನ್ನು ಹಾಯಿಸ್ತಾ ಹೇಳ್ತಾನೆ"..
"ಅದಕ್ಕೆ ಸ್ವಾತಿ ಸಹ ಹೌದು ಇದೆ ಕರೆಕ್ಟ್ ಹಾಗೆ ಉಳಿದವರು ಕೂಡ ಇದಕ್ಕೆ ಸಮ್ಮತಿಸುತ್ತಾರೆ"
"ಈಗ ಈಕಡೆ ಪೂರ್ವಿ ಮುಖದಲ್ಲಿ ಅಷ್ಟೆ ಅಲ್ಲ ರಾಜೇಶ್ ಮುಖದಲ್ಲಿ ಕೂಡ ಭಯ ಅದರ ಜೊತೆಗೆ ನಡುಕ",
ಪ್ರಿನ್ಸಿಪಾಲ್ : "ಸರಿ ಹಾಗೆ ಮಾಡೋಣ ಹೇಗಿದ್ರೂ ಜೆಕೆ ಬ್ರದರ್ SI ಇದರಲ್ವಾ ಅವರನ್ನೇ ಕರಿಸೋಣ ಅಂತಾ ಅಂದಾಗ ರಾಜೇಶ್ ಮತ್ತು ಪೂರ್ವಿ ಇಬ್ಬರು ಆತಂಕದಲ್ಲಿ ಮುಖ ಮುಖ ನೋಡಿಕೊಳ್ಳೋಕೆ ಸ್ಟಾರ್ಟ್ ಮಾಡ್ತಾರೆ"
"ರಾಜೇಶ್ ಮನಸಲ್ಲೇ ಪೊಲೀಸಾ.. ಅದು ಜೆಕೆ ಬ್ರದರ್ ಆ ಮನುಷ್ಯ ಇನ್ನೂ ಡೇಂಜರ್ ದೊಡ್ಡ ದೊಡ್ಡ ಕೇಸ್ ಎಲ್ಲಾ ಸಣ್ಣ ಕ್ಲೂ ಸಿಕ್ಕರೆ ಸಾಕು ಅದರ ಜನ್ಮಾನೆ ಜಲಾಡ್ಬಿಡ್ತಾನೆ ಇನ್ನೂ ಈ ಚಿಕ್ಕ ವಿಷಯ ಯಾವ ಲೆಕ್ಕ ಅವನಿಗೆ ಹಾಗಾದ್ರೆ ಸಿಕ್ಕಾಕೊಳ್ಳೋದು ಅಂತೂ ಪಕ್ಕಾ ಈ ಟೈಮ್ ಅಲ್ಲಿ ಪೂರ್ವಿ ಹತ್ರ ಮಾತಾಡೊಕು ಆಗೋಲ್ಲ,ಅಯ್ಯೋ.. ದೇವರೆ ನನಗೆ ಜೈಲಿಗೆ ಹೋಗೋಕಂತೂ ಇಷ್ಟ ಇಲ್ಲ ಈ ಪೂರ್ವಿ ಮಾತ್ಕೇಳ್ಕೊಂಡು ತಗಲಾಕೊಂಡ್ಬಿಟ್ಟೆ "
"ಇನ್ನು ಈ ಕಡೆ ಪೂರ್ವಿ ಮನಸಲ್ಲಿ sorry ರಾಜೇಶ್ ನನ್ನ ಪ್ಲಾನ್ನಲ್ಲಿ ನಿಂಗೆ ಹೇಳಿದ್ದು ಅರ್ಧ ಆಕ್ಟ್ ಮಾಡು ಅಂದ್ರೆ ಓವರ್ ಆಕ್ಟಿಂಗ್ ಮಾಡ್ತಾನೆ ಇರು ನಿಂಗೆ ಮಾಡ್ತೀನಿ, ಇನ್ನೊಂದು ಸಲ ನನ್ನ ಜೆಕೆ ತಂಟೆಗೆ ಬರಬಾರದು ನೀನು"
( ಸ್ನೇಹಿತರೆ ಪೂರ್ವಿ ರಾಜೇಶ್ ಗೆ ಹೇಳಿದ್ದ ಪ್ಲಾನ್ ನಲ್ಲಿ ಜೆಕೆ ಮೇಲೆ ಎಲ್ಲರಿಗೂ ಒಳ್ಳೆ ಅಭಿಪ್ರಾಯ ಇದೆ ಅದನ್ನು ಹೇಗಾದರೂ ಹಾಳು ಮಾಡ್ಬೇಕು ಅಂತ ಅವನ ಹತ್ರ ಪ್ಲಾನ್ ನಾ ಹೇಳಿರ್ತಾಳೆ ಆದರೆ ಅವಳು ಸಿಸಿ ಟಿವಿ ಬಗ್ಗೆ ಯೋಚನೆ ಮಾಡಿರೋದಿಲ್ಲ ಆಗ ರಾಜೇಶ್ ಅವಳಿಗೆ ಹೆಲ್ಪ್ ಮಾಡ್ತಾನೆ ,ಆದರೆ ಅವಳ ರಿಯಲ್ ಪ್ಲಾನ್ ಜೆಕೆ ಮತ್ತು ಅವಳ ಲವ್ ಮ್ಯಾಟರ್ ಪ್ರಿನ್ಸಿಪಾಲ್ ಹಾಗೆ ಉಳಿದ ಎಲ್ಲರಿಗೂ ಗೊತ್ತಾಗಬೇಕು ಅನ್ನೋದು ಆಗಿರುತ್ತೆ ಯಾಕಂದ್ರೆ ಪ್ರಿನ್ಸಿಪಾಲ್ ಜೆಕೆ ತಂದೆ ಯ ಫ್ರೆಂಡ್ ಆಗಿರುತ್ತಾರೆ , ಆದರೆ ಯಾಕೆ ಈ ಪ್ಲಾನ್ ಹಾಕಿದ್ಲು ಅಂತ ಮುಂದೆ ಗೊತ್ತಾಗುತ್ತೆ ಅಲ್ಲದೆ ಈ ರಾಜೇಶ್ ನ ಸಿಕ್ಕಿಹಾಕಿಸಿ ಜೆಕೆ ಹಾಗು ಎಲ್ಲರಿಂದ ಸಿಂಪತಿ ಗಿಟ್ಟಿಸಿಕೊಳ್ಬೇಕು ಅನ್ನೋದೇ ಅವಳ ಪ್ಲಾನ್ ಈಗ ಅದೇ ಪ್ಲಾನ್ ನಾ ಎಕ್ಸಿಕ್ಯೂಟ್ ಮಾಡ್ತಿದಾಳೆ )
"ಪ್ರಿನ್ಸಿಪಾಲ್ ಪೊಲೀಸ್ ಸ್ಟೇಷನ್ ಗೆ ಇನ್ನೇನು ಕಾಲ್ ಮಾಡ್ಬೇಕು ಅಷ್ಟರಲ್ಲಿ... ಪೂರ್ವಿ ಮತ್ತೆ ಅಳೋಕೆ ಸ್ಟಾರ್ಟ್ ಮಾಡ್ತಾಳೆ"
ಪ್ರಿನ್ಸಿಪಾಲ್ : "ಮತ್ತೆ ಎನ್ ಆಯ್ತಮ್ಮ ನಿಂಗೆ ?
ಪೂರ್ವಿ : "ಪೊಲೀಸ್ ನಾ ಕರಿಸೋ ಅವಶ್ಯಕತೆ ಇಲ್ಲ ನಾನು ಇರೋ ಸತ್ಯ ನಾ ಹೇಳ್ತೀನಿ ಅಂತಾ ಹೇಳ್ತಾಳೆ"
"ಆಗ ಜೆಕೆ ದ್ವನಿಯಲ್ಲಿ ಗಂಭೀರತೆಯನ್ನು ಹೊತ್ತು ನಂಗೆ ಮೊದಲೇ ಗೊತ್ತು ನೀನು ಮಾಡ್ತಿರೋದು ನಾಟಕ ಅಂತ ಅದನ್ನ ಯಾಕೆ ಮಾಡ್ತಿಡಿಯ ಅಂತ ಕೇಳೋ ಆಸಕ್ತಿನು ಇಲ್ಲ ನಂಗೆ ಆದರೆ ಏನು ನಡೀತು ಅಂತ ಇರೋ ಸತ್ಯ ಹೇಳು ಅಷ್ಟೆ"..
ಪೂರ್ವಿ :" ಇದನ್ನೆಲ್ಲ ನಾನು...ಮಾಡಿಲ್ಲ"
ರಾಜೇಶ್ : ( ಇವಳೇನು ನನ್ನ ಹೆಸರು ತಗೋತೀದಾಳಲ್ಲ ಅಂತ ಮನಸಲ್ಲಿ ಅಂದುಕೊಳ್ತಾನೇ ) ಪೂರ್ವಿ ಮತ್ತೇನು ಹೊಸ ನಾಟಕ ಸ್ಟಾರ್ಟ್ ಮಾಡಿದಿಯಾ
ಪೂರ್ವಿ : "ಶಟ್ ಅಪ್ ರಾಜೇಶ್.. ಸರ್ ಇದಕ್ಕೆಲ್ಲ ಕಾರಣ ಈ ರಾಜೇಶ್ ಆಗ ಎಲ್ಲರೂ ಶಾಕ್ ಆಗ್ತಾರೆ"
ರಾಜೇಶ್ : "ರಾಜೇಶ್ ಗೆ ಜೀವ ಬಾಯಿಗೆ ಬಂದಂಗೆ , ಆಗೋಗುತ್ತೆ ಹಾಗೆ ಭಯದಲ್ಲಿ ಅವನ ಕೈ ಕಾಲುಗಳೆಲ್ಲ ನಡುಗುವುದಕ್ಕೆ ಶುರು ಆಗುತ್ತೆ ಹೇ!.. ಏನೇ ಹೇಳ್ತಿದ್ದಿಯಾ ಏನು ? ನಾನ.. ಏನ್ ತಮಾಷೆ ಮಾಡ್ತಿದ್ದೀಯ ನಿಮ್ಮಿಬ್ಬರ ಬಣ್ಣ ಬಯಲು ಮಾಡಿದ್ದಕ್ಕೆ ನನ್ ಮೇಲೆ ಸುಳ್ಳು ಆರೋಪ ಮಾಡ್ತಿದ್ದೀಯಾ ಸರ್.. ಇವಳು ಸುಳ್ಳು ಹೇಳ್ತಿದ್ದಾಳೆ ಇವಳ ಮಾತನ್ನ ನಂಬಬೇಡಿ"
ಪ್ರಿನ್ಸಿಪಾಲ್ : "ಪೂರ್ವಿ ಏನು ನಿನ್ನ ಹುಡುಗಾಟ ಇಷ್ಟೊತ್ತು ಒಂದು ಮಾತನ್ನ ಆಡದೆ ಇದ್ದೊಳ್ಳು ಪೊಲೀಸ್ ಸ್ಟೇಷನ್ ಅಂದ ತಕ್ಷಣ ರಾಜೇಶ್ ಹೆಸರನ್ನ ಹೇಳ್ತಿದ್ದಿಯಾ ಅಂತ ಕೋಪದಲ್ಲಿ ಅವಳೆಡೆಗೆ ನೋಟವನ್ನು ಬೀರ್ತಾ ಕೇಳ್ತಾರೆ"
ಪೂರ್ವಿ : "ಇಲ್ಲ ಸರ್ ನಿಜಾನೆ ಹೇಳ್ತಿರೋದು ಇದನೆಲ್ಲ ಮಾಡೋಕೆ ಹೇಳಿದ್ದು ರಾಜೇಶ್ ನನ್ನ ಬ್ಲ್ಯಾಕ್ ಮೇಲ್ ಮಾಡಿ ಇತರ ಎಲ್ಲಾ ಮಾಡಿಸೋಕೆ ಹೇಳಿದ್ದ"
ಜೆಕೆ :" ಓ.. ಹೌದಾ ಹಾಗಾದ್ರೆ ನೀನು ಇದನ್ನ ಮುಂಚೆನೇ ಹೇಳ್ಬಹುದಾಗಿತ್ತು ಅಲ್ವಾ ಈಗ ಯಾಕೆ ಹೇಳ್ತಿದ್ದೀಯ ನಂಗೆ ಗೊತ್ತು ಇದನ್ನ ನೀವಿಬ್ಬರೂ ಕೂಡ ಪ್ಲಾನ್ ಮಾಡೆ ಮಾಡಿರೋದು ಅಂತ"
ಪೂರ್ವಿ : "ಇಲ್ಲ ಜೆಕೆ ನಾನು ಹೇಳ್ತಿರೋದು ನಿಜಾ ಅಂತ ಮತ್ತೆ ಅದೇ ಮೊಸಳೆ ಕಣ್ಣೀರನ್ನ ಹಾಕ್ತಾಳೆ" ....
"ಅವಳ ಆ ಕಣ್ಣೀರಿಗೆ ಕರಗಿದ ಸ್ವಾತಿ ಮಧ್ಯ ವಹಿಸಿ ನಂಗೆ ಗೊತ್ತಿತ್ತು ಪೂರ್ವಿ ತುಂಬಾ ಒಳ್ಳೆ ಹುಡಗಿ ಇವಳ ಮುಗ್ಧತೆನ ಇಟ್ಗೊಂಡು ಈ ರಾಜೇಶ್ ಆಟ ಅಡ್ತಿದ್ದಾನೆ ಇವನಿಗೆ ಮೊದಲೇ ಜೆಕೆ ಕಂಡ್ರೆ ಆಗೋಲ್ಲ , ಪೂರ್ವಿ ಅಳಬೇಡ ಸದ್ಯ ಈಗಲಾದರೂ ಹೇಳಿದೆ ಅಲ್ವಾ ಇವನ ಬಗ್ಗೆ"
ಪೂರ್ವಿ : "ಸ್ವಾತಿ ಅಟ್ಲೀಸ್ಟ್ ನೀನಾದರೂ ನನ್ನ ನಂಬಂತಿಯ ಅಲ್ವಾ ಅಷ್ಟೆ ಸಾಕು ನನಗೆ"
ಪ್ರಿನ್ಸಿಪಾಲ್ : "ಹಾಗಾದ್ರೆ ನೀನು ಈಗ ಹೇಳ್ತಿರೋದೆಲ್ಲ ನಿಜಾ ನಾ ?
ರಾಜೇಶ್ : "ಇಲ್ಲ ಸರ್ ಇದನೆಲ್ಲ ಮಾಡ್ಸಿದ್ದು ಅವಳೇ ಈ ಪ್ಲಾನ್ ಕೂಡ ಅವಲ್ದೆ ಅದಕ್ಕೆ ಅವಳು ನಮ್ಗೆ ಹತ್ತು ಲಕ್ಷ ಕೊಡ್ತೀನಿ ಅಂದಿದ್ಲು"
ಪ್ರೊಫೆಸರ್ ಗುರು :" ಸಾಕು ರಾಜೇಶ್ ನಿಂಗೆ ಮೊದಲಿಂದಾನು ಜೆಕೆ ಕಂಡ್ರೆ ಆಗೋಲ್ಲ ಯಾವಾಗ ನೋಡಿದ್ರೂ ಅವನ ಮೇಲೆ ಮೇಲೆ ಏನಾದ್ರೂ ಕಂಪ್ಲೇಂಟ್ ಮಾಡ್ತಾನೆ ಇರ್ತಿಯು.. ಏನೋ ಹೋಗ್ಲಿ ಹುಡುಗುರ ಬುದ್ಧಿ ತಾವೇ ತಿದ್ದಿಕೊಂಡು ಸರಿ ಹೋಗ್ತಾರೆ ಅಂದು ಕೊಂಡರೆ ನೀನು ಈ ಲೆವೆಲ್ ಗೆ ಇಳಿತಿಯ ಅಂತ ಅಂದುಕೊಂಡಿರಲಿಲ್ಲ" ...
"ಅದಕ್ಕೆ ಪ್ರೊಫೆಸರ್ ರಾಜೇಶ್ವರಿ ಸಹ ಹೌದು ಸರ್ ಈ ರಾಜೇಶ್ ಕ್ಲಾಸ್ ಅಲ್ಲಿ ಕೂಡ ಹೀಗೆ ಹಾಗೆ ಪೂರ್ವಿನು ಇಷ್ಟು ವರ್ಷ ನೋಡಿದಿವಿ ಅಳವು ತುಂಬಾ ಸೈಲೆಂಟ್ ಹುಡುಗಿ ಪಾಪ ಅವಳು ಇತರ ಮಾಡೋಕೆ ಸಾಧ್ಯಾನೇ ಇಲ್ಲ ಹಾಗೆ ಉಳಿದ ಪ್ರೊಫೆಸರ್ಗಳು ಕೂಡ ಅದನ್ನೇ ಹೇಳ್ತಾರೆ"
ಪ್ರಿನ್ಸಿಪಾಲ್ : "ನೋಡು ರಾಜೇಶ್ ಎಲ್ಲಾ ಪ್ರೊಫೆಸರ್ ಗಳು ನಿನ್ನ ಮೇಲಿಟ್ಟಿರೋ ಅಭಿಪ್ರಾಯ ಇನ್ನೇನು ಎಲ್ಲಾ ಕಾಲೇಜ್ ಮೂಗದೇ ಹೋಯ್ತು ಈ ಹೊತ್ತಲ್ಲಿ ಇದೆಲ್ಲ ಬೇಕಿತ್ತಾ ನಿಂಗೆ"
ರಾಜೇಶ್ : "ಸರ್!.. ಇವಳು ನೀವೆಲ್ಲ ಅಂದುಕೊಂಡಿರೋ ಹಾಗೆ ಒಳ್ಳೆ ಹುಡಗಿ ಅಲ್ಲ"
"ಆಗ ಸೂರ್ಯ ಸಹ ಛೀ.. ನೀನು ಇಷ್ಟು ಚೀಪ್ ಅಂತ ಗೊತ್ತಿರ್ಲಿಲ್ಲ ಒಂದು ಹುಡಗಿನ ಇಟ್ಗೊಂದು ಇಂತಾ ಕೆಲಸ ಮಾಡ್ತೀಯಾ ಅಲ್ವಾ ನಿಮ್ಗೆಲ್ಲಾ ಎನ್ ಹೇಳ್ಬೇಕು ಅಂತಾನೆ ಗೊತ್ತಾಗ್ತಿಲ್ಲ ... ಹಾಗೆ ಅಲ್ಲಿರುವ ಜೆಕೆ ಉಳಿದ ಕ್ಲಾಸ್ಮೇಟ್ ಗಳೆಲ್ಲ ರಾಜೇಶ್ ನಾ ನಿಂದಿಸೋಕೆ ಸ್ಟಾರ್ಟ್ ಮಾಡ್ತಾರೆ"
ರಾಜೇಶ್ : "ಜೆಕೆ ನೀನಾದರೂ ನನ್ನ ಮಾತು ಕೇಳು ಇದೆಲ್ಲ ಮಾಡಿದ್ದು ಅವಳ ಪ್ಲಾನ್ ಪ್ರಕಾರನೇ ನಾನು ಜಸ್ಟ್ ಅವಳಿಗೆ ಹೆಲ್ಪ್ ಮಾಡಿದ್ದೆ ಅಷ್ಟೆ ಬೇಕಿದ್ರೆ ನಮ್ಮ ಫ್ರೆಂಡ್ಸ್ ನಾ ಕೇಳಿ ಆಗ ಅವನ ಫ್ರೆಂಡ್ಸ್ ಗಳು ಕೂಡಾ ಹೌದು ಇವಳೇ ಈ ಪ್ಲಾನ್ನೆಲ್ಲಾ ಮಾಡಿದ್ದು ನಾವು ಅವಳಿಗೆ ಹೆಲ್ಪ್ ಮಾಡಿದ್ವಿ ಅಷ್ಟೆ ಆದರೆ ಅಲ್ಲಿರುವ ರಾಜೇಶ್ ಫ್ರೆಂಡ್ ವರುಣ್ ಮಾತ್ರ ಏನು ಮಾತಾಡದೆ ಸುಮ್ನೆ ಇರ್ತಾನೆ"
"ಜೆಕೆ ರಾಜೇಶ್ ಹತ್ತಿರ ಹೋಗ್ತಾನೆ ರಾಜೇಶ್ ಜೆಕೆ ಯ ಕೋಪದ ಮುಖವನ್ನು ನೋಡಿ ಬೆವರಲು ಸ್ಟಾರ್ಟ್ ಮಾಡ್ತಾನೆ ಜೆಕೆ.. ಅದು.. ಅದು.. ಆಗ ಜೆಕೆ ಗಂಭೀರ ನೋಟವನ್ನು ಬೀರುತ್ತಾ ಹೆದರ್ಕೋಬೇಡ ನಾನು ನಿನಗೆ ಏನೂ ಮಾಡೋಲ್ಲ ,ನನಗೆ ಈ ಡ್ರಾಮಾ ಕೇಳೋ ಇಂಟ್ರೆಸ್ಟ್ ಇಲ್ಲ ಹಾಗೆ ಇನ್ನೊಂದುಸಲ ನನ್ನ ವಿಷಯಕ್ಕೆ ಬಂದ್ರೆ ಚೆನ್ನಾಗಿರಲ್ಲ"..
ಪ್ರಿನ್ಸಿಪಾಲ್ : "ರಾಜೇಶ್ ನೀನು ಹಾಗೆ ನಿಮ್ಮ ಫ್ರೆಂಡ್ಸ್ ಮಾಡಿರೋ ಈ ಕೆಲಸಕ್ಕೆ ನಿಮ್ಮನ್ನ ಲ್ಯಾಬ್ ಎಕ್ಸಾಮ್ಸ್ ಗೆ allow ಮಾಡೋಲ್ಲ"
"ರಾಜೇಶ್ ಭಯದಿಂದ ಸರ್ ಪ್ಲೀಸ್ ಹಾಗೆಲ್ಲ ಮಾಡ್ಬೇಡಿ ಇದೆಲ್ಲ ನಮ್ಮನೇಲಿ ಗೊತ್ತಾಯ್ತು ಅಂದ್ರೆ ನನ್ನ ಕೊಂದೆ ಬಿಡ್ತಾರೆ ಜೆಕೆ ಪ್ಲೀಜ್ ನೀನೇ ಸರ್ ಗೆ ಹೇಳು ನಾನು ಇನ್ನೊಂದು ಸಲ ನಿನ್ನ ತಂಟೆಗೆ ಬರೋದಿಲ್ಲ . ಹಾಗೆ ರಾಜೇಶ್ ಫ್ರೆಂಡ್ಸ್ ಕೂಡಾ ಕ್ಷಮೆ ನಾ ಕೇಳ್ತಾರೆ "
ಜೆಕೆ : "ಸರ್ ಈ ವಿಷಯ ನಾ ಇಲ್ಲಿಗೆ ಬಿಟ್ಬಿಡೋದೇ ಒಳ್ಳೇದು ಇವರು ತಮ್ಮ ತಪ್ಪನ್ನ ಒಪ್ಪಿಕೊಂಡಿದಾರಲ್ಪ ಅಷ್ಟೆ ಸಾಕು, ಪರವಾಗಿಲ್ಲ ಇನ್ನೇನು ಕಾಲೇಜ್ ಮುಗಿದೆ ಹೋಯ್ತು ಈ ಟೈಮ್ ಅಲ್ಲಿ ಇದನೆಲ್ಲ ದೊಡ್ಡದು ಮಾಡೋದ್ರಲ್ಲಿ ಅರ್ಥ ಇಲ್ಲ".
ಪ್ರಿನ್ಸಿಪಾಲ್ : "ಸರಿ ಜೆಕೆ ಇನ್ನೇನು ಅವಳೇ ಒಪ್ಪಿಕೊಂಡಳ್ಳಲ್ಲ ನಿಂದೇನು ತಪ್ಪಿಲ್ಲ ಅಂತ ಹಾಗೆ ನಮ್ಮೆಲ್ಲರ ಕಡೆಯಿಂದ sorry",
ಜೆಕೆ : "ಅಯ್ಯೋ.. ಸರ್ ನೀವು ನಮಗಿಂತ ದೊಡ್ಡವರು ಇತರ ಎಲ್ಲಾ ಹೇಳಿ ನಮ್ಮನ್ನ ಚಿಕ್ಕವರನ್ನಾಗಿ ಮಾಡ್ಬೇಡಿ ಪ್ಲೀಸ್"...
ಪ್ರಿನ್ಸಿಪಾಲ್ : "ಸರಿ ಈಗ ಎಲ್ಲ ಹೊರಡಿ ಟೈಮ್ ಆಗಿದೆ ಹಾಗೆ ರಾಜೇಶ್ ನೀನು ಇತರ ಕೆಲಸ ಎಲ್ಲಾ ಮಾಡೋದು ಬಿಟ್ಟು ಓದೋದರ ಕಡೆ ಗಮನ ಕೊಡಿ ಹಾಗೆ ಪೂರ್ವಿ ನೀನು ಕೂಡ ಏನೇ ಪ್ರಾಬ್ಲಮ್ ಇದ್ದರೂ ಬಂದು ಅದನ್ನ ನಮ್ಗೆ ಇನ್ಫಾರ್ಮ್ ಮಾಡು ಅಂತಾ ಹೇಳಿ ಪ್ರೊಫೆಸರ್ ಗಳು ಹಾಗೆ ಪ್ರಿನ್ಸಿಪಾಲ್ ಅಲ್ಲಿಂದ ಹೋರಡ್ತಾರೆ ಹಾಗೆ ಉಳಿದ ಸ್ಟೂಡೆಂಟ್ಸ್ ಗಳು ಕೂಡಾ ಹೊರಡ್ತಾರೆ "
ಪೂರ್ವಿ : ಜೆಕೆ I am sorry ನಂಗೆ ಗೊತ್ತು ನೀನು ನನ್ನ ಕ್ಷಮಿಸೊಲ್ಲ ಅಂತ ಆದರೂ"...
ಜೆಕೆ ಅವಳ ಮಾತನ್ನು ಪೂರ್ತಿ ಕೇಳದೆ ಸ್ವಾತಿ, ಕಾರ್ತಿಕ್ ಬನ್ನಿ ಹೋಗೋಣ ಟೈಮ್ ಆಗ್ತಿದೆ ಅಂತ ಪೂರ್ವಿ ಮಾತಿಗೆ ಏನು ರೆಸ್ಪಾನ್ಸ್ ಮಾಡದೇ ಅಲ್ಲಿಂದ ಹೋಗ್ತಾನೆ ಅವನ ಹಿಂದೆ ಕಾರ್ತಿಕ್,ಪ್ರವೀಣ್ ,ಸೂರ್ಯ ಹೋಗ್ತಾರೆ ಹಾಗೆ ಪೂರ್ವಿ ಕೂಡ ಹೊರಗಡೆ ಬರ್ತಾಳೆ"
"ಆಗ ,ಸ್ವಾತಿ ಪೂರ್ವಿ ಹತ್ರ ಬಂದು ಪೂರ್ವಿ ನಂಗೆ ಗೊತ್ತು ನಿಂಗೆ ಬೇಜಾರಾಗಿದೆ ಅಂತಾ ,ಆದರೆ ನೀನು ಈ ಮ್ಯಾಟರ್ ನಾ ಮೊದಲೇ ಹೇಳಿದ್ರೆ ಎಲ್ಲರೂ ಜೆಕೆ ಮೇಲೆ ಅನುಮಾನ ಪಡ್ತೀರ್ಲಿಲ್ಲ ಹಾಗೆ ಈ ವಿಷಯ ಇಷ್ಟು ದೊಡ್ಡದು ಆಗ್ತಾನೆ ಇರಲಿಲ್ಲ ಇರಲಿ ಬಿಡು ,ಆದರೆ ಜೆಕೆ ಈಗ ಸ್ಪಲ್ಪ ಕೋಪದಲ್ಲಿ ಇದಾನೆ ಅದಕ್ಕೆ ಏನು ಹೇಳದೆ ಹಾಗೆ ಹೋದ ಏನು ತಿಳ್ಕೋಬೇಡ ಸರಿ ನಾ ಬಾಯ್... ಟೈಮ್ ಆಯ್ತು ನೀನು ಹೊರಡು ಅದರ ಬಗ್ಗೆನೇ ಯೋಚನೆ ಮಾಡ್ತಾ ಕೂಡ್ಬೇಡ ಓಕೆ "
"ಆಗ ಪೂರ್ವಿ ಸ್ವಾತಿ.. ತುಂಬಾ ಥ್ಯಾಂಕ್ಸ್ ಅಂತಾ ತಬ್ಬಿಕೊಳ್ತಾಳೇ"..ಆಗ ಸ್ವಾತಿ ಮುಖದಲ್ಲಿ ಮಂದಹಾಸವನ್ನು ಬೀರುತ್ತಾ ಫ್ರೆಂಡ್ಶಿಪ್ ಮಧ್ಯ ಇದೆಲ್ಲ ಇರಬಾರದು ಸರಿ ಬಾಯ್..ಅಂತಾ ಸ್ವಾತಿ ಅಲ್ಲಿಂದ ಹೋರಡ್ತಾಳೆ "
"ಹಾಗೆ ಪೂರ್ವಿ ಕೂಡ ಹೊರಡುವಾಗ ...ಅಷ್ಟರಲ್ಲಿ ರಾಜೇಶ್ ಎಂಟರ್ ಆಗ್ತಾನೆ , ನೀನು ತುಂಬಾ ಒಳ್ಳೆ ಹುಡಗಿ ಅನ್ಕೊಂಡಿದ್ದೆ ಅದೆಷ್ಟು ನಾಟಕ ಮಾಡ್ತಿಯೇ .. ಯಾಕೆ ಹೀಗೆ ಮಾಡ್ದೆ? ನಾನೇ ನಿನಗೆ ಬ್ಲ್ಯಾಕ್ ಮೆಲ್ ಮಾಡ್ದೆ ಅಂತಾ ಸುಳ್ಳು ಹೇಳೋದಲ್ದೆ ಎಲ್ಲರೆದುರಿಗೆ ನನ್ನ ಇಮೇಜ್ ಎಲ್ಲಾ ಹಾಳು ಮಾಡ್ದೆ ನಾನು ಮಾತ್ರ ನಿನ್ನ ಸುಮ್ನೆ ಬಿಡೋಲ್ಲ ಅಂತ ಅವಳೆಡೆಗೆ ಚೂಪಾದ ನೋಟವನ್ನು ಬೀರುತ್ತಾ ಹೇಳ್ತಾನೆ"
"ಪೂರ್ವಿ ತನ್ನ ಅಹಂಕಾರದ ಮಾತುಗಳನ್ನು ಆಡುತ್ತಾ ,ರಾಜೇಶ್ ಕೂಲ್ ನಮ್ಮೆಲ್ಲರ ಕಾಲೇಜ್ ಮುಗ್ಧೆ ಹೋಯ್ತು ಇನ್ನೊಂದು ಸ್ಪಲ್ಪ ದಿನದಲ್ಲಿ ಎಲ್ಲರೂ ಈ ವಿಷಯ ನಾ ಮರೆತು ಬಿಡ್ತಾರೆ ,So don't warry about it "
ರಾಜೇಶ್ : "ಶ್!.. ನಿನ್ನ ಸುಮ್ನೆ ಬಿಡ್ತೀನಿ ಅಂದುಕೋಬೇಡ ಖಂಡಿತ ನಿನ್ನ ಬಗ್ಗೆ ಜೆಕೆ ಗೆ ಹೇಳೆ ಹೇಳ್ತೀನಿ"..
ಪೂರ್ವಿ ಒಂದು ದುಷ್ಟ ನಗೆಯನ್ನು ಬೀರುತ್ತಾ"ಓ.. ಅಷ್ಟು ಬೇಗ ಒಳ್ಳೆವನಾಗಿ ಬಿಟ್ಟೆಯ ಗುಡ್... ಆದರೆ ನಿಮ್ಮಪ್ಪ ತುಂಬಾ ಸ್ಟ್ರಿಕ್ಟ್ ಅಂತ ಕೇಳಿದ್ದೆ ಅದು ಏನಂದ್ರೆ ನೀನು ಮತ್ತೆ ಆ.. ಯಾರದು ? ಹಾ.. ಶ್ರೇಯಾ ರೈಟ್ ನಿಮ್ಮಿಬ್ಬರ ಬಗ್ಗೆ ನಿಮ್ಮ ತಂದೆಗೆ ಹೇಳಿದ್ರೆ ಹೇಗಿರುತ್ತೆ" ...
ರಾಜೇಶ್ ಭಯದಲ್ಲಿ "ಹೇ.. ನಿಂಗೆ ಈ ವಿಷಯ ಎಲ್ಲ ಹೇಗೆ ಗೊತ್ತು ನೋಡು ಇದು ನನ್ನ ಪರ್ಸನಲ್ ಮ್ಯಾಟರ್ ಇದರ ತಂಟೆಗೆ ಬಂದ್ರೆ ನಾನ್ ಮಾತ್ರ ಸುಮ್ನೆ ಇರೋಲ್ಲ"
"ಏನೋಮಾಡ್ಕೋತಿಯ ?..ಮಾಡಿರೋದೆ ಕಂತ್ರೀ ಕೆಲಸ ನೋಡು ನಿನ್ ಹತ್ರ ಮಾತಾಡೋಕೆ ನಂಗೆ ಟೈಮ್ ಇಲ್ಲ don't warry ನಿಂಗೆ ಕೊಡಬೇಕಾಗಿರೋ ಒಂದು ಲಕ್ಷ ನಿನ್ನ ಅಕೌಂಟ್ ಗೆ ಬರುತ್ತೆ ಇದನ್ನ ಇಲ್ಲೇ ಬಿಟ್ಟುಬಿಡು ಅಕಸ್ಮಾತ್ ಇದರ ಬಗ್ಗೆ ಜೆಕೆ ಗೆ ಗೊತ್ತಾಯ್ತು ಅಂದ್ರೆ .. ನಿಂಗೆ ಗೊತ್ತಲ್ವಾ ಯೋಚನೆ ಮಾಡು ಅಂತ ಹೇಳಿ ಅಲ್ಲಿಂದ ಹೋರಡ್ತಾಳೆ"
"ಹಾಗೆ ಹೊರಗಡೆ ಬರುತ್ತಿದ್ದ ಹಾಗೆ ಅಲ್ಲೇ ರಾಜೇಶ್ ಫ್ರೆಂಡ್ ವರುಣ್ ಇವಳಿಗೋಸ್ಕರ ವೇಟ್ ಮಾಡ್ತೀರ್ತಾನೇ"
ಪೂರ್ವಿ : "ಫೋಟೋಸ್ ಎಲ್ಲಾ ಕರೆಕ್ಟ್ ಆಗಿ ತೆಗದಿದಿಯಾ ತಾನೇ?
ವರುಣ್ : "ಎಲ್ಲಾ ಕರೆಕ್ಟ್ ಆಗೆ ತೆಗದಿದೀನಿ ತಗೊಳ್ಳಿ ನಿಮ್ಮ ಮೊಬೈಲ್ ಅಂತ ಅವಳ ಮೊಬೈಲ್ ನಾ ಕೊಡ್ತಾನೆ ಸರಿ ನನ್ನ ದುಡ್ಡನ್ನ ಕೊಟ್ರೆ ನಾನು ಹೋಗ್ತೀನಿ"
ಪೂರ್ವಿ : "sure.. ನೋಡು ಅಮೌಂಟ್ ಹಾಕಿದೀನಿ ಚೆಕ್ ಮಾಡ್ಕೋ ಆಗ ವರುಣ್ ತಲೆ ಆಡಿಸುತ್ತಾ ಹಾ!.. ಬಂದಿದೆ
ಪೂರ್ವಿ : "ಓಕೆ ಬಟ್ ಈ ವಿಷಯ ಯಾರಿಗೂ ಗೊತ್ತಾಗಬಾರದು ಮೊದಲು ಆ ರಾಜೇಶ್ ಗೆ "
ವರುಣ್ : "ಕಂಡಿತಾ ನೀವು ಅದರ ಬಗ್ಗೆ ತಲೆ ಕೆಡಿಸ್ಕೋಬೇಡ ಪೂರ್ವಿ : ಸರಿ ಅಂತಾ ಅಲ್ಲಿಂದ ಹೋರಡ್ತಾಳೆ"..
ಈಕಡೆ ಜೆಕೆ ಸ್ವಾತಿ ಗೆ ಪ್ರಪೋಸ್ ಮಾಡ್ಬೇಕು ಅಂತಾ ಹಾಕಿರೋ ಪ್ಲಾನ್ ಎಕ್ಸಿಕ್ಯೂಟ್ ಆಗುತ್ತಾ ? ಏನಾಗುತ್ತದೆ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ...
ಮುಂದುವರೆಯುವುದು....
🌸ಲೇಖಕರ ನೋಟ🌸:
ಈ ಸಂಚಿಕೆಯಲ್ಲಿ ಪೂರ್ವಿ-ರಾಜೇಶ್ ನ ಕುತಂತ್ರ ಸ್ಪೋಟವಾಗುತ್ತದೆ. ಜೆಕೆ ತನ್ನ ನಿಶ್ಯಬ್ದ ಶಕ್ತಿಯಿಂದ ಎಲ್ಲರ ವಿಶ್ವಾಸ ಗೆಲ್ಲುತ್ತಾನೆ. ಆದರೆ ಕಥೆ ಇಲ್ಲಿಯೇ ಮುಗಿಯಲ್ಲ… ಮುಂದಿನ ಸಂಚಿಕೆಯಲ್ಲಿ ನಿರೀಕ್ಷೆಯ ಪ್ರಪೋಸಲ್ ಸೀನ್! ಕಮೆಂಟ್ ಮಾಡ್ತಾ, ಫಾಲೋ ಮಾಡ್ತಾ ಇರೀ ❤️
---