Mahi - 38 in Kannada Love Stories by S Pr books and stories PDF | ಮಹಿ - 38

The Author
Featured Books
Categories
Share

ಮಹಿ - 38

       ಅಡುಗೆ ಮನೇಲಿ ಕೆಲಸ ಮಾಡ್ತಾ, ಈ ಮನೇಲಿ ನನ್ನಾ ಮಾತಿಗೆ ಬೆಲೆ ಎಲ್ಲಿದೆ? ಅವರವರ ಇಷ್ಟ ಬಂದಹಾಗೆ ಮಾಡ್ತಾ ಇದ್ದಾರೆ. ಸುಮ್ನೆ ನೆಪಕ್ಕೆ ಅಷ್ಟೇ ನಾನು ಈ ಮನೇಲಿ ಇರೋದು, ಒಬ್ಬರಾದ್ರೂ ನನ್ನ ಮಾತನ್ನ ಕೇಳೋದು ಅಲ್ಲ ಏನು ಅಂತ ಕೇಳೋಕೂ ಯಾರಿಗೂ ಇಷ್ಟ ಇಲ್ಲಾ. ಮಕ್ಕಳು ಗಂಡ ಅಂತ ಅವರ ಸೇವೆ ನೇ ಮಾಡ್ಕೊಂಡು ಇದ್ದಾ ನನಗೆ ಸರಿಯಾಗಿ ಪಾಠ ಕಲಿಸಿದ್ರು. ಇಷ್ಟೇ ಅಲ್ಲ ಇನ್ನು ಆಗಬೇಕು ನನಗೆ, ಈ ಮನೇಲಿ ಕೇವಲ ನಾನು ಕೆಲಸದವಳಾಗಿ ಇದ್ದು ಬಿಟ್ಟಿದ್ದೀನಿ, ಇನ್ನ ಸ್ವಲ್ಪ ದಿನ ಹೋದ್ರೆ ಅಪ್ಪ ಮಕ್ಕಳು ನನ್ನ ಮನೆಯಿಂದ ಹೊರಗೆ ಹಾಕಿದ್ರು ಹಾಕ್ತಾರೆ ಅಂತ ಬೈಕೊಂಡು ಇರೋ ಅಮ್ಮನ ಮಾತನ್ನ ಕೇಳಿಸಿಕೊಂಡು ಶ್ವೇತಾ ಅಡುಗೆ ಮನೆ ಒಳಗೆ ಬಂದು ಅಮ್ಮ ಏನಾಯ್ತು ಅಂತ ಹೀಗೆ ಏನೇನೋ ಮಾತಾಡ್ತಾ ಇದ್ದಿಯಾ ಯಾರಾದ್ರೂ ಏನಾದ್ರು ಅಂದ್ರ ನಿನ್ನ ಅಂತ ಕೇಳಿದ್ಲು. ಶ್ವೇತಾ ಮಾತಿಗೆ ಅಮ್ಮ ಮಾತಾಡ್ತಾ ಯಾರ್ ಮಾತಿಗೂ ನಾನು ಉತ್ತರ ಕೊಡಬೇಕು ಅಂತ ನನಗೆ ಏನು ಇಲ್ಲಾ. ನಿಮಗೆ ನಾನು ಮಾತಾಡಿದು ತೊಂದ್ರೆ ಅದ್ರೆ ಹೇಳಿಬಿಡಿ ಬಾಯಿ ಮುಚ್ಕೊಂಡು ಇರ್ತೀನಿ ಅದು ಇಷ್ಟ ಇಲ್ಲಾ ಅಂದ್ರೆ ಹೇಳಿಬಿಡು ಮನೆ ಬಿಟ್ಟೆ ಹೋಗಿ ಬಿಡ್ತೀನಿ ಅಂತ ಸ್ವಲ್ಪ ಕೋಪದಲ್ಲೇ ಹೇಳ್ತಾರೆ. ಶ್ವೇತಾ ಅಮ್ಮ ಏನ್ ಅಂತ ಮಾತಾಡ್ತಾ ಇದ್ದಿಯಾ ಇವಾಗ ನಾನು ಏನ್ ಕೇಳ್ದೆ ಅಂತ ಹೀಗೆಲ್ಲ ಮಾತಾಡ್ತಾ ಇದ್ದಿಯಾ ಏನಕ್ಕಮ್ಮ ಮಾತಾಡ್ತಾ ಇದ್ದಿಯಾ ಯಾರಾದ್ರೂ ಏನಾದ್ರು ಅಂದ್ರ ಅಂತ ಕೇಳ್ದೆ ಅಷ್ಟೇ, ಅಷ್ಟಕ್ಕೇ ನೀನು ಮನೆ ಬಿಟ್ಟು ಹೋಗ್ತಿನೀ ಅಂತ ಇದ್ದಿಯಾ. ನೋಡು ನನ್ನಿಂದ ಏನಾದ್ರು ತಪ್ಪಾಗಿದ್ರೆ ಹೇಳು ನಿನ್ನ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ. ಇಲ್ಲಾ ನಿನಗೆ ಸಮಾಧಾನ ಆಗೋವರೆಗೂ ಪೊರಕೆ ತಗೊಂಡು ಬಾರಿಸು ಹೊಡೆಸಿಕೊಳ್ತೀನಿ. ಅದ್ರೆ ಮನೆ ಬಿಟ್ಟು ಹೋಗ್ತೀನಿ ಅಂತ ಯಾವ ಕಾರಣಕ್ಕೂ ಹೇಳಬೇಡ ಅಂತ ಹೇಳ್ತಾಳೆ.

   ಅವಳಿಗೆ ಕೋಪ ನಿನ್ ಏನೋ ಮಾತಾಡಿದೆ ಅಂತ ಅಲ್ಲ ಅವಳ ಕೋಪ ಅವಳ ಮಗನನ್ನ ಅವನ ಇಷ್ಟದಂತೆ ಓದೋಕೆ ಬಿಡ್ತಾ ಇಲ್ಲಾ ಅವನು ಕೂಡ ನಾವು ಹೇಳೋದನ್ನೇ ಕೇಳ್ತಾ ಇದ್ದಾನೆ ಅನ್ನೋ ಕೋಪ ಅದಕ್ಕೆ ಅವಳು ಮಾತಾಡ್ತಾ ಇರೋದು ಅಂತ ಹೇಳ್ತಾ ಅಡುಗೆ ಮನೆ ಹತ್ತಿರ ಶ್ವೇತಾ ಅವರ ಅಪ್ಪ ಬರ್ತಾರೆ. ಶ್ವೇತಾ ಅಪ್ಪನ ಮಾತಿಗೆ ಅಪ್ಪ  ಆಲ್ರೆಡಿ ನಾನು ಇಂಜಿನಿಯರಿಂಗ್ ಮಾಡ್ತಾ ಇದ್ದೀನಿ ಅಲ್ವಾ ಅದಕ್ಕೆ ಅವನನ್ನ ಡಾಕ್ಟರ್ ಆಗು ಅಂತ ಹೇಳ್ತಾ ಇದ್ದೀನಿ. ಹಾಗಲಾದ್ರೂ ಅವನು ಸೈಲೆಂಟಾಗಿ ಇರೋದನ್ನ ಕಲಿತಾನೆ. ಇಲ್ಲಾ ಅಂದ್ರೆ ಇದೆ ಊರಲ್ಲಿ ಇದ್ದುಕೊಂಡು ಇಂಜಿನಿಯರಿಂಗ್ ಗೆ ಎಳ್ಳು ನೀರು ಬಿಡ್ತಾನೆ ಅಂತ ಹೇಳಿದ್ಲು. ಶ್ವೇತಾ ಮಾತಿಗೆ ಅಮ್ಮ ಮಾತಾಡ್ತಾ ನೋಡು ಅವನು ನನ್ನ ಮಗ  ಅವನು ರೋಡ್ ಅಲ್ಲಿ ಬೀದಿ ಬೀದಿಲಿ ತಿರುಗಾಡಿ ಬಂದ್ರು ಯಾವತ್ತು ಯಾರು ಕೂಡ ಬಂದು ನಿನ್ನ ಮಗ ಇಂತ ತಪ್ಪು ಕೆಲಸ ಮಾಡಿದ ಅಂತ ಆಗಲಿ ತಪ್ಪು ಕೆಲಸ ಮಾಡೋವರ ಜೊತೆಗೆ ಸೇರ್ಕೊಂಡು ಇದ್ದಾ ಅಂತ ಆಗಲಿ ಯಾರು ಬಂದು ಹೇಳಿಲ್ಲ. ಯಾಕಂದ್ರೆ ಅವನಿಗೆ ಗೊತ್ತು ಯಾವುದನ್ನ ಎಷ್ಟು ಮಾಡಬೇಕು ಎಲ್ಲಿ ಹೇಗೆ ಇರಬೇಕು ಅಂತ. ನೋಡು ನಿನ್ನ ಯಾವತ್ತು ಕೇಳಿಲ್ಲ ಫ್ಯೂಚರ್ ಅಲ್ಲಿ ನೀನು ಏನಾಗ್ತಿಯ ನಿನಗೆ ಏನ್ ಇಷ್ಟ ಅಂತ, ಯಾಕೆ ಗೊತ್ತಾ. ಈ ಪ್ರಪಂಚ ನ ನಾವು ನೋಡೋ ರೀತಿ ಬೇರೆ ನೀನು ನೋಡೋ ರೀತಿ ಬೇರೆ, ಅದಕ್ಕೆ ತಕ್ಕನಾಗೆ ನಿನ್ನ ಆಲೋಚನೆಗಳು ನಿನ್ನ ಸರಿಯಾದ ದಾರಿ ಕಡೆಗೆ ಕರ್ಕೊಂಡು ಹೋಗಿ ನಿನಗೆ ನಿನ್ ಏನಾಗಬೇಕು ಅಂತ ನಿನಗೆ ಅರ್ಥ ಮಾಡಿಸುತ್ತೆ ಅಂತ. ಅವನಿಗೆ ಕೂಡ ಅವನ ಆಲೋಚನೆ ಹೇಳೋ ಕಡೆಗೆ ಹೋಗೋಕೆ ಬಿಡಿ. ಅವನು ಫ್ಯೂಚರ್ ಅಲ್ಲಿ ಏನ್ ಆಗಬೇಕು ಅಂತ ಇದ್ದಾನೋ ಅದು ಆಗಲಿ. ನಿಮ್ಮ ಆಸೆಗಳನ್ನ ಏನಕ್ಕೆ ಅವನ ಮೇಲೆ ಹಾಕ್ತಿರಾ. ಅದು ಮಾಡು ಇದು ಮಾಡು ಅಂತ ಏನಕ್ಕೆ ಬಲವಂತ ಮಾಡ್ತೀರಾ ಅಂತ ಸ್ವಲ್ಪ ಕೋಪದಲ್ಲೇ ಕೇಳಿದ್ಲು. ಶ್ವೇತಾ ಅಪ್ಪ ಇಬ್ಬರು ಆಯಿತು ವಸುಮತಿ ಅವರೇ ನಮ್ಮದು ತಪ್ಪಾಯಿತು. ನಿನ್ನ ಮಗನಿಗೆ ಏನ್ ಇಷ್ಟಾನೋ ಅದಕ್ಕೆ ಮಾಡೋಕೆ ಹೇಳು ಅಂತ ಹೇಳಿದ್ರು. 

     ಒಳಗಡೆ ಸೀರಿಯಸ್ ಮ್ಯಾಟರ್ ನಡೀತಾ ಇದೆ ಅಂತ ಗೊತ್ತಿಲ್ಲದೇ. ಕ್ರಿಕೆಟ್ ಆಡಿಕೊಂಡು ಮನೆ ಒಳಗೆ ಬರ್ತಾ. ವಸು ಕುಡಿಯೋಕೆ ನೀರು ತಗೋ ಬಾ, ಹಾಗೇ ತಿನ್ನೋಕೆ ಏನಾದ್ರು ತಗೋ ಬಾ ಮತ್ತೆ ಮ್ಯಾಚ್ ಆಡೋಕೆ ಹೋಗಬೇಕು ಅಂತ ಹೇಳ್ತಾ  ಹುಫ್ಫ್ಫ್ ಅಂತ ಸೋಫಾ ಮೇಲೆ ಕೂತು ತಲೆ ಹಿಂದಕ್ಕೆ ಇಟ್ಟು ಕಣ್ ಮುಚ್ಚಿದೆ. 2 3 ನಿಮಿಷ ಆದ್ರು ಮನೆ ಫುಲ್ ಸೈಲೆಂಟ್ ಇದೆ ಏನಪ್ಪಾ ಇದು ಮನೇಲಿ ಯಾರು ಇಲ್ವಾ ಎಲ್ಲಾದ್ರೂ ಕಾಣೆಯಾಗಿದ್ದಾರ ಅಂತ ಕಣ್ ಬಿಟ್ಟು ನೋಡಿದೆ. ಶ್ವೇತಾ ಎದುರಿಗೆ ಕೈ ಕಟ್ಟಿ ನಿಂತಿದ್ದಾಳೆ. ಅಮ್ಮ ವಾಟರ್ ಬಾಟಲ್ ಇಡ್ಕೊಂಡು ನಿಂತಿದ್ದಾಳೆ. ಅಪ್ಪ ವಾರ್ನಿಂಗ್ ಕೊಡೊ ಲುಕ್ ಕೊಡ್ತಾ ಕೂತಿದ್ದಾರೆ. ನಾನು ಸರಿಯಾಗಿ ಕೂತ್ಕೊಂಡು ಅಮ್ಮನ ಕೈಲಿ ಇದ್ದಾ ವಾಟರ್ ಬಾಟಲ್ ನ ತೆಗೆದುಕೊಂಡು ಓಪನ್ ಮಾಡಿ ನೀರು ಕುಡಿದು, ಒಂದು ಡೀಪ್ ಬ್ರಿತ್ ತಗೊಂಡು ಏನಾಯ್ತು ವಸು ಏನಾದ್ರು ಪ್ರಾಬ್ಲಮ್ ಅ ಅಂತ ಕೇಳ್ದೆ. ನಾನು ಹಾಗೇ ಕೇಳಿದ್ದೆ ಶ್ವೇತಾ ಕೋಪ ಮಾಡಿಕೊಂಡು ನೀನು ಮುದ್ದು ಮುದ್ದು ಮಾಡಿನೇ ಅವನು ಇತರ ಆಡ್ತಾ ಇರೋದು. ಅಮ್ಮ ಮಗ ಏನಾದ್ರು ಮಾಡ್ಕೊಳ್ಳಿ ನಾಳೆ ದಿನ ಯಾರಾದ್ರೂ ನನ್ನ ಪ್ರಶ್ನೆ ಮಾಡಬೇಕು ಅವಾಗ ಹೇಳ್ತಿನಿ ಒಬ್ಬೊಬ್ಬರಿಗೂ ಅಂತ ಹೇಳಿ ಹೋಗಿ ಸೋಫಾ ಮೇಲೆ ಕುತ್ಕೊಂಡ್ಲು.  ಮ್ಯಾಟರ್ ಸೀರಿಯಸ್ ಅಂತ ಅರ್ಥ ಮಾಡಿಕೊಂಡು ಅಮ್ಮನ ಪಕ್ಕದಲ್ಲಿ ಕೂರಿಸಿಕೊಂಡು ಏನಾಯ್ತು ವಸು ಅಂತ ಕೇಳಿದೆ. 

     ಅಮ್ಮ ಮಾತಾಡ್ತಾ ನೋಡೋ ಅವರು ಇವರು ಹೇಳಿದ್ರು ಅಂತ ನಿನ್ನ ಫ್ಯೂಚರ್ ನ ನೀನು ಡಿಸೈಡ್ ಮಾಡ್ಕೋಬೇಡ. ನಿನ್ನ ಮನಸ್ಸಿಗೆ ಏನ್ ಅನ್ನಿಸುತ್ತೋ ಅದನ್ನೇ ಮಾಡು, ಯಾಕಂದ್ರೆ ನಾಳೆ ದಿನ ನಿನ್ನ ಲೈಫ್ ನಿನ್ ಆಸೆ ಪಟ್ಟಂತೆ ಇಲ್ಲಾ ಅಂತ ನಿನಗೆ ನೋವು ಇರಬಾರದು. ಫುಟ್ಬಾತ್ ಮೇಲೆ ಇರೋ ಮರದ ಕೆಳಗೆ ಮಲಗಿದ್ರು ನೆಮ್ಮದಿಯಾಗಿ ಇದ್ದೀನಿ ಅಂತ ಮನಸ್ಸಿಗೆ ಅನ್ನಿಸಬೇಕು. ಆಗಲೇ ಬದುಕಲ್ಲಿ ಒಂದು ಖುಷಿ ಇರುತ್ತೆ ಅಂತ ಹೇಳಿದ್ರು. ಅಮ್ಮ ನನ್ನ ಲೈಫ್ ಅಲ್ಲಿ ಇದುವರೆಗೂ ನಾನು ಹೀಗೆ ಇರಬೇಕು ಅಂತ ಏನು ಕನಸು ಕಟ್ಕೊಂಡು ಇಲ್ಲಾ. ನಾನ್ ಏನೇ ಮಾಡಿದ್ರು ನನ್ನ ಸಪೋರ್ಟ್ ಮಾಡಿಕೊಂಡು ಬಂದು ನನ್ನ ಇಷ್ಟು ಸಂತೋಷ ವಾಗಿ ನೋಡ್ಕೋತ ಇದ್ದಿಯಾ ನೀನು. ನಿನ್ ಹೇಳು ನಾನ್ ಏನಾಗಬೇಕು ಅಂತ ಅದೇ ಆಗ್ತೀನಿ ಅಂತ ಹೇಳ್ದೆ.  ಅಮ್ಮ ಲೋ ನಾನು ನಿನ್ನ ಕೇಳಿದ್ರೆ ನೀನು ವಾಪಸ್ಸು ನನ್ನೇ ಕೇಳ್ತಾ ಇದ್ದಿಯಾ ಅಂತ ಕೇಳಿದ್ರು. ಅಮ್ಮ ನನ್ನ ಲೈಫ್ ಬಗ್ಗೆ ನನಗಿಂತ ಚೆನ್ನಾಗಿ ಯಾರ್ ಯೋಚ್ನೆ ಮಾಡ್ತಾರೆ ಹೇಳು ನೀನೇ ಸೋ ನಿನಗೆ ಗೊತ್ತಿರುತ್ತೆ ನಾನ್ ಏನಾದ್ರೆ ಚೆನ್ನಾಗಿ ಇರ್ತೀನಿ ಅಂತ, ನಿನಗೂ ಆಸೆ ಇರುತ್ತೆ ಅಲ್ವಾ ನನ್ನ ಮಗ ಈಗೆ ಅದ್ರೆ ನೋಡೋಕೆ ನನಗೆ ತುಂಬಾ ಖುಷಿ ಆಗುತ್ತೆ ಅಂತ. ಅದಕ್ಕೆ ನಿನ್ನೆ ಕೇಳ್ತಾ ಇದ್ದೀನಿ ಹೇಳು ಅಂತ ಕೇಳ್ದೆ. ಅಮ್ಮ ಖುಷಿಯಾಗಿ ಸರಿ ಹೇಳ್ತಿನಿ ಅಂತ ಹೇಳಿದ್ರು. ಅಪ್ಪ ಅಕ್ಕ ಇಬ್ಬರು ಏನ್ ಹೇಳ್ತಾರೆ ಅಂತ ತುಂಬಾ ಕುತೂಹಲ ದಿಂದ ನೋಡಿದ್ರು. ಅಮ್ಮ ಅವರಿಬ್ಬರನ್ನು ನೋಡಿ, ಮತ್ತೆ ನನ್ನ ಕಡೆಗೆ ನೋಡಿ ಕಿವಿ ಹತ್ತಿರ ಬಂದು ಅಪ್ಪ ಅಕ್ಕ ನಿಗೆ ಕೇಳಿಸದ ಹಾಗೇ ನನ್ನ ಕಿವೀಲಿ ಅವರ ಆಸೆ ನ ಹೇಳಿದ್ರು. ನಾನು ಅಮ್ಮನ ಕಡೆಗೆ ನೋಡಿ ಅಷ್ಟೇ ತಾನೇ ವಸು. ದಿ ಗ್ರೇಟ್ ವಸುಮತಿ ಅವರ ಮಗನಾದ ನಾನು ನಿನಗೆ ಮಾತು ಕೊಡ್ತಾ ಇದ್ದೀನಿ ನಿನ್ ಆಸೆ ಪಟ್ಟಂತೆ ನಿನ್ ಹೇಳಿದ್ದು ನಾನು ಆಗ್ತೀನಿ ಅಂತ ಅಮ್ಮನ ಕೈಲಿ ಕೈ ಇಟ್ಟು ಅವರಿಗೆ ಪ್ರಾಮಿಸ್ ಮಾಡಿದೆ.  

     ಅಪ್ಪ ಮತ್ತೆ ಅಕ್ಕ ಇಬ್ರು ನಮ್ ಕಡೆಗೆ ನೋಡ್ತಾ ಏನ್ ಅದು ಅಂತ ನಮಗೂ ಸ್ವಲ್ಪ ಹೇಳ್ತೀರಾ ಅಂತ ಕೇಳಿದ್ಲು. ಅಮ್ಮ ನನ್ನಕಡೆ ನೋಡ್ತಾ ಲೋ ಯಾವುದೇ ಕಾರಣಕ್ಕೂ ಈ ವಿಷಯ ನ ಯಾರಿಗೂ ಹೇಳಬಾರ್ದು ನಮ್ಮಿಬ್ಬರಲ್ಲೇ ಇರಬೇಕು ಅಂತ ಹೇಳಿದ್ಲು. ನಾನು ಅಮ್ಮನ ಮಡಿಲಲ್ಲಿ ಮಲಗಿಕೊಂಡು ವಸು ನಿನಗಿಂತ ಹೆಚ್ಚು ಯಾರು ಇಲ್ಲಾ ನನಗೆ ನಿನ್ ಹೇಗೆ ಹೇಳ್ತೀಯೋ ಹಾಗೇ ಅಂತ ಹೇಳ್ದೆ. ಅಕ್ಕ ಅಪ್ಪನಿಗೆ ಅರ್ಥ ಆಗಿ ಬಿಡ್ತು ಇವರು ಇನ್ನ ಯಾವ ಕಾರಣಕ್ಕೂ ಹೇಳೋದಿಲ್ಲ ಅಂತ ಆಮೇಲೆ ಅವರು ಸೈಲೆಂಟ್ ಆದ್ರು. ಅಮ್ಮ ನನ್ನ ನೋಡಿ ಸರಿ ಬಾ ತಿಂಡಿ ಕೊಡ್ತೀನಿ ಅಂತ ಹೇಳಿ ಕೈ ಇಡ್ಕೊಂಡು ಕರ್ಕೊಂಡು ಅಡುಗೆ ಮನೆಗೆ ಹೋದ್ರು. ಶ್ವೇತಾ ಅಪ್ಪ ನ ಕಡೆಗೆ ನೋಡ್ತಾ ಅಪ್ಪ ಏನಪ್ಪಾ ಇದು ಮೆಡಿಸಿನ್ ಅದ್ರೆ ಸ್ವಲ್ಪ ಕಂಟ್ರೋಲ್ ಅಲ್ಲಿ ಇರ್ತಾನೆ ಅಂತ ಹೇಳಿದ್ರೆ ಅಮ್ಮ ಅದನ್ನ ಅರ್ಥ ಮಾಡಿಕೊಳ್ಳದೆ ಅವನಿಗೆ ಸಪೋರ್ಟ್ ಮಾಡ್ತಾ ಇದ್ದಾರೆ ಅಂತ ಹೇಳಿದ್ರೆ. ಅಪ್ಪ ಶ್ವೇತಾ ಕಡೆಗೆ ನೋಡ್ತಾ ಶ್ವೇತಾ  ನೀನು ಅವನಿಗೆ ಅಕ್ಕನಾಗಿ ಯೋಚ್ನೆ ಮಾಡ್ತಾ ಇದ್ದಿಯಾ ನಿಮ್ಮಮ್ಮ ಅವನಿಗೆ ತಾಯಿ ಆಗಿ ಒಳ್ಳೆ ಗೆಳತಿ ಆಗಿ, ಅವನನ್ನ ಚೆನ್ನಾಗಿ ಅರ್ಥ ಮಾಡಿಕೊಂಡು ಅವನಿಗೆ ಸಪೋರ್ಟ್ ಆಗಿ ನಿಂತಿದ್ದಾಳೆ. ನನಗು ಗೊತ್ತಾಗದ ಹಾಗೇ ಅವಳು ಅವನಿಗೆ ಅವಳ ಆಸೆ ಹೇಳಿದ್ದಾಳೆ ಅಂದ್ರೆ. ತುಂಬಾ ದೊಡ್ಡ ಕೋರಿಕೆನೆ ಕೇಳಿರ್ತಾಳೆ. ಮೆಬಿ ಅದು ನೀನು ಆಸೆ ಪಡೋದಕ್ಕಿಂತ ದೊಡ್ಡದೇ ಇರಬಹುದು. ಇನ್ನ ಅವನ ಬಗ್ಗೆ ಯೋಚ್ನೆ ಮಾಡೋದನ್ನ ಬಿಟ್ಟು ಆರಾಮಾಗಿ ಇರು ಅಂತ ಹೇಳಿ ಎದ್ದು ಹೊರಗೆ ಹೋದರು. ಶ್ವೇತಾ ಏನೋಪಾ ಅಂತ ಎದ್ದು ಅವಳ ರೂಮ್ ಗೆ ಹೋದಳು.

    ಒಂದು ವಾರ ಹಾಗೇ ಫ್ರೆಂಡ್ಸ್ ಗೇಮ್ಸ್ ಅದು ಇದು ಅಂತ ಕಳೆದು ಹೋಯ್ತು. ಅವತ್ತು ಭಾನುವಾರ ಅಮ್ಮನ ಕೈಲಿ ನಾನ್ ವೆಜ್ ಅಡುಗೆ ಮಾಡಿಸಿಕೊಂಡು ಚೆನ್ನಾಗಿ ತಿಂತ ಮನೇಲೆ ಅಮ್ಮನ ಜೊತೆಗೆ ಟೈಮ್ ಸ್ಪೆಂಡ್ ಮಾಡ್ತಾ ಇದ್ದೆ. ಶ್ವೇತಾ ನನ್ನ ನೋಡಿ ಏನೋ ಹೋಗಿಲ್ವಾ ಇವತ್ತು ಊರಿನ ಮೇಲೆ ಬಿದ್ದು ಬೀದಿ ಬೀದಿ ಅಲೆಯೋಕೆ ಅಂತ ಕೇಳಿದ್ಲು. ಅಮ್ಮ ಮಾತಾಡ್ತಾ ನಿನಗೆ ಪ್ರಾಬ್ಲಮ್ ಏನೇ ಅವನು ಹೊರಗೆ ಹೋದ್ರು ಅಂತೀಯಾ ಮನೇಲಿ ಇದ್ರು ಅಂತೀಯಾ ಒಂಟ್ನಲ್ಲಿ ಅವನನ್ನ ಏನಾದ್ರು ಒಂದು ಅನ್ನದೆ ಇದ್ರೆ ನಿನಗೆ ದಿನ ಹೋಗೋದಿಲ್ಲ ಅಲ್ವಾ ಅಂತ ಕೇಳಿದ್ರು. ಶ್ವೇತಾ ಹಲೋ ಮಿಸಸ್ ವಸುಮತಿ ಅವರೇ ಅವನು ನಿನಗೆ ಮಗ ಆಗಿರಬಹುದು ನನಗೆ ತಮ್ಮ ಸೋ ಅವನನ್ನ ಏನಾದ್ರು ಅನ್ನೋ ಅಧಿಕಾರ ನನಗು ಇದೆ ಅಂತ ಹೇಳಿದ್ಲು.  ನಾನು ಅಮ್ಮನ ಹತ್ತಿರ ವಸು ಸುಮ್ನೆ ಇರೆ ಯಾಕ್ ಚಿಕ್ ಮಕ್ಕಳ ಹತ್ತಿರ ಎಲ್ಲಾ ಜಗಳಕ್ಕೆ ನಿಂತು ನಿನ್ ಟೈಮ್ ನ ನಿನ್ನ ಅಮೂಲ್ಯವಾದ ಮಾತುಗಳನ್ನ ವೆಸ್ಟ್ ಮಾಡ್ಕೋತೀಯ ಅಂತ ಹೇಳಿ ಎದ್ದು ರೂಮ್ ಗೆ ಹೋದೆ. 

    ಮಾರನೇ ದಿನ ಬೆಳಿಗ್ಗೆ ಎದ್ದು ಶ್ವೇತಾ ಕಾಲೇಜ್ ಗೆ ರೆಡಿ ಆಗ್ತಾ ಅಮ್ಮ ನನ್ನ ಬೈಕ್ ಪ್ರಾಬ್ಲಮ್ ಆಗಿದೆ ಅವನನ್ನ ಎಬ್ಬಿಸಿ ಕಾಲೇಜ್ ಹತ್ತಿರ ಡ್ರಾಪ್ ಮಾಡೋಕೆ ಹೇಳು ಅಂತ ತಿಂಡಿ ತಿನ್ನೋಕೆ ಕುತ್ಕೊಂಡ್ಲು. ಅಮ್ಮ ಅಪ್ಪ ನ ಕಡೆಗೆ ನೋಡಿ ರೀ ಇವಳನ್ನ ಕಾಲೇಜ್ ಗೆ ಡ್ರಾಪ್ ಮಾಡಿ ನೀವು ಆಫೀಸ್ ಗೆ ಹೋಗಿ ಅಂತ ಹೇಳಿದ್ಲು. ಶ್ವೇತಾ ಅಮ್ಮ ಅಪ್ಪನಿಗೆ ಆಫೀಸ್ ಇದೆ ಅಲ್ವಾ ಅದು ಅಲ್ಲದೆ ಕಾಲೇಜ್ ಯಿಂದ ಆಫೀಸ್ ದೂರ ಆಗುತ್ತೆ. ಹೋಗಿ ಅವನನ್ನ ಬರೋಕೆ ಹೇಳು ಇಲ್ಲಾ ನಾನೆ ಹೋಗಿ ಎಳೆದುಕೊಂಡು ಬರ್ತೀನಿ ಅಂತ ಹೇಳಿದ್ಲು. ಅಮ್ಮ ಸರಿ ನೀನೇ ಹೋಗಿ ಅದ್ರೆ ಕರ್ಕೊಂಡು ಬಾ ಅಂತ ಹೇಳಿ ಅಡುಗೆ ಮನೆಗೆ ಹೋದ್ರು. ಶ್ವೇತಾ ಮಹಿ ರೂಮ್ ಗೆ ಹೋಗಿ ನೋಡ್ತಾಳೆ ಬೆಡ್ ಮೇಲೆ ಯಾರು ಇಲ್ಲಾ ಬಾತ್ರೂಮ್ ಅಲ್ಲಿ ಕೂಡ ಯಾರು ಇಲ್ಲಾ. ಶ್ವೇತಾ ರೂಮಿಂದ ಹಾಲ್ ಗೆ ಬರ್ತಾ ಅಮ್ಮ ಎಲ್ಲಿ ಅವನು ರೂಮ್ ಅಲ್ಲಿ ಇಲ್ಲಾ ಅಂತ ಕೇಳಿದ್ಲು. ಅಮ್ಮ ಅಡುಗೆ ಮನೆ ಯಿಂದ ಬರ್ತಾ ಅವನು ರೂಮ್ ಅಲ್ಲೇ ಅಲ್ಲ ಈ ಊರಲ್ಲೇ ಇಲ್ಲಾ ಅಂತ ಹೇಳಿದ್ಲು. ಅ ಮಾತಿಗೆ ಅಪ್ಪ ಮಗಳು ಇಬ್ಬರು ಶಾಕ್ ಆಗಿ ಬಿಟ್ರು. ಶ್ವೇತಾ ಮಾತಾಡ್ತಾ ಏನಮ್ಮ ಹೇಳ್ತಾ ಇದ್ದಿಯಾ ಅವನು ಈ ಊರಲ್ಲೇ ಇಲ್ವಾ ಅಂತ ಕೇಳಿದ್ಲು. ಅಪ್ಪ ಮಾತಾಡ್ತಾ ವಸು ಮಹಿ ಊರಲ್ಲೇ ಇಲ್ವಾ ಎಲ್ಲೋದ ಮತ್ತೆ ಅಂತ ಕೇಳಿದ್ರು. ರೀ ಅವನ ವಿಷಯ ನನಗೆ ಬಿಡಿ ನೀವು ಯಾರು ಅವನ ಬಗ್ಗೆ ತಲೆ ಕೆಡಸಿಕೊಳ್ಳಬೇಡಿ. ಬನ್ನಿ ತಿಂಡಿ ತಿನ್ನಿ ಅಂತ ಹೇಳಿ ಅಪ್ಪನಿಗೆ ತಿಂಡಿ ಬಡಿಸೋಕೆ ಶುರು ಮಾಡಿದ್ರು. ಶ್ವೇತಾ ಅಮ್ಮ ಏನಮ್ಮ ನೀನು ಅವನ ಬಗ್ಗೆ ತಲೆ ಕೆಡಸಿಕೊಳ್ಳ ಬೇಡಿ ಅಂತ ಹೇಳ್ತಾ ಇದ್ದಿಯಾ. ನಾನು ಅವನಿಗೆ ಅಕ್ಕ ಅವರು ಅಪ್ಪ ಹೇಗೆ ಸುಮ್ಮನೆ ಇರೋಕೆ ಆಗುತ್ತೆ ಅಂತ ಕೇಳಿದ್ಲು. ಅಮ್ಮ ಮಾತಾಡ್ತಾ ನೋಡು ಶ್ವೇತಾ ನಿನಗೆ ಅವನ ಮೇಲೆ ಎಷ್ಟು ಪ್ರೀತಿ ಇದೆ ಅಂತ ನನಗೆ ಗೊತ್ತು. ಅವನ ಬಗ್ಗೆ ನೀವೇನು ಟೆನ್ಶನ್ ಆಗಬೇಡಿ. ಬನ್ನಿ ತಿಂಡಿ ಮಾಡಿ ಅಂತ ಹೇಳಿದ್ರು. ಅಪ್ಪ ಶ್ವೇತಾ ನ ನೋಡಿ ಬಾ ಕೂತ್ಕೊಂಡು ತಿಂಡಿ ಮಾಡು ನಾನೆ ಕಾಲೇಜ್ ಗೆ ಡ್ರಾಪ್ ಮಾಡ್ತೀನಿ ಅಂತ ಹೇಳಿ ಇಬ್ಬರು ಕೂತು ತಿಂಡಿ ಮಾಡಿ ಕಾಲೇಜ್ ಕಡೆಗೆ ಹೋದ್ರು.

  ಕಾರ್ ಅಲ್ಲಿ ಹೋಗ್ತಾ ಅಪ್ಪ ಏನಪ್ಪಾ ನೀವು ಅವನು ಎಲ್ಲಿ ಹೋದ ಅಂತ ಕೇಳದೆ ನನಗೆ ಸಮಾಧಾನ ಮಾಡಿ ಕರ್ಕೊಂಡು ಬಂದ್ರಿ ಅಂತ ಕೇಳಿದ್ರೆ. ಅಪ್ಪ ಶ್ವೇತಾ ಕಡೆಗೆ ನೋಡಿ ಶ್ವೇತಾ  ನಿಮ್ಮಮ್ಮ ಏನೇ ಮಾಡಿದ್ರು ಅದಕ್ಕೆ ಒಂದು ಅರ್ಥ ಇರುತ್ತೆ, ನೀನು ಆರಾಮಾಗಿ ನಿನ್ನ ಸ್ಟಡೀಸ್ ಮೇಲೆ ಫೋಕಸ್ ಮಾಡು ಅಂತ ಹೇಳಿ ಕಾಲೇಜ್ ಹತ್ತಿರ ಡ್ರಾಪ್ ಮಾಡಿ ಆಫೀಸ್ ಕಡೆಗೆ ಹೋದ್ರು. ಶ್ವೇತಾ ಬೇಜಾರಲ್ಲೆ  ಕಾಲೇಜ್ ಒಳಗೆ ನಡ್ಕೊಂಡು ಹೋಗ್ತಾ ಇರೋವಾಗ  ಅವಳ ಫ್ರೆಂಡ್ಸ್ ಬಂದು ಶ್ವೇತಾ ಡಲ್ ಆಗಿ ಇರೋದನ್ನ ನೋಡಿ ಲೇ ಏನೇ ಆಯ್ತು ಇಷ್ಟು ಡಲ್ ಆಗಿ ಇದ್ದಿಯಾ, ಅದು ಅಲ್ಲದೆ ನಡ್ಕೊಂಡು ಬರ್ತಾ ಇದ್ದಿಯಾ ಮಹಿ ಬಂದಿಲ್ವ ಅಂತ ಕೇಳಿದ್ರು. ಇಲ್ಲಾ ಕಣೆ ಅಪ್ಪ ಬಂದು ಕಾರ್ ಅಲ್ಲಿ ಡ್ರಾಪ್ ಮಾಡಿ ಹೋದ್ರು. ಮಹಿ ಊರು ಬಿಟ್ಟು ಬೇರೆ ಎಲ್ಲೋ ಹೋಗಿದ್ದಾನೆ ಅಂತ ಹೇಳಿದ್ಲು. ಒಬ್ಬ ಫ್ರೆಂಡ್ ಮಾತಾಡ್ತಾ ಏನೇ ಹೇಳ್ತಾ ಇದ್ದಿಯಾ ಅಂತ ಕೇಳಿದಾಗ. ನಡೆದ ವಿಷಯ ಹೇಳಿದ್ಲು.. ಫ್ರೆಂಡ್ಸ್ ಅವಳಿಗೆ ಸಮಾಧಾನ ಮಾಡ್ತಾ ಕ್ಲಾಸ್ ಗೆ ಕರ್ಕೊಂಡು ಹೋದ್ರು..

***************************************