ಸೀತಾ ಮನೆಗೆ ಹೋಗಿ ಬರೋಣ ಅಂತ ಹೇಳಿದ ಮೇಲೆ ಬೈಕ್ ಅಲ್ಲಿ ಇಬ್ಬರು ಮನೆಗೆ ಬಂದ್ವಿ. ಮನೆ ಮುಂದೆ ಕೆಲವು ಕಾರ್ ಗಳು ನಿಂತಿದ್ದವು. ನಾನು ಕಾರ್ ಗಳನ್ನ ನೋಡಿ ಸೀತಾ ಹತ್ತಿರ ಯಾರ್ದು ಅಂತ ಕೇಳ್ದೆ. ಸೀತಾ,,, ಗೊತ್ತಿಲ್ಲ ಅಣ್ಣ ಅಂತ ಹೇಳಿದ್ಲು. ನಾನು ಲೇ ಕೋತಿ ಅಪ್ಪ ಅಮ್ಮನ ಮುಂದೆ ಅಣ್ಣ ಅಂತ ಕರಿಬೇಡ ಅಂತ ಹೇಳ್ದೆ. ಸೀತಾ,,, ನಾನ್ ನೋಡ್ಕೋತೀನಿ ಬಾ ಅಣ್ಣ ಅದನ್ನೆಲ್ಲಾ ಅಂತ ಹೇಳಿದ್ಲು. ಇಬ್ರು ಬೈಕ್ ನಿಲ್ಲಿಸಿ ಮನೆ ಒಳಗೆ ಹೋಗೋಕೆ ಹೋದ್ವಿ, ಕಾರ್ ಅಲ್ಲಿ ಬಂದವರ ಪ್ರೈವೇಟ್ ಸೆಕ್ಯೂರಿಟಿ ಸೀತಾ ನಾ ಒಳಗೆ ಬಿಟ್ಟು ನನ್ನ ಮನೆ ಒಳಗೆ ಹೋಗದಂತೆ ತಡೆದ್ರು. ನನ್ನ ತಡೆದ್ರು ಅಂತ ಸೀತಾ ಕೋಪ ಮಾಡ್ಕೊಂಡು , ಪ್ರೈವೇಟ್ ಸೆಕ್ಯೂರಿಟಿ ಅವರಿಗೆ ಎ ಯಾರನ್ನ ತಡಿತಾ ಇದ್ದಿಯಾ. ಯಾವನೋ ನೀನು ನನ್ನ ಫ್ರೆಂಡ್ ನಾ ತಡಿಯೋಕೆ ಇಳಿಸೋ ಕೈ ನಾ. ಇಳಿಸೋ ಅಂತ ಸ್ವಲ್ಪ ಜೋರಾಗಿ ಹೇಳಿದ್ಲು. ಅವಳು ಹಾಗೇ ಕಿರುಚಿದಕ್ಕೆ ಅವನು ಭಯ ಬಿದ್ದು ಕೈ ಇಳಿಸಿ ಮೇಡಂ ಅದು ಒಳಗೆ ಸರ್ ಮತ್ತೆ ಅವರ ಫ್ಯಾಮಿಲಿಸ್ ಇದೆ ಅದಕ್ಕೆ ಅಂತ ಹೇಳ್ತಾನೆ. ಎ ನಿನ್ ಸರ್ ಗೆ ಸೆಕ್ಯೂರಿಟಿ ಕೊಡಬೇಕು ಅಂದ್ರೆ ಹೋಗಿ ಅವರ ಪಕ್ಕಾ ನಿಂತ್ಕೋ ಇಲ್ಲಾ ಇನ್ನು ಏನಾದ್ರು ಮಾಡು. ಅದು ಬಿಟ್ಟು ನನ್ನ ಮನೆಗೆ ಬಂದು ನನ್ನ ಫ್ರೆಂಡ್ ನೇ ತಡಿತಿಯ ಇನ್ನೊಂದು ಕ್ಷಣ ನೀವು ಯಾರಾದ್ರೂ ಈ ಮನೆ ಕಾಂಪೌಂಡ್ ಒಳಗೆ ಇದ್ದೀರಾ ಅಂದ್ರೆ. ಗನ್ ತಂದು ನಾನೆ ನಿಮ್ಮನೆಲ್ಲ ಇಲ್ಲೇ ಸುಟ್ಟು ಬಿಸಾಕ್ತಿನಿ. ಗೆಟ್ ಔಟ್ ಆಫ್ ಮೈ ಹೌಸ್ ಅಂತ ಕೋಪದಿಂದ ಹೇಳ್ತಾಳೆ. ಸೀತಾ ಕಿರುಚಾಡ್ತಾ ಇರೋದನ್ನ ಕೇಳಿ, ಮನೆ ಒಳಗೆ ಇದ್ದವರೆಲ್ಲ ಹೊರಗೆ ಬಂದು ಏನಾಯ್ತು ಅಂತ ನೋಡ್ತಾರೆ. ಸೀತಾ ಕಿರುಚಡೋದನ್ನ ನೋಡಿ ತಾತ ಸರ್ ಮತ್ತೆ ಮೇಡಂ ಮೂರು ಜನ ಬಂದು ಸೀತಾ ಏನಾಯ್ತು ಯಾಕ್ ಕಿರುಚಾಡ್ತಾ ಇದ್ದಿಯಾ ಅಂತ ಕೇಳಿದ್ರು. ಸೀತಾ ತಾತ ಇವರಿಗೆ ಎಷ್ಟು ಕೊಬ್ಬಿದ್ರೆ ಮಹಿ ನೇ ಒಳಗೆ ಬಾರದ ಹಾಗೇ ತಡಿತಾರೆ, ಕೇಳಿದ್ರೆ ಸರ್ ಫ್ಯಾಮಿಲಿ ಇದೆ ಅದಕ್ಕೆ ಅಂತ ಹೇಳ್ತಾನೆ ಅದು ನನ್ನ ಮನೆಗೆ ಬಂದು ಅಂತ ಹೇಳ್ತಾಳೆ. ತಾತ ಕೂಡ ಕೋಪ ಮಾಡಿಕೊಂಡು ಸೆಕ್ಯೂರಿಟಿ ಮೇಲೆ ಜಗಳಕ್ಕೆ ಹೋಗ್ತಾನೆ. ಸರ್ ತಾತ ನಾ ತಡೆದು ಅಪ್ಪ ಅವರಿಗೆ ಮಹಿ ಯಾರು ಅಂತ ಗೊತ್ತಿಲ್ಲ ಅದಕ್ಕೆ ತಡೆದ್ರು ಬಿಡಿ. ಅಂತ ಹೇಳಿ ಸಮಾಧಾನ ಮಾಡ್ತಾನೆ. ಸರ್ ಪಕ್ಕದಲ್ಲೇ ಇದ್ದಾ ಒಬ್ಬ ವ್ಯಕ್ತಿ ಮಾವ ಅವರಿಗೆ ಗೊತ್ತಿಲ್ಲ ಅಲ್ವಾ ಬಿಡಿ ನಾನ್ ಹೇಳ್ತಿನಿ ಅಂತ ಹೇಳ್ತಾ. ನನ್ನ ಕಡೆಗೆ ಗುರಾಯಿಸಿ ಕೊಂಡು ನೋಡ್ತಾ, ಸೆಕ್ಯೂರಿಟಿ ಕಡೆಗೆ ನೋಡಿ ನೀವು ಹೋಗಿ ಅಂತ ಹೇಳ್ತಾನೆ. ಸೆಕ್ಯೂರಿಟಿ ಅವರು ಅಲ್ಲಿಂದ ಹೊರಟು ಹೋಗ್ತಾರೆ. ಅ ವ್ಯಕ್ತಿ ಮತ್ತೆ ಸೀತಾ ಕಡೆಗೆ ನೋಡಿ ಸಾರೀ ಸೀತಾ ನಿಮ್ ಫ್ರೆಂಡ್ ಅವರಿಗೆ ಗೊತ್ತಿಲ್ಲ ಸೋ ಅದಕ್ಕೆ ಅಂತ ಹೇಳ್ತಾನೆ. ಸೀತಾ,,,ಗೊತ್ತಿಲ್ಲ ಅಂದ್ರೆ ಕೇಳಿ ತಿಳ್ಕೊಬೇಕು ಅದು ಬಿಟ್ಟು ತಡೆದ್ರೆ ನೋಡ್ಕೊಂಡು ಸುಮ್ನೆ ಇರಬೇಕಾ ಇದೆ ಲಾಸ್ಟ್ ಮಾವ ಇನ್ನೊಂದು ಸರಿ ಏನಾದ್ರು ನಿಮ್ ಸೆಕ್ಯೂರಿಟಿ ಇದೆ ತರ ಮಾಡಿದ್ರೆ ಆಮೇಲೆ ನಾನ್ ಏನ್ ಮಾಡ್ತಿನೋ ನನಗೆ ಗೊತ್ತಿಲ್ಲ ಅಂತ ಹೇಳಿ. ನನ್ನ ಕೈ ಇಡ್ಕೊಂಡು ಬಾರೋ ಅಂತ ಮನೆ ಒಳಗೆ ಕರ್ಕೊಂಡು ಹೋದ್ಲು.
ನಾನು ಹೋಗ್ತಾ ಸೀತಾ ಅವರ ಮಾವನ ಮುಖ ನೋಡಿದೆ. ಕಣ್ಣಲ್ಲಿ ಬೆಂಕಿ ಅಷ್ಟು ಕೋಪ ಇದ್ರು ಮುಖದಲ್ಲಿ ಒಂತರಾ ರಾಕ್ಷಸ ನಗು ಕಾಣಿಸ್ತಾ ಇತ್ತು. ನಾನು ಏನು ಮಾತನಾಡದೆ ಒಳಗೆ ಹೋದೆ. ಸರ್ ಅಪ್ಪ ಬಾ ಅಂತ ಸಮಾಧಾನ ಮಾಡಿ ಮನೆ ಒಳಗೆ ಕರ್ಕೊಂಡು ಬಂದ್ರು. ಒಳಗೆ ಬಂದು ನೋಡಿದೆ ಇಡೀ ಅವರ ಫ್ಯಾಮಿಲಿ ನೇ ಗ್ಯಾದರ್ ಆಗಿತ್ತು. ಸೋಫಾ ಮೇಲೆ ಕೂತಿದ್ದವರೆಲ್ಲ ನನ್ನೇ ನೋಡ್ತಾ ಇದ್ರು. ಮೇಡಂ ಒಳಗೆ ಬರ್ತಾ ಸೀತಾ ಕಾಲೇಜ್ ಗೆ ಹೋಗಿಲ್ವಾ ಅಂತ ಕೇಳಿದ್ರು. ಸೀತಾ ಇಲ್ಲಾ ಅಮ್ಮ ಇಂಪಾರ್ಟೆಂಟ್ ಕ್ಲಾಸ್ ಯಾವುದು ಇದ್ದಿಲ್ಲ. ಸುಮ್ನೆ ಏನಕ್ಕೆ ಕಾಲೇಜ್ ಅಲ್ಲಿ ಇರೋದು ಅಂತ ಹೇಗಿದ್ರು ತಾತ ಒಬ್ರೇ ಇರ್ತಾರೆ ಅಂತ ನಾನು ಮಹಿ ಬಂದ್ವಿ ಅಂತ ಹೇಳಿದ್ಲು. ಹೌದು ನೀವು ಆಫೀಸ್ ಗೆ ಹೋಗಿಲ್ವಾ ಅಂತ ಕೇಳಿದ್ಲು. ಮೇಡಂ ಹೋಗೋಣ ಅಂತ ಇದ್ವಿ. ನಿಮ್ ಮಾವ ನಿಮ್ ಚಿಕ್ಕಪ್ಪ ಬರ್ತೀವಿ ಅಂತ ಹೇಳಿದ್ರು ಅದಕ್ಕೆ ಇಲ್ಲೇ ಇದ್ದು ಬಿಟ್ವಿ ಅಂತ ಹೇಳ್ತಾ. ನನ್ನ ಕಡೆಗೆ ನೋಡಿ ಸಾರೀ ಮಹಿ ಅಂತ ಹೇಳಿದ್ರು. ನಾನು ಪರ್ವಾಗಿಲ್ಲ ಬಿಡಿ ಮೇಡಂ ಅವರೇನು ಬೇಕು ಅಂತ ಮಾಡಿದ್ರ ಗೊತ್ತಿಲ್ದೆ ಆಗಿ ಬಿಡ್ತು. ಸೆಕ್ಯೂರಿಟಿ ಅಂದಮೇಲೆ ಅವ್ರ ಕೆಲಸ ಅವರು ಮಾಡಿದ್ರು ಅಷ್ಟೇ. ಸುಮ್ನೆ ಸೀತಾ ಅವರೇ ಕೋಪ ಮಾಡ್ಕೊಂಡು ಹಾಗೆಲ್ಲ ಮಾತಾಡಿದ್ರು ಅಂತ ಹೇಳಿದೆ. ಸೀತಾ ನನ್ನ ಮಾತಿಗೆ ಕೋಪ ಮಾಡ್ಕೊಂಡು ಒಂದು ಲುಕ್ ಕೊಟ್ಟಳು. ನಾನು ಅವಳ ಕಡೆಗೆ ನೋಡಿ ಮತ್ತೆ ಮೇಡಂ ಕಡೆಗೆ ನೋಡಿ, ಮೇಡಂ ಇವರು ಅಂತ ಹೇಳಿ ಸೀತಾ ಅವರ ಮಾವ ಚಿಕ್ಕಪ್ಪ ನಾ ಕಡೆಗೆ ನೋಡಿದೆ.
ಸರ್ ಮಾತಾಡ್ತಾ ಇವರು ನನ್ನ ತಮ್ಮ ಜನಾರ್ಧನ್., ಅವರ ವೈಫ್ ಮಿಸಸ್ ಜ್ಯೋತಿ .ಮಗಳು ರಾಶಿ.ಮಗ ದಿಗಂತ್. ಇವರು ನನ್ನ ಭಾವ. ಲೋಕೇಶ್, ತಂಗಿ. ಪದ್ಮ.ಮಗಳು ಖುಷಿ. ಮಗ,ಭುವನ್. ಅಂತ ಪರಿಚಯ ಮಾಡಿಸಿ. ಅವರಿಗೆಲ್ಲ ನನ್ನ ತೋರಿಸಿ, ಇವನು ಮಹಿ ಅಂತ ನಮಗೆ ತುಂಬಾ ಬೇಕಾದ ವ್ಯಕ್ತಿ, ಸೀತಾ ಕಾಲೇಜ್ ಅಂಡ್ ಕ್ಲಾಸ್ ಫ್ರೆಂಡ್. ಜರ್ಮನಿ ಯಿಂದ ಇಲ್ಲಿಗೆ ಓದೋಕೆ ಅಂತ ಬಂದಿದ್ದಾರೆ. ತಾತ ಅವರ ಫ್ರೆಂಡ್ ಮೊಮ್ಮಗ ಅಂತ ಸುಳ್ಳು ಹೇಳಿ ಪರಿಚಯ ಮಾಡಿಸಿದ್ರು. ಮೇಡಂ ಹಾಗೇ ಹೇಳಿದ್ದನ್ನ ಕೇಳಿ ನನಗೆ ಶಾಕ್ ಆಯ್ತು ನನಗೆ ಅಲ್ಲ ತಾತ ಸೀತಾ ಸರ್ ಗು ಕೂಡ. ನಾನು ಮೇಡಂ ಕಡೆಗೆ ನೋಡಿದೆ, ಮೇಡಂ ಕಣ್ಣಲ್ಲೇ ಸನ್ನೆ ಮಾಡಿ ಕೂಲ್ ಅಂತ ಹೇಳಿದ್ರು. ಲೋಕೇಶ್ ಅವರು ಏನು ಜರ್ಮನಿ ಯಿಂದ ಇಲ್ಲಿಗೆ ಓದೋಕೆ ಬಂದ. ಯಾಕೆ ಜರ್ಮನಿ ಅಲ್ಲಿ ಇಲ್ಲಿಗಿಂತ ಬೆಸ್ಟ್ ಇಲ್ಲಿಗಿಂತ ಟಾಪ್ ಯೂನಿವರ್ಸಿಟಿ ಗಳು ಇದ್ವು ಅಲ್ವಾ ಅಂತ ಕೇಳಿದ್ರು. ನಾನು ಅವರ ಮಾತಿಗೆ ನಗ್ತಾ, ಏನ್ ಸರ್ ನೀವು ಕರ್ನಾಟಕ ದಿಂದ ದೆಹಲಿ ಗೆ ಬಂದಿದ್ದೀರಾ.ನಾನು ಜರ್ಮನಿ ಯಿಂದ ಬರಬಾರದ. ಅಂತ ರಿಟರ್ನ್ ಪಂಚ್ ಕೊಟ್ಟೆ ಅವರಿಗೆ. ಲೋಕೇಶ್ ಮತ್ತೆ ಏನು ಮಾತನಾಡದೆ ಹೋಗಿ ಸೋಫಾ ಮೇಲೆ ಕುತ್ಕೊಂಡ್ರು. ಜನಾರ್ಧನ್ ಮಾತಾಡ್ತಾ ಪರ್ವಾಗಿಲ್ಲ ಮಾತು ಚೆನ್ನಾಗಿ ಮಾತಾಡ್ತೀಯಾ ಅಂತ ಹೇಳಿ ಒಂದು ವಾರ್ನಿಂಗ್ ಲುಕ್ ಕೊಟ್ಟ. ನಾನು ಸೀನ್ ನಾ ಹೀಟ್ ಮಾಡೋದು ಬೇಡ ಅಂತ ಸೈಲೆಂಟ್ ಅದೇ.
ಲೋಕೇಶ್ ಮಾತಾಡ್ತಾ ಸೀತಾ ನಾವು ಬಂದಿದ್ದು ನಿನ್ನ ವಿಷಯ ಮಾತಾಡೋದಕ್ಕೆ ಅಂತ ಹೇಳಿದ್ರು. ಸೀತಾ ನನ್ನ ವಿಷಯ ನಾ ಅಂತ ಕೇಳಿದ್ಲು. ಅತ್ತೆ ಪದ್ಮ ಮಾತಾಡ್ತಾ ಹೌದಮ್ಮ ಸೀತಾ. ಖುಷಿ ಗೆ ಮದುವೆ ಮಾಡೋಣ ಅಂತ ಅವಳನ್ನ ಕೇಳಿದ್ರೆ ಅವಳು ಸರ್ಜನ್ ಆಗೋವರೆಗೂ ಮದುವೆ ವಿಷಯ ತೆಗಿಬೇಡಿ ಅಂತ ಹೇಳಿ ಬಿಟ್ಲು. ಈಗ ಭುವನ್ ನಿಮ್ ಮಾವನ ಕಂಪನಿ ನಾ ಟೇಕ್ ಓವರ್ ಮಾಡ್ತಾ ಇದ್ದಾನೆ, ಅವನಿಗಾದ್ರೂ ಮದುವೆ ಮಾಡೋಣ ಅಂತ ಯೋಚ್ನೆ ಮಾಡಿದಾಗ ನಿನ್ ನೆನಪಾದೆ ಅದಕ್ಕೆ ಈ ವಿಷಯ ಮಾತಾಡೋಣ ಅಂತ ಬಂದ್ವಿ ಅಂತ ಹೇಳಿದ್ರು. ಸೀತಾ ಸಾರೀ ಅತ್ತೆ ನಾನು ಆಲ್ರೆಡಿ ಒಬ್ಬ ಹುಡುಗನ್ನ ಲವ್ ಮಾಡ್ತಾ ಇದ್ದೀನಿ ಅವನನ್ನೇ ಮದುವೆ ಮಾಡ್ಕೋಬೇಕು ಅಂತ ಇದ್ದೀನಿ, ಅಪ್ಪ ಅಮ್ಮ ತಾತ ಕೂಡ ನನ್ನ ಮದುವೆ ವಿಷಯ ನಾ ನನ್ನ ಇಷ್ಟಕ್ಕೆ ಬಿಟ್ಟು ಬಿಟ್ರು. ಅದು ಅಲ್ಲದೆ ಭುವನ್ ಗು ನನಗು ಸೆಟ್ ಆಗೋದು ಇಲ್ಲಾ. ಅವನ ಆಲೋಚನೆಗಳು ಬೇರೆ ನನ್ನ ಆಲೋಚನೆಗಳು ಬೇರೆ. ದಯವಿಟ್ಟು ನನ್ನ ಕ್ಷಮಿಸಿ ಬಿಡಿ. ಹೇಗಿದ್ರು ರಾಶಿ ಕೂಡ ಅವನಿಗೆ ಮಾವನ ಮಗಳು. ಇಬ್ಬರಿಗೂ ಒಳ್ಳೆ ಜೋಡಿ ಆಗುತ್ತೆ. ಒಂದು ಸರಿ ಚಿಕ್ಕಪ್ಪ ನಾ ರಾಶಿ ನಾ ಕೇಳಿ ನೋಡಿ ಅಂತ ಹೇಳಿದ್ಲು.
ಸೀತಾ ಹಾಗೇ ರಿಟರ್ನ್ ಹೇಳಿದ್ದನ್ನ ಕೇಳಿ ಜನಾರ್ಧನ್ ಮತ್ತೆ ಲೋಕೇಶ್ ಮುಖ ಹರಳೆಣ್ಣೆ ಕುಡಿದವರ ಹಾಗೇ ಆಗಿ ಬಿಡ್ತು. ಮೇಡಂ ಕೂಡ ಫುಲ್ ಹ್ಯಾಪಿ ಆಗಿ ಬಿಟ್ರು ಅದ್ರೆ ತೋರಿಸಿ ಕೊಳ್ಳೋಕೆ ಹೋಗಲಿಲ್ಲ. ಪದ್ಮ ಅವರು ಇಲ್ಲಮ್ಮ ಅದು ವರಸೆ ಅಲ್ಲಿ ನೀನೇ ದೊಡ್ಡವಳು ಅಲ್ವಾ ಮೊದಲು ನಿನ್ನ ಕೇಳೋಣ ಅಂತ ಕೇಳಿದ್ವಿ ನಮಗೆ ರಾಶಿ ಆಲೋಚನೆ ಬರಲಿಲ್ಲ. ಅವಳನ್ನ ಕೇಳೋಕೂ ಹೋಗಿಲ್ಲ ಅಂತ ಹೇಳಿದ್ರು. ಲೋಕೇಶ್ ಪರ್ವಾಗಿಲ್ಲ ಸೀತಾ ಲವ್ ಮಾಡ್ತಾ ಇದ್ದಿಯಾ ಅಂತ ಇಷ್ಟು ಧೈರ್ಯವಾಗಿ ಹೇಳ್ತಾ ಇದ್ದಿಯಾ ಅಂದ್ರೆ ನಿನ್ನ ಮೆಚ್ಕೋಬೇಕು. ಹೌದು ನಿನ್ ಲವ್ ಮಾಡ್ತಾ ಇರೋ ಹುಡುಗ ಏನ್ ಮಾಡ್ತಾ ಇದ್ದಾನೆ ಅಂತ ಕೇಳಿದ್ರು. ಸೀತಾ,, ಮಾವ ಅವರು ಮಿಲಿಟರಿ ಅಲ್ಲಿ ವರ್ಕ್ ಮಾಡ್ತಾ ಇದ್ದಾರೆ ಅಂತ ಹೇಳಿದ್ಲು. ಜ್ಯೋತಿ ಪರ್ವಾಗಿಲ್ಲ ಸೀತಾ ದೇಶ ಸೇವೆ ಮಾಡೋವನ ಲೈಫ್ ಪಾರ್ಟ್ನರ್ ಆಗಿ ಆಯ್ಕೆ ಮಾಡ್ಕೊಂಡು ಇದ್ದಿಯಾ ದೇವ್ರು ಒಳ್ಳೇದು ಮಾಡಲಿ ಅಂತ ಹೇಳ್ತಾರೆ. ಸೀತಾ ಥ್ಯಾಂಕ್ಸ್ ಚಿಕ್ಕಮ್ಮ ಅಂತ ಹೇಳ್ತಾಳೆ.
ತಾತ ಸೀತಾ ನಾ ಕೇಳಿದ್ರಿ ಅವಳು ಇರೋ ನಿಜಾನಾ ಹೇಳಿದ್ಲು. ರಾಶಿ ಕೂಡ ಇಲ್ಲೇ ಇದ್ದಾಳೆ ಅವಳನ್ನು ಒಂದು ಮಾತು ಕೇಳಿ ನೋಡಿ ಅಂತ ಹೇಳ್ತಾರೆ. ಸರ್ ಕೂಡ ಹೌದು ಲೋಕೇಶ್ ಹೇಗಿದ್ರು ನೀವು ಇಬ್ರು ಪ್ರಾಣ ಸ್ನೇಹಿತರು. ರಾಶಿ ಒಪ್ಪಿಕೊಂಡ್ರೆ ಆದಷ್ಟು ಬೇಗ ಇಬ್ಬರಿಗೂ ಮದುವೆ ಮಾಡಿ ಮುಗಿಸೋಣ ಅಂತ ಹೇಳ್ತಾರೆ. ಲೋಕೇಶ್ ಅಯ್ಯೋ ಏನು ಬೇಡ ಬಿಡಿ ಭಾವ, ಯಾರ್ ಯಾರ್ ಮನಸಲ್ಲಿ ಏನ್ ಏನ್ ಇರುತ್ತೋ ಏನೋ. ನಾವ್ ಕೇಳೋದು ಅವರು ನಮ್ ಸ್ನೇಹ ಕ್ಕೆ ಬೆಲೆ ಕೊಟ್ಟು ಇಷ್ಟ ಇಲ್ದೆ ಇದ್ರು ಸರಿ ಅಂತ ಒಪ್ಕೊಂಡ್ರೆ. ಸುಮ್ನೆ ಇಲ್ದೆ ಇರೋ ಪ್ರಾಬ್ಲಮ್ ಆಗುತ್ತೆ ಅಂತ ಹೇಳಿದ್ರು. ಸೀತಾ ಮಾವ ಕೇಳಿದ್ರೆ ಅಲ್ವಾ ಗೊತ್ತಾಗೋದು ಅಂತ ಹೇಳಿ ಇಬ್ಬರನ್ನು ನಾನೆ ಕೇಳ್ತೀನಿ ಅಂತ ಹೇಳಿ ಇಬ್ಬರನ್ನು ಬನ್ನಿ ಅಂತ ಕರೀತಾಳೆ. ಜನಾರ್ಧನ್ ಅಯ್ಯೋ ಬೇಡ ಬಿಡಮ್ಮ ಸೀತಾ ಇಷ್ಟ ಇದ್ರೆ ಅವರೇ ಹೇಳ್ತಾ ಇದ್ರು ಅಲ್ವಾ ಅಂತ ಹೇಳ್ತಾರೆ. ತಾತ ನಿನ್ ಸುಮ್ನೆ ಇರೋ ಸೀತಾ ಕೇಳ್ತೀನಿ ಅಂತ ಹೇಳಿದ್ಲು ಅಲ್ವಾ. ಹುಡುಗರು ಅವರವರು ಮನಸು ಬಿಚ್ಚಿ ಮಾತಾಡ್ಕೋತಾರೆ ಬಿಡು ಅಂತ ಹೇಳಿ ಸೀತಾ ರಾಶಿ ಭುವನ್ ನೀವು ಹೋಗಿ ಅಂತ ಹೇಳ್ತಾರೆ.
ಸೀತಾ ಎದ್ದು ಅವರಿಬ್ಬರ ಕಡೆಗೆ ನೋಡಿ ನಿಮ್ಮನ್ನೇ ಕೇಳಿದ್ದು ಬನ್ನಿ ಅಂತ ಹೇಳ್ತಾಳೆ. ರಾಶಿ ಎದ್ದು ಸೀತಾ ಹತ್ತಿರ ಹೋಗ್ತಾಳೆ. ಭುವನ್ ಅಲ್ಲೇ ಕೂತಿರೋದನ್ನ ನೋಡಿ ಖುಷಿ ಸೀತಾ ನಾನ್ ಕರ್ಕೊಂಡು ಬರ್ತೀನಿ ನಡಿ ಅಂತ ಹೇಳಿ ಕಳಿಸ್ತಾಳೆ. ಸೀತಾ ನನ್ನ ಕಡೆಗೆ ನೋಡಿ ಮಹಿ ನಿನ್ ಕೂಡ ಬಾ ಅಂತ ಹೇಳಿ ಸ್ಟೆಪ್ಸ್ ಹತ್ತಿ ಇಬ್ಬರು ರೂಮ್ ಕಡೆಗೆ ಹೋಗ್ತಾರೆ. ಖುಷಿ. ಭುವನ್ ನಾ ನಡಿಯೋ ಅಂತ ಹೇಳಿ ಅವರ ಹಿಂದೆ ಕರ್ಕೊಂಡು ಹೋಗ್ತಾಳೆ. ಮೇಡಂ ದಿಗಂತ್ ನಿನ್ ಕೂಡ ಹೋಗಿ ಅವಳ ಮನಸಲ್ಲಿ ಏನಿದೆ ಅಂತ ಕೇಳೋಗೂ ಅಂತ ಹೇಳಿ ಕಳಿಸ್ತಾರೆ. ದಿಗಂತ್ ಕೂಡ ಹೋಗ್ತಾನೆ ಹಿಂದೇನೆ. ನಾನು ಇವರ ಮಧ್ಯ ನಾವು ಏನಕ್ಕೆ ಅಂತ ಅಲ್ಲೇ ಸುಮ್ನೆ ಕೂತಿದ್ದೆ. ಸೀತಾ ರೂಮಿಂದ ಹೊರಗೆ ಬಂದು ಮಹಿ ನಿನ್ನೆ ಕರೆದಿದ್ದು ಕೇಳಿಸಿಲ್ವಾ ಅಂತ ಕೇಳಿದ್ಲು. ಮೇಡಂ ಮಹಿ ಹೋಗು ಅಂತ ಹೇಳಿದ್ರು. ನಾನು ವಿಧಿ ಇಲ್ಲದೆ ಎದ್ದು ರೂಮ್ ಕಡೆಗೆ ಹೋದೆ.
ರೂಮ್ ಒಳಗೆ ಹೋಗ್ತಾ ಇದ್ದಾ ಹಾಗೇ ಸೀತಾ ನನ್ನ ನೋಡಿ ಬಾ ಕುತ್ಕೋ ಅಂತ ಹೇಳಿ ಬೆಡ್ ಕಡೆಗೆ ತೋರಿಸಿ. ರೂಮ್ ಡೋರ್ ಕ್ಲೋಸ್ ಮಾಡಿ. ಡೈರೆಕ್ಟ್ ಭುವನ್ ಹತ್ತಿರ ಹೋಗಿ ಅವನಿಗೆ ಬರಿಸೋಕೆ ಶುರು ಮಾಡಿದ್ಲು. ಲೋ ನೀನು ರಾಶಿ ಇಬ್ರು ಲವ್ ಮಾಡ್ತಾ ಇದ್ದೀರಾ ತಾನೇ ಮನೇಲಿ ಹೇಳೋಕೆ ಏನೋ ಕಷ್ಟ ನಿಮಗೆ ಅಂತ ಕೇಳಿದ್ಲು. ಭುವನ್ ಲೇ ನಮ್ಮಪ್ಪ ಒಂತರಾ ಮೆಂಟಲ್ ಯಾವಾಗ ಕೂಲ್ ಆಗಿ ಇರ್ತಾನೋ ಕೋಪದಲ್ಲಿ ಇರ್ತಾನೋ ಗೊತ್ತಿಲ್ಲ. ಇತ್ತೀಚಿಗೆ ಅಂತು ಯಾವಾಗ್ ನೋಡಿದ್ರು ಕೋಪದಲ್ಲೇ ಇರ್ತಾನೆ. ಇಲ್ಲಿಗೆ ಬಂದಾಗಲೇ ಸ್ವಲ್ಪ ಕೂಲ್ ಆಗಿ ಇರೋದು. ಹೋಗ್ಲಿ ಮಾವನಿಗೆ ಹೇಳೋಣ ಅಂದ್ರೆ ಇಬ್ರು ಒಂದೇ ತರ ಆಡ್ತಾರೆ. ಅದಕ್ಕೆ ಹೇಳೋಕೆ ಭಯ ಆಯ್ತು. ಇಲ್ಲಿಗೆ ಬರೋವಾಗ ಕೂಡ ಯಾಕೆ ಏನು ಅಂತ ಹೇಳಿಲ್ಲ. ಗೊತ್ತಿದ್ದಿದ್ರೆ ಬರ್ತಾನೇ ಇದ್ದಿಲ್ಲ ಅಂತ ಹೇಳಿದ. ರಾಶಿ ಕೂಡ ಹೌದು ಕಣೆ ಭುವನ್ ಹೇಳ್ತಾ ಇರೋದು ನಿಜ. ಖುಷಿ ಗೆ ಇಲ್ಲಾ ದಿಗಂತ್ ಗೆ ಹೇಳೋಣ ಅಂದ್ರೆ ಅವರು ನಮಗಿಂತ ಜಾಸ್ತಿ ಭಯ ಬೀಳ್ತಾರೆ. ಅದಕ್ಕೆ ಹೇಳೋಕೆ ಆಗಲಿಲ್ಲ ಅಂತ ಹೇಳ್ತಾಳೆ.
ಭುವನ್ ಅದು ಸರಿ ನನ್ನ ಕಡೆಗೆ ನೋಡಿ ಇವನು ಯಾರು ನಮಗೆ ಪರಿಚಯ ನೇ ಮಾಡಿಸಿಲ್ಲ ಅಂತ ಕೇಳಿದ. ಅ ಮಿಲಿಟರಿ ಬಾಯ್ಫ್ರೆಂಡ್ ಇವನೇನ ಅಂತ ಕೇಳ್ತಾನೆ. ಸೀತಾ ಲೋ ಪಾಪಿ ನಿನ್ನ ಬಾಯಿ ನಾ ಹೋಗಿ ಮೊದಲು ಕ್ಲೀನ್ ಮಾಡ್ಕೋ. ಅವನು ನನಗೆ ಬೆಸ್ಟ್ ಫ್ರೆಂಡ್ ಅಷ್ಟೇ. ನಿಮ್. ಲವ್ ಸ್ಟೋರಿ ಗೊತ್ತಿರೋದಕ್ಕೇನೆ ಬಾಯ್ಫ್ರೆಂಡ್ ಇದ್ದಾನೆ ಅಂತ ಸುಳ್ಳು ಹೇಳಿದೆ ಅಂತ ಹೇಳಿದ್ಲು. ಭುವನ್ ಸಾರೀ ಕಣೆ, ಅಂತ ಹೇಳಿ ನನ್ನ ಹತ್ತಿರ ಬಂದು ಹಾಯ್ ಬ್ರೋ ಅಂತ ಕೈ ಕೊಟ್ಟ. ನಾನು ಕೂಡ ವಿಶ್ ಮಾಡಿದೆ. ರಾಶಿ ದಿಗಂತ್ ಕೂಡ ಬಂದು ಹಾಯ್ ಮಾಡಿದ್ರು. ಖುಷಿ ಕೂಡ ಬಂದು ಹಾಯ್ ಅಂತ ವಿಶ್ ಮಾಡಿದ್ಲು.
ಭುವನ್. ಸೀತಾ ಕಡೆಗೆ ನೋಡಿ ಲೇ ನೀನೇ ಇವಾಗ ಹೇಳಿ ಒಪ್ಪಿಸಬೇಕು ಅಂತ ಹೇಳಿದ. ಸರಿ ನಾನ್ ಒಪ್ಪಿಸ್ತಿನಿ ಅಂತ ಹೇಳಿ ಬಂದು ನನ್ನ ಪಕ್ಕ ಕುತ್ಕೊಂಡ್ಲು. ನಾನು ಸೀತಾ ಕಡೆಗೆ ನೋಡಿ ವಿಷಯ ಮೊದಲೇ ಗೊತ್ತಿತ್ತು ಅಲ್ವಾ ಮತ್ತೆ ನನ್ನ ಏನಕ್ಕೆ ಮೇಲೆ ಬರೋಕೆ ಹೇಳ್ದೆ ಅಂತ ಕೇಳ್ದೆ. ಸೀತಾ ನನ್ನ ಮುಖ ನೋಡಿ ನಗ್ತಾ ಸುಮ್ನೆ ಅಂತ ಹೇಳಿದ್ಲು. ಸರಿ ನನಗೆ ಕೆಲಸ ಇದೆ ನಾನ್ ಹೋಗ್ತೀನಿ ಅಂತ ಹೇಳಿ ಎದ್ದು ರೂಮ್ ಡೋರ್ ಓಪನ್ ಮಾಡಿಕೊಂಡು ಹಾಲ್ ಗೆ ಬಂದೆ. ಮೇಡಂ ನನ್ನ ಕಡೆಗೆ ನೋಡಿ ಮಹಿ ಅವರಿಬ್ಬರೂ ಏನ್ ಹೇಳಿದ್ರು ಅಂತ ಕೇಳಿದ್ರು. ನಾನು ಮೇಡಂ ಕಡೆಗೆ ನೋಡಿ. ಇಬ್ರು ಲವ್ ಮಾಡ್ತಾ ಇದ್ದಾರೆ ಮೇಡಂ. ಬಟ್ ಇವರ ತಂದೆ ತಾಯಿ ಮನಸಲ್ಲಿ ಏನಿದೆ ಅಂತ ಅವರಿಗೆ ಗೊತ್ತಿಲ್ಲ. ಅವರು ಹೇಳೋಕೆ ಭಯ ಬಿದ್ರು. ಎಲ್ಲಿ ನಮ್ಮಿಂದ. ಸ್ನೇಹ, ಸಂಬಂಧ ದೂರ ಆಗುತ್ತೆ ಅನ್ನೋ ಭಯಕ್ಕೆ ಯಾರಿಗೂ ಹೇಳಿಲ್ಲ. ಈಗ್ಲೂ ಅವರು ನಿಮಗೆ ಹೇಗೆ ಹೇಳೋದು ಅಂತ ಯೋಚ್ನೆ ಮಾಡ್ತಾ ಇದ್ದಾರೆ. ನಿಮಗೆ ಇಷ್ಟ ಇದ್ರೆ ಅವರಿಬ್ಬರಿಗೂ ಮದುವೆ ಮಾಡಿಸಿ. ಇಲ್ಲಾ ಅಂದ್ರೆ ಬಿಟ್ಟು ಬಿಡಿ. ನೀವುಗಳು ಯಾರನ್ನ ತೋರಿಸಿ ಮದುವೆ ಮಾಡ್ಕೋ ಅಂತ ಹೇಳಿದ್ರು ಅವರಿಬ್ಬರೂ ಸರಿ ಅಂತ ಹೇಳಿ ಮದುವೆ ಮಾಡ್ಕೋತಾರೆ ಅಂತ ಹೇಳಿದೆ. ತಾತ ನೋಡಿದ್ರ ಅವರ ಮನಸಲ್ಲಿ ಪ್ರೀತಿ ಇದ್ರು ನಿಮಗೆ ಹೇಳೋಕೆ ಭಯ ಬೀಳ್ತಾ ಇದ್ದಾರೆ. ಅವರ ತಾತ ಆಗಿ ಅವರ ಮದುವೆಗೆ ನಾನ್ ಒಪ್ಕೋತಾ ಇದ್ದೀನಿ ಅಂತ ಹೇಳ್ತಾರೆ. ಲೋಕೇಶ್ ನಮಗೆ ಹೇಳಿದ್ರೆ ಗೊತ್ತಾಗಿರೋದು ಹೇಳಿಲ್ಲ ಅದಕ್ಕೆ ಈ ರೀತಿ ನಿರ್ಧಾರ ಮಾಡಿದ್ವಿ. ಮಕ್ಕಳ ಇಷ್ಟನೇ ನಮ್ ಇಷ್ಟ ನಮಗೂ ಒಪ್ಪಿಗೆ ಇದೆ ಅಂತ ಹೇಳಿದ್ರು. ಜನಾರ್ಧನ್ ಕೂಡ ನನಗು ಇಷ್ಟ ಅಂತ ಹೇಳಿದ್ರು.
ಸ್ವಲ್ಪ ಸಮಯದ ನಂತರ ಎಲ್ಲರೂ ರೂಮಿಂದ ಹೊರಗಡೆ ಬಂದು ಹಾಲ್ ಗೆ ಬಂದ್ರು. ಸೀತಾ ಎಲ್ಲರನ್ನು ನೋಡ್ತಾ ಅದು ಅವರಿಬ್ಬರಿಗೂ ಮದುವೆ ಮಾಡಿಕೊಳ್ಳೋಕೆ ಇಷ್ಟ ಇದೆ ಅಂತ ಹೇಳಿದ್ಲು. ತಾತ ಈ ವಿಷಯ ನಾ ಮಹಿ ಬಂದು ಎಲ್ಲರಿಗೂ ಹೇಳಿದ್ದು ಆಯ್ತು ಮನೆಯವರೆಲ್ಲ ನಿಮ್ ಮದುವೆಗೆ ಒಪ್ಪಿಕೊಂಡಿದ್ದು ಆಯ್ತು. ಅಂತ ಹೇಳಿದ್ರು. ಭುವನ್ ರಾಶಿ ಗೆ ಫುಲ್ ಖುಷಿ ಆಯ್ತು. ಸೀತಾ ಮನಸಲ್ಲೇ ಎಷ್ಟೇ ಆದ್ರು ಈ ಮನೆಗೆ ದೊಡ್ಡ ಮಗ ಅಲ್ವಾ ಹೇಳಿದ್ದನ್ನ ಒಪ್ಕೋಬೇಕು ಇಲ್ಲಾ ಒಪ್ಕೋಳ್ಳೋ ಹಾಗೇ ಮಾಡ್ತಾನೆ ಅಂತ ಅನ್ಕೊಂಡು. ತಾತ ಮಹಿ ಎಲ್ಲಿ ಹೋದ ಅಂತ ಕೇಳಿದ್ಲು. ತಾತ ಕೆಲಸ ಇದೆ ಅಂತ ಹೊರಟು ಹೋದ ಅಂತ ಹೇಳಿದ್ರು.
****************************************