Abhinayanaa - 28 in Kannada Love Stories by S Pr books and stories PDF | ಅಭಿನಯನಾ - 28

The Author
Featured Books
Categories
Share

ಅಭಿನಯನಾ - 28

   ಏನೋ ಮಚ್ಚಾ ಇಲ್ಲಿ ಬಂದು ಕೂತಿದ್ದೀಯ, ನಿನಗೆ ಅಲ್ಲೇ ಇರು ಅಂತ ಹೇಳ್ದೆ ಅಲ್ವಾ 

ಅಭಿ,,, ಸ್ವಲ್ಪ ಕೋಪದಿಂದ ಎಲ್ಲಿ ಅ ಲೇಡೀಸ್ ಪಿಜಿ ಪಕ್ಕದಲ್ಲಿ ಇರೋ ಅಂಗಡಿ ಹತ್ತಿರ ನ, ಅಲ್ಲಿಗೆ ಬರ್ತಾ ಇದ್ದಾ ಹುಡುಗೀರು ಎಲ್ಲಾ ನನ್ನ ಒಳ್ಳೆ ಕಳ್ಳನ ತರ ನೋಡ್ತಾ ಇದ್ರು, ಅದು ಅಲ್ಲದೆ ಅ ಅಂಗಡಿ ಓನರ್ ಜಾಸ್ತಿ ಹೊತ್ತು ಇಲ್ಲಿ ನಿಲ್ಲಬೇಡಿ ಹೋಗಿ ಅಂತ ಅವಾಜ್ ಹಾಕಿದ್ಲು. ಮಗನೆ ನಿನ್ನ ಲವರ್ ನ ನಿನ್ ನೋಡೋಕೆ ನಿನ್ ಜೊತೆಗೆ ನಾನ್ ಬಂದು ನಾನ್ ಉಗಿಸಿಕೊಂಡೆ. 

ಶೇಖರ್,,, ಬಿಡು ಮಚ್ಚಾ ಫ್ರೆಂಡ್ ಗೆ ಇಷ್ಟು ಮಾತ್ರ ಹೆಲ್ಪ್ ಮಾಡೋಕೆ ಆಗಲ್ವಾ. ಸರಿ ಬಾ ಹೋಗೋಣ ಅಂತ ಹೇಳಿ ಇಬ್ಬರು ಬೈಕ್ ಅಲ್ಲಿ ಅಲ್ಲಿಂದ ಹೊರಟರು. 

ಮನೆಗೆ ಬಂದ ಅಭಿ ನ ನೋಡಿ, ನಂದಿನಿ ಯಾಕೋ ಕೆಲಸಕ್ಕೆ ಹೋಗಿಲ್ವಾ..

ಅಭಿ,,, ನೈಟ್ ಶಿಫ್ಟ್ ಹೋಗಬೇಕು 

ನಂದಿನಿ,,, ಮತ್ತೆ ಇಷ್ಟೋತ್ತು ಎಲ್ಲಿ ಹೋಗಿದ್ದೆ.

ಅಭಿ,,, ಫ್ರೆಂಡ್ ಜೊತೆ ಹೊರಗಡೆ ಹೋಗಿದ್ದೆ.

ನಂದಿನಿ,,, ಸರಿ ಹೋಗಿ ತಿಂದು ಮಲಕ್ಕೋ 

ಅಭಿ,,, ಸರಿ ದೇವಮ್ಮ ಎಲ್ಲಿ.

ನಂದಿನಿ,,, (ವ್ಯಂಗ್ಯವಾಗಿ) ದೇವಮ್ಮ ನ ನನ್ನ ಮಗ ಬೆಳಿಗ್ಗೆ ಯಿಂದ ಕಾಣಿಸ್ತಾ ಇಲ್ಲಾ ಅಂತ ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಡೋಕೆ ಹೋದ್ಲು. ಹೋಗಿ ಮುಚ್ಕೊಂಡು ತಿಂದು ಮಲಕ್ಕೋ, ಹೋಗೋ.

ಅಭಿ,,, ಹೋಗಿ ಹೋಗಿ ನಿನ್ನ ಕೇಳ್ದೆ ನೋಡು ಅಂತ ಗೊಣಗಿ ಕೊಂಡು ಅಡುಗೆ ಮನೆಗೆ ಹೋದ.

******

ಅಭಿ ಫ್ರೆಂಡ್ ರೂಮ್ ಡೋರ್ ಓಪನ್ ಮಾಡಿಕೊಂಡು ಒಳಗೆ ಬರ್ತಾ, ಯಾಕ್ ಮಚ್ಚಾ ಮಲಗಿದ್ದೀಯ ಏನಾಯ್ತು.

ಶೇಖರ್,,, ಏನಿಲ್ಲಾ ಮಚ್ಚಾ ನೈಟ್ ನಮ್ ಹುಡುಗಿ ಜೊತೆ ಮಾತಾಡ್ಕೊಂಡು ಇದ್ದೆ.

ಅಭಿ,,, ಹೌದ ಅದ್ರೆ ಮುಖ ನೋಡಿದ್ರೆ ಹಾಗೇ ಕಾಣಿಸ್ತಾ ಇಲ್ಲಾ, 

ಶೇಖರ್,, ಸ್ವಲ್ಪ ಅನುಮಾನ ದಿಂದ ಹೌದ ಮತ್ತೆ ಹೇಗೆ ಕಾಣಿಸ್ತಾ ಇದೆ.

ಅಭಿ,,, ಏನೋಪಾ ನನಗೆ ಗೊತ್ತಿಲ್ಲ, ಲವ್ ಅಲ್ಲಿ ಇರೋವ್ರು ಒಂದೊಂದು ಟೈಮ್ ಒಂದೊಂದು ತರ ಇರ್ತೀರ, ನನಗ್ಯಾಕೆ ಅಂತ ಹೇಳ್ತಾ ಬಿಯರ್ ಬಾಟಲ್ ಓಪನ್ ಮಾಡಿ, ಕುಡಿತಾ ನಿನ್ ಮಲಕ್ಕೋ ಮಚ್ಚಾ ಅಂತಾನೆ.

ಶೇಖರ್,,,ಥು ನನ್ನ ಮಗನೆ ಮತ್ತೆ ಏನಕ್ಕೋ ಕೇಳ್ದೆ.  

ಅಭಿ,,, ನಗತಾ ಸುಮ್ನೆ ಮಚ್ಚಾ.

ಶೇಖರ್,,, ಹೋಗ್ಲಿ ಬಿಡು, ಅದು ಸರಿ ಕೆಲಸಕ್ಕೆ ಹೋಗಿಲ್ವಾ. 

ಅಭಿ,,, ನೈಟ್ ಮಚ್ಚಾ, ಬಿಯರ್ ಕುಡಿಬೇಕು ಅನ್ನಿಸ್ತು ಅದಕ್ಕೆ ಬಂದೆ.. ಅಂತ ಬಿಯರ್ ಸಿಪ್ ಮಾಡ್ತಾನೆ.

ಶೇಖರ್,,, ಸರಿ ನನ್ನ ಡಿಸ್ಟರ್ಬ್ ಮಾಡಬೇಡ ಅಂತ ಹೇಳಿ ಮಲಗ್ತಾನೆ.

ಅಭಿ ಎರಡು ಬಿಯರ್ ಕುಡಿದು ತಿಂಡಿ ತಿಂದು, ಮನೆಗೆ ಕಾಲ್ ಮಾಡಿ ಹೇಳಿ ಮಲಗಿ ಕೊಳ್ತಾನೆ. ಸಂಜೆ ಎದ್ದು ಮುಖ ತೊಳೆದು ಕೊಂಡು, ಶೇಖರ್ ಗೆ ಬೈ ಹೇಳಿ ಮನೆ ಕಡೆಗೆ ಹೋಗ್ತಾನೆ. ಮನೆಗೆ ಹೋಗಿ ಊಟ ಮಾಡಿ ಕೆಲಸಕ್ಕೆ ಹೋಗ್ತಾನೆ. ಆಫೀಸ್ ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗಿದ್ದಕ್ಕೆ ಪರ್ಮಿಷನ್ ಇಲ್ಲಾ ಅಂತ ಹೇಳಿ ಲಾಕರ್ ಅಲ್ಲಿ ಇಟ್ಟು ಅವನ ಕೆಲಸ ಮಾಡೋಕೆ ಹೋಗ್ತಾನೆ. 

ಬೆಳಿಗ್ಗೆ ಕೆಲಸ ಮುಗಿಸಿಕೊಂಡು ಅವನ ಮೊಬೈಲ್ ತೆಗೆದುಕೊಂಡು  ಹೊರಗೆ ಬರ್ತಾ ಮೊಬೈಲ್ ನೋಡ್ತಾನೆ, ಒಂದು ನಂಬರ್ ಯಿಂದ ನಾಲಕ್ಕು ಮಿಸ್ಡ್ ಕಾಲ್ ಇರುತ್ತೆ. ಕಾಲ್ ಟೈಮ್ ನೋಡ್ತಾನೆ ರಾತ್ರಿ 9:30 ರಲ್ಲಿ ಬಂದಿರುತ್ತೆ, ಈಗ ಟೈಮ್ ನೋಡಿದ್ರೆ 7 ಗಂಟೆ ರಿಲೇಟಿವ್ ಯಾರೋ ಮಾಡಿರಬೇಕು ಅಂತ ಅನ್ಕೊಂಡು ಅ ನಂಬರ್ ಗೆ ಕಾಲ್ ಮಾಡ್ತಾನೆ. ರಿಂಗ್ ಆಗುತ್ತೆ ಯಾರು ಪಿಕ್ ಮಾಡಲ್ಲ, ಹೇಗಿದ್ರು ಮನೆಗೆ ಹೋಗೋದು ಅಲ್ವಾ ಅಂತ ಅನ್ಕೊಂಡು ಅಷ್ಟಾಗಿ ತಲೆ ಕೆಡಸಿ ಕೊಳ್ಳೋದಿಲ್ಲ. ಮೊಬೈಲ್ ನ ಜೇಬಲ್ಲಿ ಇಟ್ಕೊಂಡು ಮನೆಗೆ ಬರ್ತಾನೆ, ಮನೆಗೆ ಬಂದು ಫ್ರೆಶ್ ಅಪ್ ಆಗಿ ಕಾಫಿ ಕುಡಿದು ಅಮ್ಮ ನಾನ್ ಸ್ವಲ್ಪ ಹೊತ್ತು ಮಲಗ್ತೀನಿ ಅಂತ ಹೇಳಿ ಹೋಗಿ ಅವನ ರೂಮ್ ಅಲ್ಲಿ ಮಲಗಿ ಕೊಳ್ತಾನೆ. 

ದೇವಮ್ಮ ಅಭಿ ನ ತಿಂಡಿ ಮಾಡೋದಕ್ಕೆ ಎಬ್ಬಿಸ್ತಾರೆ, ಅಭಿ ತಿಂಡಿ ತಿಂದು, ಹೊರಗಡೆ ಹೋಗಿ ಒಂದು ಸಿಗರೇಟ್ ಸೇದಿ ಬರೋಣ ಅಂತ ಅಂಗಡಿ ಕಡೆಗೆ ಹೋಗ್ತಾ ಮೊಬೈಲ್ ಆನ್ ಮಾಡ್ತಾನೆ, ಎರಡು ಮಿಸ್ಡ್ ಕಾಲ್, ಬೆಳಿಗ್ಗೆ ಮಾಡಿದ ನಂಬರ್ ಯಿಂದ. ಅಭಿ ಅ ನಂಬರ್ ಗೆ ಕಾಲ್ ಮಾಡ್ತಾನೆ. ಒಂದು ಹುಡುಗಿ ಕಾಲ್ ಪಿಕ್ ಮಾಡಿ ಹಲೋ ಯಾರು ಅಂತ ಕೇಳ್ತಾಳೆ.

ಅಭಿ,,, ಏನು ಯಾರ, ಮೇಡಂ ಅ ಪ್ರಶ್ನೆ ನ ನಾನ್ ಕೇಳಬೇಕು ಯಾರ್ ನೀವು, ಏನಕ್ಕೆ ಕಾಲ್ ಮಾಡಿದ್ರಿ.

ಹುಡುಗಿ,,, ಏನು ನಾನ್ ಕಾಲ್ ಮಾಡಿದ್ನ.

ಅಭಿ,,, ಹೌದು ನೈಟ್ ಅಲ್ಲಿ ನಾಲಕ್ಕು ಸರಿ ಕಾಲ್ ಮಾಡಿದ್ರಿ. ಬೆಳಿಗ್ಗೆ ಎರಡು ಸರಿ ಕಾಲ್ ಮಾಡಿದ್ರಿ. ಹೇಳಿ ಯಾರ್ ನೀವು, ನಿಮಗೆ ಯಾರ್ ಬೇಕಾಗಿತ್ತು.

ಹುಡುಗಿ,,, ಹಲೋ ಮಿಸ್ಟರ್ ನಾನೇನು ನಿಮಗೆ ಕಾಲ್ ಮಾಡಿಲ್ಲ ನೆನ್ನೆ ಮಧ್ಯಾಹ್ನ 3 ಗಂಟೆ ಅಲ್ಲಿ 5 ಟೈಮ್ಸ್ ಕಾಲ್ ಮಾಡಿದ್ರಿ, ಈಗ ನಾನ್ ನಿಮಗೆ ಕಾಲ್ ಮಾಡಿದ್ದೆ ಅಂತ ಹೇಳ್ತಾ ಇದ್ದೀರಾ ನಿಮಗೆ ಏನಾದ್ರೂ ಲೂಸ್ ಅ.

ಅಭಿ,,, ಏನು ನೆನ್ನೆ ಮದ್ಯಾಹ್ನ ನಾನ್ ನಿಮಗೆ ಕಾಲ್ ಮಾಡಿದ್ನ, ನನಗೆ ಮಾಡೋಕೆ ಬೇರೆ ಕೆಲಸ ಇಲ್ವಾ. ನೆನ್ನೆ ಮದ್ಯಾಹ್ನ 12 ಗಂಟೆ ಅಲ್ಲಿ ಮಲಗಿದವನು ಸಂಜೆ 7 ಗಂಟೆ ಅಲ್ಲಿ ಎದ್ದಿದ್ದೀನಿ. ನೀವ್ ನೋಡಿದ್ರೆ 3 ಗಂಟೆ ಅಲ್ಲಿ 5 ಸರಿ ಕಾಲ್ ಮಾಡಿದ್ದೆ ಅಂತ ಹೇಳ್ತಾ ಇದ್ದೀರಾ, ಲೂಸ್ ನಾನಲ್ಲ ನೀವು ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.

ಕಾಲ್ ಕಟ್ ಆಗಿದ್ದೆ ಅ ಹುಡುಗಿ ಕೋಪದಿಂದ ಎಷ್ಟು ಕೊಬ್ಬು ಇವನಿಗೆ ನನ್ನೇ ಲೂಸ್ ಅಂತ ಇದ್ದಾನೆ, ಕಾಲ್ ಮಾಡಿದ್ದು ಅಲ್ಲದೆ ನಾನ್ ಮಾಡೇ ಇಲ್ಲಾ ಅಂತ ಇದ್ದಾನೆ, ಇವನನ್ನ ಸುಮ್ನೆ ಬಿಡಬಾರ್ದು ಅಂತ ಮತ್ತೆ ಅಭಿ ನಂಬರ್ ಗೆ ಕಾಲ್ ಮಾಡ್ತಾಳೆ. ಅಭಿ ನಂಬರ್ ನ ನೋಡಿ ಕಾಲ್ ಕಟ್ ಮಾಡ್ತಾನೆ. ಅ ಹುಡುಗಿ ಮಗನೆ ಕಾಲ್ ಕಟ್ ಮಾಡ್ತಿಯಾ ಅಪ್ಪಿ ತಪ್ಪಿ ನನ್ನ ಕೈಗೆ ಸಿಗೋ ಜನ್ಮ ಜಾಲಾಡಿ ಬಿಡ್ತೀನಿ ಅಂತ ಬೈಕೊಂಡು ಅವಳ ಕೆಲಸದ ಕಡೆ ಗಮನ ಕೊಡ್ತಾಳೆ. 

ಸಿಗರೇಟ್ ಸೇದ್ತಾ ಇದ್ದಾ ಅಭಿ, ನಾನ್ ಅ ಹುಡುಗಿ ಗೆ ಕಾಲ್ ಮಾಡಿದ್ನ ಅಂತ ಅನ್ಕೊಂಡು ಕಾಲ್ ಹಿಸ್ಟರಿ ನೋಡ್ತಾನೆ, ನೋಡಿ ಶಾಕ್ ಆಗಿ, ತಕ್ಷಣ ಅವನ ಫ್ರೆಂಡ್ ಶೇಖರ್ ಗೆ ಕಾಲ್ ಮಾಡ್ತಾನೆ. 

ಶೇಖರ್ ಕಾಲ್ ಪಿಕ್ ಮಾಡಿ,, ಮಚ್ಚಾ  ಹೇಳೋ 

ಅಭಿ,,, ಲೋ ನಿನಜ್ಜಿ ನೆನ್ನೆ ನನ್ನ ಮೊಬೈಲ್ ಯಿಂದ ಯಾರಿಗದ್ರು ಕಾಲ್ ಮಾಡಿದ್ದ?

ಶೇಖರ್,,, ಮಚ್ಚಾ ಅದು ನೆನ್ನೆ ನಂಗು ನಮ್ ಹುಡುಗಿಗೂ ಸ್ವಲ್ಪ ಜಗಳ ಆಯ್ತು, ನನ್ನ ನಂಬರ್ ನ ಬ್ಲಾಕ್ ಮಾಡಿ ಸ್ವಿಚ್ ಅಪ್ ಮಾಡಿದ್ಲು. ನಮ್ ಹುಡುಗಿ ಗೆ ಒಬ್ಬಳು ಫ್ರೆಂಡ್ ಇದ್ದಾಳೆ, ಎಮರ್ಜೆನ್ಸಿ ಗೆ ಅಂತ ನಮ್ ಹುಡುಗಿ ಕೊಟ್ಟಿದ್ಲು, ನನ್ನ ನಂಬರ್ ಯಿಂದ ಅ ಹುಡುಗಿ ಗೆ ಕಾಲ್ ಮಾಡೋಣ ಅಂದ್ರೆ ನನ್ನ ಹುಡುಗಿ ಆಲ್ರೆಡಿ ಅವಳು ಕೋಪದಲ್ಲಿ ಇದ್ದಾಳೆ, ಇನ್ನ ನನ್ನ ನಂಬರ್ ಯಿಂದ ಅವಳ ಫ್ರೆಂಡ್ ಗೆ ಕಾಲ್ ಮಾಡಿದ್ರೆ ಇನ್ನು ಕೋಪ ಮಾಡ್ಕೊತಾಳೆ ಅಂತ, ನಿನ್ನ ನಂಬರ್ ಯಿಂದ ನನ್ನ ಹುಡುಗಿ ಫ್ರೆಂಡ್ ಗೆ ಕಾಲ್ ಮಾಡಿ ಅವಳನ್ನ ಕೂಲ್ ಮಾಡೋಕೆ ಹೇಳೋಣ ಅಂತ ಕಾಲ್ ಮಾಡಿದ್ದೆ, ಬಟ್ ಅ ಹುಡುಗಿ ಕಾಲ್ ಪಿಕ್ ಮಾಡಿಲ್ಲ, ನಾನು ಕೂಡ ನಿನಗೆ ಹೇಳೋದನ್ನ ಮರೆತೇ, ಯಾಕ್ ಮಚ್ಚಾ ಏನಾಯ್ತು, ಅ ಹುಡುಗಿ ಏನಾದ್ರೂ ಕಾಲ್ ಮಾಡಿದ್ಲಾ, 

ಅಭಿ,,,, ಕೋಪದಿಂದ ಡಬ್ಬ ನನ್ನ ಮಗನೆ ಮೊದಲೇ ಹೇಳ್ಬೇಕು ತಾನೇ, ಸುಮ್ನೆ ಅ ಹುಡುಗಿ ನ ಬೈದೆ ಅಂತ ಹೇಳಿ ಕಾಲ್ ಕಟ್ ಮಾಡಿ. ಅ ನಂಬರ್ ಗೆ ಕಾಲ್ ಮಾಡ್ತಾನೆ.

ಕೆಲಸ ಮಾಡ್ತಾ ಇದ್ದಾ ಹುಡುಗಿ, ಮೊಬೈಲ್ ಗೆ ಕಾಲ್ ಬರೋದನ್ನ ನೋಡಿ ಕೋಪ ಮಾಡ್ಕೊಂಡು ಕಾಲ್ ಪಿಕ್ ಮಾಡಿ, ಲೋ ಯಾವನೋ ನೀನು, ನಿನ್ ಕಾಲ್ ಮಾಡಿದ್ದು ಅಲ್ಲದೆ ಮತ್ತೆ ನನಗೆ ಬೈತಿಯ, ಕೇಳಿದಕ್ಕೆ ನಾನ್ ಮಾಡೇ ಇಲ್ಲಾ ಅಂತೀಯಾ, ಮಗನೆ ಎದುರಿಗೆ ಏನಾದ್ರೂ ಸಿಕ್ರೆ ಏನ್ ಮಾಡ್ತಿನೋ ನನಗೆ ಗೊತ್ತಿಲ್ಲ. ಅಂತ ನಾನ್ ಸ್ಟಾಪ್ ಆಗಿ ಬೈಯ್ಯೋಕೆ ಶುರು ಮಾಡ್ತಾಳೆ.

ಅಭಿ,,, ಕೂಲ್ ಆಗಿ ಕೇಳಿಸಿ ಕೊಳ್ತಾ ಬೈದಿದ್ದು ಎಲ್ಲಾ ಆದಮೇಲೆ, ಮುಗಿತ ಬೈದಿದ್ದು ಇವಾಗ ಆದ್ರು ಮಾತಾಡೋಕೆ ಚಾನ್ಸ್ ಕೊಡ್ತೀರಾ.

ಹುಡುಗಿ,,, ಮಗನೆ ಆಫೀಸ್ ಅಲ್ಲಿ ಇದ್ದೀನಿ ಅಂತ ಇಷ್ಟಕ್ಕೆ ಬಿಟ್ಟಿದ್ದೀನಿ, ಇಲ್ಲಾ ಅಂದಿದ್ರೆ?

ಅಭಿ,,,, ಮಿಸ್ ನೀವ್ ಯಾರೋ ನನಗೆ ಗೊತ್ತಿಲ್ಲ, ಬಟ್ ವಿಷಯ ಏನು ಅಂದ್ರೆ, ನಿಮಗೆ ಕಾಲ್ ಮಾಡಿದ್ದು ನಾನಲ್ಲ ನನ್ನ ಫ್ರೆಂಡ್, ನಿಮ್ ಜೊತೆಗೆ ಚೈತ್ರ ಅನ್ನೋ ಹುಡುಗಿ ಕೆಲಸ ಮಾಡ್ತಾರೆ ಗೊತ್ತಾ ನಿಮಗೆ.

ಹುಡುಗಿ,,, ಅ ಗೊತ್ತು ನನ್ನ ಫ್ರೆಂಡ್ ಅವಳು.

ಅಭಿ,,, ಅ ನಿಮ್ಮ ಫ್ರೆಂಡ್ ಗೆ ಒಬ್ಬ ಬಾಯ್ಫ್ರೆಂಡ್ ಇದ್ದಾನೆ ಕರ್ಮಕ್ಕೆ ಅವನು ನನ್ನ ಫ್ರೆಂಡ್, ನೆನ್ನೆ ಏನೋ ಅವರ ಇಬ್ಬರ ಮಧ್ಯ ಸ್ವಲ್ಪ ಜಗಳ, ಅದಕ್ಕೆ ನಂಬರ್ ಬ್ಲಾಕ್ ಮಾಡಿದ್ರು. ನಿಮ್ ಫ್ರೆಂಡ್ ಎಮರ್ಜೆನ್ಸಿ ಗೆ ಅಂತ ನಿಮ್ ನಂಬರ್ ನ ಅವನ ಬಾಯ್ಫ್ರೆಂಡ್ ಗೆ ಕೊಟ್ಟಿದ್ರು ಅಂತೇ. ಜಗಳ ಬೇರೆ ಆಗಿದೆ ಇನ್ನ ಅವನ ನಂಬರ್ ಯಿಂದ ನಿಮಗೆ ಕಾಲ್ ಮಾಡಿದ್ರೆ ಇನ್ನು ಕೋಪ ಮಾಡ್ಕೊತಾಳೆ ಅಂತ ನನ್ನ ನಂಬರ್ ಯಿಂದ ನಿಮಗೆ ಕಾಲ್ ಮಾಡಿದ್ರು, ಅವಳಿಗೆ ಸಮಾಧಾನ ಮಾಡಿ ಅಂತ ಹೇಳೋಕೆ, ಬಟ್ ನೀವು ಕಾಲ್ ಪಿಕ್ ಮಾಡಿಲ್ಲ, ನನಗೂ ಅವನು ಹೇಳಿಲ್ಲ. ಅದಕ್ಕೆ ಇಷ್ಟೆಲ್ಲಾ ಆಯ್ತು. ಐಮ್ ಸಾರೀ.

ಹುಡುಗಿ,,, ಹೌದ ಮತ್ತೆ ಈ ವಿಷಯ ಮೊದಲೇ ಹೇಳಬೇಕು ತಾನೇ.

ಅಭಿ,,, ನನಗೆ ಡೌಟ್ ಬಂದು ಫ್ರೆಂಡ್ ನ ಈಗಷ್ಟೇ ಕೇಳಿ ನಿಮಗೆ ಕಾಲ್ ಮಾಡಿದೆ. ಐಮ್ ಸಾರೀ ಬೈ ಅಂತ ಹೇಳಿ ಕಾಲ್ ಕಟ್ ಮಾಡಿ. ಮನೆ ಕಡೆಗೆ ಹೆಜ್ಜೆ ಇಡ್ತಾನೆ.

ಹುಡುಗಿ,,, ಅಭಿ ಸಡನ್ ಆಗಿ ಸಾರೀ ಕೇಳಿ ಬೈ ಹೇಳಿ ಕಾಲ್ ಕಟ್ ಮಾಡಿದಕ್ಕೆ, ಇವನಿಗೆ ಎಷ್ಟು ಕೊಬ್ಬು ಅಂತ ಬೈಕೊಂಡು ಕೆಲಸ ಮಾಡೋಕೆ ಹೋಗ್ತಾಳೆ...

ಹೀಗೆ ದಿನಗಳು ಕಳೆದು ಹೋಗ್ತ ಇರುತ್ತೆ.

ಒಂದು ದಿನ.. ಲೋ ಅಡುಗೆ ಮಾಡಿ ಇಟ್ಟಿದ್ದೀನಿ ಕೆಲಸಕ್ಕೆ ಹೋಗೋವಾಗ ತಿಂದು ಹೋಗು ಸರಿನಾ.

ಅಭಿ,,, ದೇವಮ್ಮ ನನ್ನ ಬಗ್ಗೆ ಟೆನ್ಶನ್ ಬಿಡು, ಹೋಗಿ ಅಜ್ಜಿ ನ ಚೆನ್ನಾಗಿ ನೋಡ್ಕೋ 

ದೇವಮ್ಮ,,, ಸ್ವಲ್ಪ ಬೇಜಾರಿನಿಂದ ಏನೋ ಹೋಗೋ ಹಾಸಿಗೆ ಇಡಿದ್ದಿದ್ದಾರೆ ಅಂತೇ, ನಾನ್ ಅಲ್ಲಿಗೆ ಹೋಗಿ ಕಾಲ್ ಮಾಡ್ತೀನಿ, ಯಾವುದಕ್ಕೂ ಆಫೀಸ್ ಅಲ್ಲಿ ರಜೆ ನ ಕೇಳಿರು ಸರಿನಾ..

ನಂದಿನಿ,,, ಅಮ್ಮ ಅವನಿಗೆ ಗೊತ್ತು ಬಾ ನೀನು ಈಗ್ಲೇ ಲೇಟ್ ಆಗಿದೆ..

ದೇವಮ್ಮ ಅವರ ಅಕ್ಕ,,, ದೇವಿ ಅವನಿಗೆ ಎಲ್ಲಾ ಗೊತ್ತು ಬಾ ನೀನು..

ಅಭಿ ದೇವಮ್ಮ ನ ಕಾರ್ ಅಲ್ಲಿ ಕೂರಿಸಿ, ಹುಷಾರು ಅಂತ ಹೇಳಿ ದೊಡ್ಡಮ್ಮ ಹುಷಾರು.

ದೊಡ್ಡಮ್ಮ,,, ಸರಿ ಕಣೋ, ಅಲ್ಲಿಗೆ ಹೋಗಿ ಪರಿಸ್ಥಿತಿ ಏನು ಅಂತ ನೋಡಿ ಕಾಲ್ ಮಾಡ್ತೀವಿ. 

ದೊಡ್ಡಣ್ಣ,,, ಅಭಿ, ನಾನ್ ನಿನಗೆ ಕಾಲ್ ಮಾಡ್ತೀನಿ ಅಂತ ಹೇಳಿ ಅಲ್ಲಿಂದ ಹೊರಡ್ತಾರೆ.

***

ಎರಡು ದಿನ ಕಳೆಯುತ್ತೆ. 

ಶೇಖರ್ ಅಭಿ ಗೆ ಕಾಲ್ ಮಾಡ್ತಾನೆ.

ಟಿವಿ ನೋಡ್ತಾ ಇದ್ದಾ ಅಭಿ,, ಶೇಖರ್ ಕಾಲ್ ಬರೋದನ್ನ ನೋಡಿ, ಕಾಲ್ ಪಿಕ್ ಮಾಡಿ ಹೇಳೋ 

ಶೇಖರ್,,, ಮಚ್ಚಾ ಏನ್ ಮಾಡ್ತಾ ಇದ್ದಿಯಾ,.

ಅಭಿ,,, ಟಿವಿ ನೋಡ್ತಾ ಇದ್ದೀನಿ.

ಶೇಖರ್,,, ಹೌದ ಸಂಜೆ ಮೂವಿ ಗೆ ಹೋಗೋಣ ಬಾರೋ.

ಅಭಿ,,, ಲೋ ನನಗೆ ಇಂಟ್ರೆಸ್ಟ್ ಇಲ್ಲಾ ನಿನ್ ಹೋಗಿ ಬಾ.

ಶೇಖರ್,,, ಲೋ ಮಚ್ಚಾ, ಹಾಗೇ ಹೇಳ್ಬೇಡ ಮಚ್ಚಾ ನಮ್ ಹುಡುಗಿ ಜೊತೆ ಅವಳ ಫ್ರೆಂಡ್ ಬರ್ತಾ ಇದ್ದಾಳೆ, ಮುವ್ವರು ಒಂದೇ ಬೈಕ್ ಅಲ್ಲಿ ಕಷ್ಟ ಮಚ್ಚಾ.

ಅಭಿ,,, ಲೋ ಇಬ್ರು ಲವರ್ಸ್ ಮಧ್ಯ ನಿಮ್ ಹುಡುಗಿ ಫ್ರೆಂಡ್ ಏನಕ್ಕೆ. ನೀವು ಇಬ್ರೇ ಹೋದ್ರೆ ಆಗಲ್ವಾ.

ಶೇಖರ್,,, ಇಲ್ಲಾ ಮಚ್ಚಾ ಅವಳ ಫ್ರೆಂಡ್ ಬಂದ್ರೇನೇ ಅಂತೇ ನಮ್ ಹುಡುಗಿ ಬರೋದು, ಪ್ಲೀಸ್ ಮಚ್ಚಾ ಬಾರೋ.

ಅಭಿ,,, ಒಳ್ಳೆ ಕರ್ಮ ಕಣೋ ನಿಂದು ಸರಿ ಬರ್ತೀನಿ, 

ಶೇಖರ್,,, ಥ್ಯಾಂಕ್ಸ್ ಮಚ್ಚಾ 6 ಗಂಟೆಗೆ ಪಿಜಿ ಹತ್ತಿರ ಬಂದು ಬಿಡು ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.

ಸಂಜೆ ಅಭಿ ರೆಡಿ ಆಗಿ ಬೈಕ್ ಅಲ್ಲಿ ಪಿಜಿ ಹತ್ತಿರ ಹೋಗ್ತಾನೆ.

ಶೇಖರ್ ಅವನ ಗರ್ಲ್ಫ್ರೆಂಡ್ ಜೊತೆಗೆ ಮಾತಾಡ್ತಾ ಇರ್ತಾನೆ. ಚೈತ್ರ,,,ಅಭಿ ನ ನೋಡಿ ಹಾಯ್ ಅಭಿ.

ಅಭಿ,,, ಹಾಯ್ ಚೈತ್ರ,, ಹೇಗಿದ್ದೀಯ?

ಚೈತ್ರ,,, ಸೂಪರ್ ಕಣೋ ನೀನು.

ಅಭಿ,,, ನಾವ್ ಸೂಪರ್. ಅಲ್ಲ ಮೂವಿ ಗೆ ಹೋಗೋವ್ರು ಇಬ್ರೇ ಹೋಗೋಕೆ ಆಗೋದಿಲ್ವಾ, ನಾವ್ ಬೇರೆ ಬರಬೇಕಾ?

ಚೈತ್ರ,,, ಲೋ ನಾನ್ ಒಬ್ಳೆ ಹೋದ್ರೆ ನನ್ನ ಫ್ರೆಂಡ್ ಒಬ್ಳೆ ಆಗಿ ಬಿಡ್ತಾಳೆ. ಪಾಪ ನಾನ್ ಬರೋತನಕ ಅವಳು ಒಬ್ಳೆ ಇರಬೇಕು, ಅದಕ್ಕೆ.

ಅಭಿ,,, ಸರಿ ಎಲ್ಲಿ ನಿಮ್ ಫ್ರೆಂಡ್.

ಚೈತ್ರ,,, ಆಗೋ ಬಂದ್ಲು ಅಂತ ಒಂದು ಹುಡುಗಿ ಅವರ ಕಡೆಗೆ ಬರ್ತಾ ಇರೋದನ್ನ ತೋರಿಸ್ತಾ ಹೇಳ್ತಾಳೆ.

ಅಭಿ ಅ ಹುಡುಗಿ ಕಡೆಗೆ ನೋಡ್ತಾನೆ. 

ಅ ಹುಡುಗಿ ಹತ್ತಿರ ಬರ್ತಾ, ಚೈತ್ರ ಹೋಗೋಣ್ವ ಅಂತ ಹೇಳ್ತಾಳೆ.

ಚೈತ್ರ,,, ಅಭಿ ಇವಳು ನನ್ನ ಫ್ರೆಂಡ್ ಸಾರಿಕ ಅಂತ, ಸಾರಿಕ ಇವನು ಶೇಖರ್ ಫ್ರೆಂಡ್ ಅಭಿ ಅಂತ ಪರಿಚಯ ಮಾಡಿಸ್ತಾಳೆ.

ಅಭಿ,,, ಸ್ಮೈಲ್ ಮಾಡಿ ಹಾಯ್.

ಸಾರಿಕ,,, ಸ್ಮೈಲ್ ಮಾಡಿ ಹಲೋ.

ಅಭಿ,,, ಸರಿ ಹೋಗೋಣ್ವಾ?

ಶೇಖರ್,,, ಹ್ಮ್ ಹೋಗೋಣ ಮಚ್ಚಾ.

ಸಾರಿಕ,,, ಚೈತ್ರ ಕಡೆಗೆ ನೋಡ್ತಾ ಇವಾಗ ಬೈಕ್ ಅಲ್ಲಿ ಹೋಗಬೇಕಾ?

ಚೈತ್ರ,,, ಯಾಕೆ ಏನಾಯ್ತು, 

ಸಾರಿಕ,,, ಲೇ ಯಾರೋ ಏನೋ ಗೊತ್ತಿಲ್ಲ, ಬೈಕ್ ಅಲ್ಲಿ ಅಂದ್ರೆ?

ಚೈತ್ರ,,, ಲೇ ಅಭಿ ನನಗೆ 1 ಇಯರ್ ಯಿಂದ ಗೊತ್ತು, ಏನು ಪ್ರಾಬ್ಲಮ್ ಆಗಲ್ಲ ಬಾ ನೀನು ಅಂತ ಹೇಳಿ ಸಾರಿಕ ಗೆ ಅಭಿ ಬೈಕ್ ಅಲ್ಲಿ ಕೂತ್ಕೋಳ್ಳೋಕೆ ಹೇಳಿ ಚೈತ್ರ ಶೇಖರ್ ಬೈಕ್ ಅಲ್ಲಿ ಕೂತ್ಕೋತಾಳೆ. 

ನಾಲಕ್ಕು ಜನ ಥೀಯೇಟರ್ ಕಡೆಗೆ ಹೋಗ್ತಾರೆ. 

@@@@@@@@@@@@@@@@@@@@@@@@@