Mahi - 16 in Kannada Love Stories by S Pr books and stories PDF | ಮಹಿ - 16

The Author
Featured Books
  • ಮಹಿ - 16

          ಕೋಮಲಿ ಅವರು ಹೇಳಿದ ಮಾತಿಗೆ ಅಕಿರಾ ಕೋಪ ಮಾಡಿಕೊಂಡು ಅವಳ ರೂಮ್ ಗ...

  • ಮರು ಹುಟ್ಟು 10

    ಮನಸ್ಸಿನ ಗಡಿ ರೇಖೆ,ಹೊಸ ಕಚೇರಿಯ ವಾತಾವರಣ (ಇಂಟೀರಿಯರ್ - ಆರ್ಯನ್‌ನ ಕಚ...

  • ಸ್ವರ್ಣ ಸಿಂಹಾಸನ 4

    ಸಮಯ: ಮುಂಜಾನೆಸ್ಥಳ: ಪ್ರಾಚೀನ ಸೂರ್ಯದೇವರ ದೇಗುಲದ ಅವಶೇಷಗಳುವಿಕ್ರಮ್ ಮ...

  • ಸತ್ತ ಪ್ರೀತಿ ಜೀವಂತ ರಹಸ್ಯ 3

    ಕೃಷ್ಣನ ಕಾರು ಕೋಲಾರದ ಗಡಿ ತಲುಪಿತ್ತು. ರಸ್ತೆಯಲ್ಲಿನ ಫೈಟ್‌ನಿಂದ ಅವನಿ...

  • ಮಹಿ - 15

         ಬೆಳಿಗ್ಗೆ ಎದ್ದು ಫ್ರೆಷ್ ಅಪ್ ಆಗಿ ರೆಡಿ ಆಗಿ ಫ್ರೆಂಡ್ಸ್ ನಾ ಮಾತ...

Categories
Share

ಮಹಿ - 16

      ಕೋಮಲಿ ಅವರು ಹೇಳಿದ ಮಾತಿಗೆ ಅಕಿರಾ ಕೋಪ ಮಾಡಿಕೊಂಡು ಅವಳ ರೂಮ್ ಗೆ ಹೊರಟು ಹೋದಳು.  ಅಕಿರಾ ಹೋದಮೇಲೆ ವಿವೇಕ್ ಮಾತಾಡ್ತಾ ಮತ್ತೆ ಏನ್ ಸಮಾಚಾರ ಮಹಿ ಅಂತ ಕೇಳಿದ್ರು. ಅದೇ ಸಮಯಕ್ಕೆ ಸರಿಯಾಗಿ ಅಕಿರಾ ಅವರ ಅಜ್ಜಿ ತಾತ ಇಬ್ರು ರೂಮ್ ಯಿಂದ ಹೊರಗೆ ಬರ್ತಾ ಹಾಲ್ ಅಲ್ಲಿ ನನ್ನ ನೋಡಿ, ತಾತ ಮಾತಾಡ್ತಾ  ಮಹಿ ಯಾವಾಗಪ್ಪ ಬಂದೆ ಅಂತ ಕೇಳಿದ್ರು. ವಿವೇಕ್ ಮಾತಾಡ್ತಾ ಅಪ್ಪ ಬಂದಿದ್ದು ಅಲ್ಲ ಕರ್ಕೊಂಡು ಬಂದಿದ್ದು ಅಂತ ಹೇಳಿದ್ರು. ತಾತ ಕರ್ಕೊಂಡು ಬಂದ ಅಂತ ಪ್ರಶ್ನಾರ್ಥಕವಾಗಿ ಕೇಳಿದ್ರು. ಹೌದು ಅಪ್ಪ ಸೂಪರ್ ಮಾರ್ಕೆಟ್ ಗೆ ನಾನು ಕೋಮಲಿ ಹೋಗಿ ಬರ್ತಾ ಹೊರಗೆ ಮಹಿ ಕಾಣಿಸಿದ ಮನೆಗೆ ಬಾ ಅಂತ ಕರೆದ್ರು ಕೆಲಸ ಇದೆ ಮತ್ತೆ ಯಾವಾಗಾದ್ರೂ ಬರ್ತೀನಿ ಅಂತ ಹೋಗೋಕೆ ನೋಡಿದ ನಿಮ್ ಸೊಸೆ ಬಿಡಲೇ ಇಲ್ಲಾ ಕರ್ಕೊಂಡು ಬಂದ್ರು ಅಂತ ಹೇಳಿದ್ರು. ತಾತ ಮಗನ ಮಾತಿಗೆ ಏನಪ್ಪ ಮಹಿ, ಈ ಮನೆಗೆ ಅಳಿಯ ಆಗೋವ್ನು ನೀನು ಅವಾಗವಾಗ ಬರ್ತಾ ಇರಬೇಕು ನಿನ್ ಪ್ರೀತಿಸೋ ಹುಡುಗಿ ನಿನ್ ಜೊತೆ ಇರ್ತಾಳೆ ಅಂತ ಮನೆಗೆ ಬರದೇ ಇದ್ರೆ ಹೇಗೆ ಅಂತ ಕೇಳಿ, ಹೌದು ಅಕಿರಾ ಎಲ್ಲಿ ಹೋದ್ಲು ಅಂತ ಕೇಳಿದ್ರು.  ಅಡುಗೆ ಮನೇಲಿ ಕೆಲಸ ಮಾಡ್ತಾ ಇದ್ದಾ ಕೋಮಲಿ ಅವರು ಹಾಲ್ ಗೆ ಬರ್ತಾ ಏನೋ ಕೋಪದಲ್ಲಿ ಇದ್ಲು ತಮಾಷೆ ಮಾಡಿದೆ ಇನ್ನು ಕೋಪ ಮಾಡ್ಕೊಂಡು ರೂಮ್ ಗೆ ಹೋದ್ಲು ಅಂತ ಹೇಳಿದ್ರು..

  ಅಜ್ಜಿ ಮಾತಾಡ್ತಾ ಕೋಪದಲ್ಲಿ ಇದ್ಲಾ, ಅಂತ ಹೇಳಿ ನನ್ನ ಕಡೆ ನೋಡ್ತಾ ಏನಾಯ್ತು ಮಹಿ ಏನಾದ್ರು ಜಗಳ ಮಾಡಿಕೊಂಡ್ರಾ ಅಂತ ಕೇಳಿದ್ರು. ನಾನು ಮನಸಲ್ಲೇ ವಿನೋದ್ ಹೇಳೋಕು ಮೊದಲೇ ನಾನೆ ಹೇಳಿಬಿಟ್ರೆ ಒಳ್ಳೇದು ಅಂತ ಅನ್ಕೊಂಡು ಯೋಚ್ನೆ ಮಾಡ್ತಾ ಇದ್ದೆ. ವಿವೇಕ್ ಅವರು ನಾನು ಯೋಚ್ನೆ ಮಾಡೋದನ್ನ ನೋಡಿ ಸ್ವಲ್ಪ ಗಾಬರಿ ಆಗಿ ಮಹಿ ಎಲ್ಲಾ ಓಕೆ ಅಲ್ವಾ ಅಂತ ಕೇಳಿದ್ರು. ಅ ಮಾತಿಗೆ ಎಲ್ಲಾ ನನ್ನ ಕಡೆ ನೋಡಿದ್ರು. ನಾನು ಸರ್ ನಿಮಗೆ ಒಂದು ವಿಷಯ ಹೇಳಬೇಕು ಅದೇ ಹೇಗೆ ಹೇಳೋದು ಅಂತ ಯೋಚ್ನೆ ಮಾಡ್ತಾ ಇದ್ದೀನಿ ಅಂತ ಹೇಳ್ದೆ. ವಿವೇಕ್ ಅವರು ಸೀರಿಯಸ್ ವಿಷಯ ಅಂತ ಅನ್ಕೊಂಡು ಹೇಳು ಮಹಿ ಪರ್ವಾಗಿಲ್ಲ ಅಂತ ಹೇಳಿದ್ರು. ಸರ್ ಅದು ನಿಮಗೆ ವಿನೋದ್ ಗೊತ್ತೇ ಇರುತ್ತೆ ಅಂತ ಹೇಳ್ದೆ. ವಿವೇಕ್ ಅವರು ವಿನೋದ್ ಹೆಸರನ್ನ ಕೇಳಿ ವಿನೋದ್ ಏನಾದ್ರು ಪ್ರಾಬ್ಲಮ್ ಮಾಡಿದ್ನ ಅಂತ ಕೇಳಿದ್ರು.  ಸರ್ ನಾನು ಅಕಿರಾ ಲವ್ ಮಾಡೋದು ನಿಮ್ ಹತ್ತಿರ ಬಂದು ಹೇಳಿದ್ದು ನೀವು ಒಪ್ಪಿಕೊಂಡಿದ್ದು, ಎಂಗೇಜ್ಮೆಂಟ್ ಕ್ಯಾನ್ಸಲ್ ಆಗಿದ್ದು ಅವನಿಗೆ ಇಷ್ಟ ಇಲ್ಲಾ ಅಂತ ಅನ್ನಿಸುತ್ತೆ ,  ನಿಮಗೆ ಗೊತ್ತು ಅವನು ನಾನು ವರ್ಕ್ ಮಾಡೋ ಕಂಪನಿ ಅಲ್ಲಿ ನನಗಿಂತ ಮೇಲೆ ಪೊಸಿಷನ್ ಅಲ್ಲಿ ಇದ್ದಾನೆ ಅಂತ, ಕಾರಣ ಏನೋ ಗೊತ್ತಿಲ್ಲ ಅವನಿಗೆ ಇರೋ ಪವರ್ ನಾ ಯೂಸ್ ಮಾಡ್ಕೊಂಡು ನನ್ನ ಜಾಬ್ ಹೋಗೋ ಹಾಗೇ ಮಾಡಿದ ಅಂತ ಹೇಳ್ದೆ. ವಿವೇಕ್ ಅವರು ನಾನ್ ಹೇಳಿದ್ದನ್ನ ಕೇಳಿ ಕೋಪ ಮಾಡ್ಕೊಂಡು ಅನ್ಕೊಂಡೆ ಅವನು ಏನಾದ್ರು ಮಾಡ್ತಾನೆ ಅಂತ ಅದ್ರೆ ಈ ರೀತಿ ಮಾಡ್ತಾನೆ ಅಂತ ಅನ್ಕೊಂಡು ಇರಲಿಲ್ಲ, ನಮ್ ಹತ್ತಿರ ಒಳ್ಳೆಯವನಾಗಿ ಪರ್ವಾಗಿಲ್ಲ ಅಂಕಲ್ ಅಕಿರಾಗೆ ಇಷ್ಟ ಇಲ್ಲಾ ಅಂದಾಗ ಫೋರ್ಸ್ ಮಾಡೋದು ತಪ್ಪು, ಅವಳ ಅಭಿಪ್ರಾಯ ತಿಳಿದುಕೊಳ್ಳದೆ ನಾನೆ ದುಡುಕಿ ಬಿಟ್ಟೆ ಅಂತ ಒಳ್ಳೆಯವನ ಹಾಗೇ ಮಾತಾಡಿ ಈ ರೀತಿ ಮಾಡಿದ್ದಾನಾ ಅವನ ಮಾತ್ರ ಸುಮ್ನೆ ಬಿಡೋದಿಲ್ಲ ಅಂತ ಹೇಳಿದ್ರು. 

  ಸರ್ ಅವನು ಮಾಡಿದಕ್ಕೆ ಕೋಪ ನನಗು ಇದೆ ಅದ್ರೆ ಅದನ್ನೇ ನಾನು ಮಾಡೋಕೆ ಹೋದ್ರೆ ಕೋಪ ದ್ವೇಷಕ್ಕೆ ದಾರಿ ಮಾಡಿ ಕೊಡುತ್ತೆ, ಅದಕ್ಕೆ ನಾನು ಏನು ಮಾತನಾಡದೆ ಸುಮ್ನೆ ಬಂದು ಬಿಟ್ಟೆ, ಅಕಿರಾ ಕೂಡ ಅದಕ್ಕೆ ಕೋಪ ಮಾಡ್ಕೊಂಡು ಇದ್ದಾಳೆ ನಿಮಗೆ ಹೇಳಿದ್ರೆ ನೀವೆಲ್ಲಿ ಕೋಪ ಮಾಡ್ಕೋತಿರೋ ಇಲ್ಲಾ ವಿನೋದ್ ಬಂದು ನಿಮ್ ಹತ್ತಿರ ಜಾಬ್ ಹೋದ ವಿಷಯ ಹೇಳಿದ್ರೆ ನೀವೆಲ್ಲಿ ಅವಳ ಪ್ರೀತಿ ನಾ ದೂರ ಮಾಡ್ತೀರಾ ಅಂತ ಭಯ ಬಿದ್ದು ಯಾರಿಗೂ ಹೇಳದೆ ನೋವನ್ನ ಅನುಭವಿಸ್ತಾ ಇದ್ದಾಳೆ, ಅದು ಅಲ್ಲದೆ ನನಗೆ ಮೈಸೂರ್ ಅಲ್ಲಿ ಜಾಬ್ ಸಿಕ್ಕಿದೆ ನಾಳೆ ಮೈಸೂರ್ ಗೆ ಹೋಗ್ತಾ ಇದ್ದೀನಿ ಅಂತ ಹೇಳ್ದೆ. ಮೈಸೂರ್ ಗೆ ಹೋಗೋ ವಿಷಯ ಕೇಳಿ ಎಲ್ಲರಿಗೂ ಶಾಕ್ ಆಯ್ತು. ತಾತ ಏನ್ ಮಹಿ ಎಲ್ಲಾ ವಿಷಯ ನಾ ಈ ರೀತಿ ಸಡನ್ ಆಗಿ ಹೇಳ್ತಾ ಇದ್ದಿಯಾ,  ಪ್ರೀತಿ ಮಾಡೋವ್ರ್ನಾ ದೂರ ಮಾಡೋ ಅಷ್ಟು ಕಟುಕರು ನಾವಲ್ಲ, ಈ ಜಾಬ್ ಇಲ್ಲಾ ಅಂದ್ರೆ ಇನ್ನೊಂದು ಜಾಬ್, ಕೋಟ್ಯಧಿಪತಿ ಮಗ ಆದ್ರೂ ಕೂಡ ಸ್ವಂತ ಕಾಲ ಮೇಲೆ ನಿಂತ್ಕೋ ಬೇಕು ಅಂತ ನೀನು ನಿರ್ಧಾರ ಮಾಡಿದೆ ಅಂತ ಗೊತ್ತಾದಾಗಲೇ ನಿನ್ ನಮಗೆಲ್ಲ ತುಂಬಾ ಇಷ್ಟ ಆಗೋದೇ, ನಾವು ಏನಾದ್ರು ಸಾಧಿಸೋಕೆ ಹೋದಾಗ ಈ ರೀತಿ ತೊಂದ್ರೆ ಬರೋದು ಸಹಜ, ಅದಕ್ಕೆ ಹೆದರಿ ಇಲ್ಲಾ ತೊಂದ್ರೆ ಕೊಟ್ಟವರ ಮೇಲೆ ದ್ವೇಷ ಸಾಧಿಸಿಕೊಂಡು ನಿಂತ್ರೆ ನಾವು ಏನು ಸಾಧನೆ ಮಾಡೋಕೆ ಆಗೋದಿಲ್ಲ. ನನಗೆ ಮದುವೆ ಆದಾಗ ನನ್ನ ಹತ್ತಿರ ಒಂದು ರೂಪಾಯಿ ಕೂಡ ಇದ್ದಿಲ್ಲ, ನನ್ನ ನಂಬಿ ಬಂದವಳು ಜೊತೆ ನಿಂತು ನಾನ್ ಇದ್ದೀನಿ ಅಂತ ನನಗೆ ಧೈರ್ಯ ಕೊಟ್ಲು. ಅಕಿರಾ ಈ ಕಾಲದ ಹುಡುಗಿ ಅಲ್ವಾ ಸ್ವಲ್ಪ ಹಾಗೇನೇ, ಸಮಾಧಾನ ಮಾಡಿದ್ರೆ ಅವಳೇ ಸರಿ ಹೋಗ್ತಾಳೆ. ಅದ್ರೆ ನೀನು ಕೆಲಸ ಅಂತ ಮೈಸೂರ್ ಗೆ ಹೋದ್ರೆ ಹೇಗೆ ಇಲ್ಲೇ ಎಷ್ಟೋ ಕಂಪನಿ ಗಳು ಇದ್ದಾವೆ ಇಲ್ಲೇ ಜಾಬ್ ಮಾಡಬಹುದು ಅಲ್ವಾ ಅಂತ ಕೇಳಿದ್ರು.

    ಇಲ್ಲಾ ತಾತ ಒಬ್ಬರ ಹತ್ತಿರ ಜಾಬ್ ಮಾಡ್ಕೊಂಡು ಇದ್ರೆ ವಿನೋದ್ ಅಂತವರು ಇರ್ತಾರೆ, ಅವರ ಸ್ವಾರ್ಥಕ್ಕೆ ಇನ್ನೊಬ್ಬರನ್ನ ಬೆಳಿಯೋಕು ಬಿಡಲ್ಲ ಬದುಕೋಕು ಬಿಡಲ್ಲ. ಕೆಲವು ತಿಂಗಳು ಅಷ್ಟೇ ಮತ್ತೆ ಬೆಂಗಳೂರು ಗೆ ಬರ್ತೀನಿ  ಅಂತ ಹೇಳ್ದೆ. ತಾತ ನಾನು ಹೇಳಿದ ವಿಷಯ ನಾ ಹೇಗೆ ಅರ್ಥ ಮಾಡ್ಕೊಂಡ್ರೋ ಗೊತ್ತಿಲ್ಲ ಸರಿ ಮಹಿ ನೀನು ಇಷ್ಟು ಕಾನ್ಫಿಡೆನ್ಸ್ ಆಗಿ ಹೇಳ್ತಾ ಇದ್ದಿಯಾ ಅಂದ್ರೆ ನನಗೆ ನಿನ್ನ ಮೇಲೆ ನಂಬಿಕೆ ಇದೆ ಅಂತ ಹೇಳಿದ್ರು. ವಿವೇಕ್ ಅವರು ಮಾತಾಡ್ತಾ ಅಪ್ಪ ಹೇಳಿದ್ರು ಅಲ್ವಾ ಮಹಿ ನೀನು ಆರಾಮಾಗಿ ಮೈಸೂರ್ ಗೆ ಹೋಗು, ವಿನೋದ್ ಏನಾದ್ರು ಬಂದು ಮಾತಾಡಿದ್ರೆ  ನಾನ್ ನೋಡ್ಕೋತೀನಿ ಅಂತ ಹೇಳಿದ್ರು. ತುಂಬಾ ಥ್ಯಾಂಕ್ಸ್ ಸರ್ ಅರ್ಥ ಮಾಡಿಕೊಂಡಿದ್ದಕ್ಕೆ ಅಂತ ಹೇಳ್ದೆ. ಅಜ್ಜಿ ಮಾತಾಡ್ತಾ ಥ್ಯಾಂಕ್ಸ್ ಇರಲಿ ಮೊದಲು ಹೋಗಿ ಅಕಿರಾ ನಾ ಸಮಾಧಾನ ಮಾಡು ಅವಳಿಗೆ ಸ್ವಲ್ಪ ಧೈರ್ಯ ಹೇಳು ಹೋಗು ಅಂತ ಹೇಳಿದ್ರು. ನಾನು ಮನಸಲ್ಲೇ ನನಗು ಇದೆ ಬೇಕಾಗಿದ್ದು ಅಂತ ಅನ್ಕೊಂಡು ಎದ್ದು ಅಕಿರಾ ರೂಮ್ ಕಡೆಗೆ ಹೋದೆ.  ಅಕಿರಾ ರೂಮ್ ಹತ್ತಿರ ಬಂದೆ ರೂಮ್ ಡೋರ್ ಕ್ಲೋಸ್ ಮಾಡಿತ್ತು, ರೂಮ್ ಡೋರ್ ನಾ ಬಡಿದೇ, 2 ನಿಮಿಷ ಆದ್ರೂ ಬರಲಿಲ್ಲ ಮತ್ತೆ ಬಡಿದೇ, ಅಕಿರಾ ಒಳಗೆ ಯಿಂದ ಮಾತಾಡ್ತಾ ಅಮ್ಮ ಸುಮ್ನೆ ಹೋಗು ಈಗ್ಲೇ ಕೋಪದಲ್ಲಿ ಇದ್ದೀನಿ ನಿನ್ ಇನ್ನು ನನಗೆ ಕೋಪ ತರಿಸಬೇಡ ಅಂತ ಜೋರಾಗಿ ಹೇಳಿದ್ಲು. ಮತ್ತೆ ಡೋರ್ ನಾ ಬಡಿದೇ  ಅಕಿರಾ ರೂಮ್ ಡೋರ್ ಓಪನ್ ಮಾಡ್ತಾ ಅಮ್ಮ ನಿನಗೆ ಎಷ್ಟು ಸರಿ ಹೇಳೋದು ಅಂತ ಹೇಳ್ತಾ ನನ್ನ ನೋಡಿ ಏನಕ್ಕೆ ಬಂದೆ ನೀನು ಹೋಗು ಅಂತ ಹೇಳಿದ್ಲು. ನಾನು ಕೂಲ್ ಅಗಿನೇ ನಿನ್ನ ಹತ್ತಿರ ಎರಡು ನಿಮಿಷ ಮಾತಾಡಬೇಕು ಅಂತ ಕೇಳ್ದೆ.  ಅಕಿರಾ ಕೋಪದಲ್ಲೇ ಏನು ಬೇಕಾಗಿಲ್ಲ ಹೋಗು ಸುಮ್ನೆ ಅಂತ ಹೇಳಿ ಡೋರ್ ಲಾಕ್ ಮಾಡೋಕೆ ನೋಡಿದ್ಲು. ಡೋರ್ ನಾ ಸ್ವಲ್ಪ ಜೋರಾಗಿ ತಳ್ಳಿದೆ ಅಕಿರಾ ಡೋರ್ ನಾ ಬಿಟ್ಟು ಹಿಂದೆ ಹೋಗಿ ಬೆಡ್ ಮೇಲೆ ಬಿದ್ಲು.

  ನಾನು ರೂಮ್ ಡೋರ್ ನಾ ಓಪನ್ ಮಾಡಿಕೊಂಡು ರೂಮ್ ಒಳಗೆ ಹೋದೆ. ಅಕಿರಾ ಬೆಡ್ ಮೇಲೆ ಬಿದ್ದವಳು ಎದ್ದು ನಿಂತು ಮಹಿ ನಿನಗೆ ಏನಾದ್ರು ಹುಚ್ಚ ಹೋಗು ಅಂತ ಹೇಳ್ದೆ ಅಲ್ವಾ ನೀನು ಮೊದಲು ಇಲ್ಲಿಂದ ಹೋಗು ಅಂತ ಕೋಪದಲ್ಲೆ ಹೇಳ್ತಾ ಕಣ್ಣಲ್ಲೇ ನನ್ನ ಮೇಲೆ ಬೆಂಕಿ ಮಳೆನಾ ಸುರಿಸಿದ್ಲು. ಇವಳಿಗೆ ಹೀಗೆ ಅಲ್ಲ ಅಂತ ಅನ್ಕೊಂಡು ಅವಳ ಕಪಾಳಕ್ಕೆ ಒಂದು ಬಾರಿಸಿದೆ , ಹೋಗಿ ಬೆಡ್ ಮೇಲೆ ಬಿದ್ದಳು. ಬೆಡ್ ಮೇಲಿಂದ ಎದ್ದವಳು ನನ್ನ ಕೊಲ್ಲೋ ಹಾಗೇ ನೋಡ್ತಾ ನನ್ನೇ ಹೊಡಿತಿಯ ಅಂತ ಕೇಳಿದ್ಲು. ಯಾಕೆ ಡೌಟ್ ಅ ಅಂತ ಕಪಾಳಕ್ಕೆ ಇನ್ನೊಂದು ಬಾರಿಸಿದೆ. ಮತ್ತೆ ಹೋಗಿ ಬೆಡ್ ಮೇಲೆ ಬಿದ್ದಳು. ಕೆನ್ನೆ ಮೇಲೆ ಕೈ ಇಟ್ಕೊಂಡು ಅಳ್ತಾ ನನ್ನೇ ನೋಡೋಕೆ ಶುರು ಮಾಡಿದ್ಲು. ಅಲ್ವೇ ನನ್ನ ಏನು ಅಂತ ಅನ್ಕೊಂಡು ಇದ್ದಿಯಾ ಹೇಳು, ನಿನಗೆ ಇಷ್ಟ ಬಂದ ಹಾಗೆಲ್ಲ ಮಾಡ್ತಾ ಇದ್ದಿಯಾ. ಹೆಣ್ಣು ಅಂತ ಸುಮ್ನೆ ಬಿಟ್ಟಿದ್ದೀನಿ. ಅ ವಿನೋದ್ ಗು ಅಷ್ಟೇ ನಿನ್ನ ಮುಖ ನೋಡ್ಕೊಂಡು ನಿನಗೆ ಏನು ಪ್ರಾಬ್ಲಮ್ ಆಗ್ಬಾರ್ದು ಅಂತ ಏನೇ ಮಾಡಿದ್ರು ಸುಮ್ನೆ ಇದ್ದೆ, ಅದ್ರೆ ನೀನು ಎಲ್ಲಿ ನನ್ನ ಪ್ರೀತಿ ಗೆ ತೊಂದ್ರೆ ಆಗುತ್ತೆ ಅನ್ನೋದನ್ನೇ ಯೋಚ್ನೆ ಮಾಡ್ಕೊಂಡು ಇದ್ದಿಯಾ ನಿನಗೆ ಅದು ಮಾತ್ರ ಮುಖ್ಯ.  ಇವಾಗ ನಿನ್ನ ಪ್ರಾಬ್ಲಮ್ ಏನು ವಿನೋದ್ ಬಂದು ಮನೇಲಿ ಹೇಳ್ತಾನೆ ಮನೆಯವರು ಮತ್ತೆ ಮದುವೆ ಅಂತಾರೆ ಅಂತ ಅಲ್ವಾ ನಿನ್ನ ಪ್ರಾಬ್ಲಮ್ ಇಷ್ಟು ಕೋಪ. ನೋಡು ನಿನ್ ಅದರ ಬಗ್ಗೆ ಯೋಚ್ನೆ ಮಾಡಬೇಡ. ನಿಮ್ ಮನೇಲಿ ಎಲ್ಲಾ ಮಾತಾಡಿದ್ದೀನಿ ಎಲ್ಲರೂ ಒಪ್ಪಿಕೊಂಡು ಇದ್ದಾರೆ. ಇನ್ನ ಅ ವಿನೋದ್ ಬಂದು ನಿಮ್ ಮನೇಲಿ ನನಗೆ ಜಾಬ್ ಇಲ್ಲಾ ಅಂತ ಹೇಳಿದ್ರು ನಿನಗೆ ಏನು ಪ್ರಾಬ್ಲಮ್ ಇಲ್ಲಾ. ಮತ್ತೆ ಇನ್ನೊಂದು ವಿಷಯ ನನ್ನ ಲವ್ ಮಾಡ್ತಾ ಇದ್ದೀನಿ ಅಂತ ಮನೆಗೆ ಪರಿಚಯ ಮಾಡಿಸಿದ ಮೇಲೆ ಧ್ರುವ್ ಜೊತೆ ಸುತ್ತಾಡಿ ಮನೆಗೆ ಬರೋದು ಲೇಟ್ ಮಾಡ್ತಾ ಇದ್ದಿಯಾ, ಮನೆಯವರು ನನ್ನ ಜೊತೆ ಅನ್ಕೊಂಡು ಏನು ಮಾತನಾಡದೆ ಸುಮ್ನೆ ಇದ್ದಾರೆ. ಇನ್ಮೇಲೆ ಅದೆಲ್ಲಾ ನಡಿಯೋದೇ ಇಲ್ಲಾ. ನಿನಗೆ ನಿನ್ನ ಪ್ರೀತಿ ಬೇಕಾ ಧ್ರುವ್ ಜೊತೆ ಸುತ್ತಾಡೋದು ಲೇಟ್ ಆಗಿ ಮನೆಗೆ ಬರೋದು ಇದನ್ನೆಲ್ಲಾ ಬಿಟ್ಟು ಬಿಡಬೇಕು. ಅಪ್ಪಿ ತಪ್ಪಿ ಏನಾದ್ರು ಧ್ರುವ್ ಜೊತೆ ಇರೋದನ್ನ ವಿನೋದ್ ನೋಡೋದು ಇಲ್ಲಾ ನಿಮ್ ಮನೆಯವರೇ ನೋಡಿದ್ರೆ ಅಲ್ಲಿಗೆ ನಿನ್ನ ಪ್ರೀತಿ ಗೆ ಎಳ್ಳು ನೀರು ಬಿಡಬೇಕು, ಇಲ್ಲಾ ಧ್ರುವ್ ನಾ ಲವ್ ಮಾಡ್ತಾ ಇದ್ದೀನಿ ಅವನ ಜೊತೆ ಹೇಗೆ ಇರಬೇಕು ಅನ್ನೋದು ನನ್ನ ಇಷ್ಟ ನಿನಗೆ ಅದನ್ನ ಕೇಳೋ ರೈಟ್ಸ್ ಇಲ್ಲಾ ಅಂತ ಅಂದ್ರೆ, ಜಾಬ್ ಹೋದ ವಿಷಯ ಬಂದು ಹೇಳಿದವನಿಗೆ ಧ್ರುವ್ ವಿಷಯ ಹೇಳೋದು ದೊಡ್ಡ ವಿಷಯ ಏನು ಅಲ್ಲ. ಮಗಳು ಅನ್ನೋ ಕಾರಣಕ್ಕೆ ನಿನ್ನ ಮೇಲೆ ನಿನ್ನ ಪ್ರೀತಿ ಮೇಲೆ ನಂಬಿಕೆ ಇಟ್ಟು ನನಗೆ ಜಾಬ್ ಇಲ್ಲಾ ಅಂದ್ರು ಏನು ಮಾತನಾಡದೆ ಸಪೋರ್ಟ್ ಆಗಿ ನಿಂತಿದ್ದಾರೆ. ನಿನಗೆ ಅವರ ಮೇಲೆ ಎಷ್ಟು ನಂಬಿಕೆ ಇದೆ ಏನೋ ಗೊತ್ತಿಲ್ಲಾ ಅದ್ರೆ ಅವರು ನನ್ನ ಮೇಲೆ ಇಟ್ಟಿರೋ ನಂಬಿಕೆಗೆ ಏನಾದ್ರು ನಿನ್ನ ಕಡೆ ಯಿಂದ ಇಲ್ಲಾ ಧ್ರುವ್ ಕಡೆ ಯಿಂದ ಏನಾದ್ರು ಮಸಿ ಬಳಿಯೋ ಕೆಲಸ ನಡೀತು ಅಂದ್ರೆ ಮಾತ್ರ ಬರೆದು ಇಟ್ಕೋ, ನಿಮ್ಮಿಬ್ಬರ ಲೈಫ್  ಗೆ ನಾನೆ ವಿಲನ್ ಆಗ್ತೀನಿ. ನನಗೆ ಒಬ್ಬರ ಮೇಲೆ ದ್ವೇಷ ಅಂತ ಬಂದ್ರೆ ದಯೆ ಕರುಣೆ ಅನ್ನೋದೇ ಮರೆತು ಹೋಗ್ತೀನಿ. ಸೋ ಇದನ್ನೆಲ್ಲಾ ನೆನಪು ಇಟ್ಕೊಂಡು ಇನ್ಮುಂದೆ ಕಂಟ್ರೋಲ್ ಅಲ್ಲಿ ಇರ್ತೀಯ ಅಂದ್ರೆ ನಿಮ್ ಪ್ರೀತಿ ಬಗ್ಗೆ ನಾನೆ ನಿಮ್ ಮನೇಲಿ ಮಾತಾಡಿ ಅವರನ್ನ ಒಪ್ಪಿಸಿ ನಿಮ್ ಇಬ್ಬರಿಗೂ ಮದುವೆ ಮಾಡಿಸ್ತೀನಿ ಇಲ್ಲಾ ಅಂದ್ರೆ, ನಿಮ್ ಪ್ರೀತಿ ನಾ ಸಮಾಧಿ ಮಾಡಿ ತಿಥಿ ಊಟ ನಾ ನಾನ್ ಮಾಡಿಸ್ತೀನಿ ಅಂತ ಅವಳಿಗೆ ಮಾತಾಡೋಕು ಅವಕಾಶ ಕೊಡದೆ ಕೋಪದಲ್ಲೇ ಹೇಳ್ದೆ.

    ಅಕಿರಾ ನಾನು ಹೇಳೋದನ್ನ ಕೇಳ್ತಾ ಕೆನ್ನೆ ಮೇಲೆ ಕೈ ಇಟ್ಕೊಂಡೇ ನನ್ನೇ ನೋಡ್ತಾ ಇದ್ದು ಬಿಟ್ಟಳು. ಸ್ವಲ್ಪ ಕೋಪದಿಂದ ಅವಳನ್ನೇ ನೋಡ್ತಾ ಏನು ನೋಡ್ತಾ ಇದ್ದಿಯಾ ಎದ್ದು ಹೋಗಿ ಮುಖ ತೊಳ್ಕೊಂಡು ಹಾಲ್ ಗೆ ಬಾ, ಮತ್ತೆ ನಿನ್ನ ಮುಖದಲ್ಲಿ ಕೋಪ ಏನಾದ್ರು ನೋಡಿದೆ ಅಂದ್ರೆ ಕಥೆ ಬೇರೆ ತರ ಇರುತ್ತೆ ಅಂತ ಹೇಳಿ ರೂಮ್ ಡೋರ್ ಓಪನ್ ಮಾಡಿಕೊಂಡು ಹೊರಗೆ ಹೋದೆ.

  ಅಕಿರಾ ಗೆ ಅವಳ ಮನಸಲ್ಲಿ ವಿನೋದ್ ಏನಾದ್ರು ಮಾಡ್ತಾನೆ ಅನ್ನೋ ಭಯ ಹೋಯ್ತು, ಧ್ರುವ್ ಜೊತೆ ಓಡಾಡೋದನ್ನ ನಿಲ್ಲಿಸು ಅನ್ನೋ ಮಾತಿಗೆ ಕೋಪ ಬಂತು. ಎದ್ದು ವಾಶ್ರೂಮ್ ಗೆ ಹೋಗಿ ಫೇಸ್ ವಾಶ್ ಮಾಡಿಕೊಂಡು ಕನ್ನಡಿ ಮುಂದೆ ನಿಂತು ಮುಖ ನಾ ನೋಡಿಕೊಂಡಳು ಕೆನ್ನೆ ಮೇಲೆ ಹೊಡೆದ ಗುರುತು ಹಾಗೇ ಇತ್ತು. ಕೋಪದಿಂದ ಕೆನ್ನೆ ಮೇಲೆ ಮುಟ್ಟಿಕೊಂಡು ನನ್ನೇ ಹೊಡಿತಿಯ ನಿನ್ನ ಮಾತ್ರ ಸುಮ್ನೆ ಬಿಡಲ್ಲ, ಧ್ರುವ್ ಜೊತೆ ಸುತ್ತಾಡೋಕೆ ನಿನ್ನ ಪರ್ಮಿಷನ್ ಬೇಕಾ, ಅದು ಯಾವತ್ತಿಗೂ ಸಾಧ್ಯ ಇಲ್ಲಾ ನನ್ನ ಪ್ರೀತಿ ನನ್ನ ಧ್ರುವ್ ನಾನ್ ಓಡಾಡ್ತೀನಿ ಅವನ ಜೊತೆ ಅಂತ ಕನ್ನಡಿ ನೋಡ್ಕೊಂಡು ಹೇಳಿದಳು. ಸಡನ್ ಆಗಿ ಅವಳ ಅಂತಾರಾತ್ಮ ಮಾತಾಡ್ತಾ ಹ್ಮ್ ಸುತ್ತಾಡು, ಅದನ್ನ ಮನೆಯವರು ನೋಡ್ಲಿ, ಮಹಿ ಗು ಮೊದಲೇ ಮನೆಯರೇ ತಿಥಿ ಮಾಡ್ತಾರೆ, ಮಹಿ ನಿನಗೆ ಪ್ರಾಬ್ಲಮ್ ಆಗ್ಬಾರ್ದು ಅಂತ ಮನೇಲಿ ಒಪ್ಪಿಸಿದ್ದಾನೆ ನೀನು ಅದನ್ನ ಹಾಳು ಮಾಡು. ಸ್ವಲ್ಪ ದಿನ ಅಂತ ಹೇಳಿದ್ದಾನೆ ಅಲ್ವಾ ಯಾಕೆ ನಿನ್ನ ಪ್ರೀತಿಗೋಸ್ಕರ ನೀನು ಇಷ್ಟು ಮಾಡೋಕೆ ಹಾಗಲ್ವಾ. ಇವಾಗ ನಿನ್ನ ಪ್ರೀತಿ ಬೇಕು ಬೇಡ ಅನ್ನೋದು ನಿನ್ನ ಕೈಲಿ ಇದೆ ಉಳಿಸಿ ಕೊಳ್ತೀಯೋ ಇಲ್ಲಾ ಕಳೆದು ಕೊಳ್ತೀಯೋ ನಿನ್ ಇಷ್ಟ ಅಂತ ಹೇಳಿ ಸೈಲೆಂಟ್ ಆಯ್ತು.   ಅಕಿರಾ ಕನ್ನಡಿ ನೋಡಿ ಕೊಳ್ತಾ ಒಂದು ಸ್ಮೈಲ್ ಮಾಡಿ ನನ್ನ ಪ್ರೀತಿ ನಾ ಉಳಿಸಿ ಕೊಳ್ತೀನಿ ಅಂತ ನಿರ್ಧಾರ ಮಾಡಿ. ರೂಮ್ ಯಿಂದ ಹೊರಗೆ ಬಂದಳು.

   ಹಾಲ್ ಅಲ್ಲಿ ಕೂತು ತಾತ ಅಜ್ಜಿ ವಿವೇಕ್ ಜೊತೆ ಮೈಸೂರ್ ಹೋಗೋದರ ಬಗ್ಗೆ ಮಾತಾಡ್ತಾ ಇದ್ದೆ, ಈ ಮಾತಿನ ಮಧ್ಯ ವಿವೇಕ್ ಅವರು ನನ್ನ ಮೊಬೈಲ್ ನಂಬರ್ ತೆಗೆದುಕೊಂಡರು. ಎಲ್ಲೂ ನಾನು ಶಿಲ್ಪಾ ಜೊತೆಗೆ ಹೋಗ್ತಾ ಇದ್ದೀನಿ ಅಂತ ಹೇಳಿಲ್ಲ. ಅಕಿರಾ ಖುಷಿಯಾಗಿ ಸ್ಟೆಪ್ಸ್ ಇಳಿತಾ ಹಾಲ್ ಗೆ ಬಂದಳು. ಅಜ್ಜಿ ಅಕಿರಾ ಖುಷಿಯಾಗಿ ಇರೋದನ್ನ ನೋಡಿ ಇವಾಗ ನೋಡು ಎಷ್ಟು ಮುದ್ದು ಮುದ್ದಾಗಿ ಇದ್ದಿಯಾ, ಈಗೆ ನಗ್ತಾ ಸಂತೋಷ ವಾಗಿ ಇರು ಅಂತ ಹೇಳಿದ್ಲು. ಕೋಮಲಿ ಅವರು ಅಕಿರಾ ಅಡುಗೆ ರೆಡಿ ಆಯ್ತು ಮಹಿ ನಾ ಕರ್ಕೊಂಡು ಬಾ ಅಂತ ಹೇಳಿದ್ರು. ಅವರು ಹಾಗೇ ಹೇಳಿದಕ್ಕೆ ಅಕಿರಾ ಒಂತರಾ ನನ್ನ ಕಡೆಗೆ ನೋಡ್ತಾ ಹೇಗೆ ಹೇಳೋದು ಅಂತ ಯೋಚ್ನೆ ಮಾಡ್ತಾ ಹಾಗೇ ಇದ್ದು ಬಿಟ್ಟಳು. ಅಜ್ಜಿ ಅವಳನ್ನ ನೋಡಿ ನಗ್ತಾ ನಿನ್ ಹೋಗಿ ನಿಮ್ ಅಮ್ಮ ಗೆ ಹೆಲ್ಪ್ ಮಾಡು ಹೋಗು ನಾನ್ ಕರ್ಕೊಂಡು ಬರ್ತೀನಿ ಅಂತ ಹೇಳಿದ್ರು. ಅಕಿರಾ ಅಬ್ಬಾ ಪ್ರಾಬ್ಲಮ್ ಸಾಲ್ವ್ ಅಂತ ಅನ್ಕೊಂಡು ಎದ್ದು ಅಡುಗೆ ಮನೆಗೆ ಹೋದಳು. ಅಡುಗೆ ಮನೇಲಿ ಅಮ್ಮ ನಾ ನೋಡಿ ಹೋಗಿ ತಬ್ಬಿಕೊಂಡು ಸಾರೀ ಅಮ್ಮ ಅಂತ ಹೇಳಿದ್ಲು. ಕೋಮಲಿ ಅವರು ನಗ್ತಾ ಹುಚ್ಚುಡುಗಿ ಅಂತ ಅಕಿರಾ ತಲೆ ಸವರುತ್ತ ಅಕಿರಾ ನಿನಗೆ ಒಂದು ವಿಷಯ ಹೇಳ್ತಿನಿ ಸರಿಯಾಗಿ ಅರ್ಥ ಮಾಡ್ಕೋ.. ಪ್ರೀತಿ ಮಾಡೋವ್ರೆ ಆಗಲಿ ಮದುವೆ ಅದ ಗಂಡ ಹೆಂಡತಿ ನೇ ಆಗಲಿ. ಇಬ್ಬರಲ್ಲಿ ಒಬ್ಬರಿಗೆ ತಾಳ್ಮೆ ಅನ್ನೋದು ಇರಬೇಕು. ಇಲ್ಲಾ ಅಂದ್ರೆ ಅಲ್ಲಿ ಸಂಬಂಧಗಳು ಕೆಟ್ಟು ಹೋಗೋ ಅವಕಾಶ ಜಾಸ್ತಿ ಇರುತ್ತೆ. ನಿನಗೆ ಕೋಪ ಬಂದಿದ್ದು ತಪ್ಪಲ್ಲ ಬಟ್ ಅದನ್ನೇ ಸಾಧಿಸೋಕೆ ಹೋಗ ಬಾರ್ದು. ಅದು ಯಾರಿಗೂ ಒಳ್ಳೇದಲ್ಲ. ಅಂತ ಹೇಳಿ ಬಾ ಇದನ್ನೆಲ್ಲಾ ಡೈನಿಂಗ್ ಟೇಬಲ್ ಮೇಲೆ ಇಡೋಣ ಅಂತ ಹೇಳಿದ್ರು. 

  ತಾತ ಮಹಿ ಬಾ ಊಟ ಮಾಡೋಣ ಅಂತ ಹೇಳಿದ್ರು   ಎದ್ದು ಹೋಗಿ ಹ್ಯಾಂಡ್ ವಾಶ್ ಮಾಡ್ಕೊಂಡ್ ಹೋಗಿ ಡೈನಿಂಗ್ ಟೇಬಲ್ ಮೇಲೆ ಹತ್ತಿರ ಹೋಗಿ ಕುತ್ಕೊಂಡೆ. ಕೋಮಲಿ ಅವರು  ಊಟ ಬಡಿಸೋಕೆ ಶುರು ಮಾಡಿದ್ರು. ಎಲ್ಲರೂ ಊಟ ಮಾಡಿದ್ವಿ.  ಊಟ ಮಾಡಿ ಬಂದು 5ನಿಮಿಷ ಸೋಫಾ ಮೇಲೆ ಕೂತ್ಕೊಂಡು ಮಾತಾಡ್ತಾ ಇದ್ದೆ ತಾತ ವಿವೇಕ್ ಅವರ ಜೊತೆಗೆ. ನಂತರ ಸರ್ ನಾನ್ ಇನ್ನ ಹೊರಡ್ತೀನಿ ಅಂತ ಹೇಳ್ದೆ. ವಿವೇಕ್ ಅವರು ಹುಷಾರು ಮಹಿ ಅಂತ ಹೇಳಿದ್ರು. ಅಜ್ಜಿ ಅಕಿರಾ ಮಹಿ ಹೋಗ್ತಾ ಇದ್ದಾನೆ ಹೋಗಿ ಬಿಟ್ಟು ಬಾ ಅಂತ ಹೇಳಿದ್ರು. ಅಡುಗೆ ಮನೇಲಿ ಅಮ್ಮನ ಜೊತೆಗೆ ಇದ್ದಾ ಅಕಿರಾ ಅಜ್ಜಿ ಹೇಳೋದನ್ನ ಕೇಳಿ ಸ್ವಲ್ಪ ಕೋಪ ಮಾಡ್ಕೊಂಡು ಹಾಲ್ ಗೆ ಬಂದಳು ನಾನು ಹೋಗ್ತಾ ಇರೋದನ್ನ ನೋಡಿ ನನ್ನ ಹಿಂದೇನೆ ಬಂದಳು. ನಾನು ಹೊರಗೆ ಬಂದು ನನ್ನ ಬೈಕ್ ಹತ್ತಿರ ಬಂದೆ. ಅಕಿರಾ ಸ್ವಲ್ಪ ದೂರದಲ್ಲೇ ನಿಂತು ನನ್ನ ನೋಡ್ತಾ ಇದ್ದಳು. ನಾನು ಬಾ ಇಲ್ಲಿ ಅಂತ ಕರೆದೆ, ಅಕಿರಾ ಸ್ವಲ್ಪ ಕೋಪದಲೇ ನನ್ನ ಹತ್ತಿರ ಬಂದು ಏನು ಅಂತ ಕೇಳಿದ್ಲು.  ನಾನು ಅವಳ ಮುಖ ನಾ ನೋಡ್ತಾ ನೋಡು ರೂಮ್ ಅಲ್ಲಿ ನಡೆದಿದ್ದು ಅಲ್ಲಿಗೆ ಮರೆತು ಬಿಡು, ಯಾರಿಗೂ ಏನು ಹೇಳೋಕೆ ಹೋಗಬೇಡ ಧ್ರುವ್ ಗು ಅಷ್ಟೇ ಏನು ಹೇಳೋಕೆ ಹೋಗಬೇಡ ಅಂತ ಹೇಳ್ದೆ. ಧ್ರುವ್ ಗೆ ಯಾಕೆ ಹೇಳ್ಬರ್ದು ಅಂತ ಕೇಳಿದ್ಲು. ನೋಡು ಯಾಕೆ ಏನು ಅನ್ನೋ ಪ್ರಶ್ನೆ ನಾ ಕೇಳೋಕೆ ಹೋಗಬೇಡ, ನಿನಗೆ ಧ್ರುವ್ ಬೇಕಾ ಸೋ ನಾನ್ ಏನ್ ಹೇಳ್ತಿನೋ ಅದನ್ನ ಅಷ್ಟೇ ಫಾಲೋ ಮಾಡಬೇಕು.  ಇಲ್ಲಾ ನಾನ್ ಈ ವಿಷಯ ದಲ್ಲಿ ನಿನ್ ಮಾತು ಕೇಳೋದೇ ಇಲ್ಲಾ ಅಂತ ಅಂದ್ರೆ. ನನಗೆ ಏನು ಪ್ರಾಬ್ಲಮ್ ಇಲ್ಲಾ. ನೋಡೋಕು ಹೇಗಿದ್ರು ಚೆನ್ನಾಗಿ ಇದ್ದಿಯಾ ನಿಮಜ್ಜಿ ಹೇಳಿದ ಹಾಗೇ ಮುದ್ದು ಮುದ್ದಾಗಿ ಇದ್ದಿಯಾ. ನಿನ್ನ ಎತ್ತಾಕೊಂಡ್ ಹೋಗಿ ಮದುವೆ ಮಾಡಿ ಕೊಂಡ್ರು, ಇಲ್ಲಾ ಇಲ್ಲೇ ನಿನಗೆ ತಾಳಿ ಕಟ್ಟಿದ್ರು ನಿಮ್ ಮನೆಯವರು ಯಾಕೆ ಏನು ಅಂತ ಕೇಳೋದು ಇಲ್ಲಾ. ಸೋ ಆಯ್ಕೆ ನಿನ್ನದು ಅಂತ ಹೇಳಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಹೋದೆ.

  ಅಕಿರಾ ನಾನ್ ಹಾಗೇ ಹೇಳಿದಕ್ಕೆ ಕೋಪ ಮಾಡ್ಕೊಂಡು ನಿನ್ನ ಟೈಮ್ ಕಣೋ ಮಾತಾಡು ಮಾತಾಡು ನನ್ನ ಟೈಮ್ ಬಂದಾಗ ನಾನ್ ಮಾತಾಡ್ತೀನಿ ಅಂತ ಹೇಳಿ ಮನೆ ಒಳಗೆ ಹೋದಳು.

  ನಾನು ಮನೆಗೆ ಬರ್ತಾ ಇದ್ದಾ ಹಾಗೇ ಶ್ವೇತಾ ಫುಲ್ ಕ್ಲಾಸ್ ತಗೊಂಡ್ಲು ನಾನು ಒಳ್ಳೆ ಮಗು ತರ ಎಲ್ಲಾ ಕೇಳಿಸಿಕೊಂಡು ಮೆಡಿಸಿನ್ ಕೊಟ್ಟು ನನ್ನ ರೂಮ್ ಗೆ ಹೋದೆ..


***************************************