Mahi - 8 in Kannada Love Stories by S Pr books and stories PDF | ಮಹಿ - 8

The Author
Featured Books
  • ಮರು ಹುಟ್ಟು 2

    ಸಾಲ ಮತ್ತು ಒಂಟಿತನ (ಇಂಟೀರಿಯರ್ - ಅನಿಕಾಳ ಮನೆ)ಅವಿನಾಶ್‌ ಮೋಸ ಮಾಡಿ ಹ...

  • ಮಹಿ - 8

     ಅಕಿರಾ ಶಿಲ್ಪಾ ಹತ್ತಿರ ಹಾಗೇ ಮಾತಾಡಿದ್ರು, ವಿನೋದ್ ಮಾತಾಡಿದ ಪ್ರತಿಯೊ...

  • ಬೆನ್ನಿಗಂಟಿದ ಹೊಟ್ಟೆಯ ಕಥೆ

    ಬಸಪ್ಪನಿಗೆ ಈ ಬದುಕು ಒಂದು ಸವಾಲಾಗಿಯೇ ಕಂಡಿತ್ತು. ಹೊಟ್ಟೆ ಹಿಂಡುವ ಬಡತ...

  • ಮಹಿ - 7

    ಬೆಳಿಗ್ಗೆ ಎದ್ದು ಆಫೀಸ್ ರೆಡಿ ಆಗಿ ಬೈಕ್ ಅಲ್ಲಿ ಹೋಗ್ತಾ ಇದ್ದೆ,  ಸಡನ್...

  • ಮರು ಹುಟ್ಟು 1

    ಕತ್ತಲೆಯ ಕೋಣೆ ಮತ್ತು ನೆನಪುಗಳ ಸರಣಿ (ಇಂಟೀರಿಯರ್ - ರಾತ್ರಿ)ಕತ್ತಲು ಆ...

Categories
Share

ಮಹಿ - 8

 ಅಕಿರಾ ಶಿಲ್ಪಾ ಹತ್ತಿರ ಹಾಗೇ ಮಾತಾಡಿದ್ರು, ವಿನೋದ್ ಮಾತಾಡಿದ ಪ್ರತಿಯೊಂದು ಮಾತನ್ನ ತುಂಬಾ ಸೀರಿಯಸ್ ಆಗಿ ತಗೊಂಡು, ಮಗನೆ ಒಂದಲ್ಲ ಒಂದು ದಿನ ಹೊರಗೆ ಸಿಗತಿಯ, ನಮ್ಮಕ್ಕ ನಾ ಮಾತಿಗೆ ಸುಮ್ನೆ ಏನು ಮಾತಾಡದೆ ಇದ್ದೀನಿ ಇಲ್ಲಾ ಅಂದಿದ್ರೆ ಮಗನೆ ನಿನಗೆ ನಾನ್ ಏನು ಅಂತ ತೋರಿಸ್ತಾ ಇದ್ದೆ ಅಂತ ಅನ್ಕೊಂಡು, ವರ್ಕ್ ಮಾಡ್ತಾ ಕೂತಿದ್ದೆ. ಸಂಜೆ ವರ್ಕ್ ಮುಗಿದ ಮೇಲೆ ಶಿಲ್ಪಾ ಗೆ ಬೈ ಹೇಳಿ ಹೊರಟು ಹೋದೆ. 2 ಡೇಸ್ ಜಸ್ಟ್ ಹಾಯ್ ಬೈ ಅಂತ ನೇ ಇದ್ದು ಬಿಟ್ಟೆ. ಶಿಲ್ಪಾ ನೈಟ್ ಟೈಮ್ ಮೆಸೇಜ್ ಕಾಲ್ ಮಾಡ್ತಾ ಇದ್ಲು ಬಟ್ ಹರಿಣಿ ಅಕ್ಕ ಫಂಕ್ಷನ್ ಗೆ ಎಲ್ಲಾ ನಾನೆ ಓಡಾಡ್ತಾ ಇದ್ದೆ ಸೋ ಅ ಬ್ಯುಸಿ ಅಲ್ಲಿ ಅಷ್ಟಾಗಿ ಗಮನ ಕೊಡಲಿಲ್ಲ . ಮಧ್ಯಾಹ್ನ ನಾ ಹೊರಗಡೆ ಹೋಗಿ ಲಂಚ್ ಮಾಡ್ಕೊಂಡು ಆಫೀಸ್ ಗೆ ಬಂದೆ, ಶಿಲ್ಪಾ ಅಕಿರಾ ಇಬ್ರು ಏನೋ ಮಾತಾಡ್ಕೋತ ಇದ್ರು, ಗಮನ ಕೊಡಲಿಲ್ಲ ನಾನು ಬ್ರೇಕ್ ಔಟ್ ಏರಿಯಾ ಕಡೆಗೆ ಹೋದೆ . ಶಿಲ್ಪಾ ನೋಡಿದ ಅಕಿರಾ ಅವರು ಎಷ್ಟೇ ರಿಚ್ ಆದ್ರೂ ಎಲ್ಲರನ್ನು ಫ್ರೆಂಡ್ ತರ ನೋಡ್ತಾರೆ ದುಡ್ಡು ಇದೆ ಅನ್ನೋ ಅಹಂ ಇಲ್ಲಾ ಅಂತ ಶಿಲ್ಪಾ ಹೇಳಿದ್ರೆ. ಅಕಿರಾ ಮಾತಾಡ್ತಾ ಹೌದು ಕಣೆ ಎಷ್ಟು ಒಳ್ಳೆಯವರು ಆಗದೆ ಇದ್ರೆ ಫ್ರೆಂಡ್ ಗೋಸ್ಕರ ಇಷ್ಟೆಲ್ಲ ಮಾಡ್ತಾರೆ ಹೇಳು, ನಾವು ಅವರಷ್ಟು ರಿಚ್ ಇಲ್ದೆ ಇರಬಹುದು ಬಟ್ ಅವರು ಖುದ್ದಾಗಿ ಬಂದು ಇನ್ವೆಟ್ ಮಾಡಿದ್ದಾರೆ ಅಂದ್ರೆ ಅವರ ಮನಸ್ಸು ಎಷ್ಟು ಒಳ್ಳೇದು ಅಂತ ಅರ್ಥ ಮಾಡ್ಕೋ. ಅಪ್ಪನ ಹೆಸರು ಹೇಳ್ಕೊಂಡು ಮೆರೆಯೋ  ವಿನೋದ್ ಅಂತವರಿಗೆ ಇಂತವರನ್ನ ತೋರಿಸಿ ನೋಡಿ ಬುದ್ದಿ ಕಲಿಯೋ ಅಂತ ಹೇಳಬೇಕು ಅಂತ ಹೇಳಿದ್ಲು. ಶಿಲ್ಪಾ ಅವಳ ಮಾತಿಗೆ ಅವನಿಗೆ ಏನಕ್ಕೆ ಬುದ್ದಿ ಕಲಿ ಅಂತ ಹೇಳ್ತಿಯ ಅವನಿಗೆ ಹೇಳಿದ್ರೆ ವೆಸ್ಟ್, ಫಂಕ್ಷನ್ ಗೆ ಹೋಗ್ತಿವಿ ಅಲ್ವಾ  ಅವರಿಗೆ ಬ್ರದರ್ ಯಾರಾದ್ರೂ ಇದ್ರೆ ಇಂಪ್ರೆಸ್ ಮಾಡಿ ಬುಟ್ಟಿಗೆ ಹಾಕ್ಕೋ, ವಿನೋದ್ ಗೆ ಸರಿಯಾಗಿ ಬುದ್ದಿ ಕಲಿಸ್ತಾನೆ ಅಂತ ಹೇಳಿದ್ಲು.

ಅಕಿರಾ ನನಗೆ ಅಷ್ಟೊಂದು ಆಸೆ ಇಲ್ವೆ ಆಲ್ರೆಡಿ ಈ ಹಾರ್ಟ್ ಸೋಲ್ಡ್ ಔಟ್ ಆಗೋಗಿದೆ ಅಂತ ಹೇಳಿದ್ಲು. ಶಿಲ್ಪಾ ಶಾಕ್ ಹಾಗಿ ಏನೇ ಹೇಳ್ತಾ ಇದ್ದಿಯಾ ಸೀರಿಯಸ್ಲಿ  ಯಾರೇ ಅವನು ಅಂತ ಕೇಳಿದ್ಲು. ಅಕಿರಾ ಇನ್ನ್ಯಾರು ಇದ್ದಾನೆ ಅಲ್ವಾ ಈಡಿಯಟ್ ಮೀಟ್ ಮಾಡಿದ 1st ಡೇ ನೇ ಕಿಸ್ ಮಾಡ್ತೀನಿ ಅಂತ ಹೇಳಿದ. ಎಷ್ಟು ಕೋಪ ಬಂತು ಅಂದ್ರೆ ಕೊಂದೆ ಬಿಡೋಣ ಅನ್ನಿಸ್ತು ಅದ್ರೆ ತಪ್ಪು ನಂದೇ ಇದ್ರು ಅವನು ತಲೆ ಬಗ್ಗಿಸಿದ. ದುಡ್ಡಿಲ್ಲ ಅನ್ನೋದು ಒಂದು ಬಿಟ್ರೆ ತುಂಬಾ ಒಳ್ಳೆಯವನೇ ಅ ಒಳ್ಳೆತನ ತುಂಬಾ ಇಷ್ಟ ಆಯ್ತು, ಹೇಳೋಣ ಅಂತ ಅಂದ್ರೆ ಅವನ ಪರಿಸ್ಥಿತಿ ಹೇಗೋ ಏನೋ, ಇವಾಗ ಅವನು ಇರೋ ಪರಿಸ್ಥಿತಿ ಅಲ್ಲಿ ನನ್ನ ಪ್ರೀತಿ ನಾ ಹೇಳಿದ್ರೆ ಸತ್ಯವಾಗ್ಲೂ ಒಪ್ಪಿಕೊಳ್ಳೋದು ಇಲ್ಲಾ ಅನ್ನೋ ಭಯ ಇದೆ ಅದಕ್ಕೆ ಸುಮ್ನೆ ಇದ್ದೀನಿ ಅಂತ ಹೇಳಿ ಶಿಲ್ಪಾ ಕಡೆಗೆ ನೋಡಿ ಸಾರೀ ನಿನ್ ಹೇಳ್ದೆ ಅಂತ ಹೇಳಿಬಿಟ್ಟೆ ನಿನಗೆ ಮಹಿ ಮೇಲೆ ಏನಾದ್ರು? ಅಂತ ಕೇಳಿ ಸೈಲೆಂಟ್ ಆಗಿ ಬಿಡ್ತಾಳೆ. ಶಿಲ್ಪಾ ನಗ್ತಾ ಅಷ್ಟೇನು ಇಲ್ಲಾ ಆಲ್ರೆಡಿ ನನಗೋಸ್ಕರ ನನ್ನ ಅತ್ತೆ ಮಗ ಕಾಯ್ತಾ ಇದ್ದಾನೆ ನಾನ್ ಲವ್ ಅಂತ ಅಂದ್ರೆ ಅಷ್ಟೇ ಸತ್ತೇ ಹೋಗ್ತಾನೆ, ಜಾಬ್ ಮಾಡೋಕೆ ಮನೇಲಿ ಒಪ್ಪಲಿಲ್ಲ ಅವನೇ ನನ್ನ ಮೇಲೆ ನಂಬಿಕೆ ಇಟ್ಟು ಮನೇಲಿ ಒಪ್ಪಿಸಿ ಈ ಜಾಬ್ ಮಾಡೋ ಹಾಗೇ ಮಾಡಿದ. ನನಗೋಸ್ಕರ ಅಷ್ಟು ಕೇರ್ ಮಾಡೋ ಅವನನ್ನ ಬಿಟ್ಟು ಯಾವನೋ ಬಂದು ನಿನ್ನ ಹಾಗೇ ನೋಡ್ಕೋತೀನಿ ಈಗೆ ನೋಡ್ಕೋತೀನಿ ಅಂತ ಹೇಳೋದನ್ನ ನಂಬಿ ಅವನಿಗೆ ಮೋಸ ಮಾಡೋಕೆ ನನಗೆ ಇಷ್ಟ ಇಲ್ಲಾ, ಸೋ ಮಹಿ ಮೇಲೆ ನನಗೆ ಯಾವುದೇ ಫೀಲಿಂಗ್ಸ್ ಇಲ್ಲಾ ಅಂತ ಹೇಳ್ತಾಳೆ. ಅಕಿರಾ ಥ್ಯಾಂಕ್ಸ್ ಕಣೆ ಎಲ್ಲಿ ನಿನಗೂ ನನ್ನ ತರಾನೇ ಅವನ ಮೇಲೆ ಫೀಲಿಂಗ್ಸ್ ಇದೆ ಏನೋ ಅಂತ ಭಯ ಬಿದ್ದೆ ಅಂತ ಹೇಳಿದ್ಲು. ಶಿಲ್ಪಾ ನಾನ್ ಬರೋದನ್ನ ನೋಡಿ ಅವನು ಬರ್ತಾ ಇದ್ದಾನೆ ಅವನ ಟಾಪಿಕ್ ಬಿಡು ಅಂತ ಹೇಳ್ತಾ ಲ್ಯಾಪ್ಟಾಪ್ ಕಡೆಗೆ ಗಮನ ಕೊಡ್ತಾಳೆ. 

ನಾನು ನನ್ನ ಪ್ಲೇಸ್ ಗೆ ಬಂದು ಕುತ್ಕೊಂಡು ವರ್ಕ್ ಮಾಡೋಕೆ ಶುರು ಮಾಡಿದೆ. ಸಂಜೆ ವರ್ಕ್ ಮುಗಿಸಿ  ಹೋಗೋವಾಗ ಶಿಲ್ಪಾ ಮಹಿ ಅಂತ ಕರೆದ್ಲು. ನಿಂತು ಏನು ಅಂತ ಕೇಳಿದೆ. ಮಹಿ ಏನಿಲ್ಲಾ ನಾಳೆ ವೀಕೆಂಡ್ ಅಲ್ವಾ ಸೋ ಫ್ರೀ ಇದ್ರೆ ಹೊರಗಡೆ ಹೋಗೋಣ ಅಂತ ಶಿಲ್ಪಾ ಹೇಳಿದ್ಲು. ನಾನು ನಗ್ತಾ ಫ್ರೀ ನಾ  ಇವಾಗ ಹೋಗಿ ನನಗೆ ರೆಸ್ಟ್ ಮಾಡೋಕು ಟೈಮ್ ಇಲ್ಲಾ  ನಾಳೆ ನಾಡಿದ್ದು 2 ಡೇಸ್ ಫುಲ್ ಬ್ಯುಸಿ ಅಷ್ಟು ವರ್ಕ್ ಇದೆ ನನಗೆ, ಸಾರೀ ಅಂತ ಹೇಳಿ ಹೊರಟು ಹೋದೆ. ಅಕಿರಾ ಶಿಲ್ಪಾ ಏನು ಮಾತನಾಡದೆ ಸೈಲೆಂಟ್ ಆಗಿ ಬ್ಯಾಗ್ ತೆಗೆದುಕೊಂಡು ಹೊರಟು ಹೋದ್ರು.

ಆಫೀಸ್ ನಿಂದ ಮನೆಗೆ ಬಂದೆ, ಶ್ವೇತಾ ಲೋ ಆಫೀಸ್ ಗೆ ಬಂದಿದ್ದೆ ಎಲ್ಲೋ ಹೋಗಿದ್ದೆ ಅಂತ ಕೇಳಿದ್ಲು. ಹೊರಗಡೆ ಹೋಗಿದ್ದೆ ಅಂತ ಹೇಳಿ ರೂಮ್ ಹೋಗಿ ರಿಫ್ರೆಶ್ ಆಗಿ ಹಾಲ್ ಗೆ ಬಂದೆ. ಅಮ್ಮ ಕಾಫಿ ಕೊಟ್ರು ಕುಡಿತಾ ಸೋಫಾ ಮೇಲೆ ಕುತ್ಕೊಂಡೆ.  ಅಮ್ಮ ಇನ್ನು ಏನ್ ಕೆಲಸ ಇದೆ ಅಂತ ಕೇಳಿದ್ರು. ಏನಿದ್ರೆ ನಾಳೆ ಸಂಜೆ ಅಡುಗೆ ಭಟ್ಟರು ಬರ್ತಾನೇ ಅಷ್ಟ್ರಲ್ಲಿ ಅವರಿಗೆ ಬೇಕಾದ ಐಟಂ ಗಳು ಬರ್ತಾವೆ, ಶಾಮಿಯಾನ ಗೆ ಹೇಳಿದ್ದೀನಿ ನೈಟ್ ಬಂದು ಹಾಕ್ತಾರೆ. ಹೂ ಎಲ್ಲಾ ಸಂಡೆ ಮಾರ್ನಿಂಗ್ ಬರುತ್ತೆ, ಫೋಟೋಗ್ರಾಫರ್ ಫಂಕ್ಷನ್ ಸ್ಟಾರ್ಟ್ ಆಗೋ ಮೊದಲು ಬರ್ತಾನೇ. ಎಲ್ಲರಿಗೂ ಅಡ್ವಾನ್ಸ್ ಕೊಟ್ಟಿದ್ದೀನಿ. ಮನೆ ಒಳಗೆ ಡೆಕೋರೇಷನ್ ಮಾಡೋಕೆ ಹುಡುಗರು ಸಂಡೆ ಬೆಳಗ್ಗೆನೇ ಬರ್ತಾರೆ. ಫಂಕ್ಷನ್ ಇರೋದು 11 ಗಂಟೆ ಗೆ ಸೋ ಅಷ್ಟರಲ್ಲಿ ಎಲ್ಲಾ ರೆಡಿ ಆಗಿರುತ್ತೆ. ಮತ್ತೆ ನೀವು ಕೊಟ್ಟಿರೋ ಲಿಸ್ಟ್ ಎಲ್ಲಾ ನಾಳೆ ಸಂಜೆ ಬರುತ್ತೆ. ಹರಿಣಿ ಅಕ್ಕನಿಗೆ ಶಾಪಿಂಗ್ ನಾಳೆ ಬೆಳಿಗ್ಗೆ ಹೋದ್ರೆ ಆಗುತ್ತೆ, ಟೈಲರ್ ಮಧ್ಯಾಹ್ನ ಬರ್ತಾರೆ. ಇನ್ನು ಏನಾದ್ರು ಇದ್ರೆ  ಹೇಳಿಬಿಡಿ ಅಂತ ಹೇಳಿದೆ. ಅಮ್ಮ ನಗ್ತಾ ಏನು ಇಲ್ವೋ ಅಂತ ಹೇಳಿದ್ರು. ಸರಿ ನಾನ್ ಹೊರಗಡೆ ಹೋಗ್ತಾ ಇದ್ದೀನಿ ಅಂತ ಹೇಳಿ ಬೈಕ್ ತಗೊಂಡು ಹೊರಗೆ ಹೋದೆ.. ಮತ್ತೆ ಕಾಲ್ ಮಾಡಿ ಎಲ್ಲರಿಗೂ ಒಂದು ಸರಿ ನೆನಪು ಮಾಡಿ  ರಾತ್ರಿ 10 ಗಂಟೆಗೆ ಮನೆಗೆ ಬಂದೆ.

ಮಾರನೇ ದಿನ ಬೆಳಿಗ್ಗೆ ತಿಂಡಿ ತಿಂದು ಫುಲ್ ಬ್ಯುಸಿ ಆಗೋದೇ, ಹರಿಣಿ ಅಕ್ಕ ಫ್ಯಾಮಿಲಿ ಬಂದ್ರು ಅವರಿಗೆ ಗೆಸ್ಟ್ ರೂಮ್ ನಾ ಕೊಟ್ವಿ. ಸಂಜೆ ಶಾಮಿಯಾನ ದವರು ಬಂದ್ರು ಫ್ರೆಂಡ್ಸ್ ಅವರಿಗೆ ಹೆಲ್ಪ್ ಮಾಡಿದ್ರು, ಅಡುಗೆ ಭಟ್ಟರು ಬಂದ್ರು ಅವರಿಗೆ  ಬೇಕಾದ ಎಲ್ಲಾ ಐಟಂ ಗಳು ಬಂದವು. ಮನೇಲಿ ಜನ ಜಾಸ್ತಿ ಇರೋದ್ರಿಂದ ಅಡುಗೆ ಭಟ್ಟರಿಗೆ ನೈಟ್ ಡಿನ್ನರ್ ಮಾಡೋಕೆ ಹೇಳಿಬಿಟ್ಟೆ ಅದಕ್ಕೆ ಬೇಕಾದನೆಲ್ಲಾ ತಂದು ಕೊಟ್ವಿ. ನೈಟ್ ಎಲ್ಲರೂ ಡಿನ್ನರ್ ಮಾಡಿ ಫ್ರೆಂಡ್ಸ್ ಮಾರ್ನಿಂಗ್  ಬರ್ತೀವಿ ಅಂತ ಹೊರಟು ಹೋದ್ರು. ನಾನು ಕೂಡ ಹೋಗಿ ರೂಮ್ ಅಲ್ಲಿ ಮಲಕೊಂಡೆ ಬೇಗ ನಿದ್ದೆ ಬಂತು. ಬೆಳಿಗ್ಗೆ ಅಮ್ಮ ಬಂದು ಬೇಗನೆ ಎಬ್ಬಿಸಿದ್ರೂ. ಎದ್ದು ಫ್ರೆಷ್ ಅಪ್ ಆಗಿ ಕಾಫಿ ಕುಡಿದು ಮಾಡಬೇಕಾದ ಕೆಲಸದ ಕಡೆಗೆ ಗಮನ ಕೊಟ್ಟೆ. ಡೆಕೋರೇಷನ್ ಅವರು ಬಂದು ಅವರ ಕೆಲಸ ಶುರು ಮಾಡಿಕೊಂಡರು, 10 ಗಂಟೆಗೆಲ್ಲ ಅವರು ಫುಲ್ ರೆಡಿ ಮಾಡಿ ಇಡೀ ಕೊಟ್ರು  ಅಷ್ಟರಲ್ಲಿ ಹಾಲ್ ಫುಲ್ ಕ್ಲಿಯರ್ ಮಾಡಿ ಸೋಫಾಗನೆಲ್ಲ ಕಾರ್ನರ್ ಮಾಡಿ ಬಂದವರಿಗೆ ಕುಳಿತು ಕೊಳ್ಳೋಕೆ ಚೇರ್ ಗಳನ್ನ ಹಾಕಿದ್ವಿ,  ಮೇನ್ ಸ್ಟೇಜ್ ಮೇಲೆ ಅಮ್ಮ ಹರಿಣಿ ಅವರ ಅತ್ತೆ ಅಮ್ಮನ ಫ್ರೆಂಡ್ಸ್  ರೆಡಿ ಮಾಡ್ತಾ ಇದ್ರು. 11 ಗಂಟೆ ಗೆ ಎಲ್ಲಾ ರೆಡಿ ಆಯ್ತು , ಫಂಕ್ಷನ್ ಗೆ ಲೇಡೀಸ್ ಬರೋಕೆ ಶುರು ಮಾಡಿದ್ರು. ಅಮ್ಮ ಬಂದು ಲೋ ನಿನ್ ಹೋಗಿ ರೆಡಿ ಆಗಿ ಬಾ ಅಂತ ಹೇಳಿದ್ರು. ಅಮ್ಮ ಅಕ್ಕನ ಫಂಕ್ಷನ್ ಗೆ ನಾನ್ ಏನಕ್ಕೆ ರೆಡಿ ಆಗಬೇಕು ಹೋಗಮ್ಮ ಅಂದೇ. ಲೋ ಹೋಗಿ ರೆಡಿ ಆಗು ಅಂತ ರೂಮ್ ಗೆ ಬಲವಂತವಾಗಿ ಕಳಿಸಿದ್ರು. 

ಅಕಿರಾ ಶಿಲ್ಪಾ ನಾ ನೋಡಿ ನೋಡು ನಿನ್ನಿಂದ ಲೇಟ್ ಆಯ್ತು ಅಂತ ಬೈಯ್ಯೋಕೆ ಶುರು ಮಾಡಿದ್ರೆ, ಶಿಲ್ಪಾ ಏನ್ ಆಗಿಲ್ಲ ನಡಿ ಅಂತ ಗೇಟ್ ಹೊರಗೆ ಬೈಕ್ ನಾ ನಿಲ್ಲಿಸಿ ಗೇಟ್ ಒಳಗೆ ಬರ್ತಾ ಮನೇನ ನೋಡಿ ಶಿಲ್ಪಾ ಏನೇ ಇಷ್ಟು ದೊಡ್ಡ ಮನೆ ಅಂತ ಹೇಳ್ತಾ ಮನೆ ಒಳಗೆ ಬರ್ತಾ  ಮನೆ ಒಳಗೆ ನೋಡಿ ಲೇ ಅಬ್ಬಾ ಎಷ್ಟು ಚೆನ್ನಾಗಿ ಮಾಡಿದ್ದಾರೆ ಕಣೆ, ಅಂತ ಇಬ್ಬರು ಮಾತಾಡಿಕೊಂಡು ಶ್ವೇತಾ ಗೆ ಹಾಯ್ ಮಾಡಿದ್ರು. ಶ್ವೇತಾ ಅವರ ಹತ್ತಿರ ಹೋಗಿ  ಥ್ಯಾಂಕ್ಸ್ ಬಂದಿದಕ್ಕೆ ಕೂತ್ಕೊಳ್ಳಿ ಅಂತ ಅವರಿಬ್ಬರಿಗೆ ಕೂತ್ಕೋಳ್ಳೋಕೆ ಜಾಗ ತೋರಿಸಿ ಹರಿಣಿ ಅಕ್ಕನ ಹತ್ತಿರ ಹೋದ್ಲು. 

ರೂಮ್ ಅಲ್ಲಿ ರೆಡಿ ಆಗ್ತಾ ಇದ್ದಾಗ ಯಾರೋ ರೂಮ್ ಡೋರ್ ಬಡಿದ ಹಾಗೇ ಆಯ್ತು. ನಾನ್ ಹೋಗಿ ರೂಮ್ ಡೋರ್ ಓಪನ್ ಮಾಡಿ ನೋಡಿದೆ ಹರಿಣಿ ಅಕ್ಕನ ಗಂಡ ರೋಷನ್. ನಾನು ಹಾಯ್ ಭಾವ ಏನ್ ಇಲ್ಲಿ ಏನಾದ್ರು ಬೇಕಿತ್ತಾ ಅಂತ ಕೇಳ್ದೆ. ಅವರು ಏನಿಲ್ಲಾ ಮಹಿ ಥ್ಯಾಂಕ್ಸ್ ಹೇಳೋಣ ಅಂತ ಬಂದೆ ಅಂತ ಹೇಳಿದ್ರು. ಥ್ಯಾಂಕ್ಸ್ ಏನಕ್ಕೆ ಭಾವ ನಾನ್ ಏನ್ ಮಾಡಿದೆ ಅಂತದ್ದು ಅಂತ ಕೇಳ್ದೆ. ರೋಷನ್ ಹರಿಣಿ ಅವರ ಅಪ್ಪ ಅಮ್ಮ ನಾ ಕಳ್ಕೊಂಡು ಎಷ್ಟು ನೋವು ಪಡ್ತಾ ಇದ್ಲು ಅಂತ ನನಗೆ ಗೊತ್ತು ಅದ್ರೆ ದೇವ್ರು ಅದನ್ನ ನಿಮ್ಮ ರೂಪದಲ್ಲಿ ವಾಪಸ್ಸು ಕೊಟ್ಟಿದ್ದಾನೆ. ಇವತ್ತು ಅವಳು ಅಷ್ಟು ಖುಷಿಯಾಗಿ ಇದ್ದಾಳೆ ಅಂದ್ರೆ ಕಾರಣ ನೀವು ಅಂತ ಹೇಳಿದ್ರು. ಅಯ್ಯೋ ಭಾವ ಬನ್ನಿ ನನಗೆ ಶ್ವೇತಾ ಅಕ್ಕ ಬೇರೆ ಅಲ್ಲ ಹರಿಣಿ ಅಕ್ಕ ಬೇರೆ ಅಲ್ಲ. ಹರಿಣಿ ಅಕ್ಕ ಈ ಮನೆ ಮಗಳು, ನಮ್ ಮಧ್ಯ ಥ್ಯಾಂಕ್ಸ್ ಎಲ್ಲಾ ಬರಬಾರದು ಅಂತ ಹೇಳಿ ಭಾವ ನಾ ಜೊತೆಗೆ ಫಂಕ್ಷನ್ ನಡಿಯೋ ಹತ್ತಿರ ಬಂದೆ. ಶ್ವೇತಾ ನನ್ನಾ ನೋಡಿ ಲೋ ಎಲ್ಲೋಗಿದ್ದೆ ಬಾ ಇಲ್ಲೇ ನಿಂತ್ಕೋ ಅಲ್ಲಿ ಜನ ಇದ್ದಾರೆ ಅಂತ ನನ್ನ ಕೈ ಇಡ್ಕೊಂಡು ಪಕ್ಕದಲೇ ನಿಲ್ಲಿಸಿಕೊಂಡಳು. 

ಶಿಲ್ಪಾ ಶ್ವೇತಾ ಪಕ್ಕ ನನ್ನ ನೋಡಿ ಶಾಕ್ ಆಗಿ ಮೊಬೈಲ್ ನೋಡ್ತಾ ಇದ್ದಾ ಅಕಿರಾ ನಾ ಲೇ ಮೊಬೈಲ್ ಏನ್ ನೋಡ್ತಿಯೇ ಅಲ್ಲಿ ನೋಡೇ ಮಹಿ ಅಂತ ಹೇಳ್ತಾಳೆ. ಅಕಿರಾ ಲೇ ಲೇಡೀಸ್ ಫಂಕ್ಷನ್ ಅಲ್ಲಿ ಮಹಿ ಏನಕ್ಕೆ ಇರ್ತಾನೆ ನಿನಗೆ ಲೂಸ್ ಅ ಅಂತ ಮೊಬೈಲ್ ಬಿಟ್ಟು ಶಿಲ್ಪಾ ಕಡೆಗೆ ನೋಡ್ತಾಳೆ. ಶಿಲ್ಪಾ ಅಕಿರಾ ಮುಖನ ಸ್ಟೇಜ್ ಕಡೆಗೆ ತಿರುಗಿಸಿ ನೋಡು ಅಂತ ಹೇಳಿದ್ಲು. ಶ್ವೇತಾ ಪಕ್ಕ ನನ್ನ ನೋಡಿ ಶಾಕ್ ಆಗಿ ಹಾಗೇ ನೋಡ್ತಾ ಇದ್ದು ಬಿಟ್ಟಳು. ಶಿಲ್ಪಾ ಲೇ ಶ್ವೇತಾ ಇಷ್ಟು ಕ್ಲೋಸ್ ಆಗಿ ಮಹಿ ಜೊತೆಗೆ ಇದ್ದಾಳೆ ಅಂದ್ರೆ? ಅಂತ ಮಾತು ಪೂರ್ತಿ ಮಾಡೋಕು ಮೊದಲೇ ಅಕಿರಾ ಬ್ರದರ್ ಕೂಡ ಆಗಿರ್ತಾನೆ. ಎದ್ದು ಬೇಗ ಬಾರೆ  ಎಷ್ಟು ಸುಳ್ಳು ಹೇಳಿದ ಇವನು ಇವನನ್ನ ಸುಮ್ನೆ ಮಾತ್ರ ಬಿಡಲ್ಲ. ನನ್ನ ಪ್ರೀತಿ ಇವನಿಗೋಸ್ಕರ ಮುಚ್ಚಿಟ್ಟೆ ಬಾರೆ ಅಂತ ಕೈ ಇಡ್ಕೊಂಡು ಶ್ವೇತಾ ಹತ್ತಿರ ಬಂದಳು.  ನಾನು ಶ್ವೇತಾ ಕಡೆಗೆ ನೋಡ್ತಾ ಮಾತಾಡ್ತಾ ಇದ್ದೆ ಇವರಿಬ್ಬರನ್ನು ನೋಡಲೇ ಇಲ್ಲಾ ನಾನು ಒಂದು ವೇಳೆ ನೋಡಿದ್ದಿದ್ರೆ ಇವರು ಹೋಗೋವರೆಗೂ ಕಾಣಿಸ್ತಾ ಇದ್ದಿಲ್ಲ. ಶ್ವೇತಾ ಅಕಿರಾ ನಾ ನೋಡಿ 1 ನಿಮಿಷ ಅಕಿರಾ ಅಂತ ಹೇಳಿದ್ಲು. ನಾನು ಅಕಿರಾ ನಾ ಅಂತ ಶಾಕ್ ಹಾಗಿ ತಿರುಗಿ ನೋಡಿದೆ. ಅಲ್ಲಿ ಅಕಿರಾ ನಾ ನೋಡಿ ಹಾಗೇ ನೋಡ್ತಾ ನಿಂತು ಬಿಟ್ಟೆ. ಶ್ವೇತಾ ನನ್ನ ತೋರಿಸಿ ಇವನೇ ನನ್ನ ತಮ್ಮ ಮಹಿ ನಿಮ್ ಟೀಂ ಅಲ್ಲೇ ವರ್ಕ್ ಮಾಡೋದು ನೋಡಿರ್ತೀಯ ಅಲ್ವಾ ಅಂತ ಹೇಳಿದ್ಲು. ಅಕಿರಾ ಕೋಪದಿಂದ ನನ್ನ ಗುರಾಯಿಸಿ ಕೊಂಡು ನೋಡ್ತಾ ನಿಮ್ ತಮ್ಮ ನಾ ಹೇಳೇ ಇಲ್ಲಾ ಅಂತ ಕೇಳಿದ್ಲು. ಶ್ವೇತಾ ಇವನು ಹಾಗೇನೇ ಎಲ್ಲಿ ಏನು ಹೇಳಿಕೊಳ್ಳೋದು ಇಲ್ಲಾ. ಸೀಕ್ರೆಟ್ ಮೇಂಟೈನ್ ಮಾಡ್ತಾ ಇರ್ತಾನೆ. ಬಂದಾಗ ಕೇಳ್ದೆ ಅಲ್ವಾ ಯಾರ್ ಇಷ್ಟೆಲ್ಲ ಚೆನ್ನಾಗಿ ಮಾಡಿದ್ದು ಅಂತ ಇವನೇ ಮುಂದೆ ನಿಂತು ಇದೆ ರೀತಿ ಇರಬೇಕು ಅಂತ ಹೇಳಿ ಹೇಳಿ ಮಾಡಿಸಿದ ಅಂತ ಹೇಳಿ, ಲೋ ಹೋಗಿ ಹರಿಣಿ ಗೆ ಬ್ಲೆಸಿಂಗ್ ಮಾಡೊಗು ಅಂತ ಹೇಳಿದ್ಲು. ನಾನು ಲೇ ನಾನ್ ಏನ್ ಅಂತ ಬ್ಲೆಸಿಂಗ್ ಮಾಡ್ಲಿ ನಾನ್ ಅವರಿಗಿಂತ ಚಿಕ್ಕವನು, ನೀವ್ ಮಾಡಿ ಅಂತ ಹೇಳಿ ತಪ್ಪಿಸಿಕೊಂಡು ಹೋಗೋಕೆ ನೋಡಿದೆ. ಶ್ವೇತಾ ಕೈ ಇಡಿದು ಹೋಗೋ ಅಂತ  ಹರಿಣಿ ಅಕ್ಕನ ಹತ್ತಿರ ಕಳಿಸಿದ್ಲು. 

ಹರಿಣಿ ಅಕ್ಕ ನನ್ನ ನೋಡಿ ಖುಷಿಯಾಗಿ ಸಂತೋಷ ದಿಂದ ಕಣ್ಣೀರು ಹಾಕೋಕೆ ಶುರು ಮಾಡಿದ್ರು. ನಾನ್ ಅವರ ಮುಂದೆ ಮಂಡಿ ಉರಿ ಕೂತ್ಕೊಂಡು ಕಣ್ಣೀರು ಹೊರೆಸ್ತಾ ಏನಕ್ಕ ಇದು ಇಂತ ಟೈಮ್ ಅಲ್ಲಿ ಈಗೆ ಅಳ್ತಾರಾ ಅಂತ ಕೇಳ್ದೆ. ಹರಿಣಿ ಅಕ್ಕ ತುಂಬಾ ಸಂತೋಷ ಆಗ್ತಾ ಇದೆ ಕಣೋ  ಅಪ್ಪ ಅಮ್ಮ ಹೋದಮೇಲೆ ಅಂತ ಮಾತು ಮುಂದುವರೆಸೋಕು ಮೊದಲೇ ಅವರ ಮಾತಿಗೆ ಅಡ್ಡ ಬಂದು ಅಕ್ಕ ಅಪ್ಪ ಅಮ್ಮ ಇಲ್ಲಾ ಅಂತ ಯಾವತ್ತು ಅನ್ಕೋಬೇಡ, ಈ ಮನೆ ನಿಂದು ಶ್ವೇತಾ ಗೆ ಎಷ್ಟು ಹಕ್ಕು ಇದೆಯೋ ಅದಕ್ಕಿಂತ ಜಾಸ್ತಿ ಹಕ್ಕು ಈ ಮನೇಲಿ ನಿನಗೆ ಇದೆ,  ಇದು ನಿನ್ನ ಮನೆ  ನಾನು ನಿನ್ನ ತಮ್ಮ, ಅರ್ಥ ಆಯ್ತಾ ಅಂತ ಹೇಳಿದೆ, ಬಟ್ ಹರಿಣಿ ಅಕ್ಕ ಕಣ್ಣೀರು ಹಾಕ್ತಾನೆ ಇದ್ಲು. ನಾನ್ ಎದ್ದು ಹೋಗಿ ಶ್ವೇತಾ ಮುಂದೆ ನಿಂತು,  ಥ್ಯಾಂಕ್ಸ್ ಕಣೆ  ಅಕ್ಕನ ಫ್ರೆಂಡ್ ಅಕ್ಕನೇ ಅಂತ ಅಂದುಕೊಂಡು ಮಾಡಿದಕ್ಕೆ ಒಳ್ಳೇ ಮರ್ಯಾದೆ ಕೊಟ್ಲು ನಿಮ್ ಫ್ರೆಂಡ್, ಇನ್ಮೇಲಿಂದ ನೀನು ಕೂಡ ನನಗೆ ಅಕ್ಕ ಅಲ್ಲ ನಾನ್ ಕೂಡ ನಿನಗೆ ತಮ್ಮ ಅಲ್ಲ, ಇಲ್ಲಿಗೆ ಮುಗಿತು ನನ್ನ ನಿನ್ನ ರಕ್ತ ಸಂಬಂಧ ಅಂತ ಕೋಪದಿಂದ ಹೇಳಿ ಅಲ್ಲಿಂದ ಹೋಗೋಕೆ ಹೋದೆ. ಶ್ವೇತಾ ಕೈ ಇಡ್ಕೊಂಡು  ನನ್ನ ಮುಖ ನೋಡ್ತಾ ಒಂದು ಸ್ಮೈಲ್ ಮಾಡಿ ಹಿಂದೆ ನೋಡು ಅಂತ ಹೇಳಿದ್ಲು. ನಾನು ತಿರುಗಿ ನೋಡಿದೆ.  ಹರಿಣಿ ಅಕ್ಕ ನನ್ನ ಅಪ್ಪಿಕೊಂಡು ಸಾರೀ ಅಂತ ಹೇಳಿದ್ಲು. ನಾನು ಅಪ್ಪಿಕೊಂಡು ಅಬ್ಬಾ ರಾಕ್ಷಸಿ ಅಕ್ಕನಿಂದ ದೇವತೆ ಅಂತ ಅಕ್ಕ ಸಿಕ್ಕಿದ್ಲು ಅಂತ ಹೇಳಿದೆ. ಹರಿಣಿ ಅಕ್ಕ  ಅ ಮಾತಿಗೆ ನಕ್ಕರೆ ಶ್ವೇತಾ ಕೋಪ ಮಾಡ್ಕೊಂಡು ಬೆನ್ನಿಗೆ ಒಂದು ಗುದ್ದಿದ್ಲು. ಆಮೇಲೆ ಹರಿಣಿ ಅಕ್ಕ ನಾ ಕರ್ಕೊಂಡು ಹೋಗಿ ಕೂರಿಸಿ, ಅಲ್ಲಿಂದ ಹೊರಟು ಹೊರಗೆ ಬಂದೆ,, ಅಡುಗೆ ಮಾಡೋವರ ಕಡೆ ಹೋದೆ. 

ಶಿಲ್ಪಾ ಅಕಿರಾ ಇಬ್ರು ನನ್ನ ಮೇಲೆ ಕೋಪ ಮಾಡ್ಕೊಂಡೆ ಇದ್ದು ಬಿಟ್ರು..


****************************************


P. S.