ಮದನ್ ಬೇರೆ ನಾನ್ ಬೇರೆ ಅಲ್ಲ ಅಂತ ಹೇಳಿದಾಗ , ನನ್ನ ಮನಸ್ಸಿಗೆ ತುಂಬಾ ಖುಷಿ ಆಯ್ತು. ಅವರು ಡಾಕ್ಯುಮೆಂಟ್ಸ್ ನಾ ನನ್ನ ಮೇಲೆ ನಂಬಿಕೆ ಇಟ್ಟು ಕೊಟ್ಟಾಗ ನನಗೆ ಏನ್ ಹೇಳಬೇಕು ಅಂತ ನೇ ಅರ್ಥ ಆಗಲಿಲ್ಲ, ಆದ್ರೂ ಅವರಿಗೆ ಅಜ್ಜಿ ಇದನ್ನ ನೀವೇ ಇಟ್ಟುಕೊಳ್ಳಿ ಇದೇನು ಬೇಡ ನನಗೆ. ನಾನು ಏನ್ ಮಾಡಬೇಕು ಅಂತ ಇದ್ದೀನೊ ಅದನ್ನ ನಿಮ್ ಹತ್ತಿರ ಹೇಳೋಣ ಅಂತ ಅಷ್ಟೇ ಬಂದೆ. ಶ್ರೀಹರಿ ಮಹಿ ಏನಪ್ಪಾ ಹೀಗೆ ಹೇಳ್ತಿಯ ಇವಾಗ ನೀನು ಹೇಳಿದ್ದನ್ನ ಮಾಡಬೇಕು ಅಂತ ಅಂದ್ರೆ ತುಂಬಾ ದುಡ್ಡು ಬೇಕು ಅಷ್ಟು ದುಡ್ಡನ್ನ ಏನು ಆಧಾರ ಇಲ್ಲದೆ ಯಾರ್ ಕೊಡ್ತಾರೆ ಹೇಳು ಅಂತ ಹೇಳಿದ್ರು. ಸರ್ ನನ್ನ ಲಿಸ್ಟ್ ಅಲ್ಲಿ ಇನ್ನು ಕೆಲವು ಜನ ಇದ್ದಾರೆ ಸೋ ನಾನ್ ಅವರನ್ನ ಭೇಟಿ ಮಾಡಿ ವಿಷಯ ಹೇಳ್ತಿನಿ ನೋಡೋಣ ಒಂದು ವೇಳೆ ಅವರು ಕೂಡ ಏನಾದ್ರು ನೋಡೋಣ ಅಂತ ಹೇಳಿದಾಗ ಆಗ ನೀವ್ ಹೇಳಿದ ಹಾಗೇ ಮಾಡೋಣ ಅಂತ ಹೇಳ್ದೆ. ತಾತ ನಿನ್ನಲ್ಲಿ ಇರೋ ಈ ನಂಬಿಕೆ ನಾ ಯಾವತ್ತು ಬಿಡೋಕೆ ಹೋಗಬೇಡ ಕೊನೆ ತನಕ ಪ್ರಯತ್ನ ಪಡು, ದೇವ್ರು ಒಂದಲ್ಲ ಒಂದು ರೀತಿ ಸಹಾಯ ಮಾಡೇ ಮಾಡ್ತಾನೆ ಅಂತ ಹೇಳಿದ್ಲು. ಸರಿ ಸರ್ ನಾನು 2 ಡೇಸ್ ಬಿಟ್ಟು ಬರ್ತೀನಿ ಇನ್ವೆಸ್ಟರ್ ಬೇರೆ ಕಡೆ ಇದ್ದಾರೆ ಅಂತ ಹೇಳ್ದೆ. ಅಜ್ಜಿ ಸರಿ ಮಹಿ ಹುಷಾರಾಗಿ ಹೋಗಿ ಬಾ ಅಂತ ಹೇಳಿದ್ರು. ನೀಲಾ ತಾತ ಮಹಿ ಜೊತೆಗೆ ನಾನು ಕೂಡ ಹೋಗ್ಲಾ, ಯಾಕಂದ್ರೆ ನಾವು ಮಾಡಿರೋ ಡಿಸೈನ್. ಮತ್ತೆ ಅವರಿಗೆ ಯಾವರೀತಿ ಡಿಸೈನ್ಸ್ ನಾ ಇಷ್ಟ ಪಡ್ತಾರೆ ಮತ್ತೆ ನಾವು ಹೇಗೆ ಇನ್ನು ಬೆಸ್ಟ್ ಡಿಸೈನ್ ನಾ ಕೊಡಬಹುದು ಅನ್ನೋದು ಗೊತ್ತಾಗುತ್ತೆ ಅಂತ ಹೇಳಿದ್ಲು. ಮದನ್ ಹೌದು ತಾತ ಮಹಿ ಜೊತೆಗೆ ನೀಲಾ ಕೂಡ ಹೋದ್ರೆ ಅವನಿಗೂ ಕೂಡ ಸ್ವಲ್ಪ ಹೆಲ್ಪ್ ಆಗುತ್ತೆ ಅಂತ ಹೇಳಿದ. ತಾತ ನಿನ್ ಹೇಳೋದು ಸರಿಯಾಗಿದೆ ಮದನ್ ಅಂತ ಹೇಳಿ ನೀಲಾ ನಿನ್ ಕೂಡ ಹೋಗಿ ಬಾ ಮಹಿ ಜೊತೆಗೆ ಅಂತ ಹೇಳಿದ್ರು. ನೀಲಾ ಥ್ಯಾಂಕ್ಸ್ ತಾತ ಅಂತ ಹೇಳಿ ಅವಳ ರೂಮ್ ಗೆ ಹೋದ್ಲು ರೆಡಿ ಆಗೋಕೆ. ಸ್ವಲ್ಪ ಸಮಯದ ನಂತ್ರ ನೀಲಾ ಚಿಕ್ಕ ಲಗೇಜ್ ಬ್ಯಾಗ್ ನಾ ಜೊತೆಗೆ ಹಾಲ್ ಗೆ ಬಂದಳು. ಇಬ್ರು ಮನೆಯವರಿಗೆ ಬೈ ಹೇಳಿ ನನ್ನ ಕಾರ್ ಅಲ್ಲಿ ಅಲ್ಲಿಂದ ಹೊರಟ್ವಿ.
ಕಾರ್ ನಾ ಡ್ರೈವ್ ಮಾಡ್ತಾ ಇದ್ದೆ, ನೀಲಾ ಮಾತಾಡ್ತಾ ಏನು ಸೈಲೆಂಟಾಗಿ ಇದ್ದೀರಾ ನನ್ನ ಜೊತೆಗೆ ಮಾತಾಡೋದು ಇಲ್ವಾ ಅಂತ ಕೇಳಿದ್ಲು. ಹಾಗೇನಿಲ್ಲ ಅಂತ ಹೇಳ್ದೆ. ಸರಿ ಇವಾಗ ಎಲ್ಲಿಗೆ ಹೋಗ್ತಾ ಇರೋದು ಅಂತ ಕೇಳಿದ್ಲು. ರಾಮನಗರ ಅಂತ ಹೇಳ್ದೆ. ಹೌದ ಯಾರನ್ನ ಮೀಟ್ ಮಾಡೋಕೆ ಹೋಗ್ತಾ ಇದ್ದಿವಿ ಅಂತ ಕೇಳಿದ್ಲು. ನಾನು ಯಾಕೆ ಅವರ ಬಗ್ಗೆ ತಿಳಿದುಕೊಳ್ಳೋಕ ಅಂತ ಕೇಳ್ದೆ. ಹ್ಮ್ ಹೌದು ಯಾಕಂದ್ರೆ ಅ ವ್ಯಕ್ತಿ ಬಗ್ಗೆ ಅವರ ಬಿಸಿನೆಸ್ ಬಗ್ಗೆ ತಿಳ್ಕೊಂಡ್ರೆ ಸೋ ಯಾವರೀತಿ ಮಾತಾಡಬೇಕು ಅವರು ಯಾವರೀತಿ ಪ್ರಾಡಕ್ಟ್ ನಾ ಇಷ್ಟ ಪಡ್ತಾರೆ ಅನ್ನೋದೆಲ್ಲ ತಿಳ್ಕೊಬೋದು ಅಲ್ವಾ ಅಂತ ಹೇಳಿದ್ಲು. ಅವೆಲ್ಲಾ ನಾನ್ ನೋಡ್ಕೋತೀನಿ ನೀವು ಆರಾಮಾಗಿ ಕೂತ್ಕೊಳ್ಳಿ ಅಂತ ಹೇಳ್ದೆ. ನೀಲಾ ಗೆ ನನ್ನ ಮಾತಿಂದ ಕೋಪ ಬಂತು ಅಂತ ಅನ್ನಿಸುತ್ತೆ. ಹೋಗ್ಲಿ ಪಾಪ ಒಬ್ನೇ ಕಷ್ಟ ಬೀಳ್ತಾನೆ ಹೆಲ್ಪ್ ಮಾಡೋಣ ಅಂತ ಜೊತೆಗೆ ಬಂದ್ರೆ ನಾನೆ ನೋಡ್ಕೋತೀನಿ ಅಂತ ಇದ್ದಿಯಾ ಕಾರ್ ನಿಲ್ಲಿಸೋ ನಾನ್ ಇಳಿದು ಹೋಗ್ತೀನಿ ಹೋಗಿ ಅದೇನ್ ಮಾಡ್ಕೋ ಬರ್ತೀಯೋ ಮಾಡ್ಕೋ ಬಾ ಹೋಗೋ ಮೊದಲು ಕಾರ್ ನಿಲ್ಲಿಸೋ ಅಂತ ಏಕವಚನದಲ್ಲಿ ಮಾತಾಡೋಕೆ ಶುರು ಮಾಡಿದ್ಲು. ನಾನು ಅವಳು ಹೇಳಿದ್ಲು ಅಂತ ಕಾರ್ ನಾ ಸೈಡ್ ಗೆ ನಿಲ್ಲಿಸಿದೆ. ನೀಲಾ ನಾನ್ ಕಾರ್ ನಾ ನಿಲ್ಲಿಸಿದನ್ನ ನೋಡಿ ಇನ್ನು ಕೋಪ ಮಾಡಿಕೊಂಡು ಅಂದ್ರೆ ನೀನು ನನ್ನ ಹೋಗು ಅಂತ ಮುಖದ ಮೇಲೆ ಹೊಡೆದು ಹೇಳ್ತಾ ಇದ್ದಿಯಾ. ಇದೆ ಮಾತನ್ನ ಮನೇಲಿ ಬಾಯಿ ಬಿಟ್ಟು ಹೇಳ್ಬೋದಾಗಿತ್ತು ಅಲ್ವಾ ಅಲ್ಲೇ ಮುಚ್ಕೊಂಡು ಮನೇಲಿ ನನ್ನ ಪಾಡಿಗೆ ನಾನ್ ಇರ್ತಾ ಇದ್ದೆ. ಎಲ್ಲರ ಮುಂದೆ ಒಳ್ಳೆಯವನಾಗಿ ಇದ್ದು ಇವಾಗ ಹೀಗೆ ಮಾಡ್ತಾ ಇದ್ದಿಯಾ ಹುಡುಗ ಒಳ್ಳೆಯವನು ಅಂತ ಅನ್ಕೊಂಡು ಇಷ್ಟ ಪಟ್ಟು ಕಿಸ್ ಮಾಡಿ ಪ್ರೊಪೋಸ್ ಮಾಡಿದೆ ಅಲ್ವಾ ನನಗೆ ಒಳ್ಳೆ ಮರ್ಯಾದೆ ಸಿಕ್ತು . ಮಗನೆ ಅಪ್ಪಿ ತಪ್ಪಿ ನನಗು ನಿನಗೂ ಮದುವೆ ಅದ್ರೆ 1st ನೈಟ್ ದಿನ ನೇ ನಿನ್ನ ರೂಮ್ ಯಿಂದ ಹೊರಗೆ ಹಾಕ್ತಿನಿ ಹತ್ರ ಕೂಡ ಸೇರಿಸೋದಿಲ್ಲ. ಮದುವೆ ಆದ್ರೂ ಬ್ರಹ್ಮಚಾರಿ ಹಾಗೇ ಜೀವನ ಪೂರ್ತಿ ಇರೋ ಹಾಗೇ ಮಾಡ್ತೀನಿ ನೋಡ್ತಾ ಇರು ಅಂತ ಹೇಳಿದ್ಲು. ಅವಳು ಏನ್ ಹೇಳ್ತಾ ಇದ್ದಳೋ ಅದನ್ನೆಲ್ಲಾ ಕೇಳಿ ನನಗೆ ನಗು ಬಂತು ನಾನು ನೀಲಾ ನಾ ನೋಡ್ತಾ ನಗ್ತಾ ಇರೋದನ್ನ ನೋಡಿ. ನೀಲಾ ನನ್ನ ನೋಡಿ ಏನಕ್ಕೆ ನಗ್ತಾ ಇದ್ದಿಯಾ ನನ್ನ ಮುಖದಲ್ಲಿ ಏನಾದ್ರು ಕೋತಿ ಕುಣಿತ ಇದೆಯಾ ಅಂತ ಕೋಪದಲ್ಲೇ ಕೇಳಿದ್ಲು. ನಾನು ನಗ್ತಾ ಕಿಸ್ ಪ್ರೊಪೋಸ್ ಮದುವೆ 1st ನೈಟ್ ಬ್ರಹ್ಮ ಚಾರಿ. ಪರ್ವಾಗಿಲ್ಲ ತುಂಬಾ ದೂರ ಯೋಚ್ನೆ ಮಾಡಿ ಮಾತಾಡಿದ್ದು ಅಲ್ಲದೆ ಹೋಗಿ ಬನ್ನಿ ಅಂತ ಮಾತಾಡ್ತಾ ಇದ್ದವಳು ಏಕವಚನದಲ್ಲಿ ಮಾತಾಡೋಕೆ ಶುರು ಮಾಡಿದೆ. ಈಗ್ಲೇ ಈ ರೀತಿ ಅದ್ರೆ ತುಂಬಾ ಕಷ್ಟ ಕಣೆ. ಇನ್ಮೇಲೆ ಏನಾದ್ರು ಈ ರೀತಿ ಮಾತಾಡೋದು ಇದ್ರೆ ಈ ರೀತಿ ಇಬ್ಬರೇ ಇದ್ದಾಗ ಮಾತಾಡು, ಎಲ್ಲರ ಮುಂದೆ ಮಾತಾಡಿ ನನ್ನ ಮರ್ಯಾದೆ ನಾ ತೆಗಿಬೇಡ ಪ್ಲೀಸ್ ಅಂತ ಹೇಳಿ, ಕಾರ್ ಇಳಿದು ಹೊರಗೆ ಹೋಗಿ ಬೇಕರಿ ಕಡೆಗೆ ಹೋದೆ. ಬೇಕರಿಗೆ ಹೋಗಿ ಐಸ್ಕ್ರೀಂ ಚಾಕಲೇಟ್ ನಾ ತೆಗೆದು ಕೊಂಡು ಬಂದು ಕಾರ್ ಅಲ್ಲಿ ಕೂತು ನೀಲಾ ಕಡೆಗೆ ನೋಡಿದೆ. ನೀಲಾ ಸ್ವಲ್ಪ ಕೂಲ್ ಆಗಿ ಇದ್ಲು. ನನ್ನ ನೋಡಿ ಸಾರೀ ಅಂತ ಕೇಳಿದ್ಲು. ನಾನು ನೀಲಾ ನಾ ನೋಡ್ತಾ ಸಾರೀ ನನ್ನ ಹೋಗೋ ಬಾರೋ ಅಂತ ಕರೆದಿದಕ್ಕ ಇಲ್ಲಾ 1st ನೈಟ್ ದಿನ ನನ್ನ ರೂಮಿಂದ ಹೊರಗೆ ಹಾಕ್ತಿನಿ ಅಂತ ಹೇಳಿದಕ್ಕ ಅಂತ ಕೇಳ್ದೆ. ನೀಲಾ ನಾಚಿಕೊಂಡು ಅವಳ ಕೈಗಳಿಂದ ಮುಖ ನಾ ಮುಚ್ಚಿಕೊಂಡು ಮತ್ತೆ ನನ್ನ ಕಡೆಗೆ ನೋಡ್ತಾ ಈಡಿಯಟ್ ನಿನ್ನ ಅಂತ ಭುಜದ ಮೇಲೆ ಒಂದು ಗುದ್ದು ಗುದ್ದಿದ್ಲು. ನಾನು ಅವಳ ಕೈಗೆ ಚಾಕಲೇಟ್ ಐಸ್ಕ್ರೀಂ ಕೊಟ್ಟು ತಗೋ ಮಾತಾಡಿ ಮಾತಾಡಿ ಸುಸ್ತಾಗಿ ಇರ್ತೀಯ ತಿನ್ನು ಅಂತ ಹೇಳಿ ಕಾರ್ ನಾ ಸ್ಟಾರ್ಟ್ ಮಾಡಿದೆ. ನೀಲಾ ಥ್ಯಾಂಕ್ಸ್ ಅಂತ ಹೇಳಿ ಐಸ್ಕ್ರೀಂ ತಿನ್ನೋಕೆ ಶುರು ಮಾಡಿದ್ಲು.
ಕಾರ್ ಡ್ರೈವ್ ಮಾಡ್ತಾ ಇರೋವಾಗ ಶ್ವೇತಾ ಕಾಲ್ ಮಾಡಿದ್ಲು, ಕಾರ್ ಬ್ಲೂ ಟೂತ್ ಗೆ ಕನೆಕ್ಟ್ ಆಗಿತ್ತು, ಸ್ಕ್ರೀನ್ ಮೇಲೆ ❤️ ಮುದ್ದು ರಾಕ್ಷಸಿ 😈 ಅಂತ ಬರೋದನ್ನ ನೋಡಿ ನೀಲಾ ಐಸ್ಕ್ರೀಂ ತಿನ್ನೋದನ್ನ ಬಿಟ್ಟು ಸ್ಕ್ರೀನ್ ಕಡೆಗೆ ನೋಡಿ ನನ್ನ ಕಡೆಗೆ ನೋಡಿದ್ಲು. ನಾನು ಕಾಲ್ ಪಿಕ್ ಮಾಡಿ ಹ ಹೇಳೇ ಅಂತ ಹೇಳ್ದೆ. ಶ್ವೇತಾ ಲೋ ಎಲ್ಲಿದ್ದೀಯ ಅಂತ ಕೇಳಿದ್ಲು. ಕಾರ್ ಡ್ರೈವ್ ಮಾಡ್ತಾ ಇದ್ದೀನಿ ಹೇಳೇ ಅಂತ ಹೇಳ್ದೆ. ಏನು ಇಲ್ವೋ ಹರಿಣಿ ಗೆ ಡಾಕ್ಟರ್ ಡೇಟ್ಸ್ ಕೊಟ್ಟಿದ್ದಾರೆ ಸೋ ಅದಕ್ಕೆ ನಿನಗೆ ಹೇಳೋಣ ಅಂತ ಕಾಲ್ ಮಾಡಿದೆ ಅಂತ ಹೇಳಿದ್ಲು. ಹೌದ ಹುಷಾರಾಗಿ ನೋಡ್ಕೋ ಏನಾದ್ರು ಎಮರ್ಜೆನ್ಸಿ ಇದ್ರೆ ಫ್ರೆಂಡ್ ನಂಬರ್ ಕೊಟ್ಟಿದ್ದೀನಿ ಅಲ್ವಾ ಕಾಲ್ ಮಾಡು ಅವನು 2 ನಿಮಿಷದಲ್ಲಿ ಆಂಬುಲೆನ್ಸ್ ಜೊತೆಗೆ ಬರ್ತಾನೇ. ಯಾವ ವಿಷಯಕ್ಕೂ ನೀನು ಭಯ ಬೀಳಬೇಡ, ಹುಷಾರಾಗಿ ನೋಡ್ಕೋ ಅಂತ ಹೇಳ್ದೆ. ಸರಿ ಆಯ್ತು ಹುಷಾರಾಗಿ ನೋಡ್ಕೋತೀನಿ, ಮೈಸೂರ್ ಗೆ ಹೋಗಿ ತಿಂಗಳು ಆಯ್ತು, ಯಾವಾಗ ಬರ್ತೀಯ ಅಂತ ಕೇಳಿದ್ಲು. ಬರ್ತೀನಿ ಸ್ವಲ್ಪ ಕೆಲಸ ಇದೆ ಅದನ್ನ ಮುಗಿಸಿಕೊಂಡು ಬರ್ತೀನಿ ಅಂತ ಹೇಳ್ದೆ. ಸರಿ ಮತ್ತೆ ಕಾಲ್ ಮಾಡ್ತೀನಿ ನನಗೆ ಸ್ವಲ್ಪ ಕೆಲಸ ಇದೆ ಅಂತ ಹೇಳಿದ್ಲು, ಸರಿ ಬೈ ಅಂತ ಹೇಳಿ ಕಾಲ್ ಕಟ್ ಮಾಡಿದೆ. ನೀಲಾ ನನ್ನೇ ನೋಡ್ತಾ ಇರೋದನ್ನ ನೋಡಿ, ತುಂಬಾ ಯೋಚ್ನೆ ಮಾಡಬೇಡ ಐಸ್ಕ್ರೀಂ ಕರಗಿ ಹೋಗ್ತಾ ಇದೆ ಅಂತ ಹೇಳ್ದೆ. ನೀಲಾ ಐಸ್ಕ್ರೀಂ ತಿಂತ ಯಾರು ಅಂತ ಕೇಳಿದ್ಲು. ನಾನು ಯಾರು ಅಂದ್ರೆ ಹುಡುಗಿ ಅಂತ ಹೇಳ್ದೆ. ನೀಲಾ ಕೋಪದಿಂದ ಒಂದು ಲುಕ್ ಕೊಟ್ಟು ಅದು ಹುಡುಗಿ ಅಂತ ನನಗು ಗೊತ್ತು, ನಿನಗೆ ಏನಾಗಬೇಕು ಅಂತ ಕೇಳಿದ್ದು ಅಷ್ಟು ಸಲಿಗೆ ಯಿಂದ ಹೋಗೋ ಬಾರೋ ಏನೋ ಮಾಡ್ತಾ ಇದ್ದಿಯಾ ಅಂತ ಕೇಳ್ತಾ ಇದ್ದಾಳೆ, ಅದು ಅಲ್ಲದೆ ಮುದ್ದು ರಾಕ್ಷಸಿ ಅಂತ ನಂಬರ್ ಸೇವ್ ಮಾಡ್ಕೊಂಡು ಇದ್ದಿಯಾ ಅಂತ ಕೇಳಿದ್ಲು. ನಾನು ನಗ್ತಾ ನನ್ನ ಹತ್ತಿರ ಕೇಳಿದ ಹಾಗೇ ಅವಳ ಹತ್ತಿರ ಈ ರೀತಿ ಕೇಳಿ ಬಿಟ್ಟಿಯ, ನಿಂತಲ್ಲೆ ನಿನ್ನ ರಕ್ತ ಕುಡಿದು ಬಿಡ್ತಾಳೆ ಅವಳ ಹತ್ತಿರ ಹುಷಾರು ಸ್ವಲ್ಪ ಅಂತ ಹೇಳ್ದೆ.
ನೀಲಾ ನಗ್ತಾ ಏನು ನನ್ನ ರಕ್ತ ಕುಡಿತಾಳ, ಈ ನೀಲಾ ನಾ ಎದುರಿಗೆ ನಿಂತು ಅವಾಜ್ ಅಕೋವ್ರು ರಕ್ತ ಕುಡಿಯೋವ್ರು ಇನ್ನು ಈ ಭೂಮಿ ಮೇಲೆ ಹುಟ್ಟಿಲ್ಲ ಅಂತ ಹೇಳಿದ್ಲು. ಬೇರೆ ಯವರ ಬಗ್ಗೆ ನನಗೆ ಗೊತ್ತಿಲ್ಲ ಅದ್ರೆ 25 ವರ್ಷ ಗಳಿಂದ ಅವಳ ಜೊತೆಗೆ ಇದ್ದೀನಿ ಸೋ ನನ್ನ ಅನುಭವದ ಮೇಲೆ ಹೇಳ್ತಿನಿ, ಅವಳ ಹತ್ತಿರ ನಿನ್ ಸ್ವಲ್ಪ ಹುಷಾರು, ಸ್ವಲ್ಪ ರಾಂಗ್ ಆದ್ರೂ, ನೆಕ್ಸ್ಟ್ ನಿನಗೆ ನಾನ್ ಈ ತರ ಐಸ್ಕ್ರೀಂ ಚಾಕಲೇಟ್ ತಗೋಡೋಕು ಆಗಲ್ಲಾ, ನಿನ್ ನನ್ನ ಬ್ರಹ್ಮ ಚಾರಿ ಆಗಿ ಇರೋ ಹಾಗೇ ಮಾಡೋದು ಕೂಡ ಕನಸಾಗೇ ಇದ್ದು ಬಿಡುತ್ತೆ ಅಂತ ಹೇಳ್ದೆ. ನೀಲಾ ಗೆ ಅರ್ಥ ಆಗಿಲ್ಲ ಅಂತ ಅನ್ನಿಸುತ್ತೆ ನಾನ್ ಹೇಳಿದು ಅದಕ್ಕೆ ಅವಳು ಅಂದ್ರೆ ಅಂತ ಕೇಳಿದ್ಲು. ಅಂದ್ರೆ ಅವಳು ನನ್ನ ಅಕ್ಕ ಅಂತ ಹೇಳ್ದೆ. ನೀಲಾ ಶಾಕ್ ಆಗಿ ಅಂದ್ರೆ ನಿನಗೆ ಅಕ್ಕ ಇದ್ದಾಳ ಮತ್ತೆ ಇಷ್ಟು ದಿನ ಹೇಳೇ ಇಲ್ಲಾ ಅಂತ ಕ್ವೆಶ್ಚನ್ ಮಾಡಿದ್ಲು. ಹೇಳಿಲ್ಲ ಅಂದ್ರೆ ನಿನ್ ಕೇಳಿಲ್ಲ ಸೋ ನಾನ್ ಹೇಳಿಲ್ಲ ಅಂತ ಹೇಳ್ದೆ.
ಮತ್ತೆ ಹರಿಣಿ ಡೇಟ್ಸ್ ಆಂಬುಲೆನ್ಸ್ ಇದೆಲ್ಲಾ ಅಂತ ಕೇಳಿದ್ಲು. ಹರಿಣಿ ಕೂಡ ನನಗೆ ಅಕ್ಕ ನೇ ಅವರ ಅಪ್ಪ ಅಮ್ಮ ರೀಸೆಂಟ್ ಆಗಿ ಆಕ್ಸಿಡೆಂಟ್ ಅಲ್ಲಿ ಡೆತ್ ಆದ್ರೂ. ಅವಾಗ ಹರಿಣಿ ಅಕ್ಕ ಪ್ರೆಗ್ನೆಟ್, ಅಕ್ಕನೇ ಮನೆಗೆ ಕರ್ಕೊಂಡು ಬಂದು ಇನ್ಮೇಲಿಂದ ಇದು ನಿನ್ನ ತವರು ಮನೆ ಅಂತ ಹೇಳಿ ಸೀಮಂತ ಮಾಡಿಸಿ ಮನೇಲಿ ಅವರನ್ನ ನೋಡ್ಕೋತ ಇದ್ದಾರೆ. ಅವರು ನಮ್ ಮನೆಗೆ ಬರೋವಾಗ 7 ತಿಂಗಳ ಗರ್ಭಿಣಿ ಈಗ 9 ತಿಂಗಳು ಡೆಲಿವೆರಿ ಗೆ ಡೇಟ್ಸ್ ಕೊಟ್ಟಿದ್ದಾರೆ ಅದನ್ನ ಹೇಳೋಕೆ ಕಾಲ್ ಮಾಡಿದ್ಲು ಅಂತ ಹೇಳಿದೆ. ಸಾರೀ ನಿಮ್ ಅಕ್ಕನ ಬಗ್ಗೆ ಗೊತ್ತಿಲ್ದೆ ಏನೇನೋ ಮಾತಾಡಿ ಬಿಟ್ಟೆ ಅಂತ ಮುಖ ಚಿಕ್ಕದು ಮಾಡಿಕೊಂಡು ಹೇಳಿದ್ಲು. ಬಿಡು ಅದಕೆಲ್ಲಾ ಸಾರೀ ಏನಕ್ಕೆ ಕೇಳ್ತಿಯಾ ಗೊತ್ತಿಲ್ಲ ಮಾತಾಡಿದೆ ಇವಾಗ ಗೊತ್ತಾಯಿತು ಅಲ್ವಾ ಅದಕೆಲ್ಲಾ ನೀನು ಮುಖ ನಾ ಹೀಗೆ ಚಿಕ್ಕದು ಮಾಡಿಕೊಂಡ್ರೆ ತುಂಬಾ ಕಷ್ಟ ಅಂತ ಹೇಳಿದೆ. ಮತ್ತೆ ನೀಲಾ ಕಡೆಗೆ ನೋಡ್ತಾ. ನೀಲಾ ನೀನು ನನಗೆ ಒಂದು ಮಾತು ಕೊಡಬೇಕು ಅಂತ ಕೇಳ್ದೆ. ನೀಲಾ ಏನು ಅಂತ ಕೇಳದೇನೆ ನನ್ನ ಕೈ ಇಡಿದು ಕೈ ಮೇಲೆ ಪ್ರಾಮಿಸ್ ಮಾಡ್ತಾ ನೀನು ಹೇಳೋದಕ್ಕೂ ಮೊದಲೇ ಪ್ರಾಮಿಸ್ ಮಾಡ್ತಾ ಇದ್ದೀನಿ, ನಿನ್ ಏನೇ ಹೇಳಿದ್ರು ಅದು ನನ್ನಿಂದ ಇನ್ನೊಬರ ತನಕ ಹೋಗೋದಿಲ್ಲ ಅಂತ ಹೇಳಿದ್ಲು. ನಾನು ಕೂಡ ಥ್ಯಾಂಕ್ಸ್ ಅಂತ ಹೇಳಿ ರೋಡ್ ಕಡೆಗೆ ಗಮನ ಕೊಟ್ಟೆ.
ಸ್ವಲ್ಪ ಸಮಯದ ನಂತರ ರಾಮನಗರ ಕ್ಕೆ ಬಂದ್ವಿ ಆಮೇಲೆ 20 ನಿಮಿಷದ ನಂತರ ಒಂದು ದೊಡ್ಡ ಬಂಗಲೆ ಯ ಗೇಟ್ ಮುಂದೆ ಕಾರ್ ನಾ ನಿಲ್ಲಿಸಿದೆ. ನೀಲಾ ಅ ಬಂಗಲೆ ನಾ ನೋಡಿ ಮಹಿ ಇನ್ವೆಸ್ಟರ್ ಯಾರೋ ಇವರು ತುಂಬಾ ದೊಡ್ಡ ವ್ಯಕ್ತಿ ಅಂತ ಕಾಣಿಸುತ್ತೆ ಹೇಗಾದ್ರು ಮಾಡಿ ಇವರನ್ನ ಒಪ್ಪಿಸಿದ್ರೆ ಸಾಕು ನಾವು ಮುಂದೆ ಹೆಜ್ಜೆ ಇಡೋಕೆ ಯೋಚ್ನೆ ಮಾಡೋ ಹಾಗೇ ಇಲ್ಲಾ ಅಂತ ಹೇಳಿದ್ಲು. ಗೇಟ್ ಅಲ್ಲಿ ಇದ್ದಾ ವಾಚ್ ಮ್ಯಾನ್ ಕಾರ್ ಹತ್ತಿರ ಬಂದು ನೀಲಾ ನಾ ನೋಡಿ ಮೇಡಂ ಯಾರ್ ನೀವು ಅಂತ ಕೇಳಿ ನನ್ನ ಕಡೆಗೆ ನೋಡಿದ್ರು, ಅಷ್ಟೇ ಓಡೋಗಿ ಗೇಟ್ ಓಪನ್ ಮಾಡೋಕೆ ಹೋದ್ರು. ನೀಲಾ ನನ್ನ ನೋಡ್ತಾ ಹಾಗೇ ಇದ್ದು ಬಿಟ್ಟಳು. ವಾಚ್ ಮ್ಯಾನ್ ಗೇಟ್ ಓಪನ್ ಮಾಡಿ ನನ್ನ ಹತ್ತಿರ ಬಂದು ನೀವು ಅಂತ ಗೊತ್ತಾಗಲಿಲ್ಲ ಅಂತ ಹೇಳಿದ್ರು. ಪರ್ವಾಗಿಲ್ಲ ಬಿಡಣ್ಣ ಆರಾಮಾಗಿ ಇದ್ದಿಯಾ ಅಂತ ಕೇಳ್ದೆ. ಅ ಮಗ ನಾನ್ ಆರಾಮಾಗಿ ಇದ್ದೀನಿ ನಿನ್ ಹೇಗ್ ಇದ್ದಿಯಾ ಅಂತ ಕೇಳಿದ್ರು. ನಾನ್ ಆರಾಮಾಗಿ ಇದ್ದೀನಿ ಮತ್ತೆ ಸಿಗ್ತೀನಿ ಅಂತ ಹೇಳಿ ಅಲ್ಲಿಂದ ಒಳಗೆ ಹೋದೆ.
ನೀಲಾ ನಾನ್ ವಾಚ್ ಮ್ಯಾನ್ ಹತ್ತಿರ ಮಾತಾಡಿದ ರೀತಿ ಅವರು ಮಾತಾಡಿ ರೀತಿ ನೋಡಿ ಹಾಗೇ ಶಾಕ್ ಅಲ್ಲಿ ನೋಡ್ತಾ ಇದ್ದು ಬಿಟ್ಟಳು.
**************************************
P. S.