She came unwillingly... - 8 in Kannada Drama by Kavya Pattar books and stories PDF | ಬಯಸದೆ ಬಂದವಳು... - 8

Featured Books
Categories
Share

ಬಯಸದೆ ಬಂದವಳು... - 8


ಅಧ್ಯಾಯ 8 : "ಹೃದಯದಿಂದ ಬಂದ ಯೋಜನೆ" 

ಜೆಕೆ, ಕಾರ್ತಿಕ್, ಪ್ರವೀಣ್ ಮತ್ತು ಸೂರ್ಯ ಕಾಲೇಜು ಪ್ರವೇಶಿಸುತ್ತಿದ್ದರು. ಸುತ್ತೆಲ್ಲಾ ವಾರ್ಷಿಕೋತ್ಸವದ ಹುರುಪಿನ ತಂಗಾಳಿ. ಆ ವೇಳೆ ಇವರ ಕ್ಲಾಸ್ಮೇಟ್ ಸುರೇಶ್ ಧಾವಿಸುತ್ತಾ ಬಂದು, ಗಂಭೀರ ಮುಖದಿಂದ ಕೇಳಿದನು.

"ಯಾಕ್ರೋ ಇಷ್ಟು ಲೇಟ್ ಮಾಡಿದ್ರಿ? ಜೆಕೆ, ನಿನ್ನನ್ನ ಪ್ರಿನ್ಸಿಪಾಲ್ ಕರೀತಾ ಇದ್ರು!"

ಜೆಕೆ ಶಾಂತವಾಗಿ ಒಂದು ನೋಟ ಹರಿಸಿ, ನಗುತ್ತಾ ಉತ್ತರಿಸಿದನು, "ಓಕೆ, ನಾನು ಹೋಗಿ ಕೇಳ್ತೀನಿ. ಸೂರ್ಯ, ನೀನು ಪ್ರೋಗ್ರಾಂ ಹ್ಯಾಂಡಲ್ ಮಾಡು. ನೀವು ರಿಹರ್ಸಲ್ ಎಲ್ಲ ಹೇಗಿದೆ ಅಂತಾ ಚೆಕ್ ಮಾಡ್ಕೋ. ನಾನು ಪ್ರಿನ್ಸಿಪಾಲ್ ರೂಮ್ ಗೆ ಹೋಗಿ ಬರ್ತೀನಿ."

ಅಂತು, ಆತ ಪ್ರಿನ್ಸಿಪಾಲ್ ರೂಮ್ ಕಡೆ ಹೆಜ್ಜೆ ಇಟ್ಟ. ಹತ್ತಿರ ಬಂದು ತೆರೆದ ಬಾಗಿಲಿಗೆ ಹೆಜ್ಜೆ ಇಟ್ಟು, ಶಿಸ್ತಾಗಿ ಕೇಳಿದನು:

"May I come in, Sir?"

ಪ್ರಿನ್ಸಿಪಾಲ್ ಗಂಭೀರ ನೋಟದಿಂದ ತಲೆಊಗಿಸಿ ಹೇಳಿದರು, "Come in, ಜಯ ಕಾರ್ತಿಕ್."
ಜೆಕೆ ಕೊಂಚ ಗಂಭೀರವಾಗಿ ಹೆಜ್ಜೆ ಹಾಕಿ ಒಳಗೆ ಹೋದನು.

"ಸರ್, ನೀವು ನನಗೆ ಬರೋಕೆ ಹೇಳಿದ್ರಿ ಅಂತೆ. ನಾವು ಹಾಕಿರೋ ಪ್ಲಾನ್‌ನಲ್ಲಿ ಏನಾದ್ರೂ ಚೇಂಜಸ್ ಮಾಡ್ಬೇಕಾ?"

ಪ್ರಿನ್ಸಿಪಾಲ್ ನಗುತ್ತಾ ಹೇಳಿದರು, "ನಿಮ್ಮನ್ನ ಏನೋ ಅಂದುಕೊಂಡಿದ್ದೆ, ಆದರೆ... ಪರವಾಗಿಲ್ಲ ಜೆಕೆ. ಕೀಪ್ ಇಟ್ ಅಪ್ ."

ಜೆಕೆಗೆ ಚಿಕ್ಕ ಸಂಶಯ. "ಸರ್, ನೀವು ಯಾವದ್ರ ಬಗ್ಗೆ ಮಾತಾಡ್ತಾ ಇದೀರಾ ಅರ್ಥ ಆಗ್ತಿಲ್ಲ..."
ಅಷ್ಟರಲ್ಲಿ ಬಾಗಿಲಿಗೆ ಮತ್ತೊಬ್ಬ knock ಕೇಳಿಬಂತು.

"May I come in, Sir?" ಎಂದು ರಾಜೇಶ್ ಪ್ರವೇಶಕ್ಕೆ ಅಣಿಯಾದನು.

"Come in ರಾಜೇಶ್. ಹೇಳಿ, ಏನಾದ್ರೂ ಪ್ರಾಬ್ಲಮ್?"

ರಾಜೇಶ್ ನೇರವಾಗಿ ಮುನ್ನುಗ್ಗಿ ಹೇಳಿದರು, "ಸರ್, ನನಗೆ ಜೆಕೆ ಮಾಡ್ತಿರೋ ಕಾನ್ಸೆಪ್ಟ್ ಇಷ್ಟ ಆಗತಿಲ್ಲಾ."

(ರಾಜೇಶ್ ಕೂಡಾ ಜೆಕೆ ಕ್ಲಾಸ್ಮೇಟ್ ಇವನಿಗೆ ಜೆಕೆ ಮತ್ತು ಅವನ ಸ್ನೇಹಿತರನ್ನು ಕಂಡರೆ ಆಗುವುದಿಲ್ಲ, ಅವರು ಯಾವಾಗಲೂ ಸ್ಟೂಡೆಂಟ್ಸ್ ಗೆ ಏನೇ ತೊಂದರೆ ಆದರೂ ಸಹಾಯ ಮಾಡುತ್ತಾರೆ  ಮತ್ತು ಎಲ್ಲರ ಸಪೋರ್ಟ್ ಜೆಕೆ ಟೀಮ್ ಗೆ ಇರೋದು ಹಾಗೆ ಜೆಕೆ ಕಾಲೇಜ್ ಲೀಡರ್ ಆಗಿರೋದು ರಾಜೇಶ್ ಗೆ ಸಹಿಸಿಕೊಳ್ಳಲು ಆಗದಿರುವುದಕ್ಕೆ ರಾಜೇಶ್ ಗೆ ಸ್ವಲ್ಪ ಇವನನ್ನು ಕಂಡರೆ ಜೆಲಸ್ , ಜೆಕೆ  ಏನೇ ಕೆಲಸ ಮಾಡಿದರೂ ಅದಕ್ಕೆ ಕಡ್ಡಿ ಅಲ್ಲಾಡಿಸುವುದೇ ಈ ರಾಜೇಶ್ ಮತ್ತು ಅವನ ಟೀಮ್ ಕೆಲಸ) 

"ಜೆಕೆ ಸ್ವಲ್ಪ ಗೊಂದಲದಿಂದ ಯಾವ ಕಾನ್ಸೆಪ್ಟ್ ಬಗ್ಗೆ ಮಾತಾಡ್ತಾ ಇದ್ದೀಯಾ" ಅಂತ ರಾಜೇಶ್ ಗೆ ನೇರವಾಗಿ ಕೇಳ್ತಾನೆ "

ಪ್ರಿನ್ಸಿಪಾಲ್( ಗಂಭೀರವಾಗಿ): "ರಾಜೇಶ್ ನಾನು ಜೆಕೆ ಹತ್ರ ಸ್ಪಲ್ಪ ಮಾತಾಡ್ಬೇಕು ನಿಂದು ಏನೇ ಡೌಟ್ಸ ಇದ್ರು ನಾನು ಆಮೇಲೆ ಕ್ಲಿಯರ್ ಮಾಡ್ತೀನಿ ಅಲ್ಲಿ ತುಂಬಾ ಕೆಲಸ ಬಾಕಿ ಇದೆ ಇನ್ನೇನು ಗೆಸ್ಟ್ ಬರೋ ಸಮಯ ನೀನು ಹೋಗಿ ಕೆಲಸ ನೋಡ್ಕೋ"

"ರಾಜೇಶ್ ಮತ್ತೆ ತನ್ನ ಮಧ್ಯಸ್ತಿಕೆ ಯನ್ನು ತೋರಿಸಲು ಪ್ರಯತ್ನಿಸುತ್ತಾನೆ ,ಆದರೆ ಸರ್"... 

ಪ್ರಿನ್ಸಿಪಾಲ್ : "ನಾನು ಹೇಳ್ತಿದೀನಿ ಅಲ್ವಾ ನೀನಿನ್ನೂ ಹೊರಡು"

"ರಾಜೇಶ್ ಕೋಪದಿಂದ ಜೆಕೆ ಗೆ ಚೂಪಾದ ನೋಟವನ್ನು ಬೀರುತ್ತಾ ಅಲ್ಲಿಂದ ಹೋರಡ್ತಾನೇ" 

"ಜೆಕೆ ಗೊಂದಲದಿಂದ ಸರ್ ಅವನು ಯವಾದರ್ ಬಗ್ಗೆ ಮಾತಾಡ್ತಿದಾನೆ ನಂಗೆ ಅರ್ಥ ಆಗಲಿಲ್ಲ" 

ಪ್ರಿನ್ಸಿಪಾಲ್ ಸಮಾಧಾನದಿಂದ " ಏನಿಲ್ಲ ನೀನು ಅನಾಥ ಮಕ್ಕಳ ಫಂಡ್ ಕಾಂಸೆಪ್ಟ್ ಅದರ ಬಗ್ಗೆ ಮಾತಾಡ್ತಿದನೆ ಅವನು ,ನನ್ಗೆ ಈ ಕಾನ್ಸೆಪ್ಟ್ ತುಂಬಾ ಇಷ್ಟ ಆಯ್ತು ನಾನು ಸ್ಪಲ್ಪ ದಿನ ಊರಲ್ಲಿ ಇರಲಿಲ್ಲ ಅದಕ್ಕೆ ಎಲ್ಲಾ ಜವಾಬ್ದಾರಿ HOD ಗೆ ವಹಿಸಿ ಹೋಗಿದ್ದೆ ಅವರು ನಂಗೆ ಕಾಲ್ ಮಾಡಿ ಹೇಳಿದಾಗ ಇಷ್ಟ ಆಯ್ತು ಅದಕ್ಕೆ ok ಅಂತಾ ಹೇಳಿದೆ, ನೀನು ಮಾಡ್ತಿರೋದೇನೋ ಸರಿ ಆದರೆ ಇದರಿಂದ ನಮ್ಮ ಕಾಲೇಜ್ ಗೆ ಏನು ಬೆನಿಫಿಟ್ಸ್ ಸಿಗುತ್ತೆ Can you explain it"

"ಜೆಕೆ ಗಂಭೀರವಾಗಿ Sure ಸರ್ ಇದು ನನ್ನ ಒಬ್ಬನಿಂದ ಮಾಡೋಕೆ ಸಾಧ್ಯಾ ಇಲ್ಲ.. ಎಲ್ಲರ ಒಪ್ಪಿಗೆ ಇಂದಾನೆ ಮಾಡ್ತಿರೋದು ,ಅನಾಥಾಶ್ರಮದಲ್ಲಿ ಹಲವಾರು ಜನ ಪ್ರತಿಭಾವಂತ ಮಕ್ಕಳಿದ್ದಾರೆ ಅವರಿಗೆ ಎಜುಕೇಷನ್ ಸಿಗುತ್ತಿದ್ದರು ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದೇ ಈ ಥೀಮ್ ಆಗಿದೆ , ಮತ್ತು ನಮ್ಮ ಕಾಲೇಜ್ ಗೆ ಅವರೇನಾದ್ರೂ ಅಡ್ಮಿಷನ್ ಮಾಡಿದ್ರೆ ಅವರಿಗೆ ಸ್ಕಾಲರ್ಶಿಪ್ ಕೊಡೋದರ ಮೂಲಕ ಅವರ ಎಜುಕೇಷನ್ ಗೆ ಹೆಲ್ಪ್ ಮಾಡಬಹುದು ,ಈ ತರ ಫಂಡ್ ನಾ ಇಲ್ಲಿ ಯಾವ ಕಾಲೇಜ್ ನವರು ಮಾಡ್ತಾ ಇಲ್ಲ ಹಾಗಾಗಿ ನಾವು ನಾವು ಇದನ್ನ ಮಾಡೋದ್ರಿಂದ ನಮ್ಮ ಕಾಲೇಜ್ ಗೆ ಉತ್ತಮ ಹೆಸರು ಬರುತ್ತೆ ಮತ್ತೆ ನಮ್ಮ ಕಾಲೇಜ್ ಇನ್ನು ಬೆಳಿಯೋಕೆ ಹೆಲ್ಪ್ ಆಗುತ್ತೆ ,ಇವತ್ತು ಬರೋ ಗೆಸ್ಟ್ ಮೂಲಕ ನಾವು ಪ್ರಾರಂಭಿಸುತ್ತೇವೆ ಈಗಾಗಲೇ ಎಲ್ಲ ಫೈನಲ್ ಇಯರ್ ಸ್ಟೂಡೆಂಟ್ಸ್ ಅವರಿಂದ ಎಸ್ಟಾಗತ್ತೋ ಅಷ್ಟು ಅಮೌಂಟ್ ಹಾಕಿದ್ದಾರೆ ಅವರಷ್ಟೇ ಅಲ್ಲ ನಮ್ಮ ಜೂನಿಯರ್ಸ್ ಕೂಡ ಇದಕ್ಕೆ ಒಪ್ಗೊಂಡು ಅವರು ಕೂಡ ಹಾಕಿದ್ದಾರೆ  ನಾವು ಎಸ್ಪೆಕ್ಟ್ ಮಾಡಿದ್ದಕ್ಕಿಂತ ಜಾಸ್ತಿ ಹಣ ಸಂಗ್ರಹಣೆ ಆಗಿದೆ ಇದು ಈ ವರ್ಷ ಅಷ್ಟೆ ಅಲ್ಲ ಪ್ರತಿ ವರ್ಷ ನು ಈ ಫಂಡ್ ಕಲೆಕ್ಟ್ ಆಗತ್ತೆ ನಾವೆಲ್ಲ ಈ ಕಾಲೇಜ್ ಮುಗಿಸಿ ಹೋಗಬಹುದು ಆದರೆ ನಮ್ಮಿಂದ ಈ ಫಂಡ್ ಬರ್ತಾನೆ ಇರುತ್ತೆ , ಇಲ್ಲಿ ಯಾವುದೇ ಫೋರ್ಸ್ ಮಾಡಿ ಹಾಕಿ ಅಂತಾ ನಾವು ಯಾರಿಗೂ ಹೇಳಿಲ್ಲ ಎಲ್ಲರೂ ಅವರ ಒಪ್ಪಿಗೆ ಇಂದ ತಮ್ಮ ದುಡ್ಡನ್ನು ಹಾಕ್ತಿದ್ದಾರೆ so..ನಿಮ್ಮ ಒಪ್ಪಿಗೆ ಇದ್ರೆ ಸಾಕು ಉಳಿದವರಿಗೆ ಇಷ್ಟ ಆದರೂ ಆಗದೆ ಇದ್ರು ಇದನ್ನ ನಿಲ್ಲಿಸೋಕೆ ಆಗಲ್ಲ "

ಪ್ರಿನ್ಸಿಪಾಲ್ ( ಮುಗುಳ್ನಗೆ ಬೀರುತ್ತಾ): "ಬೇಶ್.. ಜೆಕೆ ನಿನಲ್ಲಿ ಇನ್ನೊಬ್ಬರಿಗೆ ಒಳ್ಳೇದು ಮಾಡೊ ಈ ನಿನ್ನ ಗುಣಾನೇ  ನಿನ್ನ ಕಾಪಾಡುತ್ತೆ ನನ್ನ ಒಪ್ಪಿಗೆ ನಿಮಗೆ ಆವಾಗ್ಲೇ ಸಿಕ್ಕಾಯ್ತಲ್ಲ, ನೀನು ಆ ರಾಜೇಶ್ ಬಗ್ಗೆ ತಲೆ ಕೆಡೆಸಿಕೊಳ್ಬೇಡ ನಾನು ಅವನ ಹತ್ರ ಮಾತಾಡ್ತೀನಿ ಸರಿ ಅದೇನಾದರೂ ಮಾಡು ನನ್ನ ಪರ್ಮಿಷನ್ ಇದೆ ಒಟ್ಟಿನಲ್ಲಿ ಇವತ್ತು ಫಂಕ್ಷನ್ ಚೆನ್ನಾಗಿ ಆಗಬೇಕು ಅಷ್ಟೆ ಸರಿ ನೀನು ಹೊರಡು"..

ಜೆಕೆ: "ಓಕೆ ಸರ್ ಸರ್ ಥ್ಯಾಂಕ್ಯೂ ಅಂತ ಹೇಳಿ ರೂಮ್ ಇಂದ ರಿಹರ್ಸಲ್ ರೂಮ್ ಹತ್ರ ಹೋಗ್ತಾನೆ"

ಅಲ್ಲಿ ಎಲ್ಲಾ ಜೂನಿಯರ್ಸ್ ಮತ್ತೆ ಸೀನಿಯರ್ಸ್ ಕೂಡ ರೆಡಿ ಆಗ್ತೀರ್ತಾರೆ, ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಇರುವಾಗ ಕೆಲವು ಜೂನಿಯರ್ಸ್ ಹುಡುಗಿಯರು ಜೆಕೆ ನಾ ನೋಡಿ ವಾವ್ 😍 ಇವತ್ತು ಜೆಕೆ ಎನ್ ಸಖತ್ ಆಗಿ ಕಾಣಸ್ತಿದ್ದಾನೆ ಅಲ್ವೆನ್ರೆ..  ಅದರಲ್ಲಿ ಒಬ್ಬಳು 

ಸುಮಿತ್ರಾ :  "ಇಡೀ ಕಾಲೇಜ್ ಹುಡಗಿರು ಅವನಿಗೆ ಎಷ್ಟೇ ಲೈನ್ ಹಾಕಿದ್ರು ಒಬ್ಬರಿಗೂ ಬೀಳಲಿಲ್ಲ ಅವನು ನಾನು ಎಷ್ಟು ಟ್ರೈ ಮಾಡಿದೆ ಗೊತ್ತಾ.. ನನ್ ಬ್ಯಾಡ್ ಲಕ್".. 

ಹಾಗೆ ಇನ್ನೊಬ್ಬ ಹುಡುಗಿ "ಅವನನ್ನೇ ಕಣ್ಣು ಮಿಟುಕಿಸದೆ ನೋಡುತ್ತಾ ಹೇ!.. ಆ ಡ್ರೆಸ್ ಅವನಿಗೆ ಎಷ್ಟು ಪರ್ಫೆಕ್ಟ್ ಆಗಿ ಸುಟ್ ಆಗಿದೆ ನೋಡ್ರೆ.. ಬರೀ ನೋಡೋಕೆ ಮಾತ್ರ ಹಾಟ್ ಅಂಡ್ ಪರ್ಫೆಕ್ಟ್  ಅಲ್ಲ ಹಾರ್ಟ್ ಇಂದಾನು ಪರ್ಫೆಕ್ ಹಿಂತಾ ಹುಡಗನ್ನ ಪಡಿಯೋ ಹುಡಗಿ ಎಲ್ಲಿದಾಳೂ ಅವಳೇ ಪುಣ್ಯವಂತೆ"..
ಅಂತ ಹೇಳಿ ಎಲ್ಲರೂ ನಗೆಯನ್ನು ಬೀರುತ್ತಾ ಮಾತಾಡ್ತಿರುವಾಗ ಅಲ್ಲಿ ಸುಭಾ ಅನ್ನೋ ಹುಡಗಿ ಬರ್ತಾಳೆ ನಿಮಗೊಂದು ವಿಷಯ ಗೊತ್ತಾ? ಜೆಕೆ ಕ್ಲಾಸ್ಮೇಟ್ ಪೂರ್ವಿ ಅಂತ ಅವಳು ಮೊನ್ನೆ ಜೆಕೆ ಗೆ ಪ್ರಪೋಸ್ ಮಾಡಿದ್ಲು ಅಂತೆ ಇಡೀ ಕಾಲೇಜ್ ಎಲ್ಲಾ ಸುದ್ದಿ ನಿಮ್ಗೆ ಇನ್ನು ಗೊತ್ತಿಲ್ವಾ ಈ ಮ್ಯಾಟರ್ 

"ಸುಮಿತ್ರಾ ಆಶ್ಚರ್ಯದಿಂದ,ಇಲ್ಲ ನಮಗೆ ಗೊತ್ತಿಲ್ಲ.. ಪೂರ್ವಿ ಅದು ಯಾರು ನಾವು ಯಾರು ಅವಳನ್ನ ಇದು ವರೆಗೂ ನೋಡೇ ಇಲ್ಲ"..

ಶುಭಾ: "ನಾನು ನೋಡಿದೀನಿ ಅವಳನ್ನ

ಸುಮಿತ್ರಾ: "ಹೌದಾ!  ಹಾಗಾದ್ರೆ ನಂಗೂ ತೋರಿಸೆ ನಾನು ನೋಡ್ಬೇಕು ಅವಳನ್ನ"

"ಶುಭಾ ತನ್ನ ಅಹಂಕಾರದ ನಗೆಯನ್ನು ಬೀರುತ್ತಾ ,ನಮ್ಮಂತವರಿಗೆ ಬಿದ್ದಿಲ್ಲ ಅವನು ಇನ್ನೂ ಅವಳಿಗೆ ಬೀಳ್ತಾನಾ ಅಂತ ಎಲ್ಲರೂ ಅವಳನ್ನು ಹಾಸ್ಯ ಮಾಡ್ತಾ ನಗೋದೀಕ್ಕೆ ಸ್ಟಾರ್ಟ್ ಮಾಡ್ತಾರೆ",

"ಆ ಹುಡಗಿರು ಮತಾಡೋದನ್ನ ಅಲ್ಲೇ ಇರೋ ರಾಜೇಶ್ ಮತ್ತು ಅವನ ಟೀಮ್ ನವರೂ ಕೇಳಿಸಿಕೊಳ್ತೀರ್ತಾರೇ"..

ರಾಜೇಶ್ : "yes! ಪೂರ್ವಿ ಇವಳನ್ನ ಇಟಗೊಂಡು ಏನಾದ್ರೂ ಮಾಡ್ಬೇಕು ಅಲ್ವಾ guys ಫಸ್ಟ್ ಹೋಗಿ ಅವಳನ್ನ ಮೀಟ್ ಆಗೋಣ ಬನ್ನಿ ಮುಂದೆ ಏನು ಮಾಡ್ಬೇಕು ಅಂತ ಆಮೇಲೆ ಹೇಳ್ತೀನಿ ಅಂತ ಪೂರ್ವಿ ನಾ ಹುಡಕಿ ಕೊಂಡು ಹೋಗ್ತಾರೆ" 

ಇನ್ನು ಈ ಕಡೆ ಜೆಕೆ ಕಾರ್ತಿಕ್ ಮತ್ತು ಸೂರ್ಯ ರ ಹತ್ರ ಬರ್ತಾನೆ 

ಸೂರ್ಯ: "ಪ್ರಿನ್ಸಿಪಾಲ್ ಏನು ಹೇಳಿದರು ಕಣೋ?" 
ಜೆಕೆ : "ಏನಿಲ್ವೋ ಅದೆ ನಾವು ಮಾಡ್ತಿರೋ ಅನಾಥಾಶ್ರಮ ಫಂಡ್ ಬಗ್ಗೆ ಕೇಳೋಕೆ ಕರಿದಿದ್ರು ಎಲ್ಲಾ ಪ್ರಿಪರೇಷನ್ ಕರೆಕ್ಟ್ ಆಗಿ ಆಗಿದೆಯಾ" 

ಕಾರ್ತಿಕ್ ತಲೆ ಆಡಿಸುತ್ತಾ "ಹಾ.. ಎಲ್ಲಾ ಕರೆಕ್ಟ್ ಆಗಿ ಆಗಿದೆ ಆದರೆ ಸ್ವಾತಿ ಫ್ರೆಂಡ್ಸ್ ಅವಳನ್ನ ಕೇಳ್ತಾನೆ ಇದ್ರು ಯಾಕಿಷ್ಟು ಲೇಟ್ ಮಾಡ್ತಿದಾಳೆ ಅಂತ ಗೊತ್ತಾಗ್ತಿಲ್ಲ "

ಜೆಕೆ : "ಇರಿ.. ಕಾಲ್ ಮಾಡಿ ಕೇಳ್ತೀನಿ ಅಂತ ಜೆಕೆ ಸ್ವಾತಿ ಗೆ ಕಾಲ್ ಮಾಡ್ತಾನೆ ಆದರೆ ಸ್ವಾತಿ ಕಾಲ್ ರಿಸೀವ್ ಮಾಡೋದೇ ಇಲ್ಲ"
 
"ಜೆಕೆ ಬೇಜಾರಿನಲ್ಲಿ ಯಾಕೋ ಇವಳು ಇವತ್ತು ಹೀಗೆ ಮಾಡ್ತಿದಾಳೆ ನಂಗೆ ಇನ್ನು ಭಯ ಜಾಸ್ತಿ ಆಗ್ತಾ ಇದೆ ಇವಳು ಹೀಗೆ ಮಾಡ್ತಿರೋದ್ರಿಂದ" 

ಸೂರ್ಯ : "ಹೇ.. ಯಾಕೋ ಸುಮ್ನೆ ಟೆನ್ಶನ್ ಮಾಡ್ಕೋತಿಯ ಬರ್ತಾಳೆ ಇರು..

"ಅಷ್ಟರಲ್ಲಿ ಪ್ರವೀಣ್ ಇವರಿರುವ ಜಾಗಕ್ಕೆ ಬಂದು ಸ್ವಾತಿ ಬಂದ್ಲು ಕಣ್ರೋ ಅಂತ ಖುಷಿಯಲ್ಲಿ ಹೇಳ್ತಾನೆ"

ಜೆಕೆ ಮಂದಹಾಸ ಬೀರುತ್ತಾ ಏನು ಸ್ವಾತಿ ಬಂದ್ಲ? 

ಕಾರ್ತಿಕ್ (ಛೇಡಿಸುತ್ತಾ): "ನೋಡ್ರೋ ಇಸ್ಟೋತನಕ ಸಪ್ಪೆ ಮುಖ ಮಾಡ್ಕೊಂಡವನು ಅವಳು ಬಂದ್ಲು ಅಂತ ಹೆಂಗೆ ಮುಖ ಅರಳಿಸ್ತಿದ್ದಾನೆ ನೋಡಿ" 

ಸೂರ್ಯ: "ಲವ್ ಅಂದ್ರೇನೆ ಹಾಗೆ ಕಣೋ ನಿಂಗೆಲ್ಲ ಇವು ಅರ್ಥ ಆಗೋಲ್ಲ ನೀನು ಇನ್ನು ಚಿಕ್ಕ ಹುಡುಗ "

ಪ್ರವೀಣ್:" ಸರಿಯಾಗಿ ಹೇಳ್ದೆ ಕಣೋ ಜೆಕೆ ಬಾರೋ ಹೋಗೋಣ ಅವಳು ಈಗ ಎಂಟ್ರೆನ್ಸ್ ಗೆ ಬರ್ತಿದ್ದಾಳೆ ಅಂತಾ ಎಲ್ಲರೂ ಸ್ವಾತಿ ಹತ್ರ ಹೋಗ್ತಾರೆ".. 

ಇನ್ನು ಈ ಕಡೆ ರಾಜೇಶ್ ಪೂರ್ವಿನ ಹುಡುಕ್ತಾ ಇರ್ತಾನೆ ಆಗ ಪೂರ್ವಿ ಬಾಲ್ಕನಿಲೀ ಅವಳ ಫ್ರೆಂಡ್ಸ್ ಹತ್ರ ಇರೋದನ್ನ ನೋಡ್ತಾನೆ ಪೂರ್ವಿ ಹತ್ರ ಹೋಗಿ "ಹಾಯ್" ಪೂರ್ವಿ ಅದು ನಾನು.. ಅಷ್ಟರಲ್ಲಿ ಪೂರ್ವಿ ಮುಖದಲ್ಲಿ ಒಂದು ಗಂಭೀರತೆಯನ್ನು ಹೊತ್ತು"ಹೇ.. ರಾಜೇಶ್ ನಾನು ನಿನ್ನೆ ಹುಡಕ್ತಾ ಇದ್ದೆ "

"ರಾಜೇಶ್ ಸ್ವಲ್ಪ ಆಶ್ಚರ್ಯಚಕಿತನಾಗಿ ತನ್ನ ಎರಡು ಕಣ್ಣುಗಳನ್ನು ಅರಳಿಸುತ್ತಾ ಏನು?? ನೀನು ನನ್ನ ಹುಡಕ್ತಾ ಇದ್ದಾ ಯಾಕೆ "?

"ಪೂರ್ವಿ ತನ್ನ ಫ್ರೆಂಡ್ಸ್ ಗಳ ಕಡೆ ಮುಖ ಮಾಡಿ ಹೇ.. ನೀವೆಲ್ಲ ಫಂಕ್ಷನ್ ಹಾಲ್ ನಲ್ಲಿ ಇರಿ ನಾನು ಮತ್ತೆ ಹರ್ಷಾ ಆಮೇಲೆ ಬರ್ತೀವಿ ಅಂತಾ ಪೂರ್ವಿ ಅಲ್ಲಿರೋ ಫ್ರೆಂಡ್ಸ್ ನಾ ಕಳಸ್ತಾಳೆ"
"ಅವರೆಲ್ಲ ಹೋದಮೇಲೆ ರಾಜೇಶ್ ನಾನು ನಿನ್ನ ಹತ್ರ ಸ್ಪಲ್ಪ ಪ್ರೈವೇಟ್ ಆಗಿ ಮಾತಾಡ್ಬೇಕು"

"ರಾಜೇಶ್ ಗೆ ಸ್ವಲ್ಪ ಸ್ಟ್ರೇಂಜ್ ಅನ್ನಿಸಿದರೂ ಕೂಡಾ ಸರಿ ನೀವೆಲ್ಲ ಇಲ್ಲೇ ಇರಿ ನಾನು ಮಾತಾಡ್ಕೊಂಡು ಬರ್ತೀನಿ..ಅಂತಾ ಅವನ ಫ್ರೆಂಡ್ಸ್ ನಾ ಅಲ್ಲೇ ಬಿಟ್ಟು ಹೋಗ್ತಾನೆ ಪೂರ್ವಿ ಮತ್ತೆ ಅವಳ ಫ್ರೆಂಡ್ ಹರ್ಷಾ ಇಬ್ಬರೂ ರಾಜೇಶ್ ನ ಕರೆದುಕೊಂಡು ಹೋಗ್ತಾರೆ"... 

ರಾಜೇಶ್ : "ನಿಲ್ಲಿ ಇಲ್ಲಿ ಯಾರೂ ಬರೋಲ್ಲ ಈಗ ಹೇಳಿ ಏನು ಮಾತಾಡ್ಬೇಕು"

"ಪೂರ್ವಿ ಇನ್ನೇನು ತನ್ನ ಮಾತುಗಳನ್ನು ಶುರು ಮಾಡಬೇಕು ಅಷ್ಟರಲ್ಲಿ ,ಹರ್ಷಾ ಪೂರ್ವಿ ಪ್ಲೀಸ್ ಬೇಡ್ವೆ ಇದೆಲ್ಲ ಮಾಡೋದು ತಪ್ಪು"

"ಪೂರ್ವಿ ಕೋಪದಲ್ಲಿ ನೋಡು ನಿನ್ನ ಫ್ರೆಂಡ್ ಗೆ ಒಳ್ಳೇದು ಆಗಬೇಕು ಅಂತ ನಿನ್ನ ಮನಸಿನಲ್ಲಿ ಇದ್ದರೆ ಇರು ಇಲ್ಲ ಅಂದ್ರೆ ಹೋಗು ನಾನು ನಿನ್ನ ತಡೆಯೋಲ್ಲ"... 

             ಮುಂದುವರೆಯುವುದು...
---
🌸ಲೇಖಕರ ಶೀರ್ಷಿಕೆ 🌸
ಒಳ್ಳೆಯದಕ್ಕಾಗಿ ಸಾಗುವ ಹಾದಿ ಸುಲಭವಾಗಲ್ಲ.
ಈ ಕಥೆ ನಿಮ್ಮ ಮನಸ್ಸಿಗೆ ತಾಕಿದ್ರೆ, ಫಾಲೋ ಮಾಡಿ ಸಾಕು – ಮುಂದುವರಿಯೋದು ನಿಮ್ಮ ಪ್ರೀತಿಯಿಂದಲೇ.
ನಿಮ್ಮ ಒಂದು ಫಾಲೋ, ನನ್ನ ಬರವಣಿಗೆಗೆ ಹೊಸ ಉಸಿರು.
ಇನ್ನೂ ಬೇರೆಬೇರೆ ಪಾತ್ರಗಳು, ತಿರುವುಗಳು ನಿಮ್ಮನ್ನು ಕಾಯುತ್ತಿವೆ!
---