Mahi - 4 in Kannada Love Stories by S Pr books and stories PDF | ಮಹಿ - 4

The Author
Featured Books
  • ಅಸುರ ಗರ್ಭ - 3

    ಶಾರದಾ, ಸತ್ಯಂ ಸಂಸ್ಥೆಯ ಸದಸ್ಯಳು ಎಂದು ತಿಳಿದ ನಂತರ, ಅರ್ಜುನ್‌ಗೆ ಒಂದ...

  • ಮಹಿ - 4

    ಬೆಳಿಗ್ಗೆ ಎದ್ದು ಆಫೀಸ್ ಗೆ ರೆಡಿ ಆಗಿ ತಿಂಡಿ ತಿಂದು ಆಫೀಸ್ ಗೆ ಹೋಗೋಣ...

  • ಅಸುರ ಗರ್ಭ - 2

    ಅರ್ಜುನ್‌ಗೆ ತನ್ನ ಕೈಗೆ ಸಿಕ್ಕಿರುವ ಹಸ್ತಪ್ರತಿ ಕೇವಲ ಪ್ರಾಚೀನ ಗ್ರಂಥವ...

  • ಅಸುರ ಗರ್ಭ - 1

    ಬೆಂಗಳೂರಿನ ಗದ್ದಲದಿಂದ ದೂರ, ಒಂದು ವಿಶಿಷ್ಟ ಮತ್ತು ಪ್ರಾಚೀನವಾದ ಕಲಾಶಾ...

  • ಅಂತರಾಳ - 7 - (Last Part)

    ಅರ್ಜುನ್‌ನ ಮಾತುಗಳಿಂದ ಪ್ರಭಾವಿತರಾದ ಅನುಷಾ ಮತ್ತು ಆದರ್ಶ್, ತಮ್ಮ ಜೀವ...

Categories
Share

ಮಹಿ - 4

ಬೆಳಿಗ್ಗೆ ಎದ್ದು ಆಫೀಸ್ ಗೆ ರೆಡಿ ಆಗಿ ತಿಂಡಿ ತಿಂದು ಆಫೀಸ್ ಗೆ ಹೋಗೋಣ ಅಂತ ಹೇಳಿ ಬೈಕ್ ಕೀ ತೆಗೆದುಕೊಂಡು ಹೊರಗೆ ಬಂದೆ, ಹೊರಗಡೆ ಯಿಂದ ಮನೆ ಒಳಗೆ ಬರ್ತಾ ಇದ್ದಾ ಅಪ್ಪ ನನ್ನ ನೋಡಿ ಒಂದು ಸ್ಮೈಲ್ ಮಾಡಿ, ನನ್ನ ಹತ್ತಿರ ಬಂದು ಆಫೀಸ್ ಗೆ ಹೋಗ್ತಾ ಇದ್ದಿಯಾ ಅಂತ ಕೇಳಿದ್ರು,, ಹೌದಪ್ಪ ಅಂತ ಹೇಳಿದೆ. ಅಪ್ಪ ಕೈ ಮುಂದೆ ಮಾಡು ಅಂತ ಹೇಳಿದ್ರು. ನಾನು ಸರಿ ಅಂತ ಹೇಳಿ ನನ್ನ ಕೈ ನಾ ಅವರ ಮುಂದೆ ಚಾಚಿದೆ. ಅಪ್ಪ ಅವರ ಶರ್ಟ್ ಜೇಬಿನಿಂದ ಒಂದು ವಸ್ತು ನಾ ಹೊರಗೆ ತೆಗೆದರು. ನಾನು ಏನು ಅಂತ ನೋಡಿದೆ, ನೋಡಿದ್ರೆ ಟೈಟಾನ್ ವಾಚ್ ನೋಡಿ ತುಂಬಾ ಖುಷಿ ಆಯ್ತು,,, ಅಪ್ಪ ನೇ ನನ್ನ ಕೈಗೆ ಹಾಕ್ತಾ, ನನಗೆ ಗೊತ್ತು ನೀನು ಏನು ನನ್ನ ಕೇಳೋದಿಲ್ಲ ಅಂತ  ನಿನಗೆ ತಗೋಳೋಕು ಇಷ್ಟ ಇಲ್ಲಾ, ಅದು ನನಗು ಸಂತೋಷ ನೇ ಬೆಳೆದು ನಿಂತ ಮಗ ಅಪ್ಪನ ಮೇಲೆ ಆಧಾರವಾಗದೆ ಅವನ ಸ್ವಂತ ಕಾಲಿನ ಮೇಲೆ ನಿಂತುಕೊಂಡು ಇರೋದನ್ನ ನೋಡಿದ್ರೆ ತಂದೆ ಆಗಿ ನನಗೆ ತುಂಬಾ ಸಂತೋಷ ಆಗುತ್ತೆ, ನಿಮ್ ಅಮ್ಮ ಅಕ್ಕನಿಗೆ ಅವರು ಇವರು ಹೇಳೋದು ಕೇಳೋದೇ ದೊಡ್ಡ ವಿಷಯ ಅಂತ ಅನ್ಕೊಂಡು ನಿನಗೆ ಇಷ್ಟ ಇಲ್ದೆ ಇದ್ರು ಈ ಜಾಬ್ ನಾ ಮಾಡೋಕೆ ಹೇಳಿದ್ರು, ಅವರ ಮಾತಿಗೆ ನೀನು ಬೆಲೆ ಕೊಟ್ಟು ಈ ಜಾಬ್ ಮಾಡ್ತಾ ಇದ್ದಿಯಾ, ಅದ್ರೆ ನನಗೆ ಗೊತ್ತು ನಿನ್ ಏನ್ ಮಾಡ್ತಾ ಇದ್ದಿಯಾ ಅಂತ , ಅದ್ರೆ ಅವರಿಗೆ ಗೊತ್ತಿಲ್ಲ, ಈಗ ಮಾಡ್ತಾ ಇರೋ ಜಾಬ್ ಇಲ್ಲಾ ಅಂದ್ರು ಬೇರೆ ಜಾಬ್ ಸಿಗುತ್ತೆ , ಅದ್ರೆ ನಿನ್ನಾಸೆ ಕನಸನ್ನ ಯಾವತ್ತು ದೂರ ಮಾಡ್ಕೋಬೇಡ, ಈ ಜಾಬ್ ಜೊತೆಗೆ ಅದರ ಬಗ್ಗೆ ಕೂಡ ಫೋಕಸ್ ಮಾಡೋದನ್ನ ಬಿಡಬೇಡ, ಅಲ್ ದಿ ಬೆಸ್ಟ್ ಅಂತ ಹೇಳಿ ಅಪ್ಪಿಕೊಂಡ್ರು. 

ಅಪ್ಪ ಹಾಗೇ ಹೇಳಿದ್ದು ನನ್ನ ಮನಸ್ಸಿಗೆ ತುಂಬಾ ತುಂಬಾ ಸಂತೋಷ ಆಯ್ತು. ಥ್ಯಾಂಕ್ಸ್ ಅಪ್ಪ ಅಂತ ಹೇಳಿದೆ. ಅಪ್ಪ  ಹುಷಾರಾಗಿ ಹೋಗು ಆಫೀಸ್ ಗೆ ಅಂತ ಹೇಳಿ ಮನೆ ಒಳಗೆ ಹೋದ್ರು. ಏನಪ್ಪಾ ಇವನು ಅಪ್ಪ ನಾ ನಟಭಯಂಕರ ವಜ್ರಮುನಿ ತರ ಅಂತ ಹೇಳಿ ಇವಾಗ ಹೀಗೆ ಹೇಳ್ತಾನೆ ಅಂತ ಅನ್ಕೊಂಡ್ರಾ, ಅಪ್ಪ ನಾನು ಮಾತ್ರ ಇರೋವಾಗ ಮಾತ್ರ ಒಬ್ಬ ಒಳ್ಳೆ ಫ್ರೆಂಡ್ ತರ ನನ್ನ ಜೊತೆಗೆ ಇರ್ತಾರೆ, ಯಾರಾದ್ರೂ ಇದ್ರೆ ಕ್ಯಾರೆಕ್ಟರ್ ಚೇಂಜ್ ಮಾಡ್ತಾರೆ. ನಾನು ಬೈಕ್ ಸ್ಟಾರ್ಟ್ ಮಾಡಿಕೊಂಡು ಆಫೀಸ್ ಗೆ ಹೋದೆ. ಅಕಿರಾ ಶಿಲ್ಪಾ ಇಬ್ಬರು ಆಲ್ರೆಡಿ ಅವರ ಪ್ಲೇಸ್ ಅಲ್ಲಿ ಕೂತಿದ್ರು, ಇಬ್ಬರಿಗೂ ಗುಡ್ ಮಾರ್ನಿಂಗ್ ಹೇಳೋದ ಬೇಡ್ವಾ ಅಂತ ಯೋಚ್ನೆ ಮಾಡ್ಕೊಂಡೆ ಹೋಗಿ ನನ್ನ ಪ್ಲೇಸ್ ಅಲ್ಲಿ ಕುತ್ಕೊಂಡೆ. ಶಿಲ್ಪಾ ನನ್ನ ನೋಡಿ ಹಾಯ್ ಮಹಿ ಗುಡ್ ಮಾರ್ನಿಂಗ್ ಅಂತ ಸ್ಮೈಲ್ ಮಾಡ್ತಾ ಹೇಳಿದ್ಲು. ನಾನು ಸ್ಮೈಲ್ ಮಾಡ್ತಾ ಹಲೋ ಶಿಲ್ಪಾ ಗುಡ್ ಮಾರ್ನಿಂಗ್ ಅಂತ ಹೇಳಿದೆ. ಶಿಲ್ಪಾ ಮಾತಾಡ್ತಾ ಮಹಿ ಟ್ರೈನಿಂಗ್ ಅಲ್ಲಿ ಏನ್ ಕಲಿತು ಕೊಂಡೋ ಗೊತ್ತಿಲ್ಲ ಅದ್ರೆ ಇಲ್ಲಿ ಮಾತ್ರ ನೀನು ಪ್ರಾಜೆಕ್ಟ್ ಬಗ್ಗೆ ಎಷ್ಟು ಬೇಗ ತಿಳ್ಕೊಂಡು ವರ್ಕ್ ಮಾಡೋದು ಕಲಿತಿಯೋ ಅಷ್ಟು ನಿನಗೆ ಒಳ್ಳೇದು, ಇಂಟರ್ನೆರ್ ಅಂತ ಲೇಟ್ ಮಾಡಿದೋ ನಿನಗೆ ತುಂಬಾ ಕಷ್ಟ ಆಗುತ್ತೆ, ಆಮೇಲೆ ಈ ಜಾಬ್ ಗೋಸ್ಕರ ನಿನ್ ಪಟ್ಟ ಕಷ್ಟ, ಜಾಬ್ ನಾ ನಂಬಿಕೊಂಡು ನಿನ್ ಇಟ್ಕೊಂಡು ಇರೋ ಕಮಿಟ್ಮೆಂಟ್ಸ್ ಗೆ ತೊಂದ್ರೆ ಆಗುತ್ತೆ, ಸೋ ಹುಡುಗೀರ ಬಗ್ಗೆ ಫೋಕಸ್ ಮಾಡೋಕಿಂತ ಕೆಲಸದ ಬಗ್ಗೆ ಫೋಕಸ್ ಮಾಡು, ಸರಿನಾ ಅಂತ ಹೇಳಿದ್ಲು. ನಗ್ತಾ ಅಲ್ಲ ಶಿಲ್ಪಾ ಊರಬಿಟ್ಟು ಬೆಂಗಳೂರಿಗೆ ಬಂದು ಟ್ರೈನಿಂಗ್ ತಗೊಂಡು  ಈ ಜಾಬ್ ಮಾಡ್ತಾ ಇದ್ದೀನಿ ಅಂದ್ರೆ ಅರ್ಥ ಮಾಡ್ಕೋ ವರ್ಕ್ ಅಲ್ಲಿ ಎಷ್ಟು ಸೀರಿಯಸ್ ಆಗಿ ಇದ್ದೀನಿ ಅಂತ, ಇನ್ನ ಹುಡುಗೀರ ವಿಷಯ ಅಂತೀಯಾ, ಜೇಬಲ್ಲಿ ನಯ ಪೈಸೆ ಇಲ್ಲಾ ಅಂದ್ರೆ ಮನೆಯವರೇ ಮರ್ಯಾದೆ ಕೊಡಲ್ಲ ಇನ್ನ ಹುಡುಗೀರು ಕೊಡ್ತಾರಾ, ಫ್ರೆಂಡ್ ಆಗಿ ಒಳ್ಳೆ ವಿಷಯ ಹೇಳಿದೆ ಥಾಂಕ್ ಯು,, ಅಂತ ಹೇಳಿ ವರ್ಕ್ ಕಡೆ ಗಮನ ಕೊಟ್ಟೆ. ವರ್ಕ್ ಮಾಡ್ತಾ ಡೌಟ್ ಬಂದಾಗೆಲ್ಲ ಶಿಲ್ಪಾ ಹತ್ತಿರ ಹೆಲ್ಪ್ ತಗೊಂಡು ವರ್ಕ್ ಮಾಡ್ತಾ ಇದ್ದೆ. ವರ್ಕ್ ಮಾಡ್ತಾ ಮಾಡ್ತಾ ಲಂಚ್ ಟೈಮ್ ಆಯ್ತು. ಶಿಲ್ಪಾ ನನ್ನ ನೋಡ್ತಾ ಮಹಿ ಬಾ ಲಂಚ್ ಗೆ ಹೋಗೋಣ ಅಂತ ಕರೆದ್ಲು.  ಇಲ್ಲಾ ಶಿಲ್ಪಾ ಹೊರಗಡೆ ಸ್ವಲ್ಪ ವರ್ಕ್ ಇದೆ ಲಂಚ್ ಕೂಡ ಹೊರಗಡೆ ಮಾಡ್ತೀನಿ ನಿನ್ ಹೋಗಿ ಬಾ ಅಂತ ಹೇಳ್ದೆ. ಶಿಲ್ಪಾ ಓಕೆ ಮಹಿ ಅಂತ ಅಕಿರಾ ಜೊತೆಗೆ ಲಂಚ್ ಮಾಡೋಕೆ ಹೋದ್ಲು, ನಾನು ಸ್ವಲ್ಪ ವರ್ಕ್ ಮಾಡಿ ಲಂಚ್ ಮಾಡೋಣ ಹೊರಗೆ ಹೋದೆ ...

ಅಕಿರಾ ಲಂಚ್ ಮಾಡ್ತಾ ಲೇ ಏನಕ್ಕೆ ಅವನ ಹತ್ತಿರ ಅಷ್ಟು ಕ್ಲೋಸ್ ಆಗಿ ಮಾತಾಡ್ತೀಯಾ, ನೀನು ಕ್ಲೋಸ್ ಆಗಿ ಮಾತಾಡೋದು ಆಮೇಲೆ ಅದನ್ನ ಅವನು ಬೇರೆ ರೀತಿ ಅರ್ಥ ಮಾಡಿಕೊಳ್ಳೋದು, ಬೇಕಾ ಅವೆಲ್ಲಾ ಅಂತ ಶಿಲ್ಪಾ ಗೆ ಹೇಳ್ತಾಳೆ. ಶಿಲ್ಪಾ,, ಹಲೋ ಮೇಡಂ ಅವನ ವಿಷಯ ದಲ್ಲಿ ಅವನು ಫುಲ್ ಕ್ಲಾರಿಟಿ ಆಗಿ ಇದ್ದಾನೆ, ಅವನಿಗೆ ಏನಾದ್ರು ಹುಡುಗೀರ ಮೇಲೆ ಇಂಟ್ರೆಸ್ಟ್ ಇದ್ದಿದ್ರೆ ಬೆಳಿಗ್ಗೆ ಅವನು ಬಂದಾಗಲೇ ನಮಗೆ ಗುಡ್ ಮಾರ್ನಿಂಗ್ ಹೇಳ್ತಾ ಇದ್ದಾ, ಪದೇ ಪದೇ ವರ್ಕ್ ಬಗ್ಗೆ ಡೌಟ್ ಕೇಳ್ತಾ ಇದ್ದಾ, ದುಡ್ಡು ಇಲ್ಲಾ ಅಂದ್ರೆ ಮನೇಲೆ ಮರ್ಯಾದೆ ಕೊಡಲ್ಲ ಇನ್ನ ಹುಡುಗೀರು ಕೊಡ್ತಾರಾ ಅನ್ನೋ ಅಷ್ಟು ಕ್ಲಾರಿಟಿ ಇರೋ ಅವನಿಗೆ, ಹುಡುಗಿ ನಗ್ತಾ ಮಾತಾಡಿದ ತಕ್ಷಣ ಏನೋ ಇದೆ ಅಂತ ಅನ್ಕೋಳ್ಳೋ ಅಷ್ಟು ದಡ್ಡ ಅವನಲ್ಲ, ನಿನ್ ಊಟ ಮಾಡು ಅಂತ ಹೇಳಿ ಶಿಲ್ಪಾ ತಿನ್ನೋದನ್ನ ಕಂಟಿನ್ಯೂ ಮಾಡ್ತಾಳೆ. ಇಬ್ಬರು ಲಂಚ್ ಮುಗಿಸಿಕೊಂಡು ಹೊರಗೆ ವಾಕ್ ಮಾಡೋಣ ಅಂತ ಹೇಳಿ ವಾಕ್ ಮಾಡೋಕೆ ಹೋಗ್ತಾರೆ, ವಾಕ್ ಮಾಡ್ತಾ ಇರೋವಾಗ ಅವರ ಮುಂದೆ ಮಹಿ ಬೈಕ್ ಅಲ್ಲಿ ಪಾಸ್ ಆಗ್ತಾನೆ, ಶಿಲ್ಪಾ ಮಹಿ ನಾ ನೋಡಿ ಅಕಿರಾ ಹತ್ತಿರ ಅಲ್ಲಿನೊಡೆ ಬಂದ ಯಾರೋ ಫ್ರೆಂಡ್ ಜೊತೆಗೆ ಅಂತ ಹೇಳ್ತಾ ಮಹಿ ನಾ ಅವರ ಫ್ರೆಂಡ್ ನಾ ನೋಡ್ಕೊಂಡು ವಾಕ್ ಮಾಡ್ತಾರೆ. ಮಹಿ ಅವನ ಫ್ರೆಂಡ್ ಗೆ ಬೈಕ್ ಕೊಟ್ಟು ಆಫೀಸ್ ಕಡೆಗೆ ನಡ್ಕೊಂಡು ಹೋಗೋದನ್ನ ನೋಡಿ ಶಿಲ್ಪಾ, ನಿನ್ ಏನೇ ಹೇಳೇ ಅಕಿರಾ ನಾವು ಹುಡುಗೀರು ಎಷ್ಟೇ ಕ್ಲೋಸ್ ಫ್ರೆಂಡ್ಸ್ ಆದ್ರೂ ಹುಡುಗರು ಮಾಡೋ ಫ್ರೆಂಡ್ಶಿಪ್ ಲೆವೆಲ್ ಗೆ ನಾವು ಮಾಡೋಕೆ ಆಗಲ್ಲಾ, ಹುಡುಗಿ ಅನ್ನೋ ಒಂದು ವಿಚಾರದಲ್ಲಿ ಬಿಟ್ಟು, ಬೈಕ್ ಇಲ್ಲಾ ಅಂದ್ರೆ ಬೈಕ್ ಕೊಡ್ತಾರೆ, ಎಲ್ಲಾದ್ರೂ ಜಗಳ ಅದ್ರೆ ಹೋಗಿ ಸಪೋರ್ಟ್ ಮಾಡ್ತಾರೆ, ಕಷ್ಟದಲ್ಲಿ ಇದ್ರೆ ಹೆಲ್ಪ್ ಮಾಡ್ತಾರೆ, ಫ್ರೆಂಡ್ ತಾಯಿ ನಾ ಅವರ ತಾಯಿ ಅನ್ಕೊಂಡು ಅಷ್ಟೇ ಗೌರವ ದಿಂದ ನೋಡ್ತಾರೆ, ಫ್ರೆಂಡ್ ಗೆ ಸಿಸ್ಟರ್ ಏನಾದ್ರು ಇದ್ರೆ ಅವಳು ಚೆನ್ನಾಗಿ ಇದ್ರು ಫ್ರೆಂಡ್ ಗಿಂತ ಏನು ಇಂಪಾರ್ಟೆಂಟ್ ಅಲ್ಲ ಅಂತ ಅನ್ಕೊಂಡು ಅವರ ಸ್ವಂತ ಸಿಸ್ಟರ್ ಅನ್ನೋತರ ನೋಡ್ತಾರೆ, ಫ್ರೆಂಡ್ ಲವ್ ಗೆ ಹೆಲ್ಪ್ ಮಾಡ್ತಾರೆ, ಕೇಸ್ ಆದ್ರೂ ತಲೆ ಕೆಡಸಿ ಕೊಳ್ಳೋದಿಲ್ಲ, ಒಂದು ವೇಳೆ ಏನೇ ಜಗಳ ಆದ್ರೂ ಒಂದು ಸಿಟ್ಟಿಂಗ್ ಅಲ್ಲಿ ಕ್ಲಿಯರ್ ಮಾಡ್ಕೊಂಡು ಮತ್ತೆ ಒಂದಗ್ತಾರೆ. ಅಬ್ಬೊ ಹೇಳೋಕೆ ಹೋದ್ರೆ ಇನ್ನು ಎಷ್ಟೋ ಇರುತ್ತೆ. ಅದ್ರೆ ನಾವು ಹುಡುಗೀರು ಒಂದು ಮಿಸ್ ಅಂಡರ್ಸ್ಟ್ಯಾಂಡ್ ಅದ್ರೆ ಸಾಕು ಎನಿಮಿ ಗಿಂತ ದೊಡ್ಡ ದುಷ್ಮನ್ ತರ ಆಡ್ತೀವಿ. ನಮಗಿಂತ ಚೆನ್ನಾಗಿ ರೆಡಿ ಅದ್ರೆ ಉರ್ಕೋತೀವಿ. ಅಬ್ಬೊ ಒಂದ ಎರಡು ಹೇಳೋಕೆ ಹೋದ್ರೆ ಸಾವಿರ ಸಿಗುತ್ತೆ. ಅವಾಗವಾಗ ಅನ್ನಿಸುತ್ತೆ ನಾನು ಯಾಕ್ ಹುಡುಗ ಹಾಗಿ ಹುಟ್ಟಬಾರ್ದಿತ್ತು ಅಂತ ಹೇಳ್ತಾಳೆ. ಅಕಿರಾ  ಮುಗಿತ ನಿಂದು ನಡಿ ಲೇಟ್ ಆಗುತ್ತೆ ಆಫೀಸ್ ಒಳಗೆ ಹೋಗಿ ವರ್ಕ್ ಮಾಡೋಣ ಅಂತ ಅವಳ ಬಾಯಿ ಮುಚ್ಚಿಸಿ ಆಫೀಸ್ ಗೆ ಬಂದು ಅವರ ಪ್ಲೇಸ್ ಹತ್ತಿರ ಹೋಗಿ ಕೂತು ವರ್ಕ್ ಮಾಡ್ತಾ ಕೂತ್ಕೋತಾರೆ. 

ಆಗಷ್ಟೇ ಮೊಬೈಲ್ ಅಲ್ಲಿ ಮಾತಾಡಿಕೊಂಡು ಬರ್ತಾ ಇದ್ದಿದ್ದನ್ನ ನೋಡಿ ಶಿಲ್ಪಾ ಮಹಿ ಲಂಚ್ ಮಾಡಿದ ಅಂತ ಕೇಳಿದ್ಲು. ಹ್ಮ್ ಶಿಲ್ಪಾ ಮಾಡ್ಕೊಂಡು ಬಂದೆ ಅಂತ ಹೇಳ್ತಾ ಮೊಬೈಲ್ ನಾ ಜೇಬಲ್ಲಿ ಇಟ್ಕೊಂಡೇ. ಶಿಲ್ಪಾ,, ಮಹಿ ನಿನ್ ಫ್ರೆಂಡ್ ಗೆ ನಿನ್ನ ಬೈಕ್ ನಾ ಕೊಟ್ಟು ಕಳಿಸಿದೆ ಏನಕ್ಕೆ ಅಂತ ಕೇಳಿದ್ಲು. ಓ ಅದ ಅದು ನನ್ನ ಬೈಕ್ ಅಲ್ಲ ಅವನ ಬೈಕ್, ಆಫೀಸ್ ಗೆ ಬರೋಕೆ ಲೇಟ್ ಆಗುತ್ತೆ ಅಂತ ಅವನ ಬೈಕ್ ನ ನಾನ್ ತಗೋ ಬರ್ತೀನಿ, ಏನಾದ್ರು ಬೇಕಿದ್ರೆ ಬೈಕ್ ತಗೊಂಡು ಹೋಗ್ತಾನೆ ಅಂತ ಹೇಳ್ದೆ. ಅಂದ್ರೆ ನಿನ್ ಹತ್ತಿರ ಬೈಕ್ ಕೂಡ ಇಲ್ವಾ ಅಂತ ಶಿಲ್ಪಾ ಕೇಳಿದ್ಲು. ನಾನ್ ನಗ್ತಾ ಜಾಬ್ ಬಂದಿದ್ದೆ ಈಗ ಅಷ್ಟ್ರಲ್ಲಿ ಅಷ್ಟು ದುಡ್ಡು ಕೊಟ್ಟು ಬೈಕ್ ತಗೋಬೇಕು ಅಂದ್ರೆ ಕಷ್ಟ ಅಂತ ಹೇಳ್ದೆ. ಶಿಲ್ಪಾ ಅಲ್ವೋ ಅಂತ ಹೇಳಿ ಮತ್ತೆ ಸಾರೀ ಅಲ್ಲ ಮಹಿ  ಇವಾಗ ಜಾಬ್ ಇದ್ರೆ ಸಾಕು ಅಲ್ವಾ emi ಅಂತ ಕೊಡೋಕೆ ಎಷ್ಟೋ ಫೈನಾಸ್ ಕಂಪನಿ ಗೇಟ್ ಹತ್ತಿರ ಕಾಯ್ತಾ ಇರ್ತಾರೆ, ನಿನ್ ಹತ್ತಿರ ಜಾಬ್ ಇದೆ ಫೈನಾನ್ಸ್ ಅಲ್ಲಿ ಒಂದು ಬೈಕ್ ತಗೋ ಅಂತ ಹೇಳಿದ್ಲು.  ನಾನು ನಗ್ತಾ ಫೈನಾನ್ಸ್,  ಬೈಕ್, ಶಿಲ್ಪಾ ತಗೋಳೋದು ದೊಡ್ಡ ವಿಷಯ ಏನು ಅಲ್ಲ ಬಟ್ ತಗೊಂಡ ಮೇಲೆ ಅದು ಆಲ್ಮೋಸ್ಟ್  ಈ ಕಂಪನಿ ಬೈಕ್ ಪಾರ್ಕಿಂಗ್ ಅಲ್ಲೇ ಇರುತ್ತೆ ಏನ್ ಪ್ರಯೋಜನ,  ಆಫೀಸ್ ಟೈಮ್ ಗೆ ಬಸ್ ಅಲ್ಲಿ ಬಂದ್ರೆ ಸಾಕು, ಸಂಜೆ  ಲೇಟ್ ಆಗಿ ರೂಮ್ ಗೆ ಹೋದ್ರು ನೋ ಪ್ರಾಬ್ಲಮ್, ಸಧ್ಯಕ್ಕೆ ನನಗೆ ಈ ಬೈಕ್ emi ಗಿಂತ ನನ್ನ ನಂಬಿಕೊಂಡು ಇರೋವರ ಜೀವನ ಮುಖ್ಯ, ಅಂತ ಹೇಳಿ ವರ್ಕ್ ಮಾಡೋಕೆ ಶುರು ಮಾಡಿದೆ. ಶಿಲ್ಪಾ ಮತ್ತೇನು ಕೇಳದೆ ಅವಳ ವರ್ಕ್ ಬಗ್ಗೆ ಗಮನ ಕೊಟ್ಟಳು.

ಸಂಜೆ ವರ್ಕ್ ಮುಗಿಸಿ ಆಫೀಸ್ ನಿಂದ ಹೊರಗೆ ಬಂದು ರೋಡ್ ಕಡೆಗೆ ನಡ್ಕೊಂಡು ಹೋಗ್ತಾ ಇದ್ದೆ. ಹಿಂದೆ ಫ್ರೆಂಡ್ ಬೈಕ್ ಅಲ್ಲಿ ಬಂದು ಲೋ  ಪಾದಯಾತ್ರೆ ಮಾಡಿದ್ದು ಸಾಕು ಬಂದು ಬೈಕ್ ಹತ್ತು ಅಂತ ಹೇಳಿದ, ನಾನ್ ಅವನನ್ನ ನೋಡಿ ನಗ್ತಾ ಎಲ್ಲೋ ಇವತ್ತು ನಿಮ್ ಹುಡುಗಿ ಬಂದಿಲ್ವ ಅಂತ ಕೇಳ್ದೆ. ಅವನು ನಕ್ಕಿದ್ದು ಸಾಕು ಬಂದು ಬೈಕ್ ಹತ್ತು ಅಂತ ಹೇಳಿದ. ನಾನು ಬೈಕ್ ಅಲ್ಲಿ ಕೂತು ಅವನ ಜೊತೆಗೆ ಮನೆ ಕಡೆಗೆ ಹೊರಟೆ, ಅವನು ನನ್ನ ಮನೆ ಹತ್ತಿರ ಡ್ರಾಪ್ ಮಾಡಿ, ಬೈ ಹೇಳಿ ಹೊರಟು ಹೋದ. ನಾನು ಬ್ಯಾಗ್ ತಗಳಕಿಕೊಂಡು ಮನೆ ಒಳಗೆ ಹೋದೆ. ನಾನ್ ಫ್ರೆಂಡ್ ಜೊತೆಗೆ ಬೈಕ್ ಅಲ್ಲಿ ಬಂದಿದ್ದನ್ನ ಅಮ್ಮ ನೋಡಿ, ಯಾಕೋ ನಿನ್ ಬೈಕ್ ಏನ್ ಆಯ್ತು ಅಂತ ಕೇಳಿದ್ರು. ಅದ ಫ್ರೆಂಡ್ ತಗೊಂಡು ಹೋಗಿದ್ದಾನೆ ಏನೋ ಅರ್ಜೆಂಟ್ ವರ್ಕ್ ಇದೆ ಅಂತ 3 4 ಡೇಸ್ ಅಲ್ಲಿ ತಂದು ಕೊಡ್ತಾನೆ ಅಂತ ಹೇಳ್ದೆ. ಅಮ್ಮ ಸರಿ ಹೋಗಿ ಫ್ರೆಷ್ ಅಪ್ ಆಗಿ ಬಾ ಕಾಫಿ ಕೊಡ್ತೀನಿ ಅಂತ ಹೇಳಿದ್ರು. ನಾನ್ ಸರೆ ಅಂತ ಹೇಳಿ ರೂಮ್ ಗೆ ಹೋಗಿ ಫ್ರೆಷ್ ಅಪ್ ಆಗಿ ಬಂದು ಹಾಲ್ ಅಲ್ಲಿ ಕುತ್ಕೊಂಡೆ. ಅಮ್ಮ ಕಾಫಿ ತಂದು ಕೊಟ್ಟು ಪಕ್ಕದಲ್ಲಿ ಕೂತ್ಕೊಂಡು, ಈ ವೀಕೆಂಡ್ ಒಂದು ಫಂಕ್ಷನ್ ಇದೆ ಫ್ಯಾಮಿಲಿ ಎಲ್ಲರೂ ಹೋಗಬೇಕು, ಅವತ್ತು ನಿನ್ ಏನು ಪ್ರೋಗ್ರಾಮ್ ನಾ ಇಟ್ಕೊಬೇಡ ಅಂತ ಹೇಳಿದ್ರು. ನಾನ್ ಸರೆ ಅಂತ ಹೇಳಿದೆ.

ಹೀಗೆ ವಾರ ಹದಿನೈದು ದಿನ ವರ್ಕ್ ಮನೆ ಫ್ರೆಂಡ್ಸ್ ಫಂಕ್ಷನ್ ಅಂತ ಕಳೆದು ಹೋಯ್ತು, ವರ್ಕ್ ನಾ ಚೆನ್ನಾಗಿ ಮಾಡ್ತಾ ಇದ್ದೀನಿ ಅಂತ ಶಿಲ್ಪಾ ಕಾಂಪ್ಲಿಮೆಂಟ್ ಕೊಟ್ಟಳು, ಆಗಾಗ ಏಕವಚನದಲ್ಲಿ ಮಾತಾಡ್ತಾ ಮತ್ತೆ ಸಾರೀ ಕೇಳ್ತಾ ಮಾತಾಡ್ತಾ ಇದ್ಲು. ಅಕಿರಾ ಜೊತೆಗೆ ಅಷ್ಟೊಂದು ಮಾತಾಡೋಕು ಹೋಗ್ತಾ ಇರಲಿಲ್ಲ, ಕಾರಣ ಇಷ್ಟೇ ನಾನ್ ಏನೋ ಮಾತಾಡಿ ಅದು ಅವಳಿಗೆ ಬೇರೆ ರೀತಿ ಅರ್ಥ ಆಗೋದು ಏನಕ್ಕೆ ಮೊದಲೇ ನನ್ನ ಮೇಲೆ ಹೆವಿ ಕೋಪ ಇದೆ ಅವಳಿಗೆ,  ಅದು ಅಲ್ಲದೆ ಅವಳಿಗೆ ಮೂಗಿನ ಮೇಲೇನೆ ಕೋಪ ಇರುತ್ತೆ. ನಮ್ ಸೇಫ್ ಝೋನ್ ಅಲ್ಲಿ ನಾವು ಇರಬೇಕು ಅಂತ ಅನ್ಕೊಂಡು ದೂರಾನೇ ಇರ್ತಾ ಇದ್ದೆ..


ಮಧ್ಯಾಹ್ನ ಲಂಚ್ ಟೈಮ್ ಅಲ್ಲಿ ವರ್ಕ್ ಮಾಡ್ತಾ ಇದ್ದಾ ನನ್ನ ಶಿಲ್ಪಾ ಬಾರೋ ಲಂಚ್ ಗೆ ಅಂತ ಹೇಳಿ ಮತ್ತೆ ಸಾರೀ ಬಾ ಲಂಚ್ ಗೆ ಹೋಗೋಣ ಅಂತ ಕರೆದ್ಲು. ನಾನು ಅವಳ ಮುಖ ನಾ ನೋಡ್ತಾ ಬಾರೋ ನಾ ಇಲ್ಲಾ ಬಾ ನಾ ಯಾವುದಾದ್ರೂ ಒಂದು ವೆ ನಲ್ಲಿ ಮಾತಾಡು, ಬಾರೋ ಅನ್ನೋದು ಸಾರೀ ಕೇಳೋದು ಏನಕ್ಕೆ ಅಂತ ಕೇಳ್ದೆ. ಶಿಲ್ಪಾ,,, ನಿನಗೆ ಯಾವುದು ಓಕೆ ಅಂತ ಹೇಳಿದ್ರೆ ಹಾಗೇ ಕರೀತೀನಿ ಅಂತ ಹೇಳಿದ್ಲು. ನಗ್ತಾ ಎದ್ದು ಇನ್ಮೇಲೆ ಸಾರೀ ಕೇಳ್ಬೇಡ ಅಂತ ಹೇಳಿ ಅಲ್ಲಿಂದ ಮುಂದೆ ಹೋದೆ. ಶಿಲ್ಪಾ ಥ್ಯಾಂಕ್ಸ್ ಕಣೋ ಸಾರೀ ಹೇಳೋದನ್ನ ತಪ್ಪಿಸಿದಕ್ಕೆ ಅಂತ ಹೇಳಿ ಅಕಿರಾ ಕಡೆಗೆ ನೋಡ್ತಾಳೆ. ಅಕಿರಾ ಅವಳನ್ನೇ ನೋಡ್ತಾ ಇರೋದನ್ನ ನೋಡಿ. ಹಲೋ ಇಲ್ಲೇನು ಕೋತಿ ಕುಣಿತ ಇದೆಯಾ ಎದ್ದು ಬಾ ಅಂತ ಹೇಳಿ ಮುಂದೆ ಹೆಜ್ಜೆ ಇಟ್ಕೊಂಡು  ನನ್ನ ಕಡೆಗೆ ಬರ್ತಾ, ಮಹಿ ಇವತ್ತು ನೀನು ಸಾರೀ ಹೇಳೋದನ್ನ ತಪ್ಪಿಸಿದೆ ಅಲ್ವಾ ಅದಕ್ಕೆ ಲಂಚ್ ನಾ ನಾನೆ ಕೊಡಿಸ್ತೀನಿ ನಿನಗೆ ಬಾ ಅಂತ ಹೇಳಿದ್ಲು. ನಾನು ಅಲ್ಲೇ ನಿಂತು ಅಲ್ವೇ ಲಂಚ್ ಕೊಡೋದೇ ಫ್ರೀ ಆಗಿ ಅದನ್ನ ನೀನೇ ಕೊಡ್ತೀನಿ ಅಂತ ಇದ್ದಿಯಾ, ನಿನಗೆ ಏನಾದ್ರು ಲೂಸ್ ಏನೇ ಅಂತ ಹೇಳ್ದೆ. ಶಿಲ್ಪಾ ಕೋಪ ಮಾಡಿಕೊಂಡು ನನ್ನೇ ಲೂಸ್ ಅಂತೀಯಾ ಮಗನೆ ಸತ್ತೇ ಕಣೋ ನೀನು ಅಂತ ಹೊಡಿಯೋಕೆ ಬಂದ್ಲು. ನಾನು ಆಫೀಸ್ ಡೋರ್ ಓಪನ್ ಮಾಡಿಕೊಂಡು ಹೊರಗೆ ಬಂದು ಲಿಫ್ಟ್ ಕಡೆಗೆ ಓಡಿದೆ, ಶಿಲ್ಪಾ ನನ್ನಿಂದೆ ಓಡಿ ಬಂದಳು. ಅಕಿರಾ ಗೆ ನಗ್ತಾ ನಮ್ ಹಿಂದೇನೆ ಬಂದ್ಲು.. 


****************************************


P. S.