Abhinayanaa - 27 in Kannada Love Stories by S Pr books and stories PDF | ಅಭಿನಯನಾ - 27

The Author
Featured Books
Categories
Share

ಅಭಿನಯನಾ - 27

  ಸಾರಿಕ ತೇಜು ಜೊತೆಗೆ ಹೊರಟು ಹೋದಮೇಲೆ.  ಅಭಿ ಆಫೀಸ್ ಅಲ್ಲಿ ಅವಳ ಬಗ್ಗೆ ಯೋಚ್ನೆ ಮಾಡ್ತಾ ಇದ್ದು ಬಿಡ್ತಾನೆ , ಹಾಗೇ ಎಷ್ಟೋತ್ತು ಅವಳ ಆಲೋಚನೆ ಅಲ್ಲೇ ಇದ್ದು ಬಿಟ್ಟನೋ ಅವನಿಗೆ ಗೊತ್ತಿಲ್ಲಾ. 

ಪ್ರಿಯಾ ಆಫೀಸ್ ಗೆ ಬಂದು ಅಭಿ ನ ನೋಡಿ ಅಭಿ ಅಂತ ಕರೀತಾಳೆ. ಅಭಿ ಆಲೋಚನೆಗಳಿಂದ ಹೊರಗೆ ಬಂದು ಪ್ರಿಯಾ ಕಡೆಗೆ ನೋಡ್ತಾನೆ.

ಪ್ರಿಯಾ,,, ಅಭಿ ಕಣ್ಣುಗಳನ್ನ ನೋಡಿ , ಅಭಿ ಯಾಕೋ ಏನಾಯ್ತು, ಕಣ್ಣೆಲ್ಲ ಕೆಂಪಾಗಿದೆ.

ಅಭಿ,,, ಸ್ವಲ್ಪ ನೋವಿನ ಧ್ವನಿ ಅಲ್ಲಿ ಏನಿಲ್ಲಾ, ನೀನು ಬಂದ ವಿಷಯ ಏನ್ ಹೇಳು.

ಪ್ರಿಯಾ,,, ಲೋ ನಿನ್ನ ಸಾರಿಕ ಬಂದಾಗಿಂದ ಅವಳ ವಿಷಯ ಹೇಳ್ದಗಿಂದ, ತುಂಬಾ ನೋವನ್ನ ಅನುಭವಿಸ್ತಾ ಇದ್ದಿಯಾ. ಕೆಲಸ ನೇ ಬೇಡ ಅಂತ ಹೋಗ್ತಾ ಇದ್ದವಳು ನಿನ್ನ ಒಂದು ಮಾತಿಗೆ ವಾಪಸ್ಸು ಬಂದು ನೀನು ಹೇಳಿದನ್ನೆಲ್ಲ ಕೇಳಿದ್ಲು, ಕೆಲಸ ಮಾಡೋಕು ಒಪಿಕೊಂಡ್ಲು ನಿಜ ಹೇಳೋ ಸಾರಿಕ ನಿನಗೆ ಮೊದಲೇ ಪರಿಚಯ ಅಲ್ವಾ, ಇಷ್ಟು ವರ್ಷದಲ್ಲಿ ಯಾವತ್ತೂ ನಿನ್ನ ಕಣ್ಣಲ್ಲಿ ಕಣ್ಣೀರು ನೋಡಿದವಳಲ್ಲ ನಾನು ಅದ್ರೆ ಇವತ್ತು ನಿನ್ನ ಕಣ್ಣಲ್ಲಿ ಕಣ್ಣೀರು ನೋಡಿದೆ. ನಿಜ ಹೇಳು ಅಭಿ ಏನ್ ಆಯಿತು, ಯಾಕಿಷ್ಟು ನೋವನ್ನ ಅನುಭವಿಸ್ತಾ ಇದ್ದಿಯಾ.

ಅಭಿ,,, ಎದ್ದು ಪ್ರಿಯಾ ಮುಂದೆ ನಿಂತು, ಮನಸ್ಸಿಗೆ ಯಾಕೋ ನೆಮ್ಮದಿ ಇಲ್ಲಾ ಪ್ರಿಯಾ, ಸೂಪರ್ ಮಾರ್ಕೆಟ್ ನೋಡ್ಕೋ ನಾನ್ ಹೋಗ್ತಾ ಇದ್ದೀನಿ, ಅಂತ ಹೇಳಿ ಅಲ್ಲಿಂದ ಪ್ರಿಯಾ ಅಭಿ ಎಲ್ಲಿಗೋ ಅಂತ ಕೇಳ್ತಾ ಇದ್ರು ಏನು ಹೇಳ್ದೆ ಅಲ್ಲಿಂದ ಹೊರಟು ಹೋಗ್ತಾನೆ..

*********

ತೇಜು,,,ಸಾರಿಕ ಹತ್ತಿರ ಬಾ ಸಾರಿಕ ಹೋಗಿ ಲಂಚ್ ಮಾಡ್ಕೊಂಡು ಬರೋಣ.

ಸಾರಿಕ,,, (ಮನಸಲ್ಲಿ ಅಭಿ ಬಗ್ಗೆ ಯೋಚ್ನೆ ಮಾಡ್ತಾ ಇದ್ದವಳಿಗೆ ಊಟ ಮಾಡೋಕೆ ಮನಸ್ಸೇ ಇರೋದಿಲ್ಲ, ) ನೀವು ಹೋಗಿ ಲಂಚ್ ಮಾಡಿ ನನಗೆ ಹಸಿವಿಲ್ಲ.

ಪ್ರಿಯಾ,,, (ಬೆಳಿಗ್ಗೆ ನೋಡಿದ ಸಾರಿಕ ಗು ಅಭಿ ನ ನೋಡಿದಮೇಲೆ ಸಾರಿಕ ಗು ಇರೋ ವ್ಯತ್ಯಾಸ ತುಂಬಾ ಇದೆ, ಅಭಿ ಕೂಡ ಸಾರಿಕ ನ ನೋಡಿದ ಮೇಲೆ ಅವನು ಅವನಾಗಿ ಇಲ್ಲಾ ಅನ್ನೋದು ) ಹಸಿವಿಲ್ಲ ಅಂದ್ರೆ ಹೇಗೆ ಬಂದು ನಮ್ ಜೊತೆಗೆ ಕಂಪನಿ ಆದ್ರು ಕೊಡು ಬಾ ಅಂತ ಹೇಳಿ ಸಾರಿಕ ಎಷ್ಟು ಹೇಳಿದ್ರು ಕೇಳದೆ ಕರೆದುಕೊಂಡು ಹೋಗ್ತಾರೆ ಲಂಚ್ ಮಾಡೋಕೆ. 

ಸಾರಿಕ ಳ ಪರಿಸ್ಥಿತಿ ತಿಳಿದ ಅಭಿ ಸೂಪರ್ ಮಾರ್ಕೆಟ್ ಅಲ್ಲಿ ಇರೋಕೆ ಬೇಜಾರ್ ಆಗಿ ಫ್ರೆಂಡ್ ರೂಮ್ ಗೆ ಹೊರಟು ಹೋಗ್ತಾನೆ,, 

ಅಭಿ ಬಂದಿದ್ದನ್ನ ಅವನ ಫ್ರೆಂಡ್ ಜೆ ನೋಡಿ ಖುಷಿಯಾಗಿ ಮಚ್ಚಾ ಇಷ್ಟು ದಿನ ಆದಮೇಲೆ ಈ ರೂಮ್ ನೆನಪಾಯ್ತಾ ಹೇಗಿದ್ದೀಯ ಅಂತ ಕೇಳ್ತಾ ಅಭಿ ಮುಖ ನೋಡ್ತಾನೆ. ಅಭಿ ಮುಖ ನ ನೋಡಿ, ಅವನ ಮನಸ್ಥಿತಿ ಸರಿ ಇಲ್ಲಾ ಅಂತ ಅನ್ಕೊಂಡು ಬಾ ಮಚ್ಚಾ ಕುತ್ಕೋ ಅಂತ ಹೇಳ್ತಾನೆ.

ಅಭಿ ನೆಲದ ಮೇಲೆ ಹಾಸಿದ್ದ ಬೆಡ್ ಮೇಲೆ ಕೂತು ಮಚ್ಚಾ, ಮನಸ್ಸು ಯಾಕೋ ಸರಿ ಇಲ್ಲಾ ಅಂತ ಹೇಳ್ತಾನೆ. ಜೆ, ಸರಿ ಇರೋ ಬಂದೆ ಅಂತ ಹೇಳಿ ಅಲ್ಲಿಂದ ಎದ್ದು ಹೊರಗೆ ಹೋಗ್ತಾನೆ. 

ಜೆ ಹೊರಗಡೆ ಬಂದು, ಮೊಬೈಲ್ ತಗೊಂಡು ಪ್ರಿಯಾ ಗೆ ಕಾಲ್ ಮಾಡ್ತಾನೆ.

ವರ್ಕ್ ಮಾಡ್ತಾ ಇದ್ದಾ ಪ್ರಿಯಾ ಜೆ ಕಾಲ್ ಮಾಡೋದನ್ನ ನೋಡಿ ಕಾಲ್ ಪಿಕ್ ಮಾಡಿ, ಹೇಳೋ ಏನ್ ಕಾಲ್ ಮಾಡಿದ್ದು ಆಫೀಸ್ ಗೆ ಹೋಗಿಲ್ವಾ.

ಜೆ,,, ಇಲ್ವೆ ಇವತ್ತು ವರ್ಕ್ ಫ್ರಮ್ ಹೋಮ್ ಮಾಡ್ತಾ ಇದ್ದೆ.

ಪ್ರಿಯಾ,,, ಹೌದ ಮತ್ತೆ ಹೇಳೇ ಇಲ್ಲಾ, ಸರಿ ಊಟ ಮಾಡಿದ?

ಜೆ,,, ಇಲ್ವೆ ಮಾಡಬೇಕು, ಅದಕ್ಕೂ ಮೊದಲು ನಿನ್ನ ಹತ್ತಿರ ಸ್ವಲ್ಪ ಮಾತಾಡಬೇಕು , ಫ್ರೀ ಇದ್ದಿಯಾ?

ಪ್ರಿಯಾ,,, ಒಂದು ನಿಮಿಷ ಅಂತ ಹೇಳಿ ಆಫೀಸ್ ಅಲ್ಲಿ ಯಾರು ಇಲ್ಲಾ ಅಂತ ಆಫೀಸ್ ಹತ್ತಿರ ಬಂದು ಅ ಹೇಳೋ ಏನ್ ವಿಷಯ?

ಜೆ,,, ಏನಿಲ್ಲಾ ಅದು ಸೂಪರ್ ಮಾರ್ಕೆಟ್ ಅಲ್ಲಿ ಏನಾದ್ರೂ ಪ್ರಾಬ್ಲಮ್ ಆಯ್ತಾ?

ಪ್ರಿಯಾ,,, ಏನು ಸೂಪರ್ ಮಾರ್ಕೆಟ್ ಅಲ್ಲಿ ಪ್ರಾಬ್ಲಮ್ ಅ ಯಾರ್ ಹೇಳಿದ್ದು ನಿನಗೆ, ಅ ರೀತಿ ಏನು ಇಲ್ಲಾ.

ಜೆ,,, ಹೌದ, ಮತ್ತೆ ಅಭಿ ತುಂಬಾ ಡಲ್ ಆಗಿ ಇದ್ದಾನೆ, ಅದಕ್ಕೆ ಕೇಳ್ದೆ.

ಪ್ರಿಯಾ,,,, ಶಾಕ್ ಆಗಿ ಏನು ಅಭಿ ಡಲ್ ಆಗಿ ಇದ್ದಾನ, ನಿನಗೆ ಯಾರೋ ಹೇಳಿದ್ದು, ಅವನು ನಿನಗೆ ಹೇಗೆ ಪರಿಚಯ, ನಿನಗೆ ಅವನು ಗೊತ್ತಾ?

ಜೆ,,, ಅಭಿ ನನಗೆ ತುಂಬಾ ವರ್ಷದಿಂದ ಪರಿಚಯ, ಹೇಗೆ ಅಂತ ಈಗ ಹೇಳೋ ಟೈಮ್ ಇಲ್ಲಾ. ಅವನು ತುಂಬಾ ಡಿಸ್ಟರ್ಬ್ ಆಗಿ ಇದ್ದಾನೆ ಏನಾಯ್ತು ಅಂತ ನಿನಗೆ ಗೊತ್ತಾ? ಗೊತ್ತಿದ್ರೆ ಹೇಳು.

ಪ್ರಿಯಾ,,, ಹೌದ ಸರಿ ಹೇಳ್ತಿನಿ ಇವಾಗ ಅಭಿ ಎಲ್ಲಿ ಇದ್ದಾನೆ? ಅಂತ ಮೊದಲು ಹೇಳು.

ಜೆ,,, ಇವಾಗ ಅಭಿ ನನ್ನ ಜೊತೆಗೆ ನನ್ನ ರೂಮ್ ಅಲ್ಲಿ ಇದ್ದಾನೆ, ಬಟ್ ಅವನು ಇರೋ ಸ್ಥಿತಿ ಗೆ ಅವನನ್ನ ಏನು ಕೇಳೋಕೆ ಆಗಲ್ಲಾ, ಅದಕ್ಕೆ ನಿನ್ನ ಕೇಳ್ತಾ ಇದ್ದೀನಿ ಏನಾಯ್ತು ಅಂತ ಹೇಳು.

ಪ್ರಿಯಾ,,, ನಿನ್ ಜೊತೆಗೆ ಇದ್ದಾನ, ಸರಿ. ಅದು ಏನು ಇಲ್ವೋ ನೆನ್ನೆ ತೇಜು ನ ಡ್ರಾಪ್ ಮಾಡೋವಾಗ ಅವರಪ್ಪ ಅವರ ಮನೇಲಿ ಬಾಡಿಗೆಗೆ ಹೊಸದಾಗಿ ಬಂದು ಇರೋ ಒಂದು ಮ್ಯಾರೀಡ್ ಹುಡುಗಿಗೆ ಜಾಬ್ ಬೇಕು ಅಂತ ಕೇಳಿದ್ರು. ಆಮೇಲೆ ಅವರನ್ನ ಬೆಳಿಗ್ಗೆ ಸೂಪರ್ ಮಾರ್ಕೆಟ್ ಗೆ ಕರ್ಕೊಂಡು ಬಂದೆ. ಅಭಿ ಅ ಲೇಡಿ ಫಾಸ್ಟ್ ಬಗ್ಗೆ ತೇಜು ಅವರ ಅಪ್ಪ ಅಮ್ಮ ಹೇಳಿದ ವಿಷಯ ಹೇಳ್ದೆ, ಅವನಿಗೂ ಬೇಜಾರಾಯಿತು, ಬಟ್ ಆಮೇಲೆ ಅ ಲೇಡಿ ಹೆಸರು ಹೇಳಿದ್ದೆ ಓಡೋಡಿ ಅ ಲೇಡಿ ನ ನೋಡೋಕೆ ಹೋದ ನಾನು ಅವನ ಹಿಂದೆ ಹೋದೆ . ಅಭಿ ಅ ಲೇಡಿ ನ ನೋಡಿದಾಗಿಂದ ಒಂತರಾ ಇದ್ದಾನೆ, ನಿಜ ಹೇಳಬೇಕು ಅಂದ್ರೆ ಅ ಲೇಡಿ ನ ನೋಡಿ ಅವನ ಕಣ್ಣಲ್ಲಿ ಕಣ್ಣೀರು ತುಂಬಿ ಕೊಳ್ತು. ಅ ಲೇಡಿ ಕೂಡ ಅಭಿ ನ ನೋಡಿ ಅಳೋ ಸ್ಟೇಜ್ ಗೆ ಹೋಗಿ ಬಿಟ್ಟಳು, ಆಮೇಲೆ ಇದ್ದಕ್ಕಿದ್ದ ಹಾಗೇ ಅ ಲೇಡಿ ನನಗೆ ಕೆಲಸ ಬೇಡ ಏನು ಬೇಡ ಹೋಗ್ತೀನಿ ಅಂತ ಹೇಳಿದ್ಲು. ಅಭಿ ಅ ಲೇಡಿ ಗೆ ಆಫೀಸ್ ಗೆ ಬರೋಕೆ ಹೇಳಿ ಏನ್ ಮಾತಾಡಿದ್ನೋ ಗೊತ್ತಿಲ್ಲ ಆಮೇಲೆ ಅ ಲೇಡಿ ಕೆಲಸ ಮಾಡೋಕೆ ಒಪ್ಪಿಕೊಂಡಳು. ನಾನು ಅಭಿ ನ ಕೇಳ್ದೆ ಯಾಕೋ ಏನಾಯ್ತು ಅಂತ ಅಭಿ ಏನು ಹೇಳೇ ಇಲ್ಲಾ, ಮನಸ್ಸು ಯಾಕೋ ಸರಿ ಇಲ್ಲಾ ನಿನ್ ನೋಡ್ಕೋ ನಾನ್ ಹೋಗ್ತೀನಿ ಅಂತ ನಾನು ಕರೀತಾ ಇದ್ರು ಹೋಗೆ ಬಿಟ್ಟ. 

ಜೆ,,, ಏನು ಲೇಡಿ ನ ನೋಡಿ, ಈ ರೀತಿ ಅದನ, ಅಂದಹಾಗೆ ಅ ಲೇಡಿ ಹೆಸರು ಏನು?

ಪ್ರಿಯಾ,,, ಸಾರಿಕ ಅಂತ ಕಣೋ.

ಜೆ,,,, ಏನು ಸಾರಿಕ ನ?

ಪ್ರಿಯಾ,,, ಹೌದು ಕಣೋ ಸಾರಿಕ ಅಂತ, ಯಾಕೋ ಏನಾಯ್ತು. ನಿನಗೆ ಸಾರಿಕ ಗೊತ್ತಾ? ಅಭಿ ಗು ಸಾರಿಕ ಗೆ ಏನ್ ಸಂಬಂಧ? 

ಜೆ,,, ಸಾರಿಕ ಬೇರೆ ಯಾರು ಅಲ್ಲ, ಒಂದು ಟೈಮ್ ಅಲ್ಲಿ ಅಭಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ. 

ಪ್ರಿಯಾ,,, ಶಾಕ್ ಆಗಿ ಏನೋ ಹೇಳ್ತಾ ಇದ್ದಿಯಾ? ಸಾರಿಕ ಅಭಿ ಇಬ್ರು ಲವ್ ಮಾಡ್ತಾ ಇದ್ರ. ಲೋ ಅವಳಿಗೆ ಕೆಲವು ವರ್ಷಗಳ ಹಿಂದೇನೆ ಮದುವೆ ಆಗಿ ಡಿವೋರ್ಸ್ ಕೂಡ ಆಗಿದೆ. ಅವಳದ್ದು ಈ ಊರೇ ಅಲ್ಲ, ಇಲ್ಲಿಗೆ ಬಂದು ಒನ್ ಮಂತ್ ಆಯಿತು. ನಿನ್ ನೋಡಿದ್ರೆ ಸಾರಿಕ ಅಭಿ ಲವ್ ಮಾಡ್ತಾ ಇದ್ರು ಅಂತೀಯಾ?

ಜೆ,,,, ನಿಜ ಕಣೆ,, ಇಬ್ರು ಒಬ್ಬರನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಾ ಇದ್ರು, ಬಟ್ ಏನಾಯ್ತೋ ಏನೋ ಸಾರಿಕ ಹೇಳ್ದೆ ಕೇಳ್ದೆ ಅಭಿ ನ ಬಿಟ್ಟು ಹೊರಟು ಹೋದಳು, ಹೋದವಳು ಮದುವೆ ಇನ್ನೊಂದು ವಾರ ಇದೆ ಅನ್ನೋವಾಗ ಕಾಲ್ ಮಾಡಿ ನಾನ್ ಮದುವೆ ಆಗ್ತಾ ಇದ್ದೀನಿ ನನಗೆ ತೊಂದ್ರೆ ಕೊಡಬೇಡ ಅಂತ ಹೇಳಿ ಕಾಲ್ ಕಟ್ ಮಾಡಿ ನಂಬರ್ ಬ್ಲಾಕ್ ಮಾಡಿ ನಂಬರ್ ಚೇಂಜ್ ಮಾಡಿ ಬಿಟ್ಲು. ಇಷ್ಟು ವರ್ಷ ಆದಮೇಲೆ ಮತ್ತೆ ಇಲ್ಲಿಗೆ ಅವನ ಮುಂದೆ ಬಂದು ನಿಂತಿದ್ದಾಳೆ. ಸಾರಿಕ ಇವಾಗ ಗಂಡ ನ ಜೊತೆಗೆ ಇದ್ದಾಳ ಇಲ್ಲಾ ಒಬ್ಬಳೇ ಇದ್ದಾಳ?

ಪ್ರಿಯಾ,,, ಯಾಕೋ ಕೇಳ್ತಿಯಾ ಅವಳ ಕಷ್ಟ ನ ಅಂತ ತೇಜು ಅವರ ಅಮ್ಮ ಸಾರಿಕ ಬಗ್ಗೆ ಹೇಳಿದ ವಿಷಯ ನ ಜೆ ಗೆ ಹೇಳ್ತಾಳೆ. 

ಜೆ,,, ಹೌದ ಅಯ್ಯೋ ಪಾಪ, ಮೊದಲೇ ಅವನು ಅವಳು ಬಿಟ್ಟು ಹೋದಾಗ ತುಂಬಾ ಡಿಸ್ಟರ್ಬ್ ಆಗಿದ್ದ, ಆಮೇಲೆ ಸುಧಾರಿಸಿ ಕೊಂಡ, ಮತ್ತೆ ಇವಾಗ ಅವನ ಎದುರು ಇಂತ ಪರಿಸ್ಥಿತಿ ಅಲ್ಲಿ ಬಂದು ನಿಂತಿದ್ದಾಳೆ, ಮನಸಲ್ಲೇ ಅದೆಷ್ಟು ನೋವನ್ನ ಅನುಭವಿಸ್ತಾ ಇದ್ದಾನೋ ಏನೋ. ಸರಿ ನಿನ್ ಒಂದು ಕೆಲಸ ಮಾಡು, ಅಭಿ ವೈಫ್ ಏನಾದ್ರೂ ಕಾಲ್ ಮಾಡಿ ಅಭಿ ಎಲ್ಲಿ ಅಂತ ಕೇಳಿದ್ರೆ, ಈ ವಿಷಯ ಏನು ಹೇಳೋಕೆ ಹೋಗಬೇಡ, ಫ್ರೆಂಡ್ ನ ಜೊತೆಗೆ ನೇಟಿವ್ ಹೋಗಿಬರ್ತೀನಿ ಅಂತ ಹೇಳಿ ಹೋದ ಅಂತ ಹೇಳು ಸರಿನಾ.

ಪ್ರಿಯಾ,,, ಹ್ಮ್ ಸರಿ ಕಣೋ, ಅವನನ್ನ ಸ್ವಲ್ಪ ಹುಷಾರಾಗಿ ನೋಡ್ಕೋ, ಏನಾದ್ರೂ ಇದ್ರೆ ಕಾಲ್ ಮಾಡು, ಸರಿನಾ.

ಜೆ,,, ಹ್ಮ್ ಸರಿ ಬೈ ಅಂತ ಹೇಳಿ ಕಾಲ್ ಕಟ್ ಮಾಡಿ ಬೈಕ್ ತಗೊಂಡು ಹೋಗಿ ಡ್ರಿಂಕ್ಸ್ ತಗೋ ಬರ್ತಾನೇ.

ಜೆ ರೂಮ್ ಒಳಗೆ ಬಂದಾಗ ಅಭಿ ಬೆಡ್ ಮೇಲೆ ಕಣ್ಮುಚ್ಚಿ ಮಲಗಿಕೊಂಡು ಇರ್ತಾನೆ, ಜೆ ಅವನನ್ನ ನೋಡಿ ಮಚ್ಚಾ ಎದ್ದೇಳೋ ಅಂತ ಹೇಳ್ತಾನೆ. ಅಭಿ ಎದ್ದು ಕೂತ ಮೇಲೆ ಅವನ ಕೈಗೆ ಡ್ರಿಂಕ್ಸ್. ಕೊಟ್ಟು ಪಕ್ಕದಲ್ಲಿ ಕೂತ್ಕೋತಾನೆ.  ಅಭಿ ಡ್ರಿಂಕ್ಸ್ ಮಾಡೋದಕ್ಕೆ ಶುರು ಮಾಡ್ತಾನೆ. ಜೆ ಸೈಲೆಂಟ್ ಆಗಿ ಕೂತು ಇರೋದನ್ನ ನೋಡಿ ಅಭಿ ಯಾಕ್ ಮಚ್ಚಾ ನಿನ್ ಡ್ರಿಂಕ್ಸ್ ಮಾಡಲ್ವಾ ಅಂತ ಕೇಳ್ತಾನೆ, ಜೆ ಇಲ್ಲಾ ಮಚ್ಚಾ ನಿನ್ ಮಾಡು ನನಗೆ ವರ್ಕ್ ಇದೆ ಮುಗಿಸಿ ಆಮೇಲೆ ಮಾಡ್ತೀನಿ. ಅಭಿ ಓಕೆ ಮಚ್ಚಾ ಅಂತ ಹೇಳಿ ಮತ್ತೆ ಡ್ರಿಂಕ್ಸ್ ಮಾಡ್ತಾನೆ, ಜೆ ನೋಡ್ತಾ ನೋಡ್ತಾ ಇದ್ದಾ ಹಾಗೇ ಅಭಿ ಫುಲ್ ಬಾಟೆಲ್ ಡ್ರಿಂಕ್ಸ್ ನ ಖಾಲಿ ಮಾಡಿ ಬಿಡ್ತಾನೆ. 

ಜೆ,,, ಮಚ್ಚಾ ಫ್ರೆಂಡ್ ಆಗಿ ಒಂದು ಮಾತನ್ನ ಹೇಳ್ತಿನಿ ಅದು ನೀನು ನನಗೆ ಹೇಳಿದ್ದೆ,  ಮನಸಲ್ಲಿ ನಡೆದು ಹೋಗಿದ್ದರ ಬಗ್ಗೆ ತುಂಬಾ ನೋವನ್ನ ಇಟ್ಕೊಬೇಡ, ಯಾಕಂದ್ರೆ ನಮ್ಮನ್ನೇ ನಂಬಿ ಕೆಲವು ಜನ ಇರ್ತಾರೆ, ಯಾರಿಂದನೋ ನಮಗೆ ನೋವು ಆಯಿತು ಅಂತ ನಮ್ಮನ್ನ ನಂಬಿಕೊಂಡು ಇರೋವರ ಮನಸನ್ನ ನೋಯಿಸೋದು ತಪ್ಪು . ಆಗಿದ್ದರ ಬಗ್ಗೆ ಯೋಚ್ನೆ ಮಾಡೋಕಿಂತ ಮುಂದೆ ಏನ್ ಮಾಡಬೇಕು ಅನ್ನೋದರ ಬಗ್ಗೆ ಯೋಚ್ನೆ ಮಾಡು. 

ಅಭಿ,,, ನಗ್ತಾ ಪ್ರಿಯಾ ಗೆ ಕಾಲ್ ಮಾಡಿದ್ದ?

ಜೆ,,, ಮತ್ತೆ ಇನ್ನೇನು ಮಾಡಲಿ ನಿನ್ನ ಕೇಳಿ ಮತ್ತೆ ನಿನಗೆ ನೋವು ಮಾಡೋಕೆ ಇಷ್ಟ ಇರಲಿಲ್ಲ ಅದಕ್ಕೆ ಕಾಲ್ ಮಾಡಿ ವಿಷಯ ಏನು ಅಂತ ತಿಳ್ಕೊಂಡೆ.

ಅಭಿ,,, ಬೆಡ್ ಮೇಲೆ ಮಲಗಿಕೊಂಡು ಕಣ್ ಮುಚ್ಚಿಕೊಂಡು, ಎಲ್ಲೋ ಸಂತೋಷ ವಾಗಿ ಇದ್ದಾಳೆ ಅಂತ ಅಂದುಕೊಂಡವಳು, ಇಷ್ಟೊಂದು ನೋವನ್ನ ಅನುಭವಿಸಿ ಕಣ್ಣೆದುರು ಬಂದು ನಿಂತಾಗ ಹೇಗೋ ಸಹಿಸಿಕೊಂಡು ಇರೋಕೆ ಆಗುತ್ತೆ, ನನ್ನ ಲೈಫ್ ಅಲ್ಲಿ ನೆಮ್ಮದಿ ಅನ್ನೋದೇ ಇಲ್ವಾ. ನಾನು ಮನುಷ್ಯನೇ ಅಲ್ವಾ ಮಚ್ಚಾ, ನನಗೂ ನೋವಾಗುತ್ತೆ ಅಲ್ವಾ. ಅಂತ ಹೇಳ್ತಾ ಹಾಗೇ ಮೌನವಾಗಿ ಬಿಡ್ತಾನೆ.

****

ಇಷ್ಟೋತ್ತಾದರೂ ಊಟಕ್ಕೆ ಬರದೇ ಇರೋದನ್ನ ನೋಡಿ ಸಾರಿಕ ಅಭಿ ಗೆ ಕಾಲ್ ಮಾಡ್ತಾಳೆ ಸ್ವಿಚ್ ಅಪ್ ಬರುತ್ತೆ. ನಂತರ ಪ್ರಿಯಾ ಗೆ ಕಾಲ್ ಮಾಡ್ತಾಳೆ.

ಪ್ರಿಯಾ ನಯನ ಕಾಲ್ ಮಾಡೋದನ್ನ ನೋಡಿ ಕಾಲ್ ಪಿಕ್ ಮಾಡಿ ಹೇಳು ನಯನಾ.

ನಯನಾ,,, ಪ್ರಿಯಾ ಅಭಿ ನಂಬರ್ ಸ್ವಿಚ್ ಅಪ್ ಬರ್ತಾ ಇದೆ, ಊಟಕ್ಕೂ ಬರಲಿಲ್ಲ ಏನು ವರ್ಕ್ ಮಾಡ್ತಾ ಅಲ್ಲೇ ಇದ್ದು ಬಿಟ್ಟಿದ್ದಾನಾ.

ಪ್ರಿಯಾ,,, ಹೊ ಅದ ಅಭಿ ಆಫೀಸ್ ಅಲ್ಲಿ ಇಲ್ಲಾ ನಯನಾ ಫ್ರೆಂಡ್ ಕಾಲ್ ಮಾಡಿದ್ದ ಊರಲ್ಲಿ ಏನೋ ಸ್ವಲ್ಪ ಪ್ರಾಬ್ಲಮ್ ಅರ್ಜೆಂಟ್ ಆಗಿ ಹೋಗಬೇಕು ಬರ್ತೀಯ ಅಂತ ಕೇಳ್ದ, ಅಭಿ ಬಗ್ಗೆ ನಿನಗೆ ಗೊತ್ತು ಅಲ್ವಾ, ಫ್ರೆಂಡ್ ಜೊತೆಗೆ ಅವನ ನೇಟಿವ್ ಹೋದ , ನೈಟ್ ಇಲ್ಲಾ ನಾಳೆ ಬೆಳಿಗ್ಗೆ ಬರ್ತೀನಿ, ಕಾಲ್ ಮಾಡಿ ಹೇಳೋಣ ಅಂದ್ರೆ ಸ್ವಿಚ್ ಅಪ್ ಆಗಿದೆ ಮೊಬೈಲ್ ಅದಕ್ಕೆ  ನನಗೆ ಹೇಳೋಕೆ ಹೇಳ್ದ, ನಾನು ವರ್ಕ್ ಅಲ್ಲಿ ನಿನಗೆ ಹೇಳೋದನ್ನೇ ಮರೆತೇ, ಸಾರೀ.  

ನಯನಾ,,, ಹೌದ ಸರಿ ಪ್ರಿಯಾ ಅಂತ ಹೇಳಿ ಕಾಲ್ ಕಟ್ ಮಾಡ್ತಾಳೆ.

ಪ್ರಿಯಾ,,, ತಕ್ಷಣ ಜೆ ಗೆ ಕಾಲ್ ಮಾಡ್ತಾಳೆ.

ಜೆ,, ಕಾಲ್ ಪಿಕ್ ಮಾಡಿ, ಅ ಹೇಳೇ 

ಪ್ರಿಯಾ,, ಲೋ ಅವನು ಏನ್ ಮಾಡ್ತಾ ಇದ್ದಾನೆ, ನಯನಾ ಕಾಲ್ ಮಾಡಿದ್ಲು.

ಜೆ,,, ಮಲಗಿದ್ದಾನೆ , ಸ್ವಲ್ಪ ಟೈಮ್ ಅವನನ್ನ ಅವನ ಪಾಡಿಗೆ ಬಿಟ್ರೆ ಸರಿ ಹೋಗ್ತಾನೆ.

ಪ್ರಿಯಾ,,, ಸರಿ ಕಣೋ ಅವನು ಹುಷಾರು ಅಂತ ಹೇಳಿ ಕಾಲ್ ಕಟ್ ಮಾಡ್ತಾಳೆ..

@@@@@@@@@@@@@@@@@@@@@@@@@