ಶಿಲ್ಪಾ ನಾ ಅವಳ ಮನೆ ಹತ್ತಿರ ಡ್ರಾಪ್ ಮಾಡಿ, ನಾನು ಮನೆಗೆ ಬಂದೆ, ಹರಿಣಿ ಅಕ್ಕ ಹಾಲ್ ಅಲ್ಲಿ ವಾಕ್ ಮಾಡ್ತಾ ಮೊಬೈಲ್ ಅಲ್ಲಿ ಮಾತಾಡ್ತಾ ಇದ್ರು, ನಾನ್ ಮನೆ ಡೋರ್ ಬೆಲ್ ಮಾಡಿದೆ. 2 ನಿಮಿಷದ ನಂತರ ಹರಿಣಿ ಅಕ್ಕ ಬಂದು ಡೋರ್ ಓಪನ್ ಮಾಡಿದ್ರು. ನಾನ್ ಹರಿಣಿ ಅಕ್ಕ ನಾ ನೋಡಿ ಅಕ್ಕ ನಿನ್ ಇನ್ನು ಮಲಗಿಲ್ವಾ ಅಂತ ಕೇಳ್ದೆ. ಇನ್ನು ಇಲ್ಲಾ ಕಣೋ ಡೆವಿಲ್ ಕಾಲ್ ಮಾಡಿದ್ಲು ಶ್ವೇತಾ ಮಲಗಿದ್ದಾಳೆ ಅಲ್ವಾ ಅದಕ್ಕೆ ಹಾಲ್ ಅಲ್ಲಿ ವಾಕ್ ಮಾಡ್ತಾ ಮಾತಾಡ್ತಾ ಇದ್ದೆ, ಹೌದು ನಿನ್ ಏನು ಇಷ್ಟು ಲೇಟ್ ಆಗಿ ಬರ್ತಾ ಇದ್ದಿಯಾ ಅಂತ ಕೇಳಿದ್ಲು. ಅದ ಶಿಲ್ಪಾ ಜೊತೆ ಡಿನ್ನರ್ ಮಾಡೋಕೆ ಹೋಗಿದ್ದೆ ಅವಳನ್ನ ಡ್ರಾಪ್ ಮಾಡಿ ಬರೋಕೆ ಲೇಟ್ ಆಯ್ತು ಅಂತ ಹೇಳ್ದೆ. ಶಿಲ್ಪಾ ಅಂದ್ರೆ ಬೈಕ್ ಅಲ್ಲಿ ಮನೆಗೆ ಡ್ರಾಪ್ ಮಾಡ್ತೀನಿ ಅಂತ ಹೇಳ್ದೆ ಅಲ್ವಾ ಅ ಹುಡುಗಿ ನೇ ನಾ ಅಂತ ಕೇಳಿದ್ಲು. ಅ ಅಕ್ಕ ಅ ಹುಡುಗಿ ನೇ ಅಂತ ಹೇಳ್ದೆ. ಹರಿಣಿ ಅಕ್ಕ ಏನು ಲವ್ ಅ ಅಂತ ಕೇಳಿದ್ಲು. ನಾನು ಮೇನ್ ಡೋರ್ ಕ್ಲೋಸ್ ಮಾಡಿ ಏನಕ್ಕ ನೀನು ಜಸ್ಟ್ ಫ್ರೆಂಡ್ಸ್ ಅಷ್ಟೇ, ಲವ್ ಅಂತದ್ದು ಏನು ಇಲ್ಲಾ ಆಲ್ರೆಡಿ ಅವಳಿಗೆ ಅತ್ತೆ ಮಗ ಒಬ್ಬ ಇದ್ದಾನೆ ಇಬ್ರು ಲವ್ ಮಾಡ್ತಾ ಇದ್ದಾರೆ ಅಂತ ಹೇಳ್ದೆ. ಹೌದ ನಾನ್ ಎಲ್ಲೋ ಇಬ್ರು ಲವ್ ಮಾಡ್ತಾ ಇದ್ದೀರಾ ಅಂತ ಅನ್ಕೊಂಡೆ ಸಾರೀ ಅಂತ ಹೇಳಿದ್ಲು. ಸಾರೀ ಎಲ್ಲಾ ಏನಕ್ಕೆ ಬಿಡು ಕಾಲ್ ಮಾತಾಡಿದ್ದು ಆಗಿದ್ರೆ ಹೋಗಿ ನಿದ್ದೆ ಮಾಡು ನಿದ್ದೆ ಕೆಡಬೇಡ ಅಂತ ಹೇಳ್ದೆ. ಹರಿಣಿ ಅಕ್ಕ ಹ್ಮ್ ಸರಿ ಕಣೋ ಅಂತ ಹೇಳಿ ಅವರ ರೂಮ್ ಗೆ ಹೋಗಿ ಡೋರ್ ಕ್ಲೋಸ್ ಮಾಡಿಕೊಂಡರು. ನಾನು ಅಡುಗೆ ಮನೆಗೆ ಹೋಗಿ ನೀರು ಕುಡಿದು ನನ್ನ ರೂಮ್ ಗೆ ಹೋಗಿ ಮಲಗಿಕೊಂಡೆ.
ಬೆಳಿಗ್ಗೆ ಎದ್ದು ರೆಡಿ ಆಗಿ ಆಫೀಸ್ ಗೆ ಹೋದೆ, ಶಿಲ್ಪಾ ಅಕಿರಾ ಇಬ್ರು ಆಲ್ರೆಡಿ ಆಫೀಸ್ ಗೆ ಬಂದಿದ್ರು, ನನ್ನ ನೋಡಿ ಶಿಲ್ಪಾ ಹಾಯ್ ಮಹಿ ಗುಡ್ ಮಾರ್ನಿಂಗ್ ಅಂತ ವಿಶ್ ಮಾಡಿದ್ಲು. ಅಕಿರಾ ನನ್ನ ಹತ್ತಿರ ಮಾತಾಡೋಕೆ ಹೋಗಲಿಲ್ಲ, ಸೋ ನಾನು ಮಾತಾಡೋಕೆ ಹೋಗಲಿಲ್ಲ, ನಾನು ಶಿಲ್ಪಾ ಗೆ ವಿಶ್ ಮಾಡಿ ನನ್ನ ಪ್ಲೇಸ್ ಅಲ್ಲಿ ಕೂತ್ಕೊಂಡು ವರ್ಕ್ ಮಾಡೋಣ ಅಂತ ಲ್ಯಾಪ್ಟಾಪ್ ತೆಗೆದೇ. ಯಾರೋ ಮಹಿ ಅಂತ ಕರೆದ್ರು ನಾನು ಲ್ಯಾಪ್ಟಾಪ್ ನಾ ಹಾಗೇ ಬಿಟ್ಟು ತಿರುಗಿ ನೋಡಿದೆ. ಮ್ಯಾನೇಜರ್ ಮತ್ತೆ ವಿನೋದ್ ಇಬ್ಬರು ನನ್ನ ಹತ್ತಿರ ಬಂದರು, ಮ್ಯಾನೇಜರ್ ನಾ ನೋಡಿ ಸರ್ ಹೇಳಿ ಅಂತ ಎದ್ದು ನಿಂತೇ. ಅಲ್ಲಿಗೆ ವಿನೋದ್ ಬಂದಿದ್ದನ್ನ ನೋಡಿ ಶಿಲ್ಪಾ ಅಕಿರಾ ಇಬ್ಬರು ಶಾಕ್ ಆಗಿ ಎದ್ದು ನಿಂತರು. ವಿನೋದ್ ಅಕಿರಾ ನಾ ಕೋಪದಿಂದ ಒಂದು ಸರಿ ನೋಡಿ ನನ್ನ ಕಡೆ ಕೊಲ್ಲೋ ಹಾಗೇ ನೋಡ್ತಾ ರಾಕ್ಷಸ ನಗು ನಗ್ತಾ ಇದ್ದಾ. ಮ್ಯಾನೇಜರ್ ಮಹಿ ನಿನ್ನ ಬೇರೆ ಟೀಂ ಗೆ ಚೇಂಜ್ ಮಾಡ್ತಾ ಇದ್ದೀನಿ ಸೋ ನಿನ್ ಇನ್ಮೇಲಿಂದ ನೀನು ಅ ಟೀಂ ಅಲ್ಲೇ ವರ್ಕ್ ಮಾಡಬೇಕು ಅಂತ ಹೇಳುದ್ರು. ಶಿಲ್ಪಾ ಸರ್ ಅವನು ಏನ್ ಮಾಡಿದ ಅವನನ್ನ ಬೇರೆ ಟೀಂ ಗೆ ಹಾಕ್ತಾ ಇದ್ದೀರಾ ವರ್ಕ್ ಎಲ್ಲಾ ಚೆನ್ನಾಗಿ ಮಾಡ್ತಾ ಇದ್ದಾನೆ ಅಲ್ವಾ ಅಂತ ಕೇಳಿದ್ಲು. ಮ್ಯಾನೇಜರ್ ಮಾತಾಡ್ತಾ ಶಿಲ್ಪಾ ಮಹಿ ಚೆನ್ನಾಗಿ ವರ್ಕ್ ಮಾಡ್ತಾನೆ ಅಂತ ನನಗು ಗೊತ್ತು ಆಗಂತ ಒಂದೇ ಟೀಂ ಅಲ್ಲಿ ಒಂದೇ ಪ್ರಾಜೆಕ್ಟ್ ಅಲ್ಲಿ ವರ್ಕ್ ಮಾಡ್ಕೊಂಡು ಇದ್ರೆ ಅವರು ಕೆಲಸ ಕಲಿಯೋದು ಯಾವಾಗ, ಸೋ ಅದಕ್ಕೆ ಮಹಿ ನಾ ಬೇರೆ ಟೀಂ ಗೆ ಹಾಕ್ತಾ ಇದ್ದೀನಿ ಅಂತ ಹೇಳಿದ್ರು. ನಾನು ಮ್ಯಾನೇಜರ್ ಮುಖನ ಸರಿಯಾಗಿ ಗಮನಿಸಿದೆ ಅದು ಅವರು ಮಾಡ್ತಾ ಇಲ್ಲಾ ಹಿಂದೆ ನಿಂತಿರೋ ವಿನೋದ್ ಮಾಡಿಸ್ತಾ ಇದ್ದಾನೆ ಅಂತ ಅರ್ಥ ಆಯ್ತು. ಸೋ ನಾನು ಓಕೆ ಸರ್ ಅಂತ ಹೇಳಿ ಲ್ಯಾಪ್ಟಾಪ್ ನಾ ಬ್ಯಾಗ್ ಅಲ್ಲಿ ಹಾಕಿ ಕೊಳ್ತಾ ಇದ್ದೆ. ವಿನೋದ್ ಮಾತಾಡ್ತಾ ಯಾರ್ ಯೋಗ್ಯತೆ ಏನು ಅಂತ ತಿಳ್ಕೊಂಡು ಅರ್ಥ ಮಾಡ್ಕೊಂಡು ಎಲ್ಲಿ ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇದ್ರೆ ನಾಲಕ್ಕು ದಿನ ಈ ಆಫೀಸ್ ಅಲ್ಲಿ ವರ್ಕ್ ಮಾಡ್ಕೊಂಡು ಇರ್ಬೋದು, ಇಲ್ಲಾ ಅಂದ್ರೆ ಇದೆ ತರ ಅ ಟೀಂ ಈ ಟೀಂ ಅಂತ ಒಂದು ದಿನ ಆಫೀಸ್ ಯಿಂದ ಗೆಟ್ ಔಟ್ ಆಗೋಗ್ತಾರೆ ಅಂತ ಹೇಳಿದ.
ಅದು ಎಲ್ಲರಿಗೂ ಕೇಳಿಸ್ತು ಅಕಿರಾ ಗು ಕೇಳಿಸ್ತು, ಶಿಲ್ಪಾ ಗು ಕೇಳಿಸ್ತು. ಶಿಲ್ಪಾ ವಿನೋದ್ ಮಾತಾಡೋ ಮಾತನ್ನ ಸ್ವಲ್ಪ ಹಿಡಿತದಲ್ಲಿ ಇಟ್ಕೊಂಡು ಮಾತಾಡು, ಬಾಯಿ ಇದೆ ಅಂತ ಇಷ್ಟ ಬಂದ ಹಾಗೇ ಮಾತಾಡಿದ್ರೆ ಪರಿಣಾಮ ಬೇರೆ ಇರುತ್ತೆ ಅಂತ ಹೇಳಿದ್ಲು. ವಿನೋದ್ ಶಿಲ್ಪಾ ಮೇಲೆ ಕೋಪ ಮಾಡ್ಕೊಂಡು ಯಾರಿಗೆ ಹೇಳ್ತಾ ಇದ್ದಿಯಾ ಅಂತ ಅವಳ ಕಡೆ ಗೆ ಹೆಜ್ಜೆ ಇಟ್ಟ ತಕ್ಷಣ ನಾನು ಇಬ್ಬರ ಮಧ್ಯ ಹೋಗಿ,, ಬ್ರದರ್ ನೀವು ಮಾತಾಡಿದ್ರಿ ಅವರು ಮಾತಾಡಿದ್ರು ಅಲ್ಲಿಗೆ ಮುಗಿತು ಅದು ಬಿಟ್ಟು ನೀವು ಒಂದು ಹುಡುಗಿ ಮೇಲೆ ಈ ರೀತಿ ಹೋಗೋದು ತಪ್ಪು ಅಂತ ಹೇಳ್ದೆ. ವಿನೋದ್ ನನ್ನ ಕಡೆ ಕೋಪದಿಂದ ನೋಡ್ತಾ ಏನೋ ಹೀರೋ ಆಗೋಕೆ ಬಂದ ಮಗನೆ ನೆನ್ನೆ ನಿನ್ ಮಾಡಿದ ಕೆಲಸಕ್ಕೆ ಬರಿ ಟೀಂ ಚೇಂಜ್ ಮಾಡಿಸಿದ್ದೀನಿ ಜಾಸ್ತಿ ಮಾತಾಡಿದ್ರೆ ಈ ಕಂಪನಿ ಅಲ್ಲ ಯಾವ ಕಂಪನಿ ಅಲ್ಲಿ ಕೂಡ ನಿನಗೆ ಕೆಲಸ ಸಿಗದೇ ಇರೋ ಹಾಗೇ ಮಾಡ್ತೀನಿ ಹುಷಾರು ಅಂತ ವಾರ್ನಿಂಗ್ ಕೊಟ್ಟ. ನಾನು ನಗ್ತಾ ಏನು ಏನ್ ಹೇಳ್ದೆ ಇನ್ನೊಂದು ಸರಿ ಹೇಳು ನೀನು ನನ್ನ ಕೆಲಸದಿಂದ ತೆಗೆದು ಹಾಕಿಸ್ತೀಯ, ಬೇರೆ ಕಂಪನಿ ಗಳಲ್ಲಿ ಕೆಲಸ ಸಿಗದೇ ಇರೋ ಹಾಗೇ ಮಾಡ್ತಿಯಾ, ಓಕೆ ಬ್ರದರ್ ನಿನ್ ಖುಷಿ ನಾ ನಾನ್ ಯಾಕೆ ಬೇಡ ಅನ್ಲಿ, ಅಂತ ಹೇಳಿ, ಮ್ಯಾನೇಜರ್ ನಾ ನೋಡ್ತಾ ಸರ್ ವಿತ್ ಯುವರ್ ಪರ್ಮಿಷನ್ ನಾನ್ ಒಂದು ಕಾಲ್ ಮಾಡ್ಲಾ ಅಂತ ಕೇಳ್ದೆ. ಅಷ್ಟರಲ್ಲಿ ಅಕಿರಾ ಮ್ಯಾನೇಜರ್ ಹತ್ತಿರ ಸರ್ ಒಂದು ನಿಮಿಷ ಅಂತ ಹೇಳಿ ನನ್ನ ಕೈ ಇಡ್ಕೊಂಡ್ ಎಳೆದುಕೊಂಡು ಹೋದಳು, ಎಲ್ಲರೂ ನಮ್ಮಿಬ್ಬರ ಕಡೆನೇ ನೋಡೋಕೆ ಶುರು ಮಾಡಿದ್ರು.
ಅಕಿರಾ ನನ್ನ ಕೈ ಇಡಿದು ಕೊಂಡು, ಒಂದು ಕ್ಯಾಬಿನ್ ಒಳಗೆ ಕರ್ಕೊಂಡು ಹೋದಳು , ಕ್ಯಾಬಿನ್ ಡೋರ್ ಕ್ಲೋಸ್ ಮಾಡಿ, ಮಹಿ ನಿನಗೆ ಬುದ್ದಿ ಏನಾದ್ರು ಇದೆಯಾ ಅವನು ಬೇಕು ಅಂತಾನೆ ನಿನ್ನ ಬೇರೆ ಟೀಂ ಗೆ ಹಾಕ್ತಾ ಇದ್ದಾನೆ , ನೀನು ಅವನಿಗೆ ಇನ್ನು ಕೋಪ ತರಿಸಿದ್ರೆ ಕೆಲಸದಿಂದ ತೆಗೆದು ಹಾಕಿಸ್ತಾನೆ, ಅವರ ಅಪ್ಪನಿಗೆ ಇರೋ ಪವರ್ ಗೆ ಎಲ್ಲೂ ಕೆಲಸ ಸಿಗದೇ ಇರೋ ಹಾಗೇ ಮಾಡ್ತಾನೆ. ನಮ್ ಮನೇಲಿ ಹೇಳ್ತಾನೆ, ಕೆಲಸ ಇಲ್ಲದೆ ಇರೋ ಗಂಡಸಿಗೆ ಹೆಣ್ಣಲ್ಲ ಯಾರು ಕುಡಿಯೋಕು ನೀರು ಕೊಡೋದಿಲ್ಲ, ನೋಡು ಅವನು ಏನ್ ಮಾಡ್ತಾನೋ ಮಾಡ್ಲಿ ಏನ್ ಮಾತಾಡ್ತಾನೋ ಮಾತಾಡಿಕೊಳ್ಳಿ ನಿನ್ ಏನು ಮಾತಾಡೋಕೆ ಹೋಗಬೇಡ, ನಿನಗೆ ಜಾಬ್ ಇಲ್ಲಾ ಅಂದ್ರೆ ಮತ್ತೆ ಪ್ರಾಬ್ಲಮ್ ಆಗುತ್ತೆ, ನೋಡು ಅವನು ಏನ್ ಮಾಡ್ತಾನೋ ಮಾಡ್ಲಿ ನಿನ್ ಏನು ಮಾತಾಡದೆ ಸುಮ್ನೆ ಇದ್ದು ಬಿಡು, ಪ್ಲೀಸ್ ಅಂತ ಕೇಳಿ ಕೊಳ್ತಾ ಅಲ್ಲೇ ಇದ್ದಾ ಚೇರ್ ಮೇಲೆ ಕೂತು ಬಿಟ್ಟಳು.
ನಾನು ಸರಿ ಅಂತ ಹೇಳಿ, ಏನು ಮಾತನಾಡದೆ ಹೊರಗೆ ಬಂದು ಮ್ಯಾನೇಜರ್ ಹತ್ತಿರ ಬಂದು ಸರ್ ಅದು ಅಂತ ಹೇಳೋಕು ಮೊದಲೇ. ವಿನೋದ್ ನಗ್ತಾ ಏನು ಅಕಿರಾ ಹೋಗಿ ತಪ್ಪಾಯ್ತು ಅಂತ ಕೇಳ್ಕೊ ನಿನ್ನ ಜಾಬ್ ನಾ ಉಳಿಸ್ಕೊ ಅಂತ ಹೇಳಿದ್ಲ ಅಂತ ಹೇಳ್ದ. ನಾನು ವಿನೋದ್ ಕಡೆಗೆ ನೋಡ್ತಾ ಎಸ್ ಬ್ರದರ್ ಹಾಗೇನೇ ಹೇಳಿದ್ಲು, ನಿಮಗೆ ಹೇಗೆ ಗೊತ್ತಾಯ್ತು ಅ ಕ್ಯಾಬಿನ್ ಅಲ್ಲಿ ಮೈಕ್ ಏನಾದ್ರು ಇಟ್ಟಿದ್ದೀರಾ ಅಂತ ಕೇಳ್ದೆ. ಅದಕ್ಕೆ ವಿನೋದ್ ನಗ್ತಾ ಮೈಕ್ ಏನಕ್ಕೆ ಇಡ್ಲಿ ನಿನ್ನ ಪರಿಸ್ಥಿತಿ ಅಕಿರಾ ಫೇಸ್ ಎಕ್ಸ್ಪ್ರೆಶನ್ ನೋಡಿದ್ರೆ ಗೊತ್ತಾಗುತ್ತೆ, ಈ ಜಾಬ್ ಇಲ್ಲಾ ಅಂದ್ರೆ ತುಂಬಾ ಕಷ್ಟ ಆಗುತ್ತೆ ಅಂತ. ನಿನಗೆ ಇದೆ ಲಾಸ್ಟ ವಾರ್ನಿಂಗ್ ಇನ್ಮೇಲೆ ನಿನ್ನ ಪ್ಲೇಸ್ ಎಲ್ಲಿ ಏನು ಅಂತ ಅರ್ಥ ಮಾಡ್ಕೊಂಡು ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇದ್ರೆ ಸರಿ ಇಲ್ಲಾ ಅಂದ್ರೆ ಬೆಂಗಳೂರಿಗೆ ಹೇಗೆ ಬಂದೋ ಹಾಗೇ ವಾಪಸ್ಸು ಹೋಗ್ತಿಯ ಅಂತ ಹೇಳಿದ. ನಾನು ಸಾರೀ ಬ್ರದರ್ ಗೊತ್ತಿಲ್ದೆ ಏನೋ ನನ್ನಿಂದ ತಪ್ಪಾಯಿತು ಕ್ಷಮಿಸಿ ಬಿಡಿ ಅಂತ ಕೇಳಿದೆ. ಅಷ್ಟು ಜನರ ಮುಂದೆ ಸಾರೀ ಕೇಳಿದಕ್ಕೆ ವಿನೋದ್ ಗೆ ತುಂಬಾ ಖುಷಿ ಆಯ್ತು ಅಂತ ಅನ್ನಿಸುತ್ತೆ. ವಿನೋದ್ ಹೋಗ್ಲಿ ಪಾಪ ಅಂತ ಬಿಡ್ತಾ ಇದ್ದೀನಿ ಅಂತ ಹೇಳಿ, ಮ್ಯಾನೇಜರ್ ಜೊತೆಗೆ ವಾಪಸ್ಸು ಅಲ್ಲಿಂದ ಹೊರಟು ಹೋದ. ಅವರು ಹೋದಮೇಲೆ ಶಿಲ್ಪಾ ಕೋಪದಿಂದ ಲೋ ನಿನಗೆ ಏನಾದ್ರು ಲೂಸ್ ಅ ಅವನು ಅಷ್ಟೆಲ್ಲ ಮಾತಾಡಿದ್ರು ನೀನೇ ಸಾರೀ ಕೇಳಿದೆ ಅಲ್ವಾ, ನನಗೆ ಯಾಕೋ ಚೂರು ಇಷ್ಟ ಆಗಲಿಲ್ಲ ಅಂತ ಕೋಪದಲ್ಲಿ ಹೇಳಿದ್ಲು . ಬಿಡು ಶಿಲ್ಪಾ ಸಾರೀ ಕೇಳಿದ ತಕ್ಷಣ ನಾವೇನು ಚಿಕ್ಕವ್ರು ಆಗಿ ಬಿಡೋದಿಲ್ಲ ಅಂತ ಹೇಳಿ ಹೋಗಿ ನನ್ನ ವರ್ಕ್ ಪ್ಲೇಸ್ ಅಲ್ಲಿ ಕೂತ್ಕೊಂಡು ವರ್ಕ್ ಮಾಡೋಕೆ ಶುರು ಮಾಡಿದೆ..
ಸ್ವಲ್ಪ ಸಮಯಾದ ನಂತರ ಅಕಿರಾ ಕ್ಯಾಬಿನ್ ನಿಂದ ಹೊರಗೆ ಬಂದು ಅವಳ ಪ್ಲೇಸ್ ಅಲ್ಲಿ ಕೂತ್ಕೊಂಡು ವರ್ಕ್ ಮಾಡೋಕೆ ಶುರು ಮಾಡಿದ್ಲು. ಮಧ್ಯಾಹ್ನ ಲಂಚ್ ಟೈಮ್ ಗೆ ಹೊರಗೆ ಹೋಗೋಣ ಅಂತ ಅನ್ಕೊಂಡು ಹೋಗ್ತಾ ಇದ್ದೆ. ಶಿಲ್ಪಾ ಮಹಿ ಎಲ್ಲಿಗೆ ಅಂತ ಕೇಳಿದ್ಲು. ಹೊರಗೆ ಹೋಗ್ತಾ ಇದ್ದೀನಿ ಲಂಚ್ ಗೆ ಅಂತ ಹೇಳ್ದೆ. ಸರಿ ನಾನು ಬರ್ತೀನಿ ಇರು ಅಂತ ಹೇಳಿದ್ಲು. ಸರಿ ಬಾ ಅಂತ ಹೇಳಿ ಇಬ್ಬರು ಬೈಕ್ ಅಲ್ಲಿ ಹೊರಗಡೆ ಲಂಚ್ ಗೆ ಬಂದ್ವಿ. ಇಬ್ರು ಲಂಚ್ ಆರ್ಡರ್ ಮಾಡಿ ಕುತ್ಕೊಂಡ್ವಿ. ಶಿಲ್ಪಾ ಲೋ ನೇರವಾಗಿ ಒಂದು ಪ್ರಶ್ನೆ ಕೇಳ್ತೀನಿ ನಿಜ ಹೇಳು ಅಂತ ಕೇಳಿದ್ಲು. ನಾನು ಅ ಕೇಳು ಅಂತ ಹೇಳ್ದೆ. ಅಲ್ವೋ ನಿನಗೆ ಕೋಪ ಅನ್ನೋದೇ ಬರೋದಿಲ್ವ, ನೆನ್ನೆ ಧ್ರುವ್ ಅಷ್ಟು ಹೇಳಿದ್ರು ಸುಮ್ನೆ ಇದ್ದೆ. ಇವತ್ತು ವಿನೋದ್ ಅಷ್ಟು ಜನರ ಮುಂದೆ ಅಷ್ಟು ಮಾತಾಡಿದ್ರು ನೀನೇ ಸಾರೀ ಕೇಳಿದೆ, ಹುಡುಗಿ ಆಗಿ ನನಗೆ ಇಷ್ಟು ಕೋಪ ಬರಬೇಕಾದ್ರೆ ಹುಡುಗ ಕಣೋ ನೀನು ನಿನಗೆ ಕೋಪ ಬರೋದಿಲ್ವಾ ಅಂತ ಕೇಳಿದ್ಲು. ನಾನು ನಗ್ತಾ ನೋಡೇ ಯಾವನೋ ಏನೋ ಮಾತಾಡ್ತಾನೆ ಅಂತ ನಾವು ಎಲ್ಲದಕ್ಕೂ ಕೋಪ ಮಾಡ್ಕೊಂಡ್ರೆ ಬದುಕೋದು ಕಷ್ಟ ಆಗುತ್ತೆ, ಆಗಂತ ಸುಮ್ನೆ ಇದ್ರು ಕಷ್ಟ ನೇ, ತಲೆ ಗಟ್ಟಿ ಇದೆ ಅಳ್ತಾ ಬಂಡೆಗೆ ಹೊಡ್ಕೊಳ್ಳೋಕೆ ಆಗುತ್ತಾ ಇಲ್ಲಾ ಅಲ್ವಾ. ಅಕಿರಾ ಹೆಲ್ಪ್ ಕೇಳಿದ್ಲು ಹೆಲ್ಪ್ ಮಾಡ್ತೀನಿ ಅಂತ ಒಪ್ಪಿಕೊಂಡೆ, ಇವಾಗ ನಾನ್ ಏನಾದ್ರು ಮಾಡೋಕೆ ಹೋದ್ರು ಮಾತಾಡೋಕು ಹೋದ್ರು ಅದು ಅವಳಿಗೆ ಪ್ರಾಬ್ಲಮ್ ಆಗುತ್ತೆ, ಸ್ವಲ್ಪ ದಿನ ಅಷ್ಟೇ ಅಲ್ವಾ ಬಿಡು ಏನು ಆಗಲ್ಲಾ, ಮೊದಲು ಊಟ ಮಾಡು ಅಂತ ಹೇಳ್ದೆ. ಶಿಲ್ಪಾ ಏನು ಮಾತಾಡದೆ ತಿನ್ನೋಕೆ ಶುರು ಮಾಡಿದ್ಲು. ಇಬ್ರು ಲಂಚ್ ಮಾಡಿಕೊಂಡು ಹೋಟೆಲ್ ನಿಂದ ಹೊರಗಡೆ ಬಂದ್ವಿ. ಅದೇ ಟೈಮ್ ಗೆ ವಿನೋದ್ ಕೂಡ ಅಲ್ಲಿಗೆ ಅವನ ಫ್ರೆಂಡ್ ಜೊತೆಗೆ ಬಂದ. ನಾನು ಸೈಡ್ ಮಾಡ್ಕೊಂಡು ಅಲ್ಲಿಂದ ಬೈಕ್ ಪಾರ್ಕಿಂಗ್ ಕಡೆಗೆ ಬಂದೆ. ಶಿಲ್ಪಾ ಬಂದು ಬೈಕ್ ಅಲ್ಲಿ ಕುತ್ಕೊಂಡ್ಲು. ಇಬ್ರು ಆಫೀಸ್ ಗೆ ಹೊದ್ವಿ.
ಅಕಿರಾಗೆ ನಾನ್ ಹೆಲ್ಪ್ ಮಾಡ್ತಾ ಈ ರೀತಿ ಅವಮಾನ ಪಡೋದು ಶಿಲ್ಪಾ ಗೆ ಚೂರು ಇಷ್ಟ ಇರಲಿಲ್ಲ, ಅಕಿರಾ ಕೂಡ ನನಗೆ ಅವಮಾನ ಆಗೋದಕ್ಕಿಂತ ಅವಳ ಪ್ರೀತಿ ಗೆ ಎಲ್ಲಿ ಪ್ರಾಬ್ಲಮ್ ಆಗುತ್ತೆ ಅಂತ ಯೋಚ್ನೆ ಮಾಡ್ತಾ ಇರೋದನ್ನ ನೋಡಿ ಶಿಲ್ಪಾ ಗೆ ಅಕಿರಾ ಮೇಲೆ ಇದ್ದಾ ಫ್ರೆಂಡ್ಶಿಪ್ ಬಾಂಡ್ ಚೇಂಜ್ ಆಗೋಕೆ ಶುರುವಾಯ್ತು, ಹೇಟ್ ಮಾಡೋಕೆ ಶುರು ಮಾಡಿದ್ಲು. ಅವಳ ಜೊತೆಗೆ ಮಾತಾಡೋದನ್ನ ಕಡಿಮೆ ಮಾಡಿದ್ಲು, ಆಫೀಸ್ ವರ್ಕ್ ವಿಷಯ ಏನಾದ್ರು ಇದ್ರೆ ಮಾತ್ರ ಮಾತಾಡೋಕೆ ಹೋಗ್ತಾ ಇದ್ಲು ಇಲ್ಲಾ ಅಂದ್ರೆ ಅವಳ ಕೆಲಸ ಏನು ಅಷ್ಟ್ರಲ್ಲಿ ಇರ್ತಾ ಇದ್ಲು. ಅಕಿರಾ ಕೂಡ ಅಷ್ಟಾಗಿ ಶಿಲ್ಪಾ ಬಗ್ಗೆ ಯೋಚ್ನೆ ಮಾಡೋಕೆ ಹೋಗ್ತಾ ಇರಲಿಲ್ಲ, ಆಫೀಸ್ ಮುಗಿದ ಮೇಲೆ ಧ್ರುವ್ ನಾ ಮೀಟ್ ಮಾಡೋದು ಜಾಸ್ತಿ ಮಾಡಿದ್ಲು. ಒಂದೇ ಆಫೀಸ್ ಅಲ್ಲಿ ವರ್ಕ್ ಮಾಡೋದು ಅಲ್ವಾ ಅಂತ ಅಕಿರಾ ತಂದೆ ತಾಯಿ ಪ್ರಶ್ನೆ ಮಾಡೋಕೆ ಹೋಗ್ತಾ ಇರಲಿಲ್ಲ. ನಾನ್ ಕೂಡ ಕಂಪ್ಲೀಟ್ ಆಗಿ ಅಕಿರಾ ಜೊತೆಗೆ ಮಾತಾಡೋದನ್ನ ಸ್ಟಾಪ್ ಮಾಡಿದೆ. ಹೀಗೆ ತಿಂಗಳು ಕಳೆದು ಹೋಯ್ತು. ವಿನೋದ್ ಬರ್ತಾ ಬರ್ತಾ ನನ್ನ ಮೇಲೆ ದ್ವೇಷ ನಾ ಜಾಸ್ತಿ ಬೆಳೆಸಿಕೊಳ್ಳೋಕೆ ಶುರು ಮಾಡಿದ.
ನಾನು ವಿನೋದ್ ನಿಂದ ಎಷ್ಟೇ ದೂರ ಇದ್ರು ಎಷ್ಟೇ ಸೈಲೆಂಟ್ ಇದ್ರು ಕೊನೆಗೂ ಅವನ ಬುದ್ದಿ ತೋರಿಸೇ ಬಿಟ್ಟ.
****************************************