ಓ ದೇವ್ರೇ,, ಏನಯ್ಯ ನಿನ್ನ ಲೀಲೆ ಯಾರ್ ಹತ್ತಿರ ಕೂಡ ಹೋಗಬಾರದು ಅಂತ ಇದ್ನೋ, ಕೊನೆಗೆ ನೀನು ಅವರ ಹತ್ತಿರ ನೇ ತಂದು ಕೂರಿಸಿದ್ದೀಯ, ಹೇಗಾದ್ರು ಮಾಡಿ ಈ ಟೀಂ ನಿಂದ ಅವಳಿಂದ ನನ್ನ ದೂರ ಕಳಿಸಯ್ಯ, ನಾಳೇನೇ ನಿನ್ನ ದೇವಸ್ಥಾನ ಕ್ಕೆ ಬಂದು ಪೂಜೆ ಮಾಡಿಸಿ 101 ರೂಪಾಯಿ ಕಾಣಿಕೆ ಹಾಕ್ತಿನಿ, ಅಂತ ಮನಸಲ್ಲಿ ದೇವರಿಗೆ ಬೇಡಿಕೊಳ್ತಾ ಇದ್ದೆ, ಬಟ್ ದೇವ್ರು ಯಾಕೋ ನನ್ನ ಬೇಡಿಕೆ ಕೇಳಿಲ್ಲ ಅಂತ ಅನ್ನಿಸುತ್ತೆ, ಹಲೋ ಮಿಸ್ಟರ್ ಎಸ್ಕ್ಯೂಸ್ ಮೀ ಅನ್ನೋ ಧ್ವನಿ ಕೇಳ್ತು. ತಲೆ ಬಗ್ಗಿಸಿಕೊಂಡು ಇದ್ದವನು ತಲೆ ಎತ್ತಿ ತಿರುಗಿ ನೋಡಿದೆ, ಅಕಿರಾ ಒಂದು ಫೈಲ್ ಇಡ್ಕೊಂಡು ನಿಂತಿದ್ದಾಳೆ.
ನಾನು ನಾಟಕೀಯ ವಾಗಿ ನಗ್ತಾ, ಎದ್ದು ಹೇಳಿ ಮೇಡಂ ಅಂತ ಹೇಳ್ದೆ.
ಅಕಿರಾ ಕೋಪದಿಂದ ನೋಡ್ತಾ, ಹಲೋ ಮಿಸ್ಟರ್ ನಾನೇನು ನಿನಗೆ ಕಾಮಿಡಿ ಮಾಡ್ತಾ ಇದ್ದೀನ ಹಾಗೇ ನಗ್ತಾ ಇದ್ದೀರಾ, ಅಂತ ಕೇಳಿದ್ಲು.
ಅಯ್ಯೋ ಇಲ್ಲಾ ಮೇಡಂ ಯಾರ್ ಹೇಳಿದ್ದು ಹಾಗೇ.
ಮತ್ತೆ ನಗ್ತಾ ಇದ್ದೀರಾ ಏನಕ್ಕೆ ಅಂತ ಕೇಳಿದ್ಲು.
ನಗುನ ನಿಲ್ಲಿಸಿ, ಇಲ್ಲಾ ಮೇಡಂ ಅದು 1st ಟೈಮ್ ನಿಮ್ ಹತ್ತಿರ ಮಾತಾಡ್ತಾ ಇದ್ದೀನಿ ಅಲ್ವಾ ಸೋ ಅದಕ್ಕೆ ಸ್ವಲ್ಪ ನಗ್ತಾ ಮಾತಾಡಿದೆ, ಸಾರೀ ಅಂತ ನಾನ್ ಹೇಳ್ದೆ .
ಅಕಿರಾ,, ವ್ಯಂಗ್ಯ ವಾಗಿ ನಗ್ತಾ ಈ,,, ಈ ಹೌದ.. (ತಕ್ಷಣ ಎಕ್ಸ್ಪ್ರೆಶನ್ ಚೇಂಜ್ ಮಾಡಿ ) ಸೀರಿಯಸ್ ಆಗಿ ನೆಕ್ಸ್ಟ್ ಟೈಮ್ ಯಿಂದ ಹೀಗೆ ಮಾತಾಡಬೇಡಿ, ತಗೋಳಿ ಈ ಫೈಲ್ ನಾ ಚೆನ್ನಾಗಿ ಸ್ಟಡಿ ಮಾಡಿ ವರ್ಕ್ ಮಾಡಿ, ಏನಾದ್ರು ಡೌಟ್ಸ್ ಇದ್ರೆ, ನನ್ನಾ ಕೇಳಬೇಡಿ, ಶಿಲ್ಪಾ ನಾ ಕೇಳಿ. ತಗೋಳಿ ಅಂತ ಫೈಲ್ ನಾ ಕೈಗೆ ಕೊಟ್ಟು ಹೋಗಿ ಅವಳ ಪ್ಲೇಸ್ ಅಲ್ಲಿ ಕುತ್ಕೊಂಡ್ಲು.
ತು ಏನ್ ಕರ್ಮ ಗುರು ಅಂತ ಬೈಕೊಂಡು ಫೈಲ್ ನಾ ಡೆಸ್ಕ್ ಮೇಲೆ ಇಟ್ಟು ಚೇರ್ ಮೇಲೆ ಕುತ್ಕೊಂಡೆ.
ಶಿಲ್ಪಾ,, ನನ್ನ ಹತ್ತಿರ ಬಂದು ನನ್ನ ಮುಖ ನೋಡಿ ನಗ್ತಾ, ಬೇಕಿತ್ತಾ ನಿನಗೆ, ಹೋಗಿ ಹೋಗಿ ಅವಳ ಹತ್ತಿರ ಗಲಾಟೆ ಮಾಡ್ಕೊಂಡಿದ್ದು ಅಲ್ಲದೆ, ಮತ್ತೆ ಅವಳ ಟೀಂ ಗೆ ಬಂದಿದ್ದೀಯ ಅಲ್ವಾ, ಗ್ರೇಟ್ ಕಣೋ ನೀನು.
ನಾನು ಅವಳ ಮಾತಿಗೆ ಕೋಪದಿಂದ ಅವಳ ಮುಖನ ನೋಡಿದೆ.
ಶಿಲ್ಪಾ, ನಗ್ತಾ ಏನು ಕೋಪ ಬಂತ ನಾನ್ ಹೇಳಿದಕ್ಕೆ, ಇಷ್ಟಕ್ಕೆ ಕೋಪ ಮಾಡ್ಕೊಂಡ್ರೆ ಹೇಗೆ, ಇನ್ಮೇಲೆ ಅವಳು ಕೊಡೊ ಟಾರ್ಚರ್ ನಾ ಅದೇಗೆ ತಡ್ಕೋತಿಯೋ, ಅಂತ ಹೇಳಿ ನಗ್ತಾ ಅವಳ ಪ್ಲೇಸ್ ಗೆ ಹೋಗಿ ವರ್ಕ್ ಮಾಡೋಕೆ ಶುರು ಮಾಡಿದ್ಲು..
ನಾನು ಇನ್ನು ಹೀಗೆ ಸುಮ್ನೆ ಇದ್ರೆ ಅದಕ್ಕೂ ಅವಳ ಹತ್ತಿರ ಬೈಸ್ಕೊಬೇಕು ಅಂತ ಅನ್ಕೊಂಡು, ಫೈಲ್ ನೋಡ್ತಾ ವರ್ಕ್ ಮಾಡೋಕೆ ಶುರು ಮಾಡಿದೆ.. ಏನಾದ್ರು ಡೌಟ್ ಬಂದಾಗ ಶಿಲ್ಪಾ ನಾ ಕೇಳ್ತಾ ವರ್ಕ್ ಮಾಡ್ತಾ ಇದ್ದೆ.
ವರ್ಕ್ ಮಾಡ್ತಾ ಮಧ್ಯಾಹ್ನ ಲಂಚ್ ಟೈಮ್ ಆಯ್ತು, ಎಲ್ಲರೂ ಲಂಚ್ ಗೆ ಹೋಗ್ತಾ ಇದ್ರು, ನಾನು ಲ್ಯಾಪ್ ಕ್ಲೋಸ್ ಮಾಡಿ ಲಂಚ್ ಮಾಡೋಣ ಅಂತ ಆಫೀಸ್ ನಿಂದ ಹೊರಗೆ ಬಂದೆ. ಫ್ರೆಂಡ್ ಭುವನ್ ಸಿಕ್ಕಿ, ಏನ್ ಮಗ ಪ್ರಾಜೆಕ್ಟ್ ಅಲ್ಲಿ ಹಾಕಿದ್ದಾರೆ ಅಂತೇ, ನಿಮ್ ಟೀಂ ಅಲ್ಲಿ ಹುಡುಗೀರು ಚೆನ್ನಾಗಿ ಇದ್ದಾರಾ ಅಂತ ಕೇಳ್ದ. ಅದೇ ಟೈಮ್ ಗೆ ಸರಿಯಾಗಿ ಅಕಿರಾ ಶಿಲ್ಪಾ ಬಂದ್ರು. ನಾನ್ ಅವರನ್ನ ನೋಡಿ ಸೈಲೆಂಟ್ ಆಗೋದೇ. ಭುವನ್ ಅವರಿಬ್ಬರು ಬಂದಿರೋದನ್ನ ಗಮನಿಸದೆ ,, ಯಾಕ್ ಮಗ ಏನು ಮಾತಾಡ್ತಾ ಇಲ್ಲಾ, ಹುಡುಗಿರ ಬಗ್ಗೆ ಕೇಳ್ತಿದ್ದ ಹಾಗೇ ಸೈಲೆಂಟ್ ಆಗೋದೇ, ಓ ಹೊ,, ಹೇಳಿದ್ರೆ ನಾನ್ ಎಲ್ಲಿ ಬಂದು ನಿಮ್ ಟೀಂ ಹುಡುಗೀರಿಗೆ ಲೈನ್ ಅಕ್ತಿನಿ ಅನ್ನೋ ಭಯ ನಾ, ನೀನೇನು ಭಯ ಬೀಳಬೇಡ, ನನಗೆ ಆಲ್ರೆಡಿ ಒಬ್ಬಳು ಇರೋದೇ ಸಾಕು ಅವಳ ಕಾಟ ನೇ ತಡಕೊಳ್ಳೋಕೆ ಆಗ್ತಿಲ್ಲ. ನೋಡು ಯಾರಾದ್ರೂ ಚೆನ್ನಾಗಿ ಇದ್ರೆ ಲೈನ್ ಹಾಕು, ನಾನ್ ಹೆಲ್ಪ್ ಮಾಡ್ತೀನಿ, ಅಂತ ಹೇಳ್ದ.
ಅವನು ಹೇಳೋದನ್ನ ಕೇಳಿಸಿಕೊಂಡು ಇಬ್ಬರು ಫುಲ್ ಕೋಪಮಾಡ್ಕೊಂಡು ನನ್ನೇ ಕೊಲ್ಲೋ ತರ ನೋಡ್ತಾ ಇದ್ದಾರೆ, ಇವನು ನಾನ್ ಸ್ಟಾಪ್ ಮಾತಾಡ್ತಾ ಇದ್ದಾನೆ, ಅವನ ಮಾತಿನಾ ಮಧ್ಯ ನಿಲ್ಲಿಸಿ ಲೋ ಸುಮ್ನೆ ಇರೋ, ಏನೇನೋ ಮಾತಾಡಬೇಡ ಟೀಂ ಗೆ ಜಾಯಿನ್ ಆಗಿರೋದೇ ಇವತ್ತು, ನಿನ್ನ ಮಾತು ಕೇಳಿಸಿಕೊಂಡು ಅವರು ಏನಾದ್ರು ಕಂಪ್ಲೇಂಟ್ ಮಾಡಿ ಈ ಜಾಬ್ ಇಲ್ಲದೆ ಹಾಗೇ ಮಾಡಿದ್ರೆ, ನನಗೆ ತುಂಬಾ ಕಷ್ಟ ಆಗುತ್ತೆ ಮಗ, ಅದ್ರಲ್ಲೂ ಸಾಫ್ಟ್ವೇರ್ ಹುಡುಗೀರು, ಜಾಬ್ ಸೇವಿಂಗ್ಸ್, ಇಲ್ದೆ ಇರೋ ನನ್ನಂತವನಿಗೆ ಎಲ್ಲೋ ಬೀಳ್ತಾರೆ. ನೀನ್ ನೋಡಿದ್ರೆ ಬಾಯಿಗೆ ಏನೇನ್ ಬರುತ್ತೋ ಅದನ್ನ ಹೇಳ್ತಾ ಇದ್ದಿಯಾ. ಸುಮ್ನೆ ಇರೋ.
ಭುವನ್, ನಗ್ತಾ ಆಯ್ತು ಬಿಡು ಮಗ ಯಾಕ್ ಭಯ ಬೀಳ್ತಿಯಾ, ಹೋಗಿ ಹೋಗಿ ನಿನಗೆ ಹುಡುಗೀರನ್ನ ಲೈನ್ ಹಾಕೋದಕ್ಕೆ ನಾನ್ ಹೆಲ್ಪ್ ಮಾಡ್ತೀನಿ ಅಂತ ಹೇಳ್ದೆ ನೋಡು ನನಗೆ ಬುದ್ದಿ ಇಲ್ಲಾ, ಕಾಲೇಜ್ ಟೈಮ್ ಅಲ್ಲೇ ತಾವು ಸಕಲಕಾಲ ವಲ್ಲಭ, ನಮಗೆಲ್ಲ ಲವ್ ಗುರು ಆಗಿದ್ದೆ, ಈಗ ಒಳ್ಳೆ ಹುಡುಗನ ತರ ಮಾತಾಡ್ತಾ ಇದ್ದಿಯಾ. ಓಕೆ ಏನ್ ಮಾಡೋಕು ಆಗಲ್ಲಾ ಬಾ, ಟೀಂ ಅಲ್ಲಿ ಜಾಯಿನ್ ಆಗಿದ್ದೀಯಾ ಅಲ್ವಾ ಲಂಚ್ ನೀನೇ ಕೊಡಿಸು.
ನೀನು ಸೈಲೆಂಟ್ ಆಗಿ ಇರ್ತೀನಿ ಅಂದ್ರೆ ಲಂಚ್ ಅಲ್ಲ ನೈಟ್ ಎಣ್ಣೆ ಕೂಡ ನಾನೆ ಕೊಡಿಸ್ತೀನಿ ಅಂತ ಮೆಲ್ಲಗೆ ಹೇಳಿದೆ.
ಭುವನ್ ಎಣ್ಣೆ ಹೆಸರನ್ನ ಕೇಳಿ, ಫುಲ್ ಖುಷಿಯಾಗಿ ಮಹಾಪ್ರಭು ಈ ಮಾತು ಹೇಳಿದ್ರಿ ಅಲ್ವಾ ಅ ಮಾತಿನ ಮೇಲೆ ಇರಿ ಸಾಕು, ಇನ್ಮೇಲೆ ನಿಮ್ ಹತ್ತಿರ ಏನು ಮಾತಾಡಲ್ಲ ಯಾರಿಗೂ ನಿಮ್ ಬಗ್ಗೆ ಏನು ಹೇಳೋದಿಲ್ಲ. ಅಂತ ಭುವನ್ ಹೇಳಿದ.
ಅಕಿರಾ ಶಿಲ್ಪಾ ಇಬ್ಬರು ನನ್ನ ಗುರಾಯಿಸಿ ಕೊಂಡೆ ಕೆಫೆಟೇರಿಯಾ ಒಳಗೆ ಹೋದ್ರು. ನಾನು ಭುವನ್ ಇಬ್ಬರು ನಿಧಾನವಾಗಿ ಹೋಗಿ ಲಂಚ್ ಮಾಡಿಕೊಂಡು ಹೊರಗೆ ಬಂದು ಒಂದೊಂದು ಸಿಗರೇಟ್ ಹೊಡೆದು ಆಫೀಸ್ ಗೆ ಹೊದ್ವಿ...
ಅಕಿರಾ ಶಿಲ್ಪಾ ಇಬ್ಬರು ನನ್ನ ನೋಡಿ ಸ್ವಲ್ಪ ಕೋಪ ಮಾಡಿಕೊಂಡು ವರ್ಕ್ ಮಾಡೋಕೆ ಶುರು ಮಾಡಿದ್ರು.
ನಾನು ಈ ಕೋಪಕ್ಕೆ ಬಲಿ ಆಗದೆ ಇರೋ ಹಾಗೇ ನೋಡ್ಕೋ ದೇವ್ರೇ ಅಂತ ಬೇಡಿಕೊಂಡು ವರ್ಕ್ ಮಾಡೋಕೆ ಶುರು ಮಾಡಿದೆ..
ಸಂಜೆ ಆಫೀಸ್ ಮುಗಿಯೋ ಟೈಮ್ ಅಲ್ಲಿ ಮಾಡಿರೋ ವರ್ಕ್ ಬಗ್ಗೆ ಶಿಲ್ಪಾ ಗೆ ಎಲ್ಲಾ ಹೇಳಿ, ಅವಳು ಓಕೆ ಅಂತ ಹೇಳಿದ ಮೇಲೆ ಲ್ಯಾಪ್ ಕ್ಲೋಸ್ ಮಾಡಿ ಲಾಗ್ ಔಟ್ ಮಾಡಿ ಆಫೀಸ್ ನಿಂದ ಹೊರಗೆ ಬಂದೆ. ಬರ್ತಾ ಇದ್ದಾ ಹಾಗೇ ಭುವನ್ ಕಾಲ್ ಮಾಡಿದ. ಮನೆಗೆ ಹೋಗಿ ಫ್ರೆಷ್ ಅಪ್ ಆಗಿ ಬಂದು ಕಾಲ್ ಮಾಡ್ತೀನಿ ಅಂತ ಹೇಳಿ ನನ್ನ ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ ಹೊರಟೆ.
ಮನೆ ಹತ್ತಿರ ಬಂದು ಬೈಕ್ ನಿಲ್ಲಿಸಿ, ಮನೆ ಒಳಗೆ ಹೋಗಿ ಸೋಫಾ ಮೇಲೆ ಆಫೀಸ್ ಬ್ಯಾಗ್ ನಾ ಬಿಸಾಕಿ, ವಸುಮತಿ ಕಾಫಿ ಅಂತ ಕೂಗಿದೆ, ರೂಮ್ ಅಲ್ಲಿ ಬಟ್ಟೆ ನಾ ಫೋಲ್ಡ್ ಮಾಡ್ತಾ ಇದ್ದಾ ಅಮ್ಮ ಹೊರಗೆ ಬರ್ತಾ, ದಿನ ನಿಂದು ಇದೆ ಆಯ್ತೋ ಬರೋದು ಆಫೀಸ್ ಬ್ಯಾಗ್ ನಾ ಎಲ್ಲಿ ಅಂದ್ರೆ ಅಲ್ಲಿ ಬಿಸಾಕೋದು ಕಾಫಿ ಅಂತ ಕೂಗೋದು, ಅಂತ ಬೈಕೊಂಡು ಆಫೀಸ್ ಬ್ಯಾಗ್ ನಾ ಸೋಫಾ ಮೇಲಿಂದ ತೆಗೆದು ಶೇಲ್ಫ್ ಅಲ್ಲಿ ಇಟ್ಟು, ಹೋಗಿ ಫ್ರೆಷ್ ಅಪ್ ಆಗಿ ಡ್ರೆಸ್ ಚೇಂಜ್ ಮಾಡ್ಕೊಂಡು ಬಾ ಅಷ್ಟ್ರಲ್ಲಿ ಕಾಫಿ ರೆಡಿ ಮಾಡಿರ್ತೀನಿ ಅಂತ ಹೇಳಿ ಅಡುಗೆ ಮನೆಗೆ ಹೋದ್ರು..
ನಾನ್ ಹೋಗಿ ಫ್ರೆಷ್ ಅಪ್ ಆಗಿ ಬಂದು ಕಾಫಿ ಕುಡಿತಾ ಕೂತಿದ್ದೆ, ಅಕ್ಕ ಆಫೀಸ್ ನಿಂದ ಆಗಷ್ಟೇ ಮನೆ ಒಳಗೆ ಬರ್ತಾ ನನ್ನ ನೋಡಿ, ಮಹಾರಾಜರು ಆಗಲೇ ಬಂದು ಕಾಫಿ ಕುಡಿತಾ ಇದ್ದೀರಾ, ಅಮ್ಮ ನನಗು ಒಂದು ಕಾಫಿ ಕೊಡು ಅಷ್ಟ್ರಲ್ಲಿ ನಾನ್ ಹೋಗಿ ಫ್ರೆಷ್ ಅಪ್ ಆಗಿ ಬರ್ತೀನಿ ಅಂತ ಹೇಳಿ ರೂಮ್ ಗೆ ಹೋದಳು.
ಅಮ್ಮಅಡುಗೆ ಮನೆಗೆ ಹೋಗಿದೆ, ನಾನು ಕಾಫಿ ನಾ ಕುಡಿದು ಬೈಕ್ ಕೀ ತೆಗೆದುಕೊಂಡು ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಟು ಹೋದೆ.. ಕಾರಣ ಏನು ಅಂದ್ರೆ ಅಕ್ಕ ಇದ್ದಾಗ ಏನಾದ್ರು ಬೈಕ್ ಕೀ ತಗೊಂಡೆ ಅಂದ್ರೆ ಸಾವಿರ ಪ್ರಶ್ನೆ ಕೇಳ್ತಾಳೆ ಆಮೇಲೆ ಅಪ್ಪನಿಗೆ ನನ್ನಾ ಮೇಲೆ ಫಿಟ್ಟಿಂಗ್ ಇಡ್ತಾಳೆ ಸೋ ಅದಕ್ಕೆ ಈ ಫಾಸ್ಟ್ ಎಸ್ಕೇಪ್ ಪ್ಲಾನ್... ನಾನು ಹೊರಗೆ ಹೋದ 10 ನಿಮಿಷ ಕ್ಕೆ ಅಕ್ಕ ರೂಮ್ ನಿಂದ ಹೊರಗೆ ಬಂದು ಅಮ್ಮ ಅಂತ ಕರೀತಾಳೆ, ಅಮ್ಮ ಅಡುಗೆ ಮನೆ ಯಿಂದ ಕಾಫಿ ಕಪ್ ಇಡಿದು ಕೊಂಡು ಹೊರಗೆ ಬರ್ತಾ, ಹ್ಮ್ ತಗೋಳೇ ಅಂತ ಕಾಫಿ ಕಪ್ ನಾ ಅಕ್ಕನಿಗೆ ಕೊಟ್ಟು ಸೋಫಾ ಮೇಲೆ ಕೂತ್ಕೋತಾರೆ. ಅಕ್ಕ ಕಾಫಿ ತೆಗೆದುಕೊಂಡು ಅಮ್ಮ ಎಲ್ಲೋದ ಇವನು ಇಷ್ಟು ಬೇಗ. ಅಂತ ಹೇಳಿ ಇನ್ನೊಂದು ಸೋಫಾದಲ್ಲಿ ಕೂತ್ಕೋತಾಳೆ.
ಇನ್ನೇಲಿಗೆ ಹೋಗಿರ್ತಾನೆ ಫ್ರೆಂಡ್ಸ್ ನಾ ಮೀಟ್ ಮಾಡಿ ಊರೆಲ್ಲ ಸುತ್ತಾಡಿ ಬರ್ತಾನೇ. ಅಂತ ಅಮ್ಮ ಹೇಳ್ತಾರೆ. ಅಮ್ಮ ಏನ್ ಅಮ್ಮ ನೀನು ಇವಾಗಲಾದ್ರೂ ಸ್ವಲ್ಪ ಸರಿಯಾಗಿ ಇರೋ ಅಂತ ಹೇಳೋಕೆ ಆಗಲ್ವಾ ನೀನು, ಇಷ್ಟು ದಿನ ಟ್ರೈನಿಂಗ್ ಇತ್ತು, ಪರ್ವಾಗಿಲ್ಲ ಇವಾಗ ಅವನು ಒಂದು ಪ್ರಾಜೆಕ್ಟ್ ಟೀಂ ಅಲ್ಲಿ ಇದ್ದಾನೆ, ವರ್ಕ್ ಬಗ್ಗೆ ತಿಳ್ಕೊಬೇಕು ತಾನೇ, ಇವನು ವರ್ಕ್ ಅಲ್ಲಿ ಇಂಪ್ರೂವ್ ಆಗಿ ವರ್ಕ್ ಪ್ರೋಗ್ರೆಸ್ ತೋರಿಸಿದ್ರೆನೆ ಅಲ್ವಾ ಜಾಬ್ ಗಟ್ಟಿಯಾಗಿ ಇರುತ್ತೆ, ಪರ್ಫಾರ್ಮೆನ್ಸ್ ಇಲ್ಲಾ ಅಂದ್ರೆ 3 ದಿನಕ್ಕೆ ಗೆಟ್ ಔಟ್ ಅಂತಾರೆ ಅಂತ ಅಕ್ಕ ಹೇಳ್ತಾಳೆ. ನೋಡೇ ನೀನೇನು ಅವನ ಬಗ್ಗೆ ತಲೆ ಕೆಡಸಿ ಕೊಳ್ಳಬೇಡ ನೀನ್ ಕಾಫಿ ಕುಡಿ ಅಂತ ಅಮ್ಮ ಹೇಳಿದ್ಲು.
ಮನೆಯಿಂದ ಸೀದಾ ನಮ್ ಅಡ್ಡಕ್ಕೆ ಬಂದು ಭುವನ್ ಗು ವಿಜಿ ಗು ಕಾಲ್ ಮಾಡಿ ಅಡ್ಡಕ್ಕೆ ಬರೋಕೆ ಹೇಳ್ದೆ. 20 ನಿಮಿಷದಲ್ಲಿ ಇಬ್ಬರು ಬಂದರು.
ವಿಜಿ,, ಏನ್ ಮಗ ಟೀಂ ಅಲ್ಲಿ ಜಾಯಿನ್ ಅದೇ ಅಂತೇ ಹುಡ್ಗಿರು ಹೇಗಿದ್ದಾರೆ ಮಗ ಅಂತ ಕೇಳ್ದ.
ಭುವನ್,, ನಾನ್ ಕೂಡ ಅದನ್ನೇ ಕೇಳ್ದೆ ಮಗ ಸೈಲೆಂಟ್ ಆಗಿ ಇರೋ ಅಂತ ಹೇಳಿ ಬಿಟ್ಟ. ವಿಜಿ, ಮಾತಾಡ್ತಾ ಯಾಕ್ ಮಗ ಏನಾಯ್ತು ನಿಮ್ ಟೀಂ ಅಲ್ಲಿ ಹುಡುಗೀರು ಚೆನ್ನಾಗಿ ಇಲ್ವಾ ಹೇಗೆ ಅಂತ ನನ್ನ ಕೇಳ್ದ. ಅಯ್ಯೋ ಸುಮ್ನೆ ಇರೋ ಇಬ್ರು ಹುಡುಗೀರ ಚಿಂತೆ ನಿಮಗೆ, ಭುವನ್ ಯಾಕ್ ಮಗ ಹಾಗೇ ಮಾತಾಡ್ತಾ ಇದ್ದಿಯಾ ಏನಾಯ್ತು ಅಂತ ನನ್ನ ಕೇಳ್ದ, ಏನಾಯ್ತ ಲೋ ನನ್ನ ಮಗನೆ ನನ್ನ ತಗೊಂಡು ಹೋಗಿ ಅ ಅಕಿರಾ ಟೀಂ ಅಲ್ಲಿ ಹಾಕಿದ್ದಾರೆ, ಅದು ಅಲ್ಲದೆ ಮಧ್ಯಾಹ್ನ ನೀನ್ ಮಾತಾಡಿದ್ದನ್ನ ಅವರು ಪಕ್ಕದಲ್ಲೇ ನಿಂತು ಕೇಳಿಸಿಕೊಂಡ್ರು, ಡಬ್ಬ ನನ್ನ ಮಗ ನೀನು, ಅವನು ಹೇಗೆ ನೋಡ್ತಾ ಇದ್ರು ಅಂದ್ರೆ ಅವರಿಗೆ ಏನಾದ್ರು ಸಿಕ್ಕಿದ್ದಿದ್ರೆ ಅಲ್ಲೇ ನನ್ನ ಸಮಾಧಿ ಮಾಡ್ತಾ ಇದ್ರು.. ನಾನು ಅಕಿರಾ ಟೀಂ ಅಂತ ಕೇಳಿದ್ದೆ ಭುವನ್ ಗೆ ವಿಜಿ ಗೆ ನಗು ನಾ ತಡಕೊಳ್ಳೋಕೆ ಆಗಲಿಲ್ಲ ಅಷ್ಟು ಜೋರಾಗಿ ನಗೋಕೆ ಶುರು ಮಾಡಿದ್ರು. ಭುವನ್ ನಗ್ತಾ ಹ್ಹ ಹ್ಹ ಹ್ಹ ಏನ್ ಮಗ ,,,,,, ಏನ್ ಹೇಳ್ದೆ,,,, ನೀನು,,,, ಅಕಿರಾ ಟೀಂ ಅ,, ಸತ್ತೇ ಮಗನೆ ನೀನು,, ಅದಕ್ಕೆ ನಾ ನಾನ್ ಕೇಳ್ತಾ ಇದ್ರು ಸೈಲೆಂಟ್ ಆಗಿ ಇದ್ದಿದ್ದು ನೀನು ಪಾಪ ಕಣೋ ನೀನು.,, ವಿಜಿ,, ನಗ್ತಾ ಇರೋವ್ನು, ನಗುನ ನಿಲ್ಲಿಸಿ ಅಯ್ಯೋ ಅಷ್ಟೇ ನಾ ಬಿಡೋ ಮಗ ನೀನ್ ವರ್ಕ್ ನೀನ್ ಮಾಡ್ಕೊಂಡು ಹೋಗು, ಅವಳೇ ಸುಮ್ನೆ ಇದ್ದು ಬಿಡ್ತಾಳೆ, ಅದಕೆಲ್ಲಾ ಬೇಜಾರ್ ಮಾಡ್ಕೋ ಬೇಡ, ನಡಿ ಬೈಕ್ ಸ್ಟಾರ್ಟ್ ಮಾಡು ಹೋಗಿ ಚಿಲ್ ಆಗಿ ಎರಡು ಬಿಯರ್ ಹಾಕಿದ್ರೆ ಎಲ್ಲಾ ಸರಿ ಹೋಗುತ್ತೆ ಅಂತ ಹೇಳ್ದ.
ಮೂರು ಜನ ಬೈಕ್ ಅಲ್ಲಿ ಬಾರ್ ಗೆ ಹೊದ್ವಿ.. ಮೂರು ಜನ ಎರಡೆರಡು ಬಿಯರ್ ಹಾಕಿಕೊಂಡು ಸ್ವಲ್ಪ ರಿಲ್ಯಾಕ್ಸ್ ಆಗಿ ರಾತ್ರಿ 10 ಗಂಟೆಗೆ ಮನೆ ಕಡೆಗೆ ಹೊರಟ್ವಿ.
ನಾನು ಮನೆಗೆ ಬರೋ ಅಷ್ಟ್ರಲ್ಲಿ ಅಪ್ಪ ಮಲಗಿದ್ರು ಅಕ್ಕ ರೂಮ್ ಅಲ್ಲಿ ಇದ್ರು. ಅಮ್ಮ ಅಡುಗೆ ಮನೆ ಕ್ಲೀನ್ ಮಾಡ್ತಾ ಇದ್ರು. ಸೈಲೆಂಟ್ ಆಗಿ ಅಡುಗೆ ಮನೆಗೆ ಹೋಗಿ ಊಟ ಹಾಕಿಕೊಂಡು ತಿನ್ನೋಕೆ ಶುರು ಮಾಡಿದೆ. ಅಮ್ಮ ಯಾವಾಗಲು ಬೈಯ್ಯೋ ತರ ಬೈಯ್ಯೋಕೆ ಶುರು ಮಾಡಿದ್ರು. ನಾನು ಅಮ್ಮನ ಬೈಗುಳ ನಾ ಮ್ಯೂಸಿಕ್ ತರ ಎಂಜಾಯ್ ಮಾಡ್ಕೊಂಡು ಊಟ ಮುಗಿಸಿ ಪ್ಲೇಟ್ ನಾ ವಾಶ್ ಮಾಡಿ ಅಮ್ಮನಿಗೆ ಗುಡ್ ನೈಟ್ ಹೇಳಿ, ಬಂದು ರೂಮ್ ಅಲ್ಲಿ ಬಿದ್ಕೊಂಡೆ... ಬಿಯರ್ ಗೆ ಒಳ್ಳೆ ನಿದ್ದೆ ಬಂತು...
***************************************
P S