Mahi - 9 in Kannada Love Stories by S Pr books and stories PDF | ಮಹಿ - 9

The Author
Featured Books
  • ಮರು ಹುಟ್ಟು 3

    ಅಪರಿಚಿತ ಜಗತ್ತಿಗೆ ಪ್ರವೇಶ (ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ - ಸಣ್...

  • ಮಹಿ - 9

    ಮಹಿ ಫಂಕ್ಷನ್ ಯಿಂದ ಹೊರಗಡೆ ಹೋದಮೇಲೆ ಶಿಲ್ಪಾ ನೋಡಿದ ಅಕಿರಾ ಮಹಿ ನಮ್ ಹ...

  • ಪ್ರೀತಿ ಮಾಡುವುದರಲ್ಲಿ ತಪ್ಪೇನಿದೆ?

    ಆಕಾಶ್ ಮತ್ತು ಅಪರ್ಣಾ, ಅವರಿಬ್ಬರ ಬದುಕು ಭಿನ್ನ ಹಾದಿಯಲ್ಲಿ ಸಾಗುತ್ತಿತ...

  • ಮರು ಹುಟ್ಟು 2

    ಸಾಲ ಮತ್ತು ಒಂಟಿತನ (ಇಂಟೀರಿಯರ್ - ಅನಿಕಾಳ ಮನೆ)ಅವಿನಾಶ್‌ ಮೋಸ ಮಾಡಿ ಹ...

  • ಮಹಿ - 8

     ಅಕಿರಾ ಶಿಲ್ಪಾ ಹತ್ತಿರ ಹಾಗೇ ಮಾತಾಡಿದ್ರು, ವಿನೋದ್ ಮಾತಾಡಿದ ಪ್ರತಿಯೊ...

Categories
Share

ಮಹಿ - 9

ಮಹಿ ಫಂಕ್ಷನ್ ಯಿಂದ ಹೊರಗಡೆ ಹೋದಮೇಲೆ 

ಶಿಲ್ಪಾ ನೋಡಿದ ಅಕಿರಾ ಮಹಿ ನಮ್ ಹತ್ತಿರ ಎಷ್ಟು ಸುಳ್ಳು ಹೇಳಿದ ಅಂತ ಆದ್ರೂ ಅವನನ್ನ ಮೆಚ್ಚಿಕೋ ಬೇಕು ಕಣೆ ಇಷ್ಟೆಲ್ಲ ಅಸ್ತಿ ಪಾಸ್ತಿ ಇದ್ರು ಕೂಡ ಚೂರು ಅಹಂ ಇಲ್ಲಾ ದುರಂಕಾರ ಇಲ್ಲಾ ಇದ್ರು ಇಲ್ಲದೆ ಹಾಗೇ ಇದ್ದಾನೆ, ಸೀರಿಯಸ್ಲಿ ನನಗೋಸ್ಕರ ನನ್ನ ಅತ್ತೆ ಮಗ ಏನಾದ್ರು ಇಲ್ಲಾ ಅಂದಿದ್ರೆ, ಅಂತ ಮಾತಾಡೋವಾಗ ಮಧ್ಯ ದಲ್ಲಿ ಅಕಿರಾ ಶಿಲ್ಪಾ ನಾ ಕೋಪದಿಂದ ನೋಡ್ತಾಳೆ, ಶಿಲ್ಪಾ ಹಲೋ ನಾನ್ ಹೇಳಿದ್ದು ಇಲ್ಲಾ ಅಂದಿದ್ರೆ ಅಂತ ಓಕೆ ಅಷ್ಟಕ್ಕೇ ನೀನೇನು ಈ ಲುಕ್ ಕೊಡಬೇಡ ಈ ಲುಕ್ ನಾ ಕೊಡೊ ಬದಲು ಹೋಗಿ ಅವನ ಹತ್ತಿರ ಮಾತಾಡು ಮನಸಲ್ಲಿ ಇರೋ ವಿಷಯ ನಾ ಹೇಳು ಅಂತ ಹೇಳ್ತಾಳೆ.  ಅಕಿರಾ ಮುಖ ನಾ ಚಿಕ್ಕದು ಮಾಡಿಕೊಂಡು ಶಿಲ್ಪಾ ಳ ಕೈ ಇಡ್ಕೊಂಡು ಭಯ ಆಗ್ತಾ ಇದೆ ಕಣೆ, ಎಲ್ಲಿ ನನ್ನ ಪ್ರೀತಿ ನಾ ಹೇಳಿದ್ರೆ ಈ ಹಣ ಅಸ್ತಿ ನೋಡಿ ಹೇಳಿದ ಅಂತ ಅಂದ್ರೆ. ಅಕಿರಾ ಮಾತಿಗೆ ಶಿಲ್ಪಾ ಲೇ ಮಹಿ ಅಷ್ಟು ಕೆಳ ಮಟ್ಟಕ್ಕೆ ಯೋಚ್ನೆ ಮಾಡೋವ್ನು ಅಲ್ಲ ನಿನ್ ಹೋಗಿ ನಿನ್ನ ಪ್ರೀತಿ ವಿಷಯ ನಾ ಹೇಳು, ಅವನ ಅಭಿಪ್ರಾಯ ಕೇಳು ಅದು ಬಿಟ್ಟು ನಿನ್ ಹೀಗೆ ಯೋಚ್ನೆ ಮಾಡಿದ್ರೆ ತುಂಬಾ ಕಷ್ಟ ಆಗುತ್ತೆ ಹೋಗಿ ಹೇಳು ಅಂತ ಸ್ವಲ್ಪ ಧೈರ್ಯ ಹೇಳಿ ಕಳಿಸ್ತಾಳೆ. ಅಕಿರಾ ಸ್ವಲ್ಪ ಧೈರ್ಯ ಮಾಡಿಕೊಂಡು ಹೇಳೋಣ ಅಂತ ನಿರ್ಧಾರ ಮಾಡಿಕೊಂಡು ಎದ್ದು ಹೋಗೋಕೆ ಹೋಗ್ತಾಳೆ, ಅಷ್ಟರಲ್ಲಿ ಅವಳ ಮೊಬೈಲ್ ರಿಂಗ್ ಆಗುತ್ತೆ, ಅಕಿರಾ ಮೊಬೈಲ್ ತೆಗೆದುಕೊಂಡು ನೋಡ್ತಾಳೆ ಮನೆ ಯಿಂದ ಕಾಲ್, ಪಿಕ್ ಮಾಡಿ ಹೇಳೋ ಅಮ್ಮ ಹೇಳು ಅಂತ ಹೇಳ್ತಾಳೆ. ಅಕಿರಾ ಅವರ ಅಮ್ಮ ಅಕಿರಾ ಎಲ್ಲಿದ್ದೀಯ ಬೇಗ ಮನೆಗೆ ಬಾ ಅಂತ ಹೇಳ್ತಾರೆ. ಅಕಿರಾ ಅಮ್ಮನ ಮಾತಿಗೆ ಸ್ವಲ್ಪ ಗಾಬರಿ ಆಗಿ ಅಮ್ಮ ಏನಾಯ್ತು ಅಂತ ಕೇಳ್ತಾಳೆ. ಅಕಿರಾ ಅವರ ಅಮ್ಮ ಮಾತಾಡ್ತಾ ಅದೆಲ್ಲಾ ಕಾಲ್ ಅಲ್ಲಿ ಹೇಳೋಕೆ ಆಗಲ್ಲಾ ನಿನ್ ಬೇಗ ಮನೆಗೆ ಬಾ ತಾತ ಬಂದಿದ್ದಾರೆ ಅಂತ ಹೇಳ್ತಾರೆ. ಅಕಿರಾ ಶಾಕ್ ಆಗಿ ಏನು ತಾತ ಬಂದಿದ್ದಾರಾ ಬಂದೆ ಅಂತ ಹೇಳಿ ಕಾಲ್ ಕಟ್ ಮಾಡಿ. ಶಿಲ್ಪಾ ಹತ್ತಿರ ಸಾರೀ ಕಣೆ ಮನೆಗೆ ತಾತ ಬಂದಿದ್ದಾರೆ ಅಂತೇ ಅಮ್ಮ ಈಗ್ಲೇ ಬರೋಕೆ ಹೇಳಿದ್ರು ನಾನ್ ಹೋಗ್ತೀನಿ ನೀನು ಫಂಕ್ಷನ್ ಮುಗಿಸಿಕೊಂಡು ಬಾ ಅಂತ ಹೇಳಿ ಅವಳ ಮಾತಿಗೂ ಕಾಯದೆ ಅಲ್ಲಿಂದ ಹೊರಟು ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ ಹೊರಟು ಹೋಗ್ತಾಳೆ..

  ಊಟ ಬಡಿಸ್ತಾ ಇದ್ದವರಿಗೆ ಯಾರ್ ಯಾರಿಗೆ ಏನೇನ್ ಬೇಕೋ ಸರಿಯಾಗಿ ನೋಡ್ಕೊಳ್ಳಿ ಅಂತ ಊಟ ಬಡಿಸ್ತಾ ಇದ್ದವರಿಗೆ ಹೇಳಿ ಅಲ್ಲಿಂದ ಹೊರಟು ಮನೆ ಒಳಗೆ ಬಂದೆ, ಶಿಲ್ಪಾ ಒಬ್ಬಳೇ ಕೂತಿರೋದನ್ನ ನೋಡಿ ಹೋಗಿ ಅವಳ ಹತ್ತಿರ ಎಲ್ಲೇ ನಿನ್ನ ಫ್ರೆಂಡ್, ಊಟ ಮಾಡದೇ ಕೂತಿದ್ದೀರಾ ಅಂತ ಕೇಳ್ದೆ.  ಶಿಲ್ಪಾ ಮಾತಾಡ್ತಾ ಇಲ್ಲಾ ಕಣೋ ಮನೆ ಯಿಂದ ಕಾಲ್ ಬಂತು ಅಂತ ಹೇಳಿ ಹೊರಟು ಹೋದಳು ಅಂತ ಹೇಳಿದ್ಲು. ಏನು ಹೊರಟು ಹೋದ್ಲ ಅಷ್ಟು ಅರ್ಜೆಂಟ್ ಏನ್ ಇತ್ತು ಊಟ ಮಾಡ್ಕೊಂಡು ಹೋಗಬಹುದಿತ್ತು ಅಲ್ವಾ ಅಂತ ಕೇಳ್ದೆ.  ಶಿಲ್ಪಾ,,, ಇಲ್ಲಾ ಕಣೋ ಅವರ ಮನೆಗೆ ಅವರ ತಾತ ಬಂದಿದ್ದಾರೆ ಅಂತೆ ಅವರ ಅಮ್ಮ ಕಾಲ್ ಮಾಡಿ ಬೇಗ ಬರೋಕೆ ಹೇಳಿದ್ರು ಅದಕ್ಕೆ ಹೋದ್ಲು ಅಂತ ಹೇಳ್ತಾಳೆ. ಸರಿ ಒಬ್ಳೆ ಕೂತು ಏನ್ ಮಾಡ್ತಿಯಾ ಬಾ ನನ್ನ ಜೊತೆಗೆ ಅಂತ ಹೇಳಿ  ಶಿಲ್ಪಾ ನಾ ಅಮ್ಮನ ಹತ್ತಿರ ಕರ್ಕೊಂಡು ಹೋಗಿ ಪರಿಚಯ ಮಾಡಿಸಿದೆ.  ಸ್ವಲ್ಪ ಹೊತ್ತಿಗೆ ಫಂಕ್ಷನ್ ಎಲ್ಲಾ ಮುಗಿತು ಬಂದ ಗೆಸ್ಟ್ ಗಳೆಲ್ಲ ಊಟ ಮಾಡಿಕೊಂಡು ಹೋದರು, ನಂತರ ಫ್ಯಾಮಿಲಿ ಅವರೆಲ್ಲಾ ಕೂತು ಊಟ ಮಾಡಿದ್ರು, ನಂತರ ಫ್ರೆಂಡ್ಸ್ ಜೊತೆಗೆ ಕೂತು ನಾನು ಊಟ ಮಾಡಿದೆ. ನಂತ್ರ ಅಡುಗೆಯವರಿಗೆ ಊಟ ಬಡಿಸ್ತಾ ಇದ್ದವರಿಗೆ ನಾನು ನನ್ನ ಫ್ರೆಂಡ್ಸ್ ಅವರಿಗೆ ಊಟ ಮಾಡೋಕೆ ಹೇಳಿ ಅವರಿಗೆ ಊಟ ಬಡಿಸಿದ್ವಿ.  

ಎಲ್ಲಾ ಮುಗಿದ ಮೇಲೆ ಮನೆ ಒಳಗೆ ಬಂದೆ, ಎಲ್ಲರೂ ಕೂತು ಮಾತಾಡ್ತಾ ಇದ್ರು. ಶ್ವೇತಾ ನನ್ನ ನೋಡಿ ಕೂತಿದ್ದವಳು ಎದ್ದು ನನ್ನ ಹತ್ತಿರ ಬಂದು ಅಪ್ಪಿಕೊಂಡು ಥ್ಯಾಂಕ್ಸ್ ಕಣೋ ತುಂಬಾ ಖುಷಿ ಆಗ್ತಾ ಇದೆ ಅಂತ ಅವಳ ಖುಷಿ ನಾ ವ್ಯಕ್ತ ಪಡಿಸಿದ್ಲು. ಆಯ್ತ ನಿನ್ ಹೇಳಿದ್ದು ಇವಾಗ ನನ್ನ ಬಿಟ್ರೆ ಶಿಲ್ಪಾ ನಾ ಹೋಗಿ ಅವರ ಮನೆ ಹತ್ತಿರ ಡ್ರಾಪ್ ಮಾಡಿ ಬರ್ತೀನಿ ಅಂತ ಹೇಳ್ದೆ. ಶ್ವೇತಾ ಸರಿ ಅಂತ ಹೇಳಿ ವಾಪಸ್ಸು ಹೋಗಿ ಅವಳ ಪ್ಲೇಸ್ ಅಲ್ಲಿ ಕುತ್ಕೊಂಡ್ಲು. ನಾನು ಶಿಲ್ಪಾ ಗೆ ಬಾ ಮನೆ ಹತ್ತಿರ ಡ್ರಾಪ್ ಮಾಡ್ತೀನಿ ಅಂತ ಹೇಳ್ದೆ. ಶಿಲ್ಪಾ ಪರ್ವಾಗಿಲ್ಲ ಕಣೋ ಕ್ಯಾಬ್ ಮಾಡ್ಕೊಂಡ್ ಹೋಗ್ತೀನಿ ಅಂತ ಹೇಳಿದ್ಲು. ನಾನು ಕ್ಯಾಬ್ ಗೆ ಕೊಡೊ ದುಡ್ಡನ್ನೇ ನನಗೆ ಕೊಡು ಬಾ ಅಂತ ಹೇಳಿ ಹೊರಗೆ ಹೋದೆ. ಶಿಲ್ಪಾ ಶ್ವೇತಾ ನಾ ನೋಡಿ ಬೈ ಹೇಳಿ ಎದ್ದು ಹೊರಡೋಕೆ ನಿಲ್ತಾಳೆ. ಅಮ್ಮ ಮಾತಾಡ್ತಾ ಶಿಲ್ಪಾ  ಏನು ಹಾಗೇ ಹೋಗ್ತಿಯ ಇರು ಅಂತ ಹೇಳಿ  ಮನೆಗೆ ಬಂದ    ಹೆಣ್ಣುಮಕ್ಕಳಿಗೆ ಕೊಡೊ ಗೌರವ ನಾ ಕೊಟ್ಟು  ಇನ್ಮೇಲೆ ಅವಾಗವಾಗ ಬರ್ತಾ ಇರು ಅಂತ ಹೇಳಿ ಕಳಿಸ್ತಾರೆ. ಶಿಲ್ಪಾ ಎಲ್ಲರಿಗೂ ಬೈ ಹೇಳಿ ಹೊರಗೆ ಬಂದು ನನ್ನ ಹತ್ತಿರ ಬಂದು ನಡಿಯೋ ಅಂತ ಹೇಳಿದ್ಲು. ಶಿಲ್ಪಾ ನಾ ಬೈಕ್ ಅಲ್ಲಿ ಕೂರಿಸಿಕೊಂಡು ಅವರ ಮನೆ ಹತ್ತಿರ ಡ್ರಾಪ್ ಮಾಡಿ, ಥ್ಯಾಂಕ್ಸ್ ಕಣೆ ಬಂದಿದಕ್ಕೆ ಅಂತ ಹೇಳ್ದೆ. ಶಿಲ್ಪಾ ಅಲ್ವೋ ದೊಡ್ಡದಾಗಿ ನಿನ್ ಕರೆದ ಹಾಗೇ ಹೇಳ್ತಿಯ ನೋಡು, ಎಷ್ಟೇ ಆದ್ರೂ ಏನು ಇಲ್ಲಾ ನಾನ್ ಬಡವ ಅನ್ನೋ ತರ ಹೇಳಿದವನು ನಿನ್ ಅಲ್ವಾ ಅಂತ ಸ್ವಲ್ಪ ಕೋಪ ದಲ್ಲಿ ಹೇಳಿದ್ಲು. ನಾನು ಏನು ಹೇಳದೆ ಸುಮ್ನೆ ಒಂದು ಸ್ಮೈಲ್ ಮಾಡಿದೆ.  ನಾನ್   ನಗೋದನ್ನ ನೋಡಿ  ಶಿಲ್ಪಾ ಮಾಡೋದೆಲ್ಲ ಮಾಡಿ ಇವಾಗ ನಗೋದು ನೋಡು ಅಂತ ಹೊಡಿಯೋಕೆ ಬಂದ್ಲು. ನಾನು ಸುಮ್ನೆ ಇರೆ ರೋಡ್ ಅಲ್ಲಿ ಹೊಡೆದ್ರೆ ನನ್ನ ಮಾನ ಮರ್ಯಾದೆ ಹೋಗುತ್ತೆ ಅಂತ ಹೇಳ್ದೆ. ಶಿಲ್ಪಾ ಸ್ವಲ್ಪ ಕೂಲ್ ಆಗಿ, ಅದೆಲ್ಲ ಬಿಡು ನನಗೆ ಒಂದು ವಿಷಯ ಹೇಳು ಅಂತ ಕೇಳಿದ್ಲು. ನಾನು ಅ ಕೇಳು ಹೇಳ್ತಿನಿ ಅಂತ ಹೇಳ್ದೆ. ಹೌದು ಅಕಿರಾ ಬಗ್ಗೆ ನಿನ್ನ ಅಭಿಪ್ರಾಯ ಏನು ಅಂತ ಶಿಲ್ಪಾ ಕೇಳಿದ್ಲು. ನಾನ್ ಅವಳ ಮೇಲೆ ನನಗೆ ಏನ್ ಅಭಿಪ್ರಾಯ ಇರುತ್ತೆ ಏನು ಇಲ್ಲಾ ಅಂತ ಹೇಳ್ದೆ. ಶಿಲ್ಪಾ ಕೋಪದಿಂದ ಮಗನೆ ಈ ಡ್ರಾಮಾ ನೇ ಬೇಡ ನಾನ್ ಸೀರಿಯಸ್ ಆಗಿ ಕೇಳ್ತಾ ಇದ್ದೀನಿ ಅವಳ ಬಗ್ಗೆ ನಿನ್ನ ಅಭಿಪ್ರಾಯ ಏನು ಅಂತ ಮತ್ತೆ ಕೇಳಿದ್ಲು.  ನಾನ್ ಇದ್ಕೊಂಡು ಯಾಕೆ ಅಂತ ಕೇಳ್ದೆ. ಶಿಲ್ಪಾ,, ಯಾಕಂದ್ರೆ ಅವಳು ನಿನ್ನ ಲವ್ ಮಾಡ್ತಾ ಇದ್ದಾಳೆ ಅಲ್ವಾ ಅದಕ್ಕೆ ಕೇಳ್ದೆ. ನಾನ್ ಸ್ವಲ್ಪ ಶಾಕ್ ಆಗಿ ಏನು ಅಕಿರಾ ನನ್ನ ಲವ್ ಮಾಡ್ತಾ ಇದ್ದಾಳ ಏನ್ ಕಾಮಿಡಿ ಮಾಡ್ತಾ ಇದ್ದಿಯಾ ಹೇಗೆ ಅಂತ ಕೇಳ್ದೆ.

  ಶಿಲ್ಪಾ,, ಲೋ ಇಂತ ವಿಷಯ ದಲ್ಲಿ ಯಾರಾದ್ರೂ ಕಾಮಿಡಿ ಮಾಡ್ತಾರಾ, ನಿನ್ ಯಾವಾಗ ಅವಳಿಗೆ ಕಿಸ್ ಮಾಡಿಬಿಡ್ತೀನಿ ಅಂತ ಹೇಳ್ದೋ ಅವಾಗಿಂದ ಸ್ವಲ್ಪ ಡಿಸ್ಟರ್ಬ್ ಆದ್ಲು ಆಮೇಲೆ ನಿನ್ ಮೇಲೆ ಲವ್ ಮಾಡೋಕೆ ಶುರು ಮಾಡಿದ್ಲು. ನಿನಗೆ ಹೇಳೋಣ ಅಂತ ಅನ್ಕೊಂಡ್ರೆ ನೀನು ಮಿಡ್ಲ್ ಕ್ಲಾಸ್ ಪ್ರಾಬ್ಲಮ್ ಅಂತ ಇದ್ದೆ ಅಲ್ವಾ ಈ ಟೈಮ್ ಅಲ್ಲಿ ಹೇಳಿದ್ರೆ ನಿನ್ ಎಲ್ಲಿ ರಿಜೆಕ್ಟ್ ಮಾಡ್ತಿಯಾ ಅನ್ನೋ ಭಯಕ್ಕೆ ಹೇಳಿಲ್ಲ. ಇವತ್ತು ನಿನ್ ಬಗ್ಗೆ ಗೊತ್ತಾದ ಮೇಲೆ ಹೇಳೋದೇ ಬೇಡ ಅಂತ ಅನ್ಕೊಂಡ್ಲು, ನೋಡು ಬಡವ ಅಂತ ಅಂದಾಗ ಪ್ರೊಪೋಸ್ ಮಾಡಿಲ್ಲ ಇವಾಗ ಶ್ರೀಮಂತ ಅಂತ ಗೊತ್ತಾದ ಮೇಲೆ ಪ್ರೊಪೋಸ್ ಮಾಡ್ತಾ ಇದ್ದಾಳೆ ಅಂತ ನಿನ್ ಅನ್ಕೊಂಡು ಅವಳನ್ನ ಅವಳ ಪ್ರೀತಿ ನಾ ತಪ್ಪಾಗಿ ತಿಳ್ಕೋತಿಯ ಅಂತ ಭಯ ಬಿದ್ಲು. ನಾನೆ ಮಹಿ ಅ ರೀತಿ ಏನು ತಿಳ್ಕೊಳ್ಳೋದಿಲ್ಲ ಹೋಗಿ ನಿನ್ನ ಲವ್ ವಿಷಯ ನಾ ಹೇಳು ಅಂತ ಧೈರ್ಯ ಹೇಳ್ದೆ. ಬಟ್ ಅಷ್ಟರಲ್ಲಿ ಮನೆ ಯಿಂದ ಕಾಲ್ ಬಂತು ಹೊರಟು ಹೋದ್ಲು ಅಂತ ಹೇಳಿದ್ಲು. ನಾನು ಶಿಲ್ಪಾ ಹೇಳಿದ್ದನ್ನ ಕೇಳಿ ನಗ್ತಾ ಅಕಿರಾ ನನ್ನ ಲವ್ ಮಾಡೋ ವಿಷಯ ನನಗೆ ಮೊದಲೇ ಗೊತ್ತು ಅಂತ ಹೇಳ್ದೆ. ಶಿಲ್ಪಾ ಶಾಕ್ ಹಾಗಿ ಏನು ನಿನಗೆ ಮೊದಲೇ ಗೊತ್ತಾ, ಗೊತ್ತಿದ್ರು ಸುಮ್ನೆ ಇದ್ದಾ, ಅಂದ್ರೆ ನಿನಗೆ ಅಕಿರಾ ಅಂದ್ರೆ ಇಷ್ಟ ಇಲ್ವಾ ಅಂತ ಕೇಳಿದ್ಲು. ಅಕಿರಾ ಅಂದ್ರೆ ತುಂಬಾ ಇಷ್ಟನೇ ಒಳ್ಳೇ ಹುಡುಗಿ ಇಂಫ್ಯಾಕ್ಟ್ ನಿಜ ಹೇಳಬೇಕು ಅಂದ್ರೆ ಅವಳನ್ನ ಮೊದಲ ಸರಿ ನೋಡಿದಾಗಲೇ ತುಂಬಾ ಇಷ್ಟ ಆದ್ಲು, ಹೇಳೋಕೆ ಸರಿಯಾದ ಸಮಯ ಸಿಗಲಿಲ್ಲ, ಬಿಡು ಎಲ್ಲಿ ಹೋಗ್ತಾಳೆ ಜೊತೆಗೆ ಇರ್ತೀವಿ ಅಲ್ವಾ ಒಂದು ಒಳ್ಳೇ ಮೂಮೆಂಟ್ ನೋಡಿ ಹೇಳ್ತಿನಿ ಅಂತ ಹೇಳ್ದೆ.

  ಶಿಲ್ಪಾ,, ನಾನ್ ಹೇಳೋದನ್ನ ಕೇಳಿ ಖುಷಿಯಾಗಿ ಮತ್ತೆ  ಡಲ್ ಆಗಿ ಹೇಳೋ ಹಾಗಿದ್ರೆ ಇವತ್ತೇ ಹೇಳಿಬಿಡೊ,  ಯಾಕಂದ್ರೆ ನಾಳೆ ಅವಳ ಎಂಗೇಜ್ಮೆಂಟ್ ಅಂತ ಹೇಳಿದ್ಲು. ನನಗೆ ಕರೆಂಟ್ ಹೊಡೆದ ಹಾಗೇ ಆಯ್ತು, ಲೇ ಏನೇ ಹೇಳ್ತಾ ಇದ್ದಿಯಾ ಅಂತ ಕೇಳ್ದೆ.  ಹೌದು ಕಣೋ ನಿಮ್ ಮನೇಲಿ ಇದ್ದಾಗ ಅವರ ಅಮ್ಮ ಕಾಲ್ ಮಾಡಿ ಬೇಗ ಬರೋಕೆ ಹೇಳಿದ್ರು, ಹೋದಮೇಲೆ ಗೊತ್ತಾಗಿದ್ದು ಅವರ ತಾತ ವಿನೋದ್ ಜೊತೆಗೆ ಅವಳ ಮದುವೆ ಮಾಡೋಕೆ ನಿರ್ಧಾರ ಮಾಡಿದ್ದಾರೆ ಅಂತ, ಪಾಪ ಅವಳಿಗೆ ಅವರ ತಾತ ನಾ ಹತ್ತಿರ ಹೇಳೋಕೆ ಭಯ, ಅವಳಿಗೆ ಅಲ್ಲ ಅವರ ಮನೇಲಿ ಯಾರಿಗೂ ಇಲ್ಲಾ, ಅ ವಿನೋದ್ ಮೊನ್ನೆ ನಿನ್ ಬಗ್ಗೆ ಮಾತಾಡಿದಕ್ಕೆ ಇಬ್ರು ಅವನಿಗೆ ಬೈದ್ವಿ, ಅ ಕೋಪಕ್ಕೆ ಅವನು ಹೋಗಿ ಅವರ ತಾತನ ಹತ್ತಿರ ಅಕಿರಾ ನಾ ಮದುವೆ ಆಗ್ತೀನಿ ಅಂತ ಹೇಳಿದ್ದಾನೆ, ತಾತ ಕೂಡ ಒಪ್ಪಿಕೊಂಡು ಮದುವೆ ಮಾಡೋ ನಿರ್ಧಾರ ಮಾಡಿದ್ದಾರೆ, ಈ ವಿಷಯ ನಾ ಹಾಗ್ಲೇ ನಿನಗೆ ಹೇಳೋಣ ಅನ್ಕೊಂಡೆ ಬಟ್ ಎಲ್ಲರೂ ಹ್ಯಾಪಿ ಆಗಿ ಇರೋವಾಗ ಹೇಳೋದು ಸರಿ ಅಲ್ಲ ಅಂತ ಅನ್ನಿಸ್ತು  ಅದಕ್ಕೆ ಹೇಳಿಲ್ಲ. ಕಾಲ್ ಮಾಡಿ ನನಗೆ ಹೇಳಿದಾಗ ಕೂಡ ಹೇಳ್ದೆ ಮಹಿ ಹತ್ತಿರ ಮಾತಾಡು ನಿನ್ ಲವ್ ಬಗ್ಗೆ ಹೇಳು ಮನೇಲಿ ಮಾತಾಡ್ತಾನೆ ಅಂತ ಹೇಳ್ದೆ. ಬಟ್ ಅವಳಿಗೆ ಭಯ ಬಂತು ನೀನೆಲ್ಲಿ ರಿಜೆಕ್ಟ್ ಮಾಡ್ತಿಯಾ ಅಂತ. ಅದಕ್ಕೆ ಅವಳು ಬೇಡ ಕಣೆ ಹೇಳಿ ನೋವು ಪಡೋದಕ್ಕಿಂತ ಹೇಳದೆ ನನ್ನ ಪ್ರೀತಿ ನಾ ನನ್ನಲ್ಲೇ ಸಮಾಧಿ ಮಾಡ್ಕೋತಿನಿ ಅಂತ ಹೇಳಿದ್ಲು.  ತುಂಬಾ ಒಳ್ಳೇ ಹುಡುಗಿ ಕಣೋ ಪ್ಲೀಸ್ ಅವಳನ್ನ ದೂರ ಮಾಡ್ಕೋಬೇಡ ಕಣೋ ಅಂತ ಶಿಲ್ಪಾ ಹೇಳಿದ್ಲು.

  ನಾನು ಶಿಲ್ಪಾ ಗೆ ಏನು ಹೇಳದೆ ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಹೋದೆ. ಶಿಲ್ಪಾ ಮಹಿ ಮಹಿ ಅಂತ ಕರೆದ್ರು ತಿರುಗಿ ನೋಡಲಿಲ್ಲ. 20 ನಿಮಿಷ ದಲ್ಲಿ ಅಕಿರಾ ಅವರ ಮನೆ ಮುಂದೆ ಬೈಕ್ ನಿಲ್ಲಿಸಿ ಶಿಲ್ಪಾ ಗೆ ಕಾಲ್ ಮಾಡಿದೆ. ಶಿಲ್ಪಾ ಕಾಲ್ ಪಿಕ್ ಮಾಡಿ,, ಲೋ ಏನೋ ನೀನು ನಾನ್ ಕರೀತಾ ಇದ್ರು ಹಾಗೇ ಹೋಗಿಬಿಟ್ಟೆ, ಯಾಕೆ ಹೋಗಿ ಮಾತಾಡೋಕೆ ಭಯ ಆಯ್ತಾ ಅಂತ ಕೇಳಿದ್ಲು. ನಾನು ನಗ್ತಾ ಭಯ ಏನು ಇಲ್ಲಾ, ಅಕಿರಾ ಮನೆ ಹತ್ತಿರ ಇದ್ದೀನಿ ಅವಳಿಗೆ ಕಾಲ್ ಮಾಡಿ ನಾನ್ ಹೇಳೋ ವಿಷಯ ನಾ ಹೇಳು ಸಾಕು ಅಂತ ಹೇಳಿ ಶಿಲ್ಪಾ ಗೆ ವಿಷಯ ಹೇಳಿ ಕಾಲ್ ಕಟ್ ಮಾಡಿ ಹೋಗಿ ಅಕಿರಾ ಮನೆ ಡೋರ್ ಬೆಲ್ ನಾ ಹೊಡೆದೆ...

***************************************


P. S.