ಬಯಸದೆ ಬಂದವಳು...

(30)
  • 63
  • 0
  • 24k

ಎಲ್ಲರಿಗೂ ನಮಸ್ಕಾರ ,ನಾನು ಬರೆಯುವ ಈ ಕಥೆ ಕೇವಲ ಕಾಲ್ಪನಿಕ ಯಾವುದೇ ವಿಷಯ,ವ್ಯಕ್ತಿ,ಸ್ಥಳಕ್ಕೆ ಸಂಬದ್ದಿಸಿದ್ದಾಗಿರುವುದಿಲ್ಲ ಇದು ನನ್ನ ಮೊದಲ ಕಥೆ ತಪ್ಪಿದಲ್ಲಿ ಕ್ಷಮಿಸಿ, ಈಗ ಕಥೆ ಪ್ರಾರಂಭಿಸೋಣ ಈ ಕಥೆಯು ತುಂಬು ಕುಟುಂಬದ್ದಾಗಿದೆ ಇಲ್ಲಿ ಹಲವಾರು ಪಾತ್ರದಾರಿಗಳು ಬರುತ್ತಾರೆ ಸಂದರ್ಭಕ್ಕೆ ತಕ್ಕಂತೆ ನೋಡುತ್ತಾ ಹೋಗೋಣ ಆದರೆ ಈ ಕಥೆಯ ಕೆಲವು ಪ್ರಮುಖ ಪಾತ್ರದಾರಿಗಳನ್ನು ಪರಿಚಯಿಸುತ್ತೇನೆ ಕಥೆಯ ನಾಯಕ "ಜೆಕೆ" (ಜಯ ಕಾರ್ತಿಕ್) ಇಡೀ ಕಾಲೇಜನ ಹುಡುಗಿಯರು ಇವನ ಫ್ಯಾನ್ಸ್ ಅಷ್ಟು ಸುಂದರವಾಗಿರುವ ಇವನು. ಅವನ ಸೊಗಸಾದ ದೇಹ, ಉನ್ನತ ಹೈಟ್, ತೀಕ್ಷ್ಣ ಮೂಗು, ಮತ್ತು ಆಕರ್ಷಕ ಕಣ್ಣುಗಳು ಯಾವ ಹೀರೊಗಳಿಗಿಂತ ಏನೂ ಕಡಿಮೆ ಇಲ್ಲ. ಇಡೀ ಕಾಲೇಜಿನ ಹುಡುಗಿಯರ ಹೃದಯ ಗೆದ್ದಿರುವ ಅವನ ಈ ಬಾಹ್ಯ ಸೌಂದರ್ಯವೇ ಅಲ್ಲ, ಅವನ ವ್ಯಕ್ತಿತ್ವವೇ ಮತ್ತಷ್ಟು ಗಮನ ಸೆಳೆಯುತ್ತದೆ.ಅವನು ಸ್ವಲ್ಪ ಕೋಪಿಷ್ಠನಾಗಿದ್ದರೂ, ಎಲ್ಲರ ಬಗ್ಗೆ ಕಾಳಜಿಯುಳ್ಳವನು. ಆತ್ಮೀಯತೆಯಿಂದ ಇತರರಿಗೆ ಸಹಾಯ ಮಾಡುವ ಗುಣಗಳು ಅವನನ್ನು ಇನ್ನಷ್ಟು ವಿಶೇಷವಾಗಿಸುತ್ತವೆ.

1

ಬಯಸದೆ ಬಂದವಳು... - 1

ಎಲ್ಲರಿಗೂ ನಮಸ್ಕಾರ ,ನಾನು ಬರೆಯುವ ಈ ಕಥೆ ಕೇವಲ ಕಾಲ್ಪನಿಕ ಯಾವುದೇ ವಿಷಯ,ವ್ಯಕ್ತಿ,ಸ್ಥಳಕ್ಕೆ ಸಂಬದ್ದಿಸಿದ್ದಾಗಿರುವುದಿಲ್ಲ ಇದು ನನ್ನ ಮೊದಲ ಕಥೆ ತಪ್ಪಿದಲ್ಲಿ ಕ್ಷಮಿಸಿ, ಈಗ ಕಥೆ ಕಥೆಯು ತುಂಬು ಕುಟುಂಬದ್ದಾಗಿದೆ ಇಲ್ಲಿ ಹಲವಾರು ಪಾತ್ರದಾರಿಗಳು ಬರುತ್ತಾರೆ ಸಂದರ್ಭಕ್ಕೆ ತಕ್ಕಂತೆ ನೋಡುತ್ತಾ ಹೋಗೋಣ ಆದರೆ ಈ ಕಥೆಯ ಕೆಲವು ಪ್ರಮುಖ ಪಾತ್ರದಾರಿಗಳನ್ನು ಪರಿಚಯಿಸುತ್ತೇನೆ ಕಥೆಯ ನಾಯಕ ಜೆಕೆ (ಜಯ ಕಾರ್ತಿಕ್) ಇಡೀ ಕಾಲೇಜನ ಹುಡುಗಿಯರು ಇವನ ಫ್ಯಾನ್ಸ್ ಅಷ್ಟು ಸುಂದರವಾಗಿರುವ ಇವನು. ಅವನ ಸೊಗಸಾದ ದೇಹ, ಉನ್ನತ ಹೈಟ್, ತೀಕ್ಷ್ಣ ಮೂಗು, ಮತ್ತು ಆಕರ್ಷಕ ಕಣ್ಣುಗಳು ಯಾವ ಹೀರೊಗಳಿಗಿಂತ ಏನೂ ಕಡಿಮೆ ಇಲ್ಲ. ಇಡೀ ಕಾಲೇಜಿನ ಹುಡುಗಿಯರ ಹೃದಯ ಗೆದ್ದಿರುವ ಅವನ ಈ ಬಾಹ್ಯ ಸೌಂದರ್ಯವೇ ಅಲ್ಲ, ಅವನ ವ್ಯಕ್ತಿತ್ವವೇ ಮತ್ತಷ್ಟು ಗಮನ ಸೆಳೆಯುತ್ತದೆ.ಅವನು ಸ್ವಲ್ಪ ಕೋಪಿಷ್ಠನಾಗಿದ್ದರೂ, ಎಲ್ಲರ ಬಗ್ಗೆ ಕಾಳಜಿಯುಳ್ಳವನು. ಆತ್ಮೀಯತೆಯಿಂದ ಇತರರಿಗೆ ಸಹಾಯ ಮಾಡುವ ಗುಣಗಳು ಅವನನ್ನು ಇನ್ನಷ್ಟು ವಿಶೇಷವಾಗಿಸುತ್ತವೆ. ತುಂಬು ಕುಟುಂಬದಲ್ಲಿ ಬೆಳೆದ ಇವನು ಕುಟುಂಬದ ಮಹತ್ವ ...Read More

2

ಬಯಸದೆ ಬಂದವಳು... - 2

ಈ ಕಡೆ ಕಾಲೇಜಿನಿಂದ ಸೂರ್ಯ ಪ್ರವೀಣ್ ನ ಮನೆಗೆ ಬಿಟ್ಟು ತಾನು ಮನೆ ಕಡೆ ಹೊರಡ್ತಾನೆ ಮನೆ ಒಳಗೆ ಎಂಟ್ರಿ ಆಗುತಿದ್ದಹಾಗೆ ಅಡುಗೆ ಮನೆಯಲ್ಲಿ ಗುಸು ಮಾತನಾಡುವ ಶಬ್ದ ಕೇಳಿ ಅಮ್ಮ.. ಅಮ್ಮ.. ಅಂತ ಸೂರ್ಯ ಅಡುಗೆ ಮನೆ ಕಡೆಗೆ ಹೋಗುತ್ತಾನೆ ಅಲ್ಲಿ ಜೆಕೆ ಮತ್ತು ಮಹತಿ ಮಾತಾಡ್ತಾಇರುತ್ತಾರೆಸೂರ್ಯ: ಜೆಕೆ ನೀನು ಇಲ್ಲೇ ಇದಿಯಾ ?( ಸುಮತಿ ಸೂರ್ಯನ ತಾಯಿ ಅಂದರೆ ಜೆಕೆಗೆ ಸಂಬಂಧದಲ್ಲಿ ಅತ್ತೆ ಆಗಬೇಕು ಸುಮತಿಗೆ ಜೆಕೆ ಎಂದರೆ ಪ್ರಾಣ ಚಿಕ್ಕ ವಯಸ್ಸಿನಿಂದಲೂ ಅವನನ್ನು ತನ್ನ ಮಗನಿಗಿಂತ ಹೆಚ್ಚು ಪ್ರೀತಿಯನ್ನು ಇವನ ಮೇಲೆ ತೋರಿಸುತ್ತಿದ್ದರು ಅಷ್ಟು ಪ್ರೀತಿಯನ್ನು ಮಾಡುವ ಸುಮತಿ ಜೆಕೆಗು ಅಷ್ಟೆ ,ಸುಮತಿ ಅತ್ತೆ ಅಂದರೆ ತುಂಬಾ ಇಷ್ಟ ಇಬ್ಬರೂ ಯಾವಾಗ್ಲೂ ಫ್ರೆಂಡ್ಸ್ ತರ ಇರುತ್ತಾರೆ ಜೆಕೆ ಸುಮತಿ ಅತ್ತೆ ಇಂದ ಯಾವುದೇ ವಿಷಯವನ್ನು ಕೂಡ ಮುಚ್ಚಿಡುವನಲ್ಲ ಎಲ್ಲವನ್ನೂ ಹೇಳಿಬಿಡುತ್ತಾನೆ ಆಗಲೇ ಅವನಿಗೆ ಸಮಾಧಾನ)ಸೂರ್ಯ : ಅಮ್ಮ..ಜೆಕೆ ಇವತ್ತು ಎನ್ ಮಾಡ್ದ ಗೊತ್ತಾ ಸುಮತಿ ...Read More

3

ಬಯಸದೆ ಬಂದವಳು... - 3

ಅಧ್ಯಾಯ 3 : ಕುಟುಂಬದ ಪರಿಚಯಸೂರ್ಯನ ಮನೆಯಿಂದ ಹೊರಟು ಜೆಕೆತಮ್ಮ ಮನೆಗೆ ಬರುತ್ತಾನೆ ಒಳಗೆ ಬರುತ್ತಿದ್ದ ಹಾಗೆ ಮೆಲ್ಲಣೆಯ ಹೆಜ್ಜೆ ಹಾಕುತ್ತಾ ಅಮ್ಮ.. ಅಮ್ಮ.. ಅಂತ ಬರುವಷ್ಟರಲ್ಲಿ ಜೆಕೆಯ ಅಪ್ಪ ಎದುರಿಗೆ ಬರುತ್ತಾರೆ ( ಈಗ ಜೆಕೆ ಯ ಕುಟುಂಬದ ಬಗ್ಗೆ ಹೇಳುವುದಾದರೆ "ಲಕ್ಷ್ಮಿ" (ಲಕ್ಕಿ) ಇವರೆ ಈ ಮನೆಯ ಹಿರಿಯ ವ್ಯಕ್ತಿ , ಲಕ್ಷ್ಮಿ ಅಜ್ಜಿಗೆ 3 ಗಂಡು ಮಕ್ಕಳು ಹಾಗೆ ಒಬ್ಬಳು ಹೆಣ್ಣು ಮಗಳು ಮೊದಲನೆಯ ಮಗ "ಶಶಿಧರ" ಎರಡನೆಯ ಮಗ "ಸುಧಾಕರ್" ಮತ್ತು ಮೂರನೇ ಮಗ "ಕೇಶವ" ಹಾಗೆ ಕೊನೆ ಮಗಳೇ "ಸುಮತಿ". ಜೆಕೆ ಯ ದೊಡಪ್ಪ ಶಶಿಧರ್ ಇವರ ಹೆಂಡತಿ "ಕಮಲಾ" ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಭುವನ್&ಮಂಜು , ಭುವ ನ ಹೆಂಡತಿ ಹೆಸರು "ಸೌಮ್ಯ" ಹಾಗೆ ಇವರಿಗೆ ಒಂದು ಗಂಡು ಮಗು "ಮೋಕ್ಷಿತ್" ಭುವನ್ ವೃತ್ತಿಯಲ್ಲಿ ವೈದ್ಯನಾಗಿರುತ್ತಾನೆ ಹಾಗೆ ಎರಡನೆಯ ಮಗ "ಮಂಜು" ವೃತ್ತಿಯಲ್ಲಿ ಸೈನಿಕ ಇವನ ಹೆಂಡತಿ "ವೃಂದಾ" ...Read More

4

ಬಯಸದೆ ಬಂದವಳು... - 4

ಇನ್ನೂ ಈ ಕಡೆ ಸ್ವಾತಿ, ತನ್ನ ರೂಮ್ ನಲ್ಲಿ ಬೆಡ್ ಮೇಲೆ ಒಬ್ಬಳೆ ಯೋಚನೆ ಯೋಚನೆ ಮಾಡ್ತಾ ಕುಳಿತಿರುತ್ತಾಳೆ, ಅಲ್ಲ ನಾನು ಅಂತ ವಿಷಯ ಏನು ಅಂತ ಜೆಕೆ ನನ್ನ ಮೇಲೆ ಕೋಪ ಮಾಡ್ಕೊಂಡ ಇಷ್ಟು ವರ್ಷದಲ್ಲಿ ಅವನಿಗೆ ಎಷ್ಟುಸಲ ಕಾಡಿಸಿದಿನಿ ಲೆಕ್ಕನೆ ಇಲ್ಲ ತುಂಬಾ ಸಲ ಅವನ್ ಮೇಲೆ ನಾನೇ ಕೋಪ ಮಾಡಿಕೊಂಡರು ನನ್ನ ಮೇಲೆ ಅವನು ಒಂದ್ಸಲನು ರೇಗಿಲ್ಲ ಕೋಪ ಮಾಡಿಕೊಂಡಿಲ್ಲ ಆದರೆ ಈ ಚಿಕ್ಕ ವಿಷಯಕ್ಕೆ ನನ್ನ ಮೇಲೆ ಆತರ ಕೋಪ ಮಾಡಿಕೊಂಡಿದಾನಲ್ಲ ಅಂತ ಯೋಚನೆ ಮಾಡುತ್ತಾ ಇರುವಾಗ ಅಷ್ಟರಲ್ಲೇ ಸ್ವಾತಿಯ ಅಪ್ಪ ಶಿವು ರೂಮ್ ನಾ ಮೆಲ್ಲಗೆ ತೆಗೆದು ಒಳಗೆ ಬರ್ತಾನೆ " ಪುಟ್ಟ ಯಾಕೋ ಊಟ ಮಾಡಿಲ್ವಂತೆ ನಿಮ್ಮ ಅಮ್ಮ ಹೇಳಿದ್ಲು ಏನಾಯ್ತೋ ಕಂದ "ಅಪ್ಪ... ಅಂತ ಗಟ್ಟಿಯಾಗಿ ತಬ್ಬಿಕೊಂಡು ಅಪ್ಪನ ತೋಳುಗಳಲ್ಲಿ ಒರಗಿ, ಕಾಲೇಜ್ ಅಲ್ಲಿ ನಡೆದ ವಿಷಯವನ್ನೆಲ್ಲ ಹೇಳುತ್ತಾಳೆ "ನನ್ ಮೇಲೆ ಜೆಕೆ ತುಂಬಾ ಕೋಪ ಮಾಡಿಕೊಂಡಿದ್ದಾನೆ ನೋಡದ ಒಂದ್ ...Read More

5

ಬಯಸದೆ ಬಂದವಳು... - 5

ಸ್ವಾತಿ ಜೆಕೆ ರೂಮಿನಿಂದ ನಿಧಾನವಾಗಿ ಕೆಳಗೆ ಬರುತ್ತಾಳೆ. ಇನ್ನೂ ಬೆಳಗಿನ ಜಾಸ್ತಿಯೇ ಇದ್ದರೂ ಮನೆ ತುಂಬಾ ಚಲನೆಯ ಆಲಾಪ. ಕಿಚನ್‌ನಲ್ಲಿ ಚಂದ್ರಿಕಾ, ಕಮಲ, ಯಶೋಧಾ, ಹಾಗೂ ಸೊಸೆಯಂದಿರು ರಮ್ಯಾ, ಸೌಮ್ಯಾ, ವೃಂದಾ—ಎಲ್ಲರೂ ಟಿಫನ್ ಗೆ ರೆಡಿ ಮಾಡ್ತೀರ್ತಾರೆಚಂದ್ರಿಕಾ ( ಮುಗುಳ್ನಗೆ ಬೀರುತ್ತಾ ): "ಸ್ವಾತಿ ಟಿಫನ್ ಮಾಡು ಬಾ ಕಂದ" ,ಯಶೋಧ : "ಸ್ವಾತಿ ಜೆಕೆ ಇನ್ನು ಡಲ್ಆಗಿಯೇ ಇದಾನಾ" ?ಸ್ವಾತಿ :" ಇಲ್ಲ ಆಂಟಿ ಅವನು ಈಗ ಫರ್ಫೆಕ್ಟ್" ಯಶೋಧಾ :" ಸದ್ಯ.. ಈಗಲಾದರೂ ಸರಿ ಹೋದನಲ್ಲ"ಆಗ ಕಮಲ : "ಅಲ್ಲ ನಿನ್ನೆ ಯಾಕೆ ಅವನು ಹಾಗೆ ಆಡ್ತಿದ್ದ" ಚಂದ್ರಿಕಾ : "ನಿನ್ನೆ ಪಾಪ ನಮ್ಮ ಜೆಕೆ ಮುಖಾನೇ ನೋಡೋಕೆ ಆಗ್ತಾ ಇದ್ದಿದಿಲ್ಲ"ಆಗ ಲಕ್ಕಿ ಅಜ್ಜಿ ಮೆಲ್ಲನೆ ಮೆಟ್ಟಿಲುಗಳನ್ನು ಇಳಿಯುತ್ತಾ ಅಡುಗೆ ಮನೆಕಡೆ ಬರುತ್ತಾರೆಲಕ್ಕಿ :" ಸ್ವಾತಿ ಇದ್ದರೆ ಜೆಕೆ ಸರಿಯಾಗೇ ಇರ್ತಾನೆ ಅಲ್ವಾ ಸ್ವಾತಿ"ರಮ್ಯಾ( ಮಾಧವ್ ನ ಹೆಂಡತಿ): "ಅಜ್ಜಿ ಎನ್ ಹೇಳ್ತಾ ಇದ್ದೀರಾ?" ಹಾಗೆ ಎಲ್ಲರೂ ...Read More

6

ಬಯಸದೆ ಬಂದವಳು... - 6

ಅಧ್ಯಾಯ 6 : "ಅವಳ ನೆನಪುಗಳ ಕೋಣೆಯ ರಹಸ್ಯ"ಸೂರ್ಯ : ಆಲ್ವೋ annuval day ಗೆ ಇನ್ನು ಒಂದೇ ದಿನ ಭಾಕಿ ಇದೆ ನೀನು ಇನ್ನೂ ಲೆಟರ್ ಬರಿಯೋದ್ರಲ್ಲೇ ಇದಿಯಾ ನಾನು ನಿನಗೆ ಹೇಳಿ ಎಷ್ಟು ದಿನ ಆಯ್ತು... ಅಲ್ಲ ಈಗಿನ ಹುಡುಗುರು ಯಾರ್ ಲವ್ ಲೆಟರ್ ಕೋಡ್ತಾರೆ ಎಲ್ಲರೂ ಡೈರೆಕ್ಟ್ ಹೋಗಿ ಡೇಟಿಂಗ್ ಅದು ಇದು ಅಂತ ಎಷ್ಟು ಫಾರ್ವರ್ಡ್ ಆಗಿರ್ತಾರೆ ನೀನು ಯಾಕೆ ಡೈರೆಕ್ಟ್ ಡೆಟಿಂಗ್ ಮಾಡೋಕೆ ಕೇಳಬಾರ್ದು ಅಲ್ವಾ ಏನಂತಿಯಾ?ಜೆಕೆ: ಎಲ್ಲಾ ಹೂಡಗುರು ಒಂದೇ ರೀತಿ ಯೋಚನೆ ಮಾಡಲ್ಲ ಕೆಲವರು ಲೈಫ್ ನಾ ಎಂಜಾಯ್ ಮಾಡ್ಬೇಕು ಅಂತಾ ಸುಮ್ನೇ ಟೈಮ್ ಪಾಸ್ ಗೆ ಲವ್ ಮಾಡ್ತಾರೆ ಇನ್ನು ಕೆಲವರು ಅವರು ಪ್ರೀತಿ ಮಾಡೋರ ಜೊತೆ ಇಡೀ ಜೀವನ ಕಳಿಬೇಕು ಅಂತಾ ಲವ್ ಮಾಡ್ತಾರೆ, ನಾನು 2nd ಕೆಟಗರಿ ನನ್ನ ಪ್ರೀತಿ ಮಾಡೊ ಹುಡಗಿ ಜೋತೆ ನನ್ನ ಇಡೀ ಲೈಫ್ ನಾ ಅವಳೊಂದಿಗೆ ಕಳಿಯಬೇಕು ಅಂತ ...Read More

7

ಬಯಸದೆ ಬಂದವಳು... - 7

ಅಧ್ಯಾಯ 7: " ಸಡಗರದ ನಡೆಯಲ್ಲಿ ಪ್ರೀತಿಯ ತುಂಟ ಹೆಜ್ಜೆ"ಆವತ್ತು ಅನ್ಯುವಲ್ ಡೇ ಯ ದಿನ ಜೆಕೆ ಸ್ನಾನ ಮಾಡಿ ಕನ್ನಡಿಯ ಮುಂದೆ ನಿಂತು ರೆಡಿ ಇರ್ತಾನೆ ade ಸಮಯಕ್ಕೆ ಲಕ್ಕಿ ಅಜ್ಜಿ ಜೆಕೆ ರೂಮ್ ಗೆ ಬರ್ತಾಳೆಲಕ್ಕಿ : "ನನ್ನ ಮೊಮ್ಮಗ ಎನ್ ಮಾಡ್ತಿದ್ದಾನೆ?"ಜೆಕೆ : "ಹೇ.. ಮೈ ಡಾರ್ಲಿಂಗ್ ಅಂತ ಲಕ್ಕಿ ಅಜ್ಜಿಯ ಹಣೆಗೆ ಪ್ರೀತಿಯ ಮುತ್ತನ್ನೀಡುತ್ತಾನೆ, ನಾನು ಇವತ್ತು ಎಷ್ಟು ಕುಷಿಯಾಗಿದೀನಿ ಗೊತ್ತಾ ಇವತ್ತು ನನಗೆ ತುಂಬಾ ಇಂಪಾರ್ಟೆಂಟ್ ಡೇ ಡಾರ್ಲಿಂಗ್ ಅಂತಾ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ"( ಜೆಕೆ ಲಕ್ಕಿ ಯನ್ನೂ ಪ್ರೀತಿಯಿಂದ ಡಾರ್ಲಿಂಗ್ ಅಂತಲೂ ಕರಿಯುತ್ತಾನೆ)ಲಕ್ಕಿ :" ಏನೋ ಮೊಮ್ಮಗನ್ನೇ ಈ ರೇಂಜ್ ಗೆ ಉತ್ಸಾಹದಲ್ಲಿ ಇದಿಯಾ ಸ್ವಲ್ಪ ತಾಳ್ಮೆ ತಗೊಳೋ ಎಲ್ಲಾ ಪ್ರಿಪರೇಷನ್ ಕುಡಾ ಕರೆಕ್ಟ್ ಆಗಿ ಮಾಡಿದಿಯ ತಾನೇ"ಜೆಕೆ : "ಅಜ್ಜಿ.. actually ತುಂಬಾ ನರ್ವಸ್ ಆಗ್ತಿದ್ದೀನಿ ಆದರೆ ತೋರಸ್ಗೋತಿಲ್ಲ ಅಷ್ಟೆ"ಲಕ್ಕಿ :" ಏನು ಹೆದರ್ಕೋಬೇಡ ಮೊಮ್ಮಗ್ನೇ ನಿನ್ನ ಜೊತೆ ನಾವಿದಿವಿ, ದೈರ್ಯವಾಗಿ ...Read More

8

ಬಯಸದೆ ಬಂದವಳು... - 8

ಅಧ್ಯಾಯ 8 : "ಹೃದಯದಿಂದ ಬಂದ ಯೋಜನೆ"ಜೆಕೆ, ಕಾರ್ತಿಕ್, ಪ್ರವೀಣ್ ಮತ್ತು ಸೂರ್ಯ ಕಾಲೇಜು ಪ್ರವೇಶಿಸುತ್ತಿದ್ದರು. ಸುತ್ತೆಲ್ಲಾ ವಾರ್ಷಿಕೋತ್ಸವದ ಹುರುಪಿನ ತಂಗಾಳಿ. ಆ ವೇಳೆ ಇವರ ಸುರೇಶ್ ಧಾವಿಸುತ್ತಾ ಬಂದು, ಗಂಭೀರ ಮುಖದಿಂದ ಕೇಳಿದನು."ಯಾಕ್ರೋ ಇಷ್ಟು ಲೇಟ್ ಮಾಡಿದ್ರಿ? ಜೆಕೆ, ನಿನ್ನನ್ನ ಪ್ರಿನ್ಸಿಪಾಲ್ ಕರೀತಾ ಇದ್ರು!"ಜೆಕೆ ಶಾಂತವಾಗಿ ಒಂದು ನೋಟ ಹರಿಸಿ, ನಗುತ್ತಾ ಉತ್ತರಿಸಿದನು, "ಓಕೆ, ನಾನು ಹೋಗಿ ಕೇಳ್ತೀನಿ. ಸೂರ್ಯ, ನೀನು ಪ್ರೋಗ್ರಾಂ ಹ್ಯಾಂಡಲ್ ಮಾಡು. ನೀವು ರಿಹರ್ಸಲ್ ಎಲ್ಲ ಹೇಗಿದೆ ಅಂತಾ ಚೆಕ್ ಮಾಡ್ಕೋ. ನಾನು ಪ್ರಿನ್ಸಿಪಾಲ್ ರೂಮ್ ಗೆ ಹೋಗಿ ಬರ್ತೀನಿ."ಅಂತು, ಆತ ಪ್ರಿನ್ಸಿಪಾಲ್ ರೂಮ್ ಕಡೆ ಹೆಜ್ಜೆ ಇಟ್ಟ. ಹತ್ತಿರ ಬಂದು ತೆರೆದ ಬಾಗಿಲಿಗೆ ಹೆಜ್ಜೆ ಇಟ್ಟು, ಶಿಸ್ತಾಗಿ ಕೇಳಿದನು:"May I come in, Sir?"ಪ್ರಿನ್ಸಿಪಾಲ್ ಗಂಭೀರ ನೋಟದಿಂದ ತಲೆಊಗಿಸಿ ಹೇಳಿದರು, "Come in, ಜಯ ಕಾರ್ತಿಕ್."ಜೆಕೆ ಕೊಂಚ ಗಂಭೀರವಾಗಿ ಹೆಜ್ಜೆ ಹಾಕಿ ಒಳಗೆ ಹೋದನು."ಸರ್, ನೀವು ನನಗೆ ಬರೋಕೆ ಹೇಳಿದ್ರಿ ಅಂತೆ. ನಾವು ...Read More

9

ಬಯಸದೆ ಬಂದವಳು... - 9

ಅಧ್ಯಾಯ 9 : " ನಗುವಿನ ಹಿಂದೆ ನಾಟಕ"ಪೂರ್ವಿಯು ತಾನು ಮಾಡಿದ ಪ್ಲಾನ್ ಎಲ್ಲವನ್ನೂ ರಾಜೇಶ್ ಗೆ ಹೇಳುತ್ತಾಳೆರಾಜೇಶ್ ಆಶ್ಚರ್ಯಚಕಿತನಾಗಿ ಇದು ನೀನೆನಾ? ನಾನು ನಿನ್ನ ಸೈಲೆಂಟ್ ಹುಡಗಿ ಅನ್ಕೊಂಡಿದ್ದೆ ನೀನು ತುಂಬಾ ಡೆಂಜರ್ ಇದ್ದೀಯಾ ಮಾರಾಯ್ತಿ ಇರಲಿ ನಾನು ನಿನಗೆ ಹೆಲ್ಪ್ ಮಾಡ್ತೀನಿ, ಆದರೆ ಇದರಿಂದ ನಂಗೆ ಏನು ಪ್ರಾಬ್ಲಮ್ ಆಗಲ್ಲ ತಾನೇ ? ಪೂರ್ವಿಯ ಮುಖದಲ್ಲಿ ಗಂಭೀರತೆಯನ್ನು ಹೊತ್ತು ಯಾವ ಪ್ರಾಬ್ಲಮ್ ಆಗೋದಿಲ್ಲ,ನೀನು ಯಾವ ಟೆನ್ಷನ್ ಮಾಡ್ಕೋಬೇಡ ಓಕೆರಾಜೇಶ್ : "ಇದರಿಂದ ನಂಗೆ ಯಾವ ಲಾಭನು ಇಲ್"ಲ"ಪೂರ್ವಿಯು ಸಮಾಧಾನದಿಂದ ನಾನು ನಿನಗೆ ಒಂದು ಲಕ್ಷ ಕೊಡ್ತೀನಿ ನೀನು ನಿಮ್ಮ ಫ್ರೆಂಡ್ಸ್ ಎಲ್ಲಾ ಹಂಚ್ಕೊಳ್ಳಿ ಓಕೆ ನಾ"?..ರಾಜೇಶ್ ಅದನ್ನ ಕೇಳಿ ಫುಲ್ ಶಾಕ್ "ಏನು ಒಂದು ಲಕ್ಷ ನಂಗೆ ಗೊತ್ತು ನೀನು ತಮಾಷೆ ಮಾಡ್ತಿದೀಯ, ಇಸ್ಟೊಂದು ದುಡ್ಡು ಓ ಮೈ ಗಾಡ್"ಪೂರ್ವಿ : "ಇನ್ನೂ ಕೆಲಸ ಕರೆಕ್ಟ್ ಆಗಿ ಮಾಡಿದ್ರೆ ಇನ್ನು ಜಾಸ್ತಿ ಕೊಡ್ತೀನಿ "ರಾಜೇಶ್ ಅವಳು ಹೇಳಿದ ...Read More

10

ಬಯಸದೆ ಬಂದವಳು... - 10

ಅಧ್ಯಾಯ 10 : "ಒಬ್ಬನ ಬಣ್ಣ ಮತ್ತೊಬ್ಬಳ ಮಾಯೆ "ಸ್ವಲ್ಪ ಸಮಯದ ನಂತರ ಎಲ್ಲರೂ ಬ್ಲ್ಯಾಕ್ ಅಕಾಡಮಿಕ್ ಗೌನ್ ಅನ್ನು ಹಾಕಿಕೊಂಡು ಬ್ಯಾಚುಲರ್ ಆಫ್ ಡಿಗ್ರಿ B.E ಸರ್ಟಿಫಿಕೆಟ್ ತೆಗೆದುಕೊಳ್ಳುತ್ತಾರೆ ಅದಾದ ನಂತರ ಎಲ್ಲ ಪ್ರೊಫೆಸರ್ಗಳು , ಪ್ರಿನ್ಸಿಪಾಲ್,ಸ್ಟೂಡೆಂಟ್ಸ್ ಎಲ್ಲರೂ ಸೇರಿ ಗ್ರೂಪ್ ಆಫ್ ಫೋಟೊ ಸೆಷನ್ ಅನ್ನು ಮುಗಿಸಿಕೊಳ್ಳುತ್ತಾರೆಹಾಗೆ ಸ್ವಲ್ಪ ಸಮಯ ಎಲ್ಲರೂ ಫ್ರೆಂಡ್ಸ್ ಗಳೊಂದಿಗೆ ಪ್ರೊಫೆಸೆರ್ಸಗಳೊಂದಿಗೆ ತಬ್ಬಿಕೊಳ್ಳುವುದರ ಮೂಲಕ ವಿದಾಯವನ್ನು ಹೇಳುತ್ತಿರುತ್ತಾರೆ"ಕಾರ್ತಿಕ್ ಮೊಗದಲ್ಲಿ ಒಂದು ಮಂದಹಾಸ ಫೈನಲಿ ನಾವೆಲ್ಲರೂ ಎಂಜಿನರಿಂಗ್ ನಾ ಮುಗಿಸಿದ್ವಿ ಅಲ್ಲವೇನ್ರೋ ""ಸೂರ್ಯ ನು ಒಂದು ಸಣ್ಣದಾದ ನಗುವೊಂದಿಗೆ ಹೌದು ಕಣ್ರೋ ಮೊದಮೊದಲು ಯಾವಾಗದ್ರು ಕಾಲೇಜ್ ಮುಗಿಯುತ್ತೋ ಅಂತಾ ಅನಸ್ತಿತ್ತು ಈಗ ನೋಡಿ ಮುಗದೆ ಹೋಯ್ತು ಪಾಪ ನಮ್ಮ ಪ್ರಿನ್ಸಿಪಾಲ್ ಮತ್ತೆ ಪ್ರೊಫೆಸರ್ಸ್ ನಾ ತುಂಬಾ ಗೋಳು ಹೋಯ್ಕೊಂದ್ವಿ",ಜೆಕೆ :" ಇನ್ಮೇಲೆ ಇಡೀ ಕಾಲೇಜ್ ಅಲ್ಲಿ ಎಲ್ಲಿನೋಡಿದರು ನಮ್ಮ ನೆನಪುಗಳಷ್ಟೇ""ಅಷ್ಟರಲ್ಲಿ ಜೂನಿಯರ್ಸ್ ಹುಡುಗ,ಹುಡುಗಿಯರೆಲ್ಲರು ಜೆಕೆ ಹತ್ರ ಬರ್ತಾರೆ ಅದರಲ್ಲಿ ಒಬ್ಬ ಬ್ರೋ ನೀವು ನಮಗೆಲ್ಲ ...Read More

11

ಬಯಸದೆ ಬಂದವಳು... - 11

ಅಧ್ಯಾಯ 11 : "ಸುಳ್ಳಿನ ನಟನೆ ಬಯಲಾದಾಗ"ಪೂರ್ವಿ ಬಯದಲ್ಲಿ ರಾಜೇಶ್ ಮುಖವನ್ನೇ ನೋಡಿದಾಗ ರಾಜೇಶ್ ಮುಗುಳ್ನಗೆ ಬೀರುತ್ತಾನೆಪೂರ್ವಿ : "ಇವನಿಗೇನಾದ್ರು ತಲೆ ಕೆಟ್ಟಿದಿಯ ಸಿಕ್ಕಿ ಹಾಕೊಳ್ತೀವಿ ಭಯಾನೇ ಇಲ್ಲ , ಅದರಲ್ಲಿ ಈ ಹರ್ಷಾ ಬೇರೆ ನನ್ನ ಬೆಸ್ಟ್ ಫ್ರೆಂಡ್ ಅನ್ಕೊಂಡು ಓಡಾಡ್ತಾಳೆ ಆದರೆ ನಂಗೆ ಹೆಲ್ಪ್ ಮಾಡು ಅಂದ್ರೆ ಆಗಲ್ಲ ಅಂತಾ ನನ್ನ ಒಬ್ಬಂಟಿ ಮಾಡಿ ಹೋಗಿದ್ದಾಳೆ ಛೇ!.. ನಾನು ಎನ್ ಮಾಡ್ಲಿ ಈಗ ಎಲ್ಲ ಪ್ಲಾನ್ ಉಲ್ಟಾ ಹೊಡಿಯೋತರ ಇದೆಯಲ್ಲ ಅಂತ ಮನಸಲ್ಲಿ ಅಂದುಕೊಳ್ತೀರ್ತಾಳೆ"ಪ್ರಿನ್ಸಿಪಾಲ್ : "ಸರಿ ಬನ್ನಿ ಹೋಗೋಣ ಆದರೆ ಎಲ್ಲರೂ ಬರೋ ಅವಶ್ಯಕತೆ ಇಲ್ಲ ನಾವು ಹೋಗಿ ನೋಡ್ತೀವಿ" ಅಂದಾಗ ರಾಜೇಶ್ ಟೀಮ್ ಕಡೆ ಇರುವ ಒಬ್ಬ ಹುಡುಗ ಅದೆಂಗೆ ಆಗತ್ತೆ ಸರ್ ನಾವು ಎನ್ ಆಗಿದೆ ಅಂತಾ ತಿಳಿದುಕೊಳ್ಳಲೇ ಬೇಕು ಯಾರಿಗೆ ಗೊತ್ತು ನಾವು ಇಲ್ಲದೆ ಇರಬೇಕಾದರೆ ಅಲ್ಲಿ ಏನು ನಡಿಯುತ್ತೋ ಅಂತ ಅಂತಾ ಅಂದಾಗ ಎಲ್ಲಾ ಹುಡುಗರು ನಾವು ಬರ್ತೀವಿ ಅಂತಾ ...Read More

12

ಬಯಸದೆ ಬಂದವಳು... - 12

ಅಧ್ಯಾಯ 12 : "ಗಾಳಿಯಲ್ಲಿ ಕಳೆದುಹೋದ ಮಾತುಗಳು"ಇನ್ನು ಈ ಕಡೆ ಅಲ್ರೇಡಿ ತುಂಬಾ ಲೇಟ್ ಆಗಿರೋದ್ರಿಂದ ಪ್ರವೀಣ್ : "ಇವತ್ತು ಆ ಪೂರ್ವಿ ಇಂದ ಎಲ್ಲಾ ಆಗೋಯ್ತು"ಆಗ ಸ್ವಾತಿ ಕುತೂಹಲದಿಂದ ಅವನತ್ತ ನೋಡಿದಳು,"ಲೇಟ್ ಆಗೋಯ್ತಾ ಏನಕ್ಕೆ? ಈಗ ನಾವು ಮನೆಗೆ ತಾನೇ ಹೋಗ್ತಿರೋದು ಆರಾಮಾಗಿ ಹೋಗಿ ರೆಸ್ಟ್ ಮಾಡು"ಪ್ರವೀಣ್ ನಗುವನ್ನು ತಡೆಯುತ್ತಾ "ಅಯ್ಯೋ ಸ್ವಾತಿ ಇವತ್ತು ಜೆಕೆ ನಿಂಗೆ"... ಅಷ್ಟರಲ್ಲಿ ಜೆಕೆ ಗಾಬರಿಗೊಂಡು ಹೇ! ಪವಿಕಾರ್ತಿಕ್ಪ್ರವೀಣ್ ಕಡೆ ನೋಟವನ್ನು ಹಾಯಿಸುತ್ತಾ "ಸ್ಪಲ್ಪ ಸುಮ್ನೆ ಇರೋ ಮಾರಾಯ".."ಸ್ವಾತಿ ಇವತ್ತು ಕಾಲೇಜಿನಲ್ಲಿ ಅನ್ಯುಯಲ್ ಡೇ ಏನೋ ಮುಗೀತು ಅದೆ ಅದೆ ಋಷಿಗೆ ಅಂತಾ ನಾವು ನಾಲ್ಕು ಜನ ಸೇರಿ ಇಲ್ಲೇ ಹತ್ರ ಇರೋ ಗ್ರೀನ್ ಹೌಸ್ ರೆಸಾರ್ಟ್ ಅಲ್ಲಿ ಸೆಲೆಬ್ರೇಷನ್ ಮಾಡ್ಬೇಕು ಅಂತಾ ಪ್ಲಾನ್ ಮಾಡಿದ್ವಿ".."ಅದು?? ಹೇ.. ಸೂರ್ಯ ನಂಗೆ ಮುಂದೆ ಎನ್ ಹೇಳ್ಬೇಕು ಗೊತ್ತಾಗ್ತಿಲ್ಲ ನೀನೇ ಏನಾದ್ರೂ ಹೇಳೊ ಅಂತ ಅವನ ಕಿವಿ ಹತ್ರ ಬಂದು ಗುನುಗುತ್ತಾನೆ""ಅವಾಗ ಸೂರ್ಯ ತುಸು ನಕ್ಕು, ...Read More

13

ಬಯಸದೆ ಬಂದವಳು... - 13

ಅಧ್ಯಾಯ 13 : "ನಿಶಬ್ಧ ಸಂಕೇತಗಳು "ಸ್ವಾತಿ ನಾ ಮನೆಗೆ ಡ್ರಾಪ್ ಮಾಡಿ ಜೆಕೆ ಕಾರ್ತಿಕ್ ರೂಮ್ ಗೆ ಬರುತ್ತಿದ್ದ ಹಾಗೆ ಅಲ್ಲೇ ಇರುವ ಚೇರ್ ಮೌನವಾಗಿ ಕುಳಿತುಕೊಳ್ತಾನೆ... ಆಗಸೂರ್ಯ ತನ್ನ ಬೇಜಾರನ್ನು ಅವನ ಮುಂದೆ ಹೊರಹಾಕುತ್ತಾನೆ "ಜೆಕೆ ಯಾಕೆ ನೀನು ಹೀಗೆ ಮಾಡ್ದೆ ಪ್ರೊಪೋಸ್ ಮಾಡಿದ್ರೆ ಅವಳ ಮನಸಲ್ಲಿ ಏನಿದೆ ಅನ್ನೋದು ಗೊತ್ತಾಗ್ತಿತ್ತು ತಾನೇ... ಈ ದಿನಕೋಸ್ಕರ ಎಷ್ಟೋ ದಿನದಿಂದ ಕಾಯ್ತಿದ್ದೇ ಅಲ್ವಾ ನಂಗಂತೂ ನೀನು ಮಾಡಿದ್ದು ಸ್ವಲ್ಪನೂ ಇಷ್ಟಾ ಆಗಲಿಲ್ಲ"...( ಕಾರ್ತಿಕ್ ಪಾರ್ಕ್ ಅಲ್ಲಿ ನಡೆದಿರೋ ವಿಷಯ ನಾ ಸೂರ್ಯ ಮತ್ತೆ ಪ್ರವೀಣ್ ಇಬ್ಬರಿಗೂ ಹೇಳಿರ್ತಾನೇ )ಪ್ರವೀಣ್ : "ಹೌದು ಕಣೋ ಅವಳು ಆ ಲವರ್ಸ್ ಗಳ ಬಗ್ಗೆ ಹೇಳಿದ್ಲು ನೀನು ಯಾಕೆ ಅದನ್ನ ಪರ್ಸನಲ್ ಆಗಿ ತಗೊಂಡಿದಿಯಾ ಅದೆಲ್ಲ ಬಿಡು ಇವತ್ತು ಅವಳು ಸೀರೆ ಉಟ್ಟುಕೊಂಡು ಬಂದಿದ್ದೆ ನಿನಗೋಸ್ಕರ.. ಇಲ್ಲೇ ಗೊತ್ತಾಗಲ್ವಾ ಅವಳು ಕೂಡ ನಿನ್ನ ಪ್ರೀತಿ ಮಾಡ್ತಿದ್ದಾಳೆ ಅಂತಾ"...ಕಾರ್ತಿಕ್ : "ಯಾಕೇ ಸೈಲೆಂಟ್ ಆಗಿದಿಯ ...Read More

14

ಬಯಸದೆ ಬಂದವಳು... - 14

ಅಧ್ಯಾಯ 14: "ಹೆಜ್ಜೆಗಳು ಬದಲಾಗುವ ಸಮಯ"ಬೆಳಿಗ್ಗೆ ಎದ್ದು ಎಲ್ಲರೂ ತಮ್ಮ ತಮ್ಮ ಮನೆ ಕಡೆಗೆ ಹೆಜ್ಜೆಗಳನ್ನು ಹಾಕ್ತಾರೆ....ಜೆಕೆ ತನ್ನ ಮನೆಗೆ ಸ್ಪಲ್ಪ ಭಯದಲ್ಲೇ ಒಳಗಡೆ ಹೆಜ್ಜೆ ಒಳಗಡೆ ಬರುತ್ತಿದ್ದ ಹಾಗೆಆಗ ಮಾಧವ್ ( ಜೆಕೆ ಯ ಅಣ್ಣ) : "ಏನೋ ಒಳ್ಳೆ ಕಳ್ಳರತರ ಯಾರದೋ ಮನೆಗೆ ಬಂದವರ ಹಾಗೆ ಒಳಗಡೆ ನುಗ್ತಾಇದಿಯಾ, ಆಗ ಜೆಕೆ ಶ್!... ಅವನ ಬಾಯನ್ನು ಗಟ್ಟಿಯಾಗಿ ಹಿಡಿದು ಮುಚ್ಚುತ್ತಾನೆ... ಸುಮ್ನೆ ಇರೋ ಅಪ್ಪ ,ದೊಡ್ಡಪ್ಪ ಕೆಳಸ್ಗೊಂಡ್ರೆ ಕಷ್ಟ"..."ಮಾಧವ್ ಛೇಡಿಸುತ್ತಾ ನೀನು ಏನೇ ಸಾಹಸ ಮಾಡಿದ್ರು ಅವರಿಂದ ತಪ್ಪಿಸಿಕೊಳ್ಳೇಕೆ ಆಗೋಲ್ಲ ,ಸುಮ್ನೆ ಮನೆಗೆ ಬರೋದು ಬಿಟ್ಟು ಅಲ್ಲಿ ಎನ್ ಮಾಡ್ತಿದ್ದೆ ಹಾಗೆ ಅವನನ್ನು ಇನ್ನೂ ಸ್ವಲ್ಪ ಭಯ ಬೀಳಿಸಲು ನಿನ್ನೆ ಅಪ್ಪ ನಿನ್ನ ಮೇಲೆ ತುಂಬಾ ಕೋಪ ಮಾಡ್ಕೊಂಡಿದ್ರು ಗೊತ್ತಾ"...ಜೆಕೆ ತನ್ನ ಕಣ್ಣುಗಳನ್ನು ಹೊರಳಿಸುತ್ತಾ "ಅದೇನು ಹೊಸ ವಿಷಯನಾ... ಯಾವಾಗ್ಲೂ ನಾನದ್ರೆ ಗುರ್.. ಅಂತಾನೆ ಇರ್ತಾರೆ" ಮಾಧವ್ : "ಸರಿ ಬೇಗ ಹೋಗಿ ಫ್ರೆಶ್ ಅಪ್ ಆಗಿ ...Read More

15

ಬಯಸದೆ ಬಂದವಳು... - 15

ಅಧ್ಯಾಯ 15: "ಪಥ ಬದಲಾವಣೆಯ ವೇಳೆಯಲ್ಲಿ""ಎಲ್ಲರ ಪರೀಕ್ಷೆಗಳು ಮುಗಿದಿದ್ದವು. ಐವರು ಸ್ನೇಹಿತರು ಒಂದು ವಾರದ ಟ್ರಿಪ್‌ಗೆ ಹೋಗಿ ಸುಖವಾಗಿ ಸಮಯ ಕಳೆಯುತ್ತಾ ಹಿಂತಿರುಗಿದರು. ಆ ದಿನಗಳು ಆಟ, ಮಾತುಗಳಿಂದ ತುಂಬಿ ತುಳುಕಿದ್ದವು. ಸ್ವಲ್ಪ ದಿನಗಳಲ್ಲೇ ಫಲಿತಾಂಶವೂ ಬಂದಿತು. ನಾಲ್ವರೂ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರು, ಕಾರ್ತಿಕ್ ಮಾತ್ರ ಇಡೀ ಕಾಲೇಜಿಗೆ ಮೊದಲನೆಯ ಸ್ಥಾನ ಪಡೆದಿದ್ದ. ಆ ಸಂತೋಷಕ್ಕೆ ಮಿತಿಯೇ ಇರಲಿಲ್ಲ.ಆದರೆ ಯಾವಾಗ ಹೆಚ್ಚು ಸಂತೋಷದಲ್ಲಿ ಇರ್ತಿವೋ ಅವಾಗಲೇ ತಿಳ್ಕೊಂಡು ಬಿಡ್ಬೇಕು ಮುಂದೆ ಏನೋ ಕಾದಿದೆ ಅಂತಾ... ಹಾಗೆ ಇಷ್ಟು ವರ್ಷಗಳಲ್ಲಿ ಒಂದು ದಿನ ಬಿಟ್ಟಿಲ್ಲದ ಇವರುಗಳು ಮುಂದೆ ಎಲ್ಲರ ಹೆಜ್ಜೆಗಳು ಬೇರೆ ಅಗೋ ಸಮಯ"...."ಶಶಿಧರ್ ಮೊದಲೇ ಹೇಳಿದ್ದಂತೆ, ಜೆಕೆ ಮತ್ತು ಸೂರ್ಯನನ್ನು ಹೈಯರ್ ಸ್ಟಡೀಸ್‌ಗಾಗಿ ವಿದೇಶಕ್ಕೆ ಕಳುಹಿಸಬೇಕೆಂಬ ಉದ್ದೇಶದಿಂದ ಇಬ್ಬರನ್ನೂ ಮಾತಾಡಲು ಕರೆಯಲಾಗಿತ್ತು. ಸೂರ್ಯ ತನ್ನ ಮನೆಯವರೊಂದಿಗೆ ಜೆಕೆ ಮನೆಗೆ ಬಂದಿದ್ದ"."ಈ ಕಡೆ ಸೂರ್ಯ ಜೆಕೆ ಕೋಣೆಗೆ ನುಗ್ಗಿದ ಆಗ ಜೆಕೆ ಹಾಯ್ ಸರ್ ಬನ್ನಿ.. ಬನ್ನಿ ಅಂತ ಆತ್ಮೀಯವಾಗಿ ಹೇಳಿದ""ಸೂರ್ಯ ಸ್ವಲ್ಪ ...Read More

16

ಬಯಸದೆ ಬಂದವಳು... - 16

ಅಧ್ಯಾಯ 15 : "ಅವಿಭಾಜ್ಯದ ಹೃದಯಗಳು, ವಿದಾಯದ ಹೊತ್ತಿನಲ್ಲಿ"ಮನೆಯೆಲ್ಲಾ ಒಂದು ವಿಚಿತ್ರ ವಾದ ವಾತಾವರಣ ಹರಡಿತ್ತು ಶಶಿಧರ್ ಹೇಳಿದ ನಿರ್ಧಾರವು ಎಲ್ಲರ ಮನಸ್ಸಿಗೆ ದೊಡ್ಡ ಆಘಾತ ಬಡಿತ ಹೊತ್ತ ಲಕ್ಕಿ ಕೋಪದಿಂದ ಶಶಿಧರ್ ಎದುರು ನಿಂತು" ಹೇ! ಏನೋ ಹೇಳ್ತಿದೀಯಾ ಶಶಿ...ಇಲ್ಲ ಕಂಡಿತಾ ನಾನಂತು ಇದಕ್ಕೆ ಒಪ್ಗೊಳೋದಿಲ್ಲ..ಇವರಿನ್ನು ಪುಟ್ಟ ಮಕ್ಕಳು ಪಾಪ ಅವಕ್ಕೆ ಇನ್ನು ಏನು ಗೊತ್ತಾಗಲ್ಲ ಅದರಲ್ಲೂ ಬೇರೆ ದೇಶಕ್ಕೆ ಕಳಿಸೋಕೆ ಒಪ್ಪಲ್ಲ" ...ಅಜ್ಜಿ ತನ್ನ ಭಾರವಾದ ಹೆಜ್ಜೆಗಳನ್ನು ಜೆಕೆ ನತ್ತ ಇಟ್ಟು ಅವನ ಹತ್ತಿರ ಬಂದಳು, ಮೊಮ್ಮಗನೆ ಈ ಅಜ್ಜಿ ನಾ ಬಿಟ್ಟು ನೀನು ಹೇಗೋ ಹೋಗ್ತಿಯಾ ಅವಳ ಕಣ್ಣೀರಿನ ಹೊಳೆ ಪ್ರೀತಿ ಮಿಶ್ರಿತ ಆ ಭಾವನೆ ಎಲ್ಲವನ್ನೂ ತೋರಿಸುತ್ತಿತ್ತು ... ಅಜ್ಜಿಯ ಕಣ್ಣಂಚಲ್ಲಿ ಕಣ್ಣೀರನ್ನು ನೋಡಿ ಜೆಕೆ ಹೃದಯಕ್ಕೆ ಕೈ ಹಾಕಿ ಕಿವುಚಿದಂತಾಗುತ್ತದೆ..."ಅವಳು ಮೊಮ್ಮಗನನ್ನು ಬಲವಾಗಿ ಹಿಡಿದು ಹೃದಯದ ನೋವನ್ನು ಹೊರಹಾಕಿದಂತೆ ಗಟ್ಟಿಯಾಗಿ ತಬ್ಬಿಕೊಂಡಳು ...ಹಾಗೆ ಸೂರ್ಯನೆಡೆಗೆ ನೋಡುತ್ತಾ ಸೂರ್ಯ.. ಏನೋ ನೀನು ನಮ್ಮನ್ನೆಲ್ಲ ಬಿಟ್ಟು ...Read More

17

ಬಯಸದೆ ಬಂದವಳು... - 17

ಅಧ್ಯಾಯ : 17 "ಪ್ರೇಮದ ಪರೀಕ್ಷೆ"ಮೂವರು UK ಗೆ ಬಂದ ತಕ್ಷಣ ಸುಂದರ್ ಅವರನ್ನು ಪಿಕ್ ಅಫ್ ಮಾಡ್ತಾರೆ... ನಂತರ ಎಲ್ಲರೂ ಸುಂದರ್ ಅವರ ಮನೆಗೆ ಆಗ್ತಾರೆ... Welcome to our house ಮಕ್ಕಳೆಜೆಕೆ ಮುಗುಳ್ನಗೆಯೊಂದಿಗೆ ಥ್ಯಾಂಕ್ ಯೂ ಅಂಕಲ್ ಎಂದು ಉತ್ತರಿಸಿದಸುಂದರ್ : "ಹಾ! ನೀವು ಈಗ ಫ್ರೆಶ್ ಅಪ್ ಆಗಿ ಸ್ಪಲ್ಪ ರೆಸ್ಟ್ ಮಾಡಿ ಅಂತ ಗೆಸ್ಟ್ ರೂಮ್ ಗೆ ಕರ್ಕೊಂಡು ಹೋಗ್ತಾರೆ..."ಸ್ಪಲ್ಪ ಸಮಯ ರೆಸ್ಟ್ ಮಾಡಿ ಮನೆಗೆ ಕಾಲ್ ಮಾಡಿ ಎಲ್ಲರೊಂದಿಗೂ ಮಾತಾಡ್ತಾ ಸ್ಪಲ್ಪ ಸಮಯ ಕಳಿತಾರೆ ...ನಂತರ ಮೂವರು ರೂಮ್ ನಿಂದ ಹೊರಬಂದಾಗ , ಸುಂದರ್ ಅವರು ಡಿನ್ನರ್ ಸಿದ್ಧತೆ ಮಾಡುತ್ತಿದ್ದರು".."ಅಂಕಲ್ ಈ ಮನೇಲಿ ನೀವು ಒಬ್ಬರೆ ಇರೋದ..?? ಸೂರ್ಯ ಕುತೂಹಲದಿಂದ ಕೇಳಿದ"" ಇಲ್ಲ ಈ ಮನೇಲಿ ನಾನು ಮತ್ತು ನನ್ನ ವೈಫ್ ಇದೀವಿ ಆದರೆ ಅವಳು ಈಗ ಇಲ್ಲಿ ಇಲ್ಲ..ಜೆಕೆ ಕುತೂಹಲದಿಂದ ಇಲ್ಲಿ ಇಲ್ಲಾ ಅಂದ್ರೆ..."ಸುಂದರ್ ಮುಗುಳ್ನಗುತ್ತಾ,ಅವಳು ಅವರ ಫ್ರೆಂಡ್ಸ್ ಜೊತೆ ಟ್ರೀಪ್ ...Read More