Mahi - 44 in Kannada Love Stories by S Pr books and stories PDF | ಮಹಿ - 44

The Author
Featured Books
Categories
Share

ಮಹಿ - 44

   ನಿಮಗೆ ಅನ್ನಿಸಬಹುದು ಎಲ್ಲೋ ಬೆಂಗಳೂರಲ್ಲಿ ಇದ್ದವನು  ದೆಹಲಿ ಗೆ ಬಂದು ಕಾಲೇಜ್ ಓದ್ತಾ  ಯಾರೋ ಮೂರು ದಿನದ ಪರಿಚಯಕ್ಕೆ ಅವರು ಕೇಳಿದ್ರು ಅಂತ ಅವರಿಗೋಸ್ಕರ ಏನಕ್ಕೆ ಇಷ್ಟು ಕೆಲಸ ಮಾಡ್ತಾ ಇದ್ದೀನಿ ಅಂತ, ಕಾರಣ ಇಲ್ಲದೆ ಯಾರು ಏನು ಮಾಡೋದಕ್ಕೆ ಹೋಗೋದಿಲ್ಲ, ಕಾರಣ ಇದೆ ಅದನ್ನ ಸಂದರ್ಭ ಬಂದಾಗ ಹೇಳ್ತಿನಿ. 

   ಸಂಜೆ ಕಾಲೇಜ್ ಮುಗಿದ ಮೇಲೆ ಎಲ್ಲರೂ ಫ್ಲಾಟ್ ಗೆ ಬಂದ್ವಿ. ಸೀತಾ ಪಾಯಲ್ ಮೋನಿಕಾ ಬಿಪ್ಪನ್ ಸಿಂಗ್ ಮತ್ತೆ ಹಾಸ್ಟೆಲ್ ರೂಮೇಟ್ ದೇವೀರ್, ಫ್ಲಾಟ್ ಒಳಗೆ ನೋಡಿ ಶಾಕ್ ಆದ್ರು. ಪಾಯಲ್ ಏನ್ ಮಹಿ ಮಿನಿ ಕಂಪನಿ ಓಪನ್ ಮಾಡಿದ್ದಿಯ, ಈ ಕಂಪನಿ ಹೆಸರೇನು ಅಂತ ಕೇಳಿದ್ಲು. ನಾನು ಫ್ರೆಂಡ್ಸ್ ಝೋನ್, ಅಂತ ಹೇಳ್ದೆ. ಪಾಯಲ್ ಒಳ್ಳೆ ನೇಮ್ ಅಂತ ಹೇಳಿ. ಫ್ಲಾಟ್ ಎಲ್ಲಾ ಓಡಾಡಿ ನೋಡಿ. ಮೋನಿಕಾ ವಾವ್ ಮಹಿ ಕಿಚನ್ ಇದೆ ಮಲಗೋಕೆ ಬೆಡ್ ರೂಮ್ ಇದೆ. ಕೂತ್ಕೋಳ್ಳೋಕೆ ಸೋಫಾ ಟೈಮ್ ಪಾಸ್ ಮಾಡೋಕೆ ಟಿವಿ. ಈಗಲೇ ಒಂದು ಕಂಪನಿ ಗೆ ನೀನು ಇಷ್ಟೆಲ್ಲ ಫೇಸೀಲಿಟಿ ಕೊಡ್ತಾ ಇದ್ದಿಯಾ ಅಂದ್ರೆ ನಾಳೆ ಏನಾದ್ರು ದೊಡ್ಡ ಕಂಪನಿ ಶುರು ಮಾಡಿದ್ರೆ, ಗವರ್ನಮೆಂಟ್ ಕೂಡ ಕೊಡದೆ ಇರೋ ಅಷ್ಟು ಫೇಸೀಲಿಟಿ ಕೊಡ್ತೀಯಾ ಅಂತ ಹೇಳಿ ಸೋಫಾ ಮೇಲೆ ಕುತ್ಕೊಂಡ್ಲು. ಎಲ್ಲರೂ ಸೋಫಾ ದಲ್ಲಿ ಕೂತ್ಕೊಂಡ್ರು. ಪಾಯಲ್ ಕೇಳಿದ್ಲು ಏನ್ ವರ್ಕ್ ಮಾಡಬೇಕು ಅಂತ. ನಾನು ಅವರಿಗೆ ವರ್ಕ್ ಬಗ್ಗೆ ಫುಲ್ ಹೇಳಿದೆ. ಸಿಂಗ್ ನಾನ್ ಹೇಳಿದ್ದನ್ನ ಕೇಳಿ ಮಹಿ ನಿನ್ ಹೇಳೋ ವರ್ಕ್ ನೋಡಿದ್ರೆ ತುಂಬಾ ಹಾರ್ಡ್ ಇದೆ, ಬಟ್ ನಾವು ಅಷ್ಟು ಎಕ್ಸ್ಪರ್ಟ್ ಅಲ್ಲ, ಬೈ ಮಿಸ್ಟೇಕ್ ಏನಾದ್ರು ವರ್ಕ್ ರಾಂಗ್ ಅದ್ರೆ ಪ್ರಾಬ್ಲಮ್ ಆಗುತ್ತೆ ಅಂತ ಹೇಳಿದ. ಮೋನಿಕಾ ಕೂಡ ಹೌದು ಮಹಿ ಸಿಂಗ್ ಹೇಳೋದು ಸರಿಯಾಗಿ ಇದೆ. ನಾಳೆ ದಿನ ಪ್ರಾಬ್ಲಮ್ ಅದ್ರೆ ಅಂತ ಇನ್ನು ಏನೋ ಹೇಳೋಕೆ ಬಂದ್ಲು. ನಾನು ಅವಳ ಮಾತಿಗೆ ನೋಡಿ ಫ್ರೆಂಡ್ಸ್ ಇಲ್ಲಿ ಯಾರು ಹುಟ್ಟುತ್ತಾನೆ ಎಲ್ಲಾ ಕಲಿತುಕೊಂಡು ಬರೋದಿಲ್ಲ.  ನಾವೆಲ್ಲ ಓದ್ತಾ ಇರೋದು ಇದೆ ವರ್ಕ್ ಗೆ ಅಲ್ವಾ. ಸ್ಟೆಪ್ ಬೈ ಸ್ಟೆಪ್ ಕಲಿಯೋಣ, ಪ್ರಾಬ್ಲಮ್ ನಾ ಫೇಸ್ ಮಾಡೋಣ, ಇದು ನಮ್ಮ ಕಂಪನಿ ನಮ್ಮ ಫ್ಯೂಚರ್ ಅಂತ ಹೇಳ್ದೆ. ದೇವೀರ್ ಓಕೆ ಬ್ರೋ ನಿನ್ ಹೇಳಿದ್ದು ನನಗೆ ಇಷ್ಟ ಆಯ್ತು ನಮ್ ಫ್ಯೂಚರ್ ಗೆ ಇನ್ನು ಸ್ವಲ್ಪ ಕಷ್ಟ ಬಿದ್ರೆ ನಾಳೆ ನಮ್ ಫ್ಯೂಚರ್ ಚೆನ್ನಾಗಿ ಇರುತ್ತೆ. ಪ್ರಾಬ್ಲಮ್ ಬರುತ್ತೆ ಅಂತ ಹೆಜ್ಜೆ ಹಿಂದೆ ಇಟ್ರೆ ನಾಳೆ ನಾವೆಲ್ಲ ಹೇಗೆ ಇಂಜಿನಿಯರ್ಸ್ ಆಗ್ತಿವಿ. ಸೋ ನಾನ್ ವರ್ಕ್ ಮಾಡ್ತೀನಿ ಅಂತ ಹೇಳ್ದ. 

   ಎಲ್ಲರೂ ಓಕೆ ಮಹಿ ನಿನ್ ಇಷ್ಟೆಲ್ಲಾ ಹೇಳೋವಾಗ ನಿನ್ನ ಮೇಲೆ ನಮಗೆ ನಂಬಿಕೆ ಇದೆ ನಾವು ಕೂಡ ವರ್ಕ್ ಮಾಡ್ತೀವಿ ಅಂತ ಹೇಳಿದ್ರು. ನಾನು ಎಲ್ಲರಿಗೂ ಥ್ಯಾಂಕ್ಸ್ ಹೇಳಿ, ನೋಡಿ ವರ್ಕ್ ಮಾಡೋ ವಿಷಯ ನಾ ನಿಮ್ ಮನೆಯವರಿಗೆ ಹೇಳಿ, ಯಾಕಂದ್ರೆ ಯಾರೋ ಒಬ್ರು ಏನೋ ಹೇಳೋದಕ್ಕಿಂತ ನಾವೇ ಇರೋ ನಿಜ ನಾ ಹೇಳಿದ್ರೆ ಅವರಿಗೂ ನಮ್ ಮೇಲೆ ಇನ್ನು ನಂಬಿಕೆ ಬರುತ್ತೆ ಅಂತ ಹೇಳ್ದೆ. ಬಟ್ ಈ ಕಂಪನಿ ಈ ವರ್ಕ್ ನಮ್ಮ ಮಧ್ಯ ನೇ ಇರಬೇಕು. ಕಾಲೇಜ್ ಅಲ್ಲಿ ಇರೋವಾಗ ಯಾರ್ ಹತ್ತಿರಾನೂ ಇದರ ಬಗ್ಗೆ ಮಾತಾಡಬೇಡಿ. ಏನಾದ್ರು ಮಾತಾಡಬೇಕು ಅಂತ ಇದ್ರೆ ಇಲ್ಲಿಗೆ ಬರೋಣ ಮಾತಾಡೋಣ ಅಂತ ಹೇಳ್ದೆ. ಎಲ್ಲರೂ ಸರಿ ಮಹಿ ಅಂತ ಹೇಳಿದ್ರು. ಎಲ್ಲರೂ ಕಾಫಿ ಕುಡಿದು ವರ್ಕ್ ಮಾಡೋಕೆ ಶುರು ಮಾಡಿದ್ವಿ.  ವರ್ಕ್ ಬಗ್ಗೆ ಪ್ರತಿ ಒಬ್ಬರಿಗೂ ಹೇಳ್ತಾ ಎಕ್ಸ್ಪ್ಲೈನ್ ಮಾಡ್ತಾ ಅವರಿಗೆ ಹೇಳಿ ಕೊಡ್ತಾ ಇದ್ದೆ. ರಾತ್ರಿ 830 ಆಯ್ತು. ವರ್ಕ್ ನಾ ಸ್ಟಾಪ್ ಮಾಡಿ ಫ್ಲಾಟ್ ಕ್ಲೋಸ್ ಮಾಡಿಕೊಂಡು, ಪಾರ್ಕಿಂಗ್ ಗೆ ಬಂದ್ವಿ. ಮೋನಿಕಾ ಪಾಯಲ್ ಇಬ್ಬರು ಬೈಕ್ ಅಲ್ಲಿ ಅವರ ಮನೆಗೆ ಹೋದ್ರೆ, ಬಿಪ್ಪನ್ ಅವನ ಬೈಕ್ ಅಲ್ಲಿ ಅವನ ರೂಮ್ ಗೆ ಹೋದ, ಸಿಂಗ್ ಮತ್ತೆ ದೇವೀರ್ ಬೈಕ್ ಅಲ್ಲಿ ಹಾಸ್ಟೆಲ್ ಗೆ ಹೋದ್ರು. ನಾನು ಸೀತಾ ನಾ ಕರ್ಕೊಂಡು ಬೈಕ್ ಅಲ್ಲಿ ಅವರ ಮನೆ ಕಡೆಗೆ ಹೊರಟೆ. 

     ದಾರಿಲಿ ಹೋಗ್ತಾ ಮಹಿ ಅವರೇ ಕಾಫಿ ಕುಡಿಯೋಣವ ಅಂತ ಕೇಳಿದ್ಲು. ಊಟ ಮಾಡೋ ಟೈಮ್ ಅಲ್ಲಿ ಕಾಫಿ ನಾ ಸರಿ ಅಂತ ಹೇಳಿ ಒಂದು ಕಾಫಿ ಶಾಪ್ ಹತ್ತಿರ ನಿಲ್ಲಿಸಿದೆ. ಇಬ್ರಿಗೂ ಕಾಫಿ ತಗೋ ಬಂದು ಸೀತಾ ಗೆ ಕಾಫಿ ಕೊಟ್ಟು ನಾನು ಕಾಫಿ ನಾ ಸಿಪ್ ಮಾಡ್ತಾ ಇದ್ದೆ. ಸೀತಾ ಕಾಫಿ ನಾ ಸಿಪ್ ಮಾಡಿ. ಮಹಿ ಅವರೇ ಇಷ್ಟಕ್ಕೆಲ್ಲ ದುಡ್ಡು ಯಾರು ಕೊಟ್ರು ಅಂತ ಕೇಳಿದ್ಲು.  ನಾನು ನಿಮ್ ತಾತ ಅವರು ಅಂತ ಹೇಳ್ದೆ.  ಸೀತಾ ಹೌದ ಮತ್ತೆ ತಾತ ನನಗೆ ಹೇಳೇ ಇಲ್ಲಾ ಈ ವಿಷಯ ನಾ ಅಂತ ಕೇಳಿದ್ಲು. ಹೇಳೋದು ಮರೆತಿರಬೇಕು ಬಿಡಿ ಅಂತ ಹೇಳ್ದೆ. ಅಷ್ಟ್ರಲ್ಲಿ ನನ್ನ ಮೊಬೈಲ್ ಬಿಪ್ ಸೌಂಡ್ ಮಾಡೋಕೆ ಶುರು ಮಾಡ್ತು. ನಾನು ಮೊಬೈಲ್ ತೆಗೆದು ನೋಡಿದೆ. ಸೀತಾ ಅವರ ಅಡುಗೆ ಮನೆ ಕೆಲಸದವಳ ಮೊಬೈಲ್ ಅಲ್ಲಿ ಯಾರಿಗೋ ಕಾಲ್ ಮಾಡೋ ಸೌಂಡ್. ನಾನು ಬ್ಲೂ ಟೂತ್ ನಾ ಕಿವಿಗೆ ಇಟ್ಕೊಂಡು ಅವಳು ಮಾತಾಡೋದನ್ನ ಕೇಳ್ತಾ ಇದ್ದೆ. ಸೀತಾ ನನ್ನ ನೋಡಿ ಯಾರು ಅಂತ ಕೇಳಿದ್ಲು ನಾನು ಇನ್ನೊಂದು ಬ್ಲೂ ಟೂತ್ ನಾ ಅವಳ ಕೈಗೆ ಕೊಟ್ಟು ಕೇಳು ಅಂತ ಹೇಳ್ದೆ. ಸೀತಾ ತೆಗೆದುಕೊಂಡು ಕಿವಿಗೆ ಇಟ್ಕೊಂಡು ವಾಯ್ಸ್ ಕೇಳಿ ಶಾಕ್ ಆದ್ಲು. ನನ್ನ ಕಡೆಗೆ ನೋಡಿ ಇದು ನಮ್ ಅಡುಗೆ ಕೆಲಸ ಮಾಡೋ ಬಬಿತ ಆಂಟಿ ವಾಯ್ಸ್ ಅಲ್ವಾ ಅಂತ ಅಂದ್ಲು. ನಾನು ಹೌದು ಅಂತ ಹೇಳಿ. ಕೇಳಿಸ್ಕೊ ಅಂತ ಹೇಳ್ದೆ.  ಬಬಿತ ಮನೇಲಿ ನಡಿಯೋ ಪ್ರತಿಯೊಂದು ವಿಷಯ ಯಾರ್ ಯಾವಾಗ ಬಂದ್ರು ಏನ್ ಮಾಡ್ತಾ ಇದ್ದಾರೆ ಅನ್ನೋದನ್ನ ಇನ್ನೊಬ್ಬರಿಗೆ ಹೇಳ್ತಾ ಇದ್ಲು. 10 ನಿಮಿಷ ಮಾತಾಡಿ ಕಟ್ ಮಾಡಿದ್ಲು. 

     ಸೀತಾ ಅವಳು ಹೇಳಿದನೆಲ್ಲ ಕೇಳಿಸಿಕೊಂಡು ಕೋಪದಿಂದ ನಮ್ ಮನೇಲಿ ಇದ್ದು ನಮಗೆ ನಂಬಿಕೆ ದ್ರೋಹ ಮಾಡ್ತಾಳ ಅವಳನ್ನ ಮಾತ್ರ ಸುಮ್ನೆ ಬಿಡಬಾರ್ದು ಅಂತ ಹೇಳಿದ್ಲು. ನಾನು ಸೀತಾ ನಾ ಕೂಲ್ ಮಾಡ್ತಾ ನೋಡಿ ನೀವು ಇವಾಗ ಹೇಳಿ ವಿಷಯ ದೊಡ್ಡದು ಮಾಡಿದ್ರೆ ಅವರಿಗೆ ನಷ್ಟ ಏನು ಇಲ್ಲಾ. ಅವರು ಬೇರೆ ಪ್ಲಾನ್ ಮಾಡ್ತಾರೆ. ಇನ್ನು ಅಲರ್ಟ್ ಆಗಿ ಇರ್ತಾರೆ. ಸೋ ಅದಕ್ಕೆ ನಾವು ಏನು ಗೊತ್ತಿಲದೇ ಇರೋ ರೀತಿ ಇದ್ದು ಬಿಟ್ರೆ ನಮಗೆ ಒಳ್ಳೇದು. ಯಾರಿಗೆ ಯಾವಾಗ ಹೇಗೆ ಟ್ರೀಟ್ಮೆಂಟ್ ಕೊಡಬೇಕೋ ನಾನ್ ಕೊಡ್ತೀನಿ, ನೀವೇನು ಟೆನ್ಶನ್ ಆಗಬೇಡಿ, ಈ ವಿಷಯ ನಾ ಮರೆತು ಬಿಡಿ ಅಂತ ಹೇಳ್ದೆ. ಸೀತಾ ನನ್ನ ಮಾತನ್ನ ಅರ್ಥ ಮಾಡಿಕೊಂಡು ಸರಿ ನೀವು ಹೇಳ್ತಾ ಇದ್ದೀರಾ ಅಂತ ಸುಮ್ನೆ ಇರ್ತೀನಿ ಅಂತ ಹೇಳಿದ್ಲು.    ಸರಿ ಇನ್ನೊಂದು ವಿಷಯ ಈ ಬಬಿತ ವಿಷಯ ಮತ್ತೆ ಈ ಆಫೀಸ್ ವಿಷಯ ಯಾರಿಗೂ ಹೇಳಬೇಡಿ ಅಂತ ಹೇಳ್ದೆ. ಸೀತಾ ಸರಿ ಯಾರಿಗೂ ಹೇಳಲ್ಲ ಬಟ್ ಮನೇಲಿ ಕೇಳಿದ್ರೆ ಏನ್ ಹೇಳೋದು ಅಂತ ಕೇಳಿದ್ಲು . ನಾನು ತಾತನಿಗೆ ವಿಷಯ ಹೇಳಿದ್ದೀನಿ ಸೋ ಯಾರು ಏನು ನಿಮ್ಮನ್ನ ಕೇಳೋದಿಲ್ಲ. ನೀವು ಇದರ ಬಗ್ಗೆ ಮಾತಾಡೋಕು ಹೋಗಬೇಡಿ ಅಂತ ಹೇಳ್ದೆ. ಹ್ಮ್ ಸರಿ ಅಂತ ಹೇಳಿದ್ಲು. 

    ಇಬ್ರು ಬೈಕ್ ಅಲ್ಲಿ ಸೀತಾ ಅವರ ಮನೆ ಹತ್ತಿರ ಬಂದ್ವಿ. ಗೇಟ್ ಹತ್ತಿರ ತಾತ ವಾಕಿಂಗ್ ಮಾಡ್ತಾ ಇದ್ರು. ನನ್ನ ನೋಡಿ ಮಹಿ ಬಂದ. ಹೇಗಿದ್ದೀಯ ಅಂತ ಕೇಳಿದ್ರು. ನಾನ್ ಸೂಪರ್ ತಾತ ಏನು ವಾಕಿಂಗ್ ಮಾಡ್ತಾ ಇದ್ದೀರಾ ಅಂತ ಕೇಳ್ದೆ. ಕೂತು ಕೂತು ಬೇಜಾರಾಗ್ತಾ ಇತ್ತು ಅದಕ್ಕೆ ಹಾಗೇ ಸುಮ್ನೆ ವಾಕಿಂಗ್ ಮಾಡ್ತಾ ಇದ್ದೆ.  ಬಾ ಮನೆ ಒಳಗೆ ಅಂತ ಹೇಳಿದ್ರು. ನಾನು ಬರ್ತೀನಿ ಬಿಡು ತಾತ ಇದು ಕೂಡ ನಮ್ ಮನೆನೇ ಅಲ್ವಾ. ಅದ್ರೆ ಇವಾಗ ಬರೋದಕ್ಕೆ ಆಗೋದಿಲ್ಲ ಸ್ವಲ್ಪ ವರ್ಕ್ ಇದೆ ನನಗೆ ಅಂತ ಹೇಳಿದೆ. ತಾತ ಹ್ಮ್ ಸರಿ ಸಂಡೆ ತಪ್ಪದೆ ಮನೆಗೆ ಬರಬೇಕು ಅಂತ ಹೇಳಿದ್ರು. ನಾನು ಬರ್ತೀನಿ ಅಂತ ಹೇಳಿ ತಾತ ಮತ್ತೆ ಸೀತಾ ಗೆ ಬೈ ಹೇಳಿ. ಅಲ್ಲಿಂದ ಹೊರಟು ಬರ್ತಾ ದಾರಿಲಿ ಡಿನ್ನರ್ ಪಾರ್ಸೆಲ್ ಮತ್ತೆ 2 ಬಿಯರ್ ತಗೊಂಡು ಫ್ಲಾಟ್ ಗೆ ಬಂದೆ.  ಹೋಗಿ ಫ್ರೆಷ್ ಅಪ್ ಆಗಿ ಎರಡು ಬಿಯರ್ ಜೊತೆಗೆ ಬಿರಿಯಾನಿ ತಿಂದು ಆರಾಮಾಗಿ ಬೆಡ್ ಮೇಲೆ ಮಲಗಿ ಕೊಂಡೆ.

   ದಿನಗಳು ಕಳೆಯುತ ಹೋದವು. Jvl ಗ್ರೂಪ್ ಆಫ್ ಕಂಪನಿ ಮಾಡಿದ ಕುತಂತ್ರ ಬುದ್ದಿಗೆ ಸ್ಟೆಪ್ ಬೈ ಸ್ಟೆಪ್ ಚೆಕ್ ಇಡ್ತಾ ಬಂದೆ. ಸೀತಾ ಅವರ ತಂದೆಗೆ ನನ್ನ ಮೇಲೆ ದಿನೇ ದಿನೇ ನಂಬಿಕೆ ಜಾಸ್ತಿ ಆಗ ಬಂತು. ಪ್ರಾಜೆಕ್ಟ್ ಗಳು ಬರೋಕೆ ಶುರುವಾದವು. Jvl ಕಂಪನಿ ಎಷ್ಟೇ ಪ್ರಯತ್ನ ಪಟ್ಟರು ಅವರಿಗೆ ಗೊತ್ತಾಗಲೇ ಇಲ್ಲಾ ಯಾರು ಇದೆಲ್ಲಾ ಮಾಡ್ತಾ ಇರೋದು ಅಂತ.  ಸೀತಾ ಹೋಗಿ ಬನ್ನಿ ಅಂತ ಹೇಳ್ತಾ ಇದ್ದವಳು ಹೋಗೋ ಬರೋ ಅನ್ನೋ ತನಕ ಬಂದಳು. ಕಾಲೇಜ್ ಸೆಮಿಸ್ಟರ್ ಮುಗಿತು ಎಲ್ಲರಿಗೂ ಒಳ್ಳೆ ಪರ್ಸಂಟೇಜ್ ಬಂತು. ಎಲ್ಲರೂ ಮಾಸ್ಟರ್ ಮಾಡೋಣ ಅಂತ ನಿರ್ಧಾರ ಮಾಡಿದ್ವಿ. ಸೀತಾ ಅವರ ತಂದೆ ಕಂಪನಿ ಟಾಪ್ ಕಂಪನಿಗಳಿಗೆ ಫೈಟ್ ಕೊಡೋಕೆ ಶುರು ಮಾಡಿತು. Jvl ಕಂಪನಿ ಗೆ ಹೆಲ್ಪ್ ಮಾಡ್ತಾ ಇದ್ದಾ ಅಷ್ಟು ಜನರನ್ನ ಹೊರಗೆ ಕಳಿಸಿದ್ರು. ಎಲ್ಲೆಲ್ಲಿಂದ ಬಂದವರು ನಾವು ಕ್ಲೋಸ್ ಫ್ರೆಂಡ್ಸ್ ಆದ್ವಿ. ಪಾಕೆಟ್ ಮನಿ ಗೆ ಶುರುವಾದ ಕೆಲಸ ಈಗ  ಅಕೌಂಟ್ ಅಲ್ಲಿ ಸೇವಿಂಗ್ಸ್ ಮಾಡೋ ತನಕ ಬಂತು.. ಸಿಂಗ್ ಗು ಮೋನಿಕಾ ಗೆ ಲವ್ ಶುರುವಾಗಿ ಲವರ್ಸ್ ಆದ್ರು. ಅವರ ಮನೇಲಿ ಯಾವುದೇ ಪ್ರಶ್ನೆ ಮಾಡದೇ ಒಪ್ಪಿಕೊಂಡರು. ಹಾಸ್ಟೆಲ್ ಬೇಡ ಎಲ್ಲರೂ ಒಂದೇ ಹತ್ತಿರ ಇರೋಣ ಮಾಸ್ಟರ್ ಮುಗಿಯೋ ವರೆಗೂ ಅಂತ ನಿರ್ಧಾರ ಮಾಡಿದ್ವಿ. ಅದಕೆ ತಕ್ಕ ಹಾಗೇ ಒಂದು 2 ಫ್ಲೋರ್ ಇರೋ ಮನೆ ನಾ ತೆಗೆದುಕೊಂಡು.  1st ಫ್ಲೋರ್ ನಾ ಆಫೀಸ್ ನಾ ಮಾಡ್ಕೊಂಡ್ವಿ. 2 nd ಫ್ಲೋರ್ ಅಲ್ಲಿ 3 ಬೆಡ್ರೂಮ್. ಪಾಯಲ್ ಮೋನಿಕಾ ಒಂದು ಬೆಡ್ರೂಮ್. ಸಿಂಗ್ ಮತ್ತೆ  ದೇವೀರ್ ಒಂದು ಬೆಡ್ರೂಮ್ ಅಲ್ಲಿ. ಬಿಪ್ಪನ್ ಒಂದು ಬೆಡ್ ರೂಮ್ ಅಲ್ಲಿ ನಾನ್ 1st ಫ್ಲೋರ್ ಅಲ್ಲಿ ಇರೋ ಬೆಡ್ರೂಮ್ ತಗೊಂಡೆ... ಗ್ರೌಂಡ್ ಫ್ಲೋರ್ ಅಲ್ಲಿ ಇದ್ದಾ ಬೆಡ್ ರೂಮ್ ನಾ ಗೆಸ್ಟ್ ರೂಮ್ ಆಗಿ ಮಾಡಿದ್ವಿ. ಹಾಸ್ಟೆಲ್ ಫುಡ್ ಗೆ ಫುಲ್ ಸ್ಟಾಪ್ ಇಟ್ಟು ನಾವೇ ಅಡುಗೆ ಮಾಡಿ ತಿನ್ನೋಕೆ ಶುರು ಮಾಡಿದ್ವಿ.  ಸೀತಾ ಗು ನಮ್ಮ ಜೊತೆ ನೇ ಇರೋಕೆ ಇಷ್ಟ ಅದ್ರೆ ಎಲ್ಲಿ ನಮ್ಮ ಬಗ್ಗೆ ಗೊತ್ತಾಗುತ್ತೆ ಅಂತ ನಾನೆ ಬೇಡ ಅಂತ ಹೇಳ್ದೆ.  ದಿನ ಕಾಲೇಜ್ ಹೋಗೋವಾಗ ಮನೆಗೆ ಬರೋವ್ಳು. ಒಟ್ಟಿಗೆ ಕಾಲೇಜ್ ಹೋಗ್ತಾ ಇದ್ವಿ. ರಾತ್ರಿ ಮನೆಗೆ ಕರ್ಕೊಂಡು ಹೋಗಿ ನಾನೆ ಡ್ರಾಪ್ ಮಾಡಿ ಬರ್ತಾ ಇದ್ದೆ. 

   ಒಂದು ದಿನ ಬೆಳಿಗ್ಗೆ ಸೋಫಾ ಮೇಲೆ ಕೂತು ಲ್ಯಾಪ್ಟಾಪ್ ಮುಂದೆ ಅಲ್ಲಿ ವರ್ಕ್ ಮಾಡ್ತಾ ಇದ್ದೆ. ಎಲ್ಲರೂ ಕಾಲೇಜ್ ಹೋಗಿಕೆ ರೆಡಿ ಆಗಿ ತಿಂಡಿ ತಿಂದು ನನ್ನ ನೋಡಿ ಮಹಿ ಬರೋದಿಲ್ವ ಅಂತ ಕೇಳಿದ್ರು. ಸ್ವಲ್ಪ ವರ್ಕ್ ಇದೆ ಮಧ್ಯಾಹ್ನ ಬರ್ತೀನಿ ಅಂತ ಹೇಳಿ ಕಳಿಸಿದೆ. ವರ್ಕ್ ಮಾಡ್ತಾ ಇರೋವಾಗ ಮೊಬೈಲ್ ರಿಂಗ್ ಆಯ್ತು. ನಾನು ಮೊಬೈಲ್ ಕಡೆಗೆ ನೋಡಿದೆ. ಅಮ್ಮ ಕಾಲ್. ಕಾಲ್ ಪಿಕ್ ಮಾಡಿ ಲೌಡ್ ಸ್ಪೀಕರ್ ಅಲ್ಲಿ ಇಟ್ಟು ಅಮ್ಮ  ಹೇಳು ಅಂತ ಹೇಳ್ದೆ. ಅಮ್ಮ ಕೋಪದಿಂದ ಮಾತಾಡ್ತಾ ಏನೋ ಅಪ್ಪ ಅಮ್ಮ ತಾತ ತಂಗಿ ಸಿಕ್ಕಿದ್ರು ಅಂತ ನನ್ನೇ ಮರೆತು ಬಿಟ್ಟ ಅಂತ ಕೇಳಿದ್ರು. ಅಮ್ಮ ಹಾಗೇನಿಲ್ಲ ಅಮ್ಮ ನಿನಗೆ ಗೊತ್ತು ಅಲ್ವಾ ಕಾಲೇಜ್, ವರ್ಕ್, ಮೀಟಿಂಗ್ ಅದು ಇದು ಅಂತ, ಫ್ರೀ ಸಿಗೋದೇ ಕಮ್ಮಿ, ಅದಕ್ಕೆ ಬರೋಕು ಆಗಲಿಲ್ಲ, ಕಾಲ್ ಮಾಡೋಕು ಟೈಮ್ ಸಿಗಲಿಲ್ಲ ಸಾರೀ ಅಮ್ಮ ಅಂತ ಹೇಳ್ದೆ. ಅಮ್ಮ,,, ಅಲ್ವೋ ನೀನು ಮನೆಗೆ ಬಂದು 2 ವರ್ಷ ಆಯ್ತು. ಶ್ವೇತಾ ನೋಡಿದ್ರೆ ದಿನ ನನ್ನ ಹತ್ತಿರ ಜಗಳ ಮಾಡ್ತಾ ಇದ್ದಾಳೆ, ಎಲ್ಲಿ ಕಳಿಸಿದೆ ಅವನನ್ನ, ಕಾಲ್ ಮಾಡ್ತಾ ಇಲ್ಲಾ ಮನೆಗೂ ಬರ್ತಾ ಇಲ್ಲಾ. ಅವಳು ನಿನ್ನ ನೋಡಿ 4 ವರ್ಷ ಆಯ್ತು ಕಣೋ ಪಾಪ,  ಅವಳನ್ನ ನೋಡೋಕೆ ಆಗ್ತಿಲ್ಲ.

   ಮದುವೆ ವಿಷಯ ತೆಗೆದ್ರೆ ಮೊದಲು ನಿನ್ನ ನೋಡಬೇಕು ಮಾತಾಡಬೇಕು. ನಿನ್ನ ಲೈಫ್ ನಾ ಒಂದು ದಾರಿಗೆ ತಂದು ಆಮೇಲೆ ಮದುವೆ ಅಂತ ಇದ್ದಾಳೆ. ನಿಮ್ಮಪ್ಪ ನೋಡಿದ್ರೆ ಅವನು ಬರಲಿ ಆಮೇಲೆ ಮಾತಾಡೋಣ ಅಂತ ಇದ್ದಾರೆ ಅವರಿಗೆ ಏನ್ ಹೇಳಬೇಕು ಒಂದು ಅರ್ಥ ಆಗ್ತಿಲ್ಲ ನನಗೆ ಅಂತ ಹೇಳಿದ್ರು. ಅಮ್ಮ ಇನ್ನ ಎರಡು ವರ್ಷ ಅಷ್ಟೇ ಆಮೇಲೆ ಅಲ್ಲಿಗೆ ಬರ್ತೀನಿ ಪ್ಲೀಸ್ ಅರ್ಥ ಮಾಡ್ಕೋ. ನೀನೇ ಅಲ್ವಾ ಹೋಗೋ ಅಂತ ಹೇಳಿದ್ದು ಇಲ್ಲಾ ಅಂದಿದ್ರೆ ನಾನ್ ಏನಕ್ಕೆ ಬರ್ತಾ ಇದ್ದೆ ಹೇಳು ಅಂತ ಹೇಳಿದೆ. ಅದು ಗೊತ್ತು ಕಣೋ ಅದ್ರೆ ನಿನ್ನ ಹೆತ್ತವರು ಅ ಪರಿಸ್ಥಿತಿ ಅಲ್ಲಿ ಅಷ್ಟು ಪ್ರಾಬ್ಲಮ್ ಅಲ್ಲಿ ಇರೋವಾಗ ನೋಡಿ ನೋಡಿ ಹೇಗೆ ಸುಮ್ಮನೆ ಇರಲಿ ಹೇಳು. ಅವರ ಋಣ ನನ್ನಮೇಲೆ ತುಂಬಾ ಇದೆ ಅದಕ್ಕೆ ನಿನ್ನ ಅಲ್ಲಿಗೆ ಕಳಿಸಿದೆ. ಹೇಗಿದ್ದಾರೆ ನಿನ್ನ ಅಪ್ಪ ಅಮ್ಮ, ತಂಗಿ ಹೇಗೆ ಇದ್ದಾಳೆ ಅಂತ ಕೇಳಿದ್ರು. ಎಲ್ಲರೂ ಚೆನ್ನಾಗಿ ಇದ್ದಾರೆ ಅಮ್ಮ, ಸೀತಾ ಈಗಷ್ಟೇ ಕಾಲೇಜ್ ಗೆ ಹೋದ್ಲು ಅಂತ ಹೇಳ್ದೆ. ಹೌದ ಮತ್ತೆ ನಿನ್ ಹೋಗಿಲ್ವಾ ಅಂತ ಕೇಳಿದ್ರು. ಇಲ್ಲಾ ಅಮ್ಮ ವರ್ಕ್ ಸ್ವಲ್ಪ ಇತ್ತು ಅದನ್ನ ಮುಗಿಸಿ ಹೋಗ್ತೀನಿ ಅಂತ ಹೇಳ್ದೆ. ಹೌದ ಟೈಮ್ ಸರಿಯಾಗಿ ಊಟ ಮಾಡು. ನಿಮ್ ಅಪ್ಪ ಅಮ್ಮ ನಾ ತಾತ ನಾ ನಿನ್ನ ತಂಗಿ ನಾ ಚೆನ್ನಾಗಿ ನೋಡ್ಕೋ. ಅವರಿಗೆ ಈ ವಿಷಯ ಹೇಳೋಕೆ ಹೋಗಬೇಡ. ಸಮಯ ಬಂದಾಗ ನಾನೆ ಬಂದು ಹೇಳ್ತಿನಿ ಅಂತ ಹೇಳಿದ್ರು. ಹ್ಮ್ ಸರಿ ಅಮ್ಮ ಹುಷಾರು ನೀನು ಅಂತ ಹೇಳಿ ಕಾಲ್ ಕಟ್ ಮಾಡಿ ಲ್ಯಾಪ್ಟಾಪ್ ನಾ ಕ್ಲೋಸ್ ಮಾಡಿ ನೀರು ಕುಡಿಯೋಣ ಅಂತ ಹೇಳಿ ಎದ್ದು ಕಿಚನ್ ಕಡೆಗೆ ಹೋಗೋಣ ಅಂತ ಎದ್ದು ಹೊರಟೆ. 

    ಕಿಚನ್ ಹತ್ತಿರ ಸೀತಾ ನಿಂತು ಕೊಂಡು ಇದ್ದಳು. ಅವಳನ್ನ ನೋಡಿ ಒಂದು ಕ್ಷಣ ಶಾಕ್ ಆಗಿ ಅವಳ ಮುಖ ನೋಡಿದೆ ಕಣ್ಣಲ್ಲಿ ಕಣ್ಣೀರು ತುಂಬಿ ಬರ್ತಾ ಇತ್ತು. ನಾನು ಸೀತಾ ಅಂತ ಕರೆದೆ ಅವಳಿಗೆ ಕೇಳಿಸಲಿಲ್ಲ. ಮತ್ತೆ ಜೋರಾಗಿ ಸೀತಾ ಅಂತ ಕರೆದೆ. ಆಗ ವಾಸ್ತವಕ್ಕೆ ಬಂದು ನನ್ನ ನೋಡಿ ಅಳ್ತಾ ನೀನು... ನೀನು... ನನಗೆ ಅಣ್ಣ ನಾ ಅಂತ ಕೇಳಿದ್ಲು. ನನಗೆ ಅರ್ಥ ಆಯ್ತು ಇವಳು ನಾನು ಅಮ್ಮ ಮಾತಾಡಿದ ವಿಷಯ ಕೇಳಿಸಿಕೊಂಡಳು ಅಂತ. ನಾನು ಹೌದು ಅಂತ ತಲೆ ಆಡಿಸಿದೆ. ಅವಳು ಅಣ್ಣ ಅಂತ ಹೇಳಿ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ಲು. 


****************************************


P. S.