She came unwillingly... - 15 in Kannada Drama by Kavya Pattar books and stories PDF | ಬಯಸದೆ ಬಂದವಳು... - 15

Featured Books
Categories
Share

ಬಯಸದೆ ಬಂದವಳು... - 15


ಅಧ್ಯಾಯ 15: "ಪಥ ಬದಲಾವಣೆಯ ವೇಳೆಯಲ್ಲಿ"


"ಎಲ್ಲರ ಪರೀಕ್ಷೆಗಳು ಮುಗಿದಿದ್ದವು. ಐವರು ಸ್ನೇಹಿತರು ಒಂದು ವಾರದ ಟ್ರಿಪ್‌ಗೆ ಹೋಗಿ ಸುಖವಾಗಿ ಸಮಯ ಕಳೆಯುತ್ತಾ ಹಿಂತಿರುಗಿದರು. ಆ ದಿನಗಳು ನಗೆ, ಆಟ, ಮಾತುಗಳಿಂದ ತುಂಬಿ ತುಳುಕಿದ್ದವು. ಸ್ವಲ್ಪ ದಿನಗಳಲ್ಲೇ ಫಲಿತಾಂಶವೂ ಬಂದಿತು. ನಾಲ್ವರೂ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರು, ಕಾರ್ತಿಕ್ ಮಾತ್ರ ಇಡೀ ಕಾಲೇಜಿಗೆ ಮೊದಲನೆಯ ಸ್ಥಾನ ಪಡೆದಿದ್ದ. ಆ ಸಂತೋಷಕ್ಕೆ ಮಿತಿಯೇ ಇರಲಿಲ್ಲ. 

ಆದರೆ ಯಾವಾಗ ಹೆಚ್ಚು ಸಂತೋಷದಲ್ಲಿ ಇರ್ತಿವೋ ಅವಾಗಲೇ ತಿಳ್ಕೊಂಡು ಬಿಡ್ಬೇಕು ಮುಂದೆ ಏನೋ ಕಾದಿದೆ ಅಂತಾ... ಹಾಗೆ ಇಷ್ಟು ವರ್ಷಗಳಲ್ಲಿ ಒಂದು ದಿನ ಬಿಟ್ಟಿಲ್ಲದ ಇವರುಗಳು ಮುಂದೆ ಎಲ್ಲರ ಹೆಜ್ಜೆಗಳು ಬೇರೆ ಅಗೋ ಸಮಯ"....

"ಶಶಿಧರ್ ಮೊದಲೇ ಹೇಳಿದ್ದಂತೆ, ಜೆಕೆ ಮತ್ತು ಸೂರ್ಯನನ್ನು ಹೈಯರ್ ಸ್ಟಡೀಸ್‌ಗಾಗಿ ವಿದೇಶಕ್ಕೆ ಕಳುಹಿಸಬೇಕೆಂಬ ಉದ್ದೇಶದಿಂದ ಇಬ್ಬರನ್ನೂ ಮಾತಾಡಲು ಕರೆಯಲಾಗಿತ್ತು. ಸೂರ್ಯ ತನ್ನ ಮನೆಯವರೊಂದಿಗೆ ಜೆಕೆ ಮನೆಗೆ ಬಂದಿದ್ದ".

"ಈ ಕಡೆ ಸೂರ್ಯ ಜೆಕೆ ಕೋಣೆಗೆ ನುಗ್ಗಿದ ಆಗ ಜೆಕೆ ಹಾಯ್ ಸರ್ ಬನ್ನಿ.. ಬನ್ನಿ ಅಂತ ಆತ್ಮೀಯವಾಗಿ ಹೇಳಿದ"

"ಸೂರ್ಯ ಸ್ವಲ್ಪ ಗೊಂದಲದಿಂದ ಕೇಳಿದ ಅಲ್ಲ ಕಣೋ ದೊಡ್ಡ ಮಾವ ಯಾಕೆ ನಮ್ಮ ಇಬ್ಬರಿಗಷ್ಟೇ ರೂಮ್ ಗೆ ಬರೋಕೆ ಹೇಳಿದ್ದಾರೆ ಅದು ಅಲ್ದೇ ಅಪ್ಪ , ಅಮ್ಮನ್ನ ಕೂಡ ಬರೋಕೆ ಹೇಳಿದ್ದಾರೆ , ಏನೋ ಮಿಸ್ ಹೊಡೀತಿದೆ ಅನಸ್ತಿಲ್ವಾ ನಿನಗೆ"

"ಜೆಕೆ ಗಂಭೀರವಾಗಿ ನಾನು ಅದೇ ಕನ್ಫ್ಯೂಷನ್ ಅಲ್ಲಿ ಇದೀನಿ ನಂಗೆ ಏನು ಅನಸ್ತಿದೆ ಅಂದ್ರೆ"?..  

"ಸೂರ್ಯ ಗಾಬರಿಯಿಂದ ಏನು ಅನಿಸ್ತಿದೆ ಬೇಗ ಹೇಳೊ ನಂಗೆ ಭಯ ಆಗ್ತಿದೆ "  

ಜೆಕೆ ಕುಸುರಿ ಹೇಳಿದ ,ನಿನ್ನ ಹಾಗೆ ಅಮ್ಮು ಲವ್ ಮ್ಯಾಟರ್ ಅವರಿಗೆ ಗೊತ್ತಾಗಿದೆ ಅನಸ್ತಿದೆ ಅದಿಕ್ಕೆ ಇರಬಹುದು... 

ಸೂರ್ಯ : "ಬೆಚ್ಚಿ ಬಿದ್ದು ಹೇ!.. ಏನೋ ಹೀಗೆ ಹೇಳ್ತಿದಿಯ ಈ ವಿಷಯ ಇಲ್ಲಿವರೆಗೂ ಯಾರಿಗೂ ಗೊತ್ತಾಗಿಲ್ಲ ಇದ್ದಕಿದ್ದ ಹಾಗೆ ಹೇಗೆ ಗೊತ್ತಾಯ್ತು , ಹಾ! ಪಕ್ಕಾ ಅಮ್ಮು ದೆ ಕೆಲಸ ಇರ್ಬೇಕು ಅವಳು ಮಾಡೊ ಕೆಲಸ ಒಂದಾ ಎರಡಾ....ಆದರೆ... ಜೆಕೆ ನಿನ್ನ ಯಾಕೆ ಬರೋಕೆ ಹೇಳಿದ್ದಾರೆ "? 

ಜೆಕೆ : "ನಕ್ಕನು  ಬಹುಶಃ ನಿನ್ನಾ ಮತ್ತೆ ಅಮ್ಮು ಲವ್ ಮ್ಯಾಟರ್ ಕನ್ಫರ್ಮ್ ಮಾಡ್ಕೊಳ್ಳೋಕೆ ಇರಬೇಕು ಸರಿ ಬಾ ಬೇಗ ಹೋಗೋಣ ನಾನಂತು ನಿನ್ನ ಮದುವೆ ಮಾಡ್ಸೋಕೆ ಕಾತುರದಿಂದ ಕಾಯ್ತಾ ಇದೀನಿ ಹಿ!.. ಹಿ!..

ಸೂರ್ಯ : "ಹಳ್ಳಕ್ಕೆ ಬಿಳಿಸೋಕೆ ಕಾಯ್ತಿದಿಯ ಅಲ್ವಾ. ನಂಗೆ ಭಯ ಆಗ್ತಿದೆ ಕಣೋ....ಹೆ! ಬಾರೋ ಏನು ಆಗಲ್ಲ ನಾನು ನಿನ್ ಜೊತೆ ಇದೀನಿ " 
ಹಾಗೆ ಇಬ್ಬರು ಶಶಿಧರ್ ಕೋಣೆಗೆ ಹೋದರು.... ಅಲ್ಲಿ ಶಶಿಧರ್ ಜೊತೆ ಸುಧಾಕರ್ ಕೂಡ ಕುಳಿತಿದ್ದರು ವಾತಾವರಣ ಗಂಭೀರವಾಗಿತ್ತು... 

"ಶಶಿಧರ್ ನಿಧಾನವಾಗಿ ಮಾತು ಆರಂಭಿಸಿದರು ಬಂದ್ರ ಅದು ನಾವು ನಿಮ್ಮ ಹತ್ರಾ ತುಂಬಾ ಮುಖ್ಯವಾದ ವಿಚಾರ ಮಾತಾಡ್ಬೇಕು"...

"ಜೆಕೆ ಕುತೂಹಲದಿಂದ ಕೇಳಿದ, ಹೇಳಿ ದೊಡ್ಡಪ್ಪ ಏನು ವಿಷಯ ,ಆದರೆ ಅವನ ಪಕ್ಕದಲ್ಲಿರುವ ಸೂರ್ಯ ಈಗಾಗಲೇ ಬೆವರುತ್ತಾ ದೇವರಲ್ಲಿ ಪ್ರಾಥಿಸುತ್ತಿರುತ್ತಾನೆ"... 

"ಶಶಿಧರ್ ದೃಢವಾಗಿ ಹೇಳಿದ ,ಅದು ನಿಮ್ಮ ಕಾಲೇಜ್ ಏನೋ ಮುಗೀತು ಈಗ ನಿಮ್ಮ ಇಬ್ಬರನ್ನು ಹೈಯರ್ ಸ್ಟಡೀಸ್ ಗೆ UK ಗೆ ಕಳಿಸಬೇಕು ಅಂತ ಅನ್ಕೊಂಡಿದಿವಿ... ನಿಮಗೂ ಒಪ್ಪಿಗೆ ಇದೆ ತಾನೆ" ??..

 ಅಲ್ಲಿ ಕ್ಷಣಾರ್ಧ ಮೌನ ನೆಲೆಸಿತು

ಆಗ ಸುಧಾಕರ್ ನೇರವಾಗಿ, ನೀನು ಏನು ಹೇಳ್ಬೇಕು ಅಂತ ಇದಿಯಾ ಅಂತ ನನಗೆ ಗೊತ್ತು ,ನನಗೆ ಫ್ಯಾಮಿಲಿ ಬಿಟ್ಟು ಇರೋಕಾಗಲ್ಲ ,ಫ್ರೆಂಡ್ಸ್ ನಾ ಬಿಟ್ಟು ಹೋಗಲ್ಲ ಅದು ಇದು ಅನ್ನದೆ ಸುಮ್ಮನೆ ಅಣ್ಣ ಹೇಳಿದ ಹಾಗೆ ಕೇಳು...

ಜೆಕೆ ಕಳವಳದಿಂದ ಅಪ್ಪ ಏನು ಹೇಳ್ತಿದ್ದೀರಾ...ದೊಡ್ಡಪ್ಪ ನಮ್ಮ ಎಜುಕೇಷನ್ ಕಂಪ್ಲೀಟ್ ಆಗಿದೆ ಅಲ್ವಾ ಇಷ್ಟೇ ಸಾಕು ....

ಸೂರ್ಯ : ( ಓ.. ಈ ಮ್ಯಾಟರಾ.. ಸದ್ಯ ಬಚಾವ್ ಅದೆ )ಹೌದು ಮಾವ ನನಗೂ ಫ್ಯಾಮಿಲಿ ಬಿಟ್ಟು ಅಷ್ಟು ದೂರ ಇರೋಕೆ ಇಷ್ಟ ಇಲ್ಲ ಹಾಗೆ ಫ್ರೆಂಡ್ಸ್ ನಾ ಕೂಡ

ಶಶಿಧರ್ : ನನಗೆ ಗೊತ್ತಿತ್ತು ನೀವು ಹೋಗೋಕೆ ರೆಡಿ ಇರೋಲ್ಲ ಅಂತ ಆದರೆ ನಾನು ಈ ವಿಷಯದಲ್ಲಿ ನನ್ನ ನಿರ್ಣಯ ಬದಲಿಸೋಕೆ ಸಾಧ್ಯ ಇಲ್ಲ... ನೀವು ಹೋಗಲೇ ಬೇಕು ನನಗೆ ನಿಮ್ಮ ಭವಿಷ್ಯ ಮುಖ್ಯ ಎಂದು ದೃಢವಾಗಿ ಹೇಳುತ್ತಾನೆ...

"ಸುಧಾಕರ್ ಅದನ್ನು ಬೆಂಬಲಿಸುತ್ತಾ ಸುಮ್ಮನೆ ಅಣ್ಣ ಹೇಳಿದ ಹಾಗೆ ಕೇಳಿ ಅವರು ನಿಮ್ಮ ಭವಿಷ್ಯ ದ ಬಗ್ಗೆ ಯೋಚನೆ ಮಾಡ್ತಿದಾರೆ

"ಸೂರ್ಯನಲ್ಲಿ ಒಂದು ಅನುಮಾನ ಮೂಡಿತು.. ಆದರೆ ಮಾವ ಇದಕ್ಕೆ ಮನೆಯವರು ಒಪ್ಪಿಕೊಳ್ತಾರ ಅದರಲ್ಲಿಯೂ ಅಜ್ಜಿ"... 

ಸುಧಾಕರ್ : "ಅದರ ಬಗ್ಗೆ ನೀವು ತಲೆ ಕೇಳಿಸ್ಗೋಬೇಡಿ ಅಮ್ಮನ್ನ ಒಪ್ಪಿಸೋದು ,ಹಾಗೆ ಮನೆಯವರು ಒಪ್ಪಿಸೋದೂ ಕೂಡ ನಮ್ಮ ಜವಾಬ್ದಾರಿ"....

ಇಲ್ಲಿ ಇವರಿಬ್ಬರಿಗೂ ತಪ್ಪಿಸಿಕೊಳ್ಳಲು ಬೇರೆ ದಾರಿಗಳೇ ಇರೋದಿಲ್ಲ ಅದರಲ್ಲೂ ಶಶಿಧರ್ ಅಂದರೆ ಮನೆಯವರಿಗೆಲ್ಲ ತುಂಬಾ ಗೌರವ ಅವರು ಹೇಳಿದ ಮಾತಿಗೆ ಯಾರು ವಿರುದ್ಧ... ಮಾತಾಡುವುದಿಲ್ಲ ಅದಕ್ಕೆ ಜೆಕೆ ,ಸೂರ್ಯ ತುಂಬಾ ಗೊಂದಲದಲ್ಲಿ ಯೋಚನೆ ಮಾಡೋಕೆ ಸ್ಟಾರ್ಟ್ ಮಾಡ್ತಾರೆ 

ಶಶಿಧರ್ :" ಜೆಕೆ ನಾನು ಇಲ್ಲಿವರೆಗೂ ನಿನ್ನ ಯಾವ ಕೆಲಸಗಳಿಗೂ ಅಡ್ಡಿ ಮಾಡಿಲ್ಲ ನೀನು ಪ್ಲೀಸ್ ನನ್ನ ಈ ಮಾತಿಗೆ ಒಪ್ಪಿಕೊ"...

ಜೆಕೆ ಮುಜುಗರದಿಂದ "ಅಯ್ಯೋ! , ನೀವು ಪ್ಲೀಜ್ ಅಂತ ಎಲ್ಲಾ ಕೇಳ್ಬೇಡಿ ದೊಡ್ಡಪ್ಪ ನನಗೆ ನನ್ನ ಫ್ರೆಂಡ್ಸ್ ನಾ ಬಿಟ್ಟು ಮತ್ತೆ ಮನೆಯವರನ್ನು ಬಿಟ್ಟು ಇರೋ ಶಕ್ತಿ ಇಲ್ಲ .. ಇಲ್ಲೇ ಬೇಕಿದ್ರೆ ಯಾವುದಾದ್ರೂ ಕೋರ್ಸ್ ಮಾಡ್ತೀವಿ ಆದರೆ ಪ್ಲೀಸ್ ನಿಮ್ಮನ್ನೆಲ್ಲ ಬಿಟ್ಟು ಅಷ್ಟು ದೂರ ಇರೋ ಶಿಕ್ಷೆ ಕೊಡಬೇಡಿ ಪ್ಲೀಜ್ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಾನೆ"

ಶಶಿಧರ್ : "ಇಲ್ಲ ಮಗನೆ ನನಗೂ ಕೂಡ ನಿಮ್ಮನ್ನ ಬಿಟ್ಟು ಇರೋದಕ್ಕೆ ಕಷ್ಟ ಆದರೆ ನಿಮ್ಮ ಭವಿಷ್ಯಕಿಂತ ಇದು ನನಗೆ ದೊಡ್ಡದಲ್ಲ ಕೇವಲ 2 ವರ್ಷ ಅಷ್ಟೆ ಅದು ಕೂಡ ಬೇಗ ಕಳೆದು ಹೋಗುತ್ತೆ.. ದಯವಿಟ್ಟು ಒಪ್ಪಿಕೊ"..

ಜೆಕೆ ಮನಸ್ಸಲ್ಲಿ ಕಾರ್ತಿಕ್ ಬಗ್ಗೆಯೇ ಯೋಚನೆ ಶುರು ಆಗುತ್ತೆ ,ನಾನು ಹೊರಟು ಹೋದ್ರೆ ಕಾರ್ತಿಕ್... ಇಲ್ಲ ನನಗೆ ಅವನ ಭವಿಷ್ಯಕೂಡಾ ತುಂಬಾ ಇಂಪಾರ್ಟೆಂಟ್ ಇದನ್ನ ದೊಡ್ಡಪನಿಗೆ ಹೇಗೆ ಹೇಳಲಿ ... ಆಗ ಸೂರ್ಯ ಜೆಕೆ ಎಡೆಗೆ ನೋಟ ಹಾಯಿಸುತ್ತಾನೆ ಅವನ ಮನದ ಮಾತುಗಳು ಇವನಿಗೆ ಅರ್ಥವಾಗಿ ಆ!..ದೊಡ್ಡ ಮಾವ ನೀವು ಏನು ಅಂದುಕೊಳ್ಳದೆ ಹೋದ್ರೆ ಒಂದು ಮಾತು ಹೇಳಲಾ... 

ಶಶಿಧರ್ ಹೇಳು ಸೂರ್ಯ ಎಂದು ಸಮ್ಮತಿ ನೀಡುತ್ತಾರೆ

ಸೂರ್ಯ : "ಮಾವ ಅದು ಕಾರ್ತಿಕ್ ಕೂಡ ತುಂಬಾ ಒಳ್ಳೆ ಟ್ಯಾಲೆಂಟ್ ಇರೋ ಹುಡುಗ ಹಾಗೆ ನಮ್ಮ ಕಾಲೇಜ್ ಗೆ ಅವನೇ ಫಸ್ಟ್ ಬಂದಿರೋದು ,ಅದು.. ಅವನನ್ನು ನಮ್ಮ ಜೊತೆ  UK ಗೆ ಕಳಿಸಬಹುದ?.. ಅದೆ ಕಾರಣಕ್ಕೆ ಜೆಕೆ ತುಂಬಾ ಯೋಚನೆ ಮಾಡ್ತೀದಾನೆ..

ಶಶಿಧರ್ ಮುಖದಲ್ಲಿ ಕಿರುನಗೆ.. "ಅಷ್ಟೆ ತಾನೇ ಅವನನ್ನು ನಿಮ್ಮ ಜೊತೆ ಕರ್ಕೊಂಡು ಹೋಗಿ ನಮಗೆ ಯಾವ ಅಭ್ಯಂತರವೂ ಇಲ್ಲ ... ಹಾಗೆ ನಿಮ್ಮ ಇನ್ನೊಬ್ಬ ಫ್ರೆಂಡ್ ಯಾರದು.. ಹಾ! ಪ್ರವೀಣ್ ಅವನಿಗೂ ಕೇಳಿ ಇಷ್ಟ ಇದ್ದರೆ ಅವನು ಕೂಡ ನಿಮ್ಮೊಂದಿಗೆ ಹೋಗಬಹುದು"...

ಸೂರ್ಯ : "ಇಲ್ಲ ಮಾವ ಅವನು ಎಜುಕೇಷನ್ ಕಂಟಿನ್ಯೂ ಮಾಡೋಕೆ ಇಷ್ಟ ಇಲ್ಲ ,ಹಾಗೆ ಅವನ ಅಪ್ಪನಿಗೆ ಬಿಸಿನೆಸ್ ನಲ್ಲಿ ಹೆಲ್ಪ್ ಮಾಡ್ಬೇಕು ಅಂತ ಹೇಳ್ತಿದ್ದ ಆದರೂ.. ನಾನು ಅವನನ್ನ ಕೇಳಿ ನೋಡ್ತೀನಿ ಮಾವ ಅದು ಸ್ವಾತಿ"...

ಸುಧಾಕರ್ : " ಅವಳಿಗೂ ಕೂಡ ಮನೆಗೆ ಬರೋಕೆ ಹೇಳಿದೀನಿ.. ಅವಳು ಒಪ್ಗೊಂದ್ರೆ ಎಲ್ಲರೂ ಕೂಡಾ ಹೋಗ್ಬಹುದು ನೋಡೋಣ"

ಈಗ ನಮ್ಮ ಜೆಕೆ ಗೆ ಸ್ಪಲ್ಪ ಸಮಾಧಾನ...ಜೆಕೆ ಗೆ ಮತ್ತೆ ಒಂದು ಶಂಕೆ ಮೂಡಿ ,ಅದು ದೊಡ್ಡಪ್ಪ ಎಲ್ಲರದು ಓಕೆ ಆದರೆ ಕಾರ್ತಿಕ್...

ಶಶಿಧರ್ : "ನೀನು ಏನು ಯೋಚನೆ ಮಾಡ್ತೀದಿ ಯ .. ಅಂತ ನನಗೆ ಗೊತ್ತು ಅವನು ನಮ್ಗೆ ಮಗನ ತರಾ... ಅವನ ಎಜುಕೇಷನ್ ಖರ್ಚು ಕೂಡ ನಾವೇ ನೋಡ್ಕೋತಿವಿ ಇಷ್ಟು ದಿನ ನೀನು ಪಾರ್ಟ್ ಟೈಮ್ ಜಾಬ್ ಮಾಡಿ ಅವನ ಖರ್ಚನ್ನು ನಿಬಾಯಿಸ್ತಾ ಇದ್ದೆ ಅದಕ್ಕೆ ನಾನು ಒಂದು ದಿನವೂ ಅಡ್ಡಿ ಆಗಿಲ್ಲ ಆದರೆ.. ಈ ಸಲ ನಿಮ್ಮ ಮೂವರ ಖರ್ಚು ಕೂಡ ನಾವು  ನೋಡ್ಕೊತಿವಿ,ಇಷ್ಟೆಲ್ಲಾ ಆಸ್ತಿ ಮಾಡಿರೋದು ಯಾರಿಗೆ ನಿಮಗೆ ತಾನೇ ನೀವು ಕೇವಲ ಒದೋ ದರ  ಕಡೆ ಗಮನ ಕೊಡಿ ಸಾಕು" ...

"ಜೆಕೆ ಸರಿ ದೊಡ್ಡಪ್ಪ ನೀವು ಹೇಳಿದ ಹಾಗೆ ಆಗ್ಲಿ ಅಂತ ತಲೆಯಾಡಿಸುತ್ತಾನೆ ,ಆದರೆ ಕಾರ್ತಿಕ್ ನಾವು ಹೇಳಿದರೆ ಕಂಡಿತಾ ಬರೋಕೆ ಒಪ್ಪೊಲ್ಲ... ಅದಕ್ಕೆ ನೀವೇ ಅವನಿಗೆ ಹೇಳಿ"

ಶಶಿಧರ್ : "ಸರಿ ನಾಳೆ ಅವನಿಗೆ ಮನೆಗೆ ಬರೋಕೆ ಹೇಳು ಮಾತಾಡೋಣ , ಸರಿ ದೊಡ್ಡಪ್ಪ ಅಂತ ತಲೆಯಾಡಿಸುತ್ತಾನೆ"...

ಸುಧಾಕರ್ ನಿಟ್ಟುಸಿರನ್ನು ಬಿಟ್ಟು.. ಅಬ್ಬಾ ಅಂತೂ ಒಪ್ಗೊಂಡೇ ಅಲ್ಲ, ನಂಗಂತೂ ನಂಬಿಕೇನೆ ಇರಲಿಲ್ಲ ನೀನು ಒಪ್ಗೊಳ್ತಿಯ ಅಂತ ಸೂರ್ಯ ನ ಮೇಲೆ ಏನೋ ನಂಬಿಕೆ ಇತ್ತು ಆದರೆ ನಿನ್ನ ಮೇಲೆ....

"ಶಶಿಧರ್ ವಿಶ್ವಾಸದಿಂದ ನೋಡಿದೆಯಾ ಯಾವಾಗ್ಲು ಅವನ್ನ ಬೈತ ಇರ್ತಿದ್ದೆ ... ಈಗ ನೋಡು ಬರೀ ನಾನು ಒಂದು ಮಾತು ಹೇಳಿದಕ್ಕೆ ಇಬ್ಬರು ಒಪ್ಗೊಂದ್ರು"

ನೀವು ಈಗ ಕೆಳಗಡೆ ಹೊರಡಿ ನಾವು ಬಂದು ಎಲ್ಲರ ಹತ್ತಿರ ಮಾತಾಡ್ತೀವಿ...

ಜೆಕೆ,ಸೂರ್ಯ ರೂಮ್ ಇಂದ ಹೊರಗಡೆ ಬರ್ತಾರೆ  ಆಗ ಸೂರ್ಯ ಸ್ವಲ್ಪ ಆಶ್ಚರ್ಯದಿಂದ ಜೆಕೆ ನಂಗೆ ನಂಬೋಕೆ ಆಗ್ತಿಲ್ಲ ನೀನು ನೀನು ಮಾವ ಹೇಳಿದ ಒಂದೇ ಮಾತಿಗೆ ಒಪ್ಗೊಂಡೆ ಅಂತ.. 

ಜೆಕೆ : "ಹೌದು ಕಣೋ ನಿಜ ಹೇಳ್ಬೇಕು ಅಂದ್ರೆ ದೊಡ್ಡಪ್ಪ ಇದು ವರೆಗೂ ನಾನು ಏನೇ ಮಾಡಿದರೂ ನನ್ನ ಯಾವ ಕೆಲಸಕ್ಕೂ ಅಡ್ಡಿ ಮಾಡಿಲ್ಲ , ಹಾಗೆ ಎಲ್ಲದಕ್ಕೂ ನಂಗೆ ಸುಪೋರ್ಟ್ ಮಾಡ್ತಾ ಬಂದಿದಾರೆ ನನಗೆ ಅವರ ಮಾತಿಗೆ ಇಲ್ಲ ಅಂತ ಹೇಳೋಕೆ ನನ್ನ ಮನಸ್ಸು ಒಪಲ್ಲ ಹಾಗೆ ಅವರ ಮಾತಿನ ವಿರುದ್ಧ ಹೋಗೋಕೆ ಸಾಧ್ಯನೇ ಇಲ್ಲ"...

ಸೂರ್ಯ ಹಾಸ್ಯದ ನಗೆಯೊಂದಿಗೆ ಹಾ! ಗೊತ್ತು ಕಣೋ ನೀನು ದೊಡ್ಡ ಮಾವನ ಮೇಲೆ ಎಷ್ಟು ಗೌರವ ಇಟ್ಟಿದೀಯ ಅಂತ ಆದರೂ ನೀನು ಚಿಕ್ಕ ಮಾವ ,ದೊಡ್ಡ ಮಾವನ ಹತ್ತಿರ ಮಾತಾಡೋಕೆ ಎಷ್ಟು ಹೆದರ್ತಿಯೋ ,ಹೀಗೆ ಆದರೆ ನಾಳೆ ನಿನ್ನ ಹುಡಗಿ ಬಗ್ಗೆ ಹೇಗೆ ಮಾತಾಡ್ತೀಯ... 

ಜೆಕೆ ತನ್ನ ಕಣ್ಣುಗಳನ್ನು ಹೊರಳಿಸಿ ಹಲೋ!.. ಅದು ಹೆದರಿಕೆ ಅಲ್ಲ ಅವರ ಮೇಲೆ ಇರೋ ಗೌರವ ಅಷ್ಟೆ  

ಸೂರ್ಯ ಅವನ ಭುಜಕ್ಕೆ ಕೈ ಹಾಕಿ ,ಸರಿ ನೋಡೋಣ ಮುಂದೆ ಸ್ವಾತಿ ಮತ್ತೆ ನಿನ್ನ ಪ್ರೀತಿ ವಿಷಯ ಹೇಗೆ ಮಾತಾಡ್ತಿಯ ಅಂತ.. ಅದು ಸರಿ ಸ್ವಾತಿ ಬರ್ತಾಳೆ ಅಂತ ನಿಂಗೆ ಗ್ಯಾರಂಟಿ ಇದೆಯಾ??

ಜೆಕೆ ವಿಶ್ವಾಸದಿಂದ ಉತ್ತರ ನೀಡ್ತಾನೆ ,ನಂಗೆ ಬಿಡು ಅವಳಿಗೂ ಕೂಡ ನನ್ನ ಬಿಟ್ಟು ಇರೋದಕ್ಕೆ ಆಗೋಲ್ಲ so.. ಬಂದೆ ಬರ್ತಾಳೆ ನೋಡ್ತಿರು... ಸರಿ ಮಗ ನಾನು ನೋಡ್ತೀನಿ ಅಂತ ಸೂರ್ಯ ಕಿರುನಗೆಯೊಂದಿಗೆ ಹೇಳ್ತಾನೆ...

ಜೆಕೆ : ಅದೆಲ್ಲ ಬಿಡು ನಮ್ಮ ಹುಡುಗಿ ಬಂದಿರ್ತಾಳೆ ಬಾ ಕೆಳಗಡೆ ಹೋಗೋಣ... 

ಸೂರ್ಯ ಒಂದು ಬದಿಯ ಹುಬ್ಬನ್ನು ಏರಿಸಿ ಅಬ್ಬಾ! ಇಷ್ಟೊತ್ತು ಸಪ್ಪೆ ಮುಖ ಮಾಡ್ಕೊಂಡು ಇದ್ದೋನು ಈಗ ಹುಡುಗಿ ಬರ್ತಾಳೆ ಅನ್ನೋದೇ ತಡ ವರಸೇನೆ ಚೇಂಜ್.. ಇರ್ಲಿ..  ಸರಿ ನಡಿ ನಮ್ಮ ಹುಡಗಿನು ಕಾಯ್ತಿರ್ತಾಳೆ ನಡಿ ಹೋಗೋಣ ಅಂತ ಇಬ್ಬರು ಕೆಳಗೆ ಬರ್ತಾರೆ.. 

ಇವತ್ತು ಸಂಡೇ ಇರೋದ್ರಿಂದ ಎಲ್ಲರೂ ಕೆಳಗಡೆ ಎಲ್ಲರೂ ಒಟ್ಟಿಗೆ ಕುಳಿತು,ಹರಟೆ ಹೊಡೀತಾ ಮಾತಾಡ್ತಾ ಇರ್ತಾರೆ ಇವರಾರಿಗೂ ಈ ವಿಷಯದ ಬಗೆಗೆ ಅರಿವೇ ಇರೋದಿಲ್ಲ ,ಆಗ ಲಕ್ಕಿಯ ನೋಟ ಇವರೆಡೆಗೆ ಬೀಳುತ್ತದೆ , ಆಲ್ರೋ ಎಲ್ಲರೂ ಇಲ್ಲಿ ಮಾತಾಡ್ತಾ ಕೂತಿದೀವಿ ನೀವು ಬಂದು ನಮ್ಮ ಜೊತೆ ಸೇರೋದು ಬಿಟ್ಟು ಎನ್ರೋ ಅದು ಯಾವಾಗ ನೋಡಿದ್ರೂ ರೂಮ್ ನಲ್ಲಿ...

ಜೆಕೆ : ಲಕ್ಕಿ ಒಂದು ಇಂಪಾರ್ಟೆಂಟ್ ಮ್ಯಾಟರ್ ಮಾತಾಡ್ತಾ ಇದ್ವಿ.. ಹಾಗೆ ಮೆಲ್ಲಗೆ ತನ್ನ ಕಣ್ಣುಗಳನ್ನು ಆಕಡೆ ಈಕಡೆ ಹೊರಳಿಸಿ ಇಡೀ ಹಾಲ್ ನೆ ಒಂದು ರೌಂಡ್ ಹಾಯಸ್ತಾನೇ ..ಆದರೆ ಸ್ವಾತಿ ಎಲ್ಲಿಯೂ ಕಾಣೋದಿಲ್ಲ .. ಆಗ ಸೂರ್ಯನ ಹತ್ತಿರ ಕರೆದು ಏನೋ ನಮ್ಮ ಹುಡುಗಿ ಇನ್ನು ಬಂದಿಲ್ಲ ಅವನ ಮುಖದಲ್ಲಿ ನಿರಾಸೆಯ ಭಾವ.... 

ಸೂರ್ಯ : "ಸಲ್ಪ ಸಮಾಧಾನ ಮಾಡ್ಕೋ ಬರೋಕೆ ಆದ್ರೂ ಸ್ಪಲ್ಪ ಟೈಮ್ ಬೇಡವ... ಅದೆ ಗ್ಯಾಪ್ ನಲ್ಲಿ ಸೂರ್ಯ ಹಾಗೆ ಅಂಬ್ರುತಾ ನಡುವೆ ಕಣ್.. ಕಣ್ಣ ಸಲಿಗೆ ನಡೀತಾ ಇರುತ್ತೆ"..

ಅದನ್ನು ಗಮನಿಸಿದ ಜೆಕೆ ಓ..ಏನೂ ಕಣ್ಣಲ್ಲೇ ಮೆಸೇಜ್ ಗಳನ್ನಾ ಕಳಸ್ತಾ ಇರೋ ಹಾಗಿದೆ ಸಾಕು ಬಿಡೋ

"ಲಕ್ಕಿ ಜೋರು ದ್ವನಿಯಲ್ಲಿ ನಿಮ್ಗೆ ಕೇಳ್ತೀರೋದು ಎನ್ರೋ ಅದು ಗುಸು.. ಗುಸು"..

ಜೆಕೆ ತನ್ನ ತುಂಟ ನಗೆಯೊಂದಿಗೆ ಡಾರ್ಲಿಂಗ್ ಯಾಕೆ ಕೋಪ ಮಾಡ್ಕೊಳ್ತಿಯ ನಾವು ಬಂದಿದೀವಿ ಅಲ್ವಾ..ಈಗ ಏನು ಡ್ಯಾನ್ಸ್ ಮಾಡೋಣ್ವ?? ಬಾ ಡಾರ್ಲಿಂಗ್ ಲೆಟ್ಸ್ ಡ್ಯಾನ್ಸ್ ... ಎಲ್ಲರೂ ಓ.. ಓ.. ಅಂತ ರೆಗಿಸೋಕೆ ಸ್ಟಾರ್ಟ್ ಮಾಡ್ತಾರೆ

ಲಕ್ಕಿ ನಾಚಿಕೆಯಿಂದ.. ಛೀ!... ಹೋಗೋ ನೀನು ನಿಮ್ಮ ತಾತನ ತರ ನಾಚಿಕೇನೆ ಇಲ್ಲ ನಿನಗೆ.. ಆಗ ಸುಮತಿ ಅಯ್ಯೋ ನಾವು ಯಾರು ನೋಡಲ್ಲ.. ಹೇ!.. ಎಲ್ಲರೂ ಕಣ್ಣು ಮುಚ್ಚಿಕೊಳ್ರೋ ನೀವು ಶುರು ಮಾಡಿ   

ಜೆಕೆ ಯಾವುದೇ ಅಳುಕಿಲ್ಲದೆ ನೇರವಾಗಿ ಲಕ್ಕಿ ಹೇಗೆ ನೀನು ಇಸ್ಟೊಂದು ನಾಚಿಕೊಂಡ್ರೆ ಹಾ! ಎಲ್ಲರೂ ನೋಡು ಕಣ್ಣು ಮುಚ್ಚೊಳ್ಳೋಕೆ ರೆಡಿ ಇದಾರೆ ಬಾ ಡ್ಯಾನ್ಸ್ ಮಾಡೋಣ... ಸರಿ ಬೇಡ ಅಂದ್ರೆ ಬಿಡು ನಾನು ನನ್ನ ಸುಮತಿ ಅತ್ತೆ ಜೊತೆ ಡ್ಯಾನ್ಸ್ ಮಾಡ್ತೀನಿ.. ಬನ್ನಿ ಅತ್ತೆ  

ಸುಮತಿ ಸಹ ನಾಚಿಕೆಯಿಂದ ತಲೆ ತಗ್ಗಿಸುತ್ತಾರೆ ಹೇ! ನಿಮ್ಮ ಮಾವ ಇಲ್ಲೇ ಇದಾರೆ ಕಣೋ  ಅಮ್ಮ ಹೇಳಿದ ಹಾಗೆ ನಿಜವಾಗ್ಲೂ ನಿಂಗೆ ನಾಚಿಕೆ ಇಲ್ಲ ಬಿಡು.. ನೀನು ಅಜ್ಜಿ ಜೊತೇನೆ ಮಾಡು..

ಜೆಕೆ ಅದಿಕ್ಕೆ ಹೇಳಿದೆ ಡಾರ್ಲಿಂಗ್ ಪ್ಲೀಸ್ ಬಾ ಎರಡೇ ಎರಡು ಸ್ಟೆಪ್ಸ್ ಅಷ್ಟೇ.. ತನ್ನ ಅಂಗೈ ಯನ್ನು ಅಜ್ಜಿ ಎದುರಿಗೆ ಚಾಚುತ್ತಾನೆ.. ಎಲ್ಲರೂ ಡ್ಯಾನ್ಸ್ ಮಾಡಲು ಬಲವಂತಿಸಿದ್ದರಿಂದ ಸರಿ ಅಂತ ಅಜ್ಜಿ ಸಹ ನಾಚಿಕೊಳ್ಳುತ್ತಲೇ.. ಎದ್ದು ಬರುತ್ತಾಳೆ 

"ಆಗ ಜೆಕೆ ಸಾಂಗ್ ಹಾಕಿ ಬ್ರೋ ಅಂತ ಮಾಧವ್ ಗೆ ಹೇಳುತ್ತಲೇ.. ಸಾಂಗ್ ಪ್ಲೇ ಆಗುತ್ತೆ ಅವರಿಬ್ಬರೂ ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಡ್ಯಾನ್ಸ್ ಮಾಡತೊಡಗುತ್ತಾರೆ.. ಅದನ್ನು ನೋಡಿದ ಮಕ್ಕಳು ಮನೆಯವರೆಲ್ಲ ಉತ್ಸಾಹದಿಂದ ಕೂಗನ್ನು ಹಾಕುತ್ತಾ ಸಿಳ್ಳೆ ಹೊಡೆಯುತ್ತಾ ಹಾಗೆ ಮಕ್ಕಳು ಸಹ ಅವರೊಂದಿಗೆ ಕುಣಿಯತೊಡಗುತ್ತಾರೆ, ಆ ಕ್ಷಣದ ಆನಂದವನ್ನು ಸವಿಯುತ್ತಿರುತ್ತಾರೆ ಹಾಗೆ ಮಾತುಗಳು ಹಾಸ್ಯಗಳು ಎಲ್ಲವೂ ನಡೆಯುತ್ತಿರುತ್ತದೆ"

ಅಷ್ಟರಲ್ಲಿ ಶಶಿಧರ್,ಸುಧಾಕರ್ ಇಬ್ಬರು ಸಹ ಬರ್ತಾರೆ 
ಸುಧಾಕರ್ : "ಏನು ಎಲ್ಲರೂ ಫುಲ್ ಎಂಜಾಯ್ ಮಾಡ್ತಿರೋ ಹಾಗಿದೆ" .. 
"ಯಶೋಧ ಅವರೆಡೆಗೆ ನೋಟ ಬೀರಿ ಹೌದು ಕಣ್ರೀ ನೀವು ಎಲ್ಲಿ ಹೋಗಿದ್ರಿ ಇಷ್ಟೊತ್ತು"...

ಸುಧಾಕರ್ : "ಸರಿ ಈಗ.  ಬಂದಾಯ್ತಲ್ಲ...ಸುಮತಿ,ಶೇಖರ್ ನಿವಂತೂ ಇತ್ತೀಚಿಗೆ ಮನೆ ಕಡೆ ಬಂದೆ ಇಲ್ಲ ಏನಮ್ಮಾ ನಿಮ್ಮ ಅಣ್ಣಂದಿರ ಮನೆ.. ನೆನಪಾಗೆಲಿಲ್ಲವ ನಿನಗೆ"?...  

ಸುಮತಿ : "ಅಯ್ಯೋ ಹಾಗೇನೂ ಇಲ್ಲ ಅಣ್ಣ ಇವರಿಗೂ ಸ್ಪಲ್ಪ ಕೆಲಸ ಜಾಸ್ತಿ ಇತ್ತು ಹಾಗಾಗಿ ಬರೋಕೆ ಆಗಲಿಲ್ಲ" 

ಶಶಿಧರ್ : ಸರಿ ಈಗ  ಎಲ್ಲರೂ ಬಂದಾಯ್ತಲ್ಲಾ...ಆಗ ಜೆಕೆ ಹಾ! ಇನ್ನು ಇಲ್ಲ  ಶಶಿಧರ್ ಗೊಂದಲದಿಂದ ಜೆಕೆ ಇನ್ನು ಯಾರು ಬರ್ಬೇಕು ಎಲ್ಲರೂ ಇಲ್ಲೇ ಇದಾರಲ್ಲಾ...

ಜೆಕೆ ತಡವರಿಸುತ್ತಾ ಅದು.. ಸ್ವಾತಿ ಇನ್ನು ಬಂದಿಲ್ಲ ದೊಡ್ಡಪ್ಪ

ಶಶಿಧರ್ ಗೆ ಅರಿವಾಗಿ ಓ.. ಹೌದಾ ಸರಿ ಅವಳು ಬರ್ಲಿ ಇರು ,

ಆಗ ಅಲ್ಲಿರುವ ಎಲ್ಲರಿಗೂ ಗೊಂದಲ ಆಗೋಕೆ ಶುರು ಆಗುತ್ತೆ  

ಕೇಶವ್ : "ಅಣ್ಣ ಯಾಕೆ ಹಾಗೆ ಹೇಳ್ತಿದ್ದಿಯು ಏನಾದ್ರೂ ಇಂಪಾರ್ಟೆಂಟ್ ವಿಷಯ ಹೇಳೋದಿತ್ತ"?? 

ಶಶಿಧರ್ : "ಹೌದು ಕಣೋ ತುಂಬಾ ಮುಖ್ಯವಾದ ವಿಷಯ"... 

"ಶೇಖರ್ ಕುತೂಹಲದಿಂದ ಹಾಗಾದ್ರೆ ಬೇಗ ಹೇಳಿ ಭಾವ"... 

"ಹಾಗೆ ಅಲ್ಲಿರುವ ಎಲ್ಲರೂ ತುಂಬಾ ಕುತೂಹಲದಿಂದ ಕಾಯ್ತೀರ್ತಾರೆ...ಅಷ್ಟರಲ್ಲಿ ಸ್ವಾತಿ ಕೂಡ ಮನೆಗೆ ಬರ್ತಾಳೆ ( ಶಶಿಧರ್ ಮೊದಲೇ ಕಾಲ್ ಮಾಡಿ ಸ್ವಾತಿ ಗೆ ಎಲ್ಲಾ ವಿಷಯವನ್ನು ಹೇಳಿರ್ತಾರೆ ) .. ಓ.. ಎಲ್ಲರೂ ಇಲ್ಲೇ ಇದೀರಾ ಏನೋ ದೊಡ್ಡ ಮೀಟಿಂಗ್ ಮಾಡ್ತಿರೋ ತರ ಇದೆ".... 

ಜೆಕೆ ಕಿರುನಗೆಯೊಂದಿಗೆ ಹೌದು ಸ್ವಾತಿ ನಿನಗೋಸ್ಕರವೆ ವೇಟಿಂಗ್ ... ಆಗ ಸ್ವಾತಿ (ಮನಸಲ್ಲೇ ಆಹಾ! ಇವನು ಪಾಪ ತುಂಬಾ ಬೇಜಾರ್ ಮಾಡ್ಕೊಂಡು ಒಂದು ಮೂಲೆಯಲ್ಲಿ ಕುಳಿತಿರ್ತಾನೆ..ಅನ್ಕೊಂಡ್ರೆ ಇವನೇನು ಆರಾಮಾಗಿ ಇದ್ದಾನಲ್ಲ.. ನೋಡು ಹೇಗೆ ಕಿಸಿತಾ ಇದ್ದಾನೆ) 

ಶಶಿಧರ್ : "ಹೌದು ಸ್ವಾತಿ ಬಾ ಕುಳಿತುಕೋ.. ನೋಡಿ ಇದು ನಾನು ಮತ್ತೆ ಸುಧಿ ತುಂಬಾ ಯೋಚನೆ ಮಾಡಿ ತಗೊಂಡಿರೋ ನಿರ್ಧಾರ ನನಗೆ ನಂಬಿಕೆ ಇದೆ ಎಲ್ಲರೂ ಇದಕ್ಕೆ ಸಮ್ಮತಿಸ್ತಿರ ಅಂತಾ"...

ಎಲ್ಲರ ಮನದಲ್ಲಿ  ನೂರೆಂಟು ಆಲೋಚನೆಗಳು ಬರಲು ಶುರು ಆಗುತ್ತೆ... ಲಕ್ಕಿ ಅದೇನು ಅಂತ ಬೇಗ ಹೇಳೊ ನಮಗೆಲ್ಲ ಕುತೂಹಲ ತಡಿಯೋಕೆ ಆಗ್ತಿಲ್ಲ....

ಶಶಿಧರ್ : ಸರಿ ಅಮ್ಮ... ಅದು ಜೆಕೆ,ಹಾಗು ಸೂರ್ಯನ  UK ಗೆ ಹೈಯರ್ ಸ್ಟಡೀಸ್ ಗೆ ಕಳಿಸಬೇಕು ಅಂತ ಅನ್ಕೊಂಡಿದೀವಿ ಇದಕ್ಕೆ ಜೆಕೆ ಮತ್ತೆ ಸೂರ್ಯ ಸಹ ಒಪ್ಪಿಗೆ ಕೊಟ್ಟಿದ್ದಾರೆ...ಈಗ ನಿಮ್ಮೆಲ್ಲರ ಆಶೀರ್ವಾದ ಅವರಿಗೆ ಬೇಕು ಅಷ್ಟೇ... 

ಆಗ ಅಲ್ಲಿರುವ ಎಲ್ಲರೂ ಶಾಕ್.... ಮುಂದೆ ಮನೆಯವರು... ಇವರಿಗೆ UK ಗೆ ಹೋಗೋಕೆ ಒಪ್ಗೊಳ್ತಾರಾ ಅಥವಾ ಇಲ್ಲವಾ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ

        
           ಮುಂದುವರೆಯುವುದು....


🌸ಲೇಖಕರ ನೋಟ🌸:

ಜೆಕೆ, ಸೂರ್ಯ ಮತ್ತು ಸ್ನೇಹಿತರು ಭವಿಷ್ಯ ನಿರ್ಧಾರಗಳ ನಡುವೆ, ಸ್ನೇಹ ಮತ್ತು ಕುಟುಂಬ ಸಂಬಂಧಗಳ ಸಂಕೀರ್ಣತೆಯನ್ನು ಎದುರಿಸುತ್ತಿದ್ದಾರೆ. ಮುಂದಿನ ಅಧ್ಯಾಯದಲ್ಲಿ ಅವರ UK ಪ್ರಯಾಣದ ಮೇಲೆ ಕುಟುಂಬದ ಪ್ರಭಾವ ಹೇಗಿರುತ್ತದೋ ತಿಳಿಯಲಿದೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ಹಾಗೆ ಫಾಲೋ ಮಾಡಿ.