Mahi - 5 in Kannada Love Stories by S Pr books and stories PDF | ಮಹಿ - 5

The Author
Featured Books
  • ಮಹಿ - 5

    ಸಂಜೆ ಆಫೀಸ್ ಮುಗಿಸಿಕೊಂಡು  ಲ್ಯಾಪ್ಟಾಪ್ ನಾ ಕ್ಲೋಸ್ ಮಾಡಿ ಬ್ಯಾಗ್ ಅಲ್...

  • ಅಸುರ ಗರ್ಭ - 5

    ಅಸುರರ ವಿರುದ್ಧದ ಭೂಗತ ಯುದ್ಧವು ಅರ್ಜುನ್‌ನ ಮಾನಸಿಕ ಮತ್ತು ದೈಹಿಕ ಸಾಮ...

  • ಅಸುರ ಗರ್ಭ - 4

    ಅಸುರರ ದಾಳಿಯಿಂದ ಪಾರಾದ ನಂತರ, ಅರ್ಜುನ್ ಮತ್ತು ಶಾರದಾ ಒಂದು ರಹಸ್ಯ ಸ್...

  • ಅಸುರ ಗರ್ಭ - 3

    ಶಾರದಾ, ಸತ್ಯಂ ಸಂಸ್ಥೆಯ ಸದಸ್ಯಳು ಎಂದು ತಿಳಿದ ನಂತರ, ಅರ್ಜುನ್‌ಗೆ ಒಂದ...

  • ಮಹಿ - 4

    ಬೆಳಿಗ್ಗೆ ಎದ್ದು ಆಫೀಸ್ ಗೆ ರೆಡಿ ಆಗಿ ತಿಂಡಿ ತಿಂದು ಆಫೀಸ್ ಗೆ ಹೋಗೋಣ...

Categories
Share

ಮಹಿ - 5

ಸಂಜೆ ಆಫೀಸ್ ಮುಗಿಸಿಕೊಂಡು  ಲ್ಯಾಪ್ಟಾಪ್ ನಾ ಕ್ಲೋಸ್ ಮಾಡಿ ಬ್ಯಾಗ್ ಅಲ್ಲಿ ಇಟ್ಕೊಂಡು ಬ್ಯಾಗ್ ನಾ ಶೋಲ್ಡರ್ ಮೇಲೆ ಹಾಕೊಂಡು ಶಿಲ್ಪಾ ಗೆ ಬೈ ಹೇಳಿ ಒಂದು ಹೆಜ್ಜೆ ಮುಂದೆ ಇಟ್ಟೆ. ಶಿಲ್ಪಾ ಮಹಿ ನಿನ್ ಮೊಬೈಲ್ ನಂಬರ್ ಕೊಡು ಅಂತ ಕೇಳಿದ್ಲು. ನಂಬರ್ ಕೊಟ್ಟೆ  ಅವಳು ಮಿಸ್ ಕಾಲ್ ಕೊಟ್ಟು ಸೇವ್ ಮಾಡ್ಕೋ, ನಂಬರ್ ಕೊಟ್ಟೆ ಅಂತ ನೈಟ್ ಟೈಮ್ ಕಾಲ್ ಮಾಡೋದು ಮೆಸೇಜ್ ಮಾಡೋದು ಎಲ್ಲಾ ಮಾಡೋಕೆ ಹೋಗಬೇಡ ಅಂತ ಹೇಳಿದ್ಲು. ನಾನು ನಗ್ತಾ ಛೇ ಹಾಗೆಲ್ಲ ಏನು ಮಾಡೋದೇ ಇಲ್ಲಾ  ನಾನ್ ತುಂಬಾ ಒಳ್ಳೇ ಹುಡುಗ ನೈಟ್ 12 ಗಂಟೆ ಆದಮೇಲೆ ಡ್ರಿಂಕ್ಸ್ ಜಾಸ್ತಿ ಆಗಿ ಬೈಕ್ ಡ್ರೈವ್ ಮಾಡೋಕೆ ಆಗದೆ ಇರೋ ಟೈಮ್ ಅಲ್ಲಿ ಪಕ್ಕ ಕಾಲ್ ಮಾಡ್ತೀನಿ ಬಂದು ಪಿಕ್ ಮಾಡ್ಕೊಂಡು ಹೋಗು ಸರಿನಾ ಅಂತ ಹೇಳಿ ಅಲ್ಲಿಂದ ಹೊರಟು ಹೋದೆ. ಅಕಿರಾ ಶಿಲ್ಪಾ ನಾ ನೋಡಿ ಬೇಕಿತ್ತಾ ನಿನಗೆ  ನಂಬರ್ ಕೊಡೋದು ನೈಟ್ ಟೈಮ್ ಕಾಲ್ ಮಾಡ್ಬೇಡ ಅನ್ನೋದು ಯಾಕ್ ಹೇಳು ಅಂತ ಕೇಳಿದ್ಲು. ಶಿಲ್ಪಾ  ಲೇ ಬಿಡೆ ನಾನ್ ಏನೋ ತಮಾಷೆ ಗೆ ಹೇಳ್ದೆ, ಅವನೇನು ಬೇರೆಯವನ ಫ್ರೆಂಡ್ ಅಲ್ವಾ, ನಾನು ಬಾಯಿ ತಪ್ಪಿ ಏಕವಚನದಲ್ಲಿ ಕರೆದ್ರು ಅವನು ಒಂದು ಸರಿ ಕೂಡ ನನ್ನ ಹಾಗೇ ಕರೆದಿಲ್ಲ, ಇವತ್ತು ನಾನ್ ಓಕೆ ಅಂತ ಹೇಳಿದ ಮೇಲೇನೆ ಅವನು ಕರೆದಿದ್ದು ನನ್ನ ಹೋಗೆ ಬಾರೆ ಅಂತ, ಹುಡುಗ ಒಳ್ಳೆಯವನೇ, ಅವತ್ತು ನೀನು ಅಷ್ಟು ರಿಯಾಕ್ಟ್ ಆಗಿದ್ದಕ್ಕೆ ಅವನು ಹಾಗೇ ಮಾತಾಡಿದ, ಅದ್ರಲ್ಲೂ ಮೊದಲು ನಿನ್ ಎಲ್ಲರ ಮುಂದೆ ಹಾಗೇ ಮಾತಾಡಿದಾಗ ಏನಾದ್ರು ಒಂದು ಮಾತಾಡಿದ್ನ, 2nd ಟೈಮ್ ನಿನ್ ಮಾತಾಡಿದಕ್ಕೆ ಅಲ್ವಾ ಅವನು ಹಾಗೇ ಮಾತಾಡಿದ್ದು, ಆಮೇಲೆ ನಿನ್ ಹತ್ತಿರ ವರ್ಕ್ ವಿಷಯ ಬಿಟ್ಟು ಏನಾದ್ರು ಮಾತಾಡಿದ್ದಾನಾ, ಸುಮ್ನೆ ಹುಡುಗನ ಮೇಲೆ ಅನುಮಾನ ಪಡಬೇಡ, ನಡಿ ಅಂತ ಇಬ್ಬರು ಆಫೀಸ್ ಯಿಂದ ಹೊರಗೆ ಬಂದ್ರು.

ನೈಟ್ ಊಟ ಮಾಡಿಕೊಂಡು ರೂಮ್ ಗೆ ಹೋಗಿ ಲ್ಯಾಪ್ಟಾಪ್ ತೆಗೆದು ಸ್ವಲ್ಪ ವರ್ಕ್ ಮಾಡ್ತಾ ಇದ್ದೆ. ಮೊಬೈಲ್ ರಿಂಗ್ ಆಗೋ ಸೌಂಡ್ ಬಂತು, ವರ್ಕ್ ಬಿಟ್ಟು ಮೊಬೈಲ್ ಕಡೆಗೆ ನೋಡಿದೆ ಶಿಲ್ಪಾ ಕಾಲ್, ಟೈಮ್ಇ ನೋಡಿದ್ರೆ  ರಾತ್ರಿ 11 ಇಷ್ಟೋತ್ತಲ್ಲಿ   ಏನಕ್ಕೆ ಕಾಲ್ ಮಾಡಿದ್ಲು ಅಂತ ಅನ್ಕೊಂಡು ಕಾಲ್ ಪಿಕ್ ಮಾಡಿ, ಹೇಳು ಶಿಲ್ಪಾ ಇಷ್ಟೋತ್ತಲ್ಲಿ ಕಾಲ್ ಮಾಡಿದ್ದಿಯ ಏನಾಯ್ತು ಅಂತ ಕೇಳ್ದೆ. ಶಿಲ್ಪಾ ಮಹಿ ಅದು ನಾನು ಅಕಿರಾ ಶಾಪಿಂಗ್ ಮಾಡಿ ಲೇಟ್ ಆಯ್ತು ಅಂತ ಡಿನ್ನರ್ ಮಾಡ್ಕೊಂಡು ಮನೆಗೆ ಹೋಗೋಣ ಅನ್ನೋ ಅಷ್ಟರಲ್ಲಿ ಬೈಕ್ ಪ್ರಾಬ್ಲಮ್ ಆಯ್ತು, ಕ್ಯಾಬ್ ಬುಕ್ ಮಾಡೋಣ ಅಂದ್ರೆ ಅಕಿರಾ ಭಯ ಬೀಳ್ತಾ ಇದ್ದಾಳೆ ಇಷ್ಟೋತ್ತಲ್ಲಿ ಬೇಡ ಅಂತ, ಇಫ್ ಯು ಡೋಂಟ್ ಮೈಂಡ್ ನಮ್ಮನ್ನ ಮನೆ ತನಕ ಡ್ರಾಪ್ ಮಾಡ್ತಿಯಾ ಬಂದು ಅಂತ ಕೇಳಿದ್ಲು. ಸರಿ ಲೊಕೇಶನ್ ಕಳಿಸು ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿ, ಫ್ರೆಂಡ್ ಗೆ ಕಾಲ್ ಮಾಡಿ ಅವನ ಆಕ್ಟಿವಾ ಬೈಕ್ ತರೋಕೆ ಹೇಳಿ ನನ್ನ ಬೈಕ್ ಅಲ್ಲಿ ಅವನು ಇರೋ ಪ್ಲೇಸ್ ಗೆ ಹೋಗಿ ಶಿಲ್ಪಾ ಕಳಿಸಿದ ಲೊಕೇಶನ್ ಕಡೆಗೆ ಹೊರಟ್ವಿ.

ಅಕಿರಾ ಲೇ ನಿನಗೆ ಆಗಲೇ ಹೇಳಿದೆ ಬೇಡ್ವೇ ಮನೆಗೆ ಹೋಗಿ ಡಿನ್ನರ್ ಮಾಡೋಣ ಅಂತ ಕೇಳ್ದ ನನ್ನ ಮಾತು, ಇವಾಗ ನೋಡು ಏನಾಯ್ತು ಅಂತ, ಮನೆಗೆ ಕಾಲ್ ಮಾಡೋಣ ಅಂದ್ರೆ ಅಣ್ಣ ಮನೇಲಿ ಇಲ್ಲಾ, ಒಳ್ಳೇ ಸಾವಾಸ ಆಯ್ತು ನಿಂದು ಅಂತ ಹೇಳಿದ್ಲು. ಶಿಲ್ಪಾ ಹಲೋ ಸ್ವಲ್ಪ ಸಮಾಧಾನ ಹೇಳ್ದೆ ಅಲ್ವಾ ಮಹಿ ಬರ್ತಾ ಇದ್ದಾನೆ ಅಂತ, ಹೋಗೋಣ ಜೊತೆಗೆ ಇರು ಏನು ಆಗಲ್ಲಾ ಅಂತ ಹೇಳಿದ್ಲು. ಅಕಿರಾ ಏನು ಅವನ ಬೈಕ್ ಅಲ್ಲಿ ಮೂರು ಜನ, ನಾನ್ ಅಂತು ಬರೋದು ಇಲ್ಲಾ ಬೇಕಾದ್ರೆ ನಿನ್ ಹೋಗು, ಬೈಕ್ ಅಲ್ಲಿ ಒಂದು ಹುಡುಗಿ ಕುತ್ಕೊಂಡ್ರೆನೆ ಹುಡುಗರು ಅವರ ಬುದ್ದಿ ತೋರಿಸ್ತಾರೆ , ಇನ್ನ ಇಬ್ರು ಹುಡುಗೀರು ಕೂತ್ಕೊಂಡ್ರೆ ಅಷ್ಟೇ ಅವರಿಗೆ ನಾವು ಥ್ಯಾಂಕ್ಸ್ ಹೇಳೋದಲ್ಲ ಅವನೇ ತುಂಬಾ ತುಂಬಾ ಥ್ಯಾಂಕ್ಸ್ ಅಂತ ಹೇಳ್ತಾನೆ. ಅಂತ ಹೇಳಿದ್ಲು. ಶಿಲ್ಪಾ ತು ನಿನ್ನ ಏನ್ ಅಂತ ಮಾತಾಡ್ತೀಯಾ ಯಾರೋ ಒಬ್ರು ಮಾಡ್ತಾರೆ ಅಂತ ಎಲ್ಲರನ್ನು ಹಾಗೇ ಅಂದುಕೊಳ್ಳೋದು ತಪ್ಪೇ, ಅದ್ರಲ್ಲೂ ಮಹಿ ನಾ, ನಿನಗೆ ಆಲ್ರೆಡಿ ಅವನ ಬಗ್ಗೆ ಹೇಳಿದ್ದೀನಿ ಆದ್ರೂ ನೀನು ಅವನ ಮೇಲೆ ಇನ್ನು ಅನುಮಾನ ಬೀಳ್ತಾ ಇದ್ದಿಯಾ, ಅವನು ಕಾಲ್ ಪಿಕ್ ಮಾಡಿ ಅ ಹೇಳೇ ತಿಂದ ಏನ್ ಮಾಡ್ತಾ ಇದ್ದಿಯಾ ಅಂತ ಕೇಳಿಲ್ಲ, ಏನಾಯ್ತು ಏನಾದ್ರು ಪ್ರಾಬ್ಲಮ್ ಅ ಅಂತ ಕೇಳ್ದ, ಅಂತವನನ್ನ ನೀನು, ಸರಿ ಅವನ ಮೇಲೆ ನನಗೆ ನಂಬಿಕೆ ಇದೆ, ನಿನಗೆ ನನ್ನ ಮೇಲೆ ನಂಬಿಕೆ ಇದ್ರೆ ಬಾ ನನ್ನ ಜೊತೆ ಸರಿನಾ ಅಂತ ಸ್ವಲ್ಪ ಕೋಪದಲ್ಲಿ ಹೇಳ್ತಾಳೆ.


ಶಿಲ್ಪಾ ಕಳಿಸಿದ ಲೊಕೇಶನ್ ಗೆ ಹೋಗಿ ರೀಚ್ ಆಗಿ ಕಾಲ್ ಮಾಡಿದೆ, 1 ನಿಮಿಷ ದಲ್ಲಿ ಇಬ್ಬರು ಬಂದು ಎದುರಿಗೆ ನಿಂತು, ಶಿಲ್ಪಾ ಮಾತಾಡ್ತಾ ಥ್ಯಾಂಕ್ಸ್ ಮಹಿ ಕಾಲ್ ಮಾಡಿದ ತಕ್ಷಣ ಬಂದೆ ಅಂತ ಹೇಳಿದ್ಲು. ನಾನು ನಿಮ್ ಬೈಕ್ ಎಲ್ಲಿ ಅಂತ ಕೇಳ್ದೆ. ಶಿಲ್ಪಾ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದಾ ಅವರ ಬೈಕ್ ನಾ ತೋರಿಸಿದ್ರು, ನನ್ನ ಫ್ರೆಂಡ್ ಗೆ ಅವನ ಬೈಕ್ ಬಿಟ್ಟು ಶಿಲ್ಪಾ ಬೈಕ್ ನಾ ತೆಗೆದುಕೊಳ್ಳೋಕೆ ಹೇಳಿ, ಶಿಲ್ಪಾ ಹತ್ತಿರ ಕೀ ತಗೊಂಡು ಅವನಿಗೆ ಕೊಟ್ಟು, ಫ್ರೆಂಡ್ ಬೈಕ್ ಕೀ ನಾ ಶಿಲ್ಪಾ ಕೈಗೆ ಕೊಟ್ಟು ನೀವಿಬ್ರು ಅ ಬೈಕ್ ಅಲ್ಲಿ ಬನ್ನಿ, ನಿಮ್ಮನ್ನ ಮನೆತನಕ ಡ್ರಾಪ್ ಮಾಡಿ, ನಾವು ಹೋಗ್ತಿವಿ ಅಂತ ಹೇಳಿದೆ. ಶಿಲ್ಪಾ ಸರಿ ಅಂತ ಹೇಳಿ ಬೈಕ್ ಸ್ಟಾರ್ಟ್ ಮಾಡಿದ್ಲು. ಅಕಿರಾ ಹೋಗಿ ಅವಳ ಜೊತೆ ಬೈಕ್ ಅಲ್ಲಿ ಕುತ್ಕೊಂಡ್ಲು. ಶಿಲ್ಪಾ ಅಕಿರಾ ಒಂದು ಬೈಕ್ ಅಲ್ಲಿ ಮುಂದೆ ಹೋದ್ರೆ, ನಾನು ಶಿಲ್ಪಾ ಬೈಕ್ ನಾ ಥ್ರೋ ಮಾಡ್ತಾ ಅವರ ಹಿಂದೇನೆ ಹೋದ್ವಿ. 25 ನಿಮಿಷ ಶಿಲ್ಪಾ ಅವರ ಮನೆ ಹತ್ತಿರ ಬಂದ್ವಿ. ಶಿಲ್ಪಾ ಬೈಕ್ ಸ್ಟಾಪ್ ಮಾಡಿ  ಅವರ ಮನೆ ಗೇಟ್ ಓಪನ್ ಮಾಡಿ ಮಹಿ ಅ ಬೈಕ್ ನಾ ಒಳಗೆ ನಿಲ್ಲಿಸಿ ಬಿಡಿ, ನಾಳೆ ರೆಡಿ ಮಾಡಿಸ್ಕೊತಿನಿ ಅಂತ ಹೇಳಿದ್ಲು. ಏನು ಬೇಡ ಈ ಬೈಕ್ ನಾ ತಗೋಳಿ ನಾಳೆ ಆಫೀಸ್ ಗೆ ಬರೋಕೆ ತೊಂದ್ರೆ ಆಗುತ್ತೆ, ನನ್ನ ಫ್ರೆಂಡ್ ಒಬ್ಬ ಬೈಕ್ ಮೆಕ್ಯಾನಿಕ್ ಇದ್ದಾನೆ  ರೆಡಿ ಮಾಡೋಕೆ ಹೇಳ್ತಿನಿ ಅಂತ ಹೇಳಿ ಅ ಬೈಕ್ ನಾ ಅವರಿಗೆ ಕೊಟ್ಟು, ಬೈ ಹೇಳಿ ನಾನು ನನ್ನ ಫ್ರೆಂಡ್ ಬೈಕ್ ನಾ ಥ್ರೋ ಮಾಡ್ಕೋತ ಅಲ್ಲಿಂದ ಹೊರಟು ಹೋದ್ವಿ..

ಅಕಿರಾ ಮನೆ ಡೋರ್ ನಾ ಬೆಲ್ ಮಾಡ್ತಾಳೆ, 2 ನಿಮಿಷ ದ ನಂತರ ಅವರ ಅಮ್ಮ ಡೋರ್ ಓಪನ್ ಮಾಡಿ ಹೇಗೆ ಬಂದ್ರಿ ಅಂತ ಕೇಳ್ತಾರೆ. ಶಿಲ್ಪಾ ಆಂಟಿ ಫ್ರೆಂಡ್ ಬೈಕ್ ಅಲ್ಲಿ ಬಂದ್ವಿ ಅಂತ ಹೇಳಿ ಸ್ಟೋರಿ ಹೇಳಿದ್ಲು. ಅಕಿರಾ ಅವರ ಅಮ್ಮ ಏನಮ್ಮ ನೀವು ಇಷ್ಟು ಹೆಲ್ಪ್ ಮಾಡಿದವರಿಗೆ ಮನೆ ಒಳಗೆ ಕರಿದೇ ಹಾಗೇ ಕಳಿಸಿ ಬಿಟ್ರ ನೀವು ಅಂತ ಹೇಳ್ತಾ ಡೋರ್ ಲಾಕ್ ಮಾಡ್ತಾರೆ. ಇಲ್ಲಾ ಆಂಟಿ ಅವರನ್ನ ಕರಿಯೋಕು ಮೊದಲೇ ಬೈ ಹೇಳಿ ನನ್ನ ಬೈಕ್ ನಾ ಥ್ರೋ ಮಾಡ್ಕೊಂಡು ಹೊರಟು ಹೋದ್ರು ಅಂತ ಶಿಲ್ಪಾ ಹೇಳಿದ್ಲು. ಸರಿ ಹೋಗಿ ನಿದ್ದೆ ಮಾಡಿ ಆಲ್ರೆಡಿ ಲೇಟ್ ಆಗಿದೆ ಅಂತ ಹೇಳಿ ಅವರ ರೂಮ್ ಗೆ ಹೋದ್ರು. ಶಿಲ್ಪಾ ಅಕಿರಾ ಶಾಪಿಂಗ್ ಮಾಡಿರೋದನ್ನ ಅಲ್ಲೇ ರೂಮ್ ಒಳಗೆ ಹೋದ್ರು.

ಬೆಳಿಗ್ಗೆ ನನ್ನ ಮೆಕ್ಯಾನಿಕ್ ಫ್ರೆಂಡ್ ಗೆ ಹೇಳಿ  ನಾನು  ಬೈಕ್ ಅಲ್ಲಿ ಆಫೀಸ್ ಗೆ ಹೋದೆ. ಶಿಲ್ಪಾಅಕಿರಾ ಇನ್ನು ಬಂದು ಇದ್ದಿಲ್ಲ. ನಾನು ಪರಿಚಯ ಇದ್ದಾ ಟೀಂ ಅವರಿಗೆ ಹಾಯ್ ಹೇಳಿ ಹೋಗಿ ನನ್ನ ಪ್ಲೇಸ್ ಅಲ್ಲಿ ಕೂತು ವರ್ಕ್ ಮಾಡೋಕೆ ಶುರು ಮಾಡಿದೆ.  ಶಿಲ್ಪಾ ಬಂದು ಏನೋ ರಾತ್ರಿ ಅಷ್ಟು ಹೆಲ್ಪ್ ಮಾಡಿ ಥ್ಯಾಂಕ್ಸ್ ಹೇಳೋ ಚಾನ್ಸ್ ಕೂಡ ಕೊಟ್ಟಿಲ್ಲ ನೀನು, ಅದು ಅಲ್ಲದೆ ಆಂಟಿ ಅಷ್ಟು ಹೆಲ್ಪ್ ಮಾಡಿದವರನ್ನ ಮನೆ ಒಳಗೆ ಕರ್ದೆ ಇಲ್ಲಾ ಅಂತ ನಮ್ಮನ್ನ ಬೈದ್ರು ಅಂತ ಹೇಳಿ ಅವಳ ಪ್ಲೇಸ್ ಅಲ್ಲಿ ಕೂತು ಬ್ಯಾಗ್ ಅಲ್ಲಿ ಇದ್ದಾ ಬೈಕ್ ಕೀ ನಾ ನನಗೆ ಕೊಟ್ಟು ಥ್ಯಾಂಕ್ಸ್ ಕಣೋ ಅಂತ ಹೇಳಿದ್ಲು.  ನಾನ್ ಏನು ಮಾತಾಡದೆ ವರ್ಕ್ ಮಾಡ್ತಾ ಇರೋದನ್ನ ನೋಡಿ ಭುಜದ ಮೇಲೆ ತಟ್ಟಿ ಕರೆದ್ಲು.  ನಾನು ವರ್ಕ್ ಮಾಡೋದನ್ನ ನಿಲ್ಲಿಸಿ ಕಿವಿಗೆ ಹಾಕೊಂಡು ಇದ್ದಾ ಬ್ಲೂ ಟೂತ್ ನಾ ತೆಗೆದು ಶಿಲ್ಪಾ ಕಡೆಗೆ ನೋಡಿ ಏನೇ ಅಂತ ಕೇಳ್ದೆ.  ಶಿಲ್ಪಾ ನನ್ನ ಕೈಲಿ ಇದ್ದಾ ಬ್ಲೂ ಟೂತ್ ನಾ ತೆಗೆದುಕೊಂಡು ಅವಳ ಕಿವಿಗೆ ಇಟ್ಕೊಂಡು ಸೌಂಡ್ ಕೇಳಿ ಏನೋ ಆಫೀಸ್ ಅಲ್ಲಿ ಸಾಂಗ್ಸ್ ಕೇಳ್ತಾ ವರ್ಕ್ ಮಾಡ್ತಾ ಇದ್ದಿಯಾ ಅಂದ್ರೆ ನಾನ್ ಹೇಳಿದ್ದು ಏನು ಕೇಳಿಸಿ ಕೊಂಡಿಲ್ವಾ ನೀನು ಅಂತ ಕೇಳಿದ್ಲು. ಅದ ಬೈಕ್ ಅಲ್ಲಿ ಬರ್ತೀನಿ ಅಲ್ವಾ ಸಾಂಗ್ಸ್ ಕೇಳ್ತಾ ಬರ್ತೀನಿ, ತೆಗಿಯೋದು ಮರೆತು ಬಿಟ್ಟೆ, ನಿನ್ ಏನ್ ಕೇಳ್ದೆ ನಿನ್ ಬೈಕ್ ಅ, ಮೆಕ್ಯಾನಿಕ್ ಗೆ ಹೇಳಿದ್ದೀನಿ ರೆಡಿ ಆದಮೇಲೆ ತಂದು ಆಫೀಸ್ ಹತ್ತಿರ ಕೊಡ್ತಾನೆ. ಇವಾಗ ನನ್ನ ಡಿಸ್ಟರ್ಬ್ ಮಾಡಬೇಡ ವರ್ಕ್ ಮಾಡು ಅಂತ ಹೇಳಿ ಸಾಂಗ್ ನಾ ಸ್ಟಾಪ್ ಮಾಡಿ ವರ್ಕ್ ಮಾಡೋಕೆ ಶುರು ಮಾಡಿದೆ.  ಶಿಲ್ಪಾ ಒಂದು ಥ್ಯಾಂಕ್ಸ್ ಹೇಳೋಕು ಬಿಟ್ಟಿಲ್ಲ ಅಂತ ಬೈಕೊಂಡು ವರ್ಕ್ ಮಾಡೋಕೆ ಶುರು ಮಾಡಿದ್ಲು.

ಲಂಚ್ ಟೈಮ್ ಗೆ ಮೆಕ್ಯಾನಿಕ್ ಕಾಲ್ ಮಾಡಿದ, ಅವನಿಗೆ ಪಾರ್ಕಿಂಗ್ ಗೆ ಬರೋಕೆ ಹೇಳಿ ಶಿಲ್ಪಾ ನಾ ಕರ್ಕೊಂಡು ಪಾರ್ಕಿಂಗ್ ಗೆ ಹೋಗಿ  ಮೆಕ್ಯಾನಿಕ್ ಬೈಕ್ ನಾ ಶಿಲ್ಪಾ ಗೆ ಕೊಟ್ಟು ಫ್ರೆಂಡ್ ಬೈಕ್ ನಾ ತೆಗೆದುಕೊಂಡು ಹೋಗೋಕೆ ಹೋದ. ಶಿಲ್ಪಾ ಬ್ರದರ್ ಎಷ್ಟಾಯ್ತು ಅಂತ ಕೇಳಿದ್ಲು ಮೆಕ್ಯಾನಿಕ್ ನಾ. ಮೆಕ್ಯಾನಿಕ್ ಶಿಲ್ಪಾ ನಾ ನೋಡಿ ಮೇಡಂ ನೀವು ನಮ್ ಮಹಿ ಫ್ರೆಂಡ್ ನಾನ್ ನಿಮ್ ಹತ್ತಿರ ದುಡ್ಡು ತಗೊಂಡ್ರೆ ಅವನು ನನ್ನ ತಿಥಿ ಮಾಡ್ತಾನೆ, ನೆಕ್ಸ್ಟ್ ಟೈಮ್ ಏನಾದ್ರು ಪ್ರಾಬ್ಲಮ್ ಅದ್ರೆ ಹೇಳಿ ಅವಾಗ ಬಿಲ್ ಕೊಡ್ತೀನಿ ಅಂತ ಹೇಳಿ ಅವನು ಹೊರಟು ಹೋದ. ಶಿಲ್ಪಾ ಎನ್ರೋ ನೀವು ಬ್ಯುಸ್ನೆಸ್ ಅಲ್ಲಿ ಕೂಡ 1st ಫ್ರೆಂಡ್ಶಿಪ್ ನೋಡ್ತೀರಾ ಆಮೇಲೆ ವ್ಯವಹಾರ ನೋಡ್ತೀರಾ ಗ್ರೇಟ್ ಕಣೋ  ಅಂತ ಹೇಳಿದ್ಲು.. ಗ್ರೇಟ್ ಇಲ್ಲಾ ಏನಿಲ್ಲಾ ಈ ವೀಕೆಂಡ್ ಪಾರ್ಟಿ ಅವನೇ ಕೊಡಬೇಕು, ನಾನ್ ಬಾಕಿ ಇದ್ರೆ ಅವನಿಗೆ ಲಾಭ ಅಲ್ವಾ ಅದಕ್ಕೆ ಹಾಗೇ ಹೇಳಿ ಹೋದ ಅಂತ ಹೇಳ್ದೆ.  ಶಿಲ್ಪಾ ಕೈ ಮುಗಿದು 🙏, ನಿಮ್ ಹುಡುಗರ ಫ್ರೆಂಡ್ಶಿಪ್ ನಿಮಗೆ ಬಿಟ್ಟು ಬೇರೆ ಯಾರಿಗೂ ಅರ್ಥ ಆಗಲ್ಲಾ ಕಣೋ,, ನಡಿ ಅಕಿರಾ ಒಬ್ಳೆ ಕಾಯ್ತಾ ಇರ್ತಾಳೆ, ಅಂತ ಹೇಳಿ ಇಬ್ರು ಲಂಚ್ ಗೆ ಹೊದ್ವಿ. 


ಲಂಚ್ ಮಾಡ್ಕೊಂಡು ಬರ್ತಾ ಇರೋವಾಗ, ಶಿಲ್ಪಾ ಹೇಳೋ ಎಷ್ಟಾಯ್ತು ಬೈಕ್ ರಿಪೇರಿ ಗೆ ಅಂತ ಕೇಳಿದ್ಲು. ನಾನು ವೀಕೆಂಡ್ ಪಾರ್ಟಿ ಆಗ್ಲಿ ಬಿಲ್ ಹೇಳ್ತಿನಿ ಅಂದೇ. ಶಿಲ್ಪಾ,,ಅಂದ್ರೆ ಈ ವೀಕೆಂಡ್ ನನ್ನ ಪರ್ಸ್ ಖಾಲಿ ಆಗೋದು ಪಕ್ಕ ಅನ್ನು. ಯಾವನಿಗೆ ಗೊತ್ತು ಡಿಪೆಂಡ್ ಆನ್ ಪರ್ಸನ್ ಡಿಪೆಂಡ್ ಆನ್ ಡ್ರಿಂಕ್ಸ್ ಡಿಪೆಂಡ್ ಆನ್ ಸ್ನಾಕ್ಸ್ ಅಂಡ್ ಸೈಡ್ ಡಿಶ್, ಯಾವುದಕ್ಕೂ emi ಗೆ ಅಪ್ಲೈ ಮಾಡಿ ಇಟ್ಟಿರು ಅಂತ ನಗ್ತಾ  ಹೇಳಿದೆ. ಶಿಲ್ಪಾ ಸರಿ ಆಗಿದ್ರೆ ನಾನು ನಿಮ್ ವೀಕೆಂಡ್ ಪಾರ್ಟಿ ಗೆ ಬರ್ಲಾ ಅಂತ ಕೇಳಿದ್ಲು.  ಅದೇನು ಪಬ್ ಅನ್ಕೊಂಡ್ರಾ ನಾನು ಬರ್ತೀನಿ ಅಂತ ಹೇಳೋಕೆ  ಬ್ಯಾಚುಲರ್ ರೂಮ್ ಅದು, ಸೋ ಹೆಣ್ಣು ಮಕ್ಕಳಿಗೆ ಪ್ರವೇಶವಿಲ್ಲ ಅಂತ ಹೇಳಿದೆ ಅಷ್ಟರಲ್ಲಿ ಲಿಫ್ಟ್ ಡೋರ್ ಓಪನ್ ಆಯ್ತು, ಅಲ್ಲಿಗೆ ಅ ಟಾಪಿಕ್ ನಾ ಮುಗಿಸಿ ಆಫೀಸ್ ಒಳಗೆ ಹೋಗಿ ವರ್ಕ್ ಮಾಡೋಕೆ ಶುರು ಮಾಡಿದೆ.


ಹೀಗೆ 15 ದಿನಗಳು ಇದೆ ತರಹ ಕಳೆದು ಹೋಯ್ತು,  ಅವತ್ತು ಸ್ಯಾಲರಿ ಅಕೌಂಟ್ ಗೆ ಬಿದ್ದ ದಿನ.  ಆಫೀಸ್ ಗೆ ಹೋಗೋಣ ಅಂತ ರೆಡಿ ಆಗಿ ತಿಂಡಿ ತಿಂತ ಇದ್ದೆ, ಶ್ವೇತಾ ತಿಂಡಿ ತಿಂತ ಲೋ ಸ್ಯಾಲರಿ ಬಂತ ಅಂತ ಕೇಳಿದ್ಲು. ಅ ಬಂತು ಯಾಕೆ ಅಂತ ಕೇಳ್ದೆ. ಏನಿಲ್ಲಾ ನಿನ್ನ ಸ್ಯಾಲರಿ ದುಡ್ಡನ್ನ ಕೊಡು ನನಗೆ ಬೇಕು ಅಂತ ಕೇಳಿದ್ಲು. ನಾನು ನನ್ನ ದುಡ್ಡು ಏನಕ್ಕೆ  ನಿನ್ನ ಹತ್ತಿರ ಇಲ್ವಾ ಇಲ್ಲಾ ಅಂದ್ರೆ ಅಪ್ಪನ ಅಮ್ಮನ ಹತ್ತಿರ ಕೇಳು ಅಂತ ಹೇಳ್ದೆ. ಲೋ ಅದೆಲ್ಲಾ ನನಗೆ ಗೊತ್ತು ನಾನ್ ಕೇಳಿದ್ದು ನಿನ್ನ ಕೊಟ್ರೆ ಕೊಡ್ತೀನಿ ಅನ್ನು ಇಲ್ಲಾ ಅಂದ್ರೆ ಇಲ್ಲಾ ಅನ್ನು ಅಷ್ಟೇ ನಿನಗೆ ಜಾಸ್ತಿ ಮಾತು ಬೇಡ ಅಂತ ಸ್ವಲ್ಪ ಕೋಪದಲ್ಲಿ ಹೇಳಿದ್ಲು. ಸದ್ಯಕ್ಕೆ ನನಗೆ ಇರೋ ಕಮಿಟ್ಮೆಂಟ್ ಗೆ ಕೊಡೋಕೆ ಆಗಲ್ಲಾ ಸಾರೀ ಅಂತ ಹೇಳಿ ಪ್ಲೇಟ್ ತೆಗೆದುಕೊಂಡು ಕಿಚನ್ ಅಲ್ಲಿ ಇಟ್ಟು  ಅಮ್ಮ ನಾ ಹತ್ತಿರ ಹೋಗಿ ಏನಕ್ಕೆ ಅವಳು ದುಡ್ಡು ಕೇಳ್ತಾ ಇದ್ದಾಳೆ ಅಂತ ಕೇಳಿದೆ. ಅಮ್ಮ ಏನು ಇಲ್ವೋ  ನಿಮ್ಮಕ್ಕನ ಫ್ರೆಂಡ್ ಹರಿಣಿ       ಇದ್ದಾಳೆ ಅಲ್ವಾ . ಹೌದು ಹರಿಣಿ ಅಕ್ಕ. ನಿನಗೂ ಗೊತ್ತು ಅವಳಿಗೆ ಶ್ವೇತಾ ನಾ ಬಿಟ್ರೆ ಫ್ರೆಂಡ್ಸ್ ಯಾರು ಇಲ್ಲಾ ಅಂತ,  ಮದುವೆ ಅದ ಕೆಲವು ತಿಂಗಳಿಗೇನೇ ಅವರ ಅಪ್ಪ ಅಮ್ಮ ಕಾರ್ ಆಕ್ಸಿಡೆಂಟ್ ಅಲ್ಲಿ ತಿರೋದ್ರು ಅಂತ ನಿನಗೂ ಗೊತ್ತು, ಇವಾಗ ಹರಿಣಿ ಅಕ್ಕ ತುಂಬು ಗರ್ಭಿಣಿ, ಶ್ವೇತಾ ಅವಳನ್ನ ಕರ್ಕೊಂಡು ಬಂದು ಈ ಮನೇಲಿ ಸೀಮಂತ ಮಾಡಬೇಕು ಅಂತ ತುಂಬಾ ಆಸೆ ಇಟ್ಕೊಂಡು ಇದ್ದಾಳೆ, ನಾನು ಅಪ್ಪ ಸರಿ ಮಾಡೋಣ ಅದೆಷ್ಟು ದುಡ್ಡು ಖರ್ಚು ಆದ್ರೂ ನಾವು ಕೊಡ್ತೀವಿ ಅಂತ ಹೇಳಿದ್ವಿ. ಅದ್ರೆ ಬೇಡ ಮಹಿ ಕೇಳ್ತೀನಿ ಕೊಡ್ತಾನೆ ಅಂತ ನಿನ್ ಮೇಲೆ ನಂಬಿಕೆ ಇಟ್ಟು ಕೇಳಿದ್ಲು. ಅಂತ ಅಮ್ಮ ಹೇಳಿದ್ಲು. ನಾನು ಸರಿ ಅಂತ ಹೇಳಿ ಡೈನಿಂಗ್ ಟೇಬಲ್ ಹತ್ತಿರ ಬಂದೆ ಶ್ವೇತಾ ಇನ್ನು ಕೋಪದಲ್ಲೇ ಇದ್ಲು, ಹೋಗಿ ಪರ್ಸ್ ಅಲ್ಲಿ ಇದ್ದಾ ಕಾರ್ಡ್ ನಾ ಅವಳ ಮುಂದೆ ಇಟ್ಟು, ಸಾರೀ ವಿಷಯ ಗೊತ್ತಿಲ್ದೆ ಮಾತಾಡಿ ಬಿಟ್ಟೆ, ನಿನ್ ಏನೇನ್ ಮಾಡಬೇಕು ಅಂತ ಇದ್ದಿಯೊ ಮಾಡು, ಹರಿಣಿ ಅಕ್ಕ ಬೇರೆ ಅಲ್ಲ ನಿನ್ ಬೇರೆ ಅಲ್ಲ. ನಿನಗೆ ಎಷ್ಟು ಅದ್ದೂರಿಯಾಗಿ ಮಾಡಬೇಕು ಅಂತ ಅನ್ನಿಸುತ್ತೋ ಅಷ್ಟು ಅದ್ದೂರಿಯಾಗಿ ಮಾಡು, ಅಂತ ಹೇಳಿ ಬೈಕ್ ತೆಗೆದುಕೊಂಡು ಆಫೀಸ್ ಗೆ ಹೋದೆ.. 

ಆಫೀಸ್ ಗೆ ಹೋಗಿ ನನ್ನ ವರ್ಕ್ ಪ್ಲೇಸ್ ಅಲ್ಲಿ ಕೂತು ವರ್ಕ್ ಮಾಡ್ತಾ ಇದ್ದೆ. ಶಿಲ್ಪಾ ಅಕಿರಾ ಇಬ್ರು ಬಂದ್ರು. ಶಿಲ್ಪಾ ಮಾತಾಡ್ತಾ ಮಹಿ ಎಲ್ಲಿ ಪಾರ್ಟಿ ಅಂತ ಕೇಳಿದ್ಲು. ನಾನು ಏನಕ್ಕೆ ಪಾರ್ಟಿ ಅಂತ ಕೇಳ್ದೆ. ಲೋ ಇದೇನೋ ಹೀಗೆ ಹೇಳ್ತಿಯ  ಈ ಟೀಂ ಗೆ ಬಂದ ಮೇಲೆ ನಿನಗೆ 1st ಸ್ಯಾಲರಿ ಇದು ಪಾರ್ಟಿ ಕೊಡ್ಸಿಲ್ಲ ಅಂತ ಅಂದ್ರೆ ಹೇಗೆ  ಅಂತ ಕೇಳಿದ್ಲು. ನಾನು ಪಾರ್ಟಿ ಅಲ್ಲ ಈ ಮಂತ್ ಬೈಕ್ ಪೆಟ್ರೋಲ್ ಗು ದುಡ್ಡಿಲ್ಲ ನನ್ನ ಹತ್ತಿರ, ಸ್ಯಾಲರಿ ಎಲ್ಲಾ ಇರೋ ಕಮಿಟ್ಮೆಂಟ್ ಗೆ ಸರಿ ಹೋಯ್ತು. ರೂಮ್ ರೆಂಟ್ ಫುಡ್ ಗೆ ನನ್ನ ಖರ್ಚ್ಗೆ ಏನ್ ಮಾಡ್ಬೇಕೊ ಗೊತ್ತಿಲ್ಲ, ನನ್ನ ಟೆನ್ಶನ್ ನನಗೆ ಪಾರ್ಟಿ ಅಂತೇ ಸಾರೀ ಅಂತ ಹೇಳಿದೆ. ನಾನ್ ಹೇಳಿದ್ದನ್ನ ಸೀರಿಯಸ್ ಆಗಿ ನಂಬಿದ್ಲು ಅಂತ ಅನ್ನಿಸುತ್ತೆ, ಸಾರೀ ಕಣೋ ನಿನ್ ಪರಿಸ್ಥಿತಿ ಗೊತ್ತಿಲ್ದೆ ಕೇಳ್ಬಿಟ್ಟೆ, ಅಂತ ಹೇಳಿ ಅವಳ ಪರ್ಸ್ ತೆಗೆದು 5k ನಾ ತಗೋ ಮಹಿ ನಿನ್ ಖರ್ಚಿಗೆ ಇಟ್ಕೋ ಅಂತ ಕೊಡೋಕೆ ಬಂದ್ಲು. ನಾನು ಏನ್ ಇವಳು ಇಷ್ಟು ಸೀರಿಯಸ್ ಆಗಿ ತಗೊಂಡ್ಲಾ ಅಂತ ಅನ್ಕೊಂಡು ಬೇಡ ಶಿಲ್ಪಾ ಇಟ್ಕೋ ನೀನೇ, ನಾನು ಅಡ್ಜಸ್ಟ್ ಮಾಡ್ಕೋತೀನಿ ಅಂತ ಹೇಳ್ದೆ. ಲೋ ಮುಚ್ಕೊಂಡು ತಗೋ ಓವರ್ ಆಡಬೇಡ, ಇಲ್ಲಾ ನಮ್ ಫ್ರೆಂಡ್ಶಿಪ್ ನಾ ಇಲ್ಲಿಗೆ ಕಟ್ ಮಾಡು ಅಂತ ಹೇಳಿದ್ಲು. ನಾನು ಸರಿ ಅಂತ ತಗೊಂಡು ಪರ್ಸ್ ಅಲ್ಲಿ ಇಟ್ಕೊಂಡೇ.

ಅಕಿರಾ, ಶಿಲ್ಪಾ ಒಂದು ನಿಮಿಷ ಬಾ ಇಲ್ಲಿ ಅಂತ ಕರೆದ್ಲು. ಶಿಲ್ಪಾ ಎದ್ದು ಹೋಗಿ ಅವಳ ಹತ್ತಿರ ಹೋಗಿ ಏನ್ ಅಕಿರಾ ಅಂತ ಕೇಳಿದ್ಲು. ಅಕಿರಾ  ಮಹಿ ನಂಬರ್ ಕೊಡು ಅಂತ ಕೇಳಿದ್ಲು. ಶಿಲ್ಪಾ ಏನಕ್ಕೆ ಅಂತ ಕೇಳಿದ್ಲು. ಅಕಿರಾ ಮೊದಲು ಕೊಡು ಅಂತ ಹೇಳಿ ನಂಬರ್ ತಗೊಂಡು ಸೇವ್ ಮಾಡ್ಕೊಂಡು ಆನ್ಲೈನ್ ಅಲ್ಲಿ 10 ಸಾವಿರ ನನ್ನ ನಂಬರ್ ಗೆ ಕಳಿಸಿದ್ಲು. ನಾನು ಮೊಬೈಲ್ ಗೆ ಬಂದ ಮೆಸೇಜ್ ನಾ ನೋಡಿ ಓದಿ ಅಕಿರಾ ಕಡೆಗೆ ನೋಡಿದೆ. ಅಕಿರಾ ಏನು ಗೊತ್ತಿಲ್ದೆ ಇರೋ ಹಾಗೇ ವರ್ಕ್ ಮಾಡ್ತಾ ಇದ್ಲು. ನಾನು ಇವಾಗ ಬೇಡ ಮದ್ಯಾಹ್ನ ಮಾತಾಡೋಣ ಅಂತ ಸುಮ್ಮನೆ ಆಗಿ ಬಿಟ್ಟೆ....


*****************************************


P. S.