ಅಧ್ಯಾಯ 19 : "ಸತ್ಯ ಹೊರಬಂದ ಕ್ಷಣ"
ಸೂರ್ಯನ ಮನೆಯಿಂದ ಬೇಗನೆ ಹೊರಟು ಎಲ್ಲರೂ ಜೆಕೆ ಮನೆಗೆ ತಲುಪಿದರು ಎರಡು ವರ್ಷಗಳ ನಂತರ ಮನೆಗೆ ಮರಳಿ ಬಂದ ಮಕ್ಕಳನ್ನು ನೋಡಲು ಆ ಮನೆ ತುಂಬಾ ಆತುರ ಮತ್ತು ಸಂತೋಷದಿಂದ ಕಾದಿತ್ತು
ಮನೆಯೊಳಗೆ ಕಾಲಿಟ್ಟ ಕೂಡಲೇ ಹಾಲ್‌ನಲ್ಲಿ ಕುಳಿತಿದ್ದ ಚಂದ್ರಿಕಾ ಇವರನ್ನು ನೋಡುತ್ತಲೇ ಎದ್ದು ನಿಂತರು
“ಮಗನೇ ಜೆಕೆ.. ಎಷ್ಟು ದಿನ ಆಯ್ತೋ ನಿನ್ನ ನೋಡಿ…” ಎಂದು ಹೇಳುತ್ತಾ ಖುಷಿಯಿಂದ ಜೆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡರು.
“ಚಿಕ್ಕಿ.... ಈಗ ನಿಮ್ಮನ್ನ ನೋಡಿ ಮನಸ್ಸಿಗೆ ತುಂಬಾ ಸಮಾಧಾನ ಆಗ್ತಿದೆ ನನ್ನ ಮುದ್ದು ಚಿಕ್ಕಿ,” ಎಂದು ಜೆಕೆ ಮೃದುವಾಗಿ ನಗುತ್ತಾನೆ
ಆನಂದದಿಂದ ತುಂಬಿದ ಚಂದ್ರಿಕಾ ತಕ್ಷಣ ಮನೆಯೊಳಗೆ ಕೂಗಿದರು
“ಅತ್ತೆ, ಯಶೋಧ ಅಕ್ಕ, ಕಮಲಾ ಅಕ್ಕ… ಇಲ್ಲಿ ಬೇಗ ಬನ್ನಿ ಯಾರು ಬಂದಿದಾರೆ ನೋಡಿ!”
ಜೆಕೆಯನ್ನು ನೋಡಿದ ಸಂತೋಷವನ್ನು ಮಾತಿನಲ್ಲಿ ಹೇಳಲು ಚಂದ್ರಿಕಾಗೆ ಆಗಲೇ ಇಲ್ಲ ಆ ಶಬ್ದ ಕೇಳಿ ಮನೆಯ ಎಲ್ಲರೂ ಕೂಡಲೇ ಅಲ್ಲಿಗೆ ಬರುತ್ತಾರೆ.
“ನನ್ನ ಮೊಮ್ಮಕ್ಕಳು ಬಂದ್ಬಿಟ್ರಾ…” ಎಂದು ಲಕ್ಕಿ ಸಂತೋಷದಿಂದ ಹೇಳಿದಳು
“ಹೈ!!.. ಮೈ ಡಾರ್ಲಿಂಗ್, How are you?” ಎಂದು ಹೇಳುತ್ತಾ ಮೂವರು ಅಜ್ಜಿ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ
ಲಕ್ಕಿ ಅವರನ್ನು ಗಟ್ಟಿಯಾಗಿ ತಬ್ಬಿಕೊಳ್ಳುವಾಗ ಸಂತೋಷದಲ್ಲಿ ಕಣ್ಣೀರು ತುಂಬಿತು
“ಇವತ್ತು ನನಗಂತು ಎಷ್ಟು ಸಂತೋಷ ಆಗ್ತಿದೆ ಗೊತ್ತಾ…” ಎಂದು ಹೇಳುತ್ತಾ ಅವರ ತಲೆಯನ್ನು ಮುದ್ದಾಡಿದರು.
ಯಶೋಧ ಮತ್ತು ಕಮಲಾ ಕೂಡ ಮಕ್ಕಳನ್ನು ಪ್ರೀತಿಯಿಂದ ತಬ್ಬಿಕೊಂಡು ಎರಡು ವರ್ಷದ ದೂರವನ್ನು ಒಂದೇ ಕ್ಷಣದಲ್ಲಿ ಮರೆಯುವಂತೆ ಮಾಡಿದರು
ಅಷ್ಟರಲ್ಲಿ ಮನೆಯ ಉಳಿದ ಸದಸ್ಯರಾದ ಕೇಶವ್, ಸುಧಾಕರ್, ಶಶಿಧರ್ ಮತ್ತು ಜೆಕೆ ಅಣ್ಣಂದಿರು ಕೂಡ ಅಲ್ಲಿಗೆ ಬಂದರು. ಇವರ ಮುಖದಲ್ಲೂ ಸಂಭ್ರಮ ಸ್ಪಷ್ಟವಾಗಿ ಕಾಣುತ್ತಿತ್ತು
“ನಂಗೆ ಗೊತ್ತಿತ್ತು ನೀವು ಏನಾದ್ರೂ ಸಾಧನೆ ಮಾಡ್ತೀರಿ ಅಂತ ಮಗನೆ ಜೆಕೆ,” ಎಂದು ಹೇಳುತ್ತಾ ಕೇಶವ್ ಜೆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಹಣೆಗೆ ಮುತ್ತು ಕೊಟ್ಟರು
“ಅಣ್ಣ ನೋಡಿದ್ರಾ…” ಎಂದು ಕೇಶವ್ ಹೆಮ್ಮೆಪಟ್ಟು ಕೇಳಿದರು.
“ನೋಡ್ತಾ ಇದೀವಿ ಅಲ್ವೇನೋ…” ಎಂದು ಸುಧಾಕರ್ ನಗುತ್ತಾ ಉತ್ತರಿಸಿದರು
ಮೂರು ಜನರೂ ಕೇಶವ್, ಸುಧಾಕರ್ ಮತ್ತು ಶಶಿಧರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು
“ಅಂತೂ ನನ್ನ ಮಾತಿಗೆ ಗೌರವ ಕೊಟ್ಟು ಅದನ್ನ ಉಳಿಸಿಕೊಂಡುಬಿಟ್ಟ್ರಿ… ತುಂಬಾ ಸಂತೋಷ ಮಕ್ಕಳೇ,” ಎಂದು ಶಶಿಧರ್ ಸಂತೋಷದಿಂದ ಹೇಳಿದರು
ಆ ಸಂತೋಷದ ಮಧ್ಯೆ ಸೂರ್ಯ ಎಲ್ಲರ ಜೊತೆ ನಗುತ್ತಿರುವಂತೆ ನಟಿಸುತ್ತಿದ್ದರೂ, ಅವನ ಕಣ್ಣುಗಳು ಮಾತ್ರ ಅಮ್ಮುವನ್ನು ಹುಡುಕುತ್ತಲೇ ಇರುತ್ತವೆ
“ಇಗ ಎಲ್ಲರಿಗೂ ಸಮಾಧಾನನಾ ಅಮ್ಮ? ನೋಡಿದೆಯಾ… ಎರಡು ವರ್ಷ ಎಷ್ಟು ಬೇಗ ಹೋಯ್ತು ಇವರನ್ನ ಕಳಿಸೋಕೆ ಎಲ್ಲರೂ ಎಷ್ಟು ಚಿಂತೆ ಮಾಡ್ತಿದ್ರಿ,” ಎಂದು ಶಶಿಧರ್ ಕೇಳುತ್ತಾರೆ.
“ನೀನಗೇನೋ ಗೊತ್ತು… ನಾವು ಎರಡು ವರ್ಷ ಹೇಗೆ ಕಳದ್ವಿ ಅಂತ ನಮ್ಗೆ ಮಾತ್ರ ಗೊತ್ತು,” ಎಂದು ಲಕ್ಕಿ ನಗುಮಿಶ್ರಿತ ನೋವಿನಿಂದ ಹೇಳಿದರು
“ಅಮ್ಮ ಈಗ ಬಂದಿದಾರಲ್ಲ… ಖುಷಿಯಾಗಿರು. ಅದೂ ಸರಿಯಾದ ಸಮಯಕ್ಕೆ ಬಂದಿದಾರೆ,” ಎಂದು ಸುಮತಿ ಹೇಳಿದರು.
“ಸುಮತಿ ನಿನಗೆ ಬೇಗ ಬರೋಕೆ ಹೇಳಿದ್ವಿ ಅಲ್ವಾ… ಯಾಕೆ ಇಷ್ಟು ಲೇಟ್ ಮಾಡ್ದೆ? ಇನ್ನೇನು ಬೀಗರು ಬರೋ ಸಮಯ,” ಎಂದು ಕಮಲಾ ಕೇಳಿದಳು
“ಸಾರಿ ಅತ್ತಿಗೆ… ಸರಿ ಈಗ ಬನ್ನಿ ಬೇಗ ಬೇಗ ತಯಾರಿ ಮಾಡ್ಕೊಳೋಣ,” ಎಂದು ಹೇಳುತ್ತಾ ಅವರು ಎಲ್ಲರೂ ಅಡುಗೆ ಮನೆಯ ಕಡೆ ಹೋಗುತ್ತಾರೆ.
ಹಾಲ್‌ನಲ್ಲಿ ಶಶಿಧರ್, ಶೇಖರ್, ಕೇಶವ್ ಮತ್ತು ಸುಧಾಕರ್ ಮಾತಾಡುತ್ತಾ ಕುಳಿತರು
“ಸರಿ ನೀವು ಹೋಗಿ ರೂಮ್‌ನಲ್ಲಿ ಸ್ವಲ್ಪ ರೆಸ್ಟ್ ಮಾಡಿ. ನಾನು ರಮ್ಯಾಳ ಕೈಯಲ್ಲಿ ಕಾಫಿ ಕಳಿಸ್ತಿನಿ,” ಎಂದು ಲಕ್ಕಿ ಹೇಳಿದರು
“ಅಯ್ಯೋ ಅಜ್ಜಿ… ಅವರು ಅತ್ತೆ ಮನೆಯಲ್ಲಿ ಈಗಾಗಲೇ ರೆಸ್ಟ್ ಮಾಡ್ದಾರೆ. ಅವರಿಗೆ ಈಗ ರೆಸ್ಟ್ ಮಾಡೋ ಅವಶ್ಯಕತೆ ಇಲ್ಲ ಅಲ್ವಾ ಜೆಕೆ?” ಎಂದು ಮಾಧವ್ ಜೆಕೆಯನ್ನು ನೋಡುತ್ತಾ ಕೇಳಿದ
ಜೆಕೆ ಮನಸ್ಸಿನಲ್ಲಿ ಯೋಚಿಸುತ್ತಾನೆ —
(ಇದೇನಿದು… ಅಣ್ಣ ಒಂತರ ನೋಡ್ತಿದಾನಲ್ಲವಾ…?)
ಅವನು ಪಕ್ಕದಲ್ಲಿದ್ದ ಸೂರ್ಯನಿಗೆ ನಿಧಾನವಾಗಿ ಹೇಳುತ್ತಾನೆ.
“ಲೋ… ಸೂರ್ಯ ಅಣ್ಣನ ಗಮನಿಸಿದೆಯಾ?”
“ಹೌದು ಕಣೋ… ಯಾಕೋ ಸ್ವಲ್ಪ ಸ್ಟ್ರೇಂಜ್ ಅನಿಸ್ತಾ ಇದೆ,” ಎಂದು ಸೂರ್ಯ ಉತ್ತರಿಸಿದ.
“ಯಾಕೋ… ಈ ಅಣ್ಣನ ಹಗ್ ಮಾಡ್ಕೊಳಲ್ವಾ?” ಎಂದು ಮಾಧವ್ ಮತ್ತೆ ಕೇಳಿದ
“ಅಯ್ಯೋ ಹಾಗೇನೂ ಇಲ್ಲ ಅಣ್ಣ…” ಎಂದು ಹೇಳುತ್ತಾ ಜೆಕೆ ಮಾಧವ್ ಹತ್ತಿರ ಹೋಗಿ ಹಗ್ ಮಾಡ್ಕೊಳ್ತಾನೆ
ಆಗ ಮಾಧವ್ ಜೆಕೆ ಕಿವಿಯ ಬಳಿ ಮೆಲ್ಲನೆ ಹೇಳಿದ.
“ಸರ್… ತಾವು ನಮ್ಮ ರೂಮ್ ಗೆ ಬರ್ತೀರಾ? ನಾನು ಮತ್ತೆ ಭುವಿ ನಿಮ್ಮ ಹತ್ರ ಸ್ವಲ್ಪ ಕಷ್ಟ ಸುಖ ಮಾತಾಡ್ಬೇಕು”
ಜೆಕೆ ತಲೆ ಆಡಿಸುತ್ತಾನೆ. ಆದರೆ ಅವನ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳು ಓಡಾಡುತ್ತವೆ.
(ಜೆಕೆ… ಕೂಲ್ ಆಗಿರು. ಇವತ್ತು ಏನೇ ಆದ್ರೂ ಸೂರ್ಯನ ಲವ್ ಮ್ಯಾಟರ್ ಮನೆಯವರಿಗೆ ಹೇಳಲೇಬೇಕು. ಅಣ್ಣ ಕೋಪ ಮಾಡಿದ್ರೂ ಕೂಲ್ ಆಗಿ ಹ್ಯಾಂಡಲ್ ಮಾಡ್ಬೇಕು.)
“ಸೂರ್ಯ, ಕಾರ್ತಿ… ಅಣ್ಣ ಕರಿತಿದಾನೆ ಬಣ್ರೋ ಹೋಗೋಣ,” ಎಂದು ಜೆಕೆ ಹೇಳುತ್ತಾನೆ
“ಇಲ್ಲ ಕಣೋ… ನಾನು ಅಮ್ಮು ನಾ ನೋಡೋಕೆ ಹೋಗ್ತೀನಿ. ಅವಳು ರೂಮ್ ಇಂದ ಹೊರಗೆ ಬಂದಿಲ್ಲ. ನನಗೆ ತುಂಬಾ ಟೆನ್ಷನ್ ಆಗ್ತಿದೆ. ನೀನೇ ಹೋಗಿ ಬಾರೋ,” ಎಂದು ಸೂರ್ಯ ಹೇಳುತ್ತಾನೆ.
“ಲೋ ಕಾರ್ತಿ… ಅಣ್ಣ ಸ್ವಲ್ಪ ವಿಚಿತ್ರವಾಗಿ ಆಡ್ತಿದಾನೆ ನನಗೆ ಭಯ ಆಗ್ತಿದೆ. ನೀನು ನನ್ನ ಜೀವದ ಗೆಳೆಯ ಅಲ್ವೇನೋ ಪ್ಲೀಸ್ ಬಾರೋ,” ಎಂದು ಜೆಕೆ ಬೇಡಿಕೊಳ್ಳುತ್ತಾನೆ
“ಸರಿ… ಆದರೆ ಅಣ್ಣ ಬೈದ್ರೆ ನನ್ನ ಸಿಕ್ಕಾಸ್ಬೇಡ ಮತ್ತೆ,” ಎಂದು ಕಾರ್ತಿಕ್ ಹೇಳುತ್ತಾನೆ.
“ನಾನು ಹಾಗೆ ಮಾಡ್ತೀನ ಹಾ!” ಎಂದು ಜೆಕೆ ನಗುತ್ತಾನೆ
ಹೀಗೆ ಇಬ್ಬರೂ ಮಾಧವ್ ರೂಮ್ ಕಡೆ ಹೋಗುತ್ತಾರೆ
ಇದೇ ಸಮಯದಲ್ಲಿ ಸೂರ್ಯ ಎಲ್ಲರೂ ಬ್ಯುಸಿ ಆಗಿರುವುದನ್ನು ನೋಡಿ ಅಮ್ಮು ರೂಮ್ ಕಡೆ ಹೋಗುತ್ತಾನೆ
ಮಾಧವ್ ಮತ್ತು ಭುವನ್ ರೂಮ್‌ನಲ್ಲಿ ಕಾಯುತ್ತಿರುತ್ತಾರೆ. ಜೆಕೆ ಮತ್ತು ಕಾರ್ತಿಕ್ ಒಳಗೆ ಬಂದ ತಕ್ಷಣ ಮಾಧವ್ ಡೋರ್ ಕ್ಲೋಸ್ ಮಾಡ್ತಾನೆ.
ಇಬ್ಬರೂ ಭಯದಿಂದ ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾರೆ.
“ಸರ್… ನಿಮ್ಮ ಇನ್ನೊಬ್ಬ ಜೀವದ ಗೆಳೆಯ ಸೂರ್ಯ ಅವರು ಬರ್ಲಿಲ್ವಾ?” ಎಂದು ಭುವನ್ ಕೇಳಿದ.
ಜೆಕೆ ಗಾಬರಿಯಾಗುತ್ತಾನೆ.
“ಅದು… ಇಲ್ಲ ಅಣ್ಣ…”
“ಅಯ್ಯೋ ಬ್ರೋ… ಸರ್ ನಾ ನಿಲ್ಸಿ ಮಾತಾಡ್ತಿದಿಯ? ಜೆಕೆ ಸರ್ ಕೂತೊಳ್ಳಿ ಪ್ಲೀಸ್,” ಎಂದು ಮಾಧವ್ ಹೇಳುತ್ತಾನೆ
“ಯಾಕ್ರೋ… ಹೀಗೆಲ್ಲ ಮಾತಾಡ್ತಾ ಇದೀರಾ? ನನ್ನಿಂದ ಏನಾದ್ರೂ ಮಿಸ್ಟೇಕ್ ಆಯ್ತಾ?” ಎಂದು ಜೆಕೆ ಗಾಬರಿಯಿಂದ ಕೇಳುತ್ತಾನೆ
“ಮಿಸ್ಟೇಕ್… ಹ್!! ನಿನ್ನ ಪಾಲಿಗೆ ನಾವಿಬ್ಬರೂ ಸತ್ತೋಗಿದಿವಿ ಅಲ್ವಾ,” ಎಂದು ಭುವನ್ ಹೇಳುತ್ತಾನೆ.
“ಬ್ರೋ… ಏನಿದು ಇತರ ಮಾತಾಡ್ತಿದಿರಾ?” ಎಂದು ಜೆಕೆ ಕೇಳುತ್ತಾನೆ
ಮಾಧವ್ ನೇರವಾಗಿ ಪ್ರಶ್ನೆ ಮಾಡುತ್ತಾನೆ
“ಯಾಕೋ ಸೂರ್ಯ ಮತ್ತೆ ಅಮ್ಮು ಪ್ರೀತಿ ವಿಷಯ ನಾ ನಮ್ಮಿಂದ ಮುಚ್ಚಿಟ್ಟೆ?”
ಆ ಮಾತು ಕೇಳಿ ಜೆಕೆ ಮತ್ತು ಕಾರ್ತಿಕ್ ಇಬ್ಬರೂ ಶಾಕ್ ಆಗುತ್ತಾರೆ
“ಅದು… ಅದು…” ಎಂದು ಜೆಕೆ ಮಾತು ತೊದಲಿಸುತ್ತಾನೆ.
“ಅಣ್ಣ ನಿಮಗೆ ಈ ವಿಷಯ ಹೇಗೆ ಗೊತ್ತಾಯ್ತು?”
“ಅದೆಲ್ಲ ಬಿಡು ಮೊದಲು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡು ಯಾಕೆ ನಮ್ಗೆ ಹೇಳ್ದೆ ಮುಚ್ಚಿಟ್ಟ್ರಿ?” ಎಂದು ಮಾಧವ್ ಕಠಿಣವಾಗಿ ಕೇಳುತ್ತಾನೆ
ಜೆಕೆ ಗಾಬರಿಯಿಂದ ಕಾರ್ತಿಕ್ ಕಡೆ ನೋಡುತ್ತಾನೆ.
“ಕಾರ್ತಿ ಇದಾನಲ್ವ… ಇವನೇ ಹೇಳ್ಬೇಡ ಅಂತ ಹೇಳ್ದ,” ಎಂದು ಹೇಳುತ್ತಾನೆ
“ಯಾಕೋ ಕಾರ್ತಿಕ್?” ಎಂದು ಭುವನ್ ಕೇಳುತ್ತಾನೆ.
ಕಾರ್ತಿಕ್ ಮನಸ್ಸಿನಲ್ಲಿ ಯೋಚಿಸುತ್ತಾನೆ —
(ನನಗೆ ಗೊತ್ತಿತ್ತು ಇವನು ಹೀಗೆ ಮಾಡ್ತಾನೆ ಅಂತ… ಈಗ ನಾನೇನು ಹೇಳಲಿ!)
ಅವನು ಜೆಕೆ ಹತ್ತಿರ ಬಂದು ನಿಧಾನವಾಗಿ ಹೇಳುತ್ತಾನೆ
“ಲೋ… ನಿಂಗೆ ಮೊದಲೇ ಹೇಳಿದ್ದೆ ಅಲ್ವಾ ನನ್ನ ಸಿಕ್ಕಾಸ್ಬೇಡ ಅಂತ.”
ಮಾಧವ್ ಮತ್ತೆ ಕೇಳುತ್ತಾನೆ
“ಕಾರ್ತಿಕ್ ಯಾಕೆ ನಮ್ಗೆ ಹೇಳ್ಬೇಡ ಅಂತ ಹೇಳ್ದೆ?”
ಜೆಕೆ ಮತ್ತೆ ಹೇಳುತ್ತಾನೆ
“ಅಣ್ಣ… ಸೂರ್ಯ ನಮ್ಗೆ ಏನು ಹೇಳ್ದ ಅಂದ್ರೆ… ನಮ್ಮ ಎಜುಕೇಶನ್ ಕಂಪ್ಲೀಟ್ ಆದ್ಮೇಲೆ ಹೇಳಿ ಅಂತ.”
“ಶ್!! ನಿನ್ನ ಡ್ರಾಮಾ ನಮ್ಮ ಹತ್ರ ಬೇಡ,” ಎಂದು ಮಾಧವ್ ಕೋಪದಿಂದ ಹೇಳುತ್ತಾನೆ
ಆಗ ಜೆಕೆ ಸತ್ಯ ಹೇಳಿಬಿಡುತ್ತಾನೆ
“ಸೂರ್ಯ ಯಾರ ಹತ್ರಾನೂ ಹೇಳ್ಬೇಡ ಅಂತ ಪ್ರಾಮಿಸ್ ಮಾಡಸ್ಗೊಂಡಿದ್ದ ಅಣ್ಣ.”
ಕಾರ್ತಿಕ್ ಕೂಡ ತಲೆ ಅಲ್ಲಾಡಿಸುತ್ತಾನೆ.
“ಹೌದು ಬ್ರೋ.”
“ಸರಿ… ಹೋಗು ಜೆಕೆ ಹೋಗಿ ಸೂರ್ಯ ನಾ ಕರ್ಕೊಂಡು ಬಾ,” ಎಂದು ಭುವನ್ ಹೇಳುತ್ತಾನೆ
ಜೆಕೆ ಗಾಬರಿಯಿಂದ ಹೊರಗೆ ಬರುತ್ತಾನೆ
ಅವನು ನೇರವಾಗಿ ಅಮ್ಮು ರೂಮ್ ಕಡೆ ಹೆಜ್ಜೆಗಳನ್ನು ಇಡುತ್ತಾನೆ…
ಮುಂದುವರೆಯುವುದು...
ಲೇಖಕರ ಟಿಪ್ಪಣಿ :
ಈ ಅಧ್ಯಾಯದಲ್ಲಿ ಕುಟುಂಬದ ಸಂತೋಷದ ನಡುವೆಯೇ ಒಂದು ಸತ್ಯ ನಿಧಾನವಾಗಿ ಹೊರಬರುತ್ತಿರುವ ಕ್ಷಣ ಎರಡು ವರ್ಷಗಳ ನಂತರ ಮನೆಗೆ ಮರಳಿದ ಮಕ್ಕಳ ಸಂತೋಷದ ನಡುವೆ, ಸೂರ್ಯ ಮತ್ತು ಅಮ್ಮು ಪ್ರೀತಿಯ ರಹಸ್ಯ ಮನೆಯವರಿಗೆ ಗೊತ್ತಾಗೋ ಸಮಯ
ಈ ಪ್ರೀತಿಯನ್ನು ಕುಟುಂಬ ಹೇಗೆ ಸ್ವೀಕರಿಸುತ್ತದೆ?
ಸೂರ್ಯನಿಗೆ ಎದುರಾಗುವ ಸವಾಲುಗಳು ಏನು?
ಮತ್ತು ಜೆಕೆ ಈ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡುತ್ತಾನೆ?
ನಿಮ್ಮ ಅಭಿಪ್ರಾಯಗಳು ಮತ್ತು ಅನಿಸಿಕೆಗಳನ್ನು ತಪ್ಪದೆ ಹಂಚಿಕೊಳ್ಳಿ
ಧನ್ಯವಾದಗಳು