Mahi - 17 in Kannada Love Stories by S Pr books and stories PDF | ಮಹಿ - 17

The Author
Featured Books
  • ಸತ್ತ ಪ್ರೀತಿ ಜೀವಂತ ರಹಸ್ಯ 5

    ಕನ್ನಡಿ ಮನೆಯೊಳಗೆ ಮಾಣಿಕ್‌ನ ಕಡೆಯವರ ಪ್ರವೇಶದ ಶಬ್ದ ಕೇಳಿಸುತ್ತಿದ್ದಂತ...

  • ಮಹಿ - 17

         ಬೆಳಿಗ್ಗೆ ಎದ್ದು ರೆಡಿ ಆಗಿ ಲಗೇಜ್ ತೆಗೆದು ಕೊಂಡು ಹಾಲ್ ಗೆ ಬಂದೆ...

  • ಮರು ಹುಟ್ಟು 11

    ಆಕೆಯ ಪ್ರೀತಿಯ ಹೆಜ್ಜೆ,ಪ್ರಶ್ನಿಸುವ ಮನಸ್ಸು (ಇಂಟೀರಿಯರ್ - ಕಚೇರಿ)ಆರ್...

  • ಮುಗಿಯದ ಸಮೀಕ್ಷೆ

    ಅವಿನಾಶ್‌ಗೆ ಸರ್ಕಾರಿ ಕೆಲಸ ಸಿಕ್ಕಿದ್ದು ಒಂದು ಸಣ್ಣ ವಿಜಯದಂತೆಯೇ ಇತ್ತ...

  • ಎಣ್ಣೆ ಇಲ್ಲದ ಹಣತೆ

    ಪುರಾತನ ಕಾಲದ, ಇಟ್ಟಿಗೆಯ ಗೋಡೆಗಳು ಕಾಲದ ಕಲೆಗಳನ್ನು ಹೊತ್ತಿದ್ದ '...

Categories
Share

ಮಹಿ - 17

     ಬೆಳಿಗ್ಗೆ ಎದ್ದು ರೆಡಿ ಆಗಿ ಲಗೇಜ್ ತೆಗೆದು ಕೊಂಡು ಹಾಲ್ ಗೆ ಬಂದೆ, ಹಾಲ್ ಅಲ್ಲಿ ಅಪ್ಪ ಅಮ್ಮ ಶ್ವೇತಾ ಹರಿಣಿ ನಾಲಕ್ಕು ಜನ ಕೂತ್ಕೊಂಡು ಇದ್ದರು. ಅಮ್ಮ ಸ್ವಲ್ಪ ಬೇಜಾರ್ ಅಲ್ಲಿ ಇದ್ರು, ಶ್ವೇತಾ ಅಮ್ಮನ ನೋಡಿ ಅಮ್ಮ ಇವಾಗ ಏನಕ್ಕೆ ನೀನು ಮುಖ ನಾ ಹೀಗೆ ಇಟ್ಕೊಂಡು ಇದ್ದಿಯಾ, ಅವನೇನು ದೇಶ ಬಿಟ್ಟು ಹೋಗ್ತಾ ಇದ್ದಾನ ಇಲ್ಲೇ ಪಕ್ಕದಲ್ಲಿ ಇರೋ ಮೈಸೂರ್ ಗೆ, ಇದಕೆಲ್ಲ ನೀನು ಈ ರೀತಿ ಅದ್ರೆ ತುಂಬಾ ಕಷ್ಟ ಅವನನ್ನ ನೋಡಿ ಎಷ್ಟು ಖುಷಿಯಾಗಿ ಇದ್ದಾನೆ ಅಂತ ಹೇಳಿದ್ರೆ. ಅಮ್ಮ ಏನೋ ಹೋಗು ಅಂತ ಎದ್ದು ಅಡುಗೆ ಮನೆಗೆ ಹೋಗಿ ಪ್ಲೇಟ್ ಅಲ್ಲಿ ತಿಂಡಿ ತಗೋಬಂದು ನನ್ನ ಸೋಫಾ ಮೇಲೆ ಕೂರಿಸಿ ನನ್ನ ಪಕ್ಕ ಕೂತು ನನಗೆ ತಿಂಡಿ ತಿನ್ನಿಸೋಕೆ ಶುರು ಮಾಡಿದ್ರು. ನಾನು ಖುಷಿ ಯಿಂದ ತಿಂತ ಶ್ವೇತಾ ಕಡೆ ನೋಡಿದೆ. ಶ್ವೇತಾ ಜಾಸ್ತಿ ಖುಷಿ ಯಾಗ ಬೇಡ ಅಂತ ಸ್ವಲ್ಪ ಕೋಪ ದಲ್ಲಿ ಹೇಳ್ತಾ, ಬಂದು ಪಕ್ಕದಲ್ಲಿ ಕೂತ್ಕೊಂಡು, ನನ್ನ ಕೈಗೆ ಒಂದು ಕಾರ್ಡ್ ಕೊಡ್ತಾ ಮೈಸೂರ್ ಗೆ ಹೋದಮೇಲೆ ಈ ನಂಬರ್ ಗೆ ಕಾಲ್ ಮಾಡು ಅಂತ ಹೇಳಿದ್ಲು. ನಾನ್ ಏನು ವಾದ ಮಾಡದೇ ಕಾರ್ಡ್ ತೆಗೆದುಕೊಂಡು ಸರಿ ಅಂತ ಹೇಳ್ದೆ. ಅಮ್ಮ ತಿಂಡಿ ತಿನ್ನೋಸೋದು ಮುಗಿಸಿದ್ರು ಹೊಟ್ಟೆ ತುಂಬಾ ತಿಂದೆ. ಆಮೇಲೆ ಫ್ರೆಂಡ್ ಬಂದ ಮನೆಯವರಿಗೆ ಬೈ ಹೇಳಿ ಹರಿಣಿ ಅಕ್ಕ ಗೆ ಹುಷಾರು ಅಂತ ಹೇಳಿ ಫ್ರೆಂಡ್ ಬೈಕ್ ಅಲ್ಲಿ ಶಿಲ್ಪಾ ಅವರ ಮನೆ ಹತ್ತಿರ ಬಂದು ಇಳಿದು ಫ್ರೆಂಡ್ ಗೆ ಬೈ ಹೇಳಿ ಶಿಲ್ಪಾ ಅವರ ಮನೆ ಒಳಗೆ ಹೋದೆ.  ಶಿಲ್ಪಾ ನನ್ನ ನೋಡಿ ಮಹಿ ತಿಂಡಿ ಮಾಡು ಬಾ ಅಂತ ಕರೆದ್ಲು. ಬರ್ತಾ ತಿಂಡಿ ಮಾಡ್ಕೊಂಡು ಬಂದೆ ಅಂತ ಹೇಳ್ದೆ.  ಶಿಲ್ಪಾ ಪಕ್ಕ ಒಬ್ಬ ಹುಡುಗ ಇದ್ದಾ, ನಾನು ಯಾರ್ ಇವನು ಅಂತ ಯೋಚ್ನೆ ಮಾಡ್ತಾ ನೋಡ್ತಾ ಇದ್ದೆ. ಶಿಲ್ಪಾ ನಾನ್ ನೋಡೋದನ್ನ ನೋಡಿ ಮಹಿ ನಾನ್ ಹೇಳಿದೆ ಅಲ್ವಾ ಒಂದು ಪ್ರಾಣಿ ಇದೆ ನನಗೋಸ್ಕರ ಅಂತ ಇದೆ ಅ ಪ್ರಾಣಿ, ಮದನ್ ಅಂತ ಪರಿಚಯ ಮಾಡಿಸಿ ಕೊಟ್ಟಳು. ನಾನು ಕೈ ಕೊಟ್ಟು ನೈಸ್ ಟು ಮೀಟ್ ಯು ಬ್ರದರ್ ಅಂತ ಹೇಳ್ದೆ. ಅವರು ಕೈ ಕೊಟ್ಟು ವಿಶ್ ಮಾಡಿ ಮದನ್ ಅಂತ ಕರೀರಿ ಅಂತ ಹೇಳ್ದ. ಓಕೆ ಮದನ್ ಅಂತ ಹೇಳಿದೆ. ಸ್ವಲ್ಪ ಹೊತ್ತು ಮಾತಾಡಿಕೊಂಡು ಲಗೇಜ್ ನಾ ಕಾರ್ ಅಲ್ಲಿ ಇಟ್ಟು, ಮದನ್ ಹತ್ತಿರ ಕಾರ್ ನಾನ್ ಡ್ರೈವ್ ಮಾಡ್ಲಾ ಅಂತ ಕೇಳ್ದೆ. ಮದನ್ ಸ್ಮೈಲ್ ಮಾಡ್ತಾ ಥ್ಯಾಂಕ್ಸ್ ಮಹಿ, ಅರ್ಥ ಮಾಡಿಕೊಂಡಿದ್ದಕ್ಕೆ ಅಂತ ಹೇಳಿ ಕಾರ್ ಕಿ ಕೊಟ್ಟ ನಾನ್ ಹೋಗಿ ಡ್ರೈವಿಂಗ್ ಸೀಟ್ ಅಲ್ಲಿ ಕುತ್ಕೊಂಡೆ. ಮದನ್ ಶಿಲ್ಪಾ ಹತ್ತಿರ ನಿನ್ ಮುಂದೆ ಕುತ್ಕೋ ನಾನ್ ಹಿಂದೆ ಮಲಗಿ ಕೊಳ್ತೀನಿ ಅಂತ ಹೇಳಿ ಹಿಂದೆ ಡೋರ್ ಓಪನ್ ಮಾಡಿಕೊಂಡು ಶಿಲ್ಪಾ ಅವರ ಅಪ್ಪ ಅಮ್ಮನಿಗೆ ಬೈ ಹೇಳಿ ಹಿಂದೆ ಕುತ್ಕೊಂಡ, ಶಿಲ್ಪಾ ಅವರ ಅಪ್ಪ ಅಮ್ಮನಿಗೆ ಬೈ ಹೇಳಿ ಕಾರ್ ಅಲ್ಲಿ ಕುತ್ಕೊಂಡ್ಲು, ನಾನು ಕಾರ್ ನಾ ಸ್ಟಾರ್ಟ್ ಮಾಡಿ ಮೈಸೂರ್ ಕಡೆಗೆ ಪ್ರಯಾಣ ಶುರು ಮಾಡಿದೆ..

     ಮದನ್ ಮಾರ್ನಿಂಗ್ ಸರಿಯಾಗಿ ನಿದ್ದೆ ಮಾಡಿಲ್ಲ ಅಂತ ಅನ್ನಿಸುತ್ತೆ ಹಿಂದೆ ಸೀಟ್ ಅಲ್ಲಿ ಆರಾಮಾಗಿ ನಿದ್ದೆ ಮಾಡೋಕೆ ಶುರು ಮಾಡಿದ. ಶಿಲ್ಪಾ ಅವರ ಅಜ್ಜಿ ತಾತ ಅವರ ಮನೆಯವರ ಬಗ್ಗೆ ಹೇಳೋಕೆ ಶುರು ಮಾಡಿದ್ಲು. ಕೆಲವು ಗಂಟೆಗಳ ನಂತರ ಮೈಸೂರ್ ಅಲ್ಲಿ ಇರೋ ಶಿಲ್ಪಾ ಅವರ ತಾತನ ಅವರ ಮನೆ ಹತ್ತಿರ ಬಂದ್ವಿ. ನಾನು ಕಾರ್ ಇಳಿದು ಹೊರಗೆ ಬಂದು ಅವರ ಮನೆ ನೋಡೋಕೆ ಶುರು ಮಾಡಿದೆ.  ಶಿಲ್ಪಾ ಅವರ ತಾತ ನಾ ಮನೆ ಮತ್ತೆ ಪಕ್ಕದಲ್ಲಿ ಇದ್ದಾ ಮನೆ ಎರಡು ಒಂದೇ ರೀತಿ ಇದೆ. ನಾನು ಶಿಲ್ಪಾ ಕಡೆಗೆ ನೋಡಿದೆ. ಶಿಲ್ಪಾ ಒಂದು ತಾತ ನಾ ಮನೆ ಇದರಲ್ಲಿ ಚಿಕ್ಕಪ್ಪ ಚಿಕ್ಕಮ್ಮ ಅವರ ಮಗಳು ಅಜ್ಜಿ ತಾತ ಇದ್ದಾರೆ ಅಂತ ಹೇಳಿದ್ಲು. ಮದನ್ ಅದು ನಮ್ ಮನೆ, ಇವಳ ಅತ್ತೆ ಮನೆ ಅಂತ ಹೇಳಿದ್ಲು. ಮನೆ ಒಳಗೆ ಯಿಂದ ಒಬ್ಬ ವ್ಯಕ್ತಿ ಬರ್ತಾ ಏನು ಅಲ್ಲೇ ಇರ್ತೀರ ಇಲ್ಲಾ ಮನೆ ಒಳಗೆ ಬರ್ತೀರಾ ಅಂತ ಹೇಳ್ತಾ ನಮ್ ಹತ್ತಿರ ಬಂದ್ರು. ಶಿಲ್ಪಾ ಚಿಕ್ಕಪ್ಪ ಅಂತ ಅವರ ಹತ್ತಿರ ಹೋಗಿ ಅಪ್ಪಿಕೊಂಡಳು. ಮದನ್ ಮಹಿ ಲಗೇಜ್ ನಾ ಆಮೇಲೆ ತಗೊಳೋಣ ಬಾ ಅಂತ ಹೇಳಿ ಮನೆ ಒಳಗೆ ಕರ್ಕೊಂಡು ಹೋದ. 

  ಒಳಗೆ ಹೋಗ್ತಾ ಇದ್ದಾ ಹಾಗೇ ವಯಸ್ಸಾದ ವ್ಯಕ್ತಿ ಒಬ್ಬರು ಮಾತಾಡ್ತಾ ಪ್ರಯಾಣ ಚೆನ್ನಾಗಿ ಆಯಿತ ಅಂತ ಮದನ್ ನಾ ಕೇಳಿದ್ರು. ಶಿಲ್ಪಾ  ಅವನಿಗೆ ಏನು ತುಂಬಾ ಚೆನ್ನಾಗಿ ನಿದ್ದೆ ಮಾಡ್ಕೊಂಡು ಬಂದ ಅಂತ ಹೇಳಿದ್ಲು. ಅಜ್ಜಿ ಪಾಪ ಇನ್ನೇನೆ ಮಾಡ್ತಾನೆ ರಾತ್ರಿ ಬರೋಕೆ ಲೇಟ್ ಆಯ್ತು ಬೆಳಿಗ್ಗೆ ಎದ್ದು ಬೆಂಗಳೂರಿಗೆ ಬಂದ. ನಿದ್ದೆ ನೇ ಹೋಗಿಲ್ಲ ಅಂತ ಹೇಳಿದ್ರು. ಶಿಲ್ಪಾ ಆಯ್ತು ಬಿಡಜ್ಜಿ ಮೊಮ್ಮಗನನ್ನ ಹಿಂದೆ ಹಾಕೊಂಡು ಬರಬೇಡ ಅಂತ ಹೇಳಿ ಹೋಗಿ ಅವರ ಪಕ್ಕ ಕೂತು ಅವರನ್ನ ಅಪ್ಪಿಕೊಂಡು ಹೇಗಿದ್ದೀಯ ಅಂತ ಕೇಳಿದ್ಲು. ನಾನ್ ಚೆನ್ನಾಗೆ ಇದ್ದೀನಿ ಅಂತ ಹೇಳಿದ್ರು. ಮದನ್ ಬಾ ಮಹಿ ಕುತ್ಕೋ, ಅಂತ ಹೇಳಿದ ನಾನ್ ಹೋಗಿ ಸೋಫಾ ದಲ್ಲಿ ಕುತ್ಕೊಂಡೆ. ಮದನ್ ಮಾತಾಡ್ತಾ  ಅವರು ನಮ್ ಅಜ್ಜ ಗೋಪಾಲ್, ಅಜ್ಜಿ ರುಕ್ಮಿಣಿ. ಇವರು ಚಿಕ್ಕಪ್ಪ ಶ್ರೀಹರಿ  ಚಿಕ್ಕಮ್ಮ ವಸಂತ     ಮಗಳು ನೀಲಾ   ಇವರು ನಮ್ ಅಪ್ಪ ನಟರಾಜ್ ಅಮ್ಮ ಕಲಾವತಿ. ತಂಗಿ ರೋಹಿಣಿ.    

   ಎಲ್ಲರನ್ನು ಪರಿಚಯ ಮಾಡಿಸಿ ಅವರಿಗೆ ನನ್ನ ಪರಿಚಯ ಮಾಡಿಸಿದ. ಅಜ್ಜ ಮಾತಾಡ್ತಾ. ಏನಪ್ಪಾ ಮಹಿ ನಿನ್ ಬಗ್ಗೆ ನನ್ನ ಮಗ ಹೇಳಿದ್ದಾನೆ, ನೀನು ಇಲ್ಲಿ ಆರಾಮಾಗಿ ಇರಬಹುದು ಅಂತ ಹೇಳಿದ್ರು. ಶಿಲ್ಪಾ ಬಾ ಮಹಿ ನಿನಗೆ ಗೆಸ್ಟ್ ರೂಮ್ ತೋರಿಸ್ತೀನಿ ಅಂತ ಹೇಳಿ ಸೋಫಾದಿಂದ ಎದ್ದೇಳೋಕೆ ಹೋದ್ಲು. ಮದನ್ ಹಲೋ ಮೇಡಂ ಸಮಾಧಾನ ನಮ್ ಮನೇಲೂ ಗೆಸ್ಟ್ ರೂಮ್ ಇದೆ ಮಹಿ ಅಲ್ಲೇ ಇರ್ತಾನೆ ಅಂತ ಹೇಳಿದ.  ಲೋ ಅವನು ನನ್ನ ಫ್ರೆಂಡ್ ಕಣೋ ಈ ಮನೇಲೆ ಇರ್ತಾನೆ ಅಂತ ಜಗಳ ಮಾಡೋಕೆ ಶುರು ಮಾಡಿದ್ಲು. ನಿನ್ ಫ್ರೆಂಡ್ ಬೆಂಗಳೂರಲ್ಲಿ ಇದು ಮೈಸೂರ್ ಮಹಿ ಇವಾಗ ನನಗೆ ಫ್ರೆಂಡ್,ಸೋ ನಮ್ ಮನೇಲೆ ಇರ್ತಾನೆ ಅಂತ ಮದನ್ ಹೇಳಿದ . ಶಿಲ್ಪಾ ಏನು ನಿನ್ ಫ್ರೆಂಡ್ ಅ ಇಷ್ಟು ಬೇಗ ಮೀಟ್ ಮಾಡಿ ಒಂದು ದಿನ ಕೂಡ ಆಗಿಲ್ಲ ಆಗಲೇ ಫ್ರೆಂಡ್ ಆಗಿ ಬಿಟ್ನಾ ಅಂತ ಕೇಳಿದ್ಲು.  ಹು ಹೌದು ನನ್ನ ನೋಡಿ ನಿದ್ದೆ ಕೆಟ್ಟಿದ್ದೀನಿ ಡ್ರೈವ್ ಮಾಡೋಕೆ ಕಷ್ಟ ಆಗುತ್ತೆ ಅಂತ ನಾನ್ ಹೇಳ್ದೆನೆ ಅರ್ಥ ಮಾಡಿಕೊಂಡು ಕಾರ್ ಡ್ರೈವ್ ಮಾಡ್ತೀನಿ ಅಂತ ಹೇಳಿದ ಅಲ್ವಾ, ಆಗ್ಲೇ ನನಗೆ ಫ್ರೆಂಡ್ ಆಗೋದ ನನ್ನ ಜೊತೆಗೆ ನಮ್ ಮನೇಲೆ ಇರ್ತಾನೆ ಅಂತ ಹೇಳಿದ. ಅಜ್ಜಿ ಶುರು ಮಾಡಿಕೊಂಡ್ರಾ ನಿಮ್ ಜಗಳನ, ಅ ಹುಡುಗ ಮದನ್ ಜೊತೆಗೆ ಇರ್ತಾನೆ. ಅಂತ ಜಗಳಕ್ಕೆ ಅಂತ್ಯ ಹಾಡಿದ್ರು.. 

   ಮದನ್ ಮಹಿ ಫ್ಯಾಕ್ಟರಿ ಗೆ ನಾಳೆ ಬೆಳಿಗ್ಗೆ ಕರ್ಕೊಂಡು ಹೋಗ್ತೀನಿ ಇವತ್ತು ರೆಸ್ಟ್ ಮಾಡು ಅಂತ ಹೇಳಿದ. ಶಿಲ್ಪಾ ನಾಳೆ ಕೆಲಸಕ್ಕೆ ಕರ್ಕೊಂಡು ಹೋಗೋಣ ಮಧ್ಯಾಹ್ನ ಲಂಚ್ ಮಾಡಿಕೊಂಡು ಒಂದು ಸರಿ ಫ್ಯಾಕ್ಟರಿ ಗೆ ಹೋಗಿ ಬರೋಣ ಅಂತ ಹೇಳಿದ್ಲು. ರೋಹಿಣಿ ನೀಲಾ ಆಗಿದ್ರೆ ನಾವು ಬರ್ತೀವಿ ಹೇಗಿದ್ರು ನೀವ್ ಬರ್ತೀರಾ ಅಂತ ಕಾಲೇಜ್ ಗೆ ರಜೆ ಹಾಕಿದ್ವಿ  ನೀವೇ ಹೋದ್ರೆ ನಾವು ಏನ್ ಮಾಡೋದು ಅಂತ ಹೇಳಿದ್ಲು ನೀಲಾ. ಶಿಲ್ಪಾ ಸರಿ ಹೋಗೋಣ ಅಂತ ಹೇಳಿದ್ಲು.  ಮದನ್ ಮಹಿ ಬಾ ನಿನಗೆ ರೂಮ್ ತೋರಿಸ್ತಿನಿ ಅಂತ ಹೇಳಿದ ನಾನು ಮದನ್ ಜೊತೆಗೆ ಹೊರಗೆ ಬಂದು ಕಾರ್ ಅಲ್ಲಿ ಇದ್ದಾ ಲಗೇಜ್ ನಾ ತೆಗೆದುಕೊಂಡು ಅವನ ಜೊತೆಗೆ ಅವರ ಮನೆಗೆ ಹೋದೆ. ಮದನ್ ಮಾತಾಡ್ತಾ ಮಹಿ ನಿನ್ ಇಲ್ಲಿ ಆರಾಮಾಗಿ ಇರಬಹುದು ನಿನಗೆ ಯಾರು ಡಿಸ್ಟರ್ಬ್ ಮಾಡೋದಿಲ್ಲ ಅಂತ ಹೇಳಿದ. ಮದನ್ ನೀವೇನು ತಪ್ಪು ತಿಳಿದುಕೊಳ್ಳೋದಿಲ್ಲ ಅಂತ ಅಂದ್ರೆ ನನಗೆ ರೆಂಟ್ ಗೆ ರೂಮ್ ನಾ ಕೊಡಿಸ್ತೀರಾ ಅಂತ ಕೇಳ್ದೆ. ಮದನ್ ನನ್ನ ಕಡೆ ನೋಡ್ತಾ ಯಾಕ್ ಮಹಿ ನಮ್ ಮನೇಲಿ ಇರೋಕೆ ಇಷ್ಟ ಇಲ್ವಾ ಅಂತ ಕೇಳ್ದ. ಇಷ್ಟ ಅಂತ ಅಲ್ಲ ಮಹಿ, ಅತಿಥಿ ಆಗಿದ್ರೆ ಒಂದು ಎರಡು ದಿನ ಇರೋಕೆ ಏನು ಪ್ರಾಬ್ಲಮ್ ಇಲ್ಲಾ ಬಟ್ ಬಂದಿರೋದು ಕೆಲಸಕ್ಕೆ. ಸೋ. ಮದನ್ ಸರಿ ಮಹಿ ನಾನ್ ಅರ್ಥ ಮಾಡ್ಕೋತೀನಿ ಇವತ್ತು ಒಂದು ದಿನ ಇಲ್ಲಿ ಇರು ನನ್ನ ಫ್ರೆಂಡ್ ದು ಒಂದು ಮನೆ ಇದೆ  ನಾಳೆ ಅವನ ಹತ್ತಿರ ಮಾತಾಡಿ ಕೊಡಿಸ್ತೀನಿ ಅಂತ ಹೇಳಿದ. ನಾನು ತುಂಬಾ ಥ್ಯಾಂಕ್ಸ್ ಮದನ್ ಅಂತ ಹೇಳಿ ಅವನ ಹಿಂದೆ ಹೋದೆ ಒಂದು ಗೆಸ್ಟ್ ರೂಮ್ ತೋರಿಸಿ ರೆಸ್ಟ್ ಮಾಡು ಮಹಿ ಅಂತ ಹೇಳಿ ಹೊರಟು ಹೋದ. 

    ನಾನು ಫ್ರೆಷ್ ಅಪ್ ಆಗಿ ಬೆಡ್ ಮೇಲೆ ಕೂತು ಶ್ವೇತಾ ಕೊಟ್ಟ ಕಾರ್ಡ್ ನೆನಪಾಗಿ ಅ ಕಾರ್ಡ್ ಅಲ್ಲಿ ಇದ್ದಾ ನಂಬರ್ ಗೆ ಕಾಲ್ ಮಾಡಿದೆ. ಅ ಕಡೆ ಯಿಂದ ಒಬ್ಬ ವ್ಯಕ್ತಿ ಮಾತಾಡ್ತಾ ಹಲೋ ಅಂತ ಹೇಳಿದ್ರು. ನಾನು ಸರ್ ನನ್ನ ಹೆಸರು ಮಹಿ ಅಂತ ಹೇಳ್ದೆ. ಅ ವ್ಯಕ್ತಿ ಸರ್ ನಮಸ್ತೆ ಶ್ವೇತಾ ಮೇಡಂ ನಿಮ್ ಬಗ್ಗೆ ಹೇಳಿದ್ರು ಇವಾಗ ನೀವು ಎಲ್ಲಿದ್ದೀರಾ ಅಂತ ಕೇಳಿದ್ರು. ನಾನು ಇದ್ದಾ ಊರಿನ ಹೆಸರು ಹೇಳ್ದೆ. ಅವರು ಸರಿ ಸರ್ ಒಂದು ಅರ್ಧ ಗಂಟೆ ನಾನ್ ಅಲ್ಲಿಗೆ ಬಂದು ನಿಮಗೆ ಕಾಲ್ ಮಾಡ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿದ್ರು. ನಾನು ರೂಮ್ ಯಿಂದ ಹೊರಗೆ ಬಂದು ಮನೆ ನಾ ನೋಡ್ತಾ ಹಾಗೇ ಹೊರಗೆ ಬಂದೆ. ಶಿಲ್ಪಾ ಮದನ್ ರೋಹಿಣಿ ನೀಲಾ  ಮನೆ ತಾತ ನಾ ಮನೆ ಮುಂದೆ ಗಾರ್ಡನ್ ಏರಿಯಾ ದಲ್ಲಿ ಚೇರ್ ಮೇಲೆ ಕೂತ್ಕೊಂಡು ಮಾತಾಡ್ತಾ ಇದ್ರು. ನಾನು ಬೆಳಿಗ್ಗೆ ಯಿಂದ ಒಂದು ದಮ್ ಕೂಡ ಹೊಡೆದಿಲ್ಲ ಅಂತ ಅನ್ಕೊಂಡು ಬರೋವಾಗ ಇಲ್ಲೇ ಹತ್ತಿರದಲ್ಲೇ ಒಂದು ಪಾನ್ ಶಾಪ್ ನೋಡಿದೆ, ಸೋ ಅಲ್ಲಿಗೆ ಹೋಗೋಣ ಅಂತ ಅನ್ಕೊಂಡು, ಒಂದೇ ಕಾಂಪೌಂಡ್ ಆದ್ರೂ ಎರಡು ಮನೆಗೂ ಬೇರೆ ಬೇರೆ ಗೇಟ್ ಇದ್ದಾವೆ. ಸೋ ನಾನ್ ಅವರ ಕಣ್ಣಿಗೆ ಕಾಣಿಸದೆ  ಗೇಟ್ ಓಪನ್ ಮಾಡಿಕೊಂಡು ಪಾನ್ ಶಾಪ್ ಕಡೆಗೆ ಹೋದೆ. ಅಲ್ಲಿ ಹೋಗಿ ಒಂದು ಸಿಗರೇಟ್ ತೆಗೆದುಕೊಂಡು ಸೇದ್ತಾ ಕೂತೆ. 

  ಒಂದು ಹತ್ತು ನಿಮಿಷ ಆದಮೇಲೆ. ಅಲ್ಲಿಗೆ ಬೈಕ್ ಅಲ್ಲಿ ಮದನ್ ಬಂದ. ನನ್ನ ನೋಡಿ ಮಹಿ ಕರ್ದಿದ್ರೆ ನಾನು ಜೊತೆಗೆ ಬರ್ತಾ ಇದ್ದೆ ಅಲ್ವಾ ಅಂತ ಹೇಳಿ ಪಾನ್ ಶಾಪ್ ಅಲ್ಲಿ ಒಂದು ಸಿಗರೇಟ್ ತೆಗೆದುಕೊಂಡು ಬಂದು ನನ್ನ ಪಕ್ಕ ಕೂತ. ಕರಿಯೋಣ ಅಂತ ಇದ್ದೆ ಮದನ್ ಅದ್ರೆ ನೀವೆಲ್ಲಾ ಮಾತಾಡ್ತಾ ಕೂತಿದ್ರಿ ಅಲ್ವಾ ಸೋ ಅದಕ್ಕೆ ಒಬ್ಬನೇ ಬಂದೆ ಅಂತ ಹೇಳಿದೆ. ಆಮೇಲೆ ಅಲ್ಲಿಗೆ ಮದನ್ ಫ್ರೆಂಡ್ಸ್ ಇಬ್ಬರು ಬಂದರು ಅವರಿಗೆ ನನ್ನ ಪರಿಚಯ ಮಾಡಿಸಿದ  ಹಾಗೇ ಮಾತಾಡ್ಕೊಂಡು ಇರೋವಾಗ ನನಗೆ ಕಾಲ್ ಬಂತು, ಮೊಬೈಲ್ ತೆಗೆದು ನೋಡಿದೆ. ಹಾಗ್ಲೇ ನಾನ್ ಕಾಲ್ ಮಾಡಿದ ವ್ಯಕ್ತಿ ಕಾಲ್, ಕಾಲ್ ಪಿಕ್ ಮಾಡಿ. ಸರ್ ಹೇಳಿ ಅಂತ ಹೇಳ್ದೆ. ಸರ್ ನೀವ್ ಹೇಳಿದ ಅಡ್ರೆಸ್ ಅಲ್ಲೇ ಇದ್ದೀನಿ ಅಂತ ಹೇಳಿ ಎಲ್ಲಿಗೆ ಬರಬೇಕು ಅಂತ ಕೇಳ್ದ. ನಾನು ಮದನ್ ಹತ್ತಿರ ನಾವು ಇದ್ದಾ ಜಾಗದ ಹೆಸರು ಕೇಳಿದೆ, ಮದನ್ ಜಾಗದ ಹೆಸರು ಹೇಳಿದ ನಾನ್ ಅದನ್ನ ಅವ್ರಿಗೆ ಹೇಳಿದೆ. ಅವರು ಸರ್ ಬಂದೆ ಇಲ್ಲೇ ಇದ್ದೀನಿ ಅಂತ ಹೇಳಿ ಕಾಲ್ ಕಟ್  ಮಾಡಿದ್ರು.  ಮದನ್ ಯಾರ್ ಮಹಿ ಅಂತ ಕೇಳಿದ. ನನಗೆ ಯಾರು ಅಂತ ಗೊತಿದ್ರೆ ಅಲ್ವಾ ಹೇಳೋಕೆ ಅಂತ ಮನಸಲ್ಲಿ ಅನ್ಕೊಂಡು ಫ್ರೆಂಡ್ ನಾ ಫ್ರೆಂಡ್ ಅಂತ ಹೇಳ್ದೆ. 5 ನಿಮಿಷ ಆದಮೇಲೆ ಒಂದು ವೈಟ್ ಶಿಫ್ಟ್ ಕಾರ್ ಅಲ್ಲಿಗೆ ಬಂತು. ಅದರಿಂದ ಒಬ್ಬ ವ್ಯಕ್ತಿ ಇಳಿದು ಪಾನ್ ಶಾಪ್ ಹತ್ತಿರ ಬಂದು ಕಾಲ್ ಮಾಡಿದ. ಅಲ್ಲೇ ಪಕ್ಕದಲೇ ಇದ್ದಾ ನನ್ನ ಮೊಬೈಲ್ ರಿಂಗ್ ಆಗೋದನ್ನ ನೋಡಿ ಕಾಲ್ ಕಟ್ ಮಾಡಿ ಸರ್ ಮಹಿ ಅಂದ್ರೆ ನೀವೇನಾ ಅಂತ ಕೇಳ್ದ. ನಾನು ಅವರನ್ನ ನೋಡಿ ಹೌದು ಅಂತ ಹೇಳ್ದೆ. ಅವರು ನನಗೆ ಕೈ ಕೊಟ್ಟು ಐಮ್  ಶಿವು, ಮಹಿಂದ್ರಾ ಕಾರ್ ಷೋರೂಮ್ ಅಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ವರ್ಕ್ ಮಾಡ್ತಾ ಇದ್ದೀನಿ ಅಂತ ಪರಿಚಯ ಮಾಡಿಕೊಂಡ. ನಾನು ಸ್ಮೈಲ್ ಮಾಡ್ತಾ ಹೌದ ನೈಸ್ ಟು ಮೀಟ್ ಯು ಅಂತ ಹೇಳ್ದೆ. ಆಮೇಲೆ ಅವ್ರು ಸರ್ ಹೊರಡೋಣವಾ ಅಂತ ಕೇಳಿದ್ರು. ನಾನು ಎಲ್ಲಿಗೆ ಅಂತ ಕೇಳ್ದೆ. ಸರ್ ಹೇಳ್ತಿನಿ ಬನ್ನಿ ಅಂತ ಹೇಳಿ ಕಾರ್ ಕಡೆ ಹೋದ್ರು. ಮದನ್ ನನ್ನ ನೋಡಿ ಯಾರ್ ಮಹಿ ಫ್ರೆಂಡ್ ನಾ ಫ್ರೆಂಡ್ ಅಂದೇ  ಕಾರ್ ಮ್ಯಾನೇಜರ್ ಅಂತ ಹೇಳ್ತಾ ಬನ್ನಿ ಅಂತ ಇದ್ದಾನೆ ಅಂತ ಕೇಳ್ದ.  ನಾನು ಏನ್ ಹೇಳೋದೋ ಗೊತ್ತಾಗದೆ ನಾನು ಬಂದು ಹೇಳ್ತಿನಿ ಅಂತ ಹೇಳಿ ಅವನ ಕಾರ್ ಹತ್ತಿರ ಹೋಗಿ ಕಾರ್ ಅಲ್ಲಿ ಕುತ್ಕೊಂಡೆ. ಶಿವು ಕಾರ್ ಸ್ಟಾರ್ಟ್ ಮಾಡಿ ಅಲ್ಲಿಂದ ಕರ್ಕೊಂಡು ಹೋದರು..

  ನಾನು ಶ್ವೇತಾ ಗೆ ಕಾಲ್ ಮಾಡಿದೆ. ಶ್ವೇತಾ ಕಾಲ್ ಪಿಕ್ ಮಾಡಿ ಹೇಳೋ ಅಂತ ಹೇಳಿದ್ಲು. ಲೇ ಏನೇ ಪ್ಲಾನ್ ಮಾಡಿದ್ದಿಯ ಅಂತ ಕೇಳ್ದೆ. ಶ್ವೇತಾ ನಗ್ತಾ ಏನು ಇಲ್ಲಾ ಸುಮ್ನೆ ನೀನು ಅವರ ಜೊತೆಗೆ ಹೋಗು ಅವರು ಏನ್ ಹೇಳ್ತಾರೋ ಅದನ್ನ ಪ್ರಶ್ನೆ ಮಾಡದೇ ಅವರು ಹೇಳಿದ ಹಾಗೇ ಮಾಡು ಅಂತ ಹೇಳಿ ಕಾಲ್ ಕಟ್ ಮಾಡಿದ್ಲು. ನಾನು ಮತ್ತೇನು ಮಾತನಾಡದೆ ಸೈಲೆಂಟ್ ಅದೇ.  30 ನಿಮಿಷದ ನಂತರ ಮಹಿಂದ್ರಾ ಕಾರ್ ಷೋರೂಮ್ ಹತ್ತಿರ ಬಂದ್ವಿ. 

  ಶಿವು ಕಾರ್ ಇಳಿದು ಸರ್ ಬನ್ನಿ ಅಂತ ನನ್ನ ಷೋರೂಮ್ ಒಳಗೆ ಕರ್ಕೊಂಡು ಹೋದರು. ನಾನು ಒಳಗೆ ಹೋದೆ. ಸರ್ ಕೂತ್ಕೊಳ್ಳಿ 5 ನಿಮಿಷ ಬರ್ತೀನಿ ಅಂತ ಹೇಳಿ ಅಲ್ಲಿಂದ ಹೊರಟು ಹೋದರು 10 ನಿಮಿಷ ದ ನಂತರ ಕೆಲವೊಂದು ಡಾಕ್ಯುಮೆಂಟ್ಸ್ ಪೇಪರ್ಸ್ ನಾ ತೆಗೆದುಕೊಂಡು ಬಂದು ಸರ್ ಇದರಲ್ಲಿ ಸೈನ್ ಮಾಡಿ ಅಂತ ಹೇಳಿದ್ರು. ನಾನು ಹಿಂದೆ ಮುಂದೆ ಯೋಚ್ನೆ ಮಾಡದೇ ಅವರು ಹೇಳಿದ ಕಡೆ ಸೈನ್ ಮಾಡಿದೆ. ಮತ್ತೆ ಸರ್ 5 ನಿಮಿಷ ಅಂತ ಹೇಳಿ ಹೊರಟು ಹೋದರು, 5 ನಿಮಿಷ ಆದಮೇಲೆ ಒಂದು ಹುಡುಗಿ ಬಂದು ಸರ್ ಬನ್ನಿ ನನ್ನ ಜೊತೆಗೆ ಅಂತ ಹೇಳಿದ್ರು, ನಾನು ಸರಿ ಅಂತ ಹೇಳಿ ಅವರ ಜೊತೆಗೆ ಹೋದೆ. 3 ನಿಮಿಷ ಅವರ ಹಿಂದೆ ಹೋದಮೇಲೆ  15 20 ಜನ ಗುಂಪಾಗಿ ನಿಂತು ಇದ್ದರು.  ಈ ಹುಡುಗಿ ನನ್ನ ಅವರ ಮಧ್ಯ ಕರ್ಕೊಂಡು ಹೋಗಿ ನಿಲ್ಲಿಸಿದ್ಲು.  ನಾನು ಏನು ಅಂತ ಎಲ್ಲರನ್ನು ನೋಡ್ತಾ ಇದ್ದು ಬಿಟ್ಟೆ. ಅಲ್ಲಿಗೆ ಇಬ್ಬರು ವ್ಯಕ್ತಿ ಗಳು ಕೇಕ್ ನಾ ಇಡಿದುಕೊಂಡು ಬಂದು ನನ್ನ ಮುಂದೆ ಇದ್ದಾ ಟೇಬಲ್ ಮೇಲೆ ಇಟ್ಟು, ಕೇಕ್ ಬಾಕ್ಸ್ ನಾ ಓಪನ್ ಮಾಡಿದ್ರು. ನಾನು ಕೇಕ್ ಮೇಲೆ ಬರೆದಿದ್ದ ಹೆಸರನ್ನ ನೋಡಿ ಶಾಕ್ ಅದೇ ಅಂಡ್ ಅಷ್ಟೇ ಖುಷಿಯಾದೆ, ಅಡ್ವಾನ್ಸ್ ಹ್ಯಾಪಿ ಬರ್ತ್ಡೇ ಮಂಕಿ ಅಂತ ಬರೆದಿತ್ತು.. ಶಿವು ಬಂದು ನನ್ನ ಕೈಗೆ ಒಂದು ಗಿಫ್ಟ್ ಬಾಕ್ಸ್ ನಾ ಕೊಟ್ಟು ಅಡ್ವಾನ್ಸ್ ಹ್ಯಾಪಿ ಬರ್ತ್ಡೇ ಸರ್ ಅಂತ ವಿಶ್ ಮಾಡಿದ್ರು. ನಾನು ಥ್ಯಾಂಕ್ ಯು ಅಂತ ಹೇಳಿದೆ. ಕ್ಯಾಂಡಿಲ್ ಹಚ್ಚಿದ್ರು, ಆಮೇಲೆ ನಾನು ಕ್ಯಾಂಡಿಲ್ ನಾ ಹಾರಿಸಿ ಕೇಕ್ ಕಟ್ ಮಾಡಿದೆ, ಎಲ್ಲರೂ ವಿಶ್ ಮಾಡಿದ್ರು. ನಾನು ಎಲ್ಲರಿಗೂ ಥ್ಯಾಂಕ್ಸ್ ಹೇಳಿದೆ. ಆಮೇಲೆ ಶಿವು ಸರ್ ಬನ್ನಿ ನನ್ನ ಜೊತೆಗೆ ಅಂತ ಹೇಳಿ  ಒಂದು ಕಾರ್ ಹತ್ತಿರ ಕರ್ಕೊಂಡು ಹೋದರು. ಅಲ್ಲಿ ಒಂದು ಕಾರ್ ಗೆ ಕವರ್ ನಾ ಹಾಕಿದ್ರು. ಶಿವು ಅ ಕಾರ್ ನಾ ತೋರಿಸಿ ಸರ್ ನಿಮ್ ಬರ್ತ್ಡೇ ಗಿಫ್ಟ್ ಅಂತ ಹೇಳಿದ್ರು. ನಾನ್ ಹೋಗಿ ಕಾರ್ ಮೇಲೆ ಇದ್ದಾ ಕವರ್ ನಾ ತೆಗೆದೇ ಕಾರ್ ನೋಡಿ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು. ಮೊಬೈಲ್ ತೆಗೆದು ಶ್ವೇತಾ ಗೆ ಕಾಲ್ ಮಾಡಿದೆ. ಶ್ವೇತಾ ಕಾಲ್ ಪಿಕ್ ಮಾಡಿ ಅಡ್ವಾನ್ಸ್ ಹ್ಯಾಪಿ ಬರ್ತ್ಡೇ ಮಂಕಿ ಅಂತ ವಿಶ್ ಮಾಡಿದ್ಲು. ನಾನು ಥ್ಯಾಂಕ್ಸ್ ಕಣೆ ಅಂತ ಹೇಳಿ. ಇವಾಗ ಕಾರ್ ನನಗೆ ಬೇಕಾಗಿತ್ತಾ ಅಂತ ಕೇಳ್ದೆ. ಶ್ವೇತಾ ನಿನಗೆ ಬೇಕಾಗಿತ್ತೋ ಇಲ್ವೋ ನನಗೆ ಗೊತ್ತಿಲ್ಲ ಬಟ್ ನನ್ನ ತಮ್ಮನಿಗೆ ಅವನಿಗೆ ಇಷ್ಟ ಅದ ಕಾರ್ ನಾ ಗಿಫ್ಟ್ ಆಗಿ ಕೊಡಬೇಕು ಅನ್ನಿಸ್ತು ಅದಕ್ಕೆ ಕೊಟ್ಟೆ. ಸೋ ಜಾಸ್ತಿ ಕ್ವೆಶ್ಚನ್ ಮಾಡದೇ ಇದ್ರೆ ಒಳ್ಳೇದು ಅಂತ ಹೇಳಿದ್ಲು . ನಾನು ಮತ್ತೇನು ಹೇಳದೆ ಥ್ಯಾಂಕ್ಸ್ ಅಂತ ಹೇಳ್ದೆ.  ಹಾಗೇ ವಿಡಿಯೋ ಕಾಲ್ ಗೆ ಶ್ವೇತಾ ನಾ ಕನೆಕ್ಟ್ ಮಾಡಿಕೊಂಡು ಕಾರ್ ಒಳಗೆ ಎಂಟ್ರಿ ಹೆಜ್ಜೆ ಇಟ್ಟೆ. ಒಳಗೆ ಇಂಟೀರಿಯರ್ ಡಿಸೈನ್ ಎಲ್ಲವನ್ನು  ಕ್ಲೀನ್ ಆಗಿ ನನಗೆ ಇಷ್ಟ ಹಾಗೋ ಹಾಗೇ ಮಾಡಿಸಿದ್ದಾಳೆ. ಶ್ವೇತಾ ಗೆ ಕಾರ್ ಒಳಗೆ ಎಲ್ಲಾ ತೋರಿಸಿ ಮತ್ತೆ ಕಾಲ್ ಮಾಡ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿದೆ. 

  ಶಿವು ಬಂದು ಕೆಲವೊಂದು ಫಾರ್ಮ್ಯಾಲಿಟಿಸ್ ಮುಗಿಸಿ ಸರ್ ನೀವಿನ್ನು ಕಾರ್ ನಾ ತಗೊಂಡು ಹೋಗಬಹುದು. ಮತ್ತೆ ನಿಮಗೆ ಕಾಲ್ ಮಾಡ್ತೀನಿ ಅಂತ ಹೇಳಿದ್ರು ನಾನು ಮತ್ತೊಮ್ಮೆ ಅವರಿಗೆ ಥ್ಯಾಂಕ್ಸ್ ಹೇಳಿ ಕಾರ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಗೆ ಬಂದು ಮೇನ್ ರೋಡ್ ಗೆ ಬಂದೆ...

****************************************

****************************************


P. S.