Mahi - 12 in Kannada Love Stories by S Pr books and stories PDF | ಮಹಿ - 12

The Author
Featured Books
  • ಪ್ರೇಮ ಜಾಲ (love is blind) - 3

    ಅಧ್ಯಾಯ 3ರಕ್ತ ಪಿಶಾಚಿಗಳ ಕಾಲ ಯಾವಾಗ ಶುರುವಾಯಿತು ಹೇಳುವುದು ಅಸಾಧ್ಯ ....

  • ಅಪಘಾತದ ನಂತರದ ಬದುಕು

    ಸೂರ್ಯೋದಯದ ಹೊನ್ನ ಕಿರಣಗಳು ಬೆಂಗಳೂರಿನ ಗಗನಚುಂಬಿ ಕಟ್ಟಡಗಳ ಮೇಲೆ ಪ್ರತ...

  • ಮಹಿ - 12

    ಕಾಫಿ ಶಾಪ್ ಯಿಂದ ನಾನು ಹೊರಟು ಹೋದಮೇಲೆ. ಧ್ರುವ್ ಅಕಿರಾ ಹತ್ತಿರ ಮಾತಾಡ...

  • ಮರು ಹುಟ್ಟು 6

    ಹೊಸ ಜವಾಬ್ದಾರಿಯ ಹೊಸ ನೋಟ,ಯಾಂತ್ರಿಕತೆಯಿಂದ ಹೊರಗೆ (ಇಂಟೀರಿಯರ್ - ಕಚೇ...

  • ಪ್ರೇಮ ಜಾಲ (love is blind) - 2

    ಅಧ್ಯಾಯ ೨ಗಾಢ ಕತ್ತಲಲ್ಲಿ ಅವನ ಆಕ್ರಂದನದ ಆರ್ಭಟ ಗುಡುಗಿನಂತೆ ಕೇಳಿಸುತ್...

Categories
Share

ಮಹಿ - 12

ಕಾಫಿ ಶಾಪ್ ಯಿಂದ ನಾನು ಹೊರಟು ಹೋದಮೇಲೆ. ಧ್ರುವ್ ಅಕಿರಾ ಹತ್ತಿರ ಮಾತಾಡ್ತಾ ನಮಗೆ ಹೆಲ್ಪ್ ಮಾಡಿದ ಅಂತ ಅವನಿಗೆ ಹೆಲ್ಪ್ ಮಾಡೋಕೆ ಹೋದ್ರೆ ನೋಡು ಹೇಗೆ  ಬೇಡ ಅಂತ ಹೇಳಿ ಹೋಗ್ತಾ ಇದ್ದಾನೆ ಅಂತ ಸ್ವಲ್ಪ ಕೋಪದಲ್ಲಿ ಹೇಳ್ತಾನೆ. ಅಕಿರಾ ಗೆ ಕೂಡ ನಾನು ಹಾಗೇ ಬಂದಿದ್ದು ಇಷ್ಟ ಹಾಗಿಲ್ಲ ಅಂತ ಅನ್ನಿಸುತ್ತೆ, ಬಿಡು ಧ್ರುವ್ ಅವನು ಹಾಗೇ ಮಾಡಿದಕ್ಕೆ ನಿನ್ ಏನಕ್ಕೆ ಕೋಪ ಮಾಡ್ಕೊತೀಯ, ಇವಾಗ ನಮ್ ಪ್ರಾಬ್ಲಮ್ ಕ್ಲಿಯರ್ ಆಯ್ತು ಅಲ್ವಾ ಕೂಲ್ ಆಗಿ ಇರು ಬಾ ಡಿನ್ನರ್ ಗೆ ಹೋಗೋಣ ಅಂತ ಹೇಳಿದ್ಲು. ಧ್ರುವ್ ಕೂಡ ಸ್ವಲ್ಪ ಕೂಲ್ ಹಾಗಿ ಅಕಿರಾ ನಾ ನೋಡ್ತಾ ಒಂದು ಸ್ಮೈಲ್ ಮಾಡಿ ಹ್ಮ್ ಹೋಗೋಣ ಅಂತ ಹೇಳಿದ. ಅಕಿರಾ ಧ್ರುವ್ ಕೂಲ್ ಆಗಿ ಓಕೆ ಹೇಳಿದಕ್ಕೆ ಖುಷಿಯಾಗಿ ಶಿಲ್ಪಾ ಕಡೆಗೆ ನೋಡ್ತಾ ಶಿಲ್ಪಾ ನಿನ್ ಕೂಡ ಬಾ ನಮ್ ಜೊತೆ ಡಿನ್ನರ್ ಗೆ ಅಂತ ಕರೆದ್ಲು. ಶಿಲ್ಪಾ ಬೇಡ ಅಕಿರಾ ನೀವ್ ಹೋಗಿ ಬನ್ನಿ ನಾನ್ ಮನೇಲಿ ಏನು ಹೇಳ್ದೆ ಬಂದು ಬಿಟ್ಟೆ, ನೀವ್ ಹೋಗಿ ಬನ್ನಿ ನಾನ್ ಹೊರಡ್ತೀನಿ ಅಂತ ಹೇಳಿದ್ಲು. ಅಕಿರಾ ಅದೆಲ್ಲಾ ನಿನ್ ಹೇಳಬೇಡ ಸುಮ್ನೆ ಬಾ ನಮ್ ಜೊತೆ ಅಂತ ಬಲವಂತ ಮಾಡಿದ್ಲು. ಧ್ರುವ್ ಅಕಿರಾ ಮನೇಲಿ ಹೇಳಿ ಬಂದಿಲ್ಲ ಅಂತ ಇದ್ದಾರೆ ಅಲ್ವಾ ಹೋಗ್ಲಿ ಬಿಡು ನೆಕ್ಸ್ಟ್ ಟೈಮ್ ನಮ್ ಜೊತೆಗೆ ಬರ್ತಾರೆ ಅಂತ ಹೇಳಿ ಶಿಲ್ಪಾ ಕಡೆಗೆ ನೋಡಿದ. ಶಿಲ್ಪಾ ಧ್ರುವ್ ಮಾತಿನಲ್ಲಿ ಇರೋ ಅರ್ಥ ತಿಳ್ಕೊಂಡು ಇವನಿಗೆ ನಾನ್ ಮೊದಲು ಹೋದ್ರೆ ಸಾಕು ಅಂತ ಅನ್ನಿಸ್ತಾ ಇದೆ ಅಂತ ಅನ್ಕೊಂಡು, ಅಕಿರಾ ಕಡೆಗೆ ನೋಡ್ತಾ ಪ್ಲೀಸ್ ಅಕಿರಾ ಅರ್ಥ ಮಾಡ್ಕೋ ಮನೇಲಿ ಹೇಳದೆ ಬಂದ್ರೆ ಎಷ್ಟು ಟೆನ್ಶನ್ ಆಗ್ತಾರೆ ಅಂತ ನಿನಗೆ ಗೊತ್ತು ನೆಕ್ಸ್ಟ್ ಟೈಮ್ ಖಂಡಿತ ಬರ್ತೀನಿ ಅಂತ ಹೇಳ್ತಾಳೆ. ಅಕಿರಾ ಹ್ಮ್ ಸರಿ ನಿನ್ ಇಷ್ಟ ಅಂತ ಹೇಳಿ ಧ್ರುವ್ ಹೊರಡೋಣ್ವಾ ಅಂತ ಹೇಳ್ತಾಳೆ. ಧ್ರುವ್ ಖುಷಿಯಾಗಿ ಅ ಹೋಗೋಣ ಅಂತ ಹೇಳಿ ಎದ್ದು ನಿಂತು ಅಕಿರಾ  ಜೊತೆ ಕ್ಯಾಬಿನ್ ನಿಂದ ಹೊರಗೆ ಬಂದು ಅಲ್ಲಿನ ಸೂಪರ್ವೈಸರ್ ಗೆ ನೋಡ್ಕೊಳ್ಳೋಕೆ ಹೇಳಿ ಹೊರಗೆ ಬಂದು ಇಬ್ಬರು ಶಿಲ್ಪಾ ಗೆ ಕಾಲ್ ಮಾಡಿ ಕಾರ್ ಅಲ್ಲಿ ಹೊರಟು ಹೋಗ್ತಾರೆ.

  ಅವರು ಹೋದಮೇಲೆ ಶಿಲ್ಪಾ ಮನೆಗೆ ಹೋಗೋಣ ಅಂತ ಕ್ಯಾಬ್ ಬುಕ್ ಮಾಡೋಕೆ ಹೋಗ್ತಾಳೆ. ಆಗ ಟೈಮ್ ನೋಡ್ತಾಳೆ 10 ಗಂಟೆ ಆಗಿರುತ್ತೆ. ಅವಳಿಗೆ ಸ್ವಲ್ಪ ಭಯ ಆಗೋಕೆ ಶುರುವಾಗುತ್ತೆ ಇಷ್ಟೋತ್ತಲ್ಲಿ 10 km ಕ್ಯಾಬ್ ಅಲ್ಲಿ ಹೋಗಬೇಕಾ ಅಂತ. ಶಿಲ್ಪಾ ವಿಧಿ ಇಲ್ಲಾ ಹೋಗಲೇ ಬೇಕು ಅಂತ ಅನ್ಕೊಂಡು ಕ್ಯಾಬ್ ಬುಕ್ ಮಾಡೋಕೆ ಹೋಗ್ತಾಳೆ,  ಮೊಬೈಲ್ ಅಲ್ಲಿ ಕ್ಯಾಬ್ ಬುಕ್ ಮಾಡ್ತಾ ಇರೋವಾಗ, ಅವಳ ಮುಂದೆ ಸಡನ್ ಆಗಿ ಒಂದು ಬೈಕ್ ಬಂದು ಸ್ಟಾಪ್ ಆಗುತ್ತೆ. ಶಿಲ್ಪಾ ಗೆ ಇದ್ದಕಿದ್ದ ಹಾಗೇ ಬೈಕ್ ಹಾಗೇ ಬಂದು ನಿಂತಿದ್ದು ನೋಡಿ ಭಯ ಆಗಿ  ಭಯ ಬೀಳ್ತಾ ನೇ ಬೈಕ್ ಕಡೆಗೆ ತಲೆ ಎತ್ತಿ ನೋಡ್ತಾಳೆ. ಬೈಕ್ ಮೇಲೆ ಇದ್ದಾ ವ್ಯಕ್ತಿ ನಾ ನೋಡಿ ಹೋದ ಜೀವ ಮತ್ತೆ ವಾಪಸ್ಸು ಬಂದ ಹಾಗೇ ಆಗುತ್ತೆ, ಲೋ ನಿನಾ ನಾನ್ ಯಾರೋ ಅಂತ ಭಯ ಬಿದ್ದೆ  ಅಂತ ಬೈಯ್ಯೋಕೆ ಶುರು ಮಾಡಿದ್ಲು . ನಾನು ನಗ್ತಾ ಇಬ್ಬರ ಲವರ್ಸ್ ಮಧ್ಯ ನೀನು ಒಂಟಿ ಆಗ್ತೀಯಾ ಅಂತ ಗೊತ್ತಿತ್ತು ಅದಕ್ಕೆ  ಕರ್ಕೊಂಡು ಹೋಗೋಣ ಅಂತ ಬಂದ್ರೆ ನನ್ನೇ ಬೈತಾ ಇದ್ದಿಯಾ ಐಮ್ ಹರ್ಟ್ ನಾನ್ ಹೋಗ್ತೀನಿ ಅಂತ ಸ್ವಲ್ಪ ನಾಟಕೀಯ ವಾಗಿ ಹೇಳ್ದೆ . ಶಿಲ್ಪಾ ಭಯ ಬಿದ್ದು ಹೋಗಿ ಓಡಿ  ಬಂದು   ಬೈಕ್ ಅಲ್ಲಿ ಕೂತು ನಡಿ ಬೈಯ್ಯೋದಿಲ್ಲ ಅಂತ ಹೇಳಿದ್ಲು. ನಾನು ಒಳಗೊಳಗೇ ನಕ್ಕೊಂಡು ಬೈಕ್ ನಾ ಮುಂದೆ ಡ್ರೈವ್ ಮಾಡ್ತಾ  ಮುಂದೆ ಹೋದೆ .  ಬೈಕ್ ಅಲ್ಲಿ ಹೋಗ್ತಾ, ಶಿಲ್ಪಾ ಮಾತಾಡ್ತಾ  ಹೌದು ನಿನಗೆ ಹೇಗೆ ಗೊತ್ತು ಅವರು ನನ್ನ ಬಿಟ್ಟು ಹೋಗ್ತಾರೆ ಅಂತ ಕೇಳಿದ್ಲು. ನಗ್ತಾ ಸಿಂಪಲ್ ಕಣೆ ಅವರಿಬ್ಬರಿಗೆ ಈಗ ಅವರ ಪ್ರಾಬ್ಲಮ್ ಕ್ಲಿಯರ್ ಆಯ್ತು ಅಲ್ವಾ ಅದಕ್ಕೆ ಈಗ ಅವರಿಬ್ಬರಿಗೆ ಮೂರನೇ ವ್ಯಕ್ತಿ ಬಗ್ಗೆ ಯೋಚ್ನೆ ಮಾಡೋ ಅಷ್ಟು ಟೈಮ್ ಆಗಲಿ ಇಂಪಾರ್ಟೆಂಟ್ ಆಗಲಿ ಕೊಡೋಕೆ ಹೋಗಲ್ಲ, ಜಸ್ಟ್ ಇಗ ಅವರಿಬ್ಬರಿಗೆ ಅವರ ಬಗ್ಗೆ ಅಷ್ಟೇ ಯೋಚ್ನೆ ಇರೋದು ಅಂತ ಹೇಳಿದೆ.  ಶಿಲ್ಪಾ ಲೋ ನಿನ್ ಸುಮ್ನೆ ಇರೋ ಅಕಿರಾ ಏನು ಅಂತ ನನಗೆ ಗೊತ್ತು ಅವಳಿಗೆ ಎಲ್ಲರೂ ಇಂಪಾರ್ಟೆಂಟ್ ಯಾರನ್ನು ಬಿಟ್ಟು ಕೊಡೋದು ಇಲ್ಲಾ ಅಂತ ಹೇಳಿದ್ಲು. 

  ನಾನ್ ನಗ್ತಾ ಮತ್ತೇನು ಹೇಳದೆ ಸೈಲೆಂಟ್ ಅದೇ. ನಾನು ಸೈಲೆಂಟ್ ಆಗಿದ್ದನ್ನ ನೋಡಿ ಲೋ ಏನಕ್ಕೆ ಸೈಲೆಂಟ್ ಅದೇ ಅಂತ ಕೇಳಿದ್ಲು. ನಾನ್ ಏನ್ ಮಾತಾಡ್ಲಿ ನಿನ್ನ ಫ್ರೆಂಡ್ ಬಗ್ಗೆ ನಿನ್ ಅಷ್ಟು ನಂಬಿಕೆ ಇಟ್ಕೊಂಡು ಇರೋವಾಗ ಅಂತ ಹೇಳ್ದೆ. ಶಿಲ್ಪಾ  ಲೋ ನಿನಗೆ ಅವಳು ನೆನ್ನೆ ಮೊನ್ನೆ ಯಿಂದ ಗೊತ್ತು ಬಟ್ ನನಗೆ ಅವಳು ಬೆಸ್ಟ್ ಫ್ರೆಂಡ್ ಅವಳು ಹಾಗೇ ಅಲ್ಲ ಅಂತ ಹೇಳಿ ಏನೋ ಯೋಚ್ನೆ ಮಾಡೋಕೆ ಶುರು ಮಾಡಿದ್ಲು 2 ನಿಮಿಷ ದ ನಂತರ, ಲೋ ಸೀರಿಯಸ್ಲಿ  ಹೇಗೋ ಅರ್ಥ ಆಗುತ್ತೆ ನಿನಗೆ ಒಬ್ಬರ ಬಗ್ಗೆ ಅದಕ್ಕೆ ನಾ ನಾನ್ ಹೋಗಲೇ ಬೇಕು ಅಂತ ಹೇಳಿ ಹೊರಟು ಹೋಗಿದ್ದು. ಬೆಸ್ಟ್ ಫ್ರೆಂಡ್ ನಾ ನಾನೆ ಸರಿಯಾಗಿ ಅರ್ಥ ಮಾಡ್ಕೊಂಡಿಲ್ಲ ನೋಡು, ಅಲ್ಲ ಇಷ್ಟು ದೊಡ್ಡ ಪ್ರಾಬ್ಲಮ್ ಗೆ ಹೆಲ್ಪ್ ಮಾಡಿದ ನಿನಗೆ ಕುತ್ಕೋ ಅಂತ ಒಂದು ಮಾತು ಹೇಳಿಲ್ಲ, ಇದ್ದಿದ್ದ ಮೂರು ಚೇರ್ ಅಲ್ಲಿ ನಾವು ಮೂರು ಜನ ಕೂತಿದ್ವಿ, ನಿನಗೆ ಕೂತ್ಕೋಳ್ಳೋಕೆ ಚೇರ್ ಇದ್ದಿಲ್ಲ, ಯಾವತ್ತು ಅವಳು ನಿನ್ನ ಏಕವಚನದಲ್ಲಿ ಮಾತಾಡಿಸ್ತಾ ಇರಲಿಲ್ಲ, ನಿನ್ನ ಪರಿಚಯ ಮಾಡೋವಾಗ ಇವನು ಅಂತ ಹೇಳಿದ್ಲು, ಬಟ್ ಧ್ರುವ್ ನಾ ಪರಿಚಯ ಮಾಡಿಸೋವಾಗ ಮಿಸ್ಟರ್ ಅಂತ ಹೇಳಿದ್ಲು. ಇಂತ ಕಾಫಿ ಶಾಪ್ ಅಲ್ಲಿ ನೀನು ಕಾಫಿ ನಾ ಕುಡಿದೆ ಇರೋದಿಲ್ಲ ಕುಡಿ ಅಂತ ಹೇಳಿದ್ಲು,  ದುಡ್ಡು ತಗೊಂಡು ಬೈಕ್ ತಗೋ ಬಟ್ಟೆ ತಗೋ  ಸೀರಿಯಸ್ಲಿ ನಿನಗೆ ಥ್ಯಾಂಕ್ಸ್ ಹೇಳೋಕೆ ಕರೆಸಿಲ್ಲ, ಅವಮಾನ ಮಾಡೋಕೆನೆ ಕರೆದ ಹಾಗೇ ಇತ್ತು ಅವಮಾನ ಮಾಡಿದ್ರು ಕೊನೆಗೆ ನಿನ್ ಬಂದಮೇಲೆ ನಿನ್ ಮೇಲೆ ಕೋಪ ಮಾಡ್ಕೊಂಡ್ರು. ತು ಅವಳನ್ನ ನನ್ನ ಫ್ರೆಂಡ್ ಅಂತ ಹೇಳ್ಕೊಳ್ಳೋಕೆ ಇಷ್ಟ ಆಗ್ತಾ ಇಲ್ಲಾ ಕಣೋ. ಹೆಲ್ಪ್ ಮಾಡಿದವನಿಗೆ ಈ ರೀತಿ ಅವಮಾನ ಮಾಡ್ತಾಳ. ಅವಳ ಪರವಾಗಿ ನಾನ್ ನಿನ್ನ ಹತ್ತಿರ ಸಾರೀ ಕೇಳ್ತಿನೋ ಅಂತ ಸ್ವಲ್ಪ ಬೇಜಾರಾಗಿ ಹೇಳಿದ್ಲು.  ನಾನ್ ಬಿಡೆ ನಿನ್ ಏನಕ್ಕೆ ಸಾರೀ ಕೇಳ್ತಿಯಾ ಅವರೇನು ಇಲ್ದೆ ಇರೋದನ್ನ ಹೇಳಿಲ್ಲ ಅಲ್ವಾ,  ನನ್ನ ಹೆಲ್ಪ್ ಕೇಳಿದ್ರು ಮಾಡಿದೆ ಅಷ್ಟೇ, ನಡಿ ಹೊಟ್ಟೆ ಹಸಿವಾಗ್ತಾ ಇದೆ ಯಾವುದಾನ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡೋಣ ಅಂತ ಹೇಳ್ದೆ.  ಶಿಲ್ಪಾ ಲೋ ಏನು ಬೇಡ ಮನೆಗೆ ನಡಿ, ಈ ಏರಿಯಾ ದಲ್ಲಿ ಇರೋ ರೆಸ್ಟೋರೆಂಟ್ ಅಲ್ಲಿ ಫುಡ್ ಕಾಸ್ಟ್ಲಿ ಇರುತ್ತೆ, ನನ್ನ ಹತ್ತಿರ ಸದ್ಯಕ್ಕೆ ಅಷ್ಟೊಂದು ದುಡ್ಡು ಇಲ್ಲಾ, ನಿನ್ ಹತ್ತಿರ ಕೂಡ ಮೊನ್ನೆನೇ ದುಡ್ಡು ಇಲ್ಲಾ ಅಂತ ಹೇಳ್ದೆ, ಶಿಸ್ತಾಗಿ ಮನೆಗೆ ಹೋಗಿ ಮಾಡಿರೋದನ್ನ ತಿಂದು ಮಲಗೋಣ ಅಂತ ಹೇಳಿದ್ಲು. ನಾನು ಅವಳ ಮಾತಿಗೆ ನಗ್ತಾ ನಿಮ್ ಅತ್ತೆ ಮಗ ಯಾಕೆ ನಿನ್ ಅಂದ್ರೆ ಸಾಯ್ತಾನೆ ಅಂತ ಈಗ ಗೊತ್ತಾಯ್ತು, ಒಬ್ಬ ವ್ಯಕ್ತಿ ಯ ಪರಿಸ್ಥಿತಿ ನಾ ಬೇಗ ಅರ್ಥ ಮಾಡ್ಕೊತೀಯ ಅದಕ್ಕೆ ತಕ್ಕ ಹಾಗೇ ನಡ್ಕೊತೀಯ, ಸಪೋರ್ಟ್ ಮಾಡ್ತಿಯಾ, ಪರ್ವಾಗಿಲ್ಲ ತುಂಬಾ ಒಳ್ಳೆ ಒಳ್ಳೆ ಮನಸ್ಸಿದೆ ನಿನಗೆ, ಅ ಒಳ್ಳೆ ಮನಸ್ಸಿಗೆ ಆದ್ರೂ ಇವಾಗ ಒಂದು ಒಳ್ಳೆ ರೆಸ್ಟೋರೆಂಟ್ ಅಲ್ಲಿ ಊಟ ಕೊಡಿಸದೆ ಹೋದ್ರೆ ನನಗೆ ಅವಮಾನ ಅಂತ ಹೇಳಿ ಮನೆ ರೋಡ್ ಬಿಟ್ಟು ರೆಸ್ಟೋರೆಂಟ್ ಕಡೆಗೆ ಬೈಕ್ ನಾ ತಿರುಗಿಸಿದೆ . ಶಿಲ್ಪಾ ಲೋ ಸೀರಿಯಸ್ಲಿ ಹೇಳಿದ್ರೆ ಕೇಳಲ್ಲ ನಡಿ ರೆಸ್ಟೋರೆಂಟ್ ಅಲ್ಲಿ ಪಾತ್ರೆ ತೊಳಿಯುವಂತೆ ನನಗೇನು ಅಂತ ಹೇಳಿದ್ಲು.

  15 ನಿಮಿಷ ದಲ್ಲಿ ಒಂದು ರೆಸ್ಟೋರೆಂಟ್ ಹತ್ತಿರ ಬಂದ್ವಿ. ರೆಸ್ಟೋರೆಂಟ್ ನಾ ನೋಡಿ ಶಿಲ್ಪಾ, ಲೋ ಈ ರೆಸ್ಟೋರೆಂಟ್ ಗ ನಿಜ ಹೇಳು ಆಫೀಸ್ ಅಲ್ಲಿ ಜಾಬ್ ಬಿಟ್ಟು ಈ ರೆಸ್ಟೋರೆಂಟ್ ಅಲ್ಲೇ ಪಾತ್ರೆ ತೊಳಿಯೋ ಕೆಲಸಕ್ಕೆ ಸೇರ್ಕೋಬೇಕು ಅಂತ ನಿರ್ಧಾರ ಮಾಡಿದ್ದಿಯ ಹೇಗೆ ಅಂತ ಕೇಳಿದ್ಲು. ನಾನ್ ಬೈಕ್ ನಾ ನಿಲ್ಲಿಸಿ ಶಿಲ್ಪಾ ಕಡೆಗೆ ನೋಡ್ತಾ ಏನೋ ಯಾರಿಗ್ ಗೊತ್ತು ನಡಿ ಅಂತ ಹೇಳಿದೆ. ಶಿಲ್ಪಾ ಬೈಕ್ ಇಳಿದು  ನಿನ್ ಹಣೆಬರಹ ನಡಿ ಅಂತ ನನ್ನ ಜೊತೆ ರೆಸ್ಟೋರೆಂಟ್ ಕಡೆಗೆ ಹೆಜ್ಜೆ ಇಟ್ಟಳು.  ರೆಸ್ಟೋರೆಂಟ್ ಮೇನ್ ಡೋರ್ ಓಪನ್ ಮಾಡಿದ ವ್ಯಕ್ತಿ ನಮ್ಮನ್ನ ನೋಡಿ ಡೋರ್ ಓಪನ್ ಮಾಡಿ ವೆಲ್ಕಮ್ ಸರ್ ಅಂತ ಹೇಳ್ದ.  ರೆಸ್ಟೋರೆಂಟ್ ಒಳಗೆ ಹೋದಮೇಲೆ ಇಬ್ಬರು ಒಂದು ಟೇಬಲ್ ಹತ್ತಿರ ಹೋಗಿ ಕುತ್ಕೊಂಡ್ವಿ, ಆಮೇಲೆ ವೈಟರ್ ಬಂದ, ಫುಡ್ ಆರ್ಡರ್ ಮಾಡಿದ್ವಿ, 15 ನಿಮಿಷದಲ್ಲಿ ಆರ್ಡರ್ ಮಾಡಿದ ಫುಡ್ ಬಂತು, ಶಿಲ್ಪಾ ಊಟ ಮಾಡ್ತಾ ಮನೆಗೆ ಕಾಲ್ ಮಾಡಿ ವಿಷಯ ಹೇಳಿ ಕಾಲ್ ಕಟ್ ಮಾಡಿ, ನನ್ನ ಕಡೆ ನೋಡ್ತಾ  ಮನೇಲಿ ಹೇಳ್ದೆ ಕಣೋ ಟೆನ್ಶನ್ ಇಲ್ಲಾ ಇನ್ನ ಅಂತ ಹೇಳಿದ್ಲು. ಇಬ್ರು ಮಾತಾಡ್ಕೊಂಡು ಡಿನ್ನರ್ ಮುಗಿಸಿದ್ವಿ. ಶಿಲ್ಪಾ ವೈಟರ್ ಗೆ ಬಿಲ್ ತರೋದಕ್ಕೆ ಹೇಳಿದ್ಲು. ವೈಟರ್ ಬಿಲ್ ತಂದು ನನ್ನ ಕೈಗೆ ಕೊಟ್ಟ, ಶಿಲ್ಪಾ ನನ್ನ ಕಡೆ ನೋಡಿ ಮಹಿ ನಾನ್ ಪೆ ಮಾಡ್ತೀನಿ ಕೊಡು ಅಂತ ಹೇಳಿದ್ಲು. ನಾನ್ ನಗ್ತಾ ಕರ್ಕೊಂಡು ಬಂದಿದ್ದು ನಾನು ನಾನೆ ಪೆ ಮಾಡ್ತೀನಿ ಅಂತ ಹೇಳಿ ಕಾರ್ಡ್ ಕೊಟ್ಟು ಬಿಲ್ ಪೆ ಮಾಡಿದೆ. ಆಮೇಲೆ ಇಬ್ರು ವೈಟರ್ ಗೆ ಥ್ಯಾಂಕ್ಸ್ ಹೇಳಿ ಹೊರಗಡೆ ಬಂದ್ವಿ. 

   ಹೊರಗೆ ಪಾರ್ಕಿಂಗ್ ಅಲ್ಲಿ ಇದ್ದಾ ಬೈಕ್ ಸ್ಟಾರ್ಟ್ ಮಾಡಿ ಶಿಲ್ಪಾ ಗೆ ಕೂತ್ಕೋಳ್ಳೋಕೆ ಹೇಳ್ದೆ, ಅಷ್ಟ್ರಲ್ಲಿ ಒಂದು ಧ್ವನಿ ನಮಗೆ ಕೇಳಿಸ್ತು, ಸೀರಿಯಸ್ಲಿ ನೀವ್ ಇಬ್ರು ಈ ರೆಸ್ಟೋರೆಂಟ್ ಗೆ ಡಿನ್ನರ್ ಮಾಡೋಕೆ ಬಂದ್ರ ಅಂತ ಹೇಳಿದ ಹಾಗೇ ಕೇಳಿಸ್ತು, ನಾನು ಶಿಲ್ಪಾ ಇಬ್ರು ಅ ಕಡೆ ತಿರುಗಿ ನೋಡಿದ್ವಿ, ಧ್ರುವ್ ಮತ್ತೆ ಅಕಿರಾ, ಇಬ್ರು ನಿಂತಿದ್ರು. ಧ್ರುವ್ ನಮ್ಮನ್ನ ನೋಡಿ, ಹತ್ತಿರ ಬಂದು ಶಿಲ್ಪಾ ಮಹಿ ನಾ ಈ ರೆಸ್ಟೋರೆಂಟ್ ಗೆ ಕರ್ಕೊಂಡು ಬಂದ ಅಂತ ಕೇಳಿದ. ನಾನು ಅವನ ಮಾತಿಗೆ, ಇಲ್ಲಾ ಬ್ರದರ್ ಶಿಲ್ಪಾ ಇಲ್ಲಿ ಅವಳ ಫ್ರೆಂಡ್ ನಾ ಮೀಟ್ ಮಾಡೋಕೆ ಬಂದ್ಲು  ಇವಳಿಗೆ ಲೇಟ್ ಆಗುತ್ತೆ ಅಂತ ಅವರಿಗೆ ಹೇಳಿ ನನಗೆ ಕಾಲ್ ಮಾಡಿ ಡ್ರಾಪ್ ಮಾಡೋಕೆ ಹೇಳಿದ್ಲು, ಅದಕ್ಕೆ ಬಂದೆ ಅಂತ ಹೇಳ್ದೆ.  ಧ್ರುವ್ ನಗ್ತಾ ಹೌದ ನಾನೆಲ್ಲೋ ಈ ರೆಸ್ಟೋರೆಂಟ್ ಗೆ ಡಿನ್ನರ್ ಮಾಡೋಕೆ ಬಂದ್ರೇನೋ ಅನ್ಕೊಂಡೆ, ಡ್ರಾಪ್ ಮಾಡೋಕೆ ಬಂದ, ಹೇಗಿದ್ರು ಬಂದಿದ್ದೀಯಾ ಇಲ್ಲಿ ಫುಡ್ ತುಂಬಾ ಚೆನ್ನಾಗಿ ಇರುತ್ತೆ ಬಟ್ ಪ್ರೈಸ್ ಕೂಡ ಅಷ್ಟೇ ಇರುತ್ತೆ, ಶಿಲ್ಪಾ ಹೇಗಿದ್ರು ಫ್ರೆಂಡ್ ನಾ ನೋಡೋಕೆ ಬಂದಿದ್ದಾಳೆ ಅಂದ್ರೆ ಡಿನ್ನರ್ ಮಾಡಿರ್ತಾಳೆ, ನಿನ್ ಕೂಡ ಹೋಗಿ ಡಿನ್ನರ್ ಮಾಡು ಹೋಗು ಚೆನ್ನಾಗಿ ಇರುತ್ತೆ  ಬಿಲ್ ನಾನ್ ಪೆ ಮಾಡ್ತೀನಿ ಅಂತ ಹೇಳಿದ. ಧ್ರುವ್ ಹೇಳಿದ ಮಾತಿಗೆ ಶಿಲ್ಪಾ ಗೆ ಕೋಪ ಬರೋದನ್ನ ನಾನ್ ನೋಡಿ, ಧ್ರುವ್ ಮಾತಿಗೆ ಬೆಡ ಬ್ರದರ್ ಈಗ್ಲೇ ಲೇಟ್ ಆಗಿದೆ ಇವಳನ್ನ ಡ್ರಾಪ್ ಮಾಡಿ ನಾನ್ ರೂಮ್ ಗೆ ಹೋಗಿ ಫ್ರೆಂಡ್ ಗೆ ಬೈಕ್ ಕೊಡಬೇಕು ಅಂತ ಹೇಳ್ದೆ.  ಅಕಿರಾ ಮಹಿ ಧ್ರುವ್ ಹೇಳ್ತಾ ಇದ್ದಾನೆ ಅಲ್ವಾ ಬಿಲ್ ಪೆ ಮಾಡ್ತಾನೆ ಅಂತ ಡಿನ್ನರ್ ಮಾಡ್ಕೊಂಡು ಹೋಗು ಲೇಟ್ ಅದ್ರೆ ಏನು ಆಗೋದಿಲ್ಲ ನಿಮ್ ಫ್ರೆಂಡ್ ಗೆ ಕಾಲ್ ಮಾಡಿ ಹೇಳು. ಅಂತ ಸ್ವಲ್ಪ ಕೋಪದಲ್ಲೇ ಹೇಳ್ತಾ  ನಿನ್ ಈ ರೀತಿ ಮಾಡೋದು ಯಾಕೋ ನನಗೆ ಇಷ್ಟ ಆಗ್ತಾ ಇಲ್ಲಾ ಮಹಿ, ನಿನ್ ನಮಗೆ ಹೆಲ್ಪ್ ಮಾಡಿದೆ ಅಂತ ನಿನ್ನ ಪರಿಸ್ಥಿತಿ ನಾ ಅರ್ಥ ಮಾಡ್ಕೊಂಡು ಹೆಲ್ಪ್ ಮಾಡೋಕೆ ಬಂದ್ರೆ ಅವಮಾನ ಮಾಡೋದು ಧ್ರುವ್ ಗೆ ಪಬ್ಲಿಕ್ ಅಲ್ಲಿ ಈ ರೀತಿ ಹೇಳೋದು ನನಗೆ ಚೂರು ಇಷ್ಟ ಆಗ್ತಾ ಇಲ್ಲಾ ಅಂತ ಹೇಳಿದ್ಲು.  ಧ್ರುವ್  ಇಟ್ಸ್ ಓಕೆ ಅಕಿರಾ ಬಿಡು ಅವನಿಗೆ ಇಷ್ಟ ಇಲ್ಲಾ ಅನ್ನಿಸುತ್ತೆ ನಮ್ಮಿಂದ ಹೆಲ್ಪ್ ತಗೋಳೋದು ಅಂತ ಹೇಳ್ತಾನೆ.  ಅಕಿರಾ ನಿನ್ ಸುಮ್ನೆ ಇರು ಧ್ರುವ್ ನಿನ್ ಅವನ ಪರ ಮಾತಾಡಬೇಡ ಎಲ್ಲದಕ್ಕೂ ಒಂದು ಲಿಮಿಟ್ ಅಂತ ಇರುತ್ತೆ,  ಜೇಬಲ್ಲಿ ನಯ ಪೈಸೆ ಇಲ್ಲಾ ಅಂದ್ರು ಸ್ವಾಭಿಮಾನ ಕ್ಕೆ ಏನು ಕಮ್ಮಿ ಇಲ್ಲಾ ಅವನಿಗೆ, ನಮಗೆ  ಹೆಲ್ಪ್ ಮಾಡಿದ ಅಂತ ಹೆಲ್ಪ್ ಮಾಡೋಕೆ ಹೋಗ್ತಿವಿ ಅಲ್ವಾ ನಮಗೆ ಬುದ್ದಿ ಇಲ್ಲಾ, ಬಾ ಅಂತ ಹೇಳಿ ಧ್ರುವ್ ನಾ ಕೈ ಇಡ್ಕೊಂಡ್ ಕರ್ಕೊಂಡು ಹೋದಳು. 

   ನಾನು ಶಿಲ್ಪಾ ಕಡೆ ನೋಡಿ ಬೈಕ್ ಹತ್ತು ಅಂತ ಹೇಳ್ದೆ. ಶಿಲ್ಪಾ ನನ್ನ ಕಡೆ ಕೋಪದಿಂದ ನೋಡ್ತಾ ಲೋ ನಿನಗೆ ಚೂರು ಮಾನ ಮರ್ಯಾದೆ ಅನ್ನೋದೇ ಇಲ್ವಾ ಅವರಿಬ್ಬರೂ ಅಷ್ಟು ಮಾತಾಡ್ತಾ ಇದ್ರು ಸುಮ್ನೆ ಇದ್ದಿಯಾ ಅಲ್ವಾ. ಹೆಲ್ಪ್ ಮಾಡಿದವನಿಗೆ ಹೆಲ್ಪ್ ಮಾಡೋ ರೀತಿ ಅದನ್ನ ಕೇಳೋ ರೀತಿ ಬೇರೆ ಇರುತ್ತೆ ಈಗಲ್ಲ ಚಿಪ್ ಆಗಿ ಮಾತಾಡಿ ಹೆಲ್ಪ್ ಮಾಡ್ತೀನಿ ತಗೋ ಅಂತ ಅಂದ್ರೆ ಯಾರ್ ತಗೋತಾರೆ. ನಿನ್ ಏನು ಮಾತಾಡದೆ ಅವರು ಹೇಳೋದನೆಲ್ಲ ಕೇಳ್ಕೊಂಡು ಸುಮ್ನೆ ಇದ್ದಿಯಾ ಅಂತ ಕೋಪದಲ್ಲಿ ಹೇಳ್ತಾಳೆ. ನಾನು ನಗ್ತಾ ಮುಗಿತ ಬಾ ಬಂದು ಬೈಕ್ ಹತ್ತು ಅಂತ ಹೇಳ್ದೆ. ಶಿಲ್ಪಾ ತು ನಿನ್ನ ಅಷ್ಟು ಬೈದ್ರು ನಗೋದು ನೋಡು ನೀನು ನಾಚಿಕೆ ಆಗೋದಿಲ್ವಾ ಅಂತ ಕೇಳಿದ್ಲು.  ಫ್ರೆಂಡ್ ಹತ್ತಿರ ನಾಚಿಕೆ ಏನೇ ಬಂದು ಬೈಕ್ ಹತ್ತು ಈಗ್ಲೇ ಲೇಟ್ ಆಗಿದೆ ಅಂತ ಹೇಳ್ದೆ. ಶಿಲ್ಪಾ ಬೈಕೊಂಡೆ ಬೈಕ್ ಹತ್ತಿದಳು,  ಸ್ವಲ್ಪ ಸಮಯದ ನಂತರ  ಶಿಲ್ಪಾ ನಾ ಅವರ ಮನೆ ಹತ್ತಿರ ಡ್ರಾಪ್ ಮಾಡಿ. ಅವಳಿಗೆ ಬೈ ಹೇಳಿ ಅವಳು ಮನೆ ಒಳಗೆ ಹೋಗೋ ತನಕ ಅಲ್ಲೇ ಇದ್ದು ಅವಳು ಮನೆ ಒಳಗೆ ಹೋದಮೇಲೆ  ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ ಹೊರಟೆ. 

 

   **************************************


P. S.