ಶಿಲ್ಪಾ ಮದನ್ ಗೆ ಹೇಳು ಮಹಿ ನಾ ಊಟಕ್ಕೆ ಕರ್ಕೊಂಡು ಬರೋಕೆ ಅಂತ ಹೇಳಿದ್ರು ಅಜ್ಜಿ.. ಅಜ್ಜಿ ಮಾತಿಗೆ ಹಾಲ್ ಅಲ್ಲಿ ಕೂತಿದ್ದವಳು ಎದ್ದು ಹೊರಗೆ ಬಂದಳು , ಮದನ್ ತಾತ ಮಾವ ಚಿಕ್ಕಪ್ಪ ಜೊತೆಗೆ ಮಾತಾಡ್ತಾ ಇರೋದನ್ನ ನೋಡಿ. ಮದನ್ ಹೋಗಿ ಮಹಿ ನಾ ಊಟಕ್ಕೆ ಕರ್ಕೊಂಡು ಬಾ ಹೋಗು ಅಂತ ಹೇಳಿದ್ಲು. ಮದನ್ ಶಿಲ್ಪಾ ಕಡೆಗೆ ನೋಡ್ತಾ ಅವನು ರೂಮ್ ಅಲ್ಲಿ ಇಲ್ಲಾ ಅಂತ ಹೇಳಿದ. ಶಿಲ್ಪಾ ಏನು ರೂಮ್ ಅಲ್ಲಿ ಇಲ್ವಾ ಎಲ್ಲೋದ ಮತ್ತೆ ಅಂತ ಕೇಳಿದ್ಲು. ಫ್ರೆಂಡ್ ನಾ ಫ್ರೆಂಡ್ ಯಾರೋ ಬಂದು ಕರೆದ ಅಂತ ಅವನ ಜೊತೆಗೆ ಹೋದ ಕೇಳಿದಕ್ಕೆ ಬಂದು ಹೇಳ್ತಿನಿ ಅಂತ ಹೇಳಿ ಹೋದ ಅಂತ ಹೇಳ್ದ. ಏನು ಫ್ರೆಂಡ್ ನಾ ಫ್ರೆಂಡ್ ಅ ಲೋ ಅವನಿಗೆ ಬೆಂಗಳೂರಲ್ಲಿ ನೇ ಸರಿಯಾಗಿ ಫ್ರೆಂಡ್ಸ್ ಇಲ್ಲಾ ಇನ್ನ ಮೈಸೂರ್ ಅಲ್ಲಿ ಇರ್ತಾರ ಅಂತ ಕೇಳಿದ್ಲು. ಶ್ರೀಹರಿ ಮಾತಾಡ್ತಾ ಹುಡುಗರ ಬಗ್ಗೆ ಅವರ ಫ್ರೆಂಡ್ಶಿಪ್ ಬಗ್ಗೆ ನಿನಗೆ ಇನ್ನು ಸರಿಯಾಗಿ ಗೊತ್ತಿಲ್ಲ. ಅವರು ಎಲ್ಲೇ ಹೋದ್ರು ಯಾರ್ ಕಡೆ ಯಿಂದ ಆದ್ರೂ ಫ್ರೆಂಡ್ಸ್ ನಾ ಸಂಪಾದನೆ ಮಾಡ್ಕೋತಾರೆ. ಬರ್ತೀನಿ ಅಂತ ಹೇಳಿ ಹೋದ ಅಲ್ವಾ ಬರ್ತಾನೇ ಬಿಡು. ಅಂತ ಹೇಳಿದ್ರು. ಶಿಲ್ಪಾ ಏನ್ ಫ್ರೆಂಡ್ಸ್ ಏನೋ ನೀವು ಬನ್ನಿ ಊಟಕ್ಕೆ ಅಂತ ಹೇಳಿದ್ಲು. ತಾತ ಮಹಿ ಬರ್ಲಿ ಇರು ಎಲ್ಲರೂ ಒಟ್ಟಿಗೆ ಊಟ ಮಾಡೋಣ ಅಂತ ಹೇಳಿದ್ರು.
ನಾನು ಟೆಂಪಲ್ ಗೆ ಹೋಗಿ ಪೂಜೆ ಮಾಡಿಸಿಕೊಂಡು, ಕಾರ್ ಅಲ್ಲಿ ಬರ್ತಾ ಶ್ವೇತಾ ಗೆ ವಿಡಿಯೋ ಕಾಲ್ ಮಾಡಿದೆ. ಆಮೇಲೆ ಶ್ವೇತಾ ಮತ್ತೊಮ್ಮೆ ವಿಶ್ ಮಾಡಿದ್ಲು ಅಮ್ಮ ಅಪ್ಪ ಹರಿಣಿ ಅಕ್ಕ ಕೂಡ ವಿಶ್ ಮಾಡಿದ್ರು ಅವರ ಜೊತೆಗೆ ಮಾತಾಡ್ತಾ ಡ್ರೈವ್ ಮಾಡ್ತಾ ಬರೋವಾಗ, ಶಿಲ್ಪಾ ಕಾಲ್ ಬಂತು, ಅವರ ಜೊತೆಗೆ ಮತ್ತೆ ಮಾತಾಡ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿ ಶಿಲ್ಪಾ ಕಾಲ್ ಪಿಕ್ ಮಾಡಿದೆ. ಶಿಲ್ಪಾ ಮಾತಾಡ್ತಾ ಲೋ ಮಹಿ ಎಲ್ಲಿದ್ದೀಯ ಅಂತ ಕೇಳಿದ್ಲು. ನಾನಾ ಇಲ್ಲೇ ಇದ್ದೀನಿ ಒಂದು 15 ನಿಮಿಷ ಬರ್ತೀನಿ ಅಂತ ಹೇಳ್ದೆ. ಸರಿ ಬೇಗ ಬಾ ಎಲ್ಲರೂ ನಿನಗೋಸ್ಕರ ಕಾಯ್ತಾ ಇದ್ದಾರೆ ಊಟ ಮಾಡೋಕೆ ಅಂತ ಹೇಳಿದ್ಲು. ಸರಿ ಬರ್ತೀನಿ ಅಂತ ಹೇಳ್ದೆ. ಅಲ್ವೋ ಮೈಸೂರ್ ಗೆ ಬಂದು ಒಂದು ದಿನ ಆಗಿಲ್ಲ ಆಗ್ಲೇ ನಿನಗೆ ಫ್ರೆಂಡ್ಸ್ ಸಿಕ್ಕಿದ್ರಾ, ಅವರ ಜೊತೆಗೆ ಹೋಗೋವನು ಒಂದು ಮಾತು ಹೇಳಿ ಹೋಗಬೇಕು ಅಲ್ವಾ ಅಂತ ಕೇಳಿದ್ಲು. ಅದ ಬಂದು ಹೇಳ್ತಿನಿ ಅಂತ ಹೇಳಿ ಕಾಲ್ ಕಟ್ ಮಾಡಿದೆ.
ಶಿಲ್ಪಾ ಮಾತಾಡಿ ಕಾಲ್ ಕಟ್ ಮಾಡಿದ ಮೇಲೆ ಮದನ್ ಎಲ್ಲಿ ಇದ್ದಾನೆ ಅಂತ ಕೇಳಿದ. 15 ನಿಮಿಷ ಬರ್ತೀನಿ ಅಂತ ಹೇಳಿದ ಅಂತ ಹೇಳಿದ್ಲು. ಸರಿ ಬಾ ಕುತ್ಕೋ ನಿನ್ನ ಹತ್ತಿರ ಮಾತಾಡೋದು ಇದೆ ಅಂತ ಹೇಳಿದ. ಶಿಲ್ಪಾ ಹೋಗಿ ತಾತ ಚಿಕ್ಕಪ್ಪ ಮಾವ ಮದನ್ ಜೊತೆಗೆ ಕೂತ್ಕೊಂಡು ಅ ಹೇಳು ಏನ್ ಮಾತಾಡಬೇಕು ಅಂತ ಕೇಳಿದ್ಲು. ಮದನ್ ಏನು ಇಲ್ವೆ ನೋಡು ಮಹಿ ಏನ್ ಕೆಲಸ ಮಾಡ್ತಾ ಇದ್ದಾ ಅಂತ ನಿನಗೆ ಚೆನ್ನಾಗಿ ಗೊತ್ತು. ನಿನಗೆ ಅದ್ರೆ ನಮ್ ಫ್ಯಾಕ್ಟರಿ ಬಗ್ಗೆ ಕೆಲಸದ ಬಗ್ಗೆ ಚೆನ್ನಾಗಿ ಗೊತ್ತು, ನೀನು ಕೂಡ ಈ ಫ್ಯಾಕ್ಟರಿ ಓನರ್ ಸೋ ನಿನ್ ಏನ್ ಕೆಲಸ ಬೇಕಾದ್ರು ಮಾಡ್ಕೊಂಡು ಇರ್ತೀಯ. ಬಟ್ ಮಹಿ ಬಗ್ಗೆ ನಮಗೆ ಏನ್ ಅಂದ್ರೆ ಏನು ಐಡಿಯಾ ಕೂಡ ಇಲ್ಲಾ. ಅವನಿಗೆ ಏನ್ ಕೆಲಸ ಕೊಟ್ರೆ ಅವನು ಚೆನ್ನಾಗಿ ಮಾಡ್ತಾನೆ ಅಂತ ಹೇಳಿದ್ರೆ ಅ ಕೆಲಸ ಕೊಡಬಹುದು ಅಂತ ಹೇಳಿದ. ಶಿಲ್ಪಾ, ಫ್ಯಾಕ್ಟರಿ ವ್ಯವಹಾರ ದ ಬಗ್ಗೆ ಅಪ್ಪ ನನ್ನ ಹತ್ತಿರ ಮಾತಾಡೋವಾಗ ನಮಗೆ ಇರೋ ಸಪ್ಲೈ ಚೈನ್ ಅಲ್ಲೇ ನಾವು ಬಿಸಿನೆಸ್ ನಾ ರನ್ ಮಾಡ್ತಾ ಇದ್ದಿವಿ ಬಿಟ್ರೆ ಹೊಸದಾಗಿ ಬೇರೆ ಕಡೆಯಿಂದ ನಮಗೆ ಆರ್ಡರ್ ಬರೋದು ಆಗಲಿ ಇಲ್ಲಾ ನಾವೇ ಹೋಗಿ ಬೇರೆ ಕಡೆಯಿಂದ ಆರ್ಡರ್ ನಾ ತಗೋಬರೋದು ಆಗಲಿ ಮಾಡ್ತಾ ಇಲ್ಲಾ. ಯಾಕಂದ್ರೆ ನಮಗೆ ಸದ್ಯಕ್ಕೆ ಹಳೆ ವೆಂಡರ್ಸ್ ಕಡೆಯಿಂದ ಬರ್ತಾ ಇರೋ ಆರ್ಡರ್ಸ್ ನಾ ನಾವು ಮೊದಲು ನೋಡಬೇಕು ಅಂತ ಅನ್ಕೊಂಡು ಬೇರೆ ಕಡೆಗೆ ಹೋಗ್ತಾ ಇಲ್ಲಾ. ಸೋ ನಮ್ ಬಿಸಿನೆಸ್ ಇನ್ನು ಬೆಳಿಬೇಕು ಅಂದ್ರೆ ಹೊರಗಡೆ ಯಿಂದ ಆರ್ಡರ್ಸ್ ಬರಬೇಕು ಪ್ರೊಡಕ್ಷನ್ ನಾ ಜಾಸ್ತಿ ಮಾಡಬೇಕು. ನಾನು ಮೆಂಟಲಿ ಫಿಕ್ಸ್ ಆಗೋಗಿದ್ದೀನಿ ಎಲ್ಲೋ ಯಾವನೋ ಹತ್ತಿರ ಹೋಗಿ ಕೆಲಸ ಮಾಡೋಕಿಂತ ನಮ್ ಫ್ಯಾಕ್ಟರಿ ಅಲ್ಲೇ ಕೆಲಸ ಮಾಡೋಣ ಇನ್ನು ಎಷ್ಟು ದಿನ ಅಂತ ಎಲ್ಲಾನು ಚಿಕ್ಕಪ್ಪ ಮಾವ ನೋಡ್ಕೋತಾರೆ ನಾನು ಅ ಜವಾಬ್ದಾರಿ ನಾ ತಗೊಂಡು ಅವರಿಗೆ ರೆಸ್ಟ್ ಕೊಡೋಣ ಅಂತ ನಿರ್ಧಾರ ಮಾಡಿದ್ದೀನಿ. ನಮಗೆ ಇವಾಗ ಮೇನ್ ಬೇಕಾಗಿರೋದು ಹೊಸ ಹೊಸ ಆರ್ಡರ್ಸ್, ನಮ್ ಹತ್ತಿರ ಆರ್ಡರ್ಸ್ ಇದ್ರೆ ನಾವು ಯಾವುದೇ ಭಯ ಇಲ್ಲದೆ ಪ್ರೊಡಕ್ಷನ್ ನಾ ಜಾಸ್ತಿ ಮಾಡಬಹುದು, ಇನ್ವೆಸ್ಟ್ಮೆಂಟ್ ಮಾಡೋಕೆ ಹೊಸ ಹೊಸ ಇನ್ವೆಸ್ಟರ್ ಬರ್ತಾರೆ. ಮಹಿ ಗೆ ಸ್ಕಿಲ್ ಇಲ್ದೆ ಟ್ಯಾಲೆಂಟ್ ಇದೆ ಐಡಿಯಾ ಇದೆ ಇನ್ವೆಸ್ಟರ್ ನಾ ಆರ್ಡರ್ಸ್ ನಾ ಹುಡುಕಿ ಕರ್ಕೊಂಡು ಬರೋ ತಾಕತ್ತು ಅವನಿಗೆ ಇದೆ. ಏನಪ್ಪಾ ಇವಳು ಮದನ್ ಗೆ ಈ ಟ್ಯಾಲೆಂಟ್ ಇಲ್ವಾ ಅಂತ ಅನ್ಕೊಂಡು ಇದ್ದಾಳ ಅಂತ ನೀವು ನನ್ನ ಬೈಕೋಬೋದು, ತಪ್ಪಿಲ್ಲ. ಮದನ್ ಅಲ್ಲೂ ಈ ಟ್ಯಾಲೆಂಟ್ ಇದೆ ಬಟ್ ಅವನಿಗೆ ಈಗ ಫ್ಯಾಕ್ಟರಿ ಬಿಟ್ಟು ಬೇರೆ ಕಡೆ ಹೋಗೋಕೆ ಆಗಲ್ಲಾ, ಅಷ್ಟು ಕೆಲಸ ಇದೆ ಅವನಿಗೆ ಒಂದೊಂದು ದಿನ ಮನೆಗೆ ಲೇಟ್ ಆಗಿ ಬರ್ತಾನೇ. ಈಗ ಅವನಿಗೆ ಒಬ್ಬರು ಸಪೋರ್ಟ್ ಬೇಕು ಇನ್ಮೇಲೆ ಅವನ ಜೊತೆಗೆ ನಾನ್ ಇರ್ತೀನಿ ಫ್ಯಾಕ್ಟರಿ ಜವಾಬ್ದಾರಿ ನಾ ನಾವಿಬ್ರು ತಗೋತೀವಿ. ಮಹಿ ಮೇಲೆ ನನಗೆ ನಂಬಿಕೆ ಇದೆ , ಈ ಕೆಲಸ ಅವನಿಗೆ ಕೊಟ್ರೆ ಅವನು ಖಂಡಿತ ಮಾಡೇ ಮಾಡ್ತಾನೆ ಅಂತ ಹೇಳಿದ್ಲು...
ತಾತ ಅಂತು ನಿರ್ಧಾರ ಮಾಡಿ ಮದನ್ ಜೊತೆಗೆ ನಿಲ್ಲಬೇಕು ಅಂತ ಬಂದಿದ್ದೀಯಾ ತುಂಬಾ ಸಂತೋಷ ಆಯ್ತು. ನಿನ್ ಹೇಳಿದ್ದು ನಿಜ ಮದನ್ ಫ್ಯಾಕ್ಟರಿ ಅಂತ ಎಲ್ಲೂ ಹೋಗೋಕೆ ಆಗ್ತಾ ಇಲ್ಲಾ ಹೊಸ ಆರ್ಡರ್ಸ್ ಕೂಡ ಬರ್ತಾ ಇಲ್ಲಾ. ನಮ್ಮನ್ನ ನಂಬಿದವರ ಕೈ ನಾ ನಾವು ಬಿಡಬಾರ್ದು ಹಾಗೇ ನಮ್ಮಿಂದ ಇನ್ನು ನಾಲಕ್ಕು ಜನಕ್ಕೆ ಒಳ್ಳೇದು ಆಗಬೇಕು ಅಂದ್ರೆ ನಮಗೆ ಇವಾಗ ಮುಂದೆ ಹೋಗಿಕೆ ಒಬ್ಬ ವ್ಯಕ್ತಿ ಬೇಕು. ಮಹಿ ಮೇಲೆ ನಿನ್ ಇಟ್ಟಿರೋ ನಂಬಿಕೆ ನಾ ನಾವು ಗೌರವಿಸ್ತೀವಿ ನಿನ್ನ ನಿರ್ಧಾರಕ್ಕೆ ನಾವು ಒಪ್ಕೋತೀವಿ ಏನಂತೀಯಾ ಮದನ್, ನಟರಾಜ್, ಶ್ರೀಹರಿ. ಅಂತ ತಾತ ಕೇಳಿದ್ರು. ಮದನ್ ಮಾತಾಡ್ತಾ ಶಿಲ್ಪಾ ಹೇಳಿದ್ದು ಸರಿಯಾಗಿ ಇದೆ ತಾತ, ಮಹಿ ಗೆ ಅ ಟ್ಯಾಲೆಂಟ್ ಇದೆ ಸೋ ನನ್ನ ಓಟ್ ಶಿಲ್ಪಾ ಗೆ ಅಂತ ಹೇಳ್ತಾನೆ. ಶ್ರೀಹರಿ ಇಲ್ಲಿ ವಿರೋಧ ಪಕ್ಷದವರು ಯಾರು ಇಲ್ಲಾ ಆಂತ ಹೇಳ್ತಾರೆ.
ಲೀಲಾ ಹೊರಗೆ ಬರ್ತಾ ಲೇ ಶಿಲ್ಪಾ ಎಲ್ಲರನ್ನು ಊಟಕ್ಕೆ ಕರ್ಕೊಂಡು ಬಾ ಅಂತ ಅಜ್ಜಿ ಕಳಿಸಿದಿದ್ರೆ ನಿನ್ ಏನೇ ಅವರ ಜೊತೆ ಕೂತ್ಕೊಂಡು ಮಾತಾಡ್ತಾ ಇದ್ದಿಯಾ ಅಂತ ಬೈಕೊಂಡು ಅವರ ಹತ್ತಿರ ಹೋಗ್ತಾ ಮನೆ ಕಡೆ ಕಾರ್ ಬರೋದನ್ನ ನೋಡಿ ತಾತ ಯಾರೋ ಹೊಸ ಕಾರ್ ಅಲ್ಲಿ ಮನೆ ಕಡೆ ಬರ್ತಾ ಇದ್ದಾರೆ ನೋಡಿ ಅಂತ ಹೇಳಿದ್ಲು. ತಾತ ಹೊಸ ಕಾರ್ ನಲ್ಲ, ಅಂತ ಕೂತಿದ್ದವ್ರು ಎದ್ದು ಕಾರ್ ಕಡೆ ನೋಡಿದ್ರು. ತಾತ ಎದ್ದು ನಿಂತಿದ್ದನ್ನ ನೋಡಿ ಎಲ್ಲರೂ ಎದ್ದು ನಿಂತು ಕಾರ್ ಕಡೆ ನೋಡಿದ್ರು, ಕಾರ್ ನಿಲ್ಲಿಸಿ ಡೋರ್ ಓಪನ್ ಮಾಡಿಕೊಂಡು ನಾನು ಇಳಿದು ಬರೋದನ್ನ ನೋಡಿ ಎಲ್ಲರೂ ಶಾಕ್ ಆದ್ರೂ. ನೀಲಾ ಮಹಿ ನಾ ಅಂತ ಹೇಳಿದ್ಲು. ಎಲ್ಲರೂ ನನ್ನ ಹತ್ತಿರ ಬರೋಕೆ ಶುರು ಮಾಡಿದ್ರು. ಶಿಲ್ಪಾ ನನ್ನ ನೋಡಿ ಲೋ ಏನೋ ಇದು ಕಾರ್ ಯಾವಾಗ ತಗೊಂಡೆ, ಅಂತ ಕೇಳಿದ್ಲು. ನಾನು ತಗೊಂಡಿದ್ದು ಅಲ್ಲ ಗಿಫ್ಟ್ ಆಗಿ ಬಂದಿದ್ದು ಅಂತ ಹೇಳ್ದೆ. ಥೋರ್ ಕಾರ್ ನಾ ಗಿಫ್ಟ್ ಆಗಿ ಕೊಡೊ ಅಷ್ಟು ಸಾಹುಕಾರ್ ಫ್ರೆಂಡ್ ಯಾರೋ ಅಂತ ಕೇಳಿದ್ಲು. ಹೇಳ್ತಿನಿ ಮೊದಲು ಸ್ವೀಟ್ ತಗೋ ಅಂತ ಸ್ವೀಟ್ ಬಾಕ್ಸ್ ಓಪನ್ ಮಾಡಿ ಅವಳ ಮುಂದೆ ಇಟ್ಟೆ. ಶಿಲ್ಪಾ ಸ್ವೀಟ್ ತಗೊಂಡು ಅ ಹೇಳು ಅಂತ ಕೇಳಿದ್ಲು. ಹೇಳ್ತಿನಿ ಯಾಕ್ ಅರ್ಜೆಂಟ್ ಅಂತ ಹೇಳಿ ಎಲ್ಲರಿಗೂ ಸ್ವೀಟ್ ಕೊಟ್ಟು . ಮನೆ ಒಳಗೆ ಹೋದೆ. ಅಜ್ಜಿ ಶಿಲ್ಪಾ ಅವರ ಅಮ್ಮ ಅತ್ತೆ ಮದನ್ ಅವರ ತಂಗಿ ಕೂತಿದ್ರು. ಅವರಿಗೆ ಸ್ವೀಟ್ ಕೊಡೋಕೆ ಹೋದೆ, ಅಜ್ಜಿ ಸ್ವೀಟ್ ತಗೋಳ್ತಾ ಏನಪ್ಪ ವಿಶೇಷ ಅಂತ ಕೇಳಿದ್ರು. ಶಿಲ್ಪಾ ಮಹಿ ಗೆ ಕಾರ್ ಗಿಫ್ಟ್ ಆಗಿ ಕೊಟ್ಟಿದ್ದಾರೆ ಅಂತೇ ಅದಕ್ಕೆ, ಅಜ್ಜಿ ಹೌದ ಸಂತೋಷ ಕಣಪ್ಪ ಅಂತ ಹೇಳಿದ್ರು. ಶಿಲ್ಪಾ ಇವಾಗ ಹೇಳಪ್ಪ ಮಹಿ ಅ ಕಾರ್ ನಾ ಗಿಫ್ಟ್ ಆಗಿ ಕೊಟ್ಟಿದ್ದು ಯಾರು ಅಂತ ಕೇಳಿದ್ಲು. ನಾನು ಫ್ರೆಂಡ್ ಗಿಫ್ಟ್ ಆಗಿ ಕೊಟ್ಟ, ಅವನಿಗೆ ಬೇಕು ಅಂತ ಈ ಕಾರ್ ನಾ ಬುಕ್ ಮಾಡಿದ ಬಟ್ ಅವರ ಅಪ್ಪ ಅವನಿಗೆ ಹೇಳದೇನೆ ಇದೆ ತರದ ಇನ್ನೊಂದು ಕಾರ್ ನಾ ಗಿಫ್ಟ್ ಆಗಿ ಕೊಟ್ರು , ಸೋ ಅದಕ್ಕೆ ಅವನು ಹೇಗಿದ್ರು emi ಅಲ್ವಾ ಕಾರ್ ನೀನೇ ತಗೋ ತಿಂಗಳು ತಿಂಗಳು emi ನಾ ಕಟ್ಕೋ ಅಂತ ಹೇಳ್ದ. ನಾನ್ ಕೂಡ ಸರೆ ಅಂತ ಹೇಳಿ ತಗೊಂಡೆ ಅಂತ ಹೇಳ್ದೆ. ಶಿಲ್ಪಾ ಹೌದ. ಸರಿ ಬನ್ನಿ ಊಟ ಮಾಡೋಣ ಅಂತ ಹೇಳಿದ್ಲು ಎಲ್ಲರೂ ಹೋಗಿ ಊಟಕ್ಕೆ ಕುತ್ಕೊಂಡ್ವಿ. ಊಟ ಮಾಡ್ತಾ ಇರೋವಾಗ ಶಿಲ್ಪಾ ಕೆಲಸದ ಬಗ್ಗೆ ಹೇಳಿದ್ಲು. ನಾನು ಶಿಲ್ಪಾ ಕಡೆ ನೋಡ್ತಾ ಇರೋದನ್ನ ನೋಡಿ. ಮಹಿ ನನಗೆ ಅರ್ಥ ಆಗುತ್ತೆ ನೀನೇನು ಟೆನ್ಶನ್ ಆಗಬೇಡ ಮದನ್ ಇದ್ದಾನೆ ಚಿಕ್ಕಪ್ಪ ಮಾವ ತಾತ ಎಲ್ಲರೂ ಇದ್ದಿವಿ ಪ್ರತಿಯೊಂದು ಹೇಳಿ ಕೊಡ್ತಾರೆ. ಗೊತ್ತಿರೋ ಕೆಲಸ ಮಾಡೋಕಿಂತ ಗೊತ್ತಿಲ್ದೆ ಇರೋ ಕೆಲಸಾನ ಕಲಿತು ಮಾಡಿದ್ರೆ ತುಂಬಾ ಇಂಟ್ರೆಸ್ಟಿಂಗ್ ಆಗಿ ಇರುತ್ತೆ ನಮಗೂ ಹೊಸ ಕೆಲಸ ಕಲಿತ ಹಾಗೇ ಇರುತ್ತೆ ಏನ್ ಅಂತೀಯಾ ಅಂತ ಹೇಳಿದ್ಲು. ನೀವೆಲ್ಲಾ ನನ್ನ ಮೇಲೆ ಇಷ್ಟು ನಂಬಿಕೆ ಇಟ್ಟಿರೋವಾಗ ಐ ವಿಲ್ ಡೊ ಮೈ ಬೆಸ್ಟ್ ಅಂತ ಹೇಳ್ದೆ. ಎಲ್ಲರೂ ಹೀಗೆ ಸ್ವಲ್ಪ ಹೊತ್ತು ಮಾತಾಡ್ಕೊಂಡು ಊಟ ಮಾಡಿದ್ವಿ.
ನಂತರ ನಾನು ಮದನ್ ಶಿಲ್ಪಾ ರೋಹಿಣಿ ನೀಲಾ, ಮದನ್ ಅವರ ಅಪ್ಪ ಮಾವ ಎಲ್ಲರೂ ಫ್ಯಾಕ್ಟರಿ ಗೆ ಹೊದ್ವಿ. ಫ್ಯಾಕ್ಟರಿ ತುಂಬಾ ದೊಡ್ಡದಾಗಿ ಇತ್ತು. ಮದನ್ ಅಲ್ಲಿ ನನಗೆ ಮುಖ್ಯವಾದ ವ್ಯಕ್ತಿ ಗಳನ್ನ ಮಾಡೋ ಕೆಲಸವನ್ನ, ಪ್ರತಿಯೊಂದು ವಿಷಯ ನಾ ವಿವರವಾಗಿ ಹೇಳೋಕೆ ಶುರು ಮಾಡಿದ, ನಾನು ಕೂಡ ಅಷ್ಟೇ ಶ್ರದ್ದೆ ಯಿಂದ ಹೇಳೋದನ್ನೆಲ್ಲ ಕೇಳ್ತಾ ಮುಖ್ಯ ವಾದ ವಿಷಯ ಗಳನ್ನ ಮೈಂಡ್ ಅಲ್ಲಿ ಸ್ಟೋರ್ ಮಾಡ್ಕೊಂಡೆ. ಸಂಜೆವರೆಗೂ ಫ್ಯಾಕ್ಟರಿ ಅಲ್ಲೇ ಇದ್ವಿ. ತುಂಬಾ ವಿಷಯಗಳನ್ನ ತಿಳಿದುಕೊಂಡೆ. ತುಂಬಾ ಇಂಟ್ರೆಸ್ಟ್ ಅನ್ನಿಸ್ತು ಹಾಗೇ ಚಾಲೆಂಜಿಂಗ್ ಆಗಿ ಕೂಡ ಇತ್ತು. ಸಂಜೆ ಮನೆಗೆ ಬಂದ್ವಿ. ಕಾಫಿ ಕುಡಿದು ಗೆಸ್ಟ್ ರೂಮ್ ಗೆ ಹೋಗಿ ಲ್ಯಾಪ್ಟಾಪ್ ಓಪನ್ ಮಾಡಿಕೊಂಡು ಟೆಕ್ಸ್ಟ್ ಟೈಲ್ ಬಿಸಿನೆಸ್ ಬಗ್ಗೆ ರಿಸೆರ್ಚ್ ಮಾಡೋಕೆ ಶುರು ಮಾಡಿದೆ.. ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ. ನಾನು ಲ್ಯಾಪ್ಟಾಪ್ ನೋಡ್ತಾ ಬ್ಯುಸಿ ಹಾಗಿ ಇದ್ದೆ. ರೂಮ್ ಡೋರ್ ಹತ್ತಿರ ಯಾರೋ ನಿಂತು ಏನು ಅಷ್ಟು ಸೀರಿಯಸ್ ಆಗಿ ಲ್ಯಾಪ್ಟಾಪ್ ನೋಡ್ತಾ ಇದ್ದೀರಾ ಅಂತ ಕೇಳೋ ಧ್ವನಿ ಕೇಳಿಸ್ತು. ನಾನು ಲ್ಯಾಪ್ಟಾಪ್ ನಾ ಬಿಟ್ಟು ಡೋರ್ ಕಡೆಗೆ ನೋಡಿದೆ. ನೀಲಾ ನಿಂತಿದ್ರು. ನಾನು ಅವರನ್ನ ನೋಡಿ ಹಾಯ್ ನೀವೇನ್ ಇಲ್ಲಿ ಅಂತ ಕೇಳ್ದೆ. ನೀಲಾ ಮಾತಾಡ್ತಾ ಏನಿಲ್ಲಾ ನಿಮ್ಮನ್ನ ಊಟಕ್ಕೆ ಕರ್ಕೊಂಡು ಬಾ ಅಂತ ಅಮ್ಮ ಕಳಿಸಿದ್ರು ಅದಕ್ಕೆ ಬಂದೆ ಅಂತ ಹೇಳಿದ್ಲು. ಅವಾಗ ಮೊಬೈಲ್ ಕಡೆಗೆ ನೋಡಿದೆ ಟೈಮ್ ರಾತ್ರಿ 9 ಗಂಟೆ ಆಗಿತ್ತು. ಸಾರೀ ಟೈಮ್ ನೋಡ್ಕೊಂಡಿಲ್ಲ ಅಂತ ಹೇಳ್ದೆ. ಪರ್ವಾಗಿಲ್ಲ ಹಾಲ್ ಅಲ್ಲಿ ಕಾಯ್ತಾ ಇರ್ತೀನಿ ಬನ್ನಿ ಅಂತ ಹೇಳಿ ಹೊರಟು ಹೋದಳು. ನಾನು ಎದ್ದು ಹೋಗಿ ಫ್ರೆಷ್ ಅಪ್ ಆಗಿ ಹಾಲ್ ಗೆ ಬಂದೆ. ಮೊಬೈಲ್ ನೋಡ್ತಾ ಇದ್ದಾ ನೀಲಾ ನಾನು ಬರೋದನ್ನ ನೋಡಿ ಮೊಬೈಲ್ ನಾ ಕ್ಲೋಸ್ ಮಾಡಿ. ಏನು ಟೈಮ್ ಹೋಗೋದು ಗೊತ್ತಾಗದೆ ಲ್ಯಾಪ್ಟಾಪ್ ಅಲ್ಲೇ ಮುಳಗಿ ಹೋಗಿದ್ರಿ ಅಷ್ಟು ಸೀರಿಯಸ್ ಆಗಿ ಏನ್ ನೋಡ್ತಾ ಇದ್ರಿ, ಗರ್ಲ್ಫ್ರೆಂಡ್ ಜೊತೆಗೆ ಏನಾದ್ರು ಚಾಟ್ ಮಾಡ್ತಾ ಇದ್ರ ಅಂತ ಕೇಳಿದ್ಲು. ನಾನು ನಗ್ತಾ ಅಷ್ಟೆಲ್ಲಾ ಏನು ಇಲ್ಲಾ ಟೆಕ್ಸ್ಟ್ ಟೈಲ್ ಬಿಸಿನೆಸ್ ಬಗ್ಗೆ ರಿಸರ್ಚ್ ಮಾಡ್ತಾ ಇದ್ದೆ ಅಷ್ಟೇ ಅಂತ ಹೇಳ್ದೆ. ಹೌದ ಹಾಗಾದ್ರೆ ನಿಮಗೆ ಗರ್ಲ್ಫ್ರೆಂಡ್ಸ್ ಯಾರು ಇಲ್ವಾ ಅಂತ ಕೇಳಿದ್ಲು ಒಂದು ರೀತಿ ಅನುಮಾನ ವಾಗಿ.
ನನ್ನ ಲೈಫ್ ಅಲ್ಲಿ ಇರೋದು ಮೂರೇ ಜನ ಗರ್ಲ್ಫ್ರೆಂಡ್ಸ್ ಒಬ್ರು ಅಮ್ಮ ಇನ್ನಿಬ್ರು ಅಕ್ಕಂದ್ರು , ಸೋ ಪ್ರೀತಿ ಮಾಡೋಕೆ ಅಮ್ಮ ನನ್ನ ರಕ್ತ ಕುಡಿಯೋಕೆ ಅಂತಾನೆ ಇರೋ ಒಬ್ಬ ಅಕ್ಕ ಅದ್ರೆ ಇದಕ್ಕೆ ವಿರುದ್ಧವಾಗಿ ನನ್ನ ಒಬ್ಬ ಫ್ರೆಂಡ್ ಆಗಿ ಯಾವಾಗ್ಲೂ ಕೂಲ್ ಆಗಿ ಮಾತಾಡಿಸೋ ಇನ್ನೊಬ್ಬ ಅಕ್ಕ. ಇಷ್ಟು ಜನ ಸದ್ಯಕ್ಕೆ ನನ್ನ ಲೈಫ್ ಗೆ ಸಾಕು ಅಂತ ಆರಾಮಾಗಿ ಇದ್ದೀನಿ ಅಂತ ಹೇಳ್ದೆ. ಅಂದ್ರೆ ನಿಮಗೆ ಗರ್ಲ್ಫ್ರೆಂಡ್ಸ್ ಇಲ್ಲಾ ಅಂತ ಆಯ್ತು. ಯಾಕೆ ನಿಮಗೆ ಇಷ್ಟ ಹಾಗೋ ತರ ಯಾವ್ ಹುಡುಗಿನೂ ಸಿಗಲಿಲ್ವಾ ನಿಮಗೆ ಅಂತ ಕೇಳಿದ್ಲು. ಸಿಗಲಿಲ್ಲ ಅಂತ ಹೇಳೋದಕ್ಕಿಂತ ಹುಡುಕೋಕೆ ಹೋಗಲಿಲ್ಲ ಅಂತ ಹೇಳ್ದೆ. ಹೌದ ಯಾಕೆ ಅಂತ ಕೇಳಿದ್ಲು. ಯಾಕ್ ಅಂದ್ರೆ ಪ್ರೀತಿ ಮಾಡಬೇಕು ಅಂದ್ರೆ ಇಬ್ಬರು ವ್ಯಕ್ತಿ ಗಳು ಇದ್ರೆ ಸಾಕು, ಬಟ್ ಅ ಪ್ರೀತಿ ನಾ ಉಳಿಸಿಕೊಳ್ಳಬೇಕು ಅಂದ್ರೆ ಫೈನಾಷಿಯಲ್ ಆಗಿ ನಾವು ಸ್ಟ್ರಾಂಗ್ ಇರಬೇಕು. ಸೋ ಸದ್ಯಕ್ಕೆ ನಾನ್ ಅಷ್ಟು ಸ್ಟ್ರಾಂಗ್ ಇಲ್ಲಾ ಅದಕ್ಕೆ ಹುಡುಕೋಕೆ ಹೋಗಲಿಲ್ಲ ಅಂತ ಹೇಳ್ದೆ. ಅಂದ್ರೆ ಫ್ಯೂಚರ್ ಬಗ್ಗೆ ಯೋಚ್ನೆ ಮಾಡಿ ಹುಡುಗಿನ ದೂರ ಇಟ್ಟಿದ್ದೀರಾ ಅಂತ ಆಯ್ತು ಅಂತ ಹೇಳಿದ್ಲು. ಒಂತರಾ ಅದು ನಿಜಾನೆ ಅಂತ ಹೇಳ್ದೆ. ಎಲ್ಲಾ ಹುಡುಗೀರು ಫೈನಾಷಿಯಲ್ ಆಗಿ ಸ್ಟ್ರಾಂಗ್ ಇರೋ ಹುಡುಗನನ್ನೇ ಇಷ್ಟ ಪಡೋದಿಲ್ಲ, ನಿಮ್ಮನ್ನ ಸರಿಯಾಗಿ ಅರ್ಥ ಮಾಡಿಕೊಂಡು ನಿಮ್ ಜೊತೆಗೆ ಹ್ಯಾಪಿ ಆಗಿ ಇರೋ ಹುಡುಗಿ ನಿಮಗೆ ಸಿಗ್ತಾಳೆ, ನೀವೇನು ಯೋಚ್ನೆ ಮಾಡಬೇಡಿ ಅಂತ ಹೇಳಿದ್ಲು.
ಇಬ್ರು ಮಾತಾಡ್ಕೊಂಡು ಮನೆ ಹತ್ತಿರ ಬಂದ್ವಿ, ಅ ಟಾಪಿಕ್ ನಾ ಅಲ್ಲಿಗೆ ಸ್ಟಾಪ್ ಮಾಡಿದ್ವಿ. ಎಲ್ಲರೂ ಡಿನ್ನರ್ ಮುಗಿಸಿಕೊಂಡು ಹೊರಗೆ ಗಾರ್ಡನ್ ಅಲ್ಲಿ ಕೂತ್ಕೊಂಡು ಸ್ವಲ್ಪ ಹೊತ್ತು ಮಾತಾಡ್ತಾ ಮದನ್ ಜೊತೆ ಅವರ ಮನೆಗೆ ಬಂದೆ. ಮದನ್ ಮಾತಾಡ್ತಾ ಮಹಿ ನೀನು ಬಾಡಿಗೆ ರೂಮ್ ಹೋಗೋ ವಿಷಯ ನಾ ಶಿಲ್ಪಾ ಹತ್ತಿರ ಮಾತಾಡಿದೆ. ಅವಳು ಒಂದೇ ಮಾತು ಹೇಳಿದ್ದು. ಮಹಿ ಏನಾದ್ರು ಬಾಡಿಗೆ ರೂಮ್ ಹೋದ್ರೆ, ಮದುವೆ ಆಗೋಕೂ ಮೊದಲೇ ನಿನಗೆ ಡಿವೋರ್ಸ್ ಕೊಡ್ತೀನಿ ಅಂತ ಹೇಳಿದ್ಲು. ಸೋ ಐಮ್ ಸಾರೀ ಬ್ರದರ್ ಅಂತ ಹೇಳಿ ಅವನ ರೂಮ್ ಗೆ ಹೋದ. ನಾನು ಇನ್ನೇನು ಮಾಡೋಕೆ ಆಗಲ್ಲಾ ಅಂತ ಹೇಳಿ ರೂಮ್ ಗೆ ಹೋಗಿ ಮಲಗಿ ಕೊಂಡೆ..
****************************************
P. S.