ಹುಟ್ಟು ಹಬ್ಬದ ದಿನ ಮೆಂಟಲಿ ಡಿಸೈಡ್ ಅದೇ ಶಿಲ್ಪಾ ನನ್ನ ಮೇಲೆ ಇಟ್ಟಿರೋ ನಂಬಿಕೆ ನಾ ಉಳಿಸಿ ಕೊಳ್ಳಬೇಕು ಅಂತ ಅಂತ. ಎದ್ದು ಹೋಗಿ ಸ್ನಾನ ಮಾಡಿಕೊಂಡು ಬಂದೆ ಅಷ್ಟ್ರಲ್ಲಿ ಮೊಬೈಲ್ ರಿಂಗ್ ಆಯ್ತು. ನೋಡಿದ್ರೆ ಶ್ವೇತಾ. ಕಾಲ್ ಪಿಕ್ ಮಾಡಿ ಹೇಳು ಅಂತೇ ಹೇಳ್ದೆ. ಹ್ಯಾಪಿ ಬರ್ತ್ಡೇ ಕಣೋ ಅಂತ ಹೇಳಿದ್ಲು, ಥ್ಯಾಂಕ್ಸ್ ಅಂತ ಹೇಳ್ದೆ. ಹರಿಣಿ ಅಕ್ಕ ಕೂಡ ಹ್ಯಾಪಿ ಬರ್ತ್ಡೇ ಅಂತ ವಿಶ್ ಮಾಡಿದ್ರು ಅವರಿಗೂ ಥ್ಯಾಂಕ್ಸ್ ಹೇಳಿದೆ. ಹರಿಣಿ ಅಕ್ಕ ಮಹಿ ನಿನ್ ಲಗೇಜ್ ಅಲ್ಲಿ ಬಾಟಮ್ ಅಲ್ಲಿ ಒಂದು ಬ್ಲೂ ಕವರ್ ಇಟ್ಟಿದ್ದೀನಿ ಓಪನ್ ಮಾಡಿ ನೋಡು ಅಂತ ಹೇಳಿದ್ರು. ನಾನು ಇಲ್ಲಿಗೆ ಬಂದಮೇಲೆ ಬಾಡಿಗೆ ರೂಮ್ ಹೋಗ್ತೀನಿ ಅಲ್ವಾ ಲಗೇಜ್ ಏನಕ್ಕೆ ಓಪನ್ ಮಾಡೋದು ಅಂತ ಎಲ್ಲವನ್ನೂ ಹಾಗೇ ಇಟ್ಟಿದೆ. ಹರಿಣಿ ಅಕ್ಕ ಹೇಳಿದ ಹಾಗೇ ಲಗೇಜ್ ನಾ ಓಪನ್ ಮಾಡಿ ಬ್ಲೂ ಕವರ್ ಹುಡುಕಿದೆ ಸಿಕ್ತು. ಅದನ್ನ ಓಪನ್ ಮಾಡಿ ನೋಡಿದೆ ಒಂದು ಬಾಕ್ಸ್ ಇತ್ತು. ಅದನ್ನ ಓಪನ್ ಮಾಡಿ ನೋಡಿದೆ ಅದರಲ್ಲಿ ಒಂದು ಲೈಟ್ ಬ್ಲೂ ಶರ್ಟ್ ಬ್ಲಾಕ್ ಪ್ಯಾಂಟ್, ಒಂದು ಗೋಲ್ಡ್ ಚೈನ್ ಮತ್ತೆ ಒಂದು ವಾಚ್ ಇತ್ತು.. ನಾನ್ ನೋಡಿ ಅಕ್ಕ ಏನಕ್ಕೆ ಇದೆಲ್ಲಾ ಅಂತ ಕೇಳ್ದೆ. ಹರಿಣಿ ಅಕ್ಕ ಏನಕ್ಕೆ ಅಂದ್ರೆ ನನಗೆ ಇಷ್ಟೆಲ್ಲ ಮಾಡಿದೆ ನಾನ್ ಏನಾದ್ರು ಹೇಳಿದ್ನ ಅಂತ ಹೇಳಿದ್ರು ನಾನು ಸಾರೀ ಥ್ಯಾಂಕ್ಸ್ ಅಕ್ಕ ಅಂತ ಹೇಳ್ದೆ. ಸ್ವಲ್ಪ ಹೊತ್ತು ಮಾತಾಡಿ ಬೈ ಹೇಳಿ ಕಾಲ್ ಕಟ್ ಮಾಡಿ ಅ ಬಟ್ಟೆ ಹಾಕಿಕೊಂಡು ರೂಮ್ ಯಿಂದ ಹೊರಗೆ ಬಂದು ಹಾಲ್ ಗೆ ಹೋದೆ. ರೋಹಿಣಿ ನೀಲಾ ಇಬ್ರು ಕಾಲೇಜ್ ಹೋಗೋಕೆ ರೆಡಿ ಆಗಿ ಸೋಫಾದಲ್ಲಿ ಕೂತಿದ್ರು. ನಾನ್ ಬರೋದನ್ನ ರೋಹಿಣಿ ನೋಡಿ. ಹಾಗೇ ಕಣ್ಣು ದೊಡ್ಡದು ಮಾಡಿಕೊಂಡು. ನೀಲಾ ಗೆ ಲೇ ಅಲ್ಲಿ ನೋಡೇ ಅಂತ ನನ್ನ ಕಡೆ ತೋರಿಸಿದ್ಲು. ನೀಲಾ ನನ್ನ ಕಡೆಗೆ ನೋಡ್ತಾ ನನ್ನ ನೋಡಿ. ಮಹಿ ಸೀರಿಯಸ್ ಆಗಿ ನಿನ್ನ ಒಂದು ಪ್ರಶ್ನೆ ಕೇಳ್ತೀನಿ ಉತ್ತರ ಹೇಳು ಅಂತ ಕೇಳಿದ್ಲು. ನಾನು ಅ ಕೇಳು ಅಂತ ಹೇಳ್ದೆ. ಕೇಳ್ತೀನಿ ಇರು ಅಂತ ಹೇಳಿ ಹೋಗಿ ಮನೆ ಮೇನ್ ಡೋರ್ ಹತ್ತಿರ ಹೋಗಿ ಮತ್ತೆ ವಾಪಸ್ಸು ನನ್ನ ಹತ್ತಿರ ಬಂದು ಇನ್ನೊಂದು ಸರಿ ಕೇಳ್ತಾ ಇದ್ದೀನಿ ನಿನಗೆ ಗರ್ಲ್ಫ್ರೆಂಡ್ ಆಗ್ಲಿ ಲವರ್ ಆಗ್ಲಿ ಯಾರು ಇಲ್ವಾ ಅಂತ ಕೇಳಿದ್ಲು. ನಾನ್ ನೆನ್ನೆ ನೇ ಹೇಳ್ದೆ ಅಲ್ವಾ ಇಲ್ಲಾ ಅಂತ ಹೇಳ್ದೆ. ನೀಲಾ ಓಕೆ ಆಗಿದ್ರೆ ಕೇಳು, ನಿನಗೆ ಹೇಗೆ ಕೆಲವೊಂದು ಕಮಿಟ್ಮೆಂಟ್ ಅಂತ ಇದೆಯೋ ನನಗು ಕೂಡ ಹಾಗೇ ಫಾಷನ್ ಡಿಸೈನರ್ ಆಗಬೇಕು ಅನ್ನೋದು ನನ್ನ ಡ್ರೀಮ್. ಅದಕ್ಕೆ ಡೈರೆಕ್ಟ್ ಆಗಿ ಹೇಳ್ತಾ ಇದ್ದೀನಿ ಐ ಲವ್ ಯು. ಲೈಫ್ ಅಲ್ಲಿ ಸೆಟಲ್ ಅದ ಹುಡುಗನನ್ನ ಮದುವೆ ಆಗೋಕ್ಕಿಂತ ನನಗೆ ಇಬ್ರು ಕಷ್ಟ ಬಿದ್ದು ಲೈಫ್ ಅಲ್ಲಿ ಸೆಟ್ಟಲ್ ಅದ್ರೆ ಇಬ್ಬರಿಗೂ ಕಷ್ಟ ಏನು ಎಷ್ಟು ಪ್ರಾಬ್ಲಮ್ ನಾ ಫೇಸ್ ಮಾಡಿದ್ವಿ ಅನ್ನೋದು ಗೊತ್ತಿರುತ್ತೆ. ಇಬ್ಬರಿಗೆ ಒಬ್ಬರ ಮೇಲೆ ಒಬ್ಬರಿಗೆ ರೆಸ್ಪೆಕ್ಟ್ ಇರುತ್ತೆ ಒಳ್ಳೆ ಬೋಂಡಿಂಗ್ ಇರುತ್ತೆ. ಒಳ್ಳೆ ಅಂಡರ್ಸ್ಟ್ಯಾಂಡ್ ಇರುತ್ತೆ ಲೈಫ್ ಚೆನ್ನಾಗಿ ಇರುತ್ತೆ ಅನ್ನೋದು ನನ್ನ ನಂಬಿಕೆ. ಅದಕ್ಕೆ ಹೇಳ್ತಾ ಇದ್ದೀನಿ ಅಂತ ಹೇಳಿದ್ಲು
ನೋಡಿ ನನ್ನ ಬಗ್ಗೆ ಏನ್ ಯೋಚ್ನೆ ಮಾಡಿ ಹೀಗೆ ಹೇಳಿದ್ರೋ ನನಗೆ ಗೊತ್ತಿಲ್ಲ ಬಟ್ ನೀವು ಹೇಳಿದ ವಿಷಯ ಹೇಳಿದ ರೀತಿ ಕೊಟ್ಟ ಕಾರಣ ಅದಕ್ಕೆ ನಾನು ರೆಸ್ಪೆಕ್ಟ್ ಕೊಡ್ತೀನಿ. ಬಟ್ ನಿಮಗೂ ಗೊತ್ತು ಹೊರಗಡೆ ಗೆಲ್ಲಬೇಕು ಅಂತ ಹೋದ್ರೆ ಎಷ್ಟು ಪೈಪೋಟಿ ಇದೆ ಸೆಟ್ಟಲ್ ಆಗೋಕೆ ಎಷ್ಟು ಕಷ್ಟ ಇದೆ ಅಂತ. ಸೋ ನೀವ್ ನನ್ನ ಮೇಲೆ ಭರವಸೆ ಇಟ್ಟುಕೊಳ್ಳೋದು ಎಷ್ಟು ಸರಿ ಅಂತ ಕೇಳ್ದೆ. ನೀಲಾ ಮಾತಾಡ ಹಸಿವು ಅಂತ ಹೇಳಿದ್ರೆ 7 ಸ್ಟಾರ್ ಹೋಟೆಲ್ಅಲ್ಲಿ ಕೊಡಸದೆ ಇದ್ರು ರೋಡ್ ಸೈಡ್ ಅಲ್ಲಿ ಮುದ್ದೆ ಸಾಂಬಾರ್ ಆದ್ರೂ ಕೊಡಿಸ್ತೀರಾ ಅಲ್ವಾ ಅಂತ ಕೇಳಿದ್ಲು. ನಾನು ಬರಿ ಮುದ್ದೆ ಸಾಂಬಾರ್ ಏನು ಮಟನ್ ಬಿರಿಯಾನಿ ಬೇಕಾದ್ರು ಕೊಡಿಸ್ತೀನಿ ಅಂತ ಹೇಳ್ದೆ. ನೀಲಾ ನನ್ನ ನೋಡಿ ಒಂದೇ ನಿಮಿಷ ಬಂದೆ ಅಂತ ಹೇಳಿ ಮತ್ತೆ ಮೇನ್ ಡೋರ್ ಹತ್ತಿರ ಹೋಗಿ ಹೊರಗಡೆ ಅತ್ತ ಇತ್ತ ನೋಡಿಕೊಂಡು ಮತ್ತೆ ನನ್ನ ಹತ್ತಿರ ಬಂದು ನನ್ನ ನೋಡಿ ಹಗ್ ಮಾಡಿಕೊಂಡು ಕೆನ್ನೆಗೆ ಮೇಲೆ ಕಿಸ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳು ಮೈ ಫ್ಯೂಚರ್ ಅಂತ ಹೇಳಿದ್ಲು. ನಾನು ನೀಲಾ ಹಾಗೇ ಮಾಡಿದಕ್ಕೆ ಶಾಕ್ ಆಗಿ ಹಾಗೇ ಅವಳನ್ನ ನೋಡ್ತಾ ರೋಹಿಣಿ ಇರೋದು ನೆನಪಾಗಿ ರೋಹಿಣಿ ನಾ ನೋಡಿದೆ ಅವಳು ಕಾಣಿಸಿಲ್ಲ. ಮೇನ್ ಡೋರ್ ಕಡೆಗೆ ನೋಡಿದೆ ಅಲ್ಲಿ ನಿಂತು ಹೊರಗೆ ನೋಡ್ತಾ ನಮ್ ಕಡೆಗೆ ನೋಡ್ತಾ ಇದ್ಲು. ನೀಲಾ ನಾನ್ ಅವಳನ್ನ ನೋಡೋದು ನೋಡಿ, ಅವಳಿಗೆ ಗೊತ್ತು, ನಿನ್ ಏನು ಭಯ ಬೀಳಬೇಡ ಅಂತ ಹೇಳಿದ್ಲು. ನಾನು ಅವಳನ್ನೇ ನೋಡ್ತಾ ಇವತ್ತು ನನ್ನ ಬರ್ತ್ಡೇ ಅಂತ ನಿನಗೆ ಯಾರ್ ಹೇಳಿದ್ದು ಅಂತ ಕೇಳ್ದೆ. ನೀಲಾ ನಗ್ತಾ ನೆಕ್ಸ್ಟ್ ಟೈಮ್ ಮಲಗಿಕೊಳ್ಳೋವಾಗ ರೂಮ್ ಡೋರ್ ಲಾಕ್ ಮಾಡಿ ಮಲಕ್ಕೋ, ಅಂತ ಹೇಳಿದ್ಲು. ರೋಹಿಣಿ ಲೇ ಶಿಲ್ಪಾ ಬರ್ತಾ ಇದ್ದಾಳೆ ಅಂತ ಹೇಳಿದ್ಲು. ನೀಲಾ ಮತ್ತೊಮ್ಮೆ ನನ್ನ ಹಗ್ ಮಾಡಿ ಸಂಜೆ ಬೇಗ ಬಾ ಪ್ಲೀಸ್ ಅಂತ ಹೇಳಿ ಕಾಲೇಜ್ ಬ್ಯಾಗ್ ಹಾಕಿಕೊಂಡು ಮೇನ್ ಡೋರ್ ಕಡೆಗೆ ಹೆಜ್ಜೆ ಇಟ್ಟಳು. ಶಿಲ್ಪಾ ಅವಳಿಗೆ ಎದುರು ಬರ್ತಾ ಏನೇ ಇನ್ನು ಹೋಗಿಲ್ವಾ ಕಾಲೇಜ್ ಗೆ ಅಂತ ಕೇಳಿದ್ಲು. ಅ ಇವಾಗ ಹೋಗ್ತಾ ಇದ್ದಿವಿ ಅಂತ ಹೇಳಿ ಬೈ ಮಾಡಿ ಅಲ್ಲಿಂದ ಹೊರಟು ಹೋದರು. ಶಿಲ್ಪಾ ನನ್ನ ನೋಡಿ ಬಾ ಮಹಿ ತಿಂಡಿ ಮಾಡಿ ಫ್ಯಾಕ್ಟರಿ ಗೆ ಹೋಗೋಣ ಅಂತ ಹೇಳಿದ್ಲು. ನಾನು ಸರಿ ಅಂತ ಹೇಳಿ ಅವಳ ಹಿಂದೆ ಹೋದೆ. ತಿಂಡಿ ತಿಂದು ಮದನ್ ಶಿಲ್ಪಾ ಒಂದು ಕಾರ್ ಅಲ್ಲಿ ಫ್ಯಾಕ್ಟರಿ ಗೆ ಹೋದ್ರೆ, ನಾನು ನನ್ನ ಕಾರ್ ಅಲ್ಲಿ ಫ್ಯಾಕ್ಟರಿಗೆ ಹೋದೆ. ಕೆಲಸ ಕಲಿಯೋಕೆ ಶುರು ಮಾಡಿದೆ ಹೊಸ ಹೊಸ ವಿಷಯ ಗಳು, ಕ್ವಾಲಿಟಿ ಬಗ್ಗೆ, ಡಿಸೈನ್ ಬಗ್ಗೆ, ಪ್ರಾಡಕ್ಟ್ ಬಗ್ಗೆ, ಯಾವ್ ರೀತಿ ಮಾಡ್ತಾರೆ, ಹೇಗೆ ತಯಾರು ಮಾಡ್ತಾರೆ ಪ್ರೊಸೆಸ್ಸಿಂಗ್ ಬಗ್ಗೆ, ಬಟ್ಟೆಗಳ ಕ್ವಾಲಿಟಿ ಬಗ್ಗೆ, ಕ್ವಾಲಿಟಿ ಅಲ್ಲಿ ಇರೋ ಡಿಫ್ರೆಂಸ್ ಬಗ್ಗೆ, ಪ್ರತಿಯೊಂದು ವಿಷಯ ನಾ ಕೇಳಿ ಕೇಳಿ ತಿಳಿದುಕೊಳ್ತಾ ನೋಟ್ ಮಾಡಿ ಕೊಳ್ತಾ ಇದ್ದೆ. ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ. ಮಧ್ಯಾಹ್ನ ಶಿಲ್ಪಾ ಲಂಚ್ ಗೆ ಕರೆದ್ಲು ಹೋಗಿ ಊಟ ಮಾಡ್ಕೊಂಡು ಮತ್ತೆ ನನ್ನ ಕೆಲಸದ ಬಗ್ಗೆ ಗಮನ ಕೊಟ್ಟೆ. ಸಂಜೆ 7 ಗಂಟೆ ಆಯ್ತು ಮದನ್ ಬರ್ತಾ ಮಹಿ ಬಾ ಹೋಗೋಣ ಮನೆಗೆ ಅಂತ ಹೇಳ್ದ. ಶಿಲ್ಪಾ ಕೂಡ ಮಹಿ ನೀಲಾ ಕಾಲ್ ಮಾಡಿದ್ಲು ಬೇಗ ಬರೋಕೆ ಬಾ ಹೋಗೋಣ ಅಂತ ಹೇಳಿದ್ಲು. ಸರಿ ಅಂತ ಮನೆ ಕಡೆ ಹೊರಟ್ವಿ.
ಮನೆಗೆ ಬರೋ ಅಷ್ಟೋತ್ತಿಗೆ 8 ಗಂಟೆ ಆಗಿತ್ತು. ಶಿಲ್ಪಾ ಮಹಿ ಹೋಗಿ ಫ್ರೆಷ್ ಅಪ್ ಆಗಿ ಬಾ ಹೋಗು ಅಂತ ಹೇಳಿ ಕಳಿಸಿದ್ಲು. ನಾನು ರೂಮ್ ಹೋಗಿ ಫ್ರೆಷ್ ಅಪ್ ಆಗಿ ನೈಟ್ ಡ್ರೆಸ್ ಹಾಕಿಕೊಂಡು ತಾತ ನಾ ಮನೆಗೆ ಹೋದೆ. ಎಲ್ಲರೂ ಹಾಲ್ ಅಲ್ಲಿ ಕುತ್ಕೊಂಡು ಇದ್ರು ನಾನ್ ಹೋಗಿದ್ದೆ ನನ್ನ ನೋಡಿ ಎಲ್ಲರೂ ಎದ್ದು ನನ್ನ ಕಡೆಗೆ ನೋಡಿದ್ರು. ಶಿಲ್ಪಾ ಕೋಪದಿಂದ ನನ್ನ ನೋಡ್ತಾ ನನ್ನ ಹತ್ತಿರ ಬಂದು. ನಿನ್ನ ನನ್ನ ಬೆಸ್ಟ್ ಫ್ರೆಂಡ್ ಅಂತ ಅನ್ಕೊಂಡು ಇದ್ದೆ ಕಣೋ ಅದ್ರೆ ನೀನು ನನಗೆ ಈ ರೀತಿ ಮೋಸ ಮಾಡ್ತಿಯಾ ಅಂತ ಅನ್ಕೊಂಡು ಇರಲಿಲ್ಲ ಅಂತ ಕೋಪದಲ್ಲಿ ಹೇಳಿದ್ಲು. ನಾನು ನೀಲಾ ಕಡೆಗೆ ನೋಡಿದೆ ನೀಲಾ ಸಾರೀ ಅನ್ನೋತರ ಫೇಸ್ ಇಟ್ಟಳು. ಶಿಲ್ಪಾ ಕಡೆಗೆ ನೋಡಿ ಸಾರೀ ಅಂತ ಹೇಳ್ದೆ. ಶಿಲ್ಪಾ ಹೊಟ್ಟೆಗೆ ಒಂದು ಗುದ್ದಿ ಹ್ಯಾಪಿ ಬರ್ತ್ಡೇ ಅಂತ ವಿಶ್ ಮಾಡಿದ್ಲು. ನಾನು ಹೊಟ್ಟೆ ನಾ ಇಟ್ಕೊಂಡು ಬರ್ತ್ಡೇ ವಿಶ್ ಹೀಗೂ ಮಾತಾಡ್ತಾರ ಅಂತ ಕೇಳ್ದೆ. ಮಗನೆ ನಿನ್ ಮಾಡಿದಕ್ಕೆ ಇಷ್ಟಕ್ಕೆ ಬಿಟ್ಟೆ ಅಂತ ಸಂತೋಷ ಪಡು ಅಂತ ಹೇಳಿದ್ಲು. ಮದನ್ ಬಂದು ಏನ್ ಬ್ರದರ್ ಒಂದು ಮಾತು ಹೇಳ್ಬೋದಿತ್ತು ಅಲ್ವಾ ಅಂತ ಹೇಳಿ ವಿಶ್ ಮಾಡಿದ. ಆಮೇಲೆ ಎಲ್ಲರೂ ವಿಶ್ ಮಾಡಿದ್ರು. ನೀಲಾ ಬರ್ತ್ಡೇ ಕೇಕ್ ತಂದಿದ್ಲು, ಕಟ್ ಮಾಡಿದೆ. ಅಮ್ಮನಿಗೆ ಹೇಳಿ ಬಿರಿಯಾನಿ ಮಾಡಿಸಿದ್ಲು ಎಲ್ಲರೂ ಒಟ್ಟಿಗೆ ಕೂತು ಡಿನ್ನರ್ ಮುಗಿಸಿದ್ವಿ. ಎಲ್ಲರೂ ಸ್ವಲ್ಪ ಹೊತ್ತು ಮಾತಾಡಿಕೊಂಡು ಕುತ್ಕೊಂಡ್ವಿ. ಆಮೇಲೆ ಬೆಳಿಗ್ಗೆ ಫ್ಯಾಕ್ಟರಿ ಗೆ ಹೋಗಬೇಕು ಅಂತ ಹೇಳಿ ಹೋಗಿ ರೂಮ್ ಅಲ್ಲಿ ಮಲಕೊಂಡ್ವಿ.
ಮಾರನೇ ದಿನ ಬೆಳಿಗ್ಗೆ ಎದ್ದು ತಿಂಡಿ ತಿಂದು ಫ್ಯಾಕ್ಟರಿ ಗೆ ಹೋದ್ವಿ ಮತ್ತೆ ನಾನು ಕೆಲಸ ಕಲಿಯೋಕೆ ಶುರು ಮಾಡಿದೆ. ಫ್ಯಾಕ್ಟರಿ ಅಲ್ಲಿ ಕೆಲಸ ಮಾಡೋವ್ರು ಒಬ್ಬರಾಗೆ ಪರಿಚಯ ಆಗೋಕೆ ಶುರು ಮಾಡಿದ್ರು. ಎಲ್ಲರ ಹತ್ತಿರ ಚೆನ್ನಾಗಿ ಮಾತಾಡೋಕೆ ಶುರು ಮಾಡಿದೆ. ಅವರು ಕೂಡ ನಾನು ಕೆಲಸ ಕಲಿಯೋದನ್ನ ನೋಡಿ ಖುಷಿ ಪಟ್ಟು ಇನ್ನು ಹೊಸ ಹೊಸ ವಿಷಯಗಳನ್ನ ಹೇಳಿ ಕೊಡೋಕೆ ಶುರು ಮಾಡಿದ್ರು. ದಿನಗಳು ಹೋಗಿದ್ದೆ ಗೊತ್ತಾಗಲಿಲ್ಲ. ಪ್ರತಿದಿನ ಹೊಸ ವಿಷಯ ಕಲಿಯೋದು ರಿಸೆರ್ಚ್ ಮಾಡೋದು ಹೀಗೆ ಎಲ್ಲಾ ವಿಷಯ ನಾ ತಿಳಿದು ಕೊಳ್ತಾ ಇದ್ದೆ. ಅವಾಗವಾಗ ಫ್ಯಾಕ್ಟರಿಗೆ ತಾತ ಬರ್ತಾ ಇದ್ರು. ಅವರ ಜೊತೆಗೆ ಕೂತು ವಿಷಯ ಗಳನ್ನ ತಿಳಿದು ಕೊಳ್ಳೋಕೆ ಶುರು ಮಾಡಿದೆ. ತಾತ ಗೆ ನಾನು ಕಲಿಯೋದನ್ನ ನೋಡಿ ಅವರಿಗೂ ತುಂಬಾ ಖುಷಿಯಾಗಿ ಅವರಿಗೆ ಗೊತ್ತಿರೋ ಪ್ರತಿಯೊಂದು ವಿಷಯ ನಾ ಹೇಳಿ ಕೊಡ್ತಾ ಇದ್ರು, ಅವರ ಅನುಭವಗಳು, ಯಾರ್ ಹತ್ತಿರ ಹೇಗೆ ಮಾತಾಡಬೇಕು ಯಾವ್ ರೀತಿ ಮಾತಾಡಬೇಕು ಹೀಗೆ ಪ್ರತಿಯೊಂದು ವಿಷಯ ನಾ ಹೇಳಿ ಕೊಟ್ರು. ನಟರಾಜ್ ಶ್ರೀಹರಿ ಅವರು ಕೂಡ ವಿಷಯ ಗಳನ್ನ ಹೇಳಿ ಕೊಡೋಕೆ ಶುರು ಮಾಡಿದ್ರು. ಮದನ್ ಶಿಲ್ಪಾ ಮನೆಯವರು ನನ್ನನ್ನ ಅವರ ಮನೆ ಹುಡುಗನ ಹಾಗೇ ಭಾವಿಸೋಕೆ ಶುರು ಮಾಡಿದ್ರು. ಕೆಲವೊಂದು ದಿನ ಮದನ್ ಶಿಲ್ಪಾ ನಾ ಹೋಗೋಕೆ ಹೇಳಿ ನಾನು ಲೇಟ್ ಆಗಿ ಮನೆಗೆ ಹೋಗ್ತಾ ಇದ್ದೆ. ನಾನು ಲೇಟ್ ಆಗಿ ಮನೆಗೆ ಹೋದಾಗ ಯಾರಾದ್ರೂ ಒಬ್ಬರು ಮನೆಯಲ್ಲಿ ಎದ್ದೆ ಇರ್ತಾ ಇದ್ರು. ನಾನು ಊಟ ಮಾಡಿ ಮಲಗೋಕೆ ಹೋಗೋ ತನಕ ಇರೋವ್ರು.. ಹೀಗೆ ತಿಂಗಳು ಕಳೆದು ಹೋಯ್ತು. ಮೆಂಟಲಿ ಪ್ರಿಪೇರ್ ಅದೇ. ಈಗ ಹೊರಗಡೆ ಹೋಗಿ ಹೊಸ ಆರ್ಡರ್ಸ್ ನಾ ಇನ್ವೆಸ್ಟರ್ಸ್ ನಾ ಬಯರ್ಸ್ ನಾ ಕರ್ಕೊಂಡು ಬರಬೇಕು. ನಮ್ ಹತ್ತಿರ ಇನ್ವೆಸ್ಟ್ಮೆಂಟ್ ಇದ್ರೆ ನಾವೇ ಹೊಸ ಬ್ರಾಂಡ್ ನಾ ಸ್ಟಾರ್ಟ್ ಮಾಡಿ ಹೊಸ ಹೊಸ ಡಿಸೈನ್ಸ್ ನಾ ಮಾರ್ಕೆಟ್ ಗೆ ತಂದು ಕಡಿಮೆ ಪ್ರೈಸ್ ಗೆ ಬೆಸ್ಟ್ ಕ್ವಾಲಿಟಿ ಇರೋ ಬಟ್ಟೆಗಳನ್ನ ಕೊಡಬಹುದು ಅಂತ ಅನ್ಕೊಂಡು. ಲೋಕಲ್ ಯಿಂದ ಇಡಿದು ನ್ಯಾಷನಲ್ ಲೆವೆಲ್ ವರೆಗೂ ಇರೋ ಪ್ರತಿಯೊಂದು ಬ್ಯಾಂಡ್ ನಾ ಲಿಸ್ಟ್ ಮಾಡಿದೆ. ಅದರಲ್ಲಿ ನಮ್ ಕಡೆಯಿಂದ ತೆಗೆದುಕೊಂಡು ವ್ಯಾಪಾರ ಮಾಡೋ ಕಂಪನಿ ಗಳನ್ನ ಬಿಟ್ಟು ಬೇರೆ ಕಂಪನಿಗಳ ಬಗ್ಗೆ ಚೆನ್ನಾಗಿ ಸ್ಟಡಿ ಮಾಡಿದೆ. ಅವರ ಡಿಮ್ಯಾಂಡ್ಸ್ ಏನು ಯಾವ್ ತರ ಕ್ವಾಲಿಟಿ ನಾ ಇಷ್ಟ ಪಡ್ತಾರೆ ಅಂತ.. ಸೋ ಎಲ್ಲಾ ತಿಳ್ಕೊಂಡು ಹಂಟ್ ಮಾಡೋಕೆ ಶುರು ಮಾಡಿದೆ.
ಕಾರ್ ಗೆ ಡಿಸೇಲ್ ಹಾಕಿಸಿಕೊಂಡು ಪ್ರತಿಯೊಂದು ಬ್ರಾಂಡ್ ಕಂಪನಿ ನಾ ಸುತ್ತೋಕೆ ಶುರು ಮಾಡಿದೆ. ಕೆಲವೊಂದು ಬ್ರಾಂಡ್ ಕಂಪನಿ ಗಳಲ್ಲಿ ಡೈರೆಕ್ಟ್ ರಿಜೆಕ್ಟ್ ಮಾಡಿದ್ರೆ ಕೆಲವೊಂದು ಕಂಪನಿ ಗಳು ಹೇಳ್ತಿವಿ ಅಂತ ಹೇಳಿದ್ರು. ದೊಡ್ಡ ದೊಡ್ಡ ಬ್ರಾಂಡ್ ಕಂಪನಿ ಗಳಿಗೆ ಮಾತಿನಲ್ಲಿ ಹೇಳಿದ್ರೆ ವರ್ಕ್ ಆಗೋದಿಲ್ಲ ಸೋ ಹೇಗೂ ಸಮುದ್ರಕ್ಕೆ ಇಳಿದು ಈಜಬೇಕು ಅಂತ ನಿರ್ಧಾರ ಮಾಡಿದ್ದೀನಿ. ಸೋಲು ಒಪ್ಕೋಬಾರ್ದು ಅಂತ ಅನ್ಕೊಂಡು. ಫ್ಯಾಷನ್ ನಾ ಮೊದಲು ಇಷ್ಟ ಪಡೋದು ಕಾಲೇಜ್ ಸ್ಟೂಡೆಂಟ್ಸ್ ಸೋ ಮೊದಲು ಅವರಿಗೆ ನಮ್ ಬಗ್ಗೆ ಗೊತ್ತಾಗಬೇಕು ಅಂತ. ನೀಲಾ ರೋಹಿಣಿ ಗೆ ಮಾತಾಡಬೇಕು ಅಂತ ಕಾಲ್ ಮಾಡಿದೆ ಅವರು ಕಾಲೇಜ್ ಅಲ್ಲಿ ಇದ್ದೀನಿ ಅಂತ ಹೇಳಿದ್ರು. ಸೋ ನಾನ್ ಅವರ ಕಾಲೇಜ್ ಗೆ ಹೋದೆ. ನೀಲಾ ರೋಹಿಣಿ ಇಬ್ಬರು ಬಂದರು ನೀಲಾ ಹೇಳು ಮಹಿ ಅಂತ ಕೇಳಿದ್ಲು. ನಾನು ನನ್ನ ಮೈಂಡ್ ಅಲ್ಲಿ ಇದ್ದಾ ಐಡಿಯಾ ಮತ್ತೆ ಅವರು ಮಾಡಬೇಕಾದ ಕೆಲಸದ ಬಗ್ಗೆ ಹೇಳ್ದೆ. ಇಬ್ಬರಿಗೂ ಇಷ್ಟ ಆಯ್ತು. ಅವರು ಖುಷಿಯಾಗಿ ಒಪ್ಪಿಕೊಂಡರು. ರೋಹಿಣಿ ಇವಾಗ ನಿಮ್ಮನ್ನ ಅಣ್ಣ ಅಂತ ಕರಿಬೇಕಾ ಇಲ್ಲಾ ಬಾಸ್ ಅಂತ ಕರಿಬೇಕಾ ಅಂತ ಕೇಳಿದ್ಲು. ನಾನು ಅಣ್ಣ ಅಂತಾನೆ ಕರಿ ಅಂತ ಹೇಳ್ದೆ.
ರೋಹಿಣಿ ನೀಲಾ ಹೊಸ ಹೊಸ ಡಿಸೈನ್ ನಾ ಮಾಡೋಕೆ ಶುರು ಮಾಡಿದ್ರು. ಅವರ ಫ್ರೆಂಡ್ಸ್ ಹತ್ತಿರ ಮಾತಾಡ್ತಾ ಅವರಿಗೆ ಇಷ್ಟ ಆಗೋ ಪ್ರತಿ ವಿಷಯ ನಾ ತಿಳ್ಕೊಂಡು ಅರ್ಥ ಮಾಡಿಕೊಂಡು ಒಂದೊಂದು ಡಿಸೈನ್ ಮಾಡೋಕೆ ಶುರು ಮಾಡಿದ್ರು. ಮನೆಯವರಿಗೆ ನನ್ನ ಆಲೋಚನೆ ಹೇಳ್ದೆ. ತಾತ ಒಂದೇ ಮಾತು ಹೇಳಿದ್ರು. ನುಗ್ಗೋ ಮೊಮ್ಮಗನೇ ನಾನ್ ಇದ್ದೀನಿ ಅಂತ ಧೈರ್ಯ ಕೊಟ್ರು. ಅಜ್ಜಿ ಕೆಲವೊಂದು ಡಾಕ್ಯುಮೆಂಟ್ಸ್ ನಾ ತಂದು ನನ್ನ ಕೈಗೆ ಕೊಟ್ಟು. ಈ ಮನೆಗೆ ಮದನ್ ಬೇರೆ ಅಲ್ಲ ನಿನ್ ಬೇರೆ ಅಲ್ಲ ತಗೋ ಇದನ್ನ ತೆಗೆದುಕೊಂಡು ನಿನ್ ಏನ್ ಮಾಡಬೇಕು ಅಂತ ಇದ್ದಿಯೊ ಮಾಡು. ಯಾವುದೇ ಕಾರಣಕ್ಕೂ ಮುಂದೆ ಇಟ್ಟ ಹೆಜ್ಜೆ ನಾ ಹಿಂದೆ ಇಡಬೇಡ ಅಂತ ಹೇಳಿ ಡಾಕ್ಯುಮೆಂಟ್ಸ್ ನಾ ನನ್ನ ಕೈಗೆ ಕೊಟ್ಟರು. ಯಾರು ಕೂಡ ಬೇಡ ಅನ್ನೋ ಒಂದು ಮಾತು ಹೇಳಿಲ್ಲ ಅವರು ನನ್ನ ಮೇಲೆ ಇಟ್ಟಿರೋ ನಂಬಿಕೆಗೆ ತುಂಬಾ ಖುಷಿ ಆಯ್ತು.
****************************************
P. S.