ಅಕಿರಾ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ ಹೋಗ್ತಾ ಇದ್ದೆ ಮಧ್ಯ ದಾರಿಲಿ ಮೊಬೈಲ್ ರಿಂಗ್ ಆಯ್ತು ಬೈಕ್ ನಾ ಸೈಡ್ ಗೆ ನಿಲ್ಲಿಸಿ ಮೊಬೈಲ್ ತೆಗೆದು ನೋಡಿದೆ ಶಿಲ್ಪಾ ಕಾಲ್. ಕಾಲ್ ಪಿಕ್ ಮಾಡಿ ಅ ಹೇಳೇ ಅಂತ ಹೇಳ್ದೆ. ಲೋ ಏನ್ ಹೇಳೋದು ನಿನ್ ಹೇಳು ಅಕಿರಾ ಮನೇಲಿ ಏನ್ ನಡೀತು ಅಂತ ನಿನ್ ಹೇಳಿದ ಮೇಲೆ ಅವಳಿಗೆ ಕಾಲ್ ಮಾಡಿದೆ ಅವಳು ಕಾಲ್ ಪಿಕ್ ಮಾಡಲೇ ಇಲ್ಲಾ. ಏನ್ ನಡೀತೋ ಹೇಳೋ ಅಂತ ಶಿಲ್ಪಾ ಕೇಳಿದ್ಲು. ನಾನ್ ನಗ್ತಾ ಕೂಲ್ ಶಿಲ್ಪಾ ಏನು ಆಗಿಲ್ಲ ಹೋಗಿ ಮಾತಾಡಿದೆ ವಿನೋದ್ ಜೊತೆಗೆ ಎಂಗೇಜ್ಮೆಂಟ್ ಕ್ಯಾನ್ಸಲ್ ಆಯ್ತು ಅಕಿರಾ ಹ್ಯಾಪಿ ಆಗಿ ಇದ್ದಾಳೆ ಅಂತ ಹೇಳ್ದೆ. ಥ್ಯಾಂಕ್ಸ್ ಕಣೋ ನಾನ್ ಏನಾಯ್ತೋ ಅಂತ ಟೆನ್ಶನ್ ಅಲ್ಲಿ ಇದ್ದೆ ಅಂತ ಶಿಲ್ಪಾ ಹೇಳಿದ್ಲು. ಸರಿ ಶಿಲ್ಪಾ ನಾನ್ ಮನೆಗೆ ಹೋಗ್ತಾ ಇದ್ದೀನಿ ಹೋಗಿ ಕಾಲ್ ಮಾಡ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ ಹೋದೆ.
ಮನೆಗೆ ಬಂದ ಮೇಲೆ ಬಾಕಿ ಇದ್ದಾ ಕೆಲಸಗಳನೆಲ್ಲ ಮುಗಿಸಿಕೊಂಡು ರೂಮ್ ಗೆ ಹೋಗಿ ಫ್ರೆಷ್ ಅಪ್ ಆಗಿ ಸ್ವಲ್ಪ ಹೊತ್ತು ನಿದ್ದೆ ಮಾಡೋಣ ಅಂತ ಮಲಗಿದೆ. ರಾತ್ರಿ 8 ಗಂಟೆ ಗೆ ಎಚ್ಚರ ಆಯ್ತು, ಎದ್ದು ಫೇಸ್ ವಾಶ್ ಮಾಡಿಕೊಂಡು ಮೊಬೈಲ್ ತೆಗೆದುಕೊಂಡು ಮೊಬೈಲ್ ನೋಡ್ತಾ ಹಾಲ್ ಕಡೆಗೆ ಹೋದೆ. ಮೊಬೈಲ್ ಅಲ್ಲಿ ಯಾವುದೊ ನಂಬರ್ ಯಿಂದ ಮಿಸ್ ಕಾಲ್ ಇತ್ತು, ಅ ನಂಬರ್ ಗೆ ರಿಟರ್ನ್ ಕಾಲ್ ಮಾಡಿದೆ, 4 ರಿಂಗ್ ಆದಮೇಲೆ ಅ ಕಡೆ ವ್ಯಕ್ತಿ ಕಾಲ್ ಪಿಕ್ ಮಾಡಿ ಹಲೋ ಮಹಿ ಅಂತ ಹೇಳಿದ್ರು. ಒಂದು ಹೆಣ್ಣಿನ ಧ್ವನಿ. ನಾನು ಯಾರು ಅಂತ ಕೇಳ್ದೆ. ಅ ಕಡೆಯಿಂದ ನಾನ್ ಅಕಿರಾ ಮಾತಾಡ್ತಾ ಇರೋದು ಅಂತ ಹೇಳಿದ್ಲು. ಅ ಅಕಿರಾ ಸಾರೀ ಗೊತ್ತಾಗಲಿಲ್ಲ ಹೇಳು ಏನ್ ವಿಷಯ ಕಾಲ್ ಮಾಡಿದ್ದು ಅಂತ ಕೇಳ್ದೆ. ಅಕಿರಾ ಮಾತಾಡ್ತಾ ಎಲ್ಲಿದ್ದೀಯ ಮಹಿ ಅಂತ ಕೇಳಿದ್ಲು. ನಾನ್ ಇನ್ನೆಲ್ಲಿ ಇರ್ತೀನಿ ರೂಮ್ ಅಲ್ಲಿ ಅಂತ ಹೇಳ್ದೆ. ಹೌದ,, ಫ್ರೀ ಇದ್ರೆ ಬರ್ತೀಯ ಲೊಕೇಶನ್ ಕಳಿಸ್ತೀನಿ ಅಂತ ಹೇಳಿದ್ಲು. ನಾನು ಟೈಮ್ ನೋಡಿಕೊಂಡು ಸರಿ ಲೊಕೇಶನ್ ಕಳಿಸು ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿ ಹಾಲ್ ಗೆ ಹೋದೆ. ಅಮ್ಮ ಅಡುಗೆ ಮನೇಲಿ ಇದ್ರು ನಾನ್ ಹೋಗಿ ಅವರನ್ನ ಮಾತಾಡಿಸಿಕೊಂಡು ಹೊರಗಡೆ ಹೋಗ್ತಾ ಇದ್ದೀನಿ ಅಂತ ಹೇಳಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಅಕಿರಾ ಕಳಿಸಿದ ಲೊಕೇಶನ್ ಕಡೆಗೆ ಹೋದೆ. 30 ನಿಮಿಷ ದ ನಂತರ ಲೊಕೇಶನ್ ಗೆ ಹೋದೆ ಅದೊಂದು ಕಾಫಿ ಶಾಪ್, ಬೈಕ್ ನಾ ಪಾರ್ಕಿಂಗ್ ಅಲ್ಲಿ ನಿಲ್ಲಿಸಿ ಅಕಿರಾ ನಂಬರ್ ಗೆ ಕಾಲ್ ಮಾಡಿದೆ, ಅಕಿರಾ ಕಾಲ್ ಪಿಕ್ ಮಾಡಿ ಮಹಿ ಎಲ್ಲಿದ್ದೀಯ ಅಂತ ಕೇಳಿದ್ಲು. ನಾನು ಇಲ್ಲೇ ಪಾರ್ಕಿಂಗ್ ಅಲ್ಲೇ ಇದ್ದೀನಿ ಅಂತ ಹೇಳ್ದೆ. ಅಕಿರಾ,, ಸರಿ ಅಲ್ಲೇ ಇರು ಶಿಲ್ಪಾ ಬರ್ತಾಳೆ ಅವಳ ಜೊತೆಗೆ ಬಾ ಅಂತ ಹೇಳಿ ಕಾಲ್ ಕಟ್ ಮಾಡಿದ್ಲು. ನಾನ್ ಅಲ್ಲೇ ಕಾಯ್ತಾ ಇದ್ದೆ. 5 ನಿಮಿಷ ದ ನಂತರ ಶಿಲ್ಪಾ ಪಾರ್ಕಿಂಗ್ ಹತ್ತಿರ ಬಂದ್ಲು ಬಂದವಳೇ ನನ್ನ ಕೋಪದಿಂದ ನೋಡೋಕೆ ಶುರು ಮಾಡಿದ್ಲು. ನಾನ್ ಅವಳನ್ನ ನೋಡಿ ಯಾಕೆ ಏನಾಯ್ತು ಅಂತ ಕೇಳ್ದೆ. ಅವಳು ಕೋಪದಿಂದ ನೋಡ್ತಾ ಏನಾಯ್ತ? ಬಾ ಇದೆ ನಿನಗೆ ಅಂತ ಹೇಳಿ ಕಾಫಿ ಶಾಪ್ ಒಳಗೆ ಕರ್ಕೊಂಡು ಹೋದಳು. ನಾನ್ ಅವಳ ಹಿಂದೇನೆ ಹೋದೆ. ಕಾಫಿ ಶಾಪ್ ಒಳಗೆ ಒಂದು ಆಫೀಸ್ ರೂಮ್ ಇತ್ತು ಡೋರ್ ಮೇಲೆ ಮ್ಯಾನೇಜರ್ ಅಂತ ನೇಮ್ ಬೋರ್ಡ್ ಇತ್ತು. ಶಿಲ್ಪಾ ಅ ಡೋರ್ ನಾ ಓಪನ್ ಮಾಡಿಕೊಂಡು ಒಳಗೆ ಹೋದಳು, ನಾನು ಒಳಗೆ ಹೆಜ್ಜೆ ಇಟ್ಟು ಹೋದೆ, ಒಂದು ಚೇರ್ ಅಲ್ಲಿ ಅಕಿರಾ ಒಬ್ಬ ವ್ಯಕ್ತಿ ಜೊತೆಗೆ ಮಾತಾಡ್ತಾ ಕೂತಿದ್ಲು, ಶಿಲ್ಪಾ ನಾನು ಬಂದಿದ್ದನ್ನ ನೋಡಿ ಅಕಿರಾ ಮತ್ತೆ ಅವಳ ಜೊತೆಗೆ ಮಾತಾಡ್ತಾ ಇದ್ದಾ ವ್ಯಕ್ತಿ ನಮ್ ಕಡೆಗೆ ನೋಡಿದ್ರು. ಶಿಲ್ಪಾ ಹೋಗಿ ಅಕಿರಾ ಪಕ್ಕದಲ್ಲಿ ಕುತ್ಕೊಂಡ್ಲು. ಅಕಿರಾ ನನ್ನ ನೋಡಿ,, ಧ್ರುವ್ ನಾನ್ ಹೇಳಿದೆ ಅಲ್ವಾ ಮಹಿ ಅಂತ ಇವನೇ ಅಂತ ನನ್ನ ಕಡೆಗೆ ತೋರಿಸಿ, ಮಹಿ ನಿನಗೆ ಹೇಳಿದೆ ಅಲ್ವಾ ನಾನ್ ಪ್ರೀತಿ ಮಾಡ್ತಾ ಇರೋ ಹುಡುಗ ಅಂತ ಇವನೆ ಮಿಸ್ಟರ್ ಧ್ರುವ್ ಅಂತ ಪರಿಚಯ ಮಾಡಿ ಕೊಟ್ಟಳು.
ಧ್ರುವ್ ನನ್ನ ನೋಡಿ ತುಂಬಾ ಥ್ಯಾಂಕ್ಸ್ ಮಹಿ ಅಂತ ಹೇಳಿ, ಕಾಫಿ ಟೀ ಏನ್ ತಗೋತೀರಾ ಅಂತ ಕೇಳಿದ. ನಾನು ಅದೆಲ್ಲಾ ಏನು ಬೇಡ ಬಿಡಿ ಅಂತ ಹೇಳಿದೆ. ಅಕಿರಾ,, ಮಹಿ ಇಂತ ಕಾಫಿ ಶಾಪ್ ಅಲ್ಲಿ ನೀನು ಇದುವರೆಗೂ ಕಾಫಿ ಕುಡಿದಿಲ್ಲ ಅಂತ ಅನ್ನಿಸುತ್ತೆ ಒಂದು ಸರಿ ಕುಡಿದು ನೋಡು ಲೈಫ್ ಅಲ್ಲಿ ಮರಿಯೋದಿಲ್ಲ ಅಂತ ಹೇಳಿದ್ಲು. ನಾನು ಅದೆಲ್ಲಾ ಏನು ಬೇಡ ನನಗೆ ಟೀ ಕಾಫಿ ಅಭ್ಯಾಸ ಇಲ್ಲಾ ಅಂತ ಹೇಳ್ದೆ. ಅಕಿರಾ ನನ್ನ ನೋಡಿ ಮಹಿ ಶ್ವೇತಾ ಮನೇಲಿ ಏನು ಪ್ರಾಬ್ಲಮ್ ಆಗಿಲ್ಲ ಅಲ್ವಾ ಅಂತ ಕೇಳಿದ್ಲು. ಶ್ವೇತಾ ಅವರ ಮನೇಲಿ ಮಹಿ ಗೆ ಏನಕ್ಕೆ ಪ್ರಾಬ್ಲಮ್ ಆಗುತ್ತೆ ಅಂತ ಕೇಳಿದ. ಅಕಿರಾ ಅದ ಹೇಳ್ತಿನಿ ಅಂತ ಹೇಳಿದ್ಲು
( ಫ್ಲಾಶ್ ಬ್ಯಾಕ್ ,,, ಕೆಲವು ದಿನಗಳ ಹಿಂದೆ.
ಆಫೀಸ್ ಅಲ್ಲಿ ವರ್ಕ್ ಮುಗಿಸಿಕೊಂಡು ಪಾರ್ಕಿಂಗ್ ಕಡೆಗೆ ಹೋಗ್ತಾ ಇದ್ದೆ, ಯಾರೋ ಕರೆದ ಹಾಗೇ ಆಯ್ತು ತಿರುಗಿ ನೋಡಿದ್ರೆ ಅಕಿರಾ, ನಾನ್ ಅಲ್ಲೇ ನಿಂತೇ, ಅಕಿರಾ ನನ್ನ ಹತ್ತಿರ ಬಂದು ಮಹಿ ನಿನ್ನ ಜೊತೆಗೆ ಸ್ವಲ್ಪ ಮಾತಾಡಬೇಕು ಅಂತ ಹೇಳಿದ್ಲು. ನನ್ನ ಜೊತೆ ನಾ ಸರಿ ಏನ್ ಹೇಳಿ ಅಂತ ಕೇಳ್ದೆ. ಅಕಿರಾ ಇಲ್ಲಿ ಅಲ್ಲ ಮಹಿ ಹೊರಗಡೆ ಅಂತ ಹೇಳಿದ್ಲು. ಸರಿ ನಡೀರಿ ಅಂತ ಹೇಳಿ ಅವಳ ಬೈಕ್ ನಾ ಫಾಲೋ ಮಾಡ್ಕೊಂಡು ಹೋದೆ. 15 ನಿಮಿಷ ದ ನಂತರ ಒಂದು ಚಿಕ್ಕ ಪಾರ್ಕ್ ಹತ್ತಿರ ಅವಳ ಬೈಕ್ ನಾ ನಿಲ್ಲಿಸಿದ್ಲು. ನಾನು ಅಲ್ಲೇ ಪಕ್ಕದಲ್ಲಿ ಬೈಕ್ ನಿಲ್ಲಿಸಿ, ಅವಳ ಹಿಂದೆ ಪಾರ್ಕ್ ಒಳಗೆ ಹೋದೆ. ಅಕಿರಾ ಪಾರ್ಕ್ ಒಳಗೆ ನಡ್ಕೊಂಡು ಹೋಗಿ ಖಾಲಿ ಇದ್ದಾ ಬೆಂಚ್ ಮೇಲೆ ಕುತ್ಕೊಂಡ್ಲು, ನಾನು ನಿಂತುಕೊಂಡೆ ಏನ್ ಹೇಳಿ ಮಾತಾಡಬೇಕು ಅಂತ ಕರ್ಕೊಂಡು ಬಂದ್ರಿ ಅಂತ ಕೇಳಿದೆ. ಅಕಿರಾ ಮಾತಾಡ್ತಾ ಮಹಿ ನಾನ್ ಧ್ರುವ್ ಅನ್ನೋ ಹುಡುಗನನ್ನ ಲವ್ ಮಾಡ್ತಾ ಇದ್ದೀನಿ ಕಾಲೇಜ್ ಟೈಮ್ ಯಿಂದ, ನಮ್ ಫ್ಯಾಮಿಲಿ ಗು ಅವರ ಫ್ಯಾಮಿಲಿ ಗು ಯಾವುದೊ ಬಿಸಿನೆಸ್ ವಿಷಯ ವಾಗಿ ಮಿಸ್ ಅಂಡರ್ಸ್ಟ್ಯಾಂಡ್ ಆಗಿ ದೂರ ಹಾಗಿ ದ್ವೇಷ ಮಾಡೋಕೆ ಶುರು ಮಾಡಿದ್ರು. ಅದ್ರೆ ಅವರಿಗೆ ನಾವಿಬ್ರು ಲವ್ ಮಾಡ್ತಾ ಇರೋ ವಿಷಯ ಗೊತ್ತಿಲ್ಲ, ನಾವು ಕೂಡ ಫ್ಯಾಮಿಲಿ ಮಧ್ಯ ಇರೋ ಮಿಸ್ ಅಂಡರ್ಸ್ಟ್ಯಾಂಡ್ ಬಗ್ಗೆ ಜಾಸ್ತಿ ತಲೆ ಕೆಡಸಿಕೊಳ್ಳೋಕೆ ಹೋಗಲಿಲ್ಲ, ಬಟ್ ಇವಾಗ ನಮ್ಮನ್ನ ದೂರ ಮಾಡೋಕೆ ಅಂತಾನೆ ವಿನೋದ್ ಅನ್ನೋವ್ನು ನಮ್ ಫ್ಯಾಮಿಲಿ ಗೆ ಹತ್ತಿರ ಆಗಿದ್ದಾನೆ, ಅವನಿಗೆ ನನ್ನ ಧ್ರುವ್ ಲವ್ ವಿಷಯ ಗೊತ್ತಿಲ್ಲ, ಗೊತ್ತಾದ್ರೆ ನೆಕ್ಸ್ಟ್ ಮಿನಿಟ್ ಮನೇಲಿ ಯುದ್ಧನೇ ಶುರುವಾಗುತ್ತೆ, ನನಗೆ ಧ್ರುವ್ ನಾ ಕಳೆದು ಕೊಳ್ಳೋಕೆ ಇಷ್ಟ ಇಲ್ಲಾ, ಹಾಗಂತ ಫ್ಯಾಮಿಲಿ ನಾ ದೂರ ಮಾಡಿಕೊಳ್ಳೋಕೆ ಇಷ್ಟ ಇಲ್ಲಾ. ಅದಕ್ಕೆ ನಿನ್ ನನಗೆ ಹೆಲ್ಪ್ ಮಾಡಬೇಕು ಅಂತ ಕೇಳಿದ್ಲು. ನಾನು ಅರ್ಥವಾಗದೆ ಇದರಲ್ಲಿ ನಾನ್ ನಿನಗೆ ಯಾವ್ ರೀತಿ ಹೆಲ್ಪ್ ಮಾಡಬೇಕೋ ನನಗೆ ಒಂದು ಚೂರು ಅರ್ಥ ಆಗಲಿಲ್ಲ ಅಂತ ಹೇಳ್ದೆ.
ಅಕಿರಾ ಏನಿಲ್ಲಾ ಮಹಿ, ವಿನೋದ್ ಗೆ ಈ ಮಿಡ್ಲ್ ಕ್ಲಾಸ್, ಇಲ್ಲಾ ಅವನ ಕೆಳಗೆ ಕೆಲಸ ಮಾಡೋವ್ರು ಅಂದ್ರೆ ಅಷ್ಟೊಂದು ಇಷ್ಟ ಆಗಲ್ಲಾ, ನಾನ್ ಅವನನ್ನ ಕರ್ಕೊಂಡು ಬಂದು ನಿನಗೆ ಪರಿಚಯ ಮಾಡಿಸ್ತೀನಿ, ಅವನು ನಿನ್ನ ಬಗ್ಗೆ ಮಾತಾಡೋಕೆ ಶುರು ಮಾಡ್ತಾನೆ, ನಾನ್ ಅವನ ಮುಂದೆ ನಿನ್ನ ಪರ ಮಾತಾಡೋಕೆ ಶುರು ಮಾಡ್ತೀನಿ, ಯಾವ ರೀತಿ ಅಂದ್ರೆ ನನಗೆ ನಿನ್ನ ಮೇಲೆ ಲವ್ ಇದೆ ಅನ್ನೋ ತರ , ಅದನ್ನ ನೋಡಿ ಅವನು ನಮ್ ಫ್ಯಾಮಿಲಿ ಗೆ ನಾವಿಬ್ರು ಲವ್ ಮಾಡ್ತಾ ಇದ್ದಿವಿ ಅಂತ ಹೇಳಿದ್ರು ಹೇಳ್ತಾನೆ, ಅವನು ಏನಾದ್ರು ಹಾಗೇ ಹೇಳಿದಾಗ ನಿನ್ ಬಂದು ನಮ್ ಫ್ಯಾಮಿಲಿ ಹತ್ತಿರ ಮಾತಾಡು, ನಮ್ ಮನೇಲಿ ದುಡ್ಡಿಗಿಂತ ಪ್ರೀತಿ ಗೆ ಬೆಲೆ ಕೊಡ್ತಾರೆ, ನಿನ್ ಬಂದು ಇಬ್ರು ಲವ್ ಮಾಡ್ತಾ ಇದ್ದಿವಿ ಬಟ್ ಸೆಟ್ಟಲ್ ಆದಮೇಲೆ ಈ ವಿಷಯ ನಾ ನಿಮಗೆ ಹೇಳೋಣ ಅಂತ ಇದ್ವಿ ಅಂತ ಹೇಳಿ, ಅವರನ್ನ ನಂಬೋ ಹಾಗೇ ಒಪ್ಪಿಸಿದ್ರೆ ಸಾಕು, ವಿನೋದ್ ಅನ್ನೋ ಪ್ರಾಬ್ಲಮ್ ನನ್ನ ಲೈಫ್ ಅಲ್ಲೇ ಇರೋದಿಲ್ಲ, ನಿನ್ ಸೆಟ್ಟಲ್ ಹಾಗೋವರೆಗೂ ನಮ್ ಮನೇಲಿ ಏನು ಮಾತಾಡೋದು ಇಲ್ಲಾ, ನನಗು ಮನೇಲಿ ಧ್ರುವ್ ಬಗ್ಗೆ ಹೇಳೋಕೆ ಟೈಮ್ ಕೂಡ ಸಿಗುತ್ತೆ ಅಂತ ಹೇಳಿದ್ಲು...
ನಾನ್ ಅಕಿರಾ ಹೇಳಿದನೆಲ್ಲ ಕೇಳಿ, ನಿನ್ ಹೇಳೋದೇನೋ ಓಕೆ ಅದ್ರೆ ಏನು ಇಲ್ದೆ ಇರೋ ನಾನು ಬಂದು ನಿಮ್ ಮಗಳನ್ನ ಲವ್ ಮಾಡ್ತಾ ಇದ್ದೀನಿ ಸೆಟ್ಟಲ್ ಆದಮೇಲೆ ಬಂದು ಹೇಳೋಣ ಅನ್ಕೊಂಡು ಇದ್ದೆ ಅಂತ ಹೇಳಿದ್ರೆ ನಿಮ್ ಮನೆಯವರು ಅದನ್ನ ನಂಬಿ ನಮಗೆ ಟೈಮ್ ಕೊಡ್ತಾರ ಅವರೇನು ಅಷ್ಟು ದಡ್ಡರ, ಅಲ್ಲ ಈ ಕಾಂಪಿಟೇಷನ್ ವರ್ಲ್ಡ್ ಅಲ್ಲಿ ಒಬ್ಬ ಹುಡುಗ ಸೆಟ್ಟಲ್ ಆಗೋದು ಎಷ್ಟು ಕಷ್ಟ ಇದೆ ಅಂತ ನಿನಗೆ ಗೊತ್ತು, ಸೆಟ್ಟಲ್ ಹಾಗೋಕೆ ವರ್ಷಗಳೇ ಬೇಕಾಗುತ್ತೆ, ಆದ್ರೂ ಗ್ಯಾರೆಂಟಿ ಇಲ್ಲಾ, ಹಾಗಿದೆ ಹೊರಗಡೆ ಪ್ರಪಂಚ, ನೋಡು ನನ್ನ ಮಾತು ಕೇಳು ಹೋಗಿ ನಿಮ್ ಮನೇಲಿ ನಿಮ್ ಲವ್ ವಿಷಯ ಹೇಳಿ ಒಪ್ಪಿಸಿ, ನೀವೇ ಹೇಳಿದ್ರಿ ದುಡ್ಡಿಗಿಂತ ಪ್ರೀತಿ ಗೆ ಬೆಲೆ ಕೊಡ್ತಾರೆ ಅಂತ, ಅವರು ನಿಮ್ ಪ್ರೀತಿ ನಾ ಒಪ್ಕೋತಾರೆ ಅಂತ ಹೇಳ್ದೆ.
ಅಕಿರಾ ಇಲ್ಲಾ ಮಹಿ, ಒಂದು ಸರಿ ನಮ್ ಫ್ಯಾಮಿಲಿ ಅವರು ದ್ವೇಷ ಮಾಡೋಕೆ ಶುರು ಮಾಡಿದ್ರೆ ಮುಗಿತು ಯಾವುದೇ ಕಾರಣಕ್ಕೂ ಅವರನ್ನ ಕ್ಷಮಿಸೋಕೆ ಹೋಗೋದೇ ಇಲ್ಲಾ. ಅದಕ್ಕೆ ನಾನ್ ನಿನ್ನ ಹೆಲ್ಪ್ ಕೇಳ್ತಾ ಇರೋದು, ಅಂಡ್ ನಿನ್ ಹೇಳೋದು ನಿಜ ಎಲ್ಲಾ ಇದ್ದವ್ರು ಸೆಟಲ್ ಆಗೋಕೆ ತುಂಬಾ ಕಷ್ಟ ಬೀಳ್ತಾರೆ, ಏನು ಇಲ್ದೆ ಇರೋವರ ಸ್ಥಿತಿ ಇನ್ನು ಕಷ್ಟ. ಇದೆ ನಿನಗೆ ಪ್ರಾಬ್ಲಮ್ ಅಂತ ಅನ್ನಿಸಿದ್ರೆ ಇದಕ್ಕೆ ನನ್ನ ಹತ್ತಿರ ಒಂದು ಐಡಿಯಾ ಇದೆ, ನಿನಗೆ ನಮ್ ಕಂಪನಿ ಅಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಶ್ವೇತಾ ಅಂತ ಇದ್ದಾರೆ, ಅವರು ನಮಗಿಂತ ಶ್ರೀಮಂತರು ಬಟ್ ಶ್ವೇತಾ ಗೆ ಶ್ರೀಮಂತರು ಅನ್ನೋ ಅಹಂ ಆಗಲಿ ಇಲ್ಲಾ ದುಡ್ಡು ಇಲ್ದೆ ಇರೋವ್ರು ಅಂದ್ರೆ ದ್ವೇಷ ಮಾಡೋದು ಆಗಲಿ ಚೂರು ಇಲ್ಲಾ. ನಾನ್ ಅವರ ಹತ್ತಿರ ಮಾತಾಡ್ತೀನಿ, ನೀನು ನಮ್ ಮನೇಲಿ ಅವರ ಬ್ರದರ್ ಅಂತ ಹೇಳು, ಅಪ್ಪನ ನೆರಳನ್ನ ಬಿಟ್ಟು ಹೊರಗೆ ಬಂದು ಏನಾದ್ರು ಸಾಧಿಸ ಬೇಕು ಅಂತ ಇದ್ದೀನಿ ಅಂತ ಹೇಳು. ಹಾಗೇ ಹೇಳಿದ್ರೆ ಖಂಡಿತ ಒಪ್ಕೋತಾರೆ ಏನು ಪ್ರಾಬ್ಲಮ್ ಇರೋದು ಇಲ್ಲಾ ಅಂತ ಹೇಳಿದ್ಲು.
ನಾನು ಏನ್ ಮೇಡಂ ನೀವು ಒಂದು ಸತ್ಯ ನಾ ಮುಚ್ಚಿ ಇಡೋಕೆ ಒಂದು ಸುಳ್ಳು ಅ ಸುಳ್ಳನ್ನ ಮುಚ್ಚಿ ಇಡೋಕೆ ಇನ್ನೊಂದು ಸುಳ್ಳು, ಸೀರಿಯಸ್ಲೀ ಈ ವಿಷಯ ನಾಳೆ ನಿಮ್ ಮನೇಲಿ ಏನಾದ್ರು ಗೊತ್ತಾದ್ರೆ ತುಂಬಾ ದೊಡ್ಡ ಪ್ರಾಬ್ಲಮ್ ಆಗುತ್ತೆ ನಿಮಗೆ ಅಂತ ಹೇಳ್ದೆ. ಅಕಿರಾ ಪ್ಲೀಸ್ ಮಹಿ ಏನು ಪ್ರಾಬ್ಲಮ್ ಹಾಗದೆ ಇರೋ ಹಾಗೇ ನಾನ್ ನೋಡ್ಕೋತೀನಿ ಪ್ಲೀಸ್ ಒಪ್ಕೋ, ಅಂತ ರಿಕ್ವೆಸ್ಟ್ ಆಗಿ ಕೇಳಿ ಕೊಂಡಳು. ನಾನು ಸರಿ ಮೇಡಂ ಬಟ್ ಇದಕ್ಕೆ ಶ್ವೇತಾ ಅವರು ಒಪ್ಕೋಬೇಕು ಅಲ್ವಾ ಅಂತ ಕೇಳ್ದೆ. ಅ ವಿಷಯ ನನಗೆ ಬಿಡು ನಾಳೆ ಶ್ವೇತಾ ಹತ್ತಿರ ನಾನ್ ಮಾತಾಡಿ ಒಪ್ಪಿಸ್ತಿನಿ ಅಂತ ಹೇಳಿದ್ಲು. ನಾನು ಸರಿ ಮೇಡಂ ಹಾಗೇ ಮಾಡಿ ಅಂತ ಹೇಳಿದೆ. ಅಕಿರಾ ತುಂಬಾ ಥ್ಯಾಂಕ್ಸ್ ಮಹಿ ಒಪ್ಪಿಕೊಂಡಿದ್ದಕ್ಕೆ ಅಂತ ಹೇಳಿದ್ಲು. ಆಮೇಲೆ ಸರಿ ಮಹಿ ಲೇಟ್ ಅದ್ರೆ ಮನೆಯಿಂದ ಕಾಲ್ ಮಾಡ್ತಾರೆ ನಾನ್ ಹೊರಡ್ತೀವಿ ಅಂತ ಬೈ ಹೇಳಿ ಅಲ್ಲಿಂದ ಹೊರಟು ಹೋದಳು. ನಾನ್ ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆಗೆ ಕಡೆಗೆ ಹೋದೆ.
ಬೈಕ್ ನಿಲ್ಲಿಸಿ ಮನೆ ಒಳಗೆ ಹೋದೆ. ಶ್ವೇತಾ ಹಾಲ್ ಅಲ್ಲಿ ಕೂತ್ಕೊಂಡು ಕಾಫಿ ಕುಡಿತಾ ಇದ್ಲು, ನನ್ನ ನೋಡಿ ಏನೋ ಇಷ್ಟು ಲೇಟ್ ಆಗಿ ಬರ್ತಾ ಇದ್ದಿಯಾ ಅಂತ ಕೇಳಿದ್ಲು. ನಾನು ಹೇಳ್ತಿನಿ ಅಮ್ಮ ಎಲ್ಲಿ ಅಂತ ಕೇಳಿದೆ. ಅಮ್ಮ ನಾ ಬಾಯ್ಫ್ರೆಂಡ್ ಜೊತೆ ಹೊರಗಡೆ ಹೋಗಿದ್ದಾರೆ ಅಂತ ಹೇಳಿದ್ಲು ಶ್ವೇತಾ. ನಾನು ಅಬ್ಬಾ ಒಳ್ಳೇ ಕೆಲಸ ಅಂತ ಅನ್ಕೊಂಡು ಹೋಗಿ ಶ್ವೇತಾ ಪಕ್ಕ ಕೂತು ನಿನಗೆ ನಮ್ ಟೀಂ ಅಲ್ಲಿ ಇರೋ ಟೀಂ ಲೀಡರ್ ಅಕಿರಾ ಗೊತ್ತಾ ಅಂತ ಕೇಳ್ದೆ. ಅ ಗೊತ್ತು ಕಣೋ ಏನಾಯ್ತು ಅಂತ ಶ್ವೇತಾ ಕೇಳಿದ್ಲು. ನಾನು ಅಕಿರಾ ಹೇಳಿದ್ದನ್ನ ಶ್ವೇತಾ ಗೆ ಹೇಳ್ದೆ. ನಾನ್ ಹೇಳಿದನ್ನೆಲ್ಲ ಕೇಳಿ ಶ್ವೇತಾ ಲೋ ಅವಳಿಗೆ ಏನಾದ್ರು ಬುದ್ದಿ ಇದೆಯಾ ಈ ರೀತಿ ಹೇಳ್ತಾ ಹೋದ್ರೆ ಅವಳಿಗೆ ಪ್ರಾಬ್ಲಮ್ ಆಗೋದಿಲ್ವಾ, ಅದು ಅಲ್ಲದೆ ನನ್ನ ಸ್ವಂತ ತಮ್ಮ ನಾ, ತಮ್ಮನಾಗಿ ನಾಟಕ ಮಾಡೋಕೆ ನಾನೆ ಒಪ್ಕೋಬೇಕಾ, ಈ ವಿಷಯ ಏನಾದ್ರು ಮನೇಲಿ ಗೊತ್ತಾದ್ರೆ ಅಮ್ಮ ಅಪ್ಪ ಸುಮ್ನೆ ಇರ್ತಾರ, ಅದರಲ್ಲೂ ಅಮ್ಮ ಸುಮ್ನೆ ಇರ್ತಾಳ ನನ್ನ ಕೊಂದೆ ಬಿಡ್ತಾಳೆ ಅಂತ ಹೇಳಿದ್ಲು. ಲೇ ಏನು ಆಗಲ್ಲಾ ಪಾಪ ಅವಳ ಪ್ರೀತಿ ಗೋಸ್ಕರ ಹೆಲ್ಪ್ ಕೇಳ್ತಾ ಇದ್ದಾಳೆ ನಾಳೆ ಬಂದು ಅವಳು ನಿನ್ನ ಹೆಲ್ಪ್ ಕೇಳಿದ್ರೆ ಒಪ್ಕೋ ಸಾಕು ಅಂತ ಹೇಳ್ದೆ , ಶ್ವೇತಾ ಸರಿ ಆಯ್ತು ನಿನ್ ಹೇಳಿದ್ದೀಯಾ ಅಂತ ಒಪ್ಕೋತೀನಿ ಅಂತ ಹೇಳಿದ್ಲು.
ಮಾರನೇ ದಿನ ಅಕಿರಾ ಶ್ವೇತಾ ಹತ್ತಿರ ಮಾತಾಡಿದ್ಲು, ಶ್ವೇತಾ ಕೂಡ ನಿನ್ನ ಪ್ರೀತಿಗೋಸ್ಕರ ಕೇಳ್ತಾ ಇದ್ದಿಯಾ ಅಂತ ಹೆಲ್ಪ್ ಮಾಡೋಕೆ ಒಪ್ಕೋತೀನಿ ಅಂತ ಹೇಳಿದ್ಲು. ನಂತ್ರ ಅಕಿರಾ ಬಂದು ನನಗೆ ಶ್ವೇತಾ ಒಪ್ಪಿಕೊಂಡ ವಿಷಯ ಹೇಳಿದ್ಲು. ಆಮೇಲೆ ವಿನೋದ್ ನಾ ಕರ್ಕೊಂಡು ಬಂದು ಪರಿಚಯ ಮಾಡಿಸಿದ್ಲು, ಶಿಲ್ಪಾ ಹತ್ತಿರ ನನ್ನ ಲವ್ ಮಾಡ್ತಾ ಇದ್ದೀನಿ ಅಂತ ಸುಳ್ಳು ಹೇಳಿದ್ಲು. ಶ್ವೇತಾ ಫಂಕ್ಷನ್ ಗೆ ಕರೆದಾಗ ನನಗೆ ಕಾಲ್ ಮಾಡಿ ಶ್ವೇತಾ ಹತ್ತಿರ ಮಾತಾಡಿದ್ದೀನಿ ಫಂಕ್ಷನ್ ಗೆ ಶಿಲ್ಪಾ ಬರ್ತಾಳೆ ಅವಳು ನಂಬೋ ಹಾಗೇ ಮಾಡು, ಒಂದು ವೇಳೆ ಮನೆಯವರು ಶಿಲ್ಪಾ ನಾ ಕೇಳಿದ್ರೆ ಹೌದು ಅಂತ ಹೇಳ್ತಾಳೆ. ಪ್ರಾಬ್ಲಮ್ ಇರೋದಿಲ್ಲ ಅಂತ ಹೇಳಿದ್ಲು. ಫಂಕ್ಷನ್ ಯಿಂದ ಮನೆಗೆ ಹೋದಮೇಲೆ ಅಕಿರಾ ಕಾಲ್ ಮಾಡಿ ವಿನೋದ್ ಮಾಡಿದ ಕುತಂತ್ರಿ ಬುದ್ದಿ ನಾ ಹೇಳಿದ್ಲು. ಆಮೇಲೆ ನಾನ್ ಹೋಗಿ ಅವರ ಮುಂದೆ ಅವರು ನಂಬೋ ಹಾಗೇ ಡ್ರಾಮಾ ಮಾಡಿದ್ದು ).
ಫ್ಲಾಶ್ ಬ್ಯಾಕ್ ಮುಗಿತು....
ಅಕಿರಾ ಧ್ರುವ್ ಹತ್ತಿರ ಅದೇ ಧ್ರುವ್ ಶ್ವೇತಾ ಹತ್ತಿರ ಇವನನ್ನ ತಮ್ಮ ಹಾಗಿ ಫಂಕ್ಷನ್ ಅಲ್ಲಿ ಡ್ರಾಮಾ ಮಾಡೋಕೆ ಹೇಳ್ದೆ ಅಲ್ಲಿ ಏನಾದ್ರು ಪ್ರಾಬ್ಲಮ್ ಆಯ್ತಾ ಅಂತ ಕೇಳ್ದೆ ಅಂತ ಹೇಳಿದ್ಲು. ಶಿಲ್ಪಾ ಅಲ್ಲ ಕಣೆ ಇಷ್ಟು ವರ್ಷಾದಿಂದ ಫ್ರೆಂಡ್ಸ್ ನಾವು ನನಗೆ ಈ ಡ್ರಾಮಾ ವಿಷಯ ಹೇಳೇ ಇಲ್ಲಾ ನೀವು ಅಂತ ಸ್ವಲ್ಪ ಕೋಪದಲ್ಲಿ ಹೇಳಿದ್ಲು. ಅಕಿರಾ ಸಾರೀ ಕಣೆ ನಾವು ಹೇಳೋದನ್ನ ನಂಬದೆ ನಿನಗೆ ಕಾಲ್ ಮಾಡಿದ್ರೆ ಅಂತ ಭಯ ಹಾಗಿ ನಿನಗೆ ನಿಜ ಹೇಳಿಲ್ಲ ಅಂತ ಹೇಳಿದ್ಲು. ಶಿಲ್ಪಾ ಹ್ಮ್ ಸರಿ ಬಿಡು ಅಂತ ಕೋಪ ನಾ ಕಮ್ಮಿ ಮಾಡ್ಕೊಂಡ್ಲು.
ಅಕಿರಾ ಧ್ರುವ್ ಕಡೆಗೆ ನೋಡ್ತಾ ಧ್ರುವ್ ಅಂತ ಹೇಳಿದ್ಲು. ಧ್ರುವ್ ಅಕಿರಾ ಕಡೆಗೆ ನೋಡಿ ಓ ಸಾರೀ ಅಂತ ಹೇಳಿ ಡ್ರಾ ತೆಗೆದು ಒಂದು ಕವರ್ ನಾ ತೆಗೆದು ಅಕಿರಾ ಕೈಗೆ ಕೊಟ್ಟ. ಅಕಿರಾ ಅದನ್ನ ತೆಗೆದುಕೊಂಡು ನನ್ನ ಕಡೆ ನೋಡ್ತಾ ಕವರ್ ನಾ ಮುಂದೆ ಮಾಡಿ ತಗೋ ಮಹಿ ಅಂತ ಹೇಳಿದ್ಲು. ನಾನ್ ಅದನ್ನ ನೋಡಿ ಏನು ಅಂತ ಕೇಳ್ದೆ. ಧ್ರುವ್ ಇನ್ನೇನು ಮಹಿ ಹೆಲ್ಪ್ ಮಾಡಿದೆ ಅಲ್ವಾ ಅದಕ್ಕೆ ದುಡ್ಡು, ಅಕಿರಾ ನಿನ್ನ ಬಗ್ಗೆ ಹೇಳಿದ್ಲು ಆಫೀಸ್ ಗೆ ನೀನು ಫ್ರೆಂಡ್ಸ್ ಬೈಕ್ ಅಲ್ಲಿ ಬರ್ತೀಯ ಅಂತ ಅದಕ್ಕೆ ಈ ದುಡ್ಡು ತೆಗೆದುಕೊಂಡು ಹೊಸ ಬೈಕ್ ತಗೋ ಅಂತ ಹೇಳಿದ. ನಾನ್ ಇದೆಲ್ಲಾ ಏನು ಬೇಡ ಬಿಡಿ, ಹೆಲ್ಪ್ ಕೇಳಿದ್ರು ಹೆಲ್ಪ್ ಮಾಡಿದೆ ಅಷ್ಟೇ ಅಂತ ಹೇಳ್ದೆ. ಅಕಿರಾ ಮಹಿ ತಗೋ ಪರ್ವಾಗಿಲ್ಲ ನಾವೇನು ಅಂದುಕೊಳ್ಳೋದಿಲ್ಲ ಅಂತ ಹೇಳಿದ್ಲು. ಧ್ರುವ್ ತಗೋಳಿ ಬ್ರದರ್ ಇದು ಸಾಕಾಗಿಲ್ಲ ಅಂದ್ರೆ ಕೇಳಿ ಪರ್ವಾಗಿಲ್ಲ ಕೊಡ್ತೀನಿ ಒಳ್ಳೇ ಬೈಕ್ ತಗೋಳಿ ಒಳ್ಳೊಳ್ಳೆ ಡ್ರೆಸ್ ತಗೋಳಿ, ನಿಮಗೆ ಯಾರು ಗರ್ಲ್ಫ್ರೆಂಡ್ ಇಲ್ಲಾ ಅಂತ ಹೇಳಿದ್ಲು ಅಕಿರಾ, ಒಳ್ಳೆ ಬೈಕ್ ಒಳ್ಳೆ ಡ್ರೆಸ್ ಇದ್ರೆ ಯಾರಾದ್ರೂ ಹುಡುಗಿ ಬಂದು ಪ್ರೊಪೋಸ್ ಮಾಡಿದ್ರು ಮಾಡ್ತಾಳೆ, ಬೆಂಗಳೂರು ಲೈಫ್ ನಾ ಎಂಜಾಯ್ ಮಾಡಿ ಅಂತ ಹೇಳಿದ. ಅವರು ಹಾಗೇ ಹೇಳ್ತಾ ಇದ್ದಾ ಹಾಗೇ ನನಗೆ ಕಾಲ್ ಬಂತು ಅದೇ ನೆಪ ಇಟ್ಕೊಂಡು ಸಾರೀ ಬ್ರದರ್ ನಾನ್ ಹೋಗಲೇ ಬೇಕು ಅಂತ ಹೇಳಿ ಬೈ ಹೇಳಿ ಅಲ್ಲಿಂದ ಹೊರಗೆ ಬಂದೆ.
ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಹೋದೆ. ಧ್ರುವ್ ಅಕಿರಾ ಹತ್ತಿರ ನಿನ್ ಫ್ರೆಂಡ್ ಗೆ ಹೆಲ್ಪ್ ಮಾಡಿದ ಅಂತ ಹೆಲ್ಪ್ ಮಾಡೋಕೆ ಹೋದ್ರೆ ಒಳ್ಳೆ ಮರ್ಯಾದೆ ಕೊಟ್ಟ ಅಂತ ಸ್ವಲ್ಪ ಕೋಪದಲ್ಲಿ ಹೇಳ್ದ. ಅ ಮಾತಿಗೆ ಅಕಿರಾ ಗು ನನ್ನ ಮೇಲೆ ಕೋಪ ಬಂದ್ರು ಏನು ಹೇಳದೆ ಸುಮ್ಮನೆ ಇದ್ದು ಬಿಟ್ಟಳು....
**************************************
P. S.