ಎಲ್ಲರೂ ಕಾರ್ ಅಲ್ಲಿ ಮನೆಗೆ ಬಂದಮೇಲೆ.
ಅಭಿ,,, ವಿಶ್ವ ನಾ ನೋಡ್ತಾ, ಸರ್ ನೀವು ಮನೇಲಿ ಇರಿ ನಾನ್ ಸೂಪರ್ ಮಾರ್ಕೆಟ್ ಗೆ ಹೋಗ್ತೀನಿ.
ವಿಶ್ವ,,, ಅಭಿ ಇವಾಗ ನನಗೆ ಏನಾಯ್ತು ಅಂತ ಮನೇಲಿ ಇರೋಕೆ ಹೇಳ್ತಾ ಇದ್ದಿಯಾ.
ನಯನಾ,,, ಅಪ್ಪ ಏನ್ ಅಪ್ಪ ನೀನು ಇಷ್ಟು ಸಿಂಪಲ್ ಆಗಿ ಏನಾಯ್ತು ಅಂತ ಹೇಳ್ತಾ ಇದ್ದಿಯಾ, ನೀವಿಬ್ರು ಎಲ್ಲಿಗೂ ಹೋಗಬೇಡಿ ಮನೇಲೆ ಇರಿ, ಅ ರೂಪೇಶ್ ಈಗ ಆಗಿರೋದಕ್ಕೆ ಪೊಲೀಸ್ ತನಕ ಹೋದ್ರೆ. ನೀವಿಬ್ರು ಇಲ್ಲೇ ಇರಿ ಸೂಪರ್ ಮಾರ್ಕೆಟ್ ನಾ ಅಲ್ಲಿ ಇರೋವ್ರು ನೋಡ್ಕೋತಾರೆ.
ಸುಭದ್ರ,,, ಹೌದು ರೀ, ನಯನಾ ಹೇಳೋದು ಸರಿ ಇದೆ. ಅವನು ಪೊಲೀಸ್ ಅಂತ ಹೋದ್ರೆ ಅಭಿ ಗೆ ಪ್ರಾಬ್ಲಮ್ ಆಗುತ್ತೆ.
ಅಭಿ,,, ಅಮ್ಮ ನೀವು ಅದರ ಬಗ್ಗೆ ಏನು ಭಯ ಬಿಳೋಕೆ ಹೋಗಬೇಡಿ, ಅವರಿಗೆ ಅಷ್ಟೊಂದು ಧೈರ್ಯ ಇಲ್ಲಾ. ಸರ್ ನೀವು ಇರಿ ನಾನ್ ಹೋಗ್ತೀನಿ.
ನಯನಾ,,, ಸ್ವಲ್ಪ ಕೋಪದಿಂದ ಅಭಿ ಕೈ ಇಡ್ಕೊಂಡು ಎಲ್ಲಿಗೆ ಹೋಗೋದು, ನಿಮ್ಮಷ್ಟು ಧೈರ್ಯ ಇಲ್ಲಾರಿ ನನಗೆ, ನೀವು ಸುಮ್ನೆ ಇದ್ರೆ ಸರಿ, ನಿಂತು ನೋಡ್ತಾ ಇದ್ದಾ ಅಪ್ಪನ ಮನೇಲಿ ಇರೋಕೆ ಹೇಳಿ, ಹೊಡೆದ ನೀವೇ ಹೋಗ್ತೀನಿ ಅಂತ ಇದ್ದೀರಾ, ಬೇಕಿದ್ರೆ ಅಪ್ಪ ಹೋಗ್ತಾರೆ ಅವ್ರಿಗೆ ಇಂತ ವಿಷಯ ನಾ ಹೇಗೆ ನಿಭಾಯಿಸಬೇಕು ಅನ್ನೋದು ಚೆನ್ನಾಗಿ ಗೊತ್ತು. ಅಂತ ಹೇಳಿ ಅಪ್ಪನ ಕಡೆಗೆ ನೋಡಿ ಅಪ್ಪ ನೀವು ಬೇಕಾದ್ರೆ ಹೋಗಿ, ನನ್ನ ಗಂಡ ಇವತ್ತು ಎಲ್ಲಿಗೂ ಬರೋದಿಲ್ಲ. ಹೇಗಿದ್ರು ಅಲ್ಲಿ ಏನೇ ನಡೆದ್ರು ಅಭಿ ಗೆ ಗೊತ್ತಾಗುತ್ತೆ ಅವಾಗ ನಾನೆ ಕಳಿಸಿ ಕೊಡ್ತೀನಿ. ಅಲ್ಲಿವರೆಗೂ ನೀವು ಎಲ್ಲೂ ಹೋಗೋ ಹಾಗೇ ಇಲ್ಲಾ ಅಂತ ಅಭಿ ನಾ ಎಳೆದುಕೊಂಡು ರೂಮ್ ಕಡೆಗೆ ಹೋಗ್ತಾ, ಅಮ್ಮ ಅನಾ ನಾ ನೀನೇ ನೋಡ್ಕೋ. ಇಲ್ಲಾ ಅಂದ್ರೆ ಅಪ್ಪ ಮಗಳು ಒಂದೇ ಪಕ್ಷ, ಏನಾದ್ರು ಒಂದು ಐಡಿಯಾ ಮಾಡಿ ಇಲ್ಲಿಂದ ಹೋಗೋ ಹಾಗೇ ಪ್ಲಾನ್ ಮಾಡ್ತಾರೆ. ನೋಡಿದಲ್ಲ ನಾನು ಅಷ್ಟು ಕೇಳಿಕೊಂಡ್ರು ಕೋಪ ನಾ ಕಮ್ಮಿ ಮಾಡ್ಕೊಂಡು ಇಲ್ಲಾ, ಮಗಳು ಬಂದು ಹೇಳಿದ ತಕ್ಷಣ ಹೇಗೆ ತಣ್ಣಗೆ ಆದ್ರು ಅಂತ. ಇವರ ಮುದ್ದು ಮಗಳನ್ನ ನೀನೇ ನೋಡ್ಕೋ ಅಂತ ಹೇಳಿ ಅಭಿ ನಾ ರೂಮ್ ಒಳಗೆ ಕರ್ಕೊಂಡು ಹೋಗಿ ಡೋರ್ ಹಾಕಿ ಬಿಡ್ತಾಳೆ.
ಅನಾ,,, ಏನ್ ತಾತ ನಿನ್ನ ಮಗಳಿಗೆ ಸ್ವಲ್ಪ ನು ಧೈರ್ಯ ಇಲ್ವಾ, ಇಷ್ಟು ಭಯ ಬೀಳ್ತಾಳೆ..
ವಿಶ್ವ,,, ಅವಳು ಹಾಗೇ ನೀನು ಅಜ್ಜಿ ಜೊತೆಗೆ ಇರು ನಾನು ಸೂಪರ್ ಮಾರ್ಕೆಟ್ ಗೆ ಹೋಗಿ ಬರ್ತೀನಿ. ಅಂತ ಹೇಳಿ ಸುಭದ್ರ ಗು ಹೇಳಿ ಅಲ್ಲಿಂದ ಹೊರಟು ಹೋಗ್ತಾರೆ.
ಸುಭದ್ರ ಮೊಮ್ಮಗಳನ್ನ ಕರೆದುಕೊಂಡು ರೂಮ್ ಒಳಗೆ ಹೋಗ್ತಾರೆ.
***
ಅಭಿ ರೂಮ್ಗೆ ಬಂದ ಮೇಲೆ ಹೋಗಿ ಬೆಡ್ ಮೇಲೆ ಮಲಗಿ ಕೊಂಡು ಕಣ್ ಮುಚ್ಚಿ, ನಯನಾ ಹೇಳಿದ ಮಾತನ್ನ ಯೋಚ್ನೆ ಮಾಡ್ತಾ ಹಾಗೇ ನಿದ್ದೆಗೆ ಜಾರ್ತನೆ. ನಯನಾ ಮೂರು ಜನರ ಬಟ್ಟೆ ನಾ ಪ್ಯಾಕ್ ಮಾಡಿ ಇಟ್ಟು. ಬಂದು ಬೆಡ್ ಮೇಲೆ ಮಲಗಿಕೊಂಡು ಅಭಿ ಕಡೆಗೆ ನೋಡ್ತಾಳೆ. ಅಭಿ ಆರಾಮಾಗಿ ನಿದ್ದೆ ಮಾಡ್ತಾ ಇರ್ತಾನೆ. ನಯನಾ ಮನಸಲ್ಲಿ ಹೋಗಿ ಅಭಿ ನಾ ತಬ್ಬಿಕೊಂಡು ಅವನ ಎದೆಮೇಲೆ ತಲೆ ಇಟ್ಟು ಮಲಗಿ ಕೊಳ್ಳಬೇಕು ಅಂತ ಅನ್ನಿಸುತ್ತೆ. ಬಟ್ ಸ್ವಲ್ಪ ಭಯ ಆಗುತ್ತೆ. ಆದ್ರು ಅವಳಿಗೆ ಅವಳೇ ಧೈರ್ಯ ಹೇಳಿಕೊಂಡು ಅಭಿ ಹತ್ತಿರ ಹೋಗಿ, ಕಣ್ಮುಚ್ಚಿಕೊಂಡು ಅಭಿ ಗಟ್ಟಿಯಾಗಿ ತಬ್ಬಿಕೊಂಡು ಅವಳ ಎದೆಮೇಲೆ ಮಲಗಿಕೊಳ್ತಾಳೆ. ಒಂದು ಕಡೆ ಅವಳ ಹಾರ್ಟ್ ಬೀಟ್ ಅವಳಿಗೆ ಕೇಳಿಸ್ತಾ ಇದ್ರೆ ಇನ್ನೊಂದು ಕಡೆ ಮನಸ್ಸಿಗೆ ತುಂಬಾ ಸಂತೋಷ ಆಗುತ್ತೆ. ಅ ಖುಷಿಯಲ್ಲೇ ಹಾಗೇ ನಿದ್ದೆಗೆ ಜಾರ್ತಾಳೆ.
#######
ರೂಪೇಶ್ ಅವರ ಅಪ್ಪನ ಹಾಸ್ಪಿಟಲ್ ಅಲ್ಲಿ ಅಡ್ಮಿಟ್ ಮಾಡಿದ ಮೇಲೆ. ಡಾಕ್ಟರ್ ಅವರಿಗೆ ಟ್ರೀಟ್ಮೆಂಟ್ ಕೊಟ್ಟು ಹೊರಗೆ ಬರ್ತಾರೆ.
ರೂಪೇಶ್,,,, ಡಾಕ್ಟರ್ ನಮಪ್ಪ ಈಗ ಹೇಗಿದ್ದಾರೆ?
ಡಾಕ್ಟರ್,,, ನೋಡಿ ಭಯ ಬಿಳೋ ಅಂತದ್ದು ಏನು ಆಗಿಲ್ಲ. ಸ್ವಲ್ಪ ದಿನದಲ್ಲೇ ಅವರು ಗುಣ ಆಗ್ತಾರೆ. ಬಟ್ ಅವರನ್ನ ಈ ರೀತಿ ಮಾಡಿದವರಿಗೆ, ಇದರ ಬಗ್ಗೆ ಚೆನ್ನಾಗಿ ಗೊತ್ತಿದೆ ಅಂತ ಅಂದುಕೊಳ್ತೀನಿ. ನಿಮ್ ತಂದೆಗೆ ಕೈ. ಮೂಳೆ ಏನು ಮುರಿದಿಲ್ಲ ಕೇವಲ ನರಗಳಿಗೆ ತುಂಬಾ ನೋವು ಹಾಗೋ ತರ ಮಾಡಿದ್ದಾರೆ. ಅದಕ್ಕೆ ಅವ್ರಿಗೆ ಕೈಗಳನ್ನ ಆಡಿಸೋಕೆ ಆಗಲಿಲ್ಲ. ಒಂದು ವಾರದಲ್ಲಿ ನಿಮಪ್ಪ ಸರಿ ಹೋಗ್ತಾರೆ.
ರೂಪೇಶ್,,, ತುಂಬಾ ಥ್ಯಾಂಕ್ಸ್ ಡಾಕ್ಟರ್.
ಡಾಕ್ಟರ್,,,, ಇಟ್ಸ್ ಓಕೆ. ನನ್ನ ಕರ್ತವ್ಯ ನಾನು ಮಾಡಿದೆ. ನೀವೋಗಿ ನಿಮ್ ತಂದೆನ ನೋಡಬಹುದು, ಬಟ್ ಡಿಸ್ಟರ್ಬ್ ಮಾಡಬೇಡಿ ರೆಸ್ಟ್ ತಗೋತಾ ಇದ್ದಾರೆ. ಅಂತ ಹೇಳಿ ಅಲ್ಲಿಂದ ಹೊರಟು ಹೋದರು.
ರೂಪೇಶ್ ಒಳಗೆ ಬಂದು ಅವರ ಅಪ್ಪ ನಾ ನೋಡ್ತಾ ಅಪ್ಪ ಅವನ ಮಾತ್ರ ನಾನು ಸುಮ್ನೆ ಬಿಡೋದಿಲ್ಲ. ನೋಡ್ತಾ ಇರು ಅವನನ್ನ ಏನು ಮಾಡ್ತೀನಿ ಅಂತ, ನನ್ನ ಈ ಸ್ಥಿತಿಗೆ ತಂದವನು, ಇವತ್ತು ನಿನ್ನ ಈ ರೀತಿ ಮಾಡಿದವನು ಒಬ್ಬನೇ. ಅವನನ್ನ ಮಾತ್ರ ಸುಮ್ನೆ ಬಿಡೋದಿಲ್ಲ ಅಂತ ಹೇಳಿ ಕೋಪದಿಂದ ಹೊರಗೆ ಬರ್ತಾನೇ.
ವೈಟ್ ಡ್ರೆಸ್ ಹಾಕಿಕೊಂಡು ಒಬ್ಬ ವ್ಯಕ್ತಿ ರೂಪೇಶ್ ಹತ್ತಿರ ಬಂದು, ಈಗ ನಿಮ್ ಅಪ್ಪ ಹೇಗಿದ್ದಾರೆ ಅಂತ ಕೇಳ್ತಾನೆ..
ರೂಪೇಶ್,,, ಪೃಥ್ವಿ ಅಂಕಲ್ ಈಗ ಅಪ್ಪ ಆರಾಮಾಗಿ ಇದ್ದಾರೆ, ಡಾಕ್ಟರ್ ಸ್ವಲ್ಪ ದಿನ ಅಪ್ಪ ವಾಸಿ ಆಗ್ತಾರೆ ಅಂತ ಹೇಳಿ ಹೋದ್ರು.
ಪೃಥ್ವಿ,,, ಹೌದ, ಸರಿ ಹಾಗಿದ್ರೆ. ಆರಾಮಾಗಿ ಇದ್ದಾರೆ ಅಂದ್ರೆ ಅದೇ ಸಂತೋಷ. ಅಲ್ಲ ನಿಮ್ ಅಪ್ಪನಿಗೆ ಸ್ವಲ್ಪ ಆದ್ರು ಬುದ್ದಿ ಇಲ್ವಾ, ಎಲೆಕ್ಷನ್ ಹತ್ತಿರ ಬರ್ತಾ ಇದೆ, ಪಬ್ಲಿಕ್ ಅಲ್ಲಿ ಈ ರೀತಿ ಗಲಾಟೆ ಮಾಡಿಕೊಂಡ್ರೆ, ಅವರಿಗೆ ತೊಂದ್ರೆ ಆಗುತ್ತೆ ಅಂತ ಎಷ್ಟು ಹೇಳಿದ್ರು ತಲೆಗೆ ಹಾಕೊಂಡು ಇಲ್ಲಾ. ಈಗ ನೋಡು ಈ ಗಲಾಟೆ ವಿಷಯ ಪಾರ್ಟಿ ಆಫೀಸ್ ತನಕ ಹೋಗಿದೆ. ಪಾರ್ಟಿ ಪ್ರೆಸಿಡೆಂಟ್ ಬಾಯಿಗೆ ಬಂದ ಹಾಗೇ ಬೈತಾ ಇದ್ದಾರೆ. ನೋಡು ನಿಮ್ ನಿಮ್ ಪರ್ಸನಲ್ ವಿಷಯ ದ್ವೇಷ ಏನೇ ಇದ್ರು, ಎಲೆಕ್ಷನ್ ಆದಮೇಲೆ ನೋಡ್ಕೊಳ್ಳಿ. ಇಲ್ಲಾ ಅಂದ್ರೆ ಪೊಲೀಸ್ ಕೇಸ್ ಅದು ಇದು ಅಂತ ಹೋದ್ರೆ ಎಲೆಕ್ಷನ್ ಮೇಲೆ ಪ್ರಭಾವ ಬೀರುತ್ತೆ. ಬೇಕಾದ್ರೆ ಎಲೆಕ್ಷನ್ ಮುಗಿದ ಮೇಲೆ ಗೆದ್ದು ಅವರ ಮೇಲೆ ದ್ವೇಷ ನಾ ತೀರಿಸಿಕೊಳ್ಳಬಹುದು. ಅ ವಿಶ್ವನಾಥ್ ಗೆ ಊರಲ್ಲಿ ಜನರಲ್ಲಿ ಒಳ್ಳೆ ಗೌರವ ಇದೆ. ನೀನು ದುಡುಕಿ ತಪ್ಪು ನಿರ್ಧಾರ ತಗೋಳೋಕೆ ಹೋಗಬೇಡ. ಮತ್ತೆ ನಿಮ್ ಅಪ್ಪನ ಹೊಡೆದವನ ಬಗ್ಗೆ ಕೂಡ ತಿಳ್ಕೊಂಡೆ. ರೂಲಿಂಗ್ ಪಾರ್ಟಿ MLA ಗೆ ಮತ್ತೆ ಅವನಿಗೆ ಒಳ್ಳೆ ಸ್ನೇಹ ಇದೆ. ನೋಡೋ ಅಷ್ಟು ಸೈಲೆಂಟ್ ಅಲ್ಲ ಅಂತ ಗೊತ್ತಾಯಿತು. ತನ್ನವರಿಗೋಸ್ಕರ ಎಷ್ಟು ದೂರ ಬೇಕಾದ್ರು ಹೋಗೋ ಕ್ಯಾರೆಕ್ಟರ್ ಅವನದ್ದು. ಮತ್ತೆ ನೀವು ಏನಾದ್ರು ಅವನ ಮೇಲೆ ಗಲಾಟೆ ಗೆ ಹೋದ್ರೆ. ನಿಮ್ ಅಪ್ಪ ಎಲೆಕ್ಷನ್ ಅಲ್ಲಿ ಸೋಲೋದು ಪಕ್ಕ. ಯಾಕಂದ್ರೆ ನಿಮ್ ಅಪ್ಪ ಎಲೆಕ್ಷನ್ ಗೆ ನಿಂತಿರೋದು ಅವನು ಇರೋ ಏರಿಯಾ ದಲ್ಲಿ. ಸ್ವಲ್ಪ ಎಡವಟ್ಟು ಆದ್ರು ನಿಮ್ಮಪ್ಪ ಸೋಲೋದು ಪಕ್ಕ. ಅದಕ್ಕೆ ನಿನಗೆ ಈ ವಿಷಯ ಹೇಳ್ತಾ ಇದ್ದೀನಿ. ನಿಮ್ ಅಪ್ಪನಿಗೆ ಎಚ್ಚರ ಆದಮೇಲೆ ವಿಷಯ ನಾ ಕ್ಲಿಯರ್ ಆಗಿ ಹೇಳಿ ಅರ್ಥ ಮಾಡಿಸು. ನನಗೆ ಪಾರ್ಟಿ ಆಫೀಸ್ ಅಲ್ಲಿ ಕೆಲಸ ಇದೆ ನಾಳೆ ಬಂದು ನಿಮ್ ತಂದೆ ನಾ ನೋಡ್ತೀನಿ.
ರೂಪೇಶ್,,, ಸರಿ ಅಂಕಲ್.
ಪೃಥ್ವಿ ಅಲ್ಲಿಂದ ಹೊರಟು ಹೋಗ್ತಾರೆ.
ರೂಪೇಶ್ ಗೆ ಇವರು ಅವನ ಬಗ್ಗೆ ಹೇಳಿದ್ದು ನಿಜ ನಾ ಸುಳ್ಳ ಅಂತ ಯೋಚ್ನೆ ಮಾಡ್ತಾ ಅಲ್ಲೇ ಕೂತು ಬಿಡ್ತಾನೆ.
######
ನಿದ್ದೆಯಿಂದ ಎಚ್ಚರ ಆಗುತ್ತೆ ಅಭಿ ಗೆ, ಕಣ್ ಬಿಟ್ಟು ನೋಡಿದಾಗ, ಎದೆಮೇಲೆ ನಯನಾ ಮಲಗಿರೋದು ಕಾಣುತ್ತೆ, ಅಭಿ ನಯನಾ ನಾ ಹೇಗೆ ಎಬ್ಬಿಸೋದು ಅನ್ನೋ ಚಿಂತೆ ಶುರುವಾಗುತ್ತೆ. ಹಾಗೇ ಯೋಚ್ನೆ ಮಾಡ್ತಾ ಇರೋವಾಗ ರೂಮ್ ಬಾಗಿಲು ಬಡಿದ ಸದ್ದು ಆಗುತ್ತೆ. ಡೋರ್ ಹತ್ತಿರ ಪಪ್ಪಾ ಅಂತ ಕರೀತಾ ಇರೋ ಅನಾ ಧ್ವನಿ ಕೇಳುತ್ತೆ. ಅ ಧ್ವನಿ ಮಲಗಿದ್ದ ನಯನಾ ಗು ಕೇಳುತ್ತೆ. ನಯನಾ ಎಚ್ಚರ ಗೊಂಡು, ಬಂದೆ ಪುಟ್ಟಿ ಅಂತ ಎದ್ದು ಅಭಿ ಮುಖ ನೋಡ್ತಾಳೇ ಅಭಿ ಕಣ್ಮುಚ್ಚಿ ಕೊಂಡು ಇರ್ತಾನೆ. ನಯನಾ ಧೈರ್ಯ ಮಾಡಿ ಅಭಿ ಕೆನ್ನೆಗೆ ಮುತ್ತಿಟ್ಟು, ಬೆಡ್ ಮೇಲಿಂದ ಎದ್ದು ರೂಮ್ ಡೋರ್ ತೆಗಿಯೋಕೆ ಹೋಗ್ತಾಳೆ. ಅಭಿ ಮನಸಲ್ಲಿ ನಯನಾ ದಿನೇ ದಿನೇ ಅವನ ಮೇಲೆ ಪ್ರೀತಿ ನಾ ಬೆಳೆಸಿಕೊಳ್ತಾ ಇರೋದು ನೋಡಿ ತುಂಬಾ ಕಷ್ಟ ಆಗುತ್ತೆ. ಅವಳಿಗೆ ಹೇಳೋಕು ಕಷ್ಟ ಆಗುತ್ತೆ. ಪರಿಸ್ಥಿತಿ ಗೊತ್ತಿರೋದ್ರಿಂದ ಎಲ್ಲವನ್ನು ಸಹಿಸಿಕೊಳ್ತಾ ಸುಮ್ಮನೆ ಇದ್ದು ಬಿಟ್ಟಿದ್ದಾನೆ.
ನಯನಾ ರೂಮ್ ಡೋರ್ ತೆಗೆದು, ಏನೇ ಹಾಗೇ ಕೂಗ್ತಾ ಇದ್ದೆ.
ಅನಾ,,, ಊಟ ಮಾಡೋ ಟೈಮ್ ಆಯ್ತು, ಇನ್ನು ಮಲಗೆ ಇದ್ರೆ, ಅದಕ್ಕೆ?
ನಯನಾ ಗಡಿಯಾರದ ಕಡೆಗೆ ನೋಡ್ತಾ, ಹೌದಲ್ಲ, ಸಾರೀ ಬಂಗಾರ ಗೊತ್ತಾಗಲಿಲ್ಲ ನೀನು ಹೋಗಿ ಪಪ್ಪಾ ಎಬ್ಬಿಸಿ ಊಟಕ್ಕೆ ಕರ್ಕೊಂಡು ಬಾ ನಾನ್ ಹೋಗಿ ಊಟಕ್ಕೆ ರೆಡಿ ಮಾಡ್ತೀನಿ ಅಂತ ಹೇಳಿ ಅಡುಗೆ ಮನೆ ಕಡೆ ಹೋಗ್ತಾಳೆ.
ಅನಾ,, ಬೆಡ್ ಮೇಲೆ ಕೂತು ಪಪ್ಪಾ ಎದ್ದೇಳು ಊಟ ಮಾಡೋಣ ಅಂತ ಕರೀತಾಳೆ.
ಅಭಿ ನಿದ್ದೆಯಿಂದ ಎದ್ದು, ಅನಾ ಜೊತೆಗೆ ಸ್ವಲ್ಪ ಮಾತಾಡಿ, ಎದ್ದು ಫ್ರೆಷ್ ಅಪ್ ಆಗಿ ಅನಾ ನಾ ಕರ್ಕೊಂಡು ಡೈನಿಂಗ್ ಟೇಬಲ್ ಹತ್ತಿರ ಹೋಗ್ತಾನೆ.
ವಿಶ್ವನಾಥ್ ಕೂಡ ಸೂಪರ್ ಮಾರ್ಕೆಟ್ ನಿಂದ ಮನೆಗೆ ಬರ್ತಾರೆ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡ್ತಾ ಇರೋವಾಗ.
ವಿಶ್ವ,,, ನಯನಾ ನಾಳೆ ಹೊರಡೋಕೆ ಲಗೇಜ್ ಪ್ಯಾಕ್ ಮಾಡಿಕೊಂಡ.
ನಯನಾ,,, ಅ ಅಪ್ಪ ಎಲ್ಲಾ ಪ್ಯಾಕ್. ಮಾಡ್ಕೊಂಡೆ.
ವಿಶ್ವ,,, ಅಭಿ ನಾಳೆ ನನ್ನ ಕಾರ್ ತಗೊಂಡು ಹೋಗು. ಸೂಪರ್ ಮಾರ್ಕೆಟ್ ಬಗ್ಗೆ ನೀನೇನು ಯೋಚ್ನೆ ಮಾಡಬೇಡ. ನಾನ್ ನೋಡ್ಕೋತೀನಿ ಆರಾಮಾಗಿ ನಿಮಗೆ ಎಷ್ಟು ದಿನ ಇರಬೇಕು ಅಂತ ಅನ್ನಿಸುತ್ತೋ ಅಷ್ಟು ದಿನ ಇದ್ದು ಬನ್ನಿ.
ಅನಾ,,, ಪಪ್ಪಾ ಕಾರ್ ಅಲ್ಲಿ ಏನಕ್ಕೆ ನಿನ್ನ ಬೈಕ್ ಅಲ್ಲೇ ಹೋಗೋಣ, ಚೆನ್ನಾಗಿ ಇರುತ್ತೆ.
ನಯನಾ,,, ನಾನು ನೀನು ನಿಮ್ ಪಪ್ಪಾ ಮಾತ್ರ ಆಗಿದ್ರೆ ಬೈಕ್ ಅಲ್ಲೇ ಹೋಗಬೋದು, ಅದ್ರೆ ಲಗೇಜ್ ಇದೆ ಅಲ್ವಾ. ಸೋ ನಾಳೆ ಕಾರ್ ಅಲ್ಲಿ ಹೋಗೋಣ, ಬೇಕಾದ್ರೆ ಇನ್ನೊಂದು ಸರಿ ನಿಮ್ ಪಪ್ಪ ಬೈಕ್ ಅಲ್ಲೇ ಹೋಗೋಣ ಸರಿನಾ.
ಅನಾ,,, ಏನ್ ಸರಿ ಅಮ್ಮ ಅಜ್ಜಿ ಮನೆಗೆ ಹೋದಮೇಲೆ, ಪಪ್ಪಾ ಹೊಡಾಡೋಕೆ ಬೈಕ್ ಬೇಡ್ವಾ, ಕಾರ್ ಅಲ್ಲೇ ಎಲ್ಲಾ ಕಡೆ ಹೋಗಿ ಬರೋಕೆ ಆಗುತ್ತಾ ಯೋಚ್ನೆ ಮಾಡು.
ಸುಭದ್ರ,,, ಲೇ ತರ್ಲೆ, ಡೈರೆಕ್ಟ್ ಆಗಿ ಹೇಳು ಪಪ್ಪಾ ನಾ ಜೊತೆಗೆ ಬೈಕ್ ಅಲ್ಲಿ ಸುತ್ತಾಡೋಕೆ ಇಷ್ಟ ಅಂತ. ಇಲ್ಲಿ ಇದ್ರೆ ನಾನು, ನಿಮ್ ಅಮ್ಮ ಬಿಡೋದಿಲ್ಲ ಅಂತ, ಅದು ಬಿಟ್ಟು ಯಾಕೆ ನಿಮ್ ಪಪ್ಪಾ ನಾ ಮೇಲೆ ಹೇಳ್ತಿಯ.
ಅನಾ ಸಿಕ್ಕಿ ಹಾಕಿಕೊಂಡೆ ಅಂತ ಗೊತ್ತಾಗಿ, ನಾನೇನು ಹಾಗೇ ಹೇಳಿಲ್ಲ ಅಂತ ಹೇಳಿ ಅಭಿ ಕಡೆಗೆ ನೋಡ್ತಾಳೆ. ಅಭಿ ಅನಾ ಪರಿಸ್ಥಿತಿ ನಾ ಅರ್ಥ ಮಾಡಿಕೊಂಡು. ಹತ್ತಿರ ಹೋಗಿ ಕಿವೀಲಿ ಏನೋ ಹೇಳ್ತಾನೆ. ಅಭಿ ಹೇಳೋದನ್ನ ಕೇಳಿ, ಅನಾ ಗೆ ಫುಲ್ ಖುಷಿ ಆಗಿ ಬಿಡುತ್ತೆ. ಅಷ್ಟೇ ಖುಷಿಯಾಗಿ ಅಜ್ಜಿ ಕಡೆಗೆ ನೋಡ್ತಾ, ಆಯ್ತು ನಾವು ಕಾರ್ ಅಲ್ಲೇ ಹೋಗ್ತಿವಿ ಅಂತ ಹೇಳ್ತಾಳೆ.
ಸುಭದ್ರ,,, ಎಲಾ ಇವಳ, ಇಷ್ಟೋತ್ತು ಬೈಕ್ ಅಂತ ಇದ್ದೆ, ನಿಮ್ ಪಪ್ಪಾ ಹೇಳಿದ್ದೆ, ಕಾರ್ ಅಲ್ಲೇ ಹೋಗ್ತೀನಿ ಅಂತ ಇದ್ದಿಯಾ, ಅದು ಅಲ್ಲದೆ ನಿನ್ನ ಮುಖದಲ್ಲಿ ಅಷ್ಟೊಂದು ಖುಷಿ ಕಾಣ್ತಾ ಇದೆ. ಏನ್ ಹೇಳಿದ್ರು ನಿಮ್ ಪಪ್ಪಾ ಕಿವೀಲಿ.
ನಯನಾ,,, ನಗ್ತಾ ಅಮ್ಮ ಹೋಗಿ ಹೋಗಿ ಅವಳನ್ನ ಕೇಳ್ತಾ ಇದ್ದಿಯಾ ಅಲ್ವಾ, ಇಬ್ರು ಒಂದೇ ಪಾರ್ಟಿ ಒಂದೇ ಪಕ್ಷ,, ನೀನು ನೂರು ಸರಿ ಕೇಳಿದ್ರು ಅವಳು ಹೇಳಲ್ಲ, ಹೇಳೋದು ಇಲ್ಲಾ, ಅವಳ ಮುಖ ನೋಡಿದ್ರೆ ಗೊತ್ತಾಗಲ್ವಾ, ಅವರ ಪಪ್ಪಾ ಅವಳಿಗೆ ಇಷ್ಟ ಹಾಗೋ ಹಾಗೇ ಏನೋ ಹೇಳಿರಬೇಕು ಅದಕ್ಕೆ ಅವಳು ಕಾರ್ ಅಲ್ಲೇ ಹೋಗೋಣ ಅಂತ ಹೇಳಿದ್ದಾಳೆ.
ಅನಾ,,, ಸ್ವಲ್ಪ ಕೋಪದಿಂದ ಪಪ್ಪಾ ಬೇಗ ಊಟ ಮಾಡಿ ಬಾ ಪಪ್ಪಾ ನಾವು ಹೋಗಿ ರೂಮಲ್ಲಿ ಕೂತು ಮಾತಾಡಿಕೊಳ್ಳೋಣ, ಅಪ್ಪ ಮಗಳು ಮಾತಾಡಿಕೊಳ್ಳೋ ಅಷ್ಟು ಫ್ರೀಡಂ ಇಲ್ಲಾ ಈ ಮನೇಲಿ.
ಅನಾ ಮಾತಿಗೆ, ವಿಶ್ವ ಸುಭದ್ರ ನಯನಾ ಮೂರು ಜನ ನಗ್ತಾ, ಊಟ ಮುಂದುವರೆಸ್ತಾರೆ.
ಸ್ವಲ್ಪ ಸಮಯದ ನಂತರ ಎಲ್ಲರೂ ಊಟ ಮಾಡಿ ಮುಗಿಸ್ತಾರೆ.
ವಿಶ್ವ, ಅಭಿ ಇಬ್ಬರು ಸ್ವಲ್ಪ ಹೊತ್ತು ವಾಕಿಂಗ್ ಮಾಡ್ತಾ ಮಾತಾಡಿಕೊಂಡು, ಮನೆ ಒಳಗೆ ಬರ್ತಾರೆ.
ಅಭಿ ರೂಮ್ ಗೆ ಹೋಗಿ ಬೆಡ್ ಮೇಲೆ ಮಲಗಿಕೊಳ್ತಾನೆ. ಸ್ವಲ್ಪ ಸಮಯದ ನಂತರ ಅನಾ ಪಪ್ಪಾ ಅಂತ ಅನ್ಕೊಂಡು ಬಂದು ಅಭಿ ನಾ ತಬ್ಬಿಕೊಂಡು ಮಲಗ್ತಾಳೆ. ನಯನಾ ರೂಮ್ ಡೋರ್ ಕ್ಲೋಸ್ ಮಾಡ್ತಾ, ಲೇ ನಿಧಾನಕ್ಕೆ ಬರೋಕೆ ಆಗೋದಿಲ್ವಾ ಅಂತ ಹೇಳ್ತಾ ಬಂದು, ಅಭಿ ಪಕ್ಕದಲ್ಲಿ ಮಲಗಿಕೊಂಡು, ಅನಾ ನೋಡ್ತಾ, ನಾಳೆ ಅಜ್ಜಿ ಮನೆಗೆ ಹೋದಮೇಲೆ ಸ್ವಲ್ಪ ಸೈಲೆಂಟ್ ಆಗಿ ಇರು, ಈ ತರ ತರ್ಲೆ ಮಾಡೋಕೆ ಹೋಗಬೇಡ.
ಅನಾ,,, ಆಯ್ತು ನಯನಾ, ನಾನು ಅಜ್ಜಿ ಮನೇಲಿ ಹೇಗೆ ಇರಬೇಕು ಅಂತ ನನಗೆ ಗೊತ್ತು. ನೀನು ಅತ್ತೆ ಮನೇಲಿ ಹೇಗೆ ಇರಬೇಕು ಅನ್ನೋದನ್ನ ಕಲಿತ್ಕೋ ಸರಿನಾ.
ನಯನಾ,,, ಎಲಾ ನಿನ್ನ ನನಗೆ ಬುದ್ದಿ ಹೇಳೋ ಅಷ್ಟು ದೊಡ್ಡವಳು ಆಗಿ ಬಿಟ್ಟ ನಿನ್ನ ಅಂತ ಹೊಡಿಯೋಕೆ ಹೋಗ್ತಾಳೆ.
ಅನಾ ತಪ್ಪಿಸಿಕೊಂಡು ಪಪ್ಪಾ ಅಂತ ಅಭಿ ಗೆ ಇನ್ನೊಂದು ಸೈಡ್ ಹೋಗಿ ಅವಿತು ಕೊಳ್ತಾಳೆ.
ನಯನಾ,,, ಅವಳ ಈ ವರ್ತನೆ ಗೆ ನಗ್ತಾ. ಸ್ವಲ್ಪ ಅಭಿ ಹತ್ತಿರ ಹೋಗಿ, ನಿಮ್ ಪಪ್ಪಾ ಗೆ ಹೇಳಿದ್ರೆ ಭಯ ಬೀಳ್ತೀನಿ ಅನ್ಕೊಂಡ. ನಿಮ್ ಪಪ್ಪಾ ನನ್ನವನು ಅಂತ ಹೇಳಿ ತಬ್ಬಿಕೋಳ್ತಾಳೆ.
ಅಭಿ ಗೆ ಅ ಕ್ಷಣ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಅನ್ನಿಸೋದಿಲ್ಲ..
ಅನಾ,,, ಎದ್ದು ಅಭಿ ಎದೆಮೇಲೆ ಮಲಗಿಕೊಂಡು ನನ್ನಾ ಪಪ್ಪಾ ಅಂತ ಹೇಳಿ ತಬ್ಬಿಕೋಳ್ತಾಳೆ.
ನಯನಾ ನಗ್ತಾ ಅಭಿ ತೊಳಿನ ಮೇಲೆ ತಲೆ ಇಟ್ಟುಕೊಂಡು ಇನ್ನೊಂದು ಕೈಲಿ ಅನಾ ನಾ ಅಪ್ಪಿಕೊಂಡು. ನನ್ನಾ ಬಂಗಾರ ಈಗ ಮಲಕ್ಕೋ ಬೆಳಿಗ್ಗೆ ಬೇಗ ಎದ್ದೇಳಬೇಕು ಸರಿನಾ.
ಅನಾ,, ಹ್ಮ್ ಸರಿ ಅಮ್ಮ ಅಂತ ಹೇಳಿ ಹಾಗೇ ಅಭಿ ಎದೆಮೇಲೆ ಮಲಗಿ ಕೊಳ್ತಾಳೆ..
ಅಭಿ ಅನಾ ನಾ ಒಂದು ಕೈಲಿ ಬೀಳದಂತೆ ಇಡಿದುಕೊಂಡು ಮಲಗ್ತಾನೆ. ನಯನಾ ಕೂಡ ಖುಷಿ ಯಿಂದ ಕಣ್ಮುಚ್ಚಿ ಕೊಂಡು, ಅಭಿ ವಿಷಯದಲ್ಲಿ ದೇವರಿಗೆ ಥ್ಯಾಂಕ್ಸ್ ಹೇಳ್ತಾ ನಿದ್ದೆಗೆ ಜಾರ್ತಾಳೆ.
@@@@@@@@@@@@@@@@@@@@@@@@