She came unwillingly... - 14 in Kannada Drama by Kavya Pattar books and stories PDF | ಬಯಸದೆ ಬಂದವಳು... - 14

Featured Books
Categories
Share

ಬಯಸದೆ ಬಂದವಳು... - 14


ಅಧ್ಯಾಯ 14: "ಹೆಜ್ಜೆಗಳು ಬದಲಾಗುವ ಸಮಯ"

ಬೆಳಿಗ್ಗೆ ಎದ್ದು ಎಲ್ಲರೂ ತಮ್ಮ ತಮ್ಮ ಮನೆ ಕಡೆಗೆ ಹೆಜ್ಜೆಗಳನ್ನು ಹಾಕ್ತಾರೆ.... 

ಜೆಕೆ ತನ್ನ ಮನೆಗೆ ಸ್ಪಲ್ಪ ಭಯದಲ್ಲೇ ಒಳಗಡೆ ಹೆಜ್ಜೆ ಇಡ್ತಾನೆ... ಒಳಗಡೆ ಬರುತ್ತಿದ್ದ ಹಾಗೆ 

ಆಗ ಮಾಧವ್ ( ಜೆಕೆ ಯ ಅಣ್ಣ) : "ಏನೋ ಒಳ್ಳೆ ಕಳ್ಳರತರ ಯಾರದೋ ಮನೆಗೆ ಬಂದವರ ಹಾಗೆ ಒಳಗಡೆ  ನುಗ್ತಾಇದಿಯಾ, ಆಗ ಜೆಕೆ ಶ್!... ಅವನ ಬಾಯನ್ನು ಗಟ್ಟಿಯಾಗಿ ಹಿಡಿದು ಮುಚ್ಚುತ್ತಾನೆ... ಸುಮ್ನೆ ಇರೋ  ಅಪ್ಪ ,ದೊಡ್ಡಪ್ಪ ಕೆಳಸ್ಗೊಂಡ್ರೆ ಕಷ್ಟ"... 

"ಮಾಧವ್ ಛೇಡಿಸುತ್ತಾ ನೀನು ಏನೇ ಸಾಹಸ ಮಾಡಿದ್ರು ಅವರಿಂದ ತಪ್ಪಿಸಿಕೊಳ್ಳೇಕೆ ಆಗೋಲ್ಲ ,ಸುಮ್ನೆ ಮನೆಗೆ ಬರೋದು ಬಿಟ್ಟು ಅಲ್ಲಿ ಎನ್ ಮಾಡ್ತಿದ್ದೆ ಹಾಗೆ ಅವನನ್ನು ಇನ್ನೂ ಸ್ವಲ್ಪ ಭಯ ಬೀಳಿಸಲು ನಿನ್ನೆ ಅಪ್ಪ ನಿನ್ನ ಮೇಲೆ ತುಂಬಾ ಕೋಪ ಮಾಡ್ಕೊಂಡಿದ್ರು ಗೊತ್ತಾ"...

ಜೆಕೆ ತನ್ನ ಕಣ್ಣುಗಳನ್ನು ಹೊರಳಿಸುತ್ತಾ "ಅದೇನು ಹೊಸ ವಿಷಯನಾ... ಯಾವಾಗ್ಲೂ ನಾನದ್ರೆ ಗುರ್.. ಅಂತಾನೆ ಇರ್ತಾರೆ"   

ಮಾಧವ್ : "ಸರಿ ಬೇಗ ಹೋಗಿ ಫ್ರೆಶ್  ಅಪ್ ಆಗಿ ಬಾ...ಸರಿ ಅಂತಾ ಜೆಕೆ ಅಲ್ಲಿಂದ ಹೊರಡ್ತಾಣೆ"... 

"ಆಗ ಚಂದ್ರಿಕಾ ( ಜೆಕೆ ಚಿಕ್ಕಮ್ಮ )ಹಾಲ್ ಗೆ ಬರುತ್ತಿದ್ದ ಹಾಗೆ ಹೇ.. ಮಾಧವ್ ಜೆಕೆ ವಾಯ್ಸ್ ತರ ಇತ್ತಲ್ಲ ಅವನೇನಾದ್ರು ಮನೆಗೆ ಬಂದ್ನ... ಹಾ! ಚಿಕ್ಕಿ ಮೇಲೆ ಹೋಗಿದಾನೆ ನೋಡಿ" ... 

ಚಂದ್ರಿಕಾ : "ಹೌದಾ!.. ಇತ್ತೀಚಿಗೆ ಅಂತೂ ನನ್ ಮಗ ನನ್ನ ಮೇಲೆ ಪ್ರೀತಿನೆ ತೋರಸ್ತಿಲ್ಲ ಮಾಡ್ತೀನಿ ತಡಿ ಅವನಿಗೆ ಅಂತ ಮೆಟ್ಟಿಲುಗಳನ್ನೂ ಏರಿ ಅವನ ರೂಮ್ ಕಡೆ ಹೆಜ್ಜೆಗಳನ್ನು ಹಾಕ್ತಾಳೆ... ಆಗ ತಾನೇ ಜೆಕೆ ಫ್ರೆಶ್ ಅಪ್ ಆಗಿ ಬರ್ತಾನೆ... ಚಿಕ್ಕಿ ನಾ ನೋಡುತ್ತಿದ್ದ ಹಾಗೆ ಜೆಕೆ ಒಂದು ತುಂಟ ನಗುವನ್ನು ಬೀರುತ್ತಾ ಚಿಕ್ಕಿ ಅಂತ ಕರಿತಾನೆ" 

"ಆದರೆ ಚಂದ್ರಿಕಾ ಮುಖದಲ್ಲಿ ಯಾವುದೇ ನಗು ಇರುವುದಿಲ್ಲ ಸ್ವಲ್ಪ ಕೋಪದಲ್ಲೇ ಅವನ ಕಡೆಗೆ ನೋಟವನ್ನು ಬೀರುತ್ತಾಳೆ" ...

"ಅದನ್ನು ಗಮನಿಸಿದ ಜೆಕೆ ಯಾಕೋ ನಮ್ಮ ಚಿಕ್ಕಿ ನನ್ನ ಮೇಲೆ ಕೋಪ ಮಾಡ್ಕೊಂಡಿರೋ ಹಾಗಿದೆ ಅಲ್ವ"

ಚಂದ್ರಿಕಾ : "ಹೌದು.. ನಿನ್ನ ಮೇಲೆ ಕೋಪ ಮಾಡ್ಕೊಂಡಿದೀನಿ .. ಇತ್ತೀಚಿಗೆ ನನ್ನ ಮಗ ನನ್ನ ಮೇಲೆ ಪ್ರೀತಿನೆ ತೊರಸ್ತಿಲ್ಲ ಅಂತ ಸಪ್ಪೆ ಮುಖವನ್ನು ಹಾಕ್ತಾರೆ"

ಜೆಕೆ :" ಅದನ್ನು ಕೇಳುತ್ತಿದ್ದ ಹಾಗೆ ಜೆಕೆ ಮುಖ ಚಹರೆ ಖುಷಿಯಿಂದ ಚಿಂತೆಗೆ ಜಾರುತ್ತದೆ, ಯಾಕಮ್ಮ ಹಾಗೆ ಹೇಳ್ತೀದಿಯಾ?? ಈ ನಿನ್ನ ಮಗ ಯಾವತ್ತೂ ನಿನ್ನ ಮೇಲೆ ಪ್ರೀತಿ ಕಡಿಮೆ ಮಾಡೋಕೆ ಸಾಧ್ಯಾನೇ ಇಲ್ಲ .. ನೀನು ಹಾಗೆಲ್ಲ ಹೇಳ್ಬೇಡ ನಂಗೆ ತುಂಬಾ ಬೇಜಾರಾಗುತ್ತೆ ನನ್ನಿಂದ ಏನಾದ್ರೂ ತಪ್ಪಾಗಿದ್ರೆ ನನ್ನನು ಕ್ಷಮಿಸು"... 

ಚಂದ್ರಿಕಾ :" ಅಯ್ಯೋ.. ಕಂದ ಹಾಗೆಲ್ಲ ಕೇಳ್ಬೇಡ ಇತ್ತೀಚಿಗೆ ನೀನು ನನ್ನ ಹತ್ರ ಮಾತಾಡೋಕೆ ಟೈಮೇ ಕೊಡ್ತಿಲ್ಲ ಅಲ್ವಾ ಅದಿಕ್ಕೆ ನಿನ್ನ ಮೇಲೆ ಕೋಪ ಅಷ್ಟೆ.. ನಂಗೆ ಗೊತ್ತಿಲ್ವಾ ನನ್ನ ಮಗನ ಬಗ್ಗೆ ... ಲವ್ ಯು ಕಂದ ಪ್ರೀತಿಯಿಂದ ಅವನ ಕೆನ್ನೆಯನ್ನು ಗಿಲ್ಲುತ್ತಾರೆ ️ 

ಜೆಕೆ : "ನಂಗೆ ಗೊತ್ತು ನನ್ನ ಮುದ್ದು ಅಮ್ಮ ಹೇಗೆ ಅಂತಾ ಲವ್ ಯು ಟೂ ಚಿಕ್ಕಿ"... 

ಚಂದ್ರಿಕಾ : ಸರಿ ಬೇಗ ರೆಡಿ ಆಗಿ ಕೆಳಗಡೆ ಬಾ ಟಿಫನ್ ಮಾಡೋಕೆ ಅಂತ ಹೇಳಿ ಚಂದ್ರಿಕಾ ಹೋಗೋವಾಗ ಚಿಕ್ಕಿ ಅಂತ ಜೆಕೆ ಹಿಂದೆಯಿಂದ ಚಂದ್ರಿಕಾ ನ ಸೆರಗಿನ ತುದಿ ಹಿಡಿದುಕೊಳ್ತಾನೆ... ಯಾಕೋ ಮಗನೆ ಏನಾಯ್ತು...  

ಜೆಕೆ : "ಭಯದಲ್ಲಿ ಚಿಕ್ಕಿ ಅದು ಅಪ್ಪ ನಿನ್ನೆ ತುಂಬಾ ಕೋಪ ಮಾಡ್ಕೊಂಡಿದ್ರ"?..

ಚಂದ್ರಿಕಾ : "ಹೌದು ಕಂದ ಆದರೆ ತಲೆ ಕೇಡ ಸ್ಗೋಬೇಡ ... ಮಾವನವರಿಗೆ ಈಗ ಕೋಪ ಎಲ್ಲಾ ತಣ್ಣಗೆ ಆಗಿರುತ್ತೆ ,ಸರಿ ಹೋಗೀರ್ತಾರೆ ನೀನು ಆರಾಮಾಗಿ ಬಾ ಅಷ್ಟು ಮೀರಿ ಏನಾದ್ರೂ ಪ್ರಾಬ್ಲಮ್ ಆದ್ರೆ ಇದಾರಲ್ಲ ನಿಮ್ಮ ಚಿಕ್ಕಪ್ಪ ಎಲ್ಲಾ ನೋಡ್ಕೊತಾರೆ ಬಾ ಕಂದ".. 

ಜೆಕೆ : " ಓ... ಚಿಕ್ಕಿ ಯು ಆರ್ ದೀ ಬೆಸ್ಟ್..ಸರಿ ಬೇಗ ಬಾ ಅಂತಾ ಅವರು ಅಲ್ಲಿಂದ ಹೋರಡ್ತಾರೇ" 

ಜೆಕೆ ರೆಡಿ ಆಗಿ ಬರೋದ್ರಲ್ಲೇ ಎಲ್ಲರೂ ಟಿಫನ್ ಗೆ ರೆಡಿ ಆಗಿ ಟೇಬಲ್ ಮೇಲೆ ಕುಳಿತು ಕೊಂಡಿರ್ತಾರೆ... 

ಲಕ್ಕಿ :" ಮೊಮ್ಮಗನೆ  ಎಸ್ಟೊತ್ತೊ ಬೇಗ ಬಾ ... ಸರಿ ಲಕ್ಕಿ .. ಬರಲು ಸ್ವಲ್ಪ ಹಿಂದೇಟು ಹಾಕುತ್ತಲೇ ಬಂದು ಟೇಬಲ್ ಮೇಲೆ ಟಿಫನ್ ಗೆ ಕುರ್ತಾನೆ"  ( ಇವತ್ತು ನನ್ನ ಕಥೆ ಮುಗೀತು ಅಂತ ಮನಸಲ್ಲೇ ಅಂದುಕೊಳ್ಟಾನೆ)

ಅಲ್ಲೇ ಹತ್ರ ಕುಳಿತಿದ್ದ  ಮೋಕ್ಷಿತ್,ಸೂರಜ್ ಇವರು ಜೆಕೆ ಯ ಅಣ್ಣಂದಿರ ಮಕ್ಕಳು 

ಜೆಕೆ : "ಯಾಕ್ರೊ... ಇವತ್ತು ಸ್ಕೂಲ್ ಗೆ ಹೋಗಿಲ್ವ ಆಲ್ರಿಡಿ ಟೈಮ್ ಆಗಿದೆ ... ಆಗ  ಆ ಚಿಕ್ಕ ಮಕ್ಕಳೆಲ್ಲ ನಗೋಕೆ ಸ್ಟಾರ್ಟ್ ಮಾಡ್ತಾರೆ ಜೆಕೆ ಗೊಂದಲದಲ್ಲಿ ಹೇ! ಯಾಕೋ ನಗ್ತಾ ಇದೀರಾ ?? 

ಸೂರಜ್ : "ಚಿಕ್ಕಪ್ಪ ಇವತ್ತು ಸಂಡೇ... ಸ್ಕೂಲ್ ರಜೆ ಇರುತ್ತೆ ಆಗ ಮೋಕ್ಷಿತ್, ಸಹ ಚಿಕ್ಕಪ್ಪ ನೀನು ಇಷ್ಟು ದೊಡ್ಡವನಾದ್ರು ಇವತ್ತು ಯಾವ ಡೇ ಅಂತಾ ನೆ ಗೊತ್ತಿಲ್ಲ ನಿಂಗೆ ಅಂತ ಆಡಿಕೊಳ್ಳೋಕೆ ಶುರು ಮಾಡ್ತಾರೆ...

ಜೆಕೆ : "ಮನಸಲ್ಲಿ ಸತ್ತೆ ನಾನು ಜೆಕೆ ಬೇಕಿತ್ತಾ ಇದು ನಿಂಗೆ ಮುಗೀತು ಇನ್ನು ಅಪ್ಪ ಇದನ್ನೇ ದೊಡ್ಡ ವಿಷಯ ಮಾಡ್ತಾರೆ ಅಂತ ಅವರೆಡೆಗೆ ನೋಟವನ್ನು ಬೀರುತ್ತಾನೆ.. ಆದರೆ ಸುಧಾಕರ ಏನೂ ಮಾತಾಡದೆ ಸೈಲೆಂಟ್ ಆಗಿ ಟಿಫನ್ ಮಾಡ್ತೀರ್ತಾರೇ"...

ಅಂಬ್ರುತಾ: "ಇದೇನಿದು ವಿಚಿತ್ರ ವಾಗಿದೆಯಲ್ಲ ಅಪ್ಪ ಯಾಕೆ ಇವನಿಗೆ ಇನ್ನೂ ಬೈತಿಲ್ಲ...ಜೆಕೆ ನೀನು ನಿನ್ನೆ ಯಾಕೆ ಮನೆಗೆ ಬಂದಿಲ್ಲ?

ಜೆಕೆ : ( ಇಟ್ಟಳಪ್ಪ ಬತ್ತಿನಾ ಇವಳಿಗೆ ನನ್ನ ಹಾಕೊಡೋದ್ರಲ್ಲಿ ಅದೇನು ಮಜಾ ಸಿಗತ್ತೋ ಏನೋ ) ಅಮ್ಮು ಸುಮ್ನೆ ಟಿಫನ್ ಮಾಡು ...

ಶಶಿಧರ್ : "ಜೆಕೆ ನಿನ್ನೆ ಫಂಕ್ಷನ್ ಎಲ್ಲಾ ಹೇಗಾಯ್ತು"?... 

ಜೆಕೆ : "ಹಾ! ದೊಡ್ಡಪ್ಪ ಚೆನ್ನಾಗೇ ಆಯ್ತು".. 

ಶಶಿಧರ್ : "ಸರಿ ಇನ್ಮೆಲಿಂದ ಎಕ್ಸಾಮ್ಸ್ ಸ್ಟಾರ್ಟ್ ಅಲ್ವಾ ಸರಿಯಾಗಿ ಓದಿಕೊಂಡು ಒಳ್ಳೆ ಮಾರ್ಕ್ಸ್ ತಗಿ"... ಜೆಕೆ ತಲೆ ಆಡಿಸುತ್ತಾ ಸರಿ ದೊಡ್ಡಪ್ಪ ಅಂತ ಹೇಳ್ತಾನೆ...

ಕೇಶವ್ ( ಜೆಕೆ ಚಿಕ್ಕಪ್ಪ ) : "ಮಗನೆ ಈ ಸಲ ನಿನ್ನ ಕಾಲೇಜ್ ಮುಗಿದ ಮೇಲೆ ನಿಂಗೆ ಕಾರ್ ಗಿಫ್ಟ್ ಕೊಡಬೇಕಂತ ಮಾಡಿದೀನಿ ಕಣೋ"..

ಅಮ್ಮು ತನ್ನ ಕಣ್ಣುಗಳನ್ನು ಹಿಗ್ಗಿಸಿ, ಚಿಕ್ಕು ನನಗೆ ಅವನೇನು ದೊಡ್ಡು ಸ್ಪೆಶಲ್ ಆ.. ನಂಗೂ ಕಾರ್ ಬೇಕು ಹಾಗಾದ್ರೆ..

ಕೇಶವ್ : "ನಿಂಗಾ.. ಕಾರ್ ಕಂಡಿತಾ ಕೊಡಿಸ್ತೀನಿ"

ಅಮ್ಮು : ಥ್ಯಾಂಕ್ ಯು ಚಿಕ್ಕು, ಆದರೆ ನಿನಗಲ್ಲ ನನ್ನ ಅಳಿಯನಿಗೆ ಅವನಿಗೆ ಕಾರ್ ಏನು ಬೇಕಿದ್ರೆ ಹೊಸ ಮನೇನೆ ಗಿಫ್ಟ್ ಕೊಡ್ತೀನಿ  

ಆಗ ಅಲ್ಲಿರುವ ಎಲ್ಲರ ಕೈಯಲ್ಲೂ ಅಮ್ಮು ಹಾಸ್ಯದ ಪಟಾಕಿ ಆದಳು...

ಅಮ್ಮು ಸ್ವಲ್ಪ ಸಂಕೋಚದಿಂದ ಚಿಕ್ಕು ನಂಗೆ ಗೊತ್ತು ನೀವು ಯಾವತಿದ್ರು ಈ ಕೋತಿ ಜೆಕೆ ಪರನೇ ಅಂತ

ಆದರೆ ಜೆಕೆ ಮನಸಲ್ಲಿ ಅಪ್ಪ ಯಾಕೆ ಏನು ಬೈತಾನೇ ಇಲ್ಲ ಅಂತಾ ಯೋಚನೆ ಯೋಚನೆಗಳು ಶುರು ಆಗಿರುತ್ತೆ...

ಸುಧಾಕರ್ ಕಡೆಗೂ ತನ್ನ ಮೌನವನ್ನು ಮುರಿದು ಕೆಲವೊಂದಿಷ್ಟು ಜನಕ್ಕೆ ಎಷ್ಟು ಹೇಳಿದ್ರೂ ಅಷ್ಟೆ ಬುದ್ಧಿ ಬರೋಲ್ಲ.. 

ಲಕ್ಕಿ : "ಸುಧಿ.. ಯಾರಿಗೆ ಹಾಗೆ ಹೇಳ್ತಿದೀಯೋ"..

ಸುಧಾಕರ್ : "ಇನ್ಯಾರಿಗೆ ನಿನ್ನ ಕಡೆಯ ಮೊಮ್ಮಗನಿಗೆ  ಅವನು ಕಾಲೇಜ್ ಮುಗಿದ ತಕ್ಷಣ ಕಂಪನಿ ಎಲ್ಲಾ ನೋಡ್ಕೊಬೇಕು ಈಗ ಮಾಡ್ತಿರೋ ಹಾಗೆ ಬೇಜವಾಬ್ದಾರಿ ಇಂದ ಏನಾದ್ರೂ ವರ್ತಿಸಿದರೆ ನಾನಂತು ಸುಮ್ನೆ ಇರೋಲ್ಲ...

"ಜೆಕೆಗೆ ಮನಸಲ್ಲಿ ಅಟ್ಲೀಸ್ಟ್ ಮಾತಾಡಿದ್ರು ಅಲ್ವಾ ಈಗ ನನ್ನ ಭಯ ಹೋಯ್ತು ಸರಿ ಅಪ್ಪ ಅಂತ ತಲೆ ಆಡಿಸುತ್ತಾನೆ"

ಶಶಿಧರ್ : "ಮಾಡ್ತಾನೆ ಬಿಡೋ ... ಏನೋ ಹುಡುಗ್ರು ಎಲ್ಲಾ ಕಾಲೇಜ್ ಲೈಫ್ ನಾ ಎಂಜಾಯ್ ಮಾಡ್ತಾರೆ .. ಈಗ ನಮ್ಗೆ ಮಾಡು ಅಂದ್ರೆ ಆಗುತ್ತಾ ಇಲ್ಲ ತಾನೆ"... ಲಕ್ಕಿ : ಸರಿಯಾಗಿ ಹೇಳ್ದೆ ಶಶಿ..  

ಭುವನ್ : "ಜೆಕೆ ಇವತ್ತು ನಾನು ಹಾಸ್ಪಿಟಲ್ ಇಂದ ಬಂದ್ಮೇಲೆ ಹೇಗಿದ್ರೂ ಇವತ್ತು ಸಂಡೇ ಅಲ್ವಾ ನೈಟ್ ಎಲ್ಲರೂ ಹೋಮ್ ಥಿಯೇಟರ್ ರೂಮ್ ಅಲ್ಲಿ ಸಿನಿಮಾ ನೋಡಾನ್ವ ಎಲ್ಲರೂ ಇತರ ಟೈಮ್ ಸ್ಪೆಂಡ್ ಮಾಡಿ ತುಂಬಾ ದಿನಗಳಾಯ್ತು"... 

ಜೆಕೆ : "ಕಂಡಿತಾ ಬ್ರೋ ನಾನೇ ಒಳ್ಳೆ ಸಿನಿಮಾ ಸೆಲೆಕ್ಟ್ ಮಾಡ್ತೀನಿ... ಎಲ್ಲಾ ಮಕ್ಕಳು ಹೇ! ಇವತ್ತು ನಾವೆಲ್ಲ ಮೂವೀ ನೋಡ್ತೀವಿ ಅಂತ ಕುಣಿದಾಡೋಕೆ ಸ್ಟಾರ್ಟ್ ಮಾಡ್ತಾರೆ ಅದನ್ನು ನೋಡುತ್ತಾ ಟೇಬಲ್ ಮೇಲೆ ಇರುವ ಎಲ್ಲರಿಗೂ ನಗೆ ಜೊತೆಗೆ ಆನಂದ ಹಾಗೆ ಎಲ್ಲರೂ ಟಿಫನ್ ಮುಗಿಸಿ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗ್ತಾರೆ"...

"ಜೆಕೆ ಟಿಫನ್ ಮಾಡಿ ರೂಮ್ ಗೆ ಬಂದು ಸೂರ್ಯನಿಗೆ ಕಾಲ್ ಮಾಡ್ತಾನೆ ... ಹಲೋ! ಸೂರ್ಯ ಕಾರ್ತಿಕ್ ರೂಮ್ ಗೆ ಬಾ ಹಾಗೆ ಪ್ರವೀಣಗೂ ಹೇಳಿಬಿಡು ,ನಾನು ಸ್ವಾತಿ ನಾ ಕರ್ಕೊಂಡು ಬರ್ತೀನಿ ಎಕ್ಸಾಮ್ಸ್ ಹತ್ರ ಬರ್ತಿದ್ದಾವೇ ಗ್ರೂಪ್ ಸ್ಟಡಿ ಮಾಡೋಣ .... ಸೂರ್ಯ ಸ್ವಲ್ಪ ಗೊಂದಲ ಹಾಗೆ ,ನಗು ಎರಡು ಒಟ್ಟಿಗೆ..ಗ್ರೂಪ್ ಸ್ಟಡಿ ನಾ! ಸರಿ ಕಣೋ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ ... 

ಹೋಗಬೇಕು ಅಂತಾ ಹಿಂದೆ ತಿರುಗುವಷ್ಟರಲ್ಲಿ ... ಸಡನ್ ಆಗಿ ಲಕ್ಕಿ ಎದುರಿಗೆ ಬರ್ತಾಳೆ ಡಾರ್ಲಿಂಗ್ ನಾನಂತು ಹೆದರೆ ಬಿಟ್ಟೆ.. 

ಲಕ್ಕಿ ತನ್ನ ಚೂಪಾದ ನೋಟವನ್ನು ಬೀರುತ್ತಾ ಈಗ ಎಲ್ಲಿಗೆ ಹೊರಟೆ?

ಜೆಕೆ : "ನಂಗೆ ಗೊತ್ತು ನೀನು ಯಾಕೆ ಕೋಪ ಮಾಡ್ಕೊಂಡಿದಿಯ ಅಂತ"   

ಲಕ್ಕಿ :  "ಅಲ್ವೋ ನೀನು ಸ್ವಾತಿ ಗೆ ಪ್ರಪೋಸ್ ಮಾಡ್ತೀಯಾ ಹಾಗೆ  ಅವಳು ಒಪ್ಗೋತಾಳೆ ಅಂತ ನಾನು ಖುಷಿಯಾಗಿದ್ದರೆ ನೀನು"... 

ಜೆಕೆ : "ಡಾರ್ಲಿಂಗ್ ನಿನ್ನ ಮೊಮ್ಮಗ ಇನ್ನು ಚಿಕ್ಕವನು ಈಗ ಕೆರಿಯರ್ ಮೇಲೆ ಫೋಕಸ್ ಮಾಡ್ಬೇಕು.. ಸ್ವಾತಿ ಎಂದಿಗೂ ನನ್ನವಳೇ ಇವತ್ತು ಹೇಳಿದರು ಅಷ್ಟೆ ಮುಂದೆ ಹೇಳಿದ್ರು ಅಷ್ಟೆ.. ಡೊಂಟ್ ವರಿ ಆದಷ್ಟು ಬೇಗ ಅವಳಿಗೆ ಪ್ರಪೋಸ್ ಮಾಡ್ತೀನಿ ಸರಿ ನಾ".. 

ಲಕ್ಕಿ ಒಂದು ಮುಗುಳ್ನಗೆಯೊಂದಿಗೆ "ಸರಿ ಕಂದ ನೀನು ಹೇಗೆ ಹೇಳ್ತಿಯೋ ಹಾಗೆ ಒಟ್ಟಿನಲ್ಲಿ ಸ್ವಾತಿ ನಮ್ಮ ಮನೆಗೆ ಸೊಸೆ ಯಾಗಿ ಬರ್ಬೇಕು ಅಷ್ಟೆ"... 

ಜೆಕೆ : "ಓಕೆ ಡಾರ್ಲಿಂಗ್ ಸರಿ ನಾನಿವಾಗ ಗ್ರೂಪ್ ಸ್ಟಡಿ ಮಾಡೋಕೆ ಕಾರ್ತಿಕ್ ರೂಮ್ ಗೆ ಹೋಗ್ತಿದೀನಿ ಸಂಜೆ ಮನೆಗೆ ಬರ್ತೀನಿ ಬಾಯ್ ಅಂತ ಜೆಕೆ ಅಲ್ಲಿಂದ ಹೊರಡ್ತಾನೆ.....

ಇನ್ನು ಈಕಡೆ ಮಾಧವ್ ತನ್ನ ಅಪ್ಪನ ರೂಮ್ ಗೆ ಬರ್ತಾನೆ ಅಪ್ಪ ನಿನ್ನ ದೊಡ್ಡಪ್ಪ ಕರೀತಾ ಇದಾರೆ... ಸುಧಾಕರ್ ಹೌದಾ ಸರಿ ಅಂತ ಸುಧಾಕರ್ ಶಶಿಧರ್ ರೂಮ್ ಗೆ ಹೋಗ್ತಾನೆ 

ಸುಧಾಕರ್ : "ಅಣ್ಣ ಏನೋ ಬರೋಕೆ ಹೇಳಿದ್ರಿ ಅಂತೆ"...

ಶಶಿಧರ್ : "ಹೌದು ಸುಧಿ ನಾನು ಎನ್ ಯೋಚನೆ ಮಾಡ್ತಿದೀನಿ ಅಂದ್ರೆ ಜೆಕೆ ಮತ್ತೆ ಸೂರ್ಯ ನಾ ಹೈಯರ್ ಎಜುಕೇಷನ್ ಗೆ UK ಗೆ ಕಳಸ್ಬೇಕು ಅಂತ ಮಾಡಿದೀನಿ"

"ಸುಧಾಕರ್ ಗಾಬರಿಯಿಂದ" ಅಣ್ಣ ಏನು ಹೇಳ್ತಿದೀರಾ ನೀವು ಅವನು ಈಗ ಓದಿರೋದೆ ಸಾಕು ಅಲ್ವಾ ಬೇಕಿದ್ರೆ ಸೂರ್ಯ ನಾ ಕಳಿಸೋಣ.. ಜೆಕೆ ಬುಸ್ಸಿನೆಸ್ ನೋಡ್ಕೊಳೋಕೆ ಮುಂದೆ ಓದಿಸೋ ಅವಶ್ಯಕತೆ ಏನಿದೆ"... 

ಶಶಿಧರ್ :" ಇದೆ ಸುಧಿ.. ನಮ್ಮ ಬಿಸ್ಸಿನೆಸ್ ಇಂಪ್ರೂವ್ ಮಾಡೋಕೆ ಇದೊಂದೇ ಸಾಕಾಗೋಲ್ಲ.. ನಂಗೆ ಅವನು ನಮ್ಮ ಬಿಸಿನೆಸ್ ನಾ ನೂಡ್ಕೋಬೇಕು ಅಂತಾ ಏನು ಇಲ್ಲ ನಂಗೆ ಅವನು ಇನ್ನೂ ಹೆಚ್ಚಿನ ಎಜುಕೇಷನ್ ಪಡಕೋಬೇಕು ಅಂತ ಆಸೆ ಅದಿಕ್ಕೆ ಅದು ಅಲ್ಲದೆ ಅವನು ಎಂದು ಮನೆಯವರನ್ನ ಬಿಟ್ಟು ಇಲ್ಲ ಇತರ ಇದ್ದರೆ ಮುಂದೆ ತುಂಬಾ ತೊಂದರೆ ಆಗುತ್ತೆ ಅದಿಕ್ಕೆ ... UK ಯಲ್ಲಿ ಇರೋ ನನ್ನ ಹಳೆ ಬಿಸಿನೆಸ್ ಪಾಟ್ನರ್ ಅದ ಸುಂದರ್ ಅವನ ಹತ್ತಿರ ಎಲ್ಲಾ ಮಾತಾಡಿದೀನಿ"....

ಸುಧಾಕರ್ : "ನೀನು ಹೇಳ್ತಿರೋದೇನೋ ಸರಿ ಅಣ್ಣ ಆದರೆ ನನಗೇನೋ ಅವನು ಇದಕ್ಕೆ ಒಪ್ಪಿಕೊಳ್ತಾನೆ ಅನ್ನೋದು ಡೌಟ್... ಅದರಲ್ಲಿ ಅವನ ಫ್ರೆಂಡ್ಸ್ ಗಳನ್ನು  ಹಾಗೆ ಮನೆಯವರನ್ನು ಬಿಟ್ಟಂತೂ ಇರೋಕೆ ಸಾಧ್ಯಾನೇ ಇಲ್ಲ ಅನ್ಸುತ್ತೆ"

ಶಶಿಧರ್ : "ಒಂದು ಎರಡು ವರ್ಷ ಅಷ್ಟೆ ಕಣೋ..  ಹಾಗೆ ಅವನ ಫ್ರೆಂಡ್ಸ್ ಗಳಿಗೆ ಇಂಟ್ರೆಸ್ಟ್ ಇದ್ದರೆ ಅವರೊಂದಿಗೆ ಹೋಗಲಿ", 

ಸುಧಾಕರ್ :" ಸರಿ ಅಣ್ಣ ಇವನ ಎಕ್ಸಾಮ್ಸ್ ಗಳೆಲ್ಲ ಮುಗಿಯಲಿ ಅವನ ಹತ್ರ ಮಾತಾಡಿ ನೋಡೋಣ ..ಆದರೆ ಅಣ್ಣ"... 

ಶಶಿಧರ್ :" ಹಾ! ಹೇಳೊ ಸುಧಿ" 

ಸುಧಾಕರ್ : "ಈಗ ನಮ್ಮ 3 ಕಂಪನಿಗಳು ಲಾಸ್ ಅಲ್ಲಿ ಇದೆ ಅಣ್ಣ ಹೀಗೆ ಆದ್ರೆ ಮುಂದೆ ತುಂಬಾ ತೊಂದ್ರೆ ಆಗುತ್ತೆ ನಮಗೂ ಎಲ್ಲಾ ಕಡೆ ನೋಡ್ಕೊಳ್ಳೋಕೆ ತುಂಬಾ ತೊಂದ್ರೆ ಆಗ್ತಿದೆ ಜೆಕೆ ಇದ್ರೆ ತುಂಬಾ ಹೆಲ್ಪ್ ಆಗ್ತಿತ್ತು ಅದಿಕ್ಕೆ ಜೆಕೆ ನಾನು ಮುಂದೆ ಓದಿಸೋಕೆ ಬೇಡ ಅಂದೆ ಅಷ್ಟೆ.. ನಿನಗೆ ಇಷ್ಟ ಇದ್ದರೆ ನಾನು ಅಡ್ಡಿ ಮಾಡೋಲ್ಲ ನಿನ್ನ ಇಷ್ಟದಂತೆ ಆಗಲಿ"..

"ಇನ್ನು ಇವರು 4 ಜನ ಗ್ರೂಪ್ ಸ್ಟಡಿ ಮಾಡೋಕೆ ಕಾರ್ತಿಕ್ ರೂಮ್ ಗೆ ಹೋಗ್ತಾರೆ, ನಮ್ಮ ಹುಡುಗರು ಎಷ್ಟು ಸ್ಟಡಿ ಮಾಡ್ತಾರೆ ಅಂತ ನಮ್ಗೆ ಗೊತ್ತಲ್ವಾ".....
                      

                       *************

ಹಾಗೆ ಸ್ವಲ್ಪ ದಿನಗಳ ನಂತರ ಒಂದೊಂದಾಗಿ ಎಲ್ಲರ ಎಕ್ಸಾಮ್ ಗಳು ಕೂಡ ಮುಗಿಯುತ್ತವೆ ....

ಎಲ್ಲರ ಎಕ್ಸಾಮ್ಸ್ ಗಳೇನು ಮುಗಿದವು ಹಾಗೆ ಜೆಕೆ ,ಸೂರ್ಯ ಉಳಿದ ಸ್ನೇಹಿತರನ್ನು ಬಿಟ್ಟು ಹೈಯರ್ ಸ್ಟಡಿಸ್ ಗೆ ಹೋಗ್ತಾರಾ ?? ಅಥವಾ ಇಲ್ಲವಾ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ ....

           ಮುಂದುವರೆಯುವುದು.....

🌸ಲೇಖಕರ ನೋಟ🌸:

ಸಂತೋಷದ ನಡುವೆ ಬದುಕು ಹೊಸ ತಿರುವು ತೋರಿಸಿದ ಕ್ಷಣ ಇದು. ಒಂದೇ ದಾರಿಗೆ ನಡೆದ ಹೆಜ್ಜೆಗಳು, ಇದೀಗ ಬೇರೆ ಮಾರ್ಗಗಳನ್ನು ಹಿಡಿಯಲಾರಂಭಿಸಿತು. ಹೆಚ್ಚಿನ ಅಪ್ಡೇಟ್ಗಳಿಗಾಗಿ ಫಾಲೋ ಮಾಡಿ...