Mahi - 10 in Kannada Love Stories by S Pr books and stories PDF | ಮಹಿ - 10

The Author
Featured Books
  • ಮರು ಹುಟ್ಟು 4

    ಅನುಮಾನದ ಕಣ್ಣು (ಇಂಟೀರಿಯರ್ - ಕಚೇರಿ)ಆರ್ಯನ್‌ನ ಪ್ರವೇಶದ ನಂತರದ ದಿನ....

  • ಮಹಿ - 10

           ಬೈಕ್ ನಿಲ್ಲಿಸಿ ಶಿಲ್ಪಾ ಗೆ ಕಾಲ್ ಮಾಡಿ ನಾನ್ ಹೇಳಿದ ಹಾಗೇ  ಅಕ...

  • ಹಳೆಯ ಅಧ್ಯಾಯಗಳು

    ಮಂಜು ಮುಸುಕಿದ ಆ ಬೆಟ್ಟದಂಚಿನ ಊರು "ಮೋಹನಗಿರಿ". ಸುತ್ತಲೂ ದಟ್ಟವಾದ ಕಾ...

  • ಮರು ಹುಟ್ಟು 3

    ಅಪರಿಚಿತ ಜಗತ್ತಿಗೆ ಪ್ರವೇಶ (ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ - ಸಣ್...

  • ಮಹಿ - 9

    ಮಹಿ ಫಂಕ್ಷನ್ ಯಿಂದ ಹೊರಗಡೆ ಹೋದಮೇಲೆ ಶಿಲ್ಪಾ ನೋಡಿದ ಅಕಿರಾ ಮಹಿ ನಮ್ ಹ...

Categories
Share

ಮಹಿ - 10

       ಬೈಕ್ ನಿಲ್ಲಿಸಿ ಶಿಲ್ಪಾ ಗೆ ಕಾಲ್ ಮಾಡಿ ನಾನ್ ಹೇಳಿದ ಹಾಗೇ  ಅಕಿರಾ ಗೆ ಹೇಳು ಅಂತ ಹೇಳಿ ಕಾಲ್ ಕಟ್ ಮಾಡಿ ಅಕಿರಾ ಮನೆ ಡೋರ್ ಬೆಲ್ ಮಾಡಿದೆ. ಡೋರ್ ಬೆಲ್ ಮಾಡಿದ ನಿಮಿಷ ಕ್ಕೆ ಒಬ್ಬರು ಲೇಡಿ ಬಂದು ಡೋರ್ ಓಪನ್ ಮಾಡಿ, ನನ್ನ ನೋಡಿ ಯಾರ್ ನೀವು ಯಾರ್ ಬೇಕು ಅಂತ ಕೇಳಿದ್ರು. ನನ್ನ ಹೆಸರು ಮಹಿ ಅಂತ ಅಕಿರಾ ವರ್ಕ್ ಮಾಡೋ ಆಫೀಸ್ ಅಲ್ಲೇ ವರ್ಕ್ ಮಾಡೋದು ಅವರನ್ನ ಮೀಟ್ ಮಾಡೋಕೆ ಬಂದೆ ಅಂತ ಹೇಳ್ದೆ. ಹೌದ ಬನ್ನಿ ನಾನು ಅಕಿರಾ ಅವರ ತಾಯಿ ಕೋಮಲಿ  ಅಂತ ಹೇಳಿ ನನ್ನ ಒಳಗೆ ಇನ್ವೆಟ್ ಮಾಡಿದ್ರು. ನಾನು ಮನೆ ಒಳಗೆ ಹೋದೆ. ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಹಾಲ್ ಅಲ್ಲಿ 7 8 ಜನ ಕೂತಿದ್ರು ಮೋಸ್ಟ್ಲಿ ನಾಳೆ ಎಂಗೇಜ್ಮೆಂಟ್ ಬಗ್ಗೆ ಮಾತಾಡೋಕೆ ಕೂತಿದ್ದಾರೆ ಅಂತ ಅನ್ಕೊಂಡು ಒಳಗೆ ಹೋದೆ. ಅವರೆಲ್ಲಾ ನನ್ನ ನೋಡಿ ಒಬ್ಬ ವ್ಯಕ್ತಿ ಕೋಮಲಿ ಯಾರ್ ಇವರು ಅಂತ ಅವರ ಹತ್ತಿರ ಕೇಳಿದ್ರು. ಕೋಮಲಿ ಅವರು ರಿ ಇವರು ಅಕಿರಾ ಆಫೀಸ್ ಅಲ್ಲಿ ವರ್ಕ್ ಮಾಡೋವ್ರು ಮಹಿ ಅಂತ ಅಕಿರಾ ನಾ ನೋಡೋಕೆ ಬಂದಿದ್ದಾರೆ ಅಂತ ಹೇಳಿದ್ರು.  ಅ ವ್ಯಕ್ತಿ ಹೌದ ಬನ್ನಿ ಕೂತ್ಕೊಳ್ಳಿ, ನಾನು ವಿವೇಕ್   ಅಂತ ಅಕಿರಾ ಅವರ ತಂದೆ ಅಂತ ಪರಿಚಯ ಮಾಡಿಕೊಂಡರು, ನಾನು ಅವರಿಗೆ ನಮಸ್ಕಾರ ಮಾಡಿ ಕುತ್ಕೊಂಡೆ. ಕೋಮಲಿ ಅವರು ಇರಿ ಅಕಿರಾ ನಾ ಕರೀತೀನಿ ಅಂತ ಹೇಳಿ ಸ್ಟೆಪ್ಸ್ ಹತ್ತಿ ಅಕಿರಾ ರೂಮ್ ಕಡೆಗೆ ಹೋದ್ರು. ವಿವೇಕ್ ಅವರು ಮಾತಾಡ್ತಾ ಹೇಳಿ ಏನ್ ತಗೋತೀರಾ ಕಾಫಿ ಟೀ ಅಂತ ತುಂಬಾ ವಿನಾಯವಾಗಿ ಕೇಳಿದ್ರು. ಏನು ಬೇಡ ಸರ್ ಮನೇಲಿ ಫಂಕ್ಷನ್ ಇತ್ತು ಅದೆಲ್ಲಾ ಮುಗಿಸಿಕೊಂಡು ಈಗಷ್ಟೇ ಊಟ ಮಾಡಿಕೊಂಡು ಬಂದೆ ಅಂತ ಹೇಳಿದೆ. ವಿವೇಕ್ ಅವರು ಮಾತಾಡ್ತಾ ಹಾಗೇ ಹೇಳಿದ್ರೆ ಹೇಗೆ ಮನೆಗೆ ಬಂದ ಅತಿಥಿ ನೀವು ಏನಾದ್ರು ತಗೋಬೇಕು ಅಂತ ಹೇಳಿ ಒಬ್ಬ ಹೆಂಗಸಿಗೆ ಜೂಸ್ ತರೋಕೆ ಹೇಳ್ತಾರೆ. ನಾನು ಸರ್ ನಾನು ಮೊದಲು ಬಂದ ವಿಷಯ ಹೇಳಿ ಬಿಡ್ತೀನಿ ಆಮೇಲೆ ನಿಮಗೆ ಅತಿಥಿ ಸತ್ಕಾರ ಮಾಡಬೇಕೋ ಬೇಡ್ವೊ ಅನ್ನೋದನ್ನ ನಿರ್ಧಾರ ಮಾಡಿ ಜೂಸ್ ತರೋಕೆ ಹೇಳಿ ಅಂತ ಹೇಳ್ದೆ. ನನ್ನ ಮಾತಿಗೆ ಎಲ್ಲರೂ ವಿಚಿತ್ರ ವಾಗಿ ನನ್ನ ನೋಡೋಕೆ ಶುರು ಮಾಡಿದ್ರು. ವಿವೇಕ್ ಅವರು ಸ್ವಲ್ಪ ಸೀರಿಯಸ್ ಆಗಿ ನೋಡ್ತಾ ಹೇಳಿ ಏನ್ ವಿಷಯ ಅಂತ ಕೇಳಿದ್ರು. 

  ಸರ್ ನನ್ನ ಹೆಸರು ಮಹಿ ಅಂತ ತಂದೆ ಹೆಸರು ರಾಮ ರಾವ್ ಅಂತ ಸೆಂಟ್ರಲ್ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಚೀಫ್ ಇಂಜಿನಿಯರ್ ಆಗಿ ವರ್ಕ್ ಮಾಡ್ತಾ ಇದ್ದಾರೆ, ಅಮ್ಮ ಹೌಸ್ ವೈಫ್ ಅಕ್ಕ ನಾನ್ ವರ್ಕ್ ಮಾಡೋ ಆಫೀಸ್ ಅಲ್ಲೇ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ವರ್ಕ್ ಮಾಡ್ತಾ ಇದ್ದಾರೆ. ಅಸ್ತಿ ಪಾಸ್ತಿ ನಾ ನೋಡ್ಕೊಂಡ್ರೆ ನಮ್ ತಾತ ನಮ್ ಅಪ್ಪ ನನ್ನ ಮೊಮ್ಮಕ್ಕಳು ಕುತ್ಕೊಂಡು ತಿನ್ನೋ ಅಷ್ಟು ಮಾಡಿ ಇಟ್ಟಿದ್ದಾರೆ. ಬಟ್ ವಿಷಯ ಅದು ಅಲ್ಲ ನನ್ನ ಕಾಲೇಜ್ ಮುಗಿತ ಇದ್ದಾ ಹಾಗೇ ಅಪ್ಪನಿಗೆ ಹೇಳಿದೆ  ಈ ಅಸ್ತಿ ಪಾಸ್ತಿ ಗೆಲ್ಲ ನನ್ನ ವಾರಸುದಾರನಾಗಿ ಮಾಡಬೇಡಿ ಇನ್ಮೇಲೆ ನನಗೆ ಏನ್ ಬೇಕೋ ಅದನ್ನ ನಾನೆ ಸಂಪಾದನೆ ಮಾಡ್ಕೋತೀನಿ ಅಂತ, ಅಪ್ಪ ಕೂಡ ತುಂಬಾ ಖುಷಿ ಆದ್ರೂ. ಅದ್ರೆ ನಾವು ಏನಾದ್ರು ಸಾಧಿಸ ಬೇಕು ಅಂತ ಅಂದಾಗ ಈ ಕಾಂಪಿಟೇಷನ್ ವರ್ಲ್ಡ್ ಅಲ್ಲಿ ಅಷ್ಟು ಸುಲಭ ಅಲ್ಲ ಅಂತ ನಿಮಗೂ ಗೊತ್ತು. ಇವಾಗ ಯಾರಾದ್ರೂ ಒಬ್ಬ ಹುಡುಗ ಮನೇಲಿ ಇದ್ರೆ ಮನೆಗೆ ಬಂದವರು ತಿಂದ ಹೇಗಿದ್ದೀಯ ಅಂತ ಕೇಳೋದಿಲ್ಲ, ಏನ್ ಮಾಡ್ಕೊಂಡು ಇದ್ದಿಯಾ ಅಂತ ಕೇಳ್ತಾರೆ, ಪಾಪ ನಮ್ಮಮ್ಮನಿಗೆ  ಕೇಳಿದವರಿಗೆ ಹೇಳಿ ಹೇಳಿ ಸಾಕಾಗಿ  ಲೋ ಯಾವುದಾದ್ರೂ ಒಂದು ಚಿಕ್ಕ ಕೆಲಸ ಅಂತ ಮಾಡು ನೀನು ಬಂದು ಕೇಳೋವರಿಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗೋಗಿದೆ ಅಂತ ಹೇಳಿದ್ರು. ನಮ್ ಅಕ್ಕ ಅವರ ಆಫೀಸ್ ಅಲ್ಲಿ ಒಂದು ಕೆಲಸ ಕೊಡಿಸಿದ್ರು.  ಅಲ್ಲೇ ಮೊದಲ ಸರಿ ನಿಮ್ ಮಗಳು ಅಕಿರಾ ನಾ ನೋಡಿದೆ, ನೋಡಿದ ತಕ್ಷಣ ತುಂಬಾ ಇಷ್ಟ ಆದ್ಲು, ಬಟ್ ಅವತ್ತೇ ಇಬ್ಬರಿಗೂ ಜಗಳ ಕೂಡ ಆಯ್ತು, ಇಷ್ಟು ದಿನ ಟ್ರಾವೆಲ್ ಅಲ್ಲಿ ಇಬ್ಬರಿಗೂ ಹೇಗೆ ಪ್ರೀತಿ ಆಯ್ತೋ ಗೊತ್ತಿಲ್ಲ, ನಾನು ನನಗೆ ಅಂತ ಒಂದು ಐಡೆಂಟಿ ಬಂದಮೇಲೆ ನನ್ನ ಪ್ರೀತಿ ಬಗ್ಗೆ ಹೇಳೋಣ ಅಂತ ಸುಮ್ನೆ ಇದ್ದೆ, ಅಕಿರಾ ಕೂಡ ನನ್ನ ಬಡವ ಅನ್ಕೊಂಡು ಈಗ ಇವನು ಇರೋ ಪರಿಸ್ಥಿತಿ ಅಲ್ಲಿ ಲವ್ ಮಾಡ್ತಾ ಇರೋ ವಿಷಯ ಹೇಳಿದ್ರೆ ಎಲ್ಲಿ ರಿಜೆಕ್ಟ್ ಮಾಡ್ತಾನೆ ಅಂತ ಭಯ ಬಿದ್ದು ಹೇಳೋಕೆ ಹೋಗಿಲ್ಲ. ಇವತ್ತು ಫಂಕ್ಷನ್ ಗೆ ಬಂದಾಗ ಅಲ್ಲಿ ನನ್ನ ನೋಡಿ, ಇಷ್ಟು ದೊಡ್ಡ ಶ್ರೀಮಂತ ನಾ ಮಗ ನಾನ್ ಇವಾಗ ಲವ್ ಬಗ್ಗೆ ಹೇಳಿದ್ರೆ ಎಲ್ಲಿ ನನ್ನ ತಪ್ಪಾಗಿ ತಿಳ್ಕೋತನೇ ಅಂತ ಭಯ ಬಿದ್ದು ಹೇಳೋಕೆ ಹೋಗಿಲ್ಲ. ನಾಳೆ ಅವಳಿಗೆ ಎಂಗೇಜ್ಮೆಂಟ್ ಅಂತ ಗೊತ್ತಾಯ್ತು,  ನನ್ನ ಪ್ರೀತಿ ನಾ ಹೇಳಿಕೊಳ್ಳೋಕೆ ಇವತ್ತೇ ಕೊನೆ ದಿನ ಅಂತ ಗೊತ್ತಾಯ್ತು. ಎಲ್ಲೋ ಹೊರಗಡೆ ಕರೆದು ಅವಳಿಗೆ ನನ್ನ ಪ್ರೀತಿ ಬಗ್ಗೆ ಹೇಳೋದು, ಅದನ್ನ ಯಾರಾದ್ರೂ   ನಿಮಗೆ ಪರಿಚಯ ಇರೋವ್ರು   ನೋಡಿ   ಬಂದು ನಿಮಗೆ ಹೇಳೋದು, ನೀವು ಪ್ರಶ್ನೆ ಮಾಡಿ ಕೇಳೋದು ಚೆನ್ನಾಗಿ ಇರೋದಿಲ್ಲ ಅಂತ ನಾನೆ ಬಂದು ನಿಮ್ ಮುಂದೆ ಅವಳಿಗೆ ಹೇಳೋಣ ಅಂತ ಬಂದೆ ಅಷ್ಟೇ, ಏನಪ್ಪ ಇವನು ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಇದೆ ಅಂತ ಹೇಳ್ತಾ ಇದ್ದಾನೆ ಅವಳು ಏನಾದ್ರು ಪ್ರೀತಿ ನಾ ಒಪ್ಪಿಕೊಂಡ್ರೆ ನಾಳೆ ಎಂಗೇಜ್ಮೆಂಟ್ ಆಗೋದನ್ನ ನಿಲ್ಲಿಸಿ ಬಿಡ್ತಾನಾ ಅಂತ ಭಯ ಬೀಳಬೇಡಿ. ಕೇವಲ ನನ್ನ ಪ್ರೀತಿ ನಾ ಅವಳಿಗೆ ಹೇಳಿಕೊಳ್ಳೋಣ ಅಂತ ಬಂದೆ, ಅವಳ ಉತ್ತರ ಏನೇ ಇರಲಿ ಅವಳು ಈ ಮನೇಲೆ ಇರ್ತಾಳೆ ನಿಮ್ ಮಾತನ್ನೇ ಕೇಳ್ತಾಳೆ.  ಯಾಕಂದ್ರೆ ಫ್ಯಾಮಿಲಿ ಗಿಂತ ಪ್ರೀತಿ ಏನು ದೊಡ್ಡದಲ್ಲ ಅಂತ ತಿಳ್ಕೊಂಡು ಇರೋವ್ನು ನಾನು. ಪ್ರೀತಿ ಗೋಸ್ಕರ ಅವಳಿಂದ ಅವಳ ಫ್ಯಾಮಿಲಿ ನಾ ದೂರ ಮಾಡೋ ಅಷ್ಟು ಸ್ವಾರ್ಥಿ ನಾನಲ್ಲ. ಹಾಗೇ ನನಗೆ ಪ್ರೀತಿ ನೇ ಬೇಕು ಅಂತ ಹೇಳಿ ಅವಳನ್ನ ಕರ್ಕೊಂಡು ಹೋಗಿ ಮದುವೆ ಆಗಿ ಮಹಾರಾಣಿ ಹಾಗೇ ನೋಡ್ಕತಿನಿ ಅಂತ ಹೇಳೋ ಅಷ್ಟು ಸಾಹುಕಾರ ಕೂಡ ನಾನಲ್ಲ ಸದ್ಯಕ್ಕೆ. ಸರ್ ನನಗೆ ಗೊತ್ತಿರೋ ಹಾಗೇ ಅಪ್ಪ ದುಡ್ಡಲ್ಲಿ ಸಾಧನೆ ಮಾಡಿ ಗೆದ್ದವನು ಮಗ ಮಾತ್ರ ಆಗಿರ್ತಾನೆ, ನಿಜವಾದ ಗಂಡಸು ಹಾಗಿ ಇರೋದಿಲ್ಲ ಅಂತ ನಾನ್ ನಂಬಿದ್ದೀನಿ. ಯಾಕಂದ್ರೆ ನನ್ನ ನಂಬಿ ಬರೋವ್ಳು ನಾನು ಸಂಪಾದನೆ ಮಾಡೋ 1 ರೂಪಾಯಿ ನಾ ಕೂಡ ಹೌದು ಇದು ನನ್ನ ಗಂಡನ ಸಂಪಾದನೆ ಅಂತ ಹೆಮ್ಮೆಯಿಂದ ಹೇಳ್ಕೊಬೇಕು. ಆಗಲೇ ಗಂಡಸಾಗಿ ಒಬ್ಬ ಗಂಡನಾಗಿ ಗೆದ್ದೇ ಅನ್ನೋ ನೆಮ್ಮದಿ ಇರುತ್ತೆ ನನಗು ಇರುತ್ತೆ ಅಂತ ಹೇಳಿದೆ. 


  ಎಲ್ಲರೂ ನನ್ನ ನೋಡ್ತಾ ಹಾಗೇ ಇದ್ದು ಬಿಟ್ಟರು, ಯಾರು ಏನು ಮಾತಾಡೋಕೆ ಹೋಗಲಿಲ್ಲ. ರೂಮ್ ಯಿಂದ ಬಂದಿದ್ದ ಅಕಿರಾ ಮೆಟ್ಟಿಲ ಹತ್ತಿರಾನೆ ನಿಂತು ನಾನು ಮಾತಾಡೋದನ್ನ ಕೇಳಿಸಿಕೊಂಡು ಹಾಗೇ ನಿಂತು ಬಿಟ್ಟಿದ್ದಳು. ನಾನು ಎದ್ದು ಹೋಗಿ ಅವಳ ಮುಂದೆ ನಿಂತು, ಅವಳ ಮುಖ ನೋಡಿದೆ ಕಣ್ಣಲ್ಲಿ ಕಣ್ಣೀರು ತುಂಬಿ ಕೊಂಡು ಹೊರಗೆ ಬರೋಕೆ ಕಾಯ್ತಾ ಇದೆ. ಅವಳ ಮುಖ ನಾ ನೋಡ್ತಾ ಸಾರೀ ಇಂತ ಟೈಮ್ ಅಲ್ಲಿ ಈ ತರ ವಿಷಯ ನಾ ಹೇಳ್ತಾ ಇರೋದಕ್ಕೆ, ನಿನ್ನ ನೋಡಿದ ದಿನ ನೇ ನಿನ್ ನನಗೆ ತುಂಬಾ ಇಷ್ಟ ಅದೇ,  ಈಗ ನನ್ನ ಪ್ರೀತಿ ನಾ ಹೇಳಿಕೊಳ್ದೆ ಹೋದ್ರೆ ಮತ್ತೆ ಅವಕಾಶ ಸಿಗೋದಿಲ್ಲ ಅಂತ ಗೊತ್ತಾಗಿ ಹೇಳ್ಕೋತ ಇದ್ದೀನಿ, ಐ ಲವ್ ಯು, ಈ ಪ್ರೀತಿ ಬಗ್ಗೆ ಯೋಚ್ನೆ ಬಿಟ್ಟಾಕಿ ಹ್ಯಾಪಿ ಆಗಿ ಇರು ಬೈ  ಅಂತ ಹೇಳಿ ಅಲ್ಲಿಂದ ನಡ್ಕೊಂಡು ಮೇನ್ ಡೋರ್ ಕಡೆಗೆ ಹೆಜ್ಜೆ ಇಟ್ಕೊಂಡು ಮುಂದೆ ಹೋದೆ. ವಿವೇಕ್ ಅವರು ಮಹಿ ಒಂದು ನಿಮಿಷ ನಿಂತ್ಕೋ ಅಂತ ಹೇಳಿದ್ರು. ನಾನು ಅಲ್ಲೇ ನಿಂತು ತಿರುಗಿ ಅವರ ಕಡೆಗೆ ನೋಡಿದೆ. ವಿವೇಕ್ ಅವರು ಕೂತ ಜಾಗದಿಂದ ಎದ್ದು ನನ್ನ ಹತ್ತಿರ ಬಂದು, ನಮ್ ಅಪ್ಪ ಬಂದು ಹೇಳಿದಾಗ ಅವನು ಯಾಕೆ ಅನ್ನೋ ಪ್ರಶ್ನೆ ಮಾಡಿಲ್ಲ ನಾನು, ಅದ್ರೆ ನಿನ್ ಹೇಳಿದ್ದನ್ನ ಕೇಳಿದ ಮೇಲೆ ಯಾಕ್ ಪ್ರಶ್ನೆ ಮಾಡಿಲ್ಲ ಅಂತ ಅನ್ನಿಸ್ತಾ ಇದೆ, ನಿನ್ ಹೇಳಿದ್ದು ನಿಜ ನನ್ನ ಹೆಂಡತಿ ಬ್ಯಾಂಕ್ ಅಕೌಂಟ್ ಅಲ್ಲಿ ಎಷ್ಟೇ ದುಡ್ಡು ಇದ್ರು  ಅವಳಿಗೆ ಏನಾದ್ರು ಬೇಕು ಅಂತ ಅನ್ನಿಸಿದಾಗ ನನ್ನ ಪರ್ಸ್ ಯಿಂದ ದುಡ್ಡನ್ನ ತೆಗೆದುಕೊಂಡು ಅವಳಿಗೆ ಬೇಕಾಗಿರೋದನ್ನ ತಗೋತಾಳೆ, ಯಾಕೆ ಅಂತ ಕೇಳಿದ್ರೆ, ಇದು ನಿಮ್ ದುಡ್ಡು ಅಂದ್ರೆ ನನ್ನ ದುಡ್ಡು, ಅದಕ್ಕೆ ನಾನ್ ಇದರಲ್ಲೇ ತಗೋತೀನಿ ಅಂತ ಹೇಳ್ತಾಳೆ. ನನಗೆ ಅಪ್ಪನ ದುಡ್ಡಲ್ಲಿ ಗೆದ್ದವನು ನನ್ನ ಅಳಿಯ ಅಂತ ಹೇಳ್ಕೊಳ್ಳೋಕ್ಕಿಂತ, ಸ್ವಂತ ದಾರಿಲಿ ಗೆಲ್ಲೋಕೆ ಹೋಗ್ತಾ ಇರೋವನೇ ನನ್ನ ಅಳಿಯ ಅಂತ ಹೇಳ್ಕೊಳ್ಳೋಕೆ ತುಂಬಾ ಹೆಮ್ಮೆ ಅನಿಸುತ್ತೆ ಅಂತ ಹೇಳಿದ್ರು. ಅಕಿರಾ ಅಪ್ಪನ ಮಾತಿಗೆ ಓಡಿ ಬಂದು ಅವರನ್ನ ತಬ್ಬಿಕೊಂಡು ಥ್ಯಾಂಕ್ಸ್ ಅಪ್ಪ ಅಂತ ಅಳ್ತಾ ಹೇಳಿದ್ಲು. 

   ತಾತ ಮಾತಾಡ್ತಾ ಏನಪ್ಪಾ ಇನ್ನು ಹಾಗೇ ನಿಂತೇ ಇದ್ದಿಯಾ  ಬಾ ಬಂದು ಕುತ್ಕೋ, ಮನೆಗೆ ಹಾಗೋ ಅಳಿಯ ನೀನು ಹಾಗೇ ನಿಂತೇ ಇದ್ರೆ ನಮಗೆ ಕಷ್ಟ ಆಗುತ್ತೆ ಅಂತ ಹೇಳಿದ್ರು. ನಾನು ಚಿಕ್ಕದಾಗಿ ಒಂದು ಸ್ಮೈಲ್ ಮಾಡ್ತಾ ಹೋಗಿ ಅವರ ಹತ್ತಿರ ಕುತ್ಕೊಂಡೆ. ತಾತ ಮತ್ತೆ ಮಾತಾಡ್ತಾ ಅಮ್ಮ ಕೋಮಲಿ ನಿನ್ ಅಳಿಯನಿಗೆ ಜೂಸ್ ತಗೋ ಬಾ ಹೋಗಮ್ಮ ಅಂತ ಹೇಳಿದ್ರು. ಕೋಮಲಿ ಅವರು ಅಡುಗೆ ಮನೆ ಕಡೆ ಹೋದ್ರು. ವಿವೇಕ್ ಅವರು ಅಕಿರಾ ಗೆ  ಯಾರೇ ಆಗಿರಲಿ ಮೊದಲು ಮನಸಲ್ಲಿ ಇರೋ ಪ್ರೀತಿ ನಾ ಹೇಳ್ಕೊಬೇಕು ಇಲ್ಲಾ ಅಂದ್ರೆ ಅ ನೋವು ಜೀವನ ಪೂರ್ತಿ ನಮ್ಮನ್ನ ಕಾಡ್ತಾ ಇರುತ್ತೆ ಅಂತ ಹೇಳಿದ್ರು. ಅಕಿರಾ ಸಾರೀ ಅಪ್ಪ ನೀವು ಸಡನ್ ಹಾಗಿ ಎಂಗೇಜ್ಮೆಂಟ್ ಅಂತ ಹೇಳಿದ್ರಿ ಅಲ್ವಾ ಏನ್ ಮಾಡಬೇಕೋ ಗೊತ್ತಾಗದೆ  ಸೈಲೆಂಟ್ ಆಗಿ ಬಿಟ್ಟೆ ಅಂತ ಹೇಳಿದ್ಲು.  ಕೋಮಲಿ ಅವರು ಜೂಸ್ ತಂದು ಕೊಟ್ಟರು , ಜೂಸ್ ಕುಡಿದು ಸರಿ ಸರ್ ನಾನ್ ಇನ್ನ ಹೊರಡ್ತೀನಿ ಮನೆ ಹತ್ತಿರ ತುಂಬಾ ಕೆಲಸ ಇದೆ. ಅಂತ ಹೇಳ್ದೆ.  ವಿವೇಕ್ ಸರಿ ಮಹಿ ಹೋಗಿ ಬಾ ಅಂತ ಹೇಳಿದ್ರು  ,, ನಾನ್ ಎಲ್ಲರಿಗೂ ಬೈ ಹೇಳಿ, ಅಕಿರಾ ಗೆ ಬೈ ಹೇಳಿ ಅಲ್ಲಿಂದ ಹೊರಟು ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ ಹೊರಟೆ..


****************************************


P. S.