ಅಧ್ಯಾಯ 3 : ಕುಟುಂಬದ ಪರಿಚಯ
ಸೂರ್ಯನ ಮನೆಯಿಂದ ಹೊರಟು ಜೆಕೆ ತಮ್ಮ ಮನೆಗೆ ಬರುತ್ತಾನೆ ಒಳಗೆ ಬರುತ್ತಿದ್ದ ಹಾಗೆ ಮೆಲ್ಲಣೆಯ ಹೆಜ್ಜೆ ಹಾಕುತ್ತಾ ಅಮ್ಮ.. ಅಮ್ಮ.. ಅಂತ ಕರೆಯುತ್ತಾ ಬರುವಷ್ಟರಲ್ಲಿ ಜೆಕೆಯ ಅಪ್ಪ ಎದುರಿಗೆ ಬರುತ್ತಾರೆ
( ಈಗ ಜೆಕೆ ಯ ಕುಟುಂಬದ ಬಗ್ಗೆ ಹೇಳುವುದಾದರೆ "ಲಕ್ಷ್ಮಿ" (ಲಕ್ಕಿ) ಇವರೆ ಈ ಮನೆಯ ಹಿರಿಯ ವ್ಯಕ್ತಿ , ಲಕ್ಷ್ಮಿ ಅಜ್ಜಿಗೆ 3 ಗಂಡು ಮಕ್ಕಳು ಹಾಗೆ ಒಬ್ಬಳು ಹೆಣ್ಣು ಮಗಳು ಮೊದಲನೆಯ ಮಗ "ಶಶಿಧರ" ಎರಡನೆಯ ಮಗ "ಸುಧಾಕರ್" ಮತ್ತು ಮೂರನೇ ಮಗ "ಕೇಶವ" ಹಾಗೆ ಕೊನೆ ಮಗಳೇ "ಸುಮತಿ".
ಜೆಕೆ ಯ ದೊಡಪ್ಪ ಶಶಿಧರ್ ಇವರ ಹೆಂಡತಿ "ಕಮಲಾ" ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಭುವನ್&ಮಂಜು , ಭುವ ನ ಹೆಂಡತಿ ಹೆಸರು "ಸೌಮ್ಯ" ಹಾಗೆ ಇವರಿಗೆ ಒಂದು ಗಂಡು ಮಗು "ಮೋಕ್ಷಿತ್" ಭುವನ್ ವೃತ್ತಿಯಲ್ಲಿ ವೈದ್ಯನಾಗಿರುತ್ತಾನೆ
ಹಾಗೆ ಎರಡನೆಯ ಮಗ "ಮಂಜು" ವೃತ್ತಿಯಲ್ಲಿ ಸೈನಿಕ ಇವನ ಹೆಂಡತಿ "ವೃಂದಾ" ಹಾಗೆ ಈ ದಂಪತಿಗಳಿಗೆ ಒಂದು ಹೆಣ್ಣು ಮಗು "ಶ್ರಾವ್ಯ", ಮಂಜು ತನ್ನ ಕರ್ತವ್ಯ ನಿರ್ವಹಣೆಗಾಗಿ ಹೋಗಿರುತ್ತಾನೆ ಮಂಜುವಿನ ಹೆಂಡತಿ ಮತ್ತು ಮಗಳು ಇಲ್ಲೇ ಇರುತ್ತಾರೆ .
ಹಾಗೆ ಲಕ್ಷ್ಮಿ ಅಜ್ಜಿಯ ಎರಡನೆಯ ಮಗ "ಸುಧಾಕರ್" ಇವನ ಹೆಂಡತಿ "ಯಶೋಧಾ" ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಮೊದಲನೆಯ ಮಗ "ಮಾಧವ್" ಇವರಿಗೂ ವಿವಾಹ ವಾಗಿರುತ್ತದೆ ಮಾಧವ್ ನ ಹೆಂಡತಿ ಹೆಸರು "ರಮ್ಯಾ" ಇವರಿಗೆ ಇಬ್ಬರೂ ಮಕ್ಕಳು "ಸೂರಜ್" & "ಪ್ರಿಯಾಂಕಾ", ಮಾಧವ್ ವೃತ್ತಿಯಲ್ಲಿ ಪೊಲೀಸ್ ಆಗಿರುತ್ತಾನೆ.
ಇನ್ನೂ ಎರಡನೇಯ ಮಗನೆ "ಜೆಕೆ" (ಜಯ ಕಾರ್ತಿಕ) ಇವನಿಗೆ ಜಯ ಕಾರ್ತಿಕ ಎಂದು ಹೆಸರು ಇಡಲು ಕಾರಣ ಇವರ ಅಜ್ಜ ಎಂದರೆ ಲಕ್ಷ್ಮಿಯ ಗಂಡ ಅವರ ಹೆಸರು "ಜಯಸಿಂಹ" ಇವರು ಕೂಡ ಒಬ್ಬ ಸೈನಿಕ ಇವರು ಯುದ್ಧದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿ ವೀರ ಮರಣ ಹೊಂದುತ್ತಾರೆ ನಂತರವೇ ಜೆಕೆ ಹುಟ್ಟಿರುವದರಿಂದ ಇವನಿಗೆ ಜಯ ಕಾರ್ತಿಕ ಎಂದು ಹೆಸರಿಟ್ಟರು ಸ್ನೇಹಿತರೆ ಈ ಕುಟುಂಬ ದೇಶದ ಮೇಲೆ ಅಪಾರವಾದ ಪ್ರೀತಿ,ಗೌರವವನ್ನು ಹೊಂದಿರುವುದರಿಂದ,ಹಲವಾರು ರೀತಿಯಲ್ಲಿ ಸಮಾಜ ಸೇವೆಯನ್ನು ಈ ಕುಟುಂಬ ಮಾಡುತ್ತಿರುತ್ತಾರೆ😊 ,
ಇನ್ನು ಕೊನೆಯ ಮಗಳು "ಅಂಬ್ರತಾ" ಇವಳು ಇನ್ನು ಕಾಲೇಜಿಗೆ ಹೋಗುತ್ತಿರುತ್ತಾಳೆ.
ಲಕ್ಷ್ಮಿಯ ಕೊನೆಯ ಮಗ "ಕೇಶವ" ಮತ್ತು ಇವನ ಹೆಂಡತಿ "ಚಂದ್ರಿಕಾ" ಈ ದಂಪತಿಗಳಿಗೆ ಯಾವುದೇ ಮಕ್ಕಳಿರುವದಿಲ್ಲ ಇವರಿಗೆ ಜೆಕೆ ಯನ್ನ ಚಿಕ್ಕ ವಯಸ್ಸಿನಿಂದಲೂ ತಮ್ಮ ಮಗನಂತೆ ಬೆಳೆಸಿರುತ್ತಾರೆ ಹಾಗಾಗಿ ಜೆಕೆ ಎಂದರೆ ಈ ದಂಪತಿಗಳಿಗೆ ಹೆಚ್ಚು ಪ್ರೀತಿ ಇದು ನಮ್ಮ ಜೆಕೆ ಯ ಕುಟುಂಬ
ಈ ಕುಟುಂಬದಲ್ಲಿ ಒಟ್ಟಾರೆಯಾಗಿ 19 ಜನ ಶಶಿಧರ್ ನ ಮಗ ಮಂಜು ಸೈನಿಕ ವೃತ್ತಿಯಲ್ಲಿ ನಿರತನಾಗಿರುವುದರಿಂದ ಈಗ ಈ ಮನೆಯಲ್ಲಿ 18 ಜನ ಇರುವಂತಹ ಸುಂದರ ಕುಟುಂಬ )
ಸುಧಾಕರ್ : "ಏನು ಸಾಹೇಬ್ರು ತುಂಬಾ ಬೇಗ ಬಂದ್ಬಿಟ್ಟಿದಿರಲ್ಲ"...
ಜೆಕೆ : "ಅಪ್ಪ ಅದು"...
ಸುಧಾಕರ್ : "ನಿಂಗೆ ಇತ್ತೀಚಿಗೆ ಸಲುಗೆ ಜಾಸ್ತಿ ಆಗಿದೆ ಎಲ್ಲರದು ಅದಕ್ಕೆ ನಿನ್ ಈ ರೀತಿ ಮಾಡತಿದ್ದೀಯ"
ಅಷ್ಟರಲ್ಲಿ ಲಕ್ಕಿ ಅಜ್ಜಿ ಮೆಟ್ಟಿಲುಗಳನ್ನು ಇಳಿದು ಮೆಲ್ಲಗೆ ಹೆಜ್ಜೆ ಇಡುತ್ತಾ ಹಾಲ್ ಗೆ ಬರ್ತಾಳೆ ಹೇ!.. ಯಾಕೋ ಆ ಮಗುಗೆ ಯಾವಾಗ್ಲೂಬೈತೀರ್ತಿಯ
ಕೇಶವ : "ಜೆಕೆ ಈಗ ಬಂದಿಯ ಮಗನೆ "😃
ಸುಧಾಕರ್ : "ನೀವು ಎಲ್ಲರೂ ಇವನಿಗೆ ಹೀಗೆ ಸಲುಗೆ ಕೊಟ್ಟಿರೋದಕ್ಕೆ ಹೀಗೆ ಆಡತ್ತಿದ್ದಾನೆ ಇವನು" ಅಂತ ಸ್ವಲ್ಪ ಕೋಪದಲ್ಲಿ ಹೇಳುತ್ತಾರೆ ಆಗ ಜೆಕೆ ಯ ಅಮ್ಮ ಯಶೋಧಾ ಯಾಕ್ರೀ ಆ ಮಗೂಗೆ ಯಾವಾಗ್ಲೂ ಏನಾದ್ರೂ ಅಂತಾನೆ ಇರತೀರಾ..
ಸುಧಾಕರ್ : "ನಿಮ್ಗೆಲ್ಲಾ ಎಷ್ಟು ಹೇಳಿದ್ರೂ ಇವನ್ನನ್ನ ಸುಫೋರ್ಟ್ ಮಾಡೋದು ಬಿಡೋಲ್ಲ ನೋಡೋಣ ಇಲ್ಲಿವರೆಗೂ ಹೀಗೆ ಇರ್ತಾನೆ ಅಂತ ಯಾವುದೇ ಜವಾಬ್ದಾರಿ ಇಲ್ಲದೆ"..
ಅಷ್ಟರಲ್ಲಿ ಶಶಿಧರ್ ಏನು ಸುಧೀ ಏನೋ ಮಾತಾಡ್ತಾ ಇದ್ದಿರಲ್ಲ
( ಸುಧಾಕರ್ ಗೆ ಅವರ ಅಣ್ಣನ ಮೇಲೆ ಅಪಾರವಾದ ಗೌರವ ಹಾಗಾಗಿ ಅವರ ಎದುರು ಮಾತಾಡಲು ಭಯ ಪಡುತ್ತಾರೆ. )
ಸುಧಾಕರ್ : "ಏನು ಇಲ್ಲ ಅಣ್ಣ ಅದು"...
ಶಶಿಧರ್ : "ನಂಗೆಲ್ಲ ಗೊತ್ತು ಕಣೋ ಆವನ ಬೈದೆಹೋದ್ರೆ ನಿಂಗೆ ಊಟಾ ಸೇರಲ್ಪವಲ್ಲ
ಲಕ್ಷ್ಮಿ : ಸರಿಯಾಗಿ ಹೇಳ್ದೆ ಶಶಿ ಅಂತ ಶಶಿಧರ್ ನಾ ಬೆಂಬಲಿಸುತ್ತಾಳೆ
ಸುಧಾಕರ್ : "ಹಾಗಲ್ಲ ಅಣ್ಣ ಅದು.. ಶಶಿಧರ್ ಅದೆಲ್ಲ ಬಿಡಿ ಬನ್ನಿ ಈಗ ಊಟ ಮಾಡೋಣ..
ಲಕ್ಕಿ ಅಜ್ಜಿ : " ಜೆಕೆ ಕಂದ ಬಾರೋ ಮೊಮ್ಮಗನೇ ಊಟ ಮಾಡೋಣ"
ನಂತರ ಎಲ್ಲರೂ ಊಟದ ಟೇಬಲ್ ಮೇಲೆ ಕುಳಿತುಕೊಳ್ತಾರೆ ಆ ಪುಟ್ಟ ಪುಟ್ಟ ಮಕ್ಕಳ ನಗು,ಅವರ ತುಂಟಾಟಗಳು ಮನೆಯ ಶೋಭೆಯನ್ನು ಹೆಚ್ಚಿಸುತ್ತದೆ ಹಾಗೆ ಟೇಬಲ್ ಮೇಲೆ ಘಮ ಘಮ ಸುವಾಸನೆ ಬೀರುತ್ತಿರುವ ವಿಧ ವಿಧವಾದ ಅಡುಗೆ.. ಹಾಗೆ ಎಲ್ಲರ ಮಾತುಗಳ ನಡುವೆ ಶಶಿಧರ್ ದ್ವನಿ ಬರುತ್ತದೆ...
ಶಶಿಧರ್ : "ಕೇಶವ ಮತ್ತೆ ಸುಧಿ ಎಂಪ್ಲಾಯ್ಸ್ ಗಳಿಗೆ ಎಲ್ಲಾ ಸ್ಯಾಲರಿ increase ಮಾಡೋದರ ಬಗ್ಗೆ ಎಲ್ಲಿಗೆ ಬಂತು"
(ಸ್ನೇಹಿತರೆ ಶಶಿಧರ್, ಸುಧಾಕರ ಮತ್ತು ಕೇಶವ್ ಮೂವರು ಸೇರಿ ಕೆಲವು ಕಂಪನಿ ಗಳನ್ನು ನಡೆಸುತ್ತಿರುತ್ತಾರೆ ಆದರೆ ಶಶಿಧರ್ ಎಲ್ಲಾ ಜವಾಬ್ದಾರಿಯನ್ನು ತನ್ನ ಇಬ್ಬರು ತಮ್ಮಂದಿರಿಗೆ ವಹಿಸಿರುತ್ತಾರೆ ಹಾಗೆ ಈ ಊರಿನಲ್ಲಿ ಅಷ್ಟೆ ಅಲ್ಲದೆ ಬೇರೆ ಬೇರೆ ಕಡೆಗಳಲ್ಲಿ ಕಂಪನಿಗಳನ್ನೂ ನಡೆಸುತ್ತಿರುತ್ತಾರೆ ಅಷ್ಟೆ ಅಲ್ಲದೆ ಇಡೀ ಊರಿನಲ್ಲಿ ಇವರ ಮನೆತನವು ಹೆಸರುವಾಸಿಯಾಗಿದೆ )
ಸುಧಾಕರ್ : "ಅದರ ಬಗ್ಗೆನೇ ಇನ್ನು ಡಿಸ್ಕಶನ್ ನಡೀತಿದೆ ಅಣ್ಣ "
ಶಶಿಧರ್ : ಸರಿ ಬೇಗ ಆ ಕೆಲಸನ ಮುಗಿಸಿ ಒಟ್ಟಿನಲ್ಲಿ ಎಂಪ್ಲೊಯ್ಸ್ ಗಳಿಗೆ ಯಾವುದೇ ತೊಂದ್ರೆ ಆಗಬಾರದು ಹಾಗೆ ಜೆಕೆ ನೀನು ನಿನ್ ಎಜುಕೇಷನ್ ಕಂಪ್ಲೀಟ್ ಆಗುತ್ತಿದ್ದಹಾಗೆ ಕಂಪನಿ ಎಲ್ಲಾ ಜವಾಬ್ದಾರಿನು ನಿನ್ನ ಮೇಲೆ
ಜೆಕೆ : ಅದು ದೊಡ್ಡಪ್ಪ... ಮುಂದೆ ಹೆಚ್ಚು ಮಾತನಾಡದೇ ಧ್ವನಿಯನ್ನು ಇಳಿಸುತ್ತಾನೆ
ಸುಧಾಕರ್ : "ಅದು ಇಲ್ಲ ಇದು ಇಲ್ಲ ಅಣ್ಣ ಹೇಳಿದ್ದೆ ಫೈನಲ್ ಅಲ್ಲ ನಾವೆಲ್ಲರೂ ದುಡಿತಿದೀವಿ ತಾನೇ ನಿಂಗ್ ಯಾಕೆ ಪಾರ್ಟ್ ಟೈಮ್ ಜಾಬ್ ಮಾಡೋ ಹುಚ್ಚು ಅಂತಾನೇ ಅರ್ಥ ಆಗ್ತಿಲ್ಲ ಒಂದ್ಸಲ ಹೋಟೆಲಲ್ಲಿ ಸುಪ್ಲೈಯರ್ ಆಗಿ ಅದು ಇದು ಅಂತ ಮಾಡ್ತಾನೆ ಇರತೀಯ ನನಗಂತು ನಿಂಗೆ ಹೇಳಿ ಹೇಳಿ ಸಾಕಾಗಿದೆ.
ಕೇಶವ : "ಅಯ್ಯೋ ಅಣ್ಣ ಅವನು indipendent ಆಗಿ ಬದಕ್ಬೇಕು ಅಂತ ಮಾಡ್ತಿರೋದು ಗೊತ್ತಿಲ್ವಾ ನಿಂಗೆ ಅವನ ಬಗ್ಗೆ"
ಶಶಿಧರ್ : ಕೇಶವ್ ಹೇಳ್ತಿರೋದು ಸರಿಯಾಗೇ ಇದೆ ಸುಧಿ ಅವನನ್ನ ಅವನ್ ಪಾಡಿಗೆ ಮಾಡೋಕೆ ಬಿಡು
(ಸ್ನೇಹಿತರೆ ಜೆಕೆ ಯಾವಾಗ್ಲೂ indipendent ಆಗಿ ಇರೋಕೆ ಇಷ್ಟ ಪಾಡ್ತಾನೆ ಆದರೆ ಅವನು ಪಾರ್ಟ್ ಟೈಮ್ ಜಾಬ್ ಮಾಡ್ತಿರೋದು ಅವನಿಗೋಸ್ಕರ ಅಲ್ಲ ಅದು ಅವನ ಸ್ನೇಹಿತ ಕಾರ್ತಿಕ್ ಗೋಸ್ಕರ ಕಾರ್ತಿಕ್ ತನ್ನ ಎಜುಕೇಷನ್ ಶುರು ಮಾಡುವ ಮೊದಲೇ ಒಂದು ಮಾತು ಹೇಳಿರ್ತಾನೆ ನನ್ನ ಎಜುಕೇಷನ್ ಜೆಕೆ ಮನೆಯವರು ನೋಡಿಕೊಂಡರೆ ಕಾರ್ತಿಕ್ ಅವನ ಎಜುಕೇಷನ್ ಗೆ ಕೊಡುವ ಖರ್ಚನ್ನು ಸಾಲದ ರೂಪದಲ್ಲಿ ತೆಗೆದುಕೊಳ್ಳುತ್ತೇನೆ ಜಾಬ್ ಸೇರಿದ ಮೇಲೆ ಆ ದುಡ್ಡನೆಲ್ಲ, ತೀರಿಸುತ್ತೇನೆ ಅಂದರೆ ಮಾತ್ರ ನಾನು ಎಜುಕೇಷನ್ ಕಂಟಿನ್ಯೂ ಮಾಡ್ತೀನಿ ಇಲ್ಲ ಅಂದ್ರೆ ನಾನು ಮುಂದೆ ಓದುವುದಿಲ್ಲ ಅಂತ ಹೇಳಿರ್ತಾನೇ ಅದಕ್ಕೆ ಅವನ ಸ್ವಾಭಿಮಾನಕ್ಕೆ ದಕ್ಕೆಯಾಗಭಾರದು ಎನ್ನುವ ಉದ್ದೇಶದಿಂದ ಜೆಕೆ ಕಾರ್ತಿಕ್ ಗು ತಿಳಿಯದ ಹಾಗೆ ಅವನೇ ದುಡಿದು ಅವನ ಖರ್ಚನ್ನು ನೋಡಿಕೊಳ್ಳುತ್ತೀರುತ್ತಾನೆ )
ಸುಧಾಕರ್ :"ಹಾಗಲ್ಲ ಅಣ್ಣ ಎಲ್ಲಾ ಮಕ್ಕಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ ಆದರೆ ಇವನು"...
ಲಕ್ಕಿ ಅಜ್ಜಿ: "ಹಾ!.. ಮಾಡತಾನೆ ಬಿಡೋ ನನ್ ಮೊಮ್ಮಗ ಅಂದ್ರೇ ಸುಮ್ನೆ ನಾ ನೋಡ್ತೀರು ಒಂದು ದಿನ ನೀನೇ ಅವನ ಬಗ್ಗೆ ಹೆಮ್ಮೆ ಪಡ್ತೀಯ..
ಯಶೋದಾ ಅಮ್ಮ: "ಆವಾಗಿಂದ ನೋಡತಾ ಇದೀನಿ ಯಾಕೋ ಕಂದ ಊಟಾನೆ ಮಾಡಿಲ್ಲ ಸುಮ್ನೆ ಊಟ ಮುಂದೆ ಇಟ್ಟುಗೊಂಡು ಕುಂತಿದ್ದಿಯಾ"
ಅಂಬ್ರತಾ : "ಅಪ್ಪ ಬೈದ್ನಲ್ವಾ ಅಮ್ಮ ಅದಿಕೆ ಊಟ ಮಾಡ್ತಿಲ್ಲ ಅನ್ಸುತ್ತೆ "🤭
ಭುವನ್ :"ಹೇ!.. ಅಮ್ಮು ಸುಮ್ನೆ ಊಟ ಮಾಡೆ ಯಾಕೆ ಅವನ್ನ ಗೋಳಾಡಸ್ತಿಯ"
ಮಾಧವ್ (ಜೆಕೆ ನ ಅಣ್ಣ): "ಅಮ್ಮು ಇವತ್ತು ನೀನ್ ರಿಸಲ್ಟ್ ಅಲ್ವೇನೆ ಎಷ್ಟು subject ಡುಮ್ಕಿ ಹೊಡಿದೆ"😅
ರಮ್ಯಾ (ಮಾಧವ್ ನ ಹೆಂಡತಿ): "ಹೌದೇನೆ ಅಮ್ಮು ಇರು ನಾನ್ ನೋಡತಿನಿ"😜
ಅಂಬ್ರುತಾ ( ಮುಜುಗರ ದಿಂದ) : ಊಟಾ ಮಾಡ್ತಾನೆ ಊಟ ಗಂಟಲಿಗೆ ಸಿಕ್ಕೊಂಡು ಕೆಮ್ಮಲು ಸ್ಟಾರ್ಟ್ ಮಾಡ್ತಾಳೆ
ಯಶೋದಾ : "ತಗೋ ನೀರು ಕುಡಿ ಯಾಕೆ ರಿಸಲ್ಟ್ ಅಂದ್ರೆ ಹಾಗೆ ಆಡ್ತಿಯಾ"
ಶಶಿಧರ್ : ಅಮ್ಮು ರಿಸಲ್ಟ್ ಎನ್ ಆಯ್ತು 🤨 ಅಂಬ್ರುತಾ :ದೊಡ್ಡಪ್ಪ ಅದು.. ಅದು.. ಒಂದೇ ಒಂದು subject ಹೋಗಿದೆ ಅಷ್ಟೆ ಅದು ನಂಗೆ ಅವಾಗ ಹುಷಾರ್ ಇರಲಿಲ್ಲವಲ್ಲ ಆದಿಕೆ 😕 sorry
ಆಗ ಅಲ್ಲಿರುವ ಎಲ್ಲರಿಗೂ ಅದು ತಮಾಷೆಯ ವಿಷಯ ನಗೋದಕ್ಕೆ ಸ್ಟಾರ್ಟ್ ಮಾಡ್ತಾರೇ😂
ಭುವನ್ :"ನೀನು ಎಂದಾದ್ರು ಒಷ್ಟು subject ಅಲ್ಲಿ ಪಾಸ್ ಆಗಿದಿಯ ಹೇಳು ಆಗ ಅಂಬ್ರುತಾ ಸಪ್ಪೆ ಮುಖ ಮಾಡ್ತಾಳೆ"
ಕೇಶವ :"ಹೋಗಲಿ ಬಿಡು ಕಂದ ಮುಂದೆ ಕಟ್ಟಿದರೆ ಆಯ್ತು"
ಶಶಿಧರ್ : "ಪರವಾಗಿಲ್ಲ ಬಿಡೋ ಎಕ್ಸಾಂ ಇವಾಗ ಇಲ್ಲಾಂದ್ರೆ ನಾಳೆನು ಬರಿಬಹುದು" ಎಲ್ಲರೂ ನಗುತ್ತಾ ಊಟ ಮಾಡ್ತಾ ಇರುತ್ತಾರೆ ಆದರೆ ಜೆಕೆ ಮಾತ್ರ ಸ್ವಾತಿ ಮೇಲೆ ಕೋಪ ಮಾಡಿಕೊಂಡಿದ್ದರ ಬಗ್ಗೆನೆ ಯೋಚನೆ ಮಾಡ್ತೀರ್ತಾನೆ
ಚಂದ್ರಿಕಾ (ಕೇಶವನ ಹೆಂಡತಿ): "ಜೆಕೆ ಪುಟ್ಟ ಯಾಕೋ ನೀನು ಊಟ ಮಾಡ್ತಿಲ್ಲ ಆಗ ಜೆಕೆ ಚಿಕ್ಕಿ (ಚಿಕ್ಕಮ್ಮ) ನಂಗೆ ಊಟ ಸಾಕು".
ಸುಧಾಕರ್ : "ನಿಂಗೆ ಗೊತ್ತಿಲ್ಲ ನಮ್ಮ ಮನೆ ಪದ್ಧತಿ ಊಟಕ್ಕೆ ಕುಂತ ಮೇಲೆ ಅರ್ಧಕ್ಕೆ ಎದ್ದು ಹೋಗಬಾರದು ಅಂತ ಅಂತ ಕೋಪ ದಿಂದ ಹೇಳಿದಾಗ ಜೆಕೆ ಏನನ್ನು ಮಾತನಾಡದೆ ಊಟ ಮಾಡಿ ತನ್ನ ರೂಮ್ ಗೆ ಹೋಗುತ್ತಾನೆ ಎಲ್ಲರೂ ಅವನನ್ನೇ ನೋಡುತ್ತಾ ಲಕ್ಕಿ ಯಾಕೆ ಇವನು ಹೀಗೆ ಆಡ್ತಿದ್ದಾನೆ ಇವತ್ತು
ಅಜ್ಜಿ :"ನನ್ ಮೊಮ್ಮಗ ಯಾವತ್ತೂ ಹೀಗೆ ಸಪ್ಪೆ ಮುಖಾ ಮಾಡಿಕೊಂಡವನೆ ಅಲ್ಲ ಯಾಕೆ ಇವತ್ತು ಹೀಗೆ ಮಾಡ್ತಿದ್ದಾನೆ ಅಂತ ಎಲ್ಲರೂ ಮಾತಾಡೋಕೆ ಶುರುಮಾಡ್ತಾರೆ ನಂತರ ಎಲ್ಲರೂ ಊಟ ಮುಗಿಸಿ ಅವರವರ ರೂಮ್ ಗೆ ಹೋಗುತ್ತಾರೆ
ಜೆಕೆ ಒಬ್ಬನೇ ರೂಮ್ ನಲ್ಲಿ ಸ್ವಾತಿ ಬಗ್ಗೆನೇ ಯೋಚನೆ ಮಾಡತೀರ್ತಾನೆ ಅಲ್ಲ ಇವಳಿಗೆ ತಲೇಲಿ ಬುದ್ಧಿ ಅನ್ನೋದೇ ಇಲ್ವಾ ನನ್ನ ಬಗ್ಗೆ ಸ್ವಲ್ಪನು ಕೇರ್ ಇಲ್ಲಾ ಅವ್ಳಿಗೆ.. ಅವಳಿಗೇ ನನ್ನ ಫೀಲಿಂಗ್ಸ್ ಗಳೇ ಅರ್ಥ ಆಗ್ತಿಲ್ಲ. ನಾನೆ ಕಾಲ್ ಮಾಡಲಾ ??😕 ಬೇಡ ಯಾವಾಗ್ಲೂ ನಾನೇ ಮೊದಲು ಮಾಡ್ತೀನಿ ಇವತ್ತು ಅವಳೇ ಮಾಡಲಿ ಅಂತ ಜೆಕೆ ಅವಳ ನೆನಪಲ್ಲೇ ಮೂಳಿಗಿರುತ್ತಾನೆ "
ಆಗ ಲಕ್ಕಿ ಜೆಕೆ ರೂಮ್ ಗೆ ಬರ್ತಾಳೆ , ರೂಮ್ ಡೊರನ್ನು ಮೆಲ್ಲನೆ ತೆಗೆದು ಒಳಗಡೆ ಬರ್ತಾಳೆ
"ಏನು ಮಾಡ್ತೀದಿಯ ಮೊಮ್ಮಗನೆ"
ಜೆಕೆ : ಅಜ್ಜಿ!!... ಅಂತ ಹೇಳಿ ಅವಳ ತೊಡೆ ಮೇಲೆ ಮಗು ತರ ಮಲ್ಕೋತಾನೆ ಅಜ್ಜಿ ಅದು.. ನೀನು ನಂಗೆ ಏನು ಹೇಳಬೇಕಾಗಿಲ್ಲ ನಾನು ಸುಮತಿಗೆ ಕಾಲ್ ಮಾಡಿ ಎಲ್ಲಾ ವಿಷಯನು ತಿಳಕೊಂಡಿದೀನಿ ನೀನು ಏನೇ ಆದರೂ ಅವಳ ಹತ್ರ ಹೇಳದೆ ಇರೋಲ್ಲ ಅಂತ ಗೊತ್ತು ಅದಿಕೇ ಅವಳಿಗೆ ಕಾಲ್ ಮಾಡಿ ತಿಳಕೊಂಡೆ ನೀನು ಏನು ಯೋಚನೆ ಮಾಡಬೇಡ ಕಂದ ಎಲ್ಲಾ ಸರಿ ಹೋಗುತ್ತೆ ಸರಿ ನಾನು ನಿನಗೆ ಲಾಲಿ ಹಾಡು ಹಾಡಿ ಮಲಗಸ್ತಿನಿ ಅಂತ ಲಕ್ಕಿ ಹಾಡೋಕೆ ಶುರು ಮಾಡುತ್ತಾಳೆ ಅವಳ ಮಧುರವಾದ ಹಾಡಿಗೆ ಜೆಕೆ ಎಲ್ಲಾ ಚಿಂತೆಗಳನ್ನು ಮರೆತು ಮಗುವಿನ ತರ ಮಲಗಿ ನಿದ್ರೆಗೆ ಜಾರುತ್ತಾನೆ..
ಮುಂದುವರೆಯುವುದು.....
ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಹಂಚಿಕ್ಕೊಳ್ಳಿ ಮತ್ತು ಹಿಂಬಾಲಿಸುವುದರ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ ಮುಂದಿನ ಸಂಚಿಕೆಗಳು ರೋಚಕತೆಯನ್ನು ಹೊಂದಿವೆ, ಧನ್ಯವಾದಗಳು..😊