ಕೃತಿ ಜೊತೆಗೆ ಮಾತಾಡಿ ಅವಳನ್ನ ಕಳಿಸಿ ಕೊಟ್ಟು ಸೀದಾ ಅಕಿರಾ ಅವರ ಮನೆಗೆ ಬಂದೆ. ಅಕಿರಾ ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಅಕಿರಾ ಎದ್ದು ಓಡಿ ಬಂದು ನನ್ನ. ಮುಂದೆ ನಿಂತಳು. ನಾನು ಅವಳ ಮುಖ ನೋಡಿದೆ ಒಂದು ಕಡೆಗೆ ಸಂತೋಷ ಇನ್ನೊಂದು ಕಡೆ ಏನನ್ನೋ ಹೇಳಬೇಕು ಅನ್ನೋ ಆತುರ. ನಾನು ಅವಳನ್ನ ನೋಡಿ ಏನಾಯ್ತು ಅಂತ ಕೇಳ್ದೆ. ಅಕಿರಾ ಮಹಿ ವಿನೋದ್ ನ ಮತ್ತೆ ಅವರ ಅಪ್ಪ ನ ಪೊಲೀಸ್ ಅರೆಸ್ಟ್ ಮಾಡಿದ್ರು ಅಂತ ನ್ಯೂಸ್ ಬಂತು ಅಂತ ಹೇಳಿದ್ಲು. ಪ್ರಾಬ್ಲಮ್ ಆಗಿದ್ದು ಅವರಿಂದ ಅದನ್ನ ಕೃತಿ ಮೇಡಂ ನಂಬಿ ನಿನಗೆ ಅ ರೀತಿ ಹೇಳಿದ್ರು. ಪ್ಲೀಸ್ ನಿಮ್ ಕಂಪನಿ ಗೆ ಏನು ರಿಪೋರ್ಟ್ ಮಾಡೋಕೆ ಹೋಗಬೇಡ ಬೇಕಾದ್ರೆ ಅಶೋಕ್ ಸರ್ ಹತ್ತಿರ ನಾನ್ ಮಾತಾಡ್ತೀನಿ ಪ್ಲೀಸ್ ನೀನು ಏನಾದ್ರು ಅ ರೀತಿ ಮಾಡಿದ್ರೆ ಇಡೀ ಕಂಪನಿ ಬ್ಯಾಡ್ ಆಗುತ್ತೆ ಅಂತ ಹೇಳಿದ್ಲು. ನಾನು ಅದೇ ವಿಷಯ ವಾಗಿ ಹೋಗಿದ್ದು ಅಕಿರಾ, ಕೃತಿ ಮೇಡಂ ಬಂದು ಸಾರೀ ಕೇಳಿದ್ಲು. ಅಶೋಕ್ ಸರ್ ಹತ್ತಿರ ಮಾತಾಡಿದೆ. ನೆಕ್ಸ್ಟ್ ವೀಕ್ ಮೀಟಿಂಗ್ ಅರೇಂಜ್ ಮಾಡ್ತೀನಿ ಅವರೇ ಡೈರೆಕ್ಟ್ ಆಗಿ ಮೀಟಿಂಗ್ ಗೆ ಬರ್ತೀನಿ ಅಂತ ಹೇಳಿದ್ರು ಅಂತ ಹೇಳ್ದೆ. ಅಕಿರಾ ಗೆ ತುಂಬಾ ಖುಷಿ ಆಯ್ತು. ವಿವೇಕ್ ಸಾರೀ ಮಹಿ ಅ ವಿನೋದ್ ಹೇಳಿದ್ದನ್ನ ಕೇಳಿ ನಿಮ್ ಮೇಲೆ ಅನುಮಾನ ಪಟ್ಟೆ ಅಂತ ಹೇಳಿದ್ರು. ಪರ್ವಾಗಿಲ್ಲ ಬಿಡಿ ಸರ್ ನಿಮ್ ಪ್ಲೇಸ್ ಅಲ್ಲಿ ನಾನ್ ಇದ್ರು ನಾನು ಕೂಡ ಹಾಗೇ ಮಾಡ್ತಾ ಇದ್ದೆ ಅಂತ ಹೇಳಿ.. ಅಕಿರಾ ಲಗೇಜ್ ಪ್ಯಾಕ್ ಮಾಡ್ಕೊಂಡ ಅಂತ ಕೇಳ್ದೆ. ಅಕಿರಾ ಹ್ಮ್ ಅಂತ ಹೇಳಿದ್ಲು. ಸರಿ ಅಂತ ಹೇಳಿ ಸರ್ ನಾವು ಹೋಗಿ ಬರ್ತೀವಿ ಅಂತ ಹೇಳಿದೆ. ವಿವೇಕ್ ಹುಷಾರಾಗಿ ಹೋಗಿ ಬನ್ನಿ ಅಂತ ಹೇಳಿ ಅಕಿರಾಗೆ ಕೂಡ ಹುಷಾರು ಅಂತ ಹೇಳಿದ್ರು. ಕೋಮಲಿ ಅವರಿಗೂ ಕೂಡ ಬೈ ಹೇಳಿ. ಇಬ್ಬರು ಕಾರ್ ಅಲ್ಲಿ ಬಂದು ಕುತ್ಕೊಂಡ್ವಿ. ಅಕಿರಾ ಮಹಿ ನಿಮ್ ಮನೆಗೆ ಹೋಗೋಣ್ವಾ ಅಂತ ಕೇಳಿದ್ಲು. ಇವಾಗ ಅಲ್ಲಿಗೆ ಹೋಗ್ತಾ ಇರೋದು ಅಂತ ಹೇಳಿ ಕಾರ್ ನ ಸ್ಟಾರ್ಟ್ ಮಾಡಿದೆ. ಅಕಿರಾ ಗೆ ಒಂದು ಕಡೆ ಸಂತೋಷ ಇನ್ನೊಂದು ಕಡೆ ಮನೆಯವರು ಹೇಗೆ ರಿಸೀವ್ ಮಾಡ್ಕೋತಾರೆ ಅನ್ನೋ ಭಯ ಅವಳಿಗೆ. ಸ್ವಲ್ಪ ಟೆನ್ಶನ್ ಆಗಿ ಇದ್ದಾಳೆ. ನಾನು ಅವಳನ್ನ ನೋಡಿ ಯಾಕ್ ಟೆನ್ಶನ್ ಆಗ್ತಾ ಇದ್ದಿಯಾ ಏನಾಯ್ತು ಅಂತ ಕೇಳ್ದೆ. ಅದು ಫಸ್ಟ್ ಟೈಮ್ ನಿಮ್ ಮನೆಗೆ ಬರ್ತಾ ಇದ್ದೀನಿ ಅಲ್ವಾ ಸೋ ಅದಕ್ಕೆ ಟೆನ್ಶನ್ ಆಗ್ತಾ ಇದೆ ಅಂತ ಹೇಳಿದ್ಲು. ಆರಾಮಾಗಿ ಇರು ಅಂತ ಹೇಳಿ ಕಾರ್ ನ ಡ್ರೈವ್ ಮಾಡಿದೆ.
30 ನಿಮಿಷದಲ್ಲಿ ಮನೆ ಹತ್ತಿರ ಬಂದ್ವಿ. ಕಾರ್ ನ ನಿಲ್ಲಿಸಿ ಕಾರ್ ಇಳಿ ಅಂತ ಹೇಳ್ದೆ. ಅಕಿರಾ ಟೆನ್ಶನ್ ಅಲ್ಲೇ ಕಾರ್ ಇಳಿದ್ಲು. ಅಕಿರಾ ಮನೆ ನ ನೋಡಿ ಶಾಕ್ ಆದ್ಲು. ನಂತರ ಮಹಿ ಇದು ಶ್ವೇತಾ ಅವರ ಮನೆ ಅಲ್ವಾ ಅಂತ ಕೇಳಿದ್ಲು. ಹ್ಮ್ ಹೌದು ಅವರ ಮನೆನೇ ಬಾ ಅಂತ ಹೇಳಿ ಡೋರ್ ಮನೆ ಒಳಗೆ ಇಬ್ರು ಹೋದ್ವಿ. ಶ್ವೇತಾ ಅಮ್ಮ ಅಪ್ಪ ಹಾಲ್ ಅಲ್ಲಿ ಕೂತಿದ್ರು. ನಾನು ಅಮ್ಮ ಅಂತ ಕರೆದೆ. ಅಮ್ಮ ಲೋ ಬೆಳಿಗ್ಗೆನೇ ಅಮ್ಮ ಮಧ್ಯಾಹ್ನ ಊಟಕ್ಕೆ ಬರ್ತೀನಿ ಅಂತ ಹೇಳಿ ಹೋದವನು ಇವಾಗ ಬರ್ತಾ ಇದ್ದಿಯಾ ಹೋಗೋ ನೀನು ನನ್ನ ಜೊತೆಗೆ ಮಾತಾಡಬೇಡ ಅಂತ ಮುಖ ನೋಡದೆ ಉತ್ತರ ಕೊಟ್ಟರು. ಶ್ವೇತಾ ಕೂಡ ಮುಖ ನೋಡದೆ ಲ್ಯಾಪ್ಟಾಪ್ ಕಡೆಗೆ ನೋಡ್ತಾ, ಸಾಹೇಬ್ರು ಇವಾಗ ತುಂಬಾ ಬ್ಯುಸಿ ಆಗೋಗಿಬಿಟ್ಟಿದ್ದಾರೆ ವಸುಮತಿ ಅವರೇ. ದಿನ ಅಕ್ಕ ಅಕ್ಕ ಅಂತ ಇದ್ದವನು ಈಗ ಯಾವಾಗೋ ಮನೆಗೆ ನೆಂಟರು ಬರೋ ತರ ಬರ್ತಾನೇ ಹಾಗೇ ಹೋಗ್ತಾನೆ. ನೀನು ಇನ್ನು ಅವನನ್ನ ನಿನ್ನ ಮುದ್ದು ಮಗ ಮಹಿ ಅಂತ ಅನ್ಕೊಂಡು ಅವನಿಗೋಸ್ಕರ ಅಡುಗೆ ಮಾಡ್ಕೊಂಡು ಕಾಯ್ತಾ ಇರ್ತೀಯ. ಮೊದಲಾದ್ರೆ ಖಾಲಿ ಆಗಿ ಊರೂರು ಸುತ್ಕೊಂಡು ಊಟ ಮಾಡೋಕೆ ಮನೆಗೆ ಬರ್ತಾ ಇದ್ದಾ. ಈಗ ಕೆಲಸ ಕೆಲಸ ಅಂತ ಊರೂರು ಸುತ್ಕೊಂಡು ಮನೆಗೆ ಬರೋದನ್ನೇ ಮರೆತು ಬಿಟ್ಟಿದ್ದಾನೆ. ಈಗಲಾದ್ರೂ ಅರ್ಥ ಆಯ್ತಾ ಈ ಮನೆಗೆ ಯಾವತ್ತಿದ್ರೂ ನಾನೆ ಮಗಳು ಮಗ ಅಂತ ಹೇಳ್ತಾ ವರ್ಕ್ ಮಾಡ್ತಾ ಇದ್ಲು.
ಅಪ್ಪ ಮಾತಾಡ್ತಾ ಮೊದಲು ತಲೆ ಎತ್ತಿ ಅವನ ಕಡೆಗೆ ನೋಡ್ರಿ ಒಬ್ನೇ ಬಂದಿದ್ದಾನಾ ಇಲ್ಲಾ ಜೊತೇಲಿ ಯಾರಾದ್ರೂ ಬಂದಿದ್ದಾರಾ ಅಂತ ಹೇಳಿದ್ರು. ಅಮ್ಮ ಅಕ್ಕ ಅಪ್ಪನ ಮಾತಿಗೆ ಇಬ್ಬರು ನನ್ನ ಕಡೆಗೆ ನೋಡಿದ್ರು. ನನ್ನ ಪಕ್ಕ ಅಕಿರಾ ನಿಂತು ಇರೋದನ್ನ ನೋಡಿ ಶ್ವೇತಾ ಲ್ಯಾಪ್ಟಾಪ್ ಕ್ಲೋಸ್ ಮಾಡಿ ಅಕಿರಾ ನೀನು ಇಲ್ಲಿ ಅಂತ ಎದ್ದು ಅಕಿರಾ ಹತ್ತಿರ ಬಂದಳು. ಅಮ್ಮ ಕೂಡ ಅಕಿರಾ ಅಂತ ಹತ್ತಿರ ಬಂದರು. ಅಕಿರಾ ಇನ್ನು ಶಾಕ್ ಅಲ್ಲಿ ಇದ್ದಾಳೆ. ಶ್ವೇತಾ ಅವಳ ಪರಿಸ್ಥಿತಿ ಅರ್ಥ ಆಗಿ ಭುಜದ ಮೇಲೆ ಕೈ ಹಾಕಿ ನೀನು ಏನ್ ಯೋಚ್ನೆ ಮಾಡ್ತಾ ಇದ್ದಿಯಾ ಅಂತ ನನಗೆ ಗೊತ್ತು ಬಾ ಹೇಳ್ತಿನಿ ಅಂತ ಹೇಳಿ ಕರ್ಕೊಂಡು ಹೋಗಿ ಸೋಫಾ ಮೇಲೆ ಕೂರಿಸಿಕೊಂಡು ನನ್ನಾ ಕಡೆಗೆ ನೋಡ್ತಾ ಲೋ ಏನ್ ನೋಡ್ತಾ ಇದ್ದಿಯಾ ಗೆಸ್ಟ್ ಗೆ ಹೋಗಿ ಕಾಫಿ ಮಾಡ್ಕೋ ಬಾ ಹೋಗು ಅಂತ ಹೇಳಿದ್ಲು. ನಾನು ಸರಿ ಅಂತ ಹೇಳಿ ಅಡುಗೆ ಮನೆ ಕಡೆಗೆ ಹೋದೆ.
ಶ್ವೇತಾ ಅಕಿರಾ ಜೊತೆಗೆ ಮಾತಾಡ್ತಾ ಅವನು ನನ್ನ ತಮ್ಮ ಬಟ್ ಆಫೀಸ್ ಅಲ್ಲಿ ಯಾರಿಗೂ ಹೇಳಬೇಡ ಅಂತ ಹೇಳಿದ್ದ ಸೋ ಅದಕ್ಕೆ ಯಾರಿಗೂ ಹೇಳಿಲ್ಲ ಅಷ್ಟೇ ಅಂತ ಹೇಳಿದ್ಲು. ಅಕಿರಾ ಸಾರೀ ಶ್ವೇತಾ ಅವನು ನಿನ್ನ ತಮ್ಮ ಅಂತ ಗೊತ್ತಿಲ್ದೆ ಅಂತ ಇನ್ನು ಏನೋ ಹೇಳೋಕೆ ಬಂದ್ಲು. ಶ್ವೇತಾ ಬಿಡು ಅಕಿರಾ ಗೊತ್ತಿಲ್ದೆ ಆಗಿರೋದು ಅಲ್ವಾ ಕೂಲ್ ಅಂತ ಹೇಳಿ ಹೌದು ಏನು ಸಡನ್ ಸುರ್ಪ್ರೈಸ್ ಅಂತ ಕೇಳಿದ್ಲು. ಅಕಿರಾ,,, ಅದು ಶಿಲ್ಪಾ ನ ನೋಡೋಕೆ ಮೈಸೂರ್ ಹೋಗ್ತಾ ಇದ್ದೀನಿ ಅಂತ ಹೇಳಿದ್ಲು. ಶ್ವೇತಾ ಇಷ್ಟು ದಿನ ಆದಮೇಲೆ ಫ್ರೆಂಡ್ ನ ನೋಡೋಕೆ ಹೋಗ್ತಾ ಇದ್ದಿಯಾ ಐಮ್ ಹ್ಯಾಪಿ. ಹೌದು ಜಾಬ್ ಗೆ ರಿಸೈನ್ ಮಾಡಿದೆ ಅಂತ ಗೊತ್ತಾಯ್ತು ಏನಕ್ಕೆ ಅಂತ ಕೇಳಿದ್ಲು. ಅಕಿರಾ ವಿಷಯ ಹೇಳೋಕು ಮೊದಲೇ. ಅಡುಗೆ ಮನೆ ಯಿಂದ ಕಾಫಿ ತಗೋ ಬರ್ತಾ. ಅದ ಶಿಲ್ಪಾ ಅವರ ತಾತ ಈ ಶಬರಿ ಟೆಕ್ಸ್ಟ್ ಟೈಲ್ ಅಲ್ಲಿ ಪಾರ್ಟ್ನರ್ ಅಲ್ವಾ, ಶಿಲ್ಪಾ ಈ ಬೆಂಗಳೂರು ಬ್ರಾಂಚ್ ಗೆ ಮ್ಯಾನೇಜರ್ ಆಗಿ ಅಕಿರಾ ನ ಮಾಡೋಕೆ ಕೇಳಿದ್ಲು. ಸೋ ಅದಕ್ಕೆ ಅಕಿರಾ ರಿಸೈನ್ ಮಾಡಿದ್ಲು. ಅಂತ ಹೇಳಿ ಅಕಿರಾ ಗೆ ಕಾಫಿ ಕೊಟ್ಟು ಹೋಗಿ ಅಪ್ಪ ನ ಪಕ್ಕ ಕೂತೆ.
ಶ್ವೇತಾ ನನ್ನಾ ಕಡೆಗೆ ನೋಡ್ತಾ ನೋಡಿ ಕಲಿತ್ಕೋ ಫ್ರೆಂಡ್ಸ್ ಅಂದ್ರೆ ಹೇಗೆ ಇರಬೇಕು ಅಂತ, ನೀನು ಅದ್ಯಾವುದೋ ಜಾಬ್ ಮಾಡ್ತಾ ಇದ್ದಿಯಾ, ಯಾವ ಕಂಪನಿ ಅಂತ ಗೊತ್ತಿಲ್ಲ ಏನ್ ಕೆಲಸ ಅಂತ ಗೊತ್ತಿಲ್ಲ ಊರೂರು ಸುತ್ತಾ ಇರ್ತೀಯ. ಅಪರೂಪಕ್ಕೆ ಮನೆಗೆ ಬರ್ತೀಯ. ಮೊದಲೆಲ್ಲ ಮನೆಗೆ ಬರೋ ನೆಂಟರೆಲ್ಲ ನಿನ್ನ ತಮ್ಮ ಏನ್ ಕೆಲಸ ಮಾಡ್ತಾ ಇದ್ದಾನೆ ಅಂತ ಕೇಳ್ತಾ ಇದ್ರು ಈಗ ನಿನ್ನ ತಮ್ಮ ಎಲ್ಲಿ ಕಾಣಿಸೋದೆ ಇಲ್ಲಾ ಅಂತ ಕೇಳ್ತಾ ಇದ್ದಾರೆ. ಸ್ವಲ್ಪ ದಿನ ಮೈಸೂರ್ ಗೆ ಹೋದೆ ಆಮೇಲೆ ನನಗೆ ಇಷ್ಟ ಆಗಿಲ್ಲ ಅಂತ ಬೇರೆ ಕಡೆಗೆ ಹೋಗಿ ಬಿಟ್ಟೆ. ತಾತ ನೋಡಿದ್ರೆ ಫ್ಯಾಕ್ಟರಿ ಓಪನ್ ಅದ ದಿನ ಬಂದಿದ್ದ ಆಮೇಲೆ ಮನೆಗೆ ಬರಲಿಲ್ಲ ಕಾಣಿಸಲಿಲ್ಲ ಅಂತ ಕೇಳ್ತಾನೆ ಇದ್ದಾರೆ. ಹೋಗಿ ಫ್ಯಾಕ್ಟರಿ ನೋಡ್ಕೊಳ್ಳೋದು ಅಲ್ವೇನೋ. ಯಾವಾಗ್ಲೂ ಶಿಲ್ಪಾ ಅವರ ಫ್ಯಾಮಿಲಿ ಮೇಲೇನೆ ಡಿಪೆಂಡ್ ಆಗೋಕೆ ಆಗುತ್ತಾ ಹೇಳು. ಎಷ್ಟು ಹೊಡೆದ್ರು ಬುದ್ದಿ ಬರಲ್ಲ ಬೈದ್ರು ಬುದ್ದಿ ಬರಲ್ಲ. ಅಜ್ಜಿ ತಾತನಿಗೆ ಕೈ ಕಾಲು ಮುರಿದು ಅಲ್ಲೇ ಇಟ್ಕೊಳ್ಳಿ ಅಂತ ಹೇಳಿದ್ರೆ ಪಾಪ ಚಿಕ್ ಹುಡುಗ ಅಂತ ಹೇಳ್ತಾರೆ ಇನ್ನು ಚಿಕ್ಕಮ್ಮಂದಿರು ಅಂತು ಕೇಳ್ಳೆ ಬೇಡ. ನನ್ನ ಮಗ ನನ್ನ ಮಗ ಅಂತ ತಲೆ ಮೇಲೆ ಕೂರಿಸಿಕೊಂಡು ಮೈಸೂರ್ ರಾಮನಗರ ಎಲ್ಲಾ ಸುತ್ತಾಡಿಸ್ತಾ ಇರ್ತಾರೆ. ಸ್ವಲ್ಪ ಆದ್ರು ಜವಾಬ್ದಾರಿ ಯಿಂದ ಇರೋದನ್ನ ಕಲಿಯೋ. ಮತ್ತೆ ಏನೋ ಹೇಳೋಕೆ ಹೋದ್ಲು.
ಅಪ್ಪ ಮಧ್ಯದಲ್ಲಿ ಮಾತಾಡ್ತಾ ಶ್ವೇತಾ ನಿನಗೆ ಇನ್ನು ಸರಿಯಾಗಿ ವಿಷಯ ಗೊತ್ತಿಲ್ಲ ಅಂತ ಅನ್ನಿಸುತ್ತೆ. ನಿನ್ನ ಹತ್ತಿರ ಹೀಗೆ ಬೈಸ್ಕೊಳ್ಳೋಕೆ ಅವನು ನಿನಗೆ ಏನು ಹೇಳೋದು ಇಲ್ಲಾ. ನೀನು ಅಂದುಕೊಂಡ ಹಾಗೇ ಅವನೇನು ಬೇರೆ ಯಾವುದೊ ಕಂಪನಿ ಅಲ್ಲಿ ಯಾವುದೊ ಕೆಲಸ ಮಾಡ್ತಾ ಇಲ್ಲಾ. ನಿಮ್ ತಾತನ ಶಬರಿ ಟೆಕ್ಸ್ಟ್ ಟೈಲ್ ಕಂಪನಿಗೆ ಓನರ್ ಕಂ ಡೈರೆಕ್ಟರ್. ಮುಚ್ಚೋಗಿದ್ದ ಫ್ಯಾಕ್ಟರಿ ನ ಮತ್ತೆ ಓಪನ್ ಮಾಡಿದವನೇ ಇವನು. ಇವತ್ತು ಇಂಡಿಯಾದಲ್ಲಿ ಶಬರಿ ಬ್ರಾಂಡ್ ಗೆ ಒಂದು ಐಡೆಂಟಿಟಿ ಒಂದು ಕ್ರೇಜ್ ಒಂದು ಇಮೇಜ್ ಇದೆ ಅಂದ್ರೆ ಅದಕ್ಕೆ ಕಾರಣ ಇವನೇ. ಇವತ್ತು ನಾವೆಲ್ಲ ಏನು ಶಬರಿ ಬ್ರಾಂಡ್ ನಮ್ದು ನಮ್ದು ಅಂತ ಹೆಮ್ಮೆ ಯಿಂದ ಹೇಳ್ಕೋತಿವೋ ಅದಕ್ಕೆ ಮೂಲ ಕಾರಣ ಇವನೇ. ನಿನಗೆ ಮೊದಲೇ ಹೇಳೋಣ ಅಂತ ಇದ್ವಿ ಇವನೇ ಬೇಡ ಹೇಳಬೇಡಿ. ಅವಳ ಹತ್ತಿರ ಅವಳ ತರ್ಲೆ ತಮ್ಮನಾಗಿ ಇರೋಕೆ ನನಗೆ ಇಷ್ಟ. ಇದೆಲ್ಲಾ ಗೊತ್ತಾದ್ರೆ ಅಕ್ಕ ನನ್ನ ದೊಡ್ಡ ವ್ಯಕ್ತಿ ಹಾಗೇ ನೋಡ್ತಾಳೆ. ಅದು ನನಗೆ ಇಷ್ಟ ಇಲ್ಲಾ ಅಂತ ಹೇಳೋಕೆ ಬಿಟ್ಟಿಲ್ಲ. ಈಗ ಏನಕ್ಕೆ ಹೇಳ್ತಾ ಇದ್ದೀನಿ ಅಂದ್ರೆ ನಾಳೆ ನಾವು ಕೂಡ ಮೈಸೂರ್ ಗೆ ಹೋಗ್ತಾ ಇದ್ದೀವಿ ಇವನ್ನನ್ನ ಕಂಪನಿ ಡೈರೆಕ್ಟರ್ ಆಗಿ ಕುರಿಸ್ತಾ ಇದ್ದಾರೆ ಜೋಡೆತ್ತುಗಳು ಅಂತ ಹೇಳಿದ್ರು..
ಶ್ವೇತಾ ವಿಷಯ ಎಲ್ಲಾ ಕೇಳಿ ಎದ್ದು ನನ್ನ ಹತ್ತಿರ ಬಂದು ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ಲು. ಅಳ್ತಾ ಸಾರೀ ಕಣೋ ಗೊತ್ತಿಲ್ದೆ ಏನೇನೋ ಮಾತಾಡಿಬಿಟ್ಟೆ ಐಮ್ ರಿಯಲಿ ಸಾರೀ ಅಂತ ಹೇಳ್ತಾ ಅಳ್ತಾ ಇದ್ಲು. ಏನಾಯ್ತೋ ಗೊತ್ತಿಲ್ಲ ಸಡನ್ ಆಗಿ ಅಳೋದನ್ನ ನಿಲ್ಲಿಸಿ ಕೋಪ ಮಾಡ್ಕೊಂಡು ಹೋಗೋ ನಿನ್ನ ಜೊತೆಗೆ ನಾನ್ ಮಾತಾಡೋದಿಲ್ಲ. ಎಲ್ಲರಿಗೂ ಗೊತ್ತಿದ್ರು ನನಗೆ ಹೇಳಬೇಡ ಅಂತ ಹೇಳಿದೆ ಅಲ್ವಾ. ಇವತ್ತಿಂದ ನಿನ್ ಯಾರೋ ನಾನ್ ಯಾರೋ. ಮಾತಾಡಿಸಬೇಡ ಅಷ್ಟೇ ಅಂತ ಹೇಳಿದ್ಲು. ನಾನು ಅಮ್ಮನ ಕಡೆಗೆ ನೋಡ್ತಾ ಅಮ್ಮ ಹೋಗಿ ಪಾಯಸ ಮಾಡ್ಕೋ ಬಾ ಹೋಗಮ್ಮ ಇವತ್ತಿಂದ ಈ ರಾಕ್ಷಸಿ ಗು ನನಗು ಸಂಬಂಧ ಇಲ್ಲಾ ಅಂತೇ ನನಗಂತೂ ಎಷ್ಟು ಸಂತೋಷ ಆಗ್ತಾ ಇದೆ ಅಂದ್ರೆ ಹೇಳೋಕೆ ಆಗ್ತಾ ಇಲ್ಲಾ ಅಂತ ಹೇಳಿದ್ರೆ. ಶ್ವೇತಾ ಗೆ ಕೋಪ ಬಂದು ನನ್ನ ಹೊಡಿತಾ ಮಗನೆ ಪಾಯಸ ಅಲ್ಲ ನಿನಗೆ ಸೂರ್ಯವಂಶದ ಗಸಗಸೆ ಪಾಯಸ ಮಾಡಿ ಕುಡಿಸ ಬೇಕು ಅಂತ ಹೊಡಿತಾ ಹೋದ್ಲು.
ಏನೇ ನೀನು ಹೀಗೆ ಅಂದ್ರು ಹೊಡಿತಿಯ ಹಾಗೇ ಅಂದ್ರು ಹೊಡಿತಿಯ ಒಟ್ನಲ್ಲಿ ನನ್ನ ಹೊಡೆದು ಹೊಡೆದು ಸಾಯಿಸ್ತೀಯ ಅಷ್ಟೇ. ಶ್ವೇತಾ ಮಗನೆ ನಿನಗೆ ಬೇರೆ ಆಪ್ಷನ್ ಇಲ್ಲಾ ಈ ಜನ್ಮಕ್ಕೆ ಅಲ್ಲ ಇನ್ನು 7 ಜನ್ಮ ಕೂಡ ನಿನಗೆ ಇದೆ ರೀತಿ ಕಾಟ ಕೊಡ್ತಾ ಇರ್ತೀನಿ ಇದೆ ರೀತಿ ಹಿಂಸೆ ಕೊಡ್ತಾ ಇರ್ತೀನಿ ಅಂತ ಹೊಡಿಯೋದು ನಿಲ್ಲಿಸಿ. ನನ್ನ ಮುಖ ನೋಡ್ತಾ ಹಣೆ ಮೇಲೆ ಕಿಸ್ ಮಾಡಿ ಕೈ ಕೊಟ್ಟು ವಿಶ್ ಮಾಡ್ತಾ ಆಲ್ ದಿ ಬೆಸ್ಟ್ ನಿನ್ನ ನೋಡಿ ನನಗೆ ತುಂಬಾ ಸಂತೋಷ ಆಗ್ತಾ ಇದೆ. ಎಷ್ಟೋ ವರ್ಷಗಳಿಂದ ಮುಚ್ಚಿ ಹೋಗಿರೋ ಫ್ಯಾಕ್ಟರಿ ನ ಮತ್ತೆ ಓಪನ್ ಮಾಡಿ ಈ ಲೆವೆಲ್ ಗೆ ತಗೋ ಬರೋದು ಅಂದ್ರೆ ಸಾಮಾನ್ಯವಾದ ವಿಷಯ ಅಲ್ಲ. ನಿನ್ ನನಗೆ ತಮ್ಮ ಆಗಿರೋದಕ್ಕಿಂತ ನಾನು ನಿನಗೆ ಅಕ್ಕ ಆಗಿರೋದು ನನಗೆ ತುಂಬಾ ಹೆಮ್ಮೆ ಅಂತ ಅನ್ನಿಸ್ತಾ ಇದೆ. ಅಂತ ಹೇಳಿ ಮತ್ತೆ ಅಪ್ಪಿಕೊಂಡಳು.
ಅಕಿರಾ ಮಾತ್ರ ನಮ್ ಕಡೆಗೆ ನೋಡ್ತಾ ನೇ ಇದ್ದು ಬಿಟ್ಟಳು. ಅಮ್ಮ ಅಕಿರಾ ನ ನೋಡಿ ಮತ್ತೆ ನಮ್ ಕಡೆಗೆ ನೋಡ್ತಾ ಲೋ ಮನೆಗೆ ಕರ್ಕೊಂಡು ಬಂದ ಗೆಸ್ಟ್ ನ ಹೀಗೆ ಕೂರಿಸಿ ಬಿಟ್ಟು ಹೀಗೆ ನೀವು ಕಿತ್ತಡ್ತಾ ಇದ್ರೆ ಹೇಗೆ ಅಂತ ಬೈದ್ರೆ. ಶ್ವೇತಾ ಮಿಸಸ್ ವಸುಮತಿ ಅವರೇ ಅವರೇನು ಈ ಮನೆಗೆ ಗೆಸ್ಟ್ ಅಲ್ಲ. ಸದ್ಯದಲ್ಲೇ ಈ ಮನೆಗೆ ಸೊಸೆ ಆಗಿ ಬರೋವ್ರು ಅಂತ ಒಂದು ಬಾಂಬ್ ಹಾಕಿದ್ಲು. ಅಮ್ಮ ಈ ವಿಷಯ ಮೊದಲೇ ಹೇಳಬಾರದಿತ್ತ ಅಂತ ಹೇಳಿ ಹೋಗಿ ಅಕಿರಾ ಪಕ್ಕ ಕೂತು ಸಾರೀ ಮಗಳೇ ಜಸ್ಟ್ ಫ್ರೆಂಡ್ಸ್ ಅಲ್ವಾ ಅಂತ ಅನ್ಕೊಂಡೆ ಬಟ್ ಲವ್ ಮಾಡ್ತಾ ಇದ್ದೀರಾ ಅಂತ ಗೊತ್ತಿರಲಿಲ್ಲ ಅಂತ ಹೇಳಿದ್ರು. ಅಕಿರಾ ಮಾತ್ರ ಹೇಗೆ ಗೊತ್ತಾಯ್ತು ಅಂತ ಶ್ವೇತಾ ಕಡೆಗೆ ನೋಡಿದ್ಲು. ಶ್ವೇತಾ ನನ್ನ ಕಡೆಗೆ ತೋರಿಸಿ ಇವನೇ ಹೇಳಿದ್ದು ನನಗೆ ಅಂತ ಹೇಳಿದ್ಲು. ಸ್ವಲ್ಪ ಹೊತ್ತು ಎಲ್ಲರೂ ಕೂತು ಮಾತಾಡ್ಕೊಂಡ್ವಿ. ಆಮೇಲೆ ಅಮ್ಮ ನಾವು ಹೊರಡ್ತೀವಿ ಅಂತ ಹೇಳಿದ್ವಿ. ಅಪ್ಪ ಸರಿ ಹುಷಾರಾಗಿ ಹೋಗಿ ನಾವು ಕೂಡ ನಾಳೆ ಬರ್ತೀವಿ ಅಂತ ಹೇಳಿದ್ರು. ಮುರುಜನಕ್ಕೆ ಬೈ ಮಾಡಿ ಕಾರ್ ಸ್ಟಾರ್ಟ್ ಮಾಡಿಕೊಂಡು ಮೈಸೂರ್ ಕಡೆಗೆ ಹೊರಟ್ವಿ..
****************************************
P. S.