ಎಲ್ಲಾ ಟೈಮ್ ಅಲ್ಲಿ ನಾವು ಅಂದುಕೊಂಡ ಹಾಗೇ ಇರೋದು ಇಲ್ಲಾ ಅಂತಾರೆ ಅಲ್ವಾ, ಹಾಗೇ ವಿನೋದ್ ಮುಂದೆ ನಾನ್ ಎಷ್ಟೇ ತಗ್ಗಿ ಬಗ್ಗಿ ನಡೆದರು ಕೊನೆಗೆ ಅವನ ಬುದ್ದಿ ತೋರಿಸೇ ಬಿಟ್ಟ. ಒಂದು ದಿನ ಆಫೀಸ್ ಗೆ ಬಂದೆ ರಿಸೆಪ್ಶನಿಸ್ಟ್ ನನ್ನ ನೋಡಿ ಮಿಸ್ಟರ್ ಮಹಿ ಅಂತ ಕರೆದ್ಲು. ನಾನು ಅವರ ಹತ್ತಿರ ಹೋಗಿ ಅ ಹೇಳಿ ಮೇಡಂ ಅಂತ ಹೇಳ್ದೆ. ಮಹಿ ನೀವು ಬಂದ್ರೆ ಇಲ್ಲೇ ಇರೋಕೆ ಹೇಳಿದ್ರು ಮ್ಯಾನೇಜರ್ ಅಂತ ಹೇಳಿದ್ರು. ನಾನು ಇಲ್ಲೇ ಇರಬೇಕಾ ಏನಕ್ಕೆ ಮೇಡಂ ಅಂತ ಕೇಳ್ದೆ. ಅವರು ಡಲ್ ವಾಯ್ಸ್ ಅಲ್ಲಿ ಮಾತಾಡ್ತಾ ಸಾರೀ ಮಹಿ ನಿಮ್ಮನ್ನ ಕೆಲಸದಿಂದ ಟರ್ಮಿನೇಟ್ ಮಾಡಿದ್ದಾರೆ ಅಂತ ಹೇಳಿದ್ರು. ನಾನು ಅವರ ಮುಖ ನೋಡಿದೆ ಪಾಪ ತುಂಬಾ ಬೇಜಾರಾಗಿ ಇದ್ರು. ನಾನು ಕೂಲ್ ಆಗಿ ಪರ್ವಾಗಿಲ್ಲ ಬಿಡಿ ಮೇಡಂ ಅದಕ್ಕೆ ನೀವ್ ಯಾಕೆ ಬೇಜಾರ್ ಆಗ್ತೀರಾ ಅಂತ ಹೇಳ್ದೆ. ಅವರು ಮಾತಾಡ್ತಾ ಇಲ್ಲಾ ಮಹಿ ನಿಮ್ಮನ್ನ ಈ ಆಫೀಸ್ ಗೆ ಬಂದಾಗಿಂದ ನೋಡ್ತಾ ಇದ್ದೀನಿ ನೀವ್ ಆಯ್ತು ನಿಮ್ ಕೆಲಸ ಆಯ್ತು ಅಂತ ಇರ್ತೀರ. ಅ ವಿನೋದ್ ನಿಮ್ ಮೇಲೆ ದ್ವೇಷ ಇಟ್ಕೊಂಡು ಮಾತಾಡಿದ್ದು ಎಲ್ಲಾ ಗೊತ್ತಾಯ್ತು , ಅವನಿಗೆ ದುಡ್ಡು ಇದೆ ಅನ್ನೋ ಅಹಂ, ಈ ಜಾಬ್ ಹೋಗೋಕೂ ಕಾರಣ ವಿನೋದ್ ಅಂತ ನನಗೆ ಅನ್ನಿಸ್ತಾ ಇದೆ ಅಂತ ಹೇಳಿದ್ರು. ಪರ್ವಾಗಿಲ್ಲ ಬಿಡಿ ಮೇಡಂ ಬೆಂಗಳೂರು ಅಲ್ಲಿ ಈ ಕಂಪನಿ ಒಂದೇ ನಾ ಇಲ್ಲಾ ಈ ಜಾಬ್ ಒಂದೇನಾ ತುಂಬಾ ಇದ್ದಾವೆ. ನನ್ನ ಬಗ್ಗೆ ನೀವು ಒಳ್ಳೆ ಅಭಿಪ್ರಾಯ ಇಟ್ಕೊಂಡು ಇರೋದಕ್ಕೆ ತುಂಬಾ ಥ್ಯಾಂಕ್ಸ್ ಮೇಡಂ, ನೀವೇನು ಬೇಜಾರ್ ಆಗಬೇಡಿ. ಅಂತ ಹೇಳಿ ಅಲ್ಲೇ ಇದ್ದಾ ಸೋಫಾ ಹತ್ತಿರ ಹೋಗಿ ಕುತ್ಕೊಂಡೆ.
ಸ್ವಲ್ಪ ಸಮಯದ ನಂತರ ರಿಸೆಪ್ಶನ್ ಗೆ ಶಿಲ್ಪಾ ಅಕಿರಾ ಇಬ್ರು ಬಂದ್ರು ಶಿಲ್ಪಾ ನನ್ನ ನೋಡಿ ನನ್ನ ಹತ್ತಿರ ಬಂದ್ರೆ ಅಕಿರಾ ಮೊಬೈಲ್ ಇಡ್ಕೊಂಡ್ ಆಫೀಸ್ ಡೋರ್ ಓಪನ್ ಮಾಡಿಕೊಂಡು ಹೊರಗೆ ಹೋದಳು ನನ್ನ ಕಡೆ ತಿರುಗಿ ನೋಡಲಿಲ್ಲ. ಶಿಲ್ಪಾ ನನ್ನ ಹತ್ತಿರ ಬಂದು ಏನೋ ಇದು ಹೆಲ್ಪ್ ಮಾಡೋಕೆ ಹೋಗಿ ನೀನೇ ಕೆಲಸ ಕಳ್ಕೊಂಡು ಬಿಟ್ಟೆ. ಅವಳಿಗೆ ನಿನ್ನ ಕೆಲಸ ಹೋಯ್ತು ಅನ್ನೋದಕ್ಕಿಂತ ಅವಳ ಪ್ರೀತಿ ಗೆ ಎಲ್ಲಿ ಪ್ರಾಬ್ಲಮ್ ಆಗುತ್ತೆ ಅಂತ ಭಯ ಬೀಳ್ತಾ ಇದ್ದಾಳೆ. ಇಂತವಳಿಗೆ ನಿನ್ ಹೋಗಿ ಹೆಲ್ಪ್ ಮಾಡಿದೆ ಅಲ್ವಾ. ಛೇ ನನಗೆ ಬರ್ತಾ ಇರೋ ಕೋಪಕ್ಕೆ ನಿನ್ನ ಅಂತ ಹೊಡಿಯೋಕೆ ಬಂದು ಕಂಟ್ರೋಲ್ ಮಾಡ್ಕೊಂಡು ಪಕ್ಕದಲ್ಲಿ ಕುತ್ಕೊಂಡ್ಲು. ಕೆಲವು ನಿಮಿಷ ಗಳ ನಂತರ ಶಿಲ್ಪಾ ಕೂಲ್ ಆಗಿ ಇವಾಗ ಏನ್ ಮಾಡಬೇಕು ಅಂತ ಇದ್ದಿಯಾ ಅಂತ ಕೇಳಿದ್ಲು. ನಾನು ನಗ್ತಾ ಏನ್ ಮಾಡೋದು ಅಂದ್ರೆ ಏನ್ ಹೇಳೋದು ಸದ್ಯಕ್ಕೆ ಏನು ಯೋಚ್ನೆ ಮಾಡಿಲ್ಲ, ಮೊದಲು ಈ ಕಂಪನಿ ಯಿಂದ ಹೊರಗೆ ಹೋಗೋಣ ಆಮೇಲೆ ಆರಾಮಾಗಿ ಏನ್ ಮಾಡೋದು ಅಂತ ಯೋಚ್ನೆ ಮಾಡೋಣ ಅಂತ ಹೇಳಿದೆ. ಶಿಲ್ಪಾ ನನ್ನ ಮಾತಿಗೆ ಕೋಪ ಮಾಡ್ಕೊಂಡು ಬೆನ್ನ ಮೇಲೆ ಹೊಡಿತಾ ಏನು ಕಾಮಿಡಿ ನಾ ನಿನಗೆ ಅಂತ ಕೇಳಿದ್ಲು. ನಾನು ನಗ್ತಾ ಕಾಮಿಡಿ ನೇ ಅನ್ಕೋ ಅಂತ ಹೇಳ್ದೆ.
ಸ್ವಲ್ಪ ಸಮಯದ ನಂತರ ಮ್ಯಾನೇಜರ್ ಬಂದ ಅವನ ಜೊತೆಗೆ ವಿನೋದ್ ಕೂಡ ಬಂದ. ವಿನೋದ್ ನನ್ನ ನೋಡಿ ವ್ಯಂಗ್ಯ ವಾಗಿ ನಗ್ತಾ ಅವನ ಕ್ಯಾಬಿನ್ ಕಡೆಗೆ ಹೋದ, ಮ್ಯಾನೇಜರ್ ಬಂದು ನನ್ನ ಹತ್ತಿರ ಸಾರೀ ಮಹಿ ಇದರಲ್ಲಿ ನನ್ನ ಕುತಂತ್ರ ಏನು ಇಲ್ಲಾ ಜಸ್ಟ್ ಮೇಲಿಂದ ಆರ್ಡರ್ ಬಂತು ಐಮ್ ಸಾರೀ ಅಂತ ಹೇಳಿದ್ರು. ನಾನು ಅಯ್ಯೋ ಪರ್ವಾಗಿಲ್ಲ ಬಿಡಿ ಸರ್ ನಿಮ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು ಅಂತ ಹೇಳ್ದೆ. ಮ್ಯಾನೇಜರ್ ಕಾಲ್ ಮಾಡ್ತೀನಿ ಮಹಿ ಅಂತ ಹೇಳಿ ಅವರ ಕ್ಯಾಬಿನ್ ಕಡೆಗೆ ಹೋದ್ರು. ನಾನು ಶಿಲ್ಪಾ ಅಲ್ಲೇ ರಿಸೆಪ್ಶನ್ ಅಲ್ಲೇ ಕೂತಿದ್ವಿ. 15 ನಿಮಿಷದ ನಂತರ ರಿಸೆಪ್ಶನ್ ಗೆ ಕಾಲ್ ಬಂತು ಅಲ್ಲಿ ಇದ್ದಾ ಲೇಡಿ ಮಾತಾಡಿ, ನನ್ನ ಹತ್ತಿರ ಬಂದು ಮಹಿ ನನ್ನ ಜೊತೆಗೆ ಬನ್ನಿ ಅಂತ ಹೇಳಿದ್ಲು ನಾನು ಆಫೀಸ್ ಬ್ಯಾಗ್ ಹಾಕಿಕೊಂಡು ಎದ್ದು ನಿಂತು ಅವರ ಹಿಂದೆ ಹೋಗೋಕೆ ಹೋದೆ. ಶಿಲ್ಪಾ ನಾನು ಬರ್ತೀನಿ ಅಂತ ಹೇಳಿದ್ಲು. ನಾನು ಏನು ಬೇಡ ನಿನ್ ಹೋಗಿ ವರ್ಕ್ ಮಾಡು ಹೋಗು ಸುಮ್ನೆ ನಿನ್ನ ಜಾಬ್ ನಾ ಯಾಕೆ ಕಳ್ಕೋತಿಯ ಅಂತ ಹೇಳಿ ಸಮಾಧಾನ ಮಾಡಿ ಶಿಲ್ಪಾ ನಾ ಕಳಿಸಿ ನಾನು ರಿಸೆಪ್ಶನ್ ಮೇಡಂ ಜೊತೆಗೆ ಹೋದೆ..
ಅವರು ನನ್ನ ಒಂದು ಮೀಟಿಂಗ್ ರೂಮ್ ಒಳಗೆ ಕರ್ಕೊಂಡು ಹೋದ್ರು, ಅಲ್ಲಿ ಮ್ಯಾನೇಜರ್, ವಿನೋದ್, HR, ಮತ್ತೆ ವಿನೋದ್ ಅವರ ತಂದೆ ಕೂಡ ಇದ್ರು, ವಿನೋದ್ ಅವರ ತಂದೆ ನನ್ನೇ ನೋಡ್ತಾ ಓ ಇವನೇನ ನಿನ್ ಹೇಳಿದ್ದು ಅಂತ ವಿನೋದ್ ನಾ ಕೇಳಿದ್ರು. ವಿನೋದ್ ಹೌದು ಡ್ಯಾಡ್ ಇವನೇ ಅ ಭಿಕಾರಿ ಅಂತ ಹೇಳಿದ. HR ಮತಾಡ್ತಾ ಮಹಿ ನಿನ್ನ ಲ್ಯಾಪ್ಟಾಪ್ ಐಡಿ ಕಾರ್ಡ್ ನಾ ಇಲ್ಲೇ ಇಟ್ಟು ಈ ಡಾಕ್ಯುಮೆಂಟ್ಸ್ ಗೆ ಸೈನ್ ಮಾಡಿ ಹೊರಟು ಹೋಗಿ ಅಂತ ಹೇಳ್ದ. ನಾನು ಸರ್ ನನ್ನ ಏನಕ್ಕೆ ಜಾಬ್ ನಿಂದ ತೆಗೆದು ಹಾಕ್ತಾ ಇದ್ದೀರಾ ಅಂತ ತಿಳ್ಕೊಬೋದ ಅಂತ ಕೇಳ್ದೆ. ವಿನೋದ್ ನಗ್ತಾ ಅವರನ್ನ ಏನ್ ಕೇಳ್ತಿಯಾ ನಾನ್ ಹೇಳ್ತಿನಿ ಕೇಳು, ಮೊದಲು ನಿನ್ನ ಕ್ಯಾರೆಕ್ಟರ್ ನನಗೆ ಇಷ್ಟ ಆಗಲಿಲ್ಲ, ಸೆಕೆಂಡ್ ನಾನು ಮದುವೆ ಮಾಡ್ಕೋಬೇಕು ಅಂತ ಇರೋ ಹುಡುಗಿನ ನಾ ನೀನು ಮದುವೆ ಆಗೋದು ಇಷ್ಟ ಆಗಲಿಲ್ಲ. ನಿನ್ನ ಯೋಗ್ಯತೆ ಗೆ ನಿನಗೆ ಅಕಿರಾ ಬೇಕಾ ಅವಳ ಅಸ್ತಿ ಬೇಕಾ, ನಿನ್ ಏನೇ ಮಾಡಿದ್ರು ನೋಡ್ತಾ ಸುಮ್ನೆ ಇರಬೇಕ, ನೀನು ನನ್ನ ದಾರಿಗೆ ಅಡ್ಡ ಬಂದ ದಿನನೇ ನಿನಗೆ ಗೇಟ್ ಪಾಸ್ ಕೊಡೋಣ ಅಂತ ಇದ್ದೆ ಅದ್ರೆ ನಿನಗೆ ಅವಮಾನ ಮಾಡಿದ್ರೆ ನೀನೇ ರಿಸೈನ್ ಮಾಡಿ ಹೋಗ್ತಿಯ ಅಂತ ಸುಮ್ನೆ ಇದ್ದೆ ಅದ್ರೆ ನೀನು ಇಲ್ಲೇ ಇದ್ದು ಬಿಟ್ಟೆ ಅದಕ್ಕೆ, ನಾನೆ ನಿನ್ನ ಕೆಲಸದಿಂದ ತೆಗೆದು ಹಾಕ್ತಾ ಇದ್ದೀನಿ ಅಂತ ಹೇಳ್ದ. ನಾನು ವಿನೋದ್ ನಾ ಮಾತಿಗೆ ಇಷ್ಟೇ ನಾ ಅಂತ ಅನ್ಕೊಂಡು HR ಕೊಟ್ಟ ಡಾಕ್ಯುಮೆಂಟ್ಸ್ ಮೇಲೆ ಸೈನ್ ಮಾಡಿ ಲ್ಯಾಪ್ಟಾಪ್ ಐಡಿ ಕಾರ್ಡ್ ನಾ ಕೊಟ್ಟು, HR ನ ನೋಡ್ತಾ ಅಲ್ಲ ಸರ್ ಯಾರೋ ಏನೋ ಪರ್ಸನಲ್ ರೀಸನ್ ಗೆ ಈ ರೀತಿ ಮಾಡೋವಾಗ ತಪ್ಪು ಅಂತ ಹೇಳೋದನ್ನ ಬಿಟ್ಟು ನೀವು ಕೂಡ ಅವರ ಜೊತೆಗೆ ಸೇರ್ಕೊಂಡು ಇದ್ದೀರಾ ಅಲ್ವಾ ಇದು ಸರಿನಾ ಅಂತ ಕೇಳ್ದೆ. ಅವರು ನಗ್ತಾ ಅದು ನನ್ನ ಇಷ್ಟ ಅಂತ ಹೇಳಿದ. ಮ್ಯಾನೇಜರ್ ಎದ್ದು ನನ್ನ ಹತ್ತಿರ ಬಂದು ಸಾರೀ ಮಹಿ ಅಂತ ಹೇಳಿದ್ರು, ನಾನು ಇಟ್ಸ್ ಓಕೆ ಸರ್, ಅಂತ ಹೇಳಿ ಮೀಟಿಂಗ್ ರೂಮ್ ನಿಂದ ಹೊರಗೆ ಬಂದು. ರಿಸೆಪ್ಶನ್ ಅಲ್ಲಿ ಇದ್ದಾ ಮೇಡಂ ಹತ್ತಿರ ಮಾತಾಡಿ ಅವರಿಗೆ ಬೈ ಹೇಳಿ ಆಫೀಸ್ ಯಿಂದ ಹೊರಗೆ ಬಂದೆ.
ಅದೇ ಸಮಯಕ್ಕೆ ಅಕಿರಾ ಮೊಬೈಲ್ ಅಲ್ಲಿ ಮಾತಾಡ್ಕೊಂಡು ಬರ್ತಾ ನನ್ನ ನೋಡಿ ಏನಾಯ್ತು ಅಂತ ಕೇಳಿದ್ಲು, ನಾನು ಜಾಬ್ ಹೋಯ್ತು ಅಂತ ಹೇಳ್ದೆ. ಏನ್ ಮಹಿ ನೀನು ಅವರನ್ನ ಸ್ವಲ್ಪ ರಿಕ್ವೆಸ್ಟ್ ಮಾಡೋಕೆ ಅಗಲಿಲ್ವಾ ನೀನು, ಛೇ ಎಲ್ಲಾ ಟೈಮ್ ಅಲ್ಲೂ ಒಂದೇ ತರ ಇರೋಕೆ ಆಗುತ್ತಾ ಹೇಳು, ಕೆಲವೊಂದು ಸರಿ ಸೆಲ್ಫ್ ರೆಸ್ಪೆಕ್ಟ್ ನಾ ಪಕ್ಕಕ್ಕೆ ಇಟ್ಟು ರಿಕ್ವೆಸ್ಟ್ ಮಾಡ್ಕೋಬೇಕು, ಹಠ ಮಾಡಬಾರದು ಅಂತ ಹೇಳಿ ಕೋಪ ಮಾಡ್ಕೊಂಡು ಅಲ್ಲಿಂದ ಹೊರಟು ಹೋದ್ಲು. ನಾನ್ ಪಾರ್ಕಿಂಗ್ ಗೆ ಬಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಗೆ ಬಂದು ಟೀ ಶಾಪ್ ಹತ್ತಿರ ಬೈಕ್ ನಿಲ್ಲಿಸಿ ಟೀ ಸಿಗರೇಟ್ ನಾ ತೆಗೆದುಕೊಂಡು ಅಲ್ಲೇ ಇದ್ದಾ ಬೆಂಚಿನ ಮೇಲೆ ಕೂತು ಶ್ವೇತಾ ಗೆ ಕಾಲ್ ಮಾಡಿ ವಿಷಯ ಹೇಳ್ದೆ, ಶ್ವೇತಾ ಸರಿ ಬಿಡು ನಿನ್ ಮನೆಗೆ ಬಾ ಆಮೇಲೆ ಮಾತಾಡೋಣ ಅಂತ ಹೇಳಿದ್ಲು. ನಾನು ಸಿಗರೇಟ್ ನಾ ಫಿನಿಷ್ ಮಾಡಿ , ಬೈಕ್ ಸ್ಟಾರ್ಟ್ ಮಾಡಿಕೊಂಡು ಫ್ರೆಂಡ್ ನಾ ಮೀಟ್ ಮಾಡೋಕೆ ಹೋದೆ.
ತುಂಬಾ ದಿನ ಆದಮೇಲೆ ಫ್ರೀಡಂ ಸಿಗ್ತು ಅಂತ ಫ್ರೆಂಡ್ಸ್ ಜೊತೆಗೆ ಸಿಟ್ಟಿಂಗ್ ಹಾಕಿದೆ. ಮಧ್ಯಾಹ್ನ ಲಂಚ್ ಟೈಮ್ ಗೆ ಶ್ವೇತಾ ಕಾಲ್ ಮಾಡಿದ್ಲು, ನಾನು ಕಾಲ್ ಪಿಕ್ ಮಾಡಿ ಅ ಹೇಳು ಅಂತ ಹೇಳ್ದೆ. ಶ್ವೇತಾ ಲೋ ಎಲ್ಲಿದ್ದೀಯ ಅಂತ ಕೇಳಿದ್ಲು. ನಾನು ಫ್ರೆಂಡ್ಸ್ ಜೊತೆಗೆ ಇದ್ದೀನಿ ಅಂತ ಹೇಳ್ದೆ. ಶ್ವೇತಾ ಹ್ಮ್ ಸರಿ ಹೋಯ್ತು, ಹುಷಾರು ಮನೆಗೆ ಬೇಗ ಬಾ ಅಂತ ಹೇಳಿ ಕಾಲ್ ಕಟ್ ಮಾಡಿದ್ಲು. ಆಮೇಲೆ ಶಿಲ್ಪಾ ಕಾಲ್ ಮಾಡಿದ್ಲು. ಕಾಲ್ ಪಿಕ್ ಮಾಡಿ ಅ ಹೇಳೇ ಅಂತ ಹೇಳ್ದೆ. ಶಿಲ್ಪಾ ತುಂಬಾ ಬೇಸರವಾಗಿ ಮಾತಾಡ್ತಾ ಎಲ್ಲಿದ್ದೀಯ ಅಂತ ಕೇಳಿದ್ಲು. ನಾನು ಕೂಲ್ ಆಗಿ ಹೊಸ ಜಾಬ್ ಹುಡುಕ್ತಾ ಇದ್ದೀನಿ ಅಂತ ಹೇಳ್ದೆ. ಶಿಲ್ಪಾ ಸರಿ ಹುಷಾರು ಊಟ ಮಾಡಿದ ಅಂತ ಕೇಳಿದ್ಲು. ನಾನು ಚಿಕೆನ್ ಫ್ರೈ ತಿಂತ ಇನ್ನು ಇಲ್ವೆ ಮಾಡಬೇಕು ನಿನ್ ಲಂಚ್ ಮಾಡಿದ ಅಂತ ಕೇಳ್ದೆ. ಇವಾಗ ಬಂದೆ ಕಣೋ ಯಾಕೋ ತುಂಬಾ ಬೇಜಾರ್ ಆಯ್ತು ಅದಕ್ಕೆ ನಿನಗೆ ಕಾಲ್ ಮಾಡಿದೆ ಅಂತ ಹೇಳಿದ್ಲು. ನಾನು ಬಿಡೆ ಇಷ್ಟು ಚಿಕ್ಕ ವಿಷಯ ಕ್ಕೆ ಯಾಕೆ ಬೇಜಾರ್ ಮಾಡ್ಕೊತೀಯ ಆರಾಮಾಗಿ ಲಂಚ್ ಮಾಡು ಅಂತ ಹೇಳಿ ಬೈ ಹೇಳಿ ಕಾಲ್ ಕಟ್ ಮಾಡಿ ಕೈಲಿ ಇದ್ದಾ ಬಿಯರ್ ನಾ ಕುಡಿಯೋಕೆ ಶುರು ಮಾಡಿದೆ.. ಫ್ರೆಂಡ್ಸ್ ಜೊತೆಗೆ ಮಾತಾಡ್ಕೊಂಡು 4 ಬಿಯರ್ ನಾ ಫಿನಿಷ್ ಮಾಡಿ ಹೊಟ್ಟೆ ತುಂಬಾ ಊಟ ಮಾಡಿ ಸ್ವಲ್ಪ ಹೊತ್ತು ರೆಸ್ಟ್ ಮಾಡಿದೆ.
ಮೊಬೈಲ್ ರಿಂಗ್ ಅದ ಸದ್ದಿಗೆ ಎಚ್ಚರ ಆಯ್ತು ಕಣ್ ಬಿಟ್ಟು ಎದ್ದು ವಾಶ್ರೂಮ್ ಗೆ ಹೋಗಿ ರೂಮಿಂದ ಹೊರಗಡೆ ಬಂದೆ ಕತ್ತಲು ಆಗಿತ್ತು ಮತ್ತೆ ರೂಮ್ ಒಳಗೆ ಬೆಡ್ ಮೇಲೆ ಇದ್ದಾ ಮೊಬೈಲ್ ರಿಂಗ್ ಆಗೋ ಶಬ್ದ ಕೇಳಿಸ್ತು ನಾನು ರೂಮ್ ಒಳಗೆ ಬಂದು ಮೊಬೈಲ್ ನಾ ನೋಡಿದೆ ಶ್ವೇತಾ ಕಾಲ್, ಟೈಮ್ ನೋಡಿದೆ 7 ಗಂಟೆ ಆಗಿತ್ತು, ಕಾಲ್ ಪಿಕ್ ಮಾಡಿ ಹೇಳೇ ಅಂತ ಹೇಳ್ದೆ. ಶ್ವೇತಾ ಮಾತಾಡ್ತಾ ಇನ್ನು ಮುಗಿದಿಲ್ವಾ ಫ್ರೆಂಡ್ಸ್ ಜೊತೆಗೆ ಕಾಲ ಕಳೆದಿದ್ದು ಅಂತ ಕೇಳಿದ್ಲು. ಮಲಗಿದ್ದೆ ಅದಕ್ಕೆ ಬರೋಕೆ ಆಗಲಿಲ್ಲ ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿದೆ. ಮತ್ತೆ ಮೊಬೈಲ್ ನೋಡಿದಾಗ ಶಿಲ್ಪಾ ದು ಮಿಸ್ಡ್ ಕಾಲ್ ಇತ್ತು. ಅವಳಿಗೆ ಕಾಲ್ ಮಾಡಿದೆ, 4 ರಿಂಗ್ ಆದಮೇಲೆ ಶಿಲ್ಪಾ ಕಾಲ್ ಪಿಕ್ ಮಾಡಿ ಎಲ್ಲೋ ಇದ್ದಿಯಾ ಅಂತ ಕೇಳಿದ್ಲು. ಹೊರಗಡೆ ಇದ್ದೀನಿ ಹೇಳೇ ಅಂತ ಹೇಳ್ದೆ. ಜಾಬ್ ಸಿಗ್ತಾ ಅಂತ ಕೇಳಿದ್ಲು. ಪಾಪ ನನಗೆ ಕೆಲಸ ಹೋಯ್ತು ಅಂತ ತುಂಬಾ ಬೇಜಾರಲ್ಲಿ ಇದ್ದಾಳೆ ಅಂತ ಅನ್ನಿಸ್ತು ಮನಸ್ಸಿಗೆ, ಅದಕ್ಕೆ ಇನ್ನು ಇಲ್ಲಾ ಕಣೆ ಅಂತ ಹೇಳ್ದೆ. ಅದಕ್ಕೆ ಶಿಲ್ಪಾ ಸರಿ ಮನೆ ಹತ್ತಿರ ಬಾ ಅಂತ ಹೇಳಿದ್ಲು. ಮನೆ ಹತ್ತಿರ ನಾ ಏನಕ್ಕೆ ಅಂತ ಕೇಳ್ದೆ. ಲೋ ಇವಾಗ ಹೇಳಿದ್ರೇನೇನಾ ಬರೋದು ಇಲ್ಲಾ ಅಂದ್ರೆ ಬರೋದು ಇಲ್ವಾ ಅಂತ ಕೇಳಿದ್ಲು. ಸರಿ ಬರ್ತೀನಿ ಅಂತ ಹೇಳ್ದೆ. ಸರಿ ಬೇಗ ಬಾ ಅಂತ ಹೇಳಿ ಕಾಲ್ ಕಟ್ ಮಾಡಿ, ಹೋಗಿ ಫ್ರೆಷ್ ಅಪ್ ಆಗಿ ಬೇರೆ ಬಟ್ಟೆ ಹಾಕಿಕೊಂಡು ಫ್ರೆಂಡ್ ಗೆ ಹೇಳಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಸೀದಾ ಶಿಲ್ಪಾ ಅವರ ಮನೆ ಕಡೆಗೆ ಹೋದೆ. 30 ನಿಮಿಷ ಡ್ರೈವ್ ಮಾಡಿದ ಮೇಲೆ ಶಿಲ್ಪಾ ಅವರ ಮನೆ ಹತ್ತಿರ ಹೋಗಿ ಅವಳಿಗೆ ಕಾಲ್ ಮಾಡಿದೆ. ಶಿಲ್ಪಾ ಕಾಲ್ ಪಿಕ್ ಮಾಡಿ ಮಾತಡಿಕೊಂಡೆ ಅವರ ಮನೆ ಡೋರ್ ಓಪನ್ ಮಾಡಿಕೊಂಡು ಹೊರಗೆ ಬಂದು ಬೈಕ್ ಮೇಲೇನೆ ಕೂತಿದ್ದ ನನ್ನ ಹತ್ತಿರ ಬಂದು, ಏನೋ ನಿನಗೆ ಎಷ್ಟು ಸರಿ ಕಾಲ್ ಮಾಡೋದು ಪಿಕ್ ಮಾಡೋಕೆ ಆಗೋದಿಲ್ವಾ ಅಂತ ಬೈಯ್ಯೋಕೆ ಶುರು ಮಾಡಿದ್ಲು. ನಾನು ಮೊಬೈಲ್ ಸೈಲೆಂಟ್ ಅಲ್ಲಿ ಇತ್ತು ಅದಕ್ಕೆ ಗಮನಿಸಿಲ್ಲ, ಅದು ಬಿಡು ಏನು ಬರೋಕೆ ಹೇಳ್ದೆ ಅಂತ ಕೇಳ್ದೆ. ಅದ ಜಾಬ್ ಗೆ ರಿಸೈನ್ ಮಾಡಿಬಿಟ್ಟೆ ಅಂತ ಹೇಳಿದ್ಲು. ನನಗೆ ಶಾಕ್ ಆಯ್ತು , ಮತ್ತೆ ನಾನು ಮಾತಾಡ್ತಾ ಲೇ ನಿನಗೆ ಏನಾದ್ರು ಲೂಸ್ ಅ ಜಾಬ್ ಏನಕ್ಕೆ ರಿಸೈನ್ ಮಾಡಿದೆ ಅಂತ ಕೇಳ್ದೆ. ಏನಕ್ಕೆ ಅಂದ್ರೆ ಬೆಸ್ಟ್ ಫ್ರೆಂಡ್ ಅಂತ ಇದ್ದವಳು ಸ್ವಾರ್ಥಿ ಆಗಿ ಬಿಟ್ಲು ಒಳ್ಳೆ ಮನಸ್ಸಿಂದ ನೀನು ಹೆಲ್ಪ್ ಮಾಡೋಕೆ ಹೋಗಿ ಅವಮಾನ ಪಟ್ಟೆ ಜಾಬ್ ನಾ ಕಳ್ಕೊಂಡೆ ಅದಕ್ಕೆ ಜಾಬ್ ಮಾಡೋಕೆ ಇಷ್ಟ ಆಗಲಿಲ್ಲ ರಿಸೈನ್ ಮಾಡಿ ಬಿಟ್ಟು ಬಂದೆ ಅಂತ ಹೇಳಿದ್ಲು. ಲೇ ಅಲ್ವೇ ನನಗೆ ಏನೋ ಆಯ್ತು ಅಂತ ನಿನ್ ಜಾಬ್ ಬಿಟ್ಟು ಬಂದ್ರೆ ಹೇಗೆ ಹೇಳು, ಇವಾಗ ನೋಡು ನನ್ನಿಂದ ನಿನ್ನ ಜಾಬ್ ಹೋಯ್ತು ಮನೇಲಿ ನಿಮ್ ಅಪ್ಪ ಅಮ್ಮ ಗೆ ಎಷ್ಟು ಬೇಜಾರ್ ಆಗೋದಿಲ್ಲ ಅಂತ ಹೇಳ್ದೆ. ಶಿಲ್ಪಾ ನಗ್ತಾ ಅವರು ಏನಕ್ಕೆ ಬೇಜಾರ್ ಆಗ್ತಾರೆ ಅವರು ಹ್ಯಾಪಿ ನೇ, ಇವಾಗಾದ್ರು ಮನೇಲಿ ಅವರ ಜೊತೆಗೆ ಇರ್ತೀನಿ ಅಲ್ವಾ ಅದಕ್ಕೆ ಫುಲ್ ಹ್ಯಾಪಿ ಆಗಿ ಇದ್ದಾರೆ ಅವರ ಬಗ್ಗೆ ಬಿಡು, ನಿನ್ನ ಏನಕ್ಕೆ ಬರೋಕೆ ಹೇಳ್ದೆ ಅಂದ್ರೆ, ಮೈಸೂರ್ ಅಲ್ಲಿ ನಿನಗೆ ಜಾಬ್ ನೋಡಿದ್ದೀನಿ ಮಾಡ್ತಿಯಾ ಅಂತ ಕೇಳಿದ್ಲು.
ನಾನು ಅವಳ ಮುಖ ನಾ ನೋಡ್ತಾ ಅಲ್ವೇ ಇರೋ ಜಾಬ್ ನಾ ರಿಸೈನ್ ಮಾಡಿ ಬಂದು, ನನಗೆ ಜಾಬ್ ಇದೆ ಮಾಡ್ತಿಯಾ ಅಂತ ಕೇಳ್ತಾ ಇದ್ದಿಯಾ, ನಿನಗೆ ಏನಾದ್ರು ಲೂಸ್ ಅ ಅಂತ ಕೇಳ್ದೆ. ನನಗೆ ಲೂಸ್ ಏನು ಇಲ್ಲಾ ಮೊದಲು ನಿನ್ ಹೇಳು ಜಾಬ್ ಮಾಡ್ತಿಯಾ ಇಲ್ವಾ ಅಂತ ಕೇಳಿದ್ಲು. 2 ನಿಮಿಷ ಯೋಚ್ನೆ ಮಾಡಿ ಅಲ್ಲ ಕಣೆ ಜಾಬ್ ಏನೋ ಓಕೆ ಅದ್ರೆ? ಅಂತ ಹೇಳ್ದೆ.. ಶಿಲ್ಪಾ ಅದ್ರೆ ಎಲ್ಲಾ ಬಿಡು ನಿನಗೆ ಜಾಬ್ ಮಾಡೋಕೆ ಓಕೆ ಅಲ್ವಾ ಅಷ್ಟು ಸಾಕು. 2 ಡೇಸ್ ಅಲ್ಲಿ ಹೋಗೋಣ ರೆಡಿ ಆಗಿ ಇರು ಅಂತ ಹೇಳಿದ್ಲು. ನಾನು ಅವಳ ಮಾತಿಗೆ ಶಾಕ್ ಆಗಿ ಏನು ಹೋಗೋಣ ನಾ ಅಂದ್ರೆ ನಿನ್ ಕೂಡ ಬರ್ತಾ ಇದ್ದಿಯಾ ಅಂತ ಕೇಳ್ದೆ. ಅದಕ್ಕೆ ಶಿಲ್ಪಾ ಹ್ಮ್ ಹೌದು ನಾನ್ ಕೂಡ ಬರ್ತಾ ಇದ್ದೀನಿ, ನನಗು ಜಾಬ್ ನೋಡಿದ್ದೀನಿ ಒಂದೇ ಆಫೀಸ್ ಅಲ್ಲಿ ಅಂತ ಹೇಳಿದ್ಲು. ಅಷ್ಟ್ರಲ್ಲಿ ಶಿಲ್ಪಾ ಅವರ ಮನೆ ಡೋರ್ ಓಪನ್ ಮಾಡಿಕೊಂಡು ಒಬ್ರು ಲೇಡೀಸ್ ಹೊರಗೆ ಬಂದು ಏನೇ ಫ್ರೆಂಡ್ ನಾ ಹೀಗೆ ಹೊರಗಡೆ ನಿಲ್ಲಿಸಿಕೊಂಡೆ ಮಾತಾಡಿಸ್ತೀಯಾ ಮನೆ ಒಳಗೆ ಕರಿಯೋದಿಲ್ವಾ ಅಂತ ಹೇಳ್ತಾ ನಮ್ ಹತ್ತಿರ ಬಂದ್ರು. ಶಿಲ್ಪಾ ಅವರ ಕಡೆ ನೋಡ್ತಾ ಅಮ್ಮ ಸಾರೀ ಮರೆತು ಹೋದೆ, ಮಹಿ ಬಾ ಮನೆ ಒಳಗೆ ಅಂತ ಹೇಳಿ, ಇವರು ನಮ್ ಅಮ್ಮ, ಅಂಬುಜಾ ಅಂತ ಪರಿಚಯ ಮಾಡಿಸಿದ್ಲು. ನಾನು ಅವರನ್ನ ನೋಡಿ ಅಮ್ಮ ನಮಸ್ತೆ ಅಂತ ಹೇಳ್ದೆ, ಅವರು ನಮಸ್ತೆ ಅಂತ ಹೇಳಿ ಬಪ್ಪಾ ಮನೆ ಒಳಗೆ ಅಂತ ಹೇಳಿದ್ರು. ನಾನು ಅವರ ಮಾತಿಗೆ ಮರ್ಯಾದೆ ಕೊಟ್ಟು ಮನೆ ಒಳಗೆ ಹೋದೆ. ಹಾಲ್ ಅಲ್ಲಿ ಒಬ್ಬ ವ್ಯಕ್ತಿ ಕೂತಿದ್ರು ಶಿಲ್ಪಾ ಅವರನ್ನ ತೋರಿಸಿ ಮಹಿ ಇವರು ನಮ್ ತಂದೆ ಕೃಷ್ಣ ಮೂರ್ತಿ ಅಂತ ಪರಿಚಯ ಮಾಡಿಸಿ ಕೊಟ್ಟಳು. ನಾನು ಅವರನ್ನ ನೋಡಿ ನಮಸ್ತೆ ಸರ್ ಅಂತ ಹೇಳ್ದೆ. ಅವರು ನನ್ನ ನೋಡ್ತಾ ಏನಪ್ಪ ಮಹಿ ನನ್ನ ಮಗಳಿಗೆ ಇಷ್ಟು ಒಳ್ಳೆ ಫ್ರೆಂಡ್ ಆಗಿ ಮನೆಗೆ ಬರೋಕೆ ಇಷ್ಟು ದಿನ ಬೇಕಾಯ್ತ ಅಂತ ಕೇಳಿದ್ರು. ಅಯ್ಯೋ ಹಾಗೇನು ಇಲ್ಲಾ ಅಂಕಲ್ ಅಂತ ಹೇಳ್ದೆ. ಶಿಲ್ಪಾ ಕುತ್ಕೋ ಮಹಿ ಕಾಫಿ ತಗೋಬರ್ತೀನಿ ಅಂತ ಹೇಳಿದ್ಲು. ನಾನು ನನಗೆ ಏನು ಬೇಡ ಅಂತ ಹೇಳ್ದೆ. ಅಂಬುಜಾ ಅವರು ಶಿಲ್ಪಾ ನಿನ್ ಮಹಿ ಜೊತೆಗೆ ಮಾತಾಡ್ತಾ ಇರು ನಾನ್ ಹೋಗಿ ತಗೋ ಬರ್ತೀನಿ ಅಂತ ಹೇಳಿ ಅಡುಗೆ ಮನೆ ಕಡೆ ಹೋದ್ರು.
ಶಿಲ್ಪಾ ಮಾತಾಡ್ತಾ ಅಪ್ಪ ಮಹಿ ಒಪ್ಪಿಕೊಂಡ ಮೈಸೂರ್ ಬರೋಕೆ ಅಂತ ಹೇಳಿದ್ಲು. ಕೃಷ್ಣ ಮೂರ್ತಿ ಹೌದ ಹಾಗಾದ್ರೆ ಇರು ನಿಮ್ ತಾತ ನಿಗೆ ಕಾಲ್ ಮಾಡಿ ಹೇಳ್ತಿನಿ ಅಂತ ಮೊಬೈಲ್ ತಗೊಂಡ್ರು. ನಾನು ಶಿಲ್ಪಾ ಕಡೆಗೆ ನೋಡಿದೆ ಶಿಲ್ಪಾ ನನ್ನ ನೋಡಿ ನಗ್ತಾ ಅಜ್ಜಿ ತಾತ ಮೈಸೂರ್ ಅಲ್ಲೇ ಇರೋದು, ಅವರದ್ದೇ ಟೆಕ್ಸ್ಟ್ ಟೈಲ್ ಕಂಪನಿ ಒಂದು ಇದೆ. ಚಿಕ್ಕಪ್ಪ ನೋಡ್ಕೋತ ಇದ್ದಾರೆ ನಿನಗೆ ಹೇಳಿದೆ ಅಲ್ವಾ ಒಂದು ಪ್ರಾಣಿ ಇದೆ ನನ್ನ ಮೇಲೆ ಪ್ರಾಣ ನೇ ಇಟ್ಕೊಂಡು ಇದೆ ಅಂತ ಅ ಪ್ರಾಣಿ ಕೂಡ ಅಲ್ಲೇ ಇರೋದು ಅಂತ ಹೇಳಿದ್ಲು. ನಾನು ಹೌದ ಅಂತ ಅನ್ಕೊಂಡು ಸುಮ್ಮನೆ ಅದೇ. ಅಂಬುಜಾ ಅವರು ಕಾಫಿ ತಂದು ಕೊಟ್ರು, ನಾನು ಕಾಫಿ ಕುಡಿಯೋಕೆ ಶುರು ಮಾಡಿದೆ. ಶಿಲ್ಪಾ ಮಾತಾಡ್ತಾ ನಾಡಿದ್ದು ಹೋಗೋಣ ರೆಡಿ ಆಗಿ ಇರು ನಾನ್ ಹೇಳಿದ ಪ್ರಾಣಿ ಬರುತ್ತೆ ನಮ್ಮನ್ನ ಕರ್ಕೊಂಡು ಹೋಗೋಕೆ ಅಂತ ಹೇಳಿದ್ಲು. ನಾನ್ ಸರಿ ಅಂತ ಹೇಳಿದೆ, ಆಮೇಲೇ ಸ್ವಲ್ಪ ಹೊತ್ತು ಅವರ ಜೊತೆಗೆ ಮಾತಾಡಿಕೊಂಡು ಎಲ್ಲರಿಗೂ ಬೈ ಹೇಳಿ, ಹೊರಗಡೆ ಬಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆ ಹೊರಟೆ.
ಮನೆಗೆ ಬಂದಾಗ ಎಲ್ಲರೂ ಹಾಲ್ ಅಲ್ಲಿ ಕೂತಿದ್ರು. ಶ್ವೇತಾ ನನ್ನ ನೋಡಿ ಸಾಹೇಬ್ರಿಗೆ ಇವಾಗ ಫ್ರೀ ಟೈಮ್ ಸಿಗ್ತಾ ಮನೆಗೆ ಬರೋಕೆ ಅಂತ ಕೇಳಿದ್ಲು. ನಾನು ಹೋಗಿ ಸೋಫಾ ಮೇಲೆ ಕೂತ್ಕೊಂಡು ಮೈಸೂರ್ ಅಲ್ಲಿ ಸಿಕ್ಕ ಜಾಬ್ ಬಗ್ಗೆ ಹೇಳಿದೆ. ಅಮ್ಮನಿಗೆ ಸ್ವಲ್ಪ ಬೇಜಾರ್ ಆದ್ರೂ ಶ್ವೇತಾ ಗೆ ಫುಲ್ ಖುಷಿ ಆಯ್ತು. ಯಾಕಂದ್ರೆ ಬೇರೆ ಕಡೆ ಹೋದ್ರೆ ಸ್ವಲ್ಪ ಕಂಟ್ರೋಲ್ ಅಲ್ಲಿ ಇರ್ತೀನಿ ಅಂತ. ಶ್ವೇತಾ ಖುಷಿಯಾಗಿ ಸರಿ ಹೋಗೋಕೆ ಎಲ್ಲಾ ರೆಡಿ ಮಾಡ್ಕೋ ಇವಾಗ ಎದ್ದು ನಡಿ ಊಟ ಮಾಡೋಣ ಅಂತ ಹೇಳಿದ್ಲು. ಎಲ್ಲರೂ ಕೂತು ಡಿನ್ನರ್ ಮಾಡಿದ್ವಿ.
****************************************