ಎಲ್ಲರೂ ಹಾಲ್ ಅಲ್ಲಿ ಕುತ್ಕೊಂಡು ಮಾತಾಡ್ತಾ ಇರೋವಾಗ ಶಿಲ್ಪಾ ಅಕಿರಾ ರೂಮಿಂದ ಹೊರಗೆ ಬಂದು ಹಾಲ್ ಅಲ್ಲಿ ಇರೋ ಸೋಫಾದಲ್ಲಿ ಕುತ್ಕೊಂಡ್ರು. ಶಿಲ್ಪಾ ನನ್ನ ನೋಡ್ತಾ ಏನೋ ನಮ್ ಹುಡುಗಿ ಬಂದಾಗಿಂದ ತುಂಬಾ ಡಲ್ ಇದ್ದಾಳೆ ಅವಳಿಗೆ ಏನಾದ್ರು ಬೈದ ಅಂತ ಕೇಳಿದ್ಲು. ನಾನೇನಕ್ಕೆ ಬೈಲಿ ಕೆಲವೊಂದು ವಿಷಯ ನ ಹೇಳ್ದೆ ಅದಕ್ಕೆ ಹಾಗೇ ಇದ್ದಾಳೆ ಅಂತ ಹೇಳ್ದೆ. ಲೋ ನಿನ್ನ ಬಗ್ಗೆ ನನಗೆ ಗೊತಿಲ್ವಾ ವಿಷಯ ಏನ್ ಹೇಳು ಅಂತ ಹೇಳಿದ್ಲು. ಏನಿಲ್ವೆ ಒಂದು ಸ್ಟೋರಿ ಹೇಳಿದೆ ಅದಕ್ಕೆ ಹಾಗೇ ಇದ್ದಾಳೆ. ಶಿಲ್ಪಾ ಸ್ಟೋರಿ ಹೇಳಿದ ಏನ್ ಸ್ಟೋರಿ ಹೇಳಿದೆ ಅಂತ ಕೇಳಿದ್ಲು. ಏನಿಲ್ವೆ ನಿಮ್ ದೊಡ್ಡಮ್ಮ ಕೋಮಲಿ ಆಂಟಿ ಗೊತ್ತು ಅಲ್ವಾ ಅಂತ ಕೇಳ್ದೆ. ಶಿಲ್ಪಾ ಹ್ಮ್ ಹೌದು ಗೊತ್ತು ಅಕಿರಾ ಅವರ ಅಮ್ಮ. ಅವರು ಲವ್ ಮಾಡೋದು ಇಷ್ಟ ಇಲ್ಲಾ ಅಂತ ಗೊತ್ತಿದ್ರು ತಾತ ನ ಎದುರಿಸಿ ಮದುವೆ ಮಾಡಿಕೊಂಡು ಬೆಂಗಳೂರು ಹೋದ್ರು ಆಮೇಲೆ ತಾತ ಅವರ ಪ್ರೀತಿ ನ ಒಪ್ಕೊಂಡು ಮಾತಾಡಿಸೋಕೆ ಹೋದ್ರು. ಅವತ್ತು ನನ್ನ ಪ್ರೀತಿ ನ ಒಪ್ಪಿಕೊಳ್ದೆ ಯಾರು ಇಲ್ಲದೆ ಅನಾಥೆ ಹಾಗೇ ಮದುವೆ ಮಾಡಿಕೊಂಡೆ. ಈಗ ಮಗಳು ಅಂತ ಬಂದಿದ್ದೀರಾ ನನಗೆ ನೀವು ಯಾರು ಬೇಡ ಅಂತ ನಿರ್ಧಾರ ಮಾಡಿ ನನಗೆ ಯಾರು ಇಲ್ಲಾ ಅಂತ ನಾನು ಅನಾಥೆ ಅಂತ ಹೇಳ್ಕೋತ ಇದ್ದಾರೆ. ನಮ್ಮಮ್ಮ ಅವರಿಗೆ ಹೆಲ್ಪ್ ಮಾಡಿದ್ರು ಅಂತ ಯಾರಿಗೂ ಗೊತ್ತಾಗದ ಹಾಗೇ ಸೀಕ್ರೆಟ್ ಫ್ರೆಂಡ್ಶಿಪ್ ನ ಮೇಂಟೈನ್ ಮಾಡ್ತಾ ಅಕ್ಕ ತಂಗಿರು ಫ್ರೆಂಡ್ಸ್ ತರ ಇದ್ದಾರೆ ಅಂತ ಹೇಳಿದ್ಲು. ಅಕಿರಾ ಶಿಲ್ಪಾ ಹೇಳಿದ್ದನ್ನ ಕೇಳಿ ಶಾಕ್ ಆಗಿ ಶಿಲ್ಪಾ ಏನೇ ಹೇಳ್ತಾ ಇದ್ದಿಯಾ ಅಂತ ಕೇಳಿದ್ಲು. ಶಿಲ್ಪಾ ಹೌದು ಕಣೆ ನಮ್ಮಮ್ಮ ನಿಮ್ಮಮ್ಮ ಇಬ್ರು ಸಿಸ್ಟರ್ಸ್. ತಾತ ಅಜ್ಜಿ ಕಡೆಗೆ ತೋರಿಸಿ ಇವರೆ ನಿಮ್. ಅಮ್ಮ ನ ಅಪ್ಪ ಅಮ್ಮ ನಿನಗೆ ಅಜ್ಜಿ ತಾತ. ಅವಳು ನೀಲಾ ನಿನಗೆ ತಂಗಿ. ಅವರಿಬ್ಬರೂ ಚಿಕ್ಕಪ್ಪ ಚಿಕ್ಕಮ್ಮ. ಅವರು ನಿನಗೆ ಅತ್ತೆ ಮಾವ. ಅವನು ಮದನ್ ನಿನಗೆ ನನಗೆ ಭಾವ ಕಂ ಫ್ಯೂಚರ್ ಗಂಡ. ನಿನಗೆ ಸೋದರ ಮಾವ. ನಿನ್ ಬೇಕಾದ್ರೆ ಮದನ್ ಅಂತ ಕರಿ ಪರ್ವಾಗಿಲ್ಲ ನನಗಿಂತ ದೊಡ್ಡವಳು ಅಲ್ವಾ ನೀನು ಅಂತ ಹೇಳಿ ಮಾತನ್ನ ಮುಗಿಸಿದ್ಲು.
ತಾತ ಮಾತಾಡ್ತಾ ಹೌದಮ್ಮ ಮೊಮ್ಮಗಳೇ ಶಿಲ್ಪಾ ಹೇಳೋದು ನಿಜ ಅವತ್ತು ನಿಮ್ಮಮ್ಮನ ಪ್ರೀತಿ ನ ಒಪ್ಕೊಂಡು ಇಲ್ಲಾ ಅಂತ ಇವತ್ತಿನ ವರೆಗೂ ಹಠ ಮಾಡಿಕ್ಕೊಂಡು ಇದ್ದಾಳೆ. ಅದ್ರೆ ಅವರ ತಂಗಿ ಜೊತೆಗೆ ಚೆನ್ನಾಗಿ ಇದ್ದಾಳೆ. ಅವಳ ಹಠ ಗೊತ್ತಿದ್ದೂ ನಾನು ಸುಮ್ನೆ ಆಗಿಬಿಟ್ಟೆ. ಎಷ್ಟೇ ಆದ್ರು ನೀನು ಕೂಡ ನನ್ನ ಮೊಮ್ಮಗಳು ಅಲ್ವಾ ಅದಕ್ಕೆ ನೋಡಬೇಕು ಅಂತ ಅನ್ನಿಸ್ತು ಅದ್ರೆ ನಿಮ್ಮಮ್ಮ ನಮ್ಮನ್ನ ದೂರಾನೇ ಇಡ್ತಾ ಇದ್ಲು. ಶಿಲ್ಪಾ ಅವಾಗವಾಗ ನಿನ್ನ ಬಗ್ಗೆ ಹೇಳ್ತಾ ನಿನ್ನ ಫೋಟೋ ನ ನಮಗೇ ಕಳಿಸ್ತಾ ಇದ್ಲು. ನಿಮ್ಮಮ್ಮ ಗೆ ಶಿಲ್ಪಾಳಿಗೆ ಏನು ಗೊತ್ತಿಲ್ಲ ಅಂತ ಅನ್ಕೊಂಡು ಇದ್ದಾಳೆ ಅದಕ್ಕೆ ಅಕ್ಕ ತಂಗಿ ಇಬ್ಬರು ಶಿಲ್ಪಾ ಗೆ ಏನು ಹೇಳಿಲ್ಲ ಜಸ್ಟ್ ಫ್ರೆಂಡ್ಸ್ ಅನ್ನೋತರ ನಿಮಗೆ ಹೇಳಿದ್ದಾರೆ ಅಂತ ಹೇಳಿದ್ರು. ಅಕಿರಾ ಹೋಗಿ ತಾತ ಅಜ್ಜಿನ ಗಟ್ಟಿಯಾಗಿ ತಬ್ಬಿಕೊಂಡು ಸಾರೀ ತಾತ ಅಮ್ಮ ನಿಮ್ ಬಗ್ಗೆ ಏನು ಹೇಳಿಲ್ಲ ಅಪ್ಪ ಕೂಡ ಏನು ಹೇಳಿಲ್ಲ. ನಾನು ಕೆಲವೊಂದು ಟೈಮ್ ಕೇಳಿದೆ ಅದ್ರೆ ಅಮ್ಮ ನನಗೆ ಯಾರು ಇಲ್ಲಾ ನಾನು ಅನಾಥೆ ಅಂತ ಹೇಳಿ ಸುಮ್ಮನಗ್ತಾ ಇದ್ರು ಅಂತ ಹೇಳಿ ಅಪ್ಪಿಕೊಂಡಳು. ಅಜ್ಜಿ ತಾತ ಇಬ್ಬರು ಮೊಮ್ಮಗಳನ್ನ ಪ್ರೀತಿನಿಂದ ಅಪ್ಪಿಕೊಂಡು ಈಗಲಾದ್ರೂ ನಿನ್ನ ನೋಡೋ ಭಾಗ್ಯ ಬಂತು ಅಲ್ವಾ ಅಷ್ಟು ಸಾಕು ಬಿಡು. ನಿಮ್ಮಮ್ಮನ ಕೋಪ ಯಾವಾಗ ಕಮ್ಮಿ ಆಗುತ್ತೋ ಯಾವಾಗ ಅಪ್ಪ ಅಂತ ಬರ್ತಾಳೋ ನೋಡೋಣ ಅಂತ ಹೇಳಿದ್ರು.
ಶಿಲ್ಪಾ ಲೇ ನಾನ್ ಈ ವಿಷಯ ನ ಮಹಿ ಗೆ ಹೇಳಿದೆ ಅಲ್ವಾ ಬರ್ತಾ ದಾರಿಲಿ ಅವಳಿಗೆ ಹೇಳು ಅವಳಿಗೆ ತುಂಬಾ ಖುಷಿ ಆಗುತ್ತೆ ಮೊದಲ ಸರಿ ಅಜ್ಜಿ ತಾತ ನ ನೋಡ್ತಾ ಇದ್ದಾಳೆ ನಾನು ಅವಳ ತಂಗಿ ಅಂತ ಗೊತ್ತಾದ್ರೆ ಇನ್ನು ಸಂತೋಷ ಪಡ್ತಾಳೆ ಅಂತ ಹೇಳಿ ನಿನಗೆ ಹೇಳೋಕೆ ಹೇಳ್ದೆ. ನಿನ್ ನೋಡಿದ್ರೆ ನೋಡಿದ ತಕ್ಷಣ ಅಳೋಕೆ ಶುರು ಮಾಡಿದೆ ಯಾಕೆ ಏನಾಯ್ತು ಅಂತ ಕೇಳಿದ್ಲು. ಅಜ್ಜಿ ತಾತ ನ ಅಪ್ಪುಗೆ ಅಲ್ಲಿ ಇದ್ದಾ ಅಕಿರಾ ಶಿಲ್ಪಾ ಮಾತಿಗೆ ಕೋಪದಿಂದ ಎದ್ದು ಬಂದು ನನ್ನಾ ಹೊಡಿಯೋಕೆ ಶುರು ಮಾಡಿದ್ಲು. ಅಯ್ಯೋ ಪಾಪಿ ಮನುಷ್ಯ ನ ನೀನು ಮನೆಯಿಂದ ಬರೋವಾಗ ಎಷ್ಟು ಖುಷಿಯಿಂದ ಬಂದೆ ಅದ್ರೆ ನೀನು ದಾರಿ ಉದ್ದಕ್ಕೂ ನನ್ನ ಅಳೋ ತರ ಮಾಡಿದೆ ಈಗ್ಲೂ ನಿನ್ ಹೇಳಿದ್ದನ್ನ ನೆನೆಸಿಕೊಂಡ್ರೆ ಇಲ್ಲೇ ನಿನ್ನ ಸಾಯಿಸಿ ಬಿಡೋಣ ಅಂತ ಅನ್ನಿಸ್ತಾ ಇದೆ ಅಂತ ಹೇಳ್ತಾ ಇನ್ನು ಜೋರಾಗಿ ಹೊಡಿಯೋಕೆ ಶುರು ಮಾಡಿದ್ಲು. ನೀಲಾ ಮಧ್ಯದಲ್ಲಿ ಬಂದು ಹಲೋ ಅಕ್ಕ ಸುಮ್ನೆ ನೀನು ಮಹಿ ನ ಹಾಗೆಲ್ಲ ಹೊಡಿಯೋದು ನನಗೆ ಇಷ್ಟ ಇಲ್ಲಾ ಬಿಡಿ ಅವನನ್ನ ಅಂತ ಬಿಡಿಸೋಕೆ ಬಂದ್ಲು. ಅಕಿರಾ ನೀಲಾ ಕಡೆಗೆ ಒಂದು ಲುಕ್ ಕೊಟ್ಟು ಇವನು ಏನ್ ಹೇಳಿದ ಅಂತ ನಿನಗೆ ಗೊತ್ತಾ ಅಂತ ಕೇಳಿದ್ಲು. ನೀಲಾ ಏನಾದ್ರು ಹೇಳಿರಲಿ ಕೇಳಿ ನಂಬಿದ್ದು ನಿನ್ನ ತಪ್ಪು ಅದಕ್ಕೆ ಮಹಿ ನ ಯಾಕೆ ಹೊಡಿಯೋದು ಬಿಡಿ ಅಂತ ಹೇಳಿದ್ಲು. ಶಿಲ್ಪಾ ಕೂಡ ಬಂದು ಸಾಕ್ ಬಿಡೆ ಬಾ ಕುತ್ಕೋ ಮೊದಲು ಅಂತ ಹೇಳಿ ಕರ್ಕೊಂಡು ಹೋಗಿ ಸೋಫಾ ದಲ್ಲಿ ಕೂರಿಸಿಕೊಂಡು ಸಮಾಧಾನ ಮಾಡ್ತಾ ಅವನು ನಿನಗೆ ಏನ್ ಹೇಳಿದ ಹೇಳು ಅಂತ ಕೇಳಿದ್ಲು. ಅಕಿರಾ ಪ್ರತಿಯೊಂದು ವಿಷಯ ನ ಮಿಸ್ ಮಾಡದೇ ಹೇಳಿದ್ಲು. ಮನೆಯವರೆಲ್ಲ ನನ್ನಾ ಕಡೆಗೆ ಕೋಪದಿಂದ ನೋಡೋಕೆ ಶುರು ಮಾಡಿದ್ರು. ತಾತ ಮಾತ್ರ ನಗ್ತಾ ಮಹಿ ನನಗಂತೂ ಎರಡು ಮದುವೆ ಆಗೋಕೆ ಆಗಲಿಲ್ಲ ಅದ್ರೆ ನಿನ್ ಹೇಳಿದ ಸ್ಟೋರಿ ಲಿ ನನಗೆ ಎರಡು ಮದುವೆ ಅಂತ ಹೇಳ್ದೆ ಅಲ್ವಾ ತುಂಬಾ ಸಂತೋಷ ಆಗ್ತಾ ಇದೆ. ಕಥೆ ಹೇಳಿದ್ರೆ ಹೀಗೆ ನಂಬೋತರ ಹೇಳಬೇಕು ಅಂತ ಹೇಳಿ ನಕ್ಕರು. ಶಿಲ್ಪಾ ತಾತ ನೀವು ಸುಮ್ನೆ ಇರ್ತೀರ ಎರಡು ಮದುವೆ ಅಂತೇ. ಅಕಿರಾ ಅವನು ನಿನಗೆ ಸುಳ್ಳು ಕಥೆ ನ ಹೇಳಿದ್ದಾನೆ ಅವನು ಹೇಳಿದ್ದೆಲ್ಲ ಸುಳ್ಳು. ನಿಜ ಹೇಳಬೇಕು ಅಂದ್ರೆ ಅಂತ ಇನ್ನು ಏನೋ ಹೇಳೋಕೆ ಹೋದ್ಲು. ಶಿಲ್ಪಾ ಈ ವಿಷಯ ನ ನಾನೆ ಹೇಳ್ತಿನಿ ಅಂತ ಹೇಳ್ದೆ. ಶಿಲ್ಪಾ ಸೈಲೆಂಟ್ ಆದ್ಲು. ತಾತ ಮಹಿ ಹೇಳೋಕೆ ಇದೆ ಸರಿಯಾದ ಸಮಯ ಅಂತ ತಾತ ಮಾತಾಡ್ತಾ.
ಅಮ್ಮ ಅಕಿರಾ ನಿನಗೆ ಒಂದು ವಿಷಯ ಹೇಳಬೇಕು. ಇದನ್ನ ನೀನು ಒಪ್ಪಿಕೊಳ್ಳೋಕೆ ಸ್ವಲ್ಪ ಕಷ್ಟ ಅಂತ ಅನ್ನಿಸುತ್ತೆ. ಬಟ್ ಇದರಲ್ಲಿ ಇರೋದು ನನ್ನ ಇಬ್ಬರ ಮೊಮ್ಮಕ್ಕಳ ಭವಿಷ್ಯ ಅದಕ್ಕೆ ಹೇಳ್ತಾ ಇದ್ದೀನಿ. ಮಹಿ ಮೊದಲು ಇಷ್ಟ ಪಟ್ಟು ಪ್ರೀತಿ ಮಾಡೋಕೆ ಶುರು ಮಾಡಿದ್ದು ನಿನ್ನನ್ನೇ ಅದ್ರೆ ನೀನು ಬೇರೆ ಹುಡುಗನನ್ನ ಲವ್ ಮಾಡ್ತಾ ಇದ್ದಿಯಾ ಅಂತ ಗೊತ್ತಾಗಿ ನಿನಗೆ ಹೇಳ್ದೆ ಸುಮ್ಮನೆ ಆಗಿ ಬಿಟ್ಟ. ಇಲ್ಲಿಗೆ ಬಂದಮೇಲೆ ನೀಲಾ ಗೆ ಮಹಿ ತುಂಬಾ ಇಷ್ಟ ಅದ ಅವನನ್ನ ಲವ್ ಮಾಡೋಕೆ ಶುರು ಮಾಡಿದ್ಲು. ಮಹಿ ಬಗ್ಗೆ ಶಿಲ್ಪಾ ಹೇಳಿದ್ದು ಮತ್ತೆ ಅವನು ಇದ್ದಾ ರೀತಿ ಅವನಲ್ಲಿ ಗೆಲ್ಲಬೇಕು ಅನ್ನೋ ಛಲ ಇದೆಲ್ಲಾ ನೋಡಿದಾಗ ನಮಗೂ ಅವನು ಇಷ್ಟ ಅದ. ಅವರ ಪ್ರೀತಿ ನ ನಾವು ಒಪ್ಪಿಕೊಂಡ್ವಿ. ಜಗತ್ತು ಎಷ್ಟೇ ಮುಂದೆ ಹೋದ್ರು ನಮ್ಮ ನಂಬಿಕೆ ಅನ್ನೋದು ಇರುತ್ತೆ ಅಲ್ವಾ. ಇವರಿಬ್ಬರ ಜಾತಕ ನ ನೋಡಿ ಜೋತಿಷ್ಯರು ಒಂದು ಮಾತು ಹೇಳಿದ್ರು. ಹುಡುಗನ ಜಾತಕದಲ್ಲಿ ಎರಡು ಮದುವೆ ಯೋಗ ಇದೆ. ನಮಗೆ ಏನ್ ಮಾಡಬೇಕೋ ಗೊತ್ತಾಗಲಿಲ್ಲ. ಮಹಿ ಗೆ ಇದೆ ವಿಷಯ ನ ಹೇಳಿದ್ವಿ. ಅದಕ್ಕೆ ಮಹಿ ತಾತ ಈ ಮನೆಗೆ ಅತಿಥಿ ಆಗಿ ಬಂದೆ ಅತಿಥಿ ಅಗಿನೇ ಹೊರಟು ಹೋಗ್ತೀನಿ. ಎಷ್ಟೋ ವರ್ಷಗಳ ಪ್ರೀತಿ ನೇ ಏನೋ ಒಂದು ಕಾರಣಕ್ಕೆ ಮುರಿದು ಹೋಗುತ್ತೆ. ನೀಲಾ ಹತ್ತಿರ ನಾನು ಮಾತಾಡ್ತೀನಿ ಅಂತ ಹೇಳಿ ನೀಲಾ ಹತ್ತಿರ ಮಾತಾಡಿ ಅವಳಿಗೆ ಹೇಳಿ ಒಪ್ಪಿಸಿ ಮನೇಲಿ ಮಗನ ತರ ಇದ್ದವನು ಕೊನೆಗೆ ಅತಿಥಿ ಆಗಿ ಬಿಟ್ಟ.( ತಾತ ಮಾತಾಡ ಇರಬೇಕಾದ್ರೆನೆ ನಾನು ಯಾರಿಗೂ ಹೇಳದೆ ಅಲ್ಲಿಂದ ಸೈಲೆಂಟಾಗಿ ಎದ್ದು ಹೊರಗಡೆ ಬಂದು ಕಾರ್ ಸ್ಟಾರ್ಟ್ ಮಾಡಿಕೊಂಡು ಹೊರಟು ಹೋದೆ ) ಇವತ್ತು ನೀವು ಬರ್ತೀರಾ ಅಂತ ಹೇಳಿದಾಗ ನೀನು ಅವನಿಗೆ ನಿನ್ನ ಪ್ರೀತಿ ನ ಹೇಳಿದ ವಿಷಯ ಹೇಳಿದ. ಅಲ್ಲೇ ನಿನಗೆ ಹೇಳಿದ್ರೆ ಅ ಸಂದರ್ಭದಲ್ಲಿ ನೀನು ಏನ್ ಮಾಡ್ಕೊತೀಯ ಅನ್ನೋ ಭಯ ಬಿದ್ದು ನಮ್ ಹತ್ತಿರ ಪರಿಸ್ಥಿತಿ ಹೀಗೆ ಇದೆ ನೀವೇ ಅವಳಿಗೆ ವಿಷಯ ನ ಅರ್ಥ ಹಾಗೋ ಹಾಗೇ ಹೇಳಿಬಿಡಿ ಅಂತ ಹೇಳಿದ. ನಿಮ್ಮಜ್ಜಿ ಗೆ ಮೊಮ್ಮಕ್ಕಳು ಇಬ್ಬರು ಒಬ್ಬನನ್ನೇ ಪ್ರೀತಿ ಮಾಡ್ತಾ ಇದ್ದಾರೆ ಅಲ್ವಾ ಅದಕ್ಕೆ ಒಂದು ಸರಿ ಮುವ್ವರ ಜಾತಕ ತೋರಿಸೋಣ ಅಂತ ಹೋಗಿ ಜ್ಯೋತಿಷಿ ಹತ್ತಿರ ತೋರಿಸಿದ್ರು. ಮುವ್ವರ ಜಾತಕ ನೋಡಿ ಜ್ಯೋತಿಷಿ ಈಗ ಈ ಜಾತಕಗಳು ಸರಿ ಹೋದವು. ಇನ್ನ ಮನಸ್ಸು ಮಾಡಬೇಕಾಗಿರೋದು ನೀವುಗಳು ಅಂತ ಹೇಳಿ ಬಿಟ್ಟರು. ಇದೆ ವಿಷಯ ನ ಮಹಿ ಗೆ ಹೇಳಿದಾಗ. ತಾತ ಇಬ್ಬರು ನಿಮ್ಮ ಮೊಮ್ಮಕ್ಕಳು, ಒಂದು ಹುಡುಗಿ ಏನ್ ಬೇಕಾದ್ರು ಹಂಚಿ ಕೊಳ್ತಾಳೆ ಅದ್ರೆ ಇಷ್ಟ ಪಡೋ ಹುಡುಗನನ್ನ ಇಲ್ಲಾ ಕಟ್ಕೊಂಡ ಗಂಡನನ್ನ ಹಂಚಿ ಕೊಳ್ಳೋಕೆ ಒಪ್ಪಿಕೊಳ್ಳೋದು ಇಲ್ಲಾ. ಹೊಸದಾಗಿ ಚಿಗಿರಿಯೋ ಪ್ರೀತಿ ಒಂದು ಹುಡುಗಿ ಅರ್ಥ ಮಾಡಿಕೊಂಡು ದೂರ ಇದ್ದಾಳೆ. ಇವಾಗ ಇವಳಿಗೆ ನಾನ್ ಹೇಳೋದಕ್ಕಿಂತ ನೀವೇ ಹೇಳಿ ಅರ್ಥ ಮಾಡಿಸಿ ಒಪ್ಕೋತಾಳೆ. ಯಾಕಂದ್ರೆ ಪ್ರೀತಿಗಿಂತ ದೊಡ್ಡದು ಕುಟುಂಬ. ನನ್ನಿಂದ ಈ ಫ್ಯಾಮಿಲಿ ಅಲ್ಲಿ ಪ್ರಾಬ್ಲಮ್ ಬರಬಾರದು ನನ್ನಿಂದ ಇಂತ ಪರಿಸ್ಥಿತಿ ಬರುತ್ತೆ ಅಂತ ಗೊತ್ತಿದ್ರೆ ಅವತ್ತು ಅಕಿರಾ ನಿಂದ ದೂರ ಇರ್ತಾ ಇದ್ದೆ. ನೀಲಾ ಗೆ ನೋ ಹೇಳ್ತಾ ಇದ್ದೆ ಅಂತ ಹೇಳಿದ. ನೀವು ಅಕ್ಕ ತಂಗಿರು ಒಟ್ಟಿಗೆ ಬೆಳಿಯದೆ ಇರಬಹುದು ಅದ್ರೆ ನೀವಿಬ್ರು ನನಗೆ ಯಾವತ್ತಿದ್ರೂ ಮೊಮ್ಮಕ್ಕಳೆ ಇಬ್ರು ಒಂದೇ ನನಗೆ. ನೀವಿಬ್ರು ಕೂತು ಮಾತಾಡಿ ಒಂದು ನಿರ್ಧಾರಕ್ಕೆ ಬನ್ನಿ. ಅದ್ರೆ ಒಂದು ಅಕ್ಕನಿಗೋಸ್ಕರ ತಂಗಿ ತ್ಯಾಗ ಮಾಡೋದು ಇಲ್ಲಾ ತಂಗಿಗೋಸ್ಕರ ಅಕ್ಕ ತ್ಯಾಗ ಮಾಡ್ತೀನಿ ಅಂತ ಅನ್ಕೊಂಡ್ರೆ ಮಾತ್ರ ಅದನ್ನ ಇಲ್ಲೇ ಮರೆತು ಬಿಡಿ. ಹೋಗಿ ಅಂತ ನೀಲಾ ನ ಅಕಿರಾ ನ ಇಬ್ಬರನ್ನು ಶಿಲ್ಪಾ ರೂಮ್ ಗೆ ಕಳಿಸಿ ಕೊಡ್ತಾರೆ.
ತಾತ ಅವರ ಜೊತೆ ಮಾತಾಡಿ ಮಹಿ ಕೂತಿದ್ದ ಕಡೆಗೆ ನೋಡ್ತಾನೆ. ಅವನು ಕಾಣಿಸೋದಿಲ್ಲ. ಮದನ್ ನ ಮಹಿ ಎಲ್ಲಿ ಹೋದ ಅಂತ ಕೇಳ್ತಾನೆ ತಾತ. ಮದನ್ ಅವನು ಹಾಗನೇಲೇ ಹೋದ ತಾತ. ನಾನು ಇರು ಅಂತ ಎಷ್ಟೋ ಕೇಳ್ದೆ. ಅದ್ರೆ ಕೇಳಲಿಲ್ಲ ಹೊರಟು ಹೋದ ಅಂತ ಹೇಳಿದ. ಮನೆಗೆ ಮಗನ ತರ ಇದ್ದಾ. ಇವತ್ತು ಪ್ರೀತಿ ಅನ್ನೋ ವಿಷಯ ದಿಂದ ನಮ್ಮಿಂದ ದೂರ ಇದ್ದಾನೆ. ಅ ದೇವರೇ ಇದಕ್ಕೆ ಒಂದು ದಾರಿ ತೋರಿಸಬೇಕು ಅಂತ ಹೇಳಿ ಸೈಲೆಂಟ್ ಆಗ್ತಾರೆ. ರೂಮ್ ಗೆ ಬಂದ ನೀಲಾ ಅಕಿರಾ ಇಬ್ರು ಸೈಲೆಂಟ್ ಆಗಿ ಕೂತ್ಕೊಂಡು ಏನ್ ಮಾತಾಡೋದು ಅಂತ ಯೋಚ್ನೆ ಮಾಡ್ತಾ ಕೂತಿರ್ತಾರೆ. ಕೊನೆಗೂ ನೀಲಾ ನೇ ಮಾತಾಡ್ತಾ ಹೇಳು ಅಕ್ಕ ಇವಾಗ ಏನ್ ಮಾಡೋಣ ಅಂತ ಕೇಳ್ತಾಳೆ. ಅಕಿರಾ ನೀಲಾ ಕಡೆಗೆ ನೋಡ್ತಾ ಅವಳು ಅಕ್ಕ ಅಂತ ಕರೀತಾ ಇರೋದಕ್ಕೆ ಸಂತೋಷ ಪಡಬೇಕೋ ಇಲ್ಲಾ ಪ್ರೀತಿ ನ ಉಳಿಸಿಕೊಳ್ಳಬೇಕೋ ಇಲ್ಲಾ ಅಳಿಸಿ ಕೊಳ್ಳಬೇಕೋ ಅನ್ನೋ ನಿರ್ಧಾರ ಮಾಡೋ ಸ್ಥಿತಿ ಅಲ್ಲಿ ಇರೋದಕ್ಕೆ ಅಳಬೇಕೊ ಒಂದು ಅರ್ಥ ಆಗಲಿಲ್ಲ ಅವಳಿಗೆ. ಕೊನೆಗೂ ಅಕಿರಾ ಮಾತಾಡ್ತಾ ನೀಲಾ ನೀನೇ ಅವನನ್ನ ಮದುವೆ ಆಗು ನಾನೆ ದೂರ ಹೋಗ್ತೀನಿ ಅಂತ ಹೇಳ್ತಾಳೆ. ನೀಲಾ ನಗ್ತಾ ಈ ಬಿಟ್ಟು ಕೊಡೊ ಆಪ್ಷನ್ ನಿನಗೆ ಇದ್ರು. ನಿಮ್ಮಲ್ಲಿ ನನಗೆ ಯಾರಾದ್ರೂ ಓಕೆ ನಾನು ಮದುವೆ ಮಾಡ್ಕೋತೀನಿ ಅನ್ನೋ ಮೈಂಡ್ ಸೆಟ್ ಮಹಿ ಗೆ ಇಲ್ಲಾ, ಅ ರೀತಿ ಏನಾದ್ರು ಇದ್ದಿದ್ರೆ. ನಮ್ಮಿಬ್ಬರಲ್ಲೇ ಒಬ್ಬರನ್ನ ಅವನೇ ಸೆಲೆಕ್ಟ್ ಮಾಡಿ ಮದುವೆ ಮಾಡ್ಕೋತೀನಿ ಅಂತ ಇದ್ದಾ. ನಾನು ಅವನಿಗೆ ನನ್ನ ಪ್ರೀತಿ ನ ಹೇಳಿದಾಗ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಫುಟ್ಬಾತ್ ಕ್ಯಾಂಡಿಡೇಟ್ ನಿಮ್ ಮನೇಲಿ ನನಗಿಂತ ಒಳ್ಳೆ ಹುಡುಗನನ್ನ ನೋಡಿ ಮದುವೆ ಮಾಡ್ತಾರೆ ಹ್ಯಾಪಿ ಆಗಿ ಇರು ಅಂತ ಹೇಳಿದ ಆದ್ರು ನಾನು ಪರ್ವಾಗಿಲ್ಲ ನೀನೇ ಬೇಕು ಅಂತ ಹೇಳ್ದೆ. ಅವಾಗ ಹೇಳ್ದ ಅವನು ಅವನ ಪ್ರೀತಿ ಬಗ್ಗೆ. ಅವಳಿಗೋಸ್ಕರ ಅವಳ ಹಿಂದೆ ಅಲೆದಾಡಿದ್ದು. ಅವಳು ಕೆಲಸ ಮಾಡ್ತಾ ಇರೋ ಕಂಪನಿ ಗೆ ಸೇರಿಕೊಂಡಿದ್ದು ಕೊನೆಗೆ ಅ ಹುಡುಗಿಗೆ ಆಲ್ರೆಡಿ ಒಬ್ಬ ಲವರ್ ಇದ್ದಾನೆ ಅಂತ ಗೊತ್ತಾಗಿ ಅವನ ಪ್ರೀತಿ ನ ಅವನಲ್ಲೇ ಇಟ್ಟುಕೊಂಡಿದ್ದು. ಅ ಹುಡುಗಿ ಹೆಲ್ಪ್ ಕೇಳಿದ್ಲು ಅಂತ ಮನೇಲಿ ಹೋಗಿ ಮಾತಾಡಿದ್ದು. ಇಲ್ಲಿಗೆ ಬರೋಕೆ ಮೊದಲೇ ಅವಳಿಗೆ ಹುಷಾರಾಗಿ ಇರು ಅಂತ ಹೇಳಿ ಬಂದಿದ್ದು ಪ್ರತಿಯೊಂದು ವಿಷಯ ನ ಹೇಳಿದ. ಬಿ ಹೊನೆಸ್ಟ್ ಅಕ್ಕ ಅ ಕ್ಷಣ ನೇ ಗಟ್ಟಿಯಾಗಿ ನಿರ್ಧಾರ ಮಾಡಿದೆ ಇವನೇ ನನ್ನ ಗಂಡ ಅಂತ. ತುಂಬಾ ಕಷ್ಟ ಅಕ್ಕ ಅಂತ ಹುಡುಗ ಸಿಗೋದು. ಶಿಲ್ಪಾ ಅವನನ್ನ ಇಲ್ಲಿಗೆ ಕರ್ಕೊಂಡು ಬಂದಾಗ ಈ ಫ್ಯಾಕ್ಟರಿ ಕೆಲಸ ಅಂದ್ರೆ ಏನು ಅಂತ ಗೊತ್ತೆ ಇರಲಿಲ್ಲ ಅವನಿಗೆ. ಹಗಲು ರಾತ್ರಿ ಕಷ್ಟ ಪಟ್ಟು ಕೆಲಸ ಕಲಿತ. ಮುಚ್ಚೋಗಿರೋ ಫ್ಯಾಕ್ಟರಿ ನ ಓಪನ್ ಮಾಡಿದ. ಇವತ್ತು ಶಬರಿ ಬ್ರಾಂಡ್ ನ ಒಂದು ಲೆವೆಲ್ ಗೆ ತಂದು ಇಟ್ಟಿದ್ದಾನೆ. ತಾತ ಜಾತಕ ದ ವಿಷಯ ಹೇಳಿದಾಗ ಅವನಿಗೆ ಅರ್ಥ ಆಯ್ತು ನನಗೆ ಕೂರಿಸಿಕೊಂಡು ಮಗುಗೆ ಹೇಳಿದ ಹಾಗೇ ಹೇಳಿದ. ಅವನು ಹೇಳ್ತಾ ಇದ್ರೆ ನನಗೆ ಕಣ್ಣಲ್ಲಿ ನೀರು ಬಂತು ಅ ಕ್ಷಣಕ್ಕೆ ನನಗೆ ಕೇವಲ ನನ್ನ ಪ್ರೀತಿ ಮಾತ್ರ ಕಾಣಿಸ್ತು. ಅದ್ರೆ ಅವನಿಗೆ ತಾತ ಅವನ ಮೇಲೆ ಇಟ್ಟಿರೋ ನಂಬಿಕೆ. ನನ್ನ ಮೇಲೆ ಇರೋ ಪ್ರೀತಿ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಅಜ್ಜಿ ಹೆಸರಿನ ಫ್ಯಾಕ್ಟರಿ. ಈ ಸ್ಟೇಜ್ ಅಲ್ಲಿ ನಾನು ಹೆಜ್ಜೆ ಹಿಂದೆ ಇಟ್ರೆ ಇಷ್ಟು ದಿನ ಕಷ್ಟ ಪಟ್ಟಿದ್ದೆಲ್ಲಾ ನೀರಲ್ಲಿ ಹೋಮ ಮಾಡಿದ ಹಾಗೇ ಇರುತ್ತೆ ಅಂತ. ನನಗೆ ಸಮಾಧಾನ ಮಾಡಿದ. ಅದ್ರೆ ಅವನಿಗೆ ಸಮಾಧಾನ ಮಾಡೋಕೆ ಯಾರು ಇರಲಿಲ್ಲ. ಮೊದಲು ಪ್ರೀತಿ ಮಾಡಿದ ಹುಡುಗಿ ದೂರ ಆದ್ಲು. ಈಗ ನಾನು ಕೂಡ ದೂರ ಅದೇ. ಅವನ ಮನಸ್ಸು ಹೇಗೆ ತಡ್ಕೊಂಡು ಇತ್ತೋ ಅ ದೇವರಿಗೆ ಗೊತ್ತು.
ಇವತ್ತು ನಿನ್ನ ಬಗ್ಗೆ ಕಾಲ್ ಮಾಡಿ ಹೇಳಿದಾಗ ಶಿಲ್ಪಾ ಹೇಳಿದ್ಲು ಅಕ್ಕ ಅವನು ನಿನಗೋಸ್ಕರ ಎಷ್ಟು ಅವಮಾನ ಪಟ್ಟ ಅಂತ. ಮತ್ತೆ ಇವತ್ತು ಆಫೀಸ್ ಅಲ್ಲಿ ಅದ ಗಲಾಟೆ ಪ್ರತಿಯೊಂದು ವಿಷಯ ನ. ಕಾರ್ ಅಲ್ಲಿ ನೀನು ಮಹಿ ಬಗ್ಗೆ ತಿಳ್ಕೊಂಡಿದ್ದು ಅವನಿಗೆ ನಿನ್ನ ಮೇಲೆ ಇದ್ದಾ ಪ್ರೀತಿ ಅರ್ಥ ಆಗಿದ್ದು. ಹೇಳಿದ್ರೆ ಎಲ್ಲಿ ತಪ್ಪಾಗಿ ತಿಳ್ಕೋತಾನೆ ಅಂತ ಹೇಳ್ದೆ ನಿನ್ನಲ್ಲೇ ನೀನು ನೋವನ್ನ ಅನುಭವಿಸಿದ್ದು ಎಲ್ಲಾ ವಿಷಯ ಕೂಡ ಹೇಳಿದ್ಲು ಶಿಲ್ಪಾ. ನೋಡಕ್ಕ ನಾನು ನಿನಗಿಂತ ಚಿಕ್ಕವಳೇ ಇರಬಹುದು ಆದ್ರು ಒಂದು ಮಾತು ಹೇಳ್ತಿನಿ ಇದು ಸರಿನೋ ತಪ್ಪೋ ನನಗೆ ಗೊತ್ತಿಲ್ಲ. ನಾವು ಮಹಿ ನ ಬೇಡ ಅಂತ ಅಂದ್ರೆ ನಮಗೆ ಬೇರೆ ಯಾರನ್ನೋ ತಂದು ಮದುವೆ ಮಾಡ್ತಾರೆ. ಅವನು ಹೇಗೋ ಏನೋ ಯಾರಿಗೆ ಗೊತ್ತು. ಯಾವನೋ ಗೊತ್ತು ಗುರಿ ಇಲ್ಲದೆ ಇರೋವನ ಜೊತೆಗೆ ಜೀವನ ಪೂರ್ತಿ ಸಾಯೋದಕ್ಕಿಂತ. ಮಹಿ ನ ಮದುವೆ ಅದ್ರೆ ನಾವಿಬ್ರು ಚೆನ್ನಾಗಿ ಇರ್ತೀವಿ. ಹಾಗಂತ ನೀನು ನನ್ನ ಮಾತನ್ನ ಒಪ್ಕೋ ಅಂತ ನಾನು ನಿನಗೆ ಹೇಳ್ತಾ ಇಲ್ಲಾ ನನಗಿಂತ ದೊಡ್ಡವಳು ನೀನು. ಮಹಿ ಲೈಫ್ ಅಲ್ಲಿ ಮೊದಲು ಬಂದವಳು. ನಿನ್ ಯೋಚ್ನೆ ಮಾಡಿ ಏನ್ ನಿರ್ಧಾರ ಹೇಳ್ತಿಯೋ ಅದು ನಿನ್ ಇಷ್ಟ. ಇಬ್ಬರು ಒಬ್ಬನನ್ನೇ ಮದುವೆ ಆಗೋದು ಇಷ್ಟ ಇಲ್ಲಾ ಅಂದ್ರೆ ಬೇಡ. ನಿಮ್ ಅಪ್ಪ ಅಮ್ಮ ಬೇರೆ ಹುಡುಗನನ್ನ ನೋಡಿ ಮದುವೆ ಮಾಡ್ತಾರೆ ಮಾಡ್ಕೋ. ಬಟ್ ನಾನ್ ಮಾತ್ರ ಮೆಂಟಲಿ ಫಿಕ್ಸ್ ಆಗೋಗಿದ್ದೀನಿ. ಇದ್ರೆ ಹೆಂಡತಿ ಆಗಿ ಮಹಿ ಜೊತೆ. ಇಲ್ಲಾ ಗರ್ಲ್ಫ್ರೆಂಡ್ ಆಗಿ ಲೈಫ್ ಲಾಂಗ್ ನನ್ನ ಬಾಸ್ ಜೊತೆ ಇದ್ದು ಬಿಡ್ತೀನಿ. ವೀಕ್ ಮೊಮೆಂಟ್ ನೋಡಿ ಬಾಸ್ ಜೊತೆ ಒಂದು ಮಗುವಿಗೆ ತಾಯಿ ಆಗ್ತೀನಿ , ಮದುವೆ ಆಗಿದ್ರೆ ನನ್ನ ಐಡಿಯಾ 2 ಮಕ್ಕಳು ಇದ್ವು. ಬಟ್ ಇದು ಮದುವೆ ಆಗದೆ ಅಲ್ವಾ ಅದಕ್ಕೆ ಒಂದೇ ಸಾಕು. ಬಾಸ್ ಅಂದ್ರೆ ಬೇರೆ ಯಾರೋ ಅಂತ ಅನ್ಕೋಬೇಡ. ಮಹಿ ನೇ. ಹೊರಗಡೆ ಹೋಗೋ ಬಾರೋ ಅನ್ನೋ ಫ್ರೀಡಂ ಇದ್ರು ಆಫೀಸ್ ಫ್ಯಾಕ್ಟರಿ ಅಲ್ಲಿ ಅವನು ನನಗೆ ಬಾಸ್. ಸೋ ಇದು ನನ್ನ ನಿರ್ಧಾರ. ನಿನ್ ಏನ್ ಯೋಚ್ನೆ ಮಾಡಿದೆ ಹೇಳು.
ಅಕಿರಾ, ಲೇ ನಿನಗೆ ಏನಾದ್ರು ಮೆಂಟಲ್ ಅ, ಅವನು ದಾರಿಲಿ ಬರೋವಾಗ ಒಂದು ಕಥೆ ಹೇಳಿದ ಮನೆಗೆ ಬಂದಮೇಲೆ ತಾತ ಒಂದು ಕಥೆ. ಮತ್ತೆ ಈ ವಿಷಯ. ಒಂದೇ ಸರಿ ಇಷ್ಟು ವಿಷಯ ಹೇಳಿದ್ರೆ ಹೇಗೆ ಹೇಳು. ನಡಿ ಮೊದಲು ಮಹಿ ಹತ್ತಿರ ಮಾತಾಡಿ ಆಮೇಲೆ ತಾತನ ಹತ್ತಿರ ಮಾತಾಡೋಣ ಅಂತ ಹೇಳಿದ್ಲು. ನೀಲಾ ಏನು ಮಹಿ ಹತ್ತಿರನ, ಅವನು ಹೋಗಿ ತುಂಬಾ ಹೊತ್ತಾಯಿತು. ಎಲ್ಲಿ ಹೋದ ಅಂತ ಯಾರಿಗೂ ಗೊತ್ತಿಲ್ಲ. ಕಾಲ್ ಮಾಡಿ ಕೇಳಿದ್ರು ಹೇಳಲ್ಲ. ಮೊದಲು ಅದ್ರೆ ಆಫೀಸ್ ಮನೆ ಫ್ರೆಂಡ್ಸ್ ಅಂತ ಇರೋವ್ನು. ಇವಾಗ ಮನೆ ಬಿಟ್ಟು ಬೇರೆ ಎಲ್ಲಾ ಕಡೆ ಇರ್ತಾನೆ. ನೋಡು ಅವನ ಹತ್ತಿರ ಮಾತಾಡಬೇಕು ಅಂದ್ರೆ ಮೊದಲು ನಾವು ಒಂದು ನಿರ್ಧಾರ ತಗೋಬೇಕು. ನಿನಗೆ ಮಹಿ ಬೇಕೋ ಬೇಡ್ವೊ ಅಂತ ಕೇಳಿದ್ಲು. ಅಕಿರಾ ಲೇ ಏನೇ ಹೀಗೆ ಹೇಳ್ತಾ ಇದ್ದಿಯಾ ಇವತ್ತೇ ಅವನಿಗೆ ಪ್ರೊಪೋಸ್ ಮಾಡಿದ್ದು ಬೆಳಿಗ್ಗೆ ಯಿಂದ ಶಾಕ್ ಮೇಲೆ ಶಾಕ್ ಕೊಡ್ತಾ ಇದ್ದಾನೆ , ಮೊದಲು ಆಫೀಸ್ ಆಮೇಲೆ, ಕಂಪನಿ ಬಾಸ್ ಗೆ, ಆಮೇಲೆ ಮನೆಗೆ ಕರ್ಕೊಂಡು ಹೋಗಿ ಶಾಕ್ ಕೊಟ್ಟ. ಬರ್ತಾ ದಾರಿಲಿ ಒಂದು ಶಾಕ್. ಇಲ್ಲಿಗೆ ಬಂದಮೇಲೆ ಎರಡು ಶಾಕ್. ಇಷ್ಟೆಲ್ಲಾ ಆದ್ರು ಇವಾಗ ಇದೊಂದು. ಅಕ್ಕ ಶಾಕ್ ಬಗ್ಗೆ ಬಿಡು ಮಹಿ ಬಗ್ಗೆ ಹೇಳು ಅಂತ ಕೇಳಿದ್ಲು ನೀಲಾ. ಅಕಿರಾ ನೀಲಾ ಮುಖ ನೋಡ್ತಾ ನನಗೆ ಮಹಿ ಬೇಕು ಅಂತ ಹೇಳ್ತಾಳೆ. ನೀಲಾ ಅಕಿರಾ ನ ತಬ್ಬಿಕೊಂಡು. ಕೆನ್ನೆಗೆ ಮುತ್ತಿಟ್ಟು ಥ್ಯಾಂಕ್ಸ್ ಅಕ್ಕ. ಬಾ ಹೋಗಿ ನಮ್ ನಿರ್ಧಾರ ಹೇಳೋಣ. ಅಂತ ಎದ್ದು ರೂಮಿಂದ ಹೊರಗೆ ಬರ್ತಾರೆ.
****************************************
P. S