mahi in Kannada Love Stories by S Pr books and stories PDF | ಮಹಿ - 33

The Author
Featured Books
Categories
Share

ಮಹಿ - 33

      ಅಕಿರಾ ಗೆ ಮನೇಲಿ ಮಹಿ ಅಪ್ಪ ಅಮ್ಮ ಅಕ್ಕ ಮಾತಾಡಿದ ಪ್ರತಿಯೊಂದು ವಿಷಯ ಹಾಗೇ ತಲೇಲಿ ಕೊರಿಯಿಕೆ ಶುರುವಾಯ್ತು. 7 ತಿಂಗಳ ಹಿಂದೆ ಜಸ್ಟ್ ಒಬ್ಬ ಲೊ ಲೆವೆಲ್ ಎಂಪ್ಲೋಯ್ ಆಗಿ ನನ್ನ ಟೀಂ ಅಲ್ಲಿ ವರ್ಕ್ ಮಾಡ್ತಾ ಇದ್ದವನು. ವಿನೋದ್ ಹತ್ತಿರ ಭಿಕಾರಿ ಅಂತ ಬೈಸ್ಕೊಂಡವನು ಇವತ್ತು ಅವನದೇ ಅದ ಒಂದು ಐಡೆಂಟಿಟಿ ಪಡ್ಕೊಂಡು ಇದ್ದಾನೆ. ಒಂದು ಕಂಪನಿ ಗೆ ಡೈರೆಕ್ಟರ್ ಆಗಿ ಇದ್ದಾನೆ ಅದು ಸಾಮಾನ್ಯ ಕಂಪನಿ ಅಲ್ಲ ಈಗ ಇಂಡಿಯದಲ್ಲಿ ಒನ್ ಆಫ್ ದಿ ಟಾಪ್ ಟೆಕ್ಸ್ಟ್ ಟೈಲ್ ಬ್ರಾಂಡ್ ಕಂಪನಿ ಓನರ್. ಶ್ರೀಮಂತನ ಮಗ ಆದ್ರು ಬಡವ ಅಂತ ಹೇಳ್ಕೊಂಡು ಹಾಗೇ ಇದ್ದಾ. ಇವತ್ತು ಒಂದು ಕಂಪನಿ ನ ಮುಚ್ಚೋ ಲೆವೆಲ್ ಗೆ ಮಾತಾಡಿದ. ಕಂಪನಿ ಓನರ್ ಮಗಳೇ ಬಂದು ಸಾರೀ ಕೇಳೋ ಹಾಗೇ ಮಾಡಿದ. ಕೇಳಿದ್ರೆ ಏನೋ ಕಥೆ ಹೇಳಿದ. ಇಷ್ಟೊಂದು ವಿಷಯ ಮುಚ್ಚಿ ಇಡೋ ಅವಶ್ಯಕತೆ ಏನಿದೆ.  ನನಗಂತೂ ಒಂದು ಅರ್ಥ ಆಗ್ತಾನೆ ಇಲ್ಲಾ. ಹೀಗೆ ತಲೆಗೆ ಬರ್ತಾ ಇದ್ದಾ ನೂರಾರು ಪ್ರಶ್ನೆ ಗಳನ್ನ ಯೋಚ್ನೆ ಮಾಡ್ತಾ ಕೂತಿದ್ದಳು.

    ಅಕಿರಾ ಹಾಗೇ ಯೋಚ್ನೆ ಮಾಡ್ತಾ ಏನು ಮಾತಾಡದೆ ಕೂತಿರೋದನ್ನ ನೋಡಿ. ಅಕಿರಾ ಏನಾಯ್ತು ಸೈಲೆಂಟಾಗಿ ಇದ್ದಿಯಾ ಅಂತ ಕೇಳ್ದೆ. ಅಕಿರಾ ನನ್ನ ಕಡೆಗೆ ನೋಡ್ತಾ ನಿನಗೆ ನಾನು ಸೈಲೆಂಟಾಗಿ ಇರೋ ತರ ಕಾಣ್ತಾ ಇದೆಯಾ ಲೋ ನೀನು ಕೊಟ್ಟಿರೋ ಶಾಕ್ ಗೆ ತಲೇಲಿ ಹುಳ ಬಿಟ್ಟ ಹಾಗೇ ಇದೆ. ಕಂಪನಿ ಓನರ್ ಮಗಳೇ ಬಂದು ಸಾರೀ ಕೇಳೋ ಹಾಗೇ ಮಾಡಿದೆ. ಶ್ವೇತಾ ಗೆ ನಿಜವಾದ ತಮ್ಮ ಅಂತ ಪರಿಚಯ ಮಾಡಿದೆ. ಒಂದು ಕಂಪನಿ ಗೆ ಡೈರೆಕ್ಟರ್ ಅಂತ ಗೊತ್ತಾಯ್ತು. ಪ್ಲೀಸ್ ನಿಜ ಹೇಳೋ ಇನ್ನು ಏನೇನ್ ಮುಚ್ಚಿಟ್ಟಿದೀಯ ನನ್ನಿಂದ. ಪ್ಲೀಸ್ ಹೇಳೋ  ಅಂತ ಹೇಳಿದ್ಲು. ಅಕಿರಾ ನಾನು ಏನು ಯಾರು ಏನ್ ಮಾಡ್ತೀನಿ ಅನ್ನೋದಕ್ಕಿಂತ ಮೊದಲು ನಾನ್ ಕೆಲವೊಂದು ಪ್ರಶ್ನೆ ನ ನಿನ್ನ ಕೇಳ್ತೀನಿ ಅದಕ್ಕೆ ಉತ್ತರ ಕೊಡು ಅಂತ ಹೇಳ್ದೆ. ಅಕಿರಾ ನನ್ನ ಮಾತಿಗೆ ಕನ್ಫ್ಯೂಸ್ ಆದ್ರು ಸರಿ ಕೇಳು ನನಗೆ ಗೊತ್ತಿರೋದನ್ನ ಹೇಳ್ತೀನಿ ಅಂತ ಹೇಳಿದ್ಲು.  ಅಕಿರಾ ನಿಮ್ ಫ್ಯಾಮಿಲಿ ಬಗ್ಗೆ ಅಂದ್ರೆ ನಿಮ್ ತಂದೆ ಅವರ ಫ್ಯಾಮಿಲಿ ಬಗ್ಗೆ ನಿಮ್ ತಾಯಿ ಅವರ ಫ್ಯಾಮಿಲಿ ಬಗ್ಗೆ ನಿನಗೆ ಏನ್ ಗೊತ್ತು ಅಂತ ಕೇಳ್ದೆ.  ಅಪ್ಪ ನ ಫ್ಯಾಮಿಲಿ ಬಗ್ಗೆ ತುಂಬಾ ಚೆನ್ನಾಗಿ ಗೊತ್ತು ತಾತ ಸ್ವಲ್ಪ ಕೋಪಿಷ್ಟಿ ಆದ್ರು ತುಂಬಾ ಒಳ್ಳೆ ಮನಸ್ಸು ಇರೋ ವ್ಯಕ್ತಿ ಅಪ್ಪನ ಫ್ಯಾಮಿಲಿ ತುಂಬಾ ಒಳ್ಳೆಯವರು ಅಪ್ಪ ಕೂಡ ಅಷ್ಟೇ. ಅದ್ರೆ ಅಮ್ಮನ ಫ್ಯಾಮಿಲಿ ಬಗ್ಗೆ ನನಗೆ ಒಂದು ಚೂರು ಗೊತ್ತಿಲ್ಲ. ಅಮ್ಮನ ಕೇಳಿದ್ರೆ ನಾನು ಅನಾಥೆ ನನಗೆ ಬಂದು ಬಳಗ ಯಾರು ಇಲ್ಲಾ ಬೆಳದಿದ್ದಲ್ಲೇ ಅನಾಥಶ್ರಮ ದಲ್ಲಿ ಅಂತ ಹೇಳಿದ್ರು ಅಷ್ಟೇ ಗೊತ್ತಿರೋದು ನನಗೆ ಅಂತ ಹೇಳಿದ್ಲು.  ಅಕಿರಾ ನಿನಗೆ ಒಂದು ಸತ್ಯ ಗೊತ್ತಾಗಬೇಕು. ನೀನು ಹೇಳೋ ಹಾಗೇ ನಿಮ್ ತಾಯಿ ಅನಾಥೆ ಅಲ್ಲ ಅವರಿಗೆ ಅಪ್ಪ ಇದ್ದಾರೆ ಅಣ್ಣ ತಮ್ಮಂದ್ರು ಇದ್ದಾರೆ ಒಂದು ಕುಟುಂಬ ಕೂಡ ಇದೆ. ಅಕಿರಾ ನನ್ನ ಮಾತಿಗೆ ಶಾಕ್ ಹಾಗಿ ಮಹಿ ಏನ್ ಹೇಳ್ತಾ ಇದ್ದಿಯಾ ನಮ್ಮನಿಗೆ ಕುಟುಂಬ ಇದೆಯಾ ಅಂತ ಕೇಳಿದ್ಲು. 

    ಹೌದು ಮಹಿ ನಿಮ್ಮ ತಾಯಿ ಅವರು ತಂದೆ ಬೇರೆ ಯಾರು ಅಲ್ಲ ಶಿಲ್ಪಾ ಅವರ ತಾತ. ಅವರಿಗೆ ಇಬ್ಬರು ಹೆಂಡತಿರು. ನಿಮ್ಮಮ್ಮ ಎರಡನೇ ಹೆಂಡತಿ ಮಗಳು.  ನಿಮ್ ತಾತ ಮಾಡಿದ ಒಂದು ತಪ್ಪಿನಿಂದ ಇವತ್ತು ನಿಮ್ಮಮ್ಮ ಇವತ್ತು ಯಾರು ಇಲ್ಲದ ಅನಾಥೆ ಅಂತ ಹೇಳ್ಕೋತ ಇದ್ದಾರೆ. ನಿಮ್ ತಾತನಿಗೆ ಇಬ್ಬರು ಹೆಂಡತಿ ರು ಇದ್ದರು ಯಾರಿಗೂ ಏನು ಕೊರತೆ ಬಾರದ ಹಾಗೇ ನೋಡಿಕೊಂಡರು ಅದ್ರೆ ಅವರಿಗೆ ಆಗದ ಕೆಲವು ವ್ಯಕ್ತಿ ಗಳು ಅವರ ಸಂಸಾರದಲ್ಲಿ ಹುಳಿ ಹಿಂಡೋಕೆ ಶುರು ಮಾಡಿದ್ರು. ಒಂದಾಗಿದ್ದ ಸಂಸಾರ ಎರಡಾಯಿತು. ಮೊದಲ ಹೆಂಡತಿ ಮಕ್ಕಳನ್ನ ಒಂದು ಮನೇಲಿ ಎರಡನೇ ಹೆಂಡತಿ ಮಕ್ಕಳನ್ನ ಬೇರೆ ಮನೇಲಿ ಇಟ್ಟು ಚೆನ್ನಾಗಿ ನೋಡಿಕೊಳ್ತಾ ಇದ್ರು. ನಿಮ್ ತಾಯಿ ಜೊತೆಗೆ ರಕ್ತ ಹಂಚಿಕೊಂಡು ಹುಟ್ಟಿದ ತಮ್ಮ ಅಂದ್ರೆ ನಿಮ್ ಅಮ್ಮಗೆ ತುಂಬಾ ಪ್ರೀತಿ ಒಬ್ಬನೇ ತಮ್ಮ ಅಂತ ತುಂಬಾ ಚೆನ್ನಾಗಿ ನೋಡಿಕೊಳ್ತಾ ಇದ್ರು. ದೂರ ಮಾಡಿದ್ರು ಇವರು ಇಷ್ಟು ಚೆನ್ನಾಗಿ ಇದ್ದಾರೆ ಅಲ್ವಾ ಅಂತ ಮತ್ತೆ ಅವರ ಮಧ್ಯ ಹುಳಿ ಹಿಂಡೋಕೆ ಮಧ್ಯ ವರ್ಥಿಗಳು ಬಂದರು. ಈಗ ಅವರು ಉಪಯೋಗಿಸಿದ ದಾರಿ ಅಸ್ತಿ ವಿಷಯ ದಲ್ಲಿ.  ನಿಮ್ ತಾತನ ಮೊದಲನೇ ಹೆಂಡತಿ ಗೆ 4 ಜನ ಮಕ್ಕಳು. ಅದನ್ನೇ ಅವಕಾಶ ವಾಗಿ ತಗೊಂಡು ಮೊದಲನೇ ಹೆಂಡತಿಗೆ ಜಾಸ್ತಿ ಅಸ್ತಿ ಕೊಡಬೇಕು ಅಂತ ವಿಷದ ಬಿಜ ಬಿತ್ತಿದರು. ಅದ್ರೆ ನಿಮ್ ತಾತ ಮಕ್ಕಳು ಎಷ್ಟಾದ್ರೂ ಇರಲಿ ಇಬ್ಬರಿಗೂ ಸಮಾನವಾಗಿ ಅಸ್ತಿ ನ ಕೊಡ್ತೀನಿ ಅಂತ ಕಡ್ಡಿ ಮುರಿದ ಹಾಗೇ ಹೇಳಿದ್ರು. ಜಗಳ ಆದವು ಗಲಾಟೆ ಆದವು ಆದ್ರು ನಿಮ್ ತಾತ ನಿರ್ಧಾರ ಬದಲಾಯಿಸಿಲ್ಲ. ಒಂದುಕಡೆ ಇಷ್ಟೆಲ್ಲ ಗಲಾಟೆ ಆಗ್ತಾ ಇದ್ರೆ ಇನ್ನೊಂದು ಕಡೆ ಸ್ನೇಹ ಅನ್ನೋ ಬಂದ ಹುಟ್ಟಿಕೊಂಡಿತ್ತು  ನಿಮ್ ಅಮ್ಮ ನ ತಮ್ಮನಲ್ಲಿ ಮತ್ತೆ ಮೊದಲನೇ ಹೆಂಡತಿಯ ಕೊನೆ ಮಗನಲ್ಲಿ.  ಯಾರೋ ಏನೋ ಜಗಳ ಆಡಿದ್ರೆ ನಮಗೇನು ಅಂತ ಅವರು ಅವರ ಸ್ನೇಹ ನ ಮುಂದುವರೆಸಿದ್ರು.  ಅದ್ರೆ ಅವರ ಸ್ನೇಹ ನ ಉಪಯೋಗ ಮಾಡಿಕೊಂಡು ಕಾಡಗಿಚ್ಚು ಹಚ್ಚಿದ್ರು. ಬಾವಿ ಅಲ್ಲಿ ಈಜಡೋಕೆ ಹೋದಾಗ ನಿಮ್ ತಾತನ ಕಂಡರೆ ಆಗದವರು ಅವರ ಮೊದಲ ಹೆಂಡತಿ ಯ ಕೊನೆ ಮಗನನ್ನ ನೀರಲ್ಲಿ ಮುಳಗಿಸಿ ಕೊಂದು ಬಿಟ್ಟರು ಅದನ್ನ ನಿಮ್ ತಾಯಿಯ ತಮ್ಮ ನ ಮೇಲೆ ಹೊರೆಸಿದ್ರು. ಚಿಕ್ಕ ವಯಸ್ಸು ತುಂಬಾ ಭಯ ಬಿದ್ದು ಊರನ್ನೇ ಬಿಟ್ಟು ಓಡಿ ಹೋದ. 

    ನಿಮ್ ತಾಯಿ ತಮ್ಮ ನೇ ಅವನಿಗೆ ಹೇಳಿ ಕೊಟ್ಟಿದ್ದು ಅಂತ ಹೇಳಿ ಎಲ್ಲರನ್ನು ನಂಬಿಸಿದರು. ನಿಮ್ ತಾತ ಕೂಡ ಅದನ್ನೇ ನಿಜ ಅಂತ ನಂಬಿ ಅವರನ್ನ ಅ ಊರಿನಲ್ಲೇ ಜೀವನ ಮಾಡೋಕೆ ಬಿಡದೆ ಊರಿಂದ ಹೊರಗೆ ಹಾಕಿದ್ರು. ನಿಮ್ ಅಜ್ಜಿ ಗೆ ಒಂದು ಕಡೆ ಮಗ ಬಿಟ್ಟು ಹೋಗಿದ್ದು ಇನ್ನೊಂದು ಕಡೆ ತಾಳಿ ಕಟ್ಟಿದ ಗಂಡನೇ ಊರಿಂದ ಆಚೆ ಹಾಕಿದ್ದು ಅಷ್ಟೆಲ್ಲ ನೋವನ್ನ ಮನಸ್ಸಿಗೆ ತೆಗೆದುಕೊಂಡು ಹಾಸಿಗೆ ಇಡಿದರು. ಒಬ್ಬಂಟಿ ಅದ ನಿಮ್ ತಾಯಿಗೆ ಏನ್ ಮಾಡಬೇಕು ಅಂತ ಗೊತ್ತಾಗಲೇ ಇಲ್ಲಾ. ಹಾಸಿಗೆ ಇಡಿದ ನಿಮ್ ಅಜ್ಜಿ  ತುಂಬಾ ದಿನ ಬದುಕಲಿಲ್ಲ ನಿಮ್ ತಾಯಿ ನ ಬಿಟ್ಟು ದೇವರ ಹತ್ತಿರ ಹೊರಟು ಹೋದರು. ಅಷ್ಟೋತ್ತಿಗೆ ನಿಮ್ ತಾತನಿಗೆ ಇದಕೆಲ್ಲ ಕಾರಣ ಯಾರು ಅಂತ ಗೊತ್ತಾಗಿ ಅವರಿಗೆ ಸರಿಯಾಗಿ ಬುದ್ದಿ ಕಲಿಸಿ ನಿಮ್ ಅಜ್ಜಿ ನ ನಿಮ್ ಅಮ್ಮ ನ ಮನೆಗೆ ಕರ್ಕೊಂಡು ಬರೋಕೆ ಹೋದ್ರು ಅಷ್ಟೋತ್ತಿಗೆ ನಿಮ್ ಅಮ್ಮ ಅ ಊರನ್ನ ಬಿಟ್ಟು ಬೆಂಗಳೂರು ಬಂದು ಅನಾಥ ಆಶ್ರಮದಲ್ಲಿ ಇದ್ರು ಅದು ನಿಮ್ ತಾತನಿಗೆ ಗೊತ್ತಾಗಿ ಮಗಳನ್ನಾದ್ರೂ ಕರ್ಕೊಂಡು ಹೋಗೋಣ ಅಂತ ಬೆಂಗಳೂರು ಬಂದರು ಅದ್ರೆ ನನ್ನ ತಾಯಿ ನನ್ನ ತಮ್ಮ ನನ್ನಿಂದ ದೂರ ಆಗೋಕೆ ನೀವೇ ಕಾರಣ ನಮ್ಮಮ್ಮನ ಜೊತೆಗೆ ನನ್ನ ತಂದೆ ಕೂಡ ಸತ್ತು ಹೋದ್ರು ಅಂತ ನಿಮ್ ತಾತನ ಕಳಿಸಿ ಬಿಟ್ರು.  ಆದ್ರು ನಿಮ್ ತಾತ ಪದೇ ಪದೇ ನಿಮ್ಮಮ್ಮ ನ ನೋಡೋಕೆ ಹೋಗ್ತಾ ಇದ್ರು ಅದು ನಿಮ್ ಅಮ್ಮನಿಗೆ ಇಷ್ಟ ಆಗಲಿಲ್ಲ. ಒಂದು ದಿನ ರಾತ್ರಿ ಆಶ್ರಮ ಬಿಟ್ಟು ಎಲ್ಲಿಗೋ ಹೊರಟು ಹೋದರು. ಕೆಲವು ದಿನಗಳ ನಂತರ ನಿಮ್ಮಮ್ಮ ಇರೋ ಜಾಗ ಗೊತ್ತಾಯಿತು ಅದ್ರೆ ಹೋಗಿ ನೋಡೋ ಧೈರ್ಯ ಮಾಡಲಿಲ್ಲ.  ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ನಿಮ್ಮಮ್ಮ ಓದೋಕೆ ಶುರು ಮಾಡಿದ್ರು. ಕಾಲೇಜ್ ಅಲ್ಲಿ ನಿಮ್ ತಂದೆ ಪರಿಚಯ ಆಗಿ ಅದು ಪ್ರೀತಿ ಆಗಿ ಮದುವೆ ತನಕ ಕರೆದುಕೊಂಡು ಹೋಯ್ತು. ಈ ವಿಷಯ ನಿಮ್ ತಂದೆಗೂ ಗೊತ್ತು ಅದ್ರೆ ನಿಮ್ ತಾಯಿ ಅವರ ತಂದೆ ಶಿಲ್ಪಾ ಅವರ ತಾತ ಅಂತ ಗೊತಿಲ್ಲ. ನಾನು ಹೇಳೋದನ್ನ ಕೇಳಿ ಅಕಿರಾ ಅಳೋಕೆ ಶುರು ಮಾಡಿದ್ಲು. ಅಳ್ತಾ ನನಗೆ ನಿಜವಾಗ್ಲೂ ನನ್ನ ತಾಯಿ ಇಷ್ಟೊಂದು ನೋವನ್ನ ಅನುಭವಿಸಿದ್ದಾರೆ ಅಂತ ನನಗೆ ಗೊತ್ತಿಲ್ವೋ. ಕೇಳಿದ ನನಗೆ ಇಷ್ಟು ನೋವಾಗ್ತಾ ಇದೆ ಅಂದ್ರೆ ಅನುಭವಿಸಿದ ಅವರಿಗೆ ಇನ್ನೆಷ್ಟು ನೋವಾಗಿರುತ್ತೆ. ಪ್ಲೀಸ್ ಮಹಿ ನಾನು ಅಮ್ಮನ ನೋಡಬೇಕು ಅಂತ ಅನ್ನಿಸ್ತಾ ಇದೆ ಪ್ಲೀಸ್ ನನ್ನ ವಾಪಸ್ಸು ಮನೆಗೆ ಕರ್ಕೊಂಡು ಹೋಗೋ ಪ್ಲೀಸ್ ಅಂತ ಅಳ್ತಾ ಹೇಳಿದ್ಲು.   

   ಅಕಿರಾ ಗೆ ಸಮಾಧಾನ ಮಾಡ್ತಾ. ಅಕಿರಾ ನಿನ್ನ ನೋವು ನನಗೆ ಅರ್ಥ ಆಗುತ್ತೆ ಪ್ಲೀಸ್ ಸಮಾಧಾನ ಮಾಡ್ಕೋ. ಈಗ ನೀನು ನಿಮ್ಮಮ್ಮ ನ ನೋಡೋಕಿಂತ ದೂರ ಹಾಗಿರೋ ತಂದೆ ಮಗಳನ್ನ ಒಂದು ಮಾಡಬೇಕು. ಆಸ್ಟ್ರೇಲಿಯಾ ದಲ್ಲಿ ಇರೋ ನಿಮ್ ಅಮ್ಮನ ತಮ್ಮನನ್ನ ನಿಮ್ ತಾಯಿ ಹತ್ತಿರ ಸೇರಿಸಬೇಕು ಅಂತ ಹೇಳ್ದೆ. ಅಕಿರಾ ನನ್ನ ಕಡೆಗೆ ನೋಡ್ತಾ ಏನ್ ಹೇಳ್ತಾ ಇದ್ದಿಯಾ ಮಹಿ ನಮ್ಮನ್ನ ತಮ್ಮ ಆಸ್ಟ್ರೇಲಿಯಾ ದಲ್ಲಿ ಇದ್ದಾನ ಅಂತ ಕೇಳಿದ್ಲು. ಹೌದು ಅಕಿರಾ, ಮಗಳನ್ನ ದೂರ ಮಾಡಿಕೊಂಡ ನಿಮ್ ತಾತ ಮಗನನ್ನ ಆದ್ರು ಹುಡುಕೋಣ ಅಂತ ಹುಡುಕಿಸೋಕೆ ಶುರು ಮಾಡಿದ್ರು. ಕೊನೆಗೂ ಸಿಕ್ಕಿದ್ರು. ಇಲ್ಲೇ ಇದ್ರೆ ಇವನನ್ನ ಕೊಲೆಗಾರ ಕೊಲೆಗಾರ ಅಂತ ಹೇಳ್ತಾನೆ ಇರ್ತಾರೆ ಅಂತ ನಿಮ್ ಅಮ್ಮ ನ ತಮ್ಮನನ್ನ ವಿದೇಶಕ್ಕೆ ಕಳಿಸಿ ಓದಿಸಿದ್ರು. ಅವರು ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೆ ಸೇರಿಕೊಂಡು ಇವತ್ತು ಅವರದೇ ಅದ ಒಂದು ಕಂಪನಿ ನ ಶುರು ಮಾಡಿದ್ರು. ನಿಮ್ ತಾಯಿ ನ ನೋಡೋ ತನಕ ಮಗನನ್ನ ಕೂಡ ನೋಡಬಾರ್ದು ಅಂತ ನಿರ್ಧಾರ ಮಾಡಿ. 40 ವರ್ಷಗಳಿಂದ ಅವರಿಂದ ದೂರ ಇದ್ದಾರೆ. ಈಗ ಇವರನೆಲ್ಲ  ಒಟ್ಟಿಗೆ ಸೇರಿಸೋ ಕೆಲಸ ನ ನೀನು ಮಾತ್ರ ಮಾಡೋಕೆ ಸಾಧ್ಯ. ನಿನ್ನಿಂದ ಮಾತ್ರ ಸಾಧ್ಯ. ಅಂತ ಹೇಳ್ದೆ. ಅಕಿರಾ ಮುಖದಲ್ಲಿ ಕ್ವೆಶ್ಚನ್ ಮಾರ್ಕ್ ಇಟ್ಟುಕೊಂಡು ನನ್ನ ಕಡೆಗೆ ನೋಡಿದಳು. ನಾನು ಅಕಿರಾ ಕಡೆಗೆ ನೋಡದೆ ರೋಡ್ ನೋಡ್ತಾ. ಅಕಿರಾ ನಿಮ್ ತಾತ ಮಾಡಿದ್ದು ತಪ್ಪೇ ಅದ್ರೆ  ಅವರ ತಪ್ಪಿಗೆ ಇನ್ನು ನೋವನ್ನ ಅನುಭವಿಸ್ತಾ ಇದ್ದಾರೆ. ಮಗ ಎಲ್ಲಿದ್ದಾನೆ ಅಂತ ಗೊತ್ತು ಮಗಳು ಎಲ್ಲಿದ್ದಾಳೆ ಅಂತ ಗೊತ್ತು ಅದ್ರೆ ಇಬ್ಬರನ್ನು ನೋಡೋಕೆ ಆಗ್ತಾ ಇಲ್ಲಾ ಅವರಿಂದ.  ನಾನು ಸಾಯೋ ಮೊದಲು ಒಂದು ಸರಿ ಆದ್ರು ನನ್ನ ಮಗಳು ನನ್ನ ಕ್ಷಮಿಸಿ ಅಪ್ಪ ಅಂತ ಕರಿಯೋದನ್ನ ಕೇಳಿ ಕಣ್ಣ್ ಮುಚ್ಚಬೇಕು ಅಂತ ಇದ್ದಾರೆ. ಇದಕ್ಕೆ ಇರೋದು ಒಂದೇ ದಾರಿ  ನೀನು ಆಸ್ಟ್ರೇಲಿಯಾ ದಲ್ಲಿ ಇರೋ ನಿಮ್ ಮಾವನ ಮಗನನ್ನ ಮದುವೆ ಮಾಡಿಕೊಳ್ಳೋದು ಅಂತ ಹೇಳಿ ಸೈಲೆಂಟ್ ಅದೇ.

     ಅಕಿರಾ ಗೆ ನಾನ್ ಹೀಗೆ ಹೇಳ್ತಿನಿ ಅಂತ ಕನಸಲ್ಲೂ ಕೂಡ ಯೋಚ್ನೆ ಮಾಡಿರಲಿಲ್ಲ ಅಂತ ಅನ್ನಿಸುತ್ತೆ. ಒಂದು ಕ್ಷಣ ಏನಾಯ್ತು ಅಂತ ನೇ ಅವಳಿಗೆ ಗೊತ್ತಾಗಲಿಲ್ಲ. ಹಾಗೇ ಇದ್ದು ಬಿಟ್ಟಳು. ಸ್ವಲ್ಪ ಸಮಯದ ನಂತರ ವಾಸ್ತವಕ್ಕೆ ಬಂದು ಮಹಿ ಏನ್ ಹೇಳ್ತಾ ಇದ್ದಿಯಾ ನಿನಗೆ ತಲೆ ಏನಾದ್ರು ಕೆಟ್ಟಿದೆಯಾ ಪ್ಲೀಸ್ ನನ್ನ ಇಲ್ಲೇ ಬಿಟ್ಟು ಬಿಡು ನಾನ್ ಎಲ್ಲಿಗೂ ಬರೋದಿಲ್ಲ ಯಾರನ್ನು ಮದುವೆ ಆಗೋದು ಇಲ್ಲಾ ಪ್ಲೀಸ್ ಕಾರ್ ನಿಲ್ಲಿಸು ಅಂತ ಹೇಳಿದ್ಲು. ಅಕಿರಾ ನನಗೆ ಅರ್ಥ ಆಗುತ್ತೆ ಅದ್ರೆ ಬೇರೆ ದಾರಿ ಇಲ್ಲಾ. ನಿಮ್ ತಾಯಿ ಮತ್ತೆ ಅವರ ತಂದೆ ಹತ್ತಿರ ಸೇರಬೇಕು ಅಂದ್ರೆ. ಆಸ್ಟ್ರೇಲಿಯಾ ದಲ್ಲಿ ಇರೋ ನಿಮ್ಮಮ್ಮನ ತಮ್ಮ ಮತ್ತೆ ಅವರ ಅಪ್ಪ ನ ಅವರ ಅಕ್ಕ ನ ನೋಡಬೇಕು ಅಂದ್ರೆ  ನೀನು ಇದಕ್ಕೆ ಒಪ್ಪಿಕೊಳ್ಳಳೆ ಬೇಕು. ಎಷ್ಟೋ ವರ್ಷಗಳಿಂದ ದೂರ ಇರೋ ಇವರೆಲ್ಲ ಮತ್ತೆ ಒಂದಾಗಬೇಕು ಅಂದ್ರೆ ನೀನು ನಿನ್ನ ಮಾವನ ಮಗನನ್ನ ಮದುವೆ ಆಗಬೇಕು. ಯೋಚ್ನೆ ಮಾಡು ಅಕಿರಾ ಕೆಲವು ತಿಂಗಳ ಪ್ರೀತಿ ಮುಖ್ಯ ನ ಇಲ್ಲಾ ಒಬ್ಬ ತಂದೆ ಮಕ್ಕಳ ಮೇಲೆ ಇಟ್ಟುಕೊಂಡು ಇರೋ ಪ್ರೀತಿ ಮುಖ್ಯ ನ.  ಏನಪ್ಪಾ ಇವನು ಮಾವನ ಮಗನನ್ನ ಮದುವೆ ಆಗು ಎಲ್ಲಾ ಒಂದಗ್ತಾರೆ ಅಂತ ಇದ್ದಾನೆ. ಮೂರು ಜನರನ್ನ ಕೂರಿಸಿ ನಡೆದ ವಿಷಯ ಹೇಳಿ ಒಂದು ಮಾಡಬಹುದು ಅಲ್ವಾ ಅಂತ ನಿನಗೆ ಅನ್ನಿಸಬಹುದು. ನಿಮ್ ತಾಯಿ ಹಠಕ್ಕೆ ನಿಂತ್ರೆ ಅವರದ್ದೇ ನಡೀಬೇಕು. ತಂದೆನೆ ಬೇಡ ಅಂತ ಹೇಳಿದವರು ತಂದೆ ನೆರಳಲ್ಲಿ ಬೆಳೆದ ತಮ್ಮ ನ ಹೇಗೆ ಒಪ್ಕೋತಾರೆ ಹೇಳು.  ಅಕ್ಕ ತಮ್ಮ ಒಂದಾಗಬೇಕು ಅಂದ್ರೆ ನೀನು ಮದುವೆಗೆ ಒಪ್ಪಿಕೊಳ್ಳಳೆ ಬೇಕು.  ಇಲ್ಲಾ ನೀನು ಒಪ್ಪಿಕೊಳ್ಳೋಲ್ಲ ಅಂದ್ರೆ  ನಡೆದ ಪ್ರತಿಯೊಂದು ವಿಷಯ ನ ನಿನಗೆ ಹೇಳಿದ್ದೀನಿ  ಅವರನ್ನ ಒಂದು ಮಾಡ್ತೀಯೋ ಇಲ್ಲಾ ಈಗೆ ಇರಲಿ ಬಿಡು ಅಂತ ಇರ್ತಿಯೋ ನಿನ್ ಇಷ್ಟ. ಅಂತ ಹೇಳಿ ಮತ್ತೆ ಏನು ಮಾತನಾಡದೆ ರೋಡ್ ನೋಡಿಕೊಳ್ತಾ ಡ್ರೈವ್ ಮಾಡಿದೆ. ಅಕಿರಾ ಮೌನವಾಗಿ ಕಣ್ಣೀರು ಹಾಕ್ತಾ ಸೀಟ್ ಗೆ ತಲೇನ ಹೊರಗಿಸಿ ಕೊಂಡು ಕಣ್ ಮುಚ್ಚಿದಳು. 

       ಶಿಲ್ಪಾ ಅವರ ಮನೆಗೆ ಬರೋ ಅಷ್ಟೋತ್ತಿಗೆ ರಾತ್ರಿ 9 ಗಂಟೆ ಆಗಿತ್ತು. ಅಕಿರಾ ಯೋಚ್ನೆ ಮಾಡ್ತಾ ಹಾಗೇ ಮಲಗಿ ಬಿಟ್ಟಿದ್ದಳು. ಕಾರ್ ಬಂದಿದ್ದನ್ನ ನೋಡಿ ಶಿಲ್ಪಾ ಮದನ್ ಕಾರ್ ಹತ್ತಿರ ಬಂದರು. ಶಿಲ್ಪಾ ಅಕಿರಾ ನ ನೋಡಿ ಏನ್ ಮಹಾರಾಣಿ ಅವರೇ ಅರಮನೆ ಲಿ ಮಲಗದೆ ಕಾರ್ ಅಲ್ಲಿ ಮಲಗಿದ್ದೀರಾ ಅಂತ ರೇಗಿಸೋಕೆ ಶುರು ಮಾಡಿದ್ಲು ಅಕಿರಾ ಗೆ ಎಚ್ಚರ ಆಗಿ ಕಣ್ ಬಿಟ್ಟು ನೋಡ್ತಾಳೆ. ಶಿಲ್ಪಾ  ಕಾಣಿಸ್ತಾಳೆ. ಕಾರ್ ಇಳಿದು ಅವಳನ್ನ ಗಟ್ಟಿಯಾಗಿ ಅಪ್ಪಿಕೋಳ್ತಾ ಅಳೋಕೆ ಶುರು ಮಾಡ್ತಾಳೆ. ನಿಜವಾದ ಕಾರಣ ಗೊತ್ತಿಲ್ಲದ ಶಿಲ್ಪಾ. ಲೇ ಏನೇ ಇದು ಚಿಕ್ ಮಗು ತರ 6 ತಿಂಗಳು ನನ್ನ ನೋಡದೆ ಇರೋದಕ್ಕೆ ಇಷ್ಟೊಂದು ಅಳೋದ ಅಂತ ಅವಳಿಗೆ ಸಮಾಧಾನ ಮಾಡ್ತಾಳೆ. ನಂತರ ಮನೆಯವರೆಲ್ಲ ಬರ್ತಾರೆ ಅಕಿರಾ ನ ಮಾತಾಡಿಸ್ತಾ ಇದ್ರೆ. ಶಿಲ್ಪಾ ಅಕಿರಾ ಲಗೇಜ್ ತಗೊಂಡು  ನಡೀರಿ ಹೋಗಿ ಮನೇ ಒಳಗೆ ಕೂತು ಮಾತಾಡೋಣ ಅಂತ ಎಲ್ಲರನ್ನು ಕರ್ಕೊಂಡು ಹೋಗ್ತಾಳೆ. 

      ತಾತ ನನ್ನ ನೋಡಿ ಏನಪ್ಪಾ ಮಹಿ ಕಾಣಿಸೋದೆ ಅಪರೂಪ ಆಗೋಗಿದೆ. ನಿನ್ನ ನೋಡಿ ತುಂಬಾ ಖುಷಿ ಆಗ್ತಾ ಇದೆ ಬಾ ಅಂತ ಹೇಳಿ ಭುಜದ ಮೇಲೆ ಕೈ ಹಾಕಿ ಮನೆ ಒಳಗೆ ಕರ್ಕೊಂಡು ಹೋದ್ರು.. ಶಿಲ್ಪಾ ಅಕಿರಾ ನ ಅವಳ ರೂಮ್ ಗೆ ಕರ್ಕೊಂಡು ಹೋದ್ಲು. 

 ***************************************


P. S