She came unwillingly... - 18 in Kannada Drama by Kavya Pattar books and stories PDF | ಬಯಸದೆ ಬಂದವಳು... - 18

Featured Books
  • ಬಯಸದೆ ಬಂದವಳು... - 18

    ಅಧ್ಯಾಯ 18 : "ವಿದಾಯದ ಕ್ಷಣಗಳು,ಮನೆಗೆ ಮರಳುವ ಹಾದಿ "ಮರುದಿನ ಅವರ ಎಕ್...

  • ಪ್ರಣಂ 2 - 1

    ​ಇಂದು ಬೆಳಿಗ್ಗೆಯೇ ಶುಭಾರಂಭವಾಗಿತ್ತು. ನಸುಕಿನ ಜಾವ 5 ಗಂಟೆ. ಬೆಂಗಳೂರ...

  • ಬೇಡಿದರೂ ನೀಡದವರು

    ಬೆಳಗ್ಗೆ ನಾಲ್ಕು ಗಂಟೆಗೆ ವಿರೂಪಾಕ್ಷಿ ಮಠದ ಗಂಟೆ ಬಾರಿಸಿದಾಗ, ಆ ಊರ ಸಮ...

  • ಕವಲೊಡೆದ ಕಥೆ

    ಸುಮಾರು ಏಳು ನೂರು ವರ್ಷಗಳ ಇತಿಹಾಸವಿರುವ ವೈಶಾಲಿ ಎಂಬ ಹಳ್ಳಿಯ ಪಶ್ಚಿಮ...

  • ಅಸುರ ಗರ್ಭ - 7 - (Last Part)

    ​ಅರ್ಜುನ್, ಅಸುರರ ಮುಖ್ಯಸ್ಥನನ್ನು ದೈಹಿಕವಾಗಿ ಸೋಲಿಸಿದ ನಂತರವೂ, ಆ ಹೋ...

Categories
Share

ಬಯಸದೆ ಬಂದವಳು... - 18


ಅಧ್ಯಾಯ 18 : "ವಿದಾಯದ ಕ್ಷಣಗಳು,ಮನೆಗೆ ಮರಳುವ ಹಾದಿ "


ಮರುದಿನ ಅವರ ಎಕ್ಸಾಮ್ಸ್ ಗಳ ಮುಗಿಸಿ ಮನೆಗೆ ಬಂದರು  

ಸುಂದರ್ ಮುಖದಲ್ಲಿ ಬೇಜಾರು ಎದ್ದು ತೋರುತ್ತಿತ್ತು ಅಲ್ಲಾ ಕಣ್ರೋ ಇವತ್ತೇ ಎಕ್ಸಾಮ್ಸ್ ಮುಗಿದಿದಾವೆ ನೀವು ನಾಳೇನೇ ಹೋರಡ್ತೀನಿ ಅಂತಿದಿರಾ ಅಲ್ವಾ.. ಇನ್ನೂ ಒಂದೆರಡು ವಾರ ಇದ್ದು UK ನಲ್ಲಿ ಇನ್ನು ನೀವು ನೋಡದೆ ಇರೋ ಪ್ಲೇಸ್ಗಳನ್ನ ನೋಡ್ಕೊಂಡು ಹೋಗಬಹುದಲ್ವಾ.. ಇಷ್ಟು ಯಾಕೆ ಅರ್ಜೆಂಟ್ ಮಾಡ್ತಿದ್ದಿರಾ.. ಬೇಕಿದ್ರೆ ಶಶಿಧರ್ ಗೆ ನಾನು ಹೇಳ್ತೀನಿ?

ಅದಕ್ಕೆ ಜೆಕೆ ವಿನಯ ಪ್ರೋರ್ವಕದಿಂದ ಹೇಳಿದನು "ಇಲ್ಲ ಅಂಕಲ್ ನಾವು ಮನೆಯವರನ್ನು ಇಷ್ಟು ದಿನ ಬಿಟ್ಟು ಇರೋದೇ ದೊಡ್ಡ ವಿಷಯ ನಮ್ಗೆ.. ಇದಕ್ಕೋಸ್ಕರ ಅದೆಷ್ಟು ದಿನ ವೇಟ್ ಮಾಡಿದೀವಿ ಅಬ್ಬಾ ಅದನ್ನ ಹೇಳೋಕೆ ಆಗೋಲ್ಲ, ನಮ್ಮನ್ನು ಕ್ಷಮಿಸಿ ಅಂಕಲ್ ,ನೀವು ಕೂಡಾ ಇಂಡಿಯಾ ಗೆ ಬಂದು ಸೆಟಲ್ ಆಗಬಹುದು ಅಲ್ವಾ??... 

ಸುಂದರ್ ಮುಖದಲ್ಲಿ ಸಹಜ ಉತ್ಸಾಹ ಸ್ಪಷ್ಟವಾಗಿತ್ತು "ಹಾ!! ನಾನು ಅದೇ ಯೋಚನೆ ಮಾಡ್ತಿದೀನಿ ಕಂಡಿತಾ ಆದಷ್ಟು ಬೇಗ ಬರ್ತೀನಿ "

ಸರಿ ಅಂಕಲ್ ನಾವು ನಾಳೆ ಹೊರಡ್ತೀವಿ..
ಬಟ್ ಇವತ್ತು ಮನೇಲಿ ಒಂದು ಚಿಕ್ಕ ಪಾರ್ಟಿ ಮಾಡೋಣ ಓಕೆ ...ಆದರೆ small changes ಇವತ್ತು ಅಡಿಗೆ ನಾವು ಮಾಡ್ತೀವಿ ನೀವು ಹಾಗೆ ಆಂಟಿ ಇಬ್ಬರು ಆರಾಮಾಗಿ ಕುಳಿತು ರೆಸ್ಟ್ ಮಾಡಿ ಅವನ ಮೊಗದಲ್ಲಿ ಸಂತೋಷ 

ಸೂರ್ಯ ನಗುವನ್ನು ತೋರಿಸಿ ಹೇಳಿದನು "ಹೌದು ಕಣೋ ಇಷ್ಟು ದಿನ ಅಂಕಲ್ ,ಆಂಟಿ ನಮ್ಮನ್ನ ಸ್ವಂತ ಮಕ್ಕಳ ತರ ನೋಡ್ಕೊಂಡಿದಾರೆ.ನಾವು ಇಷ್ಟು ಮಾಡದಿದ್ರೆ ಹೇಗೆ ಹೇಳು"   

ಕಾರ್ತಿಕ್ ಸಹ " ಸರಿ ಬೇಗ ಬನ್ನಿ ಮತ್ತೆ .. ಕಾರ್ತಿಕ್ ಸುತ್ತ ಮುತ್ತ ನೋಡುತ್ತಾ ಆದರೆ ಅಂಕಲ್ ಆಂಟಿ ಎಲ್ಲಿ ಕಾನಸ್ತಾನೆ ಇಲ್ಲ"??

ಅಷ್ಟರಲ್ಲಿ ಲೀಲಾ ಅಂಟಿ ಮೇಲ್ಮಹಡಿ ಇಂದ ಬಂದರು ಮುಖದಲ್ಲಿ ನಗುವಿನ ಚಿನ್ಹೆ

"ಏನು, ಏನೋ ದೊಡ್ಡ ಮೀಟಿಂಗ್ ನಡಿಸ್ತಿರೋ ಹಾಗಿದೆ" ಎಂದು ಚಿಟಿಕೆ ನಗುವಿನೊಂದಿಗೆ ಕೇಳಿದರು

"ಆಂಟಿ ಅದು ನಾಳೆ ನಾವು ಹೋರಡ್ತಿದ್ದಿವಿ ಅದಕ್ಕೆ ಇವತ್ತು ಚಿಕ್ಕ ಪಾರ್ಟಿ ರೆಡಿ ಮಾಡ್ತೀವಿ ಆದರೆ ಇವತ್ತು ಅಡುಗೆ ಮಾಡೊದೂ ನಾವೇ" ಎಂದು ಉತ್ಸಾಹದಿಂದ ನುಡಿದನು

ಲೀಲಾ ಮುಖದಲ್ಲಿ ಸ್ವಲ್ಪ ಆತಂಕ,ಸ್ವರದಲ್ಲಿ ಸ್ವಲ್ಪ ತೀವ್ರತೆಯನ್ನು ತೋರಿಸಿ ಹೇಳಿದಳು "ಏನು ನಾಳೇನೇ ಹೋರಡ್ತೀರಾ ನಾನಂತು ಒಪ್ಪಿಕೊಳ್ಳೊಲ್ಲ "ನೋಡ್ರಿ ನಾಳೇನೇ ಹೋಗ್ತಾರಂತೆ ಎಂದು ಸುಂದರ್ ನೆಡೆಗೆ ನೋಟ ಹರಿಸಿ ಹೇಳಿದಳು

ಸುಂದರ್ ದುಃಖದಿಂದ ಹೌದು ಕಣೆ ಆದರೆ ಪಾಪ ಅವರು ಇಷ್ಟು ದಿನ ಅವರ ಮನೆಯವರನ್ನು ಬಿಟ್ಟು ಇದ್ದಿದ್ದೇ ಹೆಚ್ಚು .... ಸುಂದರ್ ತನ್ನ ಭಾವನೆಗಳನ್ನು ಕಂಟ್ರೋಲ್ ಮಾಡೋಕೆ ಎಷ್ಟೇ ಟ್ರೈ ಮಾಡಿದ್ರೂ ಅವನ ಕಣ್ಣಲ್ಲಿನ ನೀರು ಮೌನವಾಗಿ ಜಾರಲು ಪ್ರಾರಂಭಿಸಿತು...

ಜೆಕೆ ಆತಂಕದಿಂದ ಅಂಕಲ್ ಅಳ್ತಾ ಇದ್ದೀರಾ ಆದರೆ ಯಾಕೆನಾವು ಏನಾದ್ರೂ...  

ಛೇ!.. ಛೇ.. ಎಂತ ಮಾತಾಡ್ತಿದ್ದೀರಾ ಹಾಗೇನೂ ಇಲ್ಲ .. ನಮ್ಮಿಬ್ಬರ ಜೀವನದಲ್ಲಿ ನಾವು ತುಂಬಾ ಖುಷಿಯಾಗಿದ್ದಿದ್ದು ಅಂದರೆ ಅದು ಈ ಎರಡು ವರ್ಷ... ನಮಗೆ ಯಾವುದರಲ್ಲಿಯೂ ಕೊರತೆ ಇಲ್ಲ ಆದರೆ ಮಕ್ಕಳ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದೆವು..    

ಇದನ್ನು ಕೇಳಿದ ಜೆಕೆ ಮನಸಲ್ಲಿ ಪ್ರಶ್ನೆ ಎದ್ದಿತು "ಆದರೆ ನಿಮಗೆ ಒಬ್ಬಳು ಮಗಳು ಇದಾಳೆ ಅಲ್ವಾ?...

ಲೀಲಾ ತನ್ನ ಮುಖದಲ್ಲಿ ಮೃದುವಾದ ದುಃಖ ಹಾಗೆ ನೆನಪಿನ ನೋವನ್ನು ತೋರಿಸಿ "ಹೌದು.. ಆದರೆ ಅವಳು ಯಾವಾಗ teenage ನಾ ಮುಗಿಸಿದ್ಲೊ ನಾವು ತೋರಿಸೋ ಪ್ರೀತಿ,ಕಾಳಜಿ ಅವಳಿಗೆ ತುಂಬಾ ಹಿಂಸೆ ಅನಿಸೋಕೆ ಸ್ಟಾರ್ಟ್ ಆಯ್ತು ನನ್ನನ್ನ ನನ್ನ ಪಾಡಿಗೆ ಬಿಟ್ಟು ಬಿಡಿ ಅಂತ ನಮ್ಮನ್ನ ಬಿಟ್ಟು ಹೊರಟೊದ್ಲು ಅವಳ ನೆನಪಲ್ಲೇ ದಿನಗಳನ್ನು ಕಳಿತಾ ಇದ್ವಿ ಆದರೆ ನಮ್ಮ ಇಡೀ ಜೀವನದ ಎಲ್ಲಾ ಖುಷಿಯನ್ನಾ ಈ ಎರಡು ವರ್ಷದಲ್ಲಿ ಪಡದಿದೀವಿ ಅದಕ್ಕೆ ನೀವೇ ಕಾರಣ,ನಿಮ್ಮಂತ ಮಕ್ಕಳನ್ನ ಪಡಿದಿರೋ ನಿಮ್ಮ ತಂದೆ, ತಾಯಿಗಳೇ ಪುಣ್ಯವಂತ್ರು...

ಕಾರ್ತಿಕ್ ಕಣ್ಣಂಚಲ್ಲಿ ಸಣ್ಣ ಹನಿ ಇಳಿಯಿತು, ಅವನ ಸ್ವರದಲ್ಲಿ ಬದಲಾವಣೆ "ಎಲ್ಲರ ಜೀವನದಲ್ಲಿ ಅಂತಹ ಅದೃಷ್ಟ ಇರಲ್ಲಾ ಆಂಟಿ.. ತಂದೆ,ತಾಯಿ ನಾ ಪಡಿಯೋಕು ಏಳು ಜನ್ಮದ ಪುಣ್ಯ ಮಾಡಿರಬೇಕು, ಅವರ ಪ್ರೀತಿ,ವಾತ್ಸಲ್ಯಕ್ಕಾಗಿ ಎಷ್ಟೋ ಜನ ಅನಾಥರು ದಿನಂಪ್ರತಿ ಪರಿತಪಿಸ್ತಿದ್ದಾರೆ...ಆದರೆ ನಾನು ಯಾವ ಜನ್ಮದಲ್ಲಿ ಅದೇನು ಪುಣ್ಯ ಮಾಡಿ ಬಂದಿದೆನೋ ಏನೋ ನನಗೆ ಅಪ್ಪ ಅಮ್ಮನ ಪ್ರೀತಿ ನಾ ನನ್ನ ಪ್ರಾಣ ಸ್ನೇಹಿತರು ನೀಡ್ತಿದ್ದಾರೆ... ಕಾರ್ತಿಕ್ ತುಂಬಾ ಎಮೋಷನಲ್ ಆಗ್ತಾನೆ...ನನ್ನ ಪಾಲಿನ ದೇವರು ಅಂದ್ರೆ ಜೆಕೆ ಮಾತ್ರ".... 

ಜೆಕೆ ಮುಖದಲ್ಲಿ ಸಣ್ಣ ಕೋಪ" ಲೋ.. ಹೀಗೆಲ್ಲ ಮಾತಾಡ್ಬೇಡವೋ ನನಗೆ ಸಹಿಸೋಕೆ ಆಗೋಲ್ಲ"...

ಲೀಲಾ.. ಏನೂ!! ನೀನು ಅನಾಥಾನ ಎಂದು ಪ್ರಶ್ನೆ ಮಾಡಿದಳು

"ಇಲ್ಲ ಆಂಟಿ ಅವನು ಯಾವತ್ತೂ ಅನಾಥ ಅಲ್ಲ... ಆಗೋದು ಇಲ್ಲ ಅವನಿಗೆ ದೊಡ್ಡ ಕುಟುಂಬ ಇದೆ ಆದರೆ ಆ ಕುಟುಂಬ ಇವನಿಗೆ ಇವನದು ಅಂತಾ ಅನಸ್ತಾ ಇಲ್ಲ ಅಷ್ಟೆ... ಅವನ ಮುಖದಲ್ಲಿ ನೋವು ಎದ್ದು ತೋರುತ್ತಿತ್ತು 

ಕಾರ್ತಿಕ್ ಗೆ ತನ್ನ ತಪ್ಪಿನ ಅರಿವಾಗಿ" ಜೆಕೆ I am really sorry ಕಣೋ ಹೌದು ಆಂಟಿ ನಾನು ಎಮೋಷನಲ್ ಆಗಿ ಏನೇನೋ ಹೇಳ್ದೆ.. sorry ಎಂದು ಅವನ ಕೈಯನ್ನು ಹಿಡಿದು ಕೇಳಿದನು

ಸೂರ್ಯ : ಇನ್ನೊಂದು ಸಲ ಆ ತರ ಹೇಳು ಅವಾಗ ಇದೆ ನಿಂಗೆ... ಮಗನೆ

ಇವರ ಸ್ನೇಹ ಬಾಂಧವ್ಯವನ್ನು ನೋಡಿದ ಸುಂದರ್ "ವಾ!! ಇತರ ಗೆಳೆತನ ನಾ ನಾನು ಇದುವರೆಗೂ ನೋಡೇ ಇಲ್ಲ... ನಿಜವಾಗ್ಲೂ
ನಿಮ್ಮ ಗೆಳೆತನದ ಮೇಲೆ ಯಾವ ಕೆಟ್ಟ ದೃಷ್ಟೂನು ಬೀಳದೆ ಇರಲಿ... ಎಂದು ದೃಷ್ಟಿ ತೆಗೆದನು"

ಲೀಲಾ ಸ್ವಲ್ಪ ದುಃಖದಿಂದ ಹಾಗೆ ಈ ನಿಮ್ಮ ಅಂಕಲ್ ಆಂಟಿ ನಾ ಮರಿಬೇಡಿ.... 

ಅಯ್ಯೋ ಆಂಟಿ ಅದು ಹೇಗೆ ಸಾಧ್ಯ..ಆಂಟಿ ಆದಷ್ಟು ಬೇಗ ನೀವು ಇಂಡಿಯಾ ಗೆ ಬಂದು ಬಿಡಿ.. ಆಗ ನಿಮ್ಮನ್ನ ನಾವು ದಿನ ನೋಡ್ಬಹುದು ಎಂದನು ಒಂದು ಸಣ್ಣ ನಗುವಿನೊಂದಿಗೆ

ಸೂರ್ಯ ತನ್ನ ಕಣ್ಣುಗಳನ್ನು ಉರುಳಿಸಿ..ಹೀಗೆ ಎಮೋಷನ್ ಆಗಿ ಮಾತಾಡ್ತಾ ಇದ್ರೆ ನಾವು ಇವತ್ತು ಅಡುಗೆ ಮಾಡಿದ ಹಾಗೆ.. ಬೇಗ ನಡೀರಿ ಎಂದನು.. 

 ಸರಿ ಕಣ್ರೋ ಅದೇನು ಮಾಡ್ತೀರಾ ಮಾಡಿ ಆದರೆ ದಯವಿಟ್ಟು ನನ್ನ ಹೆಂಡ್ತಿ ಮಾಡೊರೀತಿ ಮಾಡ್ಬೇಡಿ... ಎಂದು ಕಿಚಾಯಿಸಿದನು

ಲೀಲಾ ಸ್ವಲ್ಪ ಕೋಪದಲ್ಲಿ "ಏನ್ರೀ ನಿಮ್ಮ ಮಾತಿನ ಅರ್ಥ ಅಂದ್ರೆ ನಾನು ಚೆನ್ನಾಗಿ ಮಾಡೋಲ್ವ ಹ್!"..

ಆಗ ಜೆಕೆ ಲೋ ಬೇಗ ಎಸ್ಕೇಪ್ ಆಗ್ರೋ ಇಲ್ಲ ಆಂಟಿ ಅಂಕಲ್ ಜಗಳದಲ್ಲಿ ನಾವು ಬಡವ ಆಗ್ತೀವಿ... ಎಂದು ಹೇಳಿ ಮೂವರು ಅಲ್ಲಿಂದ ಅಡುಗೆ ಮನೆ ಕಡೆಗೆ ಹೆಜ್ಜೆಗಳನ್ನು ಕಿತ್ತಿದರು 

 ಸ್ಪಲ್ಪ ಸಮಯದ ನಂತರ ಎಲ್ಲರೂ  ಸೇರಿ ಮೂವೀ ನೋಡ್ತಾ, ಊಟ ಮಾಡಿ ಸ್ಪಲ್ಪ ಹೊತ್ತು ಅಂಕಲ್ ಆಂಟಿ ಜೊತೆ ಟೈಮ್ ಪಾಸ್ ಮಾಡಿ ನಂತರ ತಮ್ಮ ರೂಮ್ ಗೆ ಬರ್ತಾರೆ ...

ಬೇಗ ಬಟ್ಟೆ ಎಲ್ಲಾ ಪ್ಯಾಕ್ ಮಾಡ್ಕೊಳ್ರೋ... ಏರ್ಪೋರ್ಟ್ ಗೆ ಸ್ಪಲ್ಪ ಬೇಗನೆ ಹೋಗ್ಬೇಕು ಚೇಕ್ಕಿಂಗ್ ಅದು ಅಂತ ತುಂಬಾ ಟೈಮ್ ಹೋಗುತ್ತೆ ಕಾರ್ತಿಕ್ ಇಬ್ಬರಿಗೂ ಹೇಳುತ್ತಾ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿರುತ್ತಾನೆ

ಅದಕ್ಕೆ ಜೆಕೆ ಹಾ! ಸರಿ ಕಣೋ ಎಂದು ತಲೆಯಾಡಿಸುತ್ತಾನೆ 
ಆದರೆ ಸೂರ್ಯ ಮತ್ತೆ ಯೋಚನೆಯಲ್ಲಿ ಮುಳುಹೋಗಿರುತ್ತಾನೆ, 

"ಸೂರ್ಯ ನಂಗೆ ಗೊತ್ತು ಕಣೋ ನೀನು ಏನು ಯೋಚನೆ ಮಾಡ್ತಿದಿಯಾ ಅಂತ , ನಾಳೆ ಹೋಗ್ತಿದೀವಿ ಅಲ್ವಾ".. ಎಂದು ಜೆಕೆ ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾನೆ 

ಸೂರ್ಯ : "ಹೌದು ಕಣೋ ಅಲ್ಲಿ ಅಮ್ಮು ಕೂಡ ಅಪ್ಸೆಟ್ ಆಗಿದ್ದಾಳೆ.. ಪಾಪ ನನಗಿಂತ ಅವಳಿಗೆ ಟೆನ್ಷನ್ ಜಾಸ್ತಿ ಆಗಿದೆ"..

ಜೆಕೆ : "ಸೂರ್ಯ ಅಮ್ಮು ಯಾವತಿದ್ರೂ ನಿನ್ನವಳೇ.. ಇಂಡಿಯಾ ಗೆ ಹೋದ ತಕ್ಷಣ
ನಾನು ನಿಮ್ಮ ವಿಷಯವನ್ನು ಮನೆಯವರ ಹತ್ರಾ ಮಾತಾಡ್ತೀನಿ ಹಾಗೆ ಸ್ವಾತಿ ನು ಹೇಳಿದ್ಲು ಅವರು ಅಮ್ಮು ನಾ ನೋಡ್ಕೊಂಡು ಹೋದಮೇಲೆ  ಯಾವ ರೆಸ್ಪಾನ್ಸ್ ಮಾಡಿಲ್ವಂತೆ
So.. ಟೆನ್ಷನ್ ಮಾಡ್ಕೊಳ್ಳೋ ಅಗತ್ಯಾನೆ ಇಲ್ಲ" ಎಂದು ಅವನಲ್ಲಿ ಭರವಸೆ ತುಂಬಿಸಲು ಪ್ರಯತ್ನಿಸಿದನು

ಆಗ ಕಾರ್ತಿಕ್ ಸಹ "ಹೌದು ಕಣೋ ಸೂರ್ಯ ಜೆಕೆ ಇಷ್ಟು ಹೇಳ್ತೀದಾನೆ.. ನೀನು ಅವನ ಮೇಲೆ ನಂಬಿಕೆ ಇಡೋ"... 

ಸೂರ್ಯ ನಗುವಿನೊಂದಿಗೆ ಸರಿ ಕಣೋ ಎಂದು ನುಡಿದನು 
ಅದಾದ ಮೇಲೆ ಬಟ್ಟೆ ಎಲ್ಲಾ ಪ್ಯಾಕ್ ಮಾಡ್ಕೊಂಡು ಮೂವರು ಮಲಗಿಕೊಳ್ತಾರೆ...
     
           ******************

ಮರುದಿನ ಬೆಳಿಗ್ಗೆ  ಸುಂದರ್ ಹಾಗು ಲೀಲಾ ಆಂಟಿ ಗೆ ವಿದಾಯ ಹೇಳಿ ಅಲ್ಲಿಂದ ಫ್ಲೈಟ್ ನಲ್ಲಿ ಹೊರಟು ಇಂಡಿಯಾ ಗೆ ಬಂದು ರೀಚ್ ಆಗ್ತಾರೆ... ಆದರೆ ಅವತ್ತು ಅವರು ನೈಟ್ ಲೇಟ್ ಆಗಿ ಮನೆಗೆ ಬಂದಿರೋದ್ರಿಂದ ಅವತ್ತು ಸೂರ್ಯ ನ ಮನೆಯಲ್ಲಿ ಉಳಿದುಕೊಳ್ತಾರೆ..

ಬೆಳಿಗ್ಗೆ ಮೂವರು ಬೆಡ್ ಮೇಲಿಂದ ಎದ್ದ ತಕ್ಷಣ
ಸುಮತಿ ಅವರ ಕಣ್ಣ ಮುಂದೆ ಪ್ರತ್ಯಕ್ಷವಾದಳು ಗುಡ್ ಮಾರ್ನಿಂಗ್ ಮಕ್ಕಳೇ...
ನನಗಂತೂ ನಿಮ್ಮನ್ನ ನೋಡಿ ಎಷ್ಟು ಸಂತೋಷ ಆಗ್ತಿದೆ ಗೊತ್ತಾ ಎಂದಳು ಸಂತೋಷದಲ್ಲಿ 

ಜೆಕೆ ಗೆ ಸುಮತಿ ಅತ್ತೆ ನಾ ನೋಡಿ ಅವನಿಗೆ ಹೇಳಲಾಗದಷ್ಟು ಸಂಭ್ರಮ

ಜೆಕೆ : "ಅತ್ತೆ... ಈ ನಿಮ್ಮ ಮುದ್ದು ಮುಖ ನಾ ಈ ಎರಡು ವರ್ಷ ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ"... 

ಸುಮತಿ : ನಾನು ಅಷ್ಟೆ ಕಂದ ಅದರಲ್ಲೂ ನಿನ್ನ ಆ ತುಂಟ ಮಾತುಗಳನ್ನ ನಾನಂತು ದಿನವೂ ಮಿಸ್ ಮಾಡ್ಕೋತಿದ್ದೆ ಗೊತ್ತಾ 

ಇವರಿಬ್ಬರ ಮಾತುಗಳನ್ನು ಕೇಳುತ್ತಿದ್ದ ಸೂರ್ಯ ಸ್ವಲ್ಪ ಅಸುಹೆ ಯಿಂದ "ಅಮ್ಮ ನಾವು ಕೂಡ uk ಗೆ ಹೋಗಿದ್ವಿ ಎಂದು ನುಡಿದ" 

"ಹೌದು ಕಂದ ನಿಮ್ಮನ್ನು ಕೂಡ ತುಂಬಾ ಮಿಸ್ ಮಾಡ್ಕೊಂಡೆ ಸರಿ ಈಗ ಬೇಗ ಸ್ನಾನ ಮಾಡಿ ಬನ್ನಿ ಟಿಫನ್ ಗೆ ರೆಡಿ ಮಾಡಿದೀನಿ"...ಎಂದು ಸುಮತಿ ಮುಗುಳ್ನಗೆಯೊಂದಿಗೆ ನುಡಿದಳು

ಸೂರ್ಯ ಉತ್ಸಾಹದಿಂದ ಟಿಫನ್ 😃 ವಾವ್! ಎಂದು ನುಡಿದನು

ಕಾರ್ತಿಕ್ : ಆಂಟಿ ನಿಮ್ಮ ಕೈಲಿ ಮಾಡಿರೋ ಅಡುಗೆನ ನಾನಂತು ತುಂಬಾ ಮಿಸ್ ಮಾಡ್ಕೊಂಡೆ ಗೊತ್ತಾ... 

ಜೆಕೆ : "ನಿಜ ಅತ್ತೆ ನಿಜವಾಗ್ಲೂ ನಾವೆಲ್ಲಾ ಈ ಕೈ ರುಚಿ ನಾ ದಿನವೂ ನೆನಸ್ಗೊಳ್ತಿದ್ವಿ ,ನನಗೆ ಈಗಲೇ ತಿನ್ಬೇಕು ಅನಸ್ತಿದೆ"

ಸುಮತಿ :  ಸರಿ ಹಾಗಿದ್ರೆ ಬೇಗ ರೆಡಿ ಆಗಿ ಬನ್ನಿ ಇವತ್ತು ದೋಸೆ ಮಾಡಿದೀನಿ ಅದು ನಮ್ಮ ಕಾರ್ತಿಕ್ ಗೆ ಫೇವರೆಟ್ ಅಲ್ವಾ ಅದಿಕ್ಕೆ ಎಂದು ಕಾರ್ತಿಕ್ ನೆಡೆಗೆ ನೋಟವನ್ನು ಬೀರುತ್ತಾ ಹೇಳಿದಳು

"ವಾವ್!! ಆಂಟಿ ಯು ಆರ್ ದೀ ಬೆಸ್ಟ್ ಬೇಗ ಬೇಗ ಬನ್ನಿ..ಎಂದು ಹೇಳಿ ಬೆಡ್ ninda ಕೆಳಗೆ ಇಳಿದು ಅವಸರದಲ್ಲಿ ರೆಡಿ ಆಗೋಕೆ ಬಾತ್ ರೂಮ್ ಗೆ ಹೋಗ್ತಾನೆ"

ಸುಮತಿ : ಅಯ್ಯೋ ನಿಧಾನ ಪುಟ್ಟ ಬೀಳ್ತಿಯ ಎಂದು ನಕ್ಕಳು

ಜೆಕೆ : "ಲೋ.. ಸಮಾಧಾನ ಕಣೋ ನಿನ್ನ ದೋಸೆ ಎಲ್ಲಿ ಓಡಿ ಹೋಗೋಲ್ಲ" 
ಮೂರು ಮಂದಿ ನಗುವಿನಲ್ಲಿ ಸೇರಿದರು

ಸುಮತಿ : ಸರಿ ಬೇಗ ರೆಡಿ ಆಗಿ ಬನ್ನಿ ಅಂತ ಸುಮತಿ ಅಲ್ಲಿಂದ ಹೋರಡ್ತಾರೇ...

ಸ್ಪಲ್ಪ ಸಮಯದ ನಂತರ ಮೂವರು ಫ್ರೆಶ್ ಅಪ್ ಆಗಿ ಮಹಡಿ ಇಂದ ಕೆಳಗಡೆ ಇಳಿದು ಬರ್ತಾರೆ ಆಗ  ಶೇಖರ್ ಒಂದು ಮುಗುಳ್ನಗೆಯೊಂದಿಗೆ ಗುಡ್ ಮಾರ್ನಿಗ್ ಬಾಯ್ಸ್.. ಮೂವರು ವಿಶ್ ಮಾಡಿ ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಳ್ತಾರೇ"...

ಕಾರ್ತಿಕ್ ಉತ್ಸಾಹದಿಂದ ಆಂಟಿ ಬೇಗ ಬೇಗ ಟಿಫನ್ ತಗೊಂಡು ಬನ್ನಿ... ಸರಿ ತಂದೆ ಪುಟ್ಟ ಸುಮತಿ ನಾಲ್ಕು ಜನಕ್ಕೆ ಟಿಫನ್ ನೀಡ್ತಾಳೆ...

ಸುಮತಿ : "ನಿನ್ನೆ ಇವರು ಅದು ಯಾವಾಗ ಎದ್ದು ನಿಮ್ಮನ್ನ ಕರಿಯೊಕೆ ಹೋದ್ರು ಅಂತಾ ಗೊತ್ತೇ ಆಗ್ಲಿಲ್ಲ ಕಣ್ರೋ"...

ಶೇಖರ್ : ಹಾ!! ಅದೇಗೆ ಗೊತ್ತಾಗುತ್ತೆ ಕುಂಭಕರ್ಣನ ತರ ನಿದ್ದೆ ಮಾಡ್ತಿದ್ರೆ... ಎಂದು ಸುಮತಿಯನ್ನು ಕಿಚಾಯಿಸಿದ

ಸುಮತಿ ಕೋಪದಿಂದ ಒಂದು ಹುಬ್ಬನ್ನು ಹಾರಿಸುತ್ತಾ ಏನ್ರೀ ನಾನು ಕುಂಭಕರ್ಣನ ಹ್!!..  

ಶೇಖರ್ ಸುಮತಿ ಮುಖವನ್ನು ನೋಡುತ್ತಿದ್ದಂತೆ ಭಯ ಬಿದ್ದು ಅಯ್ಯೋ ಹಾಗೆ ಸುಮ್ನೇ 
ತಮಾಷೆಗೆ ಹೇಳ್ದೆ ಕಣೆ .. 

ಸೂರ್ಯ : ಅಪ್ಪ ಅಮ್ಮನ್ನ ನಾವು ಇಲ್ಲ ಅಂತಾ ತುಂಬಾ  ಗೋಳು ಹೊಯ್ಕೊಂಡ್ರ ಹೇಗೆ ?? ಎಂದು ತನ್ನ ಮಾತುಗಳನ್ನು ಸೇರಿಸುತ್ತಾನೆ

ಶೇಖರ್ : ಅಯ್ಯೋ ನಿಮ್ಮ ಅಮ್ಮನ್ನ ಗೋಳು ಹೊಯ್ಕೊಂಡ್ರೆ ಮುಗೀತು ನನ್ನ ಕಥೆ

ಅದಕ್ಕೆ ಜೆಕೆ ಸಹ ಮಾವ UK ಲೀ ಹೂಡಗಿರು ಏನು ಸಖತ್ ಆಗಿ ಇದ್ರೂ ಗೊತ್ತಾ...

ಶೇಖರ್ ಕಣ್ಣುಗಳನ್ನು ಅರಳಿಸಿ ಹೌದಾ!... ಅಂತ ಸುಮತಿ ಯತ್ತ ದೃಷ್ಟಿ ಹಾಯಿಸಿದಾಗ ಸುಮತಿಯ ಕಣ್ಣಲ್ಲಿನ ಕೋಪದ ದರ್ಶನ ಆಗುತ್ತಿದ್ದಂತೆ... ಅಯ್ಯೋ ಅದನ್ನ ನನಗ್ಯಾಕೋ ಹೇಳ್ತಿದ್ದಿಯ ನೀವೇ ಮೂವರು ಒಂದೊಂದು ನೋಡ್ಕೋ ಬೇಕು ತಾನೇ ನನ್ನ ಕಡೆ ಇಂದ ಅಂತೂ ಫುಲ್ ಗ್ರೀನ್ ಸಿಗ್ನಲ್ ಸಿಗ್ತಾ ಇತ್ತು .. 

ಸೂರ್ಯ : ಅಪ್ಪ ಅದರ ಬಗ್ಗೆ ತಲೆ ಕೇಡಸ್ಗೋಬೇಡಿ... ನಾವಿಬ್ಬರೂ...

ಗಾಬರಿಗೊಂಡ ಜೆಕೆ ಮಧ್ಯ ಬಂದು ಸೂರ್ಯ ದೋಸೆ ತುಂಬಾ ಚೆನ್ನಾಗಿದೆ ಅಲ್ವೇನೋ.... ಸುಮ್ನೆ ತಿನ್ನು

ಸುಮತಿಗೆ ದಿಢೀರನೆ ಏನೋ ನೆನಪಾಗಿ "ಅಯ್ಯೋ ನಿಮ್ಮಗಳ ಮಾತಿನ ಮಧ್ಯೆ ಅಣ್ಣ ಕಾಲ್ ಮಾಡಿರೋ ವಿಷಯ ಮರತೇ ಹೋಯ್ತು.. ಬೇಗ ಟಿಫನ್ ಮಾಡಿ ಮಕ್ಕಳೇ ಅಮ್ಮನ ಮನೆಗೆ ಹೋಗ್ಬೇಕು.. ಇವತ್ತು ಮೋಹನ್ ರಾವ್ ಫ್ಯಾಮಿಲಿ ಅವರು ಬರ್ತಿದ್ದಾರೆ"... 

ಇದನ್ನು ಕೇಳಿದ ಜೆಕೆ,ಸೂರ್ಯ,ಕಾರ್ತಿಕ್ ಮೂವರು ಆತಂಕಕ್ಕೆ ಒಳಗಾಗುತ್ತಾರೆ, ಒಬ್ಬರಿಗೊಬ್ಬರು ಮುಖವನ್ನು ನೋಡಲು ಪ್ರಾರಂಬಿಸಿದರು 

ಜೆಕೆ ಆತಂಕದಿಂದಲೇ "ಅತ್ತೆ.. ಎನ್ ಹೇಳ್ತಿದ್ದೀರ ಅವರು ಮೊನ್ನೇನೆ ಬಂದಿದ್ರು ಅಲ್ವಾ ಮತ್ತೆ ಯಾಕೆ"??

ಶೇಖರ್ : "ಯಾಕೆ ಅಂದ್ರೆ ಅವರಿಗೆ ಈ ಸಂಬಂಧ ಇಷ್ಟ ಆಗಿದೆ ಅಂತೆ ಅದಿಕ್ಕೆ ಮತ್ತೆ ಮಾತಾಡೋಕೆ ಬರ್ತಿದ್ದಾರೆ"...

ಸೂರ್ಯನಿಗಂತು ಆಕಾಶನೇ ತಲೆ ಮೇಲೆ ಕಳಚಿ ಬಿದ್ದಂತ ಅನುಭವ...ಕಾರ್ತಿಕ್ ಸೂರ್ಯನ ಮುಖವನ್ನು ಗಮನಿಸ್ತಾನೆ...ಅವನ ಮನದ ನೋವು ಇವನಿಗೆ ಅರ್ಥವಾಗುತ್ತೆ..

ದಿಢೀರನೆ ಎದ್ದು ನಿಂತು ಅತ್ತೆ ಬನ್ನಿ ಈಗಲೇ ಮನೆಗೆ ಹೋಗೋಣ ಮೂವರ ಮುಖದಲ್ಲಿ ಆತಂಕ ಮನೆ ಮಾಡಿತ್ತು

ಸುಮತಿಗೆ ಇದು ಗೊಂದಲವೆನಿಸಿದರು "ಹೇ! ಟಿಫನ್ ಆದ್ರೂ ಮಾಡ್ರೋ ಯಾಕೆ ಇಷ್ಟು ಅರ್ಜೆಂಟ್ ಅವರು ಇನ್ನೂ ಬಂದಿರೋಲ್ಲ"...

ಶೇಖರ್ : "ಹೌದು ಕಣ್ರೋ ಯಾಕೆ ನೀವು ಮೂವರು ಇಷ್ಟು ಟೆನ್ಷನ್ ಅಗಿದಿರಾ"..

ಜೆಕೆ :ಮಾವ ಅದೆಲ್ಲ ಆಮೇಲೆ ಹೇಳ್ತೀನಿ ಈಗ ಹೊರಡೋಣ ಬನ್ನಿ ಅಂತ ಎಲ್ಲರೂ ಅಲ್ಲಿಂದ ಹೋರಡ್ತಾರೇ..

         
           ಮುಂದುವರೆಯುವುದು......


🌸ಲೇಖಕರ ನೋಟ🌸:

ಈ ಕಥೆ ಕುಟುಂಬ, ಪ್ರೀತಿ ಮತ್ತು ವಿದಾಯದ ಕ್ಷಣಗಳ ಮೇಲೆ ನಿಂತಿದೆ. ಓದುಗರೇ, ನೀವು ಪಾತ್ರಗಳ ಎಮೊಷನ್ಸ್, ಅವರ ಹೃದಯಸ್ಪರ್ಶಿ ಕ್ಷಣಗಳು ಮತ್ತು ಕಥೆಯ ಮುಂದಿನ ಟ್ವಿಸ್ಟ್ ಅನ್ನು ಬೇಗ ಓದಲು ಇಚ್ಛಿಸುತ್ತಿದ್ದರೆ, ನಾನು ಮುಂದಿನ ಅಧ್ಯಾಯವನ್ನು ಈಗಾಗಲೇ ಪ್ರತಿಲಿಪಿ ಅಪ್‌ನಲ್ಲಿ ಅಪ್ಲೋಡ್ ಮಾಡಿದ್ದೇನೆ.

ಅಲ್ಲಿ ನೀವು ಕಥೆಯನ್ನು ನಿರಂತರವಾಗಿ ಅನುಭವಿಸಲು, ನನ್ನನ್ನು ಪ್ರತಿಲಿಪಿ ನಲ್ಲಿ ಫಾಲೋ ಮಾಡೋದು ತುಂಬಾ ಮುಖ್ಯ.
ಮಾಡಿ, ಮುಂದಿನ ಭಾಗವನ್ನು ತಪ್ಪದೇ ಓದಿ!

ನಿಮ್ಮ ಒಂದು ಫಾಲೋ ನನ್ನಿಗೆ ತುಂಬಾ ಅಗತ್ಯ. ಅದು ನನಗೆ ನಿಮ್ಮಲ್ಲಿ ತಕ್ಷಣ ಸಂಪರ್ಕವಿದೆ ಎಂಬ ಭರವಸೆ, ನನ್ನ ಕಥೆ ಮುಂದೆ ಸಾಗಲು ಪ್ರೇರಣೆ.
ನೀವು ಫಾಲೋ ಮಾಡದಿದ್ದರೆ, ನಾನು ನನ್ನ ಹೃದಯದ ಸುತ್ತಲೂ ಸುತ್ತಿ ಬರುವ ಈ ಕಥೆಯ ಅಂತರಂಗವನ್ನು ನೀವು ನೇರವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ.

ಫಾಲೋ ಮಾಡಿ, ನನ್ನ ಕಥೆಯ ಮುಂದಿನ ಭಾಗವನ್ನು ತಪ್ಪದೇ ಓದಿ – ನಿಮ್ಮ ಪ್ರತಿಕ್ರಿಯೆ ನನ್ನ ಹೃದಯಕ್ಕೆ ಜೀವಂತಿಕೆ ನೀಡುತ್ತದೆ.