She came unwillingly... - 13 in Kannada Drama by Kavya Pattar books and stories PDF | ಬಯಸದೆ ಬಂದವಳು... - 13

Featured Books
Categories
Share

ಬಯಸದೆ ಬಂದವಳು... - 13


ಅಧ್ಯಾಯ 13 : "ನಿಶಬ್ಧ ಸಂಕೇತಗಳು "

ಸ್ವಾತಿ ನಾ ಮನೆಗೆ ಡ್ರಾಪ್ ಮಾಡಿ ಜೆಕೆ ಕಾರ್ತಿಕ್ ರೂಮ್ ಗೆ ಬರುತ್ತಿದ್ದ ಹಾಗೆ ಅಲ್ಲೇ ಇರುವ ಚೇರ್ ಮೇಲೆ ಮೌನವಾಗಿ ಕುಳಿತುಕೊಳ್ತಾನೆ... ಆಗ 
ಸೂರ್ಯ ತನ್ನ ಬೇಜಾರನ್ನು ಅವನ ಮುಂದೆ ಹೊರಹಾಕುತ್ತಾನೆ "ಜೆಕೆ ಯಾಕೆ ನೀನು ಹೀಗೆ ಮಾಡ್ದೆ ಪ್ರೊಪೋಸ್ ಮಾಡಿದ್ರೆ ಅವಳ ಮನಸಲ್ಲಿ ಏನಿದೆ ಅನ್ನೋದು ಗೊತ್ತಾಗ್ತಿತ್ತು ತಾನೇ... ಈ ದಿನಕೋಸ್ಕರ ಎಷ್ಟೋ ದಿನದಿಂದ ಕಾಯ್ತಿದ್ದೇ ಅಲ್ವಾ ನಂಗಂತೂ ನೀನು ಮಾಡಿದ್ದು ಸ್ವಲ್ಪನೂ ಇಷ್ಟಾ ಆಗಲಿಲ್ಲ"... 

(  ಕಾರ್ತಿಕ್ ಪಾರ್ಕ್ ಅಲ್ಲಿ ನಡೆದಿರೋ ವಿಷಯ ನಾ  ಸೂರ್ಯ ಮತ್ತೆ ಪ್ರವೀಣ್ ಇಬ್ಬರಿಗೂ ಹೇಳಿರ್ತಾನೇ ) 

ಪ್ರವೀಣ್ : "ಹೌದು ಕಣೋ ಅವಳು ಆ ಲವರ್ಸ್ ಗಳ ಬಗ್ಗೆ ಹೇಳಿದ್ಲು ನೀನು ಯಾಕೆ ಅದನ್ನ ಪರ್ಸನಲ್ ಆಗಿ ತಗೊಂಡಿದಿಯಾ ಅದೆಲ್ಲ ಬಿಡು ಇವತ್ತು ಅವಳು ಸೀರೆ ಉಟ್ಟುಕೊಂಡು ಬಂದಿದ್ದೆ ನಿನಗೋಸ್ಕರ.. ಇಲ್ಲೇ ಗೊತ್ತಾಗಲ್ವಾ ಅವಳು ಕೂಡ ನಿನ್ನ ಪ್ರೀತಿ ಮಾಡ್ತಿದ್ದಾಳೆ ಅಂತಾ"... 

ಕಾರ್ತಿಕ್ : "ಯಾಕೇ ಸೈಲೆಂಟ್ ಆಗಿದಿಯ ಏನಾದ್ರೂ ಮಾತಾಡೋ"? ನೀನು ಇತರ ಇದ್ರೆ ನಮ್ಗೆ ನೋಡೋಕಾಗಲ್ಲ

ಜೆಕೆ ತನ್ನ ಮೌನವನ್ನು ಮುರಿದು" ಏನು ಅಂತಾ ಮಾತಾಡ್ಲಿ ಕಣ್ರೋ... ನಿಜಾ ಹೇಳ್ಬೇಕು ಅಂದ್ರೆ ಅವಳು ಹೇಳೋದ್ರಲ್ಲಿ ಏನು ತಪ್ಪಿದೆ.. ಹೌದು ಎಲ್ಲಾ ಹುಡಗಿರ ಮನಸಲ್ಲಿ ಇರೋ ಭಯಾನೆ ಅವಳ ಮನಸಲ್ಲಿ ಇದೆ".. 

"ಎಲ್ಲರಿಗೂ ಅವನ ಹುಡುಗ ಲೈಫ್ ಅಲ್ಲಿ ಸೆಟಲ್ ಆಗಿರ್ಬೇಕು ಅವಳಿಗೇ ಯಾವ ತೊಂದರೇನು ಆಗದ ಹಾಗೆ ನೋಡ್ಕೋಬೇಕು ಅಂತ ಆಸೆಗಳು ಇರ್ತಾವೆ .. ಅದೆ ತರ ಸ್ವಾತಿ ಮನಸಲ್ಲಿ ನು ಇದೆ ಅಷ್ಟೆ, ನಾನು ಇನ್ನೂ ಎಷ್ಟು ವರ್ಷ ಬೇಕಾದ್ರೂ ಕಾಯ್ತೀನಿ ಅವಳಿಗೋಸ್ಕರ ಇನ್ನು ಈ 2 ರಿಂದ 3 ವರ್ಷ ಕಾಯೋಕಾಗಲ್ವಾ. ಖಂಡಿತಾ ಕಾಯ್ತಿನೀ.. ಜೆಕೆ ಬಾಯಲ್ಲಿ ಇತರ ಮಾತುಗಳನ್ನು ಹೇಳ್ತಿದ್ರು ಅವನ ಮುಖದಲ್ಲಿರುವ ನಿರಾಶೆ.. ಅವನ ಕಣ್ಣುಗಳು ಸಹ ಅವನ ಅಸಹಾಯಕ ಸ್ಥಿತಿಯನ್ನು ಹೇಳುತ್ತಿರುತ್ತದೆ"... 

ಸೂರ್ಯ : "ಜೆಕೆ ನಿನ್ನ ನೋಡಿದ್ರೇನೆ ಗೊತ್ತಾಗ್ತಿದೆ ನೀನು ಎಷ್ಟು ಬೆಜಾರಲ್ಲಿ ಇದಿಯಾ ಅಂತ ನಿನ್ನ ಫ್ರೆಂಡ್ಸ್ ಕಣೋ ನಾವು ನಮ್ಗೆ ಇಷ್ಟು ಗೊತ್ತಾಗಲ್ವಾ"...
ಅಷ್ಟರಲ್ಲಿ ಯಶೋಧಾ ( ಜೆಕೆ ಯ ಅಮ್ಮ ) ಕಾಲ್ ಬರುತ್ತೆ ಜೆಕೆ ಕಾಲ್ ಪಿಕ್ ಮಾಡಿ ಹಲೋ ಅಮ್ಮ ..

ಯಶೋಧ  : "ಅಯ್ಯೋ ಮಗನೆ ಎಲ್ಲಿ ಇದಿಯೋ ಇಸ್ಟೊತ್ತಾದ್ರು ಇನ್ನೂ ಮನೆಗೆ ಬಂದೆ ಇಲ್ಲ..ನಿಮ್ಮ ಅಪ್ಪ ತುಂಬಾ ಕೋಪ ಮಾಡ್ಕೊಂಡಿದ್ದಾರೆ"  

ಜೆಕೆ : "ಅದು ಅಮ್ಮ ನಾನು ಇವತ್ತು ಮನೆಗೆ ಬರೋಲ್ಲ ನಾನು ಕಾರ್ತಿಕ್ ರೂಮ್ ಅಲ್ಲಿ ಇದೀನಿ ನಾಳೆ ಬೆಳಿಗ್ಗೆ ಬರ್ತೀನಿ ನೀವೆಲ್ಲ ಊಟ ಮಾಡಿ ಮಲ್ಕೋಳಿ... ಹಾ! ಲಕ್ಕಿ ಗೆ ಟ್ಯಾಬ್ಲೆಟ್ ಕೊಡೋದು ಮರಿಬೇಡ ಹಾಗೆ ಅವಳಿಗೂ ಹೇಳಿ ಬಿಡು ನಾಳೆ ಬರ್ತೀನಿ ಅಂತ ಇಲ್ಲ ಅಂದ್ರೆ ಸುಮ್ನೆ ಟೆನ್ಶನ್ ಮಾಡ್ಕೋತಾಳೆ  ಯಶೋಧಾ : ಹೌದಾ.. ನೀನು ಆರಾಮಾಗಿ ಇದಿಯಾ ತಾನೇ  ಆಗ ಜೆಕೆ ಹಾ.. ಅಮ್ಮ ನಾನು ಆರಾಮಾಗೆ ಇದೀನಿ"  

ಯಶೋಧಾ : "ಹೌದಾ ಆದರೆ ನನಗೆ ಯಾಕೋ ಹಾಗೆ ಅನಸ್ತಿಲ್ಲ ಏನೋ ಒಂತರ ಸಂಕಟ ಆಗ್ತಿದೆ ಮಗನೆ ನಿನ್ನ ಈಗಲೇ ನೋಡ್ಬೇಕು ಆನಸ್ತಿದೆ... ಪ್ಲೀಜ್ ಬಂದು ಬಿಡು ಕಂದಾ... ಆ !  ಸರಿ ಅತ್ತೆ ಹೇಳ್ತೀನಿ.... ನೋಡು ಅತ್ತೆ ನಿನ್ನ ಹತ್ರಾ ಏನೋ ಮಾತಾಡ್ಬೇಕಂತೆ"  ಜೆಕೆ, ಸರಿ ಅಮ್ಮ ಕೊಡು...

ಲಕ್ಕಿ : "ಹಲೋ ಮೊಮ್ಮಗನೆ.. ಆ!!..ಯಶೋಧಾ ನನ್ನ ಮಗ ಏನೋ ಕರಿತಿದಾನೆ ಅಂತ ಅನಸ್ತಿದೆ ಏನು ಅಂತಾ ಕೇಳ್ಕೊಂಡು ಬಾ ಹೋಗು"... 

ಯಶೋಧ ಸ್ವಲ್ಪ ಗೊಂದಲದಲ್ಲಿ ಹೌದಾ!.. ನಂಗೆ ಅವರು ಕರೆದಿದ್ದು ಕೆಳಿಸಲೇ ಇಲ್ಲ ಅತ್ತೆ... 

"ನೀನು ಫೋನ್ ಅಲ್ಲಿ ಮಾತಾಡ್ತಿದ್ದೆ ಅಲ್ವಾ ಅದಿಕ್ಕೆ ಬೇಗ ಹೋಗಿ ಕೇಳ್ಕೊಂಡು ಬಾ ..ಹಾಗೆ ಡೋರ್ ನಾ ಕ್ಲೋಸ್ ಮಾಡ್ಕೊಂಡು ಹೋಗು... ಸರಿ ಅತ್ತೆ ಅಂತ ಯಶೋಧಾ ಅಲ್ಲಿಂದ ಹೋರಡ್ತಾಳೇ" 

ಯಶೋಧ ಹೋಗುವುದನ್ನೇ ಕಾಯುತ್ತಿದ್ದ ಲಕ್ಕಿ ,ಹಲೋ ಮೊಮ್ಮಗನೇ ಎನ್ ಆಯ್ತು ಸ್ವಾತಿ ಗೆ ಪ್ರಪೋಸ್ ಮಾಡಿದ್ಯಾ?.. 

"ಜೆಕೆಗೆ ಎಲ್ಲವೂ ಅಜ್ಜಿಯ ಜೊತೆ ಹೇಳಬೇಕೆಂಬ ಹಂಬಲ ಆದರೆ ಭಾವನೆಗಳನ್ನು ಸ್ವಲ್ಪ ಹಿಡಿತದಲ್ಲಿ ಇಟ್ಟುಕೊಂಡು ಹುಸಿನಗೆಯನ್ನು ಬೀರುತ್ತಾ ಮಾತುಗಳನ್ನು ಮುಂದುವರೆಸುತ್ತಾನೆ.. ಡಾರ್ಲಿಂಗ್ !ಏನು ಗೊತ್ತಾ ನನ್ನ ಪ್ಲಾನ್ ನಾ ನಾನು ಚೇಂಜ್ ಮಾಡಿದೀನಿ"... 

ಲಕ್ಕಿ : "ಏನು ಪ್ಲಾನ್ ಆ? ಯಾಕೋ ಹಾಗಾದ್ರೆ ನೀನು ಪ್ರೊಪಸ್ ಮಾಡಿಲ್ಲ ಅಂತಾ ಆಯ್ತು,ಯಾಕೋ ಮಾಡ್ಲಿಲ್ಲ" ... 

ಜೆಕೆ : "ಹೇಳಿದೆನಲ್ಲ ಪ್ಲಾನ್ ಚೇಂಜ್ ಮಾಡ್ದೆ ಅಂತಾ ಅದು ಏನಕ್ಕೆ ಅಂತ ನಾಳೆ ಬೆಳಿಗ್ಗೆ ಬಂದು ಹೇಳ್ತೀನಿ ಓಕೆ.. ಡಾರ್ಲಿಂಗ್ ಊಟ ಆಯ್ತಾ"?... 

ಲಕ್ಕಿ :" ನಿನ್ನ ಬಿಟ್ಟು ಹೇಗೋ ಊಟ ಮಾಡ್ತೀನಿ ನಾನು".. 

ಜೆಕೆ : "sorry ಇವತ್ತು ನಾನು ಕಾರ್ತಿಕ್ ರೂಮ್ ಅಲ್ಲಿ ಇದೀನಿ  ಡಾರ್ಲಿಂಗ್ ಪ್ಲೀಸ್ ಊಟ ಮಾಡಿ ಟ್ಯಾಬ್ಲೆಟ್ ತಗೊಂಡು ಮಲ್ಕೊ ಓಕೆ ನಾ".. 

ಲಕ್ಕಿ : "ನಾನು ಇವತ್ತು ತುಂಬಾ ಖುಷಿಯಾಗಿದ್ದೇ ನೀನು ಖುಷಿಸುದ್ಧಿ ಕೊಡ್ತೀಯಾ ಅಂತ ಆದರೆ ನೀನು ನೋಡಿದ್ರೆ ಪ್ಲಾನ್ ಗಿನ್ ಅಂತ ಎಲ್ಲಾ ಹಾಳು ಮಾಡ್ದೆ ಎನೋಪ ನಿಮ್ಮ ಹುಡುಗರ ಬುದ್ಧಿ.. ಅರ್ಥಾನೆ ಆಗೋಲ್ಲ ಸರಿ ನಿಮ್ದು ಊಟ ಆಯ್ತಾ ಯಾರ್ಯಾರು ಇದ್ದೀರಾ"?ಅಲ್ಲಿ ಸ್ವಾತಿ ನು ಅಲ್ಲೇ ಇದಾಳ? ... 

ಜೆಕೆ : "ನಾವು  ನಾಲ್ಕು ಜನ ಅಷ್ಟೆ ಇದೀವಿ ,ಸ್ವಾತಿ ನಾ ಮನೆಗೆ ಬಿಟ್ಟು ಬಂದೆ  ಹಾಗೆ ನಮ್ದು ಊಟಾ ನು ಆಯ್ತು ..ನೋಡು ನೀನು ಆರಾಮಾಗಿ ನಿದ್ದೆ ಮಾಡು ನಾಳೆ ಬೆಳಿಗ್ಗೆ ಬರ್ತೀನಿ ಸರಿ ನಾ  ಗುಡ್ ನೈಟ್ ಡಾರ್ಲಿಂಗ್... ಅಂತಾ ಹೇಳಿ ಕಾಲ್ ಕಟ್ ಮಾಡ್ತಾನೆ... ಆದರೆ ಜೆಕೆ ಗೆ ತನ್ನ ಸುಮತಿ ಅತ್ತೆ ನೆನಪಾಗುತ್ತದೆ ಸೂರ್ಯನತ್ತ ನೋಡುತ್ತಾ,ಸುಮತಿ ಅತ್ತೆ?"...

ಸೂರ್ಯ : " ಜೆಕೆ ನೀನು ಅಮ್ಮನ ಬಗ್ಗೆ ತಲೆ ಕೆಡಸಿಕೊಳ್ಬೇಡ ಅಮ್ಮನಿಗೆ ನಾನು ಆಗಲೇ ಕಾಲ್ ಮಾಡಿ ಹೇಳಿದ್ದೀನಿ.. ನಾವು ನಾಳೆ ಬೆಳಿಗ್ಗೆ ಬಂದು ಎಲ್ಲಾ ವಿಷಯ ಹೇಳ್ತೀನಿ ಅಂತಾ" ...

"ಹೌದಾ.. ಸರಿ ನೀವು ಹೋಗಿ ಮಲ್ಕೊಳ್ಳಿ ತುಂಬಾ ಲೇಟ್ ಆಗಿದೆ  

ಕಾರ್ತಿಕ್ : "ಜೆಕೆ ನೀನು ಬೇಜಾರಲ್ಲಿ ಇದ್ರೆ ನಮ್ಗೆ ಹೇಗೆ ನಿದ್ದೆ ಬರುತ್ತೆ"

ಪ್ರವೀಣ್ : "ಅಲ್ಲಾ.. ನೀವೆಲ್ಲ ಯಾಕೆ ಇಷ್ಟು ಕಾಂಪ್ಲಿಕೇಟ್ ಮಾಡ್ಕೋತಿದಿರಾ? ಜೆಕೆ ನಿಂಗೆ ಹೇಳೋಕೆ ಭಯ ಇದ್ದರೆ  ನಂಗೆ ಕಾಲ್ ಮಾಡಿ ಕೊಡು ನಿನ್ನ ಪರವಾಗಿ ನಾನೇ ಮಾತಾಡ್ತೀನಿ ಸ್ವಾತಿ ಜೆಕೆ ನಿನ್ನ ತುಂಬಾ ಪ್ರೀತಿ ಮಾಡ್ತಾನೆ ಆದರೆ ನೀನು ಹೇಳಿದ ಹಾಗೆ ಲೈಫ್ ಅಲ್ಲಿ ಸೆಟಲ್ ಆದಮೇಲೆ ನಿನ್ನ ಮದುವೆ ಆಗ್ತಾನೆ ಅಂತ "... 

"ಜೆಕೆ ಅನುಮಾನದಿಂದ ನಿಜವಾಗ್ಲೂ ಹೇಳ್ತೀಯ.. ಆಗ ಪ್ರವೀಣ್ ಹೌದು ಅಂತ ಹೇಳುತ್ತಿದ್ದಂತೆಯೇ ಜೆಕೆ ನಿಜವಾಗ್ಲೂ ಸ್ವಾತಿ ಗೆ ಕಾಲ್ ಮಾಡ್ತಾನೆ" 

"ಪ್ರವೀಣ್ ಗಾಬರಿಯಾಗಿ, ಏನೋ ನೀನು ಸುಮ್ನೆ ತಮಾಷೆಗೆ ಹೇಳಿದ್ರೆ ಅಂತ ಮೋಬೈಲ್ ನಾ ಕಸಿದುಕೊಂಡು ಕಾಲ್ ಕಟ್ ಮಾಡ್ತಾನೆ ... ಪ್ರವೀಣ್ ಮುಖದಲ್ಲಿ ಭಯಕ್ಕೆ ಬೆವರಲು ಶುರು ಮಾಡ್ತಾನೆ" 

"ಜೆಕೆ ಕಿರುನಗೆಯನ್ನು ಬೀರುತ್ತಾ ಯಾಕೋ ಇಷ್ಟು ಬೆವರ್ತಾ ಇದ್ದೀಯಾ? ಈಗ ಗೊತ್ತಾಯ್ತಾ ಹೇಳೋಕೆ ಎಷ್ಟು ಕಷ್ಟ ಆಗುತ್ತೆ ಅಂತಾ  ಜೆಕೆ ಮುಖದಲ್ಲಿ ನಗು ನೋಡಿ ಕಾರ್ತಿಕ್ ,ಸೂರ್ಯ ಇಬ್ಬರಿಗೂ ಸಮಾಧಾನ ಆಗ್ತಾರೆ"

ಸೂರ್ಯ : "ಅಬ್ಬಾ ಈ ಪ್ರವೀಣ್ ಯಾವ ಕೆಲಸಕ್ಕೂ ಬರಲಿಲ್ಲ ಅಂದ್ರು ನಮ್ಮ ಜೆಕೆ ನಾ ನಗಿಸೋದ್ರಲ್ಲಿ ಯಾವತ್ತೂ ಫೇಲ್ ಆಗಿಲ್ಲ" 

ಜೆಕೆ ಸ್ವಲ್ಪ ಛೇಡಿಸುತ್ತಾ "ಅದಂತೂ ನಿಜ ಅದಕ್ಕೆ ನಮ್ಮ ಪವಿ ಅಂದ್ರೆ ನಂಗೆ ಲವ್" 

ಪ್ರವೀಣ್ : "ಹೇ! ನಾನು ಆತರಾ ಅಲ್ಲ ಕಣೋ ಸ್ವಾತಿ ಗೆ ಪ್ರಪೋಸ್ ಮಾಡಕ್ಕೆ ಆಗಲಿಲ್ಲ ಅಂತ ನನ್ನೇ ಲವ್ ಮಾಡೋತರ ಇದ್ದೀಯಾ ,ಫೀಲಿಂಗ್ಸ್ ನಾ ಕಂಟ್ರೋಲ್ ಮಾಡ್ಕೋ"...

"ಜೆಕೆ ತನ್ನ ಕೈಗಳನ್ನು ಅವನ ಭುಜದ ಮೇಲೆ ಇರಿಸಿ ಅಯ್ಯೋ ನನ್ನ ಮಗನೆ ಇರು ನಿಂಗೆ ಮಾಡ್ತೀನಿ.. ಪ್ರವೀಣ್ ಹೇ... ನಿಲ್ಲು ಈ ಸಲ ನೀವು ನಂಗೆ ಹೊಡಿಯೋ ಹಾಗಿಲ್ಲ ಯಾಕಂದ್ರೆ ನಾನು ಜೆಕೆ ನಾ ನಗಿಸಿದ್ದೀನಿ ಅದಕ್ಕಾದ್ರು ಈ ಸಲ ಹೊಡಿಬೆಡ್ರೋ ಅಂತ ಮೂವರ ಬಳಿ ರಿಕ್ವೆಸ್ಟ್ ಮಾಡ್ಕೋತಾನೆ "

ಕಾರ್ತಿಕ್ : "ಸರಿ ಈ ಸಲ ಸುಮ್ನೆ ಬಿಟ್ಟಿದಿವಿ ನೆಸ್ಟ್ ಟೈಮ್ ಇದೆ ನಿಂಗೆ ಆಗ ಪ್ರವೀಣ್ ಸದ್ಯ ಬಚಾವ್ ಅದೆ ಅಂತ ಕುಷಿ ಪಡ್ತಾನೆ" ... 

ಸೂರ್ಯ : "ಜೆಕೆ ಇನ್ನು ತುಂಬಾ ಟೈಮ್ ಇದೆ ಟೆನ್ಶನ್ ಮಾಡೊ ಅವಶ್ಯಕತೆ ಇಲ್ಲ ಸ್ವಾತಿ ಯಾವತ್ತಿದ್ರು ನಿನ್ನೊಳೆ ನೀನು ಇವತ್ತು ಹೇಳಿದ್ರೂ ಅಷ್ಟೆ ಮುಂದೆ ಹೇಳಿದ್ರು ಅಷ್ಟೆ"  

ಕಾರ್ತಿಕ್ : "ಕರೆಕ್ಟ್ ಆಗಿ ಹೇಳ್ದೆ ಮಗ "

ಜೆಕೆ ತಲೆಯನ್ನು ದುಡುತ್ತಾ ಹಾ! ನೀನು ಹೇಳೋದು ನಿಜಾನೇ ನನ್ನ ಹುಡುಗಿ ಯಾವತ್ತಿದ್ರೂ ನನ್ನೊಳೆ... ಕಾರ್ತಿ... ಎನ್ ಮಾಡ್ತೀರಬೋದು ನನ್ನ ಹುಡುಗಿ? ,ಯಾಕೋ ತುಂಬಾ ನೆನಪಾಗ್ತಿದ್ದಾಳೆ .... ಅಷ್ಟರಲ್ಲಿ ಸೂರ್ಯನಿಗೆ ಕಾಲ್ ಬರುತ್ತೆ  

ಜೆಕೆ : "ಯಾರು ಅಮ್ಮು ನಾ.. ಅವಳಿಗೇ ಹೊತ್ತು ಗೊತ್ತು ಅನ್ನೋದೇ ಇಲ್ಲ"
ಸೂರ್ಯ : "ಅಲ್ಲಾ ಕಣೋ ನನ್ನ ಸ್ವೀಟಿ"... 

"ಜೆಕೆ ಗಾಬರಿಯ ಜೊತೆಗೆ ಕೋಪ ,ಏನು ಸ್ವೀಟಿ ನಾ? ಯಾರೋ ಅದು ನನ್ನ ತಂಗಿಗೆ ಮೋಸ ಮಾಡಿದ್ರೆ ನಾನು ಮಾತ್ರ ಸುಮ್ನೆ ಇರಲ್ಲ ನೋಡು" ಅಂತ ಸೂರ್ಯನನ್ನೇ ಗುರಾಯಿಸುತ್ತಾ ಹೇಳ್ತಾನೆ ... 

"ಕಾರ್ತಿಕ್ ಸಹ ಗಾಬರಿಯಲ್ಲಿ ಏನೋ ಇದನ್ನ ನಮ್ಗೆ ಹೇಳೆ ಇಲ್ಲ ಪಾಪ ಅಮ್ಮು..ಛೇ! ಏನೋ ನಿನ್ನ ಒಳ್ಳೆ ಹುಡುಗ ಅಂದುಕೊಂಡ್ರೆ ನೀನು... ಆಗ ಪ್ರವೀಣ್ ಕೂಡ ನಮ್ಗೆ ನೋಡಿದ್ರೆ ಒಂದು ಹುಡಗಿನು ಬೀಳ್ತಿಲ್ಲ ನೀನು ಎರಡೆರಡು ಮೆಂಟೇನ್ ಮಾಡ್ತಿದಿಯ ಅಲ್ಲೋ"... 

"ಆಗ ಸೂರ್ಯ ಮುಗೀತಾ ನಿಮ್ಮಗಳ ಮಾತು ನಂಗೂ ಸ್ಪಲ್ಪ ಮಾತಾಡೋಕೆ ಅವಕಾಶ ಕೊಡ್ರೋ... ಇದು ನನ್ನ ತಂಗಿ ಜಾನೂ ಕಾಲ್ ಅವಳಿಗೆ ನಾನು ಯಾವಾಗ್ಲೂ ಸ್ವೀಟಿ ಅಂತಾನೆ ಕರಿಯೊದು ನಂಗೆ ಇರೋ ಒಂದನ್ನೇ ಮೆಂಟೇನ್ ಮಾಡೋಕೆ ಆಗ್ತಿಲ್ಲ ಇನ್ನೊಂದು ಇಟ್ಕೊಂಡು ಏನು ಮಾಡ್ಲಿ  ಬೇಕಿದ್ರೆ ಸ್ಪೀಕರ್ ಗೆ ಹಾಕ್ತೀನಿ ಕೆಲಸ್ಗೊಳಿ" 

ಆಗ ಮೂವರು ಸಮದಾನಗೊಂಡು ಜೆಕೆ ,ಓ.. ಜಾಹ್ನವಿ ನಾ ಸರಿ ಮಾತಾಡು... 

"ಸೂರ್ಯ ಕಾಲ್ ಪಿಕ್ ಮಾಡಿ ಹಲೋ ಸ್ವೀಟಿ... ಆ ಕಡೆಯಿಂದ ಜಾನೂ ಒಂದು ಕಾಲ್ ಪಿಕ್ ಮಾಡೋಕೆ ಎಸ್ಟೊತ್ತೋ ಅಷ್ಟು ಬ್ಯುಸಿ ನಾ"..

ಸೂರ್ಯ : "ಅಯ್ಯೋ ಹಾಗೆಲ್ಲ ಏನು ಇಲ್ಲ ಪುಟ್ಟ ಇವತ್ತು ಹೇಳ್ದೆ ಅಲ್ವಾ ಅನುವಲ್ ಡೇ ಅಂತ ಈಗ ಕಾರ್ತಿ ರೂಮ್ ನಲ್ಲಿ ಇದೀವಿ.. ಅದು ಸರಿ ಈಗ ನಿನ್ನ ಕಾಲೇಜ್ ಟೈಮ್ ಅಲ್ವಾ ಈಗ" ...

ಜಾನೂ : "ಹೌದು ಆದರೆ ಯಾಕೋ.. ಯಾರೋ ನನ್ನ ತುಂಬಾ ಮಿಸ್ ಮಾಡ್ಕೋತಿದ್ದಾರೆ ಅಂತ ಅನಿಸ್ತಾ ಇತ್ತು ಅಂತ ಬಿಕ್ಕಳಿಸುತ್ತಾ ಹೇಳ್ತಾಳೆ,  ಯಾಕೋ ಬಿಕ್ಕಳಿಕೆನೆ  ನಿಲ್ತಿಲ್ಲ,ನಿಮ್ಮನ್ನ ಬಿಟ್ರೆ ಯಾರು ಮಿಸ್ ಮಾಡ್ಕೋಳೋಕೆ ಸಾಧ್ಯ ಅದಿಕ್ಕೆ ಫಸ್ಟ್ ಅಮ್ಮ ,ಅಪ್ಪ, ದೊಡ್ಡಣ್ಣನಿಗೂ ಕಾಲ್ ಮಾಡಿದ್ದೆ ಈಗ ನಿಂಗೆ ಕಾಲ್ ಮಾಡ್ದೆ"

ಸೂರ್ಯ :  "ಅಯ್ಯೋ ಪುಟ್ಟ ಫಸ್ಟ್ ಹೋಗಿ ನೀರು ಕುಡಿ"  
ಜಾನು: ಕುಡಿತಾ ಇದೀನಿ ಆದ್ರೆ ನಿಲ್ತಾನೇ ಇಲ್ಲ ಕಣೋ   
"ಸೂರ್ಯ ಸ್ವಲ್ಪ ಬೇಜಾರಿನಲ್ಲಿ ನಾನು ನಿನ್ನ ಪ್ರತಿ ದಿನ ಮಿಸ್ ಮಾಡ್ಕೋತಿನಿ ಕಣೋ.. ನೀನು ಯಾವಾಗ ಬರ್ತೀಯಾ ಅಂತಾ ಕಾಯ್ತಿದಿನಿ"... 

ಜಾನೂ : "ನಾನು ಅಷ್ಟೆ ಕಣೋ ಸರಿ ನಂಗೆ ಕಾಲೇಜ್ ಗೆ ಟೈಮ್ ಆಗ್ತಿದೆ ಕಾಲೇಜ್ ಮುಗಿಸಿ ಬಂದ್ಮೇಲೆ ಕಾಲ್ ಮಾಡ್ತೀನಿ ಅಂತಾ ಕಾಲ್ ಕಟ್ ಮಾಡ್ತಾಳೆ" ... 

ಕಾರ್ತಿಕ್ :  "ಜಾಹ್ನವಿ ನಾ ಚಿಕ್ಕವಳಿದ್ದಾಗ ನೋಡಿದ್ದು ಅಲ್ವೇನೋ ಜೆಕೆ ಹೌದು ಕಣೋ ಅಂತ ಜೆಕೆ ತಲೆ ಆಡಿಸ್ತಾನೆ... 

ಸೂರ್ಯ :" ನಂಗಂತೂ ಅವಳನ್ನ ಯಾವಾಗ ನೋಡ್ತಿದೀನಿ ಅನಸ್ತಿದೆ ತುಂಬಾ ಮಿಸ್ ಮಾಡ್ಕೊಳ್ತೀದೀನಿ ಅವಳನ್ನ "

ಕಾರ್ತಿಕ್ : "ಹೌದು ಕಣೋ ಆದರೆ ಚಿಕ್ಕವಳಿದ್ದಾಗ ನಾವೆಲ್ಲರೂ ಜೊತೆಗೆ ಆಟ ಆಡ್ತಿದ್ದಿವಿ ಅಲ್ವಾ ನಂಗಂತೂ ಅದೇ ನೆನಪಾಯ್ತು ತುಂಬಾ ತುಂಟಿ , ಅವಳು ಮಾತಾಡೋಕೆ ಸ್ಟಾರ್ಟ್ ಮಾಡಿದ್ರೆ ನಿಲ್ಸೊದೆ ಇಲ್ಲ ... ಆದರೆ ಪ್ರವೀಣ್ ಏನನ್ನೋ ಯೋಚನೆ ಮಡ್ತೀರ್ತಾನೆ.. ಅದನ್ನು ಗಮನಿಸಿದ ಸೂರ್ಯ ಹೆ! ನೀನೇನೋ ಯೋಚನೆ ಮಡ್ತಿದ್ದಿಯ"...

ಪ್ರವೀಣ್ : "ಅಲ್ಲ ಕಣೋ ಏನೋ ಸಿಂಕ್ ಅಂತಾ ಅನಸ್ತಿಲ್ವ ನಿಮ್ಗೆ" ಕಾರ್ತಿಕ್ ಗೊಂದಲದಿಂದ ಏನು ಸ್ಪಲ್ಪ ಅರ್ಥ ಆಗೋತರ ಹೇಳೊ..

ಪ್ರವೀಣ್ : "ಈಗ ತಾನೇ ಜೆಕೆ ಎನ್ ಹೇಳ್ದ" ..

ಸೂರ್ಯ : "ಎನ್ ಹೇಳ್ದ"..??  

ಪ್ರವೀಣ್ : "ಜೆಕೆ ಆವಾಗ್ಲೇ ನನ್ನ ಹುಡುಗಿನ ನಾನು ತುಂಬಾ ಮಿಸ್ ಮಾಡ್ಕೋತಿದೀನಿ ಅಂತ ಹೇಳ್ದ ಅಲ್ವಾ... ಈಕಡೆ ನೋಡಿದ್ರೆ ಜಾನೂ ಕೂಡ ಅದೇ ಟೈಮ್ ಗೆ ಯಾರೋ ಮಿಸ್ ಮಾಡ್ಕೋತಿದಾರೆ ಅಂತ ಬಿಕ್ಕಳಿಸ್ತಾ ಇದ್ಲು.. ಅಂದ್ರೆ ಜೆಕೆ ನೆನಪಿಸ್ಗೋತಿದ್ದದ್ದು ಜಾನೂ ಗೂ ಬಿಕ್ಕಳಿಕೆ ಬರ್ತಿದ್ದು ಏನೋ ಸಿಂಕ್ ಇದೆ ಅನಸ್ತಿಲ್ವಾ"...??  

"ಆಗ ಕಾರ್ತಿಕ್ ,ಲೆ.. ಏನೋ ನೀನು ನಿನ್ನ ಯೋಚನೆ ಗೆ ತಲೆ ಬುಡ ಅನ್ನೋದು ಏನಾದ್ರೂ ಇದೆಯಾ.. ಏನೇನೋ ಯೋಚನೆ ಮಾಡ್ತೀರ್ತಿಯ ಅಲ್ಲೋ" 

ಸೂರ್ಯ : ಅಲ್ಲಿ ಜಾನೂ ಬಿಕ್ಕಳಿಸೋಕು ಇಲ್ಲಿ ಜೆಕೆ ಅವನ ಹುಡುಗಿನ ಮಿಸ್ ಮಾಡ್ಕೊಳ್ಳೋದುಕು ಏನಾದ್ರೂ ಸಂಬಂಧ ಇದೆಯಾ ತಲೆ ಇದೆ ಅಂತಾ ಎನ್ ಏನೋ ಮಾತಾಡ್ತಿ ಅಲ್ಲೋ...

ಜೆಕೆ : " ನಿನ್ನ ಮಾತುಗಳನ್ನ ಕೇಳ್ತಾ ಇದ್ರೆ ಮೆಂಟಲ್ ಅದವನು ಸಹ ತೀರಗಾ ಮೆಂಟಲ್ ಆಗೋಗ್ತಾನೆ ಇವನ್ನ ಆಗ್ಲೆ ಹೊಡೆಯದೆ ಬಿಟ್ವಲ್ಲ ಅದೆ ದೊಡ್ಡ ತಪ್ಪು... ಹಾಕ್ರೋ ಅವನಿಗೇ ಅಂತ ಎಲ್ಲರೂ ಹೋಡಿಯೋಕೆ ಸ್ಟಾರ್ಟ್ ಮಾಡ್ತಾರೆ.... ಸಾಕು ಬಿಡ್ರೋ ಸುಮ್ನೇ ಅನ್ಸಿದ್ದನ್ನ ಹೇಳ್ದೆ ಇನ್ನೊಮ್ಮೆ ಏನು ಹೇಳಲ್ಲ"

"ಸುಮ್ನೆ ಮಲ್ಕೋ ಮಗನೆ...ಮೂವರು ಸೇರಿ ಪ್ರವೀಣ್ ನಾ ಕಾಡಸ್ತ ಹಾಗೆ ಎಲ್ಲರೂ ಟೈಮ್ ಪಾಸ್ ಮಾಡ್ತಾ ಮಾಡ್ತಾ ಮಲಗಿಕೊಳ್ತಾರೆ"....
               
            ಮುಂದುವರೆಯುವುದು.....

🌸ಲೇಖಕರ ನೋಟ 🌸:

ಅವಳ ಬಿಕ್ಕಳಿಕೆ ನಗೆಯಿಂದ ಅಲ್ಲ, ಬದಲಾಗಿ ಅವಳಿಗೆ ಹೆಸರಿಸಲಾಗದ ಬಿರುಗಾಳಿಯಿಂದ ಬಂದಿದೆ. ಮತ್ತು ಜೆಕೆ… ಹೃದಯದಲ್ಲಿ ಒಂದು ವಿಚಿತ್ರ, ತೊಳಲಾಡುವ ಸೆಳೆಯುವಿಕೆ,ಓದುಗರೆ, ನಿಮ್ಮ ಕಣ್ಣುಗಳು ತೆರೆದಿರಲಿ… ಗಾಳಿಯಲ್ಲಿದೇ ಏನೋ ಬದಲಾವಣೆ . ಹೆಚ್ಚಿನ ಅಪ್ಡೇಟ್ಗಳಿಗಾಗಿ ಫಾಲೋ ಮಾಡಿ..