ಅಧ್ಯಾಯ 7: " ಸಡಗರದ ನಡೆಯಲ್ಲಿ ಪ್ರೀತಿಯ ತುಂಟ ಹೆಜ್ಜೆ"
ಆವತ್ತು ಅನ್ಯುವಲ್ ಡೇ ಯ ದಿನ ಜೆಕೆ ಸ್ನಾನ ಮಾಡಿ ಕನ್ನಡಿಯ ಮುಂದೆ ನಿಂತು ರೆಡಿ ಆಗುತ್ತಾ ಇರ್ತಾನೆ ade ಸಮಯಕ್ಕೆ ಲಕ್ಕಿ ಅಜ್ಜಿ ಜೆಕೆ ರೂಮ್ ಗೆ ಬರ್ತಾಳೆ
ಲಕ್ಕಿ : "ನನ್ನ ಮೊಮ್ಮಗ ಎನ್ ಮಾಡ್ತಿದ್ದಾನೆ?"
ಜೆಕೆ : "ಹೇ.. ಮೈ ಡಾರ್ಲಿಂಗ್ ಅಂತ ಲಕ್ಕಿ ಅಜ್ಜಿಯ ಹಣೆಗೆ ಪ್ರೀತಿಯ ಮುತ್ತನ್ನೀಡುತ್ತಾನೆ , ನಾನು ಇವತ್ತು ಎಷ್ಟು ಕುಷಿಯಾಗಿದೀನಿ ಗೊತ್ತಾ ಇವತ್ತು ನನಗೆ ತುಂಬಾ ಇಂಪಾರ್ಟೆಂಟ್ ಡೇ ಡಾರ್ಲಿಂಗ್ ಅಂತಾ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ"( ಜೆಕೆ ಲಕ್ಕಿ ಯನ್ನೂ ಪ್ರೀತಿಯಿಂದ ಡಾರ್ಲಿಂಗ್ ಅಂತಲೂ ಕರಿಯುತ್ತಾನೆ)
ಲಕ್ಕಿ :" ಏನೋ ಮೊಮ್ಮಗನ್ನೇ ಈ ರೇಂಜ್ ಗೆ ಉತ್ಸಾಹದಲ್ಲಿ ಇದಿಯಾ ಸ್ವಲ್ಪ ತಾಳ್ಮೆ ತಗೊಳೋ😁 ಎಲ್ಲಾ ಪ್ರಿಪರೇಷನ್ ಕುಡಾ ಕರೆಕ್ಟ್ ಆಗಿ ಮಾಡಿದಿಯ ತಾನೇ"
ಜೆಕೆ : "ಅಜ್ಜಿ.. actually ತುಂಬಾ ನರ್ವಸ್ ಆಗ್ತಿದ್ದೀನಿ ಆದರೆ ತೋರಸ್ಗೋತಿಲ್ಲ ಅಷ್ಟೆ"😅
ಲಕ್ಕಿ :" ಏನು ಹೆದರ್ಕೋಬೇಡ ಮೊಮ್ಮಗ್ನೇ ನಿನ್ನ ಜೊತೆ ನಾವಿದಿವಿ, ದೈರ್ಯವಾಗಿ ಹೋಗಿ ಬಾ ಅಂತ ಲಕ್ಕಿ ಜೆಕೆ ಯ ತಲೆಯನ್ನು ಸವರುತ್ತಾ ಹೇಳುತ್ತಾಳೆ"
ಸರಿ ನಾನು ಕೆಳಗಡೆ ಹೋಗ್ತೀನಿ ನೀನು ಬೇಗ ರೆಡಿ ಆಗಿ ಬಾ ಅಂತಾ ಅಜ್ಜಿ ಹೊರಡುತ್ತಾಳೆ😊ಇನ್ನು ಜೆಕೆ ಸಹ ರೆಡಿ ಆಗಿ ಕೆಳಗಡೆ ಬರ್ತಾನೆ,
( ಜೆಕೆ ಯ ಡ್ರೆಸ್ ಸ್ಟೈಲಿಂಗ್ ಮಾಡೋದ್ರಲ್ಲಿ ಪರ್ಫೆಕ್ಟ್ ಅವನು ಯಾವುದೇ ಡ್ರೆಸ್ ಹಾಕಿಕೊಂಡರು ಅದನ್ನು ತನ್ನದೇ ಶೈಲಿಯಲ್ಲಿ ವಿಭಿನ್ನವಾಗಿ ಸ್ಟೈಲ್ ಮಾಡುತ್ತಾನೆ ಇವತ್ತು ಕೂಡ ಅದೆ ರೀತಿಯಾಗಿ ವೈಟ್ ಕಲರ್ ಶರ್ಟ್ ನೊಂದಿಗೆ ಕ್ರೀಮ್ ಕಲರ್ ಫಾರ್ಮಲ್ ಪ್ಯಾಂಟ್, ಅವನ ಆಕಟ್ಟುಮಸ್ತಾದ ದೇಹಕ್ಕೆ ಆ ವೈಟ್ ಕಲರ್ ಶರ್ಟ್ ಹೇಳಿಮಾಡಿದಂತಿರುತ್ತದೇ ವಿಭಿನ್ನ ಶೈಲಿಯ ಹೇರ್ ಸ್ಟೈಲ್ , ಹಾಗೆ ಆ ಸುಂದರವಾದ ಮುಖದಲ್ಲಿ ಸ್ವಲ್ಪ ಸ್ವಲ್ಪವೇ ಟ್ರಿಮ್ ಮಾಡಿದ ಮೀಸೆ ಹಾಗು ದಾಡಿ ,ತೀಕ್ಷ್ಣವಾದ ಕಣ್ಣುಗಳು ಅವನ ಸೌಂದರ್ಯವನ್ನು ಹೆಚ್ಚಿಸುತ್ತದೆ , ಇನ್ನು ಬಲಗಡೆಗೆ ಕೈಗೆ ಒಂದು ಬ್ರೆಸ್ಲೇಟ್ ಎಡಗಡೆ ಕೈಗೆ ಅವನ ಉಡುಪಿಗೆ ತಕ್ಕಂತೆ ಒಂದು ಸುಂದರ ವಾದ ವಾಚ್, ಹಾಗೆ ಡ್ರೆಸ್ ಗೆ ತಕ್ಕಂತೆ ಬೂಟ್ ಗಳನ್ನು ಧರಿಸಿರುತ್ತಾನೆ ಒಟ್ಟಾರೆಯಾಗಿ ಹೀರೋ ತರ ಕಾಣಸ್ತೀರ್ತಾನೆ ನಮ್ಮ ಹೀರೋ )
ಇನ್ನು ಕೆಳಗಡೆ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿರುತ್ತಾರೆ ಜೆಕೆ ಕೆಳಗಡೆ ಬರುತ್ತಿದ್ದ ಹಾಗೆ ಎಲ್ಲರೂ ಅವನ್ನನೇ ನೋಡಲು ಪ್ರಾರಂಭಿಸುತ್ತಾರೆ ಆಗ ಜೆಕೆ ಮನಸ್ಸಿನಲ್ಲಿ ಏನಿದು!.. ಎಲ್ಲರೂ ಹೀಗೆ ನೋಡ್ತಿದಾರಲ್ಲ ನಾನ್ ಡ್ರೆಸ್ ಸರಿಯಾಗಿ ಹಾಕೊಂಡಿಲ್ವಾ? ಅಥವಾ ನನ್ನ ಮುಖದ ಮೇಲೆ ಏನಾದ್ರೂ ಇದೆಯಾ? ಅಂತ ಯೋಚನೆ ಮಾಡ್ತಾ ಇರ್ತಾನೆ,
ಜೆಕೆ : "ಎಲ್ಲರು ಯಾಕೆ ನನ್ನ ಹೀಗೆ ನೋಡ್ತಿದ್ದೀರಾ"?
"ಆಗ ಕಮಲಾ ದೊಡ್ಡಮ್ಮ ಇವತ್ತು ನನ್ನ ಮಗ ಎಷ್ಟು ಮುದ್ದಾಗಿ ಕಾಣುತ್ತಿದ್ದಾನೆ ದೇವರೇ ,ನಂದೇ ದೃಷ್ಟಿ ಆಗುತ್ತೆ ಅಂತ ಜೆಕೆ ದೃಷ್ಟಿ ತೆಗೆಯುತ್ತಾರೆ "
ಜೆಕೆ : "ಓ.. ಹಾಗ ಎಲ್ಲರೂ ನನ್ನೇ ಯಾಕೆ ನೋಡ್ತಿದ್ದಾರೆ ಅಂತ ಸ್ವಲ್ಪ ಕನ್ಫ್ಯೂಷನ್ ಆಯ್ತು"😅
ಚಂದ್ರಿಕಾ : "ಮತ್ತೆ ಇಷ್ಟು ಸುಂದರವಾಗಿ ಕಂಡ್ರೆ ಯಾವ ಹುಡಗಿ ಕೂಡ ನಿನ್ನ ಬಿಡೋಲ್ಲ ಕಣೋ ಹುಷಾರು"..
ಜೆಕೆ : "ಚಿಕ್ಕಿ... ಹಾಗೆಲ್ಲ ಏನು ಆಗಲ್ಲ ಬಿಡಿ ಸರಿ ಆ ಕೋತಿ ಎಲ್ಲಿ "?
ಚಂದ್ರಿಕಾ : "ಯಾರು ಅಮ್ಮು ನಾ ಅವಳು ಕಾಲೇಜ್ ಗೆ ಬೇಗ ಹೋಗಿದಾಳೆ ಇವತ್ತು"
ಜೆಕೆ :" ಸದ್ಯ ಹೋಗಿದಾಳಲ್ಲ ಇವತ್ತು ನನ್ನ ಲಕ್ ಚಿನ್ನಾಗಿದೆ"😌
ಆಗ ಲಕ್ಕಿ ಮುಗುಳ್ನಗೆ ಬೀರುತ್ತಾ ನನ್ನ ಮೊಮ್ಮಗ ಥೇಟ್ ಅವನ ಅಜ್ಜನ ತರ ನೇ ಅದೆ ಗತ್ತು, ದಿಟ್ಟೋ ಅವನ ತಾತನ್ನೇ ನೋಡಿದ ಹಾಗಣಿಸುತ್ತಿದೆ ಅಲ್ವಾ ಯಶೋಧ ☺️
ಯಶೋಧ ( ಮಂದಹಾಸ ಬೀರುತ್ತಾ) : "ಹೌದು ಅತ್ತೆ ಥೇಟ್ ಮಾವನವರನ್ನ ಎಲ್ಲಿಯೂ ಬಿಟ್ಟಿಲ್ಲ ಹಾಗೆ ರಮ್ಯಾ, ಸೌಮ್ಯ, ವೃಂದಾ ಮೂವರು ಬಂದು ಜೆಕೆ ಗೆ ದೃಷ್ಟಿ ಆರತಿಯನ್ನು ಮಾಡ್ತಾರೆ ನಮ್ಮ ಮೈದನಿಗೆ ಯಾರ ದೃಷ್ಟಿನು ಬೀಳದಿರಲಿ"☺️
"ಅಷ್ಟರಲ್ಲಿ ಸುಧಾಕರ್ ಬಂದು ಅವನೇನು ದೊಡ್ಡ ಸಾಧನೆ ಮಾಡೋಕೆ ಹೋಗ್ತಿದ್ದಾನೆ ಅಂತ ಆರತಿ ಮಾಡ್ತಿದ್ದೀರಾ,ಯಾವದರ ಬಗ್ಗೆನೂ ಜವಾಬ್ದಾರಿ ಇಲ್ಲ ಇವನಿಗೆ" ಆಗ ಮಾಧವ್, ಭುವನ್ ಕೂಡಾ ಅಲ್ಲೇ ಇರ್ತಾರೆ
ಭುವನ್ : "ದೊಡ್ಡಪ್ಪ ಅವನಿನ್ನೂ ಚಿಕ್ಕಹುಡುಗ ಅಷ್ಟಕ್ಕೂ ಮನೆಯ ಜವಾಬ್ದಾರಿ ಹೂರೋಕೆ ನಾವಿದ್ದಿವಿಲ್ಲ ಇನ್ನು ಓದೋ ಹುಡುಗ ಓದಲಿ ಬಿಡಿ..
ಮಾಧವ್ : "ಹೌದು ಅಪ್ಪ ಅಣ್ಣ ಸರಿಯಾಗಿ ಹೇಳ್ತಿದ್ದಾನೆ"
ಸುಧಾಕರ್ :" ನೀವು ಎಲ್ಲರೂ ಇವನ್ನ ತಲೆ ಮೇಲೆ ಕುರಸ್ಗೊಂಡು ಬಿಟ್ಟಿದಿರ ನೋಡತೀರಿ ಮುಂದೆ ನೀವೆಲ್ಲರೂ ತಲೆ ತಗ್ಗಿಸೋ ಕೆಲಸ ಮಾಡಿದಾಗ ಗೊತ್ತಾಗುತ್ತೆ"
ಲಕ್ಕಿ : "ಹೇ.. ಏನೋ ಈ ರೀತಿ ಮಾತಾಡ್ತಾ ಇದ್ದೀಯಾ ಮಗು ಮೇಲೆ ಯಾವಾಗ್ಲೂ ಬೈತಾನೆ ಇರ್ತಿಯ ಸರಿ ಏನಾದ್ರೂ ಮಾಡ್ಕೊಳ್ಳಿ ಅಂತ ಸುಧಾಕರ್ ಅಲ್ಲಿಂದ ಹೋಗ್ತಾನೆ ಭುವನ್ ಮತ್ತೆ ಮಾಧವ್ ಜೆಕೆ ಗೆ ಬಾಯ್.. ಹೇಳಿ ಕೆಲಸಕ್ಕೆ ಹೋರಾಡ್ತಾರೆ"
ಜೆಕೆ :" ಸರಿ ನಾನು ಹೋರಡ್ತೀನಿ ಲೇಟ್ ಆಗ್ತಿದೆ ಎಲ್ಲರಿಗೂ ಬಾಯ್.. ಹೇಳಿ ಅಲ್ಲಿಂದ ಹೊರಡುವ ಮುನ್ನ ಪ್ರವೀಣ್ ಗೆ ಕಾಲ್ ಮಾಡ್ತಾನೆ "
ಜೆಕೆ : "ಏನೋ ಎಲ್ಲಾ ಸರಿಯಾಗಿ ಪ್ರಿಪರೇಷನ್ ಆಗಿದೆಯಾ" ?
( ಜೆಕೆ ಇವತ್ತು ಸ್ವಾತಿ ಗೆ ಕಾಲೇಜ್ ಫಂಕ್ಷನ್ ಮುಗಿದ ಮೇಲೆ ಪ್ರಪೋಸ್ ಮಾಡಬೇಕು ಒಂದು ರೆಸಾರ್ಟ್ ಅಲ್ಲಿ ಎಲ್ಲಾ ಪ್ರಿಪರೇಷನ್ ಮಾಡಸ್ತಾ ಇರ್ತಾನೆ )
ಪ್ರವೀಣ್ :" ಆಗಿದೆ ಕಣೋ ನೀನೇನು ಟೆನ್ಷನ್ ಮಾಡ್ಕೋಬೇಡ ನಾನು ತುಂಬಾ ಎಕ್ಸೈಟ್ ಅಗಿದಿನಿ ಕಣೋ ಸರಿ ಇನ್ನೂ ಇಷ್ಟೊತ್ತು ಬರೋದು"
ಜೆಕೆ : "ಇನ್ನೇನು ಸ್ವಾತಿ ಮನೆಗೆ ಹೋಗಿ ಅವಳನ್ನು ಕರಕೊಂಡು ಬರ್ತೀನಿ ನೀನು ಎಲ್ಲಿದೀಯ" ?
ಪ್ರವೀಣ್ : "ನಾನು ಕಾರ್ತಿಕ್ ರೂಮ್ ನಲ್ಲಿ ಇದೀನಿ ಸೂರ್ಯ ಕೂಡ ಇಲ್ಲೇ ಬರ್ತೀನಿ ಅಂತಾ ಹೇಳಿದ ಹಾಗೆ ನೀನು ಸ್ವಾತಿನಾ ಕರ್ಕೊಂಡು ಇಲ್ಲೇ ಬಂದ್ಬಿಡು ಒಟ್ಟಿಗೆ ಹೋಗೋಣ, ಸರಿ ಅಂತ ಹೇಳಿ ಕಾಲ್ ಕಟ್ ಮಾಡಿ ಸ್ವಾತಿ ಮನೆಗೆ ಹೋಗ್ತಾನೆ"
ಒಳಗೆ ಬರುತ್ತಲೇ ಶಿವು : ಹೇ.. ಜೆಕೆ ಕುಳಿತುಕೋ ಬಾ ಭಾರತಿ ಇಲ್ಲಿ ನೋಡು ಜೆಕೆ ಬಂದಿದ್ದಾನೆ ಟೀ ಮಾಡಿಕೊಂಡು ಬಾ
ಜೆಕೆ : "ಅಯ್ಯೋ ಅಂಕಲ್ ಟೀ ಅದು ಏನು ಬೇಡ ಕಾಲೇಜ್ ಗೆ ಟೈಮ್ ಆಗ್ತಿದೆ ಅದಿಕ್ಕೆ ಸ್ವಾತೀನ ಕರಿತಿರ ಆಗ ಭಾರತಿ ಕೂಡ ಬರ್ತಾರೆ "
ಭಾರತಿ : "ಸ್ವಾತಿ ಇವತ್ತು ಅವರ್ ಅಪ್ಪನ ಕಾರ್ ನಲ್ಲಿ ಬರ್ತೀನಿ ಅಂತಿದ್ಲು ನಿನ್ನೆ ಜೆಕೆ !..ಅಲ್ವಾ ರೀ..ಅಂತ ಶಿವು ನಾ ಪ್ರಶ್ನೆ ಮಾಡ್ತಾಳೆ".
ಶಿವು : "ಹೌದು! ಜೆಕೆ ಸ್ವಾತಿ ನಿನ್ನೆ ನನ್ನ ಹತ್ರ ಬಂದು ಅಪ್ಪ ನಾಳೆ ಆನ್ಯುವಲ್ ಡೇ ಗೆ ನೀನ್ ನನ್ನ ಬಿಟ್ಟು ಬಾ ಅಂತಾ ಹೇಳ್ತಿದ್ಲು ನಾನು ನಿನಗೆ ಹೇಳಿರುಬೇಕು ಅನ್ಕೊಂಡೆ ನಿಂಗೆ ಏನು ಹೇಳಿಲ್ವ ಅವಳು"?
ಇರು ಅವಳನ್ನೇ ಕರೆದು ಕೇಳ್ತೀನಿ ಸ್ವಾತೀ.. ಸ್ವಾತಿ..ಅಂತ ಕರೀತಾರೆ ಅಂಕಲ್ ಬೇಡ ನಾನೇ ಅವಳ ರೂಮ್ ಗೆ ಹೋಗಿ ಕೇಳ್ತೀನಿ ಬೀಡಿ ಅಂತ ಜೆಕೆ ಸ್ವಾತಿ ರೂಮ್ ಹತ್ರ ಹೋಗ್ತಾನೆ
"ಸ್ವಾತಿ... ಸ್ವಾತಿ.. ಡೋರ್ ಓಪನ್ ಮಾಡು ಇಷ್ಟು ದಿನ ನನ್ನ ಜೊತೆ ತಾನೇ ಬರತಿದ್ದೆ ,ಇವತ್ತೇನೂ ಅಂಕಲ್ ಜೊತೆ ಬರ್ತೀನಿ ಅಂತಾ ಹೇಳಿದಿಯ ಅಂತೆ ಯಾಕೆ"?
"ಸ್ವಾತಿ ಡೋರ್ ನಾ ಓಪನ್ ಮಾಡೋದೇ ಇಲ್ಲ ರೂಮ್ ಒಳಗಿಂದಾನೆ ಜೆಕೆ ಇವತ್ತು ನೀನು ಒಬ್ಬನೇ ಹೋಗು ನಾನು ಇನ್ನೂ ರೆಡಿ ಆಗಿಲ್ಲ ಲೇಟ್ ಆಗುತ್ತೆ "
ಜೆಕೆ : "ಪರವಾಗಿಲ್ಲ ನಾನು ಕಾಯ್ತಿನಿ"...ಅಂತ ವಿನಯದಿಂದ ಹೇಳ್ತಾನೆ
ಸ್ವಾತಿ : "ಹೇ.. ಬೇಡ ಕಣೋ ಕಾಲೇಜ್ ಅಲ್ಲಿ ನಿಂಗೆ ತುಂಬಾ ಕೆಲಸ ಇದೆ ನೀನು ಹೊರಡು ನಾನು ಬೇಗ ರೆಡಿ ಆಗಿ ಬರ್ತೀನಿ "
ಜೆಕೆ : ( ಜೆಕೆ ಮನಸ್ಸಿನಲ್ಲೇ ಅಲ್ಲ ನಮ್ಮಿಬ್ಬರ ಮಧ್ಯೆ ಯಾವ ಜಗಳ ನು ಆಗಿಲ್ಲ ಆದರೂ ಯಾಕೆ ನನ್ನ ಅವೈಡ್ ಮಾಡ್ತಿದಾಳೆ )ನೀನು ಡೋರ್ ಯಾಕ್ ಓಪನ್ ಮಾಡ್ತಿಲ್ಲ ಓಪನ್ ಮಾಡು" 😕..
ಸ್ವಾತಿ :" ಓ.. ಮೈ ಡಿಯರ್ ಜೆಕೆ ನಾನು ನಿನ್ನ ಮೇಲೆ ಯಾವ ಕೋಪಾನು ಮಾಡಿಕೊಂಡಿಲ್ಲ ನಾನು ಬರೋಕೆ ಇನ್ನು ಟೈಮ್ ಆಗುತ್ತೆ ನಿಂಗೆ ಕಾಲೇಜ್ ಅಲ್ಲಿ ತುಂಬಾ ಕೆಲಸ ಇರುತ್ತೆ ನೀನು ಹೊರಡು ಓಕೆ"
ಜೆಕೆ : "ಅಲ್ಲ ಅದು"...
ಸ್ವಾತಿ : "ನೀನೇನಾದ್ರೂ ಈಗ ಹೊರಡದೆ ಇದ್ರೆ ಈಗ ಕೋಪ ಬರುತ್ತೆ ನಂಗೆ.. ನೀನು ಮೊದ್ಲು ಹೊರಡು ನಂಗೆ ರೆಡಿ ಆಗೋಕೆ ಬಿಡು ಪ್ಲೀಸ್"
ಜೆಕೆ : "ಸರಿ ಬೇಗ ಬಾ ವೇಟ್ ಮಾಡ್ತೀರ್ತೀವಿ ಎಲ್ಲರೂ ಅಂತ ಸಪ್ಪೆ ಮುಖ ಮಾಡಿಕೊಂಡು ಕೆಳಗೆ ಬರ್ತಾನೆ "
ಶಿವು :" ಅವಳು ಯಾವಾಗ್ಲೂ ಹಾಗೆ , ಯಾವಾಗ ಹೇಗೆ ಇರ್ತಾಳೋ ಅವಳಿಗೇ ಗೊತ್ತು ನೀನು ಏನು ತಿಲ್ಕೋಬೇಡ ಜೆಕೆ",
ಜೆಕೆ : "ಇಲ್ಲ ಅಂಕಲ್ ಅವಳ ಬಗ್ಗೆ ನನಗೆ ಗೊತ್ತಿಲ್ವಾ ಸರಿ ನಾನು ಇನ್ನೂ ಹೊರಡತಿನಿ ನೀವು ಸ್ಪಾತಿನ ಕರಕೊಂಡು ಬೇಗ ಬನ್ನಿ ಅಂತ ಜೆಕೆ ಅಲ್ಲಿಂದ ಹೋರಡ್ತಾನೇ"
ಅವನು ಹೋಗುವುದನ್ನೇ ನೋಡುತ್ತಾ ಭಾರತಿ ತನ್ನ ಮನದಲ್ಲಿರುವ ಮಾತನ್ನು ಹೇಳ್ತಾಳೆ ರಿ.. ನಮ್ಮ ಜೆಕೆ ಎಷ್ಟು ಒಳ್ಳೆ ಹುಡುಗ ಅಲ್ವಾ ನಮ್ಮ ಸ್ವಾತಿನಾ ನಮಗಿಂತ ಚೆನ್ನಾಗಿ ಅರ್ಥ ಮಾಡ್ಕೊಂಡಿದಾನೆ , ನಮ್ಮ ಸ್ವಾತಿ ಗೆ ಒಳ್ಳೆ ಜೋಡಿ ಏನಂತೀರಾ ?
ಶಿವು :" ಹೌದು.. ಕಣೇ ನೀನು ಹೇಳೋದು ಸರಿಯಾಗಿದೆ ಜೆಕೆ ಅಷ್ಟು ಕೇರ್ ಮಾಡೊ ಹುಡುಗ ಸಿಗಬೇಕಂದ್ರೆ ನಮ್ಮ ಸ್ವಾತಿ ಪುಣ್ಯ ಮಾಡಿರಬೇಕು"
ಭಾರತಿ : "ಸರಿ ಹಾಗಾದ್ರೆ ಇವರ ಎಜುಕೇಷನ್ ಮುಗಿದ ಮೇಲೆ ಅವರ ಮನೆಯವರ ಹತ್ರ ಹೋಗಿ ಇದರ ಬಗ್ಗೆ ಮಾತಾಡೋಣ ಏನಂತೀರಾ..
ಶಿವು : ಸರಿ ಹಾಗೆ ಮಾಡೋಣ".
ಇನ್ನು ಈಕಡೆ ಜೆಕೆ ಕೂಡ ಕಾರ್ತಿಕ್ ರೂಮ್ ಗೆ ಬರ್ತಾನೆ
ಸೂರ್ಯ : "ಹೇ.. ಜೆಕೆ ವಾವ್ ..ಏನೂ ಸಖತ್ ಆಗಿ ಕಾಣಸ್ತಿದ್ದೀಯ ಗೊತ್ತಾ ಒಳ್ಳೆ ಹೀರೋ ತರ ಕಾಣಸ್ತಿದ್ದಿಯ" ☺️
ಪ್ರವೀಣ್ ( ಛೇಡಿಸುತ್ತಾ ): "ಹೌದು ಕಣೋ ಹುಡಗಿರು ಏನು ಹುಡಗೂರು ಕೂಡ ಫ್ಲಾಟ್ ಆಗ್ತಾರೆ 😁 ಇವತ್ತು ಸ್ವಾತಿ ನಿನ್ನ ನೋಡಿ ಅವಳೇ ಎಲ್ಲಿ ಪ್ರಪೋಸ್ ಮಾಡ್ತಾಳೆ ಅನಸ್ತಿದೆ"
ಜೆಕೆ ಯ ಮುಖದಲ್ಲಿ ಯಾವುದೇ ಉತ್ಸಾಹ ಇರುವುದಿಲ್ಲ ಹೇ.. ಸುಮ್ಮಿರೋ ಎನ್ ಏನೋ ಮಾತಾಡ್ಬೇಡ😕
ಸೂರ್ಯ : "ಯಾಕೋ ಮುಖ ಸಪ್ಪಗೆ ಮಾಡಿದೀಯ, ಕಾಲೇಜಿನಿಂದ ಬಂದಿರೋ ಕಾಲ್ ನಾ ಯಾಕೆ ಪಿಕ್ ಮಾಡ್ತಿಲ್ಲ ಅವರೆಲ್ಲ ನನಗೆ ಕಾಲ್ ಮಾಡ್ತಿದ್ದಾರೆ ಸರಿ ಟೈಮ್ ಇಲ್ಲ ಬೇಗ ಹೋಗೋಣ ಬನ್ನಿ"
ಕಾರ್ತಿಕ್ : "ಹಾ.. ನಡೀರಿ" ಆಗ ಕಾರ್ತಿಕ್ ಸ್ವಾತಿ ಇಲ್ಲದಿರುವುದನ್ನು ಗಮನಿಸಿ ಜೆಕೆ ಸ್ವಾತಿ ಎಲ್ಲೊ"?
ಜೆಕೆ: "ಅವಳು ನನ್ನ ಜೊತೆ ಬರ್ಲಿಲ್ಲ"
ಸೂರ್ಯ: "ಯಾಕೆ? ಯಾಕ್ ಬರಲಿಲ್ಲ"
ಜೆಕೆ ( ಬೇಜಾರಿನಲ್ಲಿ) : "ಗೊತ್ತಿಲ್ಲ ಅವಳು ನಾನು ಇನ್ನೂ ರೆಡಿ ಆಗಿಲ್ಲ ನೀನು ಹೋಗು ನಾನು ಅಪ್ಪನ ಕಾರ್ ನಲ್ಲಿ ಬರ್ತೀನಿ ಅಂತಾ ಹೇಳಿದ್ಲು 🙁 ಅವಳನ್ನ ನೋಡೋಕೆ ಎಷ್ಟು ಕಾತುರದಿಂದ ಕಾಯ್ತಿದ್ದೆ ಗೊತ್ತಾ ಅವಳು ಯಾಕೆ ಹಾಗೆ ಹೇಳಿದ್ಲು ಅಂತಾ ಗೊತ್ತಾಗ್ತಿಲ್ಲ ಎಲ್ಲಿ ಇವತ್ತಿನ ಎಲ್ಲಾ ಪ್ಲಾನ್ ಫ್ಲಾಪ್ ಆಗುತ್ತೆ ಅಂತ ಭಯ ಆಗ್ತಿದೆ" ,
ಸೂರ್ಯ :" ಅಷ್ಟೆ ತಾನೇ ಅದಕ್ಕೆಲ್ಲ ಯಾಕೋ ಭಯ ಪಡ್ತಿಯ ಈ ಹುಡಗಿರು ರೆಡಿ ಆಗೋಕೆ ತುಂಬಾ ಟೈಮ್ ತಗೋತಾರೆ, ಹಾಗೆ ತುಂಬಾ ಟೆನ್ಶನ್ ನಲ್ಲಿ ಕೂಡಾ ಇರ್ತಾರೆ so.. ನೀನು ಸ್ವಲ್ಪ ಕೂಲ್ ಆಗಿ ಇರು ಅವಳು ಬರ್ತಾಳೆ "
ಪ್ರವೀಣ್ : "ಇದೆಲ್ಲ ಹೇಗೋ ತಿಳ್ಕೊಂಡೆ ನೀನು" 🤔
ಸೂರ್ಯ : "ಅದರಲ್ಲಿ ಏನಿದೆ ಸ್ವಲ್ಪ ನಮ್ಮ ಹುಡಗಿ ಇಂದಾನು ಕಲ್ತಿದ್ದೀನಿ 😁 ಜೆಕೆ ನೀನೇನು ಟೆನ್ಶನ್ ಮಾಡ್ಕೋಬೇಡ ಅವಳು ಬರ್ತಾಳೆ ನಾವು ಹೋಗೋಣ ಬಾ ಟೈಮ್ ಆಗ್ತಿದೆ"
ಜೆಕೆ : "ಸರಿ ನಿನ್ನ ಮೇಲೆ ನಂಬಿಕೆ ಇಟ್ಟಿದ್ದೀನಿ ಇವತ್ತು ಯಾವ ಪ್ಲಾನ್ ಫ್ಲಾಪ್ ಆಗದೆ ಇದ್ರೆ ಸಾಕು ಸೂರ್ಯ,ಜೆಕೆ, ಪ್ರವೀಣ್,ಕಾರ್ತಿಕ್ ಎಲ್ಲರೂ ಅಲ್ಲಿಂದ ಕಾಲೇಜ್ ಗೆ ಹೋರಡ್ತಾರೇ..
ಮುಂದುವರೆಯುವುದು.....
✍🏻 ಲೇಖಕರ ನೋಟು:
ಒಂದು ದಿನ... ಒಂದು ಕ್ಷಣ... ಜೀವನವನ್ನೇ ಬದಲಾಯಿಸಬಲ್ಲದು.
ಇವತ್ತು ಜೆಕೆಗೆ ಅಂತಹ ದಿನ.
ಪ್ರೀತಿ, ಕುತೂಹಲ, ಸ್ವಲ್ಪ ಬೇಸರ – ಎಲ್ಲವೂ ಜೊತೆಯಲ್ಲಿದೆ.
ಮುಂದೆ ಏನಾಗಲಿದೆ?
ನಮ್ಮ ಜೊತೆ ಇರಿ, ಕಥೆ ಮುಂದುವರಿಯುತ್ತಿದೆ…
ಕಥೆಯನ್ನು ಓದಿ, ಶೇರ್ ಮಾಡಿ, ದಯವಿಟ್ಟು ಫಾಲೋ ಮಾಡಿ!
---