Mahi - 47 in Kannada Love Stories by S Pr books and stories PDF | ಮಹಿ - 47

The Author
Featured Books
Categories
Share

ಮಹಿ - 47

      ಸೀತಾ ಅವರ ಮನೇಲಿ ಫ್ಯಾಮಿಲಿ ಅವರು ಮಾತಾಡ್ತಾ ಇದ್ರೆ ನನಗೆ ಏನ್ ಕೆಲಸ ಅಂತ ಅನ್ಕೊಂಡು, ಸೀದಾ ಬೈಕ್ ಅಲ್ಲಿ  ಟೀ ಶಾಪ್ ಹತ್ತಿರ ಬಂದು ಒಂದು ಟೀ ಹೇಳಿ, ಸಿಗರೇಟ್ ಗೆ ಬೆಂಕಿ ನಾ ಹಚ್ಚಿಕೊಂಡು  ಕೈಗೆ ಟೀ ಕಪ್ ನಾ ತೆಗೆದುಕೊಂಡು  ಬಂದು ಒಂದು ಸೈಡ್ ಕೂತು, ಆಲೋಚನೆ ಮಾಡೋಕೆ ಶುರು ಮಾಡಿದೆ,   ಅಲ್ಲ  ಸೀತಾ ಮಾವ ಮಗನನ್ನ ಒಂದು ಮಾತು ಕೇಳದೆ ನೆರವಾಗಿ ಮನೆಗೆ ಬಂದು , ಮದುವೆ ಪ್ರಸ್ತಾಪ ಏನಕ್ಕೆ ಮಾಡಿದ,  ನನ್ನ ನೋಡಿದಾಗಿಂದ ಲೋಕೇಶ್ ಅವರ ಮುಖದಲ್ಲಿ ಏನೋ ಹೇಳೋಕೆ ಹಾಗದೆ ಇರೋ ರೀತಿ ಅವರ ಭಾವನೆಗಳು ಇತ್ತು,  ಭುವನ್ ರಾಶಿ ಬಗ್ಗೆ ಹೇಳಿದ ಮೇಲೆ, ಅವರ ಮಾತಲ್ಲಿ ಇದ್ದಾ ಕೂಲ್ನೆಸ್ ಅವರ ಕಣ್ಣಲ್ಲಿ ಇದ್ದಿಲ್ಲಾ..  ಅಂದ್ರೆ ಪಕ್ಕ ಇದೆಲ್ಲಾ ಪ್ಲಾನ್ ಮಾಡ್ಕೊಂಡೆ ಬಂದಿರೋದು. ತಾತ ಈ ಮ್ಯಾಟರ್ ಗೆ ಎಂಟ್ರಿ ಆದಮೇಲೆ ಅವರ ಪ್ಲಾನ್ ವರ್ಕ್ ಆಗಲ್ಲಾ ಅಂತ ಗೊತ್ತಾಗಿ ಬಿಡ್ತು..  ಅಂತ ಯೋಚ್ನೆ ಮಾಡ್ತಾ ಇರೋವಾಗ ಮೊಬೈಲ್ ರಿಂಗ್ ಆಯ್ತು,  ಟೀ ಕಪ್ ನಾ ಕಸದ ಬುಟ್ಟಿಗೆ ಹಾಕಿ,  ಜೇಬಲ್ಲಿ ಇದ್ದಾ ಮೊಬೈಲ್ ತಗೊಂಡು ಯಾರು ಅಂತ ನೋಡಿದೆ,, ಸೀತಾ ಕಾಲ್, ಕಾಲ್ ನಾ ಪಿಕ್ ಮಾಡಿ ಅ ಹೇಳು ಅಂದೇ. ಸೀತಾ  ಲೋ ಎಲ್ಲೋ ಹೋದೆ, ಹೇಳ್ದೆ ಕೇಳ್ದೆ ಒಂದು ಮಾತು ಹೇಳ್ದೆ ಹೋದೆ ಅಂತ ಸ್ವಲ್ಪ ಕೋಪದಲ್ಲೇ ಕೇಳಿದ್ದು.  

ಫ್ಯಾಮಿಲಿ ಎಲ್ಲಾ ಒಟ್ಟಿಗೆ ಸೇರಿದ್ರಿ ಅಲ್ವಾ ನನಗೆ ಏನ್ ಕೆಲಸ ಅಂತ ಬಂದು ಬಿಟ್ಟೆ, ಅದು ಅಲ್ದೆ ನಿಮ್ ಮಾವ ಚಿಕ್ಕಪ್ಪ ನನ್ನ ಏನೋ ಕಳ್ಳನ ನೋಡೋ ಹಾಗೇ ನೋಡ್ತಾ ಇದ್ರು ಅದಕ್ಕೆ,, ಯಾಕ್ ಅಂತ ಬಂದು ಬಿಟ್ಟೆ, ಸರಿ ನನಗೆ ಕೆಲಸ ಇದೆ ಅಂತ ಹೇಳಿ ಕಾಲ್ ಕಟ್ ಮಾಡಿದೆ.. ಸೀತಾ ಲೋ ಲೋ ಅಂತ ಕೋಪ ಮಾಡ್ಕೊಂಡು ಲೋ ನಿನ್ನ ಸಿಗೋ ಅಂತ ಬೈಕೊಂಡು ಬೇಜಾರ್ ಆಗಿ ರೂಮ್ ಅಲ್ಲಿ ಕುತ್ಕೊಂಡು ಇದ್ದುಬಿಟ್ಟಳು. ಕೆಲವು ನಿಮಿಷಗಳ ನಂತರ,, ಖುಷಿ ಸೀತಾ ರೂಮ್ ಡೋರ್ ನಾ ಓಪನ್ ಮಾಡಿಕೊಂಡು ಒಳಗೆ ಬರ್ತಾ ಸೀತಾ ನಾ ನೋಡಿ, ಏನೇ  ಎಲ್ಲರೂ ಹಾಲ್ ಅಲ್ಲಿ ಕೂತು ಮಾತಾಡ್ತಾ ಇದ್ರೆ ನಿನ್ ಒಬ್ಳೆ ಇಲ್ಲಿ ಕುತ್ಕೊಂಡು ಏನ್ ಮಾಡ್ತಾ ಇದ್ದಿಯಾ, ಹೌದು ಯಾರ್ ಅ ಹುಡುಗ, ಇದಕ್ಕೂ ಮೊದಲು ಈ ಮನೇಲಿ ಅವನನ್ನ ನೋಡೇ ಇಲ್ಲಾ, ಅಂತ ಕೇಳ್ತಾ ಪಕ್ಕದಲ್ಲಿ ಕೂತ್ಕೋತಾಳೆ..

  ಸೀತಾ ಕೋಪದಿಂದ ನೋಡು ನೀನು ನನ್ನ ಏನಾದ್ರೂ ಅನ್ನು ಅದ್ರೆ ಅವರನ್ನ ಮಾತ್ರ ನೀನು ಅವನು ಇವನು ಅಂತ ಅಂದ್ರೆ ಮಾತ್ರ ಸರಿ ಇರಲ್ಲ ಹೇಳ್ತಾ ಇದ್ದೀನಿ ಅಂತ ಹೇಳ್ತಾಳೇ.  ಖುಷಿ ಓಕೆ ಸಾರೀ ಬಾಬಾ , ಅವರು ಯಾರು? ನಿನ್ನ ಮದುವೆ ಬಗ್ಗೆ ಮಾತಾಡೋಕೆ ಬಂದಿರೋದನ್ನ ಕೇಳಿ ಒಂದು ರೀತಿ ಬೇಜಾರಾಗಿ ಇದ್ದ ಅಂತ ಕೇಳ್ತಾಳೆ.  ಸೀತಾ ಕೋಪದಿಂದ ನೋಡು ಖುಷಿ  ನನ್ನ ಮೈಂಡ್ ಸ್ವಲ್ಪ ಸರಿ ಇಲ್ಲ ಪ್ಲೀಸ್ ಸ್ವಲ್ಪ ಹೊತ್ತು ನನ್ನ ಡಿಸ್ಟರ್ಬ್ ಮಾಡಬೇಡ ಅಂತ ಹೇಳ್ತಾ ಬೆಡ್ ಮೇಲೆ ಮಲಗಿ ಬಿಡ್ತಾಳೆ.  ಖುಷಿ ಓಕೆ ಸೀತಾ ಡಿಸ್ಟರ್ಬ್ ಮಾಡಲ್ಲ ನಾನ್ ಹೋಗ್ತೀನಿ ಅಂತ ಹೇಳಿ ಎದ್ದು ಹೋಗೋವಾಗ, ಸೀತಾ ಕಣ್ಮುಚ್ಚಿ ಕೊಂಡು, ಸಾರೀ ಖುಷಿ ಅಂತ ಸೀತಾ ಹೇಳ್ತಾಳೆ. ಖುಷಿ ಇಟ್ಸ್ ಓಕೆ ರ ಅಂತ ಹೇಳಿ ರೂಮ್ ಡೋರ್ ಕ್ಲೋಸ್ ಮಾಡ್ಕೊಂಡು ಹೊರಗೆ ಬಂದು ಹಾಲ್ ಗೆ ಬರ್ತಾಳೆ.  ತಾತ ಖುಷಿ ಒಬ್ಬಳೇ ಬರೋದನ್ನ ನೋಡಿ ಸೀತಾ ಎಲ್ಲಿ ಖುಷಿ ಅಂತ ಕೇಳ್ತಾರೆ,  ಸೀತಾ ಸ್ವಲ್ಪ ತಲೆನೋವು ಅಂತ ರೆಸ್ಟ್ ಮಾಡ್ತಾ ಇದ್ದಾಳೆ ತಾತ ಅಂತ ಖುಷಿ ಹೇಳ್ತಾಳೆ.   ಅವಳಿಗೆ ಬಿಸಿಲಲ್ಲಿ ಜಾಸ್ತಿ ಸುತ್ತಾಡ ಬೇಡ ಅಂತ ಹೇಳ್ತಾನೆ ಇರ್ತೀನಿ ಕೇಳೋದೇ ಇಲ್ಲಾ. ಯಾವಾಗ ಹೇಳಿದ ಮಾತನ್ನ ಕೇಳ್ತಾಳೋ ಏನೋ ಅಂತ ತಾತ ಹೇಳಿದ್ರೆ.. 

  ಧಮಯಂತಿ, ಮಾವ ಇದೆಲ್ಲಾ ನಿಮ್ ಮೊಮ್ಮಗಳಿಗೆ ಹೇಳಿದ್ರೆ ಏನು ಪ್ರಯೋಜನ ಇಲ್ಲಾ, ನಿಮ್ ಮೊಮ್ಮಗನಿಗೆ ಹೇಳಿ,  ಅವಾಗ ಎಲ್ಲಾ ಸರಿ ಹೋಗುತ್ತೆ,  ನಿಮ್ ಮೊಮ್ಮಗಳು ಕಂಟ್ರೋಲ್ ಅಲ್ಲಿ ಇರ್ತಾಳೆ.  ಈಗ್ಲೂ ಅವಳು ಮಲಗಿರೋದು ತಲೆ ನೋವು ಅಂತ ಅಲ್ಲ. ಮಹಿ ಹೋದ ಅಲ್ವಾ ಕಾಲ್ ಮಾಡಿ ಕೇಳಿರ್ತಾಳೆ ಎಲ್ಲಿ ಇದ್ದಿಯಾ ನನ್ನ ಏನಕ್ಕೆ ಬಿಟ್ಟು ಹೋದೆ ಅಂತ ಕೇಳಿರ್ತಾಳೆ, ಮನೇಲಿ ಎಲ್ಲರೂ ಇದ್ದಾರೆ ಅಲ್ವಾ ನಿನ್ ಮನೇಲೆ ಇರು ಅಂತ ಬೈದು ಕಾಲ್ ಕಟ್ ಮಾಡಿರ್ತಾನೆ ಅದಕ್ಕೆ ಕೋಪ ಮಾಡ್ಕೊಂಡು ರೂಮ್ ಅಲ್ಲಿ ಇದ್ದಾಳೆ ಅಂತ ಹೇಳ್ತಾ ಇದ್ರೆ.. ಲೋಕೇಶ್ ಇದನ್ನೆಲ್ಲಾ ಕೇಳಿಸಿಕೊಂಡು, ಧಮಯಂತಿ ಮಹಿ ಅಂದ್ರೆ ಜರ್ಮನಿ ಯಿಂದ ಬಂದಿದ್ದಾನೆ ಅಲ್ವಾ  ಅ ಹುಡುಗ ತಾನೇ, ಅಂತ ಕೇಳ್ತಾರೆ.  ಹೌದು ಅಣ್ಣ ಅಂತ ಧಮಯಂತಿ ಹೇಳಿದ್ರೆ.  ಮತ್ತೆ ಮೊಮ್ಮಗ ಅಂತ ಇದ್ದಿಯಾ? ಅಂತ ಸ್ವಲ್ಪ ಅನುಮಾನ ದಿಂದ ಕೇಳ್ತಾನೆ.  ಧಮಯಂತಿ ನಗ್ತಾ  ಏನಿಲ್ಲಾ ಅಣ್ಣ,  ಮಹಿ ಇಲ್ಲಿಗೆ ಬಂದ ಸ್ವಲ್ಪ ದಿನದ ವರೆಗೂ ಅಷ್ಟಾಗಿ ತಾತ ಅವನು ಏನು ಮಾತಾಡ್ತಾ ಇರಲಿಲ್ಲ,   ವೀಕೆಂಡ್ ಬಂದ್ರೆ ಮಾವನಿಗೆ ಕಂಪನಿ ಕೊಡೋಕೆ ಯಾರು ಇಲ್ಲಾ ಅಲ್ವಾ, ಅ ಟೈಮ್ ಅಲ್ಲಿ ಅವನ ಜೊತೆ ಕಂಪನಿ ತಗೊಂಡ್ರು, ಅವಾಗಿಂದ ಶುರುವಾಯ್ತು  ತಾತ ಮೊಮ್ಮಗನ ಸಂಬಂಧ. ಅಂತ ನಗ್ತಾ ಹೇಳ್ತಾಳೆ.. ಲೋಕೇಶ್ ಮನಸಲ್ಲೇ ಸದ್ಯ ಎಣ್ಣೆ ಫ್ರೆಂಡ್ಶಿಪ್, ನಾನೆಲ್ಲೋ ನಿಜವಾದ ಮೊಮ್ಮಗ ಅಂತ ಅನ್ಕೊಂಡು ಬಿಟ್ಟೆ ಅಂತ ಮನಸಲ್ಲೇ ಅನ್ಕೊಂಡು, ಧಮಯಂತಿ ನಾ ನೋಡಿ ನಗ್ತಾ ಹೊ ಹಾಗೇ ಅಂತ ಹೇಳಿ ಅವರು ನಗ್ತಾರೆ. 

   ಜನಾರ್ಧನ್  ಅವರು ನಗ್ತಾ, ಲೋಕಿ ಹೊರಡೋಣ್ವಾ  ಆಫೀಸ್ ಅಲ್ಲಿ ವರ್ಕ್ ಇದೆ ಅಂತ ಹೇಳ್ತಾನೆ.  ಲೋಕೇಶ್ ಅಯ್ಯೋ ಹೌದಲ್ವಾ ನಾನ್ ಮರೆತೇ ಹೋದೆ. ಸರಿಯಾದ ಟೈಮ್ ಗೆ ನಿನಪು ಮಾಡಿದೆ,  ಇಂಪಾರ್ಟೆಂಟ್ ಕ್ಲೈಂಟ್ಸ್ ಬರ್ತೀನಿ ಅಂತ ಹೇಳಿದ್ರು.  ಅಂತ ಹೇಳಿ  ಎಲ್ಲರ ಕಡೆ ನೋಡಿ ಸರಿ ನಾವಿನ್ನು ಬರ್ತೀವಿ ಅಂತ ಹೇಳಿ  ಅಲ್ಲಿಂದ  ಖುಷಿ ನಾ ನೋಡಿ ಖುಷಿ ನೀನು ನಿನ್ನ ಫ್ರೆಂಡ್ ಮನೆಗೆ ಹೋಗಬೇಕು ಅಂತ ಹೇಳ್ದೆ ಬಾ ನಾನ್ ಡ್ರಾಪ್ ಮಾಡಿ ಹಾಗೇ ಆಫೀಸ್ ಗೆ ಹೋಗ್ತೀನಿ, ನಿಮ್ ಅಣ್ಣ ಅಮ್ಮ ನಾ ಮನೆಗೆ ಕರ್ಕೊಂಡು ಹೋಗ್ತಾನೆ ಅಂತ ಹೇಳ್ತಾನೆ. ಖುಷಿ  ಬೇಡ ಹೋಗಿ ಅಪ್ಪ ನಿಮಗೆ ಇಂಪಾರ್ಟೆಂಟ್ ವರ್ಕ್ ಇದೆ ಅಂತ ಹೇಳಿದ್ರಿ ಅಲ್ವಾ. ಅದು ಅಲ್ದೆ ನಮ್ ಫ್ರೆಂಡ್ ಮನೆ ಇರೋದು ನೀವ್ ಹೋಗೋ ಕಡೆ ಅಲ್ಲ, ನಾನ್ ಆಟೋ ಬುಕ್ ಮಾಡ್ಕೊಂಡು ಹೋಗ್ತೀನಿ ಅಂತ ಹೇಳ್ತಾಳೆ.   ಲೋಕೇಶ್ ಸರಿ ಮಗಳೇ ಅಂತ ಹೇಳಿ ಜನಾರ್ಧನ್ ಹೋಗೋಣ್ವಾ ಅಂತ ಹೇಳ್ತಾ ಎದ್ದು ಹೊರಗಡೆ ಬರ್ತಾರೆ..  ಖುಷಿ ನಾ ಬಿಟ್ಟು ಎಲ್ಲರೂ ಕಾರ್ ಅಲ್ಲಿ ಹೊರಟು ಹೋಗ್ತಾರೆ..  ಧಮಯಂತಿ ಸುಧೀರ್ ಇಬ್ಬರು ತಾತನಿಗೆ ಬೈ ಹೇಳಿ ಆಫೀಸ್ ಗೆ ಹೋಗ್ತಾರೆ..  ಖುಷಿ ತಾತನಿಗೆ ಬೈ ಹೇಳಿ ಮೇನ್ ಗೇಟ್ ಹತ್ತಿರ ಬರ್ತಾಳೆ, 3 ನೋಡಿ ಆಟೋ ಒಂದು ಬರೋದಿಲ್ಲ,  ಸರಿ ಮೇನ್ ರೋಡ್ ತನಕ ನಡ್ಕೊಂಡು ಹೋಗೋಣ ಅಂತ ಹೇಳಿ ಮೊಬೈಲ್ ನೋಡ್ಕೊಳ್ತಾ  ಮೇನ್ ರೋಡ್ ಹತ್ತಿರ ಬರ್ತಾಳೆ.  ಆಟೋ ಗೋಸ್ಕರ ಕಾಯ್ತಾ ಇರ್ತಾಳೆ...

ನಾನು ಮೊಬೈಲ್ ಅಲ್ಲಿ ಮಾತಾಡಿ ಕೊಂಡು  ಸಿಗರೇಟ್ ಅಲ್ಲಿ ಲಾಸ್ಟ್ ದಮ್ ಹೊಡೆದು ಅದನ್ನ  ಬಿಸಾಕಿ ಬೈಕ್ ಹತ್ತಿರ ಬಂದು ಬೈಕ್ ಮೇಲೆ ಕುತ್ಕೊಂಡು, ಸರಿ ನಾನ್ ಆಮೇಲೆ ಕಾಲ್ ಮಾಡ್ತೀನಿ ಅಂತ ಹೇಳಿ, ಕಾಲ್ ಕಟ್ ಮಾಡಿ ಮೊಬೈಲ್ ನಾ ಜೇಬಲ್ಲಿ ಇಟ್ಕೊಂಡು  ಬೈಕ್ ಸ್ಟಾರ್ಟ್ ಮಾಡಿ ಹಿಂದೆ ನೋಡಿದೆ , ಯಾರೋ ಒಬ್ರು ಲೇಡಿಸ್ ನಿಂತಿದ್ರು ,  ಮುಂದೆ ಹೋಗೋಣ ಅದ್ರೆ ಫುಟ್ಬಾತ್ ಇದೆ,  ಹಿಂದೆ ನೋಡಿ ಮೇಡಂ ಸ್ವಲ್ಪ ಸೈಡ್ ಬಿಡಿ ಅಂತ ಹೇಳ್ದೆ . ಅ ಹುಡುಗಿ ಹಿಂದೆ ತಿರುಗಿ ನೋಡಿದ್ಲು . ನಾನು ಅ ಹುಡುಗಿ ನಾ ನೋಡಿ ಇವಳು ಸೀತಾ ಮನೆಗೆ ಬಂದಿದ್ದ ಹುಡುಗಿ ಅಲ್ವಾ ಇಲ್ಲಿ ಏನಕ್ಕೆ ಇದ್ದಾಳೆ?  ಅಂತ ಯೋಚ್ನೆ ಮಾಡಿ ನಮಗ್ಯಾಕೆ ಅಂತ  ಅನ್ಕೊಂಡು ಸೈಡ್ ಬಿಡಿ ಅಂತ ಕೇಳ್ದೆ .  ಖುಷಿ ನನ್ನ ನೋಡಿ ಇವನು ಮಹಿ ಅಲ್ವಾ, ಹಾಗ್ಲೇನೇ ಹೋದ ಇಲ್ಲೇ ಇದ್ದಾನೆ, ಮಾತಾಡಿಸೋಣ್ವಾ ಬೇಡವಾ ಅಂತ ಯೋಚ್ನೆ ಮಾಡ್ತಾ, ಮಾತಾಡಿಸೋಣ , ಅಂತ ಅನ್ಕೊಂಡು, ನನ್ನ ಕಡೆ ನೋಡ್ತಾ ಹಾಯ್ ನೀವೇನು ಇಲ್ಲಿ ಅಂತ ಕೇಳಿದ್ಲು ಖುಷಿ .. ನಾನು ಖುಷಿ ನಾ ನೋಡಿ,  ಸಾರೀ ಮೇಡಂ ನೀವ್ ಯಾರು ಅಂತ ನನಗೆ ಗೊತ್ತಿಲ್ಲ ಇಫ್ ಯು ಡೋಂಟ್ ಮೈಂಡ್ ಸ್ವಲ್ಪ ಜಾಗ ಬಿಡಿ ನಾನ್ ಹೋಗಬೇಕು ಅಂದೇ .  ಖುಷಿ ನನ್ನ ಮಾತಿಗೆ ಕೋಪ ಬಂದ್ರು ಕಂಟ್ರೋಲ್ ಮಾಡ್ಕೊಂಡು, ಸಾರೀ ನಿಮಗೆ ನನ್ನ ಪರಿಚಯ ಇಲ್ಲಾ ಅಲ್ವಾ, ಐಮ್ ಖುಷಿ ನಿನ್ನ ಫ್ರೆಂಡ್ ಸೀತಾ ಇದ್ದಾಳೆ ಅಲ್ವಾ ಅವಳ ಮಾವನ ಮಗಳು. 

  ನಾನು ಅವಳ ಕಡೆ ನೋಡ್ತಾ ಹೌದ ಸಂತೋಷ ಮೇಡಂ,  ಜಾಗ ಬಿಡಿ ಅಂತ ಹೇಳಿ ಬೈಕ್ ನಾ ಹಿಂದೆ ಪುಶ್ ಮಾಡ್ತಾ  ಅವಳೇ ಒಂದು ತಲೆ ನೋವು ಅವಳ ಜೊತೆಗೆ ಇನ್ನೊಂದು,  ಅಂತ ಬೈಕ್ ನಾ ಪುಶ್ ಮಾಡಿ  ಮತ್ತೆ ಬೈಕ್ ನಾ ಸ್ಟಾರ್ಟ್ ಮಾಡಿ,  ಖುಷಿ ನಾ ನೋಡ್ತಾ ಆಟೋ ಗೋಸ್ಕರ ಕಾಯ್ತಾ ಇದ್ದೀರಾ, ಸಾರೀ ಈ ರೋಡ್ ಅಲ್ಲಿ ಯಾರೋ ಪೊಲಿಟಿಷಿಯನ್ ಬರ್ತಾರೆ ಅಂತ ಆಟೋ ನಾ ರಿಕ್ಷಾ ನಾ ಎಲ್ಲಾ ಸ್ಟಾಪ್ ಮಾಡಿದ್ದಾರೆ,  ನೀವು ಕಾಯ್ತಾ ನಿಂತ್ರೆ ಇವತ್ತೆಲ್ಲಾ ಕಾಯಬೇಕು,  ನೀವು ನಿಮ್ ಫ್ರೆಂಡ್ಸ್ ಗೆ ಕಾಲ್ ಮಾಡಿ ಡ್ರಾಪ್ ತಗೊಂಡ್ರೆ ಒಳ್ಳೇದು ಅಂತ ಹೇಳ್ತಾ ಮುಂದೆ ನೋಡ್ತಾ ಬೈಕ್ ನಾ ಡ್ರೈವ್ ಮಾಡೋಕೆ ಹೋದೆ .  ಖುಷಿ ಥ್ಯಾಂಕ್ಸ್ ಅಂತ ಹೇಳಿ ನನ್ನ ಬೈಕಲ್ಲಿ ಕುತ್ಕೊಂಡು, ನೀವ್ ಹೋಗೋ ದಾರೀಲೆ ನನ್ನ ಡ್ರಾಪ್ ಮಾಡಿ, ಅಂತ ಕೇಳಿದ್ಲು .  ನಾನು ಖುಷಿ ನಾ ನೋಡಿ ಮೇಡಂ ನೀವ್ ಯಾರು ಅಂತಾನೆ ಗೊತ್ತಿಲ್ಲ ಅಂತದ್ರಲ್ಲಿ ಡ್ರಾಪ್ ಮಾಡಬೇಕಾ ಇಳೀರಿ ಮೇಡಂ ಅಂದೇ .  ಖುಷಿ ಕೋಪ ಮಾಡ್ಕೊಂಡು ಹೌದ ಇದೆ ಮಾತನ್ನ ಸೀತಾ ಗೆ ಹೇಳಿ ಕಾಲ್ ಮಾಡಿ ಕೊಡ್ತೀನಿ, ನೀವು ಮನೆ ಯಿಂದ ಬಂದಾಗಿಂದ ಕೋಪ ಮಾಡ್ಕೊಂಡು ರೂಮ್ ಅಲ್ಲಿ ಇದ್ದಾಳೆ. ಕಾಲ್ ಮಾಡಿದ್ರೆ ಸಾಕು 2 ನಿಮಿಷದಲ್ಲಿ ಇಲ್ಲಿ ಇರ್ತಾಳೆ ಅಂತ ಹೇಳಿ ಕೈಗೆ ಮೊಬೈಲ್ ನಾ ತಗೋತಾಳೆ..  ನಾನು ಎಲ್ಲಿಗೆ ಹೋಗಬೇಕು ಅಂತ ಹೇಳಿದ್ರಿ ಅಂತ ಕೇಳಿ .. ಖುಷಿ ನನ್ನ ಮಾತಿಗೆ ಹೀಗೆ ನೇರವಾಗಿ ನಡೀರಿ ಅಂತ ಹೇಳಿ ನಗ್ತಾಳೆ..   

   ನಾನು ಬೈಕ್ ಡ್ರೈವ್ ಮಾಡ್ತಾ ಸಿಗ್ನಲ್ ಬಿತ್ತು ಅಂತ, ಬೈಕ್ ನಿಲ್ಲಿಸಿದೆ,, ನನ್ನ ಪಕ್ಕದಲ್ಲಿ ಒಂದು ಬೈಕ್ ಬಂದು ನಿಲ್ತು,  ನಾನು ನನ್ನ ಪಾಡಿಗೆ ಸಿಗ್ನಲ್ ಯಾವಾಗ ಬಿಡುತ್ತೆ ಅಂತ ಕಾಯ್ತಾ ಇದ್ದೆ, ಹಿಂದೆ ಕೂತಿದ್ದ ಖುಷಿ , ಏನೋ ಬೈಕೋಳ್ತಾ ಇದ್ಲು. ನಾನು ಹಿಂದೆ ನೋಡಿದೆ, ಅವಳು ನನ್ನ ನೋಡಿ ನಾನೇನು ನಿಮ್ಮನ್ನ ಬೈಕೋಳ್ತಾ ಇಲ್ಲಾ, ಅವರನ್ನ ಅಂತ ಹೇಳಿ ಕಣ್ಣಲ್ಲಿ ಸನ್ನೆ ಮಾಡಿದ್ಲು, ನಾನು ಅ ಕಡೆ ನೋಡಿದೆ,  ನನ್ನ ಪಕ್ಕದಲ್ಲಿ ಇದ್ದಾ ಬೈಕ್ ಮೇಲೆ ಇಬ್ರು ಲವರ್ಸ್ ಇದ್ರು, ಬಟ್ ಅದು ವಿಷಯ ಅಲ್ಲ, ಅವರು ಮಾಡ್ತಾ ಇದ್ದಾ ಕೆಲಸ ಹಾಗೇ ಇತ್ತು, ಇಬ್ರು ರೋಮ್ಯಾನ್ಸ್ ಅಲ್ಲಿ ಮುಳಗಿ ಹೋಗಿದ್ರು,  ನಾನು ನನ್ನ ಮೊಬೈಲ್ ನಾ ತಗೊಂಡು ವಿಡಿಯೋ ರೆಕಾರ್ಡ್ ಮಾಡೋಕೆ ಶುರು ಮಾಡಿದೆ,  ಖುಷಿ ನಾನ್ ಮಾಡ್ತಾ ಇರೋ ಕೆಲಸ ನಾ ನೋಡಿ, ರಿ ಏನ್ರಿ ಮಾಡ್ತಾ ಇದ್ದೀರಾ ಅಂತ ಕೇಳಿದ್ಲು.  ನಾನ್ ಏನಿಲ್ಲಾ ನೀವ್ ಸುಮ್ನೆ ಇರಿ ಮೇಡಂ ಅಂತ ಹೇಳಿ,  ಅ ಲವರ್ಸ್ ಕಡೆ ನೋಡಿ,  ವಿಡಿಯೋ ರೆಕಾರ್ಡ್ ಮಾಡ್ತಾನೆ ಹೇಳೋ ಎಸ್ಕ್ಯೂಸ್ ಮೀ ರೋಮಿಯೋ ಜೂಲಿಯಟ್ ಅಂತ ಕರ್ದೆ ಕೇಳಿಸಿಲ್ಲ ಅವರಿಗೆ,  ಬೈಕ್ ನಾ ಸ್ಟಾಂಡ್ ಹಾಕಿ ಅವರ ಮುಂದೆ ಹೋಗಿ,  ಬೈಕ್ ಕೀ ನಾ ತಗೊಂಡು ಜೇಬಲ್ಲಿ ಇಟ್ಕೊಂಡು ಸೈಲೆಂಟಾಗಿ ನನ್ನ ಬೈಕ್ ಅಲ್ಲಿ ಕುತ್ಕೊಂಡೆ. ಖುಷಿ ರೀ ಏನ್ರಿ ಮಾಡಿದ್ರಿ ನೀವು ಅಂತ ಕೇಳಿದ್ಲು. ನಿಮಗ್ಯಾಕೆ ಮೇಡಂ ಡ್ರಾಪ್ ಕೇಳಿದ್ರಿ ಕೊಡ್ತಾ ಇದ್ದೀನಿ ಅಷ್ಟೇ, ಅಷ್ಟನ್ನ ಮಾತ್ರ ಕೇಳಿ,  ಅಂತ ಹೇಳಿ ಸಿಗ್ನಲ್ ಕಡೆ ನೋಡಿದೆ, ಸಿಗ್ನಲ್ ಬಿಡ್ತು, ನಾನು ಡ್ರೈವ್ ಮಾಡ್ಕೊಂಡು,  ಖುಷಿ ನಾ ಅವಳ ಫ್ರೆಂಡ್ ಮನೆ ಹತ್ತಿರ ಬಿಟ್ಟು, ವಾಪಸ್ಸು  ಅದೇ ರೋಡ್ ಅಲ್ಲಿ ಬಂದೆ, ಬೈಕ್ ಮೇಲೆ ಇದ್ದಾ ರೋಮಿಯೋ ಜೂಲಿಯಟ್ ಅಲ್ಲಿ ಜೂಲಿಯಟ್ ಮಿಸ್ ಆಗಿದ್ಲು, ರೋಮಿಯೋ ಮಾತ್ರ ಬೈಕ್ ನಾ ತಳ್ಕೊಂಡು ಹೋಗ್ತಾ ಇದ್ದಾ,,  ವಾಪಸ್ಸು ಅವನ ಹತ್ತಿರ ಹೋಗಿ ಏನಾಯ್ತು ಅಂತ ಕೇಳ್ದೆ, ಬೈಕ್ ಕೀ ಮಿಸ್ ಆಗಿದೆ ಅಂದ,, ಹೌದ ನಿನ್ನ ಜೊತೆಗೆ ನಿನ್ನ ಗರ್ಲ್ಫ್ರೆಂಡ್ ಇದ್ಲು ಅಲ್ವಾ ಎಲ್ಲಿ ಹೋದ್ಲು ಅಂತ ಕೇಳ್ದೆ,   ಅವಳು ಟ್ಯಾಕ್ಸಿ ಬುಕ್ ಮಾಡ್ಕೊಂಡು ಹೊರಟು ಹೋದ್ಲು ಅಂತ ಹೇಳಿ, ನನ್ನ ಗರ್ಲ್ಫ್ರೆಂಡ್ ಬಗ್ಗೆ ನಿನಗೆ ಹೇಗೆ ಗೊತ್ತು ಅಂತ ಕೇಳ್ದ,, ನಾನು ಜೇಬಲ್ಲಿ ಇದ್ದಾ ಅವನ ಬೈಕ್ ಕೀ ನಾ ತೆಗೆದು ಅವನ ಕೈಗೆ ಕೊಟ್ಟು, ಜೊತೆ ಲಿ ಗರ್ಲ್ಫ್ರೆಂಡ್ ಇದ್ದಾಳೆ ಅಂತ ಮೈ ಮರೆತರೆ ಹೀಗೆ ಆಗುತ್ತೆ,  ಅವಳಿಗೆ ನಿನ್ ಬೇಕಾಗಿದ್ದಿದ್ರೆ ನಿನ್ನ ಜೊತೆಗೆ ಇರೋವ್ಳು,  ಇವಾಗಾದ್ರು ಬುದ್ದಿ ಕಲಿ ಅಂತ ಹೇಳಿ ಅಲ್ಲಿಂದ ಫ್ಲಾಟ್ ಕಡೆಗೆ ಹೊರಟು ಹೋದೆ...

@@@@@@@@@@@@@@@@@@@@@@@@@