She came unwillingly... - 4 in Kannada Drama by Kavya Pattar books and stories PDF | ಬಯಸದೆ ಬಂದವಳು... - 4

Featured Books
Categories
Share

ಬಯಸದೆ ಬಂದವಳು... - 4



ಇನ್ನೂ ಈ ಕಡೆ ಸ್ವಾತಿ, ತನ್ನ ರೂಮ್ ನಲ್ಲಿ ಬೆಡ್ ಮೇಲೆ ಒಬ್ಬಳೆ ಯೋಚನೆ  ಯೋಚನೆ ಮಾಡ್ತಾ ಕುಳಿತಿರುತ್ತಾಳೆ, ಅಲ್ಲ ನಾನು ಅಂತ ವಿಷಯ ಏನು ಹೇಳಿದೆ ಅಂತ ಜೆಕೆ ನನ್ನ ಮೇಲೆ ಕೋಪ ಮಾಡ್ಕೊಂಡ ಇಷ್ಟು ವರ್ಷದಲ್ಲಿ ಅವನಿಗೆ ಎಷ್ಟುಸಲ ಕಾಡಿಸಿದಿನಿ ಲೆಕ್ಕನೆ ಇಲ್ಲ ತುಂಬಾ ಸಲ ಅವನ್ ಮೇಲೆ ನಾನೇ ಕೋಪ ಮಾಡಿಕೊಂಡರು ನನ್ನ ಮೇಲೆ ಅವನು ಒಂದ್ಸಲನು ರೇಗಿಲ್ಲ ಕೋಪ ಮಾಡಿಕೊಂಡಿಲ್ಲ ಆದರೆ ಈ ಚಿಕ್ಕ ವಿಷಯಕ್ಕೆ ನನ್ನ ಮೇಲೆ ಆತರ ಕೋಪ ಮಾಡಿಕೊಂಡಿದಾನಲ್ಲ ಅಂತ ಯೋಚನೆ ಮಾಡುತ್ತಾ ಇರುವಾಗ

ಅಷ್ಟರಲ್ಲೇ ಸ್ವಾತಿಯ ಅಪ್ಪ ಶಿವು ರೂಮ್ ನಾ ಮೆಲ್ಲಗೆ ತೆಗೆದು ಒಳಗೆ ಬರ್ತಾನೆ " ಪುಟ್ಟ ಯಾಕೋ ಊಟ ಮಾಡಿಲ್ವಂತೆ ನಿಮ್ಮ ಅಮ್ಮ ಹೇಳಿದ್ಲು ಏನಾಯ್ತೋ ಕಂದ "
 ಅಪ್ಪ... ಅಂತ ಗಟ್ಟಿಯಾಗಿ ತಬ್ಬಿಕೊಂಡು ಅಪ್ಪನ ತೋಳುಗಳಲ್ಲಿ ಒರಗಿ, ಕಾಲೇಜ್ ಅಲ್ಲಿ ನಡೆದ ವಿಷಯವನ್ನೆಲ್ಲ ಹೇಳುತ್ತಾಳೆ

"ನನ್ ಮೇಲೆ ಜೆಕೆ ತುಂಬಾ ಕೋಪ ಮಾಡಿಕೊಂಡಿದ್ದಾನೆ ನೋಡದ ಒಂದ್ ಕಾಲ್ ಕೂಡಾ ಮಾಡಿಲ್ಲ "

ಶಿವು :"ಅಯ್ಯೋ ಕಂದ ಅದಕ್ಕೆಲ್ಲ ಯಾಕೆ ಬೇಜಾರ್ ಮಾಡಕೋತಿಯ ನಿನ್ ಹತ್ರ ಮಾತಾಡದೆ ಅವನಿಗೆ ಇರೋಕೆ ಆಗಲ್ಲ ಅಂತ ನಿನಗೂ ಗೊತ್ತಲ್ವಾ so.. don't warry ಸರಿ ಈಗ ಊಟ ಮಾಡೋಣ ಬಾ "

ಸ್ವಾತಿ : "ಬೇಡ ಅಪ್ಪ ನಂಗೆ ಯಾಕೋ ಹಸಿವಿಲ್ಲ"  

ಶಿವು : "ನೀನು ಏನಾದ್ರೂ ಊಟ ಮಾಡದೇ ಹೋದ್ರೆ ನಾನು ಊಟ ಮಾಡೋಲ್ಲ"☹️ 

ಅಪ್ಪನ ಮುಖವನ್ನು ನೋಡುತ್ತಲೇ ಸ್ವಾತಿಯ ಮನಸ್ಸು ಕರಗಿ
ಸ್ವಾತಿ : "ಹಾಗೆಲ್ಲ ಮಾಡಬೇಡಿ ಅಪ್ಪ ಸರಿ ಮಾಡತೀನಿ ಅಂತ ಶಿವು ಸ್ವಾತಿನ ಊಟಕ್ಕೆ ಕರೆದು ಕೊಂಡು ಹೋಗುತ್ತಾರೆ"...                                   

ಇನ್ನು ಈ ಕಡೆ ಸೂರ್ಯ ಊಟವನ್ನೆಲ್ಲ ಮುಗಿಸಿಕೊಂಡು ತನ್ನ ರೂಮ್ ನಲ್ಲಿ ಕುಳಿತುಕೊಳ್ತಾನೇ , ಮೊಬೈಲ್ ತೇಗೆದುಕೊಂಡು ಯಾರಿಗೋ  ಕಾಲ್ ಮಾಡುತ್ತಾನೆ ಆಕಡೆಯಿಂದ ಹಲೋ..

ಸೂರ್ಯ :" ಹಲೋ ..ಮೇಡಂ ಅವರು ಯಾಕೋ ಕೋಪ ಮಾಡಿಕೊಂಡಿರೋ ಹಾಗಿದೆ sorry ಅಮ್ಮು (ಅಂಬ್ರುತಾ) ನಾನು ಇವತ್ತು ಸ್ವಲ್ಪ ಬ್ಯುಸಿ ಇದ್ದೆ ಅದಕ್ಕೆ ನಿಂಗೆ ಕಾಲ್ ಹಾಗೆ ಮೆಸೇಜ್ ಮಾಡೋಕೆ ಆಗಲಿಲ್ಲ"

(ಸ್ನೇಹಿತರೆ ಸೂರ್ಯ ಮತ್ತು ಅಂಬ್ರುತಾ ಇಬ್ಬರು ಒಬ್ಬರಿಗೊಬ್ಬರು ಬಹುದಿನಗಳಿಂದ ಪ್ರೀತಿ ಮಾಡುತ್ತಿರುತ್ತಾರೆ ಆದರೆ ಈ ವಿಷಯ ಜೆಕೆ, ಸ್ವಾತಿ ಪ್ರವೀಣ್, ಕಾರ್ತಿಕ್ ಗೆ ಮತ್ತು ಜಾಹ್ನವಿ ಅಂದರೆ ಸೂರ್ಯನ ತಂಗಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರುವುದಿಲ್ಲ )

ಅಂಬ್ರುತಾ (ಕೋಪದಲ್ಲಿ) :" ಓ.. sorry ಸರ್ 😐 ಈಗಲೂ ತಾವು ಬ್ಯುಸಿ ಇದ್ದರೆ ಇಡಬಹುದು ನಮ್ಗೆನು ಮಾಡೋಕೆ ಕೆಲಸ ಇರೋಲ್ಲ ಅದಕ್ಕೆ ನಿಮ್ಗೆ ಕಾಲ್, ಮೆಸೇಜ್ ಅಂತಾ ಮಾಡ್ತಾ ಡಿಸ್ಟರ್ಬ್ ಮಾಡ್ತಾ ಇರ್ತೇವೆ ಅಲ್ವಾ" 

ಸೂರ್ಯ : "ಹೇ!.. ನಾನು ಹಾಗೆ ಹೇಳಿಲ್ಲ🙁.. ಸರಿ sorry ಕಣೆ ಇನ್ಮೇಲೆ ಹಾಗೆಲ್ಲ ಮಾಡೋದೇ ಇಲ್ಲ ಪ್ರಾಮಿಸ್ ಓಕೆ ನಾ"

ಅಂಬ್ರುತಾ : "ಇನ್ನೊಮ್ಮೆ ಏನಾದ್ರೂ ನನ್ ಕಾಲ್, ಮೆಸೇಜ್ ಇಗ್ನೋರ್ ಮಾಡಬೇಕು ಅವಾಗಿದೆ ನಿಂಗೆ"..😏

ಸೂರ್ಯ : "ಆಯ್ತು ಮೇಡಮ್ಸ ಸರಿ ಊಟ
ಆಯ್ತಾ ?"

ಅಂಬ್ರುತಾ :"ಹಾ! ಆಯ್ತು ಆದರೆ ಇವತ್ತು ಅಣ್ಣ ಯಾಕೋ ತುಂಬಾ ಡಲ್ ಆಗಿದ್ದ ಕಣೋ ಅವನು ಹೀಗಿದ್ದವ್ನೇ ಅಲ್ಲ ಮೊದಲು ಅಪ್ಪ ಬೈದದಕ್ಕೆ ಬೇಜಾರ್ ಮಾಡಿಕೊಂಡಿದ್ದಾನೆ ಅನ್ಕೊಂಡೆ ಆದರೆ ಅಪ್ಪ ಡೈಲಿ ಅವನ್ನ ಬೈತಾರೆ ಅವನು ನಾರ್ಮಲ್ ಆಗೆ ಇರ್ತಾನೆ ಆದರೆ ಇವತ್ತು ತುಂಬಾ ಡಲ್ ಆಗಿದ್ದ any problem?  ಕಾಲೇಜ್ ಅಲ್ಲಿ  ಏನಾದ್ರೂ ಆಯ್ತೇನೋ "

ಸೂರ್ಯ :  (ಸೂರ್ಯ ಮನಸಲ್ಲಿ ಇವಳಿಗೆ ಇವೆಲ್ಲ ಹೇಳ್ದೆ ಇದ್ರೇನೆ better ಇಲ್ಲ ಇಡೀ ಮನೆಗೆ ಡಂಗೂರ ಸಾರಿಬಿಡ್ತಾಳೆ ಮೊದಲೇ ಇವಳ ಬಾಯಲ್ಲಿ ಮಾತು ನಿಂದ್ರೋಲ್ಲ)

"ಅದು ಏನಿಲ್ಲ ಚಿನ್ನ ಸ್ವಲ್ಪ ತಲೆ ನೋವು ಅಂತ ಇದ್ದ ಅಷ್ಟೆ ಈಗ ಎನ್ ಮಾಡ್ತಿದ್ದನೆ ಸ್ವಲ್ಪ ರೂಮ್ ಹತ್ರ ಹೋಗಿ ನೋಡಕೊಂಡ್ಬರ್ತಿಯ "

ಅಂಬ್ರುತಾ : "ಹಾ!.. ಸರಿ ಇರು ಸ್ವಲ್ಪ ನಿಂಗೆ ನನಗಿಂತ ಅವನ್ ಮೇಲೆ ಲವ್ ಜಾಸ್ತಿ ಅಲ್ವಾ ಅಂತ ಮಾತಾಡ್ತಾ ಜೆಕೆರೂಮ್ ಕಡೆ ಹೋಗ್ತಾಳೆ ಮೆಲ್ಲಗೆ ಡೋರ್ ಓಪನ್ ಮಾಡಿ ನೋಡ್ತಾಳೆ ಜೆಕೆ ಮಲಗಿರುವುದನ್ನು ನೋಡಿ ನಿಮ್ ಫ್ರೆಂಡ್ ಆರಾಮ ಆಗಿ ಮಾಲ್ಕೊಂಡಿದ್ದಾನೆ ಈಗ ಸಮಾಧಾನನಾ" 

ಸೂರ್ಯ :" ಹೌದಾ.. ಸರಿ" ಹಾಗೆ ಇಬ್ಬರೂ ಸ್ಪಲ್ಪ ಸಮಯದ ವರೆಗೆ ಮಾತಾಡ್ತಾ ಇರ್ತಾರೆ 

ಅಂಬ್ರುತಾ : "ಬೇಬಿ ನಂಗೆ ತುಂಬಾ ನಿದ್ದೇ ಬರ್ತಿದೆ ಕಣೋ"
ಸೂರ್ಯ ( ರೆಗಿಸುತ್ತಾ) : "ಅಯ್ಯೋ ಚಿನ್ನ ... ನಾನು ಇವತ್ತು ನೀನ್ ಹತ್ರ ಮಾತಾಡೆ ಇಲ್ವಲ್ಲ ಬೆಳಿಗ್ಗೆ ಇಂದ ಅದಿಕ್ಕೆ ಇವತ್ತು ರಾತ್ರಿ ಪೂರ್ತಿ ಮಾತಾಡೊನ್ವ" 😜  

ಅಂಬ್ರುತಾ :🙄 "ಏನು ರಾತ್ರಿ ಪೂರ್ತಿ ನಾ ನಂಗೆ ಈಗಲೇ ಕಣ್ಣೆಲ್ಲಾ ಎಳಿತಾಇದಾವೆ ,ನಂಗೆ ಆಗೋಲ್ಲ ಕಣೋ ಗುಡ್ ನೈಟ್ 😴 bye.. ಅಂತ ಕಾಲ್ ಕಟ್ ಮಾಡ್ತಾಳೆ
ಸೂರ್ಯ : ಮುಗುಳ್ನಗೆ ಬೀರುತ್ತಾ ಈ ಹುಡುಗೀರ ಮನಸನ್ನ ಅರ್ಥ ಮಾಡ್ಕೊಳ್ಳೋದೇ ಕಷ್ಟ ಅಲ್ಲ ಇಡೀ ದಿನ ಮಾತಾಡಿಲ್ಲ ಅಂತ ಹೇಳೋದು ಅವಳೇ ಈಗ ಮಾತಾಡು ಅಂದ್ರೆ ನನ್ಗೆ ನಿದ್ದೆ ಬರ್ತಿದೆ ಅಂತಾಳೆ  ಸರಿ ಇರ್ಲಿ ನಮ್ಮ ಹುಡುಗಿ ಎನ್ ಮಾಡಿದ್ರೂ ಚಂದಾನೇ..

ಇನ್ನೇನು ತನ್ನ ಮುದ್ದಿನ ತಂಗಿಗೆ ಕಾಲ್ ಮಾಡ್ಬೇಕು ಅನ್ನುವಷ್ಟರಲ್ಲಿ ಆಗ ಜಾನ್ನವಿ ಇಂದಾನೆ ಕಾಲ್ ಬರುತ್ತೆ ಸೂರ್ಯ ಕಾಲ್ ಪಿಕ್ ಮಾಡಿ "ಹಲೋ.. ಸ್ವೀಟಿ" ..
"ಸೂರ್ಯ ಜಾಹ್ನವಿಯನ್ನ ಯಾವಾಗ್ಲೂ ಸ್ವೀಟಿ ಅಂತಾನೆ ಕರಿಯೋದು  ಸೂರ್ಯ ಜಾನುವಿಗೆ ದಿನವೂ ತಪ್ಪದೆ ಕಾಲ್ ಮಾಡುತ್ತಿರುತ್ತಾನೆ ತಂಗಿ ಎಂದರೆ ಇವನಿಗೆ ಪ್ರಾಣ"

(  ಜಾನು ವಿದೇಶಕ್ಕೆ  ಹೈಯರ್ ಸ್ಟಡೀಸ್ ಗೆಂದು ಜರ್ಮನಿಗೆ ಹೋಗಿರುತ್ತಾಳೆ ಶೇಖರ್ ನ ಆತ್ಮೀಯ ಗೆಳೆಯ  ರಾಕೇಶ್ ಮತ್ತು ಅವನ ಪತ್ನಿ  ಇವರಿಬ್ಬರಿಗೂ ಇಂಡಿಯಾ ಗೆ ಶೇಖರ್ ನ ನೋಡೋಕೆ ಅಂತಾ ಬಂದಿರುತ್ತಾರೆ ಆದರೆ ಇವರಿಗೆ ಯಾವುದೇ ಮಕ್ಕಳಿರುವುದಿಲ್ಲ ಹಾಗಾಗಿ ಜಾನುನ ಅವಳ ಎಜುಕೇಷನ್ ಮುಗಿಯುವ ವರೆಗೆ ಅಲ್ಲಿಯೇ ಇರಿಸಿಕೊಳ್ಳುವುದಾಗಿ ಕೇಳಿಕೊಂಡಾಗ  ಸ್ನೇಹಿತನಿಗೆ ಮಾತಿಗೆ ಇಲ್ಲ ಎನ್ನಲಾಗದೆ ಅವಳನ್ನು ಎಜುಕೇಷನ್  ಮುಗಿಯುವರೆಗೆ ಕಳುಹಿಸಿ ಕೊಟ್ಟಿರುತ್ತಾನೆ ಆದರೆ ಜಾನುಗೆ  ಇಂಡಿಯಾ  ಎಂದರೆ ಪ್ರಾಣ ಅವಳಿಗೆ ಇಷ್ಟವಿಲ್ಲದಿದ್ದರು ಅಪ್ಪನ ಮಾತಿಗೆ ಇಲ್ಲ ಎನ್ನಲಾಗದೇ ಹೋಗಿರುತ್ತಾಳೇ.
ಜಾನು  ನೋಡಲು ತುಂಬಾ ರೂಪವತಿ ಎಲ್ಲರನ್ನು ಸೆಳೆಯುವ ಕಣ್ಣುಗಳು ನೇರವಾದ ಮೂಗು,ಅವಳ ಆ ಸುಂದರ ಮುಖಚಹರೆ  ,ರೇಷ್ಮೆಯಂತಿರುವ ಅವಳ ಕೂದಲು ಎಲ್ಲರನ್ನ ಆಕರ್ಷಿಸುವ ಅವಳ ದೇಹ ಸೌಂದರ್ಯ ಯಾವ ಹುಡುಗನು ಇವಳ ಆಕರ್ಷಣೆಗೆ ಸೆಳೆಯದೆ ಇರಲು ಸಾಧ್ಯವೇ ಇಲ್ಲ ಅಷ್ಟು ಸುಂದರ ಹುಡುಗಿ ನಮ್ಮ ಜಾನು   
( ಇದು ತುಂಬಾ ಮುಖ್ಯವಾದ ಪಾತ್ರ),
ಇವಳು ಮಾತನಾಡಲು ಶುರು ಮಾಡಿದರೆ ನಿಲ್ಲುವ ಮಾತೆ ಇಲ್ಲ ಅಷ್ಟು ಮುದ್ದಾಗಿ ಪಟ ಪಟ ಅಂತ ಮಾತನಾಡುವ ಹುಡಗಿ ತನ್ನ ಮಾತಿನಲ್ಲೇ ಎಲ್ಲರನ್ನು ಸೆಳೆಯುವ ಕಲೆ ಉಳ್ಳವಳು, ಹಾಗೆ ಎಲ್ಲರೊಂದಿಗೆ ಬೇಗ ಬೇರೆಯುವಳು ಎಲ್ಲರ ಕುಷಿಯಲ್ಲಿ ತನ್ನ ಕುಷಿಯನ್ನು ಕಾಣುವ ಮುದ್ದು ಮನಸ್ಸಿನ ಹುಡುಗಿ. )

ಜಾಹ್ನವಿ : "ಹಲೋ.. ಅಣ್ಣ ಏನೋ ಮಾಡ್ತಿದ್ದಿಯ ಯಾಕೆ ಇವತ್ತು ಇಸ್ಟೊತ್ತಾದರು ಕಾಲ್ ಮಾಡೆ ಇಲ್ಲ??"

ಸೂರ್ಯ : "ಇಷ್ಟೊತ್ತು ನಿಮ್ಮ ಅತ್ತಿಗೆ ಮಾತಾಡ್ತಾ ಇದ್ಲು ಅದಿಕ್ಕೆ".... 

ಜಾನು : "ಓ... ಅತ್ತಿಗೆನ ಸರಿ..ಸರಿ.. ಅತ್ತಿಗೆ ಕಾಲ್ ಮಾಡಿದ್ರೂ ಅಂದ್ರೆ ಏನು ಪ್ರಾಬ್ಲಮ್ ಇಲ್ಲ ಬೇಕಾದ್ರೆ ಈಗಲೂ ಮಾತಾಡ್ತೀನಿ ಅಂದ್ರೆ ಹೇಳು ಕಾಲ್ ಕಟ್ ಮಾಡ್ತೀನಿ"😅  
ಸೂರ್ಯ( ಹುಸಿ ನಗುತ್ತಾ): "ಅಯ್ಯೋ.. ಹಾಗೇನೂ ಇಲ್ಲ ಕಂದ ಅವಳು ಅಗಲೇ ಮಾಲ್ಕೊಂಡಿದ್ದಾಳೆ" 😄 ಸರಿ ನೀನು ಹೇಳು ಹೇಗೆ ನಡೀತಿದೆ ಕಾಲೇಜು ?  ಜಾನು : "ಅದು ಇದ್ದಿದೆ ಬಿಡು ಅಣ್ಣ ನಂಗೆ ಯಾವಾಗ ಇಂಡಿಯಾ ಗೆ ಬರ್ತೀನಿ ಅನಸ್ತಿದೆ ತುಂಬಾ ಮಿಸ್ ಮಾಡ್ಕೋತಾ ಇದೀನಿ ನಿಮ್ಮನೆಲ್ಲ"

ಸೂರ್ಯ : "don't warry ಟ್ ಸ್ವೀಟಿ ಇನ್ನೊಂದು ಸ್ವಲ್ಪ ದಿನ ಅಷ್ಟೆ"...  

ಜಾನು : "ಸರಿ ಅಣ್ಣ ನಂಗೆ ಈಗ ಕ್ಲಾಸ್ ಗಳಿಗೆ ಟೈಮ್ ಆಗ್ತಿದೆ ಮತ್ತೆ ಬಂದ್ಮೇಲೆ ಕಾಲ್ ಮಾಡ್ತೀನಿ "

ಸೂರ್ಯ : "ಸರಿ ಹುಷಾರು ಸ್ವಿಟಿ.. bye.. ಜಾನು : ಓಕೆ ಅಣ್ಣ ಗುಡ್ ನೈಟ್" 
( ಅವಳು ಇರೋದು ಜರ್ಮನಿ ಆದ್ದರಿಂದ ಸಮಯ ಬದಲಾವಣೆ ಇರುತ್ತದೆ )

ಮರುದಿನ ಮುಂಜಾನೆ ಸ್ವಾತಿ ಜೆಕೆ ಮನೆಗೆ ಬರುತ್ತಾಳೆ ಒಳಗೆ ಬರುತ್ತಿದ್ದ ಹಾಗೆ
ಯಶೋಧಾ ( ಜೆಕೆ ಯ ಅಮ್ಮ): "ಅರೆ ಸ್ವಾತಿ ಇವತ್ತೇನು ಇಷ್ಟು ಬೇಗ ಬಂದು ಬಿಟ್ಟಿದಿಯ??"

ಸ್ವಾತಿ : "ಸುಮ್ನೆ ಆಂಟಿ ಯಾಕೆ ಬರಬಾರದ?" ,
ಕಮಲ ( ಜೆಕೆ ದೊಡ್ಡಮ್ಮ): "ಹೇ.. ನಿಂಗೆ ಈ ಮನೆ ಯಾವಾಗ್ಲೂ ತಗದೆ ಇರುತ್ತೆ ಕಂದಾ"

ಸ್ವಾತಿ : "ನಂಗೊತ್ತು ನೀವೆಲ್ಲ ಬರಬೇಡ ಅಂದ್ರು ನಾ ಬರೋದು ನಿಲ್ಸೊಲ್ಲ"😁 

ಯಶೋಧ :" ಸರಿ ಪುಟ್ಟ ನಿಂಗೆ ಟೀ ಮಾಡಿಕೊಂಡು ಬರತಿನಿ " ಸ್ವಾತಿ : ಓಕೆ ಆಂಟಿ  ಅಷ್ಟರಲ್ಲಿ ಲಕ್ಕಿ ಅಜ್ಜಿ ಬರುತ್ತಾಳೆ 

ಸ್ವಾತಿ : "Hi ..ಅಜ್ಜಿಗುಡ್ ಮಾರ್ನಿಂಗ್ 😊 ಹಾಗೆ ಮನೆಯಲ್ಲಿರುವರನ್ನೆಲ್ಲ ಮಾತನಾಡಿಸಿ ಯಶೋಧ ಹತ್ರ ಬರುತ್ತಾಳೆ"   

ಯಶೋಧ : "ಸ್ವಾತಿ ತಗೋ ಟೀ ಕುಡಿ " 
ಸ್ವಾತಿ :  "ಥ್ಯಾಂಕ್ ಯು ಆಂಟಿ ನಿಮ್ಮ ಕೈಲಿ ಟೀ ಕುಡಿಯೋಕೆ ಪುಣ್ಯ ಮಾಡಿರ್ಬೇಕು ಅಷ್ಟು ಸಖತ್ಆಗಿ ಟೀ ಮಾಡ್ತೀರ್ ನೀವು ಲವ್ ಯು ❤️ ಆಂಟಿ ಈ ಕೈಯಲ್ಲಿರೋ ಟೀ ಯಾರಿಗೆ ?"

ಯಶೋಧ : 😊"ಇದಾ ನಿಮ್ಮ ಅಂಕಲ್ ಗೆ.. ಅಂದಹಾಗೆ ನಿನ್ನೆ ಜೆಕೆ ಯಾಕೋ ತುಂಬಾ ಡಲ್ ಆಗಿದ್ದ ಯಾಕೆ ಏನಾದ್ರೂ ಜಗಳ ಅದು ಮಾಡಿಕೊಂಡ್ರ ಅದರಲ್ಲೂ ಜೆಕೆ ಅಂತೂ ಸ್ವಲ್ಪನೂ ನನ್ನ ಮಾತನ್ನೇ ಕೇಳೋಲ್ಲ ಅದೇನ್ ಹುಡುಗಾನೋ ಏನೋ".  

ಸ್ವಾತಿ : "ಹಾಗೇನೂ ಇಲ್ಲ ಆಂಟಿ ನಾನು ಹೋಗಿ ಕೇಳ್ತೀನಿ ಬೀಡಿ ಆಂಟಿ ಈ ಟೀ ನಾ ನಾನೇ ತಗೊಂಡ್ ಹೋಗಿ ಕೊಡಲ ಅಂಕಲ್ ಗೆ"   

ಯಶೋಧ : "ಅದರಲ್ಲಿ ಕೇಳೋದೇನಿದೆ ತಗೊಂಡು ಹೋಗು ಪುಟ್ಟ😊 ಸ್ವಾತಿ ಟೀ ನಾ ತಗೊಂಡು ಸೀದಾ ಜೆಕೆ ರೂಮ್ ಗೆ ಬರ್ತಾಳೆ ಅಲ್ಲಿ ಜೆಕೆ  ರೂಮ್ ಹೊರಗೆ ಬಾಲ್ಕನಿಯಲ್ಲಿ ವರ್ಕೌಟ್ ಮಾಡುತ್ತಿರುತ್ತಾನೆ"

ಸ್ವಾತಿ : "ಅವನ ಗಮನ ತನ್ನ ಕಡೆ ಸೆಳೆಯಲು  ಕೆಮ್ಮುವ ನಾಟಕ ಮಾಡುತ್ತಾಳೆ ಆದರೆ ಜೆಕೆ ತಿರುಗಿಯೂ ನೋಡದೆ ತನ್ನ ಪಾಡಿಗೆ ತಾನು ವರ್ಕೌಟ್ ಮಾಡ್ತೀರ್ತಾನೆ" 

 ಸ್ವಾತಿ : "ಗುಡ್ ಮಾರ್ನಿಂಗ್ 😊 ತಗೋ ಟೀ ನಿನಗೋಸ್ಕರ ಮಾಡ್ಕೊಂಡು ಬಂದಿದೀನಿ". 

ಜೆಕೆ ( ಮೌನದಲ್ಲಿ ): ತನ್ನ ಪಾಡಿಗೆ ತಾನು ವರ್ಕೌಟ್ ಮಾಡುತ್ತಿರುತ್ತಾನೆ 
ಸ್ವಾತಿ : 🙄" ಹಲೋ ನಿಂಗೆ ಹೇಳ್ತಿರೋದು?"   

ಜೆಕೆ : "ನಾನು ಟೀ ಕುಡಿಯಲ್ಲ ಅಂತಾ ಗೊತ್ತು ತಾನೇ ಮತ್ತೆ ಯಾಕ್ ತಂದೆ "😒  

ಸ್ವಾತಿ : 😁 "ಗೊತ್ತು ಆದರೆ ನಿನ್ನ ಮಾತಾಡಿಸೋಕೆ ಒಂದು ನೆಪ ಬೇಕಲ್ವಾ ಜೆಕೆ I am sorry 🙁 ನಿನ್ನೆ ಏನೋ ಗೊತ್ತಿಲ್ದೆ ಅಂದು ಬಿಟ್ಟೆ ಇನ್ಮೇಲೆ ಆ ವಿಷಯದ ಬಗ್ಗೆ ಮಾತೆ ಅದಲ್ಲ ಪ್ಲೀಜ್ ನನ್ನ ಹತ್ರ ಮಾತಾಡು ನೀನು ಎನ್ ಹೇಳಿದ್ರೂ ಅದನ್ನ ಮಾಡ್ತೀನಿ ಅಂತಾ ಜೆಕೆ ನಾ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ".             

( ಜೆಕೆ ಒಳಗೊಳಗೇ ಕುಷಿ ಪಡುತ್ತಿದ್ರು ಹೊರಗೆ ಗಂಭೀರ ವಾಗಿ ಇರೋತರ ) " ಓ.. ನಾನ್ ಏನ್ ಹೇಳಿದ್ರು ಮಾಡ್ತೀಯಾ??"   
ಸ್ವಾತಿ : "offcouse" 😃 
ಜೆಕೆ : "ಹಾಗಾದ್ರೆ ಆ ಡಂಬಲ್ಸ್ ನ ಎತ್ತಿ ಕೊಡು"

ಸ್ವಾತಿ : "ಅಷ್ಟೆ ನಾ ಸರಿ ಅಂತಾ ಅವುಗಳನ್ನು ಎತ್ತಲು ಹೋಗುತ್ತಾಳೆ ಆದರೆ ಅವುಗಳು ತುಂಬಾ ವೇಟ್ ಇರೋದ್ರಿಂದ ಸ್ವಾತಿ ಎತ್ತಲು ಹರಸಾಹಸ ಪಡುತ್ತಿರುವುದನ್ನು ನೋಡಿ ಕಿರುನಗೆ ಬೀರುತ್ತಾ
ನಗೋದಿಕ್ಕೆ ಸ್ಟಾರ್ಟ್ ಮಾಡ್ತಾನೆ" 😂  

ಸ್ವಾತಿ : "ಅದು.. 😁 ಸ್ವಲ್ಪ ಭಾರ ಇದಾವೆ ಸದ್ಯ ನಮ್ಮ ಜೆಕೆ ಸ್ಮೈಲ್ ಮಾಡಿದ್ನಲ್ಲ".  

ಜೆಕೆ :😐"ಸ್ಟೈಲ್ ಆ.. ನಾನೆಲ್ಲಿ ಮಾಡಿದೆ?"🫣..  

ಸ್ವಾತಿ : "ಸುಮ್ನೆ ನಾಟಕ ಮಾಡ್ಬೇಡ್ವೋ ನಾನ್ ನೋಡಿದೆ ಸರಿ ಈಗ ಅಲ್ರೆಡಿ ಲೇಟ್ ಆಗಿದೆ ಬೇಗ ರೆಡಿ ಆಗು ಹೋಗುವ".   

ಜೆಕೆ : "ಓಕೆ ಮೇಡಂ ವೇಟ್ ಮಾಡ್ತೀರಿ ಬರ್ತೀನಿ"..
 
ಮುಂದೆ ನಮ್ಮ ಹೀರೋ ಲೈಫ್ ನಲ್ಲಿ ತುಂಬಾ ಬದಲಾವಣೆಗಳು ಬರಲಿದೆ.. ಯಾವ ಎಪಿಸೋಡ್ ಗಳನ್ನು ಸಹ ಮಿಸ್ ಮಾಡ್ಬೇಡಿ😊

          ಮುಂದುವರೆಯುವುದು.....

ಸ್ನೇಹಿತರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನೂ ಹಂಚಿಕೊಳ್ಳಿ ಮತ್ತು ಹೆಚ್ಚು ಅಪ್ಡೇಟ್ಸ್ ಗಳಿಗಾಗಿ ನಮ್ಮನ್ನು ಹಿಂಬಾಲಿಸಿ ಪ್ರೋತ್ಸಾಹಿಸಿ ಧನ್ಯವಾದಗಳು..😊