Mahi - 36 in Kannada Love Stories by S Pr books and stories PDF | ಮಹಿ - 36

The Author
Featured Books
  • ಅಭಿನಯನಾ - 12

         ಅಭಿ ಗೆ ನಯನಾ ನಾ ಮದುವೆ ಅದ್ರೆ ಈ ರೀತಿ ಆಗುತ್ತೆ ಅಂತ ಗೊತ್ತಿರಲಿ...

  • ಅತಿಯಾದ ಅಮೃತ

    ಮಲೆನಾಡಿನ ದಟ್ಟ ಕಾಡಿನ ಅಂಚಿನಲ್ಲಿದ್ದ ಚೈತ್ರವನ ಎಂಬ ಪುಟ್ಟ ಹಳ್ಳಿ, ತನ...

  • ಅಧ್ಯಾಯ 5: ಕೃಷ್ಣ Vs ಕಾಳಿಂಗ

    ACP ಕೃಷ್ಣನ ಕಛೇರಿ, ಸಂಜೆ 6:00 PMಕೃಷ್ಣನು ಗೊಂದಲ ಮತ್ತು ಕೋಪದಲ್ಲಿರು...

  • ಪ್ರಯೋಗ ಪಶು

    ಆರ್ಯನ್ ಬೆಂಗಳೂರಿನ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಕುಳಿತಿದ್ದಾಗ, ಅವನ...

  • ಸುಂದರ ನಾಳೆಯ ನಂಬಿಕೆ

    ಬೆಂಗಳೂರಿನ ಮೆಟ್ರೋ ನಗರದ ವೇಗದ ಬದುಕಿನಲ್ಲಿ ದಿವ್ಯಾ ಒಬ್ಬ ಉತ್ತುಂಗಕ್ಕ...

Categories
Share

ಮಹಿ - 36

   ಅಕಿರಾ ನೀಲಾ ಇಬ್ಬರು ಮಾತಾಡಿಕೊಳ್ತಾ ಶಬರಿ ಟೆಕ್ಸ್ಟ್ ಟೈಲ್ಸ್ ಫ್ಯಾಕ್ಟರಿ ಹತ್ತಿರ ಬರ್ತಾರೆ. ಗೇಟ್ ಅಲ್ಲಿ ಇದ್ದಾ ವೀರಣ್ಣ ನೀಲಾ ನ ನೋಡಿ ಗೇಟ್ ಓಪನ್ ಮಾಡೋಕೆ ಹೇಳ್ತಾನೆ. ವೀರಣ್ಣ ನೀಲಾ ನ ನೋಡಿ ಗುಡ್ ಮಾರ್ನಿಂಗ್ ಮೇಡಂ ಅಂತ ವಿಶ್ ಮಾಡ್ತಾನೆ. ನೀಲಾ ವೀರಣ್ಣ ನ ನೋಡಿ ಗುಡ್ ಮಾರ್ನಿಂಗ್ ಸರ್. ಹೇಗಿದ್ದೀರ ಸರ್ ಬಂದ್ರ ಅಂತ ಕೇಳ್ತಾರೆ. ವೀರಣ್ಣ ಸ್ಮೈಲ್ ಮಾಡ್ತಾ ನಾನ್ ಚೆನ್ನಾಗಿ ಇದ್ದೀನಿ ಮೇಡಂ ಯಜಮಾನ್ರು ಇನ್ನು ಬಂದಿಲ್ಲ ದೊಡ್ಡ ಯಜಮಾನ್ರು ಅವರ ಫ್ಯಾಮಿಲಿ. ನಿಮ್ ಫ್ಯಾಮಿಲಿ ಎಲ್ಲರೂ ಬಂದ್ರು ಅಂತ ಹೇಳ್ತಾನೆ. ನೀಲಾ ವೀರಣ್ಣ ಗೆ ಅಕಿರಾ ನ ತೋರಿಸುತ್ತ ಸರ್ ಇವರು ನಮ್ ಬೆಂಗಳೂರು ಬ್ರಾಂಚ್ ನ ಮ್ಯಾನೇಜರ್ ಅಕಿರಾ ಅಂತ ನನಗೆ ಅಕ್ಕ ನಿಮ್ ಯಜಮಾನ್ರಿಗೆ ಯಜಮಾನಿ ಆಗೋವ್ರು ಅಂತ ಹೇಳ್ತಾಳೆ. ವೀರಣ್ಣ ಅಕಿರಾ ನ ನೋಡಿ ನಮಸ್ತೆ ಮೇಡಂ ಅಂತ ಹೇಳ್ತಾನೆ. ಅಕಿರಾ ನಮಸ್ತೆ ಸರ್ ಅಂತ ಅವ್ರಿಗೆ ಹೇಳ್ತಾಳೆ. ವೀರಣ್ಣ ನಡೀರಿ ಮೇಡಂ ದೊಡ್ಡ ಯಜಮಾನ್ರು ಒಳಗೆ ಇದ್ದಾರೆ ಅಂತ ಹೇಳಿ ಕಲಿಸ್ತಾನೆ. ಅಕಿರಾ ಕಾರ್ ಸ್ಟಾರ್ಟ್ ಮಾಡಿಕೊಂಡು ಫ್ಯಾಕ್ಟರಿ ಒಳಗೆ ಹೋಗ್ತಾಳೆ. ನೀಲಾ ಮಾತಾಡ್ತಾ ಅಕ್ಕ ಅವರು ವೀರಣ್ಣ ಅಂತ ಫ್ಯಾಕ್ಟರಿ ಸೆಕ್ಯೂರಿಟಿ ಇಂಚಾರ್ಜ್. ತುಂಬಾ ಒಳ್ಳೆ ವ್ಯಕ್ತಿ. ತುಂಬಾ ವರ್ಷಗಳಿಂದ ಈ ಫ್ಯಾಕ್ಟರಿ ಅಲ್ಲೇ ವಾಚ್ ಮ್ಯಾನ್ ಆಗಿ ಕೆಲಸ ಮಾಡ್ತಾ ಇದ್ರು. ಭಾವ ನೇ ಅವರನ್ನ ಸೆಕ್ಯೂರಿಟಿ ಇಂಚಾರ್ಜ್ ಆಗಿ ಪ್ರಮೋಟ್ ಮಾಡಿದ್ರು ಅಂತ ಹೇಳ್ತಾಳೆ. ಇಬ್ಬರು ಕಾರ್ ನ ಪಾರ್ಕ್ ಮಾಡಿ ಫ್ಯಾಕ್ಟರಿ ಒಳಗೆ ಬರ್ತಾರೆ. ನೀಲಾ ಅಕಿರಾಗೆ ಫ್ಯಾಕ್ಟರಿ ಬಗ್ಗೆ ಪ್ರತಿಯೊಂದು ವಿಷಯ ನ ಹೇಳ್ತಾ ಬರ್ತಾಳೆ. ಅಕಿರಾ ಫ್ಯಾಕ್ಟರಿ ಒಳಗೆ ಬರ್ತಾ ಒಳಗೆ ನೋಡಿ ನೀಲಾ ಇಷ್ಟು ದೊಡ್ಡ ಫ್ಯಾಕ್ಟರಿ ನ ಅಂತ ಕೇಳ್ತಾಳೆ. ನೀಲಾ ಅಕ್ಕ ಮೊದಲು ಇದಕ್ಕಿಂತ ಸ್ವಲ್ಪ ಚಿಕ್ಕದಾಗಿತ್ತು. ನಂತರ ಬಿಸಿನೆಸ್ ಆಗ್ತಾ ಇದ್ದಾ ಹಾಗೇ ಪಕ್ಕದಲ್ಲಿ ಇದ್ದಾ ಜಮೀನಿನಲ್ಲಿ ಕೂಡ ಫ್ಯಾಕ್ಟರಿ ಕಟ್ಟಿದ್ರು. ಅದು ಅಲ್ಲದೆ ಸುತ್ತ ಮುತ್ತ ಎಲ್ಲಾ ವ್ಯವಸಾಯ ಭೂಮಿ ಇರೋದು ಅದಕ್ಕೆ ಫ್ಯಾಕ್ಟರಿ ವೆಸ್ಟೆಜ್ ನ ಹೊರಗೆ ಬಿಡಬಾರ್ದು ಅಂತ ರೆಸೈಕಲಿಂಗ್ ನ ಶುರು ಮಾಡಿ ಆಲ್ಮೋಸ್ಟ್ 99% ನ ಮತ್ತೆ ಉಪಯೋಗ ಮಾಡೋ ತರ ಭಾವ ಪ್ಲಾನ್ ಮಾಡಿದ್ರು. ಅದರಿಂದ ಬರೋ ಲಾಭ ನ ಫ್ಯಾಕ್ಟರಿ ಅಲ್ಲಿ ವರ್ಕ್ ಮಾಡೋ ಎಂಪ್ಲೋಯ್ಸ್ ಮಕ್ಕಳ ವಿದ್ಯಾಭ್ಯಾಸ ಕ್ಕೆ. ಮಧ್ಯಾಹ್ನ ಲಂಚ್ ಗೆ , ಮೆಡಿಕಲ್ ಬಿಲ್ ಗೆ. ಟ್ರಾನ್ಸ್ಪೋರ್ಟ್ ಗೆ. ಇಂಟೆಸ್ಟ್ ಇಲ್ದೆ ಲೋನ್ ಕೊಡೋದಕ್ಕೆ ಉಪಯೋಗ ಮಾಡ್ತಾ ಇದ್ದಾರೆ ಭಾವ ಅಂತ ಹೇಳ್ತಾಳೆ. ಅಕಿರಾ ಮಹಿ ಬಗ್ಗೆ ಹೆಮ್ಮೆ ಪಡ್ತಾ, ಹೌದು ಅವಾಗಿಂದ ನೋಡ್ತಾ ಇದ್ದೀನಿ ಭಾವ ಭಾವ ಅಂತ ಇದ್ದಿಯಾ ಯಾಕೆ ಅಂತ ಕೇಳ್ತಾಳೆ. ನೀಲಾ ನಗ್ತಾ ಅಕ್ಕನ ಗಂಡ ಭಾವ ನೇ ಅಲ್ವಾ ಅದಕ್ಕೆ. ಅದು ಅಲ್ಲದೆ ಮಹಿ ಮಹಿ ಅಂತ ಹೇಳೋದಕ್ಕಿಂತ ಭಾವ ಅಂತ ಹೇಳಿದ್ರೇನೇ ತುಂಬಾ ಖುಷಿ ಆಗ್ತಾ ಇದೆ. ಅಂತ ಹೇಳ್ತಾ ಆಫೀಸ್ ಕಡೆಗೆ ಹೋಗ್ತಾರೆ.

    ಆಫೀಸ್ ಅಲ್ಲಿ ಪ್ರತಿಯೊಂದು ಡಿಪಾರ್ಟ್ಮೆಂಟ್ ನ ಹೇಳ್ತಾ ಅವಳ ಕ್ಯಾಬಿನ್ ಗೆ ಬರ್ತಾ ಅಕ್ಕ ನಿನ್ ಕುತ್ಕೋ ನಾನ್ ಹೋಗಿ ತಾತನವರು ಎಲ್ಲಿದ್ದಾರೆ ಅಂತ ನೋಡ್ಕೋ ಬರ್ತೀನಿ ಅಂತ ಹೇಳ್ತಾಳೆ. ಅಕಿರಾ ಒಬ್ಳೆ ಕೂತು ಏನ್ ಮಾಡ್ಲಿ ನಡಿ ನಾನು ಬರ್ತೀನಿ ಅಂತ ಹೇಳ್ತಾಳೆ. ನೀಲಾ ನಗ್ತಾ ಸರಿ ಬಾ ಅಂತ ಹೇಳಿ. ಮಹಿ ಆಫೀಸ್ ಕ್ಯಾಬಿನ್ ಕಡೆಗೆ ಕರ್ಕೊಂಡು ಹೋಗ್ತಾಳೆ. ಮಹಿ ಆಫೀಸ್ ರೂಮ್ ನೋಡಿ ಅಕಿರಾ ಹಾಗೇ ನೋಡ್ತಾ ನಿಂತು ಬಿಡ್ತಾಳೆ. ನೀಲಾ ಅಕಿರಾ ನೋಡ್ತಾ ಇರೋದನ್ನ ನೋಡಿ. ಹೇಗಿದೆ ಅಕ್ಕ ಭಾವ ನ ಆಫೀಸ್ ಅಂತ ಕೇಳ್ತಾಳೆ. ಅಕಿರಾ ನಮ್ ಕಂಪನಿ ಬಾಸ್ ಆಫೀಸ್ ಕೂಡ ಹೀಗೆ ಇಲ್ಲಾ ಅಂತ ಹೇಳ್ತಾಳೆ. ನಾನೆ ಡಿಸೈನ್ ಮಾಡಿದ್ದು. ನ್ಯಾಷನಲ್ ಲೆವೆಲ್  ಬಿಸಿನೆಸ್ ಮ್ಯಾನ್ ಮಹಿ ಆಫೀಸ್ ಸಿಂಪಲ್ ಆಗಿ ಇದ್ರೆ ಹೇಗೆ ಅಂತ, ಯೋಚ್ನೆ ಮಾಡಿ ಈ ರೀತಿ ಡಿಸೈನ್ ಮಾಡಿದ್ದೀನಿ. ಅಷ್ಟೇ ಅಲ್ಲ. ಒಳಗೆ ಒಂದು ಹಾಲ್ ಎರಡು ಬೆಡ್ರೂಮ್ ಒಂದು ಕಿಚನ್ ಕೂಡ ಇದೆ. ಅಂತ ಹೇಳಿ ಕರ್ಕೊಂಡು ಆಫೀಸ್ ಗೆ ಇನ್ನೊಂದು ಸೈಡ್ ಇರೋ ಡೋರ್ ನ ಓಪನ್ ಮಾಡಿಕೊಂಡು ಒಳಗೆ ಹೋಗ್ತಾರೆ. ಅಲ್ಲಿ ಮಹಿ ಫ್ಯಾಮಿಲಿ ಮತ್ತೆ ನೀಲಾ ಫ್ಯಾಮಿಲಿ ಕೂತು ಮಾತಾಡ್ತಾ ಇರ್ತಾರೆ.  ಶಿಲ್ಪಾ ನೀಲಾ ನ ನೋಡಿ ಲೇ ಇಷ್ಟೋತ್ತ ಬರೋಕೆ ಅಂತ ಕೇಳ್ತಾಳೆ. ನೀಲಾ ಅಕ್ಕನಿಗೆ ಫ್ಯಾಕ್ಟರಿ ಬಗ್ಗೆ ಹೇಳ್ತಾ ಫ್ಯಾಕ್ಟರಿ ತೋರಿಸಿ ಕೊಂಡು ಬಂದೆ ಅಂತ ಹೇಳ್ತಾ ಹೋಗಿ. ಮಹಿ ಅವರ ತಾತ ಅಜ್ಜಿ ಹತ್ತಿರ ಹೋಗಿ ಆಶೀರ್ವಾದ ತಗೋತಾಳೆ. ಇಬ್ವರು ಅವಳಿಗೆ ಆಶೀರ್ವಾದ ಮಾಡಿ ಅಕಿರಾ ಕಡೆಗೆ ನೋಡ್ತಾರೆ. ನೀಲಾ ನಿಧಾನಕ್ಕೆ ತಾತನ ಕಿವೀಲಿ ನಿಮ್ ಮೊಮ್ಮಗನ ಮೊದಲ ಲವ್ ಅಂತ ಹೇಳ್ತಾಳೆ. ನೀಲಾ ಅವರ ತಾತ ಮಹಿ ಅವರ ತಾತ ಅಕಿರಾ ನ ನೋಡೋದನ್ನ ನೋಡಿ. ಲೋ ಇವಳು ನನ್ನ ಮಗಳು ಕೋಮಲಿ ಇದ್ದಾಳೆ ಅಲ್ವಾ. ಮಹಿ ಅವರ ತಾತ ಯಾರು ಲವ್ ಮಾಡಿ ನೀವು ಒಪ್ಕೊಂಡು ಇಲ್ಲಾ ಅಂತ ನಿಮ್ ಮೇಲೆ ಕೋಪ ಮಾಡ್ಕೊಂಡು ಬೆಂಗಳೂರಲ್ಲಿ ಇದ್ದಾಳೆ ಅಂತ ಹೇಳ್ದೆ ಅಲ್ವಾ. ಹ್ಮ್ ಅವಳೇ. ಅವಳ ಮಗಳು ಇವಳು ಅಕಿರಾ ಅಂತ ನಮ್ ಮಹಿ ಗೆ ಅಂತ ಇನ್ನು ಏನೋ ಹೇಳೋಕೆ ಬರ್ತಾರೆ. ಹ್ಮ್ ಅರ್ಥ ಆಯ್ತು, ನಮಗಾದ್ರೂ ಎರಡೆರಡು ಮದುವೆ ಆಗೋ ಭಾಗ್ಯ ಸಿಗಲಿಲ್ಲ. ಮೊಮ್ಮಗ ಮಹಿ ಗೆ ಆದ್ರು ಸಿಗ್ತು ಅಲ್ವಾ ಅಂತ ನಗ್ತಾ ಹೇಳ್ತಾ ಬಾಮ್ಮ ಇಲ್ಲಿ ಅಂತ ಅಕಿರಾ ನ ಕರೀತಾರೆ. ಅಕಿರಾ ಬಂದು ಅಜ್ಜಿ ತಾತ ನ ಹತ್ತಿರ ಆಶೀರ್ವಾದ ತಗೋತಾಳೆ. ಅವಳಿಗೆ ಆಶೀರ್ವಾದ ಮಾಡಿ. ನೋಡಮ್ಮ ಇಬ್ರು ಇಷ್ಟ ಪಟ್ಟಿದ್ದೀರಾ ಯಾರ್ ಮನಸ್ಸಿಗೂ ನೋವು ಮಾಡಿಕೊಳ್ಳದೆ ಒಂದುಕೊಂಡು ಜೀವನ ಮಾಡಿ ಅಂತ ಹೇಳ್ತಾರೆ. ಅಕಿರಾ ಸರಿ ತಾತ ಅಂತ ಹೇಳ್ತಾಳೆ. 

      ಮಹಿ ಚಿಕ್ಕಮ್ಮಂದಿರು ಬಂದು ಅಕಿರಾ ಹತ್ತಿರ. ಮಹಿ ಎಲ್ಲಿ ಅಂತ ನಿಧಾನಕ್ಕೆ ಕೇಳ್ತಾರೆ. ನೀಲಾ ಅತ್ತೆ ರಾತ್ರಿ ಹೋದವನು ಇನ್ನು ಬಂದಿಲ್ಲ ಅಂತ ಹೇಳ್ತಾಳೆ. ಶ್ರುತಿ ಬರ್ಲಿ ಅವನು ಮಾಡ್ತೀನಿ ನಮಗೆ ಪರಿಚಯ ಮಾಡಿಸದೇ ಕರ್ಕೊಂಡು ಬಂದಿದ್ದಾನೆ ಅಂತ ಕೋಪದಲ್ಲಿ ಹೇಳಿದ್ರೆ. ನೀಲಾ ಅತ್ತೆ ಏನಕ್ಕೆ ಕೋಪ ಮಾಡ್ಕೋತೀರಾ ನನ್ನ ನೇರವಾಗಿ ಕರ್ಕೊಂಡು ಬಂದು ನಿಮಗೆ ಪರಿಚಯ ಮಾಡಿಸಿದ. ಇವಳನ್ನ ಕರ್ಕೊಂಡು ಹೋಗಿ ನಿಮ್ ಅಕ್ಕನಿಗೆ ಭಾವನಿಗೆ ಪರಿಚಯ ಮಾಡಿಸಿದ. ಲೆಕ್ಕ ಸರಿಯೋಯ್ತು ಬಿಡಿ ಯಾಕ್ ಕೋಪ ಮಾಡ್ಕೋತೀರಾ ಅಂತ ಹೇಳ್ತಾಳೆ. ದಾಕ್ಷಾಯಣಿ ನೀಲಾ ನ ಕಿವಿ ಇಡಿದು ಮಾತು ಕಲಿತು ಬಿಟ್ಟಿದ್ದೀಯ ಅವನ ಸಾವಾಸ ಮಾಡಿ ಅಂತ ಹೇಳಿದ್ರೆ. ಅತ್ತೆ ಸಾವಾಸ ಮಾಡಿನೇ ಹೀಗೆ ಮಾತಾಡ್ತಾ ಇದ್ದೀನಿ ಅಂದ್ರೆ ಅರ್ಥ ಮಾಡ್ಕೊಳ್ಳಿ ಮದುವೆ ಮಾಡ್ಕೊಂಡು ಸಂಸಾರ ಶುರುಮಾಡಿ ನಿಮ್ ಕೈಗೆ ಇಬ್ಬರು ಮಕ್ಕಳನ್ನ ಕೊಟ್ಟ ಮೇಲೆ ಇನ್ನೆಗೆ ಮಾತಾಡ್ತೀನಿ ಅಂತ ಹೇಳ್ತಾಳೆ. ಶ್ರುತಿ ಬಾಯಿ ಮೇಲೆ ಕೈ ಇಟ್ಕೊಂಡು ನೋಡಿದ ಅಕ್ಕ ಈಗ್ಲೇ ಎಲ್ಲಿತನಕ ಪ್ಲಾನ್ ಮಾಡಿದ್ದಾಳೆ ಅಂತ ಹೇಳಿ ನಕ್ಕು. ಅಕಿರಾ ಕಡೆಗೆ ನೋಡ್ತಾ ನಿನ್ ಎಷ್ಟು ಮಕ್ಕಳನ್ನ ಪ್ಲಾನ್ ಮಾಡಿದ್ದಿಯ ಅಂತ ಕೇಳ್ತಾರೆ. ಅಕಿರಾ ಗೆ ಅವರ ಮಾತಿಗೆ ಏನ್ ಹೇಳಬೇಕೋ ಅರ್ಥ ಆಗದೆ ತಡವರಿಸಿದ್ರೆ. ನೀಲಾ ಮಧ್ಯದಲ್ಲಿ ಮಾತಾಡ್ತಾ ತಂಗಿ ನೇ 2 ಪ್ಲಾನ್ ಮಾಡಿದ್ದಾಳೆ ಅಂದ್ರೆ ಅಕ್ಕ ಕೇಳಬೇಕಾ ಫ್ಲೋ ಅಲ್ಲಿ ಹೋಗ್ತಾ ಇರ್ತಾಳೆ. ನೀವು ಮಕ್ಕಳನ್ನ ಸ್ಕೂಲ್ ಗೆ ರೆಡಿ ಮಾಡಿ ಕಳಿಸ್ತಾ ಇರಿ ಅಂತ ಹೇಳ್ತಾಳೆ. ದಾಕ್ಷಾಯಣಿ ನಗ್ತಾ ತರ್ಲೆ, ಅಂತ ಅವಳನ್ನ ಅಪ್ಪಿಕೊಂಡು ಹಣೆಗೆ ಒಂದು ಮುತ್ತನ್ನ ಕೊಟ್ಟು.  ಅಕಿರಾ ನ ಕೂಡ ಅಪ್ಪಿಕೊಂಡು ಹಣೆಗೆ ಮುತ್ತಿಟ್ಟು ಹೀಗೆ ಖುಷಿಯಾಗಿ ಇರಿ ಅಂತ ಹೇಳ್ತಾರೆ. 

      ಇವರೆಲ್ಲ ಕೂತು ಮಾತಾಡೋವಾಗ  ಮಹಿ ಅಪ್ಪ ಅಮ್ಮ ಶ್ವೇತಾ . ಶಿಲ್ಪಾ ಅವರ ಅಪ್ಪ ಅಮ್ಮ, ಅಕಿರಾ ಅವರ ಅಪ್ಪ ಅಮ್ಮ ಬರ್ತಾರೆ. ಅಕಿರಾ ಅವರ ಅಪ್ಪ ಅಮ್ಮ ನ ನೋಡಿ ಶಾಕ್ ಆಗ್ತಾಳೆ. ಶಿಲ್ಪಾ ಅವರ ತಾತ ಅಜ್ಜಿ ಗೆ ಮಗಳನ್ನ ನೋಡಿ ತುಂಬಾ ಖುಷಿ ಆಗುತ್ತೆ. ಕೋಮಲಿ ಹೋಗಿ ಅವರ ಅಪ್ಪ ಅಮ್ಮ ತಬ್ಬಿಕೊಂಡು ಅಳ್ತಾ ಅಪ್ಪ ಅಮ್ಮ ನನ್ನ ಕ್ಷಮಿಸಿ ಬಿಡಿ ಅಂತ ಕಾಲಿಗೆ ಬೀಳ್ತಾರೆ. ಮಗಳು ಹಾಗೇ ಕಾಲಿಗೆ ಬಿದ್ದಿದ್ದನ್ನ ನೋಡಿ ಅವರನ್ನ ಮೇಲೆ ಎಬ್ಬಿಸಿ ನೀನೇ ನನ್ನ ಕ್ಷಮಿಸಿ ಬಿಡು ಮಗಳೇ, ನಿನ್ನ ಪ್ರೀತಿ ನ ಅರ್ಥ ಮಾಡಿಕ್ಕೋಳದೆ ನಾವೇ ದುಡುಕಿ ಬಿಟ್ವಿ ಅಂತ ಹೇಳಿ ಕಣ್ಣೀರು ಹಾಕ್ತಾರೆ. ರುಕ್ಮಿಣಿ ಮಗಳನ್ನ ಅಪ್ಪಿಕೊಂಡು ಸಮಾಧಾನ ಮಾಡ್ತಾ ಈಗಲಾದ್ರೂ ನಮ್ಮನ್ನ ನೋಡೋಕೆ ಬಂದೆ ಅಲ್ವಾ ಅಷ್ಟು ಸಾಕು ಅಂತ ಹೇಳ್ತಾ ಮಗಳಿಗೆ ಸಮಾಧಾನ ಮಾಡ್ತಾಳೆ. ಕೋಮಲಿ ಅಮ್ಮ ರಾತ್ರಿ ಮಹಿ ಮನೆಗೆ ಬಂದಿದ್ದ ಅಂತ ಹೇಳ್ತಾರೆ. ರುಕ್ಮಿಣಿ,, ಏನಮ್ಮ ನೀನು ಹೇಳೋದು ಅಂತ ಕೇಳಿದ್ರೆ. 

    ವಿವೇಕ್ ಹೌದು ಅತ್ತೆ. ರಾತ್ರಿ ಮಹಿ ಮನೆಗೆ ಬಂದಿದ್ದ. ನಮ್ಮ ತಪ್ಪಿನ ಬಗ್ಗೆ ಹೇಳಿದ. ತಪ್ಪು ನಮ್ಮಿಂದ ಆಗಿರೋದು ಅದನ್ನೇ ಸಾಧಿಸಿ ಕೂತ್ರೆ ಇನ್ನು ದೊಡ್ಡ ತಪ್ಪಾಗುತ್ತೆ ಅಂತ ಬಂದು ಬಿಟ್ವಿ ನಮ್ಮನ್ನ ಕ್ಷಮಿಸಿ ಬಿಡಿ ಮಾವ ಅಂತ ಕೇಳ್ತಾರೆ. ಶಿಲ್ಪಾ ಬಿಡಿ ದೊಡ್ಡಪ್ಪ ಕೊನೆಗೂ ನೀವು ಬಂದ್ರಿ ಅಲ್ವಾ ಅಷ್ಟು ಸಾಕು ಅಂತ ಹೇಳಿ ಹೋಗಿ ಅವರನ್ನ ಅಪ್ಪಿಕೋಳ್ತಾಳೇ. ಶ್ವೇತಾ ಅವರ ಅಜ್ಜಿ ತಾತನ ಹತ್ತಿರ ಹೋಗಿ ಅಪ್ಪಿಕೋಳ್ತಾಳೆ. ರೋಹಿಣಿ ಅಬ್ಬಾ ಅಂತು ಇಂತೂ ಮಹಿ ಅಣ್ಣ ನಿಂದ ಮತ್ತೆ ಅಪ್ಪ ಮಗಳು ಒಂದಾದ್ರು. ಹೌದು ಮಹಿ ಅಣ್ಣ ಎಲ್ಲಿ ಅಂತ ಕೇಳ್ತಾಳೆ ಅಕಿರಾ ಅವರ ಅಪ್ಪ ಅಮ್ಮ ನ. ಅಷ್ಟರಲ್ಲಿ ಒಬ್ಬ ಮಹಿಳೆ ಡೋರ್ ಓಪನ್ ಮಾಡಿಕೊಂಡು ಬಂದು ಸರ್ ನಿಮ್ಮನೆಲ್ಲ ಮಹಿ ಸರ್ ಬೋರ್ಡ್ ರೂಮ್ ಗೆ ಬರೋಕೆ ಹೇಳಿದ್ರು ಅಂತ ಹೇಳ್ತಾಳೆ .  ಎಲ್ಲರೂ ಬೋರ್ಡ್ ರೂಮ್ ಕಡೆಗೆ ಹೋಗ್ತಾರೆ. ಸ್ವಲ್ಪ ಸಮಯದ ನಂತರ ಎಲ್ಲರೂ ಬೋರ್ಡ್ ರೂಮ್ ಗೆ ಬರ್ತಾರೆ. ಬೋರ್ಡ್ ರೂಮ್ ಅಲ್ಲಿ ಆಫೀಸ್ ವ್ಯಕ್ತಿ ಗಳ ಜೊತೆ ಮಾತಾಡ್ತಾ  ಅವರಿಗೆ ಏನೋ ಹೇಳ್ತಾ ಇದ್ದೆ . ಫ್ಯಾಮಿಲಿ ಅವರೆಲ್ಲಾ ಬಂದಿದ್ದನ್ನ ನೋಡಿ ಎದ್ದು ನಿಂತು ಅವರನೆಲ್ಲ ಕಳಿಸಿ ಕೂತ್ಕೋಳ್ಳೋಕೆ ಹೇಳಿದೆ . ತಾತ ಮಾತಾಡ್ತಾ ಮಹಿ ರಾತ್ರಿ ಮೈಸೂರ್ ಗೆ ಬಂದು ಮತ್ತೆ ಬೆಂಗಳೂರು ಹೋಗಿ ಮತ್ತೆ ಇಲ್ಲಿಗೆ ಬಂದಿದ್ದೀಯಾ. ಈ ರೀತಿ ಸುತ್ತಾಡ್ತಾ ಇದ್ರೆ ನಿನ್ನ ಅರೋಗ್ಯ ಏನ್ ಆಗೋದಿಲ್ಲ ಹೇಳು. ನಿನ್ನೆ ನಂಬಿಕೊಂಡು ಎಷ್ಟೋ ಜನರು ಇದ್ದಾರೆ ಎರಡು ಫ್ಯಾಮಿಲಿ ಇದೆ ಎಲ್ಲದಕ್ಕಿಂತ ಮುಖ್ಯವಾಗಿ ಅ ಇಬ್ಬರು ಹುಡುಗೀರು ಇದ್ದಾರೆ. ನಿನ್ನ ಕೆಲಸಾನ ಬೇರೆಯವರಿಗೆ ಕೊಟ್ಟು ನೀನು ಆರಾಮಾಗಿ ಇರು ಅಂತ ಹೇಳ್ತಾರೆ. ನಾನು ನಗ್ತಾ ಹಾಗೇನಿಲ್ಲ ಬಿಡಿ ತಾತ ಕೂತ್ಕೊಳ್ಳಿ ಅಂತ ಹೇಳಿದೆ ಎಲ್ಲರೂ ಕುತ್ಕೊಂಡ್ರು. ದಾಕ್ಷಾಯಣಿ ಚಿಕ್ಕಮ್ಮ ನೀವು ಮಾತಾಡ್ತಾ ಇರಿ ನಾನ್ ಹೋಗಿ ಮಕ್ಕಳು ಎಲ್ಲಿ ಇದ್ದಾರೆ ಅಂತ ನೋಡ್ಕೊಂಡು ಬರ್ತೀನಿ ಬರ್ತೀನಿ ಅಂತ ಹೇಳ್ತಾರೆ.  ಅಮ್ಮ ಏನು ಬೇಡ ಅವರು ಫ್ಯಾಕ್ಟರಿ ಅಲ್ಲಿ ನಡಿಯೋ ಕೆಲಸಗಳ ಬಗ್ಗೆ ತಿಳ್ಕೋತಾ ಇದ್ದಾರೆ. ಅವರ ಜೊತೆ ವೀರಣ್ಣ ಇದ್ದಾರೆ ನೀವು ಆರಾಮಾಗಿ ಕೂತ್ಕೊಳ್ಳಿ ನಿಮ್ಮೆಲ್ಲರ ಹತ್ತಿರ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಅಂತ ಹೇಳ್ದೆ.

   ಎಲ್ಲರೂ ನನ್ನ ಮಾತಿನ ಅರ್ಥ ತಿಳಿದು ನನ್ನ ಕಡೆಗೆ ನೋಡಿದ್ರು . ನಾನು ಶಿಲ್ಪಾ ಅವರ ತಾತ ನ ಕಡೆಗೆ ನೋಡ್ತಾ. ತಾತ ನಿಮ್ಮಿಂದ ಒಂದು ವಿಷಯ ಮುಚ್ಚಿ ಇಟ್ಟಿದ್ದೆ. ನಿಮ್ ಸ್ನೇಹಿತನ ಮೊಮ್ಮಗ ಬೇರೆ ಯಾರು ಅಲ್ಲ ನಾನೆ ಅಂತ ಹೇಳ್ತಾನೆ. ಗೋಪಾಲ ಆಶ್ಚರ್ಯ ವಾಗಿ ಅವರ ಸ್ನೇಹಿತನ ಕಡೆಗೆ ನೋಡ್ತಾನೆ. ಬೆಟ್ಟಯ್ಯ ಹೌದು ಕಣೋ ಇವನೇ ನನ್ನ ಮೊಮ್ಮಗ ಅಂತ ಹೇಳ್ತಾನೆ.   ಮತ್ತೆ ನಾನು ಮಾತಾಡ್ತಾ ನಿಮಗೆಲ್ಲ ನಾನು ಈ ಕಂಪನಿಯ ಮಾಲೀಕ ಆಗಬೇಕು ಅನ್ನೋ ಆಸೆ ಇದೆ ಅಂತ ನನಗೆ ಗೊತ್ತು. ಅದ್ರೆ ಸದ್ಯದ ಪರಿಸ್ಥಿತಿ ಅಲ್ಲಿ ನಾನು ಅ  ಪೊಸಿಷನ್ ನ ತಗೋಳೋಕೆ ಹೋಗೋದಿಲ್ಲ. ತಾತ ಮಾತಾಡ್ತಾ ಮಹಿ ಏನಪ್ಪಾ ಹೀಗೆ ಹೇಳ್ತಾ ಇದ್ದಿಯಾ ಅಂತ ಕೇಳಿದ್ರು. ಶಿಲ್ಪಾ ಅವರ ತಾತ ಕೂಡ  ಹೌದು ಮಹಿ ನಿನ್ನ ಅ ಸೀಟ್ ಅಲ್ಲಿ ನೋಡಬೇಕು ಅನ್ನೋ ಆಸೆ ನಮಗೆಲ್ಲ ಇರೋವಾಗ ನೀನು ಬೇಡ ಅಂದ್ರೆ ಹೇಗೆ ಹೇಳು ಅಂತ ಕೇಳಿದ್ರು. ನಾನು ನಗ್ತಾ ತಾತ ನಿಮ್ ಪ್ರೀತಿ ನನಗೆ ಅರ್ಥ ಆಗುತ್ತೆ, ಅದ್ರೆ ಸದ್ಯಕ್ಕೆ ಬೇಡ. ಸ್ವಲ್ಪ ದಿನಗಳ ಕಾಲ ಅಷ್ಟೇ ಪ್ಲೀಸ್ ದಯವಿಟ್ಟು ನನ್ನ ಮಾತನ್ನ ಅರ್ಥ ಮಾಡಿಕೊಳ್ಳಿ. ಸದ್ಯಕ್ಕೆ ಈ ಕಂಪನಿ ನ ನೋಡಿಕೊಳ್ಳೋ ಜವಾಬ್ದಾರಿ ನ ಶ್ವೇತಾ ಅಕ್ಕ ನೋಡ್ಕೋತಾಳೆ. ನಾನು ಆಲ್ರೆಡಿ ಅಕ್ಕನ ಹತ್ತಿರ ಮಾತಾಡಿದ್ದೀನಿ. ಅಕ್ಕ ನನಗಿಂತ ಚೆನ್ನಾಗಿ ಈ ಫ್ಯಾಕ್ಟರಿ ನ ಈ ಕಂಪನಿ ನ ನೋಡ್ಕೋತಾಳೆ. ಅಜ್ಜಿ ಮಾತಾಡ್ತಾ ಮಹಿ ಫ್ಯಾಕ್ಟರಿ ನ ನಿಮ್ಮಕ್ಕ ಚೆನ್ನಾಗಿ ನೋಡ್ಕೋತಾಳೆ ಅನ್ನೋ ನಂಬಿಕೆ ನಮಗೆ ಇದೆ ಅದ್ರೆ ಮುಚ್ಚೋಗಿರೋ ಫ್ಯಾಕ್ಟರಿ ನ ಮತ್ತೆ ಓಪನ್ ಮಾಡಿ ಇವತ್ತು ಇಷ್ಟರ ಮಟ್ಟಿಗೆ ಬೆಳಿಯೋಕೆ ಕಾರಣ ನೀನು.

   ನೀವು 5 ಜನ ಎಷ್ಟು ಕಷ್ಟ ಪಟ್ಟಿದ್ದೀರಾ ಅಂತ ನಾವೆಲ್ಲ ನೋಡಿದ್ದೀವಿ. ಹಗಲು ರಾತ್ರಿ ಅಂತ ನೋಡದೆ ದುಡಿದ್ದೀರಾ. ನಿಮ್ಮಿಂದ ಎಷ್ಟೋ ಜನ ನೆಮ್ಮದಿ ಆಗಿ ನಿದ್ದೆ ಮಾಡ್ತಾ ಇದ್ದಾರೆ. ಈ ಕಂಪನಿ ನಿಮ್ 5 ಜನದ್ದು ನೀನು ಅವರನ್ನ ಒಪ್ಪಿಸು ಅವರು ಏನ್ ಹೇಳ್ತಾರೋ ಅದೇ ನಮ್ ನಿರ್ಧಾರ ಅಂತ ಹೇಳಿದ್ರು. ಶಿಲ್ಪಾ ಮಾತಾಡ್ತಾ ಅಜ್ಜಿ ಮಹಿ ಕಾರಣ ಇಲ್ಲದೆ ಏನು ಕೆಲಸ ಮಾಡೋದಿಲ್ಲ. ಅವನು ಈ ರೀತಿ ಹೇಳ್ತಾ ಇದ್ದಾನೆ ಅಂದ್ರೆ ಏನೋ ಬಲವಾದ ಕಾರಣ ಇರಬೇಕು. ಮಹಿ ಈ ಕಂಪನಿ ಫ್ಯಾಕ್ಟರಿ ಬಿಟ್ಟು ಹೋಗ್ತೀನಿ ಅಂತ ಹೇಳ್ತಾ ಇಲ್ಲಾ ಅಲ್ವಾ ಅಂತ ಹೇಳಿದ್ರೆ. ಮದನ್ ಮಾತಾಡ್ತಾ ಹೌದು ತಾತ ಮಹಿ ಈ ರೀತಿ ನಿರ್ಧಾರ ತಗೊಂಡು ಇದ್ದಾನೆ ಅಂದ್ರೆ ನಾವು ಅದಕ್ಕೆ ರೆಸ್ಪೆಕ್ಟ್ ಕೊಡೋಣ. ರೋಹಿಣಿ ಹೌದು ತಾತ ಮಹಿ ಅಣ್ಣನ ನಿರ್ಧಾರ ನೇ ನಮ್ ನಿರ್ಧಾರ ಅಂತ ಹೇಳ್ತಾಳೆ. ಎಲ್ಲರೂ ನೀಲಾ ಕಡೆಗೆ ನೋಡ್ತಾರೆ ಅವಳು ಏನ್ ಹೇಳ್ತಾಳೆ ಅಂತ. ನೀಲಾ ಎಲ್ಲರೂ ಅವಳ ಕಡೆಗೆ ನೋಡೋದನ್ನ ನೋಡಿ. ಭಯ ಬಿದ್ದು ಕೂತಿದ್ದವಳು ಎದ್ದು ಓಡಿ ಬಂದು ನನ್ನಿಂದೆ ನಿಂತು. ಅವರನೆಲ್ಲ ನೋಡ್ತಾ ಏನು ಮದುವೆ ಮೊದಲೇ ಇಬ್ಬರ ಮಧ್ಯ ತಂದು ಇಡೋ ಪ್ಲಾನ್ ಮಾಡ್ತಾ ಇದ್ದೀರಾ. ಅದೆಲ್ಲಾ ಆಗೋದಿಲ್ಲ ಅಂತ ನನ್ನ ಕಡೆಗೆ ನೋಡಿ. ಭಾವ ಮುಂದೆ ಹೇಳು ಭಾವ ನೀನು ಇಲ್ಲಾ ಅಂದ್ರೆ ಮತ್ತೆ ಏನಾದ್ರು ಫಿಟ್ಟಿಂಗ್ ಇಡ್ತಾರೆ ಇವರು ಅಂತ ಹೇಳ್ತಾಳೆ. ಅಜ್ಜಿ ನಗ್ತಾ ನಿಮ್ ಮಧ್ಯ ಯಾರು ಫಿಟ್ಟಿಂಗ್ ಇಟ್ಟಿಲ್ಲ ಬಾ ಬಂದು ಕುತ್ಕೋ ಅಂತ ಹೇಳಿದ್ರು. ನೀಲಾ ಹೋಗಿ ಅವಳ ಚೇರ್ ಅಲ್ಲಿ ಕುತ್ಕೊಂಡ್ಲು. 

   ತಾತ ಮಾತಾಡ್ತಾ ಹ್ಮ್ ಎಲ್ಲರೂ ನಿನ್ನ ಮಾತೆ ಅಂದ್ರು ಅಲ್ವಾ ಹೇಳು ಮುಂದಿನ ವಿಷಯ ಅಂತ ಹೇಳಿದ್ರು. ಹ್ಮ್ ಇಷ್ಟೇ ತಾತ, ಮದನ್ ಶಿಲ್ಪಾ ರೋಹಿಣಿ ನೀಲಾ ಈ ಎರಡು ಫ್ಯಾಕ್ಟರಿ ನ ನೋಡ್ಕೋತಾರೆ. ಬೆಂಗಳೂರು ಬ್ರಾಂಚ್ ನ ಅಕಿರಾ ನೋಡ್ಕೋತಾರೆ. ನಮ್ಮ ಮೇನ್ ಬ್ರಾಂಚ್ ಮತ್ತೆ ಆಫೀಸ್ ಫ್ಯಾಕ್ಟರಿ ಎಲ್ಲಾ ಇಲ್ಲೇ ಇರೋದ್ರಿಂದ ಶ್ವೇತಾ ಅಕ್ಕ ವೀಕ್ ಡೆಸ್ ಇಲ್ಲಿ ನೋಡ್ಕೊಂಡು ವೀಕೆಂಡ್ ಬೆಂಗಳೂರು ಹೋಗಿ ಅಲ್ಲಿ ನೋಡ್ಕೋತಾಳೆ. ಫೌಂಡರ್ ಆಗಿ ನೀವಿಬ್ರು ಇರ್ತೀರ. ಛೇರ್ಮನ್ ಆಗಿ ಶ್ವೇತಾ ಅಕ್ಕ ಇರ್ತಾಳೆ. ಬೆಂಗಳೂರು ಮೈಸೂರ್ ಅಲ್ಲಿ ಮೀಟಿಂಗ್ಸ್ ಏನಾದ್ರು ಇದ್ರೆ ನೀವೇ ನೋಡ್ಕೋಬೇಕು. ಬೇರೆ ಕಡೆ ಮೀಟಿಂಗ್ಸ್ ಇದ್ರೆ ನಾನ್ ನೋಡ್ಕೋತೀನಿ.. ನನ್ನ ಬಗ್ಗೆ ಇಲ್ಲಿ ನಿಮಗೆ, ವೀರಣ್ಣ ನಿಗೆ ಬಿಟ್ರೆ ಯಾರಿಗೂ ಗೊತ್ತಿಲ್ಲ. ಯಾರಿಗೂ ಏನು ಹೇಳಬೇಡಿ.  ಮತ್ತೆ ನಾನು ಸ್ವಲ್ಪ ದಿನ ಬೇರೆ ಕೆಲಸದ ಮೇಲೆ ಹೊರಗೆ ಹೋಗ್ತಾ ಇದ್ದೀನಿ. ಮೀಟಿಂಗ್ಸ್ ಡೇಟ್ ನ ಟೈಮ್ ನ 2 ದಿನದ ಮೊದಲೇ ಹೇಳು ನೀಲಾ ಅಂತ ಹೇಳ್ದೆ. 

   ತಾತ ಮಾತಾಡ್ತಾ ಏನು ಹೊರಗಡೆ ಹೋಗ್ತಾ ಇದ್ದಿಯಾ ಏನಕ್ಕೆ ಅಂತ ಕೇಳಿದ್ರು. ಏನಕ್ಕೆ ಅಂದ್ರೆ ಇನ್ನೇನ್ ತಾತ ಬಿಸಿನೆಸ್ ಅಂದ್ರೆ ಹೆಜ್ಜೆ ಮುಂದೆ ಇಡ್ತಾ ಹೋಗಬೇಕು ಅಲ್ವಾ. ಕೆಲವೊಂದು ಇಂಟರ್ನ್ಯಾಷನಲ್ ಬ್ರಾಂಡ್ ಜೊತೆ ಕೆಲವೊಂದು ಮೀಟಿಂಗ್ಸ್ ಇದ್ದಾವೆ ಅದಕ್ಕೋಸ್ಕರ ಅಂತ ಹೇಳ್ದೆ. ಇಬ್ಬರು ತಾತಂದಿರು  ಹ್ಮ್ ಒಳ್ಳೆದಾಗಲಿ ಮಗನೆ ಅಂತ ಹೇಳಿದ್ರು. ಸ್ವಲ್ಪ ಹೊತ್ತು ಇನ್ನು ಕೆಲವು ವಿಷಯ, ಫ್ಯಾಮಿಲಿ ಬಗ್ಗೆ ಮಾತಾಡಿಕೊಂಡು ಸ್ವಲ್ಪ ಸಮಯ ಕಾಲ ಕಳೆದ್ವಿ..


***************************************