She came unwillingly... - 5 in Kannada Drama by Kavya Pattar books and stories PDF | ಬಯಸದೆ ಬಂದವಳು... - 5

Featured Books
  • ಬಯಸದೆ ಬಂದವಳು... - 5

    ಸ್ವಾತಿ ಜೆಕೆ ರೂಮಿನಿಂದ ನಿಧಾನವಾಗಿ ಕೆಳಗೆ ಬರುತ್ತಾಳೆ. ಇನ್ನೂ ಬೆಳಗಿನ...

  • ತ್ಯಾಗಮಯಿ.....

    ಒಂದು ಪುಟ್ಟ ಹಳ್ಳಿಯಲ್ಲಿ , ಒಂದು ಪುಟ್ಟ ಗುಡಿಸಲಿನಲ್ಲಿ ದೇವಪ್ಪ ಮತ್ತು...

  • ಬಯಸದೆ ಬಂದವಳು... - 4

    ಇನ್ನೂ ಈ ಕಡೆ ಸ್ವಾತಿ, ತನ್ನ ರೂಮ್ ನಲ್ಲಿ ಬೆಡ್ ಮೇಲೆ ಒಬ್ಬಳೆ ಯೋಚನೆ ...

  • ಬಯಸದೆ ಬಂದವಳು... - 3

    ಅಧ್ಯಾಯ 3 : ಕುಟುಂಬದ ಪರಿಚಯಸೂರ್ಯನ ಮನೆಯಿಂದ ಹೊರಟು ಜೆಕೆ  ತಮ್ಮ ಮನೆಗ...

  • ಬಯಸದೆ ಬಂದವಳು... - 2

    ಈ ಕಡೆ ಕಾಲೇಜಿನಿಂದ ಸೂರ್ಯ ಪ್ರವೀಣ್ ನ ಮನೆಗೆ ಬಿಟ್ಟು ತಾನು ಮನೆ ಕಡೆ ಹ...

Categories
Share

ಬಯಸದೆ ಬಂದವಳು... - 5


ಸ್ವಾತಿ ಜೆಕೆ ರೂಮಿನಿಂದ ನಿಧಾನವಾಗಿ ಕೆಳಗೆ ಬರುತ್ತಾಳೆ. ಇನ್ನೂ ಬೆಳಗಿನ ಜಾಸ್ತಿಯೇ ಇದ್ದರೂ ಮನೆ ತುಂಬಾ ಚಲನೆಯ ಆಲಾಪ. ಕಿಚನ್‌ನಲ್ಲಿ ಚಂದ್ರಿಕಾ, ಕಮಲ, ಯಶೋಧಾ, ಹಾಗೂ ಅವರ ಸೊಸೆಯಂದಿರು ರಮ್ಯಾ, ಸೌಮ್ಯಾ, ವೃಂದಾ—ಎಲ್ಲರೂ ಟಿಫನ್ ಗೆ ರೆಡಿ ಮಾಡ್ತೀರ್ತಾರೆ

 ಚಂದ್ರಿಕಾ ( ಮುಗುಳ್ನಗೆ ಬೀರುತ್ತಾ ): "ಸ್ವಾತಿ ಟಿಫನ್ ಮಾಡು ಬಾ ಕಂದ" ,

ಯಶೋಧ : "ಸ್ವಾತಿ ಜೆಕೆ ಇನ್ನು ಡಲ್ಆಗಿಯೇ ಇದಾನಾ" ?  

ಸ್ವಾತಿ :" ಇಲ್ಲ ಆಂಟಿ ಅವನು ಈಗ ಫರ್ಫೆಕ್ಟ್" 😊 

ಯಶೋಧಾ :" ಸದ್ಯ.. ಈಗಲಾದರೂ ಸರಿ ಹೋದನಲ್ಲ"

ಆಗ  ಕಮಲ : "ಅಲ್ಲ ನಿನ್ನೆ ಯಾಕೆ ಅವನು ಹಾಗೆ ಆಡ್ತಿದ್ದ" 🤔 

ಚಂದ್ರಿಕಾ : "ನಿನ್ನೆ ಪಾಪ ನಮ್ಮ ಜೆಕೆ ಮುಖಾನೇ ನೋಡೋಕೆ ಆಗ್ತಾ ಇದ್ದಿದಿಲ್ಲ"

ಆಗ ಲಕ್ಕಿ ಅಜ್ಜಿ ಮೆಲ್ಲನೆ ಮೆಟ್ಟಿಲುಗಳನ್ನು ಇಳಿಯುತ್ತಾ ಅಡುಗೆ ಮನೆಕಡೆ ಬರುತ್ತಾರೆ

 ಲಕ್ಕಿ :" ಸ್ವಾತಿ ಇದ್ದರೆ ಜೆಕೆ ಸರಿಯಾಗೇ ಇರ್ತಾನೆ ಅಲ್ವಾ ಸ್ವಾತಿ"😜 

ರಮ್ಯಾ( ಮಾಧವ್ ನ ಹೆಂಡತಿ):🙄 "ಅಜ್ಜಿ ಎನ್ ಹೇಳ್ತಾ ಇದ್ದೀರಾ?" ಹಾಗೆ ಎಲ್ಲರೂ ಸ್ವಲ್ಪ ಶಾಕ್ ಆಗ್ತಾರೆ

 ಲಕ್ಕಿ : "ಅಯ್ಯೋ.. ನಾನು ಜೆಕೆ ಫ್ರೆಂಡ್ಸ್ ಹತ್ರಾ ಇದ್ದರೆ ಅವನಿಗೆ ಏನು ಬೇಡ ಇವರೆಲ್ಲರೂ ಇದ್ದರೆ ಸರಿಯಾಗೇ ಇರ್ತಾನೆ ಅಂದೆ"🫣.. 

ಯಶೋಧ : "ಓ.. ಹಾಗ ಸರಿ" 

 ಅಷ್ಟರಲ್ಲಿ ಮೇಲಿಂದ ಪಾದದ ಓಟ ಕೇಳಿಸಿಕೊಂಡಂತೆ, ಜೆಕೆ ನು ರೆಡಿ ಆಗಿ ಕೆಳಗೆ ಬರುತ್ತಾನೆ. ಅವನ ಮುಖದಲ್ಲಿ ನಿನ್ನೆ ಇದ್ದ ಆ ಹೊಳೆಯು ಕಳೆದು ಹೋಗಿದ್ದೆಂದು ಯಾರಿಗೂ ತಿಳಿದಿಲ್ಲ. ಆದ್ರೆ ಇಂದು—ಆ ಹೊಳೆಯ ಶತಗುನ ಹೆಚ್ಚಾಗಿದ್ದಂತಿತ್ತು. ಜ್ಞಾನದ ಮೌನವನ್ನೇ ಮುರಿದು ನಗುವಿನಲಿ ಒಂದಷ್ಟು ಬಣ್ಣ ತುಂಬಿದಂತೆ!

ಅಂಬ್ರುತಾ ಕೂಡ ತನ್ನ ಹೆಜ್ಜೆಗಳನ್ನು ನಿಭಾಯಿಸುತ್ತ ಕೆಳಗೆ ಬರುತ್ತಾಳೆ. ಆಕೆ ನೋಡುತ್ತಲೇ...

 ಅಂಬ್ರುತಾ :" ಹೇ!.. Hi ಸ್ವಾತಿ ಗುಡ್ ಮಾರ್ನಿಂಗ್" 

ಸ್ವಾತಿ : "Hi.. ಅಂಬ್ರುತಾ ಗುಡ್ ಮಾರ್ನಿಂಗ್" 😊 

ಅಂಬ್ರುತಾ( ಛೇಡಿಸುತ್ತಾ ):" ಏನು ಸಾಹೇಬ್ರು ಇವತ್ತು ಫುಲ್ ಎನರ್ಜಿ ಲಿ ಇದೀರಾ ನಿನ್ನೆ ನೋಡಿದ್ರೆ ಆಕಾಶನೆ ತಲೆ ಮೇಲೆ ಬಿದ್ದೊರ ಹಾಗೆ ಇದ್ರಿ" 😅 

ಜೆಕೆ : "ಸುಮ್ನೆ ಕಾಲೇಜ್ ಗೆ ಹೋಗು ನಂಗೆ ಕೋಪ ಬಂದ್ರೆ ಸರಿ ಇರೋಲ್ಲ ಹೇಳ್ತಿನಿ ಮೊದಲು backlock ಸಬ್ಜೆಕ್ಟ್ ಹೇಗೆ ಕ್ಲಿಯರ್ ಮಾಡಬೇಕು ಅಂತಾ ಯೋಚನೆ ಮಾಡು ಹೋಗು" 😄 

ಅಂಬ್ರುತಾ ( ಕೋಪದಲ್ಲಿ): "ಅಜ್ಜಿ.. ಹೇಳಿ ಇವನಿಗೆ ಸ್ವಲ್ಪ ಇಲ್ಲ ಇವತ್ತು ಇವನ ಉಳಿಸೋದೆ ಇಲ್ಲ " 

ಜೆಕೆ : "ಹೊಗೇ.. ಬಂದ್ಬಿಟ್ಲು ದೊಡ್ಡದಾಗಿ"  

ಲಕ್ಕಿ : "ಅಯ್ಯೋ ನಿಮ್ಮ ಇಬ್ಬರದೂ ಯಾವಾಗ್ಲು ಇದೆ ಗೋಳು"

 ಅಂಬ್ರುತಾ ( ಕೈಲಿ ಹಾಕಿರುವ ವಾಚ್ ನೋಡ್ತಾ) : "ಅಯ್ಯೋ ನನ್ ಕಾಲೇಜ್ ಗೆ ಟೈಮ್ ಆಯ್ತು ಎಲ್ಲರಿಗೂ bye"... 

ಯಶೋಧ : "ಟಿಫನ್ ಮಾಡ್ಬಿಟ್ಟು ಹೋಗೆ" 

ಅಂಬ್ರುತಾ : "ಅಲ್ಲೇ ಕ್ಯಾಂಟೀನ್ ಅಲ್ಲಿ ಮಾಡಕೋತೀನಿ bye... ಅಂತ ಅಲ್ಲಿಂದ ಹೊರಡ್ತಾಳೆ". 

ಲಕ್ಕಿ :" ಈ ಹುಡಗಿ ಯಾವಾಗ್ಲೂ ಹಿಂಗೇನೆ ಅರ್ಜೆಂಟ್ ನಲ್ಲೆ ಇರತಾಳೆ"

 ಅಷ್ಟರಲ್ಲಿ ಸೂರಜ್ ( ಮಾಧವ್ ನ ಮಗ, ಈಗ ಇನ್ನು ಫಸ್ಟ್ ಸ್ಟ್ಯಾಂಡರ್ಡ್ ಸ್ಕೂಲ್ ಗೆ ಹೋಗುತ್ತಿರುತ್ತಾನೆ ) ಪುಟ್ಟ ಪುಟ್ಟ ಹೆಜ್ಜೆಗಳಿಂದ ಓಡಿ ಬಂದು " ಚಿಕ್ಕಪ್ಪ.. ಚಿಕ್ಕಪ್ಪ.. ನನಿಗೆ ಇವತ್ತು ಸ್ಕೂಲ್ ಗೆ ಹೋಗೋಕೆ ಇಷ್ಟ ಇಲ್ಲ ನನ್ನು ನಿನ್ನ ಜೊತೆ ಕರಕೊಂಡು ಹೋಗು "

ಜೆಕೆ ( ಮುಗುಳ್ನಗೆ ಬೀರುತ್ತಾ): "ಯಾಕೋ ಮರಿ ಏನಾಯ್ತು ಯಾಕೆ ಇವತ್ತು ನಿಂಗೆ ಸ್ಕೂಲ್ ಗೆ ಹೋಗೋಕೆ ಇಷ್ಟ ಇಲ್ಲ" ?

 ರಮ್ಯಾ : "ಹೇ.. ಯಾಕೋ ಸ್ಕೂಲ್ ಗೆ ಹೋಗೋಕೆ ಬೇಡ ಅಂತೀದಿಯ ಸುಮ್ನೆ ನಾಟಕ ಮಾಡಬೇಡ ಸಿದ ಟಿಫನ್ ಮಾಡಿ ಹೊರಡಿ ಸ್ಕೂಲ್ ಬಸ್ ಬರೋ ಟೈಮ್ ಆಯ್ತು"

 ಅಷ್ಟರಲ್ಲಿ ಪ್ರಿಯಾಂಕಾ ( ಸೂರಜ್ ನ ತಂಗಿ LKG ಓದುತ್ತಿರುತ್ತಾಳೆ) ಚಿಕ್ಕಪ್ಪ...ಅಂತಾ ಬಂದು ತಬ್ಬಿಕೊಳ್ಳುತ್ತಾಳೇ ಆಗ  ಜೆಕೆ ಅವಳನ್ನು ಎತ್ತಿಕೊಳ್ಳುತ್ತಾನೆ ಚಿಕ್ಕು.. ನಂಗೆ ಸೂರಜ್ ಯಾಕೆ ಸ್ಕೂಲ್ ಗೆ ಹೋಗೋಕೆ ಬೇಡ ಅಂತಿದಾನೆ ಗೊತ್ತು😀

 ಜೆಕೆ : "ಹೌದಾ ಚಿನ್ನಿ ಯಾಕೆ" ?🤔

 ಪ್ರಿಯಾಂಕಾ : ಅದು.. ಅದು..😁 

ಸೂರಜ್( ಕೋಪದಲ್ಲಿ): "ಸುಮ್ನೆ ಇರೆ ಇಲ್ಲ ಅಂದ್ರೇ ಚೆನ್ನಾಗಿರೋಲ್ಲ" 😬

 ಆಗ ಸ್ವಾತಿ ಕೂಡ ಯಾಕೋ ಸೂರಜ್ ತಂಗಿಗೆ ಹಾಗೆ ಹೇಳ್ತೀಯ 

ಜೆಕೆ : "ನಿನ್ ಹೇಳು ಮಗಳೆ ", 

ಪ್ರಿಯಾಂಕ :" ಅಣ್ಣ ನಿನ್ನೆ ಅಮ್ಮ ಹೋಮ್ ವರ್ಕ್ ಮಾಡು ಅಂದ್ರೆ ಮಾಡಿಲ್ಲ ಅದಿಕ್ಕೆ ಹೋಗೋಲ್ಲ ಅಂತಿದ್ದಾನೆ" 😂 

 ಅಲ್ಲಿರುವ ಎಲ್ಲರಿಗೂ ನಗೆ ಆದರೆ ಪಾಪ ಸೂರಜ್ ಆ ಹುಡುಗನ ಕಷ್ಟ ಅವನಿಗಷ್ಟೇ ಗೊತ್ತು

ರಮ್ಯಾ( ಜೋರಾದ ದ್ವನಿಯಲ್ಲಿ) :" ಏನೋ ಸೂರಜ್ ಅದಿಕ್ಕೆ ಚಿಕ್ಕಪ್ಪನ ಹತ್ರ ಪುಸಿ ಹೊಡೀತೀದಿಯ" 🤨 

ಸ್ವಾತಿ : "ನೋಡು ಪುಟ್ಟ ನೀನು ಈಗ ಸ್ಕೂಲ್ ಗೆ ಹೋಗು ಪನಿಶ್ಮೆಂಟ್ ಕೊಟ್ರೆ ಕೊಡ್ತಾರೆ ಆದರೆ ಇವತ್ತು ಸಾಯಂಕಾಲ ಬಂದ್ ಮೇಲೆ ಹೊರಗಡೆ ಹೋಗೋಣ ok" 😊

ಸೂರಜ್ :" ಆಂಟಿ ನಾನ್ ಹೋಗಲ್ಲ ಅಂತ ಅಳೋದಿಕ್ಕೆ ಸ್ಟಾರ್ಟ್ ಮಾಡ್ತಾನೆ" 😭 

ಜೆಕೆ : "ಸುಮ್ನೆ ಹೋರಡ್ತೀಯ ಇಲ್ಲ ದೊಡ್ಡ ತಾತನ್ನ(  jk ಯ ದೊಡ್ಡಪ್ಪ ಶಶಿಧರ್ )ಕರಿಬೇಕಾ"

 ಸೂರಜ್ : 😧"ದೊಡ್ಡ ತಾತನ ಬೇಡ ಚಿಕ್ಕಪ್ಪ... ಅಂತ ಅಲ್ಲಿಂದ ಓಡಿ ಹೋಗುತ್ತಾನೆ"  

ರಮ್ಯಾ : "ಪ್ರಿಯಾಂಕ ನೀನು ಬಾ ಬೇಗ ರೆಡಿ ಆಗು ಮೊಕ್ಷಿತ್ ,ಶ್ರಾವ್ಯ ( ಮೋಕ್ಷಿತ್ ಭುವನ್  ಮಗ ಹಾಗೆ ಶ್ರಾವ್ಯ ಮಂಜು ಮಗ) ಎಲ್ಲಿದಿರ ಮಕ್ಕಳ ಬೇಗ ರೆಡಿ ಆಗಿ ಬಸ್ ಬರುತ್ತೆ ಅಂತ ಮಕ್ಕಳನ್ನು ಕಳಿಸೋಕೆ ಹೋಗ್ತಾಳೆ" 

ಸ್ವಾತಿ : "ನೀನು ಬೇಗ ಕಾಲೇಜ್ ಗೆ ಬರ್ತೀಯಾ ಇಲ್ಲ ನಿಮ್ಮ ದೊಡ್ಡಪ್ಪನ ಹತ್ತಿರ ಹೇಳಬೇಕ"😜 

ಜೆಕೆ :" ಅಯ್ಯೋ ..ಪ್ಲೀಜ್ ಹೇಳ್ಬೇಡ ಕಣೆ "🫣 

ಲಕ್ಕಿ : "ಪರವಾಗಿಲ್ವೇ ಜೆಕೆ ನ ಸರಿಯಾಗಿ ಹಿಡಿತದಲ್ಲಿ ಇಟಗೊಂಡಿದ್ದಿಯ" 😂    

ಜೆಕೆ : 😲 "ಲಕ್ಕಿ ಎನ್ ಹೇಳ್ತಾ ಇದ್ದೀಯಾ ಸ್ವಲ್ಪ ಗಮನ ಇರಲಿ ಅಂತ ಅಜ್ಜಿಗೆ ಸನ್ನೆ ಮಾಡುತ್ತಾನೆ"  

ಲಕ್ಕಿ :" ಸರಿ.. ಸರಿ.. ಎಷ್ಟು ಹೆದರ್ತಿಯ"🤭

 ಚಂದ್ರಿಕಾ ( ಜೆಕೆಚಿಕ್ಕಮ್ಮ): "ಅಜ್ಜಿ ಎನ್ ಹೇಳ್ತಾ ಇದ್ದೀರಾ ಜೆಕೆ  ಯಾರ್ ಹಿಡಿತದಲ್ಲಿನು ಇರಲ್ಲ ನನ್ ಮಗ ರಾಜ ಗೊತ್ತಾ " 

ಯಶೋಧ ( ಛೇಡಿಸುತ್ತಾ ):  "ರಾಜನಿಗೆ ನಾಳೆ ಮದುವೆ ಆದಮೇಲೆ ಗೊತ್ತಾಗುತ್ತೆ ಆಗ ರಾಣಿ ಮಾತು ಕೇಳ್ದೆ ಬೇರೆ ದಾರಿನೇ ಇರಲ್ಲ" 😅

ಕಮಲ (ಜೆಕೆ ದೊಡ್ಡಮ್ಮ) :" ಕರೆಕ್ಟ್ ಆಗಿ ಹೇಳಿದ್ರಿ ಆದರೂ ನಮ್ಮ ಜೆಕೆ ನಾ ಮದುವೆ ಅಗೋ ಹುಡುಗಿ ಪುಣ್ಯ ಮಾಡಿರಬೇಕು ಇಂತಾ ಹುಡುಗ ನ್ನ ಪಡಿಯೋಕೆ" 

ಸ್ವಾತಿ : "ಅದು ನಿಜ ಬಿಡಿ"...  ಆಗ ಜೆಕೆ ನಾಚಿಕೆಯಿಂದ ಅವನ ಮುಖವೆಲ್ಲ ರಂಗೇರಿ ತಲೆ ತಗ್ಗಿಸುತ್ತಾನೆ  

 ಲಕ್ಕಿ : "ಅರೆರೆ.. ನಮ್ಮ ಜೆಕೆ ನಾಚಿಕೆ ನೋಡ್ರಿ ಹೆಂಡ್ತಿ ಇಲ್ಲೇ ಇದ್ದವರ ತರ ನಾಚಿಕೊಳ್ತಿದ್ದಾನೆ"😉

 ಜೆಕೆ : "ಅಜ್ಜಿ ... ನನ್ ಮಾನ ಮರ್ಯಾದೆ ಎಲ್ಲಾ ಕಳಿತಿಯ ನೀನು 😐 ಅಮ್ಮ ತುಂಬಾ ಲೇಟ್ ಆಯ್ತು ನಾವು ಕಾಲೇಜ್ ಗೆ ಹೋರಡ್ತೀವಿ" . 

ಚಂದ್ರಿಕಾ : "ಅಯ್ಯೋ.. ಸ್ವಲ್ಪ ತಿಂದು ಹೋಗಿ"

 ಜೆಕೆ : "ಇಲ್ಲ ಚಿಕ್ಕಿ ಈಗಾಗಲೇ ತುಂಬಾ ಲೇಟ್ ಆಯ್ತು ಸ್ವಾತಿ ಬಾ.. ಹೋಗೋಣ" 

ಸ್ವಾತಿ : "ಅದು ಅಷ್ಟು ಹೇಳ್ತಿದಾರಲ್ಲ ಬೇಗ ತಿಂದು ಹೋಗೋಣ ಕಣೋ ಪ್ಲೀಜ್" .... 

ಯಶೋಧ : "ಹೌದು ಕಣೋ ಬೇಗ ತಿಂದು ಹೋಗುವರಂತೆ ಆಗ ಲಕ್ಕಿ ಬಾರೋ ಒಂದು 10 ನಿಮಿಷ ಲೇಟ್ ಆದರೆ ಏನು ಆಗಲ್ಲ " 

ಸ್ವಾತಿ : "ಅಜ್ಜಿ ನಡೀರಿ ನಾನಂತು ತಿಂದೆ ಹೋಗೋದು"

 ಜೆಕೆ : "ಸರಿ ನಡೀರಿ ಆಗ ಜೆಕೆ ಸ್ವಾತಿ ಇಬ್ಬರೂ ಬೇಗ ಟಿಫನ್ ಮಾಡಿ ಕಾಲೇಜ್ ಕಡೆ ಹೊಡರ್ತಾರೆ....

-----

5 ಜನ ಕಾಲೇಜ್ ಮುಗಿಸಿಕೊಂಡು ಹೊರಗೆ ಬರ್ತಾರೆ ಹಾಗೆ ಒಬ್ಬರಿಗೊಬ್ಬರು ಮಾತನಾಡುತ್ತಾ  

ಪ್ರವೀಣ್ :" ಇವತ್ತು ಪೂರ್ವಿ ಬಂದೆ ಇಲ್ವಲ್ಲ ಕಾಲೇಜ್ ಗೆ ಯಾಕಿರಬಹುದು?"🤔.. 

ಸೂರ್ಯ : "ಸರ್ ಅವಳ ವಿಷಯ ಈಗ ಬೇಕಾ".. 

ಪ್ರವೀಣ್ : "ಹಾಗಲ್ಲ ಕಣೋ ಅದು...ಆಗ ಸ್ವಾತಿ ಮನಸ್ಸಿನಲ್ಲಿ ನಿನ್ನೆ ಅವಳಿಂದ ದೊಡ್ಡ ಡ್ರಾಮಾನೆ ನಡೀತು ಜೆಕೆ ಮತ್ತೆ ಕೋಪ ಮಾಡಿಕೊಳ್ಳೋ ಬದಲು ಟಾಪಿಕ್ ಚೇಂಜ್ ಮಾಡ್ತೀನಿ 

 ಸ್ವಾತಿ : "ಇವತ್ತು ನಾವೆಲ್ಲರೂ ಶಾಪಿಂಗ್ ಗೆ ಹೋಗೋಣ ನಾಡಿದ್ದು ಆನ್ಯುಯಲ್ ಡೇ ಗೆ ಹೊಸ ಬಟ್ಟೆ ತಗೊಳೋಕೆ ಏನಂತೀರಾ ? "

ಜೆಕೆ : "ಈ ಹೂಡಗಿರಗೆ ಎಷ್ಟು ಬಟ್ಟೆ ಇದ್ರು ಸಾಲೋದಿಲ್ಲ ನೋಡಿ" 🤦

ಪ್ರವೀಣ್ : "ಹೌದು ಮುಂದೆ ಸ್ವಾತಿ ನಾ ಮಾದುವೆಯಾಗೋವನ್ನ ಕತೆ ಗೋವಿಂದ ಅಲ್ವೇನೋ ಸೂರ್ಯ ಮತ್ತೆ ಕಾರ್ತಿಕ್"😉

ಜೆಕೆ :" ಅದು ಮಾತ್ರ ನಿಜ" 😅 

ಸ್ವಾತಿ : "ಯಾಕ್ರೋ... ನನ್ನ ಕಾಡಿಸದೆ ನಿಮ್ಗೆಲ್ಲಾ ನಿದ್ದೆ ಬರೋದಿಲ್ವ ಪ್ರವೀಣ್ ಇರೋ ನಿಂಗೆ ಮಾಡ್ತೀನಿ ಅಂತ ಅವನ.ಕಡೆ ಹೋಗಿ ಹೊಡೆಯೋಕೆ ಕೈ ಎತ್ತುತ್ತಿದ್ದಂತೆ ಪ್ರವೀಣ್ ಹಿಂದೆ ಸರಿದು sorry ಕನಮ್ಮ ಇನ್ನೊಮ್ಮೆ ಮಾತಾಡೋದಿಲ್ಲ 

ಸೂರ್ಯ : "ಸರಿ ಬನ್ನಿ ಹೊರಡೋಣ ಟೈಮ್ ಆಗುತ್ತೆ"

ಕಾರ್ತಿಕ್ : "ನೀವೆಲ್ಲರೂ ಹೋಗಿ ಬನ್ನಿ ನಾನು ರೂಮ್ ಗೆ ಹೋರಡ್ತೀನಿ ನಂಗೆ ಸ್ವಲ್ಪ ಕೆಲಸ ಇದೆ" ( ಕಾರ್ತಿಕ್ ಒಂದು ಬಾಡಿಗೆ ರೂಮ್ ನಲ್ಲಿ ಇರ್ತಾನೆ ). ಸೂರ್ಯ :" ಅಂತದೇನೋ ಕೆಲಸ ನಿಂಗೆ ನಮ್ಗೆ ಗೊತ್ತಿರದೆ ಇರೋದು ಸುಮ್ನೆ ಬಾ"... 

ಸ್ವಾತಿ : "ಶಾಪಿಂಗ್ ಮಾಡಿ ಆಮೇಲೆ ನಿನ್ ಕೆಲಸ ಮಾಡ್ಕೋಳುವಂತೆ ಬಾರೋ"

 ಕಾರ್ತಿಕ್ :" ಬೇಡ ನನ್ಗೆ ಆಲ್ರೆಡಿ ತುಂಬಾ ಬಟ್ಟೆಗಳು ಇದಾವೆ ಅದರಲ್ಲೇ ಯಾವುದಾದ್ರೂ ಹಾಕೊಂಡು ಬರ್ತೀನಿ"

 ಜೆಕೆ ( ಕೋಪದಲ್ಲಿ ): "ಕಾರ್ತಿಕ್ ಬೈಕ್ ಸ್ಟಾರ್ಟ್ ಮಾಡು"

 ಕಾರ್ತಿಕ್ : "ಬೇಡ ಕಣೋ"..

 ಜೆಕೆ : "ಹೇಳಿದೆನಲ್ಲ ಸ್ಟಾರ್ಟ್ ಮಾಡು ಅಂತ ಸ್ವಲ್ಪ ಕೋಪದಲ್ಲಿ ಹೇಳ್ತಾನೆ "

ಸೂರ್ಯ : "ಯಾಕೋ ಅಷ್ಟಕೆಲ್ಲ ಕೋಪ ಮಾಡಕೋತಿಯ"

 ಜೆಕೆ : "ಲೋ... ನಾವೆಲ್ಲ ಅವನ್ ಪಾಲಿಗೆ ಸತ್ತೂಗಿದೆವೇನೋ "

ಸ್ವಾತಿ :" ಹೇ.. ಯಾಕೋ ಹಾಗೆಲ್ಲ ಮಾತಾಡ್ತೀದಿಯ" 

ಜೆಕೆ : "ಮತ್ತೇನು ಸಾಹೇಬ್ರು ತುಂಬಾ ದೊಡ್ಡವರ ಆಗಿ ಬಿಟ್ರು ಅದಿಕ್ಕೆ ದುಡ್ಡಿನ ಬಗ್ಗೆ ತುಂಬಾ ಯೋಚನೆ ಮಾಡ್ತಿದಾರೆ"🤨 

ಸೂರ್ಯ : "ಹೌದೆನೋ ಕಾರ್ತಿಕ್? "

ಕಾರ್ತಿಕ್ :" ಹಾಗಲ್ವೋ ಎಷ್ಟು ದಿನ ಅಂತ ನಿಮ್ಗೆ ತೊಂದ್ರೆ ಕೊಡಬೇಕು ನಾನೇನಾದರೂ ಪಾರ್ಟ್ ಟೈಮ್ ಜಾಬ್  ಮಾಡ್ತಿನಿ ಅಂದ್ರೆ ಅದಕ್ಕೂ ಬಿಡೋಲ್ಲ ನೀವು ಮತ್ತೆ ನಾನ್ ಏನ್ ಮಾಡ್ಲಿ ನಂಗೆ ತುಂಬಾ ಮುಜುಗರ ಅನ್ನಿಸುತ್ತೊ ಅದಿಕ್ಕೆ ಹಾಗೆ ಹೇಳಿದೆ"

 ಸ್ವಾತಿ : "ಓ.. ಓ.. ಯಾವಗಪ್ಪ ನೀನು ಇಷ್ಟು ದೊಡ್ಡವನು ಆದೆ" 

ಪ್ರವೀಣ್ : "ಅಷ್ಟೆ ಬಿಡ್ರೋ ಅವನು ಯಾವತ್ತೂ ನಮ್ಮನ್ನ ಫ್ರೆಂಡ್ಸ್ ಅಂತಾ ಅನ್ಕೊಂಡೆ ಇಲ್ಲ ನಾವೇ ಅವನನ್ನ ಪ್ರಾಣ ಸ್ನೇಹಿತ ಅನ್ನೋದು "

ಕಾರ್ತಿಕ್ : "ಹೇ.. ಹಾಗೆಲ್ಲ ಏನು ಇಲ್ಲ ಕಣ್ರೋ" 

ಜೆಕೆ : "ಹಾಗಿದ್ರೆ ಬಾ ಮತ್ತೆ ಇನ್ನೊಂದಸಲ ನೀನೇನಾದ್ರು ದೊಡ್ಡವರ ತರ ಬಿಹೇವ್ ಮಾಡಿದ್ರೆ ಚೆನ್ನಾಗಿರೋಲ್ಲ ನೋಡು"

ಕಾರ್ತಿಕ್ : "ನಿಜಕ್ಕೂ ನಿಮ್ಮಂತ ಫ್ರೆಂಡ್ಸ್ ನಾ ಪಡಿಯೋಕೆ ನಾನು ಪುಣ್ಯ ಮಾಡಿದೀನಿ ಕಣ್ರೋ 🥺 ಯಾಕ್ರೋ ಈ ಅನಾಥನ ಮೇಲೆ ಇಸ್ಟೊಂದು ಪ್ರೀತಿ ನಿಮ್ಗೆ"

 ಜೆಕೆ : "ಇನ್ನೊಂದು ಸಲ ಅನಾಥ ಗಿನಾಥಾ ಅಂದ್ರೇ ಸರಿ ಇರೋಲ್ಲ ನೋಡು  ಈ ಜೀವ ಇರೋವರ್ಗು ನಿನ್ನ ಯಾವತ್ತೂ ಬಿಟ್ಟು ಹೋಗಲ್ಲ ನಾವು ಕಾರ್ತಿಕ್ ಅಳುತ್ತಾ ಎಲ್ಲರನ್ನೂ ತಬ್ಬಿಕೊಳ್ತಾನೆ "

ಪ್ರವೀಣ್ : "ಈ emotional scenes (ಸೀನ್)ಎಲ್ಲಾ ನಮ್ಗೆ set ಆಗಲ್ಲ ಕಣ್ರೋ" 

ಸ್ವಾತಿ : "ನಿಂಗೆ ಯಾವ scene ಕೂಡ ಸೆಟ್ ಆಗಲ್ಲ ಬಿಡೋ.. ಆಗ ಎಲ್ಲರೂ ನಗುತ್ತಾ ಆ ಕ್ಷಣದ ಭಾರವನ್ನು ಹಗುರಗೊಳಿಸುತ್ತಾರೆ

--------- 

ಎಲ್ಲರೂ ಶಾಪಿಂಗ್ ಮುಗಿಸಿ ಹೊರಗೆ ಬರ್ತಾರೆ,

ಸ್ವಾತಿ ( ಖುಷಿಯಿಂದ): "ಎಲ್ಲರ ಬಟ್ಟೆನು ಸೂಪರ್ ಅಲ್ವೆನ್ರೋ".. ಎಲ್ಲರೂ ಹೌದು ಅಂತಾ ಕತ್ತನ್ನಅಲ್ಲಾಡಿಸುತ್ತಾರೆ 

ಸ್ವಾತಿ: "ಯಾಕೆ ಎಲ್ಲರ ಮುಖ ಒಳ್ಳೆ ಹರಳೆಣ್ಣೆ ಕುಡಿದಿರೋ ಹಾಗಿದೆ"

 ಪ್ರವೀಣ್ : "ಅಮ್ಮ ತಾಯಿ ಎಸ್ಟೊತ್ತೆ ಶಾಪಿಂಗ್ ಮಾಡ್ತೀಯಾ ನಮ್ದೆಲ್ಲ 1 hour ಅಲ್ಲಿ ಮುಗೀತು ಆದರೆ ನೀನು ಯಪ್ಪಾ ದೇವರೇ"....

 ಸ್ವಾತಿ : 😒" ಹುಡುಗೀರ ಶಾಪಿಂಗ್ ಅಂದ್ರೆ ಹಾಗೆ ಅದಿಕ್ಕೇನ್ ಇವಾಗ"

 ಕಾರ್ತಿಕ್ : "ಅದು ಯಾಕೆ ಯಾವಾಗ್ಲು ಮಾಡ್ರನ್ ಡ್ರೆಸ್ ತಗೋತಿಯ ಲಕ್ಷಣವಾಗಿ ಸೀರೆ, ಚೂಡಿದಾರ್ ತಗೋಬೇಕಲ್ವ"  

ಸ್ವಾತಿ : "ನಂಗೆ ಮಾಡ್ರನ್ ಡ್ರೆಸ್ ಅಂದ್ರೆ ಇಷ್ಟ ಅದಿಕ್ಕೆ ನಾನು ಮಾಡ್ರನ್ ಡ್ರೆಸ್ ತಗೋತೀನಿ"😃

 ಪ್ರವೀಣ್ : "ಆದರೆ ಜೆಕೆ ಗೆ ಇಷ್ಟ ಇಲ್ವಲ್ಲ "

ಸ್ವಾತಿ : "ಅದು ನನಗೂ ಗೊತ್ತು ಆದರೆ ಡ್ರೆಸ್ ನಾ ನಾನ್ ಹಾಕೊಳ್ಳೋದು ಅಲ್ವಾ ನಿಂಗೆ ಏನಾದ್ರೂ ಪ್ರಾಬ್ಲಮ್  ಆ.. ಜೆಕೆ"  

ಜೆಕೆ : "ಇಲ್ಲಾ ನನಗೇನು ಪ್ರಾಬ್ಲಮ್  ಇಲ್ಲಾ ಬಟ್ ಯಾವಾಗ್ಲು ಹುಡಗುರ ಗೆ  ಹುಡಗಿರು ಟ್ರೆಡಿಷನಲ್ ಡ್ರೆಸ್  ಅಲ್ಲಿ ನೋಡೋಕೆ ಇಷ್ಟ ಪಡ್ತಾರೆ ಯಾಕೆ ಹೇಳು ? ಸ್ವಾತಿ : ಯಾಕೆ ? 

ಜೆಕೆ : "ಯಾಕಂದ್ರೆ ಅದು ನಮ್ಮ ಸಂಸ್ಕೃತಿ ಹೆಣ್ಮಕ್ಕಳು ಏನೇ.ಹಾಕಿದ್ರು ಅದು ಚಂದಾನೆ , ಆದರೆ ಯಾವಾಗ ಅವರು ಸೀರೆ ಉಟ್ಟುಕೊಂಡು ಕೈ ತುಂಬಾ ಬಳೆಗಳು, ಹಣೆ ಮೇಲೆ ಬಿಂದಿ.... ಅಬ್ಬಾ !! ಅದನ್ನು ವರ್ಣಿಸೋಕೆ ಪದಗಳೇ ಸಾಲೊಲ್ಲ ಅವರನ್ನ ನೋಡ್ತಾ ಇದ್ರೆ ಅದೇನೋ ಗೊತ್ತಿಲ್ಲ ಹುಡುಗರಿಗೆ ಅವರ ಮೇಲೆ ಇರೋ ಗೌರವ ಇನ್ನೂ ಜಾಸ್ತಿ ಆಗುತ್ತೆ "😊 

ಸೂರ್ಯ : "ನಿಜ ಹೇಳಿದೆ ಕಣೋ" 

ಸ್ವಾತಿ : "ಓಕೆ  ಪಾ ನೀವುಗಳು ಹೇಳಿದ್ದೆ ಕರೆಕ್ಟ್ ಆದರೆ ನನಗೆ ಹೀಗೆ ಇಷ್ಟ ಸರಿ ಬನ್ನಿ ಈಗ ಮನೆಗೆ ಹೊರಡೋಣ ಅಂತ ಎಲ್ಲರೂ ಹೊರಡ್ತಾರೆ"...

----------

ಎಲ್ಲರೂ ಮನೆಗೆ ಹೋದನಂತರ ಸ್ವಲ್ಪ ಸಮಯ ಆದಮೇಲೆ ಸೂರ್ಯ ಜೆಕೆ ಮನೆಗೆ ಬರ್ತಾನೆ ಒಳಗೆ ಬರ್ತಿದ್ದಂಗೆ ಅರೆ.. ಇದೇನು ಮನೇಲಿ ಯಾರು ಕಾಣಸ್ತಿಲ್ವಲ್ಲ  ಅತ್ತೆ.. ಲಕ್ಕಿ ಅಂತ ಕರಿತಾನೆ ಎಲ್ಲರೂ ಏಲ್ಲಿಗೇ ಹೋದ್ರು ಅಷ್ಟರಲ್ಲಿ ಭುವನ್ ( ಶಶಿಧರ್ ನ ಮಗ ) : ಹೇ..ಸೂರ್ಯ ಬಾರೋ ಒಳಗೆ 

ಸೂರ್ಯ : "ಭಾವಾ ಮನೇಲಿ ಯಾರು ಕಾಣಸ್ತಾನೆ ಇಲ್ವಲ್ಲ ಎಲ್ಲರೂ ಎಲ್ಲಿ ಹೋಗಿದ್ದಾರೆ" ? 

ಭುವನ್ : "ಅಪ್ಪ , ಚಿಕ್ಕಪ್ಪಂದ್ರು ಏನೋ ಕೆಲಸ ಅಂತಾ ಆಚೆ ಹೋಗಿದ್ದಾರೆ ಇನ್ನು ಅಮ್ಮ, ಚಿಕ್ಕಮಂದ್ರು ,ಅಜ್ಜಿ ಮಕ್ಕಳು ಎಲ್ಲರೂ ಆಚೆ ಸುತ್ತಾಡೋಕೆ ಹೋಗಿದ್ದಾರೆ "

ಆಗ ಮಾಧವ್  ಸಹ ಬರ್ತಾನೆ ಹೇ.. ಸೂರ್ಯ😊ಸೂರ್ಯ :" Hi ಭಾವಾ ಏನು ಮನೇಲಿ ಯಾರು ಇಲ್ಲ ಅಂತ ಫುಲ್ ಆರಾಮಾಗಿ ಇರೋಗಾಗಿದೆ" 😁 

ಮಾಧವ್ : "ಆರಾಮ ತುಂಬಾ peace ಆಗಿ ಇದೀವಿ ಸ್ವಲ್ಪ ಹೊತ್ತು ಅಲ್ವೇನೋ ಭುವಿ".. 

ಭುವನ್ : "ಹೌದು ಕಣೋ" 😄 

ಸೂರ್ಯ : "ಹೌದಾ ಸರಿ ನಮ್ಮ ಅಕ್ಕಂದಿರು ಬರಲಿ ಇದೆ ನಿಮ್ಗೆ😅 ಅವಾಗ "

ಭುವನ್ : "ಹೇ.. ಯಾಕೋ ನಾವು ಕುಷಿಯಾರಿಗೋದು ಇಷ್ಟ ಇಲ್ವೇನೋ ನಿನಗೆ"

 ಹೀಗೆ ಸ್ವಲ್ಪ ಹೊತ್ತು ಚೇಡಸ್ಟಾ ,ಮಾತಾಡ್ತಾ ಇರ್ತಾರೆ 

ಸೂರ್ಯ : "ಭಾವ ಮನೇಲಿ ನೀವು ಇಬ್ಬರೇ ಇರೋದಾ"? 

ಮಾಧವ್ : "ಇಲ್ಲ ಇನ್ನೂ ಒಬ್ಬರು  ಇದ್ದಾರೆ" 

ಸೂರ್ಯ (ಉತ್ಸಾಹದಿಂದ) : "ಯಾರದು ?"😀 

ಮಾಧವ್ : "ಜೆಕೆ"

ಸೂರ್ಯ : "ಜೆಕೆ ನಾ..ಅಂತಾ ಮನಸಲ್ಲಿ ನಾನು ಅಮ್ಮು ನಾ ನೋಡೋಕೆ ಬಂದೆ ಆದ್ರೆ ಅವಳಿಗೆ ಸ್ವಲ್ಪನೂ ನನ್ ಮೇಲೆ ಲವ್ ಅನ್ನೋದೇ ಇಲ್ಲ ಅಷ್ಟು ಸಲ ಕಾಲ್ ಮಾಡಿದ್ರೂ ರೆಸಿವ್ ಮಾಡಿ ನಾನು ಹೊರಗಡೆ ಹೋಗಿದಿನಿ ಅಂತ ಹೇಳೋ sensce ಇಲ್ಲ ಅವಳಿಗೆ "😕 

ಭುವನ್ : "ಹೇ ಸೂರ್ಯ ಏನಾಯ್ತೋ".. 

ಸೂರ್ಯ: ಮನಸಲ್ಲಿ ಇರೋದನ್ನ ಹೇಳೋಕೆ ಆಗ್ದೆ ಹುಸಿ ನಗೆಯನ್ನು ಬೀರುತ್ತಾ"ಏನಿಲ್ಲ ಭಾವಾ"🙂

ಆಗ ಸರಳಾ ಬರುತ್ತಾಳೆ ( ಸರಳ ಈ ಮನೆಯ ಕೆಲಸದಾಕೆ) ಬುದ್ಧಿ ನಿಮ್ಗೆಲ್ಲಾ ಕಾಫಿ ಬೇಕಾ ಟೀ ಬೇಕಾ ? 

ಭುವನ್ : "ಸರಳಮ್ಮ ನೀನು ಬೇರೆ ಕೆಲಸ ಇದ್ದರೆ ನೋಡಿಕೋ ಇವತ್ತು ನಾನು ಕಾಫಿ ಮಾಡ್ತೀನಿ ನಮ್ಮ  ಸೂರ್ಯ ಮತ್ತೆ ಬ್ರೋಗೆ ಸರಿ ನೀವು ಇಬ್ಬರೂ ಮಾತಾಡ್ತಾ ಇರಿ ನಾನು ಕಾಫೀ ಮಾಡಿಕೊಂಡು ಬರ್ತೀನಿ"

ಸೂರ್ಯ : ಭಾವಾ ನಂಗೆ ಕಾಫಿ ಬೇಡ ನಾನು ಜೆಕೆ ಹತ್ರಾ ಹೋಗ್ತೀನಿ😊 ಅಂತಾ ಜೆಕೆ ರೂಮ್ ಕಡೆ ಹೋಗ್ತಾನೆ 

ಭುವನ್ : "ಸರಿ ಸೂರ್ಯ, ಮಾಧವ್ ನಿಂಗೆ ಬೇಕೇನೋ?"

ಮಾಧವ್ :" yes ಪ್ಲೀಜ್ ನನಗೆ ಸ್ವಲ್ಪ ತಲೆ ನೋವತಾ ಇದೇ ಕಣೋ ಸ್ವಲ್ಪ ಕಾಫೀ ಕುಡದ್ರೆ ಮೈಂಡ್ ಫ್ರೆಶ್ ಅನಿಸುತ್ತೆ" 

ಭುವನ್ : "ಓಕೆ  ಬ್ರೋ ಅಂತ ಕಾಫಿ ಮಾಡೋಕೆ ಹೋಗ್ತಾನೆ ಇನ್ನು ಸೂರ್ಯ ಜೆಕೆ ರೂಮ್ ಗೆ ಬರ್ತಾನೆ ಆದರೆ ಜೆಕೆ ಅಲ್ಲಿ ಇರೋದಿಲ್ಲ , ಜೆಕೆ ರೂಮ್ ನಲ್ಲಿ ಇಲ್ಲ ಅಂದ್ರೇ ಪಕ್ಕಾ ಅವನ  ಅಲ್ಲೇ ಇರ್ತಾನೆ  ಅಂತ ಬಾಲ್ಕಾನಿ ಹತ್ರ ಇರೋ ಇನ್ನೊಂದು ರೂಮ್ ಗೆ ಹೋಗ್ತಾನೆ( ಬಾಲ್ಕನಿ ಹತ್ರ ಒಂದು ಚಿಕ್ಕ  ರೂಮ್ ಇರುತ್ತೆ ಅದು  ಸ್ಟೋರೂಮ್ ಆಗಿರೋದ್ರಿಂದ ಯಾರು ಕೂಡ ಅಲ್ಲಿ ಹೋಗುವುದಿಲ್ಲ ಅದನ್ನು ಜೆಕೆ ಒಂದು ಸುಂದರವಾದ ರೂಮನ್ನಾಗಿ  ಕನ್ವರ್ಟ್ ಮಾಡಿಕೊಂಡಿರ್ತಾನೆ ಈ ವಿಷಯ ಸೂರ್ಯ ನಿಗೆ ಮಾತ್ರ ಗೊತ್ತಿರುತ್ತದೆ )Hi.. ಮಗಾ ಜೆಕೆ ಏನನ್ನೋ ಬರೀತೀರ್ತಾನೆ

ಜೆಕೆ( ಆಶ್ಚರ್ಯದಿಂದ): "ಹೇ!...ಸೂರ್ಯ ಕೂತಗೋ ಬಾರೋ"

ಸೂರ್ಯ : "ಅದು ಬಿಡಪ್ಪ ನೀನು ಎನ್ ಬರೀತಿದ್ದಿಯ ಏನದು ? ಮೆಲ್ಲನೆ ಜೆಕೆ ಹತ್ರ ಹೋಗಿ ಅವನು ಬರಿಯೋದನ್ನ ಕಸಿದುಕೊಂಡು ನೋಡ್ತಾನೆ ಓ... ಲವ್ ಲೆಟರ್ ಇನ್ನೂ ಬರೆದಿಲ್ವೇನೋ ನೀನು?🤦ಹಾಗಾದ್ರೆ ಜೆಕೆ ಯಾರನ್ನೋ "ಪ್ರೀತಿ" ಮಾಡ್ತಿದ್ದಾನೇ ಯಾರಿರಬಹುದು??....😊


                 ಮುಂದುವರೆಯುವುದು...

---

🌸 ಲೇಖಕರ ನೋಟ 🌸

ನಮಸ್ಕಾರ ಓದುಗರೆ,

ಈ ಅಧ್ಯಾಯ ನಿಮ್ಮ ಹೃದಯವನ್ನು ತಲುಪಿದೆಯೆಂದು ನನಗೆ ಭರವಸೆ. ಈ ಕಥೆಯ ಪ್ರತಿ ಪಾತ್ರವೂ ತಮ್ಮದೇ ಆದ ಪ್ರೀತಿ, ಕಾಳಜಿ, ನಗುಮುಗ್ಧತೆಗಳ ಜೊತೆ ನಿಮ್ಮ ಮನಸ್ಸಿನಲ್ಲಿ ಉಳಿಯಲಿ ಎಂಬುದು ನನ್ನ ಆಶಯ. ಮುಂದಿನ ಅಧ್ಯಾಯಗಳಲ್ಲಿ ಇನ್ನಷ್ಟು ಆನಂದಕರ ಕ್ಷಣಗಳು ನಿಮ್ಮನ್ನು ಎದುರು ನೋಡುತ್ತಿವೆ.

ನಿಮ್ಮ ಅಭಿಪ್ರಾಯ ನನಗೆ ತುಂಬಾ ಮುಖ್ಯ. ದಯವಿಟ್ಟು ಈ ಕಥೆಯನ್ನು ಓ

ದಿ ಹೇಗಿದೆ ಎಂದು ಕಾಮೆಂಟ್ ಮಾಡಿ ತಿಳಿಸಿ.

🤍 ನೀವು ಇಷ್ಟಪಟ್ಟಿದ್ದರೆ ಫಾಲೋ ಮಾಡಿ, ಕಥೆಯ ಮುಂದಿನ ಭಾಗವನ್ನು ಕೂಡಾ ಮಿಸ್ ಮಾಡದೆ ಓದೋದು ತಪ್ಪಿಸಿಕೊಳ್ಳಬೇಡಿ!